ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ಮುಂದಿನ ವಿಕಿಪೀಡಿಯ ಸಾಧಕರನ್ನು ಆಯ್ಕೆ ಮಾಡುವ ಬಗ್ಗೆ[ಬದಲಾಯಿಸಿ]

ಕಳೆದ ಬಾರಿಯ ವಿಕಿಪೀಡಿಯ ಸಾಧಕರನ್ನು ಆಯ್ಕೆ ಮಾಡಿ ಈಗಾಗಲೇ ಮೂರು ತಿಂಗಳುಗಳು ಕಳೆದಿವೆ. ಹಾಗಾಗಿ ಮುಂದಿನ ವಿಕಿಪೀಡಿಯ ಸಾಧಕರನ್ನು ಸಮುದಾಯದವರೇ ಆಯ್ಕೆಮಾಡಬೇಕಾಗಿ ವಿನಂತಿ. ಪ್ರತಿಯೊಬ್ಬ ಸದಸ್ಯರೂ ತನಗೆ ಸೂಕ್ತ ಎನಿಸಿದ ವ್ಯಕ್ತಿಯ ಹೆಸರನ್ನು ಸೂಚಿಸಬೇಕಾಗಿ ವಿನಂತಿ. ಪ್ರತಿಯೊಬ್ಬರೂ ಸೂಚಿಸಿದ ಹೆಸರನ್ನು ಗಮನದಲ್ಲಿ ಇಟ್ಟುಕೊಂಡು ಅವರಲ್ಲಿ ಉತ್ತಮ ವ್ಯಕ್ತಿ ಯಾರೆಂದು ಚುನಾವಣೆ ಮೂಲಕ ಆಯ್ಕೆಮಾಡಬಹುದೆಂದು ನನ್ನ ಅಭಿಪ್ರಾಯ. ಈ ಬಗ್ಗೆ ಸಮುದಾಯದವರು ತಮ್ಮ ಅಭಿಪ್ರಾಯ ಮತ್ತು ಆಯ್ಕೆಯನ್ನು ಸೂಚಿಸಬೇಕಾಗಿ ವಿನಂತಿ. ----GopalaKrishnaA ೦೩:೩೫, ೯ ಏಪ್ರಿಲ್ ೨೦೧೭ (UTC)

  • ಡಾ. ವಿಶ್ವನಾಥ ಬದಿಕಾನ ಅವರು ಆಗಬಹುದು. ಸಂತ ಅಲೋಶೀಯಸ್ ಕಾಲೇಜು, ಮಂಗಳೂರಿನಲ್ಲಿ ೪ ವರ್ಷಗಳಿಂದ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಸುತ್ತಿದ್ದಾರೆ. ಆ ಮೂಲಕ ಹಲವು ವಿದ್ಯಾರ್ಥಿಗಳನ್ನು ವಿಕಿಪೀಡಿಯನ್ನರನ್ನಾಗಿಸಿದ್ದಾರೆ. ಸುಮಾರು ೩೦೦೦ ಕೊನೆಯಂಚಿನ ಪುಟಗಳನ್ನು ವಿದ್ಯಾರ್ಥಿಗಳ ಮೂಲಕ ಉತ್ತಮ ಪಡಿಸಿದ್ದಾರೆ. ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯ ನೇತೃತ್ವ ವಹಿಸಿದ್ದಾರೆ. ತುಳು ವಿಕಿಪೀಡಿಯ ಜೀವಂತವಾಗಲು ಇವರ ಕೊಡುಗೆ ಅಪಾರ.--ಪವನಜ (ಚರ್ಚೆ) ೦೫:೨೮, ೯ ಏಪ್ರಿಲ್ ೨೦೧೭ (UTC)
  • ಪವನಜರ ಸಲಹೆಯನ್ನು ನಾನೂ ಅನುಮೋದಿಸುತ್ತೇನೆ --Vikas Hegde (ಚರ್ಚೆ) ೦೯:೧೧, ೯ ಏಪ್ರಿಲ್ ೨೦೧೭ (UTC)
  • ಪವನಜರ ಸಲಹೆಯನ್ನು ನಾನೂ ಅನುಮೋದಿಸುತ್ತೇನೆ. --ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೪೭, ೩ ಮೇ ೨೦೧೭ (UTC)
  • ಪವನಜರ ಸಲಹೆಯನ್ನು ನಾನೂ ಅನುಮೋದಿಸುತ್ತೇನೆ. -- Anoop(Talk)> ೦೯:೨೪, ೪ ಮೇ ೨೦೧೭ (UTC)


ಮುಂದಿನ ವಿಕಿಪೀಡಿಯ ಸಾಧಕರನ್ನು ಆಯ್ಕೆ ಮಾಡುವ ಬಗ್ಗೆ[ಬದಲಾಯಿಸಿ]

ಮುಂದಿನ ವಿಕಿಪೀಡಿಯ ಸಾಧಕರಾಗಿ ಯಾರನ್ನು ಆಯ್ಕೆಮಾಡಬಹುದೆಂದು ಸಮುದಾಯದವರು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಹಿಂದಿನ ಬಾರಿ ನಡೆದ ಆಯ್ಕೆಗಳಂತೆ ಒಂದಕ್ಕಿಂತ ಹೆಚ್ಚಿನ ಸಾಧಕರ ಹೆಸರುಗಳಿದ್ದರೆ ಚುನಾವಣೆಯ ಮೂಲಕ ಸಾಧಕರನ್ನು ಆಯ್ಕೆ ಮಾಡಲಾಗುವುದು. ಕೇವಲ ಒಂದೇ ಹೆಸರಿದ್ದರೆ ನೇರವಾಗಿ ಆಯ್ಕೆ ನಡೆಸಯಾಗುವುದು. --ಗೋಪಾಲಕೃಷ್ಣ (ಚರ್ಚೆ) ೧೮:೨೫, ೬ ಜೂನ್ ೨೦೧೭ (UTC)

ಚರ್ಚೆ[ಬದಲಾಯಿಸಿ]

ವಿಕಿಯ ಆರಂಭದ ವರ್ಷಗಳಿಂದ ಬಹಳಷ್ಟು ಕೆಲಸಗಳನ್ನು ಮಾಡುತ್ತಾ ಇಂದಿಗೂ ಸಕ್ರಿಯರಾಗಿರುವ ಹರೀಶ ಎಂ.ಜಿ ಅವರನ್ನು ನಾನು ಸೂಚಿಸುತ್ತೇನೆ.--Vikas Hegde (ಚರ್ಚೆ) ೧೧:೫೯, ೭ ಜೂನ್ ೨೦೧೭ (UTC)

ಸಮ್ಮತಿ[ಬದಲಾಯಿಸಿ]

  1. ಹರೀಶ ಎಂ.ಜಿ ಅವರನ್ನು ಆಯ್ಕೆ ಮಾಡಬಹುದು. ಅವರು ಕನ್ನಡ ವಿಕಿಪೀಡಿಯದ ನಿರ್ವಾಹಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ತುಮಕೂರು ವಿ.ವಿ.ಯಲ್ಲಿ ಕನ್ನಡ ವಿಕಿಪೀಡಿಯ ತರಬೇತಿ ನಡೆಸಿ ಕೊಟ್ಟಿದ್ದಾರೆ, ಕನ್ನಡ ವಿಕಿಪೀಡಿಯದ ೧೦ನೆಯ ವಾರ್ಷಿಕೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.,,, ಇತ್ಯಾದಿ.--ಪವನಜ (ಚರ್ಚೆ) ೧೨:೫೧, ೭ ಜೂನ್ ೨೦೧೭ (UTC)
  2. ಹರೀಶ ಎಂ.ಜಿ ಅವರನ್ನು ಆಯ್ಕೆ ಮಾಡಬಹುದು.--ವಿಶ್ವನಾಥ ಬದಿಕಾನ (ಚರ್ಚೆ)೧೪:೧೧, ೭ ಜೂನ್ ೨೦೧೭ (UTC)
  3. ಹರೀಶ ಎಂ.ಜಿ ಅವರನ್ನು ಆಯ್ಕೆ ಮಾಡಬಹುದು.ವಿದ್ಯಾಧರ ಚಿಪ್ಳಿ (ಚರ್ಚೆ) ೧೧:೧೨, ೯ ಜೂನ್ ೨೦೧೭ (UTC).
  4. ನನ್ನ ಸಮ್ಮತಿ ಇದೆ.Sangappadyamani (ಚರ್ಚೆ) ೧೩:೩೧, ೯ ಜೂನ್ ೨೦೧೭ (UTC)
  5. ಹರೀಶ ಎಂ.ಜಿ ಅವರನ್ನು ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ.--ಅನಂತ್ (ಚರ್ಚೆ) ೧೫:೨೦, ೯ ಜೂನ್ ೨೦೧೭ (UTC)

ಅಸಮ್ಮತಿ[ಬದಲಾಯಿಸಿ]

ವಿಕಿಡೇಟಾ ಪ್ರಾಥಮಿಕ ಹಂತದ ಕಾರ್ಯಾಗಾರ, ಸಿಐಎಸ್-ಎ೨ಕೆ, ಬೆಂಗಳೂರು[ಬದಲಾಯಿಸಿ]

ನಮಸ್ಕಾರ, ಸಿಐಎಸ್-ಎ೨ಕೆ ತಂಡವು ದಿನಾಂಕ ೧೦-೧೧ ಜೂನ್, ೨೦೧೭ರಂದು ಬೆಂಗಳೂರಿನಲ್ಲಿ ವಿಕಿಡೇಟಾ ಪ್ರಾಥಮಿಕ ಹಂತದ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಈ ಕಾರ್ಯಗಾರದಲ್ಲಿ ಭಾಗವಹಿಸುವ ಆಸಕ್ತಿಯುಳ್ಳ ಕನ್ನಡ ಸಮುದಾಯದ ಸದಸ್ಯರುಹೆಚ್ಚಿನ ಮಾಹಿತಿಗಾಗಿ tito@cis-india.org ಅಥವಾ tanveer@cis-india.org ಈಮೇಲ್ ಕಳುಹಿಸಬೇಕಾಗಿ ವಿನಂತಿ.

Lahariyaniyathi (ಚರ್ಚೆ) ೦೯:೧೫, ೭ ಜೂನ್ ೨೦೧೭ (UTC)

ವಾರದ ವಿಶೇಷ ಚಿತ್ರ[ಬದಲಾಯಿಸಿ]

ಮುಖ್ಯ ಪುಟದಲ್ಲಿ ವಾರದ ವಿಶೇಷ ಚಿತ್ರ /ವಿಶೇಷ ಚಿತ್ರ , ವಿಭಾಗ ಸೇರಿಸಲು ವಿನಂತಿ . Sangappadyamani (ಚರ್ಚೆ) ೦೦:೩೭, ೯ ಜೂನ್ ೨೦೧೭ (UTC)

ಇದನ್ನು ಮಾಡಲು ಮುಖಪುಟದ ಟೆಂಪ್ಲೇಟು ಬದಲಾಯಿಸಬೇಕು. ಅದೇನೋ ಕಷ್ಟದ ಕೆಲಸವಲ್ಲ. ಆದರೆ ಪ್ರತಿ ವಾರ ಇದನ್ನು ನಡೆಸಿಕೊಂಡು ಹೋಗುವವರು ಯಾರು? ಈ ಹೊಣೆಯನ್ನು ಹೊರಲು ಯಾರು ಸಿದ್ಧರಿದ್ದೀರಿ?--ಪವನಜ (ಚರ್ಚೆ) ೦೨:೧೯, ೯ ಜೂನ್ ೨೦೧೭ (UTC)
ನಿಮ್ಮ ಉತ್ತರಕ್ಕೆ ಧನ್ಯವಾದಗಳು.ಒಬ್ಬರೇ ಹೊಣೆಯನ್ನು ತೆಗೆದುಕೊಳ್ಳುವದರಿಂದ ಅವರ ಇಷ್ಟದ ವಿಷಯಗಳ ಬಗ್ಗೆ ಹಾಕುವ ಸಾಧ್ಯತೆ ಇರುವದೆಂದು ನನ್ನ ಅನಿಸಿಕೆ.Sangappadyamani (ಚರ್ಚೆ) ೧೩:೨೪, ೯ ಜೂನ್ ೨೦೧೭ (UTC)

ಯಾವ ರೀತಿಯಾದ ವಿಶೇಷ ಚಿತ್ರ.? ಯಾವ ವಿಷಯಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಆಯ್ಕೆ ಮಾಡಬಹುದು.? --Vinay bhat (ಚರ್ಚೆ) ೦೬:೦೯, ೯ ಜೂನ್ ೨೦೧೭ (UTC)

ಉದಾಹರಣೆಗೆ ಅ೦ಗ್ಲ ವಿಕಿಪಿಡಿಯದ ಮುಖ್ಯ ಪುಟದಲ್ಲಿ Wikipedia:Featured pictures (Today's featured picture) ನೋಡಿ. Anoop .(Talk)(Contributions) ೦೭:೪೫, ೯ ಜೂನ್ ೨೦೧೭ (UTC)

ಹೊಸ ಬಳಕೆದಾರ ಸಂದೇಶ ಮತ್ತು ಸ್ವಾಗತ[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಪ್ರತಿ ಹೊಸ ಬಳಕೆದಾರರಿಗೆ ಸ್ವಾಗತ ಪಠ್ಯವನ್ನು ತಲುಪಿಸಲು ಬೋಟ್(Bot) ಸೇವೆ ಆಯ್ಕೆ ಬಗ್ಗೆ .

  • ಕನ್ನಡ ವಿಕಿಪೀಡಿಯದಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿ ಉತ್ತಮವೆನಿಸಿದರೆ ಪ್ರಾರಂಭಿಸಲು ವಿನಂತಿ.Sangappadyamani (ಚರ್ಚೆ) ೦೦:೪೯, ೨೨ ಜೂನ್ ೨೦೧೭ (UTC)

ಮರುಪರಿಶೀಲನೆ[ಬದಲಾಯಿಸಿ]

ನಿಮಗೆ ತಿಳಿದಿರುವಂತೆ ಕನ್ನಡ ವಿಕಿಪೀಡಿಯದಲ್ಲಿ ಬಳಕೆದಾರ [https://kn.wikipedia.org/wiki/ವಿಶೇಷ:Log/newusers ಲಾಗ್ ಸೃಷ್ಟಿ] ಎರಡು ರೀತಿ ಆಗುತ್ತಿದೆ.

  1. ಆಂಗ್ಲ ಅಥವಾ ಯಾವುದೇ ವಿಕಿಪೀಡಿಯದ ನೋಂದಣಿ ಬಳಕೆದಾರರು (ಕನ್ನಡ ಹೊರತು) ಕನ್ನಡ ವಿಕಿಪೀಡಿಯಕ್ಕೆ ಭೇಟಿ ಕೊಟ್ಟಾಗ (22:18, 31 July 2017 User account TohaomgBot (talk | contribs) was created automatically ) ಎಂದು ಸೃಷ್ಟಿಯಾಗುತ್ತದೆ.
  2. ಬಳಕೆದಾರರು ಕನ್ನಡ ವಿಕಿಪೀಡಿಯ ವೆಬ್ ಬಳಸಿಕೊಂಡು ವಿಕಿಪೀಡಿಯ ಖಾತೆ ತೆರೆದರೆ (13:26, 31 July 2017 User account Harshith achrappady (talk | contribs) was created) ಎಂದು ಸೃಷ್ಟಿಯಾಗುತ್ತದೆ.
  3. ಕನ್ನಡ ವಿಕಿಪೀಡಿಯ ವೆಬ್ ಬಳಸಿಕೊಂಡು ವಿಕಿಪೀಡಿಯ ಖಾತೆ ತೆರೆದ ಬಳಕೆದಾರರಿಗೆ ನಾವು ಸುಸ್ವಾಗತ ಟೆಂಪ್ಲೇಟ್ ಬಳಸಿಕೊಂಡು ಸ್ವಾಗತ ಕೋರುತಿದ್ದೇವೆ. ಇದರ ಬದಲು ಬಾಟ್ ಸೇವೆ ಬಳಸಿಕೊಂಡು ಸ್ವಾಗತ ಕೋರುವ ಸೆವೆ ಆರಂಭಿಸುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಕೋರಲಾಗಿದೆ Sangappadyamani (ಚರ್ಚೆ) ೦೧:೫೦, ೧ ಆಗಸ್ಟ್ ೨೦೧೭ (UTC)

ಅಭಿಪ್ರಾಯಗಳು[ಬದಲಾಯಿಸಿ]

* @ Sangappadyamani , Lokesha kunchadka , ಗೋಪಾಲಕೃಷ್ಣ , Pavanaja NewUserMessage ವಿಸ್ತರಣೆ ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯಗೊಳಿಸಲಾಗಿದೆ ( extension is enabled on kannada wikipedia.) ★ Anoop/ಅನೂಪ್ (Talk)(Edits) ೧೪:೫೬, ೧೦ ಆಗಸ್ಟ್ ೨೦೧೭ (UTC)
ಧನ್ಯವಾದಗಳು--Sangappadyamani (ಚರ್ಚೆ) ೧೫:೪೦, ೧೦ ಆಗಸ್ಟ್ ೨೦೧೭ (UTC)

ಕರಾವಳಿ ವಿಕಿಪೀಡಿಯನ್ನರ ಸಂಪಾದನೋತ್ಸವ/೩[ಬದಲಾಯಿಸಿ]

ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಬಹು ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಒಂದು ಸಂಘ. ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಈಗಾಗಲೇ ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡುತ್ತಿದೆ. ಆಪ್ರಯುಕ್ತ ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಕಾರ್ಯಕ್ರಮವಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ, ತುಳು ವಿಕಿಪೀಡಿಯಗಳ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ.--ಪವನಜ (ಚರ್ಚೆ) ೦೫:೩೩, ೨೨ ಜೂನ್ ೨೦೧೭ (UTC)

CIS-A2K's Community Advocate for Kannada Wikimedia project[ಬದಲಾಯಿಸಿ]

Hello,
CIS-A2K, at present, does not have a dedicated Community Advocate (CA, earlier known as Programme Associate) for Kannada Wikimedia projects, and we are going to start the process to appoint one for this important responsibility. We want the experienced Kannada Wikimedians to guide and anchor this process, Please suggest your requirements, eligibility criteria, selection and interview process. You may write below, or you may also email to us at tanveer(_AT_)cis-india.org or tito(_AT_)cis-india.org. Thanks and regards. --Titodutta (ಚರ್ಚೆ) ೧೧:೫೬, ೩೦ ಜೂನ್ ೨೦೧೭ (UTC)

ಕನ್ನಡ ವಿಕಿಮೀಡಿಯ ಯೋಜನೆಗಾಗಿ ಸಮುದಾಯ ಸಲಹೆಗಾರ

ನಮಸ್ಕಾರ, ಸಿಐಎಸ್-ಎ 2 ಕೆ, ಪ್ರಸ್ತುತ, ಕನ್ನಡ ವಿಕಿಮೀಡಿಯಾ ಯೋಜನೆಗಳಿಗೆ ಸಮರ್ಪಿತವಾದ ಸಮುದಾಯ ಅಡ್ವೊಕೇಟ್ ಹೊಂದಿಲ್ಲ (ಸಿ.ಎ., ಮೊದಲು ಪ್ರೊಗ್ರಾಮ್ ಅಸೋಸಿಯೇಟ್ ಎಂದು ಕರೆಯಲಾಗುತ್ತಿದ್ದ) ಮತ್ತು ಈ ಪ್ರಮುಖ ಜವಾಬ್ದಾರಿಗಾಗಿ ನಾವು ಒಬ್ಬರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಅನುಭವಿ ಕನ್ನಡ ವಿಕಿಮಿಡಿಯನ್ನರು ಈ ಪ್ರಕ್ರಿಯೆಯನ್ನು ಮಾರ್ಗದರ್ಶನ ಮಾಡಲು ಬಯಸುತ್ತೇವೆ, ದಯವಿಟ್ಟು ನಿಮ್ಮ ಅವಶ್ಯಕತೆಗಳನ್ನು, ಅರ್ಹತೆಯ ಮಾನದಂಡ, ಆಯ್ಕೆ ಮತ್ತು ಸಂದರ್ಶನ ಪ್ರಕ್ರಿಯೆಯನ್ನು ಸೂಚಿಸಿ. ನೀವು ಕೆಳಗೆ ಬರೆಯಬಹುದು, ಅಥವಾ ನೀವು tanveer@cis-india.org ಅಥವಾ tito@cis-india.org ನಲ್ಲಿ ನಮಗೆ ಇಮೇಲ್ ಮಾಡಬಹುದು. ಧನ್ಯವಾದಗಳು. — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Titodutta (ಚರ್ಚೆಸಂಪಾದನೆಗಳು)

 Done translation Anoop/ಅನೂಪ್ (Talk)(Edits) ೧೩:೩೦, ೩೦ ಜೂನ್ ೨೦೧೭ (UTC)

ಚರ್ಚೆ[ಬದಲಾಯಿಸಿ]

ಅರ್ಹತೆ ಬಗ್ಗೆ ಅಭಿಪ್ರಾಯ:

  • ಕನ್ನಡ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿರಬೇಕು. ಕನ್ನಡ ಓದು, ಬರವಣಿಗೆ (ಗಣಕದಲ್ಲೂ ಸಹ) ಚೆನ್ನಾಗಿ ಬರಬೇಕು.
  • ಕನ್ನಡ ಪುಸ್ತಕಗಳು, ಸಾಹಿತ್ಯ, ಅಂತರಜಾಲದಲ್ಲಿ ಕನ್ನಡ, ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ವಿದ್ಯಮಾನಗಳ ಬಗ್ಗೆ ತಕ್ಕಮಟ್ಟಿಗಿನ ಜ್ಞಾನ ಇರಬೇಕು.
  • ವಿಕಿಯ ಕೆಲಸದ ಹೊಣೆಗಾರಿಕೆಗೆ ತಕ್ಕಂತೆ ತಾಂತ್ರಿಕ ಮತ್ತು ಇತರ ಅಗತ್ಯಗಳ ಬೇಸಿಕ್ಸ್ ಆದರೂ ಗೊತ್ತಿರಬೇಕು.
  • ವಿಕಿಪೀಡಿಯಾ ಹಾಗೂ ಇನ್ನಿತರ ವಿವಿಧ ಯೋಜನಗಳ ಬಗ್ಗೆ ಗೊತ್ತಿದ್ದು ಅದರಲ್ಲಿ ಸಂಪಾದನೆಗಳನ್ನು ಮಾಡಿದ್ದರೆ ಉತ್ತಮ.

