ಬುದ್ಧಿಮಾಂದ್ಯತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Dementia
Classification and external resources
ICD-10 F00.-F07.
ICD-9 290-294
DiseasesDB 29283
MedlinePlus 000739
MeSH D003704


ಬುದ್ಧಿಮಾಂದ್ಯತೆ (ಇದನ್ನು "ಬುದ್ಧಿವಂಚಿತ" ಎಂದು ಅರ್ಥೈಸಲಾಗುತ್ತದೆ) ಯೊಂದು ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಗಂಭೀರವಾದ ಕಾಯಿಲೆಯಾಗಿದೆ. ಇದು ಒಂದೇ ಪ್ರಮಾಣದಲ್ಲಿರಬಹುದು, ಅಂದರೆ ವಿಶಿಷ್ಟವಾದ ಸಂಪೂರ್ಣವಾದ ಮೆದುಳಿನ ಗಾಯದಿಂದ ಉಂಟಾಗಿರುವುದು, ಅಥವಾ ಮುಂದುವರಿಯುವಂತಹುದು, ಅಂದರೆ ದೇಹಕ್ಕೆ ಆಗಿರುವ ಹಾನಿ ಅಥವಾ ರೋಗದ ಪರಿಣಾಮವಾಗಿ ಅರಿವಿನ ಕಾರ್ಯಕ್ಷಮತೆಯಲ್ಲಿ ಸಾಮಾನ್ಯವಾಗಿ ನಿರೀಕ್ಷಿಸಿದ ವೃದ್ಯಾಪ್ಯಕ್ಕಿಂತ ಮೊದಲೇ ಇಳಿತವುಂಟಾಗುತ್ತದೆ. ವಯಸ್ಕರಲ್ಲಿ ಬುದ್ಧಿ ಮಾಂದ್ಯತೆಯ ಪ್ರಮಾಣ ಹೆಚ್ಚಾಗಿರುವುದು ಹೌದಾದರೂ, ಇದು ಸಾಮಾನ್ಯವಾಗಿ ಪ್ರೌಢಾವಸ್ಥೆಯ ಯಾವುದೇ ಹಂತದಲ್ಲೂ ಕಾಣಿಸಿಕೊಳ್ಳಬಹುದು. ಆಂಗಿಕ ಮೆದುಳಿನ ರೋಗಲಕ್ಷಣಾವಳಿ ಅಥವಾ ನಿಷ್ಕ್ರಿಯತೆಯಂತಹ ಚಿಹ್ನೆಗಳು ಮುಪ್ಪಿನವರಿಗಿಂತ ಕಡಿಮೆ ವಯಸ್ಸಿನವರಲ್ಲಿ ಕಾಣುವುದನ್ನು ಬೇರೆ ಬೇರೆ ವಯಸ್ಸಿಗೆ ತಕ್ಕಂತೆ ವಿವಿಧ ರೀತಿಯ ಹೆಸರುಗಳನ್ನು ನೀಡಲಾಗಿದೆ. 19ನೇ ಶತಮಾನದ ಅಂತ್ಯದ ಹೊತ್ತಿಗೆ ಬುದ್ಧಿ ಮಾಂದ್ಯತೆ ಒಂದು ದೊಡ್ಡ ಚಿಕಿತ್ಸಾ ಪರಿಕಲ್ಪನೆಯಾಯಿತು.[4]

ಬುದ್ಧಿಮಾಂದ್ಯತೆಯೊಂದು ನಿರ್ಧಿಷ್ಟಪಡಿಸಲಾಗದ ಲಕ್ಷಣಾವಳಿಯಾಗಿದ್ದು,(ಚಿಹ್ನೆಹಳು ಮತ್ತು ಕುರುಹುಗಳ ಗುಂಪು) ಜ್ಞಾಪಕಶಕ್ತಿ, ಜಾಗೃತ ಸ್ಥಿತಿ, ಭಾಷೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳನ್ನು ಇದು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಇದನ್ನು ಪರೀಕ್ಷಿಸುವುದಕ್ಕೆ ಕನಿಷ್ಠ ಆರು ತಿಂಗಳು ಆದರೂ ಇರಬೇಕಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಅದರಲ್ಲೂ ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಅರಿವಿನ ನಿಷ್ಕ್ರೀಯತೆಯನ್ನು ಡೆಲಿರಿಯಂ ಎಂದು ಪರಿಗಣಿಸಬೇಕಾಗುತ್ತದೆ.[6] ಎಲ್ಲ ಮಾದರಿಯ ಸಾಮಾನ್ಯ ಅರಿವಿನ ನಿಷ್ಕ್ರೀಯತೆಗಳಲ್ಲಿ ಉನ್ನತಮಟ್ಟದ ಮಾನಸಿಕ ಕಾರ್ಯಕ್ಷಮತೆಗಳು ಮೊದಲು ಪರಿಣಾಮಕ್ಕೆ ಒಳಗಾಗುತ್ತವೆ. ಸ್ಥಿತಿಯ ನಂತರದ ಹಂತಗಳಲ್ಲಿ, ವಿಶೇಷವಾಗಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು, ಈ ಸಮಯದಲ್ಲಿ ದಿಕ್ಕು ತಪ್ಪಿದಂತವನಾಗುತ್ತಾನೆ. (ಆ ವಾರದಲ್ಲಿನ ದಿನ ಯಾವುದು, ತಿಂಗಳಿನ ದಿನ ಅಥವಾ ಯಾವ ವರ್ಷ ಎನ್ನುವುದು ಕೂಡ ಗೊತ್ತಿರುವುದಿಲ್ಲ), ಸ್ಥಳದಲ್ಲಿ (ಅವರು ಎಲ್ಲಿದ್ದಾರೆ ಎನ್ನುವುದ ಗೊತ್ತಿರುವುದಿಲ್ಲ) ಮತ್ತು ವ್ಯಕ್ತಿಯಾಗಿ (ತಾನು ಯಾರು ಮತ್ತು ತನ್ನ ಸುತ್ತ ಇರುವ ಇತರರು ಯಾರು ಎನ್ನುವುದು ಗೊತ್ತಿರುವುದಿಲ್ಲ). ಕೆಲ ಹಂತಗಳವರೆಗೆ ಇದಕ್ಕೆ ಚಿಕಿತ್ಸೆ ನೀಡಬಹುದಾಗಿದೆಯಾದರೂ, ಸಾಮಾನ್ಯವಾಗಿ ಮುಂದುವರಿಯುತ್ತಿರುವ ಅಥವಾ ಚಿಕಿತ್ಸೆ ನೀಡಲಾಗದ ಸ್ಥಿತಿಗೆ ಹೋಗುವುದನ್ನು ಬುದ್ಧಿ ಮಾಂದ್ಯತೆ ಎಂದು ಕರೆಯುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಕಾಯಿಲೆಯ ಕಾರಣದ ಆಧಾರದ ಮೇಲೆ ಬುದ್ಧಿ ಮಾಂದ್ಯತೆಯ ಲಕ್ಷಣಗಳನ್ನು ಪೂರ್ವ ಸ್ಥಿತಿಗೆ ತರಬಲ್ಲ ಇಲ್ಲವೆ, ಪೂರ್ವಸ್ಥಿತಿಗೆ ತರಲಾಗದಂತಹ ಎಂದು ವರ್ಗೀಕರಿಸಬಹುದಾಗಿದೆ. ಸದ್ಯ ಕಾರಣಗಳಿಂದ ಆಗಿರುವ ಶೇ. 10 ರಷ್ಟು ಬುದ್ಧಿ ಮಾಂದ್ಯತೆಯನ್ನು ಚಿಕಿತ್ಸೆಯ ನೆರವಿನಿಂದ ಪೂರ್ವಸ್ಥಿತಿಗೆ ತರಬಹುದಾಗಿದೆ. ಕಾಯಿಲೆಗೆ ಕಾರಣಗಳು ವಿವಿಧ ರೀತಿಯ ನಿರ್ಧಿಷ್ಟಪಡಿಸಿದ ಪ್ರಕ್ರಿಯೆಗಳನ್ನು ಅಂಗ ಕಾರ್ಯನಿಷ್ಕ್ರೀಯತೆಗಳಾದ ಉಸಿರಾಟದ ತೊಂದರೆ, ಕಾಮಾಲೆ ಅಥವಾ ನೋವುಗಳನ್ನು ಒಳಗೊಂಡಿರುತ್ತವೆ. ಕೆಲವು ದಿನ ಅಥವಾ ವಾರಗಳವರೆಗೆ ಕಾಣಿಸಿಕೊಳ್ಳುವ ಡೆಲಿರಿಯಂನ ಅಲ್ಪಾವಧಿಯ ಲಕ್ಷಣಗಳನ್ನು ಸುಲಭವಾಗಿ ಬುದ್ಧಿ ಮಾಂದ್ಯತೆ ಎಂದು ಗೊಂದಲಕ್ಕೀಡು ಮಾಡುತ್ತವೆ. ಏಕೆಂದರೆ ಅವುಗಳಲ್ಲಿ ಎಲ್ಲ ಲಕ್ಷಣಗಳು ಒಂದೇ ರೀತಿಯದ್ದಾಗಿರುತ್ತದೆ. ಕೆಲ ಬಾರಿ ಡೆಲಿರಿಯಂ, ಸಿಂಪೆಥಿಟಿಕ್ ನರ ವ್ಯವಸ್ಥೆಯ ಅತಿಯಾದ ಚಟುವಟಿಕೆಯಿಂದಾಗಿ ಅಗುತ್ತಿರುತ್ತದೆ. ಆದ್ದರಿಂದ ಇತಿಹಾಸವನ್ನು ಎಚ್ಚರದಿಂದ ಪರಿಶೀಲಿಸಬೇಕಾಗುತ್ತದೆ.[8] ಮಾನಸಿಕ ಖಿನ್ನತೆ ಮತ್ತು ಬುದ್ಧಿ ವಿಕಲ್ಪದಂತಹ ಕೆಲ ಮಾನಸಿಕ ಕಾಯಿಲೆಗಳು ಕೂಡ ಡೆಲಿರಿಯಂ ಮತ್ತು ಬುದ್ಧಿಮಾಂದ್ಯತೆಯ ಲಕ್ಷಣಗಳನ್ನು ಹುಟ್ಟು ಹಾಕುತ್ತವೆ. ಆದ್ದರಿಂದ ಅವುಗಳನ್ನು ವಿಭಜಿಸಿ ನೋಡಲೇಬೇಕು. ಆಲ್ಕೋಹಾಲ್ ನ ಪದೇ ಪದೇ ಉಪಯೋಗ ಮತ್ತು ನಿದ್ರಾಹೀನತೆಯು ರೋಗಿಯನ್ನು ಬುದ್ಧಿ ಮಾಂದ್ಯತೆಯ ಲಕ್ಷಣಗಳಲ್ಲಿ ಒಂದಾಗಿರುವ ಅರಿವಿನ ಕೊರತೆಗೆ ಅವಧಿಗೆ ಮುನ್ನವೇ ತಳ್ಳಬಹುದು.

ಪರಿವಿಡಿ

ರೋಗ ಸೂಚನೆ ಹಾಗೂ ಲಕ್ಷಣಗಳು[ಬದಲಾಯಿಸಿ]

ಸಹಪ್ರತಿಬಂಧಕಗಳು[ಬದಲಾಯಿಸಿ]

ಬುದ್ಧಿ ಮಾಂದ್ಯತೆ ಕೇವಲ ಜ್ಞಾಪಕ ಶಕ್ತಿ ಸಮಸ್ಯೆಯಲ್ಲ. ಇದರ ಜೊತೆಗೆ ಮಾನಸಿಕ ಮತ್ತು ವರ್ತನೆ ಸಮಸ್ಯೆಗಳು ಬುದ್ಧಿ ಮಾಂದ್ಯತೆಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾಡಬಹುದು. ಇದು ಜೀವನ ಗುಣಮಟ್ಟ, ಆರೈಕೆ ಮಾಡುವವರ ಮೇಲೆ ಪರಿಣಾಮ ಬೀರಬಹುದು, ಮತ್ತು ಸಂಸ್ಥೆಗೆ ಸೇರ್ಪಡೆ ಮಾಡುವುದು ಅಗತ್ಯವಾಗಬಹುದು.

