ವಿಷಯಕ್ಕೆ ಹೋಗು

ಎಡ್ಮಂಡ್ ಹ್ಯಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ಮಂಡ್ ಹ್ಯಾಲೆ
Portrait by Richard Phillips, before 1722
ಜನನ8 November [O.S. 29 October] 1656
Haggerston, Middlesex, England
ಮರಣಟೆಂಪ್ಲೇಟು:OldStyleDateDY (aged 85)
ಗ್ರೀನ್ವಿಚ್, ಕೆಂಟ್, ಇಂಗ್ಲೆಂಡ್
ಸಮಾಧಿ ಸ್ಥಳSt. Margaret's, ಲೀ,ಲಂಡನ್
ರಾಷ್ಟ್ರೀಯತೆEnglish
ಕಾರ್ಯಕ್ಷೇತ್ರAstronomy, geophysics, ಗಣಿತ , meteorology, ಭೌತಶಾಸ್ತ್ರ, cartography
ಸಂಸ್ಥೆಗಳುUniversity of Oxford
Royal Observatory, Greenwich
ಅಭ್ಯಸಿಸಿದ ವಿದ್ಯಾಪೀಠThe Queen's College, Oxford
ಸಂಗಾತಿಮೇರಿ ಟೂಕ್
ಮಕ್ಕಳುEdmond Halley (d. 1741)
Margaret (d. 1713)
Richelle (d. 1748)

ಎಡ್ಮಂಡ್ ಹ್ಯಾಲೆ ಓರ್ವ ಖಗೋಳಶಾಸ್ತ್ರಜ್ಞ, ಭೂಭೌತವಿಜ್ಞಾನಿ, ಗಣಿತಶಾಸ್ತ್ರಜ್ಞ, ಪವನಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ. ಇವರು ೧೭೨೦ ರಲ್ಲಿ ಜಾನ್ ಫ಼್ಲ್ಯಾಮ್‍ಸ್ಟೀಡ್ ಉತ್ತರಾಧಿಕಾರಿಯಾಗಿ ಬ್ರಿಟನ್ನಲ್ಲಿ ಎರಡನೇ ಅಸ್ಟ್ರಾನಾಮರ್ ರಾಯಲ್ ಆಗಿದ್ದರು. ಇವರು ಸೇಂಟ್ ಹೆಲೆನಾದಲ್ಲಿ ನಿರ್ಮಿಸಿದ ವೀಕ್ಷಣಾಲಯದಿಂದ, ಸೂರ್ಯನ ಅಡ್ದಲಾಗಿ ಬುಧದ ಸಂಕ್ರಮಣವನ್ನು ದಾಖಲಿಸಬಹುದೆಂದು ಅರಿತುಕೊಂಡರು. ಇವರು ತಮ್ಮ ವೀಕ್ಷಣೆಗಳನ್ನು ಸಮಕಾಲೀನ ನಕ್ಷತ್ರ ನಕ್ಷೆಗಳನ್ನು ವಿಸ್ತರಿಸಲು ಬಳಸಿದರು. ಇವರು ಐಸಾಕ್‌ ನ್ಯೂಟನ್‌ರ ಚಲನೆಯ ನಿಯಮಗಳನ್ನು ಸಾಬೀತುಪಡಿಸುವ ದೃಷ್ಟಿಯಿಂದ ಸಹಾಯ ಮಾಡಿದರು ಮತ್ತು ನ್ಯೂಟನ್‌ರ ಪ್ರಭಾವಶಾಲಿ ಫಿಲೋಸಫಿಯ ನ್ಯಾಚುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾದ ಪ್ರಕಟಣೆಗೆ ಹಣ ನೀಡಿದರು. ತಮ್ಮ ೧೬೮೨ ರ ವೀಕ್ಷಣೆಯಿಂದ, ೧೭೦೫ರ ಪುಸ್ತಕ Synopsis of the Astronomy of Comets ನ ಸಾರಾಂಶದಲ್ಲಿ ಹ್ಯಾಲಿ ಕಾಮೆಟ್‍ನ ಆವರ್ತಕತೆಯನ್ನು ಲೆಕ್ಕಾಚಾರ ಮಾಡಲು ಚಲನೆಯ ನಿಯಮಗಳನ್ನು ಅವರು ಬಳಸಿದರು. ೧೭೫೮ ರಲ್ಲಿ ಅದು ಮತ್ತೆ ಕಾಣಿಸಿಕೊಂಡ ಮೇಲೆ ಅದನ್ನು ಇವರ ಹೆಸರಲ್ಲಿ ಹೆಸರಿಸಲಾಯಿತು. ಆದರೆ, ಅದನ್ನು ನೋಡಲು ಅವರು ಬದುಕಿರಲಿಲ್ಲ.

೧೬೯೮ ರಲ್ಲಿ ಆರಂಭಗೊಂಡು, ಅವರು ತೇಲುವ ದಂಡಯಾತ್ರೆಗಳನ್ನು ಕೈಗೊಂಡರು ಮತ್ತು ಭೂಮಿಯ ಕಾಂತೀಯತೆಯ ಪರಿಸ್ಥಿತಿಗಳ‌ ಬಗ್ಗೆ ವೀಕ್ಷಣೆಗಳನ್ನು ಮಾಡಿದರು. ೧೭೧೮ ರಲ್ಲಿ ಅವರು "ಸ್ಥಿರ" ನಕ್ಷತ್ರಗಳ ಸರಿಯಾದ ಚಲನೆಯನ್ನು ಕಂಡುಹಿಡಿದರು.[೧]

ಆರಂಭಿಕ ಜೀವನ[ಬದಲಾಯಿಸಿ]

