ಅಶ್ವಕರ್ಣ ಎಣ್ಣೆ
ಅಶ್ವಕರ್ಣ ಎಣ್ಣೆಯನ್ನು ಅಶ್ವಕರ್ಣ ವಿತ್ತನದಿಂದ ತೆಗೆಯುತ್ತಾರೆ. ವಿತ್ತನದಿಂದ ಉತ್ಪನ್ನ ಮಾಡಿದ ಎಣ್ಣೆ ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಯೋಗ್ಯವಾದದ್ದು. ಅಶ್ವಕರ್ಣ ಮರವನ್ನು ಕನ್ನಡದಲ್ಲಿ ಬಿಳಿ ಭೋಗೆಮರ, ಅಸು, ಅಸಿನಎಂದು ಕರೆಯುತ್ತಾರೆ . ಇದು ಡಿಪ್ಟೆರೊಕಾರ್ಪೇಸಿಯೆ (dipeterocarpaeaae)ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರದ ಹೆಸರು ಷೋರಿಯ ರೊಬಸ್ಟ (shorea robusta)[೧]. ಇದೇ ಜಾತಿಗೆ ಸೇರಿದ ಇನ್ನೊಂದು ಮರವನ್ನು ವಟಿಕ ರೊಬಸ್ಟ (vatica robusta) ಎಂದು ಕರೆಯುತ್ತಾರೆ. ಇದನ್ನು ಗುಗ್ಗುಳ ಮರ ಎಂದು ಕರೆಯಲಾಗುತ್ತದೆ. ಈ ಮರದ ಅಂಟುವಿನಿಂದ ಗುಗ್ಗಿಳವನ್ನು ತಯಾರಿಸುತ್ತಾರೆ[೨]. ಅಶ್ವಕರ್ಣವನ್ನು ಹಿಂದಿ ಭಾಷೆಯಲ್ಲಿ ಸಾಲ್ವ (shalwa), ಸಾಲ್(sal) ಎಂದು ಕರೆಯುತ್ತಾರೆ. ಅಶ್ವಕರ್ಣ ಮರ ಬುದ್ದ/ಬೌದ್ದರಿಗೆ ಅತ್ಯಂತ ಪವಿತ್ರವಾದ ಮರವಾಗಿದೆ. ಬುದ್ದನ/ಗೌತಮನ ಜನನ ಅಶ್ವಕರ್ಣ ಮರದ ಕೆಳಗೆ ಆಗಿದೆ ಎಂದು ಬೌದ್ದಮತಸ್ಥರು ನಂಬುತ್ತಾರೆ[೩].
- ಸಂಸ್ಕೃತ=ಅಶ್ವಕರ್ಣ(Ashvakarna),agnivallabha,ashvakarnika
- ಹಿಂದಿ=ಸಾಲ್(sal)(साल),ಸಾಖೂ(sakhu)ಸಲ್ವಾ(Salwa)(Sakher]
- ಮಲಯಾಳಂ=ಮರಮರಮ್(maramaram),ಕುಂಗಿಲಿಯಂ(kungiliyam)
- ಮರಾಠಿ=ಸಾಲ್(sal),ಗುಗ್ಗಿಲು(guggilu),ರಲ (rala), (sajara)
- ತಮಿಳು =ಅತ್ತಮ್ (attam), (venkungiliyam),(kungiliyam)
