ವಿಷಯಕ್ಕೆ ಹೋಗು

ಹೆಲ್ಸಿಂಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Helsinki
HelsinkiHelsingfors
City
Helsingin kaupunki
Helsingfors stad
Port of Helsinki and the Helsinki Cathedral in March.
Port of Helsinki and the Helsinki Cathedral in March.
Coat of arms of Helsinki
Nickname(s): 
Stadi, Hesa
CountryFinland
RegionUusimaa
Sub-regionHelsinki
Charter1550
Capital city1812
Government
 • MayorJussi Pajunen
Area
 • Urban
೭೭೦.೨೬ km (೨೯೭.೪೦ sq mi)
 • Metro
೨,೯೭೦.೧೮ km (೧,೧೪೬.೭೯ sq mi)
Population
 • Density೦/km (೦/sq mi)
 • Urban
೧೧,೦೬,೮೮೧
 • Urban density೧,೪೩೭.೦೨/km (೩,೭೨೧.೯/sq mi)
 • Metro
೧೩,೯೪,೮೦೯
 • Metro density೪೬೯.೬/km (೧,೨೧೬/sq mi)
Time zoneUTC+2 (EET)
 • Summer (DST)UTC+3 (EEST)
Websitewww.hel.fi

ಹೆಲ್ಸಿಂಕಿ (listen ; ಸ್ವೀಡಿಶ್:Helsingfors, listen ) ಫಿನ್ಲೆಂಡ್‌ರಾಜಧಾನಿ ಮತ್ತು ಅತಿ ದೊಡ್ಡ ನಗರ. ರಾಜಧಾನಿಯು ಫಿನ್ಲೆಂಡ್‌ನ ದಕ್ಷಿಣ ಭಾಗದಲ್ಲಿ, ಬಾಲ್ಟಿಕ್‌ ಸಮುದ್ರದ ಬಳಿ ಫಿನ್ಲೆಂಡ್‌ ಕೊಲ್ಲಿಯ ದಡದಲ್ಲಿದೆ. ಹೆಲ್ಸಿಂಕಿ ನಗರದ ಜನಸಂಖ್ಯೆಯು ೬,೨೧,೮೬೩ (೩೦ ನವೆಂಬರ್ ೨೦೧೪),[] ಇದರಿಂದಾಗಿ ಇಡೀ ಫಿನ್ಲೆಂಡ್‌ ದೇಶದಲ್ಲೇ ಅತಿ ಹೆಚ್ಚಿನ ಜನಸಂಖ್ಯೆಯು ಈ ಸ್ಥಳೀಯ ಆಡಳಿತ ಪ್ರದೇಶದಲ್ಲಿದೆ. ಸ್ವೀಡೆನ್‌ಸ್ಟಾಕ್ಹೋಮ್‌ನಿಂದ ಪೂರ್ವದಿಕ್ಕಿನಲ್ಲಿ ಹೆಲ್ಸಿಂಕಿ ಸುಮಾರು 400 kilometres (250 mi) ದೂರವಿದೆ. ರಷ್ಯಾಸೇಂಟ್‌ ಪೀಟರ್ಸ್‌ಬರ್ಗ್‌ನಿಂದ 300 kilometres (190 mi) ಪಶ್ಚಿಮಕ್ಕೆ ಹಾಗೂ ಎಸ್ಟೊನಿಯಾಟ್ಯಾಲಿನ್‌ನಿಂದ 80 kilometres (50 mi) ಉತ್ತರಕ್ಕಿದೆ. ಹೆಲ್ಸಿಂಕಿ ಈ ಮೂರು ನಗರಗಳ ನಡುವೆ ನಿಕಟ ಸಂಪರ್ಕಹೊಂದಿದೆ.

ಹೆಲ್ಸಿಂಕಿ ಸ್ಥಳೀಯಾಡಳಿತ ಪ್ರದೇಶವು ಹೆಲ್ಸಿಂಕಿ ಮಹಾನಗರ ಪ್ರದೇಶ ಹಾಗೂ ಗ್ರೇಟರ್‌ ಹೆಲ್ಸಿಂಕಿ ಪ್ರದೇಶದ ಹೃದಯಭಾಗವಾಗಿದೆ. ಹೆಲ್ಸಿಂಕಿ ನಗರ ಹಾಗೂ ಮೂರು ಇತರೆ ನಗರಗಳನ್ನು ಒಳಗೊಂಡ ಹೆಲ್ಸಿಂಕಿ ಮಹಾನಗರ ಪ್ರದೇಶದಲ್ಲಿ ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ನಗರಗಳಲ್ಲಿ ಎರಡು ನಗರಗಳಾದ ಎಸ್ಪೋ ಹಾಗೂ ವ್ಯಾಂಟಾ, ಕ್ರಮವಾಗಿ ಹೆಲ್ಸಿಂಕಿಯ ಪಶ್ಚಿಮ ಹಾಗೂ ಉತ್ತರ ದಿಕ್ಕುಗಳಲ್ಲಿವೆ. ಮೂರನೆಯ ನಗರ ಕೊನಿಯೈನೆನ್‌ ಎಸ್ಪೋ ನಗರದೊಳಗಿನ ಒಂದು ಪರಾವೃತ ಪ್ರದೇಶವಾಗಿದೆ. ಹೆಲ್ಸಿಂಕಿ ಮಹಾನಗರವು ಭೂಮಿಯಲ್ಲಿ ಅತ್ಯಂತ ಉತ್ತರದಲ್ಲಿರುವ ನಗರ ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆಯು ಒಂದು ದಶಲಕ್ಷವನ್ನೂ ಮೀರಿದೆ. ಈ ನಗರವು, ಯುರೋಪ್ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರದ ಅತ್ಯಂತ ಉತ್ತರದಲ್ಲಿರುವ ರಾಜಧಾನಿಯಾಗಿದೆ. ಮೇಲೆ ತಿಳಿಸಲಾದ ನಗರಗಳು ಮತ್ತು ಹೊರವಲಯದಲ್ಲಿರುವ ಒಂಬತ್ತು ಉಪನಗರಗಳನ್ನು ಒಳಗೊಂಡಿರುವ ಗ್ರೇಟರ್‌ ಹೆಲ್ಸಿಂಕಿ ಪ್ರದೇಶದಲ್ಲಿ ಒಟ್ಟು ಸುಮಾರು 1.3 ದಶಲಕ್ಷ ಜನರು ವಾಸಿಸುತ್ತಿದ್ದಾರೆ. ನಾಲ್ವರು ಫಿನ್ಲೆಂಡಿಗರಲ್ಲೊಬ್ಬರು ಗ್ರೇಟರ್‌ ಹೆಲ್ಸಿಂಕಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಹೆಲ್ಸಿಂಕಿ ಫಿನ್ಲೆಂಡ್‌ನ ಪ್ರಮುಖ ರಾಜಕೀಯ, ಶೈಕ್ಷಣಿಕ, ಹಣಕಾಸಿನ, ಸಾಂಸ್ಕೃತಿಕ ಹಾಗೂ ಸಂಶೋಧನಾ ಕೇಂದ್ರವಾಗಿದೆ. ಹೆಲ್ಸಿಂಕಿ ಬಾಲ್ಟಿಕ್‌ ಸಮುದ್ರ ಹಾಗೂ ಉತ್ತರ ಯುರೋಪ್‌ನ ಪ್ರಮುಖ ಪ್ರಾದೇಶಿಕ ನಗರವಾಗಿದೆ. ಫಿನ್ಲೆಂಡ್‌ನಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ವಿದೇಶೀ ಉದ್ದಿಮೆಗಳಲ್ಲಿ ಸುಮಾರು 70%ರಷ್ಟು ಉದ್ದಿಮೆಗಳು ಹೆಲ್ಸಿಂಕಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.[]

ಇಸವಿ 2009ರ ಆರಂಭದಿಂದಲೂ, ಹೆಲ್ಸಿಂಕಿ ಹಾಗೂ ವ್ಯಾಂಟಾ ಮಹಾನಗರಗಳ ವಿಲೀನ ಸಂಭವನೀಯತೆ ಕುರಿತು ಚಿಂತನೆ ನಡೆಯುತ್ತಿದೆ. ದಿನಾಂಕ 30 ಮಾರ್ಚ್‌ 2009ರಂದು, ವ್ಯಾಂಟಾ ನಗರ ಕೌನ್ಸಿಲ್ ವಿಲೀನದ ಕುರಿತು ಹೆಲ್ಸಿಂಕಿ ಪ್ರಸ್ತಾಪವನ್ನು ಪುನರ್ಪರಿಶೀಲಿಸಲು ಒಪ್ಪಿಕೊಂಡಿತು. ಈ ಪುನರ್ಪರಿಶೀಲನೆಯು ವ್ಯಾಂಟಾ ನಗರದ ಅಸ್ತಿತ್ವವನ್ನು ಅಳಿಸಿಬಿಡುವ ಸಾಧ್ಯತೆಯ ಕುರಿತಲ್ಲ ಎಂದು ನಗರ ಕೌನ್ಸಿಲ್ ಪ್ರತಿಪಾದಿಸಿದೆ.[]

2009ರಲ್ಲಿ ಅಂತಾರಾಷ್ಟ್ರೀಯ ಕೈಗಾರಿಕಾ ವಿನ್ಯಾಸ ಮಂಡಳಿ,ಹೆಲ್ಸಿಂಕಿಯನ್ನು 2012ಕ್ಕಾಗಿ ವಿಶ್ವ ವಿನ್ಯಾಸ ರಾಜಧಾನಿಯನ್ನಾಗಿ ಆಯ್ಕೆ ಮಾಡಿತು. ಈ ಪ್ರಶಸ್ತಿಗಾಗಿ ಹೆಲ್ಸಿಂಕಿ ಏಂಡ್ಹೊವೆನ್‌ ನಗರವನ್ನು ಸ್ವಲ್ಪದರಲ್ಲಿ ಸೋಲಿಸಿ ಆಯ್ಕೆಯಾಯಿತು.

ಇತಿಹಾಸ

[ಬದಲಾಯಿಸಿ]

ಆರಂಭಿಕ ಇತಿಹಾಸ

[ಬದಲಾಯಿಸಿ]
ಪುನರ್ನಿರ್ಮಾಣಕ್ಕೆ ಮುಂಚೆ 1820ರಲ್ಲಿ ಕೇಂದ್ರೀಯ ಹೆಲ್ಸಿಂಕಿ ಹೀಗಿತ್ತು.ಕಾರ್ಲ್‌ ಲುಡ್ವಿಗ್‌ ಏಂಜೆಲ್‌ರವರ ರೇಖಾಚಿತ್ರಕಲೆ.

ಸ್ವೀಡೆನ್‌ನ ರಾಜ ಗುಸ್ಟಾವ್‌ 1 1550ರಲ್ಲಿ, ಹೆಲ್ಸಿಂಕಿ ನಗರವನ್ನು ಹೆಲ್ಸಿಂಗ್ಫೊರ್ಸ್‌ ಪಟ್ಟಣವಾಗಿ ಸ್ಥಾಪಿಸಿದ. ಅದನ್ನು ರೆವಾಲ್ನ ಹ್ಯಾನ್ಸಿಯಾಟಿಕ್‌ ನಗರ‌ಕ್ಕೆ (ಇಂದಿನ ಟ್ಯಾಲಿನ್‌)ಪ್ರತಿಸ್ಪರ್ಧಿಯಾಗಿಸಲು ಇಚ್ಛಿಸಿದ್ದ. ಆದರೆ ಯೋಜನೆಗಳು ಅತ್ಯಲ್ಪ ಫಲ ನೀಡಿತು. ಬಹಳ ವರ್ಷಗಳ ಕಾಲ ಬಡತನ, ಯುದ್ಧಗಳು ಮತ್ತು ರೋಗಗಳಿಂದ ಬಾಧಿತವಾದ ಹೆಲ್ಸಿಂಕಿ ಕಡಲತೀರದ ಒಂದು ಸಣ್ಣ ಪಟ್ಟಣವಾಗಿಯೇ ಉಳಿದುಕೊಂಡಿತು. ಇಸವಿ 1710ರಲ್ಲಿ ಪ್ಲೇಗ್‌ ಸಾಂಕ್ರಾಮಿಕ ರೋಗ ಸಂಭವಿಸಿ, ಹೆಲ್ಸಿಂಕಿ ವಾಸಿಗಳಲ್ಲಿ ಬಹಳಷ್ಟು ಜನರು ಸತ್ತರು.[] ಹದಿನೆಂಟನೆಯ ಶತಮಾನದಲ್ಲಿ ನಿರ್ಮಿಸಲಾದ ಸ್ವೀಬಾರ್ಗ್‌ ಜಲಸೇನಾ ರಕ್ಷಾವರಣ (ಫಿನ್ನಿಷ್‌ ವಿಯಾಪೊರಿ ಯಲ್ಲಿ, ಇಂದು ಸುವೊಮೆನ್ಲಿನಾ ದಲ್ಲಿ ಕೂಡ) ಹೆಲ್ಸಿಂಕಿಯ ಸ್ಥಾನಮಾನವನ್ನು ಉತ್ತಮಗೊಳಿಸಲು ನೆರವಾಯಿತು. ಆದರೆ 1809ರಲ್ಲಿ ಸಂಭವಿಸಿದ ಫಿನ್ನಿಷ್‌ ಯುದ್ಧದಲ್ಲಿ ರಷ್ಯಾ ಸ್ವೀಡನ್‌ನನ್ನು ಸೋಲಿಸಿ, ಫಿನ್ಲೆಂಡ್‌ನ್ನು ಸ್ವಾಯತ್ತಗ್ರ್ಯಾಂಡ್‌ ಡಚಿ ಆಫ್‌ ಫಿನ್ಲೆಂಡ್‌ನ್ನು ಸೇರಿಸಿಕೊಂಡ ನಂತರವೇ ಹೆಲ್ಸಿಂಕಿ ಪಟ್ಟಣವು ಪ್ರಮುಖ ನಗರವಾಗಿ ಅಭಿವೃದ್ಧಿ ಹೊಂದಿತು.

