ಕೋಪನ್ ಹ್ಯಾಗನ್
Copenhagen
København | |
---|---|
Country | ಡೆನ್ಮಾರ್ಕ್ |
Region | Hovedstaden |
First mention | 11th century |
City Status | 13th century |
Government | |
• Mayor | Frank Jensen (S) |
Area | |
• Urban | ೪೫೫.೬೧ km೨ (೧೭೫.೯೧ sq mi) |
Population (2009 and 2010)[೨] | |
• City | ೫,೨೮,೨೦೮ (೦೧−೦೧−೨,೦೧೦) |
• Density | ೩,೭೬೯/km೨ (೯,೭೬೦/sq mi) |
• Urban | ೧೧,೮೧,೨೩೯ (೦೧−೦೧−೨,೦೧೦) |
• Metro | ೧೮,೯೪,೫೨೧ ((೦೧−೦೧−೨,೦೧೦) ೩೪ closest municipalities) |
Time zone | UTC+1 (CET) |
• Summer (DST) | UTC+2 (CEST) |
Website | www.kk.dk/english |
ಕೋಪನ್ ಹ್ಯಾಗನ್ English pronunciation: /ˈkoʊpənheɪɡən/[೩]; ಡೇನಿಷ್:Københavnpronounced [kʰøb̥ənˈhaʊ̯ˀn] ( )[೪] ಡೆನ್ಮಾರ್ಕ್ ನ ಅತಿ ದೊಡ್ಡ ನಗರ ಹಾಗೂ ರಾಜಧಾನಿಯಾಗಿದ್ದು ನಗರದಲ್ಲಿ 1,181,239 (2010)ಜನಸಂಖ್ಯೆ ಮತ್ತು ಮೆಟ್ರೋಪಾಲಿಟನ್ ನಲ್ಲಿ 1,894,521 (2010)ಜನಸಂಖ್ಯೆಯನ್ನು ಹೊಂದಿದೆ. ಕೋಪನ್ ಹ್ಯಾಗನ್ ಝಿಯಾಲ್ಯಾಂಡ್ ಮತ್ತು ಅಮಾಜೆರ್ ದ್ವೀಪಗಳಲ್ಲಿರುವ ಸ್ಥಳವಾಗಿದೆ.
11ನೆಯ ಶತಮಾನದಲ್ಲಿ ಮೊದಲಬಾರಿಗೆ ದಾಖಲಾದ ಕೋಪನ್ ಹ್ಯಾಗನ್ 15ನೆಯ ಶತಮಾನದಲ್ಲಿ ಡೆನ್ಮಾರ್ಕ್ ನ ರಾಜಧಾನಿಯಾಯಿತು ಮತ್ತು 17ನೆಯ ಶತಮಾನದಲ್ಲಿ ಕ್ರಿಶ್ಚಿಯನ್ IV ರ ಆಳ್ವಿಕೆಯಲ್ಲಿ ಅದು ಪ್ರಾಂತ್ಯದ ಪ್ರಮುಖ ಕೇಂದ್ರವಾಯಿತು. 2000ದಲ್ಲಿ, ಅಂತರರಾಷ್ಟ್ರೀಯ ಓರ್ಸಂಡ್ ಸೇತುವೆಯ ನಿರ್ಮಾಣಕಾರ್ಯವು ಮುಗಿದ ನಂತರ ಕೋಪೆನ್ ಹ್ಯಾಗೆನ್ ಹೆಚ್ಚುಹೆಚ್ಚು ಜನರನ್ನು ಒಂದುಗೂಡಿಸುವ ಓರ್ಸಂಡ್ ಪ್ರದೇಶದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ, ಕೋಪನ್ ಹ್ಯಾಗನ್ ಮತ್ತು ಸ್ವೀಡಿಷ್ ನಗರವಾದ ಮಾಲ್ಮೋಗಳು ಕೂಡಿ ಒಂದು ಮೆಟ್ರೋಪಾಲಿಟನ್ ಪ್ರದೇಶವಾಗಿ ಬೆಳೆಯುವ ಪ್ರಕ್ರಿಯೆಯಲ್ಲಿವೆ. 50 ಕಿಲೋಮೀಟರ್ ಗಳ ತ್ರಿಜ್ಯಪರಿಧಿಯಲ್ಲಿ ಸುಮಾರು 2.7 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೋಪನ್ ಹ್ಯಾಗನ್ ಉತ್ತರ ಯೂರೋಪ್ ನ ಸಾಂದ್ರ ಜನಸಂಖ್ಯೆ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಕೋಪನ್ ಹ್ಯಾಗನ್ ನಾರ್ಡಿಕ್ ದೇಶಗಳಲ್ಲಿ ಪ್ರವಾಸಿಗರನ್ನು ಅತಿ ಹೆಚ್ಚು ಅಕರ್ಷಿಸುವ ನಗರವಾಗಿದ್ದು 2007ರಲ್ಲಿ 1.3 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಯಶಸ್ವಿಯಾಗಿ ತನ್ನತ್ತ ಸೆಳೆದಿತ್ತು.[೫]
ಕೋಪನ್ ಹ್ಯಾಗನ್ ಸಂಸ್ಕೃತಿ, ವ್ಯಾಪಾರ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಪ್ರಮುಖವಾದ ಪ್ರಾದೇಶಿಕ ಕೇಂದ್ರವಾಗಿರುವುದು ಹಲವಾರು ಅಂತರರಾಷ್ಟ್ರೀಯ ಸಮೀಕ್ಷೆಗಳ ಮೂಲಕ ಹಾಗೂ ಅರ್ಹತಾಶ್ರೇಣೀಕರಣ(rankings) ಮೂಲಕ ಸೂಚಿತವಾಗಿದೆ(ಕೆಳಗೆ ನೀಡಿರುವ ಇಂಟರ್ನ್ಯಾಷನಲ್ ರಾಂಕಿಂಗ್ಸ್ ನೋಡಿ) ಜೀವ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಸೌಕಾವಾಣಿಜ್ಯಗಳು ಮುಖ್ಯ ವಿಭಾಗಗಳಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯು ನಗರದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದು ಸೂಕ್ತವಾದ ಸ್ಥಳದಲ್ಲಿ ಇರುವುದರಿಂದಲೂ ಮತ್ತು ಅತ್ಯುತ್ತಮವಾದ ಸೌಕರ್ಯಗಳನ್ನು ಹೊಂದಿರುವುದರಿಂದಲೂ - ಸ್ಕಾಂಡಿನೇವಿಯಾ[೬] ದಲ್ಲಿನ ವಿಮಾನ ನಿಲ್ದಾಣವು ನಗರದ ಕೇಂದ್ರಭಾಗದಿಂದ ಟ್ರೈನ್ ಮೂಲಕ ಕೇವಲ 14 ನಿಮಿಷಗಳಲ್ಲಿ ಕ್ರಮಿಸಬಹದಾಗಿದೆ - ಕೋಪನ್ ಹ್ಯಾಗನ್ ಪ್ರಾದೇಶಿಕ ಕಚೇರಿಗಳನ್ನು ಹೊಂದುವವರಿಗೆ ಮತ್ತು ಸಭೆಗಳನ್ನು (ಸಮ್ಮೇಳನಗಳನ್ನು) ನಡೆಸುವವರಿಗೆ ಪ್ರಾದೇಶಿಕ ಕೇಂದ್ರವಾಗಿ ಹೆಸರುವಾಸಿಯಾಗಿದೆ.[೭]
ಕೋಪನ್ ಹ್ಯಾಗನ್ ಅತ್ಯುತ್ತಮ ಗುಣಮಟ್ಟದ ಜೀವನಕ್ಕೆ ಆಶ್ರಯವಾಗಿರುವ ನಗರಗಳಲ್ಲಿ ಒಂದೆಂಬುದನ್ನು ಆಗಾಗ್ಗೆ ಗುರುತಿಸಲಾಗಿದೆ.[೮][೯][೧೦] ಅಲ್ಲದೆ ಜಗದ ಪರಿಸರಸ್ನೇಹಿ ವಾತಾವರಣವನ್ನು ಹೊಂದಿರುವ ನಗರಗಳಲ್ಲಿ ಒಂದೆಂದೂ ಪರಿಗಣಿಸಲಾಗಿದೆ. ಒಳಬಂದರಿನಲ್ಲಿನ ನೀರು ಈಜು ಹೊಡೆಯಲು ಯೋಗ್ಯವಾದಷ್ಟು ತಿಳಿಯಾಗಿದೆ, ಸುಮಾರು 36% ನಾಗರಿಕರು ತಮ್ಮ ಕೆಲಸಗಳಿಗೆ ತೆರಳಲು ಸೈಕಲ್ ಉಪಯೋಗಿಸುತ್ತಾರೆ ಹಾಗೂ ಈ ರೀತಿ ಸೈಕಲ್ ನಲ್ಲಿ ಅಲ್ಲಿನ ಜನರು ಪ್ರತಿದಿನ ಓಡಾಡುವ ಒಟ್ಟು ದೂರ 1.1 ಮಿಲಿಯನ್ ಕಿಲೋಮೀಟರ್ ಗಳು! ಮಿಲೆನಿಯಮ್ ನ ನಂತರದ ವರ್ಷಗಳಲ್ಲಿ ಕೋಪನ್ ಹ್ಯಾಗನ್ ನಾಗರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಬಲವಾದ ಪುಷ್ಟಿ ನೀಡುವ ತಾಣವಾಗಿದ್ದು ಬೂಮ್ ಟೌನ್ ಎಂದೇ ವರ್ಣಿಸಲಾಗುತ್ತಿದೆ.[೧೧] ಇದಕ್ಕೆ ಕಾರಣ ಭಾಗಶಃ ಸಾಂಸ್ಕೃತಿಕ ಸೌಲಭ್ಯಗಳ ಹಾಗೂ ಸವಲತ್ತುಗಳ ಮೇಲೆ ಹೂಡಿದ ಹೇರಳವಾದ ಬಂಡವಾಳದ ಮತ್ತು ಹೊಸ ಅಲೆಯ ಯಶಸ್ವಿ ವಿನ್ಯಾಸಕಾರರು, ಪಾಕಪ್ರವೀಣರು ಮತ್ತು ಶಿಲ್ಪಿಗಳ ಪ್ರವೇಶ.[೧೨]
ಇತಿಹಾಸ
[ಬದಲಾಯಿಸಿ]ಮೀನುಗಾರಿಕೆಯೇ ಪ್ರಧಾನವಾಗಿದ್ದ ಒಂದು ಸಣ್ಣ ಹಳ್ಳಿಯಾಗಿ ಆರಂಭಗೊಂಡು, ಡ್ಯಾನಿಷ್ ಚಕ್ರಾಧಿಪತ್ಯದ ವರ್ಣರಂಜಿತ ರಾಜಧಾನಿಯಾಗಿ ವಿಜೃಂಭಣೆಯ ದಿನಗಳನ್ನು ಕಂಡು, ಈಗ ಜಗತ್ತಿನ ಪ್ರಮುಖ ವಿನ್ಯಾಸಕರ ರಾಜಧಾನಿಗಳಲ್ಲಿ ಒಂದಾಗಿರುವ ಕೋಪನ್ ಹ್ಯಾಗನ್ ಬಗ್ಗೆ ಇರುವ ಕಥೆಗಳು ಮತ್ತು ಐತಿಹ್ಯಗಳನ್ನು ಅಲ್ಲಿನ ಬೃಹತ್ ಅರಮನೆಗಳು, ತಾಮ್ರದ ಛಾವಣಿಗಳ್ಳು ಪಟ್ಟಣದ ಮನೆಗಳು ಮತ್ತು ಹವಾಮಾನಕ್ಕನುಗುಣವಾಗಿ ಶಿಲಾಚ್ಛಾದಿತ ಚೌಕಗಳಲ್ಲಿ ಕಾಣಬಹುದು. ವೈಕಿಂಗ್ ಯುಗದಿಂದಲೂ ಹ್ಯಾವ್ನ್(ಸಮುದ್ರತೀರ) ಎಂಬ ಒಂದು ಮೀನುಗಾರಿಕೆಗೆ ಹೆಸರುವಾಸಿಯಾದ ಗ್ರಾಮವೊಂದು ಈ ಸ್ಥಳದಲ್ಲಿ ಇದ್ದಿತು. ಇತ್ತೀಚಿನ ಪ್ರಾಚ್ಯಸಂಶೋಧನೆಗಳು 11ನೆಯ ಶತಮಾನದಲ್ಲಿಯೇ ಕೋಪನ್ ಹ್ಯಾಗನ್ ಒಂದು ಸಣ್ಣ ಪಟ್ಟಣವಾಗಿ ಅಭಿವೃದ್ಧಿಹೊಂದಿದ್ದು ಒಂದು ದೊಡ್ಡ ಎಸ್ಟೇಟ್, ಒಂದು ಚರ್ಚ್, ಒಂದು ಮಾರುಕಟ್ಟೆ, ಕನಿಷ್ಠ ಎರಡು ಬಾವಿಗಳು ಮತ್ತು ಹಲವಾರು ಚಿಕ್ಕಚಿಕ್ಕ ವಸಾಹತುಗಳು ಒಂದು ದೊಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ಹರಡಿದಂತಿದ್ದವೆಂಬುದನ್ನು ಸೂಚಿಸುತ್ತವೆ.[೧೩] ಹಲವಾರು ಇತಿಹಾಸತಜ್ಞರು ಈ ಪಟ್ಟಣವು ವೈಕಿಂಗ್ ಯುಗದ ಅಂತ್ಯಕಾಲದಲ್ಲಿ ಸ್ಥಾಪಿತವಾದುದೆಂದೂ, ಪ್ರಾಯಶಃ ಸ್ವೀಯ್ನ್ I ಫೋರ್ಕ್ ಬೇರ್ಡ್ ರಿಂದ ಸ್ಥಾಪಿಸಲ್ಪಟ್ಟುದೆಂದೂ ಅಭಿಪ್ರಾಯ ಹೊಂದಿದ್ದಾರೆ. 12ನೆಯ ಶತಮಾನದ ಮಧ್ಯಭಾಗದಿಂದ, ಬಿಷಪ್ಅಬ್ಸಾಲನ್ ರ ಸುಪರ್ದಿಗೆ ಬಂದ ನಂತರ, ಇದು ಪ್ರಾಮುಖ್ಯತೆಯಲ್ಲಿ ವೃದ್ಧಿಹೊಂದತೊಡಗಿತು; ಅವರು 1167ರಲ್ಲಿ ಸ್ಥಳಕ್ಕೊಂದು ಕೋಟೆ ಕಟ್ಟಿಸಿದ್ದು, ಆ ವರ್ಷವನ್ನೇ ಸಾಂಪ್ರದಾಯಿಕವಾಗಿ ಕೋಪನ್ ಹ್ಯಾಗನ್ ಗೆ ಬುನಾದಿಯನ್ನು ಹಾಕಿದಂತಹ ವರ್ಷವೆಂದು ಗುರುತಿಸಲಾಗಿದೆ. ಕೋಪನ್ ಹ್ಯಾಗನ್ ನ ಉತ್ಕೃಷ್ಟವಾದ ಬಂದರು,ನಗರವು ಒಂದು ಪ್ರಮುಖ ವಾಣಿಜ್ಯಕೇಂದ್ರವಾಗುವವರೆಗೂ, ಪಟ್ಟಣದ ಬೆಳವಣಿಗೆಗೆ ಪ್ರೋತ್ಸಾಹಕರವಾಗಿತ್ತು.
ಈ ನಗರವು ಮೂಲತಃ ಬಂದರಾಗಿದ್ದು ನಂತರ ವಾಣಿಜ್ಯ ಕೇಂದ್ರವಾಗಿರುವುದು ಅದರ ಹೆಸರಿನಲ್ಲೇ ವ್ಯಕ್ತವಾಗುತ್ತದೆ. ಅದರ ಮೊದಲ ಹೆಸರಾದ, ಸಮಕಾಲೀನ ಡ್ಯಾನಿಷ್ ಹೆಸರಿನಿಂದ ಉಗಮವಾದ, ಕೋಪ್ ಮನ್ನಾಹಾಫ್ನ್ (Køpmannæhafn) ನ ಅರ್ಥ ವರ್ತಕರ ತೀರ ಅಥವಾ ಕೊಳ್ಳುವವರ ರೇವು ಎಂಬುದಾಗಿತ್ತು. ನಗರದ ಆಂಗ್ಲ ಹೆಸರಿನ ಮೂಲವು ಲೋ ಜರ್ಮನ್ ಹೆಸರಾದ ಕೋಪನ್ ಹ್ಯಾಗನ್ ನಿಂದ ಪಡೆದಂತಹದ್ದಾಗಿದೆ. ಹಾಫ್ನಿಯಂ ಎಂಬ ಖನಿಜವೂ ಕೋಪನ್ ಹ್ಯಾಗನ್ ಎಂಬ ಹೆಸರಿನಿಂದ ಹೊಂದಿದ್ದಾಗಿದ್ದು, ಅದರ ಲ್ಯಾಟಿನ್ ಹೆಸರು ಹಾಫ್ನಿಯಾ ಎಂಬುದಾಗಿದೆ.[೧೪]
ಜರ್ಮನ್ ರು ಗಮನಿಸುತ್ತಿದ್ದಂತೆಯೇ ಹ್ಯಾನ್ಸಿಯಾಟಿಕ್ ಲೀಗ್ ನವರು ಪದೇ ಪದೇ ಈ ಪ್ರದೇಶದ ಮೇಲೆ ಆಕ್ರಮಣ ನಡೆಸಿದರು. 1254ರಲ್ಲಿ ಕೋಪನ್ ಹ್ಯಾಗನ್ ಬಿಷಪ್ ಜೇಕಬ್ ಎರ್ಲಾಂಡರ್ಸನ್ ರ ಕೈಕೆಳಗಿನ ನಗರವೆಂದು ಸನದು ಹೊರಟಿತು. 1658-59ರಲ್ಲಿ ಅದು ಚಾರ್ಲ್ಸ್ X ರ ನೇತೃತ್ವದ ಸ್ವೀಡ್ಸ್ ಸೇನೆಯು ನಡೆಸಿದ ತೀವ್ರ ಆಕ್ರಮಣವನ್ನು ತಡೆದುಕೊಂಡಿತು ಮತ್ತು ಮಹತ್ತರವಾದ ಧಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು.
ಏಪ್ರಿಲ್ 2, 1801ರಂದು ಅಡ್ಮಿರಲ್ ಸರ್ ಹೈಡ್ ಪಾರ್ಕರ್ ರ ಸೇನಾಧಿಪತ್ಯದ ಬ್ರಿಟಿಷ್ ಸೇನೆಯು ಕೋಪನ್ ಹ್ಯಾಗನ್ ನಿಂದ ಕೊಂಚ ದೂರ ಲಂಗರು ಬಿಟ್ಟಿದ್ದ ಡ್ಯಾನಿಷ್-ನಾರ್ವೇಜಿಯನ್ ಪಡೆಯನ್ನು ಸೋಲಿಸಿತು. ವೈಸ್-ಅಡ್ಮಿರಲ್ ಹೊರೇಷಿಯೋ ನೆಲ್ಸನ್ ಪ್ರಮುಖ ಧಾಳಿಯ ನೇತೃತ್ವ ವಹಿಸಿದ್ದರು.[೧೫][೧೬][೧೭] ಅವರು ಪಾರ್ಕರ್ ರ ಹಿಂಜರೆಯೆಂದು ನೀಡಿದ ಆಜ್ಞೆಯನ್ನು ತಿರಸ್ಕರಿಸಿ, ಕದನವಿರಾಮವು ಘೋಷಣೆಯಾಗುವ ಮುನ್ನ ಹಲವಾರು ಡ್ಯಾನಿಷ್-ನಾರ್ವೇಜಿಯನ್ ಹಡಗುಗಳನ್ನು ನಾಶ ಮಾಡಿದುದು ಈಗ ಪ್ರತೀತಿ.[೧೫][೧೮][೧೯] ನೆಲ್ಸನ್ ಹೋರಾಡಿದ ಬಹಳ ಕಠಿಣವಾದ ಯುದ್ಧವೆಂದರೆ ಕೋಪನ್ ಹ್ಯಾಗನ್ ಯುದ್ಧವೆಂದು ಆಗಾಗ್ಗೆ ಪರಿಗಣಿಸಲಾಗುತ್ತದೆ; ಟ್ರಫಾಲ್ಗರ್ ನ ತೀವ್ರ ಹೋರಾಟಕ್ಕಿಂತಲೂ ಇದು ಮಿಗಿಲಾದುದು ಎನ್ನಲಾಗಿದೆ.[೧೫][೧೮][೨೦][೨೧][೨೨] ಲಾರ್ಡ್ ನೆಲ್ಸನ್ ಪಾರ್ಕರ್ ರು ಕದನವಿರಾಮವನ್ನು ಸೂಚಿಸುವುದನ್ನು ನೋಡಲಿಚ್ಛಿಸದೆ ಅವರು "ಟೆಲಿಸ್ಕೋಪನ್ನು ತಮ್ಮ ಕುರುಡು ಕಣ್ಣಿಗೆ ಇಟ್ಟುಕೊಂಡರು" ಎಂಬ ಪ್ರಸಿದ್ಧ ಸನ್ನಿವೇಶವು ಈ ಯುದ್ಧದಲ್ಲೇ ಜರುಗಿತು.[೨೦]
ಕೋಪನ್ ಹ್ಯಾಗನ್ ನ ಎರಡನೆಯ ಯುದ್ಧವು(ಆಥವಾ ಕೋಪನ್ ಹ್ಯಾಗನ್ ಮೇಲೆ ಬಾಂಬ್ ಧಾಳಿ)(ಆಗಸ್ಟ್ 16ರಿಂದ ಸೆಪ್ಟೆಂಬರ್ 5, 1807) ಬ್ರಿಟಿಷರು ಕೋಪನ್ ಹ್ಯಾಗನ್ ಮೇಲೆ ಪೂರ್ವನಿಯೋಜಿತವಾಗಿ ಮಾಡಿದ ಯುದ್ಧವಾಗಿದ್ದು, ಡ್ಯಾನೋ-ನಾರ್ವೇಜಿಯನ್ ಪಡೆಗೆ ಮುತ್ತಿಗೆ ಹಾಕುವ ಸಲುವಾಗಿ ನಾಗರಿಕರನ್ನು ಗುರಿ ಮಾಡಿದರು.[೧೮][೨೦][೨೩][೨೪] ಬ್ರಿಟಿಷರು 30,000 ಜನರ ಪಡೆ ತಂದು ಕೋಪನ್ ಹ್ಯಾಗನ್ ಅನ್ನು ಸುತ್ತುವರೆದರು.[೧೮] ಧಾಳಿಯು ಮುಂದಿನ ಮೂರು ದಿನಗಳವರೆಗೆ ಮುಂದುವರಿಯಿತು ಮತ್ತು ತತ್ಪರಿಣಾಮವಾಗಿ ಕನಿಷ್ಠ ೨೦೦೦ ನಾಗರಿಕರು ಸಾವನ್ನಪ್ಪಿದರು ಮತ್ತು ನಗರದ ಬಹುಪಾಲು ನಾಶವಾಯಿತು.[೧೮][೨೩] ಕೋಪನ್ ಹ್ಯಾಗನ್ ತನ್ನ ಹಳೆಯ ರಕ್ಷಣಾ-ರೀತಿಯನ್ನು ಅವಲಂಬಿಸಿದ್ದು, ಆ ಆಕ್ರಮಣ ತಂತ್ರಗಳು ಬ್ರಿಟಿಷರ ಬಳಿಯಿದ್ದ ಹೆಚ್ಚು ದೂರಕ್ಕೆ ಸಿಡಿಸಬಹುದಾದ ಬಂದೂಕುಗಳ ಮುಂದೆ ನಿಷ್ಪ್ರಯೋಜಕವಾದ ಕಾರಣ ಕೋಪನ್ ಹ್ಯಾಗನ್ ಬಹಳವೇ ವಿನಾಶವನ್ನು ಅನುಭವಿಸಬೇಕಾಯಿತು.[೨೩][೨೫] ಪಶ್ಚಿಮದ ದಿಕ್ಕಿನಲ್ಲಿನ ಹಳೆಯ ರಕ್ಷಣಾವ್ಯವಸ್ಥೆಗಳ ಅಂಚಿನಲ್ಲಿನ ರಕ್ಷಣಾಗೋಡೆಗಳನ್ನು ತೆರವುಗೊಳಿಸಿ ಹೊಸ ನಿವಾಸಗಳನ್ನು ನಿರ್ಮಿಸಲು ದ ಲೇಕ್ಸ್ಡೇನಿಷ್:Søerne ಪ್ರದೇಶದ ಅನುವು ಮಾಡಿಕೊಡುವ ಕಾರ್ಯವು 1950ರವರೆಗೂ ಜರುಗಲಿಲ್ಲ.[೨೩] ಈ ವಿಧವಾದ ಸ್ಥಳವನ್ನು ಹೆಚ್ಚಿಸುವಂತಹ ಕಾರ್ಯವು ಬಹಳ ಹಿಂದೆಯೇ ಆಗಬೇಕಿತ್ತು; ಏಕೆಂದರೆ ಹಳೆಯ ಗೋಡೆಗಳು/ರಕ್ಷಣಾ ವ್ಯವಸ್ಥೆಗಳು ಪುರಾತನವಾಗಿದ್ದವು ಮತ್ತು ಹಳೆಯ ನಗರದಲ್ಲಿ ನಿರ್ಮಲೀಕರಣದ ಅಭಾವ ಕಂಡುಬರುತ್ತಿತ್ತು. ಹೀಗೆ ಸ್ಥಳವಿಸ್ತರಣಗೊಳ್ಳುವುದಕ್ಕೆ ಮುಂಚೆ, ಕೇಂದ್ರ ಕೋಪನ್ ಹ್ಯಾಗನ್ ನಲ್ಲಿ 125,000 ಜನರಿದ್ದು, 1970ರ ಜನಗಣತಿಯಲ್ಲಿ ಈ ಸಂಖ್ಯೆ ಉತ್ತುಂಗಕ್ಕೇರಿತು(140,000); ಇಂದು ಅಲ್ಲಿನ ಜನಸಂಖ್ಯೆ ಸುಮಾರು 25,000. 1901ರಲ್ಲಿ ಕೋಪನ್ ಹ್ಯಾಗನ್ ಮತ್ತೂ ವಿಸ್ತಾರಗೊಂಡಿತು, ೪೦,೦೦೦ ಸಂಖ್ಯೆಯಿರುವ ಪಂಗಡಗಳನ್ನು ಸೇರಿಸಿಕೊಂಡಿತು ಮತ್ತು ಆ ಸಂದರ್ಭದಲ್ಲಿ ಫ್ರೆಡೆರಿಕ್ಸ್ ಬರ್ಗ್ ಅನ್ನು ಕೋಪನ್ ಹ್ಯಾಗನ್ ಒಳಗಿನ ಒಂದು ಆವೃತಪ್ರದೇಶ(ಎಂಕ್ಲೇವ್)ವನ್ನಾಗಿ ಮಾಡಿಕೊಂಡಿತು.
ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶದ ಿತರ ಪ್ರದೇಶಗಳಂತೆಯೇ ಕೋಪನ್ ಹ್ಯಾಗನ್ ಅನ್ನೂ ಸಹ, ಏಪ್ರಿಲ್ ೯, 1940ರಿಂದ ಮೇ ೪, 1945ರವರೆಗೂ, ಜರ್ಮನಿಯ ಪಡೆಗಳು ಆಕ್ರಮಿಸಿಕೊಂಡವು. 1943ರಲ್ಲಿ, ಆಕ್ರಮಿಸಿದ ಪಡೆಗಳೊಡನೆ ಸರ್ಕಾರದ ಸಹಕಾರವು ಮುರಿದುಬಿದ್ದಾಗ, ರಾಯಲ್ ಡ್ಯಾನಿಷ್ ಪಡೆಗಳು ತಮ್ಮ ನೌಕೆಗಳನ್ನು ಜರ್ಮನ್ನರು ಉಪಯೋಗಿಸಬಾರದೆಂಬ ಕಾರಣದಿಂದ ಹಲವಾರು ಹಡಗುಗಳನ್ನು ಕೋಪನ್ ಹ್ಯಾಗನ್ ಬಂದರಿನಲ್ಲಿ ಮುಳುಗಿಸಿಬಿಟ್ಟರು. ಯುದ್ಧದ ನಂತರ ನಗರವು ಬಹಳವೇ ಬೆಳೆದಿದ್ದು, 70ರ ದಶಕದಲ್ಲಿ ಐದು-ಬೆರಳಿನ-ಯೋಜನೆ ಎಂದು ಕರೆಯಲ್ಪಡುವ ಪ್ರಯಾಣಿಕರ ಟ್ರೈನ್ ಯೋಜನೆಯ ಅಡಿಯಲ್ಲಿ ಸುತ್ತಮುತ್ತಣ ಪಟ್ಟಣಗಳು ಮತ್ತು ಹೊರವಲಯಗಳಿಗೆ ರೈಲುಮಾರ್ಗವನ್ನು ರೂಪಿಸಿತು.
2000ದ ಬೇಸಿಗೆಯಿಂದ ಈಚೆಗೆ, ರೈಲು ಮತ್ತು ರಸ್ತೆಯ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವ ಸುಂಕದ ಸೇತುವೆ/ಸುರಂಗ(ಓರ್ಸಂಡ್ ಸೇತುವೆ) ನಿರ್ಮಿತವಾಗಿ ಕೋಪನ್ ಹ್ಯಾಗನ್ ಮತ್ತು ಸ್ವೀಡನ್ ನ ನಗರವಾದ ಮಾಲ್ಮೋಗಳಿಗೆ ಸಂಪರ್ಕವೇರ್ಪಟ್ಟಿದೆ. ತತ್ಪರಿಣಾಮವಾಗಿ ಎರಡೂ ದೇಶಗಳ ವಿಸ್ತಾರಕ್ಕೆ ಸೇರಿದಂತೆ, ಕೋಪನ್ ಹ್ಯಾಗನ್ ಇನ್ನೂ ದೊಡ್ಡದಾದ ಮೆಟ್ರೋಪಾಲಿಟನ್ ಪ್ರದೇಶದ ಕೇಂದ್ರವಾಯಿತು. ಸೇತುವೆಯ ನಿರ್ಮಾಣದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾದವು ಮತ್ತು ಪ್ರಮಖ ನಗರದ ದಕ್ಷಿಣಭಾಗದಲ್ಲಿರುವ ಅಮಾಜೆರ್ ವ್ಯಾಪಕವಾದ ಪುರಭಿವೃದ್ಧಿ ಹೊಂದಿತು.
ಭೂಗೋಳ
[ಬದಲಾಯಿಸಿ]ಸ್ಥಳ
[ಬದಲಾಯಿಸಿ]ಕೋಪನ್ ಹ್ಯಾಗನ್ ಝೀಲ್ಯಾಂಡ್ (Sjælland) ದ್ವೀಪದ ಪೂರ್ವತೀರದಲ್ಲಿರುವ ಭೂಭಾಗವಾಗಿದ್ದು, ಇದರ ಕೆಲವಂಶವು ಅಮಾಜೆರ್ ದ್ವೀಪದಲ್ಲೂ ಮತ್ತು ಮಿಕ್ಕ ಅಂಶಗಳು ಈ ಎರಡು ದ್ವೀಪಗಳ ಮಧ್ಯದ ಹಲವಾರು ನೈಸರ್ಗಿಕ ಮತ್ತು ಕೃತಕ ಚಿಕ್ಕ ದ್ವೀಪಗಳಲ್ಲಿಯೂ ಹರಡಿರುವಂತಹುದಾಗಿದೆ. ಕೋಪನ್ ಹ್ಯಾಗನ್ ನ ಪೂರ್ವಕ್ಕೆ, ಡೆನ್ಮಾರ್ಕ್ ಮತ್ತು ಸ್ವೀಡನ್ ಅನ್ನು ಬೇರ್ಪಡಿಸುವ ಮತ್ತು ಉತ್ತರ ಸಮುದ್ರ ಮತ್ತು ಬಾಲ್ಟಿಕ್ ಸಮುದ್ರವನ್ನು ಸೇರಿಸುವ ಓರ್ಸಂಡ್ ನೀರಿನ ಕಾಲುವೆಯಿದೆ. ಸ್ವೀಡಿಷ್ ಪಾರ್ಶ್ವದಲ್ಲಿ ಕೋಪನ್ ಹ್ಯಾಗನ್ ಗೆ ನೇರವಾಗಿ ಆ ಪಕ್ಕದ ತೀರದಲ್ಲಿ ಮಾಲ್ಮೋ ಮತ್ತು ಲ್ಯಾಂಡ್ಸ್ ಕ್ರೋನಾ ಪಟ್ಟಣಗಳಿವೆ.
