ಕೇಮನ್ ದ್ವೀಪಗಳು
- For a topical guide to this subject, see Outline of the Cayman Islands.
Cayman Islands | |
---|---|
Motto: "He hath founded it upon the seas" | |
Anthem: God Save the Queen | |
Capital and largest city | George Town |
Official languages | English |
Ethnic groups | 40% Afro-European, 20% European, 20% African, 20% other[೧] |
Demonym(s) | Caymanian |
Government | British Overseas Territory |
• Queen | Queen Elizabeth II |
• Governor | Duncan Taylor |
• Premier | McKeeva Bush (UDP) |
Creation | |
• Split from ಜಮೈಕ | 1962 |
Area | |
• Total | 264 km2 (102 sq mi) (217th) |
• Water (%) | 1.6 |
Population | |
• 2006 estimate | 56,000[೨] (203rd) |
• Density | 139.5/km2 (361.3/sq mi) (57th) |
GDP (PPP) | 2004 estimate |
• Per capita | 32,300 (n/a) |
HDI (2003) | n/a Error: Invalid HDI value · unranked |
Currency | Cayman Islands dollar (KYD) |
Time zone | UTC-5 |
• Summer (DST) | UTC-5 (not observed) |
Driving side | left |
Calling code | +1-345 |
ISO 3166 code | KY |
Internet TLD | .ky |
ಕೇಮನ್ ದ್ವೀಪಗಳು (pronounced /ˈkeɪmæn/ ಅಥವಾ /ˈkeɪmən/) ಇದು ಪಶ್ಚಿಮ ಕೆರೆಬಿಯನ್ ಸಮುದ್ರದಲ್ಲಿರುವ ಒಂದು ಬ್ರಿಟಿಷ್ ಕಡಲಾಚೆಯ ಪ್ರದೇಶವಾಗಿದೆ. ಈ ಪ್ರದೇಶವು ಗ್ರ್ಯಾಂಡ್ ಕೇಮನ್, ಕೇಮನ್ ಬ್ರ್ಯಾಕ್, ಮತ್ತು ಲಿಟಲ್ ಕೇಮನ್ ದ್ವೀಪಗಳನ್ನು ಒಳಗೊಂಡಿದೆ, ಇದು ಕ್ಯೂಬಾದ ದಕ್ಷಿಣ ಭಾಗದಲ್ಲಿ ಮತ್ತು ಜಮೈಕಾದ ವಾಯುವ್ಯಭಾಗದಲ್ಲಿ ಇದೆ. ಈ ಪ್ರದೇಶವು ಕೆರೆಬಿಯನ್ನ ಕಡಲಕರೆಯಾಚೆಯ ಹಣಕಾಸು ಕೇಂದ್ರವಾಗಿದೆ .[೩]
ಇತಿಹಾಸ
[ಬದಲಾಯಿಸಿ]ಕ್ರಿಸ್ಟೋಫರ್ ಕೊಲಂಬಸ್‌ನ ನಾಲ್ಕನೆಯ ಹಾಗೂ ಕೊನೆಯ ಹೊಸ ಪ್ರಪಂಚದ ಅನ್ವೇಷಣೆಯ ಪ್ರವಾಸದಲ್ಲಿ 10 ಮೇ 1503ರಂದು ಈ ದ್ವೀಪಗಳು ಗುರುತಿಸಲ್ಪಟ್ಟಿವೆ. ಅಲ್ಲಿ ಅಪಾರ ಸಂಖ್ಯೆಯ ಕಡಲಾಮೆಗಳನ್ನು ನೋಡಿದ ಆತ ದ್ವೀಪಕ್ಕೆ ಲಾಸ್ ಟಾರ್ಟುಗಸ್ ಎಂದು ಹೆಸರಿಸಿದ. ದಾಖಲಿಸಲಾದಂತೆ ಈ ದ್ವೀಪಗಳಿಗೆ ಮೊದಲು ಭೇಟಿ ಕೊಟ್ಟವನು ಸರ್ ಫ್ರಾನ್ಸಿಸ್ ಡ್ರೇಕ್, ಅವನ್ನು 1586 ರಲ್ಲಿ ಭೇಟಿ ನೀಡಿದನು ಹಾಗೂ ಕೇಮನ್ ನಂತರ ಕೇಮನ್ ದ್ವೀಪಗಳು ಎಂದು ಹೆಸರಿಸಿದ, ಇದು ಮೊಸಳೆಯ ನಿಯೊ-ಟೈನೊ ನೇಷನ್ಸ್‌ನ ಪದವಾಗಿದೆ.[೪]
ದಾಖಲಿಸಲಾದಂತೆ ಕೇಮನ್ ದ್ವೀಪಗಳ ಮೊದಲ ಶಾಶ್ವತ ನಿವಾಸಿ ಸುಮಾರು 1661ರಲ್ಲಿ ಗ್ರ್ಯಾಂಡ್ ಕೇಮನ್‌ನಲ್ಲಿ ಜನಿಸಿದ ಐಸಾಕ್ ಬೊಡ್ಡನ್. ಈತನು ಮೂಲ ವಸಾಹತುಗಾರ ಬೊಡ್ಡನ್‌ನ ಮೊಮ್ಮಗನಾಗಿದ್ದಾನೆ, ಬಹುಶಃ ಆತ 1655ರಲ್ಲಿ ಜಮಾಯಿಕಾ ದ್ವೀಪವನ್ನು ವಶಪಡಿಸಿಕೊಳ್ಳುವಾಗ ಒಲಿವರ್ ಕ್ರಾಮ್‌ವೆಲ್‌ನ ಸೈನಿಕರಲ್ಲಿ ಒಬ್ಬನಾಗಿದ್ದ.
17ನೆಯ ಶತಮಾನದವರೆಗೆ ಕೇಮನ್ ದ್ವೀಪಗಳಲ್ಲಿ ಹೆಚ್ಚಾಗಿ ಜನರು ವಾಸಿಸುತ್ತಿರಲಿಲ್ಲ. ಕಡಲ್ಗಳ್ಳರು, ಸ್ಪ್ಯಾನಿಶ್ ಶೋಧನೆಯ ರೆಫ್ಯೂಜಿಗಳು, ಹಡಗುಗಳು ದ್ವಂಸಗೊಂಡ ನಾವಿಕರು, ಜಮಾಯಿಕಾದ ಆಲಿವರ್ ಕ್ರಾಮ್‌ವೆಲ್‌ನ ಸೈನ್ಯದ ಡೆಸರ್ಟರ್‌ಗಳು ಮತ್ತು ಗುಲಾಮರನ್ನೊಳಗೊಂಡಂತೆ ಹಲವಾರು ಬಗೆಯ ಜನರು ಈ ದ್ವೀಪಗಳಲ್ಲಿ ನೆಲೆ ಕಂಡುಕೊಂಡರು.
ಗಣನೀಯ ಸಂಖ್ಯೆಯ ಎಲ್ಲಾ ತರಹದ ಮಿಶ್ರ ಜನರ ಜೊತೆ ಹೆಚ್ಚಿನ ಪ್ರಮಾಣದ ಕೇಮಾನಿಯನ್ನರು ಆಫ್ರಿಕನ್ ಮತ್ತು ಬ್ರಿಟಿಷ್ ಮೂಲದವರಾಗಿದ್ದಾರೆ.
1670ರಲ್ಲಿ ಮ್ಯಾಡ್ರಿಡ್ ಒಪ್ಪಂದದಡಿಯಲ್ಲಿ, ಗ್ರೇಟ್ ಬ್ರಿಟನ್ ಜಮಾಯಿಕಾ ದೊಂದಿಗೆ ಕೇಮನ್ ದ್ವೀಪಗಳನ್ನೂ ತನ್ನ ಅಧಿಕೃತ ನಿಯಂತ್ರಣಕ್ಕೆ ತೆಗೆದುಕೊಂಡಿತು. ಯಶಸ್ವಿಯಾಗದ ಹಲವಾರು ಪ್ರಯತ್ನಗಳ ನಂತರೆ ದ್ವೀಪಗಳ ಶಾಶ್ವತವಾದ ಒಪ್ಪಂದವು 1970ರಲ್ಲಿ ಪ್ರಾರಂಭವಾಯಿತು. ಸಮೀಪದ ಜಮಾಯಿಕಾ ದ್ವೀಪದೊಂದಿಗೆ, ಈ ದ್ವೀಪಗಳನ್ನು ಸ್ಪ್ಯಾನಿಷ್ ಸಾಮ್ರಾಜ್ಯದಿಂದ ವಶಪಡಿಸಿಕೊಳ್ಳಲಾಯಿತು, ನಂತರ ಟ್ರೀಟಿ ಆಫ್ ಮ್ಯಾಡ್ರಿಡ್ ಒಪ್ಪಂದದಂತೆ 1670ರಲ್ಲಿ ಇಂಗ್ಲೆಂಡ್‌ಗೆ ಹಸ್ತಾಂತರಿಸಲಾಯಿತು. 1962ರವರೆಗೆ ಈ ದ್ವೀಪಗಳನ್ನು ಜಾಮಾಯಿಕಾದೊಂದಿಗೆ ಒಂದೇ ವಸಾಹತುವಿನಂತೆ ಆಳ್ವಿಕೆ ನಡೆಸಲಾಗುತ್ತಿತ್ತು, ನಂತರ ಅವು ಬ್ರಿಟಿಷ್ ಓವರ್ಸೀಸ್ ಟೆರಿಟರಿ ಎಂದು ಪ್ರತ್ಯೇಕಗೊಂಡವು ಮತ್ತು ಜಮಾಯಿಕಾವು ಸ್ವತಂತ್ರ ಕಾಮನ್‌ವೆಲ್ತ್ ರಾಜ್ಯವಾಯಿತು.