ಫಿನ್ಲೆಂಡ್‌ನಲ್ಲಿ ಸ್ವೀಡಿಷ್‌ ಪ್ರಭಾವವನ್ನು ತಗ್ಗಿಸಲುರಷ್ಯಾದ ಅಲೆಕ್ಸ್ಯಾಂಡರ್‌ I ಚಕ್ರವರ್ತಿ ತನ್ನ ರಾಜಧಾನಿಯನ್ನು ಟುರ್ಕುವಿನಿಂದ ಹೆಲ್ಸಿಂಕಿಗೆ ಸ್ಥಳಾಂತರಿಸಿದ. ಅಂದು ದೇಶದ ಏಕೈಕ ವಿಶ್ವವಿದ್ಯಾನಿಲಯವಾಗಿದ್ದ ದಿ ರಾಯಲ್‌ ಅಕ್ಯಾಡೆಮಿ ಆಫ್‌ ಟುರ್ಕು, 1827ರಲ್ಲಿ ಹೆಲ್ಸಿಂಕಿಗೆ ಸ್ಥಳಾಂತರವಾಯಿತು. ಅಂತಿಮವಾಗಿ ಇದು ಆಧುನಿಕ ಹೆಲ್ಸಿಂಕಿ ವಿಶ್ವವಿದ್ಯಾನಿಲಯವೆಂದಾಯಿತು. ಈ ಕ್ರಮವು ನಗರದ ಹೊಸ ಸ್ಥಾನವನ್ನು ದೃಢಗೊಳಿಸಿ, ಸತತ ಬೆಳವಣಿಗೆಯ ಹಾದಿಯಲ್ಲಿ ಸಾಗಲು ನೆರವಾಯಿತು. ಈ ಪರಿವರ್ತನೆಯು ನಗರದ ವಾಣಿಜ್ಯ ಪ್ರದೇಶದಲ್ಲಿ ಎದ್ದುಕಾಣುವಂತಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ನ್ನು ಹೋಲುವಂತೆ ವಿನ್ಯಾಸ ಮಾಡಿನವಶಾಸ್ತ್ರೀಯ ಶೈಲಿಯಲ್ಲಿ ಮರುನಿರ್ಮಿಸಲಾಗಿದೆ. ಇತರೆಡೆ, ರೈಲು ಹಳಿಗಳು ಮತ್ತು ಕೈಗಾರಿಕೀಕರಣದಂತಹ ತಂತ್ರಜ್ಞಾನ ಮುನ್ನಡೆಗಳು ನಗರದ ಅಭಿವೃದ್ಧಿಗೆ ಪ್ರಮುಖ ಅಂಶಗಳಾಗಿದ್ದವು.

ಇಪ್ಪತ್ತನೆಯ ಶತಮಾನ

[ಬದಲಾಯಿಸಿ]

ಇಸವಿ 1918ರಲ್ಲಿ, ಫಿನ್ನಿಷ್‌ ಅಂತರ್ಯುದ್ಧ ಸಂಭವಿಸಿತು. ಯುದ್ಧದ ಮೊದಲ ದಿನ 28 ಜನವರಿಯಂದು, ಹೆಲ್ಸಿಂಕಿ ರೆಡ್ ಗಾರ್ಡ್ಸ್‌ ಸೇನೆಯ ಪಾಲಾಯಿತು. ಸಣ್ಣ ಪ್ರಮಾಣದ ಯುದ್ಧದ ನಂತರ, ರೆಡ್‌ ಗಾರ್ಡ್ಸ್‌ ಸೇನೆಯು ಇಡೀ ದಕ್ಷಿಣ ಫಿನ್ಲೆಂಡ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಸೆನೆಟ್‌ ಸದಸ್ಯರಲ್ಲಿ ಹಲವರು ವಾಸಾ ಎಂಬ ಸ್ಥಳಕ್ಕೆ ಪಲಾಯನ ಮಾಡಿದರು. ಆದರೂ, ಕೆಲವು ಸೆನೆಟರ್‌ಗಳು ಮತ್ತು ಅಧಿಕಾರಿಗಳು ರಾಜಧಾನಿಯಲ್ಲಿ ಅವಿತುಕೊಂಡಿದ್ದರು. ಯುದ್ಧದ ಅಲೆಯು ರೆಡ್‌‌ ಗಾರ್ಡ್ಸ್‌ ಸೇನೆಯ ವಿರುದ್ಧ ತಿರುಗಿದಾಗ, ಜರ್ಮನ್‌ ಸೇನೆಯು ವೈಟ್ ಗವರ್ನ್‌ಮೆಂಟ್ ಜತೆ ಮೈತ್ರಿ ಬೆಳೆಸಿ, ಏಪ್ರಿಲ್‌ 1918ರಲ್ಲಿ ಹೆಲ್ಸಿಂಕಿ ನಗರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿತು. [ಸೂಕ್ತ ಉಲ್ಲೇಖನ ಬೇಕು]

ಟ್ಯಾಂಪೆರ್‌ ನಗರಕ್ಕೆ ಭಿನ್ನವಾಗಿ,ಯುದ್ಧದಲ್ಲಿ ಹೆಲ್ಸಿಂಕಿ ತುಲನಾತ್ಮಕವಾಗಿ ಕಡಿಮೆ ಹಾನಿಯನ್ನು ಅನುಭವಿಸಿತು. [ಸೂಕ್ತ ಉಲ್ಲೇಖನ ಬೇಕು] ವೈಟ್ ಜಯಗಳಿಸಿದ ನಂತರ, ಹಲವು ರೆಡ್‌ ಸೈನಿಕರನ್ನು ಕಾರಾಗೃಹ ಶಿಬಿರಗಳಲ್ಲಿ ಇರಿಸಲಾಯಿತು. ಸುಮಾರು 13,300 ಕೈದಿಗಳ ಅತಿದೊಡ್ಡ ಶಿಬಿರವು ಹೆಲ್ಸಿಂಕಿಯ ಸುವೊಮೆನ್ಲಿನ್ನಾ ಸೇನಾ ರಕ್ಷಾವರಣದ ದ್ವೀಪದಲ್ಲಿ ನೆಲೆಗೊಂಡಿತ್ತು. ಈ ಅಂತರ್ಯುದ್ಧವು ಸಮಾಜದಲ್ಲಿ ಗಮನಾರ್ಹವಾದ ಕಪ್ಪುಚುಕ್ಕೆಯನ್ನು ಉಳಿಸಿತಾದರೂ, ನಂತರದ ದಶಕದಲ್ಲಿ ಈ ನಗರ ಹಾಗೂ ದೇಶದಲ್ಲಿನ ಜೀವನದ ಗುಣಮಟ್ಟವು ಉತ್ತಮವಾಗಲಾರಂಭಿಸಿತು. ಎಲಿಯಲ್‌ ಸಾರಿನೆನ್‌ ಸೇರಿದಂತೆ ಖ್ಯಾತ ವಾಸ್ತುಶಿಲ್ಪಿಗಳು ಹೆಲ್ಸಿಂಕಿಗಾಗಿ ಅತ್ಯಾದರ್ಶದ ಯೋಜನೆಗಳನ್ನು ರೂಪಿಸಿದರು. ಆದರೆ ಇವು ಪೂರ್ಣವಾಗಿ ಸಾಕಾರಗೊಳ್ಳಲಿಲ್ಲ. [ಸೂಕ್ತ ಉಲ್ಲೇಖನ ಬೇಕು]

1939-40ರ ಇಸವಿಯಲ್ಲಿ ಸಂಭವಿಸಿದ ಚಳಿಗಾಲದ ಯುದ್ಧದ ಹಾಗೂ 1941-44ರಲ್ಲಿ ಸಂಭವಿಸಿದ ಮುಂದುವರೆದ ಯುದ್ಧದಲ್ಲಿ ಸೋವಿಯತ್‌ ಯುದ್ಧವಿಮಾನಗಳು ಹೆಲ್ಸಿಂಕಿ ಮೇಲೆ ಬಾಂಬ್‌ ದಾಳಿ ನಡೆಸಿದವು.. ಇಸವಿ 1944ರ ವಸಂತಕಾಲದಲ್ಲಿ ಅತಿ ತೀವ್ರ ವಾಯು ದಾಳಿಗಳು ನಡೆದವು. ಸುಮಾರು ಎರಡು ಸಾವಿರ ಸೋವಿಯತ್‌ ವಿಮಾನಗಳು ನಗರದ ಸುತ್ತಮುತ್ತ ಸುಮಾರು 16,000 ಬಾಂಬ್‌ಗಳನ್ನು ಎಸೆದವು. ಅದೃಷ್ಟವಶಾತ್‌, ಹೆಲ್ಸಿಂಕಿಯು ಬಾಂಬ್‌ಗಳ ವಿರುದ್ಧ ಸಫಲ ರಕ್ಷಣಾ ಕ್ರಮಗಳ ಪ್ರಯತ್ನಗಳನ್ನು ಕೈಗೊಂಡಿದ್ದರಿಂದ, ಇತರೆ ಯುರೋಪಿಯನ್‌ ನಗರಗಳಿಗೆ ಹೋಲಿಸಿದರೆ ಹೆಲ್ಸಿಂಕಿಯನ್ನು ವಿನಾಶದಿಂದ ಉಳಿಸಿತು. [ಸೂಕ್ತ ಉಲ್ಲೇಖನ ಬೇಕು]

ಇಪ್ಪತ್ತನೆಯ ಶತಮಾನದ ಮೊದಲಾರ್ಧವು ಬಹಳ ಪ್ರಕ್ಷುಬ್ಧ ಎನಿಸಿದರೂ, ಹೆಲ್ಸಿಂಕಿಯು ಹಂತ-ಹಂತವಾಗಿ ಅಭಿವೃದ್ಧಿಯನ್ನು ಮುಂದುವರೆಸಿತು. ಇಸವಿ 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆಸಲಾದ ಹದಿನೈದನೆಯ ಒಲಿಂಪಿಕ್‌ ಕ್ರೀಡಾಕೂಟ ಮಹತ್ವವಾದ ಕ್ರೀಡಾಕೂಟವಾಗಿತ್ತು. 1970ರ ದಶಕದಲ್ಲಿ ಫಿನ್ಲೆಂಡ್‌ನಲ್ಲಿ ನಗರೀಕರಣವು ತ್ವರಿತವಾಯಿತು. ಯುರೋಪ್‌ ದೃಷ್ಟಿಯಿಂದ ಇದು ತಡವೆನಿಸಿದರೂ, ಮಹಾನಗರದ ಜನಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿತು. ಹೆಲ್ಸಿಂಕಿ ಮೆಟ್ರೊ ಸುರಂಗ ರೈಲು ವ್ಯವಸ್ಥೆಯ ಅಭಿವೃದ್ಧಿಗೂ ಕಾರಣವಾಯಿತು. 1990ರ ದಶಕದಲ್ಲಿ, ಯುರೋಪಿಯನ್‌ ಒಕ್ಕೂಟದ ಅತಿವೇಗದಲ್ಲಿ ಬೆಳೆಯುತ್ತಿದ್ದ ನಗರ ಕೇಂದ್ರಗಳಲ್ಲಿ ಹೆಲ್ಸಿಂಕಿ ಮಹಾನಗರ ಪ್ರದೇಶವೂ ಒಂದಾಗಿತ್ತು. [ಸೂಕ್ತ ಉಲ್ಲೇಖನ ಬೇಕು]ಹೆಲ್ಸಿಂಕಿಯಲ್ಲಿ ತುಲನಾತ್ಮಕವಾಗಿ ಕಡಿಮೆ ಜನಸಾಂದ್ರತೆ ಹಾಗೂ ವಿಚಿತ್ರವೆನಿಸುವ ರಚನೆಯು ಈ ತರಹದ ವಿಳಂಬಿತ ಅಭಿವೃದ್ಧಿಗೆ ಕಾರಣ.

ನಗರದ ಹೆಸರು

[ಬದಲಾಯಿಸಿ]

ಸ್ವೀಡಿಷ್‌ ಭಾಷೆಯಲ್ಲಿ Helsingfors ([hɛlsiŋˈfɔrs] ಅಥವಾ [hɛlsiŋˈfɔʂ]) ಎಂಬ ಹೆಸರು ಹೆಲ್ಸಿಂಕಿ ನಗರದ ಮೂಲತಃ, ಅಧಿಕೃತ ಹೆಸರಾಗಿದೆ (ಮೊಟ್ಟಮೊದಲಿಗೆ ಈ ನಗರವನ್ನು ‌ ಹೆಲ್ಸಿಂಗ್ಫೊರ್ಸ್ (Hellssingeforss) ಎನ್ನಲಾಗುತ್ತಿತ್ತು). ಸಂಸ್ಥಾಪಿತ ನಗರದ ಹೆಸರಿನ ಫಿನ್ನಿಷ್‌ ಭಾಷಾ ಸ್ವರೂಪವು ಬಹುಶಃ ಹೆಲ್ಸಿಂಗ್ ಎಂಬ ಪದದಿಂದ ಉದ್ಭವವಾಗಿದೆ. ಇಂದು ವ್ಯಾಂಟಾನ್ಜೊಕಿ ಎಂದು ಪ್ರಸಕ್ತ ಹೆಸರಾದ ನದಿಗೆ, ಮುಂಚೆ 14ನೆಯ ಶತಮಾನದಲ್ಲಿ ದಾಖಲಿತವಾದ ಇದೇ ತರಹದ ಹೆಸರುಗಳನ್ನು ಬಳಸಲಾಗಿದೆ. ಹೆಲ್ಸಿಂಕಿ (ಮೊದಲ ಉಚ್ಚಾರಾಂಶಕ್ಕೆ ಒತ್ತು ನೀಡುತ್ತಾ ಉಚ್ಚರಿಸಲಾಗಿದೆ: [ˈhelsiŋki])ಯನ್ನು ಸ್ವೀಡಿಷ್‌ ಹಾಗೂ ನಾರ್ವೆಜಿಯನ್‌ ಹೊರತುಪಡಿಸಿ ಉಳಿದೆಲ್ಲಾ ಭಾಷೆಯಲ್ಲಿ ಉಲ್ಲೇಖಿಸಲು ಬಳಸಲಾಗಿದೆ.

ಹೆಲ್ಸಿಂಗ್ಫೊರ್ಸ್‌ ಎಂಬ ಹೆಸರು ಸುತ್ತಮುತ್ತಲಿನ ಹೆಲ್ಸಿಂಜೆ ಪ್ಯಾರಿಷ್‌ (ಫಿನ್ನಿಷ್‌ ಭಾಷೆಯ ಹೆಲ್ಸಿಂಕಿ ಗೆ ಮೂಲಾಧಾರ)ನಿಂದ ಹಾಗೂ, ಮೂಲ ಗ್ರಾಮದ ಮೂಲಕ ವೇಗವಾಗಿ ಹರಿಯುವ ರ‌್ಯಾಪಿಡ್ಸ್ (ಜಲಮಾರ್ಗಗಳು) (ಸ್ವೀಡಿಷ್‌ ಭಾಷೆಯ ಫೊರ್ಸ್‌ ) ಪದಗಳಿಂದ ಹುಟ್ಟಿದೆ. ಬಹುಶಃ ಸ್ವೀಡೆನ್‌ನ ಹಾಲ್ಸಿಂಗ್ಲೆಂಡ್‌ನಿಂದ ಬಂದ ಮಧ್ಯಯುಗೀಯ ಸ್ವೀಡಿಷ್‌ ವಸಾಹತುದಾರರು ಈ ನಗರಕ್ಕೆಹೆಲ್ಸಿಂಗ್ ‌ ಎಂಬ ಹೆಸರನ್ನು ನೀಡಿರಬಹುದು. ಇನ್ನೊಂದು ಸಾಧ್ಯತೆಯೇನೆಂದರೆ, ಈ ಹೆಸರನ್ನು ಸ್ವೀಡಿಷ್‌ ಪದ ಹಾಲ್ಸ್ ‌ (ಕುತ್ತಿಗೆ)ಯಿಂದ ಪಡೆಯಲಾಗಿದೆ (ನದಿಯ ಅತಿ ಇಕ್ಕಟ್ಟಾದ ಭಾಗವನ್ನು ಅದು ಉಲ್ಲೇಖಿಸುತ್ತದೆ, ಅಂದರೆ ರ‌್ಯಾಪಿಡ್‌ಗಳು) []

ಹೆಲ್ಸಿಂಕಿ ಗ್ರಾಮ್ಯ ಭಾಷೆಯಲ್ಲಿ ಈ ನಗರವನ್ನು ಸ್ಟಾಡಿ (ಇದು ಸ್ವೀಡಿಷ್‌ ಭಾಷೆಯ ಪದ ಸ್ಟ್ಯಾಡ್‌ ಅರ್ಥಾತ್‌ ನಗರ ಎಂಬುದರಿಂದ ಉದ್ಭವವಾಗಿದೆ) ಹಾಗೂ ಫಿನ್ನಿಷ್‌ ಆಡುಭಾಷೆಯಲ್ಲಿ ಹೆಸಾ ಎನ್ನಲಾಗಿದೆ. Helsset ಎಂಬುದು ಹೆಲ್ಸಿಂಕಿಯ ಉತ್ತರ ಸಾಮಿ ಭಾಷೆಯ ಹೆಸರಾಗಿದೆ.

