ಕಾಮೆಟ್

ವಿಕಿಪೀಡಿಯ ಇಂದ
Jump to navigation Jump to search
Kamet.jpg

ಕಾಮೆಟ್ ಭಾರತಉತ್ತರಾಖಂಡ ರಾಜ್ಯದ ಗಢ್‌ವಾಲ್ ಪ್ರದೇಶದ ಎರಡನೆಯ ಅತಿ ಎತ್ತರದ ಪರ್ವತಶಿಖರ. ೭೭೫೬ ಮೀ. (೨೫೪೪೬ ಅಡಿ) ಎತ್ತರದಲ್ಲಿರುವ ಕಾಮೆಟ್ ಶಿಖರ ಚಮೋಲಿ ಜಿಲ್ಲೆಯಲ್ಲಿ ಟಿಬೆಟ್‌ ಗಡಿಗೆ ಹೊಂದಿಕೊಂಡಿದೆ. ಹಿಮಾಲಯದ ಮುಖ್ಯ ಶ್ರೇಣಿಗೆ ಕೊಂಚ ಉತ್ತರದಲ್ಲಿರುವ ಝಂಸ್ಕಾರ್ ಪರ್ವತಶ್ರೇಣಿಯಲ್ಲಿರುವ ಕಾಮೆಟ್ ಆ ಶ್ರೇಣಿಯ ಅತ್ಯುನ್ನತ ಶಿಖರವಾಗಿದೆ. ಟಿಬೆಟ್ ಪೀಠಭೂಮಿಗೆ ಸಮೀಪದಲ್ಲಿರುವ ಕಾಮೆಟ್ ದುರ್ಗಮ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಶಿಖರದ ಆರೋಹಣ ಕಷ್ಟಕರವಲ್ಲವೆಂದು ಪರ್ವತಾರೋಹಿಗಳ ಅಭಿಪ್ರಾಯವಿದೆ. ಕಾಮೆಟ್ ಆಸುಪಾಸಿನಲ್ಲಿ ಇನ್ನೂ ಮೂರು ಉನ್ನತ ಶಿಕಘರಗಳಿವೆ. ಅವೆಂದರೆ - ಮುಕುಟ್ ಪರ್ಬತ್ (೭೨೪೨ ಮೀ.), ಅಬಿ ಗಮೀನ್ (೭೩೫೫ ಮೀ.) ನಮತ್ತು ಮಾಣಾ (೭೨೭೨ ಮೀ.).

ಕಾಮೆಟ್ ಸುತ್ತಮುತ್ತ ಪಶ್ಚಿಮ ಕಾಮೆಟ್ ಹಿಮನದಿ, ಪೂರ್ವ ಕಾಮೆಟ್ ಹಿಮನದಿ ಮತ್ತು ರೈಕಾನಾ ಹಿಮನದಿಗಳಿವೆ. ಪಶ್ಚಿಮ ಕಾಮೆಟ್ ಹಿಮನದಿಯಿಂದ ಸರಸ್ವತಿ ನದಿಯು ಉಗಮಿಸಿದರೆ ಪೂರ್ವ ಕಾಮೆಟ್ ಹಿಮನದಿ ಧೌಲಿ ಗಂಗಾ ನದಿಯ ಮೂಲ. ಈ ಎರಡು ನದಿಗಳು ಅಲಕನಂದಾ ನದಿಯ ಮುಖ್ಯ ಉಪನದಿಗಳು.

ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಮೆಟ್&oldid=765804" ಇಂದ ಪಡೆಯಲ್ಪಟ್ಟಿದೆ