ನೈಟ್ರಿಕ್ ಆಮ್ಲ
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Nitric acid
| |||
Other names
| |||
Identifiers | |||
3D model (JSmol)
|
|||
ChEBI | |||
ChemSpider | |||
ECHA InfoCard | 100.028.832 | ||
EC Number | 231-714-2 | ||
1576 | |||
KEGG | |||
MeSH | Nitric+acid | ||
PubChem CID
|
|||
RTECS number | QU5775000 | ||
UNII | |||
UN number | 2031 | ||
| |||
| |||
ಗುಣಗಳು | |||
ಆಣ್ವಿಕ ಸೂತ್ರ | HNO3 | ||
ಮೋಲಾರ್ ದ್ರವ್ಯರಾಶಿ | ೬೩.೦೧ g mol−1 | ||
Appearance | Colorless liquid[೧] | ||
Odor | Acrid, suffocating[೧] | ||
ಸಾಂದ್ರತೆ | 1.51 g/cm3, 1.41 g/cm3 [68% w/w] | ||
ಕರಗು ಬಿಂದು |
-42 °C, 231 K, -44 °F | ||
ಕುದಿ ಬಿಂದು |
83 °C, 356 K, 181 °F | ||
ಕರಗುವಿಕೆ ನೀರಿನಲ್ಲಿ | Miscible | ||
log P | −0.13[೨] | ||
Vapor pressure | 48 mmHg (20 °C)[೧] | ||
ಅಮ್ಲತೆ (pKa) | −1.4[೩] | ||
−1.99×10−5 cm3/mol | |||
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.397 (16.5 °C) | ||
ದ್ವಿಧ್ರುವ ಚಲನೆ | 2.17 ± 0.02 D | ||
ಉಷ್ಣರಸಾಯನಶಾಸ್ತ್ರ | |||
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
−207 kJ/mol[೪] | ||
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
146 J/(mol·K)[೪] | ||
Hazards | |||
Safety data sheet | ICSC 0183 | ||
GHS pictograms | |||
GHS Signal word | |||
H272, H300, H310, H330, H373, H411 | |||
P210, P220, P260, P305+351+338, P310, P370+378 | |||
NFPA 704 | |||
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|||
Lethal dose or concentration (LD, LC): | |||
LC50 (median concentration)
|
138 ppm (rat, 30 min)[೧] | ||
US health exposure limits (NIOSH): | |||
PEL (Permissible)
|
TWA 2 ppm (5 mg/m3)[೧] | ||
REL (Recommended)
|
TWA 2 ppm (5 mg/m3) ST 4 ppm (10 mg/m3)[೧] | ||
IDLH (Immediate danger)
|
25 ppm[೧] | ||
ಸಂಬಂಧಿತ ಸಂಯುಕ್ತಗಳು | |||
Other anions
|
|||
ಇತರ ಕ್ಯಾಟಯಾನು (ಧನ ಅಯಾನು) |
|||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ನೈಟ್ರಿಕ್ ಆಮ್ಲ (HNO3) ಒಂದು ಖನಿಜಾಮ್ಲವಾಗಿದೆ.[೬] ಇದನ್ನು ಆಕ್ವಾ ಫೋರ್ಟಿಸ್ ಮತ್ತು 'ಸ್ಪಿರಿಟ್ ಆಫ್ ನೈಟರ್' ಎಂದೂ ಕರೆಯುತ್ತಾರೆ.