ಭೌಗೋಳಿಕತೆ

[ಬದಲಾಯಿಸಿ]
ಸ್ಪಾಟ್‌ ಸ್ಯಾಟೆಲೈಟ್‌ನಿಂದ ಹೆಲ್ಸಿಂಕಿ ನಗರದ ದೃಶ್ಯ.
ಇಸವಿ 1991ರಿಂದಲೂ ಸುವೊಮೆನ್ಲಿನ್ನಾ UNESCO ವಿಶ್ವ ಪರಂಪರೆ ತಾಣವಾಗಿದೆ.

ಹೆಲ್ಸಿಂಕಿ ಹಲವು ಕೊಲ್ಲಿಗಳು, ಪರ್ಯಾಯ ದ್ವೀಪಗಳು ಹಾಗೂ ಹಲವು ದ್ವೀಪಗಳುದ್ದಕ್ಕೂ ವ್ಯಾಪಿಸಿದೆ. ನಗರದ ಒಳಪ್ರದೇಶವು ದಕ್ಷಿಣದ ಪರ್ಯಾಯ ದ್ವೀಪವನ್ನು ವ್ಯಾಪಿಸಿದೆ. ಇದನ್ನು ವಿರೊನ್ನೇಮಿ ಎಂಬ ತನ್ನ ನೈಜ ಹೆಸರಿನಿಂದ ವಿರಳವಾಗಿ ಉಲ್ಲೇಖಿಸಲಾಗುತ್ತದೆ. ಹೆಲ್ಸಿಂಕಿಯ ಕೆಲವು ಒಳಪ್ರದೇಶಗಳಲ್ಲಿ ಜನಸಂಖ್ಯಾ ಸಾಂದ್ರತೆ ಬಹಳ ಹೆಚ್ಚಿದೆ. ಕಾಲ್ಲಿಯೊ ಜಿಲ್ಲೆಯಲ್ಲಿ ಇದು ಟೆಂಪ್ಲೇಟು:PD km2 to mi2 ಸಂಖ್ಯೆಯನ್ನು ಸಮೀಪಿಸಿದೆ. ಆದರೆ ಒಟ್ಟಾರೆ ಹೆಲ್ಸಿಂಕಿಯ ಟೆಂಪ್ಲೇಟು:PD km2 to mi2 ಜನಸಂಖ್ಯೆಯು, ಇತರೆ ಯುರೋಪಿಯನ್‌ ರಾಜಧಾನಿ ನಗರಗಳಿಗೆ ಹೋಲಿಸಿದರೆ ವಿರಳ ಜನಸಾಂದ್ರತೆ ಎಂಬ ಸ್ಥಾನ ಗಳಿಸಿದೆ. [ಸೂಕ್ತ ಉಲ್ಲೇಖನ ಬೇಕು] ನಗರದ ಒಳಪ್ರದೇಶದ ಹೊರಗೆ ಯುದ್ಧಾನಂತರ ನಿರ್ಮಿಸಲಾದ ಹೊರವಲಯಗಳಿವೆ. ಇವುಗಳು ಮಧ್ಯೆಯಿರುವ ಕಾಡುಗಳ ಮೂಲಕ ಪರಸ್ಪರ ಪ್ರತ್ಯೇಕವಾಗಿವೆ. ಇಕ್ಕಟ್ಟಾದ, ಹತ್ತು ಕಿಲೋಮೀಟರ್‌ (6.2 ಮೈಲುಗಳು) ಉದ್ದವಿರುವ ಹೆಲ್ಸಿಂಕಿ ಕೇಂದ್ರೀಯ ಉದ್ಯಾನವು ನಗರದ ಒಳಪ್ರದೇಶದಿಂದ ಹೆಲ್ಸಿಂಕಿಯ ಉತ್ತರ ಭಾಗದತ್ತ ಚಾಚುತ್ತದೆ. ಇದು ನಿವಾಸಿಗಳಿಗಾಗಿ ಪ್ರಮುಖ ವಿಹಾರ ಕೇಂದ್ರವಾಗಿದೆ.

ಹೆಲ್ಸಿಂಕಿಯಲ್ಲಿನ ಚಿರಪರಿಚಿತ ದ್ವೀಪಗಳಲ್ಲಿ ಸೊರಸಾರಿ, ಲೌಟಸಾರಿ ಮತ್ತು ಕೊರ್ಕಿಯಸಾರಿ (ಇದು ದೇಶದ ಅತಿ ದೊಡ್ಡ ಪ್ರಾಣಿ ಸಂಗ್ರಹಾಲಯ), ಜೊತೆಗೆ ಸುವೊಮೆನ್ಲಿನ್ನಾ (ಸ್ವೀಬೊರ್ಗ್‌) ಹಾಗೂ ಸ್ಯಾಂಟಾಹಾಮಿನಾ ಎಂಬ ಸೈನಿಕರಕ್ಷಾವರಣದ ದ್ವೀಪವೂ ಸೇರಿದೆ.

ಹವಾಗುಣ

[ಬದಲಾಯಿಸಿ]

ನಗರದಲ್ಲಿ ಬಹಳ ಚಳಿಯಿರುವ ಭೂಖಂಡದ ಹವಾಗುಣವಿದೆ. [ಸೂಕ್ತ ಉಲ್ಲೇಖನ ಬೇಕು] ಬಾಲ್ಟಿಕ್‌ ಸಮುದ್ರದ ಹಾಗೂ ಕೊಲ್ಲಿ ಝರಿಯ ಮಿತಗೊಳಿಸುವ ಪ್ರಭಾವದಿಂದಾಗಿ, ಅತ್ಯಂತ ಉತ್ತರ ಭಾಗದಲ್ಲಿನ ಸ್ಥಳಗಳಲ್ಲಿನ ಉಷ್ಣಾಂಶಗಳಿಗೆ ಹೋಲಿಸಿದರೆ ಚಳಿಗಾಲದ ಉಷ್ಣಾಂಶವು ಹೆಚ್ಚೇ ಇರುತ್ತದೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಸರಾಸರಿ ಉಷ್ಣಾಂಶವು ಸುಮಾರು −5 °C (23 °F).[೧೦] ವರ್ಷದಲ್ಲಿ ಒಂದು ಅಥವಾ ಎರಡು ವಾರಗಳ ಕಾಲ ಉಷ್ಣಾಂಶಗಳು −20 °C (−4 °F) ಕ್ಕಿಂತಲೂ ಕಡಿಮೆಯಾಗುತ್ತವೆ. ಆದರೂ, ಅಕ್ಷಾಂಶದ ಕಾರಣ, ಚಳಿಗಾಲದಲ್ಲಿ ದಿನಗಳು ಆರು ತಾಸುಗಳಿಗಿಂತಲೂ ಕಡಿಮೆ ಅವಧಿಯಲ್ಲಿರುತ್ತವೆ; ವರ್ಷದ ಈ ಸಮಯದಲ್ಲಿ ಮೋಡ ಕವಿದ ವಾತಾವರಣದಿಂದಾಗಿ ಇನ್ನಷ್ಟು ಕತ್ತಲೆನಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಹೆಲ್ಸಿಂಕಿಯಲ್ಲಿ ಬೇಸಿಗೆ ಕಾಲದಲ್ಲಿ ದೀರ್ಘಾವಧಿಯ ಹಗಲಿರುತ್ತದೆ, ದಕ್ಷಿಣಾಯಣ ಸಂಕ್ರಮಣದಲ್ಲಿ ಹೆಚ್ಚುಕಡಿಮೆ ಹತ್ತೊಂಬತ್ತು ತಾಸುಗಳ ಕಾಲ ಬೆಳಕಿರುತ್ತದೆ. ಜೂನ್‌ನಿಂದ ಆಗಸ್ಟ್‌ ತನಕ, ಗರಿಷ್ಠ ಸರಾಸರಿ ಉಷ್ಣಾಂಶವು 19 °C (66 °F) ಇಂದ 21 °C (70 °F) ವರೆಗಿರುತ್ತದೆ. ದಿನಾಂಕ 18 ಜುಲೈ 1945ರಂದು ದಾಖಲಿಸಲಾದ 31.6 °C (89 °F) ನಗರದ ಕೇಂದ್ರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ, ಹಾಗೂ 18 ಜನವರಿ 1987ರಂದು ದಾಖಲಾದ −34.3 °C (−30 °F) ಕನಿಷ್ಠ ಉಷ್ಣಾಂಶವಾಗಿತ್ತು.[೧೧]

Helsinkiದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: Climatological statistics for the normal period 1971–2000[೧೦]

ನಗರದೃಶ್ಯ

[ಬದಲಾಯಿಸಿ]
ಬೇಸಿಗೆಯಲ್ಲಿ ಕೈಸಾನೀಮೆನ್ಲಹಟಿ ಪ್ರದೇಶದ ದೃಶ್ಯ.
ಹೆಲ್ಸಿಂಕಿ ಪ್ರಧಾನ ಇಗರ್ಜಿಯು ಬಹುಶಃ ನಗರದ ಬಹಳ ಪ್ರಮುಖ ಕಟ್ಟಡ ಹಾಗೂ ಚಿಹ್ನೆಯಾಗಿದೆ.
ಬಲಭಾಗದಲ್ಲಿ ಫಿನ್ಲೆಂಡ್‌ ಸಂಸತ್‌, ಎಡಭಾಗದಲ್ಲಿ ಹೊಸ ಉಪ-ಕಛೇರಿಗಳಿವೆ.
ಹೆಲ್ಸಿಂಕಿ ಕೇಂದ್ರೀಯ ರೈಲು ನಿಲ್ದಾಣ
Skyline of central Helsinki, as seen from the roof of the Erottaja fire station.

ಕಾರ್ಲ್‌ ಲುಡ್ವಿಗ್‌ ಏಂಜೆಲ್‌ (1778-1840) ಹೆಲ್ಸಿಂಕಿಯಲ್ಲಿ ಹಲವು ನವ-ಶಾಸ್ತ್ರೀಯ ಕಟ್ಟಡಗಳನ್ನು ವಿನ್ಯಾಸ ಮಾಡಿದರು. ಒಂದು ವಿಶಿಷ್ಠ ಕಾರ್ಯಭಾರಕ್ಕಾಗಿ ಅವರನ್ನು ಹೆಲ್ಸಿಂಕಿಯಲ್ಲೇ ಉಳಿಸಲಾಯಿತು. ಅವರನ್ನು ಸ್ವತಃ ಹೊಸ ನಗರ ಕೇಂದ್ರ ನಿರ್ಮಾಣ ಯೋಜನೆಗೆ ಚುನಾಯಿಸಲಾಗಿತ್ತು. ಹಲವು ಕಟ್ಟಡಗಳು ಕೇವಲ ಎರಡು ಅಥವಾ ಮೂರು ಅಂತಸ್ತುಗಳಿದ್ದ ಸಂದರ್ಭದಲ್ಲಿ ನಗರವು ತಗ್ಗು ಮತ್ತು ವಿಸ್ತಾರಪ್ರದೇಶದಿಂದ ಕೂಡಿತ್ತು. [ಸೂಕ್ತ ಉಲ್ಲೇಖನ ಬೇಕು] ಸೆನೇಟ್‌ ಸ್ಕ್ವೇರ್‌ ಏಂಜೆಲ್‌ರವರ ನಗರ ಯೋಜನೆಯ ಕೇಂದ್ರಬಿಂದುವಾಗಿತ್ತು. ಇದರ ಸುತ್ತಲೂ ಸರ್ಕಾರಿ ಅರಮನೆ, ವಿಶ್ವವಿದ್ಯಾನಿಲಯದ ಮುಖ್ಯ ಕಟ್ಟಡ, ಹಾಗೂ ಬೃಹತ್ ಪ್ರಧಾನ ಇಗರ್ಜಿ- ಸಿ.ಎಲ್‌. ಏಂಜೆಲ್‌ ನಿಧನರಾಗಿ 12 ವರ್ಷಗಳ ನಂತರ, 1852ರಲ್ಲಿ ಪೂರ್ಣಗೊಳಿಸಲಾಯಿತು. ಏಂಜೆಲ್‌ ರಚಿಸಿದ ನಗರದ ಕೇಂದ್ರ ಭಾಗದ ನವ-ಶಾಸ್ತ್ರೀಯ ವಿನ್ಯಾಸದಿಂದಾಗಿ, ಹೆಲ್ಸಿಂಕಿಗೆ ಉತ್ತರ ಗೋಲಾರ್ಧದ ಶ್ವೇತ ನಗರಿ ಎಂಬ ಉಪನಾಮ ದೊರಕಿದೆ.

Aleksanterinkatu in Central Helsinki.

ಆದರೂ, 1900ರ ದಶಕದ ಪೂರ್ವದಲ್ಲಿ ವಿನ್ಯಾಸಗೊಳಿಸಲಾದ, ಹಾಗೂ ಆ ಯುಗದಲ್ಲಿ ರಾಷ್ಟ್ರೀಯ ಭಾವಪ್ರಧಾನ ಕಲೆಯಲ್ಲಿ ಅತಿ ಜನಪ್ರಿಯ ವಿನ್ಯಾಸವಾದ ಕಾಲೆವಾಲಾ ಪ್ರಭಾವಿತ ಆರ್ಟ್‌ ನೊವ್ಯೂ (ಫಿನ್ನಿಷ್‌ ಭಾಷೆಯಲ್ಲಿ ಜುಗೆಂಡ್‌) ಕಟ್ಟಡಗಳಿಗಾಗಿ ಹೆಲ್ಸಿಂಕಿ ಪ್ರಖ್ಯಾತವಾಗಿದೆ. ಕಟಾಜಾನೊಕಾ ಮತ್ತು ಉಲಾನ್ಲಿನಾದಂತಹ ವಿಶಾಲ ವಸತಿ ಪ್ರದೇಶಗಳ ವಿನ್ಯಾಸಗಳಲ್ಲಿ ಹೆಲ್ಸಿಂಕಿಯ ಆರ್ಟ್‌ ನೊವ್ಯೂ ಶೈಲಿಯು ಎದ್ದು ಕಾಣುತ್ತದೆ. ಎಲಿಯಲ್‌ ಸಾರಿನೆನ್‌ (1873–1950) ಫಿನ್ನಿಷ್‌ ಆರ್ಟ್‌ ನೊವ್ಯೂದ ಪರಿಣತರಾಗಿದ್ದರು. ಹೆಲ್ಸಿಂಕಿ ಕೇಂದ್ರ ರೈಲು ನಿಲ್ದಾಣವು ಅವರ ವಾಸ್ತುಶೈಲಿಯ ಮೇರುಕೃತಿಯಾಗಿದೆ.

ವಿಶ್ವ-ವಿಖ್ಯಾತ ಫಿನ್ನಿಷ್‌ ವಾಸ್ತುಶಿಲ್ಪಿ ಅಲ್ವರ್‌ ಆಲ್ಟೊ (1898-1976) ವಿನ್ಯಾಸ ಮಾಡಿದ ಹಲವು ಕಟ್ಟಡಗಳು ಹೆಲ್ಸಿಂಕಿಯಲ್ಲಿವೆ. ಆಲ್ಟೊ ಕಾರ್ಯೋದ್ದೇಶ ವಾದದ ಹರಿಕಾರರಲ್ಲಿ ಒಬ್ಬರಾಗಿದ್ದರು. ಆಲ್ಟೊ ಅವರ ವಿನ್ಯಾಸಗಳಲ್ಲಿ ಹಲವನ್ನು ಮೆಚ್ಚಿದವರೂ ಉಂಟು, ಮೆಚ್ಚದವರೂ ಉಂಟು. ಕಾಗದ ತಯಾರಿಕೆಯ ಉದ್ದಿಮೆ ಎನ್ಸೊದ ಪ್ರಧಾನ ಕಾರ್ಯಸ್ಥಾನ ಹಾಗೂ ವಾದ್ಯಗೋಷ್ಠಿ ಮತ್ತು ಸಭಾ ಭವನ ಫಿನ್ಲೆಂಡಿಯಾ ಹಾಲ್‌ ಸೇರಿದಂತೆ ಅಲ್ಟೊ ವಿನ್ಯಾಸಗೊಳಿಸಿದ ಕಟ್ಟಡಗಳು, ಹೆಲ್ಸಿಂಕಿಯ ನಿವಾಸಿಗಳಲ್ಲಿ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಆಲ್ಟೊ ಅವರ ಕೃತಿಯ ಜೊತೆಗೆ, ಹೆಲ್ಸಿಂಕಿಯಲ್ಲಿ ಇನ್ನಷ್ಟು ಗಮನಾರ್ಹ ಕ್ರಿಯಾತ್ಮಕ ವಾಸ್ತುಶೈಲಿಗಳಿವೆ. ಇವುಗಳಲ್ಲಿ ಒಲಿಂಪಿಕ್‌ ಕ್ರೀಡಾಂಗಣ, ಟೆನಿಸ್‌ ಪ್ಯಾಲೆಸ್‌, ರೋಯಿಂಗ್‌ (ದೋಣಿ ನಡೆಸುವ ಕ್ರೀಡೆ) ಕ್ರೀಡಾಂಗಣ, ಈಜುಕೊಳ, ಬೈಸಿಕಲ್‌ ಓಟದ ಪಥವುಳ್ಳ ಕ್ರೀಡಾಂಗಣ, ಗಾಜಿನ ಅರಮನೆ, ಪ್ರದರ್ಶನಾ ಸಭಾಂಗಣ (ಈಗ Töölö ಸ್ಪೋರ್ಟ್ಸ್‌ ಹಾಲ್‌ ಎನ್ನಲಾಗಿದೆ) ಹಾಗೂ ಹೆಲ್ಸಿಂಕಿ-ಮಾಲ್ಮಿ ವಿಮಾನ ನಿಲ್ದಾಣವು ಸೇರಿವೆ. ಇಸವಿ 1940ರಲ್ಲಿ ಹೆಲ್ಸಿಂಕಿಯಲ್ಲಿ ನಡೆಯಬೇಕಿದ್ದ ಒಲಿಂಪಿಕ್‌ ಕ್ರೀಡಾಕೂಟಕ್ಕಾಗಿ ಈ ಕ್ರೀಡಾಂಗಣಗಳನ್ನು ಸಿದ್ಧಗೊಳಿಸಲಾಗಿತ್ತು. ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ಒಲಿಂಪಿಕ್‌ ಕ್ರೀಡಾಕೂಟವನ್ನು ಆರಂಭದಲ್ಲಿ ರದ್ದುಗೊಳಿಸಲಾಯಿತು. ಅಂತಿಮವಾಗಿ, 1952 ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಈ ಕ್ರೀಡಾಂಗಣಗಳ ಉದ್ದೇಶ ಈಡೇರಿತು. ಇವುಗಳಲ್ಲಿ ಹಲವನ್ನು ಆಧುನಿಕ ವಾಸ್ತುಶೈಲಿಯ ಗಮನಾರ್ಹ ಉದಾಹರಣೆಗಳು ಎಂದು DoCoMoMo ಪಟ್ಟಿ ಮಾಡಿವೆ. ಜೊತೆಗೆ, ರಾಷ್ಟ್ರೀಯ ಪುರಾತತ್ವ ಮಂಡಳಿಯು, ಒಲಿಂಪಿಕ್‌ ಕ್ರೀಡಾಂಗಣ ಹಾಗೂ ಹೆಲ್ಸಿಂಕಿ-ಮಾಲ್ಮಿ ವಿಮಾನ ನಿಲ್ದಾಣಗಳನ್ನು ರಾಷ್ಟ್ರೀಯ ಮಹತ್ವದ ಸಾಂಸ್ಕೃತಿಕ-ಐತಿಹಾಸಿಕ ನಿರ್ಮಾಣಗಳು ಎಂದು ಪಟ್ಟಿಮಾಡಿದೆ. [ಸೂಕ್ತ ಉಲ್ಲೇಖನ ಬೇಕು]

ಐತಿಹಾಸಿಕ ಅಡಿಬರಹದಂತೆ,USSRನಲ್ಲಿ ಚಿತ್ರೀಕರಣ ಸಾಧ್ಯವಾಗದಿದ್ದಾಗ, ಶೀತಲ ಯುದ್ಧ ಯುಗದ ಹಲವು ಹಾಲಿವುಡ್‌ ಚಲನಚಿತ್ರಗಳಲ್ಲಿ ಹೆಲ್ಸಿಂಕಿಯ ನವಶಾಸ್ತ್ರೀಯ ಕಟ್ಟಡಗಳನ್ನು ಸೋವಿಯಟ್ ಒಕ್ಕೂಟದಲ್ಲಿ ಸಂಭವಿಸಿದ ದೃಶ್ಯಗಳ ಹಿನ್ನೆಲೆಯಾಗಿ ಬಳಸಲಾಯಿತು. ದಿ ಕ್ರೆಮ್ಲಿನ್‌ ಲೆಟರ್‌ (1970), ರೆಡ್ಸ್‌ (1981) ಹಾಗೂ ಗೋರ್ಕಿ ಪಾರ್ಕ್‌ (1983) ಖ್ಯಾತ ಚಲನಚಿತ್ರಗಳಾಗಿವೆ. ಕೆಲವು ಬೀದಿದೃಶ್ಯಾವಳಿಗಳು ಲೆನಿನ್‌ಗ್ರ್ಯಾಡ್‌ ಮತ್ತು ಮಾಸ್ಕೊದ ಹಳೆಯ ಕಟ್ಟಡಗಳನ್ನು ನೆನಪಿಸುತ್ತಿದ್ದ ಕಾರಣ, ಇವುಗಳನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಯಿತು. ಇದರಿಂದಾಗಿ ಸ್ಥಳೀಯರಿಗೆ ಬಹಳ ಕಸಿವಿಸಿಯಾಯಿತು. ಇದೇ ಸಮಯಲ್ಲಿ, ಇಂತಹ ಚಲನಚಿತ್ರಗಳಿಗೆ ಯಾವುದೇ ನೆರವು ನೀಡುವುದು ಬೇಡ ಎಂದು ಸರ್ಕಾರವು ಗುಟ್ಟಾಗಿ ಫಿನ್ನಿಷ್‌ ಅಧಿಕಾರಿಗಳಿಗೆ ಸೂಚನೆ ನೀಡಿತು.[೧೨]

ಸರ್ಕಾರ

[ಬದಲಾಯಿಸಿ]

ಹೆಲ್ಸಿಂಕಿ ನಗರ ಮಂಡಳಿಯಲ್ಲಿ ಎಂಬತ್ತೈದು ಸದಸ್ಯರಿದ್ದಾರೆ. ರಾಷ್ಟ್ರೀಯ ಸಮ್ಮಿಶ್ರ ಪಕ್ಷ (26), ಗ್ರೀನ್ಸ್‌ (21), ಹಾಗೂ ಸೋಷಿಯಲ್‌ ಡೆಮೊಕ್ರಾಟ್ಸ್‌ (16) ಮೂರು ಅತಿ ಪ್ರಮುಖ ಪಕ್ಷಗಳು.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

ಹೆಲ್ಸಿಂಕಿಯಲ್ಲಿ ಹೆಚ್ಚುಕಡಿಮೆ 585,000 ಜನರಿದ್ದಾರೆ, ಇವರಲ್ಲಿ 85%ರಷ್ಟು ಜನರು ಫಿನ್ನಿಷ್‌ ಭಾಷಿಕರು ಹಾಗೂ 6.1%ರಷ್ಟು ಜನರು ಸ್ವೀಡಿಷ್‌ ಮಾತನಾಡುವರು. ಜನಸಂಖ್ಯೆಯಲ್ಲಿ 9.6%ರಷ್ಟು ಜನರ ಸ್ಥಳೀಯ ಭಾಷೆಯು ಫಿನ್ನಿಷ್‌ ಅಥವಾ ಸ್ವೀಡಿಷ್‌ ಆಗಿರಲಿಲ್ಲ. ಫಿನ್ಲೆಂಡ್‌ನಲ್ಲಿ ಇತರೆಡೆ ಮಹಿಳೆಯರ ಸಂಖ್ಯೆಯು 51.1% ಇದ್ದರೆ, ಹೆಲ್ಸಿಂಕಿಯಲ್ಲಿ ಮಹಿಳೆಯರು ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದಾರೆ (53.4%). ಪ್ರತಿ ಚದರ ಕಿಲೋಮೀಟರ್‌ ಪ್ರದೇಶದಲ್ಲಿ ಹೆಲ್ಸಿಂಕಿಯ ಸದ್ಯದ ಜನಸಂಖ್ಯೆ ಸಾಂದ್ರತೆಯು 2,739.36. ಈ ಸಂಖ್ಯೆಯು ಫಿನ್ಲೆಂಡ್‌ನಲ್ಲೇ ವ್ಯಾಪಕ ಅಂತರದ ಅತ್ಯಧಿಕ ಜನಸಾಂದ್ರತೆಯಾಗಿದೆ. ಹೆಲ್ಸಿಂಕಿಯಲ್ಲಿ ನಿವಾಸಿಯ ಆಯುರ್ನಿರೀಕ್ಷೆಯು ರಾಷ್ಟ್ರೀಯ ಸರಾಸರಿ 75.7 ವರ್ಷಗಳಿಗೆ ಹೋಲಿಸಿದಾಗ, 75.1 ವರ್ಷಗಳಿದ್ದವು. ಹೆಲ್ಸಿಂಕಿಯ ಮಹಿಳೆಯರ ಆಯುರ್ನಿರೀಕ್ಷೆ 81.7 ವರ್ಷಗಳು. ಮಹಿಳೆಯರ ರಾಷ್ಟ್ರೀಯ ಸರಾಸರಿ ಆಯುರ್ನಿರೀಕ್ಷೆ 82.5 ವರ್ಷಗಳು.[೧೩][೧೪]

1810ರ ದಶಕದಿಂದಲೂ ಹೆಲ್ಸಿಂಕಿ ಪ್ರಬಲವಾಗಿ ಅಭಿವೃದ್ಧಿ ಹೊಂದುತ್ತಿದೆ. ಆ ಕಾಲದಲ್ಲಿ ಗ್ರ್ಯಾಂಡ್‌ ಡಚಿ ಆಫ್‌ ಫಿನ್ಲೆಂಡ್‌ನ ರಾಜಧಾನಿಯನ್ನು ಟುರ್ಕುವಿನಿಂದ ಹೆಲ್ಸಿಂಕಿಗೆ ವರ್ಗಾಯಿಸಲಾಯಿತು. ನಂತರ ಗ್ರ್ಯಾಂಡ್‌ ಡಚಿ ಸರ್ವತಂತ್ರ ಸ್ವತಂತ್ರ ಫಿನ್ಲೆಂಡ್‌ ಗಣರಾಜ್ಯವಾಯಿತು. ಆ ಸಮಯದಿಂದಲೂ, ನಗರವು ಅಭಿವೃದ್ಧಿಯ ದೃಢ ಪಥದಲ್ಲಿ ಸಾಗುತ್ತಿತ್ತು. ಫಿನ್ನಿಷ್‌ ಅಂತರ್ಯುದ್ಧಅವಧಿ ಇದಕ್ಕೆ ಅಪವಾದವಾಗಿತ್ತು. ಎರಡನೆಯ ವಿಶ್ವಯುದ್ಧದ ಅಂತ್ಯದಿಂದ, 1970ರ ದಶಕದ ಕಾಲಾವಧಿಯ ತನಕ ಗ್ರಾಮಾಂತರ ಪ್ರದೇಶದಿಂದ ಬಹಳಷ್ಟು ಜನರು ಫಿನ್ಲೆಂಡ್‌ನ ನಗರ ಪ್ರದೇಶಗಳಿಗೆ ವಿಶೇಷವಾಗಿ ಹೆಲ್ಸಿಂಕಿಗೆ ವಲಸೆ ಹೋದರು. ಸುಮಾರು 20 ವರ್ಷಗಳಲ್ಲಿ ಹೆಲ್ಸಿಂಕಿಯ ಜನಸಂಖ್ಯೆಯು ದುಪ್ಪಟ್ಟಾಯಿತು. 1944ರಿಂದ 1969ರವರೆಗೆ 275000 [೧೫] ಇದ್ದದ್ದು 525600ಕ್ಕೆ ದುಪ್ಪಟ್ಟಾಯಿತು.[೧೬]

1970ರ ಕಾಲಾವಧಿಯಲ್ಲಿ, ರಾಜಧಾನಿಯಲ್ಲಿ ಗೃಹನಿರ್ಮಾಣ ವ್ಯವಸ್ಥೆಯ ಕೊರತೆಯಿಂದಾಗಿ ಹೆಲ್ಸಿಂಕಿಯ ಜನಸಂಖ್ಯಾ ಬೆಳವಣಿಗೆ ನಿಧಾನವಾಗಲಾರಂಭಿಸಿತು. [ಸೂಕ್ತ ಉಲ್ಲೇಖನ ಬೇಕು] ಹಲವು ನಿವಾಸಿಗಳು ನೆರೆಯಲ್ಲಿರುವ ಎಸ್ಪೂ ಮತ್ತು ವ್ಯಾಂಟಾ ನಗರಗಳಿಗೆ ಸ್ಥಳಾಂತರಗೊಳ್ಳಲಾರಂಭಿಸಿದರು.