--Vikas Hegde (ಚರ್ಚೆ) ೧೩:೫೯, ೨ ಜುಲೈ ೨೦೧೭ (UTC)

Vikas Hegde ಅವರ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಜೊತೆಗೆ ಈ ಸಿ.ಎ. ಯ ಕೆಲಸಗಳೇನೇನು ಎಂದು ಕೂಡ ಸಿ.ಐ.ಎಸ್. ವಿಶದೀಕರಿಸಿದರೆ ಉತ್ತಮ. @Titodutta -please post the JD of the position --ಪವನಜ (ಚರ್ಚೆ) ೦೨:೨೧, ೩ ಜುಲೈ ೨೦೧೭ (UTC)
ಇದಕ್ಕೆ ಉತ್ತರಿಸಿದ್ದರೆ ಚೆನ್ನಾಗಿತ್ತು--ಪವನಜ (ಚರ್ಚೆ) ೦೪:೨೮, ೧೭ ಜುಲೈ ೨೦೧೭ (UTC)
ವಿಕಾಸ್ ಹೆಗ್ಡೆಯವರ ಅಭಿಪ್ರಾಯ ಚೆನ್ನಾಗಿದೆ. ಜೊತೆಗೆ ಬಹಳ ಮುಖ್ಯವಾಗಿ ವಿಕಿ ಸಮುದಾಯದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಮುದಾಯವನ್ನು ಸರಿದೂಗಿಸಿಕೊಂಡು ಹೋಗುವ ಮನೋಭಾವದವರು ಇದ್ದರೆ ಚೆನ್ನಾಗಿರುತ್ತದೆ, ಕನ್ನಡ ಭಾಷೆಗಾಗಿ ದುಡಿವ ಭಾಷಾ ಪ್ರೇಮಿ ಬೇಕು. --ವಿಶ್ವನಾಥ ಬದಿಕಾನ ೧೨:೩೪, ೧೦ ಜುಲೈ ೨೦೧೭ (UTC)
ಕನ್ನಡ ವಿಕಿಪೀಡಿಯ ಸಮುದಾಯದಲ್ಲಿ ಸಿ.ಎ. ಕೆಲಸವೇನು ಎಂಬ ಬಗ್ಗೆ ಸಿಐಎಸ್ ನವರು ಸ್ಪಷ್ಟ ಮಾಹಿತಿ ಮತ್ತು ಸೂಚನೆಯನ್ನು ಪ್ರಕಟಿಸಿದರೆ ಚೆನ್ನಾಗಿರುತ್ತದೆ. ವಿಕಿಪೀಡಿಯವು ಪಾರದರ್ಶಕವಾಗಿರುವುದರಿಂದ ಸಿ.ಎ. ತನ್ನ ಕಾರ್ಯವ್ಯಾಪ್ತಿಯಲ್ಲಾದ ಕಾರ್ಯಕ್ರಮದ ರೂಪುರೇಶೆಯನ್ನು ಮತ್ತು ಸಾಧನೆಯನ್ನು ಪ್ರತೀ ತಿಂಗಳು ಅರಳಿ ಕಟ್ಟೆಯಲ್ಲಿ ಪ್ರಕಟಿಸುವಂತಾದರೆ ಚೆನ್ನಾಗಿರುತ್ತದೆ.--ವಿಶ‍್ವನಾಥ ಬದಿಕಾನ /ಚರ್ಚೆ / ಕಾಣಿಕೆಗಳು ೧೬:೫೩, ೧೬ ಜುಲೈ ೨೦೧೭ (UTC)
Apologies for posting in English, please feel free to translate the message below

Hello,
Thanks for your reply and suggestions and apologies . Yes, we do fully agree that a Community Advocate should be an experienced and active Wikimedian, and should be trusted by the community. As a Community Advocate works very closely with a community, CIS-A2K provides very special attention to the suggestions given by community members.

A Community Advocate is expected to do these works (general, but not inclusive, please read the next paragraph ):

  • Working along with the community implementing focus language area work plan as a community representative. Also, helping CIS­A2K realign its existing work plans according community needs and interest.
  • Spearheading offline outreach activities in partner institutions, edit­a­thons and other outreach activities and conducting online outreach
  • Helping the community in writing IEG and PEG proposals for sustainability of the community
  • Regular IRC, meetups (one IRC and one meetup per month for each FLA) Planning beginning of exit policy, sustainability, transferability.
  • PA monitored by the language anchors. PA is more accountable and is directed by the community.
  • Issue of context: The replication of work context and of the accountability of resources.
  • Learn and effective planning will lead to expertise building and manifestation of KRA (Key Responsibility Areas) of the A2K team

Community members can suggest tasks and responsibilities to community members. The executive director or the A2K team can also plan tasks for a Community Advocate based on the program's need.

Thanks again for your reply. Please feel free to ask questions. You can also reach me at tito@cis-india.org --Titodutta (ಚರ್ಚೆ) ೧೪:೨೨, ೧೭ ಜುಲೈ ೨೦೧೭ (UTC)

ಈಗಾಗಲೇ ಅರಳಿಕಟ್ಟೆಯಲ್ಲಿ ಸಿ.ಎ. ಆಯ್ಕೆ ಬಗೆಗೆ ತುಂಬ ಚರ್ಚೆಗಳು ನಡೆದರೂ ಸಿ.ಎ. ಆಗಿ ಗೋಪಾಲಕೃಷ್ಣ ಒಬ್ಬರೇ ಆಸಕ್ತಿಯನ್ನು ತೋರಿಸಿರುತ್ತಾರೆ. ಅವರನ್ನೇ ತೆಗೆದುಕೊಳ್ಳುವುದು ಉತ್ತಮ. ಈ ಬಗೆಗೆ ಸಿ.ಐ.ಎಸ್. ಸದಸ್ಯರು ಯಾರೊಬ್ಬರೂ ಮಾತನಾಡುತ್ತಿಲ್ಲ. ಭಾಷೆಯ ಕೆಲಸ ಮಾಡೋದಕ್ಕೆ ಯಾಕೆ ಮೀನ-ಮೇಷ?--ವಿಶ್ವನಾಥ ಬದಿಕಾನ ೧೪:೩೪, ೧೯ ಜುಲೈ ೨೦೧೭ (UTC)
  • Sir, thanks for your comment, we have seen the application by Gopalakrishna. Of course, very high priority is given to the important suggestions given by the community members. If no other editor contests the application, CIS would be very happy to appoint a CA based on the present discussion. Thanks a lot for all your kind participation. --Titodutta (ಚರ್ಚೆ) ೧೦:೫೧, ೨೦ ಜುಲೈ ೨೦೧೭ (UTC)
ನಾನು ಈಗಾಗಲೇ Titodutta ಅವರಿಗೆ , ಸಮುದಾಯದ ಸಿ.ಎ. ಯ ಕೆಲಸದ ಹೊರೆ/ಬೇರೆ ಭಾಷೆಗಳಲ್ಲಿ (ಸಿ.ಎ) ಹೇಗೆ ಕಾರ್ಯನಿರ್ವಹಿಸುತ್ತಿದ್ದರೆ ಎಂದು ಇಮೇಲ್ ಮೂಲಕ ಕೇಳಿದ್ದೇನೆ, ಉತ್ತರಕ್ಕಾಗಿ ಕಾಯುತ್ತಿದ್ದೆನೆ.
@Titodutta please reply to mail from ******@*mail.com from me ★ Anoop/ಅನೂಪ್ (Talk)(Edits) ೧೪:೪೭, ೧೯ ಜುಲೈ ೨೦೧೭ (UTC)
  • Hello Anoop, we have responded to your email and tried to answer your questions. Please let us know if you think we need to clarify or provide more details. --Titodutta (ಚರ್ಚೆ) ೧೦:೪೨, ೨೦ ಜುಲೈ ೨೦೧೭ (UTC)
  • Thanks for your questions and concerns, CIS-A2K would like to select the best person to serve the community. Your thoughtful comments are highly appreciated and encouraged. --Titodutta (ಚರ್ಚೆ) ೧೫:೧೫, ೨೦ ಜುಲೈ ೨೦೧೭ (UTC)

ನನ್ನ ಆಸಕ್ತಿ[ಬದಲಾಯಿಸಿ]

ನಾನು ಕನ್ನಡ ವಿಕಿಪೀಡಿಯ ಸಮುದಾಯದ ಯೋಜನೆಗಳಿಗೆ ಸಿ.ಎ ಆಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುತ್ತೇನೆ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿಕಿಪೀಡಿಯ ಶಿಕ್ಷಣ ಯೋಜನೆಯ ಮೂಲಕ ವಿಕಿಪೀಡಿಯ ಸಂಪಾದಿಸಲು ಪ್ರಾರಂಭಿಸಿದೆನು. ಮುಂದಿನ ದಿನಗಳಲ್ಲಿ ಈ ಯೋಜನೆ ನನ್ನ ತರಗತಿಗೆ ಮುಗಿದ ನಂತರದಿಂದ ಇಂದಿಗೂ ವಿಕಿಪೀಡಿಯದಲ್ಲಿ ಸಕ್ರಿಯ ಸಂಪಾದಕನಾಗಿದ್ದೇನೆ. ವಿಕಿಪೀಡಿಯ ಅಲ್ಲದೇ ವಿಕಿಸೋರ್ಸ್‌ನಲ್ಲಿಯೋ ಸಕ್ರಿಯ ಸಂಪಾದಕನಾಗಿದ್ದೇನೆ. ಕಳೆದ ವರ್ಷ ನಡೆದ TTT ಹಾಗೂ MWT ಯಲ್ಲಿಯೂ ಭಾಗವಹಿಸಿರುತ್ತೇನೆ. ಈ ಮೇಲೆ ವಿಕಾಸ್ ಹೆಗ್ಡೆ ಅವರು ತಿಳಿಸಿದ ಅರ್ಹತೆಗಳಿಗೆ ನನಗೆ ತಿಳಿದ ಪ್ರಕಾರ ನಾನು ಬಹುತೇಕ ಮಟ್ಟಿಗೆ ಅರ್ಹನಾಗಿದ್ದೇನೆ ಎಂದು ಭಾವಿಸಿದ್ದೇನೆ. ಈ ಬಗ್ಗೆ ಸಮುದಾಯ ಅಭಿಪ್ರಾಯ ತಿಳಿಸಬೇಕಾಗಿ ಕೋರಿಕೆ. --ಗೋಪಾಲಕೃಷ್ಣ (ಚರ್ಚೆ) ೧೫:೪೦, ೧೪ ಜುಲೈ ೨೦೧೭ (UTC)

ಗೋಪಾಲಕೃಷ್ಣ ಅವರು ಇದರಲ್ಲಿ ಆಸಕ್ತರಾಗಿರುವುದು ಸಂತೋಷದ ವಿಷಯ. ವಿಕಿಸಮುದಾಯ ಚರ್ಚೆ ಮಾಡಿ ಅಗತ್ಯ ಪ್ರಕ್ರಿಯೆಗಳ ಮೂಲಕ ಆಯ್ಕೆಯ ಬಗ್ಗೆ ನಿರ್ಧರಿಸಬಹುದು.--Vikas Hegde (ಚರ್ಚೆ) ೧೩:೦೬, ೧೬ ಜುಲೈ ೨೦೧೭ (UTC)
ಸಿ.ಎ. ಯ ಕೆಲಸಗಳೇನು, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ ಎನ್ನುವುದಕ್ಕೆ ಮಾನದಂಡಗಳೇನು ಎಂಬುದನ್ನು ಸಿ.ಐ.ಎಸ್. ನವರು ತಿಳಿಸಿದರೆ ಚೆನ್ನಾಗಿತ್ತು. ಹಾಗೆಂದು ನಾನು ಎರಡು ಸಲ (ಮೇಲೆ ನೋಡಿ) ಬರೆದಿದ್ದೇನೆ. ಅದಕ್ಕೆ ಉತ್ತರ ಬಂದಿದ್ದರೆ ಚೆನ್ನಾಗಿತ್ತು. ಸಿ.ಐ.ಎಸ್.ವರಿಂದ ಉತ್ತರ ಬಂದಿಲ್ಲವಾದುದರಿಂದ ಗೋಪಾಲಕೃಷ್ಣ ಅವರೇ ತಾನು ಸಿ.ಎ. ಆಗಿ ಆಯ್ಕೆ ಆದರೆ ತನ್ನ ಉದ್ಯೋಗದ ಪ್ರಥಮ ಮೂರು ತಿಂಗಳುಗಳಲ್ಲಿ ಏನೇನು ಮಾಡಲು ಇಚ್ಛಿಸುತ್ತೇನೆ, ಆ ಕೆಲಸಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂಬುದನ್ನು ನಿರ್ಧರಿಸುವ ಮಾನದಂಡಗಳೇನು ಎಂದು ಸೂಚಿಸಿದರೆ ಉತ್ತಮ.--ಪವನಜ (ಚರ್ಚೆ) ೧೦:೧೧, ೧೭ ಜುಲೈ ೨೦೧೭ (UTC)
  • ಮೊದಲನೆಯದಾಗಿ ಸಮ್ಮಿಲನವನ್ನು ಏರ್ಪಡಿಸಿ ಮುಂದಿನ ದಿನಗಳಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬಹುದು ಎಂದು ಕಾರ್ಯನೀತಿಯನ್ನು ತಯಾರಿಸಬೇಕು ಮತ್ತು ನಂತರದ ತಿಂಗಳಿನ ಸಮ್ಮಿಲನದಲ್ಲಿ ಹಿಂದಿನ ತಿಂಗಳ ಕಾರ್ಯನೀತಿ ಎಷ್ಟು ಯಶಸ್ವಿಯಾಗಿದೆ ಎಂದು ಚರ್ಚಿಸಬಹುದು. ಇದನ್ನು ಪ್ರತೀ ತಿಂಗಳು ನಡೆಸಬೇಕೆಂದು ನನ್ನ ಅಭಿಪ್ರಾಯ. ಏಕೆಂದರೆ ಇದರಿಂದ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಬಹುದು ಎಂದು ಭಾವನೆ.
  • ಕ್ರೈಸ್ಟ್ ವಿಶ್ವವಿದ್ಯಾನಿಲಯದ ಶಿಕ್ಷಣ ಯೋಜನೆಯನ್ನು ಸಮರ್ಪಕವಾಗಿ ಮುಂದುವರಿಸಬೇಕು.
ಉತ್ತಮ ಆಲೋಚನೆ. ಕ್ರೈಸ್ಟ್ ವಿ.ವಿ. ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬ ರ ಅಂಗವಾಗಿ ವಿದ್ಯಾರ್ಥಿಗಳು ಏನು ಮಾಡಿದ್ದಾರೆ ಎಂಬ ಮಾಹಿತಿ ಯೋಜನೆ ಪುಟದಲ್ಲಿ ಇಲ್ಲ. ೨೦೧೭ ರ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಯೋಜನೆ ಪುಟದಲ್ಲಿ ಮಾಹಿತಿ ಇಲ್ಲ. ವಿಕಿಪೀಡಿಯ ಶಿಕ್ಷಣ ಯೋಜನೆ ಯ ಬಗ್ಗೆ ಮಾಹಿತಿ ನೀಡುವ ಉದಾಹರಣೆ ಉಜಿರೆ ಕಾಲೇಜಿನ ಯೋಜನಾ ಪುಟದಲ್ಲಿ ಇದೆ. ಇದೇ ಮಾದರಿಯನ್ನು ಅನುಸರಿಸಬಹುದು.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
ಕ್ರೈಸ್ಟ್ ವಿಶ್ವವಿದ್ಯಾನಿಲಯದ ಶಿಕ್ಷಣ ಯೋಜನೆಯನ್ನು ಸಮರ್ಪಕವಾಗಿ ಮುಂದುವರಿಸಬೇಕು - ಹಾಗಾದರೆ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲವೇ? ಅದು ಕಾಲೇಜಿನ WEP ಯೋಜನೆ. ಅದಕ್ಕೆ ಅಷ್ಟೊಂದು ಒತ್ತಿನ, ತುರ್ತಿನ ಅಗತ್ಯವಿಲ್ಲ. ಅದನ್ನು ಆ ಕಾಲೇಜಿನವರು ಮಾಡಿಕೊಂಡು ಹೋಗಬೇಕು. ಅಲ್ಲಿ ಅವರು CISನಿಂದ ಸಂಪಾದನೋತ್ಸವ, ಇನ್ನಿತರ ತಾಂತ್ರಿಕ ಸಹಾಯ ಪಡೆಯಬಹುದು. ಕ್ರೈಸ್ಟ್ ಕಾಲೇಜಿನಲ್ಲಿ ಅನಂತ ಸುಬ್ರಾಯ ಇರುವಾಗ ಇನ್ನೊಬ್ಬರು ಬೇಕೆ? ಕನ್ನಡ ವಿಕಿಪೀಡಿಯದ ಹಲವಾರು ಯೋಜನೆಗಳಲ್ಲಿ WEP ಒಂದಾಗಿರುವ ಕಾರಣ CA ಸಮುದಾಯದ ಚಟುವಟಿಕೆಯನ್ನು ಉನ್ನತೀಕರಿಸುವ ಯೋಜನೆಯನ್ನು ಹಾಕಿಕೊಳ್ಳಬೇಕು. ಉದಾಹರಣೆಗೆ: ವಾರ್ಷಿಕಾಚರಣೆಗೆ ಅಪ್ಲೈ ಮಾಡೋದು, ಹೊಸ ಕಡೆಗಳಲ್ಲಿ ಯೋಜನೆ, ಸಂಪಾದನೋತ್ಸವ ಆರಂಭಿಸುವುದು ಇತ್ಯಾದಿ. --ವಿಶ‍್ವನಾಥ ಬದಿಕಾನ ೧೪:೦೬, ೧೯ ಜುಲೈ ೨೦೧೭ (UTC)
ಸರಿ. ನಿಮ್ಮ ಸಲಹೆಗಳಿಗೆ ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೬:೪೯, ೧೯ ಜುಲೈ ೨೦೧೭ (UTC)
  • ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ ಶಿಕ್ಷಣ ಯೋಜನೆ ಪ್ರಾರಂಭಿಸಲು ಮನವಿ ಮಾಡಬೇಕೆಂದಿದ್ದೇನೆ.
ಒಳ್ಳೆಯ ಯೋಚನೆ.ಕರಾವಳಿಯ ಹೊರತಾಗಿ ಕನ್ನಡ ವಿಕಿಪೀಡಿಯದ ಕೆಲಸಗಳು ಅತೀ ಅಗತ್ಯವಾಗಿ ಆಗಬೇಕಾಗಿವೆ.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
  • ಕರಾವಳಿ ವಿಕಿಪೀಡಿಯನ್ನರೊಂದಿಗೆ ಸೇರಿ ಅವರು ವಿವಿಧ ಕಾಲೇಜುಗಳಲ್ಲಿ ನಡೆಸುತ್ತಿರುವ ವಿಕಿಪೀಡಿಯ ಸಂಘದ ತರಬೇತಿಯಲ್ಲಿ ಕೈಜೋಡಿಸುವುದು.
ಸದ್ಯಕ್ಕೆ ಕರಾವಳಿಯವರು ಯಾವುದೇ ಪಿ.ಎ./ಸಿ.ಎ. ಸಹಾಯವಿಲ್ಲದೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದುದರಿಂದ ಸಮಯವನ್ನು ಬೇರೆ ಕಡೆಗೆ ನೀಡಿದರೆ ಉತ್ತಮ ಎಂದು ನನ್ನ ಅಭಿಪ್ರಾಯ. ಸದ್ಯಕ್ಕೆ ಕರಾವಳಿಯವರು ಮಾಡುವ ಕೆಲಸಗಳಿಗೆ ಸಿ.ಐ.ಎಸ್.ನವರು ಧನಸಹಾಯ ನೀಡಿದರೆ ಸಾಕಾಗಬಹುದು.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
  • ವಿಕಿಪೀಡಿಯದಲ್ಲಿ, ವಿಕಿಸೋರ್ಸ್‌ಗಳಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಮುಂದುವರಿಸುವುದು.
ಹೌದು.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
  • ಸ್ಥಳೀಯವಾಗಿ ಕಡತ ಸೇರಿಸುವ ಅವಕಾಶ ಇರುವುದರಿಂದ ಪವನಜರ ಹಾಗೂ ಇತರ ಹಿರಿಯ ಅನುಭವಿ ವಿಕಿಪೀಡಿಯನ್ನರ ಸಲಹೆಯ ಮೇರೆಗೆ ಹಳೆಯ ಪುಸ್ತಕಗಳ, ಪುಸ್ತಕಗಳ ಮುಖಪುಟದ ಚಿತ್ರಗಳನ್ನು ಸೇರಿಸುವುದು ಮತ್ತು ಅವುಗಳ ಮಾಹಿತಿ ಸೇರಿಸುವುದು.
ಈ ಕೆಲಸ ಖಂಡಿತ ಮಾಡಬಹುದಾದ ಮತ್ತು ಮಾಡಲೇ ಬೇಕಾದ ಕೆಲಸ.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
ಪ್ರತೀ ತಿಂಗಳ ಯೋಜನೆ ಮತ್ತು ಕೈಗೊಂಡ ಕೆಲಸವನ್ನು ಅರಳಿಕಟ್ಟೆಯಲ್ಲಿ ಪ್ರಕಟಿಸುವುದು ಮತ್ತು ಮುಂದಿನ ತಿಂಗಳು ಯಾವ ಕೆಲಸ ಮಾಡಬೇಕು ಎಂಬುದು ಸಮುದಾಯದ ಸಲಹೆ ಕೇಳಿ ಅದರ ಪ್ರಕಾರ ನಡೆಯುವುದು. ಇದು ಪಾರದರ್ಶಕ ಮತ್ತು ಬದಿಕಾನ ಅವರೂ ಇದನ್ನು ಸೂಚಿಸಿದ್ದಾರೆ. ಒಂದು ಹೊಸ ಪುಟವನ್ನು ಸೃಸ್ಟಿಸಿ ಅಲ್ಲಿ ಕೈಗೊಂಡ ಮತ್ತು ಕೈಗೊಳ್ಳಬೇಕೆಂದಿರುವ ಕೆಲಸಗಳನ್ನು ಪಟ್ಟಿ ಮಾಡುತ್ತೇನೆ. ಈ ಮಾನದಂಡಗಳನ್ನು ಅನುಸರಿಸಬಹುದು ಎಂದು ನನ್ನ ಅಭಿಪ್ರಾಯ. --ಗೋಪಾಲಕೃಷ್ಣ (ಚರ್ಚೆ) ೧೫:೧೬, ೧೮ ಜುಲೈ ೨೦೧೭ (UTC)
ಹೌದು. ಸಿ.ಎ. ಜವಾಬ್ದಾರಿ ಬಗ್ಗೆ ಸಿಐಎಸ್ ತಿಳಿಸಲಿ.----ವಿಶ‍್ವನಾಥ ಬದಿಕಾನ (ಚರ್ಚೆ) ೧೨:೩೮, ೧೭ ಜುಲೈ ೨೦೧೭ (UTC)

