ವಿಷಯಕ್ಕೆ ಹೋಗು

ಆರನ್‌ ಸ್ಟೋನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aaron Stone
ಶೈಲಿAction/Adventure
Sci Fi
Teen Drama
Comedy
ರಚನಾಕಾರರುBruce Kalish
ನಿರ್ದೇಶಕರುErik Canuel
ನಟರುKelly Blatz
David Lambert
J.P. Manoux
Tania Gunadi
ದೇಶ ಅಮೇರಿಕ ಸಂಯುಕ್ತ ಸಂಸ್ಥಾನ
 ಕೆನಡಾ
ಭಾಷೆ(ಗಳು)English
ಒಟ್ಟು ಸರಣಿಗಳು2
ಒಟ್ಟು ಸಂಚಿಕೆಗಳು23 (List of episodes)
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)Bruce Kalish
Suzanne French
ನಿರ್ಮಾಪಕ(ರು)Bruce Kalish
ಸಂಕಲನಕಾರರುEric Goddard
ಸ್ಥಳ(ಗಳು)Toronto, Ontario, ಕೆನಡಾ, India and United States
ಕ್ಯಾಮೆರಾ ಏರ್ಪಾಡುSingle camera
ಸಮಯ22 minutes (approx.)
ಪ್ರಸಾರಣೆ
ಮೂಲ ವಾಹಿನಿಕೆನಡಾ Family
ಅಮೇರಿಕ ಸಂಯುಕ್ತ ಸಂಸ್ಥಾನDisney XD (2009-present),
Disney Channel (2010-present)
ಚಿತ್ರ ಶೈಲಿHigh-definition television (HDTV)
Original airingFebruary 13, 2009 (January 2010 on Disney Channel)
ಹೊರ ಕೊಂಡಿಗಳು
ತಾಣ

ಆರನ್‌ ಸ್ಟೋನ್‌ ಎಂಬುದು ಬ್ರೂಸ್‌ ಕೈಲಾಶ್‌ನಿಂದ ಸೃಷ್ಟಿಸಲ್ಪಟ್ಟಿರುವ ಪ್ರತ್ಯಕ್ಷ-ಪರಿಣಾಮದ, ಏಕ-ಕ್ಯಾಮೆರಾದ ಒಂದು ಸಾಹಸಕಾರ್ಯ ಸರಣಿಯಾಗಿದೆ. 2009ರ ಫೆಬ್ರುವರಿ 13ರಂದು, ಡಿಸ್ನಿ XD ವಾಹಿನಿಯ ಪ್ರಾರಂಭದೊಂದಿಗೆ ಮೂಲತಃ ಪ್ರಸಾರವಾದ ಈ ಸರಣಿಯು, ಚಾರ್ಲಿ ಲ್ಯಾಂಡರ್ಸ್‌ ಎಂಬ ಹೆಸರಿನ ಓರ್ವ ಹದಿಹರೆಯದ ಹುಡುಗನ ಕುರಿತಾಗಿದ್ದು, 'ಹೀರೋ ರೈಸಿಂಗ್‌' ಎಂಬ ಕಾಲ್ಪನಿಕ ವಿಡಿಯೋ ಆಟಕ್ಕೆ ಸೇರಿದ 'ಆರನ್‌ ಸ್ಟೋನ್‌' ಎಂಬ ತನ್ನ ವಿಶ್ವ-ಪ್ರಸಿದ್ಧ ಅವತಾರದ ನಿಜ-ಜೀವನದ ಸಹವರ್ತಿಯಾಗಲು ಅವನು ಸೈನ್ಯಕ್ಕೆ ಸೇರಿರುತ್ತಾನೆ. ಸದರಿ ಸರಣಿಯಲ್ಲಿ ಕೆಲ್ಲಿ ಬ್ಲಾಟ್ಜ್‌, ಡೇವಿಡ್‌ ಲ್ಯಾಂಬರ್ಟ್‌, JP ಮನೌಕ್ಸ್‌ ಮತ್ತು ತಾನಿಯಾ ಗುನಾದಿ ಮೊದಲಾದ ತಾರೆಗಳು ನಟಿಸಿದ್ದಾರೆ. ಮೊದಲನೇ ಋತುವಿಗೆ ಸಂಬಂಧಿಸಿದ ನಿರ್ಮಾಣಕಾರ್ಯವು 2008ರ ಜೂನ್‌ 2ರಿಂದ ಡಿಸೆಂಬರ್‌ 19ರವರೆಗೆ ನಡೆಯಿತು. ಮೊದಲನೇ ಋತುವಿನ ಭಾಗವು ಡಿಸ್ನಿ XD ವಾಹಿನಿಯಲ್ಲಿ 2009ರ ಫೆಬ್ರುವರಿ 13ರಿಂದ ಆಗಸ್ಟ್‌ 27ರವರೆಗೆ ಬಿತ್ತರವಾಯಿತು. ಈ ಪ್ರದರ್ಶನ ಕಾರ್ಯಕ್ರಮವು ಎರಡನೇ ಋತುವಿಗಾಗಿ ನವೀಕರಿಸಲ್ಪಟ್ಟಿದೆ ಎಂದು 2009ರ ಮೇ 5ರಂದು, ಡಿಸ್ನಿ ವಾಹಿನಿಯು ಪ್ರಕಟಿಸಿತು. ಎರಡನೇ ಋತುವಿಗೆ ಸಂಬಂಧಿಸಿರುವ ನಿರ್ಮಾಣಕಾರ್ಯವು 2009ರ ಜೂನ್‌ 22ರಂದು ಪ್ರಾರಂಭವಾಯಿತು ಎಂದು ಚಾರ್ಲಿ ಲ್ಯಾಂಡರ್ಸ್‌ ಪಾತ್ರದಲ್ಲಿ ನಟಿಸಿರುವ ಕೆಲ್ಲಿ ಬ್ಲಾಟ್ಜ್‌ ಟ್ವಿಟರ್‌ ಮೂಲಕ ದೃಢೀಕರಿಸಿದ್ದಾನೆ. ಎರಡನೇ ಋತುವಿನ ಭಾಗವು 2010ರ ಫೆಬ್ರುವರಿ 24ರಂದು ಡಿಸ್ನಿ XD ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಂಡಿತು.

ಪಾತ್ರಗಳು

[ಬದಲಾಯಿಸಿ]

