ವಿಷಯಕ್ಕೆ ಹೋಗು

ವಿಕಿಪೀಡಿಯ:ಕಾರ್ಯಾಗಾರ/ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್‌ಗಳ ಬಗ್ಗೆ ತರಬೇತಿ ಕಾರ್ಯಾಗಾರ

[ಬದಲಾಯಿಸಿ]

ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್‌ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ. ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ ಟೆಂಪ್ಲೇಟ್ಸ್, ಇನ್ಫೋಬಾಕ್ಸ್‌ಗಳ ತಿಳಿವಳಿಕೆ, ರಚನೆ, ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30, 2017ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವು Center for Internet & Society ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ ನಡೆಯಲಿದೆ.

ದಿನಾಂಕ: 30 ಜುಲೈ 2017, ಭಾನುವಾರ
ಸಮಯ: ಬೆಳಗ್ಗೆ 10 ರಿಂದ ಸಂಜೆ 5
ಸ್ಥಳ: ಸಿ. ಐ .ಎಸ್. ಕಛೇರಿ, 194, 2ನೇ C ಅಡ್ಡ ರಸ್ತೆ, 2ನೇ ವಿಭಾಗ, ದೊಮ್ಮಲೂರು, ಬೆಂಗಳೂರು. (ದೊಮ್ಮಲೂರು ಕ್ಲಬ್ ಹತ್ತಿರ)
ಸ್ಥಳದ ಗೂಗಲ್ ನಕ್ಷೆ ಕೊಂಡಿ

ಭಾಗವಹಿಸಿದವರು

[ಬದಲಾಯಿಸಿ]

ಸಹಿ ಹಾಕಲು ~~~~ ಎಂದು ಟೈಪಿಸಿ

  1. --ಗೋಪಾಲಕೃಷ್ಣ (ಚರ್ಚೆ) ೧೦:೨೩, ೩೦ ಜುಲೈ ೨೦೧೭ (UTC)
  2. --ವಿಶ್ವನಾಥ ಬದಿಕಾನ (ಚರ್ಚೆ) ೧೦:೨೪, ೩೦ ಜುಲೈ ೨೦೧೭ (UTC)
  3. --Bharathesha Alasandemajalu (ಚರ್ಚೆ) ೧೦:೨೫, ೩೦ ಜುಲೈ ೨೦೧೭ (UTC)
  4. --Lokesha kunchadka (ಚರ್ಚೆ) ೧೦:೨೪, ೩೦ ಜುಲೈ ೨೦೧೭ (UTC)
  5. --Sangappadyamani (ಚರ್ಚೆ) ೧೦:೨೫, ೩೦ ಜುಲೈ ೨೦೧೭ (UTC)
  6. --ಭರತ್ ಕುಮಾರ್ (ಚರ್ಚೆ) ೧೦:೨೫, ೩೦ ಜುಲೈ ೨೦೧೭ (UTC)
  7. --Kishorekumarrai (ಚರ್ಚೆ) ೧೦:೨೯, ೩೦ ಜುಲೈ ೨೦೧೭ (UTC)
  8. --ವಿಶ್ವನಾಥ/Vishwanatha (ಚರ್ಚೆ) ೧೦:೩೦, ೩೦ ಜುಲೈ ೨೦೧೭ (UTC)
  9. --Vikashegde (ಚರ್ಚೆ) ೧೦:೫೭, ೩೦ ಜುಲೈ ೨೦೧೭ (UTC)

ಛಾಯಾಚಿತ್ರಗಳು

[ಬದಲಾಯಿಸಿ]

