ಗೂದೇಹಣ್ಣು ಬೀಜ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಕ್ಕಾಳಿ ಗಿಡ
ಹೂವುಗಳು
ತಕ್ಕಾಳಿ ಹಣ್ಣು
ಬೀಜ

ಗೂದೇಹಣ್ಣು ಗಿಡಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೂದೇಹಣ್ಣು ಗಿಡ ಸೋಲನೇಸಿ(Solanaceae)ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಸಸ್ಯ/ವೃಕ್ಷಶಾಸ್ತ್ರದ ಹೆಸರುಸೊಲನಮ್ ಲೈಕೊಪೆರಿಸಿಯಮ್(solonium perisicum) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳ ಸಲುವಾಗಿ ಬೆಳಸುತ್ತಾರೆ. ಗೂದೇಹಣ್ಣು ಹಣ್ಣು, ಕಾಯಿಗಳನ್ನು ತಿನ್ನುವುದಕ್ಕೆ, ಪಲ್ಯಮಾಡುವುದಕ್ಕೆ, ಸಾಂಬಾರು, ಸಾರು ಇತ್ಯಾದಿ ಮಾಡುವುದರಲ್ಲಿ ಬಳಸುತ್ತಾರೆ. ಗೂದೇಹಣ್ಣು ಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ. ಗೂದೇಹಣ್ಣು ಗಿಡದ ಜನ್ಮಸ್ಥಾನ ದಕ್ಷಿಣ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಇರುವ ಕೊಲಂಬಿಯ, ಈಕ್ವೆಡೋರ್, ಪೆರು, ಚೀಲೆಮತ್ತು ಬೊಲಿವಿಯಪಶ್ಚಿಮದ ಅರ್ಥಭಾಗಗಳು[೧]

ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು[೨][ಬದಲಾಯಿಸಿ]

ಭಾರತ ದೇಶದಲ್ಲಿ ಗೂದೇಹಣ್ಣನ್ನು ಸಾಗುವಳಿ ಮಾಡುತ್ತಿರುವ ರಾಜ್ಯಗಳು[ಬದಲಾಯಿಸಿ]

ಗೂದೇಹಣ್ಣು ಫಯಿರು ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಸಾಗುವಳಿ ಮಾಡುತಾ ಇದ್ದಾರೆ, ಕೇಳಗೆ ಪ್ರಸ್ತಾವನೆ ಮಾಡಿದ ರಾಜ್ಯಗಳಲ್ಲಿ ಮಹಾರಾಷ್ಟ್ರ, ಬಿಹಾರ,ಕರ್ನಾಟಕ, ಉತ್ತರ ಪ್ರದೇಶ, ಒಡಿಶಾ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮತ್ತು ಅಸ್ಸಾಂ[೨] ಇದರ ಬೆಳವಣಿಗೆ ಜಾಸ್ತಿ.

ತಕ್ಕಾಳಿ/ಗೂದೇಹಣ್ಣು ಬೀಜ-ಶೇಖರಣೆ[ಬದಲಾಯಿಸಿ]

ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವುದು ಸಾಮಾನ್ಯ ವಿಷಯವಲ್ಲ . ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು, ಸಾಂಬಾರು ಇತ್ಯಾದಿಗಳು ತಯಾರು ಮಾಡುವುದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗ ಮಾಡುವುದರಿಂದ ಬೀಜಗಳ ಶೇಖರಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದಿಲ್ಲ. ಕೇವಲ ಗೂದೇಹಣ್ಣು ಬೀಜದಿಂದ ಟೋಮಾಟೋ ಜ್ಯೂಸ್(Tomato juice), ಟೊಮಾಟೋ ಸಾಸ್(tomato sauce), ಟೋಮಾಟೋ ಕೆಚಫ್ (tomato ketchup)ಇತ್ಯಾದಿ ತಯಾರು ಮಾಡುವ ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡುವುದಕ್ಕೆ ಸಾಧ್ಯವಿದೆ . ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದ ಮೇಲೆ ದಾಸ್ತಾನು ಮಾಡಲಾಗುತ್ತದೆ.