ಪ್ರಧಾನ ಪಾತ್ರವರ್ಗ

  • ಚಾರ್ಲಿ ಲ್ಯಾಂಡರ್ಸ್‌ /ಆರನ್‌ ಸ್ಟೋನ್‌ ಆಗಿ ಕಾಣಿಸಿಕೊಂಡಿರುವ ಕೆಲ್ಲಿ ಬ್ಲಾಟ್ಜ್‌ : ಈ ನಾಯಕನು ತನ್ನ ಕುಟುಂಬ ಹಾಗೂ ಪ್ರಪಂಚವನ್ನು ರಕ್ಷಿಸುವ ಸಲುವಾಗಿ ತನ್ನ ವಿಡಿಯೋ-ಆಟದ ಅವತಾರದ ಪಾತ್ರವನ್ನು ವಹಿಸುತ್ತಾನೆ. ಅವನ ಹೀರೋ ರೈಸಿಂಗ್‌ ಅವತಾರ ಹಾಗೂ ನಿಜ-ಜೀವನದ ರಹಸ್ಯ ಗುರುತನ್ನು "ಆರನ್‌ ಸ್ಟೋನ್‌" ಎಂದು ಹೆಸರಿಸಲಾಗಿದೆ. 1ನೇ ಋತುವಿನ ಪ್ರಾರಂಭದಲ್ಲಿ ಅವನು 16 ವರ್ಷ ವಯಸ್ಸಿನವನಾಗಿರುತ್ತಾನೆ ಮತ್ತು 1ನೇ ಋತುವಿನ ಮಧ್ಯಭಾಗದಲ್ಲಿ ಅವನಿಗೆ 17 ವರ್ಷಗಳಾಗಿರುತ್ತವೆ.
  • ಜಾಸನ್‌ ಲ್ಯಾಂಡರ್ಸ್‌ /ಟರ್ಮಿನಸ್‌ ಮ್ಯಾಗ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡೇವಿಡ್‌ ಲ್ಯಾಂಬರ್ಟ್‌ : ಇವನು ಚಾರ್ಲಿಯ 14 (ಋತು 1ರ ಬಹುಭಾಗ) - 15-ವರ್ಷ-ವಯಸ್ಸಿನ (ಋತು 1ರ ಅಂತ್ಯದಲ್ಲಿ) ಕಿರಿಯ ಸೋದರನಾಗಿದ್ದು, ಚಾರ್ಲಿಯಂತೆಯೇ ಓರ್ವ ಉತ್ಸಾಹಶಾಲಿ ಅಂತರಜಾಲ-ಆಟದ ಆಟಗಾರನಾಗಿರುತ್ತಾನೆ. ಅವನ ಆಟದ ಕುಶಲತೆಗಳು ನಿಜವಾಗಿಯೂ ಬೌದ್ಧಿಕ ಕೊರತೆಯಿಂದ ಕೂಡಿರುತ್ತವೆ. ಆಟದಲ್ಲಿ ಆತ ಟರ್ಮಿನಸ್‌ ಮ್ಯಾಗ್ ಆಗಿ ಕಾಣಿಸಿಕೊಳ್ಳುತ್ತಾನೆ‌. ಟರ್ಮಿನಸ್‌ ಮ್ಯಾಗ್‌ ಬಂಗಾರದ ಒಂದು ದೈತ್ಯ ಯಂತ್ರಮಾನವನಾಗಿದ್ದು, ಅದು ಆತನ ಸೋದರನ ಸ್ನೇಹಿತನಾಗಿರುತ್ತದೆ. ತನ್ನ ಸೋದರ ಚಾರ್ಲಿಯು ನಿಜಜೀವನದ ಪ್ರಪಂಚದ ಅಪರಾಧದ ವಿರುದ್ಧ ಹೋರಾಡುವ ರಹಸ್ಯ ನಾಯಕನಾದ ಆರನ್‌ ಸ್ಟೋನ್‌ ಎಂಬುದು ಜಾಸನ್‌ಗೆ ಗೊತ್ತಿರುವುದಿಲ್ಲ. ಎಮ್ಮಾ ಎಂಬಾಕೆಯ ಮೇಲೆ ಅವನಿಗೆ ಅಲ್ಪಕಾಲದ ವ್ಯಾಮೋಹವಿರುತ್ತದೆ, ಆದರೆ ಅವನ ಭಾವನೆಗಳಿಗೆ ಆಕೆ ಸ್ಪಂದಿಸಿರುವುದಿಲ್ಲ. "ಗೇಮ್‌ ಆನ್‌"ನಲ್ಲಿ, ಸ್ಟಾನ್‌ನ ತೋಳು ಮುರಿದುಕೊಂಡಾಗ ಎಮ್ಮಾಳ ಚುಂಬನದ ಮೇಲೆ ತನ್ನ ಗಮನವನ್ನು ಇರಿಸಲು ಅವಳಿಂದ ಆತ ಚುಂಬನವನ್ನು ಪಡೆದಿರುತ್ತಾನೆ. ಚಾರ್ಲಿಯು ಅವಳ ಮೇಲೆ ಒಂದು ಅಲ್ಪಕಾಲದ ವ್ಯಾಮೋಹವನ್ನು ಹೊಂದಿದ್ದಾನೆ ಎಂಬ ಸುಳಿವನ್ನು ಚಾರ್ಲಿಯು ನೀಡುವುದು ಅಚ್ಚರಿ ಹುಟ್ಟಿಸುತ್ತದೆ.
  • S.T.A.N. ಪಾತ್ರದಲ್ಲಿ ನಟಿಸಿರುವ J. P. ಮನೌಕ್ಸ್‌ : ಚಾರ್ಲಿಯ ಬೆನ್ನಿಗಂಟಿದ ಆಪ್ತನಂತಿರುವ ಯಂತ್ರಮಾನವನ ಪಾತ್ರವಿದು. ಅವನ ಹೆಸರು "Sentient Tactical Assisting Neo-human" ಎಂಬ ಪದಗುಚ್ಛದ ಪ್ರಥಮಾಕ್ಷರಿಯಾಗಿದೆ ಎಂದು ಹೇಳಲಾಗುತ್ತದೆ. ಅಸಿಮೋವ್‌ನ ಯಂತ್ರಮಾನವ ವಿಜ್ಞಾನದ ನಿಯಮಗಳಿಂದ ಸ್ಟಾನ್‌ ಆಳಲ್ಪಡುತ್ತಾನೆ: ಅಂದರೆ, ಅವನು ಮಾನವರಿಗೆ ತೊಂದರೆ ಕೊಡಬಾರದು ಅಥವಾ ಮಾನವರಿಗೆ ತೊಂದರೆಯಾಗಲು ಅವನು ಅವಕಾಶ ನೀಡಬಾರದು, ಮತ್ತು ಆತ ಆದೇಶಗಳನ್ನು ಪಾಲಿಸಬೇಕು, ಇತ್ಯಾದಿ. ಸ್ಟಾನ್‌ನಲ್ಲಿ ಅಂತರ್ಗತವಾಗಿರುವ ಅವನ ಮಂಡಲಗಳು ವಿರೂಪಕ್ಕೊಳಗಾಗಿ ಅವನನ್ನು ಸಾಗಣೆಯಲ್ಲಿರುವ ಒಂದು ಸರಕನ್ನಾಗಿ ಮಾರ್ಪಡಿಸಿದಾಗ, ಅವನ ಮುಕ್ತಗೊಳಿಸಲಾದ ಸ್ವರೂಪವು ಸಕ್ರಿಯಗೊಳ್ಳುತ್ತದೆ.
  • ಎಮ್ಮಾ ಲಾವ್‌ /ಡಾರ್ಕ್‌ ತಮಾರಾ ಪಾತ್ರದಲ್ಲಿ ನಟಿಸಿರುವ ತಾನಿಯಾ ಗುನಾದಿ : ಕಂಪ್ಯೂಟರ್‌ ಸಂಬಂಧಿ ಬುದ್ಧಿವಂತಿಕೆಯನ್ನು ಹೊಂದಿರುವ ಓರ್ವ ಗಂಡುಬೀರಿ ಹುಡುಗಿಯಾದ ಈಕೆ ಚಾರ್ಲಿಯ ಪಕ್ಕದ ನೆರೆಹೊರೆಯವಳಾಗಿರುತ್ತಾಳೆ. ಚಾರ್ಲಿಯ ಎರಡೆರಡು ಗುರುತಿನ ಬಗ್ಗೆ ತಿಳಿದಿಕೊಂಡಿರುವ ಇವಳು ಶ್ರೀಮಾನ್‌ ಹಾಲ್‌ ಪರವಾಗಿ ಕೆಲಸ ಮಾಡುತ್ತಾಳೆ‌. ಚಾರ್ಲಿಯ ಲ್ಯಾಪ್‌ಟಾಪ್‌ ಮತ್ತು ರಹಸ್ಯತೆಗಳನ್ನು ಕಂಪ್ಯೂಟರ್‌ ಮೂಲಕ ಅಕ್ರಮವಾಗಿ ಪಡೆದ ನಂತರ, ಕೋಲ್ಕತಾದಲ್ಲಿನ ವಾಸ್‌ ಮತ್ತು ರಾಮ್‌ನ ವೆಬ್‌ಕ್ಯಾಮರಾದೊಂದಿಗೆ ಸಂಪರ್ಕಹೊಂದುತ್ತಾಳೆ. ಹೀಗಾಗಿ ಅವಳು ಕಂಪ್ಯೂಟರ್‌ ಮೂಲಕ ಅಕ್ರಮ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಪರಿಣತಿಯನ್ನು ಪಡೆದಿರುತ್ತಾಳೆ. ಚಾರ್ಲಿಯ ಬಹುಪಾಲು ಆಯುಧಗಳನ್ನು ಸೃಷ್ಟಿಸಿರುವ ಈಕೆ ಓರ್ವ 2ನೇ ಹಂತದ ಶಸ್ತ್ರಾಸ್ತ್ರ ಪರಿಣಿತೆಯಾಗಿದ್ದಾಳೆ. ಚಾರ್ಲಿಯಂತೆ ಅವಳೂ ಸಹ ಡಾರ್ಕ್‌ ತಮಾರಾ ಎಂಬ ತನ್ನ ಎರಡನೆಯ-ಪ್ರಾಣದಂತಿರುವ ಅಥವಾ ಆಪ್ತ-ಸ್ನೇಹಿತನಂತಿರುವ ಒಂದು ಅವತಾರವನ್ನು ಹೊಂದಿದ್ದಾಳೆ. ಎಮ್ಮಾ ಮತ್ತು ಚಾರ್ಲಿ ಪರಸ್ಪರರಲ್ಲಿ ಪ್ರೀತಿಪೂರ್ವಕ ಭಾವನೆಗಳನ್ನು ಹೊಂದಿದ್ದಾರೆ ಎಂಬುದರ, ಮತ್ತು ಸಮಯ ಸಿಕ್ಕಲ್ಲಿ ಅದು ಪ್ರಣಯಸ್ವರೂಪವನ್ನು ತಾಳಬಲ್ಲದು ಎಂಬುದರ ಕುರಿತಾದ ಸುಳಿವು ಸರಣಿಯ ಅವಧಿಯಲ್ಲಿ ಸಿಗುತ್ತದೆ. "ಗೇಮ್‌ ಆನ್‌"ನಲ್ಲಿ, ಸ್ಟಾನ್‌ನ ತೋಳು ಮುರಿದುಕೊಂಡಾಗ ತನ್ನ ಚುಂಬನದ ಮೇಲೆ ಅವನ ಗಮನವನ್ನು ಪಡೆಯಲುಲು ಎಮ್ಮಾ ಜಾಸನ್‌ನ ತುಟಿಗಳನ್ನು ಚುಂಬಿಸುತ್ತಾಳೆ. ಚಾರ್ಲಿಯು ಅವಳ ಮೇಲೆ ಒಂದು ಅಲ್ಪಕಾಲದ ವ್ಯಾಮೋಹವನ್ನು ಹೊಂದಿದ್ದಾನೆ ಎಂಬ ಸುಳಿವನ್ನು ಚಾರ್ಲಿಯು ನೀಡುವುದು ಅಚ್ಚರಿ ಹುಟ್ಟಿಸುತ್ತದೆ.