ಸಮ್ಮತಿ[ಬದಲಾಯಿಸಿ]

  • ವಿಕಿ ಸಮುದಾಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರೊಂದಿಗೂ ಉತ್ತಮ ಸಾಮರಸ್ಯದೊಂದಿಗೆ ಈ ಹುದ್ದೆ ನಿರ್ವಹಿಸುತ್ತಾರೆ ಎಂಬ ನಂಬಿಕೆಯಿದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೫:೨೩, ೧೬ ಜುಲೈ ೨೦೧೭ (UTC)
  • ಗೋಪಾಲಕೃಷ್ಣರು ವಿಕಿಯಲ್ಲಿ ಬಹಳ ಕೆಲಸ ಮಾಡಿರುವುದು ಗಮನಿಸಿದ್ದೇನೆ. ಸಮ್ಮತಿಯಿದೆ. ಒಂದು ಪ್ರಶ್ನೆ: ಅವರಿರುವುದು ಮಂಗಳೂರಲ್ಲಲ್ಲವೇ? ಸಿಎ ಕೆಲಸಕ್ಕೆ ಬೆಂಗಳೂರಿನಲ್ಲಿರಬೇಕಲ್ಲವೆ? --ವಿಶ್ವನಾಥ/Vishwanatha (ಚರ್ಚೆ) ೧೫:೨೭, ೧೬ ಜುಲೈ ೨೦೧೭ (UTC)
ಬೆಂಗಳೂರಿನಲ್ಲಿ ಇದ್ದು ಕೆಲಸ ಮಾಡಬಹುದು. ನನ್ನದೇನೂ ಅಭ್ಯಂತರ ಇಲ್ಲ. --ಗೋಪಾಲಕೃಷ್ಣ (ಚರ್ಚೆ) ೦೫:೧೯, ೧೯ ಜುಲೈ ೨೦೧೭ (UTC)
  • ಗೋಪಾಲಕೃಷ್ಣ ಕನ್ನಡ ವಿಕಿಪೀಡಿಯದಲ್ಲಿ ಕೆಲಸ ಮಾಡುತ್ತೇನೆಂದು ತಿಳಿಸಿರುವುದು ಸಂತೋಷದ ವಿಚಾರ. ವಿಕಿಪೀಡಿಯದಲ್ಲಿ ಉತ್ತಮ ಲೇಖನಗಳನ್ನು ಮಾಡಿದ ಅನುಭವವಿರುವುದರಿಂದ ನನ್ನ ಸಮ್ಮತಿಯೂ ಇದೆ. ಆದರೆ ಸಿಐಎಸ್ ಮತ್ತು ಸಮುದಾಯದ ಕೆಲಸಕ್ಕೆ ಬದ್ಧರಾಗದಿದ್ದರೆ ನಮ್ಮ ಅಸಮ್ಮತಿಯನ್ನೂ ನೀಡಬೇಕಲ್ಲಾ ಎಂಬ ಸೂಚನೆಯೊಂದಿಗೆ, ಇತಿಹಾಸ ಮತ್ತೆ ಪುನರಾವರ್ತನೆಯಾಗದಿರಲಿ. --ವಿಶ‍್ವನಾಥ ಬದಿಕಾನ /ಚರ್ಚೆ / ಕಾಣಿಕೆಗಳು ೧೬:೩೪, ೧೬ ಜುಲೈ ೨೦೧೭ (UTC)
  • ಗೋಪಾಲಕೃಷ್ಣರವರು ಕನ್ನಡ ವಿಕಿಪೀಡಿಯದಲ್ಲಿ ಕೆಲಸ ಮಾಡಿ ಸಾಕಷ್ಟು ಅನುಭವ ಪಡೆದಿದ್ದಾರೆ.ಮಾತ್ರವಲ್ಲ ಕನ್ನಡ ವಿಕಿ ಸಮುದಾಯದೊಂದಿಗೆ ಸಮಾರಸ್ಯವನ್ನು ಕಪಾಡಿಕೊಂಡು ಹೋಗುವ ವಿಶ್ವಾಸ ಅವರಲ್ಲಿದೆ.ವಿಕಿಪೀಡಿಯದ ಹಲವು ಯೋಜನೆಗಳಲ್ಲಿ ದುಡಿದ ಅನುಭವ ಇರುವುದರಿಂದ ಆ ಹುದ್ದೆಗೆ ಗೋಪಾಲಕೃಷ್ಣ ಅಗಬಹುದು ಮತ್ತು ನನ್ನ ಒಪ್ಪಿಗೆ ಇದೆ.--Lokesha kunchadka (ಚರ್ಚೆ) ೦೮:೦೨, ೧೭ ಜುಲೈ ೨೦೧೭ (UTC)
  • ಗೋಪಾಲಕೃಷ್ಣ ಅವರು ತಾವಾಗಿಯೇ ಮುಂದೆ ಬಂದು ಹಲವು ಕೆಲಸಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ಇರುವ ಯೋಜನೆಗಳನ್ನು ಮುಂದುವರೆಸುವುದಾಗಿಯೂ ಹೇಳಿಕೊಂಡಿದ್ದಾರೆ. ಆದುದರಿಂದ ಅವರಿಗೆ ಪ್ರಯೋಗಾತ್ಮಕವಾಗಿ ಮೂರು ತಿಂಗಳಿನ ಕಾಲಕ್ಕೆ ಸಿ.ಎ. ಆಗಿ ನೇಮಿಸಬಹದು ಎಂದು ನನ್ನ ಅಭಿಪ್ರಾಯ. ಈ ಮೂರು ತಿಂಗಳುಗಳ ಕಾಲದ ಕೆಲಸವನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡಬಹುದು.--ಪವನಜ (ಚರ್ಚೆ) ೦೫:೩೨, ೧೯ ಜುಲೈ ೨೦೧೭ (UTC)
  • ಸಿಐಎಸ್ ತಂಡವು ಗೋಪಾಲಕೃಷ್ಣ ಅವರ ಅರ್ಜಿಯನ್ನು ಪರಿಗಣಿಸಿದೆ. ಮುಂದಿನ ಎಳು ದಿನಗಳ ಒಳಗಾಗಿ ಬೇರೆ ಯಾವ ಅರ್ಜಿ ಅಥವಾ ಸಮುದಾಯದ ಸದಸ್ಯ್ತರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸದೆ ಇದ್ದಲ್ಲಿ ನಾವು ಗೋಪಾಲಕೃಷ್ಣ ಅವರನ್ನು ಪ್ರಯೋಗಾತ್ಮಕವಾಗಿ ಮೂರು ತಿಂಗಳಿನ ಕಾಲಕ್ಕೆ ಸಿ.ಎ. ಆಗಿ ನೇಮಿಸಲು ಸಿದ್ದರಾಗಿದ್ದೇವೆ. Lahariyaniyathi (ಚರ್ಚೆ) ೧೧:೩೭, ೨೧ ಜುಲೈ ೨೦೧೭ (UTC)
  • Thanks a lot for your responses. Community inputs are really important. Let's see if anyone else shows interest, else we'll be happy to make an appointment based on the community's suggestion. Thanks again. --Titodutta (ಚರ್ಚೆ) ೧೧:೦೨, ೨೦ ಜುಲೈ ೨೦೧೭ (UTC)
  • CIS-A2K thanks you for the suggestion of the task-list of your own CA for the first three months. CIS-A2K would be highly grateful if you can suggest about the same based on community discussions. Regards --Titodutta (ಚರ್ಚೆ) ೧೫:೧೯, ೨೦ ಜುಲೈ ೨೦೧೭ (UTC)

ಸಿಐಎಸ್-ಎ೨ಕೆ ಪರವಾಗಿ ಕನ್ನಡ ಸಮುದಾಯದ ಪ್ರತಿನಿಧಿಯ ಆಯ್ಕೆ[ಬದಲಾಯಿಸಿ]

ಮೇಲ್ಕಾಣಿಸಿದ ಚರ್ಚೆಯಂತೆ, ಸಿಐಎಸ್-ಎ೨ಕೆ ತಂಡ ಗೋಪಾಲಕೃಷ್ಣರವರನ್ನು ಪ್ರಯೋಗಾತ್ಮಕವಾಗಿ ಮೂರು ತಿಂಗಳಿನ ಅವಧಿಗೆ ಸಿ.ಎ. ಆಗಿ ನೇಮಿಸಲಾಗಿದೆ. Lahariyaniyathi (ಚರ್ಚೆ) ೧೦:೧೨, ೩೧ ಜುಲೈ ೨೦೧೭ (UTC)

  • ಗೋಪಾಲಕೃಷ್ಣ ಸಿಐಎಸ್-ಎ೨ಕೆ ತಂಡದ ಸಿ.ಎ. ಆಗಿ ನೇಮಕವಾಗಿರೋದು ಸಂತೋಷದ ವಿಚಾರ. ಆತ ಕನ್ನಡಿಗನೇ ಆಗಿರುವುದರಿಂದ ತುಂಬ ಕೆಲಸಗಳನ್ನು ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಅಭಿನಂದನೆಗಳು.--Vishwanatha Badikana (ಚರ್ಚೆ) ೧೬:೫೪, ೩೧ ಜುಲೈ ೨೦೧೭ (UTC)

CIS-A2K Technical Wishes 2017 Announcement[ಬದಲಾಯಿಸಿ]

Sorry for posting this message in English, please feel free to translate the message

Greetings from CIS-A2K!

CIS-A2K is happy to announce the Technical Wishes Project beginning July 2017. We now welcome requests from Indic language communities on our Technical Request page. This project, inspired by WMDE, is an effort to document and hopefully resolve the technical issues that have long plagued Indian Wikimedians. For more details, please check our Technical Requests page. Please feel free to ask questions or contact us at tito@cis-india.org and manasa@cis-india.org. Regards. --MediaWiki message delivery (ಚರ್ಚೆ) ೧೮:೦೬, ೧ ಜುಲೈ ೨೦೧೭ (UTC)

ಅನುವಾದ

ಸಿಐಎಸ್-ಎ2ಕೆಗೆ ಜುಲೈ 2017 ರಿಂದ ತಾಂತ್ರಿಕ ಸಹಾಯ ಕೋರಿಕೆ ಯೋಜನೆಯನ್ನು ಘೋಷಿಸಲು ಸಂತೋಷವಾಗಿದೆ. ನಮ್ಮ ತಾಂತ್ರಿಕ ಸಹಾಯ ಕೋರಿಕೆ ಪುಟದಲ್ಲಿ ಭಾರತೀಯ ಭಾಷಾ ಸಮುದಾಯಗಳಿಂದ ವಿನಂತಿಗಳನ್ನು ನಾವು ಈಗ ಸ್ವಾಗತಿಸುತ್ತೇವೆ. WMDE ಯಿಂದ ಸ್ಫೂರ್ತಿ ಪಡೆದ ಈ ಯೋಜನೆಯು ಭಾರತೀಯ ವಿಕಿಮೀಡಿಯನ್ನರಲ್ಲಿ ಇರುವ ತಾಂತ್ರಿಕ ಸಮಸ್ಯೆಗಳನ್ನು ದಾಖಲಿಸುವುದು ಮತ್ತು ಆಶಾದಾಯಕವಾಗಿ ಪರಿಹರಿಸುವ ಪ್ರಯತ್ನವಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮ್ಮ ತಾಂತ್ರಿಕ ಸಹಾಯದ ವಿನಂತಿಗಳ ಪುಟವನ್ನು ಪರಿಶೀಲಿಸಿ. ಯಾವುದೇ ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ ಅಥವಾ ಮಿಂಚಂಚೆ ಮೂಲಕವೂ ನಮ್ಮನ್ನು ಸಂಪರ್ಕಿಸಬಹುದು. ಮಿಂಚಂಚೆ ವಿಳಾಸ tito@cis-india.org ಮತ್ತು manasa@cis-india.org. ಅಭಿನಂದನೆಗಳು. -- Anoop/ಅನೂಪ್ (Talk)(Edits) ೦೪:೦೩, ೩ ಜುಲೈ ೨೦೧೭ (UTC)

ಅನುವಾದವನ್ನು ಸರಿಪಡಿಸಿದ್ದು. --ಗೋಪಾಲಕೃಷ್ಣ (ಚರ್ಚೆ) ೦೬:೫೬, ೪ ಜುಲೈ ೨೦೧೭ (UTC)

Translate to Kannada: Nikolai Noskov[ಬದಲಾಯಿಸಿ]

Namaste! Can make articles in Kannada language from English about singers Nikolai Noskov and Valery Leontiev? If make these articles, I will be grateful! Thanks! --217.66.152.96 ೧೨:೨೪, ೨ ಜುಲೈ ೨೦೧೭ (UTC)

ಮುಂದಿನ ವಿಕಿಪೀಡಿಯ ಸಾಧಕರ ಆಯ್ಕೆ ಬಗ್ಗೆ[ಬದಲಾಯಿಸಿ]

ಮುಂದಿನ ತಿಂಗಳಿನಲ್ಲಿ ವಿಕಿಪೀಡಿಯ ಸಾಧಕರನ್ನಾಗಿ ಯಾರನ್ನು ಮಾಡಬೇಕೆಂದು ಸೂಚಿಸಬೇಕಾಗಿ ಕೇಳಿಕೊಳ್ಳುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೯:೧೪, ೨೦ ಜುಲೈ ೨೦೧೭ (UTC)

ಚರ್ಚೆ[ಬದಲಾಯಿಸಿ]

  • ಸಾಧಕರಾಗಿ ಒಬ್ಬರು ಮಹಿಳಾ ಸಂಪಾದಕರನ್ನು ಯಾಕೆ ಗುರುತಿಸಬಾರದು? ಆ ನಿಟ್ಟಿನಲ್ಲಿ ಮೈಸೂರಿನವರಾದ ಕೆ.ಸೌಭಾಗ್ಯವತಿ ಯವರು ಸಾಧಕಿಯೆಂದು ಗುರುತಿಸಬಹುದು.--ವಿಶ್ವನಾಥ ಬದಿಕಾನ ೧೩:೫೦, ೨೦ ಜುಲೈ ೨೦೧೭ (UTC)
  • ಡಾ.ಕೆ. ಸೌಭಾಗ್ಯವತಿಯವರನ್ನು ಆಯ್ಕೆ ಮಾಡಬಹುದು.--ಪವನಜ (ಚರ್ಚೆ) ೧೫:೫೬, ೨೦ ಜುಲೈ ೨೦೧೭ (UTC)
  • ಸೌಭಾಗ್ಯವತಿಯವರನ್ನು ವಿಕಿಪೀಡಿಯ ಸಾಧಕರಾಗಿ ಆಯ್ಕೆ ಮಾಡಿರುವುದು ಉತ್ತಮ ಎಂದು ನನ್ನ ಅನಿಸಿಕೆ. ★ Anoop/ಅನೂಪ್ (Talk)(Edits) ೧೭:೧೭, ೨೦ ಜುಲೈ ೨೦೧೭ (UTC)
  • ಶ್ರೀ ವಿಶ್ವನಾಥ ಬದಿಕಾನ ಅವರ ಸಲಹೆಯನ್ನು ಅನುಮೋದಿಸುತ್ತೇನೆ. --Vikas Hegde (ಚರ್ಚೆ) ೧೭:೫೧, ೨೦ ಜುಲೈ ೨೦೧೭ (UTC)
  • ಡಾ.ಕೆ. ಸೌಭಾಗ್ಯವತಿಯವರನ್ನು ಆಯ್ಕೆ ಮಾಡಬಹುದು. -- Sangappadyamani (ಚರ್ಚೆ) ೦೧:೩೪, ೨೧ ಜುಲೈ ೨೦೧೭ (UTC)
  • ವಿಶ್ವನಾಥ ಬದಿಕಾನ ಸರ್ ರವರ ಮಾತುಗಳಿಗೆ ನನ್ನ ಸಹಮತವಿದೆ ಯಾಕೆಂದರೆ ಒಂದು ಹೊಸ ಅಲೋಚನೆ ಇದಾಗಿದೆ ಮತ್ತು ವಿಕಿಪೀಡಿಯದಲ್ಲಿ ಇಂತಹ ಒಂದು ಸ್ಥಾನಮಾನ ಮಹಿಳೆಯರಿಗೆ ಸಿಕ್ಕಿಲ್ಲ.--Lokesha kunchadka (ಚರ್ಚೆ) ೦೬:೧೦, ೨೧ ಜುಲೈ ೨೦೧೭ (UTC)

--ಕೆ.ಸೌಭಾಗ್ಯವತಿ (ಚರ್ಚೆ) ೧೧:೪೪, ೨ ಆಗಸ್ಟ್ ೨೦೧೭ (UTC) ಆತ್ಮೀಯರೇ, ಬಹಳ ದಿನಗಳಿಂದ, ವೈಯಕ್ತಿಕ ಕಾರಣದ ನಿಮಿತ್ತ ನಮ್ಮ ವಿಕಿಪೀಡಿಯಾವನ್ನು ನೋಡಿರಲಿಲ್ಲ. ಇಂದು ಬೆಳಿಗ್ಗೆ ವಿಕಿ ಸಾಧಕರ ಪಟ್ಟಿಯಲ್ಲಿ ನನ್ನನ್ನು ನೋಡಿ ಸಖೇದಾಶ್ಚರ್ಯವಾಯಿತು. ಇದಕ್ಕೆ ನಾನು ಅರ್ಹಳೆ? ಎಂದು ನನಗೆ ನಾನೆ ಆತ್ಮಾವಲೋಕನ ಮಾಡಿಕೊಳ್ಳುವಾಗ, ತುಂಬಾ ಸಂಕೋಚವಾಯಿತು. ಸಾಧಕಿ ಆಗಬೇಕೆನ್ನುವ ಆಸೆ ಇರುವುದು ಸಹಜ. ಆದರೆ ಆ ಸಾಧನೆಯ ಹಾದಿಯಲ್ಲಿ ನಾನು ಕ್ರಮಿಸಿರುವ ಹಾದಿ ತುಂಬಾ ಕಡಿಮೆ. ಪ್ರತಿ ತಿಂಗಳು ಯಾರು ಹೆಚ್ಚು ಲೇಖನಗಳನ್ನು ಹಾಕುತ್ತಾರೋ ಅಂತಹವರ ಆಸಕ್ತಿ, ಉತ್ಸಾಹವನ್ನು ಪ್ರೋತ್ಸಾಹಿಸ ಬೇಕೆನ್ನುವ ನಿಟ್ಟಿನಲ್ಲಿ ಪವನಜ ಸರ್ ಅವರಿಗೆ ಹೀಗೊಂದು ಸಲಹೆ ಕೊಟ್ಟಿದ್ದು ನಿಜ. ಆದರೆ ಅದರಲ್ಲಿ ನಾನೇ ಬರುತ್ತೇನೆಂದು ಊಹಿಸಿರಲಿಲ್ಲ. ನಿಮ್ಮೆಲ್ಲರ ಆತ್ಮೀಯತೆಗೆ ನಾನು ಆಭಾರಿಯಾಗಿದ್ದೇನೆ. ಇನ್ನು ಮುಂದೆ ವಿಕಿಪೀಡಿಯಾದಲ್ಲಿ ಕನ್ನಡ ಕಟ್ಟುವ, ಉಳಿಸುವ ನಿಟ್ಟಿನಲ್ಲಿ ಹೊಣೆಗಾರಿಕೆಯಿಂದ ನಡೆದು ಕೊಳ್ಳುತ್ತೇನೆಂದು ಈ ಮೂಲಕ ಪ್ರಮಾಣಿಸುತ್ತೇನೆ.

ನಿರ್ಧಾರ[ಬದಲಾಯಿಸಿ]

ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಮುಂದಿನ ತಿಂಗಳ ವಿಕಿಪೀಡಿಯ ಸಾಧಕರನ್ನಾಗಿ ಸೌಭಾಗ್ಯವತಿ ಅವರನ್ನು ಆಯ್ಕೆಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೦:೧೮, ೨೩ ಜುಲೈ ೨೦೧೭ (UTC)

ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್‌ಗಳ ಬಗ್ಗೆ ತರಬೇತಿ ಕಾರ್ಯಾಗಾರ[ಬದಲಾಯಿಸಿ]

ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ. ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ, ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30, 2017ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವು Center for Internet & Society ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು ಈ ಕೆಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ. ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು ಅವಕಾಶವಿದೆ.