ಬುದ್ಧಿ ಮಾಂದ್ಯತೆಯನ್ನು ಹೊಂದಿರುವ ಶೇ. 20ರಿಂದ 30ರಷ್ಟು ವ್ಯಕ್ತಿಗಳಿಗೆ ಮಾನಸಿಕ ಖಿನ್ನತೆ ಕಾಡಬಹುದು. ಮತ್ತು ಶೇ. 20ರಷ್ಟು ವ್ಯಾಕುಲತೆ ಕಾಡಬಹುದು.[12] ಬುದ್ಧಿ ವಿಕಲ್ಪದ (ಹಿಂಸೆಯತ್ತ ವಾಲುವುದು) ಮತ್ತು ಪ್ರತಿರೋಧ/ಆಕ್ರಮಣಶೀಲತೆಯೂ ಕೂಡ ಕೆಲ ಬಾರಿ ಬುದ್ಧಿ ಮಾಂದ್ಯತೆಯೊಂದಿಗೆ ಸೇರ್ಪಡೆಯಾಗಬಹುದು. ಬುದ್ಧಿಮಾಂದ್ಯತೆಯನ್ನು ನಿರ್ಧರಿಸುವುದಕ್ಕೆ ಕಾರಣವಾಗಿರುವ ಇವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಮತ್ತು ಸ್ವತಂತ್ರ ಚಿಕಿತ್ಸೆ ಕೈಗೊಳ್ಳಬೇಕಾದ ಅಗತ್ಯವಿದೆ.[೧]

ತನಗೂ ಮತ್ತು ಇತರರಿಗೂ ಅಪಾಯಕಾರಿ[ಬದಲಾಯಿಸಿ]

ಬುದ್ಧಿ ಮಾಂದ್ಯತೆ ಇರುವ ವ್ಯಕ್ತಿಯ ವಾಹನ ಚಾಲನೆ ಮಾಡಿದರೆ ಅದರಿಂದ ಸ್ವತಃ ಮತ್ತು ಇತರರಿಗೂ ಗಂಭೀರವಾದ ಗಾಯ ಮತ್ತು ಸಾವು ಸಂಭವಿಸಬಹುದು ಎಂದು ಕೇನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ವರದಿ ಮಾಡಿದೆ. ವಾಹನ ಚಾಲನೆ ಹೊರಡುವ ಸಂದರ್ಭದಲ್ಲಿ ವೈದ್ಯರು ಸರಿಯಾದ ಚಿಕಿತ್ಸೆಗೆ ಸೂಚಿಸಬೇಕು.[೨]

ಬುದ್ಧಿ ಮಾಂದ್ಯ ಅಥವಾ ಇನ್ನಿತರ ಮಾನಸಿಕ ಅಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳ ಮಾನಸಿಕ ಪರೀಕ್ಷೆಯನ್ನು ನಡೆಸುವುದಕ್ಕೆ ಯುನೈಟೆಡ್ ಸ್ಟೇಟ್ಸ್ ನ ಪ್ಲೋರಿಡಾದ ಬೇಕರ್ ಕಾನೂನು, ನ್ಯಾಯಾಂಗ ಜಾರಿ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಪರರಿಗೂ ಮತ್ತು ಸ್ವತಃಕ್ಕೂ ಅಪಾಯವಾಗಬಲ್ಲದಂತಹ ಎಲ್ಲ ರೀತಿಯ ಮಾನಸಿಕ ಕಾಯಿಲೆಗಳಿಂದ ನರಳುತ್ತಿರುವ ವ್ಯಕ್ತಿಗಳನ್ನು ಪರಿಶೀಲನೆಯ ಉದ್ದೇಶ, ಆರೈಕೆ ಮತ್ತು ಚಿಕಿತ್ಸೆಗಾಗಿ ಯುನೈಟೆಡ್ ಕಿಂಗಡಮ್ ನಲ್ಲಿ ಮೆಂಟಲ್ ಹೆಲ್ತ್ ಆಕ್ಟ್ 1983ರ ಪ್ರಕಾರ ವಶಕ್ಕೆ ತೆಗೆದುಕೊಳ್ಳಬಹುದು. ಒಂದು ವೇಳೆ ರೋಗಿಯ ಸಂಬಂಧಿಕರು ಮತ್ತು ಸ್ನೇಹಿತರು ಆರೈಕೆಯನ್ನು ಖಚಿತಪಡಿಸಿದಲ್ಲಿ ಇದನ್ನು ತಪ್ಪಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಕೊನೆಯದಾಗಿ ರೋಗಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.

ಯುನೈಟೆಡ್ ಕಿಂಗಡಮ್ಡಿವಿಎಲ್ಎ (ಡ್ರೈವಿಂಗ್ ಆಂಡ್ ವೆಹಿಕಲ್ ಲೈಸೆನ್ಸಿಂಗ್ ಏಜೆನ್ಸಿ) ಪ್ರಕಾರ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿರುವವರು ಅದರಲ್ಲೂ, ಅಲ್ಪಾವಧಿ ಜ್ಞಾಪಕ ಶಕ್ತಿ, ಏಕಾಗ್ರತೆಯ ಕೊರತೆ, ದೂರದೃಷ್ಟಿ ಅಥವಾ ತೀರ್ಮಾನ ತೆಗೆದುಕೊಳ್ಳುವಲ್ಲಿ ಅಸಾಮರ್ಥ್ಯವಿರುವವರು ಬಹುತೇಕ ವಾಹನ ಚಾಲನೆಗೆ ಅರ್ಹರಾಗಿರುವುದಿಲ್ಲ ಎಂದು ಹೇಳುತ್ತದೆ. ಮತ್ತು ಇಂತಹ ಸಂದರ್ಭಗಳಲ್ಲಿ ಡಿವಿಎಲ್ಎಗೆ ಮಾಹಿತಿ ನೀಡಬೇಕು ಇದರಿಂದಾಗಿ ಪರವಾನಗಿಯನ್ನು ರದ್ದುಪಡಿಸಬಹುದಾಗಿದೆ. ಆದರೆ ಅವರು, ಇದನ್ನು ಕಡಿಮೆ ಗಂಭೀರತೆ ಇರುವ ಪ್ರಕರಣಗಳಲ್ಲಿ ಮತ್ತು ಅವಧಿಗೆ ಮುನ್ನ ರೋಗದಿಂದ ಬಳಲುತ್ತಿರುವವರು ಮತ್ತು ಆ ವೈದ್ಯಕೀಯ ವರದಿಗೆ ಇನ್ನೂ ಬರಬೇಕಾದ ಆ ವಾಹನ ಚಾಲಕರು ಪರವಾನಗಿ ನೀಡಲಾಗುತ್ತದೆ.

ರೋಗನಿರ್ಣಯ[ಬದಲಾಯಿಸಿ]

ಸೂಕ್ತವಾದ ರೋಗ ನಿರ್ಣಯ ವಿಧಾನದಿಂದ ಬುದ್ಧಿ ಮಾಂದ್ಯತೆಯ ನಡುವೆ ಇರುವ ವ್ಯತ್ಯಾಸಗಳನ್ನು ಮಾಡಬೇಕಾಗುತ್ತದೆ. (ಕಾರ್ಟಿಕಲ್ ಮತ್ತು ಸಬ್ ಕಾರ್ಟಿಕಲ್ ಕೆಳಗೆ ನೋಡಿ) ಕನಿಷ್ಠ ಉದಾ, ಜೆರಿಯಾಟ್ರಿಕ್ ಇಂಟರ್ನಿಸ್ಟ್, ಜೆರಿಯಾಟ್ರಿಕ್ ಮಾನಸಿಕ ತಜ್ಞ, ನರರೋಗ ತಜ್ಞ ಮತ್ತು ನರರೋಗ ಮಾನಸಿಕ ತಜ್ಞ ಅಥವಾ ಜೆರೋಸೈಕಾಲಾಜಿಸ್ಟ್ ಗೆ ಸೂಚಿಸಬೇಕಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅದರೆ, ಸಾಧಾರಣ ಪ್ರಮಾಣದಲ್ಲಿ ವಿಶ್ವಸನೀಯವಾದ, ಅಸ್ತಿತ್ವದಲ್ಲಿರುವ ಕೆಲ ಚಿಕ್ಕ ಪರೀಕ್ಷೆಗಳನ್ನು (5-15 ನಿಮಿಷಗಳ) ಕಚೇರಿಯಲ್ಲಿ ಅಥವಾ ಇತರಡೆಗಳಲ್ಲಿ ನಿರ್ಮಿಸಲಾಗಿರುವ ಅರಿವಿನ ಮಟ್ಟವನ್ನು ವಿವರಿಸುವುದಕ್ಕೆ ಉಪಯೋಗಿಸಬಹುದಾಗಿದೆ. ಪ್ಯಾಥಾಲಾಜಿಕಲ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಅಬ್ರಿವೆಟೆಡ್ ಮೆಂಟಲ್ ಟೆಸ್ಟ್ ಸ್ಕೋರ್ (AMTS), ಮಿನಿ ಮೆಂಟಲ್ ಸ್ಟೇಟ್ ಎಕ್ಸಾಮಿನೇಷನ್ (MMSE), ಮಾಡಿಫೈಯ್ಡ್ -ಮಿನಿ ಮೆಂಟಲ್ ಸ್ಟೇಟ್ ಎಕ್ಸಾಮಿನೇಷನ್ (3MS)[೩], ದಿ ಕಾಗ್ನಿಟಿವ್ ಎಬಿಲಿಟಿಸ್ ಸ್ಕ್ರೀನಿಂಗ್ ಇನ್ಸುಸ್ಟ್ರೆಮೆಂಟ್ (CASI)[೪], ಮತ್ತು ದಿ ಕ್ಲಾಕ್ ಡ್ರಾಯಿಂಗ್ ಟೆಸ್ಟ್[೫] ಗಳನ್ನು ಒಳಗೊಂಡಿರುತ್ತದೆ. (ಹತ್ತು ಅಂಕ ಪಡೆಯುವ ಸಾಧ್ಯತೆ ಇರುವ) AMTSನಲ್ಲಿ ಆರಕ್ಕಿಂತ ಕಡಿಮೆ ಮತ್ತು (30 ಅಂಕ ಪಡೆಯುವ ಸಾಧ್ಯತೆ ಇರುವ ) AMSEನಲ್ಲಿ 24ಕ್ಕಿಂತ ಕಡಿಮೆ ಅಂಕ ಬಂದಲ್ಲಿ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ಸೂಚಿಸುತ್ತದೆ. ಅಂಕಗಳನ್ನು ವ್ಯಕ್ತಿಯ ಶೈಕ್ಷಣಿಕ ಮತ್ತು ಇತರ ಹಿನ್ನೆಲೆ, ಮತ್ತು ವಿಶೇಷ ಘಟನಾವಳಿಗಳನ್ನು ಗಮನಿಸಿ ವಿಶ್ಲೇಷಿಸಬೇಕಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಅತಿಯಾಗಿ ಖಿನ್ನನಾಗಿರುವುದು ಮತ್ತು ಸಾಕಷ್ಟು ನೋವು ಅನುಭವಿಸುತ್ತಿದ್ದಲ್ಲಿ ಆ ವ್ಯಕ್ತಿಯು ಮಾನಸಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲಾರ.

ಮಿನಿ-ಮೆಂಟಲ್ ಸ್ಟೇಟ್ ಎಕ್ಸಾಮಿನೇಷನ್[ಬದಲಾಯಿಸಿ]

ಅಮೆರಿಕದ ಪ್ರಿವೆಂಟಿವ್ ಸರ್ವಿಸಸ್ ಟಾಸ್ಕ್ ಫೋರ್ಸ್ (USPSTF) ಅರಿವು ಹೀನತೆ ಪರೀಕ್ಷೆಗಳನ್ನು ಪರಿಶೀಲಿಸಿದೆ ಮತ್ತು ನಿರ್ಣಯಕ್ಕೆ ಬಂದಿದೆ.[೬]

 • MMSE
ಸ್ಪಂದನೆ ಶೇ. 71ರಿಂದ ಶೇ. 92
ನಿರ್ಧಿಷ್ಟಪಡಿಸುವಿಕೆ ಶೇ.56ರಿಂದ 96

ಮಾಡಿಫಾಯ್ಡ್ ಮಿನಿ-ಮೆಂಟಲ್ ಸ್ಟೇಟ್ ಎಕ್ಸಾಮಿನೇಷನ್[ಬದಲಾಯಿಸಿ]

3MSನ ನಕಲು ಒಂದು ಆನ್ ಲೈನ್ ನಲ್ಲಿದೆ.[೭] ಮಾಡಿಫಾಯ್ಡ್ ಮಿನಿ-ಸ್ಟೇಟ್ ಎಕ್ಸಾಮಿನೇಷನ್ ಇವುಗಳನ್ನು ಹೊಂದಿದೆ ಎಂದು ಮೆಟಾ- ಆನಾಲಿಸ್ ನಿರ್ಣಯಕ್ಕೆ ಬಂದಿದೆ.[೮]

ಸ್ಪಂದನೆ ಶೇ. 83ರಿಂದ 93.5
ನಿರ್ಧಿಷ್ಟಪಡಿಸುವಿಕೆ ಶೇ. 85ರಿಂದ ಶೇ. 90

ಅಬ್ರಿವೆಟೆಡ್ ಮೆಂಟಲ್ ಟೆಸ್ಟ್ ಅಂಕ[ಬದಲಾಯಿಸಿ]

ಮೆಟಾ-ಅನಾಲಿಸಿಸ್ ತೀರ್ಮಾನಕ್ಕೆ ಬಂದಿದೆ.[೮]

ಸ್ಪಂದನೆ ಶೇ.73ರಿಂದ 100%
ನಿರ್ಧಿಷ್ಟಪಡಿಸುವಿಕೆ ಶೇ. 71ರಿಂದ 100

ಲಕ್ಷಣದ ಅವಧಿ[ಬದಲಾಯಿಸಿ]

ಬುದ್ಧಿ ಮಾಂದ್ಯತೆ ಅಥವಾ ಆರ್ಗ್ಯಾನಿಕ್ ಬ್ರೇನ್ ಸಿಂಡ್ರೋಮ್ ರೋಗ ಪರಿಕ್ಷೆಗೆ ಸಾಮಾನ್ಯವಾಗಿ ಆರು ತಿಂಗಳುಗಳ ಅವಧಿಯ ಲಕ್ಷಣಗಳು ಕಾಣಿಸಬೇಕು.