ಮರುಕಳಿಸುವ ಪಾತ್ರಗಳು

  • T. ಅಬ್ನರ್‌ ಹಾಲ್‌ ಪಾತ್ರದಲ್ಲಿ ನಟಿಸಿರುವ ಮಾರ್ಟಿನ್‌ ರೋಚ್‌ : ಈತ ಹಾಲ್‌ ಇಂಡಸ್ಟ್ರೀಸ್‌ನ ಸಭಾಪತಿ ಹಾಗೂ 'ಹೀರೋ ರೈಸಿಂಗ್‌' ಆಟದ ನಿರ್ಮಾತೃವಾಗಿದ್ದಾನೆ. ಈತ ಚಾರ್ಲಿಯ ಆಪ್ತ ಸಲಹೆಗಾರ ಮತ್ತು ಸ್ಟಾನ್‌ನ ಸೃಷ್ಟಿಕರ್ತನಾಗಿದ್ದಾನೆ. ಚಿಂತಕ-ಚಾವಡಿಯೊಂದನ್ನು ಸೃಷ್ಟಿಸುವ ಮೂಲಕ ಪ್ರಪಂಚಕ್ಕೆ ನೆರವಾಗುವುದು ಅವನ ಪರಿಕಲ್ಪನೆಯಾಗಿತ್ತು. ಇದು ಬುದ್ಧಿಮತ್ತೆಯ ಸೀರಮ್‌ ದ್ರವದ ಸೃಷ್ಟಿಗೆ ಕಾರಣವಾಗಿ, ನಾಶದ ಕಡೆಗೆ ಒಲವು ತೋರಿರುವ ಖಳನಾಯಕರ ಸಮೂಹವಾಗಿ ಒಮೆಗಾ ಡಿಫೈಯನ್ಸ್‌ ಮಾರ್ಪಡಲು ಅದು ಕಾರಣವಾಯಿತು. ಸದರಿ ಸೀರಮ್‌ ದ್ರವವಿನ್ನೂ ಅದರ ಪರೀಕ್ಷಾರ್ಥ ಪ್ರಯೋಗವನ್ನು ಸಂಪೂರ್ಣಗೊಳಿಸದೇ ಇರುವುದರಿಂದ ಅದನ್ನು ಸೇವಿಸದಂತೆ ಹಾಲ್‌ನ ರಕ್ಷಣೆಯ ಸಂದರ್ಭದಲ್ಲಿ ಅವರಿಗೆ ಅವನು ಹೇಳಿದ. ಸೀರಮ್‌ ದ್ರವದ ತನ್ನ ಸೀಸೆಯನ್ನು ತೆಗೆದುಕೊಳ್ಳುವಂತೆ ಆ ಸಮೂಹದಿಂದ ಬರುವ ಮನವಿಯನ್ನು ಅವನು ತಿರಸ್ಕರಿಸಿದ ಮತ್ತು ಅದರ ಬದಲಿಗೆ ಮೆಗಾ ಡಿಫೈಯನ್ಸ್‌ನ ಹುಟ್ಟಡಗಿಸಲು ಹಾಲ್‌ ಇಂಡಸ್ಟ್ರೀಸ್‌ನ ಎಲ್ಲಾ ಸಂಪನ್ಮೂಲಗಳನ್ನೂ ಬಳಸಿಕೊಳ್ಳುವ ಹಾಗೂ ಸೀರಮ್‌ ದ್ರವವು ಉಂಟುಮಾಡಿರುವ ಹಾನಿಯನ್ನು ತಡೆಗಟ್ಟಲು ಯೋಜಿಸಿದ. ಶ್ರೀಮಾನ್‌ ಹಾಲ್‌ನ ಮುಖವು ಯಾವಾಗಲೂ ಮಸುಕಿನ ಛಾಯೆಗಳಲ್ಲಿ ಅಡಗಿಸಿರುವಂತೆ ಕಾಣುತ್ತದೆ. ತನ್ನ ಮುಖವನ್ನು ನೋಡಿದ ಯಾರೇ ಆದರೂ ಒಮೆಗಾ ಡಿಫೈಯನ್ಸ್ ಸಮೂಹದ ಒಂದು ಲಕ್ಷ್ಯವಾಗಿ ಮಾರ್ಪಡಬಹುದಾದ ಸಾಧ್ಯತೆ ಇರುತ್ತದೆಯಾದ್ದರಿಂದ, ಅವನು ತನ್ನ ಮುಖವನ್ನು ಉದ್ದೇಶಪೂರ್ವಕವಾಗಿ ಹೀಗೆ ಮರೆಮಾಡಿಕೊಂಡಿರುತ್ತಾನೆ. ಶ್ರೀಮಾನ್‌ ಹಾಲ್‌ನ ಮುಖವನ್ನು ಕೆಲವೊಮ್ಮೆ ಅಸ್ಪಷ್ಟವಾಗಿ ಗುರುತಿಸಬಹುದಾದರೂ, ಅದು ಸಂಪೂರ್ಣವಾಗಿ ಎಂದಿಗೂ ಕಾಣಿಸುವುದಿಲ್ಲ. ಪುನರಾವರ್ತನಗಳಲ್ಲೂ ಇದೇ ಸ್ಥಿತಿಯನ್ನು ಕಾಯ್ದುಕೊಂಡು ಬರಲಾಗುತ್ತದೆ.
  • ಅಮಂಡಾ ಲ್ಯಾಂಡರ್ಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಷೌನಾ ಮ್ಯಾಕ್‌ಡೊನಾಲ್ಡ್‌ : ಈಕೆ ಚಾರ್ಲಿ & ಜಾಸನ್‌ನ ತಾಯಿ & ಹಾಲ್‌ ಇಂಡಸ್ಟ್ರೀಸ್‌ನ ಹೊಸ ನೌಕರಳು.
  • ವಾಸ್‌ ಮೆಹ್ತಾ ಪಾತ್ರದಲ್ಲಿರುವ ವಸಂತ್‌ ಸಾರಂಗ : ಈತ ರಾಮ್‌ದಾಸ್‌ನ ಸೋದರ. ವಾಸ್‌ನ ಹೀರೋ ರೈಸಿಂಗ್‌ ವಿಡಿಯೋ ಆಟದ ಅವತಾರವಾದ ವಾಸುವಿಯಸ್‌ , ಭಾರತದ ಕೋಲ್ಕತಾಗೆ ಸೇರಿದುದಾಗಿದೆ. ಇಬ್ಬರು ಸೋದರರ ಪೈಕಿ ವಾಸ್‌, ದಡ್ಡ ಹಾಗೂ ಹೆಚ್ಚು ಸಾಂಪ್ರದಾಯಿಕ ಸ್ವಭಾವದವನಾಗಿರುತ್ತಾನೆ.
  • ರಾಮ್‌ದಾಸ್‌ 'ರಾಮ್‌' ಮೆಹ್ತಾ ಪಾತ್ರದಲ್ಲಿರುವ ಜೆಸ್ಸಿ ರಾತ್‌ : ಈತ ವಾಸ್‌ನ ಸೋದರ. ರಾಮ್‌ನ ಹೀರೋ ರೈಸಿಂಗ್‌ ವಿಡಿಯೋ ಆಟದ ಅವತಾರವಾಗಿರುವ ಲೀಥಲ್‌ ಲೋಟಸ್‌ ಭಾರತದ ಕೋಲ್ಕತಾಗೆ ಸೇರಿದುದಾಗಿರುತ್ತದೆ. ರಾಮ್‌ ಯಾವಾಗಲೂ ಒಂದು ಯಾಂತ್ರಿಕ ಶಿರಸ್ತ್ರಾಣವನ್ನು ಧರಿಸುತ್ತಾನೆ ಮತ್ತು ತನ್ನ ಸೋದರನಿಗಿಂತ ಕೊಂಚವೇ ಹೆಚ್ಚು ನಿರಾಳ ಸ್ವಭಾವದವನಾಗಿರುತ್ತಾನೆ.
  • ಪರ್ಸಿ ಬಡ್ನಿಕ್‌ ಪಾತ್ರದಲ್ಲಿರುವ ರಾಬ್‌ ರಾಮ್‌ಸೇ : ಈತ ಎಮ್ಮಾ ಮೇಲೆ ಒಂದು ಅಲ್ಪಕಾಲದ ವ್ಯಾಮೋಹವನ್ನು ಹೊಂದಿರುವ ಓರ್ವ ದೊಡ್ಡ ದಬಾವಣೆಗಾರನಾಗಿದ್ದು, ಜಾಸನ್‌ನನ್ನು ಪಡೆಯಲು ಯಾವಾಗಲೂ ಶ್ರಮಿಸುತ್ತಿರುತ್ತಾನೆ. ಬಡ್ನಿಕ್‌ನನ್ನು ಜಾಸನ್‌ ಯಾವಾಗಲೂ ಚಿತಾವಣೆ ಮಾಡುತ್ತಿರುತ್ತಾನೆ. ಪರ್ಸಿ ಈಸ್ಟ್‌ಲ್ಯಾಂಡ್‌ ಹೈ ರೆಸ್ಲಿಂಗ್‌ ತಂಡದ ಓರ್ವ ಸದಸ್ಯನೂ ಆಗಿದ್ದಾನೆ.
  • ಚೇಸ್‌ ರಾವೆನ್‌ವುಡ್‌ ಪಾತ್ರದಲ್ಲಿರುವ ಇಟಾಲಿಯಾ ರಿಕ್ಕಿ : ಈಕೆ ಚಾರ್ಲಿಯ ಸಹಪಾಠಿ ಮತ್ತು ಪ್ರಿಯತಮೆ. ರಹಸ್ಯವಾಗಿ ಕಾಮಿಕ್‌ ಪುಸ್ತಕಗಳ ಗೀಳನ್ನು ಹಚ್ಚಿಕೊಂಡಿರುವ ಈಕೆ, ಚಾರ್ಲಿಯೊಂದಿಗೆ ಒಂದು ಸಂಪರ್ಕವನ್ನು ಕಲ್ಪಿಸಿಕೊಳ್ಳುತ್ತಾಳೆ. ಕಾಮಿಕ್‌ ಪುಸ್ತಕದ "ಲಾಸ್ಟ್‌ ಫೈಟರ್‌" ಭಾಗವನ್ನು ತಾವಿಬ್ಬರೂ ಮೆಚ್ಚಿಕೊಂಡು ಆನಂದಿಸುತ್ತಿರುವುದು ಗೊತ್ತಾದಾಗ ಅವರಿಗೆ ಈ ಸಂಪರ್ಕದ ಅರಿವು ಮೂಡುತ್ತದೆ. ಚಾರ್ಲಿಗೆ ನಿರಾಶೆಯಾಗುವ ರೀತಿಯಲ್ಲಿ "ಸಾಟರ್ಡೆ ಫೈಟ್‌ ಫಿವರ್‌" ಭಾಗದಲ್ಲಿ ಚೇಸ್‌ ಕ್ಯಾಲಿಫೋರ್ನಿಯಾಗೆ ತೆರಳುತ್ತಾಳೆ.
  • ಹ್ಯಾರಿಸನ್‌ ಪಾತ್ರದಲ್ಲಿರುವ ಡೇನಿಯಲ್‌ ಡಿಸ್ಯಾಂಟೋ : ಈಸ್ಟ್‌ಲ್ಯಾಂಡ್‌ ಹೈ ಪ್ರದೇಶದ ಓರ್ವ ನಿವಾಸಿ ಗಾಂಪನಾಗಿರುವ ಹ್ಯಾರಿಸನ್‌, ಅನೇಕ ವೇಳೆ ಚಾರ್ಲಿ, ಎಮ್ಮಾ ಮತ್ತು ಜಾಸನ್‌ ಮೊದಲಾದವರಿಗೆ ಉಪದ್ರವ ಕೊಡುತ್ತಿರುತ್ತಾನೆ.
  • ಎಲಿಯಾಸ್‌ ಪವರ್ಸ್‌ ಪಾತ್ರದಲ್ಲಿರುವ ಮ್ಯಾಲ್ಕಂ ಟ್ರಾವಿಸ್‌ : ಹಾಲ್‌ ಇಂಡಸ್ಟ್ರೀಸ್‌ನ ಓರ್ವ ಹಿಂದಿನ ಸಂಶೋಧಕ & ಹೀರೋ ರೈಸಿಂಗ್‌ ವಿಡಿಯೋ ಆಟದ ನಿಜವಾದ ಸೃಷ್ಟಿಕರ್ತ. ಕಂಪ್ಯೂಟರ್‌ನ ಪ್ರೋಗ್ರಾಮಿಂಗ್‌ ವಿಷಯಕ್ಕೆ ಸಂಬಂಧಿಸಿದ ಓರ್ವ ಅಸಾಧಾರಣ ಪ್ರತಿಭಾಶಾಲಿಯಾದ ಈತ, ಮೀರಿಸಲು ಅಸಾಧ್ಯವಾದ ರೀತಿಯಲ್ಲಿ ಸದರಿ ಆಟವನ್ನು ವಿನ್ಯಾಸಗೊಳಿಸಿದ. ಒಮೆಗಾ ಡಿಫೈಯನ್ಸ್‌ ಸಮೂಹದ ಕುರಿತಾದ ಸತ್ಯವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ, ಆತ ಶ್ರೀಮಾನ್‌ ಹಾಲ್‌ನೊಂದಿಗೆ ಜಗಳವಾಡಿಕೊಂಡು, ಒಮೆಗಾ ಸಮೂಹವನ್ನು ಸೇರಿಕೊಂಡ. "ಮೈಂಡ್‌ ಗೇಮ್ಸ್‌"ನಲ್ಲಿ ಆತ ತಪ್ಪಿಸಿಕೊಂಡನಾದರೂ, 1ನೇ ಋತುವಿನ ಸಮಾಪ್ತಿ ಭಾಗದಲ್ಲಿ ಆತ ಪುನಃ-ವಶಪಡಿಸಿಕೊಳ್ಳಲ್ಪಟ್ಟ.
  • ಟಟಿಯಾನಾ ಕೇನ್‌ ಪಾತ್ರದಲ್ಲಿರುವ ಮೇಘನ್‌ ರಾತ್‌ : ಶ್ರೀಮಾನ್‌ ಹಾಲ್‌ನ ಮಗಳಾಗಿರುವ ಈಕೆ ಒಮೆಗಾ ಡಿಫೈಯನ್ಸ್‌ ಸಮೂಹದ ಪರವಾಗಿ ಕೆಲಸ ಮಾಡುತ್ತಾಳೆ. ವಾಸ್‌ ಮತ್ತು ರಾಮ್‌ರನ್ನು ಉಳಿಸುವ ಸಲುವಾಗಿ ಕ್ರೋನಿಸ್‌ನೊಂದಿಗೆ ಕಾದಾಡಿ ಅವನನ್ನು ಓಡಿಸುವಲ್ಲಿ ಆರನ್‌ಗೆ ಅವಳು ನಂತರ ಸಹಾಯಮಾಡಿದಳು ಮತ್ತು ನಂತರದಲ್ಲಿ ಅವನ ಶಾಲಾನೃತ್ಯದಲ್ಲಿ ಅವನೊಂದಿಗೆ ಜತೆಗೂಡಿದಳು. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಒಂದು ಬಂಧವೇರ್ಪಟ್ಟಿತು. ಆರನ್‌ ಅವಳನ್ನು ಬಿಟ್ಟುಬಿಡದಿರುವಂತೆ ಮತ್ತು ಅವಳಲ್ಲಿ ಇನ್ನೂ ಒಳ್ಳೆಯತನವನ್ನು ಕಾಣುತ್ತಿರುವಂತೆ, ಅವಳಲ್ಲಿ ಸಂಪೂರ್ಣ ವಿಶ್ವಾಸವನ್ನು ಇಟ್ಟಿರುವವನಂತೆ "ಸಾಟರ್ಡೆ ಫೈಟ್‌ ಫಿವರ್‌" ಭಾಗದಲ್ಲಿ ತೋರಿಸಲಾಗಿದೆ. ಅವಳು ಒಳ್ಳೆಯತನದ ಕಡೆಗೆ ವಾಲಿದ್ದಾಳೋ ಇಲ್ಲವೋ ಎಂಬುದು ತಿಳಿದಿಲ್ಲವಾದರೂ, ತನ್ನ ತಂದೆಯೊಂದಿಗೆ ಆಕೆ ನಿಕಟತೆಯನ್ನು ಇಟ್ಟಕೊಂಡಿದ್ದಾಳೆ ಎಂಬುದು ತಿಳಿದುಬರುತ್ತದೆ.

