ರಾಕೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಕೆಟ್ (ಉಡ್ಡಯನ ವಾಹನ) ಒಂದು ಕ್ಷಿಪಣಿ, ವ್ಯೋಮನೌಕೆ, ವಾಯುನೌಕೆ ಅಥವಾ ಎಂಜಿನಿಂದ ಮೇಲ್ಮುಖ ಒತ್ತಡಕ್ಕೊಳಪಟ್ಟು ಕಾಯ‍ನಿರ್ವಹಿಸುವ ವಾಹನವಾಗಿದೆ.

ರಾಕೆಟ್ ಚಿತ್ರ

ರಾಕೆಟ್ ಎಂಜಿನಿನ ಹೊರಸೂಸುವಿಕೆಯು ರಾಕೆಟ್‍ನಲ್ಲಿ ಈಗಾಗಲೆ ಇರುವ ನೋದನಕಾರಿ[೧]ಯಿಂದ ಬಳಸಲ್ಪಡುತ್ತದೆ. ರಾಕೆಟ್ ಎಂಜಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ರಾಕೆಟ್ ಎಂಜಿನಗಳು ಕ್ಷಿಪ್ರಗತಿಯ ಜವ[೧]ದ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೊರಸೂಸುವಿಕೆಯಿಂದ ರಾಕೆಟ್ ಅನ್ನು ಮುನ್ನುಗ್ಗಿಸುತ್ತವೆ.

ರಾಕೆಟ್‍ ಉಡಾವಣೆ

ರಾಕೆಟ್‍ಗಳು ಸಾಪೇಕ್ಷವಾಗಿ ಲಘುತೂಕವನ್ನು ಹೊಂದಿರುವ ಶಕ್ತಿಶಾಲಿ, ಹೆಚ್ಚು ವೇಗೊತ್ಕರ್ಷವನ್ನು ಹೊರಹೊಮ್ಮಿಸಬಲ್ಲ ಮತ್ತು ಅತಿ ಹೆಚ್ಚು ಜವವನ್ನು ಹೊಂದಬಲ್ಲ ಅಧಿಕ ಸಾಮರ್ಥ್ಯವುಳ್ಳವುಗಳು. ರಾಕೆಟ್‍ಗಳು ಅಂತರಿಕ್ಷದಲ್ಲಿ ವಾತಾವರಣದ ಮೇಲೆ ಅವಲಂಬಿತವಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲವು. ಚೀನಾ ದೇಶದಲ್ಲಿ ರಾಕೆಟ್‍ಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.

ಚೀನಾದಲ್ಲಿ ಬಳಸಲಾದ ರಾಕೆಟ್‍ ಮಾದರಿ

೨೦ನೇ ಶತಮಾನದವರೆಗೂ, ಅಂದರೆ ಚಂದ್ರನ ಮೇಲೆ ಕಾಲಿಡುವವರೆಗೂ ಮಹತ್ವದ ವೈಜ್ಞಾನಿಕ ಅಂತರಗ್ರಹೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ರಾಕೆಟ್‍ಗಳನ್ನು ಬಳಸುವುದು ಸಾಧ್ಯವಾಗಿರಲಿಲ್ಲ.