ಹ್ಯಾಲೆಯವರು ನವೆಂಬರ್ ೮, ೧೬೫೬ ರಲ್ಲಿ ಲಂಡನ್‍ನಲ್ಲಿ ಜನಿಸಿದರು.[೨] ಹ್ಯಾಲೆಯವರ ತಂದೆ ಎಡ್ಮಂಡ್ ಹ್ಯಾಲೆ ಸೀನಿಯರ್ ಡರ್ಬಿಶೈರ್ ಕುಟುಂಬದಿಂದ ಬಂದಿದ್ದರು ಮತ್ತು ಲಂಡನ್‍ನಲ್ಲಿ ಶ್ರೀಮಂತ ಸಾಬೂನು ತಯಾರಕರಾಗಿದ್ದರು. ಮಗುವಾಗಿದ್ದಾಗ, ಹ್ಯಾಲೆ ಗಣಿತಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಇವರು ಸೇಂಟ್ ಪಾಲ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿದರು.[೩] ಅಭಿಜಾತ ಕೃತಿಗಳು ಮತ್ತು ಗಣಿತಾಧ್ಯಯನದಲ್ಲಿ ಉನ್ನತ ಮಟ್ಟದ ಸಾಧನೆ. 15 ವರ್ಷ ವಯಸ್ಸಿಗೆ ಶಾಲೆಯ ಕ್ಯಾಪ್ಟನ್ ಜವಾಬ್ದಾರಿ ಧಾರಣೆ; ಭೂಕಾಂತ ಕ್ಷೇತ್ರದಿಂದಾಗಿ ದಿಕ್ಸೂಚಿ ಪಠನಗಳಲ್ಲಿ ಆಗುವ ವ್ಯತ್ಯಯನಗಳ ವೀಕ್ಷಣೆ; ನಕ್ಷತ್ರಪಟದಲ್ಲಿ ಇರುವ ದೋಷಗಳನ್ನು ನಿಖರವಾಗಿ ಪತ್ತೆಹಚ್ಚುವಷ್ಟರ ಮಟ್ಟಿಗೆ ಆಕಾಶದಲ್ಲಿ ನಕ್ಷತ್ರವೀಕ್ಷಣೆ - ಇವು ಎಳೆವಯಸ್ಸಿನಲ್ಲಿಯೇ ಗೋಚರಿಸಿದ ಪ್ರತಿಭಾ ಸೂಚಿಗಳು. ಅಲ್ಲಿ ಅವರು ಖಗೋಳಶಾಸ್ತ್ರದಲ್ಲಿ ತಮ್ಮ ಆರಂಭಿಕ ಆಸಕ್ತಿಯನ್ನು ಬೆಳೆಸಿಕೊಂಡರು ಮತ್ತು ೧೬೭೩ ರಿಂದ ಆಕ್ಸ್‌ಫರ್ಡ್ ಕ್ವೀನ್ಸ್ ಕಾಲೇಜಿನಲ್ಲಿ ಓದಲು ತೊಡಗಿದರು. ಕಾಲೇಜಿಗೆ ದಾಖಲಾಗುವ ವೇಳೆಗೆ (1673) ಉತ್ತಮ ಉಪಕರಣಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ  ತಜ್ಞ ಖಗೋಳವಿಜ್ಞಾನಿ ಎಂಬ ಖ್ಯಾತಿಗೆ ಪಾತ್ರ. ಸ್ನಾತಕಪೂರ್ವ ವಿದ್ಯಾರ್ಥಿಯಾಗಿದ್ದಾಗಲೇ, ಹ್ಯಾಲೆಯವರು ಸೌರವ್ಯೂಹ ಮತ್ತು ಸೌರಕಲೆಗಳ ಮೇಲೆ ಲೇಖನಗಳನ್ನು ಪ್ರಕಟಿಸಿದರು.[೪] ೧೬೮೨ ರಲ್ಲಿ ಹ್ಯಾಲೆಯವರು ಮೇರಿ ಟೂಕ್‌ರನ್ನು ಮದುವೆಯಾದರು ಮತ್ತು ಇಸ್ಲಿಂಗ್ಟನ್‍ನಲ್ಲಿ ನೆಲೆಸಿದರು. ದಂಪತಿಗೆ ಮೂರು ಮಕ್ಕಳಿದ್ದರು.[೫]

ಪ್ರಕಟಣೆಗಳು ಮತ್ತು ಅವಿಷ್ಕಾರಗಳು[ಬದಲಾಯಿಸಿ]

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ, ಹ್ಯಾಲೆಯವರನ್ನು ಆಸ್ಟ್ರೊನೊಮರ್ ರಾಯಲ್ ಆಗಿದ್ದ ಜಾನ್ ಫ಼್ಲ್ಯಾಮ್‍ಸ್ಟೀಡ್‍ಗೆ ಪರಿಚಯಿಸಲಾಯಿತು. ಜಾನ್ ಫ್ಲ್ಯಾಮ್‌ಸ್ಟೀಡ್ (1646-1719) ಆಕ್ಸ್‌ಫರ್ಡ್ ಮತ್ತು ಗ್ರೀನ್‌ವಿಚ್‌ನಲ್ಲಿ ಮಾಡುತ್ತಿದ್ದ ಖಗೋಳವೀಕ್ಷಣಾ ಕಾರ್ಯದಲ್ಲಿ ಸಹಾಯಕನಾಗಿ ಕಾರ್ಯಾರಂಭ (1675). ಉತ್ತರ ಗೋಳಾರ್ಧದ ನಕ್ಷತ್ರಗಳ ಸೂಚಿಗಳನ್ನು ಸಂಕಲಿಸಿದ ಫ್ಲ್ಯಾಮ್‍ಸ್ಟೀಡ್‍ನ ಯೋಜನೆಯಿಂದ ಪ್ರಭಾವಿತರಾದ ಹ್ಯಾಲೆ, ದಕ್ಷಿಣ ಗೋಳಾರ್ಧದಲ್ಲಿ ಇದೇ ರೀತಿ ಮಾಡಲು ಪ್ರಸ್ತಾಪಿಸಿದರು.[೬] ಹ್ಯಾಲಿಯ ಈ ಪ್ರಯತ್ನಕ್ಕೆ ತಂದೆ, ಇಂಗ್ಲೆಂಡಿನ ರಾಜ 2 ನೆಯ ಚಾರ್ಲ್ಸ್, ರಾಯಲ್ ಸೊಸೈಟಿಯ ಅಧ್ಯಕ್ಷ ವಿಲಿಯಮ್ ಬ್ರೌಂಕರ್ (1620-1684) ಮತ್ತು ರಾಯಲ್ ವೀಕ್ಷಣಾಲಯದ ಸ್ಥಾಪಕರ ಪೈಕಿ ಒಬ್ಬನಾದ ಜೋನಾಸ್ ಮೂರ್ (1627-1679) ಇವರ ಬೆಂಬಲವಿತ್ತು.[೭]

