ಜನಪದ ಸಂಪ್ರದಾಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜನಪದ ಸಂಪ್ರದಾಯಗಳು ಜನರ ಮನಸ್ಸಿನಿಂದ ಅವಿರ್ಭವಿಸುವಂತಹವು. ಸಾಮಾನ್ಯ ಅರ್ಥದಲ್ಲಿ ಆಯಾ ಸಮಾಜದ ರೀತಿ-ನೀತಿಗಳನ್ನು ಆಚಾರ-ವಿಚಾರಗಳನ್ನು ವರ್ತನ ಪಧ್ಧತಿಯನ್ನು, ನಡಾವಳಿಯ ರೂಪುರೇಷೆಗಳನ್ನೇ ಸಂಪ್ರದಯಾವೆನ್ನುತ್ತಾರೆ. ರೂಡಿ, ಪದ್ದತಿ‍‍‍ ಎಂಬ ಪದಗಳನ್ನು ಇದಕ್ಕೆ ಸಂವಾದಿಯಾಗಿ ಬಳಸುತ್ತೇವೆ. ಬಹುಕಾಲದಿಂದ ಬದಲಾಗದೆ ಉಳಿದು ಬಂದ ರೂಢಿಗಳನ್ನೇ ಸಂಪ್ರದಾಯವೆ೦ದು ಕರೆಯುತ್ತೇವೆ. ಅತಿಥಿಗಳು ಮನೆಗೆ ಬಂದಾಗ ಅವರು ಕಾಲು ತೊಳೆಯಲು ನೀರು ಕೊಡುವುದು. ಮನೆ ಮತ್ತು ಗುಡಿಯೊಳಗೆ ಪಾದರಕ್ಷೆಗಳನ್ನು ಬಿಡದೆ ಇರುವುದು. ಬೆಳಗ್ಗೆ ಬಾಗಿಲಿಗೆ ನೀರು ಹಾಕುವುದು. ಹಬ್ಬ ಹರಿದಿನಗಳಲ್ಲಿ ಮಾವಿನ ತೋರಣ ಕಟ್ಟುವುದು. ಬಾಳೇ ಗಿಡಗಳನ್ನು ಕಟ್ಟುವುದು. ಪೂಜಾ ಕಾರ್ಯಾಕ್ರಮಗಳಲ್ಲಿ ಮಡಕೆಗಳಲ್ಲಿ ನೀರು ತುಂಬುವುದು. ಮಾಂಸಾಹಾರವನ್ನು ಹೊರಗೆ ಬೇಯಿಸುವುದು. ಮಾಂಸಹರ ಸೇವಿಸಿದ ನಂತರ ಸ್ನಾನ ಮಾಡುವುದು. ಗಿಡ-ಮರಗಳನ್ನು ಪೂಜಿಸುವುದು,ಪ್ರಾಣಿ-ಪಕ್ಷಿಗಳನ್ನು ಪೂಜಿಸುವುದು. ಗ್ರಾಮದೇವತೆಗಳಿಗೆ ಪೂಜೆ ಕೊಡುವುದು. ಮಗು ಹೊಸ್ತಿಲು ದಾಟಿದ್ದಕ್ಕೆ ತೆಂಗಿನಕಾಯಿ ಹೊಡೆಯುವುದು. ಈ ಮೊದಲಾದ ಸಂಪ್ರದಾಯಗಳು ಜನಪದರ ಸಾಮಾಜಿಕ ಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರಿದೆ. ಕೆಲವು ಅವೈಜ್ಞಾನಿಕ ಸಂಪ್ರದಾಯಗಳನ್ನು ಹೊರತುಪಡಿಸಿ ಧಾರ್ಮಿಕ, ಸಾಮಾಜಿಕ ಸಂಪ್ರದಾಯಗಳು ಆತ್ಮಸ್ಥೆರ್ಯ, ಸ್ವಾಭಿಮಾನಗಳನ್ನು ತುಂಬುತ್ತವೆ. ವ್ಯಕ್ತಿ ಹುಟ್ಟಿನಿಂದ ಸಾಯುವವರೆಗೂ ಹತ್ತು ಹಲವು ಸಂಪ್ರದಾಯಗಳ ನಡುವೆ ಬಾಳಿ ಬೆಳಗುತ್ತಾನೆ. ದುಷ್ಟ ಚಿಂತನೆ,ದುಷ್ಛಟ ಬಹುದೂರವಿರಲು ಸಂಪ್ರದಾಯಗಳು ನೆರವಾಗುತ್ತದೆ.