ಇತರ ಪರೀಕ್ಷೆಗಳು[ಬದಲಾಯಿಸಿ]

ಕ್ಲಾಕ್ ಡ್ರಾಯಿಂಗ್ ಟೆಸ್ಟ್ ಎಕ್ಸಾಂಪಲ್ ಫಾರ್ಮ್ ಸೇರಿದಂತೆ ಇತರ ಹಲವಾರು ಪರೀಕ್ಷೆಗಳನ್ನು ಅಧ್ಯಯನ ಮಾಡಲಾಗಿದೆ.[೯][೧೦][೧೧] MMSEಗೆ ಅತ್ತ್ಯುತ್ತಮ ಪರ್ಯಾಯವಾಗಿ ಹೊರಬಂದಿವೆ. ಸದ್ಯ ಅಧ್ಯಯನಕ್ಕೆ MMSE ಅತ್ತ್ಯುತ್ತಮ ಆದರೆ, ಈಗ ಕಾಪಿರೈಟ್ ಕಾರಣ MMSEಯನ್ನು ಪಡೆಯುವುದನ್ನು ಸೀಮಿತಗೊಳಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಬುದ್ಧಿ ಮಾಂದ್ಯತೆಯನ್ನು ಪರೀಕ್ಷಿಸುವುದಕ್ಕೆ ಇನ್ನೊಂದು ಮಾರ್ಗ ಎಂದರೆ, ಮಾಹಿತಿದಾರನಿಗೆ (ಸಂಬಂಧಿಕ ಅಥವಾ ಇತರ ಬೆಂಬಲಿಗ) ವ್ಯಕ್ತಿಯ ಪ್ರತಿನಿತ್ಯ ಜೀವನದಲ್ಲಿ ಅರಿವಿಲ್ಲದ ಕಾರ್ಯಕ್ಷಮತೆ ಕುರಿತು ಇರುವ ಪ್ರಶ್ನಾವಳಿಗೆ ಉತ್ತರಿಸುವಂತೆ ಹೇಳುವುದು ಆಗಿದೆ. ಅರಿವು ಪರೀಕ್ಷೆಗೆ ಮಾಹಿತಿದಾರನ ಪ್ರಶ್ನಾವಳಿಗಳು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಈ ಮಾದರಿಯ ಪ್ರಶ್ನಾವಳಿಗಳಲ್ಲಿ ಇನಫಾರ್ಮಂಟ್ ಕ್ವಶ್ಚೈನರ್ ಆನ್ ಕಾಗ್ನಿಟಿವ್ ಡಿಕ್ಲೈನ್ ಇನ್ ದಿ ಎಲ್ಡರ್ಲಿ (IQCODE) ಅತ್ತ್ಯುತ್ತಮ ಎಂದು ತಿಳಿಯಬಹುದಾಗಿದೆ.[೧೨]

ಜನರಲ್ ಪ್ರಾಕ್ಟಿಷನರ್ ಅಸ್ಸೆಸಮೆಂಟ್ ಆಫ್ ಕಾಗ್ನಿಷನ್ ನಲ್ಲಿ ರೋಗಿಯ ಪರಿಶೀಲನೆ ಮತ್ತು ಮಾಹಿತಿದಾರನ ಸಂದರ್ಶನವನ್ನು ಒಳಗೊಂಡಿರುತ್ತದೆ. ಇದನ್ನು ಪ್ರಾಥಮಿಕ ಆರೈಕೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವೆಬ್ ಆಧಾರಿತ ಪರೀಕ್ಷೆಗೆ ಲಭ್ಯವಿದೆ. ಇದನ್ನು www.gpcog.com.au ಮೂಲಕ ಕೂಡ ಪಡೆಯಬಹುದಾಗಿದೆ. ಹೆಚ್ಚಿನ ಪರಿಶೀಲನೆಯು ಇನ್ನೊಂದು ದಿನಾಂಕದಂದು ಮರುಪರೀಕ್ಷೆ ಮತ್ತು ಇತರ ನ್ಯೂರೋಸೈಕಾಲಾಜಿಕಲ್ ಪರೀಕ್ಷೆಯಂತಹ ಮಾನಸಿಕ ಕಾರ್ಯಕ್ಷಮತೆ ಪರೀಕ್ಷೆಯನ್ನು ಒಳಗೊಂಡಿದೆ. (ಮತ್ತು ಕೆಲ ಸಮಯ ಹೆಚ್ಚು ಸಂಕೀರ್ಣವಾಗಿರುತ್ತದೆ).

ಪ್ರಯೋಗಾಲಯ ಪರೀಕ್ಷೆಗಳು[ಬದಲಾಯಿಸಿ]

ಚಿಕಿತ್ಸೆ ನೀಡಬಹುದಾದ ಕಾರಣಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಸಾಮಾನ್ಯವಾಗಿ ವಾಡಿಕೆಯ ಪ್ರಕಾರ ರಕ್ತ ಪರೀಕ್ಷೆ ಕೂಡ ನಡೆಸಲಾಗುತ್ತದೆ. ಈ ಪರೀಕ್ಷೆಗಳು ವಿಟಾಮಿನ್ ಬಿ12, ಫಾಲಿಕ್ ಆಸಿಡ್, ಥೈರಾಯಿಡ್-ಸ್ಟಿಮುಲೆಟಿಂಗ್ ಹಾರ್ಮೋನ್ (TSH), ಸಿ-ರಿಯಾಕ್ಟಿವ್ ಪ್ರೋಟಿನ್, ಫುಲ್ ಬ್ಲಡ್ ಕೌಂಟ್, ಎಲೆಕ್ಟ್ರೋಲೈಟ್, ಕ್ಯಾಲ್ಸಿಯಂ, ರೆನಲ್ ಪಂಕ್ಷನ್ ಮತ್ತು ಲಿವರ್ ಎಂಜೈಮ್ ಅನ್ನು ಒಳಗೊಂಡಿರುತ್ತದೆ. ಆಸಾಮಾನ್ಯತೆಗಳು ಹಿರಿಯರಲ್ಲಿ ಸಾಮಾನ್ಯವಾಗಿ ಗೊಂದಲ ಅಥವಾ ಏಕಾಗ್ರತೆಯ ಕೊರತೆಗೆ ವಿಟಾಮಿನ್ ಕೊರತೆ, ಸೋಂಕು ಮತ್ತು ಇತರ ಸಮಸ್ಯೆಗಳು ಕಾರಣವಾಗುತ್ತವೆ ಎನ್ನುವುದನ್ನು ಸೂಚಿಸಬಹುದು. ಮೊದಲೇ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಇದ್ದರೆ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳ ಹಿಂಚಲನೆ ಕೊನೆಯದಾಗಿದ್ದರೂ ಅವು ತಾತ್ಕಾಲಿಕವಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಆಲ್ಕೋಹಾಲ್ ಗೆ ಪರೀಕ್ಷಿಸುವುದು ಮತ್ತು ಇತರ ತಿಳಿದಿರುವ ಬುದ್ಧಿಮಾಂದ್ಯತೆ ಹೆಚ್ಚಿಸುವ ಡ್ರಗ್ ಗಳನ್ನು ಸೂಚಿಸಬಹುದು.

ಚಿತ್ರಣ[ಬದಲಾಯಿಸಿ]

ಸಿಟಿ ಸ್ಕ್ಯಾನ್ ಅಥವಾ ಮ್ಯಾಗ್ನೇಟಿಕ್ ರಿಸೋನನ್ಸ್ ಇಮೆಜಿಂಗ್ ಸ್ಕ್ಯಾನ್ (ಎಂಆರ್ಐ ಸ್ಕ್ಯಾನ್) ಅನ್ನು ಸಾಮಾನ್ಯವಾಗಿ ನಡೆಸಲಾಗುತ್ತಿದ್ದು, ಆದಾಗ್ಯೂ ಈ ವಿಧಾನಗಳು ಬುದ್ಧಿ ಮಾಂದ್ಯತೆಯನ್ನು ಹೊಂದಿರುವ ರೋಗಿಗಳಲ್ಲಿ ಆಗುವ ಮೆಟಾಬೊಲಿಕ್ ಬದಲಾವಣೆಗಳ ಬಗ್ಗೆ ಕನಿಷ್ಠ ಸ್ಪಂದನೆಯನ್ನು ಹೊಂದಿರುವುದಿಲ್ಲ. (ಪಾರ್ಶ್ವ ವಾಯು ಮತ್ತು ದೌರ್ಬಲ್ಯತೆಯಂತಹ) ನರಸಂಬಂಧಿ ಸಮಸ್ಯೆಗಳ ಕುರಿತು ನರರೋಗ ಪರೀಕ್ಷೆಯಲ್ಲಿ ಒಟ್ಟಾರೆ ಫಲಿತಾಂಶ ನೀಡುವುದಿಲ್ಲ. ಸಿಟಿ ಅಥವಾ ಎಂಆರ್ಐ, ಹೈಡ್ರೋಸೆಫಾಲಸ್ ಅನ್ನು ಸಾಮಾನ್ಯ ಒತ್ತಡ ಎಂದು ಸೂಚಿಸಬಹುದು. ಬುದ್ಧಿ ಮಾಂದ್ಯತೆಯ ಮರಳುವುದಕ್ಕೆ ಪ್ರಬಲ ಕಾರಣವಾಗುವ ಇದು, ಇತರ ಬುದ್ಧಿ ಮಾಂದ್ಯತೆಗಳ ಕುರಿತು ಸಾಕಷ್ಟು ಮಾಹಿತಿಯನ್ನು ಒದಗಿಸಬಹುದು. ನಿರ್ಜೀವ ಜೀವಕೋಶಗಳನ್ನೊಳಗೊಂಡಿರುವ ದೇಹದ ಭಾಗ, ಆಘಾತದಂತಹುಗಳು ವಸ್ಕ್ಯಾಲುರ್ ಮಾದರಿಯ ಬುದ್ಧಿಮಾಂದ್ಯತೆಯನ್ನು ತೋರ್ಪಡಿಸುವುದಕ್ಕೆ ಸಹಕಾರಿಯಾಗುತ್ತದೆ.

SPECT ಮತ್ತು PETನ್ಯೂರೋ ಇಮೆಜಿಂಗ್ ಕಾರ್ಯ ವಿಧಾನಗಳು ಸುದೀರ್ಘಕಾಲದವರೆಗೆ ನೆಲೆ ನಿಂತಿರುವ ಅರಿವಿನ ನಿಷ್ಕ್ರೀಯತೆಯನ್ನು ಅಂದಾಜಿಸುವುದಕ್ಕೆ ಹೆಚ್ಚು ಉಪಯುಕ್ತವಾಗಿವೆ. ಎಕೆಂದರೆ ಅವುಗಳು ಬುದ್ಧಿ ಮಾಂದ್ಯತೆಯನ್ನು ಕ್ಲಿನಿಕಲ್ ಪರೀಕ್ಷಾ ರೂಪದಲ್ಲಿ ತೆಗೆದುಕೊಂಡ ವೇಳೆ ಇದೇ ರೀತಿಯ ಸಾಮರ್ಥ್ಯವನ್ನು ತೋರಿಸಿವೆ.[೧೩] ಬುದ್ಧಿ ಮಾಂದ್ಯತೆಗೆ ಕಾರಣವಾಗುವ ಅಲ್ಜಮೈರ್ ನಿಂದ ವಸ್ಕ್ಯಾಲರ್ ಕಾರಣವನ್ನು ಪ್ರತ್ಯೇಕಿಸುವ ಸಾಮರ್ಥ್ಯ SPECTಗೆ ಇರುವುದರಿಂದ ಕ್ಲಿನಿಕಲ್ ಎಕ್ಸಾಮಿನೇಷನ್ ಗಿಂತ ಉತ್ತಮವಾಗಿ ಪ್ರತ್ಯೇಕಿಸುತ್ತದೆ.[೧೪]

ಇತ್ತೀಚಿನ ಸಂಶೋಧನೆಗಳು ಕಾರ್ಬನ್-11 ಉಪಯೋಗಿಸುವ PET ಇಮೆಜಿಂಗ್ ನ ಮೌಲ್ಯವನ್ನು ಸ್ಥಾಪಿಸಿವೆ. ವಿಶೇಷವಾಗಿ ಅಲಜಮೈರ್ ಮತ್ತು ಇತರ ವಿಧದ ಬುದ್ಧಿಮಾಂದ್ಯತೆಯ ಪೂರ್ವ ಸೂಚನೆಯ ಪರೀಕ್ಷಾ ಪದ್ಧತಿಗಳಿಗೆ ಪಿಟ್ಸಬರ್ಗ್ ಕಂಪೌಂಡ್ ಬಿ (PIB-PET) ಅನ್ನು ಮಾಧ್ಯಮವಾಗಿ ಉಪಯೋಗಿಸಲಾಗುತ್ತಿದೆ. ಆಸ್ಟ್ರೇಲಿಯದಲ್ಲಿ ನಡೆಸಿದ ಅಧ್ಯಯನವು ಎರಡು ವರ್ಷಗಳಲ್ಲಿ ಅಲಜಮೈರ್ ರೋಗಕ್ಕೆ ಬಲಿಯಾಗಬಹುದಿದ್ದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರಿವಿನ ಕೊರತೆ ಎದುರಿಸುತ್ತಿರುವ ರೋಗಿಗಳ ಕುರಿತು ಪೂರ್ವ ಸೂಚನೆಯನ್ನು PIB_PET ಶೇ. 86ರಷ್ಟು ನಿಖರವಾಗಿದೆ ಎಂದು ಸಾಬೀತು ಪಡಿಸಿದೆ. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ 66 ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, PET ಅಥವಾ PIB ಇನ್ನಿತರ ವಿಧಾನಗಳು, ಕಾರ್ಬನ್-11, ಡಿಹೈಡ್ರೋಟೆಟ್ರಾಬೆನಜೈನ್ (DTBZ) ಉಪಯೋಗಿಸಿದ ನಡೆಸಿದ ಪರೀಕ್ಷೆಯು ಒಂದು ನಾಲ್ಕು ಅಂಶದಷ್ಟು ರೋಗಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರಿವಿನ ಕೊರತೆ ಅಥವಾ ಅಲ್ಪ ಪ್ರಮಾಣದ ಬುದ್ಧಿ ಮಾಂದ್ಯತೆಯಿಂದ ನರಳುತ್ತಿದ್ದಾರೆ ಎಂದು ನಿಖರವಾಗಿ ಸಾಬೀತುಪಡಿಸಿತು.[೧೫]