ದಿನಾಂಕ: 30 ಜುಲೈ 2017, ಭಾನುವಾರ
ಸಮಯ: ಬೆಳಗ್ಗೆ 10ರಿಂದ ಸಂಜೆ 5
ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur, Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
ಸ್ಥಳದ ಗೂಗಲ್ ನಕ್ಷೆ ಕೊಂಡಿ

ನೋಂದಾವಣೆ:

  1. --Vikas Hegde (ಚರ್ಚೆ) ೧೨:೨೫, ೨೦ ಜುಲೈ ೨೦೧೭ (UTC)
  2. --ವಿಶ್ವನಾಥ ಬದಿಕಾನ ೧೨:೫೦, ೨೦ ಜುಲೈ ೨೦೧೭ (UTC)
  3. -- Anoop/ಅನೂಪ್ (Talk)(Edits) ೧೩:೨೦, ೨೦ ಜುಲೈ ೨೦೧೭ (UTC)
  4. --ವಿಶ್ವನಾಥ/Vishwanatha (ಚರ್ಚೆ) ೧೩:೪೯, ೨೦ ಜುಲೈ ೨೦೧೭ (UTC)
  5. --ಗೋಪಾಲಕೃಷ್ಣ (ಚರ್ಚೆ) ೦೪:೩೪, ೨೧ ಜುಲೈ ೨೦೧೭ (UTC)
  6. --Lokesha kunchadka (ಚರ್ಚೆ) ೦೬:೦೧, ೨೧ ಜುಲೈ ೨೦೧೭ (UTC)
  7. --Ashay vb (ಚರ್ಚೆ) ೧೩:೪೬, ೨೧ ಜುಲೈ ೨೦೧೭ (UTC)
  8. --Kishorekumarrai (ಚರ್ಚೆ) ೦೫:೩೫, ೨೨ ಜುಲೈ ೨೦೧೭ (UTC)
  9. --Bharathesha Alasandemajalu (ಚರ್ಚೆ) ೧೮:೨೫, ೨೩ ಜುಲೈ ೨೦೧೭ (UTC)
  10. --ಭರತ್ ಕುಮಾರ್ (ಚರ್ಚೆ) ೦೫:೫೦, ೩೦ ಜುಲೈ ೨೦೧೭ (UTC)
  11. --NaveenNkadalaveni (ಚರ್ಚೆ) ೧೮:೫೬, ೨೬ ಜುಲೈ ೨೦೧೭ (UTC)
  12. -- Sangappadyamani (ಚರ್ಚೆ) ೧೧:೩೩, ೨೭ ಜುಲೈ ೨೦೧೭ (UTC)

ಸೂಚನೆ:

  • ತರಬೇತಿಗೆ ಭಾಗವಹಿಸುವವರಿಗೆ CIS ನಿಂದ ಅದೇ ದಿನ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಮಾಡಬಹುದೇ? ಈ ಸರ್ಟಿಫಿಕೇಟ್ ಶಿಕ್ಷಣ ಸಂಸ್ಥೆಗಳಲ್ಲಿ ಓದುವವರಿಗೆ/ದುಡಿವವರಿಗೆ ಅನುಕೂಲವಾಗುತ್ತದೆ.--ವಿಶ್ವನಾಥ ಬದಿಕಾನ ೧೩:೦೦, ೨೦ ಜುಲೈ ೨೦೧೭ (UTC)
  • ಖಂಡಿತ ಮಾಡಬಹುದು. ನೋಂದಣಿ ಸೂಚಿಯಲ್ಲಿ ಈ ವಿಷಯವನ್ನೂ ನಮೂದಿಸಿದರೆ ಉತ್ತಮ. Lahariyaniyathi (ಚರ್ಚೆ) ೦೫:೪೮, ೨೧ ಜುಲೈ ೨೦೧೭ (UTC)
  • ಸಂಬಂಧಿಕರ ಸತ್ಯಾನಾರಾಯಣ ಪೂಜೆ ಕಾರಣದಿಂದಾಗಿ ನಾನು ಇನ್ಫೋಬಾಕ್ಸ್ ವರ್ಕ್ಶಾಪ್ನಲ್ಲಿ ಭಾಗವಹಿಸುತ್ತಿಲ್ಲ. ★ Anoop/ಅನೂಪ್ (Talk)(Edits) ೦೩:೨೮, ೩೦ ಜುಲೈ ೨೦೧೭ (UTC)
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದ್ದರಿಂದ ನಾನು ಇನ್ಫೋಬಾಕ್ಸ್ ಗಳ ಬಗ್ಗೆ ತರಬೇತಿ ಕಾರ್ಯಾಗಾರಕ್ಕೆ ಭಾಗವಹಿಸುತ್ತಿಲ್ಲ. --NaveenNkadalaveni (ಚರ್ಚೆ) ೦೭:೨೦, ೩೦ ಜುಲೈ ೨೦೧೭ (UTC)

ವರದಿ:

ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ೯ ಜನ ವಿಕಿಪೀಡಿಯನ್ನರು ಭಾಗವಹಿಸಿ ಟೆಂಪ್ಲೆಟು ಮತ್ತು ಇನ್ಫೋಬಾಕ್ಸುಗಳ ಬಗ್ಗೆ ಬೇಸಿಕ್ ಅಭ್ಯಾಸಗಳನ್ನು ನಡೆಸಿದರು. ಮುಂದುವರೆದು ಹೆಚ್ಚಿನ ತರಬೇತಿಗಾಗಿ ಒಂದು ತಿಂಗಳ ನಂತರ ಮತ್ತೊಂದು ದಿನ ಕಾರ್ಯಾಗಾರವನ್ನು ನಡೆಸುವ ಯೋಜನೆ ಹಮ್ಮಿಕೊಳ್ಳಬಹುದು ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.--Vikashegde (ಚರ್ಚೆ) ೦೭:೫೮, ೩೦ ಜುಲೈ ೨೦೧೭ (UTC)

ದಯವಿಟ್ಟು ಈ ಕಾರ್ಯಾಗಾರದ ಬಗ್ಗೆ ವಿವರಗಳ ಪುಟ ಸೃಷ್ಟಿ ಮಾಡಿ ನಂತರ ಅದನ್ನು ಈ ಪುಟದಲ್ಲಿ ಸೇರಿಸಿ.--ಪವನಜ (ಚರ್ಚೆ) ೦೫:೨೭, ೩೧ ಜುಲೈ ೨೦೧೭ (UTC)
ಮಾಡಲಾಗಿದೆ.--Vikashegde (ಚರ್ಚೆ) ೦೭:೩೦, ೧ ಆಗಸ್ಟ್ ೨೦೧೭ (UTC)
  • ಕಾರ್ಯಾಗಾರದ ಪೂರ್ಣ ವರದಿ ಇಲ್ಲಿದೆ.


ಆಗಸ್ಟ್ ತಿಂಗಳಲ್ಲಿ ಸಮುದಾಯ ಪ್ರತಿನಿಧಿ ಮಾಡಬೇಕೆಂದಿರುವ ಕೆಲಸಗಳು[ಬದಲಾಯಿಸಿ]

ಮೊದಲನೆಯದಾಗಿ ನನ್ನನ್ನು ಸಮುದಾಯ ಪ್ರತಿನಿಧಿಯಾಗಿ ಬೆಂಬಲಿಸಿ ಆಯ್ಕೆಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.
ಆಗಸ್ಟ್ ತಿಂಗಳಿನಲ್ಲಿ ನಾನು ಮಾಡಬೇಕೆಂದಿರುವ ಕೆಲಸಗಳು

  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದು.
  • ಹಿಂದೆ ನವಕರ್ನಾಟಕ ಪ್ರಕಾಶಕರಲ್ಲಿ ಚರ್ಚಿಸಿದಂತೆ, ಕನ್ನಡ ವಿಕಿಪೀಡಿಯದಲ್ಲಿ ಈಗ ಸ್ಥಳೀಯವಾಗಿ ಚಿತ್ರಗಳನ್ನು ಸೇರಿಸುವ ಅವಕಾಶ ಇರುವುದರಿಂದ ಪುಸ್ತಕಗಳ ಮುಖಪುಟ ಮತ್ತು ಹಿಂಬಾಗವನ್ನು ಸ್ಕ್ಯಾನ್ ಮಾಡಿ ಅವುಗಳ ಬಗ್ಗೆ ಲೇಖನ ಸೇರಿಸುವುದು.
  • ನಿರ್ವಾಹಕರೊಂದಿಗೆ ಸಂಪರ್ಕ ಬೆಳೆಸಿ ಈಗಾಗಲೇ ನಡೆದ ಟೆಂಪ್ಲೇಟು, ಇನ್ಫೋಬಾಕ್ಸ್‌ಗಳ ರಚನೆಯ ಕಾರ್ಯಾಗಾರದಲ್ಲಿ ನಡೆದ ಚರ್ಚೆಯಲ್ಲಿ ಆಮದು ಮಾಡಿಕೊಳ್ಳಬೇಕೆಂದಿರುವ ಟೆಂಪ್ಲೇಟುಗಳ ಬಗ್ಗೆ ಚರ್ಚೆ ನಡೆಸಿ ಮತ್ತು ಇತರ ಸಂದೇಹಗಳ ಬಗ್ಗೆ ಚರ್ಚೆ ನಡೆಸಲು ಒಂದು ಐ-ಆರ್-ಸಿಯನ್ನು ಸಂಘಟಿಸುವುದು.
  • ಈ ತಿಂಗಳ ಕೊನೆಯ ವಾರದಲ್ಲಿ ಒಂದು ದಿನ ನಿರ್ಧರಿಸಿ ಸಮುದಾಯದವರೊಂದಿಗೆ ಒಂದು ಐ-ಆರ್-ಸಿಯನ್ನು ಸಂಘಟಿಸುವುದು.
  • ವಿಜ್ಞಾನ ಲೇಖನ ಯೋಜನೆಗಳಲ್ಲಿ ಬೇಕಾಗಿರುವ ಲೇಖನಗಳನ್ನು ತಯಾರಿಸುವುದು.

ಇದರ ಹೊರತಾಗಿ ಅಥವಾ ಇದಕ್ಕಿಂತ ಉತ್ತಮವಾಗಿ ಆಗಸ್ಟ್ ತಿಂಗಳಿನಲ್ಲಿ ನಾನು ಯಾವುದೆಲ್ಲ ಕೆಲಸಗಳನ್ನು ಮಾಡಬೇಕು/ಮಾಡಬಹುದು ಎಂದು ಸಮುದಾಯ ಸದಸ್ಯರು ಸೂಚಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೬:೫೭, ೧ ಆಗಸ್ಟ್ ೨೦೧೭ (UTC)

ಸಮುದಾಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ನೀವು ಮೊದಲು ಹೇಳಿದಂತೆ ಮಾಡಬಹುದು ಎಂದು ನಾನು ನಿಮಗೆ ಸೂಚಿಸಲು ಬಯಸುತ್ತೇನೆ.

"ಮೊದಲನೆಯದಾಗಿ ಸಮ್ಮಿಲನವನ್ನು ಏರ್ಪಡಿಸಿ ಮುಂದಿನ ದಿನಗಳಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬಹುದು ಎಂದು ಕಾರ್ಯನೀತಿಯನ್ನು ತಯಾರಿಸಬೇಕು ಮತ್ತು ನಂತರದ ತಿಂಗಳಿನ ಸಮ್ಮಿಲನದಲ್ಲಿ ಹಿಂದಿನ ತಿಂಗಳ ಕಾರ್ಯನೀತಿ ಎಷ್ಟು ಯಶಸ್ವಿಯಾಗಿದೆ ಎಂದು ಚರ್ಚಿಸಬಹುದು. ಇದನ್ನು ಪ್ರತೀ ತಿಂಗಳು ನಡೆಸಬೇಕೆಂದು ನನ್ನ ಅಭಿಪ್ರಾಯ. ಏಕೆಂದರೆ ಇದರಿಂದ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಬಹುದು ಎಂದು ಭಾವನೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ ಶಿಕ್ಷಣ ಯೋಜನೆ ಪ್ರಾರಂಭಿಸಲು ಮನವಿ ಮಾಡಬೇಕೆಂದಿದ್ದೇನೆ".--ಗೋಪಾಲಕೃಷ್ಣ (ಚರ್ಚೆ)

ನನ್ನ ಅಭಿಪ್ರಾಯದಲ್ಲಿ ಇವು ಪ್ರಸ್ತುತ ಕಾರ್ಯಪಡಿಸಬಹುದಾದ ಉತ್ತಮ ಯೋಜನೆಗಳು. ಇತರ ಸದಸ್ಯರಿಂದ ಬೇರೇನೂ ಸೂಚಿಸಬೇಕಾದರೆ ದಯವಿಟ್ಟು ಸೂಚಿಸಬೇಕಾಗಿ ವಿನಂತಿ.★ Anoop/ಅನೂಪ್ (Talk)(Edits) ೦೭:೧೬, ೧ ಆಗಸ್ಟ್ ೨೦೧೭ (UTC)

ಧನ್ಯವಾದಗಳು. ಸಮ್ಮಿಲನವನ್ನು ಏರ್ಪಡಿಸುವುದರ ಬಗ್ಗೆ ಚರ್ಚಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೭:೩೧, ೧ ಆಗಸ್ಟ್ ೨೦೧೭ (UTC)

ಪವನಜರೊಂದಿಗೆ ನಡೆದ ಚರ್ಚೆಯ ಸಾರಂಶ

ಪವನಜರು ಇಂದು ಸಿಐಎಸ್ ಕಛೇರಿಗೆ ಭೇಟಿ ನೀಡಿದಾಗ ಅವರೊಂದಿಗೆ ಮುಖತಃ ಚರ್ಚಿಸಿದಾಗ ಅವರು ಸೂಚಿಸಿದ ಕೆಲಸಗಳು ಇಂತಿವೆ.

  • ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ೨೦೧೬-೧೭ರ ಅವಧಿಯಲ್ಲಿ ನಡೆದ ಶಿಕ್ಷಣ ಯೋಜನೆಯ ಬಗ್ಗೆ ವರದಿ.
  • ಸಮುದಾಯದ ಸದಸ್ಯರ ಮೂಲಕ ಕನ್ನಡ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸುವುದು.
  • ಹಂಪಿಯಲ್ಲಿ ಕಾರ್ಯಾಗಾರ ನಡೆಸುವುದು.
  • ಸಮುದಾಯ ಸದಸ್ಯರೊಂದಿಗೆ ಸೇರಿ ಮೈಸೂರು ಸಂಗೀತ, ನೃತ್ಯ ವಿಶ್ವವಿದ್ಯಾವಿದ್ಯಾನಿಲಯದವರೊಂದಿಗೆ ಚರ್ಚಿಸಿ ಕಾರ್ಯಾಗಾರ ನಡೆಸುವುದು
  • ತುಮಕೂರು ವಿಜ್ಞಾನ ಕೇಂದ್ರದವರೊಂದಿಗೆ ಚರ್ಚಿಸಿ ಅವರು ಒಪ್ಪಿದರೆ ಕಾರ್ಯಾಗಾರ ನಡೆಸುವುದು

(ಚರ್ಚೆಯ ಪೂರ್ಣ ವಿವರವನ್ನು ಮತ್ತು ಪ್ರಗತಿಯನ್ನು ಐ-ಆರ್‌‍-ಸಿ ಅಥವಾ ಸಮ್ಮಿಲನದಲ್ಲಿ ತಿಳಿಸುತ್ತೇನೆ.) --ಗೋಪಾಲಕೃಷ್ಣ (ಚರ್ಚೆ) ೦೯:೨೨, ೧ ಆಗಸ್ಟ್ ೨೦೧೭ (UTC)

@ಗೋಪಾಲಕೃಷ್ಣ, ಪುಸ್ತಕಗಳ ಮುಖಪುಟ ಚಿತ್ರಗಳು ಪ್ರಕಾಶಕರ ಬಳಿ ಇರುತ್ತವೆ. ಏಕೆಂದರೆ ಅವರು ಅವರ ಆನ್ ಲೈನ್ ತಾಣದಲ್ಲಿ ಹಾಕಿದ್ದಾರೆ. ಅದನ್ನೇ ಅವರಿಂದ ಪಡೆದುಕೊಳ್ಳಬಹುದು. ಹೊಸತಾಗಿ ಸ್ಕ್ಯಾನ್ ಮಾಡುವ ಕೆಲಸ ತಪ್ಪುತ್ತದೆ. ವಿಕಿಸೋರ್ಸಿನಲ್ಲಿ ಮೈಸೂರು ವಿ.ವಿ.ಲೇಖನಗಳ ಸರಿಯಾದ ವರ್ಗೀಕರಣ ಮಾಡಬೇಕಿದೆ. ವಿಶ್ವಕೋಶದ ಶೈಲಿಯಲ್ಲೇ ವರ್ಗೀಕರಣ ಮಾಡಿ ಡೌನ್ಲೋಡ್ ಮಾಡಿಕೊಳ್ಳಲೂ ಅನುಕೂಲ ಮಾಡುವಂತಾದರೆ ಒಳ್ಳೆಯದು. ಪ್ರತಿತಿಂಗಳ ಕೆಲಸದ ವರದಿಯನ್ನು ವಿವರವಾಗಿ ಬರೆಯುವುದನ್ನು, ಕೆಲಸದ ಪ್ರಗತಿ ತಿಳಿಸುವುದನ್ನು ತಪ್ಪಿಸಬೇಡಿ ಎಂದು ಕೋರಿಕೆ. --Vikashegde (ಚರ್ಚೆ) ೧೨:೧೯, ೧ ಆಗಸ್ಟ್ ೨೦೧೭ (UTC)

ಸರಿ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸುತ್ತೇನೆ. ಮೈಸೂರು ವಿ.ವಿ ಲೇಖನಗಳ ವರ್ಗೀಕರಣದ ಬಗ್ಗೆ ಅನಂತನ ಜೊತೆ ಕುಳಿತು ಚರ್ಚೆ ನಡೆಸಬೇಕಾಗಿದೆ. ಇವತ್ತು ಪವನಜರೊಂದಿಗೆ ಚರ್ಚಿಸಿದಾಗ ಅವರೂ ಈ ಬಗ್ಗೆ ತಿಳಿಸಿದ್ದರು. ಯಾಕೆಂದರೆ ಕೆಲವೊಂದು ಕಡತಗಳನ್ನು ಕಾಮನ್ಸ್‌ನಿಂದ ಅಳಿಸಲಾಗಿದೆ. ಅವುಗಳನ್ನು ಪುನಃ ಸೇರಿಸಬೇಕಾಗಿದೆ. ಅದರ ನಂತರ ಸರಿಯಾದ ವರ್ಗ ಮಾಡೋಣ ಎಂದು ನನಗನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೩:೧೦, ೧ ಆಗಸ್ಟ್ ೨೦೧೭ (UTC)
'ಅಕಾರಾದಿ' ವರ್ಗೀಕರಣ ಹಾಗೂ ಸಂಪುಟವಾರು ವರ್ಗೀಕರಣ ಮುಖ್ಯವಾದದ್ದು. ಮುದ್ರಿತ ಆವೃತ್ತಿಗಳನ್ನೊಮ್ಮೆ ನೋಡಿದರೆ ಅದರ ಚಿತ್ರಣ ದೊರೆತೀತು. ಸ್ವಲ್ಪ ನೀಟಾಗಿ ಪ್ಲ್ಯಾನ್ ಮಾಡಿಕೊಂಡು ಕೈ ಹಚ್ಚಬೇಕು. ಏಕೆಂದರೆ ೧೪೦೦೦ ಲೇಖನಗಳಿಯಾವೆ ಮತ್ತು ಅದು ಬೃಹತ್ ವಿಶ್ವಕೋಶ.--Vikashegde (ಚರ್ಚೆ) ೦೬:೫೧, ೨ ಆಗಸ್ಟ್ ೨೦೧೭ (UTC)
ಸರಿ. --ಗೋಪಾಲಕೃಷ್ಣ (ಚರ್ಚೆ) ೦೬:೫೩, ೨ ಆಗಸ್ಟ್ ೨೦೧೭ (UTC)

ಮಾಡಬೇಕಾದ ಕೆಲಸಗಳನ್ನು ಶಿಸ್ತುಬದ್ಧವಾಗಿ ಆಯೋಜಿಸಿ ಮಾಡುವುದು ಮುಖ್ಯವೆನಿಸುತ್ತದೆ. ಅಂದರೆ:

  1. ಪ್ರತಿತಿಂಗಳ ಕೆಲಸಗಳ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚಿಸಿ ನಿರ್ಧರಿಸುವುದರಲ್ಲಿಯೇ ಕೆಲವು ದಿನಗಳು ಕಳೆದು ಹೋಗುತ್ತವೆ. ಅದಾಗದಂತೆ ತಡೆಯಲು, ಈಗ ನಮಗೆ ತಿಳಿದಿರುವ ಎಲ್ಲಾ ಬಾಕಿ ಕೆಲಸಗಳ ಒಂದು ಪಟ್ಟಿಯನ್ನು ತಯಾರಿಸಬೇಕು. => ಇದನ್ನು "ಬಾಕಿ ಪಟ್ಟಿ"ಯೆಂದು ಕರೆಯಬಹುದು.
  2. ಈ ಪಟ್ಟಿಯಿಂದ ಆಯಾ ತಿಂಗಳಲ್ಲಿ ಹೆಚ್ಚು ಪ್ರಮುಖವಾದವನ್ನು ಆರಿಸಿ ಪಟ್ಟಿ ಮಾಡಬೇಕು. ಉದಾ: ಒಟ್ಟು ಕೆಲಸಗಳು ೧೦೦ ಇದ್ದರೆ, ಅದರಲ್ಲಿ ಈ ತಿಂಗಳಿಗೆ ೧೦ನ್ನು ಆರಿಸುವುದು. => ಇದನ್ನು "ತಿಂಗಳ ಪಟ್ಟಿ"ಯೆಂದು ಕರೆಯಬಹುದು.
  3. ತಿಂಗಳ ಕೊನೆಯಲ್ಲಿ ಆ ತಿಂಗಳ ಪಟ್ಟಿಯಲ್ಲಿ ಯಾವುದು ಮುಗಿದಿವೆ, ಯಾವುದು ಉಳಿದಿವೆ ಮುಂತಾದ ಚರ್ಚೆಗಳನ್ನು ಮಾಡಬೇಕು.
  4. ಸಪ್ರ (ಸಮುದಾಯ ಪ್ರತಿನಿಧಿ)ಯ ಕೆಲಸಗಳ ಪಟ್ಟಿಗಾಗಿ ಒಂದು ವಿಕಿ ಪುಟವನ್ನು ಸೃಷ್ಟಿಮಾಡಬೇಕು. ಅದರಲ್ಲಿ ಮೇಲೆ ತಿಳಿಸಿದ ರೀತಿ ಪಟ್ಟಿಗಳನ್ನು ಅಣಿಗೊಳಿಸಲು ಸಾಧ್ಯ. (ಅಥವ ಈ ರೀತಿಯ ಯೋಜನೆಗಳಿಗಾಗಿ ವಿಕಿಯವರದ್ದು ಬೇರೆ ತಂತ್ರಾಂಶವಿದ್ದರೆ, ಅದನ್ನೇ ಉಪಯೋಗಿಸಬಹುದು).
ಈ ಶಿಸ್ತನ್ನು ಅಭ್ಯಾಸ ಮಾಡಿದರೆ ಒಳ್ಳೆಯ ಫಲ ಸಿಗಬಹುದೆಂದು ನನ್ನ ಅನಿಸಿಕೆ

--ವಿಶ್ವನಾಥ/Vishwanatha (ಚರ್ಚೆ) ೧೮:೫೭, ೨ ಆಗಸ್ಟ್ ೨೦೧೭ (UTC)