ವೈರಿಗಳು ಒಮೆಗಾ ಡಿಫೈಯನ್ಸ್‌ : ಒಮೆಗಾ ಡಿಫೈಯನ್ಸ್‌ ಎಂಬುದು ಏಳು ಮಂದಿ ಅತ್ಯಂತ ಪ್ರತಿಭಾಪೂರ್ಣ ವ್ಯಕ್ತಿಗಳಿಂದ ಮಾಡಲ್ಪಟ್ಟ ಒಂದು ಕೆಟ್ಟ ಸಮೂಹವಾಗಿದ್ದು, ಅವರನ್ನು ಆರನ್‌ ಸ್ಟೋನ್‌ ಸೋಲಿಸಬೇಕಿರುತ್ತದೆ. ಮಾನವಕುಲದ ಸುಧಾರಣೆಗಾಗಿ ಒಂದು ಚಿಂತಕ-ಚಾವಡಿಯನ್ನು ರೂಪಿಸಲು ಈ ಸಮೂಹವು ಒಂದು ಬಾರಿ T. ಅಬ್ನರ್‌ ಹಾಲ್‌ ಪರವಾಗಿ ಕೆಲಸ ಮಾಡಿರುತ್ತದೆಯಾದರೂ, ಸದರಿ ಯೋಜನೆಯು ತಿರುಗುಬಾಣವಾಗಿರುತ್ತದೆ. ಸಮೂಹವು ಸೃಷ್ಟಿಸಿದ್ದ ಬುದ್ಧಿಮತ್ತೆಯ ಸೀರಮ್‌ ದ್ರವವನ್ನು ಅವರು ತೆಗೆದುಕೊಂಡಿರುತ್ತಾರೆ. ಇದು ಅವರನ್ನು ಸೂಕ್ಷ್ಮಮತಿಗಳನ್ನಾಗಿಸುವ ಬದಲು ಆಕ್ರಮಣಶೀಲರನ್ನಾಗಿಸಿರುತ್ತದೆ. ಈ ಆಕ್ರಮಣಶೀಲತೆಯಿಂದಾಗಿ ಅವರು ಹಾಲ್‌ಗೆ ದ್ರೋಹವೆಸಗುವಂತಾಗುತ್ತದೆ. ಅಷ್ಟೇ ಅಲ್ಲ, ತಮ್ಮ ಆಳ್ವಿಕೆಯ ಹೊಸತೊಂದು ಮಾನವ ಕುಲವನ್ನು ಸೃಷ್ಟಿಸುವುದಕ್ಕಾಗಿ ಈಗಿರುವ ಮಾನವಕುಲವನ್ನೇ ನಾಶಮಾಡುವ ಕಡೆಗೆ ಅವರು ಈಗ ವಾಲಿಕೊಳ್ಳಲೂ ಇದು ಕಾರಣವಾಗಿರುತ್ತದೆ. ಡ್ಯಾಮಗೆಡ್‌ ಎಂಬ ಓರ್ವ ರೂಪಾಂತರಿತ ಪಲಾಯನಗಾರನಿಂದ ಅವರು ಸಂಭಾವ್ಯವಾಗಿ ನಾಶಪಡಿಸಲ್ಪಟ್ಟಿರುತ್ತಾರೆ. ಈ ರೂಪಾಂತರಿತ ಪಲಾಯನಗಾರನು 2ನೇ ಋತುವಿನ ಭಾಗದಲ್ಲಿ ಬರುವ ಸೆಕ್ಟರ್‌ 21 ಎಂಬ ಒಂದು ಸಂಶೋಧನಾ ಪ್ರಯೋಗಾಲಯಕ್ಕೆ ಸೇರಿದವನಾಗಿರುತ್ತಾನೆ.

ಜನರಲ್‌ ಕ್ರಾಸ್‌ "ಮುಗಿಸಲ್ಪಟ್ಟ" ಎಂದು S.T.A.N. ದೃಢೀಕರಿಸಿದ್ದರಿಂದಾಗಿ ಅವನು ನಾಶಗೊಳಿಸಲ್ಪಟ್ಟಿರುತ್ತಾನೆ ಮತ್ತು ಡಾ. ನೆಕ್ರೋಸ್‌ನನ್ನು ಡ್ಯಾಮಗೆಡ್‌ನ ಓರ್ವಸೆರೆಯಾಳಾಗಿ ತೋರಿಸಲಾಗಿರುತ್ತದೆ. 

  • ಡಾ. ನೆಕ್ರೋಸ್‌ ಪಾತ್ರದಲ್ಲಿರುವ ಆಂಟನಿ J. ಮಿಫ್‌ಸುದ್‌ : ಈತ ಅಪಾಯಕಾರಿ ಸೀರಮ್‌ ದ್ರವಗಳು ಮತ್ತು ಜೀವಾಣು ವಿಷಗಳನ್ನು ಸೃಷ್ಟಿಸುವಲ್ಲಿ ಪರಿಣತಿ ಪಡೆದಿರುವ ಓರ್ವ ರಸಾಯನಶಾಸ್ತ್ರಜ್ಞ. "ಸಾವು" ಎಂಬ ಅರ್ಥವನ್ನು ಕೊಡುವ ಗ್ರೀಕ್‌ ಪದವೊಂದರಿಂದ ಅವನ ಹೆಸರು ಜನ್ಯವಾಗಿದೆ. ಡ್ಯಾಮಗೆಡ್‌ನಿಂದ ಅವನು ವಶಮಾಡಿಕೊಳ್ಳಲ್ಪಡುತ್ತಾನೆ.
  • ಕ್ಸೀರೋ ಪಾತ್ರದಲ್ಲಿರುವ ಸ್ಟೀವನ್‌ ಯಫೀ : ಕಂಪ್ಯೂಟರ್‌ಗಳನ್ನು ನಿರ್ವಹಿಸುವಲ್ಲಿ ಪರಿಣತಿಯನ್ನು ಪಡೆದಿರುವ ಓರ್ವ ಯುವ ಸಾಂಸ್ಥಿಕ ಕಾರ್ಯನಿರ್ವಾಹಕನೀತ. ಆದರೆ ಸಾಕಷ್ಟು ಪ್ರಮಾಣದಲ್ಲಿ ಸಾಮಾಜಿಕ ಸಂಬಂಧಗಳನ್ನು ಹೊಂದುವಲ್ಲಿ ಈತ ಅಸಮರ್ಥನಾಗಿರುತ್ತಾನೆ. ಕ್ಸೀರೋ ಇಂಡಸ್ಟ್ರೀಸ್‌ನ ಓರ್ವ ಮಾಲೀಕನೇ ಕ್ಸೀರೋ. ಆರನ್‌ನನ್ನು ಮುಖಾಮುಖಿಯಾಗಿ ಎದುರಿಸುವ ಬದಲು, ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಕದನವನ್ನು ಮಾಡುವಲ್ಲಿ ಆತ ಹೆಸರುವಾಸಿಯಾಗಿರುತ್ತಾನೆ. ಆತನ ಸಾಮಾಜಿಕ ಅಕುಶಲತೆ ಅಥವಾ ವಕ್ರತೆಯ ಕಾರಣದಿಂದಾಗಿ, ಆತ ಅನೇಕ ವೇಳೆ ಪಠ್ಯಭಾಷೆಯಲ್ಲಿ ಮಾತನಾಡುತ್ತಾನೆ (ಉದಾಹರಣೆಗೆ LOL, ಸ್ಟೋನ್‌

!). ಪ್ರಾಯಶಃ ಅವನ ಹೆಸರು ಜೋಡಿ ಸಂಕೇತಕ್ಕೆ ಒಂದು ಉಲ್ಲೇಖವಾಗಿರಬಹುದಾಗಿದ್ದು, ಸೊನ್ನೆಯು ಜೋಡಿ ಅಂಕಿಗಳಲ್ಲಿ ಒಂದಾಗಿರುತ್ತದೆ. 2ನೇ ಋತುವಿನ ಆರಂಭದಲ್ಲಿ ಆತ ಪ್ರಾಯಶಃ ಡ್ಯಾಮಗೆಡ್‌ನಿಂದ ನಾಶಪಡಿಸಲ್ಪಟ್ಟ ಎಂದು ತೋರುತ್ತದೆ.

  • ಹೆಲಿಕ್ಸ್‌ ಪಾತ್ರದಲ್ಲಿರುವ ಕ್ಸೆಮಿ ಅಗಾಜ್‌ : ಈತನೊಬ್ಬ ತಳಿವಿಜ್ಞಾನಿಯಾಗಿದ್ದು ತಳಿ ನವವಿಕೃತಿಗಳು, ಪ್ರಾಣಿ ಮತ್ತು ಮಾನವ ಜಾತಿಗಳನ್ನು ಒಟ್ಟಿಗೆ ಮಿಶ್ರಗೊಳಿಸುವುದು ಇವೇ ಮೊದಲಾದವುಗಳಲ್ಲಿ ಪರಿಣತಿಯನ್ನು ಪಡೆದಿರುತ್ತಾನೆ. ಈತ ಒಂದು ಆಲ್ಬೇನಿಯಾದ ಉಚ್ಚಾರಣಾ ಶೈಲಿಯನ್ನು ಹೊಂದಿರುತ್ತಾನೆ. ಜೋಡಿ-ಸುರುಳಿಯಂತಿರುವ DNAಯ ರಚನೆಯಿಂದ ಅವನ ಹೆಸರು ಬರುತ್ತದೆ. 2ನೇ ಋತುವಿನ ಭಾಗದ ಆರಂಭದಲ್ಲಿ ಡ್ಯಾಮಗೆಡ್‌ನಿಂದ ಪ್ರಾಯಶಃ ನಾಶಪಡಿಸಲ್ಪಟ್ಟ ಎನಿಸುತ್ತದೆ.
  • ಝೆಫಿರ್‌ ಪಾತ್ರದಲ್ಲಿರುವ ಟಾಮ್‌ ಮೆಕ್‌ಕ್ಯಾಮಸ್‌ : ಈತ ಒಬ್ಬ ಪವನ ಶಾಸ್ತ್ರಜ್ಞನಾಗಿದ್ದು, ಪ್ರಪಂಚವನ್ನು ಬದಲಾಯಿಸುವಲ್ಲಿ ನೆರವಾಗುವ ಸಾಧನಗಳನ್ನು ಸೃಷ್ಟಿಸಲು ತನ್ನ ಅಸಾಧಾರಣ ಪ್ರತಿಭೆಯನ್ನು ಬಳಸುವ ಕಡೆಗೆ ಒಮ್ಮೆ ಗಮನಹರಿಸಿರುತ್ತಾನೆ. ಕೆಟ್ಟದಾರಿಯನ್ನು ಹಿಡಿದ ನಂತರ, ವಿಧ್ವಂಸಕ ಶಸ್ತ್ರಾಸ್ತ್ರಗಳನ್ನು ಸೃಷ್ಟಿಸುವ ಕಡೆಗೆ ಅವನ ಗಮನವು ತಿರುಗಿರುತ್ತದೆ. ಈ ಶಸ್ತ್ರಾಸ್ತ್ರಗಳು ನಾಶದ ಭಾಗವಾಗಿ ಹವಾಮಾನವನ್ನು ಬಳಸುವ ಲಕ್ಷಣವನ್ನು ಹೊಂದಿರುತ್ತವೆ (ಉದಾಹರಣೆಗೆ ಮಿಂಚಿನ ಲೇಸರ್‌). ತನ್ನ ಕಾರ್ಯದಲ್ಲಿ ಯಶಸ್ಸು ಪಡೆಯಲು, ನಿಂಜಾಗಳ (ನಿಂಜುಟ್ಸೂ ಎಂಬ ಕದನ ಕಲೆಯಲ್ಲಿ ಪ್ರಾವೀಣ್ಯತೆ ಪಡೆದವರು) ಒಂದು ತಂಡವನ್ನು ("ಕ್ವಾನ್‌" ಎಂಬ ಮುಖ್ಯಸ್ಥ ನಿಂಜಾನ ನೇತೃತ್ವವನ್ನು ಅದು ಹೊಂದಿತ್ತು) ಆತ ನೇಮಿಸಿಕೊಂಡ ಎಂದು ಹೇಳಲಾಗುತ್ತದೆ. ಗ್ರೀಕ್‌ನ ಪಡುವಣ ಗಾಳಿಯ ದೇವರಾದ ಝೆಫೈರ್‌ ಎಂಬ ಹೆಸರಿನಿಂದ ಅವನ ಹೆಸರು ಜನ್ಯವಾಗಿದೆ. 2ನೇ ಋತುವಿನ ಭಾಗದ ಆರಂಭದಲ್ಲಿ ಆತ ಪ್ರಾಯಶಃ ಡ್ಯಾಮಗೆಡ್‌ನಿಂದ ನಾಶವಾದ ಎಂದು ತೋರುತ್ತದೆ.
  • ಸೆರೆಬೆಲ್ಲಾ ಪಾತ್ರದಲ್ಲಿರುವ ಸೆರಾಯಿನ್‌ ಬಾಯ್ಲನ್‌ : ಈಕೆ ಮನೋನಿಯಂತ್ರಣದಲ್ಲಿ ಪರಿಣತಿಯನ್ನು ಪಡೆದಿರುವ ಓರ್ವ ನರವಿಜ್ಞಾನಿ. ಸೆರೆಬೆಲ್ಲಮ್‌ ಎಂದು ಕರೆಯಲ್ಪಡುವ ಮೆದುಳಿನ ಒಂದು ಭಾಗದಿಂದ ಅವಳ ಹೆಸರು ಜನ್ಯವಾಗಿದ್ದು, ಇದು ಸಂವೇದನದ ಗ್ರಹಿಕೆ, ಅನ್ಯೋನ್ಯ ಸಂಬಂಧ ಮತ್ತು ಚಾಲನ ನಿಯಂತ್ರಣ ಇವೇ ಮೊದಲಾದವುಗಳ ಹೊಣೆಹೊತ್ತಿದೆ. 2ನೇ ಋತುವಿನ ಭಾಗದ ಆರಂಭದಲ್ಲಿ ಅವಳು ಪ್ರಾಯಶಃ ಡ್ಯಾಮಗೆಡ್‌ನಿಂದ ನಾಶಪಡಿಸಲ್ಪಟ್ಟಳು ಎಂದು ತೋರುತ್ತದೆ.
  • ಜನರಲ್‌ ಕ್ರಾಸ್‌ ಪಾತ್ರದಲ್ಲಿರುವ ಮೈಕೇಲ್‌ ಕೋಪ್‌ಮನ್‌ : ಈತ ಶಸ್ತ್ರಸಮೂಹ ಮತ್ತು ಸೇನೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳಲ್ಲೂ ಪರಿಣತಿಯನ್ನು ಪಡೆದಿರುವ ಓರ್ವ ಸೈನ್ಯಾಧಿಪತಿ. ಈತನ ಮುಖದ ಮೇಲೆ ಒಂದು ದೊಡ್ಡ ಗಾಯದ ಗುರುತಿದ್ದು, ಸೇನಾ ಶ್ರಮಗೆಲಸದ ಉಡುಪು ಮತ್ತು ಒಂದು ಬೆರಿ ಟೋಪಿಯನ್ನು ಈತ ಧರಿಸಿರುತ್ತಾನೆ. ಕ್ರಾಸ್‌ ಎಂಬ ಹೆಸರು ಪ್ರಾಯಶಃ ಲ್ಯಾಟಿನ್‌ನ ಕ್ರುಕ್ಸ್‌ ಎಂಬ ಪದಕ್ಕೆ ಒಂದು ಉಲ್ಲೇಖವಿರಬಹುದಾಗಿದ್ದು‌, ಸಾಂಕೇತಿಕವಾಗಿ ಅದು ಚಿತ್ರಹಿಂಸೆ ಎಂಬ ಅರ್ಥವನ್ನು ಧ್ವನಿಸುತ್ತದೆ. 2ನೇ ಋತುವಿನ ಆರಂಭದ ಭಾಗದಲ್ಲಿ ಡ್ಯಾಮಗೆಡ್‌ನಿಂದ ಅವನು ಪ್ರಾಯಶಃ ನಾಶಪಡಿಸಲ್ಪಟ್ಟ ಎನಿಸುತ್ತದೆ.
  • ಕ್ರೋನಿಸ್‌ ಪಾತ್ರದಲ್ಲಿರುವ ಕೆಂಟ್‌ ಸ್ಟೇನ್ಸ್‌ : ಈತ ಓರ್ವ ವಿಜ್ಞಾನಿಯಾಗಿದ್ದು ಕಾಲಯಾನದಲ್ಲಿ ಆತ ಪರಿಣತಿಯನ್ನು ಪಡೆಯುತ್ತಿರುತ್ತಾನೆ. ಅವನ ಹೆಸರು ಲ್ಯಾಟಿನ್‌ ಭಾಷೆಯ ಕ್ರೋನೋಸ್‌ ಎಂಬ ಪದದ ಉಲ್ಲೇಖವಾಗಿದ್ದು ಸಮಯ ಎಂಬ ಅರ್ಥವನ್ನು ಅದು ಧ್ವನಿಸುತ್ತದೆ. 2ನೇ ಋತುವಿನ ಆರಂಭದ ಭಾಗದಲ್ಲಿ ಅವನು ಪ್ರಾಯಶಃ ಡ್ಯಾಮಗೆಡ್‌ನಿಂದ ನಾಶಪಡಿಸಲ್ಪಟ್ಟ ಎನಿಸುತ್ತದೆ.

ದಿ ಮ್ಯಟೆಂಟ್ಸ್‌ : ದಿ ಮ್ಯಟೆಂಟ್ಸ್‌ ಎಂಬುದು ಒಮೆಗಾ ಡಿಫೈಯನ್ಸ್‌ನಿಂದ ವಶಪಡಿಸಿಕೊಳ್ಳಲ್ಪಟ್ಟ ಜನರ ಒಂದು ಸಮೂಹವಾಗಿದ್ದು, ವಿಸ್ಮಯಕರ ಶಕ್ತಿಗಳನ್ನು ಹೊಂದಿದ ರೂಪಾಂತರಿತ ರೂಪಗಳಾಗಿ ಅವರು ಪರಿವರ್ತಿಸಲ್ಪಟ್ಟಿರುತ್ತಾರೆ. ಇವರು 2ನೇ ಋತುವಿನ ಭಾಗಕ್ಕೆ ಸಂಬಂಧಿಸಿದ ಪ್ರಮುಖ ಪ್ರತಿನಾಯಕರ ಪಾತ್ರವನ್ನು ವಹಿಸುತ್ತಾರೆ. ಸೆಕ್ಟರ್‌ 21 ಎಂದು ಕರೆಯಲಾದ ಒಂದು ರಹಸ್ಯ ಪ್ರಯೋಗಾಲಯದಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಒಮೆಗಾ ಡಿಫೈಯನ್ಸ್‌ ಸಮೂಹದ ಜನರಿಂದ ತಮ್ಮ ಮೇಲೆ ನಡೆದ ಅಮಾನುಷತ್ವದ ಕಾರ್ಯಗಳಿಂದಾಗಿ, ಎಲ್ಲ ಮಾನವರ ವಿರುದ್ಧವೂ ಸೇಡುತೀರಿಸಿಕೊಳ್ಳಲು ಅವರು ಬಯಸುತ್ತಿರುತ್ತಾರೆ.