ಕೋಪನ್ ಹ್ಯಾಗನ್ ಓರ್ಸಂಡ್ ಪ್ರದೇಶದ ಒಂದು ಭಾಗವೂ ಆಗಿದ್ದು, ಅದರಲ್ಲಿ ಡೆನ್ಮಾರ್ಕ್ ನ ಝೀಲ್ಯಾಂಡ್, ಲೊಲ್ಲಾಂಡ್-ಫಾಲ್ಸ್ ಟರ್ ಮತ್ತು ಬಾರ್ನ್ ಹೋಮ್ ಹಾಗೂ ಸ್ವೀಡನ್ ನ ಸ್ಕಾನಿಯಾ ಪ್ರದೇಶಗಳು ಅಡಕವಾಗಿವೆ.
ಕೋಪನ್ ಹ್ಯಾಗನ್ ಪುರಸಭೆ
[ಬದಲಾಯಿಸಿ]ಕೋಪನ್ ಹ್ಯಾಗನ್ ಪುರಸಭೆಯು ಒಂದು ಆಡಳಿತಾತ್ಮಕ ವಿಭಾಗವಾಗಿದ್ದು ಕೋಪನ್ ಹ್ಯಾಗನ್ ನ ನಿಜಮಧ್ಯನಗರ ಪ್ರದೇಶವನ್ನು ತನ್ನ ತೆಕ್ಕೆಯಲ್ಲಿ ಒಳಗೊಳ್ಳುತ್ತದೆ. ಮೂಲ ನಗರದ ಸಾಕಷ್ಟು ಸಣ್ಣ ಭಾಗವೇ ಆದ ಇದು ಪುರಸಭಾ ವ್ಯಾಪ್ತಿಯಲ್ಲಿ ಬರಲು ಕಾರಣಗಳೆಂದರೆ ಅದು ಒಂದು ನಿರ್ದಿಷ್ಟವಾದ ಭಾಗವನ್ನು ಮಾತ್ರ ಒಳಗೊಳ್ಳುವುದೆಂಬುದು ಮತ್ತು ಪ್ರೆಡೆರಿಕ್ಸ್ ಬರ್ಗ್ ಆವೃತಪ್ರದೇಶವು ತನ್ನದೇ ಆದ ಪುರಸಭೆಯನ್ನು ಹೊಂದಿರುವುದು. 2006-08ರ ಸುಧಾರಣೆಯ ನಂತರ, ಕೋಪನ್ ಹ್ಯಾಗನ್ ೧೦ ಅಧಿಕೃತ ಜಿಲ್ಲೆಗಳಾಗಿ ವಿಂಗಡಿಸಲ್ಪಟ್ಟಿದೆ (ಡ್ಯಾನಿಷ್: ಬೈಡೆಲೆ).[೨೬]
ಅಧಿಕೃತ ಜಿಲ್ಲೆಗಳು | ಇತರೆ ಪ್ರದೇಶಗಳು |
---|---|
ಓಸ್ಟೆಬ್ರೋ, ನೋರ್ರೆಬ್ರೋ, ವೆಸ್ಟೆರ್ಬ್ರೋ, ಮತ್ತು ಅಮಾಜರ್ಬ್ರೋಗಳ ಹೆಸರಿಗೆ ಅಂಟಿರುವ ಬಾಲವಾದ -ಬ್ರೋ ಡ್ಯಾನಿಷ್ ಪದವಾದ, ಸೇತುವೆ ಎಂಬ ಅರ್ಥ ನೀಡುವ 'ಬ್ರೋ'ದೊಂದಿಗೆ ಹೋಲಿಸಿ ಗೊಂದಲಪಡಬಾರದು. ಈ ಪದವು ಡ್ಯಾನಿಷ್ ಪದವಾದ ಬ್ರೋಲಾಗ್ಟ್ ಎಂಬ, ಹಾಸಲ್ಪಟ್ಟ ಎಂದು ಅರ್ಥ ಬರುವ, ಪದದ ಚಿಕ್ಕ ರೂಪ ಅಥವಾ ಹ್ರಸ್ವರೂಪವೆಂದು ತಿಳಿಯಲಾಗಿದೆ; ನಗರದ ಆಂದಿನ ಮಹಾದ್ವಾರದವರೆಗೆ ರಸ್ತೆಗೆ ಹಾಸುಗಲ್ಲುಗಳನ್ನು ಹಾಸಲ್ಪಟ್ಟುದನ್ನು ಹಿನ್ನೆಲೆಯಾಗಿಟ್ಟುಕೊಂಡು ಬಳಸಿದ ಪದವಿದು.
ವಿಶಾಲ ಕೋಪನ್ ಹ್ಯಾಗನ್
[ಬದಲಾಯಿಸಿ]ಕೋಪನ್ ಹ್ಯಾಗನ್ ನ ಪೌರದೇಶಗಳ ಸಮಷ್ಟಿಯಲ್ಲಿ ಹಲವಾರು ಪುರಸಭೆಗಳಿವೆ. ಕೋಪನ್ ಹ್ಯಾಗನ್ ಪುರಸಭೆಯ ನಂತರ ಎರಡನೆಯ ದೊಡ್ಡ ಪುರಸಭೆಯು ಫ್ರೆಡೆರಿಕ್ಸ್ ಬರ್ಗ್ ಪುರಸಭೆಯಾಗಿದ್ದು ಇಡು ಕೋಪನ್ ಹ್ಯಾಗನ್ ಪುರಸಭೆಯಲ್ಲಿನ ಒಂದು ಆವೃತ ಪ್ರದೇಶವಾಗಿದೆ. ಇವೆರಡೂ ಡೆನ್ಮಾರ್ಕ್ ರಾಜಧಾನಿಯ ಪ್ರದೇಶಕ್ಕೆ ಸೇರಿದಂತಹವಾಗಿದ್ದು, ಕೋಪನ್ ಹ್ಯಾಗನ್ ಮೆಟ್ರೋಪಾಲಿಟನ್ ಪ್ರದೇಶದ ಬಹುಭಾಗವನ್ನು ಹೊಂದಿರುವಂತಹವಾಗಿವೆ.
ಹಿಂದಿನ ದಿನಗಳಲ್ಲಿ ಫ್ರೆಡೆರಿಕ್ಸ್ ಬರ್ಗ್, ಜೆಂಟಾಫ್ಟೆಲ್ ಮತ್ತು ಕೋಪನ್ ಹ್ಯಾಗನ್ ಪುರಸಭೆಗಳ ಪ್ರದೇಶಗಳನ್ನು ಉಪಯೋಗಿಸುವುದರ ಮೂಲಕ ಕೋಪನ್ ಹ್ಯಾಗನ್ ನಗರದ ಎಲ್ಲೆಯನ್ನು ನಿಶ್ಚಯಿಸಲಾಗುತ್ತಿತ್ತು. ಈ ನಿಶ್ಚಯಿಸುವಿಕೆಯು ಈಗ ಬಳಕೆಯಲ್ಲಿಲ್ಲ. 2007ರ ಮೊದಲ ಭಾಗದಲ್ಲಿ ನಡೆದ ಪುರಸಭಾ ನೂತನ ಸುಧಾರಣೆಗಳಿಗೆ ಅಗತ್ಯವಾದ ಅಂಕಿ-ಅಂಶಗಳನ್ನು ಹೊಂದಿಸುವ ಸಲುವಾಗಿ ಒಂದು ನಿರ್ದಿಷ್ಟವಾದ ಡ್ಯಾನಿಷ್ ಲ್ಯಾಂಡ್ಸ್ ಯೋಜನೆಗಳನ್ನು ಪರಿಚಯಿಸಲಾಗಿದೆ. (ಡ್ಯಾನಿಷ್:ಲ್ಯಾಂಡ್ಸ್ ಡೆಲೆ)... ಜಮೀನೆಂದರೆ ಮೂಲತಃ ಭೌಗೋಳಿಕ ಮತ್ತು ಅಂಕಿ-ಅಂಶಗಳ ವಿವರಣೆಯಾಗಿದ್ದು, ಈ ವಿಸ್ತೀರ್ಣವನ್ನು ಆಡಳಿತಾತ್ಮಕ ವಿಭಾಗವೆಂದು ಪರಿಗಣಿಸಲಾಗುವುದಿಲ್ಲ. ಕೋಪನ್ ಹ್ಯಾಗನ್ ನಗರದ ಭೂಮಿಯು ಕೋಪನ್ ಹ್ಯಾಗನ್ ನ ಪುರಸಭೆಗಳು, ಡ್ರಾಗಾರ್, ಪ್ರೆಡೆರಿಕ್ಸ್ ಬರ್ಗ್ ಮತ್ತು ಟಾರ್ನ್ಬಿಗಳನ್ನೊಳಗೊಂಡಿದ್ದು, 2009ರ ಆರಂಭದಲ್ಲಿ ಒಟ್ಟು ಜನಸಂಖ್ಯೆ 667,228 ಇದ್ದಿತು.[೨೭][೨೮]
ಕೋಪನ್ ಹ್ಯಾಗನ್ ಮತ್ತು ಫ್ರೆಡೆರಿಕ್ಸ್ ಬರ್ಗ್ ಯಾವುದೇ ಕೌಂಟಿಗೆ ಸೇರದ ಮೂರು ಡ್ಯಾನಿಷ್ ಪುರಸಭೆಗಳ ಪೈಕಿ ಎರಡಾಗಿದ್ದವು. ಜನವರಿ 1, 2007ರಂದು ಈ ಪುರಸಭೆಗಳು ತಮ್ಮ ಕೌಂಟಿ ಸವಲತ್ತುಗಳನ್ನು ಕಳೆದುಕೊಂಡವು ಮತ್ತು ಕೋಪನ್ ಹ್ಯಾಗನ್ ರಾಜಧಾನಿ ಪ್ರದೇಶದ ಅಂಗವಾದವು.
ಬೆರಳು ಯೋಜನೆ
[ಬದಲಾಯಿಸಿ]ಕೋಪನ್ ಹ್ಯಾಗನ್ ನ ಹೊರವಲಯಗಳು ಬೆರಳು ಯೋಜನೆಡೇನಿಷ್:Fingerplanenಯ ಪ್ರಕಾರ ನಿಯೋಜಿತವಾಗಿದೆ; 1947ರಲ್ಲಿ ಮೊದಲ್ಗೊಂಡ ಈ ಯೋಜನೆಯು ಹೊರವಲಯಗಳನ್ನು ಐದು ಬೆರಳುಗಳಾಗಿ ವಿಂಗಡಿಸಿತು.[೨೯] S-ರೈಲು ಮಾರ್ಗಗಳು ಬೆರಳು ನಕ್ಷೆಯ ರೀತಿಯಲ್ಲಿಯೇ ನಿರ್ಮಿತವಾಗಿದ್ದು, ಹಸಿರಿನ ಹರಹುಗಳು ಮತ್ತು ಹೆದ್ದಾರಿಗಳನ್ನು ಬೆರಳುಗಳ ಮಧ್ಯಭಾಗಗಳಲ್ಲಿ ನಿರ್ಮಿಸಲಾಗಿದೆ.
ಹವಾಗುಣ
[ಬದಲಾಯಿಸಿ]ಕೋಪನ್ ಹ್ಯಾಗನ್ ಬೆಚ್ಚನೆಯ ಬೇಸಗೆ ಮತ್ತು ತೇವಾಂಶಭರಿತ ಖಂಡದ ರೀತಿಯ ಹವಾಗುಣದ ವಲಯದಲ್ಲಿದೆ ಕೊಪ್ಪೆನ್ ಕ್ಲೈಮೇಟ್ ಕ್ಲಾಸಿಫಿಕೇಷನ್: ಸಮುದ್ರರೀತ್ಯಾ Dfb , Cfb ಪ್ರಭಾವಗಳು. ನಗರವು ಅಟ್ಲಾಂಟಿಕ್ ಕಳಪೆ-ಒತ್ತಡದ ವಿಧಿಯ ಪಥದಲ್ಲೇ ಇರುವುದರಿಂದ, ಕೋಪನ್ ಹ್ಯಾಗನ್ ನಲ್ಲಿ ಅಸ್ಥಿರವಾದ ಮತ್ತು ಬದಲಾಗುವಂತಹ ಹವಾಗುಣಲಕ್ಷಣಗಳನ್ನು ನಾಲ್ಕೂ ಋತುಗಳಲ್ಲೂ ಹೊಂದಿರುತ್ತದೆ ಮತ್ತು ಜಗತ್ತಿನ ಈ ನಗರವಿರುವ ಅಕ್ಷಾಂಶದಲ್ಲಿಯೇ ಇರುವ ಪ್ರದೇಶಗಳಿಗಿಂತಲೂ 5 ಡಿಗ್ರಿಗಳಷ್ಟು ಹೆಚ್ಚು ಸರಾಸರಿ ಉಷ್ಣಾಂಶವನ್ನು ಹೊಂದಿರುತ್ತದೆ (ಸುಮಾರು 55 ಡಿಗ್ರಿ ಉತ್ತರ) ಈ ಉಷ್ಣಾಂಶಕ್ಕೆ ಮುಖ್ಯ ಕಾರಣ ಅಟ್ಲಾಂಟಿಕ್ ಗಲ್ಫ್ ಸ್ಟ್ರೀಮ್ ಅಗಿದ್ದು, ಅದು ಬಿಸಿ ನೀರನ್ನು ಸರ್ಗಸ್ಸೋ ಕಡೆಯಿಂದ ವಾಯುವ್ಯ ದಿಕ್ಕಿಗೆ ತಳ್ಳುತ್ತದೆ ಮತ್ತು ಒತ್ತಡದಿಳಿಯುವಿಕೆಯ ಕ್ರಮಗಳು ಓಷ್ಯಾನಿಕ್ ಸ್ಟ್ರೀಮ್ ಅನ್ನು ಹಿಂಬಾಲಿಸುತ್ತದೆ.
ಜಲೋತ್ಪಾತವು ವರ್ಷವಿಡೀ ಸುಮಾರಾಗಿರುತ್ತದೆ ಮತ್ತು ಜೂನ್ ನಿಂದ ಆಗಸ್ಟ್ ನ ಅವಧಿಯಲ್ಲಿ ಗರಿಷ್ಟತೆಯನ್ನು ತಲುಪುತ್ತದೆ. ಡಿಸೆಂಬರ್ ನ ಕೊನೆಯಿಂದ ಮಾರ್ಚ್ ನ ಮೊದಲ ಭಾಗದವರೆಗೂ ಮಂಜು ಬೀಳಿತ್ತಿರುತ್ತದೆಯಾದರೂ ಹಿಮಾವೃತತೆಯು ಹೆಚ್ಚು ಕಾಲ ಇರುವುದಿಲ್ಲ. ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆಯು ಮಂಜಿನಷ್ಟೇ ಸಾಮಾನ್ಯವಾಗಿರುತ್ತದೆ ಮತ್ತು ಈ ಎರಡು ಚಳಿಗಾಲದ ತಿಂಗಳುಗಳ ಸರಾಸರಿ ತಾಪಮಾನವು ಮಂಜುಗಟ್ಟುವ ತಾಪಮಾನದ ಆಸುಪಾಸಿನಲ್ಲಿಯೇ ಇರುತ್ತದೆ.
ಚಳಿಗಾಲದಲ್ಲಿ ವಾತಾವರಣವು ಯಾವ ರೇಖಾಂಶದಲ್ಲಿ ಅಟ್ಲಾಂಟಿಕ್ ನಲ್ಲಿ ಒತ್ತಡದಿಳಿತವು ಕೇಂದ್ರೀಕೃತವಾಗುವುದೆಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಲ್ಪ್ಸ್ ಬೆಟ್ಟಗಳ ಸುತ್ತಲೂ ಸ್ಥಿರವಾದ ಹೆಚ್ಚಿನ ಒತ್ತಡವಿದ್ದಾಗ, ನೈಋತ್ಯದಿಂದ ಒದಗಿಬರುವ ಒತ್ತಡದಿಳಿತವು ದಕ್ಷಿಣ ಸ್ಕ್ಯಾಂಡಿನಾವಿಯಾ ಮತ್ತು ಉತ್ತರ ಜರ್ಮನಿಗಳತ್ತ ಸುಳಿಯುತ್ತದೆ. ಸಾಮಾನ್ಯವಾಗಿ ಆಗಿನ ತಾಪಮಾನವು ಹಗಲು ಮತ್ತು ರಾತ್ರಿಯಲ್ಲಿ ಮಂಜುಗಟ್ಟುವುದಕ್ಕಿಂತಲೂ ಹೆಚ್ಚಿನದಾಗಿರುತ್ತದೆ. ಡೆನ್ಮಾರ್ಕ್ ನಲ್ಲೇ ಸ್ಥಿರ ಒತ್ತಡದ ಉದ್ಭವವಾದರೆ ಅಥವಾ ಅದರ ಈಶಾನ್ಯದಿಲ್ಲಿರುವ ರಷ್ಯಾ ಅಥವಾ ಫಿನ್ ಲ್ಯಾಂಡ್ ಗಳಲ್ಲುಂಟಾದರೆ, ನೈಋತ್ಯದಿಂದ ಬೀಸುವ ಮಂದಮಾರುತಕ್ಕೆ ತಡೆಯೊಡ್ಡಬಹುದು. ಇದರೊಂದಿಗೆ ಉತ್ತರದ ಅಥವಾ ಈಶಾನ್ಯದ ಧೃವದಿಂದ ಬೀಸುವ ಗಾಳಿಯೂ ಸೇರಿ, ತಾಪಮಾನವು ಕ್ಷಿಪ್ರವಾಗಿ ಕುಸಿಯುತ್ತಾ ಸಾಗಿ ಶೂನ್ಯಕ್ಕಿಂತಲೂ ಕೆಳಮಟ್ಟಕ್ಕೆ ತಲುಪುತ್ತದೆ.(-5ಕ್ಕಿಂತಲೂ ಕೆಳಗೆ ದಿನದಲ್ಲಿ ಮತ್ತು -12ಕ್ಕಿಂತಲೂ ಕೆಳಗೆ ರಾತ್ರಿಯಲ್ಲಿ ಅಪರೂಪವಾಗಿ ತಲುಪುತ್ತದೆ) ಯೂರೋಪ್ ಖಂಡವು, ಅಪರೂಪಕ್ಕೊಮ್ಮೆ ಜರುಗುವಂತೆ, ಈಶಾನ್ಯದ ರಷ್ಯಾದ ಮಾರುತದಿಂದ ಶೈತ್ಯವನ್ನು ಅನುಭವಿಸಿದರೆ ಅದು "ದಕ್ಷಿಣದಿಂದ ಹಿಮಗಟ್ಟಬಹುದು"[ಸೂಕ್ತ ಉಲ್ಲೇಖನ ಬೇಕು]. ಈ ವಿಷಯವನ್ನು ಅರಿತುಕೊಳ್ಳಲು ಹಲವಾರು ಶತಮಾನಗಳೇ ಬೇಕಾದವು.
ವಸಂತಋತುವು ಯೋರೋಪ್ ಖಂಡದ ವಾತಾವರಣಕ್ಕೆ ಹೋಲಿಸುವಂತಿದ್ದು, ಸುತ್ತಣ ಶೀತಲ ಜಲದ ಕಾರಣವಾಗಿ, ಅಲ್ಲಿಗಿಂತಲೂ ಒಂದು ವಾರ ನಿಧಾನವಾಗಿ ಆರಂಭವಾಗುತ್ತದೆ. ಆದರೆ, ಶರತ್ಕಾಲದ ಅಂತ್ಯದಲ್ಲಿ, ಕೋಪನ್ ಹ್ಯಾಗನ್ ಹೆಚ್ಚು ಅನುಕೂಲಕರ ಹವೆ ಹೊಂದಿರುವುದಕ್ಕೆ ಇದೇ ವ್ಯವಸ್ಥೆಯು, ಹಿಂದುಮುಂದಾಗಿರುವುದೇ, ಕಾರಣವಾಗಿದೆ. ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ನಲ್ಲಿ ಜನದ ಉಷ್ಣತೆಯು ಸಾಮಾನ್ಯವಾಗಿ ಮಾರುತದ ಉಷ್ಣಾಂಶಕ್ಕಿಂತಲೂ ಹೆಚ್ಚಿದ್ದು, ಶೀತಲಮಾರುತವು ಚಾಲ್ತಿಯಲ್ಲಿರುತ್ತದೆ. ಅಕ್ಟೋಬರ್ ಮಧ್ಯದಿಂದ ಫೆಬ್ರವರಿಯವರೆಗಿನ ಅವಧಿಯಲ್ಲಿ ಒಂದೋ ಎರಡೋ ಬಿರುಗಾಳಿಗಳು(ಅಥವಾ ಚಂಡಮಾರುತಗಳು) ಸಂಭವಿಸುತ್ತವೆ. ಬೇಸಿಗೆಯಲ್ಲಿ ಬಿರುಗಾಳಿ ಬೀಸುವುದು ಬಹಳ ಅಪರೂಪ.
ಬೇಸಿಗೆಯು, ಬೇರೆಲ್ಲಾ ಋತುಗಳಂತೆಯೇ, ವಾಯುವ್ಯದ ಪ್ರಶಾಂತತೆಯ, ಗಾಳಿ ಮತ್ತು ಮಳೆಯ ಕಡಿಮೆ ಒತ್ತಡದ ವ್ಯವಸ್ಥೆಗಳ ಮಿಶ್ರಣವಾಗಿದ್ದು, ಕೆಲವು ಅವಧಿಗಳಲ್ಲಿ ಅಚಲವಾದ ಉನ್ನತ ಒತ್ತಡಗಳನ್ನೂ ಹೊಂದಿರುತ್ತದೆ. ಬೇಸಿಗೆಯಲ್ಲಿ, ಉನ್ನತ ಒತ್ತಡದ ರೀತಿಗಳು ಸಾಮಾನ್ಯವಾಗಿ ಸೂರ್ಯನ ಬಿಸುಪನ್ನು ಹಾಗೂ ಸುಮಾರು ಬೆಚ್ಚಗಿನ ಹವೆಯನ್ನೂ ನೀಡಲು ಸಹಕಾರಿಯಾಗುತ್ತವೆ. ಆದರೆ ಏಪ್ರಿಲ್ ನ ಅಂತ್ಯದಿಂದ ಸೆಪ್ಟೆಂಬರ್ ನ ಮಧ್ಯಭಾಗದವರೆಗೂ ಸಂಭವಿಸಬಹುದಾದ ಈ ಬೆಚ್ಚಗಿನ ಅವಧಿಗಳು ಸಾಮಾನ್ಯವಾಗಿ ಹತ್ತು ದಿನಗಳಿಗಿಂತಲೂ ಹೆಚ್ಚು ಕಾಲ ಇರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]
Copenhagenದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Source: World Weather Information Service[೩೦] |
ವಾರ್ಷಿಕ ಸರಾಸರಿ ತಾಪಮಾನ ವು +8.1
ನಗರದ ಚಿತ್ರಣ
[ಬದಲಾಯಿಸಿ]ಶತಮಾಗಳಿಂದಲೂ ಪ್ರಾದೇಶಿಕ ಕೇಂದ್ರವಾಗಿ ಪ್ರಮುಖ ಪಾತ್ರ ವಹಿಸಿರುವುದರನ್ನು ಹಿನ್ನೆಲೆಯಾಗಿರಿಸಿಕೊಂಡು ನಗರದ ಚಿತ್ರಣವನ್ನು ರೂಪಿಸಲಾಗಿದೆ. ಕೋಪನ್ ಹ್ಯಾಗನ್ ನಲ್ಲಿ ಹಲವಾರು ಜಿಲ್ಲೆಗಳಿದ್ದು, ಪ್ರತಿಯೊಂದಕ್ಕೂ ತನ್ನದೇ ಅದ ಕಾಲಾವಧಿಯಿದ್ದು, ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದ್ದು, ಇಡೀ ಪ್ರದೇಶವು ಸಾಂದ್ರವಾದ ನಗರವಾಗಿ ಹೆಣೆಯಲಾಗಿದೆ. ಕೋಪನ್ ಹ್ಯಾಗನ್ ನ ಮತ್ತೊಂದು ವೈಶಿಷ್ಟ್ಯವೆಂದರೆ ಹೇರಳವಾದ ಜಲಸಂಪತ್ತು, ಬಹುಸಂಖ್ಯೆಯಲ್ಲಿರುವ ಉದ್ಯಾನಗಳು, ಮತ್ತು ಹೆಚ್ಚುಕಡಿಮೆ ಎಲ್ಲಾ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಕಂಡುಬರುವ ವಿಸ್ತೃತವಾದ ಬೈಸಿಕಲ್ ಪಥಗಳು.
ವಾಸ್ತುಶಿಲ್ಪಕಲೆ
[ಬದಲಾಯಿಸಿ]ಕೋಪನ್ ಹ್ಯಾಗನ್ ನಗರದ ಒಳಭಾಗದ ಬಹಳ ಹಳೆಯ ಭಾಗಗಳನ್ನು ಸಾಮಾನ್ಯವಾಗಿ "ಮಿಡೆಲಾಡರ್ಬಿಯೆನ್"(ಮಧ್ಯಕಾಲೀನ ನಗರ)ವೆಂದು ಕರೆಯಲಾಗುತ್ತದೆ. ಆದಾಗ್ಯೂ, ಕೋಪನ್ ಹ್ಯಾಗನ್ ನ ಬಹಳ ವಿಶಿಷ್ಟವಾದ ಜಿಲ್ಲೆ ಪ್ರೆಡೆರಿಕ್ಸ್ ಸ್ಟಾಡೆನ್ ಎಂಬ ಪ್ರೆಡೆರಿಕ್ಸ್ V ರ ಆಳ್ವಿಕೆಯ ಕಾಲದಲ್ಲಿ ಅಭಿವೃದ್ಧಿಗೊಂಡ ಜಿಲ್ಲೆ. ಅಲ್ಲಿ ಅಮಾಲಿಯೆನ್ ಬೋರ್ಗ್ ಎಂಬ ಅರಮನೆಯು ಕೇಂದ್ರಸ್ಥಾನದಲ್ಲಿದ್ದು, ಮಾರ್ಬಲ್ ಚರ್ಚ್ ನ ಗೋಪುರ ಹಾಗೂ ಅಸಂಖ್ಯಾತ ಸುಂದರವಾದ 18ನೆಯ ಶತಮಾನದ ಬಂಗಲೆಗಳಿಂದ ಶೋಭಿತವಾಗಿದೆ. ಕೋಪನ್ ಹ್ಯಾಗನ್ ನ ನಗರದ ಒಳಭಾಗದಲ್ಲಿಯೇ ಸ್ಲಾಟ್ ಶೋಲ್ಮೆನ್ ಎಂಬ ದ್ವೀಪವಿದ್ದು, ಅದರಲ್ಲಿ ಕ್ರಿಶ್ಚಿಯನ್ಸ್ ಬೋರ್ಗ್ ಅರಮನೆ ಮತ್ತು ಕ್ರಿಶ್ಚಿಯನ್ ಶಾವ್ನ್ ಗಳು ಸ್ಥಾಪಿತವಾಗಿವೆ. ಈ ಐತಿಹಾಸಿಕ ನಗರದ ಕೇಂದ್ರಭಾಗದ ಸುತ್ತಲೂ ಪ್ರಧಾನವಾಗಿ 19ನೆಯ ಶತಮಾನದಲ್ಲಿ ನಿರ್ಮಿತವಾದಂತಹ ಏಕರೀತಿಯ ನಿವಾಸಗಳ ವಸಾಹತುಗಳ ಸಾಲುಗಳಿವೆ(ವೆಸ್ಟರ್ಬ್ರೋ, ಒಳ ನೋರ್ರೆಬ್ರೋ, ಒಳ ಆಸ್ಟೆರ್ಬ್ರೋ) ನಗರವು ಮೊದಲಿನ ಅಡ್ಡಗೋಡೆಗಳನ್ನು ದಾಟಿ ಬೆಳೆಯಲು ಅವಕಾಶ ಕಲ್ಪಿಸಿದ ನಂತರ ಅಡ್ಡಗೋಡೆಗಳ ಹೊಭಾಗದಲ್ಲಿ ಇವುಗಳನ್ನು ನಿರ್ಮಿಸಲಾಯಿತು.