ಸರಿ. ಒಂದು ಪುಟವನ್ನು ತಯಾರಿಸಿ, ನೀವು ಹೇಳಿದ ರೀತಿಯಲ್ಲಿಯೇ ಪಟ್ಟಿಯನ್ನು ಮಾಡುತ್ತೇನೆ. ಪ್ರತಿ ತಿಂಗಳು ಅರಳಿಕಟ್ಟೆಯಲ್ಲಿ ಚರ್ಚೆ ನಡೆಯುವುದು ಅವಶ್ಯ. ತಿಂಗಳ ಮೊದಲ ಐದು ದಿನವನ್ನು ಅರಳಿಕಟ್ಟೆಯ ಚರ್ಚೆಗೆ ಮೀಸಲಿಡಬಹುದೇ? ನಂತರ ಸದಸ್ಯರಿಗೆ ಯಾವುದಾದರೂ ಕೆಲಸವನ್ನು ಮಾಡಬಹುದು/ಮಾಡಬೇಕು ಎಂದು ಎನಿಸಿದರೆ ಕೆಲಸದ ಪುಟದಲ್ಲಿಯೇ ಸೇರಿಸಲಿ. ಚರ್ಚೆಯ ಕೊನೆಯ ದಿನ ಅಂದರೆ ಆರನೆಯ ದಿನ "ಬಾಕಿ ಪಟ್ಟಿ"ಯ ಪ್ರಮುಖ ಕೆಲಸಗಳ ಪಟ್ಟಿಯನ್ನು ಅರಳಿಕಟ್ಟೆಗೆ ಹಾಕುತ್ತೇನೆ. ತಿಂಗಳ ಕೊನೆಯಲ್ಲಿ ಅರಳಿಕಟ್ಟೆಯಲ್ಲಿ ಪ್ರಕಟಿಸಿದ ಪಟ್ಟಿಯ ಫಲಿತಾಂಶವನ್ನು, ಉಳಿದ ಇತರ ಕೆಲಸಗಳ ಪಟ್ಟಿಯನ್ನು ಹಾಕುತ್ತೇನೆ. ಅರಳಿಕಟ್ಟೆಯಲ್ಲಿ ಒಂದು ದಿನದಲ್ಲಿ ಚರ್ಚೆ ನಡೆಸಿ ಮುಗಿಸಿದರೆ ತುಂಬಾ ಉತ್ತಮ. ಆದರೆ ಕೆಲ ಸಕ್ರಿಯ ಬಳಕೆದಾರರು ಪ್ರತಿ ದಿನವೂ ಅರಳಿಕಟ್ಟೆಯನ್ನು ವೀಕ್ಷಿಸುತ್ತಿಲ್ಲ.--ಗೋಪಾಲಕೃಷ್ಣ (ಚರ್ಚೆ) ೦೬:೨೯, ೩ ಆಗಸ್ಟ್ ೨೦೧೭ (UTC)
ಆಗಬಹುದು--ವಿಶ್ವನಾಥ/Vishwanatha (ಚರ್ಚೆ) ೦೫:೧೯, ೪ ಆಗಸ್ಟ್ ೨೦೧೭ (UTC)
'ಬಾಕಿ ಪಟ್ಟಿ' ಅಂದ್ರೆ ಪೆಂಡಿಂಗ್ ಲಿಸ್ಟ್ ಆಗುತ್ತದೆ, ನಮಗೆ 'ಟು ಡು ಲಿಸ್ಟ್' ಬೇಕು  :) --Vikashegde (ಚರ್ಚೆ) ೦೭:೧೪, ೧೦ ಆಗಸ್ಟ್ ೨೦೧೭ (UTC)
ಎರಡೂ ಒಂದೇ (ಬಾಕಿ = pending = backlog). ಬಾಕಿ ಪಟ್ಟಿಯಲ್ಲಿ ಒಟ್ಟೆಲ್ಲ ಕೆಲಸಗಳಿರುತ್ತವೆ. "ತಿಂಗಳ ಪಟ್ಟಿಯಲ್ಲಿ" ಆಯಾ ತಿಂಗಳ ಕೆಲಸಗಳಿರುತ್ತವೆ. --ವಿಶ್ವನಾಥ/Vishwanatha (ಚರ್ಚೆ) ೧೮:೩೮, ೧೦ ಆಗಸ್ಟ್ ೨೦೧೭ (UTC)

Bot for welcoming new users[ಬದಲಾಯಿಸಿ]

@ಸದಸ್ಯ:Pavanaja, ಸದಸ್ಯ:Sangappadyamani I have requested bot for welcoming new user on phabricator view ticket it will be processed soon. ಫ್ಯಾಬ್ರಿಕೇಟರ್ ಟಿಕೆಟ್ ನಲ್ಲಿ ಹೊಸ ಬಳಕೆದಾರನನ್ನು ಸ್ವಾಗತಿಸಲು ನಾನು ಬಾಟ್ ಅನ್ನು ವಿನಂತಿಸಿದ್ದೇನೆ. ಇದು ಶೀಘ್ರದಲ್ಲೇ ಸಂಸ್ಕರಿಸಲ್ಪಡುತ್ತದೆ. ★ Anoop/ಅನೂಪ್ (Talk)(Edits) ೧೫:೨೦, ೩ ಆಗಸ್ಟ್ ೨೦೧೭ (UTC)

CIS-A2K Newsletter June 2017[ಬದಲಾಯಿಸಿ]

Hello,
CIS-A2K has published their newsletter for the months of June 2017. The edition includes details about these topics:

  • Wikidata Workshop: South India
  • Tallapaka Pada Sahityam is now on Wikisource
  • Thematic Edit-a-thon at Yashawantrao Chavan Institute of Science, Satara
  • Asian Athletics Championships 2017 Edit-a-thon
Please read the complete newsletter here.
If you want to subscribe/unsubscribe this newsletter, click here. --MediaWiki message delivery (ಚರ್ಚೆ) ೦೪:೦೧, ೫ ಆಗಸ್ಟ್ ೨೦೧೭ (UTC)

ವಿಲೀನಗೊಳಿಸುವಿಕೆ ಅಥವಾ ಅಳಿಸುವಿಕೆಗೆ ಹಾಕುವುದು[ಬದಲಾಯಿಸಿ]

ಒಂದೇ ವಿಷಯದ ಎರಡು ಲೇಖನಗಳಿದ್ದರೆ ಎರಡು ಲೇಖನಗಳನ್ನು ಹೋಲಿಸಿ ,ಮಾಹಿತಿಯನ್ನು ಉತ್ತಮ ಲೇಖನಕ್ಕೆ ಸೇರಿಸಿದ ನಂತರ

  1. ಲೇಖನಗಳನ್ನು ಮರ್ಜ ಮಾಡುವದು
  2. ಒಂದು ಲೇಖನದಿಂದ ಮಾಹಿತಿ ತೆಗೆದು ಮತ್ತೊಂದಕ್ಕೆ ಹಾಕಿ ,ಒಂದು ಲೇಖನದಲ್ಲಿ ಡಿಲೀಟ್ ಟೆಂಪ್ಲೆಟ್ ಹಾಕುವದು .

ಯಾವದು ಉತ್ತಮ Sangappadyamani (ಚರ್ಚೆ) ೦೩:೪೦, ೬ ಆಗಸ್ಟ್ ೨೦೧೭ (UTC)

ಮಾಹಿತಿ ತೆಗೆದು ಹಾಕಿ ಆ ಪುಟವನ್ನು ಪುನರ್ನಿರ್ದೇಶಿಸ ಬೇಕು 【ಪುಟದ ಹೆಸರು ಸರಿಯಾಗಿದ್ದರೆ ಉದ:ಬಿ.ಎಂ.ಶ್ರೀ /ಬಿ. ಎಂ. ಶ್ರೀಕಂಠಯ್ಯ】ಅಥವಾ ಹೆಸರು ತಪ್ಪಾಗಿದ್ದರೆ ನೀವು ಹೇಳಿದ ಹಾಗೆ ಅಳಿಸಲು ಹಾಕುವುದು ಸರಿ ಎಂದು ನನ್ನ ಅನಿಸಿಕೆ.★ Anoop/ಅನೂಪ್ (Talk)(Edits) ೦೪:೩೯, ೬ ಆಗಸ್ಟ್ ೨೦೧೭ (UTC)
ಅದು ಲೇಖನದ ಶಿರ್ಷಿಕೆ ಮತ್ತು ಸಂದರ್ಭಗಳನ್ನು ಹೊಂದಿಕೊಂಡಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಒಂದು ಲೇಖನದಲ್ಲಿ ಡಿಲೀಟ್ ಟೆಂಪ್ಲೆಟ್ ಹಾಕುವುದು ಉತ್ತಮ. ಎರಡು ಲೇಖನ ಖಂಡಿತ ಇರಕೂಡದು. ಕೆಲವು ಸಂದರ್ಭಗಳಲ್ಲಿ ಎರಡೂ ಶೀರ್ಷಿಕೆ ಇಟ್ಟುಕೊಂಡು ಒಂದರಲ್ಲಿ ರಿಡೈರೆಕ್ಟ್ ಹಾಕಬಹುದು.--ಪವನಜ (ಚರ್ಚೆ) ೦೪:೪೧, ೬ ಆಗಸ್ಟ್ ೨೦೧೭ (UTC)
ಧನ್ಯವಾದಗಳು Sangappadyamani (ಚರ್ಚೆ) ೦೫:೦೧, ೬ ಆಗಸ್ಟ್ ೨೦೧೭ (UTC)


ಈಗ ವಿಕಿಪೀಡಿಯ ದಲ್ಲಿ ಬ್ಲಾಗ್ ಮಾದರಿಗಳುಬರಲು ಶುರುವಾಗಿದೆ ಇದಕ್ಕೆ ಪರಿಹಾರವೇನು?--Lokesha kunchadka (ಚರ್ಚೆ) ೧೦:೫೨, ೧೪ ಆಗಸ್ಟ್ ೨೦೧೭ (UTC)
ಉದಾಹರಣೆಗಳನ್ನು ನೀಡಿ. ಅಂತಹ ಲೇಖನಗಳು ಕಂಡುಬಂದಾಗ ಆ ಲೇಖನದಲ್ಲೇ ಸೂಕ್ತ ಟೆಂಪ್ಲೇಟು ಸೇರಿಸಿ ಅಥವಾ ಅಳಿಸಲು ಹಾಕಿ--ಪವನಜ (ಚರ್ಚೆ) ೧೪:೧೪, ೧೪ ಆಗಸ್ಟ್ ೨೦೧೭ (UTC)


ಬಳಕೆದಾರರ ಅಧಿಸೂಚನೆಗಳು[ಬದಲಾಯಿಸಿ]

ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಬಳಕೆದಾರನ/ಳ ಗಮನ ಸೆಳೆಯಲು ಅವನ(ಳ)ನ್ನು "ಟ್ಯಾಗ್" ಮಾಡುವ ಅವಕಾಶವಿದೆ. ಹಾಗೆಯೇ ವಿಕಿಪೀಡಿಯಾದಲ್ಲೂ ಅವಕಾಶವಿದೆಯೇ? ಇಲ್ಲದಿದ್ದರೆ ಇದರ ಕೋರಿಕೆ ಸಲ್ಲಿಸಬಹುದೆ?
ಇದರ ಉಪಯೋಗಗಳು:

  • ಲೇಖನಗಳಲ್ಲಿ ಯಾವುದೇ ಸದಸ್ಯನ/ಳ ಗಮನ ಸೆಳೆಯಲು ಬಳಸಬಹುದು. ಇದರಿಂದ ಸದಸ್ಯರಿಂದ ವೇಗವಾಗಿ ಪ್ರತಿಕ್ರಿಯೆ ಸಿಗುತ್ತದೆ.
  • ಸದಸ್ಯರಿಗೆ ತಿಳಿಯದೆಯೇ ಅವರನ್ನು ಟ್ಯಾಗ್ ಮಾಡಿದ್ದರೆ, ಅಧಿಸೂಚನೆಗಳ ಮೂಲಕ ಅವರಿಗೆ ತಿಳಿಯುತ್ತದೆ.

--ವಿಶ್ವನಾಥ/Vishwanatha (ಚರ್ಚೆ) ೦೭:೩೬, ೧೩ ಆಗಸ್ಟ್ ೨೦೧೭ (UTC)

@ ವಿಶ್ವನಾಥ/Vishwanatha, ನೀವು [[ಸದಸ್ಯ:<ಬಳಕೆದಾರ ಹೆಸರು>]] ಬಳಸುವ ಮೂಲಕ "ಟ್ಯಾಗ್" ಮಾಡುವ ವೈಶಿಷ್ಟ್ಯವನ್ನು ವಿಕಿಪಿಡಿಯಾದಲ್ಲಿ ಉಪಯೋಗಿಸಬಹುದು. ★ Anoop/ಅನೂಪ್ (Talk)(Edits) ೧೦:೧೫, ೧೩ ಆಗಸ್ಟ್ ೨೦೧೭ (UTC)
{{ping|pavanaja}} ಎಂದು ಬಳಸಿ--ಪವನಜ (ಚರ್ಚೆ) ೦೧:೩೬, ೧೪ ಆಗಸ್ಟ್ ೨೦೧೭ (UTC)
ಧನ್ಯವಾದಗಳು. ಸೂಚನೆ ಕೆಲಸ ಮಾಡುತ್ತದೆ. ಇದು ಕೇವಲ ಕೊಂಡಿಗಷ್ಟೆ ಎಂದು ತಿಳಿದಿದ್ದೆ.--ವಿಶ್ವನಾಥ/Vishwanatha (ಚರ್ಚೆ) ೧೦:೨೨, ೧೫ ಆಗಸ್ಟ್ ೨೦೧೭ (UTC)

CIS-A2K Newsletter July 2017[ಬದಲಾಯಿಸಿ]

Hello,
CIS-A2K has published their newsletter for the months of July 2017. The edition includes details about these topics:

  • Telugu Wikisource Workshop
  • Marathi Wikipedia Workshop in Sangli, Maharashtra
  • Tallapaka Pada Sahityam is now on Wikisource
  • Wikipedia Workshop on Template Creation and Modification Conducted in Bengaluru

Please read the complete newsletter here.
If you want to subscribe/unsubscribe this newsletter, click here. --MediaWiki message delivery (ಚರ್ಚೆ) ೦೩:೫೮, ೧೭ ಆಗಸ್ಟ್ ೨೦೧೭ (UTC)

ಆಗಸ್ಟ್ ತಿಂಗಳಿನಲ್ಲಿ IRC ನಡೆಸುವ ಬಗ್ಗೆ[ಬದಲಾಯಿಸಿ]

ಕಳೆದ ತಿಂಗಳು ಜುಲೈ ೩೦ ೨೦೧೭ನೇ ಭಾನುವಾರದಂದು ಕನ್ನಡ ವಿಕಿಪೀಡಿಯದ ಟೆಂಪ್ಲೇಟು, ಇನ್ಫೋಬಾಕ್ಸ್‌ಗಳ ಕಾರ್ಯಾಗಾರ ನಡೆದಿತ್ತು. ಆ ಕಾರ್ಯಾಗಾರದಲ್ಲಿ ಒಂದು ತಿಂಗಳ ನಂತರ ಮುಂದುವರಿದ ಭಾಗವಾಗಿ ಮತ್ತೊಂದು ಕಾರ್ಯಾಗಾರವನ್ನು ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಈ ಒಂದು ತಿಂಗಳ ಅಂತರದಲ್ಲಿ ಕಲಿತದ್ದನ್ನು ಅಭ್ಯಸಿಸುವುದು, ಅಭ್ಯಸಿಸುವಾಗ ಎದುರಾದ ತೊಂದರೆಗಳ ಬಗ್ಗೆ ಚರ್ಚಿಸಲು, ಪರಿಹಾರಗಳನ್ನು ಕಂಡುಕೊಳ್ಳಲು ಒಂದು IRC (Internet Relay Chat) ಅನ್ನು ನಡೆಸಬಹುದು ಎಂಬುದಾಗಿ ಸಲಹೆಗಳು ಬಂದಿದ್ದವು. ಹಾಗಾಗಿ ಇದೇ ಬರುವ ಆಗಸ್ಟ್ ೨೮ ಸೋಮವಾರದಂದು IRC ಅನ್ನು ನಡೆಸಬಹುದೇ? ಈ ಬಗ್ಗೆ ಸಮುದಾಯದವರು ತಮ್ಮ ಅಭಿಪ್ರಾಯ ತಿಳಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೦೩, ೧೮ ಆಗಸ್ಟ್ ೨೦೧೭ (UTC)

ಅಂದರೆ ಈ ಐಆರ್‍ಸಿ ಟೆಂಪ್ಲೇಟು ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಮಾತ್ರ ಉಪಯುಕ್ತವೇ? ಹಾಗಿದ್ದಲ್ಲಿ ಅವರಲ್ಲಿ ಮಾತ್ರವೇ ವಿಚಾರಿಸಬಹುದಿತ್ತಲ್ಲವೇ?--ಪವನಜ (ಚರ್ಚೆ) ೧೧:೫೨, ೧೮ ಆಗಸ್ಟ್ ೨೦೧೭ (UTC)
ಅವರಿಗೆ ಮಾತ್ರ ಉಪಯುಕ್ತ ಎಂದಲ್ಲ. ಎಲ್ಲರಿಗೂ ಉಪಯುಕ್ತ. ಟೆಂಪ್ಲೇಟು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಾತ್ರ ಭಾಗವಹಿಸಬೇಕೆಂದಿಲ್ಲ. ಕೆಲವರಿಗೆ ಆಸಕ್ತಿ ಇದ್ದರೂ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅವರೂ IRCಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಆಶಯ. ಅದಲ್ಲದೇ ಇತರ ಸದಸ್ಯರೂ ಟೆಂಪ್ಲೇಟುಗಳನ್ನು ಬಳಸುವಾಗ ಕೆಲವು ತೊಂದರೆಗಳನ್ನು ಅನುಭವಿಸಿರುತ್ತಾರೆ. ಅವರೂ ಭಾಗವಹಿಸುತ್ತಾರೆ ಎಂಬ ಆಶಯ. --ಗೋಪಾಲಕೃಷ್ಣ (ಚರ್ಚೆ) ೧೨:೩೪, ೧೮ ಆಗಸ್ಟ್ ೨೦೧೭ (UTC)


ಭಾಗವಹಿಸಲು ಈ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ. IRC ದಿನಾಂಕ ೨೮ ಆಗಸ್ಟ್ ೨೦೧೭ನೇ ಸೋಮವಾರ ರಾತ್ರಿ ಭಾರತೀಯ ಕಾಲಮಾನ ೮:೩೦ಕ್ಕೆ. --ಗೋಪಾಲಕೃಷ್ಣ (ಚರ್ಚೆ) ೦೮:೫೭, ೨೧ ಆಗಸ್ಟ್ ೨೦೧೭ (UTC)

ತುಳು ವಿಕಿಪೀಡಿಯ ಪ್ರಥಮ ವರ್ಷಾಚರಣೆ[ಬದಲಾಯಿಸಿ]

ಕರಾವಳಿ ವಿಕಿಮೀಡಿಯನ್ಸ್
ಕರಾವಳಿ ವಿಕಿಮೀಡಿಯನ್ಸ್

ಆಗಸ್ಟ್ ೦೬, ೨೦೧೭ಕ್ಕೆ ತುಳು ವಿಕಿಪೀಡಿಯ ಜೀವಂತವಾಗಿ ಒಂದು ವರ್ಷ ತುಂಬಿತು. ಈ ಸಂದರ್ಭದಲ್ಲಿ ತುಳು ವಿಕಿಪೀಡಿಯದ ಪ್ರಥಮ ವರ್ಷಾಚರಣೆ, ಕನ್ನಡ ಮತ್ತು ತುಳು ವಿಕಿಪೀಡಿಯ ಸಂಪಾದನೋತ್ಸವಗಳನ್ನು ಮಂಗಳೂರಿನಲ್ಲಿ ಸಪ್ಟಂಬರ್ ೦೨-೦೩, ೨೦೧೭ರಂದು ಹಮ್ಮಿಕೊಳ್ಳಲಾಗಿದೆ. ಇದನ್ನು ನಡೆಸಿಕೊಡುವವರು ಕರಾವಳಿ ವಿಕಿಮೀಡಿಯನ್ಸ್. ಹೆಚ್ಚಿನ ವಿವರ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ.--ಪವನಜ (ಚರ್ಚೆ) ೧೪:೩೬, ೧೮ ಆಗಸ್ಟ್ ೨೦೧೭ (UTC)


೨೦೧೭ ಸೆಪ್ಟಂಬರ್ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆ[ಬದಲಾಯಿಸಿ]

ಸೆಪ್ಟಂಬರ್ ತಿಂಗಳಲ್ಲಿ ವಿಕಿಪೀಡಿಯ ಸಾಧಕರಾಗಿ ಯಾರನ್ನು ಆಯ್ಕೆ ಮಾಡಬಹುದು ಎಂದು ಸಮುದಾಯ ಸದಸ್ಯರು ತಿಳಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೯:೨೬, ೨೨ ಆಗಸ್ಟ್ ೨೦೧೭ (UTC)

  1. ನಾನು ಈ ತಿಂಗಳ ಸಾಧಕರಾಗಿ ಪವನಜ ರವರನ್ನು ಸೂಚಿಸುತ್ತೆನೆ. ★ Anoop/ಅನೂಪ್ (Talk)(Edits) ೧೧:೩೭, ೨೨ ಆಗಸ್ಟ್ ೨೦೧೭ (UTC).
  2. ಸೆಪ್ಟಂಬರ್ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆಗೆ ಪವನಜರವರನ್ನು ಸೂಚಿಸುತಿದ್ದೇನೆ. Sangappadyamani (ಚರ್ಚೆ) ೧೪:೦೮, ೨೭ ಆಗಸ್ಟ್ ೨೦೧೭ (UTC).
  3. ಈ ತಿಂಗಳ ಸಾಧಕರಾಗಿ ಪವನಜ ರವರನ್ನು ಸೂಚಿಸುತ್ತೇನೆ.--Dhanalakshmi .K. T (ಚರ್ಚೆ) ೦೮:೩೦, ೨೮ ಆಗಸ್ಟ್ ೨೦೧೭ (UTC)
  4. ಪವನಜರ ಹೆಸರನ್ನು ಅನುಮೋದಿಸುತ್ತೇನೆ --Vikashegde (ಚರ್ಚೆ) ೧೩:೪೩, ೨೮ ಆಗಸ್ಟ್ ೨೦೧೭ (UTC)
  5. ನನಗೆ ಪವನಜರು ತಿಂಗಳ ಸಾಧಕರಾಗುವುದು ತುಂಬ ಸಂತೋಷ. ಭಾರತೀಯ ಭಾಷೆಯ ಬಗೆಗೆ ಅದರಲ್ಲೂ ಕನ್ನಡದ ಬಗೆಗೆ ತುಂಬ ಆಸಕ್ತಿಯಿರುವ ಪವನಜರು ಈ ಮೊದಲೇ ತಿಂಗಳ ಸಾಧಕರು ಆಗದಿರುವುದು ಆಶ್ಚರ್ಯವೇ!!! ಹಾಗಾಗಿ ನನಗೆ ಪವನಜರನ್ನು ಸೆಪ್ಟೆಂಬರ್ ತಿಂಗಳ ಸಾಧಕರೆಂದು ಗುರುತಿಸಿದರೆ ನೆಮ್ಮದಿಯಾಗುತ್ತದೆ.ವಿಶ್ವನಾಥ ಬದಿಕಾನ ೧೪:೫೪, ೨೮ ಆಗಸ್ಟ್ ೨೦೧೭ (UTC)
  6. ಸಂತೋಷ, ಪವನಜ ರು ಈ ಪುಟದಲ್ಲಿ ಬಹಳ ಹಿಂದೆಯೇ ಪರಿಚಯಿಸಿದ್ದರು ಅಂದುಕೊಂಡಿದ್ದೆ. ಸಕ್ರಿಯವಾಗಿ ಪಾಲು ಪಡೆಯುವ ಮೇಷ್ಟ್ರು ಈ ಸಾಧಕರ ಪುಟದಲ್ಲಿ ನೋಡುವುದು ತುಂಬಾ ಖುಷಿ. --Bharathesha Alasandemajalu (ಚರ್ಚೆ) ೦೩:೦೨, ೨೯ ಆಗಸ್ಟ್ ೨೦೧೭ (UTC)
  • ಈ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆಯಲ್ಲಿ ಭಾಗವಹಿಸಿದ ಎಲ್ಲಾ ಸಂಪಾದಕರಿಗೂ ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೨:೨೧, ೨೯ ಆಗಸ್ಟ್ ೨೦೧೭ (UTC)

ಯಾರಾದರೂ ನಿಮ್ಮ ಖಾತೆಗೆ ಲಾಗಿನ್ ಮಾಡಲು ಪ್ರಯತ್ನಿಸಿದಾಗ ಬರುವ ಅಧಿಸೂಚನೆ[ಬದಲಾಯಿಸಿ]

ಸಮುದಾಯ ಟೆಕ್ ತಂಡ ಈ ವಾರ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದೆ. ಯಾರಾದರೂ ನಿಮ್ಮ ಖಾತೆಗೆ ಲಾಗಿನ್ ಆಗಲು ವಿಫಲವಾದಾಗ ಅದು ನಿಮಗೆ ತಿಳಿಸುತ್ತದೆ, ಅದು ಬೇರೊಬ್ಬರು ಅದನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ ಎಂದು ಅರ್ಥೈಸಬಹುದು. 2016 ಸಮುದಾಯ ಬಯಕೆಪಟ್ಟಿಗೆ ಸಮೀಕ್ಷೆಯಲ್ಲಿ ಈ ಯೋಜನೆಯು #7 ಶ್ರೇಣಿಯನ್ನು ಪಡೆದಿದೆ.