 • ೧೬೭೬ ರಲ್ಲಿ, ಹ್ಯಾಲೆ ಔಪಚಾರಿಕ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ದಕ್ಷಿಣ ಅಟ್ಲಾಂಟಿಕ್ ದ್ವೀಪವಾದ ಸೇಂಟ್ ಹೆಲೆನಾಗೆ ಭೇಟಿ ನೀಡಿದರು ಮತ್ತು ದಕ್ಷಿಣ ಗೋಳಾರ್ಧದ ನಕ್ಷತ್ರಗಳನ್ನು ವೀಕ್ಷಿಸಲು, ದೂರದರ್ಶಕದ ನೋಟಗಳುಳ್ಳ ದೊಡ್ಡ ಷಷ್ಟಕವಿರುವ ವೀಕ್ಷಣಾಲಯವನ್ನು ಸ್ಥಾಪಿಸಿದರು. ಅಲ್ಲಿ ಅವರು ಸೂರ್ಯನ ಅಡ್ಡಲಾಗಿ ಬುಧದ ಸಂಕ್ರಮಣವನ್ನು ಗಮನಿಸಿ, ಸೌರವ್ಯೂಹದ ಸಂಪೂರ್ಣ ಗಾತ್ರವನ್ನು ನಿರ್ಧರಿಸಲು ಶುಕ್ರದ ಇದೇ ರೀತಿಯ ಸಂಕ್ರಮಣವನ್ನು ಬಳಸಬಹುದೆಂದು ಅರಿತುಕೊಂಡರು. ಲೋಲಕದ ವಿಷುವೀಯ ಅವಕರ್ಷಣದ (ಈಕ್ವೆಟೋರಿಯಲ್ ರಿಟಾರ್ಡೇಶನ್ ಆಫ್ ದ ಪೆಂಡುಲಮ್) ನಿಖರ ದಾಖಲೆ, ಇದೂ ಅಲ್ಲಿ ಮಾಡಿದ ಸಾಧನೆಯಾಗಿತ್ತು. ಸೇಂಟ್ ಹೆಲೀನದಲ್ಲಿ ಪ್ರತಿಕೂಲ ಹವಾಮಾನವಿದ್ದಾಗ್ಯೂ ದಕ್ಷಿಣ ಗೋಳಾರ್ಧದ 341 ನಕ್ಷತ್ರಗಳ ಯಾದಿ ತಯಾರಿಸಿ, ಕಿನ್ನರ (ಸೆಂಟಾರಸ್) ನಕ್ಷತ್ರಗುಚ್ಛವನ್ನು ಆವಿಷ್ಕರಿಸಿದ; ಬುಧನ ಯಾಮ್ಯೋತ್ತರ ಗಮನದ (ಟ್ರ್ಯಾನ್ಸಿಟ್) ಸಂಪೂರ್ಣ ವೀಕ್ಷಣೆ ಮಾಡಿದ (1677 ನವೆಂಬರ್ 7). ಅವರು ಮೇ ೧೬೭೮ ರಲ್ಲಿ ಇಂಗ್ಲೆಂಡ್‍ಗೆ ಮರಳಿದರು. ಪದವಿ ಪರೀಕ್ಷೆಗಳಿಗೆ ಹಾಜರಾಗದಿದ್ದರೂ ರಾಜ 2ನೆಯ ಚಾರ್ಲ್ಸ್‌ನ ಆಣತಿಯಂತೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸ್ನಾತಕ ಪದವಿ ಪ್ರದಾನಿಸಿತು (1678).[೮] ನಂತರದ ವರ್ಷದಲ್ಲಿ ಅವರು ರಾಯಲ್ ಸೊಸೈಟಿಯ ಪರವಾಗಿ ಡಾನ್ಜಿಗ್ (ಗ್ಡಾನ್ಸ್ಕ್)ಗೆ ಹೋದರು. ಖಗೋಳಶಾಸ್ತ್ರಜ್ಞನಾದ ಜೋಹಾನ್ಸ್ ಹೆವೆಲಿಯಸ್‍ನ ಸಾಧನಗಳು ದೂರದರ್ಶಕ ಕಣ್ಣುಗಳನ್ನು ಹೊಂದಿರಲಿಲ್ಲ, ಅವನ ವೀಕ್ಷಣೆಗಳನ್ನು ರಾಬರ್ಟ್ ಹುಕ್ ಪ್ರಶ್ನಿಸಿದನು. ಹ್ಯಾಲೆಯು ಹೆವೆಲಿಯಸ್ ಜೊತೆ ಉಳಿದುಕೊಂಡನು ಮತ್ತು ಅವನು ಹೆವೆಲಿಯಸ್‍ನ ವೀಕ್ಷಣೆಗಳ ಗುಣಮಟ್ಟವನ್ನು ತಾಳೆ ನೋಡಿದನು ಮತ್ತು ಪರೀಕ್ಷಿಸಿದನು. ೧೬೭೯ ರಲ್ಲಿ, ಹ್ಯಾಲೆಯವರು ಸೇಂಟ್ ಹೆಲೆನಾದಲ್ಲಿನ ತಮ್ಮ ವೀಕ್ಷಣೆಗಳ ಫಲಿತಾಂಶಗಳನ್ನು ಪ್ರಕಟಿಸಿದರು.[೯][೧೦]
 • ಯಾವುದೇ ಔಪಚಾರಿಕ ಹುದ್ದೆಗೆ ಅಂಟಿಕೊಳ್ಳದೆ  ಸ್ವತಂತ್ರವಾಗಿ ಸಂಶೋಧನ ನಿರತನಾಗಿರಲು ಹ್ಯಾಲಿ ಬಯಸುತ್ತಿದ್ದ. ತನ್ನ ಶಾಲಾ ಮಿತ್ರನೊಬ್ಬನೊಂದಿಗೆ ಯುರೋಪ್ ಪ್ರವಾಸ ಕೈಗೊಂಡ (1680). ಪ್ರವಾಸಾವಧಿಯಲ್ಲಿ ಧೂಮಕೇತುವೊಂದನ್ನು ವೀಕ್ಷಸಿದ ಹ್ಯಾಲಿ ಪ್ಯಾರಿಸ್‌ಗೆ ತೆರಳಿ ಜಿಯೊವಿನಿ ಡೊಮೆನಿಕೊ ಕ್ಯಾಸಿನಿಯ (1625-1712) ಜತೆಗೂಡಿ ಆ ಧೂಮಕೇತುವಿನ ಕಕ್ಷೆ ನಿರ್ಧರಿಸಲೋಸುಗ ನಿಖರ ವೀಕ್ಷಣೆಗಳನ್ನು ಮಾಡಿದ. ತದನಂತರ ಬಹಳ ಕಾಲ ಇಟಲಿಯಲ್ಲಿ ಕಳೆದ ಹ್ಯಾಲಿ ಇಂಗ್ಲೆಂಡಿಗೆ ಮರಳಿದ. ವಿವಾಹವಾಗಿ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವತ್ತ ಹಾಗೂ ಅನಿವಾರ್ಯವಾಗಿ ಇತರ ಕೌಟುಂಬಿಕ ಸಮಸ್ಯೆಗಳನ್ನು ಪರಹರಿಸುವುದರಲ್ಲಿ ತಲ್ಲೀನನಾದ. ಏತನ್ಮಧ್ಯೆ ಕೆಪ್ಲರ್‌ನ 3ನೆಯ ನಿಯಮದಲ್ಲಿ ಆಕರ್ಷಣೆಯ ಪ್ರತಿಲೋಮ ವರ್ಗ ನಿಯಮ ಹುದುಗಿದೆ ಎಂಬ ಅಂಶವನ್ನು ಪರಿಣಾಮಕಾರಿಯಾಗಿ ರಾಯಲ್ ಸೊಸೈಟಿಯ ಸಭೆಯೊಂದರಲ್ಲಿ ಸಾದರ ಪಡಿಸಿದ (1684). ಗ್ರಹಗಳು ದೀರ್ಘವೃತ್ತೀಯ ಕಕ್ಷೆಗಳಲ್ಲಿ ಚಲಿಸುತ್ತವೆ ಎಂಬುದನ್ನು ಈ ನಿಯಮದ ನೆರವಿನಿಂದ ಸಿದ್ಧಪಡಿಸಲು ಸಾಧ್ಯವೇ ಎಂಬುದನ್ನು ಹ್ಯಾಲಿ, ಹೂಕ್ ಮತ್ತು ಸರ್ ಕ್ರಿಸ್ಟಾಫರ್ ರೆನ್ (1632-1723) ಜೊತೆಗೂಡಿ ಪರಿಶೀಲಿಸಿದರೂ ಯಶಸ್ಸು ದೊರೆಯಲಿಲ್ಲ.
 • ೧೬೮೬ ರಲ್ಲಿ, ಹ್ಯಾಲೆಯವರು ತಮ್ಮ ಹೆಲೆನಿಯನ್ ದಂಡಯಾತ್ರೆಯ ಫಲಿತಾಂಶಗಳ ಎರಡನೇ ಭಾಗವನ್ನು ಪ್ರಕಟಿಸಿದರು. ವಾಣಿಜ್ಯ ಮಾರುತಗಳು ಮತ್ತು ಮಾನ್ಸೂನ್‍ಗಳ ಮೇಲೆ ವಿದ್ವತ್ಪ್ರಬಂಧ ಮತ್ತು ನಕ್ಷೆಯನ್ನು ಪ್ರಕಟಿಸಿದರು. ಹಿಂಬಾಲಿಸುವ ಮಾರುತಗಳನ್ನು ವರ್ಣಿಸಲು ಅವರು ಬಳಸಿದ ಚಿಹ್ನೆಗಳು ಈಗಲೂ ಹೆಚ್ಚಿನ ಆಧುನಿಕ ಹವಾಮಾನ ನಕ್ಷೆ ನಿರೂಪಣೆಯಲ್ಲಿ ಕಂಡುಬರುತ್ತವೆ. ಈ ಲೇಖನದಲ್ಲಿ ಅವರು ಸೌರ ತಾಪನವು ವಾಯುಮಂಡಲ ಚಲನೆಗಳಿಗೆ ಕಾರಣವೆಂದು ಗುರುತಿಸಿದ್ದಾರೆ. ಅವರು ವಾಯುಭಾರಮಾಪಕದ ಒತ್ತಡ ಮತ್ತು ಸಮುದ್ರ ಮಟ್ಟದ ಮೇಲಿನ ಎತ್ತರದ ನಡುವಿನ ಸಂಬಂಧವನ್ನು ಸ್ಥಾಪಿಸಿದರು. ಅವರ ನಕ್ಷೆಗಳು ಉದಯೋನ್ಮುಖ ಕ್ಷೇತ್ರವಾದ ಮಾಹಿತಿ ದೃಶ್ಯೀಕರಣಕ್ಕೆ ಪ್ರಮುಖ ಕೊಡುಗೆಯಾಗಿವೆ.[೧೧]
 • ಹ್ಯಾಲೆ ತಮ್ಮ ಸಮಯವನ್ನು ಚಂದ್ರನ ವಿಕ್ಷಣೆಗಳಲ್ಲಿ ಕಳೆದರು. ಆದರೆ ಗುರುತ್ವದ ಸಮಸ್ಯೆಗಳ ಬಗ್ಗೆ ಸಹ ಆಸಕ್ತಿ ಹೊಂದಿದ್ದರು. ಹ್ಯಾಲೆ ಕೃತಿಯ ಮಹತ್ತ್ವವನ್ನು ಗುರುತಿಸಿ ನ್ಯೂಟನ್‍ರೊಂದಿಗೆ ಪ್ರಕಟಣೆ ಮಾಡಲು ಕೇಂಬ್ರಿಡ್ಜ್‌ಗೆ ಹಿಂತಿರುಗಿದರು. ಬದಲಿಗೆ, ನ್ಯೂಟನ್ ಅದನ್ನು ತಮ್ಮ ಫಿಲಾಸೊಫಿಯ ನ್ಯಾಚುರಾಲಿಸ್ ಪ್ರಿನ್ಸಿಪಿಯಾ ಮ್ಯಾಥೆಮ್ಯಾಟಿಕಾದಲ್ಲಿ ವಿಸ್ತರಿಸಿದರು. ೧೬೮೭ ರಲ್ಲಿ ಹ್ಯಾಲೆ ಅವರ ಖರ್ಚಿನಲ್ಲಿ ಅದು ಪ್ರಕಟವಾಯಿತು.[೧೨] ಕೌಟುಂಬಿಕ ಸಮಸ್ಯೆಗಳಿಂದಾಗಿ ಹ್ಯಾಲಿಯ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದರಿಂದ ಗ್ರಂಥ ಮಾರಾಟದಿಂದ ಬಂದ ಹಣದಿಂದ ಅವನು ಹೂಡಿದ್ದ ಬಂಡವಾಳವನ್ನು ನ್ಯೂಟನ್ ಹಿಂದಿರುಗಿಸಿದ. ೧೬೮೦ ರಲ್ಲಿ ಫ಼್ಲಾಮ್‍ಸ್ಟೀಡ್‍ರ ವೀಕ್ಷಣೆಗಳ ಆಧಾರದ ಮೇಲೆ, ಧೂಮಕೇತುಗಳ ಬಗ್ಗೆ ಹ್ಯಾಲಿಯವರ ಮೊದಲ ಲೆಕ್ಕಾಚಾರಗಳು ಕಿರ್ಚ್ ಧೂಮಕೇತುವಿನ ಕಕ್ಷೆ ಬಗ್ಗೆ ಆಗಿದ್ದವು. ೧೬೮೨ ರಲ್ಲಿ ಧೂಮಕೇತುವಿನ ಕಕ್ಷೆಯನ್ನು ನಿಖರವಾಗಿ ಲೆಕ್ಕ ಹಾಕಿದರೂ, ಕಿರ್ಕ್ ಧೂಮಕೇತುವಿನ ಕಕ್ಷೆಯ ಲೆಕ್ಕಾಚಾರದಲ್ಲಿ ಅವರು ನಿಖರವಾಗಿರಲಿಲ್ಲ. ಅವು ೫೭೫ ವರ್ಷಗಳ ಆವರ್ತಕತೆಯನ್ನು ಸೂಚಿಸಿದವು. ಹಾಗಾಗಿ ೫೩೧ ಮತ್ತು ೧೧೦೬ ವರ್ಷಗಳಲ್ಲಿ ಕಾಣಿಸಿಕೊಂಡಿರಬೇಕಿತ್ತು ಮತ್ತು ಸಂಭಾವ್ಯವಾಗಿ ಕ್ರಿ.