ವಿಷಯಕ್ಕೆ ಹೋಗು

ಸುರಹೊನ್ನೆ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸುರ ಹೊನ್ನೆ ಮರ ಇಂದ ಪುನರ್ನಿರ್ದೇಶಿತ)
ಸುರಹೊನ್ನೆ ಮರ
ಪುಷ್ಪ ವಿನ್ಯಾಸ
ಅರಳಿದ ಹೂವು
ಕಾಯಿ

ಪುನ್ನಾಗ/ಹೊನ್ನೆ ಮರ ಬೀಜದಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಪುನ್ನಾಗ ಮರ ಗಟ್ಟಿಫೆರೆ ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರದ ಸಸ್ಯಶಾಸ್ತ್ರದ ಹೆಸರು ಕ್ಯಾಲೋಫೈಲಮ್ ಇನೊಫೈಲಮ್ (Calophyllum inophyllum Linn). ಆಂಗ್ಲ ಭಾಷೆಯಲ್ಲಿ ಇದರ ಸಾಧಾರಣ ಹೆಸರು ಅಲೆಕ್ಸಾಡ್ರಿಯನ್ ಲಾರಾ (Alexandrian laura). ಇದರ ಹುಟ್ಟು ಸ್ಥಾನ ಉಷ್ಣವಲಯ ಏಷ್ಯಾ ಮತ್ತು ಪೆಸಿಫಿಕ್ ತೀರ ಪ್ರಾಂತ್ಯ[]. ಮಲೇಷಿಯಾ (malaysia), ಪೊಲಿನೆಷಿಯ (polynesia) ಪ್ರಾಂತ್ಯ ದಲ್ಲಿಯು ಕಂಡು ಹಿಡಿಯಲಾಗಿದೆ. ಪುನ್ನಾಗ ಮರ ಆಫ್ರಿಕ,ಭಾರತ ದೇಶಗಳಲ್ಲಿ ಇದು ಹೆಚ್ಚಾಗಿ, ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಗ್ನೇಯ ಏಷೀಯಾ ದೇಶಗಳಿಂದ ಇತರ ಪ್ರಾಂತ್ಯಗಳಿಗೆ ವ್ಯಾಪಕವಾಗಿ ಹರಡಿದೆ.[] ಸಮುದ್ರ ತೀರ ಪ್ರಾಂತ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಭಾರತ ದೇಶ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು[][]

[ಬದಲಾಯಿಸಿ]

ಆವಾಸ ಸ್ಥಾನ

[ಬದಲಾಯಿಸಿ]

ಭಾರತದೇಶದಲ್ಲಿ :ಮುಖ್ಯವಾಗಿ ಕೇರಳರಾಜ್ಯ, ಸಾಗರ ತೀರದ ಪ್ರದೇಶಗಳಲ್ಲಿ ಬೆಳೆಯುತ್ತದೆ .ಇದರ ಜೊತೆಗೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಮತ್ತು ಅಂಡಮಾನ್ ದ್ವೀಪ ಪ್ರದೇಶಗಳಲ್ಲಿ ಬೆಳೆಯುತ್ತದೆ.

ಪ್ರಪಂಚದ ದೇಶಗಳಾದ:ಪೂರ್ವ ಆಫ್ರಿಕ, ಇಂಡಿಯಾ, ಆಗ್ನೇಯ ಏಷ್ಯಾ , ಆಸ್ಟ್ರೇಲಿಯ , ಮತ್ತು ದಕ್ಷಿಣ ಪೆಸಿಫಿಕ್ ಕಡಲ ತೀರ ಪ್ರಾಂತ್ಯಗಳಲ್ಲಿ ಬೆಳೆಯುತ್ತವೆ []