ಗೂದೇಹಣ್ಣು ಬೀಜದಲ್ಲಿರುವ ಪದಾರ್ಥಗಳು[೨]

ಪದಾರ್ಥ ಶೇಕಡ
ತೇವ 8.0-9.0
ಎಣ್ಣೆ(fat) 24-25
ಪ್ರೋಟಿನ್ 27-28
ಕಚ್ಚನಾರು ಪದಾರ್ಥ 13-14
ಲಿಸಿಥಿನ್(Lecithin) 0.56
N-free Extract 21
ಬೂದಿ ೪೦.೨೦%

ಎಣ್ಣೆ[ಬದಲಾಯಿಸಿ]

  • ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಮಾತ್ರ ಇರುವುದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ತೆಗೆಯುವುದಕ್ಕೆ ಆಗುವುದಿಲ್ಲ. ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನ ಮಾಡಬೇಕಾಗಿದೆ. ಎಣ್ಣೆ ಕಂದು ಇಲ್ಲ ಕೆಂಪುಬಣ್ಣದಲ್ಲಿ ಇರುತ್ತದೆ, ಕಟುವಾದ ಕಮಟು ವಾಸನೆ ಇರುತ್ತದೆ. ಎಣ್ಣೆಯಲ್ಲಿ ಪರ್ಯಪ್ತ ಕೊಬ್ಬಿನ ಆಮ್ಲಗಳು ೧೪-೧೮% ವರೆಗೆ ಅಪರ್ಯಪ್ತ ಕೊಬ್ಬಿನ ಆಮ್ಲಗಳು ೭೬-೮೦% ವರೆಗೆ ಇರುತ್ತವೆ.

ಎಣ್ಣೆ ಭೌತಿಕ ಗುಣಗಣಗಳು[೩]

ಭೌತಿಕ ಲಕ್ಷಣ ಮಿತಿ
ವಕ್ರೀಭವನ ಸೂಚಿಕೆ,400Cవద్ద 1.4603-1.4627
ಅಯೋಡಿನ್ ಮೌಲ್ಯ 1೦5-106
ಸಪೊನಿಫಿಕೆಸನ್ ಸಂಖ್ಯೆ/ಮೌಲ್ಯ 184-191
ಅನ್ ಸಪೋಣಿಫಿಯಬುಲ್ ಪದಾರ್ಥ 1.5% ಗರಿಷ್ಟ
ತೇವ 0.5% ಗರಿಷ್ಟ
ವರ್ಣ1"ಸೆಲ್,(y+5R) 30(ಕಚ್ಚ ಎಣ್ಣೆ)
ಸಾಂದ್ರತೆ250/300C 0.917-0.925
ಪೆರಾಕೈಡ್ ಸಂಖ್ಯೆ ೯.೧-೯.೨
ಸ್ಮೋಕ್ ಪಾಯಿಂಟ್ ೧೭೬-೨೦೮0C

ಎಣ್ಣೆ ಯಲ್ಲಿದ್ದ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ[೩]

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ 14.0
ಸ್ಟಿಯರಿಕ್ ಆಮ್ಲ(C18:0) 6.0
ಒಲಿಕ್ ಆಮ್ಲ(C18:1) 20-25% వరకు
ಲಿನೊಲಿಲ್ ಆಮ್ಲ(C18:2) 50-54% వరకు
ಲಿನೊಲೆನಿಕ್ ಆಮ್ಲ(C18:3) 2-3%

ಎಣ್ಣೆ ಪ್ರಯೋಜನಗಳು[ಬದಲಾಯಿಸಿ]

  • ರಿಫೈಂಡು ಮಾಡಿದ್ದ ಎಣ್ಣೆಯನ್ನು ಸಾಲಡು(salad)ಎಣ್ಣೆ ತಯಾರಿಕೆಯಲ್ಲಿ ಬಳಸುತ್ತಾರೆ.
  • ಸಾಬೂನುಗಳನ್ನು ಮಾಡುವ ಪರಿಶ್ರಮ/ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ.
  • ಮಾರ್ಗರಿನ್ಗಳ ಉತ್ಪಾದನೆಯಲ್ಲಿಯು ಬಳಸುತ್ತಾರೆ.
  • ಬಣ್ಣ(paints)ಗಳಿಗೆ ಬೇಕಾದ ಅಕ್ಸೈಡುಗಳನ್ನು ತಯಾರಿಸುವುದರಲ್ಲಿ ಬಳಸುತ್ತಾರೆ.

ಉಲ್ಲೇಖನ[ಬದಲಾಯಿಸಿ]

  1. http://www.whfoods.com/genpage.php?tname=foodspice&dbid=44
  2. ೨.೦ ೨.೧ ೨.೨ SEA Hand Book-2009 by The Solvent Extractors' Association of India
  3. ೩.೦ ೩.೧ Evengelos s. Lozos,Jhon Tasaknis and Lalas,Grasasy Aceites,Vol.49.Fasc.5-6(1998)440-445