ಕಾರಣಗಳು[ಬದಲಾಯಿಸಿ]

ಶಾಶ್ವತ ಸಂವೇದನೆಯ ಕೊರತೆ[ಬದಲಾಯಿಸಿ]

ಒಂದೇ ಬಾರಿ ಸಂಭವಿಸುವ ವಿವಿಧ ಮಾದರಿಯ ಮೆದುಳಿನ ಗಾಯಗಳು ಪೂರ್ವಸ್ಥಿತಿಗೆ ತರಲಾಗದ ಆದರೆ ಶಾಶ್ವತವಾದ ಅರಿವಿನ ಕೊರತೆಗೆ ಕಾರಣವಾಗಬಹುದು. ಟ್ರಾಮಾಟಿಕ್ ಮೆದುಳಿನ ಗಾಯ ಮೆದುಳಿನ ವೈಟ್ ಮ್ಯಾಟರ್ ಗೆ (ಡಿಫ್ಯೂಸ್ ಅಕ್ಸನಾಲ್ ಇಂಜುರಿ) ಅಥವಾ ಹೆಚ್ಚು ಸ್ಥಳೀಯ ಹಾನಿ (ನ್ಯೂರೋ ಸರ್ಜರಿಯಾಗಬಹುದು) ಸಾಮಾನ್ಯವಾದ ಹಾನಿಯನ್ನುಂಟು ಮಾಡುವುದಕ್ಕೆ ಕಾರಣವಾಗುತ್ತದೆ. ತಾತ್ಕಾಲಿಕವಾಗಿ ಮೆದುಳಿಗೆ ಪೂರೈಕೆಯಾಗುತ್ತಿರುವ ರಕ್ತದಲ್ಲಿ ಇಳಿಕೆಯಾದರೆ ಅದು ಹೈಪೋಕ್ಸಿಕ್-ಇಸ್ಕೆಮಿಕ್ ಗಾಯಕ್ಕೆ ದಾರಿ ಮಾಡಿಕೊಡಬಹುದು. ಆಘಾತ (ಇಸ್ಕೆಮಿಕ್ ಸ್ಟ್ರೋಕ್ ಅಥವಾ ಇಂಟ್ರಾಸೆರೆಬ್ರಲ್. ಸುಬರ್ ಕ್ನಾಯಿಡ್. ಸಬಡ್ಯುರಲ್ ಅಥವಾ ಎಕ್ಸಟ್ರಾ ಡ್ಯೂರಲ್ ಹ್ಯಾಮ್ಮರೇಜ್ ಅಥವಾ ಸೋಂಕು, ಮೆನಿನಿಂಗ್ಟಸ್ ಮತ್ತು/ ಅಥವಾ ಎನ್ಸೆಫಾಲಿಟಿಸ್ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಸುದೀರ್ಘವಾದ ಎಪಿಲಿಪ್ಟಿಕ್ ಸೀಜರ್ ಮತ್ತು ಹೈಡ್ರೊಸೆಫಾಲಸ್ ಕೂಡ ದೀರ್ಘಾವಧಿಯಲ್ಲಿ ಅರಿವಿನ ಪರಿಣಾಮ ಹೊಂದಿರುತ್ತವೆ. ಅತಿಯಾದ ಆಲ್ಕೋಹಾಲ್ ಸೇವನೆಯು ಅಲ್ಕೋಹಾಲ್ ಬುದ್ಧಿ ಮಾಂದ್ಯತೆ ಅಥವಾ ಕೊರ್ಸಾಕೊಪ್ಪ ಸೈಕಾಸಿಸ್ ಕಾರಣವಾಗಬಹುದು. (ಮತ್ತು ಕೆಲ ಪ್ರಚೋದನಕಾರಿ ಡ್ರಗ್ ಗಳು ಅಂಶ ಪ್ರೇರಿತ ಮುಂದುವರಿದ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು) ಒಂದು ಬಾರಿ ಅತಿಯಾದ ಬಳಕೆ ಸ್ಥಗಿತವಾದಲ್ಲಿ ಅರಿವಿನ ಕೊರತೆ ಮುಂದುವರಿಯುತ್ತದೆ ಆದರೆ ಮುಂದಿನ ಹಂತ ತಲುಪುವುದಿಲ್ಲ.

ಮಂದಗತಿ ಬೆಳವಣಿಗೆಯ ಬುದ್ಧಿಮಾಂದ್ಯತೆ[ಬದಲಾಯಿಸಿ]

ನಿಧಾನವಾಗಿ ಪ್ರಾರಂಭವಾಗುವ ಬುದ್ಧಿಮಾಂದ್ಯತೆ, ಇದು ಹಲವಾರು ವರ್ಷಗಳ ನಂತರ ರೋಗ ಉಲ್ಬಣವಾಗಿ ನ್ಯೂರೊ ಡಿಜೆನರೇಟಿವ್ ರೋಗವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಅಥವಾ ಪ್ರಾಥಮಿಕವಾಗಿ ಮೆದುಳಿನ ನರಮಂಡಲದ ಮೇಲೆ ಪರಿಣಾಮ ಬೀರಿ ನಿಧಾನವಾಗಿ ಆದರೆ ಪೂರ್ವಸ್ಥಿತಿಗೆ ತರಲಾಗದಂತೆ ಈ ಜೀವಕೋಶಗಳ ಕಾರ್ಯಕ್ಷಮತೆ ನಷ್ಟವಾಗುವುದಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಡಿಜೆನರೇಟಿವ್ ಸ್ಥಿತಿಯಲ್ಲದ ದ್ವಿತೀಯ ಹಂತದ ಪರಿಣಾಮಗಳು ಮೆದಳಿನ ಜೀವಕೋಶದ ಮೇಲೆ ಆಗುತ್ತದೆ. ಒಂದು ವೇಳೆ ಆ ಸ್ಥಿತಿಯಲ್ಲಿ ಚಿಕಿತ್ಸೆ ಒದಗಿಸಿದಲ್ಲಿ, ಅದನ್ನು ಪೂರ್ವಸ್ಥಿತಿಗೆ ತರಲುಬಹುದು ಅಥವಾ ಪೂರ್ವಸ್ಥಿತಿಗೆ ತರಲಾಗದಿರಬಹುದು. ಬುದ್ಧಿ ಮಾಂದ್ಯತೆಯ ಕಾರಣಗಳು ಲಕ್ಷಣಗಳು ಗೋಚರಿಸುವ ವಯಸ್ಸಿನ ಮೇಲೆ ಆವಲಂಬಿತವಾಗಿದೆ. ಹಿರಿಯರ ಜನಸಂಖ್ಯೆಯಲ್ಲಿ (ಸಾಮಾನ್ಯವಾಗಿ ಈ ಹಂತದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ವ್ಯಾಖ್ಯಾನಿಸಲಾಗುತ್ತದೆ.) ಬಹುದೊಡ್ಡ ಸಂಖ್ಯೆಯ ಬುದ್ಧಿ ಮಾಂದ್ಯತೆಯ ಪ್ರಕರಣಗಳು ಅಲಜಮೈರ್ ಕಾಯಿಲೆಯ, ವಸ್ಕ್ಯಾಲುರ್ ಬುದ್ದಿ ಮಾಂದ್ಯತೆ ಅಥವಾ ಈ ಎರಡು ಕಾರಣದಿಂದಾಗಿ ಆಗುತ್ತದೆ.

ಭಾರಿ ದೇಹದೊಂದಿಗೆ ಬುದ್ಧಿ ಮಾಂದ್ಯತೆ ಇನ್ನೊಂದು ಸಾಮಾನ್ಯ ಕಾರಣವಾಗಿದೆ. ಇದರಿಂದಾಗಿ ಅದರ ಜೊತೆಗೆ ಅಥವಾ ಇತರ ಈ ಎರಡು ಕಾರಣಗಳಿಂದಾಗಿ ಪುನಃ ಆಗಬಹುದು.[೧೬] [೧೭][೧೮] ಹೈಫೋಥೈರಾಯಿಡಸಮ್, ಕೆಲಬಾರಿ ಮಂದಗತಿಯಲ್ಲಿ ಬೆಳವಣಿಗೆಯಾಗುವ ಅರಿವಿನ ಕೊರತೆಯೇ ಮುಖ್ಯ ಲಕ್ಷಣವಾಗಬಹುದು. ಮತ್ತು ಇದನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ಸರಿಪಡಿಸಬಹುದಾಗಿದೆ. ನಾರ್ಮಲ್ ಪ್ರೇಷರ್ ಹೈಡ್ರೊಸೆಫಾಲಸ್, ವಿರಳಾಗಿದ್ದರೂ ಕೂಡ ಗುರುತಿಸಬೇಕಾದ ಪ್ರಮುಖ ಸಂಗತಿ. ಎಕೆಂದರೆ ಚಿಕಿತ್ಸೆಯು ಬೆಳವಣಿಗೆಯನ್ನು ತಡೆಯಬಹುದು. ಮತ್ತು ಇತರ ಲಕ್ಷಣಗಳ ಸ್ಥಿತಿಗಳ ಸುಧಾರಣೆಯಾಗಬಹುದು. ಆದರೆ, ಗಮನಿಸಬಹುದಾದ ಅರಿವಿನ ಸುಧಾರಣೆ ಆಸಾಮಾನ್ಯ

೬೫ ವರ್ಷಕ್ಕಿಂತ ಕೆಳಗಿನ ಜನರಲ್ಲಿ ಬುದ್ಧಿಮಾಂದ್ಯತೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇರುತ್ತದೆ. ಅಲಜಮೈರ್ ಕಾಯಿಲೆಯು ಈಗಲೂ ಹೆಚ್ಚಿನ ಕಾರಣವಾಗಿದ್ದು, ಆದರೆ, ಈ ಕಾಯಿಲೆಯ ಅನುವಂಶಿಯ ಗುಣಗಳು ಈ ವಯಸ್ಸಿನ ಗುಂಪಿನ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಪ್ರೊಂಟೊಟೆಂಪೊರಲ್ ಲೊಬರ್ ಡಿಜನರೇಷನ್ ಮತ್ತು ಹಂಟಿಗ್ಟನ್ ಕಾಯಿಲೆಗಳು ಇತರ ಪ್ರಕರಣಗಳಲ್ಲಿ ಹೆಚ್ಚಾಗಿ ಕಂಡು ಕಂಡುಬರುತ್ತವೆ.[೧೯] ವಸ್ಕ್ಯಾಲುರ್ ಬುದ್ಧಿಮಾಂದ್ಯತೆ ಕೂಡ ಆಗುತ್ತದೆ. ಆದರೆ, ಅಟಿಫೋಸ್ಫೋಲಿಪಿಡ್ ಸಿಂಡ್ರೋಮ್, CADASIL, MELAS, ಹೊಮೊಸೈಸ್ಟಿನ್ಯೂರಿಯಾ, ಮೊಯಾಮೊಯಾ ಮತ್ತು ಬಿನ್ ಸ್ವಾಂಗರ್ ಕಾಯಿಲೆಗಳ ಕಾರಣದಿಂದಾಗಿ ತಿರುಗುತ್ತದೆ. ಪದೇ ಪದೇ ತಲೆಗೆ ಏಟು ತಿನ್ನುವ ಜನರಲ್ಲಿ ಒಂದಾಗಿರುವ ಬಾಕ್ಸರ್ ಗಳು ಮತ್ತು ಯುದ್ಧ ಕಲಾವಿದರು ಡೆಮಿಂಟಿಯಾ ಪ್ಯುಜಿಲಿಸ್ಟಿಕಾ ರೋಗಕ್ಕೆ ತುತ್ತಾಗುವ ಅಪಾಯ ಇರುತ್ತದೆ. ಕೊಯೆಲಿಕ್ ಕಾಯಿಲೆ ಮತ್ತು ಬುದ್ಧಿ ಮಾಂದ್ಯತೆಯ ನಡುವೆ ಸಹಯೋಗ ಇದೆ ಎಂದು ವಾದಿಸಲಾಯಿತು, ಆದರೆ ಇದು ವಿವಾದಾತ್ಮಕವಾಗಿದೆ.