ಮರ: ಇದು ನಿತ್ಯಹರಿದ್ವರ್ಣದ ಮರ. ೪೦ ಅಡಿಗಳ ಎತ್ತರ ಬೆಳೆಯುತ್ತದೆ. ಮರದ ಶಿಖರ ಭಾಗದಲ್ಲಿ ದಟ್ಟವಾಗಿ, ಗುಂಪಾಗಿ ಎಲೆಗಳು ಹೊಂದಿಕೊಂಡಿರುತ್ತವೆ. ಹತ್ತು ವರ್ಷಕ್ಕೆ ಮರ ಬಲಿಷ್ಟವಾಗಿ, ಕಾಂಡ ದೃಢವಾಗುತ್ತದೆ. ಮರ ಜೀವಮಾನ ಒಂದು ನೂರು ವರ್ಷದವರೆಗೆ ಇರುತ್ತದೆ. ೨೦-೪೦ ವರ್ಷಕ್ಕೆ ಮರ ಫಲಪ್ರದವಾಗಿ ಹಣ್ಣುಗಳನ್ನು ಕೊಡುತ್ತದೆ. ಎಲೆಗಳು ಥಳಕು -ಪಳಕಾಗಿ ಅಂಡಾಕಾರವಾಗಿರುತ್ತವೆ. ಹೂಗಳು ಸುವಾಸನೆ ಭರಿತವಾಗಿ ಬೆಳ್ಳಗಿರುತ್ತವೆ. ೪-೧೫ ಹೂಗಳು ಗುಂಪಾಗಿ ಬೆಳೆಯುತ್ತವೆ. ಪುಷ್ಪಪತ್ರ ಬೆಳ್ಳಗ್ಗೆ ಇದ್ದು, ಹೂವು ಮಧ್ಯದಲ್ಲಿ ಕೇಸರಗಳು ಇರುತ್ತವೆ.[]. ನಾವೆ, ದೋಣಿಗಳನ್ನು ರೈಲ್ವೇ ಸ್ಲೀಪರುಗಳನ್ನು ಮಾಡುವುದಕ್ಕೆ ಸುರಹೊನ್ನ ಮರದ ದಾರುವನ್ನು ಉಪಯೋಗಿಸುತ್ತಾರೆ. ಈ ಮರ ಎಲೆಗಳನ್ನು, ತೊಗಟೆಗಳನ್ನು ಔಷದಗಳಲ್ಲಿ ಬಳಸಿ ಕೊಳ್ಳುತ್ತಾರೆ. ದಕ್ಷಿಣ ಭಾರತದಲ್ಲಿ ಹೂವುಗಳು ಮಾರ್ಚಿ-ಏಪ್ರಿಲ್ ತಿಂಗಳಲ್ಲಿ ವಿಕಸಿಸುತ್ತವೆ. ಕೆಲವು ಬಾರಿ ಚಳಿಗಾಲದಲ್ಲಿ ಎರಡನೇ ಬಾರಿಯೂ ಹೂವು ಬಿಡುತ್ತವೆ.

ಕಾಯಿ-ಹಣ್ಣು: ಸಾಧಾರಣವಾಗಿ ಮೇ-ಜೂನ್ ನಲ್ಲಿ ಕಾಯಿ ಹಣ್ಣಾಗುತ್ತದೆ. ಕೆಲವು ಕಡೆ ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ಎರಡು ಸಲ ಫಲವನ್ನು ಕೊಡುತ್ತದೆ. ಕಾಯಿ/ಹಣ್ಣು ಗೋಲಾಕಾರದಲ್ಲಿದ್ದು ೨.೫ ಸೆಂ.ಮೀ.ಅಡ್ಡಳತೆ ಹೊಂದಿರುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಹಣ್ಣಾದ ಮೇಲೆ ಅರಿಶಿನ ಬಣ್ಣಕ್ಕೆ ತಿರುಗುತ್ತದೆ. ಸಣ್ಣ ಪ್ರಮಾಣದ ಹಣ್ಣು ೬.೦ಗ್ರಾಂ ಗಳಷ್ಟು,ದೊಡ್ಡ ಹಣ್ಣು ೧೬ ಗ್ರಾಂ ಗಳಷ್ಟು ತೂಕ ಬರುತ್ತದೆ. ಪ್ರತಿ ವರ್ಷಕ್ಕೆ ಒಂದು ಮರದಿಂದ ೫೦ ಕಿಲೋ ಒಣಗಿಸಿದ ಹಣ್ಣು ಇಳುವರಿ ಬರುತ್ತದೆ[] .

ಹಣ್ಣು-ವಿತ್ತನ ಶೇಖರಣೆ

[ಬದಲಾಯಿಸಿ]

ಹಣ್ಣು/ವಿತ್ತನ ಶೇಖರಣೆ ಎರಡು ರೀತಿಯಿಂದ ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಹಣ್ಣಾಗಿ, ಮಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ಶೇಖರಣೆ ಮಾಡುವುದು. ಇನ್ನೊಂದು ರೀತಿ ಮರದಲ್ಲಿರುವ ಹಣ್ಣುಗಳನ್ನು ಉದ್ದ ವಾದ ಕೋಲಿನಿಂದ ಹೊಡೆದು ಹಣ್ಣು ಕೆಳಗೆ ಬಿಳುವಾಗ ಶೇಖರಣೆ ಮಾಡುವುದು. ಶೇಖರಣೆ ಮಾಡಿದ ತಾಜಾ ಹಣ್ಣುಗಳಲ್ಲಿ ತೇವ ೬೦% ಇರುತ್ತದೆ. ಆದ್ದರಿಂದ, ಹಣ್ಣನ್ನು ಚೆನ್ನಾಗಿ ಬಯಲು ಪ್ರದೇಶದಲ್ಲಿ ಹಾಕಿ ಒಣಗಿಸಬೇಕಾಗಿದೆ. ಹಣ್ಣನ್ನು ತೇವ ೧೦% ಹಿಂಗುವವರೆಗೆ ಒಣಗಿಸಲಾಗುತ್ತದೆ. ಹಣ್ಣುಗಳನ್ನು ತೂಕ ಪ್ರಕಾರ ಖರೀದಿಸುವುದಿಲ್ಲ, ಎಣಿಕೆ/ಸಂಖ್ಯೆ ಪ್ರಕಾರ ಕೊಂಡು ಕೊಳ್ಳುತ್ತಾರೆ. ಹಣ್ಣು ಶೇಖರಣೆಗೆ ೩-೬ ತಿಂಗಳ ಕಾಲ ತೆಗೆದುಕೊಳ್ಳುತ್ತದೆ.

