ಅಲಕನಂದಾ
ಅಲಕನಂದಾ | |
River | |
The sediment-laden Alaknanda river flowing into Devprayag, Uttarakhand.
| |
ದೇಶ | ![]() |
---|---|
ರಾಜ್ಯ | ಉತ್ತರಾಖಂಡ |
Region | ಗರ್ವಾಲ್ ಪ್ರಾಂತ್ಯ |
Districts | ಚಮೋಲಿ, ರುದ್ರಪ್ರಯಾಗ, ಪೌರಿ ಗರ್ವಾಲ್ |
ಉಪನದಿಗಳು | |
- ಎಡಬದಿಯಲ್ಲಿ | ಸರಸ್ವತಿ, ದೌಳಿಗಂಗಾ, ನಂದಾಕಿನಿ, ಪಿಂಡಾರ |
- ಬಲಬದಿಯಲ್ಲಿ | ಮಂದಾಕಿನಿ |
ಮೂಲ | Confluence of Satopanth Glacier and Bhagirathi Kharak Glacier |
- ಸಮುದ್ರ ಮಟ್ಟದಿಂದ ಎತ್ತರ | ೩,೮೮೦ m (೧೨,೭೩೦ ft) |
ಸಂಗಮಸ್ಥಾಮ | Bhagirathi River |
ಸಾಗರಮುಖ | Ganges |
- ಸ್ಥಳ | Devprayag, Uttarakhand, India |
- ಸಮುದ್ರ ಮಟ್ಟದಿಂದ ಎತ್ತರ | ೪೭೫ m (೧,೫೫೮ ft) |
ಉದ್ದ | ೧೯೦ km (೧೧೮ mi) |
ಜಲಾನಯನ | ೧೦,೮೮೨ km² (೪,೨೦೨ sq mi) |
ನೀರಿನ ಬಿಡುಗಡೆ | |
- ಸರಾಸರಿ | ೪೩೯.೩೬ m³/s (೧೫,೫೧೬ cu ft/s) |
The Himalayan headwaters of the Ganges river in the Garhwal region of Uttarakhand, India. The Alaknanda is the left bank tributary of the Ganges at Devprayag.
|
ಅಲಕನಂದಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು. 28 ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು. 6600 ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಕ್ಷೇತ್ರದ ಬಳಿ ಉಗಮಿಸುವ ಅಲಕನಂದಾ ನದಿ ಸುಮಾರು ೨೨೯ ಕಿ.ಮೀ. ಹರಿದು ಮುಂದೆ ದೇವಪ್ರಯಾಗದಲ್ಲಿ ಭಾಗೀರಥಿ ನದಿಯನ್ನು ಕೂಡಿಕೊಂಡು ಗಂಗಾ ಎಂಬ ಹೆಸರನ್ನು ಪಡೆದುಕೊಳ್ಳುತ್ತದೆ. ಗಂಗೆಯ ಜಲರಾಶಿಯಲ್ಲಿ ಭಾಗೀರಥೀ ನದಿಗಿಂತ ಅಲಕನಂದಾ ನದಿಯ ನೀರಿನ ಪ್ರಮಾಣವೇ ಹೆಚ್ಚು. ತನ್ನ ತೀರದಲ್ಲಿ ಅನೇಕ ಪವಿತ್ರ ಕ್ಷೇತ್ರಗಳನ್ನು ಹೊಂದಿರುವ ಅಲಕನಂದಾ ಹಿಂದೂ ಶ್ರದ್ಧಾಳುಗಳ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದೆ. ತನ್ನ ಹರಿವಿನ ದಾರಿಯಲ್ಲಿ ಅನೇಕ ಸಣ್ಣನದಿಗಳನ್ನುತನ್ನಲ್ ಸೇರಿಸಿಕೊಳ್ಳುತ್ತದೆ.
- ವಿಷ್ಣುಪ್ರಯಾಗ - ಅಲಕನಂದಾ ಮತ್ತು ಧೌಲಿ ಗಂಗಾ ನದಿಗಳ ಸಂಗಮಸ್ಥಾನ.
- ನಂದಪ್ರಯಾಗ - ಅಲಕನಂದಾ ಮತ್ತು ನಂದಾಕಿನಿ ನದಿಗಳ ಸಂಗಮಸ್ಥಾನ.
- ಕರ್ಣಪ್ರಯಾಗ - ಅಲಕನಂದಾ ಮತ್ತು ಪಿಂಡರ್ ನದಿಗಳ ಸಂಗಮಸ್ಥಾನ.
- ರುದ್ರಪ್ರಯಾಗ - ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮಸ್ಥಾನ.
- ದೇವಪ್ರಯಾಗ - ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮಸ್ಥಾನ.
ಈ ಮೇಲಿನ ಐದು ಸ್ಥಳಗಳು ಪಂಚಪ್ರಯಾಗಗಳೆಂದು ಕರೆಯಲ್ಪಡುತ್ತವೆ.
ಪುರಾಣದಲ್ಲಿ[ಬದಲಾಯಿಸಿ]
ತ್ರಿಪಥಗಾಮಿನಿಯಾದ ಗಂಗೆ ದೇವಲೋಕದಲ್ಲಿ ಹರಿಯುವಾಗ ಈ ಹೆಸರನ್ನು ಪಡೆಯುತ್ತಾಳೆಂದು ಪುರಾಣದ ವಿವರಣೆ. ದಡದ ಮೇಲೆ ಬ್ರಹ್ಮಕಪಾಲವೆಂಬುದು ಪ್ರಸಿದ್ಧ ಪವಿತ್ರಸ್ಥಳ. ಬದರೀಯಾತ್ರೆಗೆ ಹೋಗುವವರೆಲ್ಲ ಇಲ್ಲಿ ಬಂದು ಪಿತೃಗಳಿಗೆ ಪಿಂಡಪ್ರದಾನ ಮಾಡುವುದು ರೂಢಿ. ಇಲ್ಲಿ ಮಾಡಿದ ಶ್ರಾದ್ಧದಿಂದ ವಿಷ್ಣು ಪದ ದೊರೆಯುವುದೆಂದು ನಂಬಿಕೆ.
ಬಾಹ್ಯ ಉಲ್ಲೇಖಗಳು[ಬದಲಾಯಿಸಿ]
- Alaknanda River Britannica.com
- Prayags at GMVN