ಕೆಲವೊಮ್ಮೆ "ಗೋಪುರಗಳ ನಗರ"ವೆಂದು ಕರೆಯಲ್ಪಡುವ ಕೋಪನ್ ಹ್ಯಾಗನ್ ಮಟ್ಟವಾದ ಗಗನರೇಖೆಗಳಿಗೆ ಹೆಸರಾಗಿದ್ದು, ಈ ಏಕತಾನತೆಗೆ ಕೇವಲ ಚರ್ಚ್ ಗಳ ಮತ್ತು ಕೋಟೆಗಳ ಗೋಪುರಗಳು ಮಾತ್ರ ಭಂಗ ತರುತ್ತವೆ. ಬಹಳ ವಿಶಿಷ್ಟವಾದುದೆಂದರೆ ಚರ್ಚ್ ಆಫ್ ಅವರ್ ಸೇವಿಯರ್ ನ, ಗೊಫುರದ ತುತ್ತತುದಿಯವರೆಗೂ ಆಗಂತುಕರು ಹತ್ತಲು ಅನುವಾಗುವಂತಹ ಸುರುಳಿಯಾಕಾರದ ಮತ್ತು ಕಿರಿದಾಗುತ್ತಾ ಸಾಗುವ ಹೊರಗಣ ಮೆಟ್ಟಿಲುಗಳನ್ನು ಹೊಂದಿರುವ ಬಾರೋಕ್ ಗೋಪುರ. ಇತರ ಪ್ರಮುಖವಾದ ಗೋಪುರಗಳೆಂದರೆ ಕ್ರಿಶ್ಚಿಯನ್ಸ್ ಬೋರ್ಗ್ ಅರಮನೆ, ಸಿಟಿ ಹಾಲ್, ಮತ್ತು ಮೊದಲಿಗೆ ಸೇಂಟ್ ನಿಕೋಲಜ್ ಚರ್ಚ್ ಆಗಿದ್ದು ಈಗ ಆಧುನಿಕ ಕಲೆಗೆ ತಾಣವಾಗಿರುವ ಕಟ್ಟಡಗಳ ಗೋಪುರಗಳು ಇದಕ್ಕಿಂತಲೂ ಕೊಂಚ ಕೆಳಮಟ್ಟದಲ್ಲಿ ರೋಸೆನ್ ಬರ್ಗ್ ಕೋಟೆಯ ರೆನಯ್ ಸಾನ್ಸ್ ಗೋಪುರಗಳು ಮತ್ತು ಕ್ರಿಶ್ಚಿಯನ್ IV ನ ಹಳೆಯ ಸ್ಪಾಕ್ ಎಕ್ಸ್ ಚೇಂಜ್ ಕಟ್ಟಡದ "ಡ್ರಾಗನ್ ಗೋಪುರಗಳು", ಈ ಗೋಪುರವು ನಾಲ್ಕಿ ಡ್ರಾಗನ್ ಗಳ ಬಾಲಗಳು ಒಂದಕ್ಕೊಂದು ಹೆಣೆದುಕೊಂಡಂತೆ ಗೋಚರವಾಗುವ ರೀತಿ ವಿನ್ಯಾಸಗೊಂಡಿರುವುದರಿಂದ ಈ ಹೆಸರು ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಡ್ಯಾನಿಷ್ ವಾಸ್ತುಶಿಲ್ಪ ಮತ್ತು ಇತರೆ ಅಂತರರಾಷ್ಟ್ರೀಯ ವಾಸ್ತುಶಿಲ್ಪಿಗಳು ರಚಿಸಿದ ವಿನ್ಯಾಸಗಳೆಲ್ಲವೂ ಕೋಪನ್ ಹ್ಯಾಗನ್[೩೧] ನ ಆಧುನಿಕ ವಾಸ್ತುಶಿಲ್ಪಕಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ, ನಗರದಲ್ಲಿ ಇದರ ಪ್ರಚಂಡ ಉಬ್ಬರವೇ ಏರ್ಪಟ್ಟಿದೆ. ಕೆಲವು ಶತಮಾನಗಳ ಕಾಲ, ಯಾವುದೇ ವಿದೇಶೀ ವಾಸ್ತುಶಿಲ್ಪಿ/ವಿನ್ಯಾಸಕಾರನು ಕೋಪನ್ ಹ್ಯಾಗನ್ ನಲ್ಲಿ ಉದ್ಯೋಗ ಮಾಡಿರಲಿಲ್ಲ, ಆದರೆ ಮಿಲೆನಿಯಮ್ ಬದಲಾದಂತೆ ನಗರ ಮತ್ತು ಅದರ ಸುತ್ತಮುತ್ತದ ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ತಾರಾಮೌಲ್ಯದ ವಾಸ್ತುಶಿಳಪಿಗಳಿಂದ ನಿರ್ಮಿತವಾಗುತ್ತಿರುವ ಕಟ್ಟಡಗಳು ಮತ್ತು ಯೋಜನೆಗಳು ತಲೆಯೆತ್ತುತ್ತಿವೆ. ಅದೇ ಕಾಲದಲ್ಲಿ, ಹಲವಾರು ಡ್ಯಾನಿಷ್ ವಾಸ್ತುಶಿಲ್ಪಿಗಳು ಕೋಪನ್ ಹ್ಯಾಗನ್ ಮತ್ತು ವಿದೇಶಗಳಲ್ಲಿ ಅಮೋಘ ಯಶ ಗಳಿಸಿದ್ದಾರೆ. ಕೋಪನ್ ಹ್ಯಾಗನ್ ನ ಕಟ್ಟಡಗಳು RIBA ಯೂರೋಪಿಯನ್ ಪ್ರಶಸ್ತಿಗಳನ್ನು ನಾಲ್ಕು ಸತತ ವರ್ಷಗಳಲ್ಲಿ ಗೆದ್ದಿವೆ.(2005[೩೨] ರಲ್ಲಿ "ಸಾಂಪೆನ್ಷನ್",2006[೩೩] ರಲ್ಲಿ "ಕಿಲೆನ್", 2007[೩೪] ರಲ್ಲಿ "ಟಿಯೆಟ್ ಜೆನ್ಕೋಲ್ಲೆಜಿಯೆಟ್" ಮತ್ತು 2008[೩೫] ರಲ್ಲಿ ದ ರಾಯಲ್ ಪ್ಲೇಹೌಸ್) ಬಾರ್ಸಿಲೋನಾದಲ್ಲಿ ನಡೆದ 2008ರ ಜಾಗತಿಕ ವಾಸ್ತುಶಿಲ್ಪೋತ್ಸವದಲ್ಲಿ ಬ್ಜಾರ್ಕೇ ಇಂಗೆಲ್ಸ್ ತಂಡವು 2008ರ ಜಗದ ಅತ್ಯುತ್ತಮ ನಿವಾಸ ಪ್ರಶಸ್ತಿಯನ್ನು ಓರ್ಸ್ಟಾಡ್ ನ ಒಂದು ಕಟ್ಟಡ ವಿನ್ಯಾಸಕ್ಕಾಗಿ ಪಡೆದರು.[೩೬] 2006[೩೭] ಮತ್ತು 2008ರ ಸ್ಕ್ಯಾಂಡಿನಾವಿಯಾದ ಅತ್ಯುತ್ತಮ ಕಟ್ಟಡಕ್ಕಾಗಿ ನೀಡುವ ಫೋರಮ್ AID ಪ್ರಶಸ್ತಿಗಳು ಕೋಪನ್ ಹ್ಯಾಗನ್ ನ ಕಟ್ಟಡಗಳಿಗೆ ದೊರೆತವು.[೩೮] 2008ರಲ್ಲಿ ಮಾನೋಕಲ್ ಎಂಬ ಬ್ರಿಟಿಷ್ ವಿನ್ಯಾಸ ಮ್ಯಾಗಝೈನ್ ಕೋಪನ್ ಹ್ಯಾಗನ್ ಅನ್ನು 2008[೩೯] ರ ಜಗದ ಶ್ರೇಷ್ಠ ವಿನ್ಯಾಸನಗರ ವೆಂದು ಹೆಸರಿಸಿತು.
ನಗರದ ಅಭಿವೃದ್ಧಿ ಮತ್ತು ಆಧುನಿಕ ವಾಸ್ತುಶಿಲ್ಪದ ಅಪರಿಮಿತ ಹಠಾರ್ ಬೇಡಿಕೆಯು ಮೇಲೆ ಉಲ್ಲೇಖಿಸಿದ ಸಮಮಟ್ಟದ ಆಗಸರೇಖೆಯಲ್ಲಿ ಕೆಲವು ಬದಲಾವಣೆಗಳನ್ನು ಮೂಡಿಸಿದೆ. ರಾಜಕೀಯದ ಬಹವಂಶ ಜನರು ನಗರದ ಐತಿಹಾಸಿಕ ಮಧ್ಯಭಾಗವನ್ನು ಗಗನಚುಂಬಿರಹಿತವಾಗಿಯೇ ಇರಿಸಲು ನಿರ್ಧರಿಸಿದ್ದಾರೆ. ಆದರೆ ಹಲವು ಪ್ರದೇಶಗಳು ನಗರಾಭಿವೃದ್ಧಿಯನ್ನು ಕಾಣುತ್ತವೆ ಅಥವಾ ಆಗಲೇ ಕಂಡಿವೆ. ಈಗಿನವರೆಗೆ ಅಭಿವೃದ್ಧಿಯ ಹೆಚ್ಚು ಅಂಸವನ್ನು ಕಂಡಿರುವುದು ಓರ್ಸ್ಟಾಡ್ ಪ್ರದೇಶ. ಕೋಪನ್ ಹ್ಯಾಗನ್ ವಿಮಾನ ನಿಲ್ದಾಣದ ಬಳಿ ಇರುವ ಈ ಪ್ರದೇಶದಲ್ಲಿ ಸ್ಕ್ಯಾಂಡಿನಾವಿಯಾ ಕಂಡ ಬಹಳ ವಿಶಾಲವಾದ ಮಾಲ್ ಗಳಲ್ಲೊಂದು ತಲೆಯೆತ್ತಿದೆ ಹಾಗೂ ವಿವಿಧ ರೀತಿಯ ಕಚೇರಿಗಳು, ನಿವಾಸಗಳು, ಒಂದು IT ವಿಶ್ವವಿದ್ಯಾಲಯ ಮತ್ತು ಒಂದು ಪ್ರೌಢಶಾಲೆಗಳು ನಿರ್ಮಿತವಾಗಿವೆ. ಸ್ಕ್ಯಾಂಡಿನಾವಿಯಾದ ಎರಡು ಬೃಹತ್ ಹೊಟೆಲ್ ಗಳು ಈಗ ನಿರ್ಮಾಣದ ಹಂತದಲ್ಲಿವೆ(ಅಲ್ಟಿಮೋ 2008).
ನಗರವು ಹಮ್ಮಿಕೊಂಡಿರುವಂತಹ ಮಹತ್ವಾಕಾಂಕ್ಷೆಯ ಪುನರುಜ್ಜೀವನ ಯೋಜನೆಯು ಕಾರ್ಲ್ಸ್ ಬರ್ಗ್ ಬ್ರೂಯರೀಸ್ ಎಂಬ ಐತಿಹಾಸಿಕ ಆವರಣದಲ್ಲಿ ನೂತನ ಕಾರ್ಲ್ಸ್ ಬರ್ಗ್ ಜಿಲ್ಲೆಯನ್ನು ಸೃಷ್ಟಿಸಲಿದೆ;ಅಷ್ಟರಲ್ಲಿ ಆ ಬ್ರೂಯರಿಯು ಕೋಪನ್ ಹ್ಯಾಗನ್ ನಲ್ಲಿ ತನ್ನ ಬೀರ್ ಉತ್ಪಾದನೆಯನ್ನು ನಿಲ್ಲಿಸಿ ಫ್ರೆಡೆರಿಷಿಯಾಗೆ ವಲಸೆ ಸಾಗಿತ್ತು. ಈ ಜಿಲ್ಲೆಯಲ್ಲಿ ಒಟ್ಟು 9 ಗಗನಚುಂಬಿಗಳು ಇರುತ್ತವೆ ಮತ್ತು ಹಳೆಯ ಕೈಗಾರಿಕಾ ಕಟ್ಟಡಗಳನ್ನು ಆಧುನಿಕ ವಾಸ್ತುಶಿಲ್ಪದೊಡನೆ ಮೇಳೈಸಿ ಸಾಂದ್ರವಾದ, ವ್ಯೂಹದಂತಹ ವಿಭಾಗವನ್ನು ಸೃಷ್ಟಿಸಿ, ದೀರ್ಘಕಾಲಿಕ ಬಾಳಿಕೆಯನ್ನು ಮತ್ತು ಸಕ್ರಿಯ ನಗರ ಜೀವನವನ್ನು ಗುರಿಯಾಗಿರಿಸಿಕೊಂಡು ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೀರ್ಘಕಾಲಿಕ ಬಾಳಿಕೆಯನ್ನೇ ಗುರಿಯಾಗಿರಿಸಿಕೊಂಡಿರುವ, ಮೂರನೆಯ ಪ್ರಮುಖ ನಗರಾಭಿವೃದ್ಧಿ ಪ್ರದೇಶವೆಂದರೆ ನಾರ್ಧಾವ್ನ್. ಕ್ರಿಶ್ಚಿಯನ್ IVರವರು ಕ್ರಿಶ್ಚಿಯನ್ ಶಾವ್ನ್ ಅನ್ನು ಕೋಪನ್ ಹ್ಯಾಗನ್ ನ ಕೃತಕ ದ್ವೀಪಗಳ ಮೇಲೆ ನಗರಾಭಿವೃದ್ಧಿಯ ಅಂಗವಾಗಿ ನಿರ್ಮಿಸುವುದರ ಮೂಲಕ ಹುಟ್ಟುಹಾಕಿದ ಸಂಪ್ರದಾಯವು ಈಗ ಮುಂದುವರೆಸಲಾಗಿದ್ದು ಹ್ಯಾವನ್ ಹೋಲ್ಮೆನ್ ನಿರ್ಮಿತವಾದುದಲ್ಲದೆ, ದಕ್ಷಿಣ ಬಂದರಿನ ಸ್ಲೂಸೆಹೋಲ್ಮೆನ್ ನಲ್ಲಿ ಒಂದು ಕಾಲುವೆ ಜಿಲ್ಲೆಯೂ ನಿರ್ಮಿತವಾಗಿದೆ. ಕ್ರಿಶ್ಚಿಯಾನಿಯಾ ಎಂಬ ಕೋಪನ್ ಹ್ಯಾಗನ್ ನ ಜಿಲ್ಲೆಯಿ ಆಧುನಿಕ ವಾಸ್ತುಶಿಲ್ಪದಲ್ಲಿ ಬೇರೆಯೇ ಆದ ಮಾರ್ಗವನ್ನನುಸರಿಸಿ ಹಲವಾರು ಕ್ರಿಯಾತ್ಮಕ ಹಾಗೂ ವೈಶಿಷ್ಟ್ಯಪೂರ್ಣವಾದ ಕಟ್ಟಡಗಳನ್ನು ನಿರ್ಮಿಸಿ "ವಾಸ್ತುಶಿಲ್ಪಿಗಳಿಲ್ಲದ ವಾಸ್ತುಶಿಲ್ಪ"ಕ್ಕೆ ಮಾದರಿಯಾಗಿದೆ.
ಉದ್ಯಾನಗಳು
[ಬದಲಾಯಿಸಿ]ಬಹಳಷ್ಟು ಸಣ್ಣ ಹಾಗೂ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಕೋಪನ್ ಹ್ಯಾಗನ್ ಒಂದು ಹಸಿರು ನಗರ. ರೋಸೆನ್ ಬರ್ಗ್ ಕ್ಯಾಸಲ್ ನ ಕಿಂಗ್ಸ್ ಗಾರ್ಡನ್ ಕೋಪನ್ ಹ್ಯಾಗನ್ ನ ಅತ್ಯಂತ ಪ್ರಾಚೀನವಾದುದೂ, ಅತ್ಯಂತ ಭೇಟಿ ನೀಡಿದಂತಹುದೂ ಆದ ಉದ್ಯಾನವನವಾಗಿದೆ.[೪೦] ಅದರ ಭೂರಮ್ಯತಾಕ್ರಿಯೆ(ಲ್ಯಾಂಡ್ ಸ್ಕೇಪಿಂಗ್)ಯನ್ನು 1606ರಲ್ಲಿ ಕ್ರಿಶ್ಚಿಯನ್ IV ರು ಆರಂಭಿಸಿದರು. ಪ್ರತಿವರ್ಷವೂ ಇಲ್ಲಿಗೆ 2.5 ಮಿಲಿಯನ್ ಗೂ ಹೆಚ್ಚು ಮಂದಿ ಪ್ರವಾಸಿಗರು[೪೧] ಭೇಟಿ ನೀಡುತ್ತಾರೆ ಮತ್ತು ಬೇಸಿಗೆಯಲ್ಲಿ ಈ ಸ್ಥಳವು ಸೂರ್ಯಸ್ನಾನ ನಿರತರು, ಮೋಜಿಗಾಗೆ ಬಂದವರು ಮತ್ತು ಚೆಂಡಾಟ ಆಡುವವರಿಂದ ತುಂಬಿ ತುಳುಕುತ್ತದೆ. ಇದು ಶಿಲ್ಪಕಲಾ ತೋಟವೂ ಆಗಿದ್ದು, ಶಿಲ್ಪಗಳ ಖಾಯಂ ಪ್ರದರ್ಶನ ಮತ್ತು ಬೇಸಿಗೆಯಲ್ಲಿ ತಾತ್ಕಾಲಿಕ ಪ್ರದರ್ಶನಗಳಿಗೆ ತಾಣವಾಗುತ್ತದೆ.[೪೦] ನಗರದ ಕೇಂದ್ರಭಾಗದಲ್ಲಿಯೇ ಬೊಟಾನಿಕಲ್ (ಸಸ್ಯಶಾಸ್ತ್ರ ಸಂಬಂಧಿತ) ಉದ್ಯಾನವಿದ್ದು, ಅದರಲ್ಲಿ 19ನೆಯ ಶತಮಾನದ ಗ್ರೀನ್ ಹೌಸ್ ಎಂಬ, ಕಾರ್ಲ್ಸ್ ಬರ್ಗ್ ಸ್ಥಾಪಕ ಜೆ.ಸಿ,ಜ್ಯಾಕಬ್ಸನ್ ನೀಡಿದಂತಹ ಬೃಹತ್ ಸಂಕೀರ್ಣವು ಎಲ್ಲರ ವಿಶೇಷವಾದ ಗಮನ ಸೆಳೆದಿದೆ.[೪೨] 58 ಹೆಕ್ಟೇರ್ ಗಳ ವಿಸ್ತೀರ್ಣವುಳ್ಳ ಫಾಲ್ಲೆಡ್ ಪಾರ್ಕೆನ್ ಕೋಪನ್ ಹ್ಯಾಗನ್ ನ ಅತಿ ದೊಡ್ಡ ಉದ್ಯಾನವನ.[೪೩] ಇದು ಕ್ರೀಡೆಗಳಿಗೂ ಜನಪ್ರಿಯವಾಗಿದ್ದು, ವಾರ್ಷಿಕೋತ್ಸವಗಳ ಸುದೀರ್ಘ ಮಾಲೆಯನ್ನೇ ಹೊಂದಿದ್ದು, ಒಪೇರಾ ಕಾಲದಲ್ಲಿ ಮೊದಲ ಒಪೇರಾ ಕಚೇರಿಯು ಇಲ್ಲಿ ಬಿಟ್ಟಿಯಾಗಿ ನಡೆಯುವುದಲ್ಲದೆ, ಇತರ ಹೊರಾಂಗಣ ಕಚೇರಿಗಳು, ಕಾರ್ನಿವಾಲ್(ಜಾತ್ರೆ), ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮಗಳು ಮತ್ತು ಪುರಾತನ ಕಾರ್ ಗಳಿಗೆಂದೇ ನಡೆಸುವ ಸ್ಪರ್ಧೆಯಾದ ಕೋಪನ್ ಹ್ಯಾಗನ್ ಹಿಸ್ಟಾರಿಕ್ ಗ್ರ್ಯಾಂಡ್ ಪ್ರೀಗಳಿಗೆ ಈ ಸ್ಥಳವು ಪ್ರಸಿದ್ಧವಾಗಿದೆ. ನಗರದ ಈಶಾನ್ಯ ದಿಕ್ಕಿನಲ್ಲಿರುವ ಕ್ಯಾಸ್ಟೆಲೆಟ್ ಎಂಬ ಐತಿಹಾಸಿಕ ಹಸಿರು ಜಾಗವು ಚೆನ್ನಾಗಿ ಸಂರಕ್ಷಿತವಾದ ಚಳುವಳಿಯ ಕಾಲದ ಕೋಟೆಯಾಗಿದ್ದು ಈಗ ಅದು ಒಂದು ಉದ್ಯಾನವಾಗಿ ಪರಿವರ್ತಿತವಾಗಿದೆ. ಇಲ್ಲಿನ ಮತ್ತೊಂದು ಜನಪ್ರಿಯ ಉದ್ಯಾನವೆಂದರೆ ಫ್ರೆಡೆರಿಕ್ಸ್ ಬರ್ಗ್ ಉದ್ಯಾನ ಎಂಬುದಾಗಿದ್ದು ಇದು 32 ಹೆಕ್ಟೇರ್ ವಿಸ್ತೀರ್ಣವುಳ್ಳ ಚಮತ್ಕಾರಭರಿತ ಭೂರಮ್ಯಗೊಳಿಸಲ್ಪಟ್ಟ ಉದ್ಯಾನವಾಗಿದೆ. ಇಲ್ಲಿ ಬಹಳ ಸಾಧುವಾದ ಬೂದುಬಣ್ಣದ ಹೆರಾನ್ ಗಳ ಹಿಂಡು ಮತ್ತು ಇತರೆ ನೀರುಕೋಳಿಗಳು ವಾಸಿಸುತ್ತವೆ. ಈ ಉದ್ಯಾನದಲ್ಲಿ ಪಕ್ಕದ ಕೋಪನ್ ಹ್ಯಾಗನ್ ಮೃಗಾಲಯದ ಜಗದ್ವಿಖ್ಯಾತ ಬ್ರಿಟಿಷ್ ಶಿಲ್ಪಶಾಸ್ತ್ರಜ್ಞ ನಾರ್ಮನ್ ಫೋಸ್ಟರ್ ವಿನ್ಯಾಸಗೊಳಿಸಿದ ಆನೆಗಳ ಮನೆ(ಕರೋಟಿ) ಮತ್ತು ಆನೆಗಳು ಕಾಣಸಿಗುತ್ತವೆ.
ಕೋಪನ್ ಹ್ಯಾಗನ್ ನ ವೈಶಿಷ್ಟ್ಯವೆಂದರೆ ಇಲ್ಲಿನ ಹಲವಾರು ಸ್ಮಶಾನಗಳು, ಕೇವಲ ಗದ್ದಲವಿಲ್ಲದ ಚಟುವಟಿಕೆಗಳಾದ ಸೂರ್ಯಸ್ನಾನ, ಓದುವಿಕೆ ಮತ್ತು ಧ್ಯಾನಕ್ಕೆ ಸೀಮಿತಗೊಂಡಂತೆ, ಉದ್ಯಾನವನಗಳಾಗಿಯೂ ಉಪಯೋಗವಾಗುತ್ತವೆ.[೪೪] ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಮತ್ತು ಇತರರನ್ನು ಹೂತಿರುವಂತಹ ಅಸ್ಸಿಸ್ಟೆನ್ಸ್ ಸಿಮೆಟ್ರಿಯು ಇನ್ನರ್ ನೋರ್ರೆಬ್ರೋ ಜಿಲ್ಲೆಯ ಒಂದು ಪ್ರಮುಖ ಹಸಿರು ತಾಣವಾಗಿದ್ದು, ಕೋಪನ್ ಹ್ಯಾಗನ್ ನ ಒಂದು ಸಂಸ್ಥೆಯೂ ಆಗಿದೆ. ಅಷ್ಟೇನೂ ಖ್ಯಾತವಲ್ಲದ ವೆಸ್ಟ್ರೆ ಕಿರ್ಕೆಗಾರ್ಡ್ 54 ಹೆಕ್ಟೇರ್ ನಷ್ಟು ವಿಸ್ತೀರ್ಣತೆ ಹೊಂದಿದ್ದು ಡೆನ್ಮಾರ್ಕ್[೪೫] ನ ಅತಿ ದೊಡ್ಡ ಸ್ಮಶಾನವಾಗಿದೆ.ಇಲ್ಲಿ ಸಾಂದ್ರವಾದ ಉಪವನಗಳ ವ್ಯೂಹಗಳು, ವಿಸ್ತಾರವಾದ ಹುಲ್ಲುಹಾಸುಗಳು, ತಿರುತಿರುಗಿ ಸಾಗುವ ಹಾದಿಗಳು, ಪೊದೆಗಳು, ಅತಿಯಾಗಿ ಬೆಳೆದ ಗೋರಿಗಳು, ಸ್ಮಾರಕಗಳು, ಇಕ್ಕೆಲಗಳಲ್ಲಿ ಮರದ ಸಾಲುಗಳುಳ್ಳ ಹಾದಿಗಳು, ಕೆರೆಗಳು ಮತ್ತು ಇತರ ಉದ್ಯಾನ ಲಕ್ಷಣಗಳು ಹೇರಳವಾಗಿವೆ.
ಕೋಪನ್ ಹ್ಯಾಗನ್ ಪುರಸಭೆಯ ಅಧಿಕೃತ ನೀತಿಯೇನೆಂದರೆ 2015ರ ಹೊತ್ತಿಗೆ ಸಕಲ ನಾಗರಿಕರೂ ಕಾಲ್ನಡಿಗೆಯಲ್ಲಿ ಒಂದು ಪಾರ್ಕ್ ಅಥವಾ ತೀರವನ್ನು 15 ನಿಮಿಷಗಳಿಗಿಂತಲೂ ಕಡಿಮೆ ವೇಳೆಯಲ್ಲಿ ತಲುಪುವಂತಾಗಬೇಕೆಂಬುದು.[೪೬] ಈ ನಿಯಮಕ್ಕನುಗುಣವಾಗಿ ಹಲವಾರು ಹೊಸ ಉದ್ಯಾನಗಳನ್ನು ಎಲ್ಲೆಲ್ಲಿ ಹಸಿರು ಪ್ರದೇಶಗಲೂ ಕಡಿಮೆ ಕಂಡುಬರುವುದೋ ಅಲ್ಲೆಲ್ಲಾ ಅಭಿವೃದ್ಧಿಗೊಳಿಸಲಾಗುತ್ತಿದೆ.[೪೭][೪೮]
ಸಮುದ್ರ ತೀರಗಳು
[ಬದಲಾಯಿಸಿ]ಕೋಪನ್ ಹ್ಯಾಗನ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 3 ಸಮುದ್ರತೀರಗಳಿದ್ದು ನಗರದಿಂದ 30 ನಿಮಿಷಗಳ ಸೈಕಲ್ ಸವಾರಿಯಲ್ಲಿ ತಲುಪಬಹುದಾದಂತಹ ಸುಮಾರು 8 ಕಿಲೋಮೀಟರ್ ಉದ್ದದ ಉಸುಕಿನ ತೀರಗಳಿವೆ. ಇದು ಅಮಾಜೆರ್ ಸ್ಟ್ರ್ಯಾಂಡ್ ಪಾರ್ಕ್ ಅನ್ನೂ ಒಳಗೊಂಡಿದ್ದು, 2005ರಲ್ಲಿ ಆರಂಭವಾದ ಈ ತೀರವು 2 ಕಿಲೋಮೀಟರ್ ಉದ್ದದ ಕೃತಕ ದ್ವೀಪವನ್ನು ಹೊಂದಿದೆ ಮತ್ತು ಒಟ್ಟು 4.6 ಕಿಲೋಮೀಟರ್ ನಷ್ಟು ತೀರ[೪೯] ವನ್ನು ಹೊಂದಿರುವ ಈ ತಾಣವು ಸೈಕಲ್ ಸವಾರಿಯ ಮೂಲಕ ಕೇವಲ 15 ನಿಮಿಷಗಳಲ್ಲಿ ಅಥವಾ ಮೆಟ್ರೋ ಮೂಲಕ ಕೆಲವೇ ನಿಮಿಷಗಳಲ್ಲಿ ನಗರದ ಮಧ್ಯಭಾಗದಿಂದ ಬಂದು ತಲುಪಬಹುದಾದಷ್ಟು ಹತ್ತಿರದಲ್ಲಿದೆ.
ಈ ತೀರಗಳಲ್ಲಿ ಕೋಪನ್ ಹ್ಯಾಗನ್ ಜಲಮುಖಿಯ ಉದ್ದಕ್ಕೂ ಬಂದರು ಸ್ನಾನಗೃಹಗಳ ವ್ಯವಸ್ಥೆಯನ್ನು ಪೂರೈಸಲಾಗಿದೆ. ಆ ಪೈಕಿ ಮೊದಲ ಮತ್ತು ಬಲು ಜನಪ್ರಿಯವಾದುದು ಐಲ್ಯಾಂಡ್ಸ್ ಬ್ರೈಗ್ಗೆ[೫೦] ಯಲ್ಲಿ ಸ್ಥಾಪಿತವಾಗಿದೆ ಮತ್ತು ಇದು ತನ್ನ ವಿನ್ಯಾಸಕ್ಕಾಗಿ ಅಂತರರಾಷ್ಟ್ರೀಯ ಮನ್ನಣೆ ಮಡೆದಿದೆ.[೫೧]
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]ಕೋಪನ್ ಹ್ಯಾಗನ್ ನ ಜನಸಂಖ್ಯೆಯು ಯಾವುವನ್ನು ಗಡಿಗಳಾಗಿ ಪರಿಗಣಿಸುತ್ತೇವೆಯೋ ಅವುಗಳ ಆಧಾರಿತವಾಗಿ ವಿಭಿನ್ನವಾಗುತ್ತದೆ. ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್ ಒಟ್ಟೊಟ್ಟಿಗಿರುವ ಕೋಪನ್ ಹ್ಯಾಗನ್ ನ ಅಭಿವೃದ್ಧಿಗೊಳಿಸಿದ ನಗರ ಪ್ರದೇಶದ ಒಂದು ಮಾನದಂಡವನ್ನು ಉಪಯೋಗಿಸುತ್ತದೆ; ಎಂದರೆ ಈ ಅಂಕಿ-ಅಂಶ ಅಂದಾಜಿನಲ್ಲಿ ಸೇರಿದಂತಹ ಪಂಗಡಗಳ ಸಂಖ್ಯೆಯು ಹಲವಾರು ಬಾರಿ ಬದಲಾಗಿದ್ದು, ಇತ್ತೀಚಿನ ಇದರ ಕರಡಿನ ಪ್ರಕಾರ ಸುಮಾರು 1.2 ಮಿಲಿಯನ್ (1,153,615 (2008))ನಿವಾಸಿಗಳಿದ್ದಾರೆಂದು ಅಂದಾಜಿಸಲಾಗಿದೆ. ಈ ಸಂಖ್ಯೆಯು ಸಾಮಾನ್ಯವಾಗಿ ಬಳಸುವ ಮಾಪನ ವಿದಿಯಾದ ಎಡೆಬಿಡದೆ 200 ಮೀಟರ್ ಗಳಷ್ಟು ಅಭಿವೃದ್ಧಿತ ಪ್ರದೇಶವೆಂಬ ಮಾಪನದ ಕಟ್ಟುನಿಟ್ಟಿನ ಫಲಿತವಲ್ಲವೇಕೆಂದರೆ ಸಾಮಾನ್ಯ ನಿಯಮಗಳಿಗೆ ಹೊರತಾದವು ಇದ್ದೇ ಇರುತ್ತವೆ; ಬರ್ಕೆರಾಡ್ ಮತ್ತು ಹಾರ್ಷಾಲ್ಮ್ ನ ಹೊರವಲಯಗಳನ್ನು ಹೊರತುಪಡಿಸಲಾಗಿದೆ, ಇಡೀ ಬ್ರಾಂಡ್ ಬೈನ ಪ್ರದೇಶ ಮತ್ತು ಐಷಾಜ್ ಮತ್ತು ಗ್ರೆವೆಗಳ ಹಲವು ಭಾಗಗಳನ್ನು ಸೇರಿಸಿಕೊಳ್ಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್ ಕೋಪನ್ ಹ್ಯಾನ್ ನ ನಗರ ಪ್ರದೇಶದ ವಿಸ್ತೀರ್ಣ ಇಂತಿಷ್ಟೇ ಎಂದು ಎಂದೂ ಹೇಳಿಕೆ ನೀಡಿಲ್ಲ. ಆದರೆ, ಕೋಪನ್ ಹ್ಯಾಗನ್ ಪುರಸಭೆ, ಫ್ರೆಡೆರಿಕ್ಸ್ ಬರ್ಗ್ ಮತ್ತು ಹಳೆಯ ಕೋಪನ್ ಹ್ಯಾಗನ್ ಮತ್ತು ರಾಸ್ಕ್ ಲೈಡ್ ನ ಗ್ರಾಮಗಳ(ಕೌಂಟೀಗಳ) 20 ಪುರಸಭೆಗಳ ಪೈಕಿ 16 ಇದಕ್ಕೆ ಸೇರಿರುವುದು ವಿದಿತ, ಅದರಲ್ಲಿ 5 ಗ್ರಾಮಗಳು ಭಾಗಶಃ ಸೇರಿವೆ ಎಂಬುದೂ ಸುಸ್ಪಷ್ಟ.[೫೨]
ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್ ಲ್ಯಾಂಡ್ಸ್ ಡೆಲೆ ಜಮೀನುಗಳೆಂದು ಕರೆಸಿಕೊಳ್ಳುವಂತಹವುಗಳ ವಿವರಣೆಗಳನ್ನು ವಿಶ್ಲೇಷಿಸುತ್ತಾ, ಅವನ್ನು ಪ್ರಾದೇಶಿಕ ಮಟ್ಟಕ್ಕಿಂತಲೂ ಕೆಳಗಿನ ಸ್ಥಳಗಳ ಅಂಕಿ-ಅಂಶಗಳನ್ನು ಖಚಿತಪಡಿಸಿಕೊಳ್ಳಲು ಉಪಯೋಗಿಸುವ ಸಲುವಾಗಿ ಈ ವಿಶ್ಲೇಷಣೆಗಳನ್ನು ಹೊಂದಿತು. ಇದರಿಂದ ಕೋಪನ್ ಹ್ಯಾಗನ್ ನಗರದ ಕೋಬನ್ ಹ್ಯಾವ್ನ್ ಬೈ ಭೂಮಿಯು ಕೋಪನ್ ಹ್ಯಾಗನ್, ಡ್ರಾಗರ್, ಫ್ರೆಡೆರಿಕ್ಸ್ ಬರ್ಗ್ ಮತ್ತು ಟಾರ್ನ್ ಬೈ ಪ್ರದೇಶಗಳನ್ನು ಕೂಡಿರುವಂತಹುದೆಂದು ತೀರ್ಮಾನಿಸಲಾಯಿತು; ಇಲ್ಲಿನ ಜನಸಂಖ್ಯೆಯು 2009ರ ಆದಿಯಲ್ಲಿ 667,228 ಇದ್ದಿತು.[೨೭][೨೮] ಕೋಪನ್ ಹ್ಯಾಗನ್ ನ ಸುತ್ತಮುತ್ತಣ ಪ್ರದೇಶಗಳನ್ನು ಮತ್ತೊಂದು ಭೂವಿವರಣೆಯಿಂದ ನೀಡಲಾಗಿದ್ದು, ಕೋಪನ್ ಹ್ಯಾಗನ್ ಹೊರವಲಯಗಳು (ಕೋಬನ್ ಹ್ಯಾವ್ನ್ಸ್ ಒಮೆಗನ್ ) ಆಲ್ಬರ್ಟ್ಸ್ ಲಂಡ್, ಬಲ್ಲೆರಪ್,ಬ್ರಾಂಡ್ ಬೈ, ಜೆಂಟೋಫ್ಟೆ, ಗ್ಲಾಡ್ಸೇಕ್ಸ್, ಗ್ಲಾಸ್ಟ್ರಪ್, ಹೆರ್ಲೆವ್, ಹ್ವಿಡೋವ್ರೆ,ಹೋಜ್-ಟಾಸ್ಟ್ರಪ್, ಐಶೋಜ್, ಲೈಂಗ್ ಬೈ-ಟಾರ್ಬೇಕ್, ರೋಡೋವ್ರೆ ಮತ್ತು ವಾಲೆನ್ಸ್ ಬೆಕ್ ಗಳ ಪುರಸಭೆಗಳನ್ನು ಸೇರಿರುವುದಾಗಿದ್ದು, ಒಟ್ಟು ಜನಸಂಖ್ಯೆ 508, 183ರಷ್ಟಿದೆ(ಜನವರಿ 1, 2009).[೨೭] ಹೀಗಾಗಿ ಎರಡೂ ಭೂಪ್ರದೇಶಗಳ ಒಟ್ಟು ಜನಸಂಖ್ಯೆಯು 1,171,709 ಆಗಿದೆ. ಕೋಪನ್ ಹ್ಯಾಗನ್ ನಗರ ಮತ್ತು ಕೋಪನ್ ಹ್ಯಾಗನ್ ಹೊರವಲಯಗಳ ಒಟ್ಟು ಭೂಪ್ರದೇಶವನ್ನು ಮೆಟ್ರೋಪಾಲಿಟನ್ ಪ್ರದೇಶದ ಒಟ್ಟು ವಿಸ್ತೀರ್ಣವೆಂದು ಪರಿಗಣಿಸಬಹುದು, ಆದರೆ ಇದು ವಸ್ತುಸ್ಥಿತಿಗಿಂತಲೂ ಕೊಂಚ ಕಿರಿದಾಗುವ ಸಾಧ್ಯತೆಗಳಿದೆ.