ಇತಿಹಾಸ
[ಬದಲಾಯಿಸಿ]ರಸವಾದಿಗಳಿಗೆ ನೈಟ್ರಿಕ್ ಆಮ್ಲದ ಜ್ಞಾನವಿತ್ತು. ಇದನ್ನು ಅವರು ಆಕ್ವಾ ಫೋರ್ಟಿಸ್ ಎಂದು ಕರೆಯುತ್ತಾರೆ. ಪ್ರಸಿದ್ಧ ಆಲ್ಕೆಮಿಸ್ಟ್ ಜಾಬರ್ ಇದನ್ನು ನೈಟರ್ ಮತ್ತು ತಾಮ್ರದ ಸಲ್ಫೇಟ್, (CuSO4) ಮತ್ತು ಪಟಿಕದೊಂದಿಗೆ ಬಟ್ಟಿ ಇಳಿಸುವ ಮೂಲಕ ವಿವರಿಸುತ್ತಾರೆ. 16 ನೇ ಶತಮಾನದಲ್ಲಿ ನೈಟ್ರೆ ಮತ್ತು ನೈಟ್ರಿಕ್ ಆಮ್ಲದ ಜ್ಞಾನ ಭಾರತದಲ್ಲಿ ತಿಳಿದಿತ್ತು. ಗುಂಡು ಮದ್ದು ತಯಾರಿಸಲು ಅದರ ಬಳಕೆಯನ್ನು ಶುಕ್ರಾಚಾರ್ಯರ ಪುಸ್ತಕ ಶುಕ್ರನೀತಿ ವಿವರಿಸುತ್ತದೆ. ಒರಿಸ್ಸಾದ ಗಜಪತಿ ಪ್ರತಾಪ ರುದ್ರದೇವ ಬರೆದ 'ಕೌತುಕ ಚಿಂತಾಮಣಿ' ಗ್ರಂಥದಲ್ಲಿ ಯವಕ್ಷಾರ (ತವರದ ಸ್ಫಟಿಕೀಯ ಉಪ್ಪು ಪದಾರ್ಥ) ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಜೊತೆಯಲ್ಲಿ, ಸುವರ್ಣತಂತ್ರ ಗ್ರಂಥ (ಸುಮಾರು 17 ನೇ ಶತಮಾನದಲ್ಲಿ ಬರೆಯಲಾಗಿದೆ) 'ಶಂಖದ್ರವ' ಅನ್ನು ವಿವರಿಸುತ್ತದೆ, ಇದು (ಎಚ್‌ಸಿಎಲ್) ಮಿಶ್ರಣವಾಗಿತ್ತು. ಆಯಿನೇ ಅಕ್ಬರಿ ಗ್ರಂಥವು ರಾಶಿಯನ್ನು (ತೀರದ ಆಮ್ಲ) ವಿವರಿಸುತ್ತದೆ. ಇದನ್ನು ಬೆಳ್ಳಿಯನ್ನು ಸ್ವಚ್ಛಗೊಳಿಸಲು ಬಳಸಬಹುದು.
ಕ್ರಿ.ಶ.1648 ವರ್ಷದಲ್ಲಿ ಗ್ಲೌಬರ್ ನೈಟರ್ ಪ್ರತಿಕ್ರಿಯೆ ವಿಟ್ರಿಯಲ್ ತೈಲ ಮೂಲಕ ಸಾಂದ್ರ ನೈಟ್ರಿಕ್ ಆಮ್ಲ ನಿರ್ಮಿಸಿದ. ಕ್ಯಾವೆಂಡಿಷ್ ಅದರ ಸಂಯೋಜನೆಯನ್ನು ಕ್ರಿ.ಶ 1785 ರಲ್ಲಿ ತಿಳಿಸಿದ.[೭][೮] ನೈಟ್ರಿಕ್ ಆಮ್ಲವು ವಾತಾವರಣದಲ್ಲಿ ಅಲ್ಪ ಪ್ರಮಾಣದ ವಿದ್ಯುತ್ ಹೊರಸೂಸುವಿಕೆಯಿಂದ ಉತ್ಪತ್ತಿಯಾಗುತ್ತದೆ. ಇದು ಮಳೆನೀರಿನಲ್ಲಿ ಕರಗಿ ಭೂಮಿಗೆ ಬರುತ್ತದೆ. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳ ಆಕ್ಸಿಡೀಕರಣದಿಂದ ನೈಟ್ರಿಕ್ ಆಮ್ಲವೂ ರೂಪುಗೊಳ್ಳುತ್ತದೆ.
ದೊರಕುವಿಕೆ
[ಬದಲಾಯಿಸಿ]ಈ ಆಮ್ಲವು ಮಣ್ಣಿನಲ್ಲಿ ಅನೇಕ ನೈಟ್ರೇಟ್ ಪದಾರ್ಥಗಳಾಗಿ ಸಂಗ್ರಹವಾಗುತ್ತದೆ ಮತ್ತು ಇದನ್ನು ಸಸ್ಯಗಳಲ್ಲಿ ಬಳಸಲಾಗುತ್ತದೆ. ನೈಟ್ರೇಟ್ ಸಂಯುಕ್ತಗಳ ಪ್ರಮುಖ ಮೂಲ ಚಿಲಿ. ಪೊಟ್ಯಾಸಿಯಮ್ ನೈಟ್ರೇಟ್ ಭಾರತದ ಸಂಭರ್ ಸರೋವರದಲ್ಲಿ ಕಂಡುಬರುತ್ತದೆ. ಮಣ್ಣಿನೊಂದಿಗೆ ಬೆರೆಸಿದ ಪೊಟ್ಯಾಸಿಯಮ್ ನೈಟ್ರೇಟ್ ಭಾರತದ ಕೆಲವು ರಾಜ್ಯಗಳಲ್ಲಿ ಕಂಡುಬರುತ್ತದೆ. ಇದು ಒಮ್ಮೆ ಹೇರಳವಾದ ಶೋರಾವನ್ನು (ವಾಣಿಜ್ಯ ಪೊಟ್ಯಾಸಿಯಮ್ ನೈಟ್ರೇಟ್) ಉತ್ಪಾದಿಸಿತು.
