ಕುನ್ನಕ್ಕುಡಿ ವೈದ್ಯನಾಥನ್
Jump to navigation
Jump to search
ಚಿತ್ರ:Kunnakudi.JPG
250px
ಕುನ್ನಕುಡಿ ವೈದ್ಯನಾಥನ್(೧೯೩೫-ಸೆಪ್ಟಂಬರ್ ೮,೨೦೦೮) ಇವರು ಪ್ರಸಿದ್ಧ ವಯೋಲಿನ್ ವಾದಕರಾಗಿದ್ದರು. ಇವರು ಇತ್ತೀಚೆಗೆ ನಿಧನರಾದರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಪರಿಣಿತಿ ಹೊಂದಿದ್ದರು.
ಇವರು ೧೯೩೫ರಲ್ಲಿ ತಮಿಳುನಾಡಿನ ಕುನ್ನಕುಡಿಯಲ್ಲಿ ಶ್ರೀ ರಾಮಸ್ವಾಮಿ ಶಾಸ್ತ್ರಿ ಮತ್ತು ಶ್ರೀಮತಿ ಮೀನಾಕ್ಷಿಯವರ ಪುತ್ರರಾಗಿ ಜನಿಸಿದರು.
ಹಣೆಯ ಮೇಲೆ ಹಚ್ಚುತ್ತಿದ್ದ ವಿಭೂತಿಯ ಉದ್ದನೆಯ ಪಟ್ಟೆ ಮತ್ತು ದೊಡ್ಡ ಗಾತ್ರದ ಕುಂಕುಮದ ಬಿಂದು ಇವರ ಪ್ರಮುಖ ಗುರುತಾಗಿತ್ತು. ಇವರು ಸಂಗೀತದ ರೋಗ ನಿವಾರಕ ಗುಣಗಳ ಬಗ್ಗೆ ಅಪಾರ ಆಸಕ್ತಿ ಮತ್ತು ನಂಬಿಕೆಯನ್ನು ಹೊಂದಿದ್ದರು.
ಇವರಿಗೆ ಭಾರತ ಸರಕಾರದ 'ಪದ್ಮಶ್ರೀ', 'ಸಂಗೀತ ಮಾಮನಿ', 'ಶ್ರೇಷ್ಟ ಸಂಗೀತ ನಿರ್ದೇಶಕ' ಅಲ್ಲದೇ ಇನ್ನೂ ೨೦೦ ವಿವಿಧ ಪ್ರಶಸ್ತಿಗಳು ಲಭಿಸಿದ್ದವು.
ವೈದ್ಯನಾಥನ್(೭೫ ವರ್ಷ) ಸೆಪ್ಟಂಬರ್ ೮ರ ರಾತ್ರಿ ೮:೪೫ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದರು.[೧]
ವಿಷಯಾಧಾರ[ಬದಲಾಯಿಸಿ]
ರಾಗದಿಂದ ಹಣ ಮತ್ತು ಶಾಂತಿ-ಹಿಂದು ಪತ್ರಿಕೆಯ ಲೇಖನ