ಜನವರಿ 1, 2009ರಿಂದ ಕೋಪನ್ ಹ್ಯಾಗನ್ ಗೆ ಸಮೀಪದಲ್ಲಿರುವ ೩೪ ಪುರಸಭೆಗಳ ಮತ್ತು ತನ್ನ ಪುರಸಭೆಯೂ ಸೇರಿದಂತೆ ಒಟ್ಟು ಜನಸಂಖ್ಯೆ 1.875.179.[೫೩] ಭೂ ವಿಸ್ತೀರ್ಣ: 2,923 km². (ರಾಜಧಾನಿ ಪ್ರದೇಶ - ಬಾರ್ನ್ ಹೋಮ್ + ಪೂರ್ವ ಝೀಲ್ಯಾಂಡ್ + ಸ್ಟೀವನ್ಸ್).[೫೪] ಹೀಗಾಗಿ, ಈ ಪ್ರದೇಶವು ಡೆನ್ಮಾರ್ಕ್ ನ 6.8% ಭೂಭಾಗವನ್ನು ಹೊಂದಿದೆ, ಆದರೆ ಡೆನ್ಮಾರ್ಕ್ ನ 34% ಜನಸಂಖ್ಯೆಯನ್ನು ಹೊಂದಿದೆ. ಈ ಗಣನೆಯ ಪ್ರಕಾರ ಪ್ರತಿ km² ಗೆ 667 ನಿವಾಸಿಗಳು ಅಥವಾ ಪ್ರತಿ ಚದರ ಮೈಲಿಗೆ ೧೬೬೦ ನಿವಾಸಿಗಳಿದ್ದಾರೆಂದಾಯಿತು. ಇದಕ್ಕೆ ಹೋಲಿಸಿದರೆ, ಇಡೀ ದೇಶದ ಎಲ್ಲೆಡೆಯ ಜನಸಂಖ್ಯಾ ಸಾಂದ್ರತೆಯು km² ಗೆ ಸುಮಾರು 90 ನಿವಾಸಿಗಳು ಅಥವಾ ಚದರ ಮೈಲಿಗೆ ಸುಮಾರು 230ರಷ್ಟಿದೆ.
10% -ಐಸೋಲೀನ್ ಆಧಾರದ ಮೇಲೆ(2002ರ ಮಾಹಿತಿ), ಕಡಿಮೆಯೆಂದರೆ 10% ಜನರಾದರೂ ಕೋಪನ್ ಹ್ಯಾಗನ್ ನ ಮಧ್ಯಭಾಗಗಳಿಗೆ ಪ್ರಯಾಣ ಮಾಡುವರೆಂದಿಟ್ಟುಕೊಂಡರೆ, ಝೀಲ್ಯಾಂಡ್ ನ ಬಹುಭಾಗವು ಆಕ್ರಮಿಸಲ್ಪಡುತ್ತದೆ ಮತ್ತು ಈ ಪ್ರದೇಶವು ಸುಮಾರು 2.3 ಮಿಲಯನ್ ನಿವಾಸಿಗಳನ್ನು ಹೊಂದಿದೆ.[೫೫]
ಓರ್ಸಂಡ್ ಸೇತುವೆಯನ್ನು 2000ದಲ್ಲಿ ಸಾರ್ವಜನಿಕರಿಗೆ ತೆರೆದಿಡಲಾದಂದಿನಿಂದ, ವಿಶಾಲ ಮಾಲ್ಮೋಗೆ ಸಂಚರಿಸುವುದು ಹೆಚ್ಚಿದೆ ಮತ್ತು ಮಾಲ್ಮೋ ಮತ್ತು ಕೋಪನ್ ಹ್ಯಾಗನ್ ನ ಒಂದಾಗುವಿಕೆಯು ತ್ವರಿತಗೊಂಡು, ಎರಡೂ ಸೇರಿದ ಅಂಕಿ-ಅಂಶ ಸಂಬಂದಿತ ಮೆಟ್ರೋಪಾಲಿಟನ್ ಪ್ರದೇಶದ ಉಗಮವಾಗಿದೆ. 2,488,551 (2009) ಜನಸಂಖ್ಯೆಯನ್ನು ಹೊಂದಿರುವ ಈ ಸೇರ್ಪಡೆಗೊಂಡ ಮೆಟ್ರೋಪಾಲಿಟನ್ ಪ್ರದೇಶವು ಆಯಾ ಅಂಕಿ-ಅಂಶ ವಿಭಾಗಗಳಿಂದ ಮುಂದಿನ ವರ್ಷಗಳಲ್ಲಿ ಡೆನ್ಮಾರ್ಕ್ ಮತ್ತು ಸ್ವೀಡನ್ ಗಳು ಅಧಿಕೃತವಾಗಿ ಇಂತಿಷ್ಟೇ ವಿಸ್ತೀರ್ಣವೆಂದು ತೀರ್ಮಾನಗೊಳ್ಳುವ ನಿರೀಕ್ಷೆಯಿದೆ.[ಸೂಕ್ತ ಉಲ್ಲೇಖನ ಬೇಕು]
ಏಪ್ರಿಲ್ 1, 1970ರಂದು ಜಾರಿಗೆ ಬಂದ ಅಂದಿನ ಪುರಸಭಾ ಸುಧಾರಣೆಗಳನ್ನು ಜಾರಿಗೆ ತರುವುದರಲ್ಲಿ ಭಾಗಿಯಾಗಿದ್ದ, (ಎಂದರೆ, "..ನ ತಂದೆ"ಯೆಂದು ಖ್ಯಾತರಾದ) ಒಳಪ್ರದೇಶಗಳ ಸಚಿವಸಂಪುಟದಲ್ಲಿ ಸಾರ್ವಜನಿಕ ಸೇವಾನಿರತರಾದ, ಉನ್ನತ ಹುದ್ದೆಯಲ್ಲಿದ್ದ ಹೆನ್ನಿಂಗ್ ಸ್ಟ್ರಾಂ, ಇತ್ತೀಚಿನ ಕಮ್ಯುನಾಲೆರಿಫಾರ್ಮೆನ್ (2007ರ "ಪುರಸಭಾ ಸುಧಾರಣೆಗಳು")ಬಗ್ಗೆ ಟೆಲಿವಿಷನ್ ಪ್ರಸಾರವೊಂದರಲ್ಲಿ ಮಾತನಾಡುತ್ತಾ 1970ರ ಪುರಸಭಾ ಸುಧಾರಣೆಗಳನ್ನು ಕೋಪನ್ ಹ್ಯಾಗನ್ ಗೂ ಅನ್ವಯಿಸಿದರೆ,ಕೋಪನ್ ಹ್ಯಾಗನ್ ಸುಮಾರು ೧.೫ ಮಿಲಿಯನ್ ನಿವಾಸಿಗಳನ್ನೊಳಗೊಂಡ ಪ್ರದೇಶವನ್ನೊಳಗೊಂಡಿದೆ ಎಂದರು.[೫೬] ಇದನ್ನು ಹೀಗೂ ಹೇಳಬಹುದು: ಡೆನ್ಮಾರ್ಕ್ ನ ಇತರ ಎಡೆಗಳಲ್ಲಿ ನಗರ ವು ನಗರಸಭೆಯ ಕೇವಲ ಒಂದು ಭಾಗವಾಗಿರುತ್ತದೆ ಆದರೆ ಕೋಪನ್ ಹ್ಯಾಗನ್ ನಲ್ಲಿ ನಗರಸಭೆ ಯು ನಗರದ ಕೇವಲ ಕೆಲವು ಭಾಗಗಳನ್ನು ಮಾತ್ರ ಆವರಿಸುತ್ತದೆ.
ಸಂಸ್ಕೃತಿ ಮತ್ತು ವಿಶ್ರಮ
[ಬದಲಾಯಿಸಿ]1990ರ ದಶಕದ ಅಂತ್ಯದಿಂದ ಈಚೆಗೆ ಕೋಪನ್ ಹ್ಯಾಗನ್ ಒಂದು ಹಿತಕರ ಸ್ಕ್ಯಾಂಡಿನಾವಿಯನ್ ರಾಜಧಾನಿಯಿಂದ ಒಂದು ತಂಪನ್ನೀಯುವ ಅಂತರರಾಷ್ಟ್ರೀಯ ಮಟ್ಟದ ಮೆಟ್ರೋಪಾಲಿಟನ್ ನಗರವಾಗಿ ಪರಿವರ್ತಿತವಾಗಿದೆ ಮತ್ತು ಬಾರ್ಸಿಲೋನಾ ಮತ್ತು ಆಂಸ್ಟರ್ಡ್ಯಾಮ್ ನಗರಗಳ ಹಂತಕ್ಕೆ ತಲುಪಿದೆ.[೫೭] ಸೌಕರ್ಯ ಮತ್ತು ಸವಲತ್ತುಗಳ ಮೇಲೆ ಹೂಡಿದ ಬೃಹತ್ ಬಂಡವಾಳ, ಸಂಸ್ಕೃತಿ ಮತ್ತು ನವೀನ ಯಶಸ್ವಿ ವಾಸ್ತುಶಿಲ್ಪಿಗಳ, ವಿನ್ಯಾಸಕಾರರ ಮತ್ತು ಅಡಿಗೆಯವರ ಅಲೆ ಈ ಯಶೋಗಾಥೆಗೆ ಕಾರಣಗಳಾಗಿವೆ.[೯][೩೧]
ವಸ್ತು ಸಂಗ್ರಹಾಲಯಗಳು
[ಬದಲಾಯಿಸಿ]ಕೋಪನ್ ಹ್ಯಾಗನ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಹಲವಾರು ರೀತಿಯ ವಸ್ತುಸಂಗ್ರಹಾಲಯಗಳಿವೆ. ರಾಷ್ಟ್ರೀಯ ವಸ್ತುಸಂಗ್ರಹಾಲಯವಾದ ನ್ಯಾಷನಲ್ ಮ್ಯಸೀಟ್ ಡೆನ್ಮಾರ್ಕ್ ನ ಬಹಳ ವಿಶಾಲವಾದ ಪ್ರಾಚೀನ ವಸ್ತಶೋಧನೆ ಮತ್ತು ಸಾಂಸ್ಕೃತಿಕ ಇತಿಹಾಸದ ವಸ್ತುಸಂಗ್ರಹಾಲಯವಾಗಿದ್ದು, ಡ್ಯಾನಿಷ್ ಮತ್ತು ವಿದೇಶೀ ಸಂಸ್ಕೃತಿಗಳ ಇತಿಹಾಸಗಳನ್ನು ಏಕರೂಪದಲ್ಲಿ ಹೊಂದಿದೆ. ರಾಷ್ಟ್ರೀಯ ಗ್ಯಾಲರಿ - "ಸ್ಟಾಟೆನ್ಸ್ ಮ್ಯೂಸಿಯಮ್ ಫಾರ್ ಕಂಸ್ಟ್" - ಡೆನ್ಮಾರ್ಕ್ ನ ಕಲಾ ವಸ್ತುಸಂಗ್ರಹಾಲಹವಾಗಿದ್ದು 12ನೆಯ ಶತಮಾನದಿಂದ ಇಂದಿನವರೆಗಿನ ಕಲಾವಿದರ ಕೃತಿಗಳು ಇಲ್ಲಿ ಸಂಗ್ರಹಿತವಾಗಿವೆ. ಈ ಸಂಗ್ರಹಗಳಲ್ಲಿ ಪ್ರತಿನಿಧಿಸಲ್ಪಟ್ಟ ಕಲಾವಿದರ ಪೈಕಿ ರೂಬೆನ್ಸ್, ರೆಂಬ್ರಾಂಡ್ಟ್, ಪಿಕಾಸೋ,ಬ್ರಾಕ್, ಲೆಗೆರ್, ಮ್ಯಾಟಿಸ್, ಮತ್ತು ಎಮಿಲ್ ನೋಲ್ಡ್ ಇದ್ದಾರೆ.
ಕೋಪನ್ ಹ್ಯಾಗನ್ ನ ಮತ್ತೊಂದು ಪ್ರಮುಖ ಕಲಾವಸ್ತುಸಂಗ್ರಹಾಲಯ Ny ಕಾರ್ಲ್ಸ್ ಬರ್ಗ್ ಗ್ಲಿಪ್ಟೋಟೆಕ್ ಎಂಬ ಕಾರ್ಲ್ಸ್ ಬರ್ಗ್ ನ ಎರಡನೆಯ ತಲೆಮಾರಿನ ಶ್ರೇಷ್ಠ ಉದ್ಯಮಿ-ಜನಾನುರಾಗಿ ಕಾರ್ಲ್ ಜೇಕಬ್ಸನ್ ಸ್ಥಾಪಿಸಿದ ಕಲಾಲಯವಾಗಿದ್ದು ಅವರ ವೈಯಕ್ತಿಕ ಸಂಗ್ರಹಗಳನ್ನು ಕೇಂದ್ರವಾಗಿರಿಸಿಕೊಂಡು ಈ ಮ್ಯೂಸಿಯಂ ಅನ್ನು ರಚಿಸಲಾಗಿದೆ. ಅದರ ಮುಖ್ಯ ಗುರಿಯು ಈಜಿಪ್ಷಿಯನ್, ರೋಮನ್ ಮತ್ತು ಗ್ರೀಕ್ ಶಾಸ್ತ್ರೀಯ ಶಿಲ್ಪಕಲೆ ಮತ್ತು ಇತರ ಪುರಾತನ ವಸ್ತುಗಳಾಗಿದ್ದು, ಇಲ್ಲಿನ ರಾಡಿನ್ ರ ಶಿಲ್ಪಗಳ ಸಂಗ್ರಹವು ಫ್ರಾನ್ಸ್[೫೮] ನ ಹೊರತಾಗಿ ಬಲು ದೊಡ್ಡದೆನಿಸಿಕೊಂಡಿದೆ(ಗ್ಲಿಪ್ಟೊ-, ಗ್ರೀಕ್ ಮೂಲಪದ ಗ್ಲಿಫೀನ್ ನಿಂದ, ಕೆತ್ತು ಎಂದರ್ಥ, ಮತ್ತು ಥೆಕೆ, ಒಂದು ಸಂಗ್ರಹ-ತಾಣ). ಶಿಲ್ಪಕಲೆಗಳ ಸಂಗ್ರಹಗಳಲ್ಲದೆ, Ny ಕಾರ್ಲ್ಸ್ ಬರ್ಗ್ ಗ್ಲಿಪ್ಟೋಟೆಕ್ ಇಂಪ್ರೆಷನಿಸ್ಟ್ ಮತ್ತು ಇಂಪ್ರೆಷನಿಸ್ಟ್ ನಂತರದ ಕುಂಚಕಲಾವಿದರ ಸಮಗ್ರ ಪೇಯ್ನ್ ಟಿಂಗ್ ಸಂಗ್ರಹವನ್ನು ಹೊಂದಿದ್ದು, ಕಲಾವಿದರಾದ ಮಾನೆಟ್, ರೆನಾಯ್ರ್, ಸೆಝಾನ್ನೆ, ವಾನ್ ಗಾಗ್, ಮತ್ತು ಟೌಲೌಸ್-ಲಾಟ್ರೆಕ್ ಅಲ್ಲದೆ ಡ್ಯಾನಿಷ್ ಸ್ವರ್ಣಯುಗದ ಕಲಾವಿದರ ಕಲೆಗಳ ಸಂಗ್ರಹವೂ ಇಲ್ಲಿದೆ.
ಲೂಯಿಸಿಯಾನಾವು ಆಧುನಿಕ ಕಲೆಯ ವಸ್ತುಸಂಗ್ರಹಾಲಯವಾಗಿದ್ದು ಕೋಪನ್ ಹ್ಯಾಗನ್ ನಿಂದ ಕೊಂಚ ಉತ್ತರಕ್ಕೆ ತೀರಪ್ರದೇಶದಲ್ಲಿದೆ. ಓರ್ಸಂಡ್ ನ ಮೇಲುಭಾಗದ ಪ್ರದೇಶದಲ್ಲಿರುವ ಶಿಖರಪ್ರದೇಶದಲ್ಲಿರುವ ಶಿಲ್ಪೋದ್ಯಾನದ ಮಧ್ಯಭಾಗದಲ್ಲಿ ಈ ವಸ್ತುಸಂಗ್ರಹಾಲಯವಿದೆ. ಈ ವಸ್ತುಸಂಗ್ರಹಾಲಯವು ಪ್ಯಾಟ್ರೀಷಿಯಾ ಸ್ಕಲ್ಟ್ಝ್ ರ 1,000 ಪ್ಲೇಸಸ್ ಟು ಸೀ ಬಿಫೋರ್ ಯೂ ಡೈ ಪುಸ್ತಕದಲ್ಲಿ ಉಲ್ಲೇಖಿತವಾಗಿದೆ. ದ ಡ್ಯಾನಿಷ್ ಮ್ಯೂಸಿಯಮ್ ಆಫ್ ಆರ್ಟ್ & ದಿಸೈನ್ 18ನೆಯ ಶತಮಾನದ, ಹಿಂದೆ ಫ್ರೆಡೆರಿಕ್ಸ್ ಹಾಸ್ಪಿಟಲ್ ಆಗಿದ್ದ ಸ್ಥಳದಲ್ಲಿ ಸ್ಥಾಪಿತವಾಗಿದ್ದು ಇಲ್ಲಿ ಡ್ಯಾನಿಷ್ ವಿನ್ಯಾಸ ಮತ್ತು ಅಂತರರಾಷ್ಟ್ರೀಯ ವಿನ್ಯಾಸ ಹಾಗೂ ಹಸ್ತಕೌಶಲಗಳ ಪ್ರದರ್ಶನವಿದೆ.
ಇತರ ವಸ್ತುಸಂಗ್ರಹಾಲಯಗಳೆಂದರೆ:
- ಥೋರ್ವಾಲ್ಡ್ ಸೆನ್ಸ್ ವಸ್ತುಸಂಗ್ರಹಾಲಯವು ಏಕ-ಕಲಾವಿದನ ಸಂಗ್ರಹಾಲಯವಾಗಿದ್ದು, ರೋಮ್ ನಲ್ಲಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ರೋಮ್ಯಾಂಟಿಕ್ ಡ್ಯಾನಿಷ್ ಶಿಲ್ಪಿ ಬೆರ್ಟೆಲ್ ಥೋರ್ವಾಲ್ಡ್ ಸೆನ್ ರ ಸಮಗ್ರಕಲೆಗೆ ಅರ್ಪಿತವಾದ ಸಂಗ್ರಹಾಲಯವಾಗಿದೆ.
- ಸಿಸ್ಟೆರ್ನೆರ್ನೆ ಒಂದು ಸಣ್ಣ, ಆದರೆ ವಿಭಿನ್ನವಾದ, ಗಾಜಿನ ಮೇಲಿನ ಕಲೆಗೆ ಅರ್ಪಿತವಾದ ವಸ್ತುಸಂಗ್ರಹಾಲಯ. ಅದು ಒಂದು ಕೃತಕಗುಹೆಯ ರೀತಿಯ ಹಿಂದಿನ ದಿನಗಳ ನೀರಿನಕೊಳಗಳಲ್ಲಿರುತ್ತದೆ ಮತ್ತು ಬದಲಾಗುವ ನೀರಿನ ಮಟ್ಟಗಳ ಕಾರಣದಿಂದ ಉಂಟಾಗುವ ಸ್ಟಾಲಕ್ ಟಾಯ್ಟ್ ಗಳಿಂದ ಆವೃತವಾಗಿದೆ.
- ಆರ್ಡ್ರುಪ್ ಗಾರ್ಡ್ ವಸ್ತುಸಂಗ್ರಹಾಲಯವು ಕಲೆಗೆ ಮೀಸಲಾದ ಮ್ಯೂಸಿಯಂ ಆಗಿದ್ದು ಕೋಪನ್ ಹ್ಯಾಗನ್ ನ ಕೊಂಚ ಉತ್ತರಕ್ಕೆ ಇರುವಂತಹ ಒಂದು ಹಳೆಯ ಬಂಗಲೆಯಾಗಿದ್ದು, ಇರಾಕಿ-ಬ್ರಿಟಿಷ್ ಶಿಲ್ಪಿ ಝಾಹಾ ಹ್ಯಾಡಿಡ್ ವಿನ್ಯಾಸಗೊಳಿಸಿದ ಒಂದು ಕಲಾ ವಸ್ತುಸಂಗ್ರಹಾಲಯ. ಅದರಲ್ಲಿ 19ನೆಯ ಶತಮಾನದ ಫ್ರೆಂಚ್ ಮತ್ತು ಡ್ಯಾನಿಷ್ ಕಲೆಯು ಕಾಣಸಿಗುತ್ತದೆ ಮತ್ತು ಪಾಲ್ ಗಾಗಿನ್ ರವರ ಕಲೆಗಾಗಿ ಮ್ಯೂಸಿಯಂ ವಿಶೇಷ ಗಮನ ಸೆಳೆದಿದೆ.
ಸಂಗೀತ ಮತ್ತು ಮನರಂಜನೆ
[ಬದಲಾಯಿಸಿ]ನೂತನ ಕೋಪನ್ ಹ್ಯಾಗನ್ ಕನ್ಸರ್ಟ್ ಹಾಲ್ (ಗಾಯನ ಸಭಾಭವನ) ಜನವರಿ 2009ರಲ್ಲಿ ಉದ್ಘಾಟನೆಗೊಮಡಿತು. ಜೀನ್ ನೌವೆಲ್ ರಿಂದ ವಿನ್ಯಾಸಗೊಳಿಸಲ್ಪಟ್ಟ ಈ ಸಭಾಭವನದಲ್ಲಿ ನಾಲ್ಕು ಸಭಾಂಗಣಗಳಿದ್ದು ಪ್ರಧಾನ ಸಭಾಂಗಣದಲ್ಲಿ 1800 ಜನರಿಗೆ ಆಸನಗಳ ವ್ಯವಸ್ಥೆಯಿದೆ. ಡ್ಯಾನಿಷ್ ನ್ಯಾಷನಲ್ ಸಿಂಫೋನಿ ಆರ್ಕೇಸ್ಟ್ರಾದ ತವರಿನಂತಿರುವ ಈ ಸಭಾಭವನ ಮತ್ತ ಲಾಸ್ ಏಂಜಲೀಸ್ ನ ವಾಲ್ಟ್ ಡಿಸ್ನೀ ಕನ್ಸರ್ಟ್ ಹಾಲ್ ಸರ್ವಕಾಲಿಕವಾಗಿ ನಿರ್ಮಿತವಾದ ಸಕಲ ಸಭಾಭವನಗಳಲ್ಲಿ ಬಹಳ ದುಬಾರಿಯಾದುವಾಗಿವೆ.[೫೯] ಶಾಸ್ತ್ರೀಯ ಸಂಗೀತಕ್ಕೆಂದೇ ಮೀಸಲಾದ ಇನ್ನೊಂದು ಮುಖ್ಯವಾದ ತಾಣವೆಂದರೆ ಐತಿಹಾಸಿಕ ತಿವೋಲಿ ಗಾರ್ಡನ್ಸ್ ನಲ್ಲಿರುವ ತಿವೋಲಿ ಕನ್ಸರ್ಟ್ ಹಾಲ್. ಕೋಪನ್ ಹ್ಯಾಗನ್ ಒಪೇರಾ ಹೌಸ್ (ಡ್ಯಾನಿಷ್ ನಲ್ಲಿ ಸಾಮಾನ್ಯವಾಗಿ ಒಪೆರಾಯೆನ್ ಎನ್ನಲಾಗುತ್ತದೆ) 2005ರಲ್ಲಿ ಆರಂಬವಾಗಿದ್ದು, ಇದನ್ನು ಹೆನ್ನಿಂಗ್ ಲಾರ್ಸೆನ್ ವಿನ್ಯಾಸಗೊಳಿಸಿದರು; ಇದು ಡೆನ್ಮಾರ್ಕ್ ನ ರಾಷ್ಟ್ರೀಯ ಒಪೇರಾ ಹೌಸ್ ಆಗಿದ್ದು, ಜಗದ ಅತ್ಯಂತ ಆಧುನಿಕ ಒಪೇರಾ ಹೌಸ್ ಗಳಲ್ಲಿ ಒಂದಾಗಿದೆ. 1748ರಿಂದಲೂ ಇರುವಂತಹ, ಹಳೆಯ ರಾಯಲ್ ಡ್ಯಾನಿಷ್ ಥಿಯೇಟರ್ ಈಗಲೂ ಪೂರಕವಾದ ಒಪೇರಾ ಹೌಸ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ರಾಯಲ್ ಡ್ಯಾನಿಷ್ ಥಿಯೇಟರ್ ರಾಯಲ್ ಡ್ಯಾನಿಷ್ ಬ್ಯಾಲೆಗೂ ತವರಾಗಿದೆ. 1748ರಲ್ಲಿ ಈ ಥಿಯೇಟರ್ ನ ಜೊತೆಜೊತೆಗೇ ಸ್ಥಾಪಿತವಾದ ಈ ಸಂಸ್ಥೆಯು ಯೂರೋಪ್ ನ ಬಹಳ ಹಳೆಯ ಬ್ಯಾಲೆ ತಂಡಗಳಲ್ಲೊಂದಾಗಿದೆ. ಬ್ಯಾಲೆಯ ಬೌರ್ನೋವಿಲ್ಲೆ ಶೈಲಿಗೂ ಇದು ತವರಾಗಿದೆ.
ಕೋಪನ್ ಹ್ಯಾಗನ್ ನಲ್ಲಿ ಗಮನಾರ್ಹವಾದ ಜಾಝ್ ಪ್ರದರ್ಶನವು ಹಲವಾರು ವರ್ಷಗಳಿಂದಲೂ ಪ್ರಚಲಿತದಲ್ಲಿದೆ. ಬೆನ್ ವೆಬ್ ಸ್ಟರ್, ಥಾಡ್ ಜೋನ್ಸ್, ರಿಚರ್ಡ್ ಬೂನ್, ಎರ್ನೀ ವಿಕ್ಲಿನ್ಸ್, ಕೆನ್ನಿ ಡ್ರೂ, ಎಡ್ ಥಿಗ್ಪೆನ್, ಬಾನ್ ರಾಕ್ವೆಲ್, ಡೆಕ್ಸ್ಟರ್ ಗಾರ್ಡನ್, ಮತ್ತು ಇತರರಾದ ರಾಕ್ ಗಿಟಾರ್ ವಾದಕ ಲಿಂಕ್ ವ್ರೇ,ಯಂತಹ ಹಲವಾರು ಅಮೆರಿಕನ್ ಜಾಝ್ ಸಂಗೀತಗಾರರು 1960ರ ದಶಕದಲ್ಲಿ ಕೋಪನ್ ಹ್ಯಾಗನ್ ಗೆ ನೆಲೆಸಲು ಬಂದಾಗ ಜಾಝ್ ಸಂಗೀತವು ಇಲ್ಲಿ ವೃದ್ಧಿಗೊಂಡಿತು. ಪ್ರತಿವರ್ಷ ಜುಲೈ ಮೊದಲನೆಯ ಭಾಗದಲ್ಲಿ ಕೋಪನ್ ಹ್ಯಾಗನ್ ಜಾಝ್ ಹಬ್ಬವು ಜರುಗುವುದು ಮತ್ತು ಆಗ ಕೋಪನ್ ಹ್ಯಾಗನ್ ನ ಬೀದಿಗಳು, ಚೌಕಗಳು ಮತ್ತು ಉದ್ಯಾನಗಳು ಸಣ್ಣ ಮತ್ತು ದೊಡ್ಡ ಜಾಝ್ ಕಚೇರಿಗಳಿಂದ ತುಂಬಿ ತುಳುಕುತ್ತಿರುತ್ತವೆ(ನೋಡಿ; ಮೊದಮೊದಲ ಕಾರ್ಯಕ್ರಮಗಳು). ಕೋಪನ್ ಹ್ಯಾಗನ್ ನಲ್ಲಿ ಲಯಬದ್ಧವಾದ ಸಂಗೀತಕ್ಕೆ ಬಹಳ ಪ್ರಮಖವಾದ ತಾಣವೆಂದರೆ ವೆಸ್ಟೆರ್ಬ್ರೋ ಜಿಲ್ಲೆಯಲ್ಲಿರುವ ವೆಗಾ; ಇದು ಅಂತರರಾಷ್ಟ್ರೀಯ ಸಂಗೀತ ಪತ್ರಿಕೆಯಾದ ಲೈವ್[೬೦] ನಿಂದ "ಯೂರೋಪ್ ನ ಶ್ರೇಷ್ಠ ಕಚೇರಿಯ ತಾಣ"ವೆಂದು ಆಯ್ಕೆಯಾಗಿದೆ.
ಬಿಟ್ಟಿ ಮನರಂಜನೆಗಾಗಿ ಸ್ಟ್ರಾಂಜೆಟ್ ನ ಗುಂಟ ಪಾದ ಬೆಳೆಸಿದರಾಯ್ತು, ವಿಶೇಷತಃ ನೈಟ್ರೋವ್ ಮತ್ತು ಹೋಜ್ಬ್ರೋ ಪ್ಲಾಡ್ಸ್ ಗಳ ನಡುವಿನಲ್ಲಿ; ಇಲ್ಲಿ ಅಪರಾಹ್ನದ ಅಂತ್ಯದಲ್ಲಿ ಮತ್ತು ಸಂಜೆಯಲ್ಲಿ ಆಶು-ಮೂರು ರಿಂಗ್ ಗಳ ಸರ್ಕಸ್ ಮಾದರಿಯಲ್ಲಿದ್ದು ಇಲ್ಲಿ ಸಂಗೀತಗಾರರು, ಜಾದೂಗಾರರು, ಜಗ್ಲರ್ ಗಳು, ಮತ್ತು ಇತರ ಹಾದಿಯ ಪ್ರದರ್ಶನಕಾರರ ಪ್ರದರ್ಶನಗಳು ಮುಫ್ತಾಗಿ ದೊರೆಯುತ್ತದೆ.
ಕ್ರೀಡೆ
[ಬದಲಾಯಿಸಿ]ಕೋಪನ್ ಹ್ಯಾಗನ್ ವಿವಿಧ ವಿಧಗಳ ಕ್ರೀಡಾ ತಂಡಗಳನ್ನು ಹೊಂದಿದೆ. ಎರಡು ಪ್ರಮುಖ ಫುಟ್ಬಾಲ್ ತಂಡಗಳೆಂದರೆ ಬ್ರಾಂಡ್ಬೀ IF ಮತ್ತು FC ಕೋಬೆನ್ಹಾವ್ನ್. ಬ್ರಾಂಡ್ ಬೈ IF ಬ್ರಾಂಡ್ ಬೈನ ಬ್ರಾಂಡ್ ಬೈ ಕ್ರೀಡಾಂಗಣದಲ್ಲಿ ಆಡುತ್ತದೆ ಮತ್ತು FC ಕೋಬೆನ್ ಹ್ಯಾವ್ನ್ ಕೋಪನ್ ಹ್ಯಾಗನ್ ನ ಓಸ್ಟೆರ್ಬ್ರೋ ದ ಪಾರ್ಕೆನ್ ನಲ್ಲಿ ಆಡುತ್ತದೆ. ಇತರ ತಂಡಗಳೆಂದರೆ ಫ್ರೆಮಾಡ್ ಅಮಾಜೆರ್, B93, AB, ಫ್ರೆಂ, ಲಿಂಗ್ ಬೈ, ಹ್ವಿಡೋವ್ರೆ IF ಮತ್ತು FC ನಾರ್ಡ್ಸ್ ಜೇಲ್ಲಾಂಡ್
ಕೋಪನ್ ಹ್ಯಾಗನ್ ನಲ್ಲಿ ಮೂರು ಐಸ್ ಹಾಕಿ ತಂಡಗಳಿವೆ: ರೋಡೋವ್ರೆ ಮೈಟಿ ಬುಲ್ಸ್, ಹೆರ್ಲೆವ್ ಹಾರ್ನೆಟ್ಸ್ ಮತ್ತು ನಾರ್ಡ್ಸ್ ಜೇಲ್ಲಾಂಡ್ ಕೋಬ್ರಾಸ್.
ಕೋಪನ್ ಹ್ಯಾಗನ್ ನಲ್ಲಿ ಬಹಳ ಹ್ಯಾಂಡ್ ಬಾಲ್ ತಂಡಗಳು ಇವೆ. FC ಕೋಬನ್ ಹ್ಯಾವ್ನ್ ಪುರುಷರ ಹಾಗೂ ಸ್ತ್ರೀಯರ ತಂಡವು ಒಮದೇ ಲಾಂಛನ ಮತ್ತು ಒಂದೇ ಹೆಸರನ್ನು ಹೊಂದಿರುವಂತಹ ತಂಡವನ್ನು ಹೊಂದಿದೆ.. ಆ ತಂಡಗಳು ಮೊದಲು FIF ಎಂದು ಕರೆಯಲ್ಪಡುತ್ತಿದ್ದವು. ಇತರ ಉನ್ನತ ಮಟ್ಟದ ಲೀಗ್ ಗಳಲ್ಲಿ ಆಡುತ್ತಿರುವ ತಂಡಗಳೆಂದರೆ; ಅಜಾಕ್ಸ್ ಹೋರೋಸ್, ವೈಡನ್ ಮತ್ತು HIK (ಹೆಲ್ಲೆರಪ್)
ರಗ್ಬಿ ಯೂನಿಯನ್ ಸಹ ಡ್ಯಾನಿಷ್ ರಾಜಧಾನಿಯಲ್ಲಿ ಆಡಲ್ಪಡುತ್ತಿದ್ದು ಕ್ಸ್ರ್-ನ್ಯಾನಾಕ್, ಕೋಪನ್ ಹ್ಯಾಗನ್ ಸ್ಕ್ರಮ್, ಎಕ್ಸ್ಐಲ್ಸ್, ಫ್ರಾಗೀಸ್ ಮತ್ತು ರಗ್ಬೈಕ್ಲಬ್ಬೆನ್ ಸ್ಪೀಡ್ ಗಳು ಈ ಕ್ರೀಡೆಯಲ್ಲಿ ಭಾಗವಹಿಸುತ್ತಿವೆ. ಕೋಪನ್ ಹ್ಯಾಗನ್ ನಲ್ಲಿ ಸ್ಥಾಪಿತವಾಗಿರುವ ಡ್ಯಾನಿಷ್ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಆಂಗ್ಲಭಾಷೆ ಮಾತನಾಡುವ ಜಗದ ಹೊರತಾದ ತೀವ್ರಸ್ಪರ್ಧೆ ಹೊಂದಿರುವವ ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಲೀಗ್ ಆಗಿದೆ.
2011ರಲ್ಲಿ ಕೋಪನ್ ಹ್ಯಾಗನ್ UCI ರೋಡ್ ವರ್ಲ್ಡ್ ಚಾಂಪಿಯನ್ ಷಿಪ್ ಗೆ ಅತಿಥೇಯವಾಗಲಿದೆ.
ವಿನೋದೋದ್ಯಾನಗಳು
[ಬದಲಾಯಿಸಿ]ಜಗತ್ತಿನ ಎರಡು ಬಹಳ ಹಳೆಯ ವಿನೋದೋದ್ಯಾನಗಳು ಕೋಪನ್ ಹ್ಯಾಗನ್ ನಲ್ಲಿವೆ.[೬೧] ಜಗದ್ವಿಖ್ಯಾತ ಟಿವೋಲಿ ಗಾರ್ಡನ್ಸ್ ಒಂದು ವಿನೋದೋದ್ಯಾನವೂ, ಸಂತೋಷದಾಯಕ ಉದ್ಯಾನವೂ ಆಗಿದ್ದು, ಕೋಪನ್ ಹ್ಯಾಗನ್ ನ ಮಧ್ಯಭಾಗದಲ್ಲಿಯೇ, ಪುರಸಭಾ ಚೌಕ(ಸಿಟಿ ಹಾಲ್ ಸ್ಕ್ವೇರ್) ಮತ್ತು ಕೇಂದ್ರ ನಿಲ್ದಾಣ(ಸೆಂಟ್ರಲ್ ಸ್ಟೇಷನ್)ಗಳ ಮಧ್ಯದಲ್ಲಿದೆ. ಅದರಲ್ಲಿನ ಮೋಜು ರೈಡ್ ಗಳಲ್ಲಿ ಜಗದ ಅತಿ ಹಳೆಯ, ಇನ್ನೂ ಚಾಲ್ತಿಯಲ್ಲಿರುವ, ರೋಲರ್ ಕೋಸ್ಟರ್ ಮತ್ತು ಅತ್ಯಂತ ಹಳೆಯ ಫೆರಿಸ್ ವೀಲ್ ಗಳಿವೆ.[೬೨] ಇದು ಹೊರಾಂಗಣ ಕಚೇರಿಗಳಿಗೆ ತಾಣವೂ ಆಗಿದೆ. ಅಗಸ್ಟ್ 15, 1843ರಂದು ಆರಂಭವಾದ ಇದು ಜಗತ್ತಿನ ಎರಡನೆಯ ಹಳೆಯ ವಿನೋದೋದ್ಯಾನವಾಗಿದೆ. ಡೈರ್ ಹಾವ್ಸ್ ಬಾಕ್ಕೆನ್ (ಇಂಗ್ಲಿಷ್ ನಲ್ಲಿ "ದ ಡೀರ್ ಗಾರ್ಡನ್ ಹಿಲ್") ಕೋಪನ್ ಹ್ಯಾಗನ್ ನ ಕೊಂಚ ಉತ್ತರಕ್ಕೆ ಇರುವ ಕ್ಲಾಂಪೆನ್ ಬೋರ್ಗ್ ಎಂಬ ಡೈರೆ ಹಾವೆನ್ ಕಾಡುಪ್ರದೇಶದಲ್ಲಿ ಸ್ಥಾಪಿತವಾಗಿದೆ. ಕ್ರಿಶ್ಚಿಯನ್ IV ರಿಂದ ಸವಾರಿಗಳು, ಕ್ರೀಡೆಗಳು, ಮತ್ತು ಖಾನಾವಳಿಗಳನ್ನು ಹೊಂದಿರುವಂತೆ ಸಜ್ಜಾಗಿಸಲ್ಪಟ್ಟ ಈ ವಿನೋದೋದ್ಯಾನವು ಜಗತ್ತಿನ ಬಹಳ ಹಳೆಯ ಚಾಲ್ತಿಯಲ್ಲಿರುವ ವಿನೋದೋದ್ಯಾನವಾಗಿದೆ.[೬೧] ಪ್ರವೇಶ ಉಚಿತ.
ಆಹಾರ ಪದ್ಧತಿ
[ಬದಲಾಯಿಸಿ]2009ರಲ್ಲಿ, ಕೋಪನ್ ಹ್ಯಾಗನ್ ನಲ್ಲಿ, ಸ್ಕ್ಯಾಂಡಿನಾವಿಯಾದ ನಗರಗಳಲ್ಲೇ ಅತಿ ಹೆಚ್ಚಿನ ಸಂಖ್ಯೆಯಾದ 13 ಮಿಷೆಲಿಯನ್ ತಾರಾ ಹೊಟೆಲ್ ಗಳಿದ್ದವು.[೬೩] ಈ ನಗರವು ಒಂದು ಆಹಾರ ತಾಣವೆಂದು ದಿನೇದಿನೇ ಜಗದಾದ್ಯಂತ ಗುರುತಿಸಲ್ಪಡುತ್ತಿದೆ.[೬೪] ಮೇಲ್ಮಾರುಕಟ್ಟೆಯ ಆಯ್ಕೆಗೊಂಡ ಕೆಲವು ಹೊಟೆಲ್ ಗಳಲ್ಲದೆ ಕೋಪನ್ ಹ್ಯಾಗನ್ ಡ್ಯಾನಿಷ್, ಅಂತರರಾಷ್ಟ್ರೀಯ ಮತ್ತು ಜನಾಂಗೀಯ ಹೊಟೆಲ್ ಗಳನ್ನು ಹೊಂದಿದೆ. ತೆರೆದ ಸ್ಯಾಂಡ್ ವಿಚ್ ("ಸ್ಮಾರ್ರೆಬ್ರೋಡ್") - ಸಾಂಪ್ರದಾಯಿಕ ಹಾಗೂ ಅತ್ಯುತ್ತಮ ಡ್ಯಾನಿಷ್ ಖಾದ್ಯ - ಗಳನ್ನು ಉಣಬಡಿಸುವ ಮಧ್ಯಮವರ್ಗದ ಖಾನಾವಳಿಗಳನ್ನು ಕಾಣಬಹುದಾದರೂ, ಬಹುತೇಕ ಹೊಟೆಲ್ ಗಳು ಅಂತರರಾಷ್ಟ್ರೀಯ ಖಾದ್ಯಗಳನ್ನು ನೀಡುತ್ತವೆ. ಮತ್ತೊಂದು ಸ್ಥಳೀಯ ವಿಶೇಷವಾದ ಡ್ಯಾನಿಷ್ ಪೇಸ್ಟ್ರಿಯನ್ನು ನಗರದ ಎಲ್ಲಾ ಭಾಗಗಳ, ಅಸಂಖ್ಯಾತ ಬೇಕರಿಗಳಲ್ಲಿ, ರುಚಿ ನೋಡಬಹುದು.
ಕೋಪನ್ ಹ್ಯಾಗನ್ ಮತ್ತು ಬೀರ್ ದು ದೀರ್ಘಕಾಲದ ಸಂಬಂಧ. 1847ರಿಂದಲೂ ಕಾರ್ಲ್ಸ್ ಬರ್ಗ್ ಬೀರ್ ಅನ್ನು ವೆಸ್ಟೆರ್ಬ್ರೋ ಮತ್ತು ವಾಲ್ಬೈ ಜಿಲ್ಲೆಗಳ ನಡುವೆ ಇದ್ದ ಆ ಬ್ರೂಯರಿಯ ಆವರಣದಲ್ಲೇ ಭಟ್ಟಿಯಿಳಿಸಲಾಗುತ್ತಿತ್ತು ಮತ್ತು ಇದು ಡ್ಯಾನಿಷ್ ಬೀರ್ ಎನ್ನುವುದಕ್ಕೆ ಪರ್ಯಾಯವೇ ಆಗಿಬಿಟ್ಟಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೈಕ್ರೋಬ್ರೂಯರಿಗಳು ಬಹಳ ಸಂಖ್ಯೆಯಲ್ಲಿ ಬೆಳೆದು, ಈಗ ಡೆನ್ಮಾರ್ಕ್ ನಲ್ಲಿ ಇಂದು 100ಕ್ಕೂ ಹೆಚ್ಚು ಬ್ರೂಯರಿ[೬೫] ಗಳಿದ್ದು, ಅದರಲ್ಲಿ ಬಹಳ ಬ್ರೂಯರಿಗಳು ಕೋಪನ್ ಹ್ಯಾಗನ್ ನಲ್ಲಿವೆ. ನೋರ್ರೆಬ್ರೋ ಬ್ರೈಘಸ್ ನಂತಹ ಕೆಲವು ಬ್ರೂಪಬ್ ಗಳಂತೆ ಕಾರ್ಯವಹಿಸುವ ತಾಣಗಳಲ್ಲಿ ಆ ಆವರಣಗಳಲ್ಲಿ ಖಾದ್ಯಗಳನ್ನು ಸೇವಿಸಲು ಸೌಕರ್ಯವಿರುತ್ತದೆ.
ಸಮೂಹ ಮಾಧ್ಯಮ
[ಬದಲಾಯಿಸಿ]ಹಲವಾರು ಡ್ಯಾನಿಷ್ ಮಾಧ್ಯಮ ಪುಷ್ಟೀಕರಣ ಸಂಸ್ಥೆಗಳು ಕೋಪನ್ ಹ್ಯಾಗನ್ ನಲ್ಲಿ ಸ್ಥಾಪಿತವಾಗಿವೆ. ಪ್ರಮುಖ ಡ್ಯಾನಿಷ್ ಸಾರ್ವಜನಿಕ ಸೇವಾ ಪ್ರಸರಣ ಕಾರ್ಪೊರೇಷನ್ ಆದ DR ತನ್ನ ಚಟುವಟಿಕೆಗಳನ್ನು DR byen ಕೇಂದ್ರಕಚೇರಿಯಲ್ಲಿ 2006 ಮತ್ತು 2007ರಲ್ಲಿ ಸಂಗ್ರಹಿಸಿತು. ಅಂತೆಯೇ ಒಡೆನ್ಸೆ ಮೂಲದ TV2 ತನ್ನ ಕೋಪನ್ ಹ್ಯಾಗನ್ ನ ಚಟುವಟಿಕೆಗಳನ್ನು ಟೆಗ್ಲ್ ಹೋಲ್ಮೆನ್ ಎಂಬ ಆಧುನಿಕ ಮಾಧ್ಯಮಗೃಹದಲ್ಲಿ ಸಂಗ್ರಹಿಸಿತು. [೬೬]ಪೊಲಿಟಿಕೆನ್ ಮತ್ತು ಬರ್ಲಿಂಗ್ಸ್ ಕೆ ಟೈಡೆಂಡೆ ಇಲ್ಲಿನ ೆರಡು ಪ್ರಧಾನ ದೈನಿಕಗಳು ಮತ್ತು ಎಕ್ಸ್ ಟ್ರಾ ಬ್ಲಾಡೆಟ್ ಹಾಗೂ B.T. ಇಲ್ಲಿನ ಹಾಗೂ ಇಲ್ಲಿಯ ಮೂಲದ್ದೇ ಆದ ಎರಡು ಟ್ಯಾಬ್ಲಾಯ್ಡ್ ಗಳು. ಇತರ ಮುಖ್ಯ ಮಾಧ್ಯಮ ಸಂಸ್ಥೆ (ಮೀಡಿಯಾ ಕಾರ್ಪೊರೇಷನ್)ಗಳೆಂದರೆ ಅಲ್ಲರ್ ಮೀಡಿಯಾ ಎಂಬ ಸ್ಕ್ಯಾಂಡಿನೇವಿಯಾದ ವಾರಪತ್ರಿಕೆಗಳನ್ನು ಮತ್ತು ಮಾಸಪತ್ರಿಕೆಗಳನ್ನು ಹೊರತರುವ ಹಿರಿಯ ಪ್ರಕಾಶನ ಸಂಸ್ಥೆ, ದ ಎಗ್ಮಾಂಟ್ ಮೀಡಿಯಾ ಗ್ರೂಪ್ ಮತ್ತು ಜಿಲ್ಡೆಂಡಾಲ್ ಎಂಬ ಬೃಹತ್ ಡ್ಯಾನಿಷ್ ಪುಸ್ತಕ ಪ್ರಕಾಶನ ಸಂಸ್ಥೆ.
ಕೋಪನ್ ಹ್ಯಾಗನ್ ನಲ್ಲಿ ಸಾಕಷ್ಟು ಚಲನಚಿತ್ರ ಮತ್ತು ಟೆಲಿವಿಷನ್ ಉದ್ಯಮ ಸಂಸ್ಥೆಗಳೂ ಇವೆ. ಫಿಲ್ಮ್ ಬೈಯೆನ್ ಎಂಬುದು ಒಂದು ಚಲನಚಿತ್ರ ನಗರವಾಗಿದ್ದು, ಹ್ವಿಡೋವ್ರೆಯ ಹೊರವಲಯದಲ್ಲಿರುವ ಹಿಂದೊಮ್ಮೆ ಸೇನಾಶಿಬಿರವಾಗಿದ್ದ ಜಾಗದಲ್ಲಿರುವ ಈ ಸ್ಥಳದಲ್ಲಿ ಹಲವಾರು ಚಲಮಚಿತ್ರ ಕಂಪನಿಗಳು ಮತ್ತು ಸ್ಟುಡಿಯೋಸ್ ಎಂಬ ಸ್ಟುಡಿಯೋ ಗಳು ಕಾರ್ಯೋನ್ಮುಖವಾಗಿವೆ. ಚಲನಚಿತ್ರ ಕಂಪನಿಗಳ ಪೈಕಿ ಡಾಗ್ಮಾ ಚಳುವಳಿಯ ಸ್ಥಾಪನೆಗೆ ಶ್ರಮಿಸಿದ ಮತ್ತು ಹಲವಾರು ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಣಗಳಿಗೆ ಬೆನ್ನೆಲುಬಾಗಿರುವ ಚಿತ್ರ ನಿರ್ದೇಶಕ ಲಾರ್ಸ್ ವಾನ್ ಟ್ರೈಯರ್ ಸಹಮಾಲಿಕತ್ವದ ಝೆಂಟ್ರೋಪಾವೂ ಒಂದು.
ವಾರ್ಷಿಕ ಕಾರ್ಯಕ್ರಮಗಳು
[ಬದಲಾಯಿಸಿ]- ಕೋಪನ್ ಹ್ಯಾಗನ್ ಫ್ಯಾಷನ್ ವೀಕ್ ಪ್ರತಿವರ್ಷವೂ ಫೆಬ್ರವರಿ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆಯುತ್ತದೆ. ಇದು ಉತ್ತರ ಯೂರೋಪ್ ನಲ್ಲಿ ನಡೆಯುವ ಅತಿ ದೊಡ್ಡ ಫ್ಯಾಷನ್ ಕಾರ್ಯಕ್ರಮವಾಗಿರುತ್ತದೆ.[೬೭][೬೮]
- ಕೋಪನ್ ಹ್ಯಾಗಲ್ ಜಾತ್ರೆ(ಕಾರ್ನಿವಾಲ್) 1982ರಿಂದಲೂ ವಿಟ್ಸನ್ ರಜಾದಿನಗಳಲ್ಲಿ ಫೇಲ್ಲೆಡ್ ಪಾರ್ಕೆನ್ ಮತ್ತು ನಗರದ ಸುತ್ತಣ ಪ್ರದೇಶಗಳಲ್ಲಿ ನಡೆಯುತ್ತದೆ. 120 ತಂಡಗಳು, 2000 ನರ್ತಕರು ಮತ್ತು ಒಂದು ಲಕ್ಷ ಪ್ರೇಕ್ಷಕರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.[೬೯]
- ಕೋಪನ್ ಹ್ಯಾಗನ್ ಡಿಸ್ಟಾರ್ಷನ್ ಎಂಬುದು ಒಂದು ಯುವ ಸಾಂಸ್ಕೃತಿಕ ಹಬ್ಬವಾಗಿದ್ದು ನಗರದ ಝೀಟ್ ಜೀಸ್ಟ್ ಗಳನ್ನು ಸೆರೆಹಿಡಿಯುವಂಹದ್ದಾಗಿದ್ದು, ಪ್ರತಿವರ್ಷವೂ (ಜೂನ್ ನ ಮೊದಲ ವಾರಾಂತ್ಯದವರೆಗೂ 5 ದಿನಗಳು)ಸುಮಾರು 30,000 ಜನರು ಬೀದಿಗಳಲ್ಲಿ, ಅಂಗಡಿಗಳಲ್ಲಿ, ಗ್ಯಾಲರಿಗಳಲ್ಲಿ, ಕ್ಲಬ್ ಗಳಲ್ಲಿ, ಬಾರ್ ಗಳಲ್ಲಿ, ಹಡಗುಗಳು ಹಾಗೂ ಬಸ್ ಗಳಲ್ಲಿ ಸೇರುವಂತಹ, ಹಾದಿಯ ಸಂಸ್ಕೃತಿ, ಕಲೆ ಮತ್ತು ಮುಂಚೂಣಿಯಲ್ಲಿರುವ ನರ್ತನ ಗಾಯನಗಳ ಮೇಲೆ ಕೇಂದ್ರೀಕೃತವಾದ ಸಾಂಸ್ಕೃತಿಕ ಹಬ್ಬ.[೭೦]
- ರಾಸ್ಕ್ಲೈಡ್ ಹಬ್ಬ ಎಂಬುದು ಒಂದು ಸಂಗೀತ ಹಬ್ಬವಾಗಿದ್ದು ಕೋಪನ್ ಹ್ಯಾಗನ್ ನ ಪಶ್ಚಿಮದಲ್ಲಿರುವ ರಾಸ್ಕ್ಲೈಡ್ ನಲ್ಲಿ ನಡೆಸಲ್ಪಡುತ್ತದೆ. ಸುಮಾರು ಲಕ್ಷ ಜನರನ್ನು ಸೆಳೆಯುವ ಈ ಹಬ್ಬವು ಯೂರೋಪ್ ನಲ ನಾಲ್ಕು ಬೃಹತ್ ರಾಕ್ ಸಂಗೀತ ಹಬ್ಬಗಳಲ್ಲೊಂದು.
- ಪ್ರತಿ ವರ್ಷದ ಜುಲೈ ತಿಂಗಳ ಮೊದಲನೆಯ ಶುಕ್ರವಾರದಂದು ಆರಂಭವಾಗುವ ಕೋಪನ್ ಹ್ಯಾಗನ್ ಜಾಝ್ ಹಬ್ಬವು ಬಹಳ ಜನಪ್ರಿಯವಾದ ವಾರ್ಷಿಕ ಕಾರ್ಯಕ್ರಮವಾಗಿದ್ದು, ಕೋಪನ್ ಹ್ಯಾಗನ್ ನ ಗಮನಾರ್ಹ ಜಾಝ್ ದೃಶ್ಯಗಳೇ ಇವುಗಳ ಆರಂಭಕ್ಕೆ ಕಾರಣವಾದವಾಗಿವೆ. ಈ ಹಬ್ಬವು ಇಡೀ ನಗರದ ಬೀದಿಗಳು, ಚೌಕಗಳು ಮತ್ತು ಉದ್ಯಾನಗಳಲ್ಲದೆ ಕೆಫೆ ಮತ್ತು ಕಚೇರಿ ನಡೆಯುವ ಸಭಾಂಗಣಗಳಲ್ಲೂ ಆಚರಿಸಲ್ಪಡುತ್ತದೆ.[೭೧] ಇದರಲ್ಲಿ ಸುಮಾರು 900 ಕಚೇರಿಗಳು, 100 ಜಾಗಗಳು, ಮತ್ತು ಡೆನ್ಮಾರ್ಕ್ ಮತ್ತು ಇತರ ವಿಶ್ವದ ಭಾಗಗಳಿಂದ ಬಂದಂತಹ ಸುಮಾರು ಎರಡು ಲಕ್ಷಕ್ಕೂ ಮೀರಿದ ಅತಿಥಿಗಳ ಪಾಲ್ಗೊಳ್ಳುವಿಕೆಯಿರುತ್ತದೆ. ಈ ಹಬ್ಬವು ಜಗತ್ತಿನ ಪ್ರಮುಖ ಜಾಝ್ ಹಬ್ಬಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.[೭೨][೭೩]
- ಕೋಪನ್ ಹ್ಯಾಗನ್ ಪ್ರೈಡ್ ಎಂಬ ಒಂದು ಗೇ ಪ್ರೈಡ್ ಹಬ್ಬವು ಪ್ರತಿ ಆಗಸ್ಟ್ ನಲ್ಲಿ ನಡೆಯುತ್ತದೆ. ಅದರ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ "ಟಿವೋಲಿ ಗೋಸ್ ಪಿಂಕ್" ಎಂಬುದೊಂದಿರುತ್ತದೆ ಮತ್ತು ಹಬ್ಬವು ಒಂದು ಮೆರವಣಿಗೆಯೊಂದಿಗೆ ಸಮಾಪ್ತವಾಗುತ್ತದೆ.[೭೪]
- ರೌಂಡ್ ಕ್ರೀಶ್ಚಿಯನ್ಸ್ ಬೋರ್ಗ್ ಓಪನ್ ವಾಟರ್ ರೇಸ್ ಒಂದು 10 ಕಿಲೋಮೀಟರ್ ಗಳ ಹೊರಾಂಗಣ ಈಜು ಸ್ಪರ್ಧೆಯಾಗಿದ್ದು, ಪ್ರತಿ ವರ್ಷ ಆಗಸ್ಟ್ ನ ಕೊನೆಯಲ್ಲಿ ನಡೆಯುತ್ತದೆ. ಬೆಳಗ್ಗೆ ಹವ್ಯಾಸಿಗಳಿಗೆಂದೇ ಒಂದು ಸ್ಪರ್ಧೆಯಿರುತ್ತದೆ ಮತ್ತು ಮಧ್ಯಾಹ್ನ FINA ವಿಶ್ವಕಪ್ ಸ್ಪರ್ಧೆ ಏರ್ಪಡುತ್ತದೆ.
- ಕೋಪನ್ ಹ್ಯಾಗನ್ ಅಡಿಗೆ ಎಂಬುದು ಪ್ರತಿ ಆಗಸ್ಟ್ ನಲ್ಲಿ ನಡೆಯುವ ಆಹಾರ ಹಬ್ಬವಾಗಿದ್ದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಗರದಾದ್ಯಂತ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
- CPH:PIXಕೋಪನ್ ಹ್ಯಾಗನ್ ನ ಅಂತರರಾಷ್ಟ್ರೀಯ ವ್ಯಕ್ತಿ/ವಿಷಯದ ಬಗ್ಗೆ ತೆಗೆದ ಚಿತ್ರಗಳ ಚಿತ್ರೋತ್ಸವವಾಗಿದ್ದು, 2009ರಲ್ಲಿ 20 ವರ್ಷಗಳಷ್ಟು ಹಳೆಯದಾದ ನ್ಯಾಟ್ ಚಿತ್ರೋತ್ಸವ ಮತ್ತು 4 ವರ್ಷಗಳಷ್ಟು ಹಳೆಯದಾದ CIFF ಗಳ ಸಮ್ಮಿಲನವಾಗಿದೆ. CPH:PIX ಉತ್ಸವವು ಏಪ್ರಲ್ ನ ಮಧ್ಯಭಾಗದಲ್ಲಿ ನಡೆಯುತ್ತದೆ.[೭೫]
- CPH:DOX ಕೋಪನ್ ಹ್ಯಾಗನ್ ನ ಸಾಕ್ಷ್ಯಚಿತ್ರಗಳ ಚಿತ್ರೋತ್ಸವವಾಗಿದ್ದು ಪ್ರತಿ ನವೆಂಬರ್ ನಲ್ಲಿ ನಡೆಯುತ್ತದೆ. ಸಾಕ್ಷ್ಯಚಿತ್ರಣ ಕಾರ್ಯಕ್ರಮದ ಈ ಸಂದರ್ಬದಲ್ಲಿ 100ಕ್ಕೂ ಹೆಚ್ಚು ಚಿತ್ರಗಳನ್ನು ಪ್ರಸ್ತುತಪಡಿಸುವುದಲ್ಲದೆ, CPH:DOX ಸಮತದಲ್ಲಿ ವಿಸ್ತೃತವಾದ ಕಾರ್ಯಕ್ರಮಗಳು ನಡೆಯುತ್ತವೆ; ಡಜನ್ ಗಟ್ಟಲೆ ಪ್ರಸಕ್ತಿ ಕಾರ್ಯಕ್ರಮಗಳು, ಕಚೇರಿಗಳು, ವಸ್ತುಪ್ರದರ್ಶನಗಳು ಮತ್ತು ಮೋಜುಕೂಟಗಳು ನಗರದಾದ್ಯಂತ ನಡೆಯುತ್ತವೆ.[೭೫]
ವಿತ್ತ/ಆರ್ಥಿಕ ವ್ಯವಸ್ಥೆ
[ಬದಲಾಯಿಸಿ]ಕೋಪನ್ ಹ್ಯಾಗನ್ ಡೆನ್ಮಾರ್ಕ್[೭೬] ನ ವಾಣಿಜ್ಯ ಹಾಗೂ ಆರ್ಥಿಕ ಕೇಂದ್ರವಾಗಿದೆ ಹಾಗೂ ಸ್ಕ್ಯಾಂಡಿನೇವಿಯನ್-ಬಾಲ್ಟಿಕ್ ಪ್ರಾಂತ್ಯದ ಪ್ರಬಲವಾದ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವೂ ಆಗಿದೆ. 2008ರಲ್ಲಿ ಕೋಪನ್ ಹ್ಯಾಗನ್ ಫಿನಾನ್ಷಿಯಲ್ ಟೈಮ್ಸ್-ಮಾಲಿಕತ್ವದ FDi ಮ್ಯಾಗಝೈನ್ ನವರ ಟಾಪ್ ಫಿಫ್ಟಿ ಯೂರೋಪಿಯನ್ ಸಿಟೀಸ್ ಆಫ್ ದ ಫ್ಯೂಚರ್ ನಲ್ಲಿ 4ನೆಯ ಸ್ಥಾನ ಗಿಟ್ಟಿಸಿತು; ಲಂಡನ್, ಪ್ಯಾರಿಸ್, ಮತ್ತು ಬರ್ಲಿನ್ ಮಾತ್ರ ಇದಕ್ಕಿಂತಲೂ ಹೆಚ್ಚಿನ ಕ್ರಮಾಂಕದಲ್ಲಿದ್ದವು.[೭೭] 2006/07ರಲ್ಲಿ FDi ಮ್ಯಾಗಝೈನ್ ಕೋಪನ್ ಹ್ಯಾಗನ್ ಅನ್ನು ಭವಿಷ್ಯದ ಸ್ಕ್ಯಾಂಡಿನೇವಿಯನ್ ನಗರ [೭೮] ವೆಂದೂ, 2004/05ರಲ್ಲಿ ಉತ್ತರ ಯೂರೋಪ್ ನ ಭವಿಷ್ಯದ ನಗರ ವೆಂದೂ ಹೆಸರಿಸಿತು; ಈ ಬಾಬ್ತಿನಲ್ಲಿ ಈ ನಗರವು ಸ್ಕ್ಯಾಂಡಿನೇವಿಯಾ, ಯುಕೆ, ಐರ್ಲೆಂಡ್ ಮತ್ತು ಬೆನೆಲಕ್ಸ್ ಗಳನ್ನು ಹಿಂದಿಕ್ಕಿತು.[೭೯] 2008ರಲ್ಲಿ ಮಾಸ್ಟರ್ ಕಾರ್ಡ್ ಪ್ರಕಟಿಸಿದ ವರ್ಲ್ಡ್ ವೈಡ್ ಸೆಂಟರ್ಸ್ ಆಫ್ ಕಾಮರ್ಸ್ ಇಂಡೆಕ್ಸ್ ನಲ್ಲಿ ಕೋಪನ್ ಹ್ಯಾಗನ್ ಜಗತ್ತಿನಲ್ಲಿ 14ನೆಯ ಮತ್ತು ಸ್ಕ್ಯಾಂಡಿನೋವಿಯಾದಲ್ಲಿ ಮೊದಲನೆಯ ಸ್ಥಾನವನ್ನು ಗಳಿಸಿತ್ತು.[೮೦] ಕೋಪನ್ ಹ್ಯಾಗನ್ ಅತಿ ಹೆಚ್ಚು ಕೇಂದ್ರಕಚೇರಿಗಳನ್ನು ಮತ್ತು ವಿತರಣಾ ಕೇಂದ್ರಗಳನ್ನು ಆಕರ್ಷಿಸುವ ಪಶ್ಚಿಮ ಯೂರೋಪ್ ನ ನಗರಗಳಲ್ಲಿ ಒಂದು.[೮೧] ಕೋಪನ್ ಹ್ಯಾಗನ್ ನಲ್ಲಿ ತಮ್ಮ ಪ್ರಾದೇಶಿಕ ಕೇಂದ್ರಕಚೇರಿಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಕಂಪನಿಗಳ ಪೈಕಿ ಮ್ಯಕ್ರೋಸಾಫ್ಟ್ ಸಹ ಒಂದು.ಕೋಪನ್ ಹ್ಯಾಗನ್ ಪ್ರದೇಶದಲ್ಲಿ ಸುಮಾರು 2,100 ವಿದೇಶಿ ಕಂಪನಿಗಳಿದ್ದು, ಅದರಲ್ಲಿ ವಿಧವಿಧವಾದ ಉದ್ಯಮಗಳನ್ನು ಪ್ರತಿನಿಧಿಸುವಂತಹ, ಸುಮಾರು ೫೦೦ ಸ್ಕ್ಯಾಂಡಿನೇವಿಯನ್ ಪ್ರಧಾನ ಕಚೇರಿಗಳೂ ಸೇರಿವೆ.