ನೆರೆಯ ನಗರಗಳಲ್ಲಿ ಜನಸಂಖ್ಯೆಯ ಸ್ಫೋಟಕ ಬೆಳವಣಿಗೆಯಾಯಿತು. ಎಸ್ಪೂನ ಜನಸಂಖ್ಯೆ 1950ರಲ್ಲಿ 22,874 ಇದ್ದದ್ದು, 2009ರಲ್ಲಿ 244,353ಕ್ಕೆ ಒಂಬತ್ತು ಪಟ್ಟು ಹೆಚ್ಚಾಯಿತು. ಪಕ್ಕದಲ್ಲಿರುವ ವ್ಯಾಂಟಾದಲ್ಲಿ ಬಹಳಷ್ಟು ಬದಲಾವಣೆಗಳಿದ್ದವು. ಇಸವಿ 1950ರಲ್ಲಿ ವ್ಯಾಂಟಾದಲ್ಲಿ 14,976 ಇದ್ದದ್ದು, 2009ರಲ್ಲಿ 197,663 ಆಯಿತು; ಅರ್ಥಾತ್‌ ಹದಿಮೂರು ಪಟ್ಟು ಹೆಚ್ಚಳ. ಜನಸಂಖ್ಯೆಯಲ್ಲಿನ ಈ ರೀತಿಯ ಗಮನಾರ್ಹ ಹೆಚ್ಚಳದಿಂದಾಗಿ, ಸಾರ್ವಜನಿಕ ಸಾರಿಗೆ [೧೭] ಹಾಗೂ ತ್ಯಾಜ್ಯ ನಿರ್ವಹಣೆಯ ವಿಚಾರದಲ್ಲಿ ಈ ನಗರಗಳು ಪರಸ್ಪರ ಹೆಚ್ಚು ಸಹಕಾರದಿಂದ ಕೆಲಸ ಮಾಡಲು ಪ್ರೇರೇಪಿಸಿದವು.[೧೮] ಹೆಲ್ಸಿಂಕಿ ಮಹಾನಗರದಲ್ಲಿ ಹೆಚ್ಚುತ್ತಿರುವ ಗೃಹನಿರ್ಮಾಣ ಸಮಸ್ಯೆ ಮತ್ತು ಜೀವನವೆಚ್ಚಗಳಿಂದಾಗಿ, ದಿನನಿತ್ಯದ ಪ್ರಯಾಣಿಕರು ಮುಂಚಿನ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಇನ್ನೂ ಮುಂದಿನ ಲೊಜಾ (ನಗರ ಕೇಂದ್ರದಿಂದ 50 ಕಿಲೊಮೀಟರ್‌ ವಾಯವ್ಯ ದಿಕ್ಕಿನಲ್ಲಿ), ಹಾಮೀನ್ಲಿನ್ನಾ ಮತ್ತು ಲಾಟಿ (ಇವೆರಡೂ ಸಹ ಹೆಲ್ಸಿಂಕಿಯಿಂದ 100 ಕಿಲೊಮೀಟರ್‌ ದೂರ, ಹಾಗೂ ಪೊರ್ವೂ (೫೦ ಕಿಮೀ ಪೂರ್ವದಲ್ಲಿ) ಮುಂತಾದ ನಗರಗಳಲ್ಲಿ ಮನೆಗಳನ್ನು ಹುಡುಕಬೇಕಾಯಿತು.

1980ರ ಕಾಲಾವಧಿಯಲ್ಲಿ, ನೆರೆಹೊರೆಯ ಪಟ್ಟಣಗಳಿಗೆ ವಲಸೆಯಾಗುತ್ತಿದ್ದ ಕಾರಣ, ಹೆಲ್ಸಿಂಕಿಯಲ್ಲಿ ಬೆಳವಣಿಗೆ ಸ್ಥಗಿತವಾಗಿತ್ತು. 1990ರ ದಶಕ ಹಾಗೂ 2000ದ ದಶಕದ ಕಾಲಾವಧಿಗಳಿಂದಲೂ ಅಭಿವೃದ್ಧಿಯು ಸಕಾರಾತ್ಮಕವಾಗಿಯೂ ಇದೆ, ನಕಾರಾತ್ಮಕವಾಗಿಯೂ ಇದೆ. [ಸೂಕ್ತ ಉಲ್ಲೇಖನ ಬೇಕು] ಯುವ ಸಂಸಾರಗಳು ಹೆಚ್ಚು ಹಸಿರು ಸ್ಥಳವಿರುವ, ಅಗ್ಗದ ಗೃಹನಿರ್ಮಾಣ ವ್ಯವಸ್ಥೆ ಆಯ್ಕೆ ಮಾಡುತ್ತಿರುವುದು ಜನಸಂಖ್ಯೆ ಇಳಿಮುಖವಾಗಲು ಕಾರಣ.[ಸೂಕ್ತ ಉಲ್ಲೇಖನ ಬೇಕು] ಹೆಲ್ಸಿಂಕಿ ನಗರದಲ್ಲಿ ಮುಂಗಾಣುವಂತೆ, ಜನಸಂಖ್ಯೆಯು 2015ರಲ್ಲಿ 575,000 ಹಾಗೂ 2030ರಲ್ಲಿ 586,000 ತಲುಪುವ ನಿರೀಕ್ಷೆಯಿದೆ. ಆದರೂ, ನೈಋತ್ಯ ಸಿಪೂನ ಸ್ವಾಧೀನಪಡಿಸಿಕೊಳ್ಳಲಾದ ಪ್ರದೇಶದಲ್ಲಿ ಹೊಸದಾಗಿ ಗೃಹನಿರ್ಮಾಣ ಚಟುವಟಿಕೆ ನಡೆಯುತ್ತಿರುವ ಕಾರಣ, ನಗರದ ಜನಸಂಖ್ಯೆಯು 600,000ಕ್ಕೂ ಹೆಚ್ಚಬಹುದು ಎನ್ನಲಾಗಿದೆ. [ಸೂಕ್ತ ಉಲ್ಲೇಖನ ಬೇಕು]

ಸಿಪೂನಲ್ಲಿ ಹೊಸದಾಗಿ ಸ್ವಾಧೀನಪಡಿಸಿಕೊಳ್ಳಲಾದ ಜಮೀನು, ಹಾಗೂ ಜಾಟ್ಕಾಸಾರಿ, ಕಾಲಸಟಾಮಾ, ಕೆಸ್ಕಿ-ಪಸಿಲಾ ಹಾಗೂ ಕ್ರೂನುವೊರೆನ್ರಾಂಟಾ ನಗರಗಳ ಅಭಿವೃದ್ಧಿಯಾಗಿ, ಮುಂದೆ ಜನಸಂಖ್ಯೆ ಹೆಚ್ಚಬಹುದಾದ ಸ್ಥಳಗಳಾಗಲಿವೆ.

ಫಿನ್ನಿಷ್‌ ಮತ್ತು ಸ್ವೀಡಿಷ್‌ ಹೆಲ್ಸಿಂಕಿ ಸ್ಥಳೀಯ ಆಡಳಿತದ ಪ್ರದೇಶದ ಅಧಿಕೃತ ಭಾಷೆಗಳಾಗಿವೆ.

ಜನಸಂಖ್ಯೆಯಲ್ಲಿ ಬಹಳಷ್ಟು, ಅಂದರೆ 84.3%ರಷ್ಟು [೧೯] ಜನರು ಫಿನ್ನಿಷ್‌ ಭಾಷೆಯನ್ನು ತಮ್ಮ ಸ್ಥಳೀಯ ಭಾಷೆಯಾಗಿ ಮಾತನಾಡುತ್ತಾರೆ. ಅಲ್ಪಸಂಖ್ಯೆಯ, ಅಂದರೆ 6.1%ರಷ್ಟು ಜನರು ಫಿನ್ಲೆಂಡ್ ಸ್ವೀಡಿಷ್‌ ಭಾಷೆ ಮಾತನಾಡುತ್ತಾರೆ. ಜನಸಂಖ್ಯೆಯಲ್ಲಿ 9.6%ರಷ್ಟು ಜನರು ಫಿನ್ನಿಷ್‌ ಅಥವಾ ಸ್ವೀಡಿಷ್‌ ಹೊರತುಪಡಿಸಿ ಸ್ಥಳೀಯ ಭಾಷೆ ಮಾತನಾಡುತ್ತಾರೆ.

ಫಿನ್ಲೆಂಡ್‌ ಸ್ವಾತಂತ್ರ್ಯ ಗಳಿಸುವ ಮೂವತ್ತು ವರ್ಷಗಳ ಮುಂಚೆಯೇ, ಅಂದರೆ 1890ರಲ್ಲಿ [೨೦] ಫಿನ್ನಿಷ್‌ ಭಾಷಿಕರ ಸಂಖ್ಯೆಯು ಸ್ವೀಡಿಷ್‌ ಭಾಷಿಕರ ಸಂಖ್ಯೆಯನ್ನು ಮೀರಿಸಿ,ನಗರದ ನಿವಾಸಿಗಳಲ್ಲಿ ಬಹುಸಂಖ್ಯಾತರಾದರು. ಇಸವಿ 2008ರ ಸಮೀಕ್ಷೆಯ ಪ್ರಕಾರ,[೨೧] ಹೆಲ್ಸಿಂಕಿಯ ಜನಸಂಖ್ಯೆಯಲ್ಲಿ 6%ರಷ್ಟು ಜನರು, ಅಂದರೆ 35,125 ಜನರು ಸ್ವೀಡಿಷ್‌ ಭಾಷೆ ಮಾತನಾಡುತ್ತಿದ್ದರು.

ನಗರದ ಜನಸಂಖ್ಯೆಯಲ್ಲಿ 5.2%(29 ,200) ಫಿನ್ನಿಷ್‌ ಪೌರತ್ವ ಹೊಂದಿಲ್ಲ. ನಗರದ ಜನಸಂಖ್ಯೆಯಲ್ಲಿ 7.9%(44,400) ಫಿನ್ಲೆಂಡ್‌ ಆಚೆ ಜನಿಸಿದವರಾಗಿದ್ದಾರೆ. [ಸೂಕ್ತ ಉಲ್ಲೇಖನ ಬೇಕು] ಹೆಲ್ಸಿಂಕಿಯಲ್ಲಿ ವಾಸಿಸುತ್ತಿರುವ 33%ರಷ್ಟು ವಿದೇಶೀಯರು ಇತರೆ ಯುರೋಪ್‌ ಒಕ್ಕೂಟದ ರಾಷ್ಟ್ರದವರಾಗಿದ್ದಾರೆ. ಇಸವಿ 2008ರಲ್ಲಿ, 55,245 [೨೨] ನಿವಾಸಿಗಳು ಫಿನ್ನಿಷ್‌, ಸ್ವೀಡಿಷ್‌ ಅಥವಾ ಸಾಮಿ ಹೊರತುಪಡಿಸಿ ಅನ್ಯ ಭಾಷೆ ಮಾತನಾಡುತ್ತಿದ್ದರು. ಫಿನ್ನಿಷ್‌-ಏತರ ಹಿನ್ನೆಲೆಯುಳ್ಳ ನಿವಾಸಿಗಳ ಅತಿ ದೊಡ್ಡ ಗುಂಪುಗಳಲ್ಲಿ ಎಸ್ಟೊನಿಯಾ (5,900), ರಷ್ಯಾ (5,633), ಸೊಮಾಲಿಯಾ (2,400), ಚೀನಾ (1,150) ಹಾಗೂ ಥಾಯ್ಲೆಂಡ್‌ (680)ನಿಂದ ಆಗಮಿಸಿದವರು.[೨೩] ಫಿನ್ಲೆಂಡ್‌ನ ವಲಸಿಗರಲ್ಲಿ ಅರ್ಧದಷ್ಟು ಹೆಲ್ಸಿಂಕಿ ಮಹಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಫಿನ್ಲೆಂಡ್‌ನ ವಲಸಿಗರಲ್ಲಿ ಮೂರನೆಯ ಒಂದು ಭಾಗದಷ್ಟು ಜನರು ಹೆಲ್ಸಿಂಕಿ ನಗರದಲ್ಲಿ ವಾಸಿಸುತ್ತಿದ್ದಾರೆ.[೨೪] ಫಿನ್ಲೆಂಡ್‌ನ ಆಫ್ರಿಕನ್‌ ಮೂಲದ ಜನತೆಯಲ್ಲಿ 44%ರಷ್ಟು ಜನರು ಹೆಲ್ಸಿಂಕಿಯಲ್ಲಿದ್ದಾರೆ. ಇಸವಿ 2001ರಲ್ಲಿ, ಎಲ್ಲಾ EU-15 ರಾಜಧಾನಿಗಳಲ್ಲಿ, ಕೇವಲ ಲಿಸ್ಬನ್‌ (ಪೊರ್ಚುಗಲ್‌ ರಾಷ್ಟ್ರದ ರಾಜಧಾನಿ) ಜನಸಂಖ್ಯೆಯಲ್ಲಿ ವಲಸಿಗರ ಪಾಲು ಅತಿ ಕಡಿಮೆಯಿತ್ತು. ಏಕೀಕರಣಕ್ಕೆ ಕೆಲವು ಸವಾಲುಗಳುಂಟು, ಏಕೆಂದರೆ, ಸ್ಥಳೀಯ ಫಿನ್‌ಗಳಲ್ಲಿನ ನಿರುದ್ಯೋಗ ಪ್ರಮಾಣಕ್ಕೆ ಹೋಲಿಸಿದರೆ ವಲಸಿಗರಲ್ಲಿನ ನಿರುದ್ಯೋಗವು 2.5 ಪಟ್ಟು ಹೆಚ್ಚಿದೆ.[೨೫]

ಆರ್ಥಿಕತೆ

[ಬದಲಾಯಿಸಿ]
ಹೆಲ್ಸಿಂಕಿಯ ಮಧ್ಯದಲ್ಲಿನ ಕಾಂಪಿ ಜಿಲ್ಲೆಯಲ್ಲಿರುವ 'ಕಾಂಪಿ ಸೆಂಟರ್' - ಇದು ವ್ಯಾಪಾರ ಹಾಗೂ ಸಾರಿಗೆ ಸಂಕೀರ್ಣ ಮಳಿಗೆ.‌