ತಯಾರಿಕೆ
[ಬದಲಾಯಿಸಿ](i) ಪ್ರಯೋಗಾಲಯದಲ್ಲಿ, ಸೋಡಿಯಂ ನೈಟ್ರೇಟ್ (NaNO3) ಮತ್ತು ಸಾಂದ್ರೀಕೃತ ಸಲ್ಫ್ಯೂರಿಕ್ ಆಮ್ಲದ ಮಿಶ್ರಣಗಳಿಂದ ನೈಟ್ರಿಕ್ ಆಮ್ಲವನ್ನು ಇನ್ನೂ ತಯಾರಿಸಲಾಗುತ್ತದೆ. ಉತ್ಪತ್ತಿಯಾದ ಆವಿಗಳು ಆಮ್ಲವನ್ನು ನಿರ್ವಾತದಲ್ಲಿ ತಣ್ಣನೆಯ ಪಾತ್ರೆಯಲ್ಲಿ ಸಂಗ್ರಹಿಸುತ್ತವೆ. ಕ್ರಿಯೆಯ ಸಮೀಕರಣವು ಹೀಗಿರುತ್ತದೆ:
- NaNO3 + H2SO4 → NaHSO4 + HNO3
ಹಿಂದೆ, ವಾಣಿಜ್ಯ ಪ್ರಮಾಣದಲ್ಲಿ ಈ ಪ್ರಕ್ರಿಯೆಯಿಂದ ನೈಟ್ರಿಕ್ ಆಮ್ಲವನ್ನು ತಯಾರಿಸಲಾಗುತ್ತಿತ್ತು.
ಚಿಲಿದೇಶದ ನೈಟ್ರೇಟ್ ಲವಣಗಳ ನಿಕ್ಷೇಪಗಳ ವಿಶ್ವವಿಖ್ಯಾತಿಗೆ ಇದೇ ಕಾರಣ. ಪ್ರಪಂಚದ ಎಲ್ಲ ರಾಷ್ಟ್ರಗಳೂ ಈ ಸೋಡಿಯಂ ನೈಟ್ರೇಟ್ ಲವಣವನ್ನು ಬೀಡು ಕಬ್ಬಿಣ ಅಥವಾ ಸಾಮಾನ್ಯ ಉಕ್ಕಿನ ಭಟ್ಟಿ ಇಳಿಸುವ ಪಾತ್ರೆಯೊಂದರಲ್ಲಿ ಮೊದಲು ತೆಗೆದುಕೊಳ್ಳಬೇಕು. ಅದನ್ನು ಪೂರ್ಣವಾಗಿ, ಮೇಲಿನ ಸಮೀಕರಣದಲ್ಲಿ ನಿರೂಪಿಸಿರುವಂತೆ ಸೋಡಿಯಂ ಬೈಸಲ್ಫೇಟ್ ಆಗಿ ಪರಿವರ್ತಿಸಲು ಎಷ್ಟು ಸಲ್ಫ್ಯೂರಿಕ್ ಆಮ್ಲ ಬೇಕೋ ಅಷ್ಟೇ ಪ್ರಮಾಣದ ಸಲ್ಫ್ಯೂರಿಕ್ ಆಮ್ಲವನ್ನು ಮಾತ್ರ ಹಾಕಿ ಬೆರಸಿ ಕಾಯಿಸಿ ಭಟ್ಟಿ ಇಳಿಸಿದರೆ ನೈಟ್ರಿಕ್ ಆಮ್ಲ ದೊರೆಯುವುದು. ಸಾಮಾನ್ಯವಾಗಿ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆಗಳೆಲ್ಲವೂ ತಮ್ಮದೇ ಆದ ನೈಟ್ರಿಕ್ ಆಮ್ಲ ಕೈಗಾರಿಕೆಯನ್ನು ಹೊಂದಿರುತ್ತಿದ್ದುದು ಈ ಕಾರಣದಿಂದಲೇ.
ಭಟ್ಟಿ ಇಳಿಸುವಾಗ ಉಷ್ಣತೆಯ ನಿಯಂತ್ರಣ ಅವಶ್ಯಕ. ಹೆಚ್ಚಾಗಿ ಕಾಯಿಸಿದರೆ ನೈಟ್ರಿಕ್ ಆಮ್ಲ ಉಷ್ಣ ವಿಭಜನೆ ಹೊಂದುವ ಸಾಧ್ಯತೆ ಇದೆ. ಈ ವಿಧಾನ ಈಗ ಹೆಚ್ಚಾಗಿ ಬಳಕೆಯಲ್ಲಿಲ್ಲ.