ವಿತ್ತನ/ಬೀಜ(sees/kernel: ಒಣಗಿದ ಹಣ್ಣುಗಳಲ್ಲಿ ಬೀಜಗಳ ಪರಿಮಾಣ ೧.೫ ಸೆಂ.ಮೀ.ಇರುತ್ತದೆ. ಬೀಜಗಳು ಗೋಲಾಕಾದಲ್ಲಿರುತ್ತದೆ. ಬೀಜದಲ್ಲಿ ೫೫-೭೩೩% ವರೆಗೆ ಎಣ್ಣೆ ಇರುತ್ತದೆ.[] ಬೀಜಗಳ ಮೇಲೆ ತೆಳುವಾದ ತೊಗಲು ಇರುತ್ತದೆ.

ಎಣ್ಣೆ ಉತ್ಪಾದನೆ

[ಬದಲಾಯಿಸಿ]

ಒಣಗಿಸಿದ ಹಣ್ಣುಗಳನ್ನು ಮರ ಸುತ್ತಿಗೆಗಳಿಂದ ಒಡೆದು, ಇಲ್ಲವೆ ಡಿಕಾರ್ಡಿಕೇಟರು ಯಂತ್ರಗಳಲ್ಲಿ ಬೀಜಗಳವನ್ನು ವಿಂಗಡಿಸಲಾಗುತ್ತದೆ. ಬೀಜಗಳನ್ನು ಗಾಣದಲ್ಲಿ, ಅಥವಾ ಎಕ್ಸುಪೆಲ್ಲರು ಯಂತ್ರದಲ್ಲಿ ನುಗ್ಗಿಸಿ ಎಣ್ಣೆಯನ್ನು ಸಂಗ್ರಹಣ ಮಾಡಲಾಗುತ್ತದೆ. ಎಕ್ಸುಪೆಲ್ಲರು ಅಥವಾ ಗಾಣದಿಂದ ಬೀಜಗಳಲ್ಲಿನ ಒಟ್ಟು ಎಣ್ಣೆಯನ್ನು ತೆಗೆಯುವುದಕ್ಕೆ ಆಗುವುದಿಲ್ಲ. ಹಿಂಡಿಯಲ್ಲಿ ೫-೧೦% ವರೆಗೆ ಎಣ್ಣೆ ಇರುತ್ತದೆ. ಹಿಂಡಿಯಲ್ಲಿ ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ತೆಗೆಯಲಾಗುತ್ತದೆ.

ಎಣ್ಣೆ - ಲಕ್ಷಣಗಳು

[ಬದಲಾಯಿಸಿ]

ಮಾರುಕಟ್ಟೆಯಲ್ಲಿ ಪುನ್ನಾಗ ಎಣ್ಣೆಗೆ ಬೇರೆ ಬೇರೆ ಹೆಸರುಗಳಿವೆ. ಹೊನ್ನೆ ಎಣ್ಣೆಯನ್ನು ದೊಂಬ (Domba), ಲಾರೆಲ್ ನಟ್ (laurel nut), ದಿಲ್ಲೊ (dillo), ಪಿನ್ನೆ (pinney) ಮತ್ತು ಪೂನ್ ಸೀಡ್ (poon seed)ಎಣ್ಣೆ ಎಂದು ಮಾರುಕಟ್ಟೆಯಲ್ಲಿ ಕರೆಯಲಾಗುತ್ತದೆ. ಸುರ ಹೊನ್ನೆ ಎಣ್ಣೆಗೆ ಘಾಟಾದ ವಾಸನೆ ಇರುತ್ತದೆ. ಎಣ್ಣೆಯ ಸ್ನಿಗ್ಧತೆಯು ಹೆಚ್ಚಿರುತ್ತದೆ. ಒಗರಾದ ರುಚಿ ಇರುತ್ತದೆ. ಎಣ್ಣೆ ರಂಗು ಹಸಿರು ಬಣ್ಣದಿಂದ ಅರಿಶಿನ ಬಣ್ಣ ಹೊಂದಿರುತ್ತದೆ. ಸುರಹೊನ್ನೆ ಎಣ್ಣೆ ಅಡಿಗೆ ಮಾಡುವುದಕ್ಕೆ ಉಪಯುಕ್ತವಲ್ಲ. ಎಣ್ಣೆ ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಕಾಲ ಇದ್ದರೆ ಎಣ್ಣೆಯ ಬಣ್ಣ ಚಿಕ್ಕದಾಗುತ್ತದೆ.

ಎಣ್ಣೆ ಭೌತಿಕ ಲಕ್ಷಣಗಳ ಪಟ್ಟಿ

ಭೌತಿಕ ಲಕ್ಷಣ ಮಿತಿ
ವಕ್ರಿಭವಸೂಚಿಕೆ 300Cవద్ద 1.460-1.470
ಅಯೋಡಿನ್ ಮೌಲ್ಯ 79-98
ಸಫೊನಿಫಿಕೇಶನ್ ಸಂಖ್ಯೆ/ಮೌಲ್ಯ 190-205
ಅನ್ ಸಫೋನಿಫಿಯ ಬುಲ್ ಪದಾರ್ಥ 1.5% ಗರಿಷ್ಟ
ಆಮ್ಲ ವಿಲುವೆ 20-40
ತೇವೆ 0.5% ಗರಿಷ್ಟ

ಎಣ್ಣೆಯಲ್ಲಿ ಪಾಮಿಟಿಕ್ ಮತ್ತು ಸ್ಟಿಯರಿಕ್ ಸಂತೃಪ್ತ ಕೊಬ್ಬಿನ ಆಮ್ಲಗಳು ೨೫-೩೫% ವರೆಗೆ ಇರುತ್ತವೆ. ಅಸಂತೃಪ್ತ ಕೊಬ್ಬಿನ ಆಮ್ಲಗಳಾದ ಒಲಿಕ್, ಲಿನೊಲಿಕ್ ಆಮ್ಲಗಳು ೬೫-೭೫% ವರೆಗೆ ಇವೆ. ಒಲಿಕ್ ಆಮ್ಲ ೩೬% ರಿಂದ ೫೩.% ವರೆಗೆ, ಲಿನೊಲಿಕ್ ಆಮ್ಲ ೧೫% ರಿಂದ ೨೮.೦% ವರೆಗೆ ಇರುತ್ತವೆ. ೨೨ ಕಾರ್ಬನ್ ಗಳಿರುವ, ಏಕ ದ್ವಿಬಂಧಯುತ ಅಸಂತೃಪ್ತ ಯುರಿಸಿಕ್ ಆಮ್ಲ ೩% ವರೆಗೆ ಇರುತ್ತದೆ. ಇದರ ದ್ವಿಬಂಧ ೧೩ನೆ ಕಾರ್ಬನ್ ಜೊತೆ ಏರ್ಪಡಿಸಲಾಗುತ್ತದೆ.

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 14.8-18.5
ಸ್ಟಿಯರಿಕ್ ಆಮ್ಲ(C18:0) 6.0-9.0
ಒಲಿಕ್ ಆಮ್ಲ(C18:1) 36-53
ಲಿನೊಲಿಕ್ ಆಮ್ಲ(C18:2) 16-29
ಯುರಿಸಿಕ್ ಆಮ್ಲ 2.5-3.5

ಎಣ್ಣೆ ಉಪಯೋಗಗಳು [][]

[ಬದಲಾಯಿಸಿ]
  • ಪುನ್ನಾಗ ಎಣ್ಣೆ ಆಹಾರ ಯೋಗ್ಯವಲ್ಲ. ಅದರಿಂದ ಇದನ್ನು ಅಡಿಗೆ ಮಾಡುವಲ್ಲಿ ಉಪಯೋಗಿಸುವುದಕ್ಕೆ ಆಗುವುದಿಲ್ಲ.
  • ಸಾಬೂನ್ ತಯಾರಿಯಲ್ಲಿ ಉಪಯೋಗಿಸುತ್ತಾರೆ.
  • ನಾವೆ, ದೋಣಿಗಳ ದಾರು ಭಾಗಗಳ ರಕ್ಷಣ ಸಲುವಾಗಿ ದಾರು ಮೇಲೆ ಲೇಪಿಸುತ್ತಾರೆ.
  • ದೀಪದ ಎಣ್ಣೆಯಾಗಿ ಬಳಸಬಹುದು.
  • ಕ್ಷಯ, ಕುಷ್ಠರೋಗ ನಿವಾರಣೆಗಾಗಿ ಉಪಯೋಗಿಸುತ್ತಾರೆ.
  • ಚರ್ಮವ್ಯಾಧಿ, ಮಂಡಿ-ಕೀಲು ನೋವಿನ ನಿವಾರಣೆಯಲ್ಲಿ ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]