ಫಿನ್ಲೆಂಡ್‌ GDPಯ ಅಂದಾಜು ಮೂರನೇ ಒಂದು ಭಾಗವನ್ನು ಹೆಲ್ಸಿಂಕಿ ಮಹಾನಗರ ಪ್ರದೇಶ ಉತ್ಪಾದಿಸುತ್ತದೆ. ತಲಾವಾರು GDPಯು ರಾಷ್ಟ್ರೀಯ ಸರಾಸರಿ[ಸೂಕ್ತ ಉಲ್ಲೇಖನ ಬೇಕು]ಗಿಂತಲೂ ಸ್ಥೂಲವಾಗಿ 1.5 ಪಟ್ಟು ಹೆಚ್ಚಿದೆ. ಇದರಿಂದಾಗಿ ಹೆಲ್ಸಿಂಕಿಯನ್ನು ಯುರೋಪ್‌ನ ಅತಿ ಶ್ರೀಮಂತ ರಾಜಧಾನಿಗಳಲ್ಲಿ ಒಂದಾಗಿಸಿದೆ. ಹೆಲ್ಸಿಂಕಿಯ ತಲಾವಾರು GDPಯು ವಿಶ್ವದ ಯಾವುದೇ ನಗರಗಳಿಗಿಂತಲೂ ಅತ್ಯಧಿಕವಾಗಿದೆ. [ಸೂಕ್ತ ಉಲ್ಲೇಖನ ಬೇಕು]

ವಿಶ್ವದ ಅತಿ ಉದ್ದನೆಯ ಸತತ ಶಿಲೆ ಸುರಂಗಗಳಲ್ಲಿ ಒಂದಾದ, 120 km (75 mi) ಉದ್ದದ ಪಾಯ್ಜಾನ್‌ ಜಲ ಸುರಂಗದಿಂದ ಸರಬರಾಜಾಗುವ ನಲ್ಲಿ ನೀರು ಅತಿಶುದ್ಧ ಗುಣಮಟ್ಟದ್ದಾಗಿದೆ. ಹೆಲ್ಸಿಂಕಿ ನಲ್ಲಿ ನೀರನ್ನು ಬಾಟಲಿಗಳಲ್ಲಿ ತುಂಬಿಸಿ, ಸೌದಿ ಅರಬಿಯಾದಂತಹ ದೇಶಗಳಿಗೆ ಮಾರುವುದೂ ಉಂಟು.[೨೬]

ಹೆಲ್ಸಿಂಕಿ ಮಹಾನಗರದಲ್ಲಿ ಉದ್ಯೋಗ ಪ್ರಮಾಣವು ಸುಮಾರು 75%ರಷ್ಟಿದ್ದು ಉದ್ಯೋಗದ ಬೆಳವಣಿಗೆ ಚೆನ್ನಾಗಿದೆ. ಲಂಡನ್‌ನಲ್ಲಿ 10% ಹಾಗೂ ಮಿಲ್ಯಾನ್‌ನಲ್ಲಿ 30%ಗೆ ಹೋಲಿಸಿದರೆ ಹೆಲ್ಸಿಂಕಿಯಲ್ಲಿ 20%ರಷ್ಟು ಜನರು ತಯಾರಿಕೆ/ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಖಾಸಗಿ ಕ್ಷೇತ್ರ ಸೇವೆಗಳಲ್ಲಿ, ವಿತರಣೆಯು ಹೀಗಿದೆ: 34.5%ರಷ್ಟು ವಹಿವಾಟು, 17%ರಷ್ಟು ಸಾರಿಗೆ, 8%ರಷ್ಟು ಹೊಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳು, 5.7%ರಷ್ಟು ಹಣಕಾಸು ಸೇವೆಗಳು ಹಾಗೂ 34.5%ರಷ್ಟು ಇತರೆ ಮಾರುಕಟ್ಟೆ ಸೇವೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]

ಮಹಾನಗರ ಪ್ರದೇಶದ ಒಟ್ಟು ಮೌಲ್ಯವರ್ಧಿತ ತಲಾವಾರು 27 ಯುರೋಪಿಯನ್‌ ಮಹಾನಗರ ಪ್ರದೇಶಗಳ ಸರಾಸರಿಯ 200%ರಷ್ಟಿದೆ. ಇದು ಸ್ಟಾಕ್ಹೋಮ್‌ ಅಥವಾ ಪ್ಯಾರಿಸ್‌ಗೆ ಸಮನಾಗಿದೆ. ಒಟ್ಟು ಮೌಲ್ಯವರ್ಧಿತ ವಾರ್ಷಿಕ ಅಭಿವೃದ್ಧಿ 4%ರಷ್ಟಿದೆ.[೨೭]

100 ಅತಿದೊಡ್ಡ ಫಿನ್ನಿಷ್‌ ಉದ್ದಿಮೆಗಳಲ್ಲಿ 83 ಉದ್ದಿಮೆಗಳ ಪ್ರಧಾನ ಕಾರ್ಯಸ್ಥಾನಗಳು ಗ್ರೇಟರ್‌ ಹೆಲ್ಸಿಂಕಿಯಲ್ಲಿವೆ. 200 ಜನ ಅತಿಹೆಚ್ಚು ವೇತನ ಪಡೆಯುವ ಫಿನ್ನಿಷ್‌ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಮೂರನೇ ಎರಡರಷ್ಟು ಗ್ರೇಟರ್‌ ಹೆಲ್ಸಿಂಕಿಯಲ್ಲಿ ಹಾಗೂ 42%ರಷ್ಟು ಜನರು ಹೆಲ್ಸಿಂಕಿಯಲ್ಲಿ ವಾಸಿಸುತ್ತಿದ್ದಾರೆ. ಪ್ರಮುಖ 50 ಅತಿ ಹೆಚ್ಚು ಸಂಪಾದನೆಯುಳ್ಳವರ ಸರಾಸರಿ ಆದಾಯವು 1.65 ದಶಲಕ್ಷ ಯುರೋಗಳಾಗಿದ್ದವು.[೨೮]

ಶಿಕ್ಷಣ

[ಬದಲಾಯಿಸಿ]
ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ಪ್ರಮುಖ ಕಟ್ಟಡ.
ಹೇಗಾ-ಹೀಲಿಯಾ ಯುನಿವರ್ಸಿಟಿ ಆಫ್‌ ಅಪ್ಲೈಡ್ ಸೈಯನ್ಸಸ್‌ ಫಿನ್ಲೆಂಡ್‌ನ ಅತಿ ದೊಡ್ಡ ವಾಣಿಜ್ಯ ಪಾಲಿಟೆಕ್ನಿಕ್‌ ವಿದ್ಯಾಲಯ.

ಹೆಲ್ಸಿಂಕಿಯಲ್ಲಿ 190 ವಿವಿಧೋದ್ದೇಶ ಶಾಲೆಗಳು, 41 ಉನ್ನತ ಪ್ರೌಢಶಾಲೆಗಳು ಹಾಗೂ 15 ಔದ್ಯೋಗಿಕ ವಿದ್ಯಾಸಂಸ್ಥೆಗಳಿವೆ. ಈ 41 ಉನ್ನತ ಪ್ರೌಢ ಶಿಕ್ಷಣಾ ಸಂಸ್ಥೆಗಳಲ್ಲಿ ಅರ್ಧದಷ್ಟು ಖಾಸಗಿ ಅಥವಾ ಸರ್ಕಾರ-ಸ್ವಾಮ್ಯಕ್ಕೆ ಒಳಪಟ್ಟಿವೆ, ಉಳಿದೆಲ್ಲವೂ ಸ್ಥಳೀಯ ಆಡಳಿತ ಸ್ವಾಮ್ಯದಲ್ಲಿವೆ. ಎಂಟು ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಮಟ್ಟದ ವ್ಯಾಸಂಗ ವ್ಯವಸ್ಥೆಯಿದೆ (ಕೆಳಗೆ 'ವಿಶ್ವವಿದ್ಯಾನಿಲಯಗಳು' ವಿಭಾಗ ನೋಡಿ) ಹಾಗೂ ನಾಲ್ಕು ಪಾಲಿಟೆಕ್ನಿಕ್‌ ವಿದ್ಯಾಸಂಸ್ಥೆಗಳೂ ಇವೆ.

ಉನ್ನತ ಶಿಕ್ಷಣದ ವಿದ್ಯಾಸಂಸ್ಥೆಗಳು

[ಬದಲಾಯಿಸಿ]

ವಿಶ್ವವಿದ್ಯಾಲಯಗಳು

[ಬದಲಾಯಿಸಿ]

ಪಾಲಿಟೆಕ್ನಿಕ್‌ ವಿದ್ಯಾಸಂಸ್ಥೆಗಳು

[ಬದಲಾಯಿಸಿ]

ಯುರೊಪಿಯನ್‌ ನವೀನತೆ ಮತ್ತು ತಂತ್ರಜ್ಞಾನ ಸಂಸ್ಥೆಯ (EIT) ಜ್ಞಾನ ಮತ್ತು ನವೀನತಾ ಸಮುದಾಯದ (ನಾಳಿನ ಮಾಹಿತಿ ಮತ್ತು ಸಂವಹನ ಸಮಾಜ)ಸಹ-ಸ್ಥಾಪನೆ ಕೇಂದ್ರಗಳಲ್ಲಿ ಒಂದು ಹೆಲ್ಸಿಂಕಿಯಲ್ಲಿದೆ.[೨೯]

ಸಂಸ್ಕೃತಿ

[ಬದಲಾಯಿಸಿ]
ಹೆಲ್ಸಿಂಕಿಯ ಕೇಂದ್ರದಲ್ಲಿರುವ ಕಿಯಾಸ್ಮಾ ಸಮಕಾಲೀನ ಕಲಾ ವಸ್ತು ಪ್ರದರ್ಶನಾಲಯ.

ನ್ಯಾಷನಲ್‌ ಮ್ಯೂಸಿಯಮ್‌ ಆಫ್‌ ಫಿನ್ಲೆಂಡ್‌ ಎಂಬುದು ಹೆಲ್ಸಿಂಕಿಯ ಅತಿದೊಡ್ಡ ಐತಿಹಾಸಿಕ ವಸ್ತುಪ್ರದರ್ಶನಾಲಯ. ಇತಿಹಾಸಪೂರ್ವ ಯುಗದಿಂದ ಹಿಡಿದು 21ನೆಯ ಶತಮಾನದ ತನಕದ ಪ್ರಮುಖ ವಸ್ತುಗಳ ವಿಶಾಲ ಸಂಗ್ರಹವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ವಸ್ತು ಪ್ರದರ್ಶನಾಲಯದ ಕಟ್ಟಡವು ರಾಷ್ಟ್ರೀಯ ರಮ್ಯ ಶೈಲಿಯಲ್ಲಿ, ನವ-ಮಧ್ಯಯುಗೀಯ ಶೈಲಿಯ ಕೋಟೆಯಂತಿರುವ ಇದು ಪ್ರವಾಸಿಗಳ ಮುಖ್ಯ ಆಕರ್ಷಣಾ ಸ್ಥಳಗಳಲ್ಲಿ ಒಂದು. ಹೆಲ್ಸಿಂಕಿಯ 500 ವರ್ಷ ಹಳೆಯ ಇತಿಹಾಸವನ್ನು ಪ್ರವಾಸಿಗರಿಗೆ ಪರಿಚಯಿಸುವ ಹೆಲ್ಸಿಂಕಿ ನಗರ ವಸ್ತುಪ್ರದರ್ಶನಾಲಯವು ಇನ್ನೊಂದು ಪ್ರಮುಖ ಐತಿಹಾಸಿಕ ವಸ್ತುಪ್ರದರ್ಶನಾಲಯವಾಗಿದೆ. ವಿಶ್ವವಿದ್ಯಾನಿಲಯ ವಸ್ತುಪ್ರದರ್ಶನಾಲಯ ಹಾಗೂ ರಾಷ್ಟ್ರೀಯ ಇತಿಹಾಸ ವಸ್ತುಪ್ರದರ್ಶನಾಲಯ ಸೇರಿದಂತೆ ಹಲವು ಗಮನಾರ್ಹ ವಸ್ತು ಪ್ರದರ್ಶನಾಲಯಗಳು ಹೆಲ್ಸಿಂಕಿ ವಿಶ್ವವಿದ್ಯಾನಿಲಯದಲ್ಲಿವೆ.

ಫಿನ್ನಿಷ್ ರಾಷ್ಟ್ರೀಯ ಕಲಾ-ಚಿತ್ರಶಾಲೆಯಲ್ಲಿ ಮೂರು ವಸ್ತುಪ್ರದರ್ಶನಾಲಯಗಳಿವೆ: ಶಾಸ್ತ್ರೀಯ ಫಿನ್ನಿಷ್‌ ಕಲೆಗಾಗಿ ಅಟೆನಿಯಮ್‌ ಕಲಾ ವಸ್ತುಪ್ರದರ್ಶನಾಲಯ, ಶಾಸ್ತ್ರೀಯ ಯುರೋಪಿಯನ್‌ ಕಲೆಗಾಗಿ ಸಿನಬ್ರಿಚಾಫ್‌ ಕಲಾ ವಸ್ತುಪ್ರದರ್ಶನಾಲಯ, ಹಾಗೂ ಆಧುನಿಕ ಕಲೆಗಾಗಿ ಕಿಯಾಸ್ಮಾ ಕಲಾ ವಸ್ತುಪ್ರದರ್ಶನಾಲಯ. ಹತ್ತೊಂಬತ್ತನೆಯ ಶತಮಾನದ ನವ-ಪುನರುದಯ ಯುಗದ ಅರಮನೆಯಾದ ಅಟೆನಿಯಮ್‌, ನಗರದ ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲೊಂದು. ಬಹಳಷ್ಟು ಆಧುನಿಕ ಕಿಯಾಸ್ಮಾ ಬಹುಶಃ ಹೆಲ್ಸಿಂಕಿಯಲ್ಲೇ ಅತಿ ಚರ್ಚಿತ ಕಟ್ಟಡವಾಗಿದೆ. ಈ ಮೂರೂ ವಸ್ತುಸಂಗ್ರಹಾಲಯ ಕಟ್ಟಡಗಳು ಸೆನೇಟ್‌ ಪ್ರಾಪರ್ಟೀಸ್‌ ಮೂಲಕ ಸರ್ಕಾರ ಸ್ವಾಮ್ಯದಲ್ಲಿವೆ.

ಹೆಲ್ಸಿಂಕಿಯಲ್ಲಿ ಮೂರು ರಂಗಮಂದಿರಗಳಿವೆ: ಫಿನ್ನಿಷ್‌ ರಾಷ್ಟ್ರೀಯ ರಂಗಮಂದಿರ, ಹೆಲ್ಸಿಂಕಿ ನಗರ ರಂಗಮಂದಿರ, ಹಾಗೂ ಫಿನ್ಲೆಂಡ್‌ ಸ್ವೀಡಿಷ್‌ ಸ್ವೆನ್ಸ್ಕಾ ಟಿಯಟರ್ನ್‌. ಫಿನ್ನಿಷ್‌ ರಾಷ್ಟ್ರೀಯ ಗೀತ-ನಾಟಕ ಭವನ ಹಾಗೂ ಫಿನ್ಲೆಂಡಿಯಾ ವಾದ್ಯಗೋಷ್ಠಿ ಸಭಾಂಗಣ ಹೆಲ್ಸಿಂಕಿ ನಗರದ ಪ್ರಮುಖ ಸಂಗೀತ ಗೋಷ್ಠಿ ಸಭಾಭವನಗಳು. ದೊಡ್ಡ ಪ್ರಮಾಣದ ಸಂಗೀತಗೋಷ್ಠಿಗಳು ಮತ್ತು ಸಮಾರಂಭಗಳನ್ನು ಸಾಮಾನ್ಯವಾಗಿ ನಗರದ ಎರಡು ಹಿಮ-ಹಾಕಿ ಕ್ರೀಡಾಂಗಣಗಳಾದ ಹಾರ್ಟ್ವಾಲ್‌ ಅರೀನಾ ಮತ್ತು ಹೆಲ್ಸಿಂಕಿ ಐಸ್‌ ಹಾಲ್‌ಪೈಕಿ ಒಂದರಲ್ಲಿ ಆಯೋಜಿಸಲಾಗುತ್ತದೆ. ಫಿನ್ಲೆಂಡ್‌ನ ಅತಿ ದೊಡ್ಡ ಜಾತ್ರೆ ಕೇಂದ್ರವು ಹೆಲ್ಸಿಂಕಿಯಲ್ಲಿದೆ.