(ii) ಎರಡನೆಯ ಪ್ರಕ್ರಿಯೆಯ ಪ್ರಕಾರ, ವಾತಾವರಣದ ಆಮ್ಲಜನಕ ಮತ್ತು ಸಾರಜನಕವನ್ನು ವಿದ್ಯುತ್ ವಿಸರ್ಜನೆ ಮೂಲಕ ಸಂಯೋಜಿಸಿ ನೈಟ್ರಿಕ್ ಆಮ್ಲವನ್ನು ರೂಪಿಸುತ್ತದೆ. ಈ ಪ್ರತಿಕ್ರಿಯೆಯನ್ನು ಬರ್ಕ್‌ಲ್ಯಾಂಡ್ ಮತ್ತು ಐಡ್ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ.[೯] ವಿದ್ಯುಚ್ಛಕ್ತಿಯ ಅತಿಯಾದ ಖರ್ಚು ಮತ್ತು ಆಮ್ಲದ ಕೊರತೆಯಿಂದಾಗಿ ಈ ಪ್ರಕ್ರಿಯೆಯನ್ನು ಈಗ ಬಳಸಲಾಗುವುದಿಲ್ಲ.
(iii) ಗಾಳಿಯಲ್ಲಿರುವ ಯಥೇಚ್ಛ ನೈಟ್ರೊಜನ್ ಅನ್ನು ನೀರಿನಿಂದ ಪಡೆದ ಹೈಡ್ರೊಜನ್ನೊಂದಿಗೆ ಸಂಯೋಗ ಹೊಂದುವಂತೆ ಮಾಡಿ ಹೇರಳವಾಗಿ ಅಮೋನಿಯಾವನ್ನು ಕೃತಕವಾಗಿ ತಯಾರಿಸುವ ಯಶಸ್ವಿಕೈಗಾರಿಕೆ ಆಗತಾನೆ ಬೆಳಕಿಗೆ ಬಂದಿತ್ತು.
N2 + 3H2 → 2NH3
ನೈಟ್ರಿಕ್ ಆಮ್ಲವನ್ನು ಸಾಮಾನ್ಯವಾಗಿ ಅಮೋನಿಯದ ವೇಗವರ್ಧಕ ಉತ್ಕರ್ಷಣ ಪ್ರಕ್ರಿಯೆಯಿಂದ ಉತ್ಪಾದಿಸಲಾಗುತ್ತದೆ. ಅಮೋನಿಯಾ(NH3) ಮತ್ತು ಗಾಳಿಯ ಮಿಶ್ರಣವನ್ನು 400°C ಗೆ ಬಿಸಿಮಾಡುವುದರ ಮೂಲಕ ಮತ್ತು ಪ್ಲಾಟಿನಂ ಮೆಟಲ್ ಲ್ಯಾಟಿಸ್ ಮೂಲಕ ಹಾದುಹೋಗುವ ಮೂಲಕ ಅಮೋನಿಯಾವನ್ನು ಆಕ್ಸಿಡೀಕರಿಸಲಾಗುತ್ತದೆ.
- 4NH3 + 5O2 → 4NO + 6H2O + 215,000 Cal.
ಉಳಿದ ನೈಟ್ರಿಕ್ ಆಕ್ಸೈಡ್ ಅನ್ನು ಪುನಃ ತುಂಬಿಸಲಾಗುತ್ತದೆ.
2NO + O2 → 2NO2
ಉತ್ಪತ್ತಿಯಾದ ನೈಟ್ರಿಕ್ ಡಯಾಕ್ಸೈಡ್ ಅನ್ನು ತಣ್ಣಗಾಗಿಸಲಾಗುತ್ತದೆ ಮತ್ತು ಹೀರಿಕೊಳ್ಳುವ ಗೋಪುರಗಳ ಮೂಲಕ ಹರಿಸಲಾಗುತ್ತದೆ, ಇದರಲ್ಲಿ ನೀರು ಚೆಲ್ಲಲಾಗುತ್ತದೆ. ಇಲ್ಲಿ ನೈಟ್ರಿಕ್ ಆಮ್ಲವನ್ನು ತಯಾರಿಸಲಾಗುತ್ತದೆ.