  • ಡ್ಯಾಮಗೆಡ್‌ ಪಾತ್ರದಲ್ಲಿರುವ ಡೇವಿಡ್‌ ಗ್ಯಾಸ್‌ಮನ್‌ : ಸೆಕ್ಟರ್‌ 21ರಲ್ಲಿನ ಒಮೆಗಾ ಡಿಫೈಯನ್ಸ್‌ನ ಪ್ರಯೋಗಗಳಿಂದ ತಿರಸ್ಕರಿಸಲ್ಪಟ್ಟ ಒಂದು ರೂಪಾಂತರಿತ ರೂಪವಿದು. ಅವನು ತಪ್ಪಿಸಿಕೊಳ್ಳುತ್ತಾನೆ ಮತ್ತು ಡಿಫೈಯನ್ಸ್‌ ಸಮೂಹದ ಅಮಾನುಷತ್ವದ ವಿರುದ್ಧವಾಗಿ ಹಾಗೂ ಚಾರ್ಲಿಯ ವಿರುದ್ಧವಾಗಿರುವ ತನ್ನ ಸಹವರ್ತಿ ರೂಪಾಂತರಿತ ರೂಪಗಳ ನಾಯಕತ್ವವನ್ನು ವಹಿಸುತ್ತಾನೆ. ಆತ ಹಲವಾರು ಮುಖವಾಡಗಳನ್ನು ಧರಿಸುತ್ತಾನೆ ಮತ್ತು ದೂರಸ್ಥ ಚಲನೆಯ ಶಕ್ತಿಗಳನ್ನು ಹೊಂದಿರುತ್ತಾನೆ. ಜನರಲ್‌ ಕ್ರಾಸ್‌ನ ಸಾವಿಗೆ ಮತ್ತು ಡಾ. ನೆಕ್ರೋಸ್‌ನ ಸೆರೆಹಿಡಿಯುವಿಕೆಗೆ ಅವನೇ ಹೊಣೆಗಾರನಾಗಿರುತ್ತಾನೆ. "ಡ್ಯಾಮೇಜ್‌ ಕಂಟ್ರೋಲ್‌" ಭಾಗದಲ್ಲಿ ಅವನು ಮೊದಲು ಪರಿಚಯಿಸಲ್ಪಟ್ಟು, ಅಲ್ಲಿ ತನ್ನ ಮೊದಲನೇ ಮುಖವಾಡವನ್ನು ಎಸೆದು, ಒಂದು ವಿಭಿನ್ನವಾದ, ಸೀಳಿರುವ, ತುಂಟಪಿಶಾಚಿಯ-ರೀತಿಯಲ್ಲಿರುವ ಮುಖವಾಡವನ್ನು ಕೈಗೆತ್ತಿಕೊಳ್ಳುತ್ತಾನೆ. ಆರನ್‌ ಸ್ಟೋನ್‌ನನ್ನು ಸೆಕ್ಟರ್‌ 21ಕ್ಕೆ ಮತ್ತೆ ಬರುವಂತೆ ಮಾಡಲು ಆಮಿಷ ತೋರಿಸುವುದಕ್ಕಾಗಿ ಆತ ಡಾ. ನೆಕ್ರೋಸ್‌ನನ್ನು ಕಳಿಸುತ್ತಾನೆ. ನಂತರ ಆತ ತನ್ನ ಒತ್ತೆಯಾಳನ್ನು ಬಂಧಿಸುತ್ತಾನೆ ಹಾಗೂ ಚಾರ್ಲಿಯನ್ನು ತೀವ್ರವಾಗಿ ಗಾಯಗೊಳಿಸುತ್ತಾನೆ. "ಇನ್‌ ದಿ ಗೇಮ್‌ ಆಫ್‌ ದಿ ಫಾದರ್‌" ಭಾಗದಲ್ಲಿ, ಡಿಫೈಯನ್ಸ್‌ ಸಮೂಹವು ತೆಗೆದುಕೊಂಡಿದ್ದ ಬುದ್ಧಿಮತ್ತೆಯ ಸೀರಮ್‌ ದ್ರವದ ಕೊನೆಯ ಸೀಸೆಗಾಗಿ ಡ್ಯಾಮಗೆಡ್‌ ಹುಡುಕುತ್ತಿರುತ್ತಾನೆ. ಆದರೆ ಮೊದಲಿದ್ದ ಅನ್ಯದೇಶೀಯ ದೇವಾಲಯವೊಂದರಲ್ಲಿ (ಈಗ ಒಂದು ಸರಕು ಕೋಠಿ) ಚಾರ್ಲಿ ಮತ್ತು S.T.A.N. ಅದನ್ನು ಮತ್ತೆ ಕಂಡುಕೊಂಡಾಗ, ಅವರನ್ನು ಡ್ಯಾಮಗೆಡ್‌ ಬೆನ್ನತ್ತುತ್ತಾನೆ ಹಾಗೂ ಆ ಸೀರಮ್‌ ದ್ರವಕ್ಕಾಗಿ ಆರನ್‌ನೊಂದಿಗೆ ಸೆಣಸಾಟಕ್ಕಿಳಿಯುತ್ತಾನೆ. ದ್ರವದ ಸೀಸೆಯನ್ನು ಪಡೆಯಲು ಆತ ತನ್ನ ದೂರಸ್ಥ ಚಲನೆಯ ಶಕ್ತಿಯನ್ನು ಬಳಸುತ್ತಾನೆ, ಆದರೆ ಆರನ್‌ ತನ್ನ ಹೊಸ ಉಕ್ಕಿನ ಕೈಕವಚದೊಂದಿಗೆ ಅಂತರ್ಗತವಾಗಿರುವ ಹೊಸ ಸಾಧನಗಳ ಪೈಕಿ ಒಂದನ್ನು ರೂಪಾಂತರಿತ ಜಿಗಣೆಯೊಂದನ್ನು ಒಳಗಡೆ ಹೊಂದಿರುವ ಗಾಜಿನ ಪೆಟ್ಟಿಗೆಯ ಕಡೆಗೆ ಎಸೆದು, ಅದು ತಪ್ಪಿಸಿಕೊಳ್ಳಲು ಅನುವುಮಾಡಿಕೊಡುತ್ತಾನೆ. ಆ ಜಿಗಣೆಯು ಆಗ ಡ್ಯಾಮಗೆಡ್‌ನ ಮುಖದ ಮೇಲೆ ಅಂಟಿಕೊಳ್ಳುತ್ತದೆ, ಹಾಗೂ ಆತನು ಸೀರಮ್‌ ದ್ರವದ ಸೀಸೆಯನ್ನು ಕೆಳಗೆ ಬೀಳಿಸುವಂತೆ ಮಾಡುತ್ತದೆ. ನಂತರ ಆ ದ್ರವವನ್ನು ರೂಪಾಂತರಿತ ಜಿಗಣೆಯು ಸೇವಿಸುವುದಕ್ಕೆ ಇದು ಅನುವುಮಾಡಿಕೊಟ್ಟಂತಾಗುತ್ತದೆ. ಚಾರ್ಲಿ ಮತ್ತು ಸ್ಟಾನ್‌ ಆಗ ತಪ್ಪಿಸಿಕೊಳ್ಳುತ್ತಾರೆ. ಡ್ಯಾಮಗೆಡ್‌ ಜಿಗಣೆಯನ್ನು ತನ್ನ ಮುಖದಿಂದ ಆಚೆಗೆ ಕಿತ್ತು, ನೆಲಕ್ಕೆ ಬೀಸಿ ಒಗೆದಾಗ, ಆರನ್‌ ಮತ್ತು ಸ್ಟಾನ್‌ ಪಲಾಯನ ಮಾಡುತ್ತಿದ್ದಾರೆಯೇ ಎಂಬುದನ್ನಷ್ಟೇ ನೋಡಲಿಕ್ಕಾಗಿ ಅವನು ಹಿಂದೆ ತಿರುಗುತ್ತಾನೆ. ಅವನು ಮತ್ತೆ ಜಿಗಣೆಯ ಕಡೆಗೆ ನೋಡಿದಾಗ, ಅದು ಸೀರಮ್‌ ದ್ರವವನ್ನು ಸೇವಿಸಿರುವುದು ಅವನಿಗೆ ಕಂಡುಬರುತ್ತದೆ. ಸೀರಮ್‌ ದ್ರವವನ್ನು ಮರಳಿ ಪಡೆಯಲು ಜಿಗಣೆಯನ್ನು ಡ್ಯಾಮಗೆಡ್‌ ತಿಂದುಹಾಕುತ್ತಾನೆ.
  • ಷಾಕಲ್ಸ್‌ : ಇವನೊಬ್ಬ ರೂಪಾಂತರಿತ ರೂಪವಾಗಿದ್ದು, ಸರಪಳಿಗಳನ್ನು ಆಯುಧಗಳಂತೆ ಅವನು ಬಳಸುತ್ತಾನೆ.
  • ಶ್ರೀಮಾನ್‌ ಗಾಲಾಪಗೋಸ್‌ : ಇವನು ಒಬ್ಬ ರೂಪಾಂತರಿತ ರೂಪದ ಕುಳ್ಳನಾಗಿದ್ದು ವಿದ್ಯುಚ್ಚಕ್ತಿಯನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಹೊಂದಿರುತ್ತಾನೆ.
  • ಹೈವ್‌ : ಇವಳೊಬ್ಬ ರೂಪಾಂತರಿತ ರೂಪವಾಗಿದ್ದು (ಮತ್ತು ತೋರಿಸಲಾಗಿರುವ ಏಕೈಕ ಮಹಿಳಾ ಪಾತ್ರ) ಕೀಟಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾಳೆ.
  • ಸ್ಟೀಲ್‌ಟ್ರಾಪ್‌ : ಲೋಹದ ಹಲ್ಲುಗಳನ್ನು ಹೊಂದಿರುವ ಒಂದು ರೂಪಾಂತರಿತ ರೂಪವಿದು.
  • U : ಆಕಾರ ನೀಡುವ-ಬದಲಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ರೂಪಾಂತರಿತ ರೂಪವಿದು.