ಪೂ. ೪೫ ನಲ್ಲಿ ಜೂಲಿಯಸ್ ಸೀಸರ್‌ನ ಸಾವನ್ನು ಸೂಚಿಸಿರಬೇಕಿತ್ತು. ಇದೀಗ ಇದು ಸುಮಾರು ೧೦,೦೦೦ ವರ್ಷಗಳ ಕಕ್ಷೀಯ ಅವಧಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
 • ರಾಯಲ್ ಸೊಸೈಟಿಯ ಪ್ರಕಟಣೆ ‘ಫಿಲಸಾಫಿಕಲ್ ಟ್ರ್ಯಾನ್ಸ್ಯಾಕ್ಷನ್ಸ್’ನ ಸಂಪಾದಕನಾಗಿ (1685-93) ಹ್ಯಾಲಿ ಸೇವೆ ಸಲ್ಲಿಸಿದ.[೧೩] ಮೊದಲನೆಯ ಮಾಪನಶಾಸ್ತ್ರೀಯ ಪಟ ಎಂದೇ ಪ್ರಸಿದ್ಧವಾದ ಸಾಗರಗಳ ಮೇಲೆ ಅಂದು ಬೀಸುತ್ತಿದ್ದ ಮಾರುತಗಳನ್ನು ತೋರಿಸುವ ಜಾಗತಿಕ ಭೂಪಟ ಪ್ರಕಟಣೆ (1686).
 • ೧೬೯೧ ರಲ್ಲಿ, ಹ್ಯಾಲೆ ಡೈವಿಂಗ್ ಬೆಲ್ ಅನ್ನು ನಿರ್ಮಿಸಿದರು. ಅದರಲ್ಲಿ ವಾತಾವರಣವು ಮೇಲ್ಮೈಯಿಂದ ಕೆಳಗೆ ಕಳಿಸಲ್ಪಟ್ಟ ಗಾಳಿಯ ತೂಕದ ಪಿಪಾಯಿಗಳ ಮೂಲಕ ಪುನಃ ಭರ್ತಿಯಾಗುತ್ತಿತ್ತು.[೧೪]
 • ೧೬೯೨ ರಲ್ಲಿ, ಹ್ಯಾಲೆಯವರು ೫೦೦ ಮೈಲ್ (೮೦೦ ಕಿ.ಮೀ.) ದಪ್ಪದ ಚಿಪ್ಪುಳ್ಳ, ಎರಡು ಆಂತರಿಕ ಏಕಕೇಂದ್ರೀಯ ಚಿಪ್ಪುಗಳು ಮತ್ತು ಅಂತರತಮ ಮಧ್ಯಭಾಗವಿರುವ ಒಂದು ಟೊಳ್ಳಾದ ಭೂಮಿಯ ಕಲ್ಪನೆಯನ್ನು ಮಂಡಿಸಿದರು.[೧೫] ವಾಯುಮಂಡಲಗಳು ಈ ಚಿಪ್ಪುಗಳನ್ನು ಪ್ರತ್ಯೇಕಿಸಿವೆ, ಮತ್ತು ಪ್ರತಿ ಚಿಪ್ಪು ತನ್ನ ಸ್ವಂತದ ಆಯಸ್ಕಾಂತೀಯ ಧ್ರುವಗಳನ್ನು ಹೊಂದಿದ್ದು, ಪ್ರತಿ ಗೋಳವು ಬೇರೆಬೇರೆ ವೇಗದಲ್ಲಿ ತಿರುಗುತ್ತದೆ ಎಂದು ಸೂಚಿಸಿದರು.
 • ೧೬೯೩ ರಲ್ಲಿ ಹ್ಯಾಲೆಯವರು ಜೀವನ ವರ್ಷಾಶನಗಳ ಮೇಲೆ ಲೇಖನವೊಂದನ್ನು ಪ್ರಕಟಿಸಿದರು. ಇದು ಕ್ಯಾಸ್ಪಾರ್ ನ್ಯೂಮನ್ ನೀಡಿದ್ದ ಬ್ರೆಸ್ಲಾವ್ ಅಂಕಿ ಅಂಶಗಳ ಆಧಾರದ ಮೇಲೆ ಸಾವಿನ ಕಾಲದ ವಯಸ್ಸಿನ ಒಂದು ವಿಶ್ಲೇಷಣೆಯನ್ನು ಒಳಗೊಂಡಿತ್ತು. ವಿಮಾವಿಜ್ಞಾನ ಕೋಷ್ಟಕ ತಯಾರಿಗೆ ಕಾರಣವಾದ ಬ್ರೆಸ್ಲೌ ನಗರದ ಆಯುಷ್ಯ ಕೋಷ್ಟಕಗಳ  ಪ್ರಕಟಣೆ (1693) ಆತನ ಬಹುಮುಖ ಪ್ರತಿಭೆಗೆ ಸಾಕ್ಷಿ.
 • ನ್ಯೂಟನ್ ಲಂಡನ್‌ನಲ್ಲಿ ‘ವಾರ್ಡನ್ ಆಫ್ ದಿ ರಾಯಲ್ ಮಿಂಟ್’ ಆಗಿ ನೇಮಕಗೊಂಡಾಗ (1696), ಹ್ಯಾಲಿ ಚೆಸ್ಟರ್‌ನಲ್ಲಿ ಟಂಕಸಾಲೆಯ ಉಪನಿಯಂತ್ರಕನಾದ. ಆ ಹುದ್ದೆಯೇ ರದ್ದಾದಾಗ (1898) 3ನೆಯ ವಿಲಿಯಮ್ ‘ಪಶ್ಚಿಮ ಸಾಗರದ ದಕ್ಷಿಣಕ್ಕೆ ಯಾವ ಭೂಭಾಗವಿದೆ ಎಂಬುದನ್ನು ಪತ್ತೆಹಚ್ಚಲೋಸುಗ’ ಹ್ಯಾಲಿಯನ್ನು ಯುದ್ಧನೌಕೆಯೊಂದರ ಮುಖ್ಯಸ್ಥನಾಗಿ ನೇಮಿಸಿದ.