ಗ್ರ್ಯಾಂಡ್ ಕೇಮನ್ ದ್ವೀಪವು ಸಮುದ್ರ ಮಟ್ಟದಲ್ಲಿ ಬಹಳಷ್ಟು ಅಸುರಕ್ಷಿತ ಪ್ರದೇಶವಾಗಿದೆ, 2004ರ ಸೆಪ್ಟೆಂಬರ್ 11 ಮತ್ತು 12ರಂದು ಅಪ್ಪಳಿಸಿದ ಬಿರುಗಾಳಿ ಇವಾನ್‌ನಿಂದಾಗಿ ಹೆಚ್ಚಿನ ಕಟ್ಟಡಗಳು ನಾಶವಾದವು ಮತ್ತು ಅವುಗಳ 90% ನಷ್ಟು ನಾಶವಾದವು. ಬಿರುಗಾಳಿಗಳಲ್ಲಿ ಇವಾನ್ ಬಿರುಗಾಳಿಯು 86ವರ್ಷಗಳಲ್ಲಿಯೇ ಅತಿ ಭಯಂಕರವಾಗಿದ್ದು, ಕೆಲವು ಪ್ರದೇಶಗಳಲ್ಲಿ ಹಲವಾರು ತಿಂಗಳುಗಳವರೆಗೆ ವಿದ್ಯುಚ್ಛಕ್ತಿ, ನೀರು ಮತ್ತು ಸಂಪರ್ಕಗಳನ್ನು ಕಡಿತಗೊಳ್ಳುವಂತೆ ಮಾಡಿತ್ತು. ಆದಾಗ್ಯೂ, ಗ್ರ್ಯಾಂಡ್ ಕೇಮನ್ ಕಟ್ಟಡಗಳ ಪುನರ್ನಿರ್ಮಾಣ ಕಾರ್ಯವನ್ನು ಎರಡು ವರ್ಷಗಳಲ್ಲಿ ಸಂಪೂರ್ಣಗೊಳಿಸಿತು, ಹುರಿಕೇನ್‌ಗಿಂತಲೂ ಮೊದಲಿನ ಮಟ್ಟದಲ್ಲಿ ಆಧಾರವ್ಯವಸ್ಥೆಯನ್ನು ಪುನರ್ಸ್ಥಾಪಿಸಲಾಯಿತು. ಕೇಮನ್ ದ್ವೀಪಗಳು ಅವುಗಳ ಇತಿಹಾಸದಲ್ಲಿ ಹೆಚ್ಚು ಖಚಿತವಾಗಿ ಗೊತ್ತಿಲದಂತೆ ಅಪ್ಪಳಿಸಿದ ಬಿರುಗಾಳಿಗಳನ್ನು ಅನುಭವಿಸಿವೆ. ದ್ವೀಪಗಳ ಸಾಮೀಪ್ಯದ ಕಾರಣದಿಂದಾಗಿ, ಅಟ್ಲಾಂಟಿಕ್ ಬೇಸಿನ್‌ನ ಇತರೆ ಪ್ರದೇಶಗಳಿಗಿಂತ ಹೆಚ್ಚಾದ ಬಿರುಗಾಳಿ ಮತ್ತು ಉಷ್ಣವಲಯದ ವ್ಯವಸ್ಥೆಗಳು ಕೇಮನ್ ದ್ವೀಪಗಳ ಮೇಲೆ ಪರಿಣಾಮ ಬೀರಿವೆ, ಸರಾಸರಿ 2.23 ವರ್ಷಗಳಿಗೊಮ್ಮೆ ನೇರವಾಗಿ ಅಪ್ಪಳಿಸುತ್ತವೆ ಅಥವಾ ಹಾದು ಹೋಗುತ್ತವೆ.[೫]
ಐತಿಹಾಸಿಕವಾಗಿ ಕೇಮನ್ ದ್ವೀಪಗಳು[when?] ತೆರಿಗೆ-ವಿನಾಯಿತಿಯ ಪ್ರದೇಶವಾಗಿದೆ. ಬಿರುಗಾಳಿಯ ಸಂದರ್ಭದಲ್ಲಿ ಗನ್ ಕೊಲ್ಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜಮಾಯಿಕನ್ ವ್ಯಾಪಾರಿ ಹಡಗು ಕನ್ವಾಯ್ ಅನ್ನು ಮತ್ತು ಅದರ ನಾವಿಕರನ್ನು 1788ರಲ್ಲಿ ಕೆಮೇನಿಯನ್ನರು ಕಾಪಾಡಿದ್ದು ದಂತಕಂಥೆಯಾಗಿದೆ, ಈ ಸಂದರ್ಭದಲ್ಲಿ ಕಿಂಗ್ ಜಾರ್ಜ್ IIIನು ಕೆಮೇನಿಯನ್ನರಿಗೆ ಎಂದಿಗೂ ತೆರಿಗೆ ವಿಧಿಸುವುದಿಲ್ಲವೆಂದು ಬಹುಮಾನವಾಗಿ ಪ್ರಮಾಣಮಾಡಿದನು.[ಸೂಕ್ತ ಉಲ್ಲೇಖನ ಬೇಕು]
ಭೂಗೋಳ
[ಬದಲಾಯಿಸಿ]ಕೆರೆಬಿಯನ್ ಸಮುದ್ರದ ಪಶ್ಚಿಮದಲ್ಲಿ ಕೇಮನ್ ದ್ವೀಪಗಳು ನೆಲೆಯಾಗಿವೆ ಮತ್ತು ಅಧಿಕ ಪ್ರಮಾಣದ ನೀರಿನಡಿಯ ಪರ್ವತ ಶ್ರೇಣಿಗಳ ತುದಿಗಳಾಗಿವೆ, ಕೇಮಾನ್ ಟ್ರೆಂಚ್ (ಅಥವಾ ಟ್ರಫ್) ಎಂದು ಹೆಸರಾಗಿವೆ, ಸಮುದ್ರದಡಿಯಿಂದ 8,000 ಅಡಿ (2,400 m) ಗಳ ಉದ್ದಕ್ಕೆ ನಿಂತಿರುವ ಈ ಪರ್ವತಗಳು ಮೇಲ್ಮೈಯನ್ನು ಆಕ್ರಮಿಸಿಕೊಂಡಿವೆ. ಈ ದ್ವೀಪಗಳು ಕೆರೆಬಿಯನ್ ಸಮುದ್ರದ ವಾಯುವ್ಯಕ್ಕೆ, ಕ್ಯೂಬಾದ ದಕ್ಷಿಣಕ್ಕೆ ಮತ್ತು ಜಮಾಯಿಕಾದ ಪಶ್ಚಿಮಕ್ಕೆ ಇವೆ. ಮಿಯಾಮಿಯ ದಕ್ಷಿಣಕ್ಕೆ 400 ಮೈಲುಗಳ(650 km), ಕ್ಯೂಬಾದ ದಕ್ಷಿಣಕ್ಕೆ 180 ಮೈಲುಗಳ (300 km), ಹಾಗೂ ಜಾಮಾಯಿಕಾದ ವಾಯುವ್ಯಕ್ಕೆ 195 ಮೈಲುಗಳ ದೂರದಲ್ಲಿ ಈ ದ್ವೀಪಗಳು ನೆಲೆಯಾಗಿವೆ. 76 ಚದುರ ಮೈಲಿಗಳಷ್ಟು (197 km²) ವಿಸ್ತೀರ್ಣವನ್ನು ಹೊಂದಿರುವ ಗ್ರ್ಯಾಂಡ್ ಕೇಮನ್ ಇವುಗಳಲ್ಲಿ ಅತಿ ದೊಡ್ಡದಾಗಿದೆ. ಎರಡು "ಸೋದರಿ ದ್ವೀಪಗಳಾ"ದ ಕೇಮನ್ ಬ್ರಕ್ ಮತ್ತು ಲಿಟಲ್ ಕೇಮನ್‌ಗಳು ಗ್ರ್ಯಾಂಡ್ ಕೇಮನ್‌ನ ಪೂರ್ವಕ್ಕೆ 80 ಮೈಲಿಗಳ (197 km²) ದೂರದಲ್ಲಿ ನೆಲೆಯಾಗಿವೆ. ಹಾಗೂ ಇವು ಕ್ರಮವಾಗಿ 14 ಚದರ ಮೈಲಿಗಳು (36 km²) ಮತ್ತು 10 ಚದರ ಮೈಲಿಗಳಷ್ಟು (25.9 km²) ವಿಸ್ತೀರ್ಣ ಹೊಂದಿವೆ.
ಈ ಎಲ್ಲಾ ಮೂರು ದ್ವೀಪಗಳು ಅತಿ ದೊಡ್ಡ ಹವಳದ ಮೇಲ್ಬಾಗದಿಂದ ಮಾರ್ಪಾಡಾಗಿವೆ, ಮುಳುಗಿದಂತಹ ಐಸ್ ಯುಗದ ಶಿಖರಗಳಿಂದ ಆವೃತವಾಗಿವೆ, ಅವು ಸಿಯೆರ ಮಾಯೆಸ್ಟ್ರಾ ಶ್ರೇಣಿಯಾಗಿವೆ ಮತ್ತು ಅವು ಹೆಚ್ಚಾಗಿ ಸಮತಟ್ಟಾಗಿರುತ್ತವೆ. ಒಂದು ಗುರುತಿಸಬಹುದಾದಂತಹ ಕೇಮನ್ ಬ್ರಕ್‌ನ ಪೂರ್ವದ ದಿ ಬ್ಲಫ್ ಅನ್ನು ಹೊರತುಪಡಿಸಿ, ಇದು ಸಮುದ್ರ ಮಟ್ಟದಿಂದ 140 ಅಡಿ (42.6 m) ಎತ್ತರದಲ್ಲಿದ್ದು ದ್ವೀಪದ ಅತೀ ಎತ್ತರದ ಬಿಂದುವಾಗಿದೆ.
ಕೇಮನ್ ಏವಿಯನ್ ಫೌನಾವು ಅಮೆಜೊನಾ ಗಿಳಿಗಳ ಎರಡು ಎಂಡೆಮಿಕ್ ಉಪತಳಿಗಳನ್ನು ಹೊಂದಿದೆ: Amazona leucocephala hesterna , ಅಥವಾ ಕೇಮನ್ ಬ್ರಕ್ ಗಿಳಿ, ಕೇಮನ್ ಬ್ರಕ್‌ನ ಸ್ಥಳೀಯ ಮಾತ್ರ, ಮತ್ತು Amazona leucocephala caymanensis ಅಥವಾ ಗ್ರ್ಯಾಂಡ್ ಕೇಮನ್ ಗಿಳಿ, ಇದು ಕೇಮನ್ ದ್ವೀಪದ ಸ್ಥಳೀಯದ್ದಾಗಿದೆ, ಕ್ಯೂಬಾದ ಕಾಡು ಪ್ರದೇಶಗಳಲ್ಲಿ ಮತ್ತು Isla de la Juventud ಪ್ರದೇಶಗಳಲ್ಲಿರುತ್ತದೆ. ಇನ್ನೊಂದು ಗುರುತಿಸಬಹುದಾದಂತಹ ಫೌನಾ ಎಂದರೆ ಗಂಡಾಂತರದಲ್ಲಿರುವ ಬ್ಲೂ ಇಗ್ವಾನಾ, ಇದು ಗ್ರ್ಯಾಂಡ್ ಕೇಮನ್‌ನ ಸ್ಥಳೀಯ ಪಕ್ಷಿ ಅಲ್ಲದೆ ಕೇಮನ್ ಬ್ರುಕ್‌ನಲ್ಲಿ ಅಗೊಟ್ಟಿ ಮತ್ತು ಬೂಬಿ ಪಕ್ಷಿಗಳು ಇವೆ.
ಹವಾಮಾನ
[ಬದಲಾಯಿಸಿ]ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]ಕೇಮನ್ ದ್ವೀಪಗಳಲ್ಲಿರುವ ಜನರಿಗಿಂತ ಹೆಚ್ಚಾಗಿ ದಾಖಲಿಸಿರುವ ವ್ಯಾಪಾರಗಳ ಸಂಖ್ಯೆ ಹೆಚ್ಚಾಗಿದೆ.[೬] ಇತ್ತೀಚೆಗೆ 2006ರಲ್ಲಿ ಅಂದಾಜಿಸಿರುವ ಕೇಮನ್ ದ್ವೀಪಗಳ ಜನಸಂಖ್ಯೆಯು ಸುಮಾರು 52,000, 100 ರಾಷ್ಟ್ರಗಳನ್ನು ಪ್ರತಿನಿಧಿಸುವ ಮಿಶ್ರಿತ ಜನರಿದ್ದಾರೆ. ಈ ಸಂಖ್ಯೆಯ ಸುಮಾರು ಅರ್ಧಭಾಗದಷ್ಟು ಕೆಮಾನಿಯನ್ ಮೂಲದವರಾಗಿದ್ದಾರೆ. ಸುಮಾರು 60%ನಷ್ಟು ಜನಸಂಖ್ಯೆಯು ಮಿಶ್ರಜನಾಂಗದವರಾಗಿದ್ದಾರೆ (ಹೆಚ್ಚಿನವರು ಆಫ್ರಿಕನ್-ಯೂರೋಪಿಯನ್ ಮಿಶ್ರ ಜನಾಂಗೀಯರು). ಉಳಿದ 40%ರಲ್ಲಿ, ಅರ್ಧದಷ್ಟು ಜನ ಯೂರೋಪಿಯನ್ ಮೂಲದವರು , ಉಳಿದರ್ಧ ಆಫ್ರಿಕನ್ ಮೂಲದವರಾಗಿದ್ದಾರೆ. ದ್ವೀಪಗಳಲ್ಲಿ ಅತಿ ಹೆಚ್ಚಿನವರು ಕ್ರಿಶ್ಚಿಯನ್ನರಾಗಿದ್ದಾರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯವರು ಪ್ರೆಸ್ಬಿಟಿರಿಯನ್ನರು ಮತ್ತು ಕ್ಯಾಥೊಲಿಕ್ಕರು. ಕೆರಿಬಿಯನ್‌ನಲ್ಲಿ ವಾಸಿಸುವ ಉತ್ತಮ ದರ್ಜೆಯ ಜೀವನವನ್ನು ಕೆಮೆನಿಯನ್ನರು ಆನಂದಿಸುತ್ತಾರೆ. ಅಧಿಕ ಪ್ರಮಾಣದ ಬಹುಪಾಲು ಜನಸಂಖ್ಯೆಯು ಕ್ರಮವಾಗಿ ಗ್ರ್ಯಾಂಡ್ ಕೇಮನ್, ನಂತರ ಕೇಮನ್ ಬ್ರಕ್ ಮತ್ತು ಲಿಟಲ್ ಕೇಮನ್‌ನಲ್ಲಿ ವಾಸಿಸುತ್ತಾರೆ.[೭]
ಕೇಮನ್ ದ್ವೀಪಗಳ ರಾಜಧಾನಿ ಜಾರ್ಜ್ ಟೌನ್, ಇದು ಗ್ರ್ಯಾಂಡ್ ಕೇಮನ್‌ನ ನೈಋತ್ಯಭಾಗದ ತೀರದಲ್ಲಿದೆ.
ನಗರಗಳ ಜನಸಂಖ್ಯೆ (ಜಿಲ್ಲೆಗಳು)
[ಬದಲಾಯಿಸಿ]ಆರ್ಥಿಕ ವ್ಯವಸ್ಥೆ
[ಬದಲಾಯಿಸಿ]ಸರಾಸರಿ KYD$42,000ರಷ್ಟು ಆದಾಯ ಹೊಂದಿರುವ, ಕೆಮೆನಿಯನ್ನರು ಕೆರೆಬಿಯನ್‌ನಲ್ಲಿ ವಾಸಿಸುವ ಉತ್ತಮ ದರ್ಜೆಯ ಜೀವನವನ್ನು ಆನಂದಿಸುತ್ತಾರೆ. CIA ವರ್ಲ್ಡ್ ಫ್ಯಾಕ್ಟ್‌ಬುಕ್ ಪ್ರಕಾರ, ಕೇಮನ್ ದ್ವೀಪಗಳಲ್ಲಿ ಒಂದು ಕ್ಯಾಪಿಟಾಗೆ ಇರುವ GDPಯು ವಿಶ್ವದಲ್ಲಿಯೇ 12ನೆಯ ಅತಿ ಹೆಚ್ಚಿನದಾಗಿದೆ.[೮] ಈ ದ್ವೀಪಗಳು ತಮ್ಮ ಕರೆನ್ಸಿ ಕೇಮನ್ ದ್ವೀಪಗಳ ಡಾಲರ್ (KYD)ಗಳನ್ನು ಅಲ್ಲಿಯೇ ಮುದ್ರಿಸುತ್ತವೆ, ಇದರ ಬೆಲೆ U.S. ಡಾಲರ್ ದರದಲ್ಲಿ 1 KYD = 1.25 USD ಗಳಷ್ಟು ಸ್ಥಿತವಾಗಿದೆ[೯]
ಸರ್ಕಾರದ ಪ್ರಾಥಮಿಕ ಮೂಲ ಆದಾಯವೆಂದರೆ ಪರೋಕ್ಷ ತೆರಿಗೆಪಾವತಿ: ಅಲ್ಲಿ ಆದಾಯ ತೆರಿಗೆ, ಕ್ಯಾಪಿಟಲ್ ಗೆಯಿನ್ಸ್ ತೆರಿಗೆ ಅಥವಾ ಕಾರ್ಪೊರೇಷನ್ ತೆರಿಗೆಗಳು ಇಲ್ಲ. ದ್ವೀಪಗಳಿಗೆ ಆಮದು ಮಾಡಿಕೊಳ್ಳುವಂತಹ ವಸ್ತುಗಳ ಮೇಲೆ ಆಮದು ಕೆಲಸಕ್ಕಾಗಿ 5% ನಿಂದ 20%ನಷ್ಟು ಹಣ ವಸೂಲಿ ಮಾಡಲಾಗುತ್ತದೆ. ಕೆಲವು ವಸ್ತುಗಳು ಇದರಿಂದ ಮುಕ್ತವಾಗಿವೆ; ಮುಖ್ಯವಾದ ಉದಾಹರಣೆಗಳೆಂದರೆ ಪುಸ್ತಕಗಳು, ಕ್ಯಾಮೆರಾಗಳು ಮತ್ತು ಶಿಶುಗಳ ವಸ್ತುಗಳು.[ಸೂಕ್ತ ಉಲ್ಲೇಖನ ಬೇಕು]
ಪ್ರವಾಸೋದ್ಯಮ
[ಬದಲಾಯಿಸಿ]ಗ್ರ್ಯಾಂಡ್ ಕೇಮನ್‌ನ (GCM) ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸೆವೆನ್ ಮಿಲೆ ಬೀಚ್ ನಲ್ಲಿ ದ್ವೀಪದ ಹಲವಾರು ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಸ್ಥಾಪನೆಯಾಗಿವೆ. GCMನ ಐತಿಹಾಸಿಕ ತಾಣಗಳಾದ, ಬೊಡ್ಡನ್ ಟೌನ್‌ನಲ್ಲಿರುವ ಪೆಡ್ರೋ ಸೇಂಟ್. ಜೇಮ್ಸ್ ಕ್ಯಾಸಲ್ ಸಹ ಪ್ರವಾಸಿಗರ ಆಕರ್ಷಣೆಯಾಗಿದೆ. ಸೋದರಿ ದ್ವೀಪಗಳಾದ, ಲಿಟಲ್ ಕೇಮನ್[೧೦] ಮತ್ತು ಕೇಮನ್ ಬ್ರಕ್[೧೧] ಪ್ರದೇಶಗಳನ್ನು ಕೂಡಾ ಪ್ರವಾಸಿಗರು ಭೇಟಿ ನೀಡುತ್ತಾರೆ.