- 3NO2 + H2O → 2HNO3 + NO
ಅಮೋನಿಯಾದೊಡನೆ ಗಾಳಿಯ ಬದಲು ಆಕ್ಸಿಜನ್ನನ್ನು ಬೆರೆಸುವದು ಮತ್ತು ಉತ್ಕರ್ಷಣ ಕ್ರಿಯೆಯನ್ನು ಹೆಚ್ಚಿನ ಒತ್ತಡದಲ್ಲಿ ನಡೆಸುವುದು ಇವು ನೈಟ್ರಿಕ್ ಆಮ್ಲದ ಉತ್ಪನ್ನವನ್ನು ಅಭಿವೃದ್ಧಿಪಡಿಸುವುದಕ್ಕೆ ಸಹಕಾರಿ. ಕಿರ್ಕಿ, ಅರವನ ಕಾಡುಗಳಲ್ಲಿರುವ ರಾಷ್ಟ್ರೀಯ ರಕ್ಷಣಾ ಕೈಗಾರಿಕಾ ಕೇಂದ್ರಗಳಲ್ಲಿ ಈ ವಿಧಾನವನ್ನು ಅನುಸರಿಸುವರು. ಭಾರತದಲ್ಲಿ ಮೊದಮೊದಲು ಟಂಕಸಾಲೆಗಳೇ ನೈಟ್ರಿಕ್ ಆಮ್ಲವನ್ನು ಹೆಚ್ಚಾಗಿ ಬಳಸುತ್ತಿದ್ದುವು. ಆಗ ನಾರ್ವೆ ಜರ್ಮನಿಗಳಿಂದ ಆಮ್ಲವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ೧೯೩೭-೩೮ರಲ್ಲಿ ಭಾರತದಲ್ಲಿ ಕೇವಲ ೪೮೭ ಟನ್ (ಅದೇ ವರ್ಷ ಅಮೆರಿಕದಲ್ಲಿ ೧,೭೬,೦೦೦ ಟನ್), ೧೯೪೪-೪೫ರಲ್ಲಿ ೭೨೨ ಟನ್, ೧೯೬೬ರಲ್ಲಿ ೧೬,೮೩೬ ಟನ್ ನೈಟ್ರಿಕ್ ಆಮ್ಲ ತಯಾರಾಯಿತು.
(iv) ಇನ್ನೊಂದು ವಿಧಾನ ಸೂತ್ರ ನಿಸರ್ಗದ ಅನುಕರಣೆ. ಗಾಳಿಯಲ್ಲಿರುವ ಆಕ್ಸಿಜನ್, ನೈಟ್ರೊಜನ್‌ಗಳು ಆಕಾಶದಲ್ಲಿ ಮಿಂಚು ಹೊಡೆದಾಗ ರಾಸಾಯನಿಕವಾಗಿ ಸಂಯೋಗ ಹೊಂದಿ ಮೊದಲ ಹಂತದಲ್ಲಿ ನೈಟ್ರೊಜನ್ನಿನ ಆಕ್ಸೈಡ್ ಸಂಯುಕ್ತವನ್ನು ಕೊಡುತ್ತವೆ. ಇದು ಗಾಳಿಯಲ್ಲಿರುವ ಆಕ್ಸಿಜನ್ನಿನೊಡನೆ ಸುಲಭವಾಗಿ ಉತ್ಕರ್ಷಣ ಹೊಂದಿ ನೈಟ್ರೊಜನ್ನಿನ ಡೈಆಕ್ಸೈಡ್ ಆಗಿ ಪರಿವರ್ತನೆಹೊಂದಿ, ಮಳೆಯುಂಟಾದಾಗ ನೀರಿನೊಡನೆ ಲೀನವಾಗಿ ನೈಟ್ರಿಕ್ ಆಮ್ಲವಾಗುತ್ತದೆ. ನಿಸರ್ಗದ ಈ ಕ್ರಿಯೆಯ ಪ್ರತಿರೂಪವೊಂದನ್ನು ಕೃತಕವಾಗಿ ನಡೆಸುವ ಸಾಹಸ ನಡೆದಿದೆ. ಮಿಂಚಿನ ಬದಲಾಗಿ ಗಾಳಿಯ ಮೂಲಕ ಕೃತಕ ವಿದ್ಯುಚ್ಚಾಪವನ್ನು ಹಾಯಿಸುವುದು ಇಲ್ಲಿನ ಕ್ರಮ. ವಿದ್ಯುಚ್ಚಾಪದ ಉಷ್ಣತೆಯ ಮಟ್ಟ ಸುಮಾರು ೩,೦೦೦೦ ಸೆ. ಅಗಲವಾದ ಕೃತಕ ವಿದ್ಯುಚ್ಚಾಪದ ಮೂಲಕ ಗಾಳಿಯನ್ನು ಹಾಯಿಸಿ ನೈಟ್ರೊಜನ್ ಆಕ್ಸಿಜನ್‌ಗಳ ರಾಸಾಯನಿಕ ಸಂಯೋಗ ಉಂಟಾಗುವಂತೆ ಮಾಡುತ್ತಾರೆ. ಅಲ್ಲಿಂದಾಚೆಗೆ ಉಳಿದ ಕ್ರಿಯೆಗಳು ಹಿಂದೆ ವಿವರಿಸಿದಂತೆ. ಇಲ್ಲಿ ವಿದ್ಯುಚ್ಛಕ್ತಿ ಹೇರಳ ಮತ್ತು ಅಗ್ಗವಾಗಿ ದೊರೆತರೆ ಮಾತ್ರ ಈ ವಿಧಾನ ಆರ್ಥಿಕವಾಗಿ ಸಾಧ್ಯ. ಮೊದಲು ನಾರ್ವೆ ದೇಶದಲ್ಲಿ ಈ ವಿಧಾನ ಯಶಸ್ವಿಯಾಗಿ ಸ್ಥಾಪಿತವಾಯಿತು. ಈಗ ಇಲ್ಲಿಯೂ ಅಷ್ಟಾಗಿ ಆಚರಣೆಯಲ್ಲಿಲ್ಲ. ಮೊದಲು ಜಾಗತಿಕ ಸಮರ ಸಮಯದಲ್ಲಿ ಚಿಲಿ ನೈಟ್ರೇಟ್ ಲವಣಾಧಾರಿತ ವಿಧಾನ ಮಿತಿ, ಆ ಲವಣ ದೊರೆಯದೆ ಸಂಕುಚಿತವಾಯಿತು. ಆಗ ಭಾರತದಲ್ಲಿ ಇಲ್ಲೇ ದೊರೆಯುವ ಪೊಟಾಸಿಯಂ ನೈಟ್ರೇಟ್ ಲವಣವನ್ನು ಉಪಯೋಗಿಸಿ ನೈಟ್ರಿಕ್ ಆಮ್ಲವನ್ನು ತಯಾರಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯಿತು. ಆದರೆ ಬೆಲೆ ಮಾತ್ರ ದುಬಾರಿಯಾಗಿ ಕೈಗಾರಿಕೆ ಊರ್ಜಿತವಾಗಲಿಲ್ಲ, ಪಾಶ್ಚಾತ್ಯ ರಾಷ್ಟ್ರಗಳೂ ಇಂಥ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು.
ಈ ಮೇಲಿನ ವಿಧಾನಗಳಿಂದ ನಮಗೆ ದೊರೆಯುವ ನೈಟ್ರಿಕ್ ಆಮ್ಲ ದುರ್ಬಲ. ೬೦%-೬೫% ರಷ್ಟು ಮಾತ್ರ ಆಮ್ಲದ ಪ್ರಮಾಣ. ಸ್ಫೋಟಕ ವಸ್ತುಗಳ ತಯಾರಿಕೆಗೂ ಬಣ್ಣಗಳ ತಯಾರಿಕೆಗೂ ಪ್ರಬಲ ನೈಟ್ರಿಕ್‌ಆಮ್ಲ (೯೦%-೯೮%) ಅವಶ್ಯಕ. ದುರ್ಬಲ ಆಮ್ಲವನ್ನು ಕಾಯಿಸಿ ಭಟ್ಟಿ ಇಳಿಸಿದರೂ ಆವಿಯಲ್ಲಿ ಆಮ್ಲ ಮತ್ತು ನೀರು ಎರಡೂ ಅದೇ ಪ್ರಮಾಣದಲ್ಲಿ ಹೊರ ಬೀಳುವುವು. ಹೀಗಾಗಿ ಪ್ರಬಲ ನೈಟ್ರಿಕ್ ಆಮ್ಲವನ್ನು ತಯಾರಿಸಲು ಬೇರೆ ವಿಧಾನವನ್ನು ಅನುಸರಿಸಬೇಕಾಗುವದು. ಆಮ್ಲದಲ್ಲಿರುವ ಹೆಚ್ಚಿನ ನೀರನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಬೆರೆಸುವದರಿಂದ ತಡೆಹಿಡಿದು, ಅನಂತರ ಭಟ್ಟಿ ಇಳಿಸಿದರೆ ಪ್ರಬಲ ನೈಟ್ರಿಕ್ ಆಮ್ಲ ಭಟ್ಟಿ ಇಳಿಯುವುದು. ಪ್ರಬಲ ಸಲ್ಫ್ಯೂರಿಕ್ ಆಮ್ಲ ದುರ್ಬಲ ನೈಟ್ರಿಕ್ ಆಮ್ಲಗಳನ್ನು ಬೆರೆಸಿ ಮಿಶ್ರಣವನ್ನು ಹೊರಗಿನಿಂದ ಕಾಯಿಸಲಾಗಿ ನೀರಿನ ಹಬೆಯನ್ನು ಅದರ ಮೂಲಕ ಬಿಟ್ಟು ಕಾಯಿಸಿಯಾಗಲಿ ಬಟ್ಟಿ ಇಳಿಸಿದರೆ ನೈಟ್ರಿಕ್ ಆಮ್ಲದ ಆವಿ ಹೊರಬಿದ್ದು ತಣ್ಣಗಾದೊಡನೆ ದ್ರವೀಕರಿಸುವುದು. ಸಲ್ಫ್ಯೂರಿಕ್ ಆಮ್ಲದ ಬದಲು ಮೆಗ್ನೀಸಿಯಂ ನೈಟ್ರೇಟ್‌ನ್ನು ಉಪಯೋಗಿಸಿ ಜಲಾಂಶವನ್ನು ಪ್ರತಿಬಂಧಿಸಿ ಪ್ರಬಲ ನೈಟ್ರಿಕ್ ಆಮ್ಲವನ್ನು ಬಟ್ಟಿ ಇಳಿಸುವರು.