ಸರಾಸರಿ ಬುದ್ಧಿಮತ್ತೆಯನ್ನು ಹೊಂದಿರುವ ಪ್ರೌಢರಲ್ಲಿ (40ನೇ ವಯಸ್ಸಿನವರೆಗೆ) ಬುದ್ಧಿಮಾಂದ್ಯತೆಯು, ನರರೋಗದ ಕಾಯಿಲೆ ಅಥವಾ ದೇಹದ ಇತರ ಭಾಗದಲ್ಲಿ ಕಾಯಿಲೆಯ ರೋಗ ಲಕ್ಷಣವಿಲ್ಲದೆ ಕಾಣಿಸಿಕೊಳ್ಳುವುದು ಅಪರೂಪ. ಈ ವಯಸ್ಸಿನ ಗುಂಪಿನಲ್ಲಿ ಆಲ್ಕೋಹಾಲ್, ಅಥವಾ ಇತರ ಡ್ರಗ್ ಗಳು ಅಥವಾ ಮೆಟಾಬೊಲಿಕ್ ನಲ್ಲಿ ಅಡಚಣೆಗಳ ಕಾರಣದಿಂದಾಗಿ ಬೆಳವಣಿಗೆಯಾಗುವ ಬುದ್ಧಿಮಾಂದ್ಯತೆಯ ಪ್ರಕರಣಗಳು ಕಾಣಿಸಿಕೊಳ್ಳುವುದು ಹೆಚ್ಚು. ಆದರೆ, ಕೆಲ ವಂಶವಾಹಿಗಳಲ್ಲಿನ ಏರುಪೇರು ಕೂಡ ನಿಜವಾದ ನ್ಯೂರೋಡಿಜನರೇಟಿವ್ ಬುದ್ಧಿ ಮಾಂದ್ಯತೆ ಈ ಹಂತದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಬಹುದು. [[]]ಇದು, ಫ್ಯಾಮಿಲಿಯನ್ ಅಲಜಮೈರ್ ಕಾಯಿಲೆ, ಮೆಟಾಕ್ರೋಮಾಟಿಕ್ ಲ್ಯೂಕ್ ಡಿಸ್ಟ್ರೋಫಿ , SCA17, ಡಾಮಿನಿಂಟ್, ಇನಹೆರಿಟನ್ಸ್, ಅಡ್ರೆನೊಲ್ಯೂಕೊಡೈಸ್ಟ್ರೋಫಿ, X-ಲಿಂಕಡ್, ಗಾಚರ್ ಕಾಯಿಲೆ ಮಾದರಿ, ಸಿ ಮಾದರಿಯ ನೈಯಿಮನ್-ಪಿಕ್ ಕಾಯಿಲೆ, ಪ್ಯಾಂಟೋಥೆನೆಟ್ ಕಿನಾಸ್ ನೊಂದಿಗೆ ಸಂಪರ್ಕವಿರುವ ನ್ಯೂರೋಡಿಜನರೇಷನ್, ಟಾಯ್ ಸ್ಯಾಚ್ ಕಾಯಿಲೆ, ಮತ್ತು ವಿಲ್ಸನ್ ಕಾಯಿಲೆ, ರಿಸ್ಸೆಸಿವ್ ಗಳನ್ನು ಒಳಗೊಂಡಿರುತ್ತದೆ. ವಿಲ್ಸನ್ ಕಾಯಿಲೆ ವಿಶೇಷತಃ ಪ್ರಮುಖವಾಗಿದ್ದು, ಎಕೆಂದರೆ, ಚಿಕಿತ್ಸೆಯಿಂದ ಅರಿವನ್ನು ಸುಧಾರಿಸಬಹುದು.

ಎಲ್ಲ ವಯಸ್ಸಿನ, ಬಹುತೇಕ ರೋಗಿಗಳು ಸ್ಮರಣೆ ಕಷ್ಟಕರವಾಗಿರುವುದ ಅಥವಾ ಇತರ ಅರಿವಿನ ಲಕ್ಷಣಗಳಾದ ಖಿನ್ನತೆಯ ಕುರಿತು ದೂರುತ್ತಾರೆ. ವಿನಃ ನ್ಯರೋಡಿಜನರೇಟಿವ್ ಕಾಯಿಲೆ ಕುರಿತು ದೂರುವುದಿಲ್ಲ. ವಿಟಾಮಿನ್ ಮತ್ತು ಕಾಲಕಾಲಕ್ಕೆ ಆಗುವ ಸೋಂಕು ಯಾವುದೇ ವಯಸ್ಸಿನ ಹಂತದಲ್ಲೂ ಆಗುತ್ತದೆ. ಸಾಮಾನ್ಯವಾಗಿ ಅವುಗಳು ಬುದ್ಧಿಮಾಂದ್ಯತೆ ಆಗುವ ಮುನ್ನ ಇತರ ಲಕ್ಷಣಗಳಿಗೂ ಕಾರಣವಾಗುತ್ತದೆ. ಇದರಲ್ಲಿ ವಿಟಾಮಿನ್ ಬಿ12, ಫೋಲೆಟ್, ಅಥವಾ ನಿಯಾಸಿನ್ ಮತ್ತು ಸೊಂಕಿಗೆ ಕಾರಣವಾಗಿರುವ ಕ್ರಿಪ್ಟೊಕೊಕಲ್ ಮೆನಿನಂಗ್ಟಿಸ್, ಎಚ್ಐವಿ, ಲೈಮ್ ಕಾಯಿಲೆ. ಪ್ರೊಗ್ರೆಸಿವ್ ಮಲ್ಟಿಫೋಕಲ್ ಲ್ಯೂಕೊನ್ಸಫಾಲೊಪಥಿ, ಸಬಾಕ್ಯೂಟ್ ಸ್ಕೇರಸಿಂಗ್, ಪನೇನ್ಸಫಾಲಿಟಿಸ್, ಸಿಫಿಲಿಸ್ ಮತ್ತು ವಿಫಲ್ ಕಾಯಿಲೆಯನ್ನು ಒಳಗೊಂಡಿರುತ್ತವೆ.

ವೇಗವಾಗಿ ಬೆಳವಣಿಗೆಯಾಗುವ ಬುದ್ಧಿಮಾಂದ್ಯತೆ[ಬದಲಾಯಿಸಿ]

ಕ್ರೂಟ್ಜ್ ಪೆಲ್ಡ್ಟ್ -ಜಾಕೊಬ್ ಕಾಯಿಲೆಯು ಬುದ್ಧಿಮಾಂದ್ಯತೆಗೆ ಕಾರಣವಾಗುತ್ತದೆ ಅದು ವಾರದಿಂದ ತಿಂಗಳಿನಲ್ಲಿ ಪರಿಸ್ಥಿತಿಯನ್ನು ಬಿಗಡಾಯಿಸುತ್ತದೆ. ನಿಧಾನಗತಿ ಬೆಳವಣಿಗೆಯ ಡಿಮೆಂಟಿಯಾ ಸಾಮಾನ್ಯ ಕಾರಣಗಳು ಕೂಡ ಕೆಲ ಸಮಯ ವೇಗದಲ್ಲಿ ಬೆಳವಣಿಗೆಯಾಗುವ ಬುದ್ಧಿಮಾಂದ್ಯತೆಯೊಂದಿಗೆ ಇರುತ್ತವೆ: ಅಲಜಮೈರ್ ಕಾಯಿಲೆ, ಡಿಮಿಂಟಿಯಾ ವಿಥ್ ಲೆವಿ ಬಾಡಿಸ್, ಫ್ರೊಂಟೊಟೆಂಪೊರಲ್ ಲೊಬರ್ ಡಿಜನರೇಷನ್ (ಸೇರಿದಂತೆ ಕಾರ್ಟಿಕೊಬಾಸಲ್ ಡಿಜನರೇಷನ್ ಮತ್ತು ಪ್ರೊಗ್ರೆಸಿವ್ ಸುಪ್ರಾ ನ್ಯೂಕ್ಲಿಯರ್ ಪಾಲ್ಸಿ)

ಇನ್ನೊಂದು ಬದಿಯಲ್ಲಿ ಎನ್ಸೆಫಾಲೊಪಥಿ, ಅಥವಾ ಡೆಲಿರಿಯಂ ಕೂಡ ಬುದ್ಧಿಮಾಂದ್ಯತೆಯನ್ನು ಹೊಲುವ ಹಾಗೆ ಅಭಿವೃದ್ಧಿ ಹೊಂದಬಹುದು. ವೈರಲ್ ಇನ್ಸಾಫಾಲಿಟಿಸ್, ಸಬಾಕ್ಯೂಟ್ ಸ್ಕ್ಲೇರೊಸಿಂಗ್, ಪನೆನ್ಸಿಫಾಲಿಟಿಸ್, ವಿಫಲ್ ಕಾಯಿಲೆ, ಅಥವಾ ಉರಿತ, ಲಿಂಬಿಕ್ ಎನ್ಸೆಫಾಲಿಟಿಸ್, ಹಾಶ್ಮಿತೊ ಎನ್ಸೆಫಾಲೊಪಥಿ, ಸೆರೆಬ್ರಲ್ ವಸ್ಕ್ಯಾಲುಟಿಸ್, ಟ್ಯೂಮರ್ಸ್ ಲಿಂಫೋಮಾ ಅಥವಾ ಗ್ಲಿಯೊಮಾ, ಡ್ರಗ್ ಟಾಕ್ಸಿಟಿ, ಅಂಟಿಕಾನ್ವುಲ್ಸಂಟ್ ಡ್ರಗ್ಸ್) ಮೆಟಾಬೊಲಿಕ್ ಕಾರಣಗಳಾದ ಲಿವರ್ ವೈಫಲ್ಯ, ಕಿಡ್ನಿ ವೈಫಲ್ಯ ಮತ್ತು ಕ್ರೊನಿಕ್ ಸಬಡ್ಯುರಲ್ ಹೆಮಾಟೊಮಾ

ಇತರ ಸ್ಥಿತಿಗಳಲ್ಲಿ ಬುದ್ಧಿಮಾಂದ್ಯತೆಯ ಲಕ್ಷಣಗಳು[ಬದಲಾಯಿಸಿ]

ರೋಗದ ಕೊನೆಯ ಹಂತದಲ್ಲಿ ಅಥವಾ ಒಂದು ಚಿಕ್ಕ ಲಕ್ಷಣದಲ್ಲಿ ಮಾತ್ರ ಸಂಭವಿಸಿದ ಬುದ್ಧಿಮಾಂದ್ಯತೆಯ ಹಲವಾರು ವೈದ್ಯಕೀಯ ಮತ್ತು ನರಶಾಸ್ತ್ರಕ್ಕೆ ಸಂಬಂಧಿಸಿದ ಸ್ಥಿತಿಗಳು ಲಭ್ಯವಿದೆ. ಉದಾಹರಣೆಗೆ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರ ಪೈಕಿ ಕೆಲವರಲ್ಲಿ ಬುದ್ಧಿ ಮಾಂದ್ಯತೆ ಬೆಳವಣಿಗೆಯಾಗುತ್ತದೆ. ಈ ಭಾಗದಲ್ಲಿ ವಿಭಿನ್ನವಾದ ಅಂಕಿ ಸಂಖ್ಯೆಗಳನ್ನು ಪ್ರತಿಪಾದಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಪಾರ್ಕಿನ್ಸನ್ ಕಾಯಿಲೆಯಲ್ಲಿ ಬುದ್ಧಿ ಮಾಂದ್ಯತೆ ಕಾಣಿಸಿಕೊಳ್ಳುವುದಕ್ಕೆ ಡೆಮಿಂಟಿಯಾ ವಿಥ್ ಲೆವಿ ಬಾಡಿಸ್ ಅಥವಾ ಅಲಜಮೈರ್ ಕಾಯಿಲೆ ಅಥವಾ ಎರಡು ಕಾಯಿಲೆಗಳು ಕಾರಣವಾಗುತ್ತವೆ.[೨೦] ಪಾರ್ಕಿನ್ಸನ್ ಮತ್ತದರ ಹೆಚ್ಚಿನ ಲಕ್ಷಣಗಳನ್ನು ಹೊಂದಿರುವ ಪ್ರೊಗ್ರೆಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸಿ ಮತ್ತು ಕಾರ್ಟಿಕೊಬಾಸಲ್ ಡಿಜನರೇಷನ್ ನಿಂದಾಗಿ ಕೂಡ ಅರಿವಿನ ಕೊರತೆ ಉಂಟಾಗುತ್ತದೆ. ಮತ್ತು ಅದೇ ರೋಗ ಪತ್ತೆ ವಿಧಾನಗಳ ಕಾರಣಗಳು ಫ್ರೊಂಟೊಟೆಂಪೊರಲ್ ಲೊಬರ್ ಡಿಜನರೇಷನ್ ನ ಕ್ಲಿನಿಕಲ್ ಸಿಂಡ್ರೋಮ್ ಗಳಿಗೆ ಕಾರಣವಾಗಬಹುದು. ಪದೆ ಪದೆ ಮೆದಳಿನ ಉರಿತದ ಸ್ಥಿತಿಗಳು ದೀರ್ಘಾವಧಿಯಲ್ಲಿ ಅರಿವಿನ ಮೇಲೆ ಬೆಚೆಟ್ಸ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೊಸಿಸ್ ಮತ್ತು ಸರ್ಕೋಯೈಡಿಸಿಸ್ ಜೊರ್ನ್ ಸಿಂಡ್ರೋಮ್ ಮತ್ತು ಸಿಸ್ಟೆಮಿಟಿಕ್ ಲುಪುಸ್ ಎರಿಥೆಮಾಟೊಸಿಸ್ ಗಳು ಸೇರಿದಂತೆ ಪರಿಣಾಮ ಬೀರಬಹುದು. ಅಕ್ಯುಟ್ ಫೊರ್ಫಿಯಾ ಗೊಂದಲ ಮತ್ತು ಮಾನಸಿಕ ಘರ್ಷಣೆಗೆ ಕೂಡ ಕಾರಣವಾಗಬಹುದು. ಈ ವಿರಳ ಕಾಯಿಲೆಗಳಲ್ಲಿ ಬುದ್ಧಿಮಾಂದ್ಯತೆ ವಿರಳವಾದ ಕಾಯಿಲೆಯಾಗಿದೆ.[೨೧]