ಅತಿಥಿ ತಾರೆಗಳು

[ಬದಲಾಯಿಸಿ]
  • ಡಾ. ಮಾರ್ಟಿನ್‌ ಪಾತ್ರದಲ್ಲಿರುವ ಸಾರಾ ಗಡೋನ್‌ : ಶ್ರೀಮಾನ್‌ ಹಾಲ್‌ನ ದೀರ್ಘಕಾಲದ ಸ್ನೇಹಿತನಾಗಿರುವ ಡಾ. ಮಾರ್ಟಿನ್‌, ಆರನ್‌ ಸ್ಟೋನ್‌ನ ನಿಷ್ಠಾವಂತಿಕೆಯನ್ನು ಪರೀಕ್ಷಿಸುವುದಕ್ಕೋಸ್ಕರ ಸಮ್ಮುಖದಲ್ಲಿಯೇ ಹಣ ಮತ್ತು ವಜ್ರಗಳನ್ನು ಉದ್ದೇಶಪೂರ್ವಕವಾಗಿ ಕದಿಯುವ ಮೂಲಕ ಶ್ರೀಮಾನ್‌ ಹಾಲ್‌ಗೆ ನೆರವಾಗುತ್ತಾನೆ.
  • ಬಿಲ್ಲಿ "ದಿ ಬಾಡಿ ಬ್ಯಾಗ್‌" ಕಾಬ್‌ ಪಾತ್ರದಲ್ಲಿರುವ ಕ್ರಿಸ್‌ ಜೆರಿಕೊ : ಇವನೋರ್ವ ಚಾಂಪಿಯನ್‌ಗಿರಿಯ MMA ಪಟುವಾಗಿದ್ದು, ಕ್ಸೀರೋನಿಂದ ಅಪಹರಣಕ್ಕೆ ಒಳಗಾಗುತ್ತಾನೆ.
  • ಸಮಂತಾ ಪಾತ್ರದಲ್ಲಿರುವ ಸ್ಯಾಲಿ ಟೇಲರ‍್-ಐಷರ್‌ವುಡ್‌ : ಚಕ್‌ & ಚಾರ್ಲಿಯಲ್ಲಿನ ಓರ್ವ ಹೊಸ ವಿದ್ಯಾರ್ಥಿ.
  • ಡೇನಿಯಲ್‌ ಲ್ಯಾಂಡರ್ಸ್‌ ಪಾತ್ರದಲ್ಲಿರುವ ಡೌಗ್‌ ಮರೆ . ಚಾರ್ಲಿ ಮತ್ತು ಜಾಸನ್‌ನ ರೋಗಗ್ರಸ್ತ ತಂದೆ. ಹೀರೋ ರೈಸಿಂಗ್‌ನ ಒಂದು ಪ್ರತಿಯನ್ನು ಅವನು ಚಾರ್ಲಿಗೆ ನೀಡಿದ ಮತ್ತು ಮೇಲುನೋಟಕ್ಕೆ ಕಾಣುವಂತೆ ವ್ಯವಹಾರ ಸಂಬಂಧಿ ಪರ್ಯಟನೆಗಳ ಮೇಲೆ ತೆರಳಿದ. ಕಿರಿಯ ಧೈರ್ಯಗೇಡಿ ಚಾರ್ಲಿಯ ಓರ್ವ ಅಂತರಂಗದ ನಾಯಕನ ಒಂದು ಸಂಕೇತವಾಗಿ ಆರನ್‌ ಸ್ಟೋನ್‌ನನ್ನು ರೂಪಿಸಿದವನು ಅವನೇ. ಒಮೆಗಾ ಡಿಫೈಯನ್ಸ್‌ ಸಮೂಹದಿಂದ ಅವನು ಹಿಡಿಯಲ್ಪಡುತ್ತಾನೆ ಮತ್ತು ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಸೃಷ್ಟಿಸುವಂತೆ ಒತ್ತಾಯಿಸಲ್ಪಡುತ್ತಾನೆ.
  • ಬಾಕ್ಸ್ಲೆ ಪಾತ್ರದಲ್ಲಿರುವ ಜಾಕೋಬ್‌ ಕ್ರೇಮರ್‌ : ಶಾಲೆಯ ಬ್ಯಾಸ್ಕೆಟ್‌ಬಾಲ್‌ ತಂಡದ ಓರ್ವ ಸದಸ್ಯ ಹಾಗೂ ಚಾರ್ಲಿಯ ಸ್ನೇಹಿತ.
  • ಡಾರ್ಕ್‌ ಔಲ್‌ ಪಾತ್ರದಲ್ಲಿರುವ ಜಾನ್‌ ಮ್ಯಾಕ್‌ಡೊನಾಲ್ಡ್‌ : ಆರನ್‌ ಸ್ಟೋನ್‌ಗಿಂತ ಮೊದಲು ಶ್ರೀಮಾನ್‌ ಹಾಲ್‌ನಿಂದ ನೇಮಿಸಲ್ಪಟ್ಟ ಓರ್ವ ಗೂಢಚಾರ. ಪ್ರದರ್ಶನದ ಆರಂಭಿಕ ದೃಶ್ಯದಲ್ಲಿ ಒಮೆಗಾ ಡಿಫೈಯನ್ಸ್‌ನ ಖಾಸಗಿ ಪತ್ತೇದಾರನಾದ ಸೋಲ್‌ ಜ್ಯಾಕರ್‌ನ (ನೆಕ್ರೋಸ್‌ನ ಓರ್ವ ಕಾಲಾಳು) ಕೈಗಳಲ್ಲಿ ಡಾರ್ಕ್‌ ಔಲ್‌ ಯಾತನೆಯನ್ನು ಅನುಭವಿಸುತ್ತಾನೆ. ಡಾರ್ಕ್‌ ಔಲ್‌ನು ಚಾರ್ಲಿ ಲ್ಯಾಂಡರ್‌ನ ರೋಗಗ್ರಸ್ತ ಅಪ್ಪನಾಗಿರಬಹುದು ಎಂಬುದನ್ನು ತಿಳಿಸುವ ಗಾಳಿಸುದ್ದಿಗಳು ಚಾಲ್ತಿಯಲ್ಲಿವೆಯಾದರೂ, ಅದು ಇದುವರೆಗೂ ದೃಢೀಕರಿಸಲ್ಪಟ್ಟಿಲ್ಲ. 2ನೇ ಋತುವಿನ ಭಾಗದಲ್ಲಿ ಈ ಗಾಳಿಸುದ್ದಿಗಳು ತಪ್ಪೆಂದು ಸಾಧಿಸಲ್ಪಡುತ್ತವೆ.
  • ಸೌಲ್‌ಜ್ಯಾಕರ್‌ ಪಾತ್ರದಲ್ಲಿರುವ ಹೋ ಚೌ : "ಜೀವಂತವಿರುವ ಓರ್ವ ಅತ್ಯಂತ ಅಪಾಯಕಾರಿ ಮನುಷ್ಯ"ನಾದ ಇವನು ಒಮೆಗಾ ಡಿಫೈಯನ್ಸ್‌ ಗುಂಪಿನ ಓರ್ವ ಸದಸ್ಯ. ತಿರುಗುದಾಂಡುಗಳಂತೆ (ಬೂಮರಾಂಗುಗಳಂತೆ) ಕೆಲಸ ಮಾಡುವ ಎರಡು ತೆಳುವಾದ ಕೊಳವೆಗಳೊಂದಿಗೆ ಹೋರಾಡುವ ಕಲೆಯಲ್ಲಿ ಇವನು ಪರಿಣಿತನಾಗಿರುತ್ತಾನೆ. ಅವನು ಡಾ. ನೆಕ್ರೋಸ್‌ನ ಸಹಾಯಕನಾಗಿದ್ದಾನೆ.
  • ಡ್ಯಾಕ್ಸ್‌ ಪಾತ್ರದಲ್ಲಿರುವ ಡಿಲ್ಲಾನ್‌ ಕೇಸಿ : ಕಾಲದದ ಕುರಿತಾದ ಅಸಾಧಾರಣ ಪ್ರತಿಭಾಶಾಲಿಯಾದ ಕ್ರೋನಿಸ್‌ನ ಮಗನಾದ ಈತ ಒಮೆಗಾ ಡಿಫೈಯನ್ಸ್‌ ಗುಂಪಿನ ಓರ್ವ ಸದಸ್ಯ. ಅವನಿಗೆ "ಅಪ್ಪನಿಂದ ಬರುವ ಸಮಸ್ಯೆಗಳು" ಇರುತ್ತವೆ.
  • ದಿ ಬೀಸ್ಟ್‌ ಪಾತ್ರದಲ್ಲಿರುವ ಜೇಮ್ಸ್‌ ಬಿಂಕ್ಲೇ . ಒಂದು ಅರ್ಧ ಮಾನವ, ಅರ್ಧ ಕತ್ತಿಹಲ್ಲಿನ ಹುಲಿಯಿಂದ ರೂಪಾಂತರಿತಗೊಂಡಿರುವ "ಹುಲಿ-ಮುನುಷ್ಯ"ನಾದ ಇವನು ಆರನ್‌ ಸ್ಟೋನ್‌ನಿಂದ ಸೋಲಿಸಲ್ಪಡುತ್ತಾನೆ. "ಬೀಸ್ಟ್‌ಲ್ಯಾಂಡ್‌" ಸಂಚಿಕೆಯಲ್ಲಿ ಇವನು ಪ್ರಮುಖ ಪ್ರತಿನಾಯಕನಾಗಿದ್ದಾನೆ.
  • ಆರ್ಕೋವ್‌ ಪಾತ್ರದಲ್ಲಿರುವ ಜಿಯಾನ್ನೆ ಗೂಸನ್‌ : ಡಾ. ಹೆಲಿಕ್ಸ್‌ & ಒಮೆಗಾ ಡಿಫೈಯನ್ಸ್‌ ಗುಂಪಿನ ಪರವಾಗಿ ಅವಳು ಕೆಲಸ ಮಾಡುತ್ತಾಳೆ. ಮುಖದ ಮೇಲಿರುವ ಮಚ್ಚೆಯ ವಿಶಿಷ್ಟ ಗುರುತಿನಿಂದಾಗಿ ಅವಳು ಹೆಸರುವಾಸಿಯಾಗಿದ್ದಾಳೆ.
  • ಹಂಟರ್‌ ಪಾತ್ರದಲ್ಲಿರುವ ಜಾಸನ್‌ ಅರ್ಲೆಸ್‌ : ಸ್ಟಾನ್‌ನ ಬದಲಿಯಾಗಿ ಕೆಲಸ ವಹಿಸಿಕೊಂಡಿರುವ ಈತ ಒಂದು ದೋಷಯುಕ್ತ ಮಾದರಿಯಾಗಿದ್ದು, ಅತಿ ಕ್ಷಿಪ್ರವಾಗಿ ಉತ್ಪಾದನಾ ವಿಭಾಗದಿಂದ ಅವನನ್ನು ಆಚೆಗೆ ಕಳಿಸಲಾಯಿತು. ಆತ ಅಸಮರ್ಪಕವಾಗಿ ಕೆಲಸ ಮಾಡುತ್ತಾನೆ ಮತ್ತು ಆರನ್‌ ಸ್ಟೋನ್‌ನನ್ನು ನಾಶಪಡಿಸುವಲ್ಲಿ ಅವನ ಹೊಣೆಗಾರಿಕೆಯು ಬದಲಾಗುತ್ತದೆ. ಏಕೆಂದರೆ ಆರನ್‌ ಸ್ಟೋನ್‌ನ ಸಮ್ಮುಖದಲ್ಲಿಯೇ ವಿರೋಧಿಯು ಅವನ ಬಲೆ ಎದೆಗೆ ಗುಂಡಿಕ್ಕುತ್ತಾನೆ.

ಎಮ್ಮಾಳ ವಿನ್ಯಾಸಗಳು

[ಬದಲಾಯಿಸಿ]
#s ಪಟ್ಟಿ 1 ಪಟ್ಟಿ 2 ಪಟ್ಟಿ 3 ಪಟ್ಟಿ 4
1 ಶಬ್ದದ ಕುಲುಕಾಡಿಸುವ ಯಂತ್ರ3000 ಆಸ್ಫೋಟನ ಪತ್ತೆಕಾರಕ ಸಂಪರ್ಕ ಸಾಧನ
2 ಲೇಸರ್‌ ಬಂದೂಕುಗಳು ಮೊಳೆಹೊಡೆದ ಹತ್ತುವ ಬೂಟು ಲೇಸರ‍್ ಕಿರಣದ ಕಪ್ಪಗಿನ ಬಿಸಿಲಿನ ಕನ್ನಡಕಗಳು ಬಿರುಸು ದಾಂಡು
3 ವಿಡಿಯೋ ಕ್ಯಾಮೆರಾ ನಿಲುಗಡೆಯ ಸಂವೇದಕ ಟ್ರಾಂಕ್‌ ಬಿರುಸು ದಾಂಡು ಎಲೆಕ್ಟ್ರೋ ಡೀಪೈಫರ್‌

ಕೆಲ ತುಣುಕುಗಳು

[ಬದಲಾಯಿಸಿ]
  • ಚಾರ್ಲಿಯ ಕುಟುಂಬ ನಾಮವು ಟ್ಯಾನರ್‌ ಎಂದಿರಬೇಕಿತ್ತು. ಆದರೆ ಇದು ಅದೇ ಹೆಸರಿನ ಮತ್ತೊಂದು ಕುಟುಂಬಪಾಲ್‌ ಫಸ್ಕೊನೊಂದಿಗಿನ ಕಾನೂನು ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಬಗ್ಗೆ ಡಿಸ್ನಿಗೆ ಹೆದರಿಕೆಯಿತ್ತು.
  • ವಾಹಿನಿ ಡಿಸ್ನಿ XD ಎಂಬ ಹೊಸ, ಮರು-ರೂಪವನ್ನು ಪಡೆದ ಮಕ್ಕಳ ಮನರಂಜನಾ ವಾಹಿನಿಯ ಪ್ರಾರಂಭದೊಂದಿಗೆ ಇದರ ಪ್ರಥಮ ಪ್ರದರ್ಶನವು ಏಕಕಾಲಿಕವಾಗಿ ಸಂಭವಿಸಿತು[]
  • ಆರನ್‌ ಸ್ಟೋನ್‌ ಪಾತ್ರವನ್ನು ವಹಿಸಿರುವ ಕೆಲ್ಲಿ ಬ್ಲಾಟ್ಜ್‌, ಲಾಸ್‌ ಏಂಜಲೀಸ್‌-ಮೂಲದ ಕಾಪ್ರಾ ಎಂಬ ಪರ್ಯಾಯ ರಾಕ್‌ ವಾದ್ಯವೃಂದದ ಪ್ರಮುಖ ಗಾಯಕನೂ ಆಗಿದ್ದಾನೆ.
  • ಡಾ. ನೆಕ್ರೋಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಂಟನಿ J. ಮಿಫ್‌ಸುದ್‌ ('ಮಿಫ್‌'), ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿರುವ ಮತ್ತು ಪ್ರಶಸ್ತಿ ಗಳಿಸಿರುವ ಕೆನಡಾದ ಹಾರ್ಡ್‌ ರಾಕ್‌/ಹೆವಿ ಮೆಟಲ್‌ ವಾದ್ಯವೃಂದವಾದ ಸ್ಲಾಶ್‌ ಪಪೆಟ್‌ನ ಪ್ರಮುಖ ಗಾಯಕನಾಗಿದ್ದಾನೆ.
  • Xbox ನೇರ ಪ್ರಸಾರದ ಕಾರ್ಯಕ್ರಮದಲ್ಲಿ, ಮೊದಲನೇ ಸಂಚಿಕೆಯು 2009ರ ಫೆಬ್ರುವರಿ 13ರವರೆಗೆ ಉಚಿತವಾಗಿತ್ತು.
  • ಈ ಸರಣಿಯ ಪರಿಕಲ್ಪನೆಯು 1984ರಲ್ಲಿ ಬಂದ ದಿ ಲಾಸ್ಟ್‌ ಸ್ಟಾರ್‌ಫೈಟರ್‌ ಎಂಬ ಚಲನಚಿತ್ರವನ್ನು ಹೋಲುವಂತಿತ್ತು. ಈ ಚಿತ್ರದಲ್ಲಿ ಒಂದು ದೊಡ್ಡ ಕೆಡುಕಿನ ವಿರುದ್ಧ ಹೋರಾಡುವುದಕ್ಕಾಗಿ ಓರ್ವ ಚಾಂಪಿಯನ್‌ನನ್ನು ಆರಿಸಲು ವಿಡಿಯೋ ಆಟವೊಂದನ್ನು ಬಳಸಲಾಗಿದೆ.
  • ಸೂಪರ್‌ಸಾನಿಕ್‌ ಜೆಟ್‌ ಎಂಬುದು "SSJ" ಎಂಬ ಜೆಟ್‌ನ ಸಂಪೂರ್ಣ ಹೆಸರಾಗಿದೆ.
  • ಸೋನಿ ವಿತ್ ಎ ಚಾನ್ಸ್‌ನ ಸಂಚಿಕೆಯಾದ "ಸೋನಿ ವಿತ್ ಎ ಚಾನ್ಸ್‌ ಆಫ್‌ ಡೇಟಿಂಗ್‌"ನಲ್ಲಿ ಕೆಲ್ಲಿ ಬ್ಲಾಟ್ಜ್‌ ಅಭಿನಯವೂ ಇದೆ.
  • ಈ ಪ್ರದರ್ಶನ ಕಾರ್ಯಕ್ರಮವು ಏಸ್‌ ಲೈಟಿಂಗ್‌ ಎಂಬ ಕಾರ್ಯಕ್ರಮಕ್ಕೆ ತುಂಬಾ ಹೋಲುವಂತಿದೆ.
  • ಇದು ಟೊರೊಂಟೋದಲ್ಲಿ ಚಿತ್ರೀಕರಿಸಲ್ಪಡುತ್ತದೆಯಾದರೂ, ಇದರ ಪ್ರಥಮ ಪ್ರದರ್ಶನವು ಅಂತಿಮವಾಗಿ ಕೆನಡಾದಲ್ಲಿ ನಡೆಯಿತು.
  • ತಂಡದ ಏಳು ಸದಸ್ಯರ ಪೈಕಿ ಪ್ರತಿಯೊಬ್ಬರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಆ ಕ್ಷೇತ್ರಗಳಲ್ಲಿ ಇವು ಸೇರಿವೆ: ರಸಾಯನಶಾಸ್ತ್ರ, ತಳಿವಿಜ್ಞಾನ, ಸಮಯ, ಮಾನವನ ಮನಸ್ಸು, ಹವಾಮಾನ, ಪೈಪೋಟಿ ಮತ್ತು ತಂತ್ರಜ್ಞಾನ.
  • "ನಾಟ್‌ ಸೋ ಫ್ರೆಂಡ್ಲಿ ಸ್ಕೈಸ್‌, ಭಾಗ 2" ಸಂಚಿಕೆಯಲ್ಲಿ, ಒಂದು ಬಿರುಸು ದಾಂಡಿನ ನೆರವಿನಿಂದ ಎಮ್ಮಾ ಆರನ್‌ನನ್ನು ರಕ್ಷಿಸುತ್ತಾಳೆ. ಇದು ಬಿರುಸು ದಾಂಡಿನ ಸ್ವರೂಪವನ್ನು ತಾಳಲು ಶೀರ್ಷಿಕೆ ಪಾತ್ರದಿಂದ ಕಾಮೆನ್‌ ರೈಡರ್‌ 555 ಸರಣಿಯಲ್ಲಿ ಬಳಸಲ್ಪಟ್ಟ ಸನ್ನಿವೇಶವೊಂದರ ಒಂದು ಪುನರಲಂಕರಣವಾಗಿದೆ.
  • "ಸ್ಟಾನ್‌ ಬೈ ಮಿ" ಸಂಚಿಕೆಯಲ್ಲಿ, ಸ್ಟಾನ್‌ ಓರ್ವ ಕೊಳಾಯಿ ಕೆಲಸಗಾರನಾಗಿ ವೇಷಮರೆಸಿಕೊಂಡಿರುತ್ತಾನೆ, ಮತ್ತು ತನ್ನ ಹೆಸರು "ಮಾರಿಯೋ" ಎಂದು ಆತ ಒಂದು ಗಾಢವಾದ ಇಟಲಿ ಶೈಲಿಯ ಉಚ್ಚಾರಣೆಯಲ್ಲಿ ಒತ್ತಿ ಹೇಳುತ್ತಾನೆ. ಇದು ವಿಡಿಯೋ ಆಟದ ಮಾದರಿಯಾದ ಮಾರಿಯೋಗೆ ಹಾಗೂ ವಿಡಿಯೋ ಆಟಗಳ ವಿಶೇಷಾಧಿಕಾರಕ್ಕೆ ನೀಡಿದ ಒಂದು ಉಲ್ಲೇಖವಾಗಿದೆ.