ಉತ್ತರ ಯುರೋಪ್‌ [ಸೂಕ್ತ ಉಲ್ಲೇಖನ ಬೇಕು] ವಲಯದಲ್ಲಿ ಹೆಲ್ಸಿಂಕಿ ಜನಪ್ರಿಯ ಸಂಗೀತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಹನೊಯಿ ರಾಕ್ಸ್‌, HIM, ಸ್ಟ್ರೇಟೊವೇರಿಯಸ್‌, ದಿ 69 ಐಯ್ಸ್‌, ನಾರ್ದರ್‌, ವಿಂಟರ್ಸನ್‌, ಫಿನ್ಟ್ರೊಲ್‌, ಎನ್ಸಿಫೆರಮ್‌, ದಿ ರಾಸ್ಮಸ್‌, ಷೇಪ್‌ ಆಫ್‌ ಡಿಸ್ಪೇರ್‌ ಹಾಗೂ ಅಪೊಕೆಲಿಪ್ಟಿಕಾ ಸೇರಿದಂತೆ, ಹೆಲ್ಸಿಂಕಿ ಮೂಲದ ಹಲವು ಖ್ಯಾತ ಮತ್ತು ಪ್ರಶಂಶೆಗೊಳಗಾದ ವಾದ್ಯ ತಂಡಗಳಿಗೆ ಹೆಲ್ಸಿಂಕಿ ಮೂಲವಾಗಿದೆ.

ಯುರೊವಿಷನ್‌ ಗಾಯನ ಸ್ಪರ್ಧೆ 2007 ಹೆಲ್ಸಿಂಕಿ ಅರೆನಾದಲ್ಲಿ ನಡೆಯಿತು. ಇಸವಿ 2006ರಲ್ಲಿ ಲಾರ್ಡಿಸ್ಪರ್ಧೆಯಲ್ಲಿ ಜಯಗಳಿಸಿದ ನಂತರ, ಇದು ಫಿನ್ಲೆಂಡ್‌ನಲ್ಲೇ ಮೊಟ್ಟಮೊದಲ ಬಾರಿಗೆ ಆಯೋಜಿಸಲಾದ ಯುರೊವಿಷನ್‌ ಗಾಯನ ಸ್ಪರ್ಧೆಯಾಗಿತ್ತು.

ನಗರದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ವಿನ್ಯಾಸವೆಂಬ ಸಾಧನವನ್ನು ಪರಿಣಾಮಕಾರಿಯಾಗಿ ಬಳಸಿದ ಕಾರಣ, ಹೆಲ್ಸಿಂಕಿ ನಗರವು 2012 ವಿಶ್ವ ವಿನ್ಯಾಸ ರಾಜಧಾನಿ ಎಂಬ ಮನ್ನಣೆ ಪಡೆದಿದೆ. ಹೆಲ್ಸಿಂಕಿಯನ್ನು ಆಯ್ಕೆ ಮಾಡಲು,ವಿಶ್ವವಿನ್ಯಾಸ ರಾಜಧಾನಿ ಆಯ್ಕೆ ಮಂಡಳಿಯು ಹೆಲ್ಸಿಂಕಿ ನಗರದಲ್ಲಿ ನಾವೀನ್ಯತೆಯಿಂದ ರೂಪಿಸಿದ 'ಅಳವಡಿಸಿದ ವಿನ್ಯಾಸ'ದ ಬಳಕೆ ಬಗ್ಗೆ,ನೊಕಿಯಾ, ಕೋನ್ ಮತ್ತು ಮೆರಿಮೆಕೊನಂತಹ ಜಾಗತಿಕ ಬ್ರ್ಯಾಂಡ್‌ಗಳ ಸೃಷ್ಟಿ, ವಾರ್ಷಿಕ ಹೆಲ್ಸಿಂಕಿ ವಿನ್ಯಾಸ ಸಪ್ತಾಹ, ಹೆಲ್ಸಿಂಕಿ ಕಲಾ ಮತ್ತು ವಿನ್ಯಾಸ ವಿಶ್ವವಿದ್ಯಾನಿಲಯಮುಂತಾದ ಮಹೋನ್ನತ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಗಳು ಹಾಗೂ ಎಲಿಯಲ್‌ ಸಾರಿನೆನ್‌ ಹಾಗೂ ಅಲ್ವರ್‌ ಆಲ್ಟೊರಂತಹ ಮೇರು ವಿನ್ಯಾಸಗಾರರ ಬಗ್ಗೆ ಗಮನ ಸೆಳೆದಿದೆ.

ಕ್ರೀಡೆಗಳು

[ಬದಲಾಯಿಸಿ]
ಇಸವಿ 1952ರಲ್ಲಿ ಬೇಸಿಗೆಯ ಒಲಿಂಪಿಕ್‌ ಕ್ರೀಡಾಕೂಟ ನಡೆದ ಸಮಯ ಹೆಲ್ಸಿಂಕಿ ಒಲಿಂಪಿಕ್‌ ಕ್ರೀಡಾಂಗಣವು ಚಟುವಟಿಕೆಗಳ ಆಗರವಾಗಿತ್ತು.

ಹೆಲ್ಸಿಂಕಿಯಲ್ಲಿ ಕ್ರೀಡೆಯ ಸುದೀರ್ಘ ಪರಂಪರೆಯಿದೆ. 1952ರ ಬೇಸಿಗೆ ಒಲಿಂಪಿಕ್‌ ಕ್ರೀಡಾಕೂಟದ ಮೂಲಕ ಹೆಲ್ಸಿಂಕಿಗೆ ಆರಂಭದ ಅಂತಾರಾಷ್ಟ್ರೀಯ ಮನ್ನಣೆ ದೊರಕಿತು. ಇದರ ನಂತರ ಹೆಲ್ಸಿಂಕಿ ಕ್ರೀಡಾಕೂಟಗಳನ್ನು ಆಯೋಜಿಸಲು ಮುಕ್ತ ಮನಸ್ಸು ಹೊಂದಿದೆ. ಉದಾಹರಣೆಗೆ ಇಸವಿ 1983 ಮತ್ತು 2005ರ ಮೊಟ್ಟಮೊದಲ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಜೊತೆಗೆ 1971, 1994 ಹಾಗೂ 2012ರಲ್ಲಿ ಯುರೋಪಿಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಇತ್ಯಾದಿಗಳು. ಹೆಲ್ಸಿಂಕಿ ಫಿನ್ಲೆಂಡ್‌ನ ಅತ್ಯಂತ ಜನಪ್ರಿಯ ಕ್ರೀಡೆಗಳಾದ ಫುಟ್ಬಾಲ್ ಮತ್ತು ಹಾಕಿ ಎರಡರಲ್ಲೂ ಹೆಲ್ಸಿಂಕಿ ಸ್ಥಳೀಯ ತಂಡಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಫಿನ್ಲೆಂಡ್‌ನ ಅತಿ ದೊಡ್ಡ ಹಾಗು ಅತಿ ಯಶಸ್ವಿ ಫುಟ್ಬಾಲ್‌ ತಂಡವಾದ HJK ಹೆಲ್ಸಿಂಕಿಯಲ್ಲಿದೆ.

ಹೆಲ್ಸಿಂಕಿ ಮೂಲದ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಸಂಘ ಹೆಲ್ಸಿಂಗಿನ್‌ ಕಿಸಾ-ವೇಕಾಟ್‌ ಫಿನ್ಲೆಂಡ್‌ನಲ್ಲಿ ಪ್ರಾಬಲ್ಯ ಮೆರೆದಿದೆ‌. ಹಲವು ಹೆಲ್ಸಿಂಕಿ ನಿವಾಸಿಗಳಿಗೆ ಹಿಮ-ಹಾಕಿ ಬಹಳ ಉತ್ಸಾಹ ನೀಡುವ ಕ್ರೀಡೆ. ನಿವಾಸಿಗಳು ಸ್ಥಳೀಯ ಕ್ಲಬ್‌ಗಳಾದ HIFK ಅಥವಾ ಜೊಕರಿಟ್‌ಬಗ್ಗೆ ತರ್ಕಬದ್ಧ ಮನೋದೃಷ್ಟಿ ಹೊಂದಿದ್ದಾರೆ. ಹದಿನಾಲ್ಕು ಚ್ಯಾಂಪಿಯನ್ಷಿಪ್‌ ಪ್ರಶಸ್ತಿಗಳನ್ನು ಗಳಿಸಿರುವ HIFK, ಅತ್ಯುನ್ನತ ಬ್ಯಾಂಡಿ ಡಿವಿಷನ್‌ [೩೦] ನಲ್ಲಿ ಆಡುತ್ತದೆ, ಇದರಂತೆ ಬಾಟ್ನಿಯಾ -69 ಸಹ.

ಇಸವಿ 1957ರಲ್ಲಿ ಒಲಿಂಪಿಕ್‌ ಕ್ರೀಡಾಂಗಣವು ಮೊಟ್ಟಮೊದಲ ಬ್ಯಾಂಡಿ ವಿಶ್ವ ಚಾಂಪಿಯನ್ಷಿಪ್‌ಗಳ ಆತಿಥ್ಯ ವಹಿಸಿತು.[೩೧]

ಸಾರಿಗೆ

[ಬದಲಾಯಿಸಿ]
ಹೆಲ್ಸಿಂಕಿ ಪ್ರದೇಶದ ರಸ್ತೆಗಳು.

ರಸ್ತೆಗಳು

[ಬದಲಾಯಿಸಿ]

ಹೆಲ್ಸಿಂಕಿಯಲ್ಲಿ ಹಲವು ವರ್ತುಲ ರಸ್ತೆಗಳಿವೆ: ಕೆಹಾ I, ಕೆಹಾ II ಹಾಗೂ ಕೆಹಾ III. ನಗರದ ಮಧ್ಯಭಾಗದಿಂದ ಪೂರ್ವ ಮತ್ತು ಪಶ್ಚಿಮಕ್ಕೆ, ಇಟಾವಾಯಲಾ ಹಾಗೂ ಲಾನ್ಸಿವಾಯ್ಲಾ ರಸ್ತೆಗಳು ಹಾದುಹೋಗುತ್ತವೆ. ನಗರದ ಮದ್ಯಭಾಗದಿಂದ ಉತ್ತರಕ್ಕೆ ಹಲವು ಮಾರ್ಗಗಳಿವೆ. ಹೆಲ್ಸಿಂಕಿ ಕೇಂದ್ರ ಭಾಗದ ಕೆಳಗೆ, ಬೀದಿಗಳಿಂದ ಕಾರ್‌ಗಳನ್ನು ಮರೆಮಾಚಲು, ಸ್ಟಾಕ್ಹೋಮ್‌-ತರಹದ ಸುರಂಗ ನಿರ್ಮಿಸುವ ಪ್ರಸ್ತಾಪವಿದೆ. ಕೇಂದ್ರ ಹೆಲ್ಸಿಂಕಿಯಲ್ಲಿ ಜನಪ್ರಿಯ ಭೂಗರ್ಭದ ವಾಹನ ನಿಲುಗಡೆ ವ್ಯವಸ್ಥೆಗಳಿವೆ.

ಹೆಲ್ಸಿಂಕಿಯಲ್ಲಿ ಪ್ರತಿ 1000 ವಾಸಿಗಳಲ್ಲಿ 390 ಕಾರುಗಳಿವೆ.[೩೨] ಇದೇ ರೀತಿಯ ಸಾಂದ್ರತೆಯುಳ್ಳ ನಗರಗಳಿಗೆ ಹೋಲಿಸಿದರೆ ಇದು ಕಡಿಮೆ. ಉದಾಹರಣೆಗೆ, ಬ್ರಸೆಲ್ಸ್‌ನಲ್ಲಿ ಪ್ರತಿ ಸಾವಿರ ವಾಸಿಗಳಿಗೆ 483, ಸ್ಟಾಕ್ಹೋಮ್‌ನಲ್ಲಿ 401 ಹಾಗೂ ಓಸ್ಲೊದಲ್ಲಿ 413 ಕಾರುಗಳಿವೆ.[೩೩][೩೪]

ರೈಲು ಹಾಗೂ ಬಸ್‌ ಸಾರಿಗೆಗಳು

[ಬದಲಾಯಿಸಿ]
ಹೊಳಪಿನ ಹಳದಿ ಬಣ್ಣದ ರೈಲುಗಳ ವೈಶಿಷ್ಟ್ಯದಿಂದ ಹೆಲ್ಸಿಂಕಿ ಮೆಟ್ರೊ ವಿಶ್ವದಲ್ಲೇ ಅತ್ಯಂತ ಉತ್ತರದಲ್ಲಿರುವ ರೈಲು ಸುರಂಗಮಾರ್ಗ.
ವಿಶ್ವದ ಅತಿ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದಾದ, ಹಾಗೂ ಫಿನ್ಲೆಂಡ್‌ನ ಪ್ರಮುಖ ಸಾಮಾನ್ಯ ವಿಮಾನಯಾನ ಕೇಂದ್ರವಾಗಿರುವ ಮಾಲ್ಮಿ ವಿಮಾನ ನಿಲ್ದಾಣ.

ಹೆಲ್ಸಿಂಕಿಯ ಸ್ಥಳೀಯ ರಾಜಕೀಯದಲ್ಲಿ ಸಾರ್ವಜನಿಕ ಸಾರಿಗೆ ಬಹಳಷ್ಟು ಬಿಸಿ ಚರ್ಚೆಯ ವಿಷಯವಾಗಿದೆ. ಹೆಲ್ಸಿಂಕಿ ಮಹಾನಗರ ಪ್ರದೇಶದಲ್ಲಿ, ಸಾರ್ವಜನಿಕ ಸಾರಿಗೆಯನ್ನು ಹೆಲ್ಸಿಂಕಿ ವಲಯ ಸಾರಿಗೆ ಎಂಬ ಮಹಾನಗರ ವಲಯ ಸಾರಿಗೆ ಪ್ರಾಧಿಕಾರವು ನಿರ್ವಹಿಸುತ್ತದೆ. ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಟ್ರ್ಯಾಮ್‌ಗಳು, ಪ್ರಯಾಣಿಕ ರೈಲು, ಸುರಂಗ ಸಾರಿಗೆ, ಬಸ್‌ ಮಾರ್ಗಗಳು ಹಾಗೂ ಎರಡು ದೋಣಿ ಮಾರ್ಗಗಳು.