ರಾಸಾಯನಿಕ ರಾಕೆಟ್‍ಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಹಾಗೂ ಹೆಚ್ಚು ಸಾಮರ್ಥ್ಯವುಳ್ಳವಾಗಿವೆ. ಅವು ಇಂಧನವನ್ನು ಉತ್ಕರ್ಷಕದೊಂದಿಗೆ ದಹನಕ್ರಿಯೆ[೨] ಮಾಡುವ ಮೂಲಕ ರಾಕೆಟ್‍ಗೆ ಅತಿ ಹೆಚ್ಚು ಜವವನ್ನು ನೀಡಬಲ್ಲವಾಗಿವೆ. ಸಂಗ್ರಹಿತ ನೋದನಕಾರಿಯು ಸಾಮಾನ್ಯ ಒತ್ತಡಕ್ಕೊಳಪಡಿಸಿದ ಅನಿಲ ಅಥವಾ ಒಂದೇ ರೀತಿಯ ದ್ರವ ಇಂಧನವಾಗಿದ್ದು,ಅದು ವೇಗವರ್ಧಕದೊಂದಿಗೆ ವರ್ತಿಸಿ ವಿಭಜನೆಯಾಗುತ್ತದೆ. ರಾಸಾಯನಿಕ ರಾಕೆಟ್‍ಗಳು ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ಬಿಡುಗಡೆಯಾಗಿರುವ ಶಕ್ತಿಯನ್ನು ಸಂಗ್ರಹಿಸಬಲ್ಲವು ಮತ್ತು ಈ ಕಾರಣಕ್ಕಾಗಿ ಅವು ಹೆಚ್ಚು ಅಪಾಯಕಾರಿ. ಆದರೂ ಜಾಗರೂಕತೆಯ ವಿನ್ಯಾಸ, ಪರೀಕ್ಷೆ, ನಿರ್ಮಾಣ ಮತ್ತು ಸರಿಯಾದ ಬಳಕೆ ಕಡಿಮೆ ಹಾನಿಯನ್ನು ಉಂಟುಮಾಡಬಲ್ಲವು.

ರಾಕೆಟ್‍ಗಳ ಇತಿಹಾಸ[ಬದಲಾಯಿಸಿ]

ರಾಕೆಟ್‍ಗಳ ಇತಿಹಾಸ ಕಪ್ಪು ಮದ್ದುಪುಡಿಯ ದೊರಕುವಿಕೆಯು ರಾಕೆಟ್‍ಗಳ, ಬಾಂಬ್‌ಗಳ ಮತ್ತು ಫಿರಂಗಿಗಳ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಚೀನಾ ದೇಶದ ಬೆಂಕಿ ಬಾಣಗಳು ಸಹ ರಾಕೆಟ್‍ ಅವಿಷ್ಕಾರಕ್ಕೆ ಮುನ್ನುಡಿಯಾಗಿವೆ. ೧೭೯೨ರಲ್ಲಿ ಪ್ರಥಮ ಕಬ್ಬಿಣ ಹೊದಿಕೆಯ ರಾಕೆಟ್‍ಗಳನ್ನು ಮೈಸೂರು ರಾಜ್ಯವನ್ನು ಆಳಿದ ಹೈದರಾಲಿ ಮತ್ತು ಅವನ ಮಗನಾದ ಟಿಪ್ಪುಸುಲ್ತಾನ ಇವರುಗಳು ಬ್ರಿಟಿಷರ ವಿರುದ್ಧ ಆಂಗ್ಲೋ-ಮೈಸೂರು ಯುದ್ಧದಲ್ಲಿ ರಾಕೆಟ್‍ಗಳನ್ನು ಬಳಸಿದರು. ನಂತರ ಬ್ರಿಟಿಷರು ಈ ರಾಕೆಟ್‍ಗಳ ತಂತ್ರಜ್ಞಾನದಲ್ಲಿ ಅತೀವ ಆಸಕ್ತಿಯನ್ನು ತಳೆದು ೧೯ನೇ ಶತಮಾನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಿದರು. ಮೈಸೂರು ಯುದ್ಧದಲ್ಲಿ ಬಳಕೆಯಾದ ರಾಕೆಟ್‍ಗಳು ಅತ್ಯಂತ ಶಕ್ತಿಶಾಲಿಯಾಗಿದ್ದು ಕಬ್ಬಿಣದ ಟ್ಯೂಬ್‍ಗಳನ್ನು ಹೊಂದಿದ್ದು ನೋದನಕಾರಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದವು. ಈ ರಾಕೆಟ್‍ಗಳು ಸುಮಾರು ೨ ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದ್ದವು. ನಾಲ್ಕನೇ ಆಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನ ಸೋಲಿನ ನಂತರ ಬ್ರಿಟಿಷರು ಕಬ್ಬಿಣದ ಹೊದಿಕೆಯುಳ್ಳ ರಾಕೆಟ್‍ಗಳನ್ನು ವಶಪಡಿಸಿಕೊಂಡು, ಅಭಿವೃದ್ಧಿಪಡಿಸಿ ನೆಪೋಲಿಯಾನಿಕ್ ಯುದ್ಧದಲ್ಲಿ ಬಳಸಿದರು.