- ತೆಲುಗು=ಸಾಲುವ(sAluva), ಸಾಲ್ವ(ಸಾಲ್ವ),ಗುಗ್ಗಿಲಂ(guggilamu)
- ಬಂಗಾಲ,ಅಸ್ಸಾಂ=ಸಾಲ್(Sal)
ಹುಟ್ಟು/ಸ್ಥಳ/ವ್ಯಾಪ್ತಿ
[ಬದಲಾಯಿಸಿ]ಏಷಿಯ ಈ ಮರದ ಹುಟ್ಟು ಸ್ಥಾನ. ಇಂಡಿಯಾ, ಮಯನ್ಮಾರ್, ನೇಪಾಲಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸುತ್ತದೆ .[೫]. ಭಾರತ ದೇಶದಲ್ಲಿ ಅಸ್ಸಾಂ,ಬಂಗಾಲ, ಒಡಿಶಾ, ಚತ್ತಿಸ್ ಗಡ, ಜಾರ್ಖಂಡ್ ಮತ್ತು ಹರ್ಯಾನ ಕಾಡು/ಅರಣ್ಯಗಳಲ್ಲಿ ಬೆಳೆಯುತ್ತಿದ್ದಾರೆ. ಇನ್ನೂ ಪೂರ್ವದಿಕ್ಕಿನ ಹಿಮಾಲಯ ಪಾದ ಪ್ರಾಂತದಲ್ಲಿ, ಈ ಮರಗಳು ಚೆನ್ನಾಗಿ ವ್ಯಾಪಿಸಿ ಬೆಳೆಯುತ್ತವೆ. ಇನ್ನೂ ಮಧ್ಯ ಭಾರತ ದೇಶದ ವಿಂಧ್ಯ ಪರ್ವತಗಳು ವಿಂಧ್ಯ ಮತ್ತು ಸಾತ್ಪೂರಾಪರ್ವತ ಅರಣ್ಯ ಕಣಿವೆ (ಮಧ್ಯ ಭಾರತ,ಉತ್ತರ ಪ್ರದೇಶ)ಗಳಲ್ಲಿ ಕಾಣಿಸುತ್ತವೆ. ಯಮುನಾತಟೀ ಪ್ರಾಂತ್ಯ ಮತ್ತು ಪೂರ್ವದಿಕ್ಕಿನ ಕಣಿವೆಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವುದು ಕಂಡು ಬರುತ್ತದೆ. ಭಾರತ ದೇಶದಲ್ಲಿ ಒಟ್ಟಾಗಿ ೧.೧.೫ ಚದರ ಕಿಲೋಮೀಟರಗಳ ವಿಸ್ತೀರ್ಣದ ಪ್ರಾಂತ್ಯದಲ್ಲಿ ಈ ಮರಗಳು ಬೆಳೆಯುತ್ತಿವೆ. ಮಧ್ಯ ಪ್ರದೇಶದಲ್ಲಿ ೩೭.೭೦೦ ಚ.ಕಿ.ಮೀ, ಜಾರ್ಖಂಡ್ನಲ್ಲಿ ೩೩,೫೦೦, ಒಡಿಸ್ಸಾಯಲ್ಲಿ ೧೭,೯೨೬೮, ಉತ್ತರ ಪ್ರದೇಶ ದಲ್ಲಿ ೫,೮೦೦, ಬಂಗಾಲದಲ್ಲಿ ೫,೨೫೦,ಮತ್ತು ಅಸ್ಸಾಂ ಯಲ್ಲಿ೨,೭೦೦ ಚದರ ಕಿ.ಲೋ ಮೀಟರುಗಳ ವಿಸ್ತೀರ್ಣದಲ್ಲಿ ಅಶ್ವಕರ್ಣ ಮರಗಳು ಬೆಳೆಯುತ್ತಿವೆ. ಮಧ್ಯ ಪ್ರದೇಶ ದಲ್ಲಿರುವ ಒಟ್ಟು ಕಾಡು ಪ್ರಾಂತ್ಯದಲ್ಲಿ ,೧೬.೫% ವರೆಗೆ ಸಾಲ್ವ/ಅಶ್ವಕರ್ಣ ಮರಗಳು ಹರಡಿ ಕೊಂಡಿವೆ[೬].
