ಇಂದಿರಾ ಕದಂಬಿ

ವಿಕಿಪೀಡಿಯ ಇಂದ
Jump to navigation Jump to search
ಇಂದಿರಾ ಕದಂಬಿ
Indira Kadambi.jpg
ಜನ್ಮನಾಮ
ರಾಷ್ಟ್ರೀಯತೆಭಾರತ
ಪೌರತ್ವಭಾರತೀಯ
ವೃತ್ತಿನೃತ್ಯ
ಹುಟ್ಟೂರುಬೆಂಗಳೂರು, ಕರ್ನಾಟಕ, ಭಾರತ

ಇಂದಿರಾ ಕದಂಬಿಯವರು ಭಾರತೀಯ ಭರತನಾಟ್ಯ ಗುರುಗಳು ಮತ್ತು ಪ್ರಸಿದ್ಧ ನೃತ್ಯಗಾರ್ತಿ.[೧]

ಜನನ[ಬದಲಾಯಿಸಿ]

೩೦ ಸೆಪ್ಟೆಂಬರ್ ೧೯೬೯ರಂದು ಕರ್ನಾಟಕದ ಕುಂದಾಪುರದಲ್ಲಿ ಜನಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನೃತ್ಯ ಜೀವನ[ಬದಲಾಯಿಸಿ]

ಇವರು ಭರತನಾಟ್ಯವನ್ನು ಶ್ರೀಮತಿ ಉಷಾ ಧಾತಾರ್, ನೃತ್ಯವಿಶಾರದ ನಮ್ರತ ಮತ್ತು ಪದ್ಮಭೂಷಣ ಶ್ರೀ ಕಲಾನಿಧಿ ನಾರಾಯಣ್ ರವರ ಬಳಿ ಕಲಿತರು. ಮೋಹಿನಿಯಾಟ್ಟಂ ನೃತ್ಯದ ತರಬೇತಿಯನ್ನು ಕೇರಳದ ಶ್ರೀಮತಿ ಕಲ್ಯಾಣಿಕುಟ್ಟಿನಮ್ಮ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀ ಬೇಲಕ್ವಾಡಿ ಶ್ರೀನಿವಾಸ ಐಯ್ಯರ್ ಬಳಿ ಕಲಿತರು.

ನೃತ್ಯ ಸಂಯೋಜನೆಗಳು[ಬದಲಾಯಿಸಿ]

  1. ಪುರುಷ ಪರಿಣಾಮ್.[೨]
  2. ಸದಾಶಿವ ದರ್ಶನಂ-ಈಶ್ವರ ದೇವರ ಕುರಿತ ನೃತ್ಯ.
  3. ಅಷ್ಟ ನಾಯಕಿಯರಿನ್ ಇಷ್ಟ ಮುರುಗನ್-ಮುರುಗನ ದೇವರ ಕುರಿತ ನೃತ್ಯ.
  4. ವಂಶಿ - ಕೊಳಲ ನಾದ - ಭರತನಾಟ್ಯ ಮತ್ತು ಆಂಗ್ಲ ಪದ್ಯಗಳ ಮಿಶ್ರಣ.
  5. ಹಾಸ್ಯ- ಭರತನಾಟ್ಯ ನೃತ್ಯರೂಪಕ.[೩]
  6. ಕಾವ್ಯ-ಚಿತ್ರ-ಗೀತ-ನೃತ್ಯ- ಚಿತ್ರಕಲೆ,ನೃತ್ಯ ಮತ್ತು ಸಂಗಿತಕ್ಕೆ ಸಂಬಂಧಿಸಿದ ಸಂಸ್ಕೃತ ಪದ್ಯ.
  7. ಮನಮೋಹನಿಯಮ್ -೧೮೯೨ರಲ್ಲಿ ಸುಂದರಂ ಪಿಳ್ಳೈರವರು ರಚಿಸಿದ ಮಹಾಕಾವ್ಯಕ್ಕೆ ನೃತ್ಯ ಸಂಯೋಜಿಸಿದ್ದಾರೆ.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]