ಇಂದು,ಹೆಲ್ಸಿಂಕಿ ಟ್ರ್ಯಾಮ್‌ ಅಥವಾ ಸುರಂಗ ಸಾರಿಗೆ ರೈಲುಗಳನ್ನು ಹೊಂದಿರುವ ಫಿನ್ಲೆಂಡ್‌ನ ಏಕೈಕ ನಗರವಾಗಿದೆ. ಫಿನ್ಲೆಂಡ್‌ನಲ್ಲಿ ಇನ್ನೂ ಎರಡು ನಗರಗಳಲ್ಲಿ ಟ್ರ್ಯಾಮ್‌ ಸೇವೆಗಳಿದ್ದವು: ಟುರ್ಕು ಹಾಗು ವೀಪುರಿ (ವೈಬೊರ್ಗ್‌ ಇಂದು ರಷ್ಯಾದಲ್ಲಿದೆ). ಆದರೆ, ಇವೆರಡೂ ನಗರಗಳಲ್ಲಿ ಟ್ರ್ಯಾಮ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಸವಿ 1982ರಲ್ಲಿ ಆರಂಭಗೊಂಡ ಹೆಲ್ಸಿಂಕಿ ಮೆಟ್ರೊ ಫಿನ್ಲೆಂಡ್‌ನ ಏಕೈಕ ಸುರಂಗ ರೈಲು ಮಾರ್ಗ ವ್ಯವಸ್ಥೆಯಾಗಿದೆ. ಬಹಳಷ್ಟು ಚರ್ಚಿತವಾದ ಎಸ್ಪೂದೊಳಗಿನ ಸುರಂಗ ರೈಲು ಮಾರ್ಗ ವ್ಯವಸ್ಥೆಯ ಪಶ್ಚಿಮ ವಿಸ್ತರಣೆಯನ್ನು ಇಸವಿ 2006ರಲ್ಲಿ ಮಂಜೂರು ಮಾಡಲಾಯಿತು. ಆ ವೇಳೆಗೆ ಸಿಪೂ ತನಕ ಪೂರ್ವ ದಿಕ್ಕಿನ ವಿಸ್ತರಣೆ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿತ್ತು.[೩೫]

ವಾಯುಯಾನ

[ಬದಲಾಯಿಸಿ]

ಅಂತಾರಾಷ್ಟ್ರೀಯ ದರ್ಜೆಯ ಹೆಲ್ಸಿಂಕಿ-ವ್ಯಾಂಟಾ ವಿಮಾನ ನಿಲ್ದಾಣದಿಂದ ಮುಖ್ಯವಾಗಿ ವಿಮಾನಸಂಚಾರವನ್ನು ನಿಭಾಯಿಸಲಾಗಿದೆ. ಈ ವಿಮಾನ ನಿಲ್ದಾಣವು ಹೆಲ್ಸಿಂಕಿಯ ವಾಣಿಜ್ಯ ಪ್ರದೇಶದ 19 kilometres (12 mi) ಉತ್ತರದಲ್ಲಿ, ಪಕ್ಕದ ನಗರವಾದ ವ್ಯಾಂಟಾದಲ್ಲಿದೆ. ಹೆಲ್ಸಿಂಕಿಯ ಎರಡನೆಯ ವಿಮಾನ ನಿಲ್ದಾಣವಾದ ಮಾಲ್ಮಿ ವಿಮಾನ ನಿಲ್ದಾಣವನ್ನು ಸಾಮಾನ್ಯ ಮತ್ತು ಖಾಸಗಿ ವಿಮಾನ ಸಂಚಾರಕ್ಕಾಗಿ ಬಳಸಲಾಗಿದೆ. ಕಾಪ್ಟರ್ಲೈನ್‌ ಟ್ಯಾಲಿನ್‌ ನಗರದತ್ತ ಅತಿ ವೇಗದ (18 ನಿಮಿಷಗಳು) ಹೆಲಿಕಾಪ್ಟರ್‌ ಹಾರಾಟ ಸೇವೆಯನ್ನು ಒದಗಿಸಿತು. ಆದರೆ, ಲಾಭದಾಯಕವಾಗಿರದ ಕಾರಣ, ಡಿಸೆಂಬರ್ 2008ರಲ್ಲಿ ಕಾಯಂ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ಸಮುದ್ರ ಸಾರಿಗೆ

[ಬದಲಾಯಿಸಿ]

ಹಲವು ಉದ್ದಿಮೆಗಳು ಹೆಲ್ಸಿಂಕಿಯಿಂದ ಟ್ಯಾಲಿನ್ ಹಾಗೂ ಸ್ಟಾಕ್ಹೋಮ್‌ ನಗರಗಳಿಗೆ ಹಡಗು ಸೇವೆ ಒದಗಿಸುತ್ತಿವೆ. ಪೋಲೆಂಡ್‌ನ ಗಿಡಿನಿಯಾ ಹಾಗೂ ಜರ್ಮನಿಯ ಟ್ರ್ಯಾವೆಮುಂಡ್ ಕಡೆಗೆ ಫಿನ್‌ಲೈನ್ಸ್‌ ಎಂಬ ಪ್ರಯಾಣಿಕ ಮತ್ತು ಸರಕಿನ ಹಡಗುಗಳ ಸೇವೆ ಲಭ್ಯ. ಇಸವಿ 2007ರಲ್ಲಿ ಟಾಲಿಂಕ್‌ ಜರ್ಮನಿಯ ರಾಸ್ಟಾಕ್‌ ಕಡೆಗೆ ಹಡಗು ಸೇವೆಯನ್ನು ಆರಂಭಿಸಿತು.

ಗ್ಯಾಲರಿ

[ಬದಲಾಯಿಸಿ]

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

ಉಲ್ಲೇಖಗಳು

[ಬದಲಾಯಿಸಿ]
ಟಿಪ್ಪಣಿಗಳು
  1. ೧.೦ ೧.೧ ೧.೨ ೧.೩ "Area by municipality as of ೧ ಜನವರಿ ೨೦೧೧" (PDF) (in Finnish and Swedish). Land Survey of Finland. Retrieved ೯ ಮಾರ್ಚ್ ೨೦೧೧. {{cite web}}: Check date values in: |accessdate= (help)CS1 maint: unrecognized language (link)
  2. ೨.೦ ೨.೧ ೨.೨ ೨.೩ ೨.೪ "VÄESTÖTIETOJÄRJESTELMÄ REKISTERITILANNE 30.11.2014" (in Finnish and Swedish). Population Register Center of Finland. Retrieved 29 December 2014.{{cite web}}: CS1 maint: unrecognized language (link)
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ "Population according to language and the number of foreigners and land area km2 by area as of ೩೧ ಡಿಸೆಂಬರ್ ೨೦೦೮". Statistics Finland's PX-Web databases. Statistics Finland. Retrieved ೨೯ ಮಾರ್ಚ್ ೨೦೦೯. {{cite web}}: Check date values in: |accessdate= (help)
  4. ೪.೦ ೪.೧ "List of municipal and parish tax rates in 2011". Tax Administration of Finland. ೨೯ ನವೆಂಬರ್ ೨೦೧೦. Retrieved ೧೩ ಮಾರ್ಚ್ ೨೦೧೧. {{cite web}}: Check date values in: |accessdate= and |date= (help)
  5. ೫.೦ ೫.೧ ೫.೨ ೫.೩ ೫.೪ "Population according to age and gender by area as of ೩೧ ಡಿಸೆಂಬರ್ ೨೦೦೮". Statistics Finland's PX-Web databases. Statistics Finland. Retrieved ೨೮ ಏಪ್ರಿಲ್ ೨೦೦೯. {{cite web}}: Check date values in: |accessdate= (help)
  6. ಹೆಲ್ಸಿಂಕಿ ವಲಯದ ಕುರಿತು ಸಂಕ್ಷಿಪ್ತ ವಿವರಣೆ
  7. ಏಕೀಕರಣ ಪ್ರಸ್ತಾಪದ ಪುನರ್ಪರಿಶೀಲನೆಗೆ ವ್ಯಾಂಟಾ ನಗರ ಮಂಡಳಿ ಒಪ್ಪಿಗೆ Archived 2009-06-04 ವೇಬ್ಯಾಕ್ ಮೆಷಿನ್ ನಲ್ಲಿ., HS.fi. 30 ಮಾರ್ಚ್‌ 2009ರಂದು ಮರುಸಂಪಾದಿಸಲಾಯಿತು.
  8. "Ruttopuisto– Plague Park". Tabblo.com. Archived from the original on 2008-04-11. Retrieved 2008-11-03. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  9. "Utbildning & Vetenskap: Svenskfinland". Veta.yle.fi. Archived from the original on 2008-05-12. Retrieved 2009-07-08. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  10. ೧೦.೦ ೧೦.೧ "Climatological statistics for the normal period 1971–2000". Fmi.fi. Archived from the original on 2010-04-27. Retrieved 2010-04-13.
  11. "Ilmatieteen laitos – Sää ja ilmasto – Ilmastotilastot – Ilman lämpötila" (in Finnish). Finnish Meteorological Institute. Archived from the original on 2009-06-04. Retrieved 2009-07-08.{{cite web}}: CS1 maint: unrecognized language (link)
  12. ಫಿನ್ಲೆಂಡ್‌ ವಿದೇಶ ವ್ಯವಹಾರ ಮಂತ್ರಾಲಯ, ರಾಜಕೀಯ ಶಾಸ್ತ್ರ ವಿಭಾಗ: Memo 56 of 20 January 1982 (labelled highly confidential in 1982) PDF (1.37 MB)
  13. Tapani Valkonen ym. (2007-12-17). "Tutkimuksia 10/2007: Elinajanodotteen kehitys Helsingissä ja sen väestönosaryhmissä 1991–2005" (PDF). Archived from the original (PDF) on 2011-07-22. Retrieved 2007-12-30. {{cite web}}: Unknown parameter |julkaisija= ignored (help)
  14. Tilastolaitoksen historiaa. "Tilasto". Stat.fi. Retrieved 2010-04-13.[permanent dead link]
  15. "Helsingin historia". Hel.fi. Archived from the original on 2010-09-14. Retrieved 2010-04-13.
  16. "Maan alle". Aatos.fi. 1972-12-30. Retrieved 2010-04-13.
  17. "HSL Helsingin seudun liikenne - About HSL". Hsl.fi. 2010-01-01. Archived from the original on 2010-01-19. Retrieved 2010-04-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  18. "HSY - Default". Hsy.fi. Archived from the original on 2010-03-25. Retrieved 2010-04-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  19. "Taulukko: Väestö kielen mukaan sekä ulkomaan kansalaisten määrä ja maa-pinta-ala alueittain 1980 - 2008". Pxweb2.stat.fi. 2001-08-13. Retrieved 2010-04-13.[permanent dead link]
  20. "Helsingin nimistön vaiheita". Scripta.kotus.fi. Retrieved 2010-04-13.
  21. http://pxweb2.stat.fi/Dialog/Saveshow.asp[permanent dead link]
  22. "Tilasto". Pxweb2.stat.fi. Archived from the original on 2012-05-23. Retrieved 2010-04-13.
  23. Helsingin Sanomat (2008-12-07). "Helsingissä asuu virlaisia enemmän kuin venäläisiä". Hs.fi. Archived from the original on 2008-12-11. Retrieved 2010-04-13.
  24. Katriina Pajari Kirjoittaja on uutistoimituksen toimittaja. (2008-12-07). "Kolmannes maahanmuuttajista asuu Helsingissä - HS.fi - Kaupunki". HS.fi. Archived from the original on 2009-06-03. Retrieved 2010-04-13.
  25. Elsa Tuppurainen Sähköposti (2008-12-03). "Jussi Pajunen jarruttaisi maahanmuuttoa". Hs.fi. Archived from the original on 2008-12-04. Retrieved 2010-04-13.
  26. ಬಾಟ್ಲ್‌ಡ್‌ ವಾಟರ್‌ ಸೆಲ್ಸ್ Archived 2009-10-11 ವೇಬ್ಯಾಕ್ ಮೆಷಿನ್ ನಲ್ಲಿ., ಫಿನ್‌ಫ್ಯಾಕ್ಟ್ಸ್‌
  27. "Kansilehti2.vp" (PDF). Archived from the original (PDF) on 2009-03-26. Retrieved 2010-04-13.
  28. "Helsingin Sanomat – International Edition – Metro". Hs.fi. 2005-11-09. Archived from the original on 2011-11-19. Retrieved 2009-07-08.
  29. "European Institute of Innovation and Technology: Home". Eit.europa.eu. Archived from the original on 2010-03-28. Retrieved 2010-04-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  30. ಔಲೂದಲ್ಲಿ OLS ವಿರುದ್ಧ ನಡೆದ 2009ರ ಫಿನ್ನಿಷ್‌ ಅಂತಿಮ ಪಂದ್ಯದ ವೀಡಿಯೊ ಚಿತ್ರಣ: https://www.youtube.com/watch?v=Hn-j0t5yxIE&feature=related
  31. ಪಂದ್ಯಾವಳಿಯ ವೀಡಿಯೊ ಚಿತ್ರಣ: http://www.yle.fi/player/player.jsp?name=El%E4v%E4+arkisto%2F02869_1[permanent dead link]
  32. ದಿಸ್‌ ಇಸ್‌ ಹೆಲ್ಸಿಂಕಿ, ಸಿಟಿ ಆಫ್‌ ಹೆಲ್ಸಿಂಕಿಯಿಂದ.
  33. http://www.eaue.de/Promode/Runge.pdf
  34. "Tietokeskus: suunnatframe". Hel2.fi. Archived from the original on 2010-07-12. Retrieved 2009-07-08.
  35. ಹೆಲ್ಸಿಂಕಿ ರಾಜಧಾನಿ ಪ್ರದೇಶದ ಲ್ಯಾನ್ಸಿಮೆಟ್ರೊ ಭೂಗತ ರೈಲು ವಿಸ್ತರಣೆಗಾಗಿ ರಚಿಸಲಾದ ಮಾಹಿತಿ ಜಾಲಪುಟ www.lansimetro.fi

೩೨. ಕಿಟಕಿಯಾಚೆಗೊಂದು ಉತ್ತರ ಧೃವ--ಫಿನ್ಲೆಂಡ್ ಮತ್ತು ರಷ್ಯ ಪ್ರವಾಸಕಥನಃ ಕನ್ನಡ, ಅನಿಲ್ ಕುಮಾರ್ ಎಚ್.ಎ, ೨೦೧೧, ಬೆಳಕಿಂಡಿ ಪ್ರಕಾಶನ, ಬೆಂಗಳೂರು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Preceded by Eurovision Song Contest Hosts Helsinki
2007
Succeeded by

ಟೆಂಪ್ಲೇಟು:Host cities of the Eurovision Song Contest