ಮೇಲೆ ವಿವರಿಸಿದಕ್ಕಿಂತಲೂ ಬುದ್ಧಿ ಮಾಂದ್ಯತೆಗೆ ಕಾರಣವಾಗುವ ಇತರ ವೈಶಿಷ್ಟ್ಗಗಳು ಇವುಗಳನ್ನು ಒಳಗೊಂಡಿದೆ.[೨೨]

ನಿಯಂತ್ರಣ[ಬದಲಾಯಿಸಿ]

ಕ್ರಮಬದ್ಧ ಹಾಗೂ ಮಿತವಾದ ಅಲ್ಕೊಹಾಲ್‌‍ ತೆಗೆದುಕೊಳ್ಳುವುದರಿಂದ (ಬಿಯರ್‌, ವೈನ್‌‍ ಅಥವಾ ಬಟ್ಟಿ ಇಳಿಸಿದ ಸ್ಪಿರಿಟ್‌) ಮತ್ತು ಮೆಡಿಟರೇನಿಯನ್‌ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಅಪಾಯವನ್ನು ಕೆಲಪ್ರಮಾಣ ತಪ್ಪಿಸಬಹುದಾಗಿದೆ.[೨೩][೨೪][೨೫][೨೬]

ಬೆಳವಣಿಗೆಯಲ್ಲಿರುವ ಬುದ್ಧಿಮಾಂದ್ಯತೆ ಮತ್ತು ಅಧಿಕ ರಕ್ತದೊತ್ತಡದ ನಡುವೆ ಸಂಬಂಧ ಇರುವುದಾಗಿ ಅಧ್ಯಯನವೊಂದು ಸಾಬೀತು ಪಡಿಸಿವೆ. ಜುಲೈ 2008ರಂದು, ಲಾನ್ಸೆಟ್‌ ನ್ಯೂರಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ರಕ್ತದೊತ್ತಡ ಕಡಿಮೆಗೊಳಿಸುವ ಔಷಧಗಳನ್ನು ಬುದ್ಧಿಮಾಂದ್ಯತೆಯನ್ನು 13% ಕಡಿಮೆಗೊಳಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ ಎಂದು ತಿಳಿಸುತ್ತದೆ. [೨೭] [೨೮]

ಮೆದುಳು-ಸಂಬಂಧಿ ನ್ಯೂಟ್ರೋಫಿಕ್‌ ಅಂಶದ(BDNF) ಅಭಿವ್ಯಕ್ತಿಯು ಕೆಲವು ಬುದ್ಧಿಮಾಂದ್ಯತೆಯ ಪ್ರಕಾರಗಳೊಂದಿಗೆ ಸಂಬಂಧ ಹೊಂದಿದೆ.[೨೯][೩೦][೩೧]

NSAID ಔಷಧಿಗಳು[ಬದಲಾಯಿಸಿ]

ನಾನ್‌-ಸ್ಟಿರಾಯಿಡಲ್‌ ಆಂಟಿ-ಇನ್ಫ್ಲೇಮೇಟರಿ ಡ್ರಗ್‌‍ಗಳು(NSAID) ಮರೆವಿನ ಕಾಯಿಲೆ ಮತ್ತು ಪಾರ್ಕಿನ್‌ಸನ್‌‍ ಕಾಯಿಲೆಗಳ ತೊಂದರೆಯನ್ನು ಕಡಿಮೆಗೊಳಿಸುತ್ತದೆ.[೩೨] ಬುದ್ಧಿಮಾಂದ್ಯತೆಯನ್ನು ನಿಯಂತ್ರಣಕ್ಕೆ ಸುಮಾರು 2ರಿಂದ 10 ವರ್ಷಗಳು ಅಗತ್ಯವಿದೆ ಎಂದು ಹೆಚ್ಚಿನ ಅದ್ಯಯನಗಳು ಕಂಡುಕೊಂಡಿವೆ.[೩೩][೩೪][೩೫][೩೬][೩೭] ಅಧ್ಯಯನಗಳು ಕಂಡುಕೊಂಡಿರುವಂತೆ ಔಷಧಗಳನ್ನು ವೈದ್ಯರು ಹೇಳಿದ ಪ್ರಮಾಣವನ್ನೇ ತೆಗೆದುಕೊಳ್ಳಬೇಕು ಮತ್ತು ಕಡಿಮೆ ಪ್ರಮಾಣದ ಔಷಧಿಯು ಬುದ್ಧಿಮಾಂದ್ಯತೆಯನ್ನು ಕಡಿಮೆಗೊಳಿಸುವ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಲಾರದು.[೩೮]

ಮರೆವಿನ ಕಾಯಿಲೆಯು ನ್ಯೂರಾನ್‌ಗಳಲ್ಲಿ ಅಮೈಲಾಯಿಡ್‌ ಬೆಟಾ ಪೆಪ್ಟೈಡ್ಸ್‌‍ ಮತ್ತು ನ್ಯೂರೋಫೈಬ್ರಿಲರಿ ಟ್ಯಾಂಗಲ್‌ಗಳನ್ನು ಶೇಖರಿಸುವ ಮೂಲಕ ಉರಿಯೂತವನ್ನು ಉಂಟುಮಾಡುತ್ತದೆ. ಈ ಸಂಗ್ರಹವು ದೇಹಕ್ಕೆ ಉದಾಹರಣೆಗೆ ಕೈಟೊಕಿನ್ಸ್‌ ಮತ್ತು ಅಕ್ಯೂಟ್‌ ಫೇಸ್‌‍ ಪ್ರೋಟಿನ್‌ನನ್ನು ಬಿಡುಗಡೆಮಾಡುವ ಮೂಲಕ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಈ ಅಂಶವು ಹಲವಾರು ವರ್ಷಗಳ ಕಾಲ ಸಂಗ್ರಹಿತವಾಗುವುದರಿಂದ ಇದು ಮರೆವಿನ ಕಾಯಿಲೆಗೆ ಕಾರಣವಾಗುತ್ತವೆ.[೩೯] NSAIDಗಳು ಈ ರೀತಿಯ ಉರಿಯೂತ ಉಂಟುಮಾಡುವ ಅಂಶಗಳು ಸಂಗ್ರಹಗೊಳ್ಳದಂತೆ ತಡೆಯುತ್ತವೆ ಮತ್ತು ಕೆಡಕುಂಟುಮಾಡುವಂತಹ ಪರಿಣಾಮಗಳನ್ನು ತಪ್ಪಿಸುತ್ತವೆ.[೪೦][೪೧][೪೨]

ನಿರ್ವಹಣೆ[ಬದಲಾಯಿಸಿ]

ಈ ಮೇಲೆ ತಿಳಿಸಿದ ಕೆಲವು ಚಿಕಿತ್ಸಾ ಕ್ರಮಗಳನ್ನು ಬಿಟ್ಟರೆ ಈ ಅನಾರೋಗ್ಯಕ್ಕೆ ಯಾವುದೇ ನಿಶ್ಚಿತ ಚಿಕಿತ್ಸೆ ಇಲ್ಲ. ಆದರೂ ವಿಜ್ಞಾನಿಗಳು ಈ ರೋಗಗಳ ಪ್ರಕ್ರಿಯೆಯನ್ನು ಕಡಿಮೆಗೊಳಿಸುವಂತಹ ಹಲವಾರು ರೀತಿಯ ಔಷಧಗಳನ್ನು ಉತ್ಪಾದಿಸುವಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಕೊಲಿನೆಸ್ಟೆರೇಸ್‌‍ ಇನ್‌ಹಿಬಿಟರ್ಸ್‌‍ಗಳನ್ನು ರೋಗದ ಪ್ರಾಥಮಿಕ ಹಂತದ ಆರೈಕೆಗಾಗಿ ಬಳಸುತ್ತಾರೆ.

ಸಂವೇದನಾ ಮತ್ತು ನಡವಳಿಕೆಯನ್ನು ತಿದ್ದುವುದೂ ಕೂಡ ಸರಿಯಾದುದು ಎನಿಸುತ್ತದೆ. ಆರೈಕೆ ಮಾಡುವವರಿಗೆ (ಅಥವಾ ನೋಡಿಕೊಳ್ಳುವವರು) ಈ ಕುರಿತು ತಿಳುವಳಿಕೆ ನೀಡುವುದು ಮತ್ತು ಭಾವನಾತ್ಮಕ ಬೆಂಬಲ ನೀಡುವುದು ಕೂಡ ಮುಖ್ಯವಾಗುತ್ತದೆ (ವಯಸ್ಕರ ಆರೈಕೆ ವಿಭಾಗವನ್ನೂ ನೋಡಿ) . ಕೆನಡಾದಲ್ಲಿ ನಡೆದ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ ದ್ವಿಭಾಷಾ ಬಳಕೆಯಿರುವಲ್ಲಿ ಬುದ್ಧಿಮಾಂದ್ಯತೆಯ ಆಕ್ರಮಣದ ಪ್ರಮಾಣವು ಏಕಭಾಷೆಯನ್ನು ಮಾತನಾಡುವ ರೋಗಿಗಿಂತ ನಾಲ್ಕುವರ್ಷಗಳಷ್ಟು ವಿಳಂಬಗೊಂಡಿದೆ. ಸಂಶೋಧಕರು ನಿರ್ಣಯ ಮಾಡಿರುವ ಪ್ರಕಾರ ಬುದ್ಧಿಮಾಂದ್ಯತೆಯ ರೋಗಲಕ್ಷಣಗಳು ಏಕಭಾಷೆಯ ಗುಂಪುಗಳಲ್ಲಿ 71.4 ವರ್ಷಗಳಲ್ಲಿ ಕಂಡುಬಂದರೆ ದ್ವಿಭಾಷಾ ಗುಂಪುಗಳಲ್ಲಿ ಇದು 75.5ವರ್ಷಗಳ ಸಮಯದಲ್ಲಿ ಕಂಡುಬಂದಿದೆ. ಸಾಂಸ್ಕೃತಿಕ ವ್ಯತ್ಯಾಸದ ಸಾಧ್ಯಂತ ಪರಿಣಾಮಗಳನ್ನು ಪರಿಗಣಿಸಿದರೂ ಕೂಡ ಆಂತರಿಕ ವಲಸೆ, ಹಾಗೆಯೇ ಸಾಂಪ್ರದಾಯಿಕ ಶಿಕ್ಷಣ, ಉದ್ಯೋಗ ಮತ್ತು ಲಿಂಗ ಕೂಡ ಇದರ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ.[೪೩]

ಕೆಲವು ಅಧ್ಯಯನಗಳು ಪ್ರಪಂಚದಾದ್ಯಂತ ಕಂಡುಕೊಂಡಂತೆ ಸಂಗೀತ ಚಿಕಿತ್ಸೆಯು ಬುದ್ಧಿಮಾಂದ್ಯತೆಯ ರೋಗಿಗಳಿಗೆ ಆಶಾದಾಯಕವಾಗಿ ಕಂಡುಬಂದಿದೆ.[೪೪][೪೫][೪೬][೪೭][೪೮]

ಔಷಧ[ಬದಲಾಯಿಸಿ]

ಟ್ಯಾಕ್ರಿನ್‌ (ಕಾಗ್‌ನೆಕ್ಸ್‌‍), ಡೊನ್‌ಫೆಜಿಲ್‌‍ (ಎರಿಸೆಪ್ಟ್‌‍), ಗ್ಯಾಲಂಟಮೈನ್‌‍ (ರೆಝಡೈನ್‌‍), ಮತ್ತು ರಿವಾಸ್ಟಿಗ್‌ಮೈನ್‌‍ (ಎಕ್ಸೆಲಾನ್‌‌)ಗಳು ಆಲ್‌ಜೀಮರ್ ಖಾಯಿಲೆಯ ಕಾರಣದಿಂದುಂಟಾಗುವ ಬುದ್ಧಿಮಾಂದ್ಯತೆಯ ಚಿಕಿತ್ಸೆಗಾಗಿ ಯುನೈಟೆಡ್ ಸ್ಟೇಟ್ಸ್‌ನ ಆಹಾರ ಮತ್ತು ಔಷಧ ಮಂಡಳಿಯಿಂದ ಅನುಮೋದಿಸಲ್ಪಟ್ಟಿವೆ. ಬುದ್ಧಿಮಾಂದ್ಯತೆಗೆ ಕಾರಣವಾಗಬಹುದಾದ ಪಾರ್ಕಿನ್‌ಸನ್ ಅಥವಾ ವೆಸ್ಕ್ಯುಲರ್ ಬುದ್ಧಿಮಾಂದ್ಯತೆಯೆಂತಹ ಇತರ ಸಮರೂಪದ ಖಾಯಿಲೆಗಳಿಗೂ ಕೂಡ ಅವುಗಳು ಉಪಯೋಗವಾಗಬಹುದು.[೪೯]