ಸಂಚಿಕೆಗಳು

[ಬದಲಾಯಿಸಿ]

ಅಂತರರಾಷ್ಟ್ರೀಯ ಬಿಡುಗಡೆ

[ಬದಲಾಯಿಸಿ]
ದೇಶ / ವಲಯ ವಾಹಿನಿ
ಅಮೇರಿಕ ಸಂಯುಕ್ತ ಸಂಸ್ಥಾನ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಡಿಸ್ನಿ XD (ಅಮೆರಿಕಾ ಸಂಯುಕ್ತ ಸಂಸ್ಥಾನಗಳು)
ಡಿಸ್ನಿ ವಾಹಿನಿ (ಅಮೆರಿಕಾ ಸಂಯುಕ್ತ ಸಂಸ್ಥಾನಗಳು)
Sweden ಸ್ವೀಡನ್‌ ಡಿಸ್ನಿ XD ಸ್ಕ್ಯಾಂಡಿನೇವಿಯಾ
ಕೆನಡಾ ಕೆನಡಾ ಕೌಟುಂಬಿಕ ವಾಹಿನಿ
ಟೆಂಪ್ಲೇಟು:Country data UNASUR ಲ್ಯಾಟಿನ್‌ ಅಮೆರಿಕಾ & ಮಧ್ಯ ಅಮೆರಿಕಾ ಡಿಸ್ನಿ XD (ಲ್ಯಾಟಿನ್‌ ಅಮೆರಿಕಾ), ಡಿಸ್ನಿ ವಾಹಿನಿ ಲ್ಯಾಟಿನ್‌ ಅಮೆರಿಕಾ
ನಿಕರಾಗುವ ನಿಕರಾಗುವಾ
ಗ್ವಾಟೆಮಾಲ ಗ್ವಾಟೆಮಾಲಾ
ಮೆಕ್ಸಿಕೋ ಮೆಕ್ಸಿಕೋ
Brazil ಬ್ರೆಝಿಲ್‌
ಈಕ್ವಡಾರ್ ಈಕ್ವೆಡಾರ್‌
ಕೊಲೊಂಬಿಯ ಕೊಲಂಬಿಯಾ
ಅರ್ಜೆಂಟೀನ ಅರ್ಜೆಂಟೀನಾ
ಪನಾಮಾ ಪನಾಮಾ
ಡೊಮಿನಿಕ ಗಣರಾಜ್ಯ ಡೊಮಿನಿಕನ್‌ ಗಣರಾಜ್ಯ
ಪೆರು ಪೆರು
ಎಲ್ ಸಾಲ್ವಡಾರ್ ಎಲ್‌ ಸಾಲ್ವೆಡಾರ್‌
ಕೋಸ್ಟಾ ರಿಕ ಕೋಸ್ಟ ರಿಕಾ
ಪೋರ್ಟೊ ರಿಕೊ ಪ್ಯುರ್ಟೋ ರಿಕಾ
ಚಿಲಿ ಚಿಲಿ
ಹೊಂಡುರಾಸ್ ಹೊಂಡುರಸ್‌
ಬೊಲಿವಿಯ ಬೊಲಿವಿಯಾ
ವೆನೆಜುವೆಲಾ ವೆನೆಜುವೆಲಾ
ಕೊಲೊಂಬಿಯ ಕೊಲಂಬಿಯಾ ವಾಹಿನಿ 13
ಚಿಲಿ ಚಿಲಿ ವಾಹಿನಿ 13
ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಡಿಸ್ನಿ ವಾಹಿನಿ (ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌)
ನ್ಯೂ ಜೀಲ್ಯಾಂಡ್ ನ್ಯೂಜಿಲೆಂಡ್‌
ಫಿಜಿ ಫಿಜಿ
ತುವಾಲು ಟುವಾಲು
ಸಿಂಗಾಪುರ ಸಿಂಗಪೂರ್‌ ಡಿಸ್ನಿ ವಾಹಿನಿ ಏಷ್ಯಾ
ಮಲೇಶಿಯ ಮಲೇಷಿಯಾ
ಬ್ರುನೈ ಬ್ರೂನೇ
ದಕ್ಷಿಣ ಕೊರಿಯಾ ಕೊರಿಯಾ
ವಿಯೆಟ್ನಾಮ್ ವಿಯೆಟ್ನಾಂ
ಇಂಡೋನೇಷ್ಯಾ ಇಂಡೋನೇಷಿಯಾ
ಹಾಂಗ್ ಕಾಂಗ್ ಹಾಂಗ್‌ ಕಾಂಗ್‌
ಫಿಲಿಪ್ಪೀನ್ಸ್ ಫಿಲಿಪ್ಪೀನ್ಸ್‌
ಪಲಾವು ಪಾಲಾವ್‌‌
ಪಪುವಾ ನ್ಯೂಗಿನಿ ಪಪುವಾ ನ್ಯೂಗಿನಿಯಾ
Spain ಸ್ಪೇನ್‌ ಡಿಸ್ನಿ XD (ಸ್ಪೇನ್‌)
France ಫ್ರಾನ್ಸ್‌ ಡಿಸ್ನಿ XD (ಫ್ರಾನ್ಸ್‌)
ಇಟಲಿ ಇಟಲಿ ಡಿಸ್ನಿ XD (ಇಟಲಿ)
ಸಾನ್ ಮರಿನೊ ಸ್ಯಾನ್‌ ಮಾರಿನೋ
ವ್ಯಾಟಿಕನ್ ನಗರ ವ್ಯಾಟಿಕನ್‌ ಸಿಟಿ
Poland ಪೋಲೆಂಡ್‌ ಡಿಸ್ನಿ XD (ಪೋಲೆಂಡ್‌)
ಪೋರ್ಚುಗಲ್ ಪೋರ್ಚುಗಲ್‌ ಡಿಸ್ನಿ ವಾಹಿನಿ
Commonwealth of Independent States CIS СТС
Romania ರೊಮೇನಿಯಾ ಡಿಸ್ನಿ ವಾಹಿನಿ (ಮಧ್ಯದ ಮತ್ತು ಪೂರ್ವದ ಯುರೋಪ್‌)
ಮಾಲ್ಡೋವ ಮಾಲ್ಡೋವಾ
Hungary ಹಂಗರಿ
Bulgaria ಬಲ್ಗೇರಿಯಾ
Slovakia ಸ್ಲೋವಾಕಿಯಾ
Slovenia ಸ್ಲೊವೇನಿಯಾ
Germany ಜರ್ಮನಿ ಡಿಸ್ನಿ XD (ಜರ್ಮನಿ)
Austria ಆಸ್ಟ್ರಿಯಾ
ಸ್ವಿಟ್ಜರ್ಲ್ಯಾಂಡ್ ಸ್ವಿಜರ್ಲೆಂಡ್‌
Liechtenstein ಲೀಕ್ಟೆನ್‌ಸ್ಟೀನ್‌
India ಭಾರತ ಡಿಸ್ನಿ XD (ಭಾರತ)
Greece ಗ್ರೀಸ್‌ ಡಿಸ್ನಿ XD (ಗ್ರೀಸ್‌)
ಸೆರ್ಬಿಯ ಸರ್ಬಿಯಾ ಡಿಸ್ನಿ XD (ಸರ್ಬಿಯಾ)
ಮೋಂಟೆನಿಗ್ರೋ ಮಾಂಟೆನೆಗ್ರೊ
Japan ಜಪಾನ್‌ ಡಿಸ್ನಿ XD (ಜಪಾನ್‌)
ನೆದರ್ಲ್ಯಾಂಡ್ಸ್ ನೆದರ್ಲೆಂಡ್ಸ್‌ ಡಿಸ್ನಿ XD (ನೆದರ್ಲೆಂಡ್ಸ್‌)
ತೈವಾನ್ ತೈವಾನ್‌ ಡಿಸ್ನಿ ವಾಹಿನಿ ತೈವಾನ್‌

ಆಕರಗಳು

[ಬದಲಾಯಿಸಿ]
  1. "world Screen - Home". Archived from the original on 2009-01-12. Retrieved 2010-03-10.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Disney XD shows