ಮರ
[ಬದಲಾಯಿಸಿ]ಸಾಲ್ವ/ಅಶ್ವಕರ್ಣ ಮರ ೩೦-೩೫ ಮೀಟರುಗಳಷ್ಟು ಎತ್ತರ ಬೆಳೆಯುವ ದೊಡ್ಡ ಗಾತ್ರದ ಮರ. ಕಾಂಡ ದೊಡ್ಡದಾಗಿರುತ್ತದೆ. ವಿಸ್ತರಿಸಿದ ಕೊಂಬೆಗಳು ಇರುವ ಸುಂದರವಾದ ಮರ. ಬೆಳೆದಿರುವ ಮರ ಕಾಂಡದ ಅಡ್ಡಳತೆ ೧.೫-೨.೦ ಮೀ.ಗಳು ಇರುತ್ತದೆ. ಕಾಂಡದ ಮೇಲೆ ದಪ್ಪವಾದ ತೊಗಟೆ ಕಂದು ಬಣ್ಣದಲ್ಲಿದ್ದು ನೆಟ್ಟಗೆ ಸೀಳುಗಳು ಇರುತ್ತವೆ. ತೊಗಟೆ ೪.೫ ಸೆ. ಮೀ,ದಪ್ಪವಾಗಿರುತ್ತದೆ. ಎಲೆಗಳು ಹಸಿರಾಗಿ, ಅಂಡಾಕಾರವಾಗಿ, ೧೫-೨೦ಸೆಂ.ಮೀ, ಉದ್ದವಾಗಿ ಇರುತ್ತವೆ. ಎಲೆ ಕಣಿವೆ ಕಡೆ ಅಗಳಾಗಿ, ಅಂಚು ಚೂಪಾಗಿರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮರಗಳು ಸದಾ ಹಸುರಾಗಿರುತ್ತವೆ. ಉಷ್ಣ ವಲಯ ಕಾಡುಗಳಲ್ಲಿ ಬೆಳೆಯುವ ಮರಗಳು ಎಲೆಯನ್ನು ಬಿಡುತ್ತವೆ. ಆದರೆ ಎಲೆಯನ್ನು ಪೂರ್ತಿಯಾಗಿ ಬಿಡುವುದಿಲ್ಲ (ಕಟ್ಟೆ ಹೋಗುವುದಿಲ್ಲ)[೧]. ಫೆಬ್ರವರಿ-ಏಪ್ರಿಲ್ ತಿಂಗಳುಗಳಲ್ಲಿ ಹಳೆ ಎಲೆಯನ್ನು ಬಿಡುತ್ತದೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಹೊಸ ಎಲೆ ಬಿಡುವುದು ವೊದಲಾಗುತ್ತದೆ, ಅದರ ಜೊತೆಗೆ ಹೂವುಗಳು ಅರಳುವುದು ಶುರುವಾಗುತ್ತದೆ.
ಎಣ್ಣೆ ಉತ್ಪಾದನೆ
[ಬದಲಾಯಿಸಿ]ಅಶ್ವಕರ್ಣ ಬೀಜದಲ್ಲಿ ಎಣ್ಣೆ 15-18% ಶೇಕಡ ಇರುತ್ತದೆ. ಬೀಜದಲ್ಲಿ 20%ಕ್ಕಿಂತ ಕಡಿಮೆ ಎಣ್ಣೆ ಇದ್ದರೆ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸುವುದಕ್ಕೆ ಆಗುವದಿಲ್ಲ. ಸಾಲ್ವೆಂಟ್ ಪ್ಲಾಂಟ್ ದ್ವಾರಾ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಸೀಡ್ ಕಟ್ಟರು ಯಂತ್ರಗಳಲ್ಲಿ ವೊದಲು ವಿತ್ತನವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ, ಅವನ್ನು ಕುಕ್ಕರುನಲ್ಲಿ ಸ್ಟಿ ಮಿನಿಂದ ಬೇಯಿಸಿ, ಆಮೇಲೆ ಫ್ಲೇಕರುಅನ್ನುವ ರೋಲರುಗಳಿರುವ ಯಂತ್ರದಿಂದ, ಬೇಯಿಸಿದ ವಿತ್ತನವನ್ನು ಪ್ಲೇಕ್ಸು(flakes) ಮಾಡಲಾಗುತ್ತದೆ. ಬೀಸಿ ಆಗಿ ಇದ್ದ ಫ್ಲೇಕ್ಸುಗಳನ್ನುಕೂಲರುನಲ್ಲಿ ತಣ್ಣಗೆ ಮಾಡಿ, ಆಮೇಲೆ ಸಾಲ್ವೆಂಟ್ ಪ್ಲಾಂಟ್ಗೆ ಕಳುಹಿಸಲಾಗುತ್ತದೆ. ಅಲ್ಲಿ ಹೆಕ್ಸೆನು ಅನ್ನುವ ಪೆಟ್ರೊಲಿಯಂ ದ್ರಾವಣವನ್ನು ಬಳಸಿ ವಿತ್ತನದಿಂದ ಎಣ್ಣೆಯನ್ನು ಸಂಗ್ರಹಣ ಮಾಡಲಾಗುತ್ತದೆ [೭] . ಎಣ್ಣೆ ತೆಗೆದ ಹಿಂಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹಸು/ದನಗಳ ಮೇವಾಗಿ ಉಪಯೋಗಿಸುತ್ತಾರೆ.
ಎಣ್ಣೆ/ಕೊಬ್ಬು
[ಬದಲಾಯಿಸಿ]ಅಶ್ವಕರ್ಣ/ಸಾಲ್ವ ವಿತ್ತನಗಳಿಂದ ಉತ್ಪಾದಿಸಲಾಗಿದ್ದ ಎಣ್ಣೆಯನ್ನು ಆಶ್ವಕರ್ಣ ಕೊಬ್ಬು ಎಂದು ಕರೆಯುತ್ತಾರೆ. ಏಕೆಂದರೆ ಎಣ್ಣೆಯಲ್ಲಿ ೫೦%ಕ್ಕಿಂತ ಹೆಚ್ಚಾಗಿ ಸಂತೃಪ್ತ ಕೊಬ್ಬಿನ ಆಮ್ಲಗಳಿರುವುದರಿಂದ, ಸಾಧಾರಣ ಉಷ್ಣೋಗ್ತ್ರತೆಯಲ್ಲಿಯೂ ಎಣ್ಣೆ ಘನ ರೂಪದಲ್ಲಿರುತ್ತದೆ. ಅದಕ್ಕೆ ಇದನ್ನು ಕೊಬ್ಬು ಎಂದು ಕರೆಯುತ್ತಾರೆ. ತಾಜಾ, ಶುದ್ದವಾದ ವಿತ್ತನಗಳಿಂದ ಉತ್ಪನ್ನಮಾಡಿದ ಎಣ್ಣೆಯಲ್ಲಿ ಫ್ರೀಫ್ಯಾಟಿ ಆಮ್ಲಗಳ(free fatty acids:F.F.A)ಶೇಕಡ ಕಡಿಮೆ ಆಗಿರುತ್ತದೆ. ಈ ತರಹದ ಎಣ್ಣೆಯನ್ನು ರಿಫೈನರಿ ಮಾಡಿದಾಗ ರಿಫೈನರಿ ಲಾಸ್ (refinery loss)ಕಡಿಮೆ ಆಗುತ್ತದೆ. ಫ್.ಫ್.ಎ.(F.F.A)ಹೆಚ್ಚಾಗಿರುವ ಎಣ್ಣೆಯನ್ನು ಸಾಬೂನ್, ಸ್ಟಿಯರಿಕ್ ಆಮ್ಲವನ್ನು ತಯಾರಿಸಲು ಉಪಯೋಗಿಸುತ್ತಾರೆ. ಎಣ್ಣೆ ಹಸಿರು ಛಾಯೆ ಇದ್ದು ಕಂದು ಬಣ್ಣ ಹೊಂದಿರುತ್ತದೆ. ಎಣ್ಣೆಗೆ ಒಂದು ತರಹ ಪ್ರತ್ಯೇಕ ಪರಿಮಳ/ವಾಸನೆ ಇರುತ್ತದೆ. ಸಾಲ್ವ ಎಣ್ಣೆ/ಕೊಬ್ಬಿನಲ್ಲಿರುವ ಕೊಬ್ಬಿನ ಆಮ್ಲಗಳು, ಕೊಕೊ ಬಟ್ಟರುನಲ್ಲಿರುವ ಕೊಬ್ಬಿನ ಆಮ್ಲಗಳು ಒಂದೇ ತರಹ ಹೊಂದಾಣಿಕೆ ಹೊಂದಿರುತ್ತವೆ. ಒಲಿಕ್ ಆಮ್ಲ ಮತ್ತು ಸ್ಟಿಯರಿಕ್ ಆಮ್ಲಗಳ ಪ್ರತಿಶತ ಎರಡು ಎಣ್ಣೆ/ಕೊಬ್ಬುಗಳಲ್ಲಿ ಒಂದೇ ತರಹ ಇರುತ್ತವೆ.