ಅನ್ವೇಷಣೆಯ ವರ್ಷಗಳು[ಬದಲಾಯಿಸಿ]

 • ೧೬೯೮ ರಲ್ಲಿ, ೫೨ ಅಡಿಯ (೧೬ ಮೀ) ಪಿಂಕ್ ಹಡಗಾಗಿದ್ದ ಪ್ಯಾರಾಮೌರ್‌ನ ನಿಯಂತ್ರಣವನ್ನು ಹ್ಯಾಲೆಯವರಿಗೆ ನೀಡಲಾಯಿತು. ಇದರಿಂದ ಅವರು ದಕ್ಷಿಣ ಅಟ್ಲಾಂಟಿಕ್‍ನಲ್ಲಿ ದಿಕ್ಸೂಚಿಗಳ ಬದಲಾವಣೆಯನ್ನು ನಿಯಂತ್ರಿಸುವ ನಿಯಮಗಳ ಬಗ್ಗೆ ತನಿಖೆ ನಡೆಸಲು ಸಾಧ್ಯವಾಯಿತು. ದಿಕ್ಸೂಚಿ ವ್ಯತ್ಯಯನವನ್ನು ಉಪಯೋಗಿಸಿ ರೇಖಾಂಶವನ್ನು ನಿರ್ಧರಿಸುವ ವಿಧಾನದ ಸಂಶೋಧನೆಯಲ್ಲಿ ಹ್ಯಾಲಿಗೆ ನೆರವು ನೀಡುವುದು ಇದರ ಪ್ರಧಾನ ಉದ್ದೇಶ. ಇಂಗ್ಲೆಂಡಿನ ಪೋರ್ಟ್ಸ್‌ಮೌತ್‌ನಿಂದ ಯಾನ ಆರಂಭಿಸಿದ (ನವೆಂಬರ್ 1698) ಹ್ಯಾಲಿ ಬಾರ್ಬಡಾಸ್ ತಲಪಿದ ಬಳಿಕ ಸಿಬ್ಬಂದಿ ಸಮಸ್ಯೆಗಳಿಂದಾಗಿ ಹಿಂದಿರುಗಬೇಕಾಯಿತು. ತದನಂತರ ಪುನಃ ಒಂದು ವರ್ಷಕಾಲ (ಸೆಪ್ಟೆಂಬರ್ 1699-ಸೆಪ್ಟೆಂಬರ್ 1700) ಅಟ್ಲಾಂಟಿಕ್ ಕರಾವಳಿಗುಂಟ ಅನ್ವೇಷಣೆ ಮಾಡಿದ ಅಧ್ಯಯನದ ಫಲವೇ ಆತ ಪ್ರಕಟಿಸಿದ ದಿಕ್ಸೂಚಿ ವ್ಯತ್ಯಯನದ ಪಟಗಳು. ಸಮಾನ ದಿಕ್ಪಾತ ರೇಖೆಗಳನ್ನು ತೋರಿಸುತ್ತಿದ್ದ ಮೊದಲ ಪಟಗಳು ಎಂಬ ಗೌರವಕ್ಕೆ ಇವು ಪಾತ್ರವಾದವು. ದಕ್ಷಿಣ ಇಂಗ್ಲೆಂಡಿನ ಕರಾವಳಿಗುಂಟ ಪಯಣಿಸಿ ಉಬ್ಬರವಿಳಿತಗಳ ಪ್ರರೂಪವನ್ನು ಅಧ್ಯಯಿಸಿದ. ರಾಣಿ ಆ್ಯನೆಯ ಆದೇಶದ ಮೇರೆಗೆ ಆಡ್ರಿಯಾಟಿಕ್‌ನ ಸುತ್ತಲಿರುವ ಬಂದರುಗಳ ಸ್ಥಿತಿಗತಿಗಳನ್ನು ಪರೀಕ್ಷಿಸಲು, ತದನಂತರ ರಕ್ಷಣೋಪಾಯಗಳ ಬಗ್ಗೆ ಸಲಹೆ ನೀಡಲು ಟ್ರೈಯೆಸ್ಟೆಗೆ ಪಯಣಿಸಿದ.
 • ನವೆಂಬರ್‌ ೧೭೦೩ ರಲ್ಲಿ ಹ್ಯಾಲೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ರೇಖಾಗಣಿತದ ಸ್ಯಾವಿಲಿಯನ್ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರ ಮತಧರ್ಮಶಾಸ್ತ್ರದ ವೈರಿಗಳಾದ ಹಾನ್ ಟಿಲ್ಲೊಟ್ಸನ್ ಮತ್ತು ಬಿಷಪ್‌ ಸ್ಟಿಲ್ಲಿಂಗ್‍ಫ್ಲೀಟ್ ಆಗ ಮರಣಹೊಂದಿದ್ದರು. ೧೭೧೦ ರಲ್ಲಿ ಡಾಕ್ಟರ್ ಆಫ಼್ ಲಾಸ್ ಗೌರವ ಪದವಿಯನ್ನು ಪಡೆದರು. ೧೭೦೫ ರಲ್ಲಿ ಐತಿಹಾಸಿಕ ಖಗೋಳಶಾಸ್ತ್ರದ ವಿಧಾನಗಳನ್ನು ಅನ್ವಯಿಸಿ ಪ್ರಕಟಿಸಿದ ವಿದ್ವತ್ಪ್ರಬಂಧದಲ್ಲಿ, ೧೪೫೮, ೧೫೩೧, ೧೬೦೭ ಮತ್ತು ೧೯೮೨ ರ ಧೂಮಕೇತುವಿನ ದೃಶ್ಯಗಳು ೧೭೫೮ ರಲ್ಲಿ ಮತ್ತೆ ಕಾಣಿಸುತ್ತವೆಂದು ಅವರು ಊಹಿಸಿದರು, ಮತ್ತು ಅದೇ ಧೂಮಕೇತು ಕಾಣಿಸುತ್ತದೆಂಬ ತಮ್ಮ ನಂಬಿಕೆಯನ್ನು ಪ್ರಕಟಿಸಿದರು.[೧೬] ಅದನ್ನು A Synopsis of the Astronomy of Comets ಎಂಬ ಪ್ರಬಂಧದಲ್ಲಿ ಪ್ರಕಟಿಸಿದರು. ಹ್ಯಾಲೆಯವರು ಧೂಮಕೇತು ಹಿಂದಿರುಗಿದಾಗ ಬದುಕಿರಲಿಲ್ಲ. ಆ ಧೂಮಕೇತುವನ್ನು ಸಾಮಾನ್ಯವಾಗಿ ಹ್ಯಾಲಿಸ್ ಕಾಮೆಟ್ ಎಂದು ಕರೆಯಲಾಗುತ್ತದೆ. ಗೋಚರಿಸುವ ಅವಧಿಯನ್ನು ನಿಖರವಾಗಿ ಅಂದಾಜಿಸಬಹುದಾದ ಧೂಮಕೇತು ಇದು. ಆಧುನಿಕ ತಂತ್ರವಿದ್ಯೆಯ ಬಳಕೆಯಿಂದ ಧೂಮಕೇತುಗಳ ಸಂರಚನೆ, ಹುಟ್ಟು ಮೊದಲಾದವುಗಳ ಕುರಿತು ಅಧ್ಯಯಿಸಲು ಇದರ ಬರುವಿಕೆ ಸಹಕಾರಿಯಾಗಿದೆ.
 • ೧೭೦೬ ರ ಹೊತ್ತಿಗೆ ಹ್ಯಾಲೆ ಅರಬ್ಬಿ ಭಾಷೆಯನ್ನು ಕಲಿತರು ಮತ್ತು ಆಕ್ಸ್‌ಫರ್ಡ್‌ನ ಲೈಡೆನ್ ಮತ್ತು ಬೊಡ್ಲಿಯನ್ ಗ್ರಂಥಾಲಯದಲ್ಲಿ ಕಂಡುಬಂದ ಪ್ರತಿಗಳಿಂದ ಅಪೊಲೊನಿಯಸ್‍ನ ಕಾನಿಕ್ಸ್‌ನ V-VII ಪುಸ್ತಕಗಳ, ಎಡ್ವರ್ಡ್ ಬರ್ನಾರ್ಡ್ ಪ್ರಾರಂಭಿಸಿದ್ದ ಅನುವಾದವನ್ನು ಮುಗಿಸಿದರು.
 • ೧೭೧೬ ರಲ್ಲಿ, ಹ್ಯಾಲೆ‌ ಶುಕ್ರದ ಸಂಕ್ರಮಣ ಸಮಯದ ಮೂಲಕ ಭೂಮಿ ಮತ್ತು ಸೂರ್ಯನ ನಡುವಿನ ದೂರದ ಹೆಚ್ಚು ನಿಖರವಾದ ಮಾಪನವನ್ನು ಸೂಚಿಸಿದರು.
 • ೧೭೧೮ ರಲ್ಲಿ ಟಾಲೆಮಿಯ ಅಲ್ಮಾಜೆಸ್ಟ್‌ನಲ್ಲಿ ಇರುವ ಖಗೋಳಮಿತೀಯ ಅಳತೆಗಳೊಂದಿಗೆ ತಮ್ಮ ಅಳತೆಗಳನ್ನು ಹೋಲಿಸುವ ಮೂಲಕ ಸ್ಥಿರ ನಕ್ಷತ್ರಗಳ ಸರಿಯಾದ ಚಲನೆಯನ್ನು ಅವರು ಕಂಡುಹಿಡಿದರು.
 • ವಿಜ್ಞಾನಿಗಳ ನಡುವೆ ಉದ್ಭವಿಸುವ ಸೈದ್ಧಾಂತಿಕ ಕಲಹಗಳನ್ನು ಪರಿಹರಿಸಲು ರಾಯಲ್ ಸೊಸೈಟಿ ರೂಪಿಸಿದ್ದ ಉಪಸಮಿತಿಯ ಕಾರ್ಯದರ್ಶಿಯಾಗಿ ಅನೇಕ ವಿವಾದಗಳನ್ನು ತೃಪ್ತಿಕರವಾಗಿ ಬಗೆಹರಿಸಿದರೂ ಫ್ಲ್ಯಾಮ್‌ಸ್ಟೀಡ್‌ನೊಂದಿಗಿನ ವೈಯಕ್ತಿಕ ಕಲಹವನ್ನು ಉಲ್ಬಣಗೊಳಿಸುತ್ತಲೇ ಇದ್ದ. ಅವನ ಮರಣಾನಂತರ (1720) ‘ಅಸ್ಟ್ರಾನಮರ್ ರಾಯಲ್’ ಸ್ಥಾನ ಹ್ಯಾಲಿಯದ್ದಾಯಿತು.
 • ೧೭೨೦ ರಲ್ಲಿ, ತಮ್ಮ ಸ್ನೇಹಿತ ಮತ್ತು ಪುರಾವಸ್ತು ಶೋಧಕ ವಿಲಿಯಂ ಸ್ಟುಕ್ಲೆ ಜೊತೆಗೆ ಹ್ಯಾಲಿ ವೈಜ್ಞಾನಿಕವಾಗಿ ಸ್ಟೋನ್‍ಹೆಂಜ್‍ನ ಕಾಲ ನಿರ್ಧರಿಸಲು ಮಾಡಿದ ಮೊದಲ ಪ್ರಯತ್ನದಲ್ಲಿ ಪಾಲ್ಗೊಂಡರು.
 • ಗ್ರೀನ್‌ವಿಚ್ ರಾಯಲ್ ವೀಕ್ಷಣಾಲಯದಲ್ಲಿ ಮೊದಲ ಬಾರಿಗೆ ಸಂಕ್ರಮಮಾಪಕ ಬಳಸಿದ್ದು; ಸಾಗರಯಾನ ಮಾಡುತ್ತಿರುವಾಗ ಚಾಂದ್ರವೀಕ್ಷಣೆಗಳ ನೆರವಿನಿಂದ ರೇಖಾಂಶ ನಿರ್ಧರಿಸುವ ವಿಧಾನದ ಆವಿಷ್ಕಾರ, ಒಂದು 18-ವರ್ಷ ಗ್ರಹಣಾಂತರ ಅವಧಿ ಪೂರ್ತಿ ಚಂದ್ರ ವೀಕ್ಷಣೆ ಮಾಡಿದ್ದು ಈ ಅವಧಿಯ ಸಾಧನೆಗಳು.