 • ಎನ್‌-ಮಿಥಾಯಿಲ್‌‍-ಡಿ-ಆಸ್ಪರ್ಟೇಟ್‌‍ ಬ್ಲಾಕರ್ಸ್‌‍ ಮೆಮಂಟೈನ್ (ನಮೆಂಡಾ), ಇದು ಈ ವರ್ಗವನ್ನು ಪ್ರತಿನಿಧಿಸುತ್ತಿರುವ ಒಂದು ಔಷಧಿ. ಎಸಿಟೈಲ್‌‍ಕೊಲಿನೆಸ್ಟರಾಸ್‌‍ ಪ್ರತಿಬಂಧಕಗಳಲ್ಲಿ ಕೂಡ ಇದನ್ನು ಒಂದು ಸಂಯೋಜಕವಾಗಿ ಬಳಸಬಹುದು.[೫೦][೫೧]

ನಿರ್ದೇಶನಕ್ಕೆ ಹೊರತಾದ ಬಳಕೆ (ಆಫ್ ಲೇಬಲ್)[ಬದಲಾಯಿಸಿ]

 • ಎಮಿಲಾಯ್ಡ್ ಸಂಗ್ರಹ ಪ್ರತಿಬಂಧಕಗಳು

ಮೈನೋಸೈಕ್ಲಿನ್ ಮತ್ತು ಕ್ಲಿಯೋಕ್ವಿನೋಲಿನ್, ಪ್ರತಿಜೀವಿಕ ಔಷಧಿಗಳು ಮರೆವಿನ ರೋಗವಿರುವ ವ್ಯಕ್ತಿಗಳ ಮೆದುಳಿನಲ್ಲಿ ಎಮಿಲಾಯ್ಡ್ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.[೫೨]

ಖಿನ್ನತೆ ಹೆಚ್ಚಾಗಿ ಬುದ್ಧಿಮಾಂದ್ಯತೆಗೆ ಸಂಬಂಧಿಸಿರುತ್ತದೆ ಮತ್ತು ಇದು ಸಾಮಾನ್ಯವಾಗಿ ಸಂವೇದನೆ ಮತ್ತು ವರ್ತನೆಯ ದೌರ್ಬಲ್ಯತೆಯ ಸ್ಥಿತಿಯ ಮಟ್ಟವನ್ನು ಇನ್ನೂ ಹೆಚ್ಚಾಗಿಸುತ್ತದೆ. ಖಿನ್ನತೆ ನಿರೋಧಕ ಔಷಧಿಗಳು ಮರೆವಿನ ರೋಗವಿರುವ ವ್ಯಕ್ತಿಗಳಲ್ಲಿನ ಸಂವೇದನೆ ಮತ್ತು ವರ್ತನೆಯಲ್ಲಿನ ಖಿನ್ನತೆಯ ಕುರುಹುಗಳಿಗೆ ಪರಿಣಾಮಾತ್ಮಕವಾಗಿ ಚಿಕಿತ್ಸೆ ನೀಡುತ್ತವೆ,[೫೩] ಆದರೆ ಬುದ್ಧಿಮಾಂದ್ಯತೆಯ ಇತರ ಪ್ರಕಾರಗಳಲ್ಲಿ ಈ ಔಷಧಿಯ ಪ್ರಯೋಜನದ ಕುರಿತಂತೆ ಅಂತಹ ಸಾಕ್ಷಾಧಾರಗಳೇನೂ ಇಲ್ಲ.[೫೪]

ಬುದ್ಧಿಮಾಂದ್ಯತೆಯ ರೋಗವಿರುವ ಅನೇಕ ರೋಗಿಗಳು ವ್ಯಾಕುಲತೆಯ ಕುರುಹುಗಳನ್ನು ಅನುಭವಿಸುತ್ತಾರೆ. ಡಯಾಜೇಪಾಮ್‌ ನಂತಹ (ಶಾಮಕವಾಗಿ ಬಳಸುವ ಮದ್ದು) ಬೆಂಝೋಡೈಯಾಜೇಪಿನ್‌ಗಳನ್ನು ವ್ಯಾಕುಲತೆಯ ಚಿಕಿತ್ಸೆಗಾಗಿ ಸಾಮಾನ್ಯ ಪರಿಸ್ಥಿತಿಗಳಲ್ಲಿ ಬಳಸುತ್ತಾರಾದರೂ, ಅವುಗಳನ್ನು ಬುದ್ಧಿಮಾಂದ್ಯತೆಯ ರೋಗಿಗಳಿಗೆ ಬಳಸುವುದಿಲ್ಲ. ಏಕೆಂದರೆ ಇದು ಅವರಲ್ಲಿ ತಲ್ಲಣವನ್ನು ಹೆಚ್ಚಾಗಿಸಬಹುದು ಮತ್ತು ಅವರ ಸಂವೇದನೆಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು ಅಥವಾ ತೀರಾ ಶಾಂತರನ್ನಾಗಿಸಬಹುದು. ನಿಧಾನದಿಂದ ಮಧ್ಯಮ ಮಟ್ಟದ ವ್ಯಾಕುಲತೆಗೆ ಪ್ರಾಥಮಿಕ ಔಷಧಿಯಾಗಿ ಬಸ್ಪಿರಾನ್ (ಬಸ್ಪಾರ್) ನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಬುದ್ಧಿಮಾಂದ್ಯತೆಯನ್ನು ಕಡಿಮೆಗೊಳಿಸುವಲ್ಲಿ ಬೆಂಝೋಡೈಯಾಜೇಪಿನ್‌ಗಳ ಪರಿಣಾಮಾತ್ಮಕತೆಯ ಕುರಿತು ಯಾವ ನಿದರ್ಶನಗಳಿಲ್ಲ. ಆದರೆ ಬುದ್ಧಿವಿಕಲ್ಪ ನಿರೋಧಕ ಔಷಧಿಗಳ ಪರಿಣಾಮಾತ್ಮಕತೆಯ ಕುರಿತು ಯಾವ ನಿದರ್ಶನಗಳಿವೆ (ಕಡಿಮೆ ಪ್ರಮಾಣದಲ್ಲಿ).[೫೫]


ಪಾರ್ಕಿನ್‌ಸನ್ ರೋಗದ ಚಿಕಿತ್ಸೆಗಾಗಿ ಪ್ರಮುಖವಾಗಿ ಬಳಸುವ ಸೆಲೆಜಿಲೈನ್ ಎಂಬ ಔಷಧಿಯು ಬುದ್ಧಿಮಾಂದ್ಯತೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಸೆಲೆಜಿಲೈನ್ ಆ‍ಯ್‌೦ಟಿಆಕ್ಸಿಡೆಂಟ್ ಆಗಿ ಕೆಲಸ ಮಾಡಿ ಮುಕ್ತ ಅಮೂಲಾಗ್ರ ಹಾನಿಯನ್ನು ತಡೆಯುತ್ತದೆ. ಆದರೆ, ಇದು ಉತ್ತೇಜಕವಾಗಿ ಸಹಾ ಕೆಲಸ ಮಾಡುತ್ತದೆ. ಇದರಿಂದಾಗಿ ಬುದ್ಧಿಮಾಂದ್ಯತೆಯ ಕುರುಹುಗಳ ಆಕ್ರಮಣ ತಡವಾಗುವಿಕೆ ಫ್ರೀ ರೇಡಿಕಲ್‌ಗಳ ರಕ್ಷಣೆಯಿಂದಾಗಿ ಉಂಟಾಯಿತೇ ಅಥವಾ ಉತ್ತೇಜನ ಪರಿಣಾಮದಿಂದ ಮೆದುಳಿನ ಚಟುವಟಿಕೆ ಹೆಚ್ಚಳವಾಗಿರುವುದರಿಂದಲೇ ಎಂಬುದನ್ನು ನಿರ್ಧರಿಸುವುದು ಕಷ್ಟವಾಗುತ್ತದೆ.[೫೬]

 • ಬುದ್ಧಿವಿಕಲ್ಪ ನಿರೋಧಕ ಔಷಧಿಗಳು

ಪ್ರಾತಿನಿಧಿಕ ಬುದ್ಧಿವಿಕಲ್ಪ ನಿರೋಧಕಗಳು (ಹ್ಯಾಲೋಪೆರಿಡಾಲ್ ಗಳಂತಹವು) ಮತ್ತು ಪ್ರಾತಿನಿಧಿಕವಲ್ಲದ ಬುದ್ಧಿವಿಕಲ್ಪ ನಿರೋಧಕಗಳು (ರಿಸ್ಪೆರಿಡನ್ ಗಳಂತಹವು) ಎರಡೂ ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ಬುದ್ಧಿವಿಕಲ್ಪತೆಯಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ.[೫೭] ಅಂದರೆ, ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ಬುದ್ಧಿವಿಕಲ್ಪತೆಗೆ ಬುದ್ಧಿವಿಕಲ್ಪ ನಿರೋಧಕ ಔಷಧಿಗಳನ್ನು ಬಳಸುವುದು ನಿರ್ದೇಶನಕ್ಕೆ ಹೊರತಾಗಿರುತ್ತದೆ ಮತ್ತು ಇದನ್ನು ಬಳಸುವ ಮೊದಲು ಇವುಗಳನ್ನು ಚಿಕಿತ್ಸೆಯಲ್ಲಿ ಬಳಸುವುದರಿಂದ ಉಂಟಾಗುವ ಅಪಾಯಗಳು ಮತ್ತು ಲಾಭಗಳ ಕುರಿತು ಚರ್ಚಿಸಿ, ನಂತರ ಇತರ ಚಿಕಿತ್ಸಾ ಕ್ರಮಗಳು ಫಲಕಾರಿಯಾಗದ ಬಳಿಕವೇ ಮಾಡಬೇಕಾಗುತ್ತದೆ. ಯುಕೆಯಲ್ಲಿ ಪ್ರತಿವರ್ಷ ಸುಮಾರು 144,000 ಜನ ಬುದ್ಧಿಮಾಂದ್ಯತೆಯಿಂದ ಬಳಲುವವರಿಗೆ ಅನಗತ್ಯವಾಗಿ ಬುದ್ಧಿವಿಕಲ್ಪ ನಿರೋಧಕ ಔಷಧಿಗಳನ್ನು ಸೇವಿಸಲು ನಿರ್ದೇಶಿಸಲಾಗುತ್ತಿದೆ ಮತ್ತು ಸುಮಾರು 2000 ಜನ ರೋಗಿಗಳು ಇಂತಹ ಔಷಧಿಗಳನ್ನು ತೆಗೆದುಕೊಳ್ಳುವ ಕಾರಣದಿಂದಲೇ ಸಾಯುತ್ತಿದ್ದಾರೆ.[೫೮]

ಸೇವೆಗಳು[ಬದಲಾಯಿಸಿ]

ಶುಶ್ರೂಶಾ ಕೇಂದ್ರಗಳಲ್ಲಿನ ವಯಸ್ಕರ ಡೇಕೇರ್ ಕೇಂದ್ರಗಳು ಮತ್ತು ವಿಶೇಷ ಆರೈಕೆ ಘಟಕಗಳು ಬುದ್ಧಿಮಾಂದ್ಯತೆ ರೋಗಿಗಳಿಗೆ ಹೆಚ್ಚಾಗಿ ವಿಶೇಷ ಆರೈಕೆಯನ್ನು ನೀಡುತ್ತವೆ. ವಯಸ್ಕರ ಡೇಕೇರ್ ಕೇಂದ್ರಗಳು ಭಾಗವಹಿಸುವವರಿಗೆ ಮೇಲ್ವಿಚಾರಣೆ, ಮನರಂಜನೆ, ಆಹಾರ ಮತ್ತು ನಿಯಮಿತ ಆರೋಗ್ಯ ಆರೈಕೆಯನ್ನು ನೀಡುತ್ತವೆ ಅಲ್ಲದೇ ಆರೈಕೆ ನೀಡುವವರಿಗೆ ವಿಶ್ರಾಂತಿಯನ್ನೂ ನೀಡುತ್ತವೆ.