ಎಲ್ಲಾ ಮೂರು ದ್ವೀಪಗಳಲ್ಲಿ ಸ್ಕೂಬಾ ಡೈವಿಂಗ್ ಇದೆ, ಮತ್ತು ಕೇಮನ್ ಹಲವಾರು ಸ್ನಾರ್ಕೆಲಿಂಗ್ ಪ್ರದೇಶಗಳ ತವರಾಗಿದೆ, ಅಲ್ಲಿ ಪ್ರವಾಸಿಗರು ಸ್ಟಿಂಗ್ರೇಗಳನ್ನು (ಗ್ರ್ಯಾಂಡ್ ಕೇಮನ್‌ನ ಸ್ಟಿಂಗ್ರೇ ಸಿಟಿ ಒಳಗೊಂಡು) ಬಳಸಿ ಈಜಬಹುದು. MV ಕೆಯ್ತ್ ಟಿಬ್ಬೆಟ್ಸ್ ಒಳಗೊಂಡು ಕೇಮನ್ ಬ್ರಕ್ ತೀರದಲ್ಲಿ ಎರಡು ಶಿಪ್‌ರೆಕ್‌ಗಳಿವೆ .[ಸೂಕ್ತ ಉಲ್ಲೇಖನ ಬೇಕು]
ಗ್ರ್ಯಾಂಡ್ ಕೇಮನ್ ಪ್ರವಾಸೀ ಆಕರ್ಷಣೆಗಳಲ್ಲಿ ಐರನ್ ಶೋರ್ ಲ್ಯಾಂಡ್‌ಸ್ಕೇಪ್ ಆಫ್ ಹೆಲ್, ಮೆರೈನ್ ಥೀಮ್ ಪಾರ್ಕ್, ಬೋಟ್ಸ್‌ವೆಯ್ನ್ ಬೀಚ್, ಅಲ್ಲದೇ ಕೇಮನ್ ಟರ್ಟಲ್ ಫಾರ್ಮ್, ಪ್ರೊಡಕ್ಷನ್ ಆಫ್ ಗೌರ್ಮೆಟ್ ಸೀ ಸಾಲ್ಟ್, ಮತ್ತು ದ್ವೀಪದ ಮಧ್ಯದಲ್ಲಿ ಕಾಡಿನುದ್ದಕ್ಕೂ ಮಸ್ತಿಕ್ ಟ್ರೈಲ್ , ಹೈಕಿಂಗ್ ಟ್ರೈಲ್. ಕೇಮನ್ ದ್ವೀಪದ ನ್ಯಾಷನಲ್ ಟ್ರಸ್ಟ್ ವಾರಕ್ಕೊಮ್ಮೆ ಮಾರ್ಗದರ್ಶಿಯನ್ನು ಹೊಂದಿರುವಂತಹ ಪ್ರವಾಸಗಳನ್ನು ಏರ್ಪಡಿಸುತ್ತದೆ.[೧೨]
ಹಣಕಾಸು ಸೇವೆಗಳ ಕೈಗಾರಿಕೆ
[ಬದಲಾಯಿಸಿ]ಕೇಮನ್ ದ್ವೀಪಗಳು ಪ್ರಮುಖ ಅಂತರರಾಷ್ಟ್ರೀಯ ಹಣಕಾಸು ಕೇಂದ್ರವಾಗಿದೆ. ಬೃಹತ್ ವಲಯಗಳೆಂದರೆ ,"ಬ್ಯಾಂಕಿಂಗ್,ಹೆಡ್ಜ್ ಸ್ತಿರ ನಿಧಿ ನಿರ್ಮಾಣ ಮಾಡುವ ಮತ್ತು ಬಂಡವಾಳ ಹೂಡುವ, ವಿಧಾನದ ಆರ್ಥಿಕ ಸಂಪನ್ಮೂಲ ಮತ್ತು ಭದ್ರತಾ ಠೇವಣಿ, ಬಂಡವಾಳ ವಿಮೆ,ಮತ್ತು ಸಾಮಾನ್ಯ ಸಮುದಾಯಿಕ ಚಟುವಟಿಕೆಗಳು."[೧೩] ಆರ್ಥಿಕ ಸೇವೆಗಳ ಕೈಗಾರಿಕೆಯ ನಿಯಂತ್ರಣ ಮತ್ತು ಉಸ್ತುವಾರಿಯು ಕೇಮನ್ ದ್ವೀಪಗಳ ಆರ್ಥಿಕ ಅಧಿಕಾರಿಗಳ (CIMA) ಜವಾಬ್ದಾರಿ.