ಎಡ್ಮಂಡ್ ಹ್ಯಾಲೆಯವರ ನಂತರ ಇಟ್ಟಿರುವ ಹೆಸರುಗಳು[ಬದಲಾಯಿಸಿ]

೩ ಮೇ ೧೭೧೫ ರ ಇಂಗ್ಲೆಂಡ್‍ನ ಸೂರ್ಯ ಗ್ರಹಣದ ಪಥದ ಹ್ಯಾಲಿ ನಕ್ಷೆ
 • ಹ್ಯಾಲಿ ಕಾಮೆಟ್ (ಕಕ್ಷೀಯ ಅವಧಿ ಅಂದಾಜು ೭೫ ವರ್ಷಗಳು).
 • ಹ್ಯಾಲಿ (ಚಂದ್ರನ ಕುಳಿ).
 • ಹ್ಯಾಲಿ (ಮಂಗಳದ ಕುಳಿ).
 • ಹ್ಯಾಲಿ ಸಂಶೋಧನಾ ಕೇಂದ್ರ , ಅಂಟಾರ್ಕ್ಟಿಕ.
 • ಸಮೀಕರಣಗಳ ಸಂಖ್ಯಾತ್ಮಕ ಪರಿಹಾರಕ್ಕಾಗಿ ಹ್ಯಾಲಿಯ ವಿಧಾನ.
 • ಆಸ್ಟ್ರೇಲಿಯಾದ ವಿಕ್ಟೋರಿಯಾದ ಬ್ಲ್ಯಾಕ್‍ಬರ್ನ್‌ನಲ್ಲಿ ಹ್ಯಾಲಿ ಸ್ಟ್ರೀಟ್.
 • ಎಡ್ಮಂಡ್ ಹ್ಯಾಲಿ ಡ್ರೈವ್, ರೆಸ್ಟನ್, ವರ್ಜಿನಿಯಾ, ಯುನೈಟೆಡ್ ಸ್ಟೇಟ್ಸ್.
 • ಹ್ಯಾಲಿಸ್ ಮೌಂಟ್, ಸೇಂಟ್ ಹೆಲೆನಾ (೬೮೦ ಮೀ. ಎತ್ತರ).
 • ಎಡ್ಮಂಡ್ ಹ್ಯಾಲಿ ಸ್ಟ್ರೀಟ್, ಅವಿಗ್ನಾನ್,ಫ್ರಾನ್ಸ್.
 • ಇಂಗ್ಲೆಂಡ್‍ನ ಲಂಡನ್‌ನಲ್ಲಿರುವ ಹ್ಯಾಲೆ ಅಕಾಡೆಮಿ ಶಾಲೆ.
 • ಹ್ಯಾಲೆ ಹೌಸ್ ಸ್ಕೂಲ್, ಹ್ಯಾಕ್ನೆ ಲಂಡನ್(೨೦೧೫).[೧೭]

ಸಮಾಧಿ[ಬದಲಾಯಿಸಿ]

ಹ್ಯಾಲಿಯವರ ಸಮಾಧಿ

ಪ್ರಾಕ್ತನಶಾಸ್ತ್ರ, ಭೂಭೌತವಿಜ್ಞಾನ, ಖಗೋಳವಿಜ್ಞಾನದ ಇತಿಹಾಸ, ಬಹುಪದಿ ಸಮೀಕರಣಗಳನ್ನು ಪರಿಹರಿಸುವುದು ಇವೇ ಮೊದಲಾದವುಗಳಲ್ಲೂ ಹ್ಯಾಲಿ ಆಸಕ್ತನಾಗಿದ್ದ. ಬ್ರಿಟಿಷ್ ವಿಜ್ಞಾನಿ ಸಮುದಾಯ ಸೃಜನಶೀಲತೆಯ ಪರಾಕಾಷ್ಠೆಯನ್ನು ತಲಪಿದ್ದ ಅವಧಿಯಲ್ಲಿ ಅದರ ಅವಿಭಾಜ್ಯ ಘಟಕವಾಗಿದ್ದನು ಈ ಜನ್ಮತಃ ಬಹುಮುಖ ಪ್ರತಿಭೆಯ ವಿಜ್ಞಾನಿ. ಹ್ಯಾಲೆಯವರು ಜನವರಿ ೧೪ ೧೭೪೨ ರಂದು ಗ್ರೀನ್ವಿಚ್‍ನಲ್ಲಿ, ೮೫ ನೇ ವಯಸ್ಸಿನಲ್ಲಿ ನಿಧನರಾದರು. ಬ್ಲ್ಯಾಕ್‍ಹೀತ್‍ನ ಲೀ ಟೆರೇಸ್‍ನಲ್ಲಿನ ಸೇಂಟ್ ಮಾರ್ಗರೇಟ್ ಓಲ್ಡ್ ಚರ್ಚ್, ಲೀಯ ಸ್ಮಶಾನದಲ್ಲಿ ಅವರನ್ನು ಸಮಾಧಿ ಮಾಡಲಾಯಿತು.[೧೮]

ಉಲ್ಲೇಖಗಳು[ಬದಲಾಯಿಸಿ]

 1. Gribbin & Gribbin (2017), p. 267.
 2. https://www.encyclopedia.com/people/science-and-technology/astronomy-biographies/edmond-halley
 3.  Clerke, Agnes Mary (1911). "Halley, Edmund" . In Chisholm, Hugh (ed.). Encyclopædia Britannica. Vol. 12 (11th ed.). Cambridge University Press. p. 856. {{cite encyclopedia}}: Cite has empty unknown parameters: |HIDE_PARAMETER= and |separator= (help)
 4. Cook, Alan (1998). Edmond Halley: Charting the Heavens and the Seas. Oxford: Clarendon Press. pp. 54–59, 282. ISBN 0198500319.
 5. {{cite encyclopedia  |encyclopedia=Oxford Dictionary of National Biography  |edition=online  |publisher=Oxford University Press  |ref=harv  |last    =Cook  |last1    =  |author  =  |author1  =  |authors  =  |first    =Alan  |first1  =  |authorlink  =  |author-link  =Alan Cook  |HIDE_PARAMETER10=  |authorlink1  =    |last2    =  |author2  =  |first2    =  |authorlink2  =  |HIDE_PARAMETER16=  |last3    =  |author3  =  |first3    =  |authorlink3  =  |HIDE_PARAMETER21=  |title    =Halley, Edmond  |title    =  |url      =  |doi        =10.1093/ref:odnb/12011  |origyear    =2004  |year        =2012  |date        =  |month      =  |HIDE_PARAMETER30=  |HIDE_PARAMETER31=  |separator  =  |mode        =    |HIDE_PARAMETER38= }} (Subscription or UK public library membership required.)
 6. BBC. "Edmond Halley (1656–1742)". Retrieved 28 March 2017.
 7. Cook, Alan (2003). "Edmond Halley and Visual Representation in Natural Philosophy". In Lefèvre, Wolfgang; Renn, Jürgen; Schoepflin, Urs (eds.). The Power of Images in Early Modern Science (in ಇಂಗ್ಲಿಷ್). Basel: Birkhäuser. pp. 251–262. doi:10.1007/978-3-0348-8099-2_13. ISBN 978-3-0348-8099-2.
 8. Sagan & Druyan 1997, p. 45.
 9. Kanas, Nick (2012). Star Maps: History, Artistry, and Cartography (2nd ed.). Chichester, U.K.: Springer. p. 123. ISBN 978-1-4614-0917-5.
 10. Hughes 1985, p. 202.
 11. Halley E. (1686), "An Historical Account of the Trade Winds, and Monsoons, Observable in the Seas between and Near the Tropicks, with an Attempt to Assign the Phisical Cause of the Said Winds", Philosophical Transactions, 16:153–168 doi:10.1098/rstl.1686.0026
 12. Peter Ackroyd. Newton. Great Britain: Chatto and Windus, 2006.
 13. Sagan & Druyan 1997, p. 56.
 14. Edmonds, Carl; Lowry, C; Pennefather, John. "History of Diving". South Pacific Underwater Medicine Society Journal. 5 (2). Archived from the original on 14 October 2010. Retrieved 17 March 2009.{{cite journal}}: CS1 maint: unfit URL (link)
 15. Halley, E. (1692). "An account of the cause of the change of the variation of the magnetic needle; with an hypothesis of the structure of the internal parts of the earth". Philosophical Transactions of the Royal Society of London. 16 (179–191): 470–478.
 16. Sagan & Druyan 1997, pp. 66–67.
 17. http://www.bbc.co.uk/history/historic_figures/halley_edmond.shtml
 18. "Location of Edmond Halley's tomb". shadyoldlady.com. The Shady Old Lady's guide to London. Retrieved 5 January 2015.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: