ವಿಷಯಕ್ಕೆ ಹೋಗು

ಹುಣಸೇಬೀಜದ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರ
ಹೂವು
ಹಣ್ಣು-ಬೀಜ

ಹುಣಸೇ ಮರ ಫಾಬೇಸಿ ಕುಟುಂಬಕ್ಕೆ ಸೇರಿದ ಮರ. ೨೦ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಟಮರಿಂಡ್ (Tamarind) ಅಂತಾರೆ. ಇದರ ಸಸ್ಯಶಾಸ್ತ್ರ ಹೆಸರು ಟಮರಿಂಡಸ್ ಇಂಡಿಕಾ(tamarindus Indica).[]

ಇತರ ಭಾಷೆಗಳಲ್ಲಿ ಇದರ ಹೆಸರು

[ಬದಲಾಯಿಸಿ]

ಅರಬ್ಬೀ ಭಾಷೆ ಯಲ್ಲಿ ಹುಣಸೇಯನ್ನು ಟಮರ್-ಹಿಂಡಿ(tamar-indi) ಅಂತಾರೆ. ಅದೇ ಆಂಗ್ಲಭಾಷೆಯಲ್ಲಿ ಟಮರಿಂಡ್(tamarind)ಆಗಿದೆ ಎಂದು ಭಾವಿಸಲಾಗಿದೆ.

ಹುಣಸೇ ಮರದ ಮೂಲ ಆಫ್ರಿಕಖಂಡದ ಪೂರ್ವಭಾಗದ ಉಷ್ಣಮಂಡಲ ಅರಣ್ಯಗಳ ಪ್ರಾಂತ್ಯಗಳೆಂದು ಭಾವಿಸುತ್ತಾರೆ. ಇದು ದೊಡ್ಡ ಗಾತ್ರದ ಮರ. ೨೦ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ರೆಂಬೆ ಕೊಂಬೆಗಳನ್ನು ಹೊಂದಿದೆ. ಸತತ ಹರಿತವಾಗಿರುತ್ತದೆ. ಒತ್ತು ಕಣರಚನೆ ದಾರುವನ್ನು ಹೊಂದಿದೆ. ಎಲೆಗಳು ಚಿಕ್ಕದಾಗಿರುತ್ತವೆ.

ಹುಣಸೇ ಬೀಜ

[ಬದಲಾಯಿಸಿ]

ಹುಣಸೇ ಬೀಜ ಕಾಫಿಬಣ್ಣದಲ್ಲಿರುತ್ತದೆ. ಬೀಜದ ಮೇಲೆ ತೆಳುವಾದ ಸಿಪ್ಪೆ ಇರುತ್ತದೆ. ಸಿಪ್ಪೆಯ ಒಳಗೆ ದಟ್ಟ ಕಾಫಿ ಬಣ್ಣದ ಎರಡು ಬೀಜಗಳಿರುತ್ತವೆ. ಪರಿಮಾಣ ೧.೫ X ೦.೮ ಸೆಂ.ಮೀ ಇರುತ್ತದೆ. ಒಂದು ಹುಣಸೇ ಕಾಯಿಯಲ್ಲಿ ೪-೫ ಬೀಜಗಳು ಇರುತ್ತವೆ. ಹುಣಸೇ ಹಣ್ಣನ್ನು ಅಡುಗೆಯಲ್ಲಿ ಹುಳಿಯ ರುಚಿ/ಸವಿಗಾಗಿ ಉಪಯೋಗಿಸುತ್ತಾರೆ. ಹುಣಸೆ ಬೀಜವನ್ನು ಪುಡಿಯನ್ನಾಗಿ (powder)ಮಾಡಿ ವಸ್ತ್ರ ಪರಿಶ್ರಮೆ/ಕಾರ್ಖಾನೆಯಲ್ಲಿ ವಸ್ತ್ರಗಳನ್ನು/ಬಟ್ಟೆಗಳನ್ನು ಸೈಜಿಂಗ್ ಮಾಡುವುದಕ್ಕೆ ವಿನಿಯೋಗಿಸುತ್ತಾರೆ. ಅಂಗೇ ಜಿಗುರು/ಬಂಕೆ(gum), ಅಡೆಹೆಸ್ಸಿವ್ಸು(adhesive)ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.

ಹುಣಸೇ ಬೀಜದಲ್ಲಿರುವ ಪದಾರ್ಥಗಳು

[ಬದಲಾಯಿಸಿ]

ಹುಣಸೇ ಬೀಜದಲ್ಲಿ ಈ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿರುವ ಪದಾರ್ಥಗಳಿರುತ್ತವೆ.

ಸಮ್ಮೇಳನ ಪದಾರ್ಥ ಬೀಜದಲ್ಲಿ ಬೀಜದಿಂದ ಎಣ್ಣೆಯನ್ನು ತೆಗೆದಮೇಲೆ
ಎಣ್ಣೆ 7.0-8.0 0.6-1.0
ಪ್ರೋಟಿನ್ 7.6 19.0
ಪಾಲಿಸಾಕರೈಡ್ಗಳು 51.0 55.0
ಕತ್ತ(fiber) 1.2 1.1
ತೇವೆ(moisture) 7.1 7.0
ಸಾಂಡ್/ಸಿಲಿಕ(sand/silica) 0.4 .05

ಎಣ್ಣೆಯ ಉತ್ಪತ್ತಿ[]

[ಬದಲಾಯಿಸಿ]

ಹುಣಸೇ ಬೀಜಗಳನ್ನು ವೊದಲು ರೋಸ್ಟರುನಲ್ಲಿ(roaster)ರೋಸ್ಟಿಂಗ್ ಮಾಡುವರು. ಹಾಗೆ ಮಾಡುವುದರಿಂದ ಹೊರಗಡೆ/ಬೀಜದ ಮೇಲೆ ಇರುವ ಸಿಪ್ಪೆ ಸಡಿಲವಾಗುತ್ತದೆ. ಆಮೇಲೆ ಬೀಜಗಳನ್ನು ಬೀಟರು (beater) ಎನ್ನುವ ಯಂತ್ರದಲ್ಲಿ ಹಾಕಿ ಬೀಜದ ಮೇಲಿರುವ ಸಿಪ್ಪೆಯನ್ನು ಬೇರೆ ಮಾಡುತ್ತಾರೆ. ಹೀಗೆ ಸಿಪ್ಪೆ ತೆಗೆದ ಬೀಜವನ್ನು ಸೀಡ್ ಬ್ರೇಕರು(seed breaker)ಯಂತ್ರದ ಸಹಾಯದಿಂದ ಸಣ್ಣ ತುಂಡುಗಳನ್ನಾಗಿ ಮಾಡಲಾಗುತ್ತದೆ. ಬೀಜದ ತುಂಡುಗಳನ್ನು ಕುಕ್ಕರ್(Cooker)ಎನ್ನುವ ಯಂತ್ರದಲ್ಲಿ ಸ್ಟೀಮ್(steam)ಸಹಾಯದಿಂದ ಬಿಸಿಮಾಡಿ, ೮೦-೮೫C ವರೆಗೆ ಬೇಯಿಸಿ ಫ್ಲೆಕಿಂಗ್ ಯಂತ್ರಕ್ಕೆ ಕಳುಹಿಸಲಾಗುತ್ತದೆ. ಫ್ಲೇಕಿಂಗ್ ಯಂತ್ರದಲ್ಲಿ ಫ್ಲೇಕ್ಸು ತಯಾರಾಗುತ್ತವೆ. ಫ್ಲೇಕ್ಸುನಲ್ಲಿ ೧೩-೧೪% ತೇವ ಮತ್ತು ಉಷ್ಣೋಗ್ರತೆ ೮೦C ತನಕ ಇರುತ್ತದೆ. ಅದಕ್ಕೆ ಫ್ಲೇಕ್ಸುಗಳನ್ನು ಕೂಲರುಗೆ ಕಳುಹಿಸಿ, ತಣ್ಣಗೆ ಮಾಡಲಾಗುತ್ತದೆ. ಆಮೇಲೆ ಫ್ಲೇಕ್ಸುಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ಗೆ ಕಳುಹಿಸಿ ಕೊಟ್ಟು, ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಸಾಲ್ವೆಂಟ್ ಪ್ಲಾಂಟ್ನಲ್ಲಿ ಹೆಕ್ಸೆನ್(hexane)ಯೆನ್ನುವ ದ್ರಾವಣವನ್ನು ಉಪಯೋಗಿಸಿ ಎಣ್ಣೆಯನ್ನು ತೆಗೆಯಲಾಗುತ್ತದೆ.

ಎಣ್ಣೆ

[ಬದಲಾಯಿಸಿ]

ಸಾಲ್ವೆಂಟ್ ಎಕ್ಸುಟ್ರಾಕ್ಷನು ವಿಧಾನದಿಂದ ತೆಗೆದ ಎಣ್ಣೆ ಕಪ್ಪುಕಂದು(dark brown)ಬಣ್ಣದಲ್ಲಿರುತ್ತದೆ[].ಈ ಎಣ್ಣೆಯನ್ನು ರಿಫೈನರಿ ಮಿಲ್ಲಿನಲ್ಲಿ ಶುದ್ಧಿಮಾಡಿದಾಗ ಮಂಜಿಲ್/ಹಳದಿ ಬಣ್ಣವಾಗಿ ಕಾಣಿಸುತ್ತದೆ. ಹುಣಸೇ ಬೀಜದ ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳುಶೇಂಗಾ ಎಣ್ಣೆಯನ್ನು ಹೋಲುತ್ತದೆ.

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ

ಕೊಬ್ಬಿನಆಮ್ಲ ಶೇಕಡಾ
ಲಾರಿಕ್ ಆಮ್ಲ 0.3
ಮಿರಿಸ್ಟಿಕ್ ಆಮ್ಲ 0.4
ಪಾಮಿಟಿಕ್ ಆಮ್ಲ 8.7-14.8
ಸ್ಟಿಯರಿಕ್ ಆಮ್ಲ 4.4-6.6
ಅರಚಿಡಿಕ್ ಆಮ್ಲ 3.7-12.2
ಲಿಗ್ನೊಸೆರಿಕ್ ಆಮ್ಲ 4.0-10.0
ಒಲಿಕ್ ಆಮ್ಲ 19.6-27.0
ಲಿನೊಲಿಕ್ ಆಮ್ಲ 7.5-55.4
ಲಿನೊಲೆನಿಕ್ ಆಮ್ಲ 2.8-5.6

ಎಣ್ಣೆಯ ಭೌತಿಕ, ರಸಾಯನಿಕ ಗುಣಗಳು

ಗುಣ/ಲಕ್ಷಣ ಮಿತಿ
ತೇವೆ 0.25%
ವಕ್ರೀಭವಸೂಚಿಕೆ/ಗುಣಕ 1.4600-1.4700
ಸಪೋನಿಫಿಕೇಸನ್ ಮೌಲ್ಯ 184-196
ಅಯೋಡಿನ್ ಮೌಲ್ಯ 100-120
ಆಸಿಡ್ ಮೌಲ್ಯ,ಗರಿಷ್ಟ 20
ಅನ್ ಸಫೋನಿಫಿಯಬುಲ್ ಪದಾರ್ಥ,ಗರಿಷ್ಟ 3.0

ಎಣ್ಣೆಯ ಉಪಯೋಗಗಳು

[ಬದಲಾಯಿಸಿ]
  • ರಿಫೈನರಿ ಮಿಲ್ಲಿನಲ್ಲಿ ಶುದ್ಧಿಮಾಡಿದ ಮೇಲೆ ಅಡಿಗೆ ಎಣ್ಣೆಯಾಗಿ ಉಪಯೋಗಿಸಬಹುದು.
  • ಸಾಬೂನ್ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ವನಸ್ಪತಿತಯಾರಿಕೆಯಲ್ಲಿಯೂ ವಿನಿಯೋಗಿಸುತ್ತಾರೆ.
  • ಬಣ್ಣಗಳನ್ನು ಉತ್ಪತ್ತಿ ಮಾಡುವುದರಲ್ಲಿಯೂ ಉಪಯೋಗಿಸುತ್ತಾರೆ.
  • ವಾರ್ನಿಷು(varnish)ಗಳ ತಯಾರಿಕೆಯಲ್ಲಿಯು ಬಳಸುತ್ತಾರೆ.
  • ದೀಪದ ಎಣ್ಣೆಯನ್ನಾಗಿ ಉಪಯೋಗಿಸಬಹುದು.

ಉಲ್ಲೇಖನ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2021-02-02. Retrieved 2013-09-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "ಆರ್ಕೈವ್ ನಕಲು". Archived from the original on 2013-09-27. Retrieved 2013-09-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "ಆರ್ಕೈವ್ ನಕಲು". Archived from the original on 2013-09-28. Retrieved 2013-09-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)