ಕೋವಿಮದ್ದು

ವಿಕಿಪೀಡಿಯ ಇಂದ
Jump to navigation Jump to search
Black Powder Close Up.jpg

ಕೋವಿಮದ್ದು ಪರಿಚಿತವಾಗಿರುವ ಅತ್ಯಂತ ಮುಂಚಿನ ರಾಸಾಯನಿಕ ಸ್ಫೋಟಕ. ಇದು ಗಂಧಕ, ಇದ್ದಿಲು ಮತ್ತು ಪೊಟ್ಯಾಷಿಯಂ ನೈಟ್ರೇಟ್‍ಗಳ (KNO3) ಮಿಶ್ರಣವನ್ನು ಹೊಂದಿರುತ್ತದೆ. ಗಂಧಕ ಮತ್ತು ಇದ್ದಿಲು ಇಂಧನಗಳಾಗಿ ಕಾರ್ಯನಿರ್ವಹಿಸಿದರೆ ಪೊಟ್ಯಾಷಿಯಂ ನೈಟ್ರೇಟ್ ಉತ್ಕರ್ಷಣಕಾರಿಯಾಗಿದೆ. ಅದರ ಬೆಂಕಿಯುಂಟುಮಾಡುವ ಲಕ್ಷಣಗಳು ಮತ್ತು ಅದು ಉತ್ಪಾದಿಸುವ ಶಾಖ ಹಾಗೂ ಅನಿಲದ ಪರಿಮಾಣದ ಪ್ರಮಾಣದ ಕಾರಣ, ಕೋವಿಮದ್ದನ್ನು ಆಗ್ನೇಯಾಸ್ತ್ರಗಳು, ಫಿರಂಗಿಗಳು, ರಾಕೆಟ್‍ಗಳು ಹಾಗೂ ಸುಡುಮದ್ದುಗಳಲ್ಲಿ ನೋದಕವಾಗಿ, ಮತ್ತು ಕಲ್ಲು ಗಣಿಗಾರಿಕೆ, ಗಣಿಗಾರಿಕೆ ಮತ್ತು ರಸ್ತೆ ನಿರ್ಮಾಣದಲ್ಲಿ ಸ್ಫೋಟಕ ಪುಡಿಯಾಗಿ ವ್ಯಾಪಕವಾಗಿ ಬಳಸಲಾಗಿದೆ.

ಕೋವಿಮದ್ದನ್ನು ಚೀನಾದಲ್ಲಿ ೯ನೇ ಶತಮಾನದಲ್ಲಿ ಆವಿಷ್ಕರಿಸಲಾಯಿತು ಮತ್ತು ೧೩ ನೇ ಶತಮಾನದ ಕೊನೆಯವರೆಗೆ ಯೂರೇಷ್ಯಾದ ಬಹುತೇಕ ಭಾಗಗಳಾದ್ಯಂತ ಹರಡಿತು. ಮೂಲತಃ ಔಷಧೀಯ ಉದ್ದೇಶಗಳಿಗಾಗಿ ಟಾವೋವಾದಿಗಳು ಇದನ್ನು ಅಭಿವೃದ್ಧಿಪಡಿಸಿದರು. ಕೋವಿಮದ್ದನ್ನು ಯುದ್ಧದ ಉದ್ದೇಶಕ್ಕಾಗಿ ಮೊದಲ ಸಲ ಸುಮಾರು ಕ್ರಿ.ಶ. ೧೦೦೦ರಲ್ಲಿ ಬಳಸಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]