ಪ್ರಬಲ ನೈಟ್ರಿಕ್‌ಆಮ್ಲದ ಶೇಖರಣೆಯೂ ಸಾಗಾಣಿಕೆಯೂ ಕಷ್ಟಕರ ಮತ್ತು ಅಪಾಯಕಾರಿ. ಅನೇಕ ಲೋಹಗಳು, ಮರಮುಟ್ಟುಗಳು, ಚರ್ಮ ಇವುಗಳ ಮೇಲೆಲ್ಲ ನೈಟ್ರಿಕ್ ಆಮ್ಲ ಕ್ರಿಯಾತ್ಮಕ. ಅತಿಶುದ್ಧ ಅಲ್ಯೂಮಿನಿಯಂ, ತುಕ್ಕು ನಿರೋಧಕ ಸ್ಟೈನ್‌ಲೆಸ್ ಸ್ಟೀಲ್, ಟ್ಯಾಂಟಲಮ್ ಗಾಜು, ಪಿಂಗಾಣಿಗಳನ್ನು ನೈಟ್ರಿಕ್ ಆಮ್ಲ ಶೇಖರಣೆಗೆ ಸಾಗಾಣಿಕೆಗೆ ಬಳಸುವರು.
ಉಪಯೋಗಗಳು
[ಬದಲಾಯಿಸಿ]ರಾಸಾಯನಿಕ ಕೈಗಾರಿಕೆಗಳಲ್ಲಿ ನೈಟ್ರಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದರ ಆಮ್ಲೀಯ ಮತ್ತು ಉತ್ಕರ್ಷಣ ಗುಣಲಕ್ಷಣಗಳಿಂದಾಗಿ, ಇದನ್ನು ಅನೇಕ ಸಾವಯವ ಮತ್ತು ಅಜೈವಿಕ ಪ್ರತಿಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಸ್ಫೋಟಕಗಳು, ಬಣ್ಣಗಳು ಮತ್ತು ಔಷಧಿಗಳ ತಯಾರಿಕೆಯಲ್ಲಿ ಇದರ ವಿಶೇಷ ಬಳಕೆ ಇದೆ.[೧೦] ಇದರ ಲವಣಗಳು ಮತ್ತು ಇತರ ಸಂಯುಕ್ತಗಳು ರಸಗೊಬ್ಬರಗಳಾಗಿ ಕಾರ್ಯನಿರ್ವಹಿಸುತ್ತವೆ.
ವಿವಿಧ ರೀತಿಯ ಅಸ್ಫೋಟಕ ವಸ್ತುಗಳ ತಯಾರಿಕಾ ಕೈಗಾರಿಕೆಗೆ ನೈಟ್ರಿಕ್ ಆಮ್ಲ ಆವಶ್ಯಕ. ಕೆಲವು ಮುಖ್ಯ ಸ್ಫೋಟಕಗಳೆಂದರೆ ನೈಟ್ರೋಗ್ಲಿಸರೀನ್, ಗನ್‌ಕಾಟನ್, ಟೈನೈಟ್ರೋಟೋಲುಇನ್, ಪಿಕ್ರಿಕ್ ಆಮ್ಲ, ಅಮಟಾಲ್, ಇತ್ಯಾದಿ. ಕೃತಕ ರಾಸಾಯನಿಕ ಗೊಬ್ಬರಗಳ ಉಪಯುಕ್ತತೆಯ ಅರಿವಾದಂತೆಲ್ಲ ಪ್ರಪಂಚದ ಎಲ್ಲ ದೇಶಗಳಲ್ಲೂ ವ್ಯವಸಾಯ ಕ್ಷೇತ್ರದಲ್ಲಿ ಅವುಗಳ ಬಳಕೆ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವುದು ಸಹಜವಾದುದು. ಸಸ್ಯಗಳಿಗೆ ನೈಟ್ರೊಜನ್ ಪೂರೈಕೆಗೋಸ್ಕರ ಬಳಸುವ ಒಂದು ಪ್ರಮುಖ ಕೃತಕ ಗೊಬ್ಬರ ಅಮೋನಿಯಂ ನೈಟ್ರೈಟ್. ಇದರ ತಯಾರಿಕೆಯಲ್ಲಿ ಈಗ ನೈಟ್ರಿಕ್ ಆಮ್ಲವನ್ನು ಪ್ರಧಾನವಾಗಿ ಉಪಯೋಗಿಸುತ್ತಿದ್ದಾರೆ. ಈ ನೈಟ್ರೇಟ್ ಲವಣವನ್ನು ನೈಟ್ರಿಕ್ ಆಮ್ಲ ಮತ್ತು ಸಂಶ್ಲೇಷಿತ ಅಮೋನಿಯಾಗಳ ಮಿಶ್ರಣದಿಂದ ತಯಾರಿಸಲಾಗುವುದು. ಕೃತಕ ದಾರಗಳು ಮತ್ತು ಪ್ಲಾಸ್ಟಿಕ್‌ಗಳು, ಬಣ್ಣದ ತಯಾರಿಕೆ, ಚಿನ್ನ ಬೆಳ್ಳಿಯ ಶುದ್ಧೀಕರಣ, ಹಳೆಯ ನಾಣ್ಯಗಳನ್ನು ಕರಗಿಸುವುದು, ತಾಮ್ರ, ಸೀಸ ಮುಂತಾದ ಲೋಹಗಳನ್ನು ಕರಗಿಸುವುದು, ಪರಮಾಣು ಶಕ್ತಿ ಉತ್ಪಾದನೆಗೆ ಮೂಲ ಇಂಧನವಾದ ಯುರೇನಿಯಂ ಲೋಹದ ತಯಾರಿಕೆ, ಆಕಾಶಬಾಣಗಳನ್ನು ಹಾರಿಸಲು ಉಪಯೋಗಿಸುವ ಇಂಧನದಲ್ಲಿ ಉತ್ಕರ್ಷಣಕಾರಿಯಾಗಿ ಔಷಧಿಗಳ ತಯಾರಿಕೆ, ನರುಳ್ಳೆ ಅಥವಾ ವಾರ್ಟ್ಸ್‌ಗಳನ್ನು ಸುಟ್ಟು ನಿರ್ಮೂಲಿಸಲು, ಮುದ್ರಣಕ್ಕೆ ಅನುಕೂಲವಾಗುವಂತೆ ಛಾಯಾ ಚಿತ್ರಗಳ ಪ್ರತಿಯನ್ನು ಲೋಹದ ಮೇಲೆ ಕೊರೆಯುವುದಕ್ಕೆ (ಫೋಟೋ ಎನ್‌ಗ್ರೇವಿಂಗ್) ಮುಂತಾದ ಕೆಲಸಗಳಿಗೆ ನೈಟ್ರಿಕ್ ಆಮ್ಲವನ್ನು ಉಪಯೋಗಿಸುವರು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ ಟೆಂಪ್ಲೇಟು:PGCH
- ↑ "nitric acid_msds".
