ತಿಗಳಾರಿ ಲಿಪಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಉಗಮ ಮತ್ತು ವಿಕಾಸ[ಬದಲಾಯಿಸಿ]
ಇತರ ಭಾರತೀಯ ಲಿಪಿಗಳಂತೆ ತುಳು ಲಿಪಿಯು ಕೂಡ ಬ್ರಾಹ್ಮೀ ಲಿಪಿಯಿಂದ ವಿಕಸಿತಗೊಂಡಿದೆ. ಈ ಲಿಪಿಯು ಬ್ರಾಹ್ಮಿಜನ್ಯ ಲಿಪಿಯಾದ ಗ್ರಂಥ ಲಿಪಿಯ ಮೂಲಕ ಸುಮಾರು ೧೧-೧೨ನೇ ಶತಮಾನದಲ್ಲಿ ತಮಿಳುನಾಡು-ಕೇರಳ ಪ್ರದೇಶದಿಂದ ಕರ್ನಾಟಕಕ್ಕೆ ಆಗಮಿಸಿತು. ಕ್ರಮೇಣ ಇಲ್ಲಿಯ ತುಳು ಮತ್ತು ಕನ್ನಡ ಮಾತನಾಡುವ ಕೋಟ,ಹವ್ಯಕ ಬ್ರಾಹ್ಮಣರ ಪ್ರಮುಖ ಲಿಪಿಯಾಯಿತು. ಅತ್ತ ಮಲಯಾಳಂ ಲಿಪಿಯು ಕೇರಳದಲ್ಲಿ ಸಮಕಾಲೀನವಾಗಿ ವಿಕಾಸವಾಯಿತು.
ಮುಖ್ಯ ಸಾಹಿತ್ಯ[ಬದಲಾಯಿಸಿ]
ತುಳು ಲಿಪಿಯ ಮುಖ್ಯಭಾಷೆ ಸಂಸ್ಕೃತ . ಬಹುತೇಕ ತಾಳೆಗರಿಗಳು ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಿದ್ದಾಗಿವೆ. ವೇದ, ಉಪನಿಷತ್ತುಗಳು, ಪುರಾಣಗಳು, ಮಹಾಭಾರತ, ರಾಮಯಣ, ಕಾವ್ಯ, ಧರ್ಮಶಾಸ್ತ್ರ, ಪೂಜಾಗ್ರಂಥಗಳು ಈ ಲಿಪಿಯಲ್ಲಿ ಲಭಿಸಿವೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಮತ್ತು ತುಳು ಹಸ್ತಪ್ರತಿಗಳು ಕಾಣಬರುತ್ತವೆ.
ಉಪಯೋಗಿಸುತ್ತಿದ್ದ ಪ್ರದೇಶ[ಬದಲಾಯಿಸಿ]
ಈ ಲಿಪಿ ಕರ್ಣಾಟಕದ ಮಲೆನಾಡು ಹಾಗು ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು. ಅನೇಕ ಹಸ್ತಪ್ರತಿಗಳು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ದೊರಕುತ್ತವೆ.
ಹಸ್ತಪ್ರತಿಗಳು ಸಂರಕ್ಷಿತವಾಗಿರುವ ಸ್ಥಳಗಳು[ಬದಲಾಯಿಸಿ]
ಉಡುಪಿ ಅಷ್ಟಮಠಗಳಲ್ಲಿ, ಧರ್ಮಸ್ಥಳದಲ್ಲಿ, ಕೆಳದಿ ಸಂಗ್ರಹಾಲಯದಲ್ಲಿ, ಪ್ರಾಚ್ಯಶಾಸ್ತ್ರ ಅಧ್ಯಯನ ಕೇಂದ್ರ,ಮೈಸೂರು,ತಂಜವೂರಿನ ಸರಸ್ವತೀ ಮಹಲ್, ಪುದುಚ್ಚೇರಿ,ಮಲೆನಾಡಿನ ಅನೇಕ ದೇವಸ್ಥಾನ.ಮಠ,ಮನೆಯಲ್ಲಿ ಈ ಲಿಪಿಯ ತಾಳೆಗರಿಗಳನ್ನು ಸಂಗ್ರಹ ಮಾಡಲಾಗಿದೆ.