ಕೋಪನ್ ಹ್ಯಾಗನ್ ದು ಸೇವೆಗೆ ಪ್ರಾಮುಖ್ಯತೆ ನೀಡುವ ವಾಣಿಜ್ಯನೀತಿ. ಒಂದು ಪ್ರಮುಖ ವಿಭಾಗವೆಂದರೆ ಜೀವಶಾಸ್ತ್ರ ಹಾಗೂ ಸಂಶೋಧನೆ ಮತ್ತು ಆಭಿವೃದ್ಧಿಯು ನಗರದ ಹಣಕಾಸು ವ್ಯವಸ್ಥೆಯಲ್ಲಿ ಪ್ರಧಾನವಾದ ಪಾತ್ರ ವಹಿಸುತ್ತದೆ. ಇಡೀ ಓರ್ಸಂಡ್ ಪ್ರದೇಶವು ಸ್ವೀಡನ್ ನ ಸಹಕಾರದಿಮದ ಮೆಡಿಕಾನ್ ವ್ಯಾಲಿ ಆಗುವತ್ತ ದಾಪುಗಾಲಿಟ್ಟಿದೆ.
ನೋವೋ ನಾರ್ಡಿಸ್ಕ್ ಮತ್ತು ಲಂಡ್ ಬೆಕ್ ನಂತಹ ಜಗತ್ತಿನ 50 ಬೃಹತ್ ಔಷಧ ತಯಾರಿಕಾ ಮತ್ತು ಜೈವಿಕತಂತ್ರಜ್ಞಾನ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವಂತಹ ಪ್ರಮುಖ ಡ್ಯಾನಿಷ್ ಜೈವಿಕತಂತ್ರಜ್ಞಾನ ಕಂಪನಿಗಳು ವಿಶಾಲ ಕೋಪನ್ ಹ್ಯಾಗನ್ ಪ್ರದೇಶದಲ್ಲಿವೆ.[೮೨] ಈ ಪ್ರದೇಶವು ಸ್ಕ್ಯಾಂಡಿನೇವಿಯಾದಲ್ಲಿ ದೊಡ್ಡದಾದ ಮಾಹಿತಿತಂತ್ರಾಂಶ-ಗುಂಪುಗಳನ್ನೂ ಹೊಂದಿರುವ ಹೆಗ್ಗಳಿಕೆಯಿದ್ದು ಸುಮಾರು ಒಂದು ಲಕ್ಷ ಜನರಿಗ ಅಲ್ಲಿ ಉದ್ಯೋಗಾವಕಾಶವಿದೆ; ಫಿನ್ ಲ್ಯಾಂಡ್ ನ ಹೊರಗೆ ನೋಕಿಯಾದವರ ದೊಡ್ಡ ಸಂಶೋಧನಾ ಕೇಂದ್ರ ಸಹ ಕೋಪನ್ ಹ್ಯಾಗನ್ ನಲ್ಲೇ ಇದೆ.[೮೩] ನೌಕಾಸಾರಿಗೆಯೂ ಇಲ್ಲಿನ ಪ್ರಮುಖ ವ್ಯಾಪಾರವಾಗಿದ್ದು ಮೇಯ್ರ್ ಸ್ಕ್ ಎಂಬ ಜಗದ ಅತಿ ದೊಡ್ಡ ಶಿಪಿಂಗ್ ಕಾರ್ಪೊರೇಷನ್ ಸಹ ಇಲ್ಲಿಯೇ ತನ್ನ ಜಾಗತಿಕ ಕೇಂದ್ರಕಚೇರಿಯನ್ನು ಹೊಂದಿದೆ.
ಹಲವಾರು ಅಂತರರಾಷ್ಟ್ರೀಯ ಕಂಪನಿಗಳು ತಮ್ಮ ಪ್ರಾದೇಶಿಕ ಕೇಂದ್ರಕಚೇರಿಗಳನ್ನು ಕೋಪನ್ ಹ್ಯಾಗನ್ ನಲ್ಲಿ ಹೊಂದಿವೆ; ಉದಾಹರಣೆಗೆ ಮೈಕ್ರೋಸಾಫ್ಟ್. ಜಗದಲ್ಲೇ ದೊಡ್ಡ ಕಂಟೇಯ್ನರ್ ಶಿಪಿಂಗ್ ಕಂಪನಿಯಾದ ಮೇಯ್ರ್ ಸ್ಕ್ ತನ್ನ ಜಾಗತಿಕ ಪ್ರಧಾನ ಕಚೇರಿಯನ್ನು ಇಲ್ಲಿಯೇ ಹೊಂದಿದೆ. ನೋವೋ ನಾರ್ಡಿಸ್ಕ್, ಫೆರಿಂಗ್ ಫಾರ್ಮಾಸ್ಯುಟಿಕಲ್ಸ್ ಮತ್ತು ಬವರಿಯನ್ ನಾರ್ಡಿಕ್ ನಂತಹ ಹಲವಾರು ಡ್ಯಾನಿಷ್ ಫಾರ್ಮಾಸ್ಯುಟಿಕಲ್ ಕಂಪನಿಗಳು ಈ ಪ್ರದೇಶದಲ್ಲಿ ತಮ್ಮ ವಹಿವಾಟುಗಳನ್ನು ನಡೆಸುತ್ತಿರುವುದಲ್ಲದೆ ತಮ್ಮ ಕೇಂದ್ರಕಚೇರಿಗಳನ್ನೂ ಕೋಪನ್ ಹ್ಯಾಗನ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೇ ಹೊಂದಿವೆ.[೮೨]
ಕೋಪನ್ ಹ್ಯಾಗನ್ ನಲ್ಲಿ ಜಗದಲ್ಲೇ ಬೃಹತ್ತ ಮೊತ್ತದ ಸಂಬಳಗಳುಂಟು.[೮೪] ಹೆಚ್ಚಿನ ಮಟ್ಟದ ತೆರಿಗೆಗಳಿಂದ ಕಡ್ಡಾಯ ವ್ಯವಕಲನದ ನಂತರ ಸಂಬಳದ ಮೊತ್ತ ಚಿಕ್ಕದಾಗಿಯೇ ಕಾಣುತ್ತದೆ. ವಿದೇಶೀ ವಿಶೇಷಜ್ಞ[೮೫] ರಿಗೆಂದೇ ಇರುವ ಕಡಿಮೆ ತೆರಿಗೆಯ ಸಹಕಾರಿ ಸಂಶೋಧನಾ ಯೋಜನೆ ಯು ಡೆನ್ಮಾರ್ಕ್ ಶ್ರೇಷ್ಠಮಟ್ಟದ ಶಿಕ್ಷಣ ಹೊಂದಿರುವ ವಿದೇಶೀ ಕಾರ್ಮಿಕರಿಗೆ ಇಲ್ಲಿಗೆ ವಲಸೆ ಬಂದು ನೆಲೆಸಲು ಆಕರ್ಷಕವಾದ ತಾಣವಾಗಿದೆ. ಆದರೆ, ಕೋಪನ್ ಹ್ಯಾಗನ್ ಯೂರೋಪ್ ನ ಬಹಳ ದುಬಾರಿ ನಗರಗಳಲ್ಲಿ ಒಂದೆಂಬುದು ನಿರ್ವಿವಾದ.[೮೬][೮೭]
ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನೆ
[ಬದಲಾಯಿಸಿ]ಕೋಪನ್ ಹ್ಯಾಗನ್ ನಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಸುವ್ಯವಸ್ಥಿತವಾದ ಉನ್ನತ ಶಿಕ್ಷಣ ಪದ್ಧತಿಯು ಜಾರಿಯಲ್ಲಿದೆ. ಇವುಗಳಲ್ಲಿ ಬಹು ಪ್ರಧಾನವಾದುದು ಯೂನಿವರ್ಸಿಟಿ ಆಫ್ ಕೋಪನ್ ಹ್ಯಾಗನ್ 1479ರಲ್ಲಿ ಸ್ಥಾಪಿತವಾದ ಇದು ಡೆನ್ಮಾರ್ಕ್ ನ ಅತಿ ಹಳೆಯ ವಿಶ್ವವಿದ್ಯಾಲಯ. ಅದು ಜಗದ್ವಿಖ್ಯಾತವಾದ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯಾಗಿದ್ದು ನಗರದ ಸುತ್ತಲೂ ಕ್ಯಾಂಪಸ್ ಗಳನ್ನು ಹೊಂದಿದ್ದು, ಇಂಟರ್ನ್ಯಾಷನಲ್ ಅಲಯನ್ಸ್ ಆಫ್ ರಿಸರ್ಚ್ ಯೂನಿವರ್ಸಿಟೀಸ್ ಎಂಬ ಪ್ರಧಾನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಯೇಲ್ ಮತ್ತು ಬರ್ಕ್ಲೀ ಗಳ ಒಕ್ಕೂಟದ ಒಂದು ಭಾಗವಾಗಿದೆ. ಈ ವಿಶ್ವವಿದ್ಯಾಲಯವು ಪ್ರತಿ ವರ್ಷ ಸುಮಾರು 1500 ಅಂತರರಾಷ್ಟ್ರೀಯ ಮತ್ತು ವಿನಿಮಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ.[೮೮] ಇದು ಯೂರೋಪ್ ನ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಮತ್ತೆ ಮತ್ತೆ ಶ್ರೇಣೀಕೃತವಾಗುತ್ತದೆ. ಟೈಮ್ಸ್ ಹೈಯರ್ ಎಜುಕೇಷನ್ ರವರ QS ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ಸ್ 2008ರ ಪಟ್ಟಿಯಲ್ಲಿ ಅದು ಯೂರೋಪ್ ಖಂಡದಲ್ಲಿನ ನಾಲ್ಕನೆಯ ಶ್ರೇಷ್ಠ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೮೯] ದ ಅಕಾಡೆಮಿಕ್ ರಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ 2008 ಅದನ್ನು ಜಗದ 43ನೆಯ ಹಾಗೂ ಯೂರೋಪ್ ನ 8ನೆಯ ಸ್ಥಾನದಲ್ಲಿರಿಸಿತು.[೯೦] ಕೋಪನ್ ಹ್ಯಾಗನ್ ಪ್ರದೇಶದ ಎರಡನೆಯ ಸರ್ವತೋಮುಖ ವಿಶ್ವವಿದ್ಯಾಲಯವೇ ರಾಸ್ಕ್ ಲೈಡ್ ನಲ್ಲಿರುವ ರಾಸ್ಕ್ ಲೈಡ್ ವಿಶ್ವವಿದ್ಯಾಲಯ.
ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯ (DTU),ಡಾನ್ಮಾರ್ಕ್ಸ್ ಟೆಕ್ನಿಸ್ಕೆ ಯೂನಿವರ್ಸಿಟೆಟ್ , ಕೋಪನ್ ಹ್ಯಾಗನ್ ನ ಉತ್ರಭಾಗದ ಹೊರವಲಯಗಳಲ್ಲಿರಿವ ಲಿಂಗ್ ಬೈ ನಲ್ಲಿದೆ. 2008ರ ಟೈಮ್ಸ್ ಹೈಯರ್ ಎಜುಕೇಷನ್ ರ ದ ಮೋಸ್ಟ್ ಇಂಫ್ಲುಯೆನ್ಷಿಯಲ್ ಟೆಕ್ನಿಕಲ್ ಯೂನಿವರ್ಸಿಟೀಸ್ ಆಫ್ ದ ವರ್ಲ್ಡ್ ಪಟ್ಟಿಯಲ್ಲಿ ಇದು ಯೂರೋಪ್ ನ ಮೂರನೆಯ ಶ್ರೇಷ್ಠ ಸ್ಥಾನವನ್ನು ಗಳಿಸಿತು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇಂಸ್ಟಿಟ್ಯೂಟ್ 15ನೆಯ ಸ್ಥಾನವನ್ನು, ಸ್ವಿಟ್ಝರ್ಲ್ಯಾಂಡ್ ನ ETH ಝ್ಯುರಿಚ್ 15ನೆಯ ಸ್ಥಾನವನ್ನು ಮತ್ತು ಡೆನ್ಮಾರ್ಕ್ ನ DTU 20ನೆಯ ಸ್ಥಾನವನ್ನು ಪಡೆದವು.[೯೧]
ಕೋಪನ್ ಹ್ಯಾಗನ್ ಬಿಸಿನೆಸ್ ಸ್ಕೂಲ್ (CBS) ಒಂದು ಪ್ರತಿಷ್ಠಿತ ಮತ್ತು EQUIS ಪುರಸ್ಕೃತ ಉದ್ಯೋಗ ಶಾಲೆಯಾಗಿದ್ದು ಇದು ಫ್ರೆಡೆರಿಕ್ಸ್ ಬರ್ಗ್ ನಲ್ಲಿ ಸ್ಥಾಪಿತವಾಗಿದೆ.
ಯೂನಿವರ್ಸಿಟಿ ಕಾಲೇಜ್ ಕ್ಯಾಪಿಟಲ್ ಮತ್ತು ಮೆಟ್ರೋಪಾಲಿಟನ್ ಯೂನಿವರ್ಸಿಟಿ ಕಾಲೇಜ್ ನ ಶಾಖೆಗಳು ಕೋಪನ್ ಹ್ಯಾಗನ್ ನ ಒಳಗೂ, ಹೊರಗೂ ಇವೆ.
ಮೆಡಿಕಾನ್ ವ್ಯಾಲಿ
[ಬದಲಾಯಿಸಿ]ಜೈವಿಕ ತಂತ್ರಜ್ಞಾನ ಮತ್ತು ಜೀವಶಾಸ್ತ್ರ ವಿಭಾಗಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯನ್ನೇ ಗುರಿಯಾಗಿರಿಸಿಕೊಂಡಿರುವ ಹಲವಾರು ಸಂಸ್ಥೆಗಳು ಮತ್ತು ಕಂಪನಿಗಳು ಕೋಪನ್ ಹ್ಯಾಗನ್ ನಲ್ಲಿ ಹೇರಳವಾಗಿವೆ.[೯೨] ಜಗತ್ತಿನ 50 ಬೃಹತ್ ಫಾರ್ಮಸ್ಯುಟಿಕಲ್ (ಔಷಧ) ಮತ್ತು ಜೈವಿಕತಂತ್ರಜ್ಞಾನ ಕಂಪನಿಗಳಲ್ಲಿ ಎರಡು ವಿಶಾಲ ಕೋಪನ್ ಹ್ಯಾಗನ್ ಪ್ರದೇಶದಲ್ಲಿವೆ. ಕೋಪನ್ ಹ್ಯಾಗನ್ ಮತ್ತು ಓರ್ಸಂಡ್ ಪ್ರದೇಶದ ಇತರ ಪ್ರದೇಶಗಳಲ್ಲಿರುವ ಜೈವಿಕತಂತ್ರಜ್ಷಾನ ಮತ್ತು ಜೀವಶಾಸ್ತ್ರ ಪುಂಜವು ಯೂರೋಪ್ ನ ಪ್ರಬಲ ಪುಂಜಗಳಲ್ಲಿ ಒಂದಾಗಿದೆ. 1995ರಿಂದ ಈಚೆಗೆ ಇದನ್ನು ಡ್ಯಾನಿಷ್-ಸ್ವೀಡಿಷ್ ಕಾರ್ಪೊರೇಷನ್ ನಲ್ಲಿರುವ ಮೆಡಿಕಾನ್ ವ್ಯಾಲಿ ಎಂದು ಅಂಕಿತವಾಗಿದೆ. ಈ ಪ್ರದೇಶದ ಸ್ಥಿತಿಯನ್ನು ಪ್ರಬಲಗೊಳಿಸಲು ಮತ್ತು ಕಂಪನಿಗಳ ಹಾಗೂ ಅಕಾಡೆಮಿಯಾ ಗಳ ನಡುವೆ ಸಹಕಾರ ಮನೋಭಾವವನ್ನು ಹೆಚ್ಚಿಸುವುದು ಇದು ಧ್ಯೇಯ. ಜರ್ಮನ್ ಬಯೋಟೆಕ್ ದೈತ್ಯ ಸಾರ್ಟೋರಿಯಸ್ ಸ್ಟೆಡಿಮ್ ಬಯೋಟೆಕ್ ಸಧ್ಯದಲ್ಲಿ ಟಾಸ್ಟ್ರಪ್ ಎಂಬ ಕೋಪನ್ ಹ್ಯಾಗನ್ ನ ಹೊರವಲಯದಲ್ಲಿರುವ ಸ್ಥಳದಲ್ಲಿ ತನ್ನ ನಾರ್ಡಿಕ್ ಪ್ರಧಾನ ಕಚೇರಿಯನ್ನು ನಿರ್ಮಿಸುತ್ತಿದೆ. ಇಲ್ಲಿನ ಓರ್ಸಂಡ್ ಪ್ರದೇಶವು ಸ್ಕ್ಯಾಂಡಿನೋವಿಯಾದ ಜೀವ ವಿಜ್ಞಾನ ಉತ್ಪಾದನೆಯ 60%ಗೆ ಕಾರಣವಾಗಿದ್ದು, 111 ಬಯೋಟೆಕ್ ಕಂಪನಿಗಳ ಇದು ತವರೂರಾಗಿದೆ.[೯೩]
ಕ್ಲೀನ್ ಟೆಕ್
[ಬದಲಾಯಿಸಿ]ಕೋಪನ್ ಹ್ಯಾಗನ್ ಕ್ಲೀನ್ ಟೆಕ್ ಗುಂಪುಗಳ ಪೈಕಿ ಮುಖ್ಯವಾಗಿ ಗಮನಿಸಬೇಕಾದ ಗುಂಪು ಎಂದು ತನ್ನ 2008ರ ದ ಕ್ಲೀನ್ ಟೆಕ್ ರೆವಲ್ಯೂಷನ್ ಪುಸ್ತಕದಲ್ಲಿ ಕ್ಲೀನ್ ಎಡ್ಜ್ ಸೂಚಿಸಿದೆ. 46 ಸಂಶೋಧನ ಸಂಸ್ಥೆಗಳ ಮೇಲೆ ಅವಲಂಬಿತವಾಗಿರುವ ಕ್ಲೀನ್ ಟೆಕ್ ನ 300ಕ್ಕೂ ಹೆಚ್ಚು ಕಂಪನಿಗಳಿಗೆ ಈ ನಗರವು ಕೇಂದ್ರಬಿಂದುವಾಗಿದೆ. ಆ ಗುಂಪು 60,000ಕ್ಕೂ ಹೆಚ್ಚು ಜನಗಳಿಗೆ ಉದ್ಯೋಗ ನೀಡಿರುವುದು ಮತ್ತು ಇದರ ವೈಶಿಷ್ಟ್ಯವೆಂದರೆ ವಿಶ್ವವಿದ್ಯಾಲಯಗಳ, ಉದ್ಯೋಗಗಳ ಮತ್ತು ಪಾಲಿಸುವ ಸಂಸ್ಥೆಗಳ ನಡುವೆ ನಿಕಟವಾದ ಹೊಂದಾಣಿಕೆಯಿರುವಂತಹುದು. ಈ ಪ್ರದೇಶದ ಪ್ರಮುಖ ಕ್ಲೀನ್ ಟೆಕ್ ಸಂಶೋಧನ ಸಂಸ್ಥೆಗಳೆಂದರೆ ದ ಯೂನಿವರ್ಸಿಟಿ ಆಫ್ ಕೋಪನ್ ಹ್ಯಾಗನ್, ಕೋಪನ್ ಹ್ಯಾಗನ್ ಬಿಸಿನೆಸ್ ಸ್ಕೂಲ್, ರೀಸೋ DTU ನ್ಯಾಷನಲ್ ಲೆಬಾರೇಟರಿ ಫಾರ್ ಸಸ್ಟೇಯ್ನೆಬಲ್ ಎನರ್ಜಿ ಮತ್ತು ರೀಸೋವನ್ನು ಒಂದು ಭಾಗವಾಗಿ ಹೊಂದಿರುವಂತಹ ದ ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್.[೯೪]
ಸಾರಿಗೆ
[ಬದಲಾಯಿಸಿ]ವಿಶಾಲ ಕೋಪನ್ ಹ್ಯಾಗನ್ ಪ್ರದೇಶದಲ್ಲಿ ಸುವ್ಯವಸ್ಥಿತ ಸಾರಿಗೆ ಸೌಲಭ್ಯಗಳಿದ್ದು ತನ್ಮೂಲಕ ಈ ನಗರವು ಉತ್ತರ ಯೂರೋಪ್ ನ ಕೇಂದ್ರಬಿಂದುವಾಗಲು ಸಹಕಾರಿಯಾಗಿದೆ.
ರಸ್ತೆಗಳು
[ಬದಲಾಯಿಸಿ]ಕೋಪನ್ ಹ್ಯಾಗನ್ ನಲ್ಲಿ ಸುಂಕರಹಿತವಾದ ದೊಡ್ಡ ವಾಹನಪಥಗಳ ಜಾಲವಿದೆ ಮತ್ತು ನಗರದ ವಿವಿಧ ಪುರಸಭೆಗಳನ್ನು ಒಟ್ಟಿಗೆ ಸಂಪರ್ಕಿಸುವ ಹಾಗೂ ಉತ್ತರ ಯೂರೋಪನ್ನು ತಲುಪುವಂತಹ ಸಾರ್ವಜನಿಕ ರಸ್ತೆಗಳನ್ನು ಹೊಂದಿದೆ.[೯೫] ಯೂರೋಪ್ ನ ಇತರ ನಗರಗಳಂತೆಯೇ ಇಲ್ಲೂ ಸಹ ವಾಹನದಟ್ಟಣೆ ಹೆಚ್ಚುತ್ತಿದೆ. ಕೋಪನ್ ಹ್ಯಾಗನ್ ನಗರದ ಮಧ್ಯಭಾಗಕ್ಕೆ ಬರುವುದಕ್ಕೆ ಇರುವಂತಹ ವರ್ತುಲ ಪ್ರಧಾನ ರಸ್ತೆಗಳು ಗರಿಷ್ಠ ವೇಳೆಗಳಲ್ಲಿ (ಹೆಚ್ಚು ವಾಹನದಟ್ಟಣೆ ದಿನವೂ ಇರುವಂತಹ ಒಂದು ನಿರ್ದಿಷ್ಟ ಸಮಯ - ಪೀಕ್ ಅವರ್ಸ್)ಬಹಳವೇ ಸಾಂದ್ರವಾದ ವಾಹನಸಂದಣಿಯಿಂದ ಕೂಡಿರುತ್ತವೆ.[೯೬]
ಸೈಕ್ಲಿಂಗ್
[ಬದಲಾಯಿಸಿ]ಕೋಪನ್ ಹ್ಯಾಗನ್ಬೈಸಿಕಲ್-ಸವಾರಿಗೆ ಹೇಳಿ ಮಾಡಿಸಿದಂತಹ ನಗರವೆಂದು ಜಗದ್ವಿಖ್ಯಾತವಾಗಿದೆ.[೯೭] ಪ್ರತಿ ದಿನ ಕೋಪನ್ ಹ್ಯಾಗನ್ ನ ಜನರು 1.1 ಮಿಲಿಯನ್ ಕಿಲೋಮೀಟರ್ ಗಳಷ್ಟು ಸೈಕಲ್ ಸವಾರಿ ಮಾಡುತ್ತಾರೆ. ನಗರದ [೯೮] 36% ಜನರು ಉದ್ಯೋಗ, ಶಾಲೆ, ಅಥವಾ ವಿಶ್ವವಿದ್ಯಾಲಯಗಳಿಗೆ [೯೯] ಬೈಸಿಕಲ್ ನಲ್ಲೇ ಹೋಗುತ್ತಾರೆ ಮತ್ತು ಅದರ ಪುರಸಭೆಯು ಈ ಸಂಖ್ಯೆಯು ಇನ್ನೂ ವೃದ್ಧಿಸಿ 2012ರ ಹೊತ್ತಿಗೆ 40% ಮಂದಿ ಮತ್ತು 2015ರ ಹೊತ್ತಿಗೆ 50% ಮಂದಿ ಸೈಕಲ್ ಸವಾರರಿರಬೇಕೆಂಬುದಕ್ಕೆ ಅನುಕೂಲವಾದ ನೀತಿಗಳನ್ನು ಹಮ್ಮಿಕೊಳ್ಳುತ್ತಿದೆ.[೧೦೦] ನಗರದ ಬೈಸಿಕಲ್ ಪಥಗಳು ವಿಸ್ತಾರವೂ, ಚೆನ್ನಾಗಿ ಉಪಯೋಗಿಸಲ್ಪಟ್ಟವೂ ಆಗಿವೆ. ಬೈಸಿಕಲ್ ಪಥಗಳು ಮುಖ್ಯ ಸಾರಿಗೆ ಹಾದಿಗಳಿಂದ ಪ್ರತ್ಯೇಕಿಸಲ್ಪಟ್ಟಿರುತ್ತವೆ ಮತ್ತು ಕೆಲವು ಎಡೆಗಳಲ್ಲಿ ಆ ಪಥಗಳಿಗೆಂದೇ ಪ್ರತ್ಯೇಕ ಸಿಗ್ನಲ್ ವ್ಯವಸ್ಥೆಗಳೂ ಇರುತ್ತವೆ.
ಪುರಸಭೆಯು ಪರಸ್ಪರ ಸಂಪರ್ಕವಿರುವಂತಹ ಹಸಿರು ಬೈಸಿಕಲ್ ಪಥಗಳಾದ ಗ್ರೀನ್ ವೇಸ್ ಅನ್ನೂ ವೃದ್ಧಿಗೊಳಿಸುತ್ತಿದ್ದು, ವೇಗವಾಗಿ, ಸುರಕ್ಷಿತವಾಗಿ ಮತ್ತು ಹಿತಕರ ವಾತಾವರಣದಲ್ಲಿ ನಗರದ ಒಂದೆಡೆಯಿಂದ ಮತ್ತೊಂದೆಡೆಗೆ ಬೈಸಿಕಲ್ ಸವಾರಿ ಮಾಡಲು ಅನುಕೂಲ ಮಾಡಿಕೊಡುವ ಗುರಿ ಹೊಂದಿದೆ. ಈ ಪಥಜಾಲವು 100 km (62 mi)ಕ್ಕೂ ಹೆಚ್ಚು ಕ್ರಮಿಸುತ್ತದೆ ಮತ್ತು ಪೂರ್ಣಗೊಂಡಾಗ ೨೨ ಮಾರ್ಗಗಳನ್ನು ಹೊಂದಿರುತ್ತದೆ.[೧೦೦] ಈ ನಗರವು ಸಾರ್ವಜನಿಕ ಬೈಸಿಕಲ್ಲುಗಳನ್ನು ಒದಗಿಸುತ್ತದೆ; ಪಟ್ಟಣದ ಹೊರವಲಯಗಳಲ್ಲಿ ಸೈಕಲ್ಲುಗಳು ದೊರೆಯುವಂತಿದ್ದು ವಾಪಸಾತಿ ಮಾಡಲಾಗುವ 20 ಕ್ರೋನರ್ ಗಳನ್ನು ತೆರುವುದರ ಮೂಲಕ ಪಡೆಯಬಹುದಾಗಿದೆ.
ಕೋಪನ್ ಹ್ಯಾಗನ್ ನ ಸುವ್ಯವಸ್ಥಿತ ಬೈಸಿಕಲ್ ಸಂಸ್ಕೃತಿಯು, ಇತರ ನಗರಗಳಲ್ಲಿ ಕೋಪನ್-ಹ್ಯಾಗನ್ ರೀತಿಯ ಬೈಕ್ ಪಥಗಳು ಮತ್ತು ಬೈಸಿಕಲ್ ಸವಲತ್ತುಗಳನ್ನು ಒದಗಿಸಲು ಉಪಯೋಗಿಸುವಾಗ ಪದವಾದ ಕೋಪನ್ ಹ್ಯಾಗನೈಝ್ ಎಂಬುದರಲ್ಲಿ, ಬಿಂಬಿತವಾಗುತ್ತದೆ.[೧೦೧] 2007ರಲ್ಲಿ ನ್ಯೂ ಯಾರ್ಕ್ ನಗರದ ರಸ್ತೆಗಳನ್ನು ಮರು-ಕಲ್ಪನೆಯ ಮೂಲಕ ನೂತನ ವಿನ್ಯಾಸಗಳನ್ನಳವಡಿಸಿ ಪಾದಚಾರಿಗಳ ಹಾಗೂ ಸೈಕಲ್ ಸವಾರರ ಜೀವನವನ್ನು ಸುಗಮಗೊಳಿಸುವ ಸಲುವಾಗಿ ನ್ಯೂ ಯಾರ್ಕ್ ನಗರ ಸಾರಿಗೆ ಸಂಸ್ಥೆಯವರು ಕೋಪನ್ ಹ್ಯಾಗನ್ ಮೂಲದ ಡ್ಯಾನಿಷ್ ನಗರ ವಿನ್ಯಾಸ ಸಲಹೆಗಾರರಾದ ಜಾನ್ ಗೆಹ್ಲ್ ರನ್ನು ನಿಯಮಿಸಿಕೊಂಡರು.[೧೦೨] ಕೋಪನ್ ಹ್ಯಾಗನ್ ಬೈಸಿಕಲ್ ಸವಾರಿಗೆ ನೀಡುವ ಮಹತ್ವವನ್ನು ಗುರುತಿಸಿ, ಯೂನಿಯನ್ ಸೈಕ್ಲಿಸ್ಟೇ ಇಂಟರ್ನ್ಯಾಷನೇಲ್ ರವರು ಈ ನಗರವನ್ನು ತಮ್ಮ ಮೊದಲ ಅಧಿಕೃತ ಬೈಕ್ ನಗರ ವಾಗಿ ಆಯ್ಕೆ ಮಾಡಿದ್ದಾರೆ. ಬೈಕ್ ನಗರ ಕೋಪನ್ ಹ್ಯಾಗನ್ 2008ರಿಂದ 2011ರವರೆಗೂ ನಡೆಯಲಿದ್ದು ಬೃಹತ್ ಸೈಕ್ಲಿಂಗ್ ಪ್ರದರ್ಶನಗಳನ್ನು/ಕಾರ್ಯಕ್ರಮಗಳನ್ನು ಹವ್ಯಾಸಿಗಳಿಗೆ ಹಾಗೂ ವೃತ್ತಿನಿರತರಿಗೆಂದು ಏರ್ಪಡಿಸಲಾಗುತ್ತದೆ.[೯೯]
ಬಂದರು
[ಬದಲಾಯಿಸಿ]ಕೋಪನ್ ಹ್ಯಾಗನ್ ನ ಬಂದರು ತನ್ನ ಕೈಗಾರಿಕಾ ಪ್ರಾಮುಖ್ಯತೆಯನ್ನು ಬಹಳಷ್ಟು ಕಳೆದುಕೊಂಡಿದೆ. 2001ರಲ್ಲಿ ಕೋಪನ್ ಹ್ಯಾಗನ್ ಬಂದರು ಮಾಲ್ಮೋದ ಬಂದರಿನೊಡನೆ ಸಮ್ಮಿಳಿತವಾಗಿ ಕೋಪನ್ ಹ್ಯಾಗನ್-ಮಾಲ್ಮೋ ಬಂದರು ಎಂದಾಯಿತು. ಈ ಬಂದರಿನಲ್ಲಿ ಹಲವಾರು ಚಟುವಟಿಕೆಗಳಿದ್ದು, ಅದರಲ್ಲಿ ಪ್ರಮುಖವಾದುದು ಪ್ರಮುಖ ಸಮುದ್ರಯಾನ ತಾಣವಾಗಿರುವಂತಹುದು. 2007ರಲ್ಲಿ ದಾಖಲಾರ್ಹ ಪ್ರಮಾಣದ 286 ಯಾನನೌಕೆಗಳಲ್ಲಿ ಸುಮಾರು 420,000 ಜನ ಪ್ರಯಾಣಿಕರು ಕೋಪನ್ ಹ್ಯಾಗನ್ ಗೆ ಭೇಟಿಯಿತ್ತರು.ಈ ನೌಕೆಗಳ ಪೈಕಿ 120 ಕೋಪನ್ ಹ್ಯಾಗನ್ ನಿಂದಲೇ ಪ್ರಯಾಣ ಆರಂಭಿಸಿದವು ಅಥವಾ ಅಂತ್ಯಗೊಳಿಸಿದವು.[೧೦೩] 2008ರಲ್ಲಿ ಈ ಸಂಖ್ಯೆಯು 310 ಯಾನನೌಕೆಗಳು ಮತ್ತು 560,000 ಪ್ರಯಾಣಿಕರಿಗೆ ಏರಿತು.[೧೦೪] ಯಾನೋದ್ಯಮದಲ್ಲಿ ವೃದ್ದಿ ಗೋಚರವಾಗುತ್ತಿರುವುದರಿಂದ ತತ್ಸಂಬಂಧಿತವಾದ ಸವಲತ್ತುಗಳನ್ನು ವಿಸ್ತರಗೊಳಿಸಲಾಗುತ್ತಿದೆ ಹಾಗೂ ಉತ್ತಮಗೊಳಿಸಲಾಗುತ್ತಿದೆ.[೧೦೫] 2008ರ ವಿಶ್ವ ಪ್ರಯಾಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಪನ್ ಹ್ಯಾಗನ್ ಬಂದರನ್ನು ಯೂರೋಪ್ ನ ಪ್ರಥಮ ಯಾನತಾಣವೆಂದು ಸತತವಾಗಿ ಐದನೆಯ ವರ್ಷವೂ ಘೋಷಿಸಲಾಯಿತು.[೧೦೬]
ಕೋಪನ್ ಹ್ಯಾಗನ್ ದೋಣಿ (ಫೆರಿ) ಮಾರ್ಗದಲ್ಲಿ ನಾರ್ವೇಯ ಓಸ್ಲೋ (ಓಸ್ಲೋಬೇಯ್ಡನ್ ಎಂದು ಕರೆಯಲ್ಪಡುತ್ತದೆ)ಗೆ ದೈನಂದಿನ ಸೇವೆ[೧೦೭] ಸಲ್ಲಿಸುತ್ತದೆ ಮತ್ತು ಪೋಲ್ಯಾಂಡ್ ನ ಸ್ವಿನೌಜ್ ಸ್ಕೀ (Świnoujście)("ಪೋಲೆನ್ಸ್ ಫ್ಯಾರ್ಜರ್ನೆ" ಎಂದು ಕರೆಯಲ್ಪಡುತ್ತದೆ)ಗೆ ಪ್ರತಿವಾರ ಐದು ಸಂಪರ್ಕಗಳನ್ನು/ಸೇವೆಗಳನ್ನು ಒದಗಿಸುತ್ತದೆ.[೧೦೮]
ಕೋಪನ್ ಹ್ಯಾಗನ್ ನಲ್ಲಿ ನಾಲ್ಕು ಜಲಬಸ್ ಗಳಿದ್ದು ಇವನ್ನು ಕೋಪನ್ ಹ್ಯಾಗನ್ ಬಂದರು ಬಸ್ ಗಳು ಎಂದು ಹೆಸರಿಸಲಾಗಿದ್ದು, ಇವು ಹತ್ತು ಜಲ ಬಸ್ ನಿಲ್ದಾಣಗಳಿಗೆ ಸೇವೆ ಒದಗಿಸುತ್ತವೆ; ದಕ್ಷಿಣದಲ್ಲಿರುವ ಸ್ಲುಸೆಹೋಲ್ಮೆನ್ ನಿಂದ ಉತ್ತರದಲ್ಲಿರುವ ಹೋಲ್ಮೆನ್ ವರೆಗೆ, ಅಮಾಜೆರ್ ಬಂದರು ವಿಭಾಗದಲ್ಲಿ ನಾಲ್ಕು ಮತ್ತು ಝೀಲ್ಯಾಂಡ್ ಬಂದರು ವಿಭಾಗದಲ್ಲಿ ಆರು.
ವಿಮಾನ ನಿಲ್ದಾಣಗಳು
[ಬದಲಾಯಿಸಿ]ಅದು ಸ್ಕ್ಯಾಂಡಿನಾವಿಯಾದಲ್ಲೇ ಅತಿ ದೊಡ್ಡ ಹಾಗೂ ಯೂರೋಪನ್ 17ನೆಯ ದೊಡ್ಡ ನಿಲ್ದಾಣವಾಗಿದೆ.[೬] ಅಮಾಜೆರ್ ದ್ವೀಪದ ಕ್ಯಾಸ್ಟ್ರಪ್ ನಲ್ಲಿರುವ ಈ ನಿಲ್ದಾಣವು ಕೋಪನ್ ಹ್ಯಾಗನ್ ಸರಹದ್ದುಗಳಿಗೆ ಸಮರ್ಥವಾದ ಸಂಪರ್ಕಗಳನ್ನೊದಗಿಸುತ್ತಿದ್ದು, ಪ್ರತಿ ೧೫ ನಿಮಿಷಗಳಿಗೆ ಮೆಟ್ರೋ ಮೂಲಕ ಕೊಂಜೆನ್ಸ್ ನೈಟ್ರೋವ್ ಗೆ ತಲುಪುವುದು(ಹೊರಡುವ ವೇಳೆಯ ಅಂತರ 4ರಿಂದ 6 ನಿಮಿಷಗಳಷ್ಟಿದ್ದು), 12 ನಿಮಿಷಗಳಲ್ಲಿ ಸೆಂಟ್ರಲ್ ನಿಲ್ದಾಣವನ್ನು ಪ್ರಾದೇಶಿಕ ನಿಲ್ದಾಣದ ಮೂಲಕ ಹಾದು ತಲುಪುವುದು. ಅದು ಇರುವಂತಹ ಸ್ಥಳವು ದಕ್ಷಿಣ ಸ್ವೀಡನ್ ನ ಬಹುತೇಕ ಸ್ಥಳಗಳಿಗೆ ತಲುಪಲು ಮುಖ್ಯವಾದ ಅಂತರರಾಷ್ಟ್ರೀಯ ವಿಮಾನನಿಲ್ದಾಣವಾಗಿದೆ. ಓರ್ಸಂಡ್ ಸೇತುವೆ ಹಾದು ಹೋಗುವ ಟ್ರೈನ್ ಗಳು ಮಾಲ್ಮೋ ದಕ್ಷಿಣವನ್ನು 14 ನಿಮಿಷಗಳಲ್ಲಿ ಸೇರುತ್ತವೆ ಅಥವಾ ಮಾಲ್ಮೋ ಸೆಂಟ್ರಲ್ ನಿಲ್ದಾಣವನ್ನು 22 ನಿಮಿಷಗಳಲ್ಲಿ ಸೇರುತ್ತವೆ.[೧೦೯] ಸ್ಕೈಟ್ರಾಕ್ಸ್ ಕೋಪನ್ ಹ್ಯಾಗನ್ ನಿಲ್ದಾಣವನ್ನು ಜಗತ್ತಿನ ಏಳನೆಯ ಶ್ರೇಷ್ಠ ವಿಮಾನನಿಲ್ದಾಣವೆಂದೂ, ಯೂರೋಪ್ ನ ಎರಡನೆಯ ಶ್ರೇಷ್ಠದ್ದೆಂದೂ ಪರಿಗಣಿಸುತ್ತದೆ.[೧೧೦]
ಸಾರ್ವಜನಿಕ ಸಾರಿಗೆ
[ಬದಲಾಯಿಸಿ]ಸ್ಥಳೀಯ ಸಾರಿಗೆ ಕೋಪನ್ ಹ್ಯಾಗನ್ ನ ಸ್ಥಳೀಯ ಸಾರಿಗೆಯು ಹಲವಾರು ವಿಧಧ, ಆದರೆ ಸಮ್ಮಿಳಿತವಾದ, ರೈಲು ವ್ಯವಸ್ಥೆಗಳು ಹಾಗೂ ವಿವಿಧ ರೀತಿಯ ಬಸ್ ಗಳಿಂದ ಕೂಡಿದೆ. ಅಲ್ಲಿ ಕಂಡು ಬರುವ ನಾಲ್ಕು ವಿವಿಧ ರೈಲು ವ್ಯವಸ್ಥೆಗಳೆಂದರೆ:
- ರಿ-ಟಾಗ್ ಸ್ಥಳೀಯ ಟ್ರೈನ್ ಗಳು (ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತವೆ, ಕೋಪನ್ ಹ್ಯಾಗನ್ ನ ಸ್ಥಳೀಯ ವಾಹನಸಂದಣಿಯ ಪ್ರದೇಶವನ್ನು ದಾಟಿದ ನಂತರ ಅಂತರ್ಪ್ರಾದೇಶಿಕ ಟ್ರೈನುಗಳಾಗಿ ಮುಂದುವರೆಯುತ್ತವೆ)
- ಎಸ್-ಟಾಗ್ ಎಸ್-ಟ್ರೈನ್ (ನಗರದ ರೈಲು ವ್ಯವಸ್ಥೆಯಾಗಿದ್ದು, ನಿಲ್ದಾಣಗಳ ನಡುವಣ ಅಂತರ ಕಡಿಮೆ ಇರುವಂತದ್ದಾಗಿರುತ್ತದೆ)
- ಕೋಪನ್ ಹ್ಯಾಗನ್ ಮೆಟ್ರೋ(ಮತ್ತಷ್ಟು ಅಭಿವೃದ್ಧಿಗೊಳ್ಳುವ ಹಂತದಲ್ಲಿದೆ, ಈ ಹೊಸ ವೃತ್ತದ ಸಾಲಿನ ಒಂದು ಭಾಗವು 2014ರಲ್ಲಿ ತೆರೆಯಲ್ಪಡುತ್ತದೆ ಮತ್ತು 2018ರ ವೇಳೆಗೆ ವೃತ್ತಸಾಲು ಸಂಪೂರ್ಣಗೊಳ್ಳುತ್ತದೆ)
- ಮೆಟ್ರೋಪಾಲಿಟನ್ ಪ್ರದೇಶದ ಹೊರವಲಯದಲ್ಲಿ ಸ್ಥಳೀಯ ಟ್ರೈನ್ ಗಳು.(ಆಧುನಿಕ, ಆದರೆ ಡೀಸೆಲ್ ಅಥವಾ ನೈಸರ್ಗಿಕ ಅನಿಲದಿಂದ ಚಾಲನಗೊಳಿಸುವಂತಹವು)
ಒಟ್ಟು 193 ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಬಹುತೇಕ ನಿಲ್ದಾಣಗಳು ಹೊಂದಾಣಿಕೆಯಾಗುವ ಬಸ್ ಸೇವಾ ಸಂಪರ್ಕ ಹೊಂದಿವೆ. ಈ ಲಿಂಕ್ ಎಲ್ಲಾ ಪಥಗಳನ್ನೂ, ನಿಲ್ದಾಣಗಳನ್ನೂ ಮತ್ತು ದರದ ವಲಯಗಳನ್ನೂ ತೋರಿಸುತ್ತದೆ.
ಟಿಕೆಟ್ ಗಳು . ಕೋಪನ್ ಹ್ಯಾಗನ್ ವಾಹನಸಾಂದ್ರ ಪ್ರದೇಶವನ್ನು 95 ವಲಯಗಳಾಗಿ ವಿಂಗಡಿಸಲಾಗಿದೆ. 1,2 ಮತ್ತು 3ನೆಯ ವಲಯಗಳು ಕೋಪನ್ ಹ್ಯಾಗನ್ ನ ಒಳ ನಗರಪ್ರದೇಶಕ್ಕೆ ಸಮನಾಗಿವೆ. ಟಿಕೆಟ್ ಮೆಷಿನ್ ಗಳು ಎಲ್ಲಾ ನಿಲ್ದಾಣಗಳಲ್ಲೂ ಇರುತ್ತವೆ ಮತ್ತು ಟಿಕೆಟ್ ಗಳನ್ನು ಬಸ್ ಗಳಲ್ಲೂ ಕೊಳ್ಳಬಹುದು ಮತ್ತು ಪ್ರಮುಖ ನಿಲ್ದಾಣಗಳಲ್ಲಿ ವೈಯಕ್ತಿಕವಾಗಿಯೂ ಪಡೆಯಬಹುದು. ಕೋಪನ್ ಹ್ಯಾಗನ್ ನ ಸ್ಥಳೀಯ ವಾಹನಸಂಚಾರ ಪ್ರದೇಶದ ಒಳಗೆ ಟಿಕೆಟ್ ದರವು ಯಾವಾಗಲೂ ಎರಡರಿಂದ ಒಂಬತ್ತು ವಲಯಗಳ ಮಧ್ಯೆ ಇರುತ್ತದೆ(ಒಂಬತ್ತು ವಲಯಗಳ ಟಿಕೆಟ್ ಕೊಂಡರೆ ಎಲ್ಲಾ ವಲಯಗಳಿಗೂ ಹೋಗಬಹುದು). ಈಗಿನ (2009) ದರ ಪ್ರತಿ ವಲಯಕ್ಕೆ 10.50 DKK. ದರ ರಿಯಾಯಿತಿಯ ಹಲವಾರು ವ್ಯವಸ್ಥೆಗಳಿದ್ದು, 24 ಗಂಟೆಗಳ ಪ್ರವಾಸ ಕಾರ್ಡ್ ಅಂತಹದೊಂದು ವ್ಯವಸ್ಥೆ.
ಪಥಬದಲಾವಣೆಗಾಗಿ ಹಳಿಯಿಂದ ಹಳಿಗೆ ಬದಲಾಯಿಸಿಕೊಳ್ಳುವ ಸಲುವಾಗಿ ರೈಲುಗಳಿಗೆ ಅಗತ್ಯವಾದ ಕೂಡುನಿಲ್ದಾಣಗಳೆಂದರೆ(ರೈಲ್ವೇ ಜಂಕ್ಷನ್) ನೋರ್ರೆಪೋರ್ಟ್, ವಾಲ್ಬೈ, ಡ್ಯಾಂಶೋಜ್, ಕ್ಯಾಸ್ಟ್ರಪ್ ವಿಮಾನ ನಿಲ್ದಾಣ, Ny ಎಲ್ಲೆಬ್ಜೆರ್ಗ್, ಹೆಲ್ಲೆರಪ್, ಓಸ್ಟೆಪೋರ್ಟ್, ರೈವ್ಯಾಂಜೆನ್, ಓರ್ಸ್ಟಾಡೆನ್, ಫ್ಲಿಂಟ್ ಹೋಮ್, ಮತ್ತು ಕೋಬೆನ್ ಹ್ಯಾವ್ನ್ H ಕೋಪನ್ ಹ್ಯಾಗನ್ ಸೆಂಟ್ರಲ್ ಸ್ಟೇಷನ್. ಕೋಪನ್ ಹ್ಯಾಗನ್ ಸೆಂಟ್ರಲ್ ಸ್ಟೇಷನ್ ಕೋಪನ್ ಹ್ಯಾಗನ್ ಸ್ಥಳೀಯ ಸಂಚಾರ ಪ್ರದೇಶದಿಂದ ಹೊರಭಾಗಗಳಲ್ಲಿರುವ ನಿಲ್ದಾಣಗಳಿಗೆ ಹೋಗುವ ಟ್ರೈನ್ ಗಳಿಗೆ ಕೇಂದ್ರಸ್ಥಾನವಾಗಿದ್ದು, ಸ್ಥಳೀಯ ಸಂಚಾರಗಳಿಗೆ ಇದು ಕೇಂದ್ರಬಿಂದುವಲ್ಲ.
ಡ್ಯಾನಿಷ್ ಮತ್ತು ಅಂತರರಾಷ್ಟ್ರೀಯ ಟ್ರೈನ್ ಗಳು
ಕೋಪನ್ ಹ್ಯಾಗನ್ ಸೆಂಟ್ರಲ್ ಸ್ಟೇಷನ್ ಡೆನ್ಮಾರ್ಕ್ ನ ಉದ್ದಗಲ ಸಂಚರಿಸಲು ಕೋಪನ್ ಹ್ಯಾಗನ್ ಗೆ ಅಂತರ್ನಗರ ಮತ್ತು ಎಕ್ಸ್ ಪ್ರೆಸ್ ಟ್ರೈನ್ ಗಳ ಸೌಲಭ್ಯ ಮತ್ತು ಹಲವಾರು ಅಂತರರಾಷ್ಟ್ರೀಯ ತಾಣಗಳಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸಿದೆ. ಹ್ಯಾಂಬರ್ಗ್ ನತ್ತ ಚಲಿಸುವ ಟ್ರೈನ್ ಸಂಚಾರಸಾಂದ್ರತೆ ದಿನವೂ ಬಹಳವೇ ಇರುತ್ತದೆ ಮತ್ತು ಇತರ ದೂರದ ತಾಣಗಳಿಗೂ ದಿನವೂ ಅಂತರರಾಷ್ಟ್ರೀಯ ಟ್ರೈನ್ ಗಳ ಮೂಲಕ ತಲುಪುವುದು ಸಾಧ್ಯವಾಗುತ್ತದೆ. ಪ್ರತಿ 20 ನಿಮಿಷಕ್ಕೆ ದಕ್ಷಿಣ ಮತ್ತು ಪಶ್ಚಿಮ ಸ್ವೀಡನ್ ಗೆ ಟ್ರೈನ್ ಗಳಿವೆ. (ಸ್ವೀಡನ್ ನ ದಕ್ಷಿಣದ ತುತ್ತತುದಿಯಲ್ಲಿನ ಸ್ಕೇನ್ ಕೌಂಟಿಗೆ ಕೋಪನ್ ಹ್ಯಾಗನ್ ಸ್ಥಳೀಯ ಸಾರಿಗೆ ಪ್ರದೇಶದಿಂದ ಹೋಗಿಬರಲು ವಿಶೇಷ ಟಿಕೆಟ್ ದರದ ವ್ಯವಸ್ಥೆ ಇದೆ.)
ಪರಿಸರ
[ಬದಲಾಯಿಸಿ]ಕೋಪನ್ ಹ್ಯಾಗನ್ ಜಗತ್ತಿನ ಅತ್ಯಂತ ಪರಿಸರಸ್ನೇಹಿ ನಗರಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.[೧೧೧] ನಗರದ ಯಶಸ್ಸಿನ ಬಹವಂಶಕ್ಕೆ ಕಾರಣ ಪುರಸಭೆಯ ಕಟ್ಟುನಿಟ್ಟಾದ ನೀತಿ-ನಿಯಮಗಳು ಮತ್ತು ತತ್ಪೂರಕವಾದ ರಾಷ್ಟ್ರೀಯ ನೀತಿ-ನಿಯಮಗಳು ಆಗಿದ್ದು, 1971ರಲ್ಲಿ ಡೆನ್ಮಾರ್ಕ್ ಒಂದು ಪರಿಸರ ಸಚಿವಸಂಪುಟವನ್ನು ಸ್ಥಾಪಿಸಿತು ಮತ್ತು 1973ರಲ್ಲಿ ಪರಿಸರ ಕಾಯಿದೆಯನ್ನು ಅನುಷ್ಠಾನಕ್ಕೆ ತಂದ ಜಗದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2006ರಲ್ಲಿ ಕೋಪನ್ ಹ್ಯಾಗನ್ ಪುರಸಭೆಯು ಯೂರೋಪಿಯನ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಪ್ರಶಸ್ತಿ ಯನ್ನು ಪಡೆಯಿತು.[೧೧೨] ಈ ಪ್ರಶಸ್ತಿಯನ್ನು ದೀರ್ಘಕಾಲಿಕ ಸರ್ವತೋಮುಖ ಪರಿಸರ ಯೋಜನೆಗಾಗಿ ನೀಡಲಾಯಿತು. ಅದರ ಪುರಸಭೆಯು ಕಾರ್ಬನ್ ಡೈಯಾಕ್ಸ್ಐಡ್ ಉಗುಳುವಿಕೆಯನ್ನು 2015ರ ವೇಳೆಗೆ 20% ಕಡಿಮೆ ಮಾಡುವ ನಿಯಮಾವಳಿಗಳನ್ನು ಹೊಂದಿದೆ.[೧೧೩] 2001ರಲ್ಲಿ ಒಂದು ಬೃಹತ್ ತೀರದಾಚೆಯ ವಾಯು ಶಕ್ತ್ಯೋತ್ಪಾದಕ(ವಿಂಡ್ ಫಾರ್ಮ್)ವನ್ನು ಕೋಪನ್ ಹ್ಯಾಗನ್ ನ ತೀರದ ಸಮೀಪದ ಮಿಡಲ್ ಗ್ರಂಡನ್ ನಲ್ಲಿ ನಿರ್ಮಿಸಲಾಯಿತು. ನಗರಕ್ಕೆ ಬೇಕಾದ ವಿದ್ಯುತ್ ಶಕ್ತಿಯ 4% ಅನ್ನು ಇದು ಉತ್ಪಾದಿಸುತ್ತದೆ.[೧೧೪]
ಬಚ್ಚಲುನೀರಿನ ಸಂಸ್ಕರಣಕ್ಕಾಗಿ ಹಲವಾರು ವರ್ಷಗಳು ಬೃಹತ್ ಪ್ರಮಾಣದ ವೆಚ್ಚ ಮಾಡಿದುದರ ಪರಿಣಾಮವಾಗಿ ತೀರಗಳಲ್ಲಿನ ನೀರಿನ ಗುಣಮಟ್ಟವು, ವಿಶೇಷವಾಗಿ ಒಳತೀರದಲ್ಲಿನ ನೀರು, ಈಜಿ ಹೊಡೆಯಲು ಯೋಗ್ಯವಾದ ಮಟ್ಟಕ್ಕೆ ತಿಳಿಯಾಗಿದೆ ಮತ್ತು ಈ ಬಾಬ್ತಿಗೆಂದೇ ಹಲವಾರು ಕಡೆಗಳಲ್ಲಿ ಸವಲತ್ತುಗಳನ್ನು ನೀಡಲಾಗಿದೆ.[೧೧೫]
ಮತ್ತೊಂದು ಪುರಸಭಾ ನೀತಿಯೆಂದರೆ 2012ರ ವೇಳೆಗೆ ನಾಗರಿಕರಲ್ಲಿ 40% ಮಂದಿ ತಮ್ಮ ಕಾರ್ಯಾಗಾರಗಳಿಗೆ ಹೋಗಿಬರಲು ಸೈಕಲ್ ಉಪಯೋಗಿಸಲೇಬೇಕು ಎಂಬುದಾಗಿತ್ತು ಇದನ್ನು ಅನುಷ್ಠಾನಕ್ಕೆ ತರುವ ವಿಷಯವಾಗಿ ಹಲವಾರು ವಿಶೇಷ ವಿಧಿಗಳನ್ನು ಹವಣಿಸಿಕೊಳ್ಳಲಾಗುತ್ತಿದೆ("ಬೈಸಿಕ್ಲಿಂಗ್ ಎಬೋವ್" ನೋಡಿರಿ).[೧೧೬]
ಸಾವಯವ ಅಹಾರದ ಮೇಲೆ ಅತಿ ದೊಡ್ಡ ಪ್ರಮಾಣದ ಬಂಡವಾಳದ ಪಾಲು ಹೊಂದಿರುವ ಜಗತ್ತಿನ ರಾಜಧಾನಿ ಕೋಪನ್ ಹ್ಯಾಗನ್. ಕೋಪನ್ ಹ್ಯಾಗನ್ ನಲ್ಲಿ ಪ್ರತಿ ಹತ್ತು ಕೊಳ್ಳುವಿಕೆಯಲ್ಲಿ ಒಂದು ಸಾವಯವ ವಸ್ತು ಇದ್ದೇ ಇರುತ್ತದೆ.[೧೧೭] ಕೋಪನ್ ಹ್ಯಾಗನ್ ನ ಪುರಸಭಾ ವಿಭಾಗದೊಳ ಭಾಗದಲ್ಲಿ 45% ಆಹಾರಸೇವನೆಯು ಸಸ್ಯಾಹಾರವಾದರೂ, ಈ ಪ್ರತಿಶತವು ಇನ್ನೂ ಗಣನೀಯವಾಗಿ ಹೆಚ್ಚಬೇಕೆಂಬ ಗುರಿ ಇದೆ. ಪರಿಸರ ಯೋಜನೆಯಾದ "ಎನ್ವಿರಾನ್ಮೆಂಟ್ ಮೆಟ್ರೋಪೊಲೀಸ್: ಅವರ್ ವಿಷನ್ 2015" ಮೂಲಕ 2015ರ ಹೊತ್ತಿಗೆ ಕೋಪನ್ ಹ್ಯಾಗನ್ ನ ಎಲ್ಲಾ ವೃದ್ಧಾಲಯಗಳಲ್ಲಿಯೂ ಕೇವಲ ಸಸ್ಯಾಹಾರವನ್ನೇ ನೀಡುವಂತಾಗಬೇಕೆಂದೂ, ಅಂತೆಯೇ ಮಕ್ಕಳಿಗೆ ಹಾಗೂ ಯುವಕರಿಗೆಂದೇ ನಡೆಸಲ್ಪಡುವ ನಿವಾಸಗಳಲ್ಲಿಯೂ ಸಸ್ಯಾಹಾರವೇ ನೀಡಲ್ಪಡಬೇಕೆಂದೂ ಅಲ್ಲಿನ ರಾಜಕಾರಣಿಗಳ ಇಚ್ಛೆಯಾಗಿದೆ.[೧೧೭]
ಅಂತರರಾಷ್ಟ್ರೀಯ ಶ್ರೇಣೀಕರಣ
[ಬದಲಾಯಿಸಿ]ಹಲವಾರು ಅಂತರರಾಷ್ಟ್ರೀಯ ಶ್ರೇಣೀಕರಣಗಳಲ್ಲಿ ಕೋಪನ್ ಹ್ಯಾಗನ್ ಸುಸ್ಥಾನದಲ್ಲಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
- ಇದು ಜಗತ್ತಿನ ಅತ್ಯಂತ ಜೀವಿಸಲರ್ಹವಾದ ನಗರ ಎಂದು ಅಂತರರಾಷ್ಟ್ರೀಯ ಲೈಫ್ ಸ್ಟೈಲ್ ಪತ್ರಿಕೆಯಾದ ಮಾನೋಕಲ್ ತಯಾರಿಸಿದ ಜೀವನ ಸಾಗಿಸಲು ಅತ್ಯುತ್ತಮವಾದ ಜಗತ್ತಿನ ಮೊದಲ 25 ನಗರಗಳು 2008 ರ ಪಟ್ಟಿಯಲ್ಲಿ ಜಗದಲ್ಲೇ ಬದುಕಲು ಅತ್ಯಂತ ಉತ್ತಮವಾದ ನಗರ ಗಳಲ್ಲಿ ಇದೇ ಅಗ್ರಗಣ್ಯವೆಂದು ಸಾರಿತು.[೧೧೮]
- ಜಗತ್ತಿನ ಅತ್ಯುತ್ತಮ ವಿನ್ಯಾಸ ನಗರಿ 2008 ಸಹ ಮಾನೋಕಲ್ ನಿಂದಲೇ.[೧೧೮]
- 2008ರಲ್ಲಿ ಫಿನಾನ್ಷಿಯಲ್ ಟೈಮ್ಸ್ ಮಾಲಿಕತ್ವದ FDI ಪತ್ರಿಕೆಯು ತಯಾರಿಸಿದ ಭವಿಷ್ಯದ ಮೊದಲ 50 ಯೂರೋಪಿಯನ್ ನಗರಗಳು ಎಂಬ ಪಟ್ಟಿಯಲ್ಲಿ, ಲಂಡನ್, ಪ್ಯಾರಿಸ್ ಮತ್ತು ಬರ್ಲಿನ್ ನ ನಂತರ, ಕಫಪನ್ ಹ್ಯಾಗನ್ ನಾಲ್ಕನೆಯ ಸ್ಥಾನವನ್ನು ಪಡೆಯಿತು.[೭೭] 2006/07ರಲ್ಲಿ FDi ಪತ್ರಿಕೆಯು ಕೋಪನ್ ಹ್ಯಾಗನ್ ಭವಿಷ್ಯದ ಸ್ಕ್ಯಾಂಡಿನೇವಿಯನ್ ನಗರ [೭೮] ೆಂದು ಕರೆಯಿತು ಮತ್ತು 2004/05ರಲ್ಲಿ ಭವಿಷ್ಯದ ಉತ್ತರ ಯೂರೋಪ್ ನ ನಗರ ವೆಂದು ಘೋಷಿತವಾಗಿ, ಈ ಬಾಬ್ತಿನಲ್ಲಿ ಸ್ಕ್ಯಾಂಡಿನೇವಿಯ, ಯುಕೆ, ಐರ್ಲೆಂಡ್ ಮತ್ತು ಬೆನೆಲಕ್ಸ್ ಗಳನ್ನು ಹಿಂದಿಕ್ಕಿತು.[೭೯]
- 2008ರ ಜಗದಾದ್ಯಂತ ಇರುವ ವಾಣಿಜ್ಯ ಕೇಂದ್ರಗಳ ಸೂಚಿ ಯು ಮಾಸ್ಟರ್ ಕಾರ್ಡ್ ರವರಿಂದ ಪ್ರಕಟವಾಗಿದ್ದು, ಕೋಪನ್ ಹ್ಯಾಗನ್ ಜಗದ 14ನೆಯ ನಗರ ಹಾಗೂ ಸ್ಕ್ಯಾಂಡಿನೇವಿಯಾದ ಮೊದಲ ನಗರವೆಂದು ಶ್ರೇಣೀಕೃತವಾಯಿತು.[೮೦]
- 2008ರ ದ 2008 ಗ್ಲೋಬಲ್ ಸಿಟೀಸ್ ಇಂಡೆಕ್ಸ್ ನಲ್ಲಿ ಕೋಪನ್ ಹ್ಯಾಗನ್ ಜಗದ 36ನೆಯ, ಯೂರೋಪ್ ನ 15ನೆಯ ಹಾಗೂ ಸ್ಕ್ಯಾಂಡಿನೇವಿಯಾದ 2ನೆಯ ಶ್ರೇಣಿಯಲ್ಲಿ ರಾರಾಜಿಸಿತು.[೧೧೯]
- ಪ್ರಧಾನ ಕಚೇರಿಗಳನ್ನು ಆಕರ್ಷಿಸುವ ನಗರಗಳ ಪಟ್ಟಿಯಲ್ಲಿ ಕೋಪನ್ ಹ್ಯಾಗನ್ ಪಶ್ಚಿಮ ಯೂರೋಪ್ ನಲ್ಲಿ ಮೂರನೆಯ ಮತ್ತು ನಾರ್ಡಿಕ್ ದೇಶಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.[೧೨೦]
- ECA ಇಂಟರ್ನ್ಯಾಷನಲ್ ರವರು ಯೂರೋಪಿಯನ್ ತಜ್ಞರನ್ನು 'ನೀವು ಜಗದ ಯಾವ ಸ್ಥಳದಲ್ಲಿ ಇರಲು ಬಯಸುತ್ತೀರಿ?' ಎಂದು ನಡೆಸಿದ ಲೊಕೇಷನ್ ರಾಂಕಿಂಗ್ ಸರ್ವೇ (ಸ್ಥಳ ಶ್ರೇಣೀಕರಣ ಸಮೀಕ್ಷೆ)ಯಲ್ಲಿ ಒಟ್ಟು 254 ಸ್ಥಳಗಳ ಪೈಕಿ ಕೋಪನ್ ಹ್ಯಾಗನ್ ಜನರ ಮೊದಲ ಆಯ್ಕೆಯಾಯಿತು.[೧೨೧]
- ಗ್ರಿಸ್ಟ್ ಪತ್ರಿಕೆಯು 2007ರಲ್ಲಿ ತಯಾರಿಸಿದ "15 ಹಸಿರು ನಗರಗಳು" ಪಟ್ಟಿಯಲ್ಲಿ 6ನೆಯ ಕ್ರಮಾಂಕದಲ್ಲಿ ಮೆರೆದ ಕೋಪನ್ ಹ್ಯಾಗನ್ ಗ್ರಿಸ್ಟ್ ಪತ್ರಿಕೆ ಯೇ ಉಲ್ಲೇಖಿಸಿದಂತೆ ಸ್ಕ್ಯಾಂಡಿನೇವಿಯಾದ ಅತ್ಯಂತ ಹಸಿರಾದ ರಾಜಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ[೧೨೨] .