[೮]. ಅದಕ್ಕಾಗಿ ಕೊಕೋಬಟ್ಟರುಗೆ ಬದಲಾಗಿ ಚಾಕೊಲೆಟ್ ತಯಾರಿಕೆಯಲ್ಲಿ ಅಶ್ವಕರ್ಣ/ಸಾಲ್ವ ಕೊಬ್ಬನ್ನು ಬಳಸುತ್ತಾರೆ. ಸಾಲ್ವ ಕೊಬ್ಬು ದ್ರವೀಭವ ಉಷ್ಣೊಗ್ರತೆ ೩೫-೩೭೦C, ಕೊಕೋಬಟ್ಟರು ದ್ರವೀಭವನ ಉಷ್ಣೋಗ್ರತ ೩೩-೩೫೦C ಇರುವುದರಿಂದ, ಈ ಕೊಬ್ಬುಗಳನ್ನು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುವುದರಿಂದ, ವಾತಾವರಣ/ತಾಪಮಾನ ಬೆಚ್ಚಗೆ ಇದ್ದರೂ, ಚಾಕೊಲೆಟ್ ಗಟ್ಟಿಯಾಗಿರುತ್ತದೆ. ಅದಕ್ಕಾಗಿ ಕೊಕೋ ಬಟ್ಟರುನಲ್ಲಿ ಸಾಲ್ವ/ಅಶ್ವಕರ್ಣ ಕೊಬ್ಬನ್ನು ೩೦-೪೦% ಮಿಶ್ರಣ ಮಾಡುತ್ತಾರೆ. ಕೆಲವು ಎಣ್ಣೆಗಳಲ್ಲಿ ಎಪೊಕ್ಸಿ ಮತ್ತು ಡೈಹೈಡ್ರೊಕ್ಸಿ ಅಮ್ಲಗಳು ೨.೦-೩.೫ ತನಕ ಇರುವ ಸಂಭವವಿದೆ. ಎಪೊಕ್ಸಿ, ಡೈಹೈಡ್ರಿಕ್ಸಿ ಆಮ್ಲಗಳಿದ್ದ ಎಣ್ಣೆ/ಕೊಬ್ಬು ದ್ರವೀಭವನ ಉಷ್ಣೋಗ್ರತ ಉಳಿದ ಸಾಲ್ವ ಎಣ್ಣೆ /ಕೊಬ್ಬಿಗಿಂತ ೧-೨೦C ಕಡಿಮೆ ಇರುವ ಅವಕಾಶವಿದೆ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೪೫-೫೫% ತನಕ ಇರುವ ಕಾರಣ, ಇದರ ಅಯೊಡಿನ್ ಮೌಲ್ಯ/ಬೆಲೆ ೩೦-೪೫ ತನಕ, ಟೈಟರು ಉಷ್ಣೊಗ್ರತ ೪೬-೫೩೦C ವರೆಗೆ, ಅನ್ ಸಪೋನಿಫಿಯಬುಲ್ ಪದಾರ್ಥ ೨.೫% ವರೆಗೆ ಇರುತ್ತವೆ. ಎಣ್ಣೆಯ ಭೌತಿಕ ಧರ್ಮಗಳ ಪಟ್ಟಿ(ಆಗ್ ಮಾರ್ಕು)[೯]
ಭೌತಿಕ ಲಕ್ಷಣ | ಮಿತಿ |
ಅಯೋಡಿನ್ ಮೌಲ್ಯ | 31-45 |
ಸಪೋನಿಫಿಕೆಸನ್ ಮೌಲ್ಯ/ಸಂಖ್ಯೆ | 180-195 |
ಅನ್ ಸಪೋನಿಫಿಯಬುಲ್ ಪದಾರ್ಥ | 2.5%ಗರಿಷ್ಟ |
ದ್ರವೀಭವನ ಉಷ್ಣೋಗ್ರತ | 35-370C |
ವಿಶಿಷ್ಟ ಗುರುತ್ವ,30/300C | 0.917-921 |
ವಕ್ರೀಭವ ಸೂಚಿಕೆ, 400Cవద్ద | 1.4500-1.4600 |
ಟೈಟರ್ 0C | 46-53 |