ಪ್ರತಿಕ್ರಿಯೆ/ಅನಿಸಿಕೆ

[ಬದಲಾಯಿಸಿ]
  • ಟೆಂಪ್ಲೇಟ್ ಮತ್ತು ಇನ್ಫೋಬಾಕ್ಸ್ ಬಗ್ಗೆ ಗೊತ್ತಿರದ ವಿಷಯಗಳನ್ನು ಕಲಿತೆ.ಉತ್ತಮ ಅನುಭವ.Titodatta,Tanveer ,ಸಿ. ಐ .ಎಸ್ Bangalore ಮತ್ತು ವಿಕಾಸ್ ಹೆಗಡೆಯವರಿಗೆ ಧನ್ಯವಾದಗಳು.Sangappadyamani (ಚರ್ಚೆ) ೧೧:೨೧, ೩೧ ಜುಲೈ ೨೦೧೭ (UTC)
  • ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ೯ ಜನ ವಿಕಿಪೀಡಿಯನ್ನರು ಭಾಗವಹಿಸಿ ಟೆಂಪ್ಲೆಟು ಮತ್ತು ಇನ್ಫೋಬಾಕ್ಸುಗಳ ಬಗ್ಗೆ ಬೇಸಿಕ್ ಅಭ್ಯಾಸಗಳನ್ನು ನಡೆಸಿದರು. ಮುಂದುವರೆದು ಹೆಚ್ಚಿನ ತರಬೇತಿಗಾಗಿ ಒಂದು ತಿಂಗಳ ನಂತರ ಮತ್ತೊಂದು ದಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳಬಹುದು ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.--Vikashegde (ಚರ್ಚೆ) ೧೪:೫೮, ೩೧ ಜುಲೈ ೨೦೧೭ (UTC)
  • ಕಾರ್ಯಾಗಾರ ಉತ್ತಮವಾಗಿ ನಡೆಯಿತು. ಆಯೋಜಕರಿಗೆ ಧನ್ಯವಾದಗಳು. ಆದರೆ ಈ ಟೆಂಪ್ಲೇಟ್ ರಚನೆ ವಿಚಾರ ತುಂಬಾ ತಾಂತ್ರಿಕವಾಗಿದ್ದರಿಂದ ಸ್ವಲ್ಪ ನಿಧಾನವಾಗಿದ್ದರೆ ಚೆನ್ನಾಗಿತ್ತು. --Vishwanatha Badikana (ಚರ್ಚೆ) ೧೬:೪೯, ೩೧ ಜುಲೈ ೨೦೧೭ (UTC)
  • ತರಬೇತಿ ಕೊಡುವವರು ತರಬೇತಿಗೆ ಅನುಕೂಲವಾಗುವಂತೆ ಒಂದಿಷ್ಟು ಪುಟಗಳನ್ನು, ಪ್ರೆಸೆಂಟೇಶನ್ ಡಾಕ್ಯುಮೆಂಟುಗಳನ್ನು ಮೊದಲೇ ತಯಾರಿ ಮಾಡಿಟ್ಟುಕೊಂಡಿದ್ದರೆ ಅವುಗಳನ್ನು ತೋರಿಸಿ ವಿವರಿಸುವುದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ ಹಾಗೂ ಗೊಂದಲ ಕಡಿಮೆಯಾಗುತ್ತದೆ ಅನ್ನಿಸಿತು. ತರಬೇತಿ ಇನ್ನೂ ಸ್ವಲ್ಪ ವ್ಯವಸ್ಥಿತವಾಗಬೇಕಿದೆ.--Vikashegde (ಚರ್ಚೆ) ೧೨:೨೪, ೧ ಆಗಸ್ಟ್ ೨೦೧೭ (UTC)
    • ಹೌದು, ಭಾಗವಹಿಸುವವರಿಗೆ ಕೊಡುವ ಅಭ್ಯಾಸ ಕೆಲಸಗಳನ್ನು ಮೊದಲೇ ಅಣಿಗೊಳಿಸಿಟ್ಟುಕೊಂಡರೆ ಉತ್ತಮ.--ವಿಶ್ವನಾಥ/Vishwanatha (ಚರ್ಚೆ) ೧೬:೩೦, ೫ ಆಗಸ್ಟ್ ೨೦೧೭ (UTC)
  • ತರಬೇತಿ ಕಾರ್ಯಕ್ರಮ ತುಂಬ ಚೆನ್ನಾಗಿ ನಡೆಯಿತು.ಆದರೆ ಟೇಂಪ್ಲೆಟ್ಗಳ ಕುರಿತು ಸ್ವಲ್ಪ ನಿಧಾನವಾಗಿ ಹೇಳುತ್ತಿದ್ದರೆ ಚೆನ್ನಾಗಿ ಅರ್ಥವಾಗುತ್ತಿತ್ತು.ಮುಂದಿನ ಸಾರಿ ಆ ರೀತಿಯ ಬದಲಾವಣೆ ಇರಬಹುದೆಂದು ನಾನು ನಂಬಿರುತ್ತೇನೆ.--Lokesha kunchadka (ಚರ್ಚೆ) ೦೭:೧೧, ೩ ಆಗಸ್ಟ್ ೨೦೧೭ (UTC)

ಜುಲೈ ೩೦ ೨೦೧೭ ರಂದು ಟೆಂಪ್ಲೇಟು, ಇನ್ಫೋಬಾಕ್ಸ್ ಗಳ ಬಗ್ಗೆ ಒಂದು ದಿನದ ಕಾರ್ಯಾಗಾರವು ಸಿ.ಐ.ಎಸ್ ನ ದೊಮ್ಮಲೂರಿನ ಕಛೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕನ್ನಡ ವಿಕಿಪೀಡಿಯನ್ನರಾದ ವಿಕಾಸ್ ಹೆಗಡೆ ಮತ್ತು ಭರತ್ ಕುಮಾರ್ ಅವರು ಸಂಘಟಿಸಿದರು. ಸಿ.ಐ.ಎಸ್-ಎ೨ಕೆಯ ಟಿಟೋ ಮತ್ತು ತನ್ವೀರ್ ಕಾರ್ಯಕ್ರಮವನ್ನು ಆಯೋಜಿಸಿದರು.
ವಿಕಿಪೀಡಿಯ, ವಿಕಿಮೀಡಿಯದ ಯೋಜನೆಗಳಲ್ಲಿ ಟೆಂಪ್ಲೇಟು ಮತ್ತು ಇನ್ಫೋಬಾಕ್ಸ್‌ಗಳು ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತವೆ.