ಡೀಫಾಲ್ಟ್ ಆಗಿ ವಿಫಲವಾದ ಲಾಗಿನ್ ಬಗ್ಗೆ ನೀವು ಅಧಿಸೂಚನೆಯನ್ನು ಪಡೆಯುತ್ತೀರಿ. ಇದು ಈ ರೀತಿ ಕಾರ್ಯನಿರ್ವಹಿಸುತ್ತದೆ:

ಇತ್ತೀಚೆಗೆ ನಿಮ್ಮ ಖಾತೆಗೆ ಲಾಗ್ ಇನ್ ಮಾಡದ ಸಾಧನ ಅಥವಾ IP ವಿಳಾಸದಿಂದ ವಿಫಲವಾದ ಪ್ರಯತ್ನದ ನಂತರ ನೀವು ಅಧಿಸೂಚನೆಯನ್ನು ಪಡೆಯುತ್ತೀರಿ. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿದ ಸಾಧನ ಅಥವಾ IP ವಿಳಾಸದಿಂದ ಐದು ವಿಫಲವಾದ ಪ್ರಯತ್ನಗಳ ನಂತರ ನೀವು ಅಧಿಸೂಚನೆಯನ್ನು ಪಡೆಯುತ್ತೀರಿ. ನಿಮ್ಮ ಪ್ರಾಶಸ್ತ್ಯಗಳಲ್ಲಿ/preference ನೀವು ಇಮೇಲ್ ಅಧಿಸೂಚನೆಗಳನ್ನು ಆನ್ ಮಾಡಬಹುದು.

ನೀವು ಬಯಸಿದರೆ, ಹೊಸ ಸಾಧನ ಅಥವಾ IP ವಿಳಾಸದಿಂದ ಯಶಸ್ವಿ ಲಾಗಿನ್ ಪ್ರಯತ್ನವಿದ್ದಾಗ ನೀವು ಇಮೇಲ್ ಅಧಿಸೂಚನೆಗಳನ್ನು ಆನ್ ಮಾಡಬಹುದು. ಇದನ್ನು ಪೂರ್ವನಿಯೋಜಿತವಾಗಿ ಆಫ್ ಮಾಡಲಾಗಿದೆ, ಆದರೆ ನಿರ್ವಾಹಕರು ಅಥವಾ ಇತರ ಕಾರ್ಯಕರ್ತರು ತಮ್ಮ ಬಳಕೆದಾರರ ಹಕ್ಕುಗಳನ್ನು ದುರ್ಬಳಕೆ ಮಾಡಬಹುದೆಂದು ಕಾಳಜಿವಹಿಸುವವರಿಗೆ ಇದು ಉಪಯುಕ್ತವಾಗಿದೆ. ಹೊಸ ಸಾಧನ ಅಥವಾ IP ವಿಳಾಸದಿಂದ ನೀವು ಲಾಗ್ ಇನ್ ಮಾಡಿದ ಪ್ರತಿ ಬಾರಿಯೂ ಅಧಿಸೂಚನೆಯನ್ನು ನೀವು ಪಡೆಯುತ್ತೀರಿ ಎಂದರ್ಥ.

ಈ ವೈಶಿಷ್ಟ್ಯವು ಈ ವಾರ ಎಲ್ಲಾ ಯೋಜನೆಗಳಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ - ಬಹುತೇಕ ವಿಕಿಗಳು ಬುಧವಾರ ಅದನ್ನು ಪಡೆಯುತ್ತವೆ, ಮತ್ತು ದೊಡ್ಡ ವಿಕಿಪೀಡಿಯಾಗಳು ಇದನ್ನು ಗುರುವಾರ ನೋಡಬಹುದು.

ಈ ವೈಶಿಷ್ಟ್ಯಕ್ಕಾಗಿ ಆಧಾರವಾಗಿರುವ ವಿಸ್ತರಣೆಯನ್ನು ಬರೆಯುವಲ್ಲಿ ಅವರ ಎಲ್ಲಾ ಕೆಲಸಕ್ಕಾಗಿ ಬ್ರಿಯಾನ್ ವೋಲ್ಫ್ ಗೆ ಧನ್ಯವಾದ ಸಲ್ಲಿಸಲು ನಾವು ಈ ಅವಕಾಶವನ್ನು ತೆಗೆದುಕೊಳ್ಳಲು ಬಯಸುತ್ತೇವೆ.

ಮೆಟಾದಲ್ಲಿ ಪ್ರಾಜೆಕ್ಟ್ ಪುಟದ ವೈಶಿಷ್ಟ್ಯದ ಕುರಿತು ಹೆಚ್ಚಿನ ಮಾಹಿತಿ ಇದೆ, ಮತ್ತು ದಯವಿಟ್ಟು ಚರ್ಚಾ ಪುಟದಲ್ಲಿ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಮುಕ್ತವಾಗಿರಿ. /Johan (WMF) (ಚರ್ಚೆ) ೦೫:೧೨, ೨೫ ಆಗಸ್ಟ್ ೨೦೧೭ (UTC)

Wiki Loves Monuments 2017 in India[ಬದಲಾಯಿಸಿ]

Greetings from Wikimedia India! Wiki Loves Monuments in India is an upcoming photo competition, part of the bigger Wiki Loves Monuments 2017. We welcome you all to be part of it, as participants and as volunteers. The aim of the contest is to ask the general public—readers and users of Wikipedia, photographers, hobbyists, etc.—to take pictures of cultural heritage monuments and upload them to Wikimedia Commons for use on Wikipedia and its sister projects. This in turn would lead to creation of new articles along with development of new articles in Indian languages.

We seek your support to make this event a grand success ! Please sign up here -- Suyash Dwivedi, sent using MediaWiki message delivery (ಚರ್ಚೆ) ೧೧:೫೦, ೨೫ ಆಗಸ್ಟ್ ೨೦೧೭ (UTC)

Wikidata Workshops in India in September 2017[ಬದಲಾಯಿಸಿ]

Apologies for writing the message in English. Please feel free to translate the message to your language.

Hello,
We are glad to inform you that Asaf Bartov will visit India in the month of September, and will be conducting local workshops on Wikidata and other recent technologies and tools. You might be aware that Asaf is a promoter and trainer of Wikidata, and before and during this year's Wikimania, Indic Wikimedians from two communities requested Asaf to visit India to conduct more Wikidata workshops.
The workshop would include extensive Wikidata training, from absolute beginner level through querying and embedding Wikidata in Wikipedia (incl. infoboxes), as well as a general tools demonstration, including Quarry. Additionally, time would be made for general Q&A ("ask me anything") to let people use the opportunity to directly ask a WMF representative anything that they have on their mind.
Asaf would come to India on 29 August. Please see the detailed plan here. Please contact here or write to Asaf if you have any question. Regards. -- Titodutta, sent using MediaWiki message delivery (ಚರ್ಚೆ) ೧೩:೩೭, ೨೫ ಆಗಸ್ಟ್ ೨೦೧೭ (UTC)

ಈ ಕಾರ್ಯಕ್ರಮ ಕನ್ನಡ, ತುಳು, ಕೊಂಕಣಿ ವಿಕಿಪೀಡಿಯ ಸಮುದಾಯದವರಿಗಾಗಿ ದಿನಾಂಕ ೨ ಮತ್ತು ೩ರ ಸಪ್ಟೆಂಬರ್ ೨೦೧೭ರ ಶನಿವಾರ ಮತ್ತು ಆದಿತ್ಯವಾರದಂದು ತುಳು ವಿಕಿಪೀಡಿಯ ವರ್ಷಾಚರಣೆಯೊಂದಿಗೆ ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ಜರಗಲಿದೆ. ಇದರ ಜೊತೆ ವಿಕಿಡೇಟಾ ಕಾರ್ಯಾಗಾರವೂ ಜರಗಲಿದೆ. ಇದನ್ನು ನಡೆಸಿಕೊಡಲು ವಿಕಿಮೀಡಿಯ ಫೌಂಡೇಷನ್‌ನ Asaf ಆಗಮಿಸುತ್ತಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಪ್ರಯಾಣಭತ್ಯೆ, ವಸತಿಯನ್ನು ಸಿಐಎಸ್-ಎ೨ಕೆ ಒದಗಿಸುತ್ತದೆ. ಆಸಕ್ತಿ ಹೊಂದಿರುವ ಸಮುದಾಯ ಸದಸ್ಯರು ಈ ಕಾರ್ಯಕ್ರಮ ಪುಟದಲ್ಲಿ ನೊಂದಾಯಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೭:೧೬, ೨೬ ಆಗಸ್ಟ್ ೨೦೧೭ (UTC)

requesting importer rights/ಆಮದುದಾರ ಹಕ್ಕು ಕೋರಿಕೆ[ಬದಲಾಯಿಸಿ]

ಈ ವಿಕಿಗೆ ಆಮದು ಮಾಡುವ ಹಕ್ಕುಗಳನ್ನು ನಾನು ವಿನಂತಿಸ ಬಯಸುತ್ತೇನೆ. (i would like request https://kn.wikipedia.org/wiki/Special:ListUsers?group=import importing rights on this wiki as discussed on IRC) . ★ Anoop/ಅನೂಪ್ (Talk)(Edits) ೧೬:೧೪, ೨೮ ಆಗಸ್ಟ್ ೨೦೧೭ (UTC)

ಸಮ್ಮತಿ /Agree[ಬದಲಾಯಿಸಿ]

  1. checkY--ಪವನಜ (ಚರ್ಚೆ) ೧೬:೪೪, ೨೮ ಆಗಸ್ಟ್ ೨೦೧೭ (UTC)
  2. checkY --ಗೋಪಾಲಕೃಷ್ಣ (ಚರ್ಚೆ) ೦೫:೫೨, ೨೯ ಆಗಸ್ಟ್ ೨೦೧೭ (UTC)
  3. checkY--ಅನಂತ್ (ಚರ್ಚೆ) ೦೬:೧೯, ೩೦ ಆಗಸ್ಟ್ ೨೦೧೭ (UTC)
  4. checkY--Vikashegde (ಚರ್ಚೆ) ೦೬:೫೬, ೩೦ ಆಗಸ್ಟ್ ೨೦೧೭ (UTC)
  5. checkY--Lokesha kunchadka (ಚರ್ಚೆ) ೦೨:೨೯, ೩೧ ಆಗಸ್ಟ್ ೨೦೧೭ (UTC)
  6. checkY--Vishwanatha Badikana(ಚರ್ಚೆ) ೧೬:೪೬, ೩೧ ಆಗಸ್ಟ್ ೨೦೧೭ (UTC)

ಸದಸ್ಯ:AnoopZ/1


ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ ಬಗ್ಗೆ[ಬದಲಾಯಿಸಿ]

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಲ್ಲಿ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್ ಮತ್ತು ವಿಕಿಪೀಡಿಯಕ್ಕೆ ಲೇಖನ ಸೇರಿಸುತ್ತಾರೆ ಎಂಬುದಾಗಿ ೨೦೧೬ ರ ಯೋಜನೆ ಪುಟದಲ್ಲಿದೆ. ಆದರೆ ಆ ಪುಟದಲ್ಲಿ ನೀಡಿರುವ ಯಾವ ಸದಸ್ಯ ಹೆಸರೂ ಸರಿಯಿಲ್ಲ. ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಇಂತಹ ಹೆಸರಿನ ಸದಸ್ಯ ಇಲ್ಲ ಎಂಬ ಸಂದೇಶ ಬರುತ್ತದೆ. ಇಷ್ಟು ವಿದ್ಯಾರ್ಥಿಗಳು ಏನು ಮಾಡಿದರು, ಯಾವ ಯಾವ ಲೇಖನ ಹಾಕಿದರು, ಅವುಗಳು ಎಲ್ಲಿವೆ, ಅವುಗಳ ಗುಣಮಟ್ಟ ಏನು, ಇತ್ಯಾದಿಗಳನ್ನು ಕನ್ನಡ ವಿಕಿ ಸಮುದಾಯಕ್ಕೆ ಕ್ರೈಸ್ಟ್ ವಿ.ವಿ. ಪ್ರಾಧ್ಯಾಪಕರಾಗಲೀ, ಸಿ.ಐ.ಎಸ್.ನವರಾಗಲೀ ತಿಳಿಸಿಲ್ಲ. ಈ ೨೦೧೭-೧೮ ಶೈಕ್ಷಣಿಕ ವರ್ಷದಲ್ಲೂ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಪುಟದಲ್ಲಿ ಲೇಖನ ಬರೆಯಲು ಪ್ರಾರಂಭಿಸಿದ್ದಾರೆ ಎಂಬುದು ಇತ್ತೀಚಿನ ಸಂಪಾದನೆಗಳನ್ನು ನೋಡಿದಾಗ ತಿಳಿಯುತ್ತದೆ. ಆದರೆ ಅವರ ಬಗ್ಗೆ ಯಾವುದೇ ವಿವರಣೆ ನೀಡುವ ಯೋಜನಾ ಪುಟ ಎಲ್ಲೂ ಇಲ್ಲ. ಅವರೆಲ್ಲ ಕ್ರೈಸ್ಟ್ ವಿ.ವಿ. ವಿದ್ಯಾರ್ಥಿಗಳು ಎಂದು ನಾವು ಊಹಿಸಬೇಕಷ್ಟೆ. ೨೦೧೬-೧೭ ಶೈಕ್ಷಣಿಕ ವರ್ಷದಲ್ಲಿ ಇದೇ ರೀತಿ ಸುಮಾರು ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಪುಟದಲ್ಲಿ ಬರೆದಿದ್ದರು. ಆದರೆ ಯೋಜನಾ ಪುಟದಲ್ಲಿ ಆ ಲೇಖನಗಳಿಗೆ ಕೊಂಡಿ ಇಲ್ಲ. ಹಾಗೆ ಬರೆದ ಲೇಖನಗಳಲ್ಲಿ ಕೊನೆಗೆ ಎಷ್ಟು ಲೇಖನಗಳು ವಿಕಿಪೀಡಿಯಕ್ಕೆ ಸೇರ್ಪಡೆಯಾದವು, ಎಷ್ಟು ಲೇಖನಗಳು ಪ್ರಯೋಗಪುಟದಲ್ಲೇ ಉಳಿದವು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಟ್ಟಿ ನೀಡಿಲ್ಲವಾದ ಕಾರಣ ಯಾವುದೇ ಲೇಖನಗಳು ಕೊನೆಗೂ ವಿಕಿಪೀಡಿಯಕ್ಕೆ ಬಂದಿಲ್ಲ (Main space) ಎಂದು ತೀರ್ಮಾನಿಸಬಹುದು. ಈ ರೀತಿ ಆದಲ್ಲಿ ಏನು ಪ್ರಯೋಜನ? ಸಿ.ಐಎ.ಸ್.ನವರು ಒಬ್ಬ ಉದ್ಯೋಗಿಯನ್ನು ಕ್ರೈಸ್ಟ್ ವಿ.ವಿ. ಕೆಲಸಕ್ಕೆಂದೇ ನೇಮಿಸಿದ್ದಾರೆ ಎಂದು ತಿಳಿದುಬಂದಿದೆ. ಲೇಖನಗಳು ಬರುತ್ತಿಲ್ಲವಾದಲ್ಲಿ ಒಬ್ಬ ವ್ಯಕ್ತಿಗೆ ಸಂಬಳ ನೀಡಿ ಏನು ಪ್ರಯೋಜನ? ೨೦೧೭-೧೮ ಶೈಕ್ಷಣಿಕ ವರ್ಷದಲ್ಲಿ ಏನು ನಡೆಯುತ್ತಿದೆ ಗೊತ್ತಿಲ್ಲ. ಹಲವು ಮಂದಿ ತಮ್ಮ ತಮ್ಮ ಪ್ರಯೋಗಪುಟದಲ್ಲಿ ಬರೆಯುತ್ತಿದ್ದಾರೆ. ಅವರೆಲ್ಲ ವಿದ್ಯಾರ್ಥಿಗಳು ಎಂದು ಊಹಿಸಬಹುದು. ಹೆಚ್ಚಿನ ಲೇಖನಗಳಿಗೆ ವಿಕಿಪೀಡಿಯಕ್ಕೆ ಸೇರ್ಪಡೆಯಾಗುವ ಗುಣಮಟ್ಟವೂ ಇಲ್ಲ. ಅಂತಿಮವಾಗಿ ವಿಕಿಪೀಡಿಯಕ್ಕೆ ಲೇಖನಗಳು ಸೇರ್ಪಡೆಯಾಗುವುದಿಲ್ಲ, ಕೇವಲ ಪ್ರಯೋಗಪುಟದಲ್ಲೇ ಉಳಿಯುತ್ತವೆ ಎಂದಾದಲ್ಲಿ, ಕ್ರೈಸ್ಟ್ ವಿ.ವಿ.ಯವರು ತಮ್ಮ ಸರ್ವರ್‍ನಲ್ಲೇ ಮೀಡಿಯಾವಿಕಿ ಸರ್ವರ್ ಹಾಕಿಕೊಂಡು ವಿದ್ಯಾರ್ಥಿಗಳಿಗೆ ಅದರಲ್ಲಿ ಬರೆಯಲು ಹೇಳಬಹುದಲ್ಲ?--ಪವನಜ (ಚರ್ಚೆ) ೦೭:೧೮, ೨೯ ಆಗಸ್ಟ್ ೨೦೧೭ (UTC)

೨೦೧೭-೧೮ರ ಯೋಜನಾ ಪುಟ ಇಲ್ಲಿದೆ. ಅದೇ ಪುಟದಲ್ಲಿ ವಿದ್ಯಾರ್ಥಿಗಳ ಬಳಕೆದಾರರ ಹೆಸರುಗಳೂ ಇವೆ. ಕೆಲವು ಹೆಸರುಗಳು ಇಲ್ಲ. ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ.
೨೦೧೬-೧೭ರ ವರದಿ ಪುಟ ಇಲ್ಲಿದೆ. ಈ ಪುಟದಲ್ಲಿ ಹೆಚ್ಚಿನ ವರದಿಗಳು ಇವೆ. ಸದ್ಯ ಕೆಲವು ಲೇಖನಗಳು ವಿದ್ಯಾರ್ಥಿಗಳ ಪ್ರಯೋಗಪುಟದಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾನಿಲದ ವಿದ್ಯಾರ್ಥಿಗಳು ಇಂಟರ್ನ್ಶಿಪ್‌ಮಾಡಲಿದ್ದಾರೆ. ಆ ಸಮಯದಲ್ಲಿ ಅವರಿಗೆ ಈ ಕೆಲಸವನ್ನು ನಿಯೋಜಿಸುವ ಯೋಜನೆ ಇದೆ. ಇದಕ್ಕೆ ಸಮುದಾಯದವರ ಒಪ್ಪಿಗೆ ಇದೆ ಎಂದು ಆಶಿಸುತ್ತೇವೆ. --ಅನಂತ್ (ಚರ್ಚೆ) ೦೫:೪೫, ೩೦ ಆಗಸ್ಟ್ ೨೦೧೭ (UTC)
ನನ್ನ ಪ್ರಶ್ನೆ ಸ್ಪಷ್ಟವಾಗಿದೆ. ೨೦೧೬ ರ ಯೋಜನೆ ಪುಟದಲ್ಲಿ ಅವರು ಬರೆದ ಲೇಖನಗಳ ಕೊಂಡಿ ಯಾಕಿಲ್ಲ? ಅಲ್ಲಿರುವ ಸದಸ್ಯ ಹೆಸರುಗಳೆಲ್ಲ ತಪ್ಪಾಗಿದ್ದವು. ಅವುಗಳನ್ನು ನಾನು ಪ್ರಶ್ನಿಸಿದ ನಂತರ ನಿನ್ನೆ ಸರಿಮಾಡಿದಂತಿದೆ. ಆದರೆ ಇನ್ನೂ ಆ ವಿದ್ಯಾರ್ಥಿಗಳು ಬರೆದ ಲೇಖನಗಳ ಕೊಂಡಿ ಇಲ್ಲ. ಒಂದೆರಡು ವಿದ್ಯಾರ್ಥಿಗಳ ಸದಸ್ಯ ಕಾಣಿಕೆ ಪರಿಶೀಲಿಸಿದಾಗ ಪ್ರಯೋಗಪುಟ ಮಾತ್ರ ಕಂಡು ಬಂತು. ಕೇವಲ ಅಂಕ ಪಡೆಯಲು ಪ್ರಯೋಗಪುಟದಲ್ಲಿ ನಿರುಪಯುಕ್ತ ಲೇಖನ ಮಾಡುವುದದಾರೆ ಕ್ರೈಸ್ಟ್ ವಿ.ವಿ.ಯವರು ತಮ್ಮದೇ ಸರ್ವರ್‍ನಲ್ಲಿ ಮೀಡಿಯಾವಿಕಿ ಸರ್ವರ್ ಹಾಕಿಕೊಂಡು ಅಲ್ಲೇ ಬರೆಯಬಹುದಲ್ಲ? ಈ ಕೆಲಸಕ್ಕೆ ಸಿಐಎಸ್ ಒಬ್ಬ ಉದ್ಯೋಗಿಗೆ ಸಂಬಳ ನೀಡುವುದು ಯಾಕೆ? ಇದು ನನ್ನ ಪ್ರಶ್ನೆ.--ಪವನಜ (ಚರ್ಚೆ) ೦೭:೨೨, ೩೦ ಆಗಸ್ಟ್ ೨೦೧೭ (UTC)
೨೦೧೭-೧೮ರ ಯೋಜನಾ ಪುಟ ದಲ್ಲಿ ಮೊದಲ ಸೆಮೆಸ್ಟರ್ ವಿದ್ಯಾರ್ಥಿಗಳು ವಿಕಿಡಾಟಾದಲ್ಲಿ ಲೇಬಲ್ ಮತ್ತು ವಿವರಣೆಯನ್ನು ಸೇರಿಸಿದ್ದಾರೆ ಎಂದು ಬರೆದಿದೆ. ವಿಕಿಡಾಟಾ ವಿಕಿಪೀಡಿಯದಂತೆ ಅಲ್ಲ. ಅಲ್ಲಿ ಇರುವ ಲೇಬಲ್‍ಗಳನ್ನು ಸಂಪಾದಿಸಿ ಕನ್ನಡದ ಮಾಹಿತಿಯನ್ನು ಸೇರಿಸಬೇಕು. ವಿಕಿಡಾಟಾದಲ್ಲಿ ಪ್ರಯೋಗಪುಟದಲ್ಲಿ ಲೇಖನ ಸೇರಿಸಿ ನಂತರ ಅದನ್ನು ಮುಖ್ಯಪುಟಕ್ಕೆ ಸೇರಿಸುವ ವಿಧಾನ ಇಲ್ಲ. ನೇರವಾಗಿ ವಿಕಿಡಾಟಾದಲ್ಲೇ ಸಂಪಾದನೆ ಮಾಡಬೇಕು. ಏನು ಸೇರಿಸುತ್ತೀವೋ ಅದು ತನ್ನಿಂದತಾನೆ ಅಂತಿಮವಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಹಿತಿ ಅಥವಾ ತಪ್ಪು ಪದ/ವಾಕ್ಯ/ವ್ಯಾಕರಣ ಮಾಡಿದರೆ ಅದನ್ನು ಪತ್ತೆ ಹಚ್ಚುವುದು ಹೇಗೆ? ಈ ಸಮಸ್ಯೆಗಳಿರುವುದರಿಂದ ವಿದ್ಯಾರ್ಥಿಗಳಿಂದ ವಿಕಿಡಾಟಾಕ್ಕೆ ಮಾಹಿತಿ ಸೇರಿಸುವುದು ಬೇಡ ಎಂದು ನಾನು ೨೦೧೬-೧೭ರ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಇದೇ ವಿಷಯದ ಚರ್ಚೆಯಲ್ಲಿ ಹೇಳಿದ್ದೆ. ಅಂತೆಯೇ ಆ ವರ್ಷ ಕ್ರೈಸ್ಟ್ ವಿ.ವಿ. ಕನ್ನಡ ವಿದ್ಯಾರ್ಥಿಗಳು ವಿಕಿಡಾಟಾ ಸಂಪಾದನೆ ಮಾಡಿರಲಿಲ್ಲ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಸಮುದಾಯದ ಒಪ್ಪಿಗೆ ಪಡೆಯದೆ ನೇರವಾಗಿ ವಿದ್ಯಾರ್ಥಿಗಳಿಂದ ವಿಕಿಡಾಟಾ ಲೇಬಲ್ ಸಂಪಾದನೆ ಮಾಡಿಸಲಾಗಿದೆ. ನಾನು ಭಯಪಟ್ಟಂತೆಯೇ ಆಗಿದೆ. ವಿದ್ಯಾರ್ಥಿಗಳು ಏನೇನೋ ವಾಕ್ಯಗಳನ್ನು ಗೂಗ್ಲ್ ಅನುವಾದದ ಮೂಲಕ ತುಂಬಿಸಿದ್ದಾರೆ. ಒಂದು ಉದಾಹರಣೆ ಇಲ್ಲಿದೆ. ಕ್ರೈಸ್ಟ್ ವಿ.ವಿ. ವಿದ್ಯಾರ್ಥಿ ಸೇರಿಸಿದ ವಾಕ್ಯ ಇಂತಿದೆ -"ಒಂದು ಲಾವಾ ಚಾನಲ್ ದ್ರವ ಲಾವಾ ಪ್ರವಾಹವು ಸ್ಥಿರ ಕನಿಷ್ಠ ವಲಯಗಳಿಂದ ಒಳಗೊಂಡಿದೆ.ಪೋಷಕರ ಹರಿವಿನ ಕಾಲುವೆಯು ಬೆಳೆದುಕೊಳ್ಳುತ್ತದೆ ವಿಷಯದ ಗಟ್ಟಿಯಾದಹಾಗೆ ಮತ್ತು ನೈಸರ್ಗಿಕ ಒಡ್ಡುಗಳು ಸೃಷ್ಟಿಸುತ್ತದೆ ರವರೆಗೆ ಆರಂಭಿಕ ಚಾನಲ್, ಒಡ್ಡುಗಳು ವಸ್ತುತಃ ಹೊಂದಿರುವುದಿಲ್ಲ.". ನಿಸ್ಸಂಶಯವಾಗಿ ಇದು ಇಂಗ್ಲಿಶ್ ವಾಕ್ಯದ ಯಂತ್ರಾನುವಾದ. ನಾನು ಯಾದೃಚ್ಛಿಕವಾಗಿ ಒಂದು ಸದಸ್ಯ ಹೆಸರನ್ನು ತೆಗೆದುಕೊಂಡು ಪರಿಶೀಲಿಸಿದ್ದು. ಹಡುಕಿದರೆ ಇಂತಹ ತಪ್ಪುಗಳು ಇನ್ನೆಷ್ಟಿವೆಯೋ? ಈ ರೀತಿ ವಿಕಿಡಾಟಾವನ್ನು ಕೆಡಿಸುವುದನ್ನು ಕಂಡಿತ ಸಮುದಾಯವು ಸಹಿಸಲಾರದು. ಇದು ಶಾಶ್ವತವಾಗಿ ಕೆಟ್ಟ ಪರಿಣಾಮವನ್ನು ಬೀರಲಿದೆ. ಮುಂದಕ್ಕೆ ಗೂಗ್ಲ್, ಮೈಕ್ರೋಸಾಫ್ಟ್, ಇತ್ಯಾದಿ ಕಂಪೆನಿಗಳು ಪದ, ವಾಕ್ಯಗಳ ಅನುವಾದಕ್ಕೆ ವಿಕಿಡಾಟಾದಿಂದ ಮಾಹಿತಿ ತೆಗೆದಕೊಂಡರೆ ಕನ್ನಡ ಭಾಷೆ ಕಂಡಿತ ಕೆಡುತ್ತದೆ. ದಯವಿಟ್ಟು ಸಿಐಎಸ್ ಮತ್ತು ಕ್ರೈಸ್ಟ್ ವಿ.ವಿ. ಇದನ್ನು ನಿಲ್ಲಿಸಬೇಕು ಮತ್ತು ಈಗಾಗಲೇ ವಿದ್ಯಾರ್ಥಿಗಳು ಸೇರಿಸಿದ ಎಲ್ಲ ವಾಕ್ಯಗಳ ಪರಿಶೀಲನೆಯನ್ನು ಮಾಡತಕ್ಕದ್ದು.--ಪವನಜ (ಚರ್ಚೆ) ೦೯:೦೪, ೩೦ ಆಗಸ್ಟ್ ೨೦೧೭ (UTC)
ನಿನ್ನೆಯಿಂದ ಪವನಜರು ಸಿಐಎಸ್ ಮತ್ತು ಕ್ರೈಸ್ಟ್ ವಿ.ವಿ. ವಿದ್ಯಾರ್ಥಿ ಯೋಜನೆ ಬಗೆಗೆ ತುಂಬ ಚರ್ಚಿಸಿದ್ದಾರೆ. ನನಗೆ ಈ ಚರ್ಚೆಗೆ ನಿನ್ನೆ ಬರಲಾಗಲಿಲ್ಲ. ಆದರೆ, ಪವನಜರ ಮಾತು ಎಲ್ಲರಿಗೂ ಕೇಳುತ್ತಿಲ್ಲವೇ ಎಂಬಂತಿದೆ. ಯಾಕೆಂದರೆ ನಮ್ಮ ಕನ್ನಡ ಅರಳಿಕಟ್ಟೆಗೆ ಬರುವವರು ಕಡಿಮೆಯಾಗುತ್ತಿದ್ದಾರೋ ಅಥವಾ ಬೇಡ. ನಾವು ನಮ್ಮ ಪಾಡಿಗಿರೋಣವೆಂದೋ ಗೊತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ಕಾಲೇಜುಗಳಲ್ಲಿ WEP ಮಾಡಿ ಸಾಧ್ಯವಾಗದೆಂದು ಬಿಟ್ಟಿದ್ದೇನೆ. ಅಂಕಗಳಿಗಾಗಿ ವಿದ್ಯಾರ್ಥಿಗಳ ದೊಡ್ಡ ಸಮೂಹವನ್ನು ತಂದಾಗ ಅದು ತೋರಿಕೆಯ ಗುಂಪಾಗುತ್ತದೆ. ಕನ್ನಡಕ್ಕೆ ಇದರಿಂದ ಏನೂ ಪ್ರಯೋಜನವಿಲ್ಲ. ವಿದ್ಯಾರ್ಥಿಗಳಿಗೆ ಮಾರ್ಕಿನ ಹೊರತು ಬೇರೇನು ಪ್ರಯೋಜನವೇನೂ ಇಲ್ಲ. ಈಗ ಕ್ರೈಸ್ಟ್‌ ವಿ.ವಿ.ಯಲ್ಲೂ ಅದೇ ಆಗುತ್ತದೆಯೆಂದು ನಾನು ಭಾವಿಸುತ್ತೇನೆ. ಅಧ್ಯಾಪಕರ ಆಸಕ್ತಿಯಿಂದ ಆರಂಭಿಸಿದ ನನಗೇ ಎಡವಟ್ಟೆಂದು ತೋರಿದ ಮೇಲೆ ಕ್ರೈಸ್ಟ್ ವಿ.ವಿ. ವಿದ್ಯಾರ್ಥಿಗಳ ಪಾಡೇನು? ಯಾಕೆಂದರೆ ಅಂತಿಮವಾಗಿ ಈ ಯೋಜನೆಯು ಸೆಮಿಸ್ಟರ್ ಅಂಕ ಪಟ್ಟಿಗೆ ಹೊಂದುತ್ತದೆ. ಸೆಮಿಸ್ಟರ್ ಹೀಗೆ ಬಂದು ಹಾಗೆ ಹೋಗುತ್ತದೆ. ಅದರ ಅವಧಿ ೪ ತಿಂಗಳು. ಪರೀಕ್ಷೆ ಮತ್ತು ಅಸೈನ್‍ಮೆಂಟ್ ಆಧಾರಿತ ಸೆಮಿಸ್ಟರ್‍ಗೆ ವಿಕಿಯ ಎಲ್ಲಾ ಚಟುವಟಿಕೆಗಳು ಅಷ್ಟಕ್ಕಷ್ಟೇ. ಒಂದುವೇಳೆ ಮಾಡುವುದಾದರೆ ಕೆಲವೇ ಆಸಕ್ತ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಸೀಮಿತಗೊಳಿಸಿ ಅವರಿಂದ ಹೆಚ್ಚು ಪ್ರಯೋಜನವಾಗುವ ಲೇಖನಗಳನ್ನು ನೀಡುವಂತೆ ಮಾಡುವ ಪ್ರಯತ್ನವನ್ನು ಮಾಡಬಹುದು. ಒಬ್ಬ ವಿದ್ಯಾರ್ಥಿ ಲಾಗಿನ್ ಆಗಿ ಒಂದು ವರ್ಷದಲ್ಲಿ ಹಲವಾರು ಲೇಖನಗಳನ್ನು ಬರೆಯುವನೆಂದರೆ ನೂರಾರು ವಿದ್ಯಾರ್ಥಿಗಳು ಪ್ರಯೋಗಪುಟವನ್ನು ರಚಿಸಿ ತಪ್ಪು ಲೇಖನಗಳು ರಚನೆಗೊಂಡು ಪ್ರಕಟವಾಗದಿದ್ದರೆ ಏನು ಪ್ರಯೋಜನ? ಎಂಬ ಪ್ರಶ್ನೆ ಏಳುತ್ತದೆ. ಈ ಬಗೆಗೆ ಸಿಐಎಸ್‍ನವರು ಗಂಭೀರವಾಗಿ ಯೋಚಿಸುವಂತಾಗಬೇಕು. ಇದು ಭಾಷೆಯ ಸಂಶೋಧನೆಯ ಕೆಲಸವಾದುದರಿಂದ ಮುಂದೆ ಏನಾದರೂ ಉಳಿದರೆ ನಮ್ಮಿಂದ ಮಾಡುವಂತೆ ಪ್ರಯತ್ನಿಸೋಣ. ಸಿಐಎಸ್ ಕ್ರೈಸ್ಟ್‌ಗೆ ತುಂಬ ಸಹಾಯವನ್ನು ಈಗಾಗಲೇ ನೀಡಿದ್ದಾರೆ. ನಿಜವಾಗಿಯು ಉತ್ತಮವಾಗಿ ಆಗಬೇಕೆಂದಿದ್ದರೆ ಕ್ರೈಸ್ಟ್‌ ವಿ.ವಿ.ಯಲ್ಲಿ ಒಂದು ವಿಕಿ ಸೆಂಟರನ್ನು ಫುಲ್ ಟೈಮ್ ತೆರೆದು ಆಸಕ್ತರು ಮಾತ್ರ ಕೆಲಸ ಮಾಡುವಂತೆ ಮಾಡಬಹುದೆಂದು ನನ್ನ ಸಲಹೆ. ವಿದ್ಯಾರ್ಥಿಗಳಿಗೆ ಮೊಟಿವೇಶನ್ ಬೇಕೇ ಹೊರತು ಒತ್ತಡ ಇರಬಾರದು. ಕನ್ನಡ ವಿಕಿ ಕಲಿವವರಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಶೋಧನೆ ಎಲ್ಲ ಪ್ರೀತಿಯನ್ನು ಹೀಗೆ ಹುಟ್ಟಿಸುವ ಬೆಳೆಸುವ ಪ್ರೋತ್ಸಾಹ ಹೆಚ್ಚು ಬೇಕಿದೆ. ಇದು ಕ್ರೈಸ್ಟ್ ವಿ.ವಿ.ಯಲ್ಲಿ ಇದೆ. ಅದನ್ನು ಬೆಳೆಸಬಹುದು.Vishwanatha Badikana (ಚರ್ಚೆ)೧೪:೪೮, ೩೦ ಆಗಸ್ಟ್ ೨೦೧೭ (UTC)
ಪವನಜ ಮತ್ತು ಬದಿಕನ ಅವರ ಸಲಹೆ ಜೊತೆಗೆ ಶಿಕ್ಷಣ ಸಂಸ್ಥೆಗಳ ಉಸ್ತುವಾರಿ ವಹಿಸಿದವರು ಲೇಖನಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಪ್ರಕಟಿಸಬೇಕು ಹಾಗೂ ಅದನ್ನು ತಯಾರಿಸುವ ಮೊದಲು ಅದನ್ನು ಪಟ್ಟಿ ಮಾಡಬೇಕು ಏಕೆಂದರೆ ಪವನಜ ರವರು ಹೇಳಿದ ಹಾಗೆ ಲೇಖನದ ಗುಣ ಮಟ್ಟ ಮತ್ತು ಪಟ್ಟಿ ಸರಿಯಾಗಿ ತೋರ್ಪಟ್ಟಿಲ್ಲ. ಲೇಖನಗಳನ್ನು ತಯಾರಿಸುವ ಮೊದಲು ಲೇಖನ ಶೇಕರಿಸುವ ಸ್ಥಳ ಮತ್ತು ಹೆಸರನ್ನು ಪಟ್ಟಿ ಮಾಡಬೇಕು ಹಾಗೂ ಕಡ್ಡಾಯವಾಗಿ ಅದಕ್ಕೆ ವಿದ್ಯಾರ್ಥಿಗಳ ಸಹಿ ಸಂಗ್ರಹಿಸಿ ಯೋಜನಾ/ವರದಿ ಪುಟದಲ್ಲಿ ಅಳವಡಿಸಬೇಕು ಎಂಬುದು ನನ್ನ ಅನಿಸಿಕೆ ( ಏಕೆಂದರೆ ಶೇಕಡ90 ರಷ್ಟು ಪ್ರಯೋಗ ಪುಟದ ಲೇಖನ ಗಳು ಮುಖ್ಯ ಪುಟಗಳಲ್ಲಿ ಸೇರುತಿಲ್ಲ ) Anoop/ಅನೂಪ್ (Talk)(Edits) ೧೮:೫೯, ೩೦ ಆಗಸ್ಟ್ ೨೦೧೭ (UTC)
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯನ್ನು ಅಮೂಲಾಗ್ರವಾಗಿ ಬದಲಾಯಿಸುವ ನಿಟ್ಟಿನಲ್ಲಿ ನಾವು ಅವರ ಮೇಲಿನ 'ಲೇಖನಗಳನ್ನೇ ಬರೆಯಬೇಕು' ಎಂಬ ನಿಬಂಧನೆಯನ್ನು ಸಡಿಲಿಸಿ, ವಿಕಿಡೇಟಾ ಕಾರ್ಯದಲ್ಲಿ ತೊಡಗಿಸುವ ಪ್ರಯತ್ನ ಮಾಡಲಾಯಿತು. ಡಾ.ಪವನಜರವರು ತಿಳಿಸಿರುವಂತೆ ಈ ಪ್ರಯೋಗದಲ್ಲಿ ಸಹ ಕೆಲವು ತಪ್ಪುಗಳಾಗಿವೆ. ಸಿಐಎಸ್ ವತಿಯಿಂದ ವಿದ್ಯಾರ್ಥಿಗಳು ಮಾಡಿರುವ ಎಲ್ಲಾ (ಕನ್ನಡ, ಹಿಂದಿ ಮತ್ತು ಸಂಸ್ಕೃತ) ಲೇಬಲ್ ಮತ್ತು ವಿವರಣೆಯನ್ನು ಪರಿಶೀಲಿಸುವ ಯೋಜನೆ ಇದೆ. ಕೆಲಸ ಮತ್ತು ಸಮಯದ ಒತ್ತಡದಿಂದಾಗಿ ಅಂಕಪಟ್ಟಿ ತಯಾರಿಸುವ ಮೊದಲು ಈ ಕಾರ್ಯ ಮುಗಿಸಲು ಸಾಧ್ಯವಾಗಲಿಲ್ಲ. ಈ ಪರಿಶೀಲನಾ ಕೆಲಸಕ್ಕೆ ಕನ್ನಡ ಸಮುದಾಯದವರು ಕೈ ಜೋಡಿಸಿದಲ್ಲಿ ಕೆಲಸ ಸರಾಗವಾಗಿ ಮತ್ತು ವೇಗವಾಗಿ ನಡೆಯಬಹುದು ಎಂಬುದು ನಮ್ಮ ನಂಬಿಕೆ. WEP ಯೋಜನೆ ಕಷ್ಟವಾದುದು ಎಂಬುದು ನಮಗೆಲ್ಲರಿಗೂ ಅರಿವಾಗಿದೆ. ಸಿಐಎಸ್ ಈ ಯೋಜನೆಯ ಕುರಿತು ಆಶಾವಾದಿಯಾಗಿರುವುದು 'Theory of Change' ಮೇಲಿನ ನಂಬಿಕೆಯಿಂದಾಗಿ. ಕ್ರೈಸ್ಟ್‌ ವಿ.ವಿ. ಯಂತಹ ಸಂಸ್ಥೆಯಲ್ಲಿ ಕನ್ನಡ ಮತ್ತು ಇತರೆ ಭಾಷೆಗಳ ಅಸ್ತಿತ್ವ ಮತ್ತು ಔಚಿತ್ಯದ ಕುರಿತು ಅರಿವು ಮೂಡಿಸಲು WEP ಯೋಜನೆ ಸ್ವಲ್ಪ ಮಟ್ಟಿಗಾದರೂ ಸಹಕಾರಿಯಾಗಿದೆ ಎಂಬುದು ಸಹ ನಿರ್ವಿವಾದ ಸತ್ಯ. ಆದರೆ ಈ ಯೋಜನೆಯಿಂದಾಗಿ ಕನ್ನಡ ಸಮುದಾಯಕ್ಕೆ ಅಥವಾ ಕನ್ನಡ ಸಮುದಾಯದ ಸದಸ್ಯರಿಗೆ ಹಾನಿ ಅಥವಾ ನಷ್ಟ ಉಂಟಾದಲ್ಲಿ ಡಾ.ಪವನಜರವರು ಸೂಚಿಸುರುವಂತೆ ಖಾಸಗಿಯಾಗಿ WEP ಯೋಜನೆ ಮುಂದುವರಿಸುವಂತಹ ಪ್ರಯತ್ನವನ್ನು ಮಾಡುತ್ತೇವೆ. WEP ಯೋಜನೆಯನ್ನು ವಿಸ್ತೃತವಾಗಿ ಚರ್ಚಿಸುವ ಕುರಿತು ಒಂದು ಸಮಾವೇಶ ಅಥವಾ IRC ಆಯೋಜಿಸಿದಲ್ಲಿ ಸಮಸ್ಯೆ ಬಗೆಹರಿಯಬಹುದೆ ಅಥವಾ ಮೊದಲ ಪ್ರಯತ್ನವಾಗಬಹುದೆ?
ಸಿಐಎಸ್ ಪರವಾಗಿ ನಾನು ಪ್ರೊ. ಬದಿಕಾನ, ಡಾ. ಪವನಜ ಮತ್ತು ಅನೂಪ್ ನೀಡಿರುವ ಇತ್ತೀಚಿನ ಸಲಹೆಗಳನ್ನು ಮತ್ತು ಹರೀಶ್ ಎಂ.ಜಿ ಹಾಗು ವಿಕಾಸ್ ಹೆಗ್ಡೆ ಯವರು ಮೊದಲು ನೀಡಿದ್ದ ಸಲಹೆಗಳ್ನ್ನು ಪ್ರಾಮಾಣಿಕತೆಯಿಂದ ಸ್ವೀಕರಿಸಿದ್ದೇವೆ ಮತ್ತು ಇವುಗಳನ್ನು ಅಳವಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದು ಹೇಳಲು ಇಚ್ಛಿಸುತ್ತೇನೆ. Lahariyaniyathi (ಚರ್ಚೆ) ೦೫:೧೪, ೩೧ ಆಗಸ್ಟ್ ೨೦೧೭ (UTC).

ಲುಅ ದೋಷ: bad argument #1 to 'gsub' (string is not UTF-8).[ಬದಲಾಯಿಸಿ]

ಇತ್ತೀಚಿನ ಟೆಂಪ್ಲೇಟ್ ಗಳಲ್ಲಿನ ಬದಲಾವಣೆ/ಅಳಿಸುವಿಕೆಯಿಂದ ಲುಅ ದೋಷ: bad argument #1 to 'gsub' (string is not UTF-8). ದೋಷ ಕೆಲವು ಪುಟಗಳಲ್ಲಿ ಕಾಣಿಸಿಕೊಂಡಿದೆ.ಸಂಬಂಧಪಟ್ಟವರು ಇದನ್ನು ಸರಿಪಡಿಸಲು ಕೋರಲಾಗಿದೆ.Sangappadyamani (ಚರ್ಚೆ) ೧೫:೩೭, ೧ ಸೆಪ್ಟೆಂಬರ್ ೨೦೧೭ (UTC) ಉದಾ ಪುಟಗಳು:

@ ಸದಸ್ಯ:Pavanaja you should delete ಮಾಡ್ಯೂಲ್:Citation/CS1 and restore till revision made by ಸದಸ್ಯ:Omshivaprakash it may fix the problem. not sure. ★ Anoop/ಅನೂಪ್ (Talk)(Edits) ೧೮:೨೪, ೧ ಸೆಪ್ಟೆಂಬರ್ ೨೦೧೭ (UTC)
Done --ಪವನಜ (ಚರ್ಚೆ) ೦೪:೩೪, ೨ ಸೆಪ್ಟೆಂಬರ್ ೨೦೧೭ (UTC)
It did not help --ಪವನಜ (ಚರ್ಚೆ) ೦೪:೩೫, ೨ ಸೆಪ್ಟೆಂಬರ್ ೨೦೧೭ (UTC)
fixed probably by redirecting infobox settlement to ಟೆಂಪ್ಲೇಟು:Infobox ಊರು, problem in above issue is UTF8 character need to added and i dont know anything about it. ★ Anoop/ಅನೂಪ್ (Talk)(Edits) ೦೫:೩೨, ೨ ಸೆಪ್ಟೆಂಬರ್ ೨೦೧೭ (UTC)


ಆಗಸ್ಟ್ ತಿಂಗಳ ವರದಿ[ಬದಲಾಯಿಸಿ]

  • ೨೮ ಆಗಸ್ಟ್ ೨೦೧೭ ರಂದು ರಾತ್ರಿ ೮:೩೦ಕ್ಕೆ ಟೆಂಪ್ಲೇಟು ಕಾರ್ಯಾಗಾರ ಉದ್ದೇಶಿಸಿ ಐ-ಆರ್-ಸಿಯನ್ನು ನಡೆಸಲಾಯಿತು.
  • ನಿರ್ವಾಹಕರೊಂದಿಗೆ ಸಂಪರ್ಕ ಬೆಳೆಸಿ ಸಮುದಾಯ ಸದಸ್ಯರು ಕೇಳಿಕೊಂಡ ಟೆಂಪ್ಲೇಟುಗಳನ್ನು ಆಮದು ಮಾಡಿಕೊಳ್ಳಲು ಕೇಳಿಕೊಂಡಿದ್ದೇನೆ.
  • ಕ್ರೈಸ್ಟ್ ವಿಶ್ವವಿದ್ಯಾನಿಲಯದ ವರದಿಯನ್ನು ಪೂರ್ಣಗೊಳಿಸಲು ಅನಂತನಿಗೆ ಸಹಾಯ ಮಾಡಿದ್ದೇನೆ. ಕ್ರೈಸ್ಟ್ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳಿಗೆ ತರಬೇತು ನೀಡಲು ಒಂದು ದಿನ ಹೋಗಿದ್ದೇನೆ.
  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ೩೧ ಆಗಸ್ಟ್ ಮತ್ತು ೧ ಸೆಪ್ಟೆಂಬರ್‌ನಂದು ಕಾರ್ಯಾಗಾರ ನಡೆಸಲಾಯಿತು. ಇದು ವಿಕ್ಷನರಿಯನ್ನು ಕೇಂದ್ರೀಕರಿಸಿ ನಡೆಸಿದ ತರಬೇತು ಕಾರ್ಯಾಗಾರವಾಗಿತ್ತು.

ಸಪ್ಟೆಂಬರ್ ತಿಂಗಳ ಕೆಲಸವನ್ನು ನನ್ನ ಕೆಲಸ ಪುಟದಲ್ಲಿ ಹಾಕಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೦೯:೦೪, ೧೩ ಸೆಪ್ಟೆಂಬರ್ ೨೦೧೭ (UTC)


Featured Wikimedian [September 2017][ಬದಲಾಯಿಸಿ]

Greeting, on behalf of Wikimedia India, I, Krishna Chaitanya Velaga from the Executive Committee, introduce you to the Featured Wikimedian of the Month for September 2017, Swapnil Karambelkar.

Swapnil Karambelkar is one of the most active Wikimedians from the Hindi community. Swapnil hails from Bhopal, Madhya Pradesh, and by profession a Mechanical Engineering, who runs his own firm based on factory automation and education. Swapnil joined Wikipedia in August 2016, through "Wiki Loves Monuments". He initially started off with uploading images to Commons and then moved onto Hindi Wikipedia, contributing to culture and military topics. He also contributes to Hindi Wikibooks and Wikiversity. Soon after, he got extensively involved in various outreach activities. He co-organized "Hindi Wiki Conference" in January 2017, at Bhopal. He delivered various lectures on Wikimedia movement in various institutions like Atal Bihari Hindi University, Sanskrit Sansthanam and NIT Bhopal. Along with Suyash Dwivedi, Swapnil co-organized the first ever regular GLAM project in India at National Museum of Natural Heritage, Bhopal. Swapnil is an account creator on Hindi Wikipedia and is an admin on the beta version on Wikiversity. Swapnil has been instrumental in establishing the first Indic language version of Wikiversity, the Hindi Wikiversity. As asked regarding his motivation to contribute to the Wikimedia movement, Swapnil says, "It is the realization that though there is abundance of knowledge around us, but it is yet untapped and not documented".

ಹೆಲೋ, ನಮಸ್ಕಾರ. ನಾನು ಒಂದು ವಿಕಿ ಪುಟವನ್ನು ತೆರೆದಿದ್ದೇನೆ. ಇದರಲ್ಲಿ ಒಬ್ಬ ಯುವ ಕವಿ, ಕನ್ನಡಪರ ಹೋರಾಟಗಾರರ ಬಗ್ಗೆ ಕೆಳೆವೊಂದು ಅಂಶಗಳನ್ನು ಗುರ್ತಿಸಿ , ನನೆಗೆ ತಿಳಿದಿರುವ ಹಾಗೆ ತುಂಬಾ ಚೆನ್ನಾಗಿ ಮಾಡಿದ್ದೇನೆ. ತಾವು ಇದನ್ನ ರಿವ್ಯೂ ಮಾಡುವಿರಾ?

ರೀಗಾರ್ಡ್ಸ್, ಧರಣೇಶ ಮೊಬೈಲ್ 9019507809

ದಯವಿಟ್ಟು ಹೊಸಬರು ಪ್ರಥಮ ಬಾರಿಗೆ ಲೇಖನ ತಯಾರಿಸುವಾಗ ನಿಮ್ಮ ಪ್ರಯೋಗಪುಟದಲ್ಲಿ ಲೇಖನ ಸೇರಿಸಿ ಅದರ ಕೊಂಡಿಯನ್ನು ಇಲ್ಲಿ ನೀಡಿ ನಮ್ಮ ಅಭಿಪ್ರಾಯ ಕೇಳಿದ್ದರೆ ಚೆನ್ನಾಗಿತ್ತು. ನೀವು ಲೇಖನವನ್ನು ಸೇರಿಸಿ ನಂತರ ಅಭಿಪ್ರಾಯ ಕೇಳಿದ್ದೀರಾ. ಈಗಾಗಲೇ ಲೇಖನದಲ್ಲೇ ಅಭಿಪ್ರಾಯವನ್ನು ಕೆಲವರು ಸೇರಿಸಿದ್ದಾರೆ. ಆದರೂ ಮತ್ತೊಮ್ಮೆ ಇಲ್ಲಿ ನನ್ನ ಅಭಿಪ್ರಾಯವನ್ನು ದಾಖಲಿಸುತ್ತಿದ್ದೇನೆ-
  • ಲೇಖನ ತಟಸ್ಥ ಭಾಷೆಯನ್ನು ಬಳಸಿಲ್ಲ. ಹೊಗಳಿಕೆಯ ಭಾಷೆ ವಿಶ್ವಕೋಶಕ್ಕೆ ಸಲ್ಲ.
  • ಲೇಖನದ ವಿಷಯದ ಗಮನಾರ್ಹತೆ ಸಂದೇಹಾಸ್ಪದ. ವ್ಯಕ್ತಿಗಳ ಬಗ್ಗೆ ಲೇಖನ ಬರೆಯುವಾಗ ಆ ವ್ಯಕ್ತಿ ನಿಜಕ್ಕೂ ಅಷ್ಟು ಪ್ರಖ್ಯಾತ ವ್ಯಕ್ತಿಯೇ ಎಂಬುದರ ಬಗ್ಗೆ ಗಮನ ಹರಿಸಬೇಕು. ಈ ವ್ಯಕ್ತಿ ಅಷ್ಟು ಪ್ರಖ್ಯಾತ ವ್ಯಕ್ತಿಯೇ?
  • ಕೆಲವು ಉಲ್ಲೇಖಗಳು ಸರಿಯಿಲ್ಲ. ಫೇಸ್‍ಬುಕ್ ಉಲ್ಲೇಖವಾಗಲಾರದು. ಇನ್ನು ಕೆಲವು ಕೊಂಡಿಗಳು ಸರಿಯಾದ ಜಾಲಪುಟಕ್ಕೆ ಸೂಚಿಸುತ್ತಿಲ್ಲ.
  • ಪ್ರಜಾವಾಣಿಯ ಪುಟದ ಸ್ಕ್ರೀನ್‍ಶಾಟ್ ಅನ್ನು ವಿಕಿಪೀಡಿಯಕ್ಕೆ ಸೇರಿಸುವಂತಿಲ್ಲ. ಅದು ಹಕ್ಕುಸ್ವಾಮ್ಯದ (ಕಾಪಿರೈಟ್) ಉಲ್ಲಂಘನೆಯಾಗುತ್ತದೆ. ಅದನ್ನು ಅಳಿಸಿದ್ದೇನೆ.
  • ಒಟ್ಟಿನಲ್ಲಿ ಹೇಳುವುದಾದರೆ ಈ ಲೇಖನವನ್ನು ಅಳಿಸುವುದೇ ಸೂಕ್ತ. ಯಾಕೆಂದರೆ ವಿಷಯ ಗಮನಾರ್ಹವಾಗಿಲ್ಲ.

--ಪವನಜ (ಚರ್ಚೆ) ೦೭:೨೮, ೧೯ ಸೆಪ್ಟೆಂಬರ್ ೨೦೧೭ (UTC)

ಸೆಪ್ಟೆಂಬರ್ ತಿಂಗಳ ಐಆರ್‌ಸಿ ಸಮ್ಮಿಲನದ ಬಗ್ಗೆ[ಬದಲಾಯಿಸಿ]

ಕಳೆದ ತಿಂಗಳಿನಲ್ಲಿ ಐಆರ್‌ಸಿ ಟೆಂಪ್ಲೇಟು ಕಾರ್ಯಾಗಾರದ ಬಗ್ಗೆ ಚರ್ಚೆ ನಡೆದಂತೆ ಈ ತಿಂಗಳ ಐಆರ್‌ಸಿಯಲ್ಲಿ ನಾವು ಕನ್ನಡ ರಾಜ್ಯೋತ್ಸವದ ಸಿದ್ಧತೆ ನಡೆಸುವ ಬಗ್ಗೆ ಚರ್ಚೆ ನಡೆಸಬಹುದೆಂದು ನನ್ನ ಅಭಿಪ್ರಾಯ. ಕೆಲ ದಿನಗಳ ಹಿಂದೆ ಕನ್ನಡ ವಿಕಿಪೀಡಿಯದ ವಾಟ್ಸ್ಯಾಪ್‌ ಗುಂಪಿನಲ್ಲಿ ಸಮುದಾಯ ಸದಸ್ಯರಿಂದ ಈ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ತಿಂಗಳ ಕೊನೆಯ ವಾರದ ಸೋಮವಾರದಂದು ಅಂದರೆ ಇದೇ ಬರುವ ತಾರೀಕು ೨೫ ಸೆಪ್ಟೆಂಬರ್ ೨೦೧೭ ರಂದು ಐಆರ್‍ಸಿಯನ್ನು ಕೈಗೊಳ್ಳಬಹುದೇ? ಸಮುದಾಯ ಸದಸ್ಯರು ತಮ್ಮ ಒಪ್ಪಿಗೆ ಸೂಚಿಸಬೇಕಾಗಿ ವಿನಂತಿ. ಒಂದು ವೇಳೆ ಈ ದಿನಾಂಕದಂದು ಸಾಧ್ಯವಾಗದೇ ಇದ್ದರೆ ಬೇರೆ ಯಾವಗ ಸಾಧ್ಯ ಎಂದು ಚರ್ಚೆ ನಡೆಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೦೬, ೨೦ ಸೆಪ್ಟೆಂಬರ್ ೨೦೧೭ (UTC)

  • ನಾನು ಭಾಗವಹಿಸುತ್ತೇನೆ. Sangappadyamani (ಚರ್ಚೆ) ೧೧:೪೨, ೨೦ ಸೆಪ್ಟೆಂಬರ್ ೨೦೧೭ (UTC)
  • ಸೂಚಿಸಿದ ದಿನಾಂಕ ನನಗೆ ಅಡ್ಡಿಲ್ಲ. ನಾನು ಭಾಗವಹಿಸುವೆ--Vikashegde (ಚರ್ಚೆ) ೧೫:೫೮, ೨೧ ಸೆಪ್ಟೆಂಬರ್ ೨೦೧೭ (UTC)

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರ ಬಗ್ಗೆ[ಬದಲಾಯಿಸಿ]

ಕಳೆದ ತಿಂಗಳಲ್ಲಿ ವಿಕಿಪೀಡಿಯ ಸಾಧಕರನ್ನಾಗಿ ಪವನಜರನ್ನು ಆಯ್ಕೆಮಾಡಿದ್ದೀರಿ. ಮುಂದಿನ ತಿಂಗಳು ವಿಕಿಪೀಡಿಯ ಸಾಧಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಸಮುದಾಯದವರು ಚರ್ಚೆ ನಡೆಸಿ ತೀರ್ಮಾನಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೧೦, ೨೦ ಸೆಪ್ಟೆಂಬರ್ ೨೦೧೭ (UTC)

ನಾನು ಸದಸ್ಯ:Kartikdn ರನ್ನು ಸೂಚಿಸುತ್ತೇನೆ.ಅವರು ೯೦೦ರಕ್ಕಿಂತ ಹೆಚ್ಚು ಲೇಖನಗಳನ್ನು ರಚಿಸಿದ್ದಾರೆ.Sangappadyamani (ಚರ್ಚೆ) ೧೧:೧೭, ೨೦ ಸೆಪ್ಟೆಂಬರ್ ೨೦೧೭ (UTC)
ಆದರೆ ಅವರು ಇತ್ತೀಚೆಗೆ active ಆಗಿ ಇದ್ದಾರೆಯೇ? --Vikashegde (ಚರ್ಚೆ) ೧೪:೫೦, ೨೨ ಸೆಪ್ಟೆಂಬರ್ ೨೦೧೭ (UTC)
ಹೌದು.ಅವರು ಆಕ್ಟಿವ್ ಇದ್ದಾರೆ
  1. Sangappadyamani ಇವರು ಆಗಬಹುದು. ಯಾಕೆಂದರೆ ತುಂಬಾ ಕ್ರಿಯಶೀಲರಾಗಿದ್ದಾರೆ.ಕನ್ನಡ ವಿಕಿಪೀಡಿಯ ದ ಗುಣಮಟ್ಟದ ಬಗ್ಗೆ ಕಾಳಜಿಯುಳ್ಳವರು ಆಗಬಹುದು--Lokesha kunchadka (ಚರ್ಚೆ) ೦೭:೨೬, ೨೩ ಸೆಪ್ಟೆಂಬರ್ ೨೦೧೭ (UTC)
Lokesha kunchadka ರವರೆ ನನ್ನ(Sangappadyamani) ಹೆಸರು ಸಧ್ಯಕ್ಕೆ ಬೇಡ.Sangappadyamani (ಚರ್ಚೆ) ೦೭:೪೫, ೨೩ ಸೆಪ್ಟೆಂಬರ್ ೨೦೧೭ (UTC)
ಸಂಗಪ್ಪ ಅವರು Kartikdn ಅವರನ್ನು ಸೂಚಿಸಿದ್ದರು. ಹಾಗಾಗಿ ಅವರಿಗೆ ನಾನು ಮತ್ತು ಸಂಗಪ್ಪ ಅವರು ಮಿಂಚಂಚೆ ಮೂಲಕ ಕಾರ್ತಿಕ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಅವರ ಚರ್ಚಾ ಪುಟದಲ್ಲಿಯೂ ಬರೆದೆ. ಆದರೆ ಅವರಿಂದ ಯಾವುದೇ ಉತ್ತರ ಬರದ ಕಾರಣ ನಾನು ಓಂ ಶಿವಪ್ರಕಾಶರನ್ನು ಸೂಚಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೧೧:೩೮, ೧ ಅಕ್ಟೋಬರ್ ೨೦೧೭ (UTC)

ಸಮ್ಮತಿಗಳು[ಬದಲಾಯಿಸಿ]

  1. ಓಂ ಶಿವಪ್ರಕಾಶ್ ಅವರ ಆಯ್ಕೆಗೆ ನಾನು ಸಮ್ಮತಿಸುತ್ತೇನೆ. ★ Anoop / ಅನೂಪ್ © ೧೨:೩೬, ೧ ಅಕ್ಟೋಬರ್ ೨೦೧೭ (UTC)
  2. ಓಂ ಶಿವಪ್ರಕಾಶ್ ರವರ ಅಯ್ಕೆ ನನ್ನ ಅನುಮೋದನೆ ಇದೆ .Sangappadyamani (ಚರ್ಚೆ) ೧೩:೩೨, ೧ ಅಕ್ಟೋಬರ್ ೨೦೧೭ (UTC)
  3. ಓಂ ಶಿವಪ್ರಕಾಶ್ ಅವರ ಆಯ್ಕೆಗೆ ನನ್ನ ಅನುಮೋದನೆ ಇದೆ --Vikashegde (ಚರ್ಚೆ) ೧೪:೦೧, ೪ ಅಕ್ಟೋಬರ್ ೨೦೧೭ (UTC)
  4. ಓಂ ಶಿವಪ್ರಕಾಶ್ ಅವರ ಆಯ್ಕೆಗೆ ನನ್ನ ಅನುಮೋದನೆ ಇದೆ Shreekant.mishrikoti (ಚರ್ಚೆ) ೦೬:೨೮, ೫ ಅಕ್ಟೋಬರ್ ೨೦೧೭ (UTC)
  5. ನನ್ನ ಒಪ್ಪಿಗೆ ಇದೆ --ವಿಶ್ವನಾಥ/Vishwanatha (ಚರ್ಚೆ) ೧೬:೩೭, ೮ ಅಕ್ಟೋಬರ್ ೨೦೧೭ (UTC)

ಕನ್ನಡ ವಿಕಿಸೋರ್ಸ್ ನಲ್ಲಿ ನ ಮೈಸೂರು ವಿವಿಯ ಕನ್ನಡ ವಿಶ್ವಕೋಶದ ಮಾಹಿತಿ ಕುರಿತು[ಬದಲಾಯಿಸಿ]

ಈ ತನಕ ನಾನು ಸೇರಿಸಿದ ಸುಮಾರು 12,50O ಲೇಖನಗಳಿಂದಾಗಿ https://kn.m.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ ಇಲ್ಲಿರುವ ಲೇಖನಗಳ ಸಂಖ್ಯೆ 14,232 ತಲುಪಿದೆ... ಈವರೆಗೆ ನನಗೆ ಈ ಕೆಲಸದಲ್ಲಿ ಸಹಕಾರ, ಬೆಂಬಲ, ಮೆಚ್ಚುಗೆ ನೀಡಿದ ಎಲ್ಲರಿಗೂ ವಂದನೆಗಳು , ಈ ಎಲ್ಲ ಮಾಹಿತಿಯನ್ನು ಕನ್ನಡ ವಿಕಿಪೀಡಿಯಾವನ್ನು ಸಮೃದ್ಧಗೊಳಿಸಲು ವಿಕಿಪೀಡಿಯ ಸಂಪಾದಕರು ಬಳಸಲಿ ಮತ್ತು ಆ ಬಗ್ಗೆ ಮುಂದಾಳುಗಳು ಒಂದು ಯೋಜನೆಯನ್ನು ರೂಪಿಸಲಿ Shreekant.mishrikoti (ಚರ್ಚೆ) ೦೯:೩೩, ೨೮ ಸೆಪ್ಟೆಂಬರ್ ೨೦೧೭ (UTC)

Shreekant.mishrikotiರವರೆ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.Sangappadyamani (ಚರ್ಚೆ) ೧೧:೦೯, ೨೮ ಸೆಪ್ಟೆಂಬರ್ ೨೦೧೭ (UTC)
ತುಂಬಾ ಉತ್ತಮವಾದ ಕೆಲಸ. ನಿಮ್ಮ ಈ ಕೆಲಸಕ್ಕೆ ತುಂಬಾ ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೧:೧೭, ೨೮ ಸೆಪ್ಟೆಂಬರ್ ೨೦೧೭ (UTC)

Shreekant.mishrikoti ಅವರಿಗೆ ಆಭಿನಂದನೆಗಳು. ನಿಮ್ಮ ಶ್ರಮ ಸಾರ್ಥಕವಾಗುವಂತಹ ಕೆಲಸಗಳು ಇನ್ನು ಮುಂದೆ ಆಗಲಿ--ಕೆ.ಸೌಭಾಗ್ಯವತಿ (ಚರ್ಚೆ) ೧೪:೧೨, ೪ ಅಕ್ಟೋಬರ್ ೨೦೧೭ (UTC)