ಅಶ್ವಕರ್ಣ/ಸಾಲ್ವ ಎಣ್ಣೆಯಲ್ಲಿ, ೧೮ ಕಾರ್ಬನುಗಳು ಇದ್ದ ಸ್ಟಿಯರಿಕ್(ಸಂತೃಪ್ತಕೊಬ್ಬು)ಆಮ್ಲವು ೩೫-೪೫%, ೧೬ಕಾರ್ಬನುಗಳು ಇದ್ದ ಪಾಮಟಿಕ್ (ಸಂತೃಪ್ತಕೊಬ್ಬು)ಆಮ್ಲವು ೪.೦-೯. ೦% ತನಕ ಇರುತ್ತವೆ. ಸಾಮಾನ್ಯವಾಗಿ ಎಣ್ಣೆಗಳಲ್ಲಿ ಸರಿಸಮಾನವಾಗಿ(even number) ಕಾರ್ಬನಗಳಿರುವ ಕೊಬ್ಬು ಆಮ್ಲಗಳು ಇರುತ್ತವೆ. ಈ ಎಣ್ಣೆಯಲ್ಲಿ ೧೭ ಕಾರ್ಬನಗಳು ಇರುವ ಮಾರ್ಗರ್ ಅನ್ನುವ ಸಂತೃಪ್ತ ಕೊಬ್ಬಿನ ಆಮ್ಲ ಶೂನ್ಯದಿಂದ ೫.೦ ವರಗೆ ಇರುವ ಅವಕಾಶವಿದೆ. ಆದರೆ ಎಲ್ಲಾ ಎಣ್ಣೆಗಳಲ್ಲಿ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇನ್ನೂ ಏಕ ದ್ವಿಬಂಧವುಳ್ಳ, ೧೮ ಕಾರ್ಬನುಗಳು ಇದ್ದ ಒಲಿಕ್ ಆಮ್ಲವು ೪೦-೫೦% ವರೆಗೆ ಇರುತ್ತದೆ. ರಿಫೈಂಡ್ ಎಣ್ಣೆಯಲ್ಲಿ ಇರುವ ಕೊಬ್ಬಿನ ಆಮ್ಲಗಳ ಪಟ್ಟಿ[೪][೧೦]
ಕೊಬ್ಬಿನ ಆಮ್ಲ | ಶೇಕಡ |
ಪಾಮಿಟಿಕ್ ಆಮ್ಲ(C16:0) | 2.0-8.0 |
ಮಾರ್ಗರ್(C17:O) | 0-5.0 |
ಸ್ಟಿಯರಿಕ್ ಆಮ್ಲ(C18:0) | 45-60 |
ಒಲಿಕ್ ಆಮ್ಲ(C18:1) | 35-50 |
ಲಿನೊಲಿಕ್ ಆಮ್ಲ(C18:2) | 0-8.0 |
ಅರಚಿಡಿಕ್ ಆಮ್ಲ(C20:0)-5.0 | 1.0 |
ಕೋಕೋ ಬಟ್ಟರ್(cocoa butter)ಮತ್ತು ಅಶ್ವಕರ್ಣ ಎರಡು ಎಣ್ಣೆಗಳಿಗೆ ಬಹಳ ಹತ್ತಿರ ಹೋಲಿಕೆಯಿದೆ. ಈ ಎರಡರ ಭೌತಿಕ ಧರ್ಮಗಳು, ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಪ್ರತಿಶತ ಒಂದೇ ತರಹ ಇರುತ್ತವೆ. ಕೊಕೋ ಬಟ್ಟರು ಅಯೋಡಿನ್ ಮೌಲ್ಯ ೩೩-೩೮ ಇದ್ದರೆ, ಅಶ್ವಕರ್ಣ ಎಣ್ಣೆಯದು ೩೮-೪೩. ದ್ರವೀಭವ ಉಷ್ಣೋಗ್ರತೆಯು ಅಷ್ಟೆ ಎರಡಕ್ಕೂ ೨-೩೦C ಡಿಗ್ರಿಗಳ ವ್ಯತಾಸವುಂಟು. ಹೀಗೆಯೆ ಎರಡು ಎಣ್ಣೆಗಳಲ್ಲಿ ಇರುವ ಸ್ಟಿಯರಿಕ್ ಆಮ್ಲ ಪ್ರತಿಶತ ಸಮಾನವಾಗಿರುತ್ತದೆ. ಅದರಿಂದ ಕೊಕೋಬಟ್ಟರುಗೆ ಬದಲಾಗಿ ಸಾಲ್/ಸಾಲ್ವಾ ಎಣ್ಣೆ/ಕೊಬ್ಬುಯನ್ನು ಚಾಕೊಲೆಟ್ ತಯಾರಿಕಾ ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ. ಕೊಕೋಬಟ್ಟರು-ಸಾಲ್ವ ಎಣ್ಣೆ ಹೋಲಿಕೆ ಪಟ್ಟಿ
ಭೌತಿಕ ಲಕ್ಷಣ | ಸಾಲ್ ಕೊಬ್ಬು/ಎಣ್ಣೆ | ಕೊಕೋಬಟ್ಟರು |
ಅಯೋಡಿನ್ ಮೌಲ್ಯ | 38-43 | 33-38 |
సపొనిఫికెసన్విలువ | 185-195 | 184-195 |
ಅನ್ ಸಪೋನಿಫಿಯಬುಲ್ ಪದಾರ್ಥ | 1.2% | 1.2% |
ದ್ರವೀಭವನ ಉಷ್ಣೋಗ್ರತೆ | 35-370C | 33-350C |
ಕೊಬ್ಬುಆಮ್ಲ | ||
ಪಾಮಿಟಿಕ್ ಆಮ್ಲ | 4-5 | 25.2 |
ಸ್ಟಿಯರಿಕ್ ಆಮ್ಲ | 44-45 | 35-40 |
ಒಲಿಕ್ ಆಮ್ಲ | 42-44 | 35-40 |
ಲಿನೊಲಿಕ್ ಆಮ್ಲ | 0.1-0.2 | 2.5-3.0 |
ಅರಚಿಡಿಕ್ ಆಮ್ಲ | 1.0 | 6.3 |
ಎಣ್ಣೆ ತೆಗೆದ ಹಿಂಡಿ(Deoiled cake)
[ಬದಲಾಯಿಸಿ]ಎಣ್ಣೆಯನ್ನು ಪೂರ್ಣವಾಗಿ ತೆಗೆದು ವಿತ್ತನ ಹಿಂಡಿಯನ್ನು ಆಂಗ್ಲಭಾಷೆಯಲ್ಲಿ ಡಿಆಯಿಲ್ಡ್ ಕೇಕು(deoiled cake)ಅಂತಾರೆ. ಎಣ್ಣೆ ತೆಗೆದ ಹಿಂಡಿಯನ್ನು ದನದ ಮೇವಾಗಿ, ಬೆಳೆ ಹಕ್ಕಿ ಯಾಗಿ ೨೦%ವರೆಗೆ ಬೇರೆ ಮೇವು ಜೊತೆ ಮಿಶ್ರಣ ಮಾಡಿ ಉಪಯೋಗಿಸುತ್ತಾರೆ. ಎಣ್ಣೆ ತೆಗೆದ ಹಿಂಡಿಯಲ್ಲಿದ್ದ ಪದಾರ್ಥಗಳ ಪಟ್ಟಿ[೧೧].