ಮುನ್ಸೂಚನೆ[ಬದಲಾಯಿಸಿ]

ತೀವ್ರ ಬುದ್ಧಿಮಾಂದ್ಯತೆಯು ನ್ಯುಮೋನಿಯಾ, ಜ್ವರ, ಮತ್ತು ಆಹಾರ ಸೇವನೆಯಲ್ಲಿನ ಸಮಸ್ಯೆಗಳಿಂದಾಗಿ ತೊಡಕಿನದಾಗುತ್ತದೆ. ಇಂತಹ ಸಂದರ್ಭದಲ್ಲಿ ಜೀವಿತಾವಧಿ ಸುಮಾರು 18 ತಿಂಗಳಷ್ಟು ಉಳಿಯುತ್ತದೆ.[೫೯]

ಸಾಂಕ್ರಾಮಿಕ ರೋಗಶಾಸ್ತ್ರ[ಬದಲಾಯಿಸಿ]

2002ರಲ್ಲಿ ಪ್ರತೀ 100,000 ಜನರಲ್ಲಿ ಮರೆವಿನ ಕಾಯಿಲೆ ಮತ್ತಿತರ ಬುದ್ಧಿಮಾಂದ್ಯತೆ ರೋಗವಿರುವ ಜನರ ನಿಷ್ಕ್ರಿಯತೆ-ಹೊಂದಿಸಿದ ಜೀವಿತಾವಧಿ.[134][135][136][137][138][139][140][141][142][143][144][145][146]

ಇದನ್ನೂ ನೋಡಿರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. Shub, Denis; Kunik, Mark E (April 16, 2009). "Psychiatric Comorbidity in Persons With Dementia: Assessment and Treatment Strategies". Psychiatric Times. 26 (4). 
 2. ಡ್ರೈವರ್ಸ್‌ ವಿತ್‌ ಡಿಮೆನ್‌ಶಿಯಾ ಎ ಗ್ರೋವಿಂಗ್‌ ಪ್ರಾಬ್ಲೆಮ್‌, MDs ವಾರ್ನ್‌, CBC ನ್ಯೂಸ್‌, ಕೆನಡಾ, ಸೆಪ್ಟೆಂಬರ್ 19, 2007
 3. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Royall, D; Cordes, J.; Polk, . M. (1998). "CLOX: an executive clock drawing task". J Neurol Neurosurg Psychiatry. 64 (5): 588–94. doi:10.1136/jnnp.64.5.588. PMID 9598672. 
 6. Boustani, M; Peterson, B; Hanson, L; Harris, R; & Lohr, K (3 June 2003). "Screening for dementia in primary care: a summary of the evidence for the U.S. Preventive Services Task Force". Ann Intern Med. 138 (11): 927–37. PMID 12779304. 
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 9. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 10. Fleisher, A; Sowell, B.; Taylor, C.; Gamst, A.; Petersen, R.; Thal, . L. (2007). "Clinical predictors of progression to Alzheimer disease in amnestic mild cognitive impairment". Neurology. 68 (19): 1588. doi:10.1212/01.wnl.0000258542.58725.4c. PMID 17287448. 
 11. Karlawish, J. & Clark, C. (2003). "Diagnostic evaluation of elderly patients with mild memory problems". Ann Intern Med. 138 (5): 411–9. PMID 12614094. 
 12. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 13. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 14. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 15. Abella HA (June 16, 2009). "Report from SNM: PET imaging of brain chemistry bolsters characterization of dementias". Diagnostic Imaging. 
 16. "Pathological correlates of late-onset dementia in a multicentre, community-based population in England and Wales. Neuropathology Group of the Medical Research Council Cognitive Function and Ageing Study (MRC CFAS)". Lancet. 357 (9251): 169–75. 2001. PMID 11213093. 
 17. Wakisaka Y; et al. (2003). "Age-associated prevalence and risk factors of Lewy body pathology in a general population: the Hisayama study". Acta Neuropathol. 106 (4): 374–82. PMID 12904992. 
 18. White L; et al. (2002). "Cerebrovascular pathology and dementia in autopsied Honolulu-Asia Aging Study participants". Ann N Y Acad Sci. 977 (9): 9–23. PMID 12480729. 
 19. Ratnavalli E; et al. (2002). "The prevalence of frontotemporal dementia". Neurology. 58 (11): 1615–21. PMID 12058088. 
 20. Galvin JE; et al. (2006). "Clinical phenotype of Parkinson disease dementia". Neurology. 67 (9): 1605–11. PMID 17101891. 
 21. Gibbons D; et al. "Porphyria and dementia: a case report" (PDF). Ir J Psych Med. 20 (3): 96–99. 
 22. Lamont P (2004). "Cognitive Decline in a Young Adult with Pre-Existent Developmental Delay – What the Adult Neurologist Needs to Know". Practical Neurology. 4: 70–87. 
 23. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 24. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 25. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 26. Sofi F, Cesari F, Abbate R, Gensini GF, Casini A (2008). "Adherence to Mediterranean diet and health status: meta-analysis". BMJ. 337: a1344. doi:10.1136/bmj.a1344. PMC 2533524Freely accessible. PMID 18786971. 
 27. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 28. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 29. Hu, Y; Russek (2008). "BDNF and the diseased nervous system: a delicate balance between adaptive and pathological processes of gene regulation.". Journal of neurochemistry. 105 (1): 1–17. doi:10.1111/j.1471-4159.2008.05237.x. PMID 18208542. 
 30. Schindowski, K; Belarbi; Buée (2008). "Neurotrophic factors in Alzheimer's disease: role of axonal transport.". Genes, brain, and behavior. 7 Suppl 1: 43–56. doi:10.1111/j.1601-183X.2007.00378.x (inactive 2009-10-05). PMID 18184369. 
 31. Tapia-Arancibia, L; Aliaga, E; Silhol, M; Arancibia, S (2008). "New insights into brain BDNF function in normal aging and Alzheimer disease.". Brain research reviews. 59 (1): 201–20. doi:10.1016/j.brainresrev.2008.07.007. PMID 18708092. 
 32. ವೆಸ್ಟ್‌ ವರ್ಜಿನಿಯಾ ಡಿಪಾರ್ಟ್‍ಮೆಂಟ್‌ ಆಪ್‌ ಹೆಲ್ತ್‌ ಅಂಡ್ ಹ್ಯೂಮನ್‌ ರಿಸೊರ್ಸಸ್‌ (ಅನುಕ್ರಮವಾಗಿ ಇತರ ಕೊಂಡಿಗಳೊಂದಿಗೆ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿ)
 33. Szekely, CA; Green; Breitner; Østbye; Beiser; Corrada; Dodge; Ganguli; Kawas (2008). "No advantage of A beta 42-lowering NSAIDs for prevention of Alzheimer dementia in six pooled cohort studies.". Neurology. 70 (24): 2291–8. doi:10.1212/01.wnl.0000313933.17796.f6. PMID 18509093. 
 34. Cornelius, C; Fastbom; Winblad; Viitanen (2004). "Aspirin, NSAIDs, risk of dementia, and influence of the apolipoprotein E epsilon 4 allele in an elderly population.". Neuroepidemiology. 23 (3): 135–43. doi:10.1159/000075957. PMID 15084783. 
 35. Etminan, M; Gill, S; Samii, A (2003). "Effect of non-steroidal anti-inflammatory drugs on risk of Alzheimer's disease: systematic review and meta-analysis of observational studies.". BMJ (Clinical research ed.). 327 (7407): 128. doi:10.1136/bmj.327.7407.128. PMID 12869452. 
 36. Nilsson, SE; Johansson; Takkinen; Berg; Zarit; Mcclearn; Melander (2003). "Does aspirin protect against Alzheimer's dementia? A study in a Swedish population-based sample aged > or =80 years.". European journal of clinical pharmacology. 59 (4): 313–9. doi:10.1007/s00228-003-0618-y. PMID 12827329. 
 37. Anthony, JC; Breitner; Zandi; Meyer; Jurasova; Norton; Stone (2000). "Reduced prevalence of AD in users of NSAIDs and H2 receptor antagonists: the Cache County study.". Neurology. 54 (11): 2066–71. PMID 10851364. 
 38. Ad2000 Collaborative, Group; Bentham; Gray; Sellwood; Hills; Crome; Raftery (2008). "Aspirin in Alzheimer's disease (AD2000): a randomised open-label trial.". Lancet neurology. 7 (1): 41–9. doi:10.1016/S1474-4422(07)70293-4. PMID 18068522. 
 39. Akiyama, H; Barger; Barnum; Bradt; Bauer; Cole; Cooper; Eikelenboom; Emmerling (2000). "Inflammation and Alzheimer's disease.". Neurobiology of aging. 21 (3): 383–421. PMID 10858586. 
 40. Tortosa, E; Avila; Pérez (2006). "Acetylsalicylic acid decreases tau phosphorylation at serine 422.". Neuroscience letters. 396 (1): 77–80. doi:10.1016/j.neulet.2005.11.066. PMID 16386371. 
 41. Hirohata, M; Ono; Naiki; Yamada (2005). "Non-steroidal anti-inflammatory drugs have anti-amyloidogenic effects for Alzheimer's beta-amyloid fibrils in vitro.". Neuropharmacology. 49 (7): 1088–99. doi:10.1016/j.neuropharm.2005.07.004. PMID 16125740. 
 42. Thomas, T; Nadackal; Thomas (2001). "Aspirin and non-steroidal anti-inflammatory drugs inhibit amyloid-beta aggregation.". Neuroreport. 12 (15): 3263–7. PMID 11711868. 
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. ಆಲ್ಡ್‌ರೀಜ್‌, ಡೇವಿಡ್‌, ಮ್ಯೂಸಿಕ್‌ ಥೆರಪಿ ಇನ್‌ ಡಿಮೆನ್‌ಶಿಯಾ ಕೇರ್ , ಲಂಡನ್ : ಜೆಸ್ಸಿಕಾ ಕಿಂಗ್ಸ್‌ಲೀ ಪಬ್ಲಿಶರ್, ನವೆಂಬರ್ 2000. ISBN 978-0-7513-2886-8
 45. ಟ್ಯೂಯೆಟ್, ಆರ್.ಡಬ್ಲ್ಯೂ.ಕೆ.; ಲ್ಯಾಮ್, ಎಲ್.ಸಿ.ಡಬ್ಲ್ಯೂ. (ಸೆಪ್ಟೆಂಬರ್ 2006) "ಎ ಪ್ರಿಲಿಮಿನರಿ ಸ್ಟಡಿ ಅಫ್‌ ದಿ ಎಪೆಕ್ಟ್ಸ್‌ ಅಫ್‌ ಮ್ಯೂಸಿಕ್ ಥೆರಪಿ ಆನ್ ಎಜಿಟೇಶನ್ ಇನ್ ಚೈನೀಸ್ ಪೇಶಂಟ್ಸ್ ವಿತ್-ಡಿಮೆನ್‌ಶಿಯಾ", ಹಾಂಗ್ ಕಾಂಗ್ ಜರ್ನಲ್ ಆಪ್ ಫಿಷಿಯಾಟ್ರೀ, ವ್ಯಾಲ್ಯೂಮ್ 16, ನಂಬರ್ 3
 46. ವ್ಯಾಟನೇಬ್, ಟೊಮೊಯುಕಿ; et al., "ಎಪೆಕ್ಟ್ಸ್ ಆಪ್ ಮ್ಯೂಸಿಕ್ ಥೆರಪಿ ಪಾರ್ ಡಿಮೆನ್‌ಶಿಯಾ: ಎ ಸಿಂಥೆಟಿಕ್ ರೀವ್ಯೂ", (ಜಪಾನ್‌ ಭಾಷೆಯಲ್ಲಿ) ಐಚಿ ವಿಶ್ವವಿದ್ಯಾಲಯದ ಶಿಕ್ಷಣ ಸಂಶೋಧನಾ ವರದಿಗಳು, v.55, pp. 57-61, ಮಾರ್ಚ್, 2005
 47. ಕೋಗರ್, ಸುಸಾನ್ ಎಮ್.; ಚಾಪಿನ್ ಕ್ಯಾಥಿನ್; ಬ್ರೋಟನ್ಸ್‌, ಮೆಲಿಸ್ಸಾ, "ಈಸ್ ಮ್ಯೂಸಿಕ್ ಥೆರಪಿ ಆ‍ಯ್‌ನ್ ಎಪೆಕ್ಟೀವ್ ಇಂಟರ್ವೆನ್‌ಶನ್ ಪಾರ್ ಡಿಮೆನ್‌ಶಿಯಾ? : ಎ ಮೆಟಾ-ಅನಾಲಿಟಿಕ್ ರೀವ್ಯೂ ಆಪ್ ಲಿಟರೇಚರ್", ಜರ್ನಲ್ ಆಪ್ ಮ್ಯೂಸಿಕ್ ಥೆರಪಿ 36(1), ಪೆಬ್ರುವರಿ 1999, pp.2-15.
 48. ರೆಮಿಂಗ್‌ಟನ್, ರುಥ್‌, "ಕಾಮಿಂಗ್ ಮ್ಯೂಸಿಕ್ ಅಂಡ್ ಹ್ಯಾಂಡ್ ಮಸಾಜ್ ವಿತ್ ಎಜಿಟೇಟೆಡ್ ಎಲ್ಡರ್ಲಿ", ನರ್ಸಿಂಗ್ ರೀಸರ್ಚ್ 51(5): 317-323, ಸೆಪ್ಟೆಂಬರ್/ಅಕ್ಟೋಬರ್ 2002.
 49. ಲಿಯೋ ಎ, ಗ್ರೀನ್‌ಬರ್ಗ್ ಎಸ್‌ಎಮ್, ಗ್ರೌಡನ್‌ ಜೆ‌ಎಚ್. ಕರೆಂಟ್ ಫಾರ್ಮಾಕೊಥೆರಪಿ ಪಾರ್ ಆಲ್‌ಜೀಮರ್ ಡಿಸೀಸ್. Annu Rev Med. 2006;57:513-33. ವಿಮರ್ಶೆಗಳು ಪಿಎಮ್‌ಐಡಿ 995240
 50. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 53. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lolk A, Gulmann NC (2006). "[Psychopharmacological treatment of behavioral and psychological symptoms in dementia]". Ugeskr Laeg (in Danish). 168 (40): 3429–32. PMID 17032610. 
 56. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 57. "FDA MedWatch - 2008 Safety Alerts for Human Medical Products". FDA. 
 58. http://www.guardian.co.uk/society/2009/nov/12/anti-psychotic-drugs-kill-dementia-patients
 59. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]