  • ಟೆಂಪ್ಲೇಟುಗಳನ್ನು ಒಂದು ಅಥವಾ ಹೆಚ್ಚಿನ ಪುಟಗಳಲ್ಲಿ ಬಳಸಲ್ಪಡುತ್ತವೆ.
  • ಈ ಟೆಂಪ್ಲೇಟುಗಳನ್ನು ನಮಗೆ ಬೇಕಾದಂತೆ ತಿದ್ದುಪಡಿಗಳನ್ನು ನಡೆಸಿ ಬಳಸಬಹುದು.
  • ಇನ್ಫೋಬಾಕ್ಸ್‌ಗಳನ್ನು ಲೇಖನದಲ್ಲಿ ಬಳಸುವುದರಿಂದ ಪೂರ್ಣ ಲೇಖನದಲ್ಲಿ ಏನಿದೆ ಎಂಬುದರ ಮಾಹಿತಿಯನ್ನು ಕ್ಷಿಪ್ರವಾಗಿ ತಿಳಿದುಕೊಳ್ಳಬಹುದು.

ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಬಗ್ಗೆ ಸಿಐಎಸ್-ಎ೨ಕೆಯ ೨೦೧೭-೨೦೧೮ರ ಕನ್ನಡ ಭಾಷಾ ಕಾರ್ಯಯೋಜನೆಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಟೆಂಪ್ಲೇಟು, ಇನ್ಫೋಬಾಕ್ಸ್‌ಗಳ ರಚನೆಯ ಬಗ್ಗೆ ಸಮುದಾಯ ಸದಸ್ಯರು ಹೆಚ್ಚಾಗಿ ತಿಳಿದುಕೊಂಡರೆ ಉತ್ತಮವಾಗಿರುತ್ತದೆ ಎಂದು ಸಮುದಾಯ ಸದಸ್ಯರ ಸಹಾಯದೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಗೊಳ್ಳಲಾಗಿತ್ತು.
ಕಾರ್ಯಾಗಾರವು ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಆರಂಭವಾಗಿ ಸಂಜೆ ೬:೩೦ರ ಸುಮಾರಿಗೆ ಮುಕ್ತಾಯಗೊಂಡಿತು.
ಕಾರ್ಯಾಗಾರದಲ್ಲಿ ಮೊದಲನೆಯದಾಗಿ ಟೆಂಪ್ಲೇಟುಗಳು ಹೇಗೆ ರಚನೆಗೊಳ್ಳುತ್ತವೆ ಎಂಬುದನ್ನು ಟಿಟೋ ತಿಳಿಸಿಕೊಟ್ಟರು. ನಂತರ ಟೆಂಪ್ಲೇಟು ಮತ್ತು ಇನ್ಫೋಬಾಕ್ಸ್‌ಗಳ ನಡುವಿನ ವ್ಯತ್ಯಾಸದ ಬಗ್ಗೆ ತಿಳಿಸಿಕೊಟ್ಟರು. ನಂತರ ಇನ್ಫೋಬಾಕ್ಸ್‌ಗಳ ರಚನೆಯ ಬಗ್ಗೆ ತಿಳಿಸಿಕೊಟ್ಟರು. ಎಲ್ಲ ಪಾಲ್ಗೊಂಡ ಸದಸ್ಯರು ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಬಳಸಿದ ಅಗತ್ಯವಿರುವ ಟೆಂಪ್ಲೇಟುಗಳ ಬಗ್ಗೆ ಪಟ್ಟಿಮಾಡಿ ಅವುಗಳನ್ನು ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲಿ ಮನವಿ ಮಾಡಿ ಅವುಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಈ ಬಗ್ಗೆ ಐ-ಆರ್-ಸಿಯನ್ನು ಸಂಫಟಿಸುವುದು ಎಂದು ನಿರ್ಧರಿಸಲಾಯಿತು.
ಕನ್ನಡ ವಿಕಿಪೀಡಿಯ ಸಂಪಾದನೆಯಲ್ಲಿ ಸಕ್ರಿಯರಾಗಿ ತೊಡಗಿರುವ ಸಂಗಪ್ಪ ದ್ಯಾಮಣಿ ಅವರು ಸಮುದಾಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದರು. ಕರಾವಳಿ ಮಿಕಿಮೀಡಿಯನ್‌ ಗುಂಪಿನ ಸದಸ್ಯರುಗಳೂ ಪಾಲ್ಗೊಂಡಿದ್ದರು. ಇನ್ನೂ ಕೆಲವು ಆಸಕ್ತಿ ಇರುವ ಮಂದಿಗೆ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ಮುಂದಿನ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಆಶಿಸುತ್ತೇವೆ. --ಗೋಪಾಲಕೃಷ್ಣ (ಚರ್ಚೆ) ೦೭:೫೦, ೧ ಆಗಸ್ಟ್ ೨೦೧೭ (UTC)