ಸಮ್ಮೇಳನ ಪದಾರ್ಥ | ಮಿತಿ% |
ಪ್ರೊಟಿನ್ | 7.8-9.7% |
ನಾರ ಪದಾರ್ಥ | 1.3-3.0% |
NFE | 74.6-84.2 |
ಸೆಲ್ಯುಲೋಸ್ | 5.7 |
ಕರುಗು ಕಾರ್ಬೊಹೈಡ್ರೇಟೆಸ್ | 57.8% |
ಲಿಗ್ನಿನ್ | 11.9 |
ಮೆಟಾಬಾಲಿಜಬುಲ್ ಶಕ್ತಿ | 1483-1803 Kcal/Kg |
ಗಂಜಿಪದಾರ್ಥ(Starch) | 30.1 |
(19998-99 ನಿಂದ ೨೦೦೮-೨೦೦೯ವರೆಗೆ ಆಗಿರುವ ಉತ್ಪತ್ತಿ ವಿವರಗಳು)
- ಒಟ್ಟಾಗಿ ಎಣ್ಣೆ ತೆಗೆಯುವುದಕ್ಕೆ ಉಪಯೋಗಿಸಿದ ವಿತ್ತನ ಪರಿಮಾಣ; ೩,೩೪, ೯೪೦ ಟನ್ನುಗಳು
- ಒಟ್ಟಾಗಿ ಉತ್ಪತ್ತಿ ಆಗಿದ್ದ ಅಶ್ವಕರ್ಣ/ಸಾಲ್ವ ಎಣ್ಣೆ:೪೪. ೮೭೭ ಟನ್ನುಗಳು
- ಅದರಲ್ಲಿ
- ಆಹಾರ ಯೋಗ್ಯವಾದ(Edible)ಎಣ್ಣೆ: ೩೦,೩೧೦ ಟನ್ನುಗಳು
- ಕೈಗಾರಿಕೆ(industrial use)ವಿನಿಯೋಗ: ೧೪,೫೬೭ ಟನ್ನುಗಳು
ಎಣ್ಣೆಯ ಉಪಯೋಗಗಳು
[ಬದಲಾಯಿಸಿ]- ಚಾಕೊಲೆಟ್ ತಯಾರಿಯಲ್ಲಿ ಕೊಕೋಬಟ್ಟರು ಬದಲಾಗಿ, ವನಸ್ಪತಿಯಲ್ಲಿ, ಸಾಬೂನ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.[೧೩]
- ಆಮ್ಲಮೌಲ್ಯ ಹೆಚ್ಚಾದ ಎಣ್ಣೆಯಿಂದ ಕೊಬ್ಬು ಆಮ್ಲಗಳನ್ನು ಉತ್ಪನ್ನ ಮಾಡುವರು, ಮುಖ್ಯವಾಗಿ ಸ್ಟಿಯರಿಕ್ ಆಮ್ಲವನ್ನು ಅಂಶೀಕರಣ(fractionation)ದಿಂದ ಬೇರೆ ಮಾಡಿ, ವಿನಿಯೋಗಿಸುತ್ತಾರೆ.
ಉಲ್ಲೇಖನ
[ಬದಲಾಯಿಸಿ]- ↑ ೧.೦ ೧.೧ http://www.ecoindia.com/flora/trees/sal-tree.html
- ↑ "ಆರ್ಕೈವ್ ನಕಲು". Archived from the original on 2009-04-10. Retrieved 2013-10-20.
- ↑ ೩.೦ ೩.೧ http://www.flowersofindia.net/catalog/slides/Sal.html
- ↑ ೪.೦ ೪.೧ SEAHandBook -2009,by The Solvent Extractors' Association of India
- ↑ http://www.worldagroforestry.org/sea/products/afdbases/af/asp/SpeciesInfo.asp?SpID=1525[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2013-07-10. Retrieved 2013-10-20.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2013-10-20.
- ↑ "ಆರ್ಕೈವ್ ನಕಲು". Archived from the original on 2013-11-09. Retrieved 2013-10-20.
- ↑ http://agmarknet.nic.in/vogmrule.htm#salseed Archived 2014-07-24 ವೇಬ್ಯಾಕ್ ಮೆಷಿನ್ ನಲ್ಲಿ. oil
- ↑ "ಆರ್ಕೈವ್ ನಕಲು". Archived from the original on 2013-11-09. Retrieved 2013-10-20.
- ↑ [೧] s.s.negi
- ↑ SEA 38th annual report,2008-2009.by The solvent Extractors' Association of India
- ↑ "ಆರ್ಕೈವ್ ನಕಲು". Archived from the original on 2015-04-02. Retrieved 2013-10-20.