- ಸಾವಯವ ಅಹಾರ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಪ್ರಮಾಣದ ಪಾಲನ್ನು ಹೊಂದಿರುವ ಜಗತ್ತಿನ ರಾಜಧಾನಿ ಈ ನಗರ. ಕೋಪನ್ ಹ್ಯಾಗನ್ ನಲ್ಲಿ ಪ್ರತಿ ಹತ್ತು ಕೊಳ್ಳುವಿಕೆಯಲ್ಲಿ ಒಂದು ಸಾವಯವ ವಸ್ತು ಇದ್ದೇ ಇರುತ್ತದೆ.[೧೨೩]
- ಉದ್ಯಮತಜ್ಞರು ಕೋಪನ್ ಹ್ಯಾಗನ್ ನ ಮೆಟ್ರೋವು ಜಗತ್ತಿನ ಶ್ರೇಷ್ಠ ಮೆಟ್ರೋ ಎಂದು ಹೆಸರಿಸಿದ್ದಾರೆ.[೧೨೪]
- ಫೋರ್ಬ್ಸ್ ಪಟ್ಟಿಯ ಪ್ರಕಾರ ಅದು ದುಬಾರಿ ನಗರಗಳ ಕ್ರಮಾಂಕದಲ್ಲಿ ಜಗತ್ತಿನ 7ನೆಯ ಮತ್ತು ಯೂರೋಪ್ ನ 3ನೆಯ ನಗರವಾಗಿದೆ.[೧೨೫]
- ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಸೂಕ್ತವಾದ ನಗರಗಳ ಪೈಕಿ ಇದು 7ನೆಯ ಸ್ಥಾನದಲ್ಲಿದೆ.[೧೨೬]
- ಪಶ್ಚಿಮ ಯೂರೋಪ್ ನಲ್ಲಿ, ಲಂಡನ್ ಮತ್ತು ಪ್ಯಾರಿಸ್ ನ ಹೊರತಾಗಿ, ಪ್ರಾದೇಶಿಕ ಕೇಂದ್ರ ಕಚೇರಿಗಳನ್ನು ಮತ್ತು ವಿತರಣಾ ಕೇಂದ್ರಗಳನ್ನು ಆಕರ್ಷಿಸುವಲ್ಲಿ ಇದು 3ನೆಯ ಕ್ರಮಾಂಕದಲ್ಲಿದೆ.[೮೧]
- ಜಾಗತಿಕ ಸಂಪಾದನೆಯ ಶ್ರೇಣಿ ಯಲ್ಲಿ ಇದು ಪ್ರಥಮ ಸ್ಥಾನದಲ್ಲಿದೆ.[೧೨೭]
- ಅಂತರರಾಷ್ಟ್ರೀಯ ಒಕ್ಕೂಟಗಳು ಮತ್ತು ಸಮ್ಮೇಳನಗಳಿಗೆ ಜಾಗತಿಕ ಮಟ್ಟದಲ್ಲಿ ಬಹಳ ಜನಪ್ರಿಯತೆ ಪಡೆದ ನಗರಗಳ ಪೈಕಿ ಇದು 5ನೆಯದು.[೧೨೮]
- ಯೂರೋಪ್ ನ ವಾಸಿಸಲು ಮತ್ತು ಉದ್ಯೋಗ ಮಾಡಲು ಅತ್ಯಂತ ಆಕರ್ಷಕ ನಗರಗಳಲ್ಲಿ ಇದೂ ಒಂದು.[೧೨೯]
- ಮರ್ಸರ್ಸ್ ಕ್ವಾಲಿಟಿ ಆಫ್ ಲಿವಿಂಗ್ ಗ್ಲೋಬಲ್ ಸಿಟಿ ರಾಂಕಿಂಗ್ಸ್ 2009 ಪಟ್ಟಿಯಲ್ಲಿ ಇದು 11ನೆಯ ಸ್ಥಾನವನ್ನು ಪಡೆದಿದೆ.[೧೩೦]
- ಲೋನ್ಲಿ ಪ್ಲಾನೆಟ್ ಕೋಪನ್ ಹ್ಯಾಗನ್ ಸ್ಕ್ಯಾಂಡಿನೇವಿಯಾದ ಬಲು ತಂಪಾದ ರಾಜಧಾನಿಯೆಂದು ಪಟ್ಟವಿತ್ತಿದೆ.[ಸೂಕ್ತ ಉಲ್ಲೇಖನ ಬೇಕು]
- ಕೋಪನ್ ಹ್ಯಾಗನ್ ಅತ್ಯಂತ ಸ್ವಚ್ಛವಾದ ನಗರವೆಂದು ಪ್ರವಾಸಿಗರು ಅಭಿಪ್ರಾಯ ಚಲಾಯಿಸಿದ್ದಾರೆ.[೧೩೧]
ಅಂತರಾಷ್ಟ್ರೀಯ ಸಂಬಂಧಗಳು
[ಬದಲಾಯಿಸಿ]ಸಹಭಾಗಿತ್ವಗಳು
[ಬದಲಾಯಿಸಿ]ಕೋಪನ್ ಹ್ಯಾಗನ್ ಗೆ ಅಧಿಕೃತ ಸಹೋದರಿ ನಗರಗಳು ಇಲ್ಲವಾದರೂ, ಕೆಲವು ವಿಶೇಷ ವಿಷಯಗಳಲ್ಲಿ ಜಗತ್ತಿನ ಇತರ ನಗರಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ:
- ಫ್ರಾನ್ಸ್ ನಲ್ಲಿರುವ ಪ್ಯಾರಿಸ್ (ಪಾಲುದಾರ ನಗರ)
- ಝೆಕ್ ರಿಪಬ್ಲಿಕ್ ನಲ್ಲಿರುವ ಪ್ರೇಗ್ (ಪಾಲುದಾರ ನಗರ)
- ಐಸ್ ಲ್ಯಾಂಡ್ ನಲ್ಲಿನ ರೀಕ್ ಜಾವಿಕ್ (ಪಾಲುದಾರ ನಗರ)
- ಜರ್ಮನಿಯಲ್ಲಿನ ಬರ್ಲಿನ್ (ಪಾಲುದಾರ ನಗರ)
- ಫ್ರಾನ್ಸ್ ನ ಮಾರ್ಸೀಲೆ (ಪಾಲುದಾರ ನಗರ)
ಇವನ್ನೂ ಗಮನಿಸಿ
[ಬದಲಾಯಿಸಿ]- ಕೋಪನ್ ಹ್ಯಾಗನ್ ವಾತಾವರಣ ಸಂಪುಟ
- ಯೂರೋವಿಷನ್ ಗಾಯನ ಸ್ಪರ್ಧೆ 2001
- ಕಿರಿಯರ ಯೂರೋವಿಷನ್ ಗಾಯನ ಸ್ಪರ್ಧೆ 2003
- MTV ಯೂರೋಪ್ ಗಾಯನ ಪ್ರಶಸ್ತಿಗಳು 2006
- ಓರ್ಸಂಡ್ ಪ್ರದೇಶ
- ಬಾಲ್ಟಿಕ್ ಸಮುದ್ರದ ಬಂದರುಗಳು
- ಡೆನ್ಮಾರ್ಕ್ ನಲ್ಲಿ ಸಾರಿಗೆ
- ಕೋಪನ್ ಹ್ಯಾಗನ್ ನಲ್ಲಿ ಜರುಗಿದ 2009ರ ಯುನೈಟೆಡ್ ಸ್ಟೇಟ್ಸ್ ಕ್ಲೈಮೇಟ್ ಚೇಂಜ್ ಕಾಂಫೆರೆನ್ಸ್
ಆಕರಗಳು
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ "Region Hovedstaden" (in Danish). Region Hovedstaden. Retrieved 2008-11-12.
{{cite web}}
: CS1 maint: unrecognized language (link) - ↑ "General facts on The Øresund Region". Oresundsregionen.org. Archived from the original on 2009-06-14. Retrieved 2009-05-05.
- ↑ ಹಾಗೂ/ˈkoʊpənhɑːɡən, ˈkoʊpənˈheɪɡən, koʊpənˈhɑːɡən/
- ↑ ಹಾಗೂ[kʰøb̥m̩ˈhaʊ̯ˀn]
- ↑ ಟಾಪ್ ೧೫೦ ಸಿಟಿ ಡೆಸ್ಟಿನೇಷನ್ಸ್ : ಲಂಡನ್ ಲೀಡ್ಸ್ ದ ವೇ
- ↑ ೬.೦ ೬.೧ "Copenhagen Airport". waymarking.com. Retrieved 2009-01-06.
- ↑ "Copenhagen Region Ranks 3rd in Western Europe for Attracting Head Offices". Ministry of Foreign Affairs of Denmark. 2009-01-06. Archived from the original on 2008-09-24. Retrieved 2009-07-24.
- ↑ "A great place to live". Ministry of Foreign Affairs of Denmark. Archived from the original on 2008-03-23. Retrieved 2009-01-06.
- ↑ ೯.೦ ೯.೧ "Copenhagen is Scandinavia's most desirable city". International Herald Tribune. Archived from the original on 2007-06-25. Retrieved 2009-01-09.
- ↑ "Europe's 10 Best Places To Live". Forbes. Retrieved 2009-01-06.
- ↑ "Cool Boom Towns". Spiegel Special. Retrieved 2009-01-06.
- ↑ "Copenhagen is Scandinavia's most desirable city". International Harald Tribune. Archived from the original on 2007-06-25. Retrieved 2009-01-06.
- ↑ "Arkæologer graver ny teori om København op af mulden (ಪ್ರಾಚ್ಯವಸ್ತುಶೋಧಕರು ತಮ್ಮ ಉತ್ಖನನಗಳಿಂದ ಕೋಪನ್ ಹ್ಯಾಗನ್ ಬಗ್ಗೆ ಹೊಸ ಸಿದ್ಧಾಂತಗಳನ್ನು ರೂಪಿಸುತ್ತಾರೆ), Videnskab.dk, 5 ನವೆಂಬರ್ 2008". Archived from the original on 2010-07-01. Retrieved 2010-08-06.
- ↑ ಬಯಾಗ್ರಫಿ ಆಫ್ ಜಾರ್ಜ್ ಡಿ ಹೆವೆಸಿ
- ↑ ೧೫.೦ ೧೫.೧ ೧೫.೨ "Battle of Copenhagen, April 2, 1801. Prelude « Age Of Sail". ageofsail.wordpress.com. Retrieved 2010-01-12.
- ↑ "History of THE NAPOLEONIC WARS". www.historyworld.net. Retrieved 2010-01-12.
- ↑ "Napoleonic War: Battle of Copenhagen 1801". www.historyofwar.org. Retrieved 2010-01-12.
- ↑ ೧೮.೦ ೧೮.೧ ೧೮.೨ ೧೮.೩ ೧೮.೪ "History of NAPOLEON BONAPARTE". www.historyworld.net. Retrieved 2010-01-12.
- ↑ ಡ್ಯೂಡ್ಲಿ ಪೋಪ್, ದ ಗ್ರೇಟ್ ಗ್ಯಾಂಬಲ್: ನೆಲ್ಸನ್ ಎಟ್ ಕೋಪನ್ ಹ್ಯಾಗನ್ (1972)
- ↑ ೨೦.೦ ೨೦.೧ ೨೦.೨ "Copenhagen's second battle remembered - 200 years on - Times Online". timesonline.co.uk. Archived from the original on 2010-05-29. Retrieved 2010-01-13.
- ↑ ದ ಬ್ಯಾಟಲ್ ಆಫ್ ಕೋಪನ್ ಹ್ಯಾಗನ್
- ↑ ಟಾಮ್ ಪೊಕಾಕ್, ಹೊರಾಷಿಯೋ ನೆಲ್ಸನ್ , ಪಿಮ್ಲಿಕೋ (1987), ಪುಟ 229
- ↑ ೨೩.೦ ೨೩.೧ ೨೩.೨ ೨೩.೩ "[History] The "Battle" of Copenhagen - 1807 - Total War Center Forums". www.twcenter.net. Retrieved 2010-01-12.
- ↑ ಸ್ಮಿತ್, ಡಿ. ದ ಗ್ರೀನ್ ಹಿಲ್ ನೆಪೋಲಿಯಾನಿಕ್ ವಾರ್ಸ್ ಡಾಟಾ ಬುಕ್ . ಗ್ರೀನ್ ಹಿಲ್ಸ್ ಬುಕ್ಸ್, 1998, ಪುಟ ೨೦೪
- ↑ ವೆಂಡಿ ಹೈಂಡ್, ಜಾರ್ಜ್ ಕ್ಯಾನಿಂಗ್ (ಪರ್ನೆಲ್ ಬುಕ್ಸ್ ಸರ್ವೀಸಸ್, 1973), ಪುಟ 168.
- ↑ "Københavns bydele". Københavns Kommune. Archived from the original on 2009-05-10. Retrieved 2009-05-03.
- ↑ ೨೭.೦ ೨೭.೧ ೨೭.೨ ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್, ಟೇಬಲ್ BEF1A07: ಪಾಪ್ಯುಲೇಷನ್ 1 ಜನವರಿ ಬೈ ರೀಜನ್, ಏಜ್, ಸೆಕ್ಸ್, ಮರೈಟಲ್ ಸ್ಟೇಟಸ್ ಪುನಃಸ್ಥಾಪನೆ 2008-03-26.
- ↑ ೨೮.೦ ೨೮.೧ ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್, ಡೆಫೆನೆಷನ್ ಆಫ್ ಲ್ಯಾಂಡ್ಸ್ ಆಸ್ ಆಫ್ 2007-01-01 ಎಕ್ಸೆಲ್-ಫೈಲ್, ಇನ್ ಡ್ಯಾನಿಷ್ ಪುನಃಸ್ಥಾಪನೆ 2008-03-26.
- ↑ "ದ ಫಿಂಗರ್ ಪ್ಲ್ಯಾನ್, Denmark.dk". Archived from the original on 2016-03-12. Retrieved 2010-08-06.
- ↑ "Weather Information for Copenhagen". World Weather Information Service. Retrieved 30 November 2009.
{{cite web}}
: Unknown parameter|dateformat=
ignored (help) - ↑ ೩೧.೦ ೩೧.೧ "B1 Kopenhagen entdecken". Baumeister - Zeitschrift für Architektur. Retrieved 2009-01-23.
- ↑ "RIBA European Awards 2005". RIBA. Archived from the original on 2009-09-14. Retrieved 2009-01-05.
- ↑ "RIBA European Awards 2006". RIBA. Archived from the original on 2009-06-26. Retrieved 2009-01-05.
- ↑ "RIBA European Awards 2007". RIBA. Retrieved 2009-01-05.
- ↑ "RIBA European Awards 2009". RIBA. Archived from the original on 2008-10-11. Retrieved 2009-01-05.
- ↑ "World's Best Residential Building 2008". World Architecture Festival. Archived from the original on 2008-12-25. Retrieved 2009-01-05.
- ↑ "Controversial residential housing complex year's best building". Forum AID. Retrieved 2009-01-05.
- ↑ "Ørestad Gymnasium Best Building in Scandinavia 2008". designboom. Archived from the original on 2008-10-07. Retrieved 2009-01-05.
- ↑ "World's best design city 2008". The Independent. Retrieved 2009-01-05.
- ↑ ೪೦.೦ ೪೦.೧ "King's Garden". Slots- og Ejeondomsstyrelsen. Archived from the original on 2008-03-29. Retrieved 2009-01-05.
- ↑ "Kongens Have". AOK. Retrieved 2009-01-05.
- ↑ "Botanisk Have". Carlsberg. Archived from the original on 2016-05-18. Retrieved 2009-01-05.
- ↑ "Fælledparken". AOK. Archived from the original on 2011-01-18. Retrieved 2009-01-05.
- ↑ "København får mere liv på kirkegårdene". Politiken. Retrieved 2009-01-05.
- ↑ "Guide: Gå på opdagelse i de dødes haver". Politiken. Retrieved 2009-01-05.
- ↑ "En grøn og blå storby". Københavns Kommune. Retrieved 2009-01-05.
- ↑ "Superkilen by Bjarke Ingels Group". Dezeen. Retrieved 2009-01-05.
- ↑ ""1001 Træ", Nordvest". Københavns Kommune. Archived from the original on 2007-04-29. Retrieved 2009-01-05.
- ↑ "Hot spot på Amager Strandpark". gomotion.dk. Retrieved 2009-01-14.
- ↑ ಬ್ರಿಗ್ಗೆ ದ್ವೀಪದಲ್ಲಿ ತೀರಸ್ನಾನ, e-architect
- ↑ "2007 IOC Honorable Mention". ap architecture-page. Archived from the original on 2008-12-29. Retrieved 2009-01-05.
- ↑ ಡಾನ್ ಮಾರ್ಕ್ಸ್ ಸ್ಟಾಟಿಸ್ಟಿಕ್, ಡೆನ್ಮಾರ್ಕ್ ನ ಬೃಹತ್ ನಗರಗಳು 2007(German)
- ↑ Statistikbanken.dk ಜನಸಂಖ್ಯಾ table BEF1A07
- ↑ Orienteering fra Københavns Kommune. Statistisk Kontor.2003 nr. 25
- ↑ "Andel af befolkningen der pendler til den centrale del a HUR-området". Archived from the original on 2016-03-04. Retrieved 2010-08-06.
- ↑ DR ನೆಟ್ ನ್ಯೂಸ್ 25-06-04
- ↑ "Cool Boom Towns". Spiegel Special. Retrieved 2009-01-09.
- ↑ "Ny Carlsberg Glyptotek". AOK. Archived from the original on 2013-12-02. Retrieved 2009-01-09.
- ↑ "DRs koncerthus - et af verdens dyreste". Berlingske Tidende. Retrieved 2009-01-09.
- ↑ "VEGA". Wonderfull Copenhagen. Archived from the original on 2009-08-21. Retrieved 2009-01-09.
- ↑ ೬೧.೦ ೬೧.೧ "Dyrehavsbakken". AOK. Archived from the original on 2008-12-19. Retrieved 2009-01-05.
- ↑ "ಟಿವೋಲಿ ಗಾರ್ಡನ್ಸ್, ದ ರೈಡ್ಸ್". Archived from the original on 2013-05-16. Retrieved 2010-08-06.
- ↑ http://www.crystle.dk/?id=220695
- ↑ ದ ಟಾಪ್ ಟೆನ್ ಸಿಟೀಸ್ ಟು ವಿಸಿಟ್ ಇನ್ 2009 Archived 2011-10-12 at Archive.is, ಟೈಮ್ಸ್ ಆನ್ ಲೈನ್
- ↑ Nyeste artikler fra Bryggeriforeningen, Bryggeriforeningen
- ↑ "TV2 samles på Teglholmen". Berlingske Tidende. Retrieved 2009-01-10.
- ↑ "ಫ್ಯಾಶನ್ ರಾಜಧಾನಿ ಕೋಪನ್ ಹ್ಯಾಗನ್". Archived from the original on 2012-12-12. Retrieved 2010-08-06.
- ↑ ಕೋಪನ್ ಹ್ಯಾಗನ್ ಫ್ಯಾಷನ್ ವೀಕ್
- ↑ "History of Copenhagen=copenhagennet.com". Retrieved 2009-05-30.
- ↑ ಕೋಪನ್ ಹ್ಯಾಗನ್ ಡಿಸ್ಟಾರ್ಷನ್
- ↑ ಕೋಪನ್ ಹ್ಯಾಗನ್ ಜಾಝ್ ಉತ್ಸವ 3+ ವರ್ಷಗಳು Archived 2009-05-16 ವೇಬ್ಯಾಕ್ ಮೆಷಿನ್ ನಲ್ಲಿ., ಅಮೋಘ ಕೋಪನ್ ಹ್ಯಾಗನ್
- ↑ ಟಾಪ್ ೧೦ ಜಾಝ್ ಫೆಸ್ಟಿವಲ್ಸ್ Archived 2010-03-07 ವೇಬ್ಯಾಕ್ ಮೆಷಿನ್ ನಲ್ಲಿ., ಟ್ರಿಪ್ ಅಡ್ವೈಸರ್
- ↑ Copenhagen Jazz Festival
- ↑ "ಕೋಪನ್ ಹ್ಯಾಗನ್ ಪ್ರೈಡ್". Archived from the original on 2007-04-01. Retrieved 2010-08-06.
- ↑ ೭೫.೦ ೭೫.೧ "Cph:Pix". Cphpix.dk. Archived from the original on 2016-02-23. Retrieved 2009-05-05.
- ↑ "Regionale regnskaber 2005 - Nyt fra Danmarks Statistik - Danmarks Statistik". Dst.dk. 2006-07-03. Retrieved 2009-05-05.
- ↑ ೭೭.೦ ೭೭.೧ ಭವಿಷ್ಯದ 50 ಯೂರೋಪಿಯನ್ ನಗರಗಳು 2008/09
- ↑ ೭೮.೦ ೭೮.೧ "ಭವಿಷ್ಯದ ಸ್ಕ್ಯಾಂಡಿನಾವಿಯನ್ ನಗರ 06/07". Archived from the original on 2008-09-15. Retrieved 2010-08-06.
- ↑ ೭೯.೦ ೭೯.೧ "ಭವಿಷ್ಯದ ಉತ್ರ ಯೂರೋಪ್ ನ ನಗರ 2004/05". Archived from the original on 2006-10-17. Retrieved 2010-08-06.
- ↑ ೮೦.೦ ೮೦.೧ "Worldwide Centers of Commerce Index" (PDF). MasterCard. 2008. Retrieved 2008-11-24.
{{cite journal}}
: Cite journal requires|journal=
(help) - ↑ ೮೧.೦ ೮೧.೧ "Copenhagen Region Ranks 3rd in Western Europe for Attracting Head Offices", Ministry of Foreign Affairs of Denmark, 2008-08-05, archived from the original on 2008-09-24, retrieved 2009-07-24
- ↑ ೮೨.೦ ೮೨.೧ "Bot generated title ->". Usatoday.Com<!. 2007-11-02. Retrieved 2009-05-05.
- ↑ ಕೋಪನ್ ಹ್ಯಾಗನ್ - ಓವರ್ ವ್ಯೂ
- ↑ "World's richest cities". City Mayors. Retrieved 2009-05-05.
- ↑ "ಡೆನ್ಮಾರ್ಕ್ ನಲ್ಲಿ ಸಂಬಳದ ಮಟ್ಟ". Archived from the original on 2010-05-30. Retrieved 2010-08-06.
- ↑ "World's most expensive cities (EIU)". City Mayors. Retrieved 2009-05-05.
- ↑ "World's most expensive cities - Ranking". City Mayors. Retrieved 2009-05-05.
- ↑ "Internationalisation – University of Copenhagen". University of Copenhagen. Archived from the original on 2008-12-06. Retrieved 2009-01-10.
- ↑ "THE - QS World University Rankings 2008". Times Higher Education Supplement. Retrieved 2009-01-10.
- ↑ "Top500 World Universities". Academic Ranking of World Universities. Retrieved 2009-01-10.
- ↑ "Top 20 institutions in engineering based on impact". Times Higher Education Supplement. Retrieved 2009-01-10.
- ↑ Copenhagen Capacity Archived 2008-12-06 ವೇಬ್ಯಾಕ್ ಮೆಷಿನ್ ನಲ್ಲಿ. , Infrastructure & logistics - Copenhagen a distribution hub. ದಿನಾಂಕ 15 ಫೆಬ್ರವರಿ 2007ರಂದು ಮರುಸಂಪಾದಿಸಲಾಯಿತು.
- ↑ "Top 20 institutions in engineering based on impact". usatoday.com. Retrieved 2009-01-10.
- ↑ "The win-win ways of Cleantech business". CBS Observer. March 26, 2009. Archived from the original on 2012-10-22. Retrieved 2009-07-24.
- ↑ "Logistics". Copenhagen Capacity. Archived from the original on 2010-01-11. Retrieved 2009-01-05.
- ↑ "Light rail project in Copenhagen – the Ring 2½ corridor" (PDF). Centre for Traffic and Transport, DTU. Retrieved 2009-01-05.
- ↑ "11 most bicycle-friendly cities in the world". Virgin vaccations. Archived from the original on 2010-01-01. Retrieved 2009-01-05.
- ↑ "Verdens bedste cykelby". Københavns Kommune. Archived from the original on 2009-07-28. Retrieved 2009-01-05.
- ↑ ೯೯.೦ ೯೯.೧ "Bike City Copenhagen". Københavns Kommune. Retrieved 2009-01-05.
- ↑ ೧೦೦.೦ ೧೦೦.೧ "Grønne cykel router". Københavns Kommune. Archived from the original on 2009-02-28. Retrieved 2009-01-05.
- ↑ "Media Release: Copenhagen Comes To Swanston Street". Press release. Retrieved 2009-01-05.
- ↑ "Danske cykelstier i New Yrok". DR Online. Retrieved 2009-01-05.
- ↑ "Ny rekord i 2007: 286 krydstogtskibe til København" (PDF). Wonderful Copenhagen. Retrieved 2009-01-06.
- ↑ "Cruise Season 2008: New companies and larger ships". Wonderful Copenhagen. Retrieved 2009-01-06.
- ↑ "Copenhagen invests in continued cruise success". Wonderful Copenhagen. Retrieved 2009-01-06.
- ↑ "København har Europas bedste havn". ErhvervsBladet. Retrieved 2009-01-06.
- ↑ "DFDS Seaways". AOK. Archived from the original on 2009-12-19. Retrieved 2009-01-06.
- ↑ "Polensfærgerne, København". Polferries. Archived from the original on 2009-01-22. Retrieved 2009-01-06.
- ↑ "Airport". malmo.com. Archived from the original on 2008-02-13. Retrieved 2009-01-06.
- ↑ "The Top 10 Airports in the world for 2008". Skytrax. Archived from the original on 2010-02-12. Retrieved 2009-01-06.
- ↑ "15 green cities". grist. Retrieved 2009-01-05.
- ↑ "Copenhagen Receives European Environmental Award". grist. Archived from the original on 2010-02-07. Retrieved 2009-01-05.
- ↑ "street lights in Copenhagen". Københavns Kommune. Retrieved 2009-01-05.
- ↑ "Environmental Capital of Europe". Copenhagen, Environmental Capital of Europe. Archived from the original on 2007-07-06. Retrieved 2009-01-05.
- ↑ "Copenhagen: From sewer to harbour bath". Sustainable Cities. Archived from the original on 2008-09-19. Retrieved 2009-01-05.
- ↑ "Bicycle transport". Københavns Kommune. Retrieved 2009-01-05.
- ↑ ೧೧೭.೦ ೧೧೭.೧ "World-champinions in organic food". Copenhagen Capacity. Archived from the original on 2011-07-08. Retrieved 2009-01-05.
- ↑ ೧೧೮.೦ ೧೧೮.೧ "ಮಾನೋಕಲ್ಸ್ ಪೇಜ್ ಆನ್ ಕೋಪನ್ ಹ್ಯಾಗನ್". Archived from the original on 2008-08-31. Retrieved 2010-08-06.
- ↑ "The 2008 Global Cities Index". Foreign Policy. 2008. Archived from the original on 10 ಜನವರಿ 2010. Retrieved 2 August 2009.
{{cite web}}
: Unknown parameter|month=
ignored (help) - ↑ "ಡ್ಯಾನಿಷ್ ಟ್ರೇಡ್ ಕೌನ್ಸಿಲ್ - ಚೈನಾ". Archived from the original on 2008-09-24. Retrieved 2010-08-06.
- ↑ "ಲೊಕೇಷನ್ ರಾಂಕಿಂಗ್ ಸರ್ವೇ". Archived from the original on 2008-12-09. Retrieved 2010-08-06.
- ↑ "15 Green Cities | Grist | Main Dish | 19 July 2007". Grist. Retrieved 2009-05-05.
- ↑ "ವರ್ಲ್ಡ್ ಚಾಂಪಿಯನ್ಸ್ ಇನ್ ಆರ್ಗಾನಿಕ್ ಫುಡ್". Archived from the original on 2011-07-08. Retrieved 2010-08-06.
- ↑ ಕೋಪನ್ ಹ್ಯಾಗನ್ ಮೆಟ್ರೋ ಜಗದಲ್ಲಿ ಅತ್ಯುತ್ತಮ
- ↑ "Forbes-Worlds Most Expensive Cities List". Forbes.com. 2008-07-23. Archived from the original on 2013-01-10. Retrieved 2009-05-05.
- ↑ "Preferred City For Investment Projects". Siliconvalley.um.dk. Archived from the original on 2008-12-06. Retrieved 2009-05-05.
- ↑ "Global earning ranking". English.peopledaily.com.cn. 2006-08-13. Archived from the original on 2010-07-22. Retrieved 2009-05-05.
- ↑ "Style & Substance Danmark". Visitdenmark.com. 2007-01-15. Archived from the original on 2009-01-10. Retrieved 2009-05-05.
- ↑ "A great place to live". Investindk.com. 2006-06-27. Archived from the original on 2008-03-23. Retrieved 2009-05-05.
- ↑ "Mercer Quality of Living global city rankings 2009". Mercer.com. 2009-04-28. Retrieved 2009-05-05.
- ↑ ಟ್ರಿಪ್ ಅಡ್ವೈಸರ್ ಪ್ರೆಸ್ ರಿಲೀಸ್ 3 ಮೇ, 2009
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Copenhagen at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಕೋಪನ್ ಹ್ಯಾಗನ್ ದ್ವಾರ - ಕೋಪನ್ ಹ್ಯಾಗನ್ ಪ್ರವಾಸಿಗರ ತಾಣ ಮತ್ತು ಸಾಂಸ್ಕೃತಿಕ ಮಾರ್ಗದರ್ಶಿ Archived 2010-06-20 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ಪುರಸಬಾ ಜಾಲತಾಣ
- ಕೋಪನ್ ಹ್ಯಾಗನ್ ಅಧಿಕೃತ ಪ್ರವಾಸ ಜಾಲತಾಣ
- ಕೋಪನ್ ಹ್ಯಾಗನ್ ಕೆಪಾಸಿಟಿ ಅಫಿಷಿಯಲ್ ಇಂವೆಸ್ಟ್ ಮೆಂಟ್ ಏಜೆನ್ಸಿ ಆಫ್ ಕೋಪನ್ ಹ್ಯಾಗನ್
- Pages with non-numeric formatnum arguments
- Pages using the JsonConfig extension
- CS1 maint: unrecognized language
- Pages with plain IPA
- CS1 errors: unsupported parameter
- Articles with German-language external links
- Webarchive template archiveis links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: missing periodical
- Pages with unresolved properties
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- Articles with unsourced statements from October 2009
- Articles with unsourced statements from December 2009
- Articles with unsourced statements from March 2009
- Articles with unsourced statements from December 2008
- ಕೋಪನ್ ಹ್ಯಾಗನ್
- ಡೆನ್ಮಾರ್ಕ್ ನ ರಾಜಧಾನಿಯ ಪ್ರದೇಶದಲ್ಲಿರುವ ಪುರಸಭಾ ಸ್ಥಾನಗಳು
- ಡೆನ್ಮಾರ್ಕ್ ನ ಪುರಸಭಾ ಸ್ಥಾನಗಳು
- ಡೆನ್ಮಾರ್ಕ್ ನ ನಗರಗಳು ಮತ್ತು ಪಟ್ಟಣಗಳು
- ಯೂರೋಪ್ ನ ರಾಜಧಾನಿಗಳು
- ಡೆನ್ಮಾರ್ಕ್ ನ ಬಂದರು ಪಟ್ಟಣಗಳು ಮತ್ತು ಬಂದರು ನಗರಗಳು
- ಬಾಲ್ಟಿಕ್ ಸಮುದ್ರದ ಬಂದರು ನಗರಗಳು ಮತ್ತು ರೇವುಪಟ್ಟಣಗಳು
- 11ನೆಯ ಶತಮಾನದಲ್ಲಿ ಸ್ಥಾಪಿತವಾದ ವಸಾಹತುಗಳು
- ವಾಹನದಿಂದ ಚೌಕಟ್ಟುಗಳಿಗೆ
- ಯೂರೋಪ್ ನ ಸಾಂಸ್ಕೃತಿಕ ರಾಜಧಾನಿಗಳು
- ಯುರೋಪ್ ಖಂಡದ ಪ್ರಮುಖ ನಗರಗಳು