- ↑ Bell, R. P. (1973), The Proton in Chemistry (2nd ed.), Ithaca, NY: Cornell University Press
- ↑ ೪.೦ ೪.೧ Zumdahl, Steven S. (2009). Chemical Principles 6th Ed. Houghton Mifflin Company. p. A22. ISBN 978-0-618-94690-7.
- ↑ "Safety Data Sheet" (PDF). fishersci.com. Fisher Scientific International. 23 March 2015. p. 2. Archived (PDF) from the original on 10 September 2022. Retrieved 4 October 2022.
- ↑ Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. ISBN 978-0-08-037941-8.Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. ISBN 978-0-08-037941-8.
- ↑ Chisholm, Hugh, ed. (1911). . Encyclopædia Britannica. Vol. 19 (11th ed.). Cambridge University Press. pp. 711–712.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ↑ Thomas Thomson (chemist), The History of Chemistry (1830) Vol. 1, p. 40.
- ↑ Mellor, J. W. (1918). Modern Inorganic Chemistry. Longmans, Green and Co. p. 509.
- ↑ Thiemann, Michael; Scheibler, Erich; Wiegand, Karl Wilhelm. "Nitric Acid, Nitrous Acid, and Nitrogen Oxides". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a17_293.
{{cite encyclopedia}}
: Cite has empty unknown parameter:|authors=
(help)
ಹೊರಗಿನ ಕೊಂಡಿಗಳು
[ಬದಲಾಯಿಸಿ]- NIOSH Pocket Guide to Chemical Hazards
- National Pollutant Inventory – Nitric Acid Fact Sheet
- Calculators: surface tensions, and densities, molarities and molalities of aqueous nitric acid
- Pages using duplicate arguments in template calls
- CS1 errors: empty unknown parameters
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Chemical articles with multiple compound IDs
- Multiple chemicals in an infobox that need indexing
- ECHA InfoCard ID from Wikidata
- Chembox having GHS data
- GHS errors
- Articles containing unverified chemical infoboxes
- ಆಮ್ಲಗಳು
- ರಸಾಯನಶಾಸ್ತ್ರ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