ಅಧುನಿಕ ರಾಕೆಟ್‍ನ ಪಿತಾಮಹರು[ಬದಲಾಯಿಸಿ]

ಅಧುನಿಕ ರಾಕೆಟ್‍ ಪಿತಾಮಹರಾದ ರಷ್ಯಾದ ಕಾನ್ಸ್ಟಂಟೇನ್ ತ್ಸಿಯೋಲ್‍ಕೋವಸ್ಕಿ ಮತ್ತು ಅಮೇರಿಕಾದ ರಾಬರ್ಟ್ ಗೊಡ್ಡಾರ್ಡ್ ಇವರುಗಳು ೨೦ನೇ ಶತಮಾನದಲ್ಲಿ ರಾಕೆಟ್‍ ಬೆಳವಣಿಗೆಗೆ ಕಾರಣರಾದರು.

ಡಾ.ರಾಬರ್ಟ್ ಎಚ್.ಗೊಡ್ಡಾರ್ಡ್

ರಾಕೆಟ್‍ನ ಸಿದ್ಧಾಂತಗಳು[ಬದಲಾಯಿಸಿ]

[೨] ಸಣ್ಣ ಪಟಾಕಿ ರಾಕೆಟ್ಟಿಗೂ ಅಂತರಿಕ್ಷ ಯಾನಕ್ಕೆ ಉಪಯೋಗಿಸುವ ದೊಡ್ಡ ರಾಕೆಟ್ ವಾಹನಕ್ಕೂ ಏನೂ ಸಂಬಂಧವಿಲ್ಲ ಎಂದು ಮೊದಮೊದಲು ಅನಿಸುತ್ತದೆ. ಆದರೂ ಎರಡೂ ರಾಕೆಟ್ಟುಗಳು ಕೆಲಸ ಮಾಡುವುದು ಒಂದೇ ತತ್ವದ ಮೇಲೆ. ಇದೇ ಸಂವೇಗ ಸಂರಕ್ಷಣಾ ತತ್ವ.

ಸಂವೇಗ ಸಂರಕ್ಷಣಾ ತತ್ವ[ಬದಲಾಯಿಸಿ]

ಈ ತತ್ವದ ಪ್ರಕಾರ ಯಾವುದೇ ವ್ಯವಸ್ಥೆಯ ಮೇಲೆ ಬಾಹ್ಯ ಬಲ ಸೊನ್ನೆ ಆಗಿದ್ದಾಗ ಆ ವ್ಯವಸ್ಥೆಯ ಒಟ್ಟು ಸಂವೇಗ ಸಂರಕ್ಷಿತವಾಗುತ್ತದೆ (ಸ್ಥಿರವಾಗಿ ಉಳಿಯುತ್ತದೆ).

ಬಂದೂಕಿನಿಂದ ಗುಂಡು ಹಾರಿಸಿದ ಪ್ರಸಂಗ ಪರಿಗಣಿಸೋಣ. ಬಂದೂಕಿನ ರಾಶಿ M, ಗುಂಡಿನ ರಾಶಿ' m' ಮತ್ತು ಗುಂಡು ಹಾರಿದ ವೇಗ ' v' ಆಗಿರಲ್ಲಿ. ಆರಂಭದಲ್ಲಿ ಅಂದರೆ ಗುಂಡು ಹಾರಿಸುವ ಮೊದಲು, ಬಂದೂಕು ಮತ್ತು ಗುಂಡುಗಳೆರಡೂ ನಿಶ್ವಲವಾಗಿರುತ್ತವೆ. ಆದ್ದರಿಂದ ಅವುಗಳ ಒಟ್ಟು ಸಂವೇಗ ಸೊನ್ನ. ಗುಂಡು ಹಾರಿಸಿದೆ ಎಂದುಕೊಳ್ಳಿ. ಬಂದೂಕಿನ ನಳಿಗೆಯಿಂದ ಗುಂಡು ಹೊರಬೀಳುವಾಗ ಅದರ ಸಂವೇಗ 'mv' ಆಗಿರುತ್ತದೆ. ಈಗ ಬಂದೂಕು ಹಿಂದಿಕ್ಕೆ ಚಿಮ್ಮುತ್ತದಷ್ಟೆ. ಅದು ಹಿಂದಕ್ಕೆ ಚಿಮ್ಮುವ ವೇಗ' V' ಆಗಿರಲಿ. ಸಂವೇಗ ಸಂರಕ್ಷಣಾ ತತ್ವದ ಪ್ರಕಾರ, ಅವುಗಳ ಅಂತಿಮ ಸಂವೇಗ ಸೊನ್ನೆ ಆಗಿರಲೇ ಬೇಕು.

mv + MV= 0 ಅಥವಾ V= -mv/M

ರಾಕೆಟ್ಟು ಕೆಲಸ ಮಾಡುವುದು ಇದೇ ತತ್ವದ ಮೇಲೆ. ರಾಕೆಟ್ಟು ಹಾರುವಾಗ ಇಂಧನ ದಹನಗೊಂಡು ಉಚ್ಚ ಒತ್ತಟದಲ್ಲಿರುವ ಅನಿಲಗಳಾಗಿ ಪರಿವರ್ತನೆಗೊಳ್ಳುತ್ತೆದೆ. ಈ ಅನಿಲಗಳು ರಾಕೆಟ್ಟಿನ ಸೂಸುಬಾಯಿಯ ಮೂಲಕ ಉಚ್ಚ ವೇಗದಲ್ಲಿ ಹೊರನುಗ್ಗುತ್ತವೆ. ರಾಕೆಟ್ಟು ವಿರುದ್ಧ ದಿಕ್ಕಿನಲ್ಲಿ ಸಮ ಸಂವೇಗವನ್ನು ಗಳಿಸಿಕೊಳ್ಳುತ್ತದೆ.

ರಾಕೆಟ್ಟಿನ ಕಾರ್ಯವಿಧಾನ[ಬದಲಾಯಿಸಿ]

ರಾಕೆಟ್ಟು ಅಥವಾ ಜೆಟ್ ವಿಮಾನಗಳಲ್ಲಿ ಇಂಧನ ಉರಿಸಿದಾಗ ಬಿಡುಗಡೆಯಾಗುವ ಬಿಸಿ ಅನಿಲಗಳು ಹಿಂದಕ್ಕೆ ಚಿಮ್ಮುತ್ತವೆ. ಹಿಂದಕ್ಕೆ ಚಿಮ್ಮಿ ಬರುವ ಬಿಸಿ ಅನಿಲಗಳ ಪ್ರತಿಕಿಯೆಯು ರಾಕೆಟ್ ಅಥವಾ ಜೆಟ್ ವಿಮಾನಕ್ಕೆ ಮುಮ್ಮುಖ ನೂಕುಬಲವನ್ನು ಒದಗಿಸುತ್ತದೆ.

ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲವು. ಇದು ಸಾಧ್ಯವಾಗುವುದಕ್ಕೆ ರಾಕೆಟ್ಟುಗಳು ತಮ್ಮದೇ ಆದ ಆಕ್ಸಿಡಕವನ್ನೂ ಒಯ್ಯುವುದು ಕಾರಣ. ಇಂಧನ ದಹನಕ್ಕೆ ಆಕ್ಸಿಜನ್ ಒದಗಿಸುವ ಪದಧರ್ಥಕ್ಕೆ ಆಕ್ಸಿಡಕ ಎಂದು ಹೆಸರು. ಇಂಧನ ಮತ್ತು ಆಕ್ಸಿಡಕಗಳನ್ನು ಒಟಾಗಿ ನೋದನಕಾರಿಗಳು ಎನ್ನುತ್ತಾರೆ.

ಪ್ರತಿಕ್ಷೇಪಿತವೇಗದೊಂದಿಗೆ ರಾಕೆಟ್ ಲಂಬವಾಗಿ ಮೇಲಕ್ಕೆ ಚಲಿಸಬೇಕಾದಲ್ಲಿ ಭೂಮಿಯೆಡೆಗೆ ವರ್ತಿಸುತ್ತಿರುವ ಒಂದು ಕ್ರಿಯಾಬಲ ಇರಲೇ ಬೇಕು. ರಾಕೆಟ್ಟಿನಲ್ಲಿ ಇಂಧನವನ್ನು ದಹಿಸಿದಾಗ ಈ ಕ್ರಿಯಾಬಲ ಉಂಟಾಗುತ್ತದೆ. ಇಂಧನ ದಹಿಸಿದಾಗ ನಿಷ್ಕಾಸಅನಿಲಗಳು ಸೂಸುಬಾಯಿಯ ಮೂಲಕ ಭೂಮಿಯೆಡೆಗೆ ಚಿಮ್ಮುತ್ತದೆ. ರಾಕೆಟ್ಟಿನ ಒಟ್ಟು ರಾಶಿಯು (M) ನೋದನಕಾರಿಗಳ ರಾಶಿಯನ್ನೂ ಅದರಲ್ಲಿರುವ ವೈಜ್ಞಾನಿಕ ಸಾಧನ ಅಥವಾ ಉಪಗ್ರಹಕ್ಕೆ ಉಪಯುಕ್ತ ಹೊರೆ ಅಥವಾ ಪೇಲೋಡ್ ಎನ್ನುತ್ತಾರೆ. ರಾಕೆಟ್ಟನಲ್ಲಿ ಇಂಧನ ದಹನಗೊಂಡು ನಿಷ್ಕಾಸವನ್ನ ಬಿಡುಗಡೆ ಮಾಡಿದಾಗ ರಾಕೆಟ್ಟಿನ ವೇಗ ಏರುತ್ತದೆ. ರಾಕೆಟ್ಟಿನ ವೇಗೋತ್ಕರ್ಷವು ಇಂಧನ ದಹನದ ಪ್ರಮಾಣವನ್ನೂ ನಿಷ್ಕಾಸ ವೇಗ (Vex) ವನ್ನೂ ಅವಲಂಬಿಸಿರುತ್ತದೆ. ಜೊತೆಗೆ ರಾಕೆಟ್ಟಿನ ರಾಶಿಯ (M) ಪಾತ್ರವೂ ಇದೆ. ರಾಕೆಟ್ಟಿನ ರಾಶಿ ಹೆಚ್ಚಾದಷ್ಟೂ ವೇಗೋತ್ಕರ್ಷ ಕಡಿಮೆಯಾಗುತ್ತದೆ. ಇವುಗಳ ಸಂಬಂಧವನ್ನು ಹೀಗೆ ತೋರಿಸಬಹುದು.

(ಇಂಧನ ಉಪಯೋಗವಾಗುವ ದರ * ನಿಷ್ಕಾಸ ವೇಗ) = (ರಾಕೆಟ್ಟಿನ ರಾಶಿ *ವೇಗೋತ್ಕರ್ಷ)

ರಾಕೆಟ್ಟಿನ ರಾಶಿ ಮತ್ತು ವೇಗೋತ್ಕರ್ಷಗಳ ಗುಣಲಬ್ದವನ್ನು ರಾಕೆಟ್ ಮೇಲಿನ ನೂಕುಬಲ ಎನ್ನುತ್ತಾರೆ.

ನೂಕುಬಲ = RVex = ma

ಇಲ್ಲಿ'R' ಎಂಬುದು ಇಂಧನ ಉಪಯೋಗವಾಗುವ ದರವನ್ನು ಸೂಚಿಸುತ್ತದೆ.

ನಾವು ಪರಿಗಣಿಸಲೇ ಬೇಕಾದ ಇತರ ವ್ಯಾವಹರಿಕ ಅಂಶಗಳಿವೆ:

  1. ರಾಕೆಟ್ಟಿನಲ್ಲಿರುವ ಇಂಧನ ಖರ್ಚಾಗುತ್ತಾ ಹೋದಂತೆ ರಾಕೆಟ್ಟಿನ ಒಟ್ಟು ರಾಶಿ ಕಡಿಮೇಯಾಗುತ್ತಾ ಹೋಗುತ್ತದೆ.
  2. ರಾಕೆಟ್ ಮೇಲೆ ಮೇಲೆ ಹೋದಂತೆಲ್ಲಾ ಗುರುತ್ವ ವೇಗೋತ್ಕರ್ಷ ನಿರಂತರವಾಗಿ ಬದಲಾಗುತ್ತಿರುತ್ತದೆ.
  3. ವಾಯುಮಂಡಲದ ಕೆಳಸ್ತರಗಳು ರಾಕೆಟ್ಟಿನ ಚಲನೆಗೆ ಪ್ರತಿರೋಧ ಒಡ್ಡತ್ತವೆ.

ರಾಕೆಟ್ಟಿನ ಮುಖ್ಯ ಭಾಗಗಳನ್ನು ಚಿತ್ರ ಇಲ್ಲಿ ವಿವರಿಸಿದೆ. ರಾಕೆಟ್ಟಿನ ಕೋಷ್ಠಕವನ್ನು ಎಂಜಿನ್ ಎನ್ನುತ್ತಾರೆ. ಇದರಲ್ಲಿ ಇಂಧನ ದಹನವಾಗಿ ನಿಷ್ಕಾಸಾನಿಲಗಳು ಸೂಸುಬಾಯಿಯ ಮೂಲಕ ಹೊರಬರುತ್ತದೆ. ಉಪಯುಕ್ತಹೊರೆ (m) ಮತ್ತು ಇಂಧನದ ರಾಶಿ (M) ಗಳ ನಿಷ್ಪತ್ತಿಗೆ ಉಪಯುಕ್ತಹೊರೆ ನಿಷ್ಕಾಸ ಎನ್ನುತ್ತಾರೆ. ರಾಕೆಟ್ಟನ್ನು ವಿನ್ಯಾಸಗೊಳಿಸುವುದಕ್ಕೆ ಈ ಮಾಹಿತಿ ಬೇಕು. ಇಂಧನ ಮತ್ತು ಆಕ್ಸೀಡಕಗಳನ್ನು ಪ್ರತ್ಯೇಕ ಟ್ಯಾಂಕುಗಳಲ್ಲಿ ಇಟ್ಟಿರುತ್ತಾರೆ. ಕವಾಟಗಳ ಸಹಾಯದಿಂದ ಇವು ನಿಯಂತ್ರಿತ ಪ್ರಮಾಣದಲ್ಲಿ ಎಂಜಿನ್ನಿಗೆ ಹೋಗುವಂತೆ ಮಾಡುತ್ತಾರೆ.

V-2 rocket diagram (with English labels).svg

ಬಹುಹಂತ ರಾಕೆಟ್ಟುಗಳು[ಬದಲಾಯಿಸಿ]

ಭಾರವಾದ ಹೊರೆಯನ್ನು ಎತ್ತುವುದು ಒಂದೇ ರಾಕೆಟ್ಟಿನಿಂದ ಸಾಧ್ಯವಾಗದು. ಹೆಚ್ಚು ಎತ್ತರಗಳಿಗೆ ಹೋಗಬೇಕಾದರೆ ಹೊರೆಯೂ (ನೋದನಕಾರಿಗಳ ರಾಶಿ) ಹೆಚ್ಚಾಗುತ್ತದೆ. ರಾಕೆಟ್ ಮೇಲೇರಲು ಅಗತ್ಯವಿರುವ ಸಾಮರ್ಥ್ಯ ಒದಗಿಸಲು ಒಂದರ ಮುಂದೆ ಒಂದರಂತೆ ಹಲವು ರಾಕೆಟ್ಟುಗಳನ್ನು ಜೋಡಿಸುತ್ತಾರೆ. ಈ ರೀತಿ ನಿರ್ಮಿತವಾದ ರಾಕೆಟ್ಟುಗಳಿಗೆ ಬಹುಹಂತ ರಾಕೆಟ್ಟುಗಳು ಎಂದು ಹೆಸರು.

ಬಹುಹಂತ ರಾಕೆಟ್ಟುಗಳನ್ನು ಉಪಯೋಗಿಸುವುದರಿಂದ ಇಂಧನ ಬಳಕೆಯ ಬೇಡಿಕೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ರಾಕೆಟ್ಟು ಸುಮಾರು 100 km ಎತ್ತರ ತಲುಪಿದಾಗ ಅದರ ಮೊದಲ ಹಂತ ಕಳಚಿ ಬೀಳುತ್ತದೆ. ಈ ಕ್ಷಣದಲ್ಲಿ ಎರಡನೇ ಹಂತದ ಎಂಜಿನ್ ಕಾರ್ಯರಂಭ ಮಾಡುತ್ತದೆ. ಮೊದಲ ಹಂತದೊಳಗಿದ್ದ ಟ್ಯಾಂಕುಗಳು ಮತ್ತು ನೋದನಕಾರಿಗಳು ಈಗ ಇಲ್ಲದಿರುವುದರಿಂದ ರಾಕೆಟ್ಟಿನ ಒಟ್ಟು ರಾಶಿ ಕಡಿಮೆ ಆಗುತ್ತದೆ. ಎರಡನೇ ಹಂತವು ರಾಕೆಟ್ಟನ್ನು ಇನ್ನೂ ಎತ್ತರಕ್ಕೆ ಒಯ್ದು ಕಳಚಿಕೊಳ್ಳುತ್ತದೆ. ಅದರ ಸ್ಥನದಲ್ಲಿ ಮೂರನೇ ಹಂತ ಕಾರ್ಯಾರಂಭ ಮಾಡುತ್ತದೆ. ಈ ಪ್ರತಿಕ್ರಿಯೆಯು ರಾಕೆಟ್ಟಿನ ದಕ್ಷತೆಯನ್ನು ಹೆಚ್ಚಿಸುತ್ತದೆ.

ವ್ಯೋಮನೌಕೆಗಳನ್ನು ಉಡಾಯಿಸಲು ಉಪಯೋಗಿಸುವ ಬಹುಪಾಲು ರಾಕೆಟ್ಟುಗಳಲ್ಲಿ ಬೃಹತ್ತಾದ ಮೊದಲು ಬೂಸ್ಟರ್ ಹಂತದ ಜೊತೆಗೆ ಎರಡು ಸಣ್ಣ ಹಂತಗಳು ಇರುತ್ತವೆ.

ರಾಕೆಟ್ಟುಗಳನ್ನು ವಾಯುಮಂಡಲದ ಅಧ್ಯಯನಗಳಿಗೆ ಅಲ್ಲದೆ ವ್ಯೋಮನೌಕೆ ಮತ್ತು ಕ್ಷಿಪಣಿಗಳ ಉಡಾವಣೆಗೂ ಉಪಯೋಗಿಸುತ್ತಾರೆ. ವಾಯುಮಂಡಲದ ಉನ್ನುತ ಸ್ತರಗಳ ವೈಜ್ಞಾನಿಕ ಸಂಶೋಧನೆ ಮಾಡುವಾಗ ರಾಕೆಟ್ಟಿನಲ್ಲಿ ಇತರ ವೈಜ್ಞಾನಿಕ ಸಾಧನಗಳ ಜೊತೆಗೆ ರೇಡಿಯೊ ಪ್ರೇಷಕಗಳನ್ನೂ ಇಟ್ಟಿರುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ಕೂಡಲೇ ಭೂಮಿಗೆ ರವಾನಿಸುವುದು ಇದರಿಂದ ಸಾಧ್ಯವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.qrg.northwestern.edu/projects/vss/docs/propulsion/1-what-is-a-propellant.html
  2. "A Brief History of Rocketry". Solarviews.com. Retrieved 2012-06-14.
"https://kn.wikipedia.org/w/index.php?title=ರಾಕೆಟ್&oldid=651279" ಇಂದ ಪಡೆಯಲ್ಪಟ್ಟಿದೆ