$1.5 ಟ್ರಿಲಿಯನ್ ಬ್ಯಾಂಕಿಂಗ್ ಹೊಣೆಗಾರಿಕೆಯೊಂದಿಗೆ [೧೪] ಕೇಮನ್ ದ್ವೀಪಗಳು ಪ್ರಪಂಚದಲ್ಲಿಯೇ ಐದನೇ ದೊಡ್ಡ ವಹಿವಾಟು ಕೇಂದ್ರವಾಗಿವೆ.[೧೩] ಜೂನ್ 2008 ಪ್ರಕಾರ ಅಲ್ಲಿ ಒಟ್ಟು 279 ಬ್ಯಾಂಕುಗಳಿವೆ, ಅವುಗಳಲ್ಲಿ 19 (ಕೇಮನ್ ಆದಾರಿತವಾಗಿ) ಸ್ವದೇಶಿ ಮತ್ತು ಅಂತರರಾಷ್ಟ್ರೀಯ ಗಿರಾಕಿಗಳೊಂದಿಗೆ ಬ್ಯಾಂಕ್ ಚಟುವಟಿಕೆಗಳನ್ನು ನಿರ್ವಹಿಸಲು ಅನುಮತಿಪಡೆದಿವೆ, ಉಳಿದ 260 ಅಂತರರಾಷ್ಟ್ರೀಯ ಆದಾರಿತವಾಗಿ ಮಿತಿಯ ಸ್ವದೇಶಿ ಚಟುವಟಿಕೆಗಳೊಂದಿಗೆ ಮಾತ್ರ ಕಾರ್ಯ ನಿರ್ವಹಿಸಲು ಅನುಮತಿ ಹೊಂದಿವೆ.[೧೫]
ಅತ್ಯುತ್ತಮ ಸೇವೆ ವದಗಿಸುದರ ಮೇಲಿನ ಅವರ ಏಕಾಗ್ರತೆಯು ಕಡಲಾಚೆಯ ಆರ್ಥಿಕ ಕೇಂದ್ರವಾಗಿ ಕೇಮನ್ ದ್ವೀಪಗಳ ಸಾಧನೆಗೆ ಒಂದು ಕಾರಣವಾಗಿದೆ. ಇವು ವಿಶ್ವದ ಪ್ರಮುಖ ಆರ್ಥಿಕ ಸಂಸ್ಥೆಗಳು (UBS ಮತ್ತು ಗೊಲ್ಡ್ ಮಾನ್ ಸಾಕ್ಸ್ ಸೇರಿ),ಸುಮಾರು 80 ಕಾರ್ಯನಿರ್ವಾಹಕರು,ಪ್ರಮುಖ ಲೆಕ್ಕಯಿಡುವ ಅಭ್ಯಾಸಗಳು (ನಾಲ್ಕು ಮುಖ್ಯ ಲೆಕ್ಕಪರಿಶೋಧಕರನ್ನು ಒಳಗೊಂಡು),ಮತ್ತು ಕಡಲಾಚೆಯ ನ್ಯಾಯಶಾಸ್ತ್ರದ ಅಭ್ಯಾಸಗಳನ್ನು (ಮಾಪ್ಲೆಸ್ & ಕಾಲ್ಡೆರ್ ಮತ್ತು ಒಜಿಯರ್ ಸೇರಿ) ಒಳಗೊಂಡಿವೆ.[೧೬][೧೬]
ಮ್ಯೂಚುಯಲ್ ಫಂಡ್‌ಗಳ ಕಾಯಿದೆಯು 1993ರಲ್ಲಿ ಪರಿಚಯಿಸಲ್ಪಟ್ಟಾಗಿನಿಂದ, ಇದನ್ನು ಪ್ರಪಂಚದಾದ್ಯಂತ ಅಧಿಕಾರ ಕ್ಷೇತ್ರಗಳಿಂದ ಅನುಸರಿಸಲಾಗಿ, ಕೇಮನ್ ದ್ವೀಪಗಳು ಪ್ರಪಂಚದ ಪ್ರಮುಖ ಕಡಲಾಚೆಯ ಹೆಡ್ಜ್ ಬಂಡವಾಳ ಅಧಿಕಾರ ಕ್ಷೇತ್ರವಾಗಿ ಬೆಳೆದಿವೆ.[೧೬] ಜುನ್ ೨೦೦೮ ರಲ್ಲಿ ಇದು 10,000 ಹೆಡ್ಜ್ ಬಂಡವಾಳಗಳ ನೊಂದಾಣಿಯನ್ನು ದಾಟಿತು,ಮತ್ತು ಜುನ್ 2008ರ ಅಂತ್ಯದಾಚೆಗೆ CIMAಯು ಹೆಡ್ಜ್ ಬಂಡವಾಳದ ಬೆಳವಣಿಗೆಯ ನಿವ್ವಳ ದರವು 12% ಎಂದು ವರದಿ ಮಾಡಿದೆ.[೧೭]
1990ರ ಮಧ್ಯದ ನಂತರದಲ್ಲಿ ಕೇಮನ್ ದ್ವೀಪಗಳಂತಹ, ಕಡಲಾಚೆಯ ಆರ್ಥಿಕ ಕೇಂದ್ರಗಳು ಪ್ರಾರಂಭವಾಗುವಾಗ, ಅವುಗಳ ಆಪಾದನೆಯ ಅಪಾಯಕಾರಿ ತೆರಿಗೆ ಆಡಳಿತಾಕ್ರಮಗಳಿಗಾಗಿ ಅವು OECDಯಿಂದ ಹೆಚ್ಚಿನ ಒತ್ತಡಕ್ಕೆ ಸಿಲುಕಲು ಕಾರಣ ಅಲ್ಲಿ OECDಯು ಅಲ್ಪ ತೆರಿಗೆಯ ಆಡಳಿತಕ್ರಮಗಳು ವಿಶ್ವದ ಮಾರುಕಟ್ಟೆಯ ಸ್ಥಳದಲ್ಲಿ ಅನುಕೂಲಕರವಾಗಿರುವುದನ್ನು ತಪ್ಪಿಸುವ ಅಭಿಪ್ರಾಯಹೊಂದಿತ್ತು. OECDಯು ಕೇಮನ್ ದ್ವೀಪಗಳು ಮತ್ತು ಇತರ ತೆರಿಗೆ ಬಂದರುಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮತ್ತು ಮಂಜೂರಾತಿಗಳನ್ನು ಅವುಗಳ ವಿರುದ್ಧವಾಗಿ ಮಾಡುವ ಬೆದರಿಕೆ ಹೊಡ್ಡಿತ್ತು.[೧೮] ಹೇಗಾದರು ಮಾಡಿ 2000 ರಲ್ಲಿ ವ್ಯವಸ್ಥೆಯನ್ನು ತಿದ್ದಿ ಸರಿಮಾಡುವುದರಿಂದ ಪಾರದರ್ಶಕತ್ವವನ್ನು ಸುದಾರಿಸಲು ಮತ್ತು ತಮ್ಮ ನಾಗರಿಕರ ಬಗ್ಗೆ OECDನ ಸದಸ್ಯ ದೇಶಗಳ ಜೊತೆ ಸಮಾಚಾರ ವಿನಿಮಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಕೇಮನ್ ದ್ವೀಪಗಳು OECDನ ಕಪ್ಪು ಅಟ್ಟಿಯಲ್ಲಿ ಸೇರಿಸಲ್ಪಡುವುದರಿಂದ ಪಾರಾಗುವಲ್ಲಿ ಸಫಲವಾದವು.[೧೮]
2004 ರಲ್ಲಿ, UKನ ಒತ್ತಡದಲ್ಲಿ, ಕೇಮನ್ ದ್ವೀಪಗಳು ಯುರೋಪಿಯನ್ ಯುನಿಯನ್ ಸೇವಿಂಗ್ಸ್ ಡೈರೆಕ್ಟಿವ್ (EUSD)ವನ್ನು ಕಾರ್ಯಗತಗೊಳಿಸಲು ಅಗ್ರಗಣ್ಯವಾಗಿ ಒಪ್ಪಿದವು, ಆದರೆ ಕೇಮನ್ ದ್ವೀಪಗಳಲ್ಲಿನ ಆರ್ಥಿಕ ಸೇವೆಗಳ ಉದ್ಯಮಕ್ಕೆ ಕೆಲವು ಮುಖ್ಯವಾದ ಅನುಕೂಲಗಳನ್ನು ಭದ್ರಪಡಿಸಿದ ನಂತರವಷ್ಟೆ. ಕೇಮನ್ ದ್ವೀಪಗಳು EUನ ತತ್ವದ ಪರವಶವಲ್ಲಿದ್ದರಿಂದ, EUSDನ ಕಾರ್ಯಗತಗೊಳಿಸುವಿಕೆಯು ದ್ವಿಪಕ್ಷೀಯ ಒಪ್ಪಂದಗಳ ಪದ್ಧತಿಯಲ್ಲಿ EUನ ಪ್ರತಿ ಸದಸ್ಯ ರಾಜ್ಯ ಮತ್ತು ಕೇಮನ್ ದ್ವೀಪಗಳ ನಡುವೆ ನಡೆಯುತ್ತದೆ. EUSDಯು ಯಾವರೀತಿ ಕೇಮನ್ ದ್ವೀಪಗಳ ಜೊತೆಯಲ್ಲಿ ಕಾರ್ಯಗತಗೊಳಿಸಲ್ಪಡುತ್ತದೆ ಎಂಬುದರಬಗ್ಗೆ ಹೊರಡಿಸಲ್ಪಟ್ಟ ಮಾದರಿ ಅಂಗೀಕಾರ ಪತ್ರಕ್ಕೆ,ಕೇಮನ್ ದ್ವೀಪಗಳು ಒಪ್ಪಿಗೆ ನೀಡಿದವು.[೧೯]
ಕೇಮನ್ ದ್ವೀಪಗಳಲ್ಲಿನ ವಹಿವಾಟು, ವಿಮೆ ಮತ್ತು ಭದ್ರತಾ ಉದ್ಯಮಗಳ ಉಸ್ತುವಾರಿ ಮತ್ತು ನಿಯಮಗಳ ಬಗೆಗಿನ ಸಮಾಲೋಚನೆಯ ವರದಿಯನ್ನು 2005ರ ಮಾರ್ಚ್‌ನಲ್ಲಿ ಇಂಟರ್ನ್ಯಾಷಲ್ ಮೊನೆಟರಿ ಫಂಡ್ (IMF) ಪ್ರಕಟಿಸಿತು, ಹಾಗೂ ಅದರ ಹಣ ಸಂಗ್ರಹಣೆಯಆಡಳಿತಾಕ್ರಮವು ವಿಸ್ತಾರವಾದ ವ್ಯವಸ್ಥಿತ ಅಧಿಕಾರ ಕ್ಷೇತ್ರಗಳನ್ನು ಮತ್ತು ಅಂಗೀಕೃತ ಚೌಕಟ್ಟನ್ನು ಗುರುತಿಸಿದೆ. "ಶಾಸನಾಧಿಕಾರದ ನಿಯಮ ಮತ್ತು ಮಾರ್ಗದರ್ಶಿ ಹಾದಿಯನ್ನು ವರ್ಧಿಸುವ ವಿಸ್ತಾರವಾದ ಕಾರ್ಯಕ್ರಮವು ಮೊದಲಿನ ಆಚರಣೆಗಳನ್ನು ವಿಧಿಯುಕ್ತವಾಗಿ ಮಾಡುವ ಮತ್ತು ವರ್ಧಿಸಿದ ಕಾರ್ಯವಿಧಾನಗಳನ್ನು ಪರಿಚಯಿಸುವ ಅತೀ ಪ್ರಯೋಜನಕಾರಿ ಪದ್ಧತಿಯ ಕಾಯಿದೆಯನ್ನು ಪರಿಚಯಿಸಿತು,"ಇದನ್ನು IMF ಎಂದು ಗುರುತಿಸಲಾಗಿದೆ. ವರದಿಯ ಮುಂದಿನ ಹೇಳಿಕೆಯು " ಅಂತರಾಷ್ಟ್ರೀಯವಾಗಿ ಅನುಭವಹೊಂದಿದ ಮತ್ತು ಗುಣಯೋಗ್ಯ ಪಡೆದ ಕಾರ್ಮಿಕಶಕ್ತಿ ಹಾಗು ಅನುಭವವುಳ್ಳ ನ್ಯಾಯವಾದಿಗಳು,ಲೆಕ್ಕಿಗರು ಮತ್ತು ಪರಿಶೋಧಕರುಗಳನ್ನೊಂದಿದ ಚೆನ್ನಾಗಿ ವರ್ಧಿಸಿದ ಮೂಲಭೂತ ಸೌಕರ್ಯವುಳ್ಳ ವಹಿವಾಟಿನಿಂದ ಮೇಲ್ವಿಚಾರಣಾ ಪದ್ಧತಿಯ ಪ್ರಯೋಜನಗಳನ್ನು ಹೊರಡಿಸಿತು," ಕೊನೆಗೆ "AML (ಯಾಂಟಿ ಮನಿ ಲಾಂಡರಿಂಗ್) ಅಭಾರತೆಗೆ ಸಂಬಂಧಪಟ್ಟ ಅಂಗೀಕೃತ ಸಂಸ್ಕೃತಿಯು ಸೇರಿ ಕೇಮನ್ ಒಳಗಡೆಯ ಒಟ್ಟಾರೆ ಅಂಗೀಕೃತ ಸಂಸ್ಕೃತಿಯು ಬಹಳ ಪ್ರಬಲವಾಗಿದೆ" ಎಂಬುದನ್ನೂ ಸೇರಿಸಿ.[೨೦]
ಉಗ್ಲಾಂಡ್ ಮನೆಯು (ಜಾರ್ಜ್ ಪಟ್ಟಣದಲ್ಲಿನ ಒಂದು ಕಟ್ಟಡ) ತೆರಿಗೆ ವಿನಾಯಿತಿಗೆ ಬಹಳ ಹತ್ತಿರದ ಸಂಬಂಧ ಹೊಂದಿದೆ.
ಮೇ 4,2009 ರಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರು ಬರಾಕ್ ಒಬಾಮ ಅವರು ಅನೇಕ ರಾಷ್ಟ್ರೀಯ ಸಂಸ್ಥೆಗಳಿಂದ ತೆರಿಗೆ ವಿನಾಯಿತಿ ಉಪಯೋಗಗಳನ್ನು ಪಡೆಯುವುದನ್ನು ತಡೆಯುವ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದರು. ಅವರ ಭಾಷಣದಲ್ಲಿ, ಅವರು ಕೇಮನ್ ದ್ವೀಪಗಳನ್ನು ತೆರಿಗೆ ವಿನಾಯಿತಿ ತಾಣಗಳಾಗಿ ಗುರುತಿಸಿದರು.[೨೧] ಮರುದಿನ, ಅಂತರರಾಷ್ಟ್ರೀಯ ಆರ್ಥಿಕ ವಲಯದಲ್ಲಿ ಕೇಮನ್ ಗಳ ಪಾತ್ರ ಮತ್ತು US ಆರ್ಥಿಕ ಪದ್ಧತಿಯೊಂದಿಗಿನ ಇದರ ಬೆಲೆಯ ವಿವರಗಳನ್ನೊಳಗೊಂಡ ತೆರೆದ ಪತ್ರವನ್ನು ಕೇಮನ್ ದ್ವೀಪಗಳ ಆರ್ಥಿಕ ಸೇವೆಗಳ ಸಮಿಥಿಯು ಅಧ್ಯಕ್ಷರಿಗೆ ಸಮರ್ಪಿಸಿದೆ[೨೨].
ಕಾರ್ಮಿಕರು
[ಬದಲಾಯಿಸಿ]ಕೇಮನ್ ದ್ವೀಪಗಳು ಕಡಿಮೆ ಜನಸಂಖ್ಯಯನ್ನು ಒಳಗೊಂಡಿವೆ ಮತ್ತು ಆದ್ದರಿಂದ ಪರಿಮಿತ ಕಾರ್ಮಿಕ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಕೆಲಸದ ಪರವಾನಿಗೆಗಳನ್ನು ಕ್ರಮಾನುಸಾರವಾಗಿ ವಿದೇಶಿಗರಿಗೆ ಕೊಡಲಾಗುತ್ತಿತ್ತು. ಸರಾಸರಿ,40,000 ಕ್ಕಿಂತಲೂ ಅಧಿಕ ವಿದೇಶಿಗಳು ಚಲಾವಣೆಯಲ್ಲಿರುವ ಕೆಲಸದ ಪರವಾನಿಗೆಗಳನ್ನು ಹೊಂದಿದ್ದಾರೆ[೨೩].
ವಿದೇಶಿ ಪ್ರಜೆಗಳಿಗೆ ಕೆಲಸದ ಪರವಾನಿಗೆಗಳು
[ಬದಲಾಯಿಸಿ]ಕೇಮನ್ ದ್ವೀಪಗಳಲ್ಲಿ ವಿದೇಶಿ ಪ್ರಜೆಗಳಾಗಿ ಉದ್ಯೋಗ ಮಾಡಲು ಕೆಲಸದ ಪರವಾನಿಗೆಯ ಅಗತ್ಯವಿದೆ. ಈ ಪರವಾನಿಗೆಯನ್ನು ಪಡೆಯುವಿಕೆಯು ಪೋಲೀಸರಿಂದ ವಿದೇಶಿಗಳ ಹಿನ್ನೆಲೆಯ ತನಿಖೆ ಮತ್ತು ಆರೋಗ್ಯ ತಪಾಸಣಾ ಕ್ರಮಗಳನ್ನು ಒಳಗೊಂಡಿದೆ. ಆರೋಗ್ಯ ತಪಾಸಣೆಯಲ್ಲಿ ವಿದೇಶಿ ಪ್ರಜೆಗಳಿಗೆ ಚರ್ಮರೋಗ ಅಥವಾ HIV ಗಳಂತಹ ರೋಗಗಳು ಕಂಡುಬಂದರೆ ಕೆಲಸದ ಪರವಾನಿಗೆಯನ್ನು ನೀಡಲಾಗುವುದಿಲ್ಲ. 60 ವರ್ಷಮೇಲಿನವರಿಗೆ ಕೆಲಸದ ಪರವಾನಿಗೆಯನ್ನು ನೀಡುವುದಿಲ್ಲ. ವಿಶೇಷ ಕೆಲಸಕ್ಕೆ ವೈಯುಕ್ತಿಕ ಪರವಾನಿಗೆಯನ್ನು ನೀಡಬಹುದು.
ಕೇಮನ್ ದ್ವೀಪಗಳಿಗೆ ತೆರಳಲು ವಿದೇಶಿಯರು ಮೊದಲೇ ಉದ್ಯೋಗದ ಖಾತ್ರಿಪಡೆದಿರಬೇಕು. ಸಂಬಂದಪಟ್ಟ ಉದ್ಯೋಗ ಸಂಸ್ಥೆಯು ಉದ್ಯೋಗಿ ಪರವಾಗಿ, ಪರವಾನಿಗೆಗೆ ಅರ್ಜಿಸಲ್ಲಿಸುವಿಕೆಯ ಜೊತೆಗೆ ಶುಲ್ಕವನ್ನೂ ನೀಡುತ್ತದೆ.[೨೪]. ಕೇಮನ್ ದ್ವೀಪಗಳಲ್ಲಿನ ವಿದೇಶಿಗಳಿಗೆ (ಹಳೆಯ ಪರವಾನಿಗೆಯ ನವೀಕರಿಸುವ ಹೊರತಾಗಿ)ಹೊಸಾ ಕೆಲಸದ ಪರವಾನಿಗೆಗಳನ್ನು ನೀಡಲಾಗುವುದಿಲ್ಲ . ಕೇಮನ್ ದ್ವೀಪಗಳ ವಲಸೆ ವಿಭಾಗವು ಕೆಲಸದ ಪರವಾನಿಗೆಯನ್ನು ಅನುಮೋದಿಸುವ ವರೆಗೆ ವಿದೇಶಿಗಳು ದೇಶದಿಂದ ಹೊರಗಿರಬೇಕು.[೨೫]
ಕೇಮನ್ ದ್ವೀಪಗಳು ಕೆಲಸದ ಪರವಾನಿಗೆ ಅಗತ್ಯ ವಿರುವ ಕೆಲಸಗಾರರನ್ನು ಗಡಿಪಾರು ಮಾಡುವ ಸಂಬಂಧ ಸದ್ಯ ವಿವಾದಾತ್ಮಕ "ರೊಲ್‌ಓವರ್" ನೀತಿಯನ್ನು ಅವರ ಮೇಲೆ ಹೇರುತ್ತಿವೆ. ಕೇಮನೀಯರಲ್ಲದವರು, ಪ್ರಮುಖ ಕೆಲಸಗಾರರ ಅಳತೆಗೋಲನ್ನು ತೃಪ್ತಿಗೊಳಿಸಿದವರನ್ನು ಹೊರತಾಗಿ ಉಳಿದವರು ಗರಿಷ್ಟ ಏಳು ವರ್ಷಗಳವರೆಗಷ್ಟೆ ಆ ಪ್ರಾಂತದಲ್ಲಿ ನೆಲಸುವ ಮತ್ತು ಕೆಲಸ ಮಾಡುವ (ನವೀಕರಿಸಲಾಗದ) ಪರವಾನಿಗೆಯ ಅನುಮೋದನೆಯನ್ನು ಪಡೆಯುತ್ತಾರೆ. ನೀತಿಯು ಪ್ರೆಸ್ಸ್ ಒಳಗೆ ವಿವಾದಾತ್ಮಕ ವಿಷಯವಾಗಿದೆ. ಕೆಲಸಕ್ಕೆ ಸೇರಿಸಿಕೊಳ್ಳುವಿಕೆಯ ತೊಂದರೆಗಳ ಕಾರಣಗಳಿಂದ ವಿಶೇಷವಾಗಿ ಕಾನೂನು ಸಂಸ್ಥೆಗಳು ಅಶಾಂತ ಗೊಂಡಿವೆ.[೨೬] ಇತರ ಕಡಿಮೆ ಸಂಭಾವನೆ ಪಡೆಯುವ ಉದ್ಯೋಗ ವಲಯಗಳು ಸಹ ದುಃಖಿತ ವಾಗಿವೆ. ಮುಳುಗು ತರಬೇತುಗಾರರು ಮತ್ತು ನಿವೇಶನ ದಲ್ಲಾಳಿಗಳು ಸುರಕ್ಷತೆಯ ಬಗ್ಗೆ ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ಕೆಲಸಗಾರರಿಂದ ಕೆಮಾನಿಯರಿಗೆ ತಮ್ಮ ರಾಷ್ಟ್ರೀಯತೆಯನ್ನು ರಕ್ಷಣೆಮಾಡಿಕೊಳ್ಳಲು ರೋಲ್‌ಓವರ್ ಪದ್ದತಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿತ್ತು.[೨೭]
ಸಂಬಂದಪಟ್ಟವರು ವ್ಯಕ್ತಪಡಿಸಿದ ಪ್ರಕಾರ, ಕಾರ್ಯನೀತಿಯ ಮೂಲಕ ಆನ್‌ಶೋರ್ ಆರ್ಥಿಕ ಕೇಂದ್ರ ಗಳಿಂದ ಕೆಲಸಕ್ಕೆ ನೇಮಿಸುವ ಮತ್ತು ಅನುಭವಿತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಆಗುವ ಕಷ್ಟಗಳಿಂದ,ದೀರ್ಘ ಕಾಲದಲ್ಲಿ ಕೇಮನ್ ದ್ವೀಪಗಳಿಗಿದ್ದ ಕಡಲಾಚೆಯ ಆರ್ಥಿಕ ಕೇಂದ್ರ ಎಂಬ ಕೀರ್ತಿಯು ಹಾಳಾಗ ಬಹುದು. ಸ್ಥಳೀಯ ವಾರ್ತಾಪತ್ರಿಕೆಯ ವರದಿಯ ಪ್ರಾಕಾರ ಸರಕಾರಿ ನೌಕರರು ಇನ್ನು ಹೆಚ್ಚಿನ ಕಾಲ ಈ ರೋಲ್ ಓವೆರ್ ನೀತಿಯಿಂದ ವಿನಾಯಿತಿ ಪಡೆಯಲಾರರು.[೨೮] ರಾಜ್ಯಪಾಲರು, ಏಳು ವರ್ಷಗಳ ನಂತರ ಕೆಲಸದಿಂದ ತೆಗೆದು ಹಾಕಿದ ಸರಕಾರಿ ಅಧಿಕಾರಿಗಳನ್ನು ಯಾವುವು ಗಡಿಪಾರು ಮಾಡುತ್ತವೆ ಮತ್ತು ಯಾವುವು ಮಾಡಲ್ಲ ಎಂಬುದನ್ನು ಇತ್ಯರ್ಥ ಮಾಡಲು ಸರ್ಕಾರಿ ಕೆಲಸದ ನೌಕರರ ಪದವಿ ಬದಲಾವಣೆಯ ಪೂರ್ತಿ ಹಿಡಿತವನ್ನು ಹೊಂದುವ ಅವರ ಶಾಸನಬದ್ಧ ಅಧಿಕಾರವನ್ನು ಉಪಯೊಗಿಸಲು ತೀರ್ಮಾನಿಸಿದರು.
ಈ ನೀತಿಯನ್ನು UDP ಸರಕಾರದಿಂದ ಬರೆಯಲ್ಪಟ್ಟ ವಲಸೆ ಕಾಯಿದೆಯಲ್ಲಿ (2003ರ ತಿದ್ದುಪಡಿ) ಸೇರಿಸಲಾಗಿದೆ, ನಂತರ PPM ಸರಕಾರದಿಂದ ಜಾರಿಗೊಳಿಸಲಾಗಿದೆ. ಎರಡೂ ಸರಕಾರಗಳು ವಿದೇಶಿ ನೌಕರರ ಮೇಲಿನ ಕಾಲಾವದಿ ಪರಿಮಿತಿಗಳಿಗೆ ಸಮ್ಮತಿಸಿದವು, ಮತ್ತು ವಾಸಸ್ಥಾನ ಮತ್ತು ನಾಗರಿಕತ್ವವನ್ನು ಪಡೆಯುತ್ತಿರುವ ಅದಿಖ ಸಂಕ್ಯಯ ವಿದೇಶಿಯರಿಂದ ಸ್ಥಳೀಯ ಸಂಸ್ಕೃತಿ ಮತ್ತು ಪಿತ್ರಾರ್ಜಿತವಾಗಿ ಬಂದುದು ನಾಶಮಾದುವುದರಿಂದ ರಕ್ಷಿಸಲು ಇದರ ಅಗತ್ಯವಿದೆ ಯೆಂದು ಬಹುತೇಕ ಕೇಮೇನಿಯರು ಕುಡಾ ಒಪ್ಪಿದ್ದರು.[೨೯]
ಸರಕಾರ
[ಬದಲಾಯಿಸಿ] {{citation}}
: Empty citation (help)
ಕೇಮನ್ ದ್ವೀಪಗಳು, ಸ್ವಯಂ ಆಡಳಿತವಿಲ್ಲದ ಪ್ರದೇಶಗಳಲ್ಲಿ ವೊಂದಾದ ಅಂತಿಮ ಪ್ರದೇಶವೆಂದು ಇಪಾತ್ನಾಲ್ಕನೆಯ UN ವಿಶೇಷ ಸಮಿತಿಯಿಂದ ನಮೂದಿಸಲ್ಪಟ್ಟ, ಬ್ರಿಟಿಷರ ಸಮುದ್ರದಾಚೆಯ ಪ್ರದೇಶಗಳು. ಸ್ವದೇಶಿ ವ್ಯವಹಾರಗಳನ್ನು ನಿರ್ವಹಿಸಲು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹದಿನೈದು-ಸ್ಥಾನಗಳ ಶಾಸನಾಧಿಕಾರದ ಸಮಿತಿಯನ್ನು ಜನರಿಂದ ಆಯ್ಕೆ ಮಾಡಲಾಗುತ್ತದೆ. ಶಾಸನಾಧಿಕಾರದ ಸಮಿತಿಗೆ ಆಯ್ಕೆಯಾದ ಸದಸ್ಯರಲ್ಲಿ (MLAs), ಐದುಜನರನ್ನು ರಾಜ್ಯಪಾಲರ ಮುಖ್ಯಸ್ಥಿಕೆಯಲ್ಲಿ ಸಚಿವ ಸಂಪುಟದಲ್ಲಿ ಸರಕಾರದ ಮಂತ್ರಿಗಳಾಗಿ ಸೇವೆಸಲ್ಲಿಸಲು ಆರಿಸಲಾಗುತ್ತದೆ. ಮುಖ್ಯಮಂತ್ರಿ ಸರಕಾರದ ಮುಖ್ಯಸ್ಥರು.[ಸೂಕ್ತ ಉಲ್ಲೇಖನ ಬೇಕು]
ರಾಜ್ಯಪಾಲರನ್ನು ದೊರೆತನದ ಪ್ರತಿನಿಧಿಯಾಗಿ ಬ್ರಿಟಿಷ್ ಸರಕಾರದಿಂದ ನೇಮಿಸಲಾಗಿದೆ. ರಾಜ್ಯಪಾಲರಿಗೆ ಅನಿವಾರ್ಯವಾದರೆ ಸಂವಿದಾನದಲ್ಲಿ ಕಾಯ್ದಿರಿಸಲ್ಪಟ್ಟ ವಿಶೇಷ ಅಧಿಕಾರವನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಹುದು. ಇವರು ದೇಶಕ್ಕೆ ಸಂಬಂಧಪಟ್ಟ ಎಲ್ಲಾ ಕಾನೂನುಗಳಿಗೆ ತಮ್ಮ ಹಸ್ತಾಕ್ಷರವನ್ನು ಮಾಡಬೇಕಾಗುತ್ತದೆ,ಇವುಗಳು ದೇಶದ ಹಿತಾಸಕ್ತಿಗೆ ಪೂರಕವಾಗಿವೆ ಎಂಬುದನ್ನು ಇವರು ಈ ಸಂದರ್ಬದಲ್ಲಿ ಖಚಿತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ರಾಜ್ಯಪಾಲರು ದೇಶದ ಆಡಳಿತ ನಡೆಸಲು ಸಚಿಸವ ಸಂಪುಟಕ್ಕೆ ಅವಕಾಶವನ್ನು ನೀಡಿದ್ದಾರೆ, ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಪಟ್ಟ ಕೆಲಸಗಳು ಉಪರಾಜ್ಯಪಾಲರಿಂದ ನಡೆಸಲ್ಪಡುತ್ತವೆ, ಉಪರಾಜ್ಯಪಾಲರೆಂದರೆ, ರಾಜ್ಯಪಾಲರಿಗೆ ತಮ್ಮ ಕರ್ತವ್ಯವನ್ನು ಯಾವುದೇ ಕಾರಣಗಳಿಂದ ನಿರ್ವಹಿಸಲು ಸಾದ್ಯವಾಗದಿದ್ದಲ್ಲಿ ಇವರು ರಾಜ್ಯಪಾಲರಂತೆ ಕಾರ್ಯನಿರ್ವಹಿಸುತ್ತಾರೆ. ಕೇಮನ್ ದ್ವೀಪಗಳ ಈಗಿನ ರಾಜ್ಯಪಾಲರು ದುನ್ಕಾನ್ ಟೈಲೊರ್ ಮತ್ತು ಉಪರಾಜ್ಯಪಾಲರು ಗೌರವಾನ್ವಿತ ದೊನೊವನ್ ಎಬಾಂಕ್ಸ್.
ಇಬ್ಬರು ಅಧಿಕೃತ ಸದಸ್ಯರು ಮತ್ತು ಐದು ಆಯ್ಕೆಯಾದ ಸದಸ್ಯರುಗಳು ಸೇರಿ ಮಂತ್ರಿಮಂಡಲ ರಚನೆಯಾಗುತ್ತದೆ,ಇವರನ್ನು ಮಂತ್ರಿಗಳೆಂದು ಕರೆಯತ್ತಾರೆ; ಇವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯಾಗಿ ನಿಶ್ಚಯಿಸಲಾಗುತ್ತದೆ.
ರಾಜ್ಯಪಾಲರು ಮತ್ತು ಮುಖ್ಯ ಕಾನೂನು ಪ್ರತಿನಿಧಿಗಳಿಬ್ಬರು ಅಧಿಕೃತ ಸದ್ಯರುಗಳು. ಅವರು ರಾಜ್ಯಪಾಲರ ಶಿಪಾರಸಿನ ಮೂಲಕ ನೇಮಕಗೊಂಡವರು, ಮತ್ತು ಶಾಸನಸಭೆಯಲ್ಲಿ 2009ರ ಸಂವಿದಾನದ ಪ್ರಕಾರ ಸ್ಥಾನವನ್ನು ಪಡೆದಿರುತ್ತಾರೆ, ಆದರೆ ಅವರು ಮತ ಚಲಾಯಿಸುವಂತಿಲ್ಲ.
ಕಛೇರಿಯ ಸ್ಥಾನಗಳಿಗೆ ಐದು ಮಂತ್ರಿಗಳನ್ನು ಆಯ್ಕೆಯಾದ ಹದಿನೈದು ವಿಧಾನಸಭೆಯ ಸದಸ್ಯರುಗಳಿಂದ ಆಯ್ಕೆ ಮಾಡಲಾಗುತ್ತದೆ. ಮಂತ್ರಿಗಳಲ್ಲಿ ಒಬ್ಬರಾದ, ಬಹುಮತ ಹೊಂದಿದ ಪಕ್ಷದ ನಾಯಕರನ್ನು ರಾಜ್ಯಪಾಲರು ಮುಖ್ಯಮಂತ್ರಿಗಳಾಗಿ ನೇಮಿಸುತ್ತಾರೆ.
ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ ನಂತರ, ರಾಜ್ಯಪಾಲರು ಜವಾಬ್ದಾರಿಗಳ ಖಾತೆಗಳನ್ನು ಮಂತ್ರಿಮಂಡಲದ ಪ್ರತಿಯೊಂದು ಸದಸ್ಯರುಗಳಿಗೆ ಹಂಚಿಕೊಡುತ್ತಾರೆ. ಸಮುದಾಯಿಕ ಜವಾಬ್ದಾರಿಕೆಗಳ ತತ್ವದಡಿಯಲ್ಲಿ ಎಲ್ಲಾ ಮಂತ್ರಿಗಳು ಶಾಸನಸಭೆಯಲ್ಲಿ ಸಚಿವ ಸಂಪುಟ ಕೈಗೊಂಡ ಯಾವುದೇ ತೀರ್ಮಾನವನ್ನು ಬೆಂಬಲಿಸಬೇಕಾಗುತ್ತದೆ.
ಸರಿಸುಮಾರು 80 ಇಲಾಖೆಗಳು,ವಿಭಾಗಗಳು ಮತ್ತು ಘಟಕಗಳು ಸರಕಾರದ ವ್ಯವಹಾರಗಳನ್ನು ನಿರ್ವಹಿಸುತ್ತವೆ, ಇವುಗಳೊಂದಿಗೆ ಅನೇಕ ಕಾನುನು ಹಾಗು ನೀತಿಗೆ ಸಂಬಂಧ ಪಟ್ಟ ಸಂಸ್ಥೆಗಳು ನಿಶ್ಚಿತ ಉದ್ದೇಶದೊಂದಿಗೆ ರಚಿಸಲ್ಪಟ್ಟಿವೆ, ಅವುಗಳೆಂದರೆ ಬಂದರು ನಿಗಮ, ಸಾರ್ವಜನಿಕ ವಾಯುಯಾನ ಇಲಾಖೆ, ವಲಸೆ ಇಲಾಖೆ, ಜಲ ಮಂಡಳಿ, ವಿಶ್ವವಿಧ್ಯಾಲಯದ ಕಾಲೆಜು ಮಂಡಳಿ, ರಾಷ್ಟ್ರೀಯ ಪಿಂಚಣಿ ಇಲಾಖೆ, ಮತ್ತು ಆರೋಗ್ಯ ವಿಮಾ ಇಲಾಖೆ.
ಕೇಮನ್ ದ್ವೀಪಗಳ ರಕ್ಷಣೆಯು ಸಂಯುಕ್ತ ರಾಜ್ಯದ ಜವಾಬ್ದಾರಿ. ಉತ್ತಮವಾದ ಕೇಮನ್ ದ್ವೀಪಗಳ ಪೊಲೀಸ್ ಸೇವೆಯು ದೇಶದಲ್ಲಿ ರಕ್ಷಣಾ ಸೇವೆಗಳನ್ನು ಒದಗಿಸುತ್ತದೆ. ಕೇಮನ್ ದ್ವೀಪಗಳ ನೈನಿಕ ಕಾಲೇಜಿನ ವಿದ್ಯಾರ್ಥಿ ದಳಗಳು ಮಾರ್ಚ್ 2001ರಲ್ಲಿ ನಿರ್ಮಿಸಲ್ಪಟ್ಟಿವೆ.[ಸೂಕ್ತ ಉಲ್ಲೇಖನ ಬೇಕು]
2000ರಿಂದ ಅಲ್ಲಿದ್ದ ಎರಡು ಪ್ರಮುಖವಾದ ಅಧಿಕೃತ ರಾಜಕೀಯ ಪಕ್ಷಗಳು: ಯುನೈಟೆಡ್ ಡೆಮೊಕ್ರಟಿಕ್ ಪಾರ್ಟಿ (UDP) ಮತ್ತು ಪಿಪಲ್ಸ್ ಪ್ರೊಗ್ರೆಸ್ಸಿವ್ ಮುವ್‌ಮೆಂಟ್ (PPM). ರಾಜಕೀಯಪಕ್ಷಗಳ ಮಧ್ಯ ಪಕ್ಷಾಂತರ ನಡೆಯುತ್ತಿರುವಾಗ ಅನೇಕ ಅಭ್ಯರ್ಥಿಗಳು ಪಕ್ಷೇತರರಾಗಿ ಸಪರ್ಧಿಸಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದ್ದರು.
ತೆರಿಗೆಗಳು
[ಬದಲಾಯಿಸಿ]ಕೇಮಾನಿಯರ ಮತ್ತು ಕೇಮನ್ ದ್ವೀಪಗಳ ಸಂಸ್ಥೆಗಳ ಮೇಲೆ ನೇರ ತೆರಿಗೆವಿದಿಸುವ ಪದ್ಧತಿಯಿಲ್ಲ. ಪರೋಕ್ಷ ತೆರಿಗೆ ಹೇರುವ ಪದ್ಧತಿಯಿಂದ ಬಂದ ಆದಾಯದ ಹೆಚ್ಚಿನ ಬಾಗವನ್ನು ಸರಕಾರ ಸ್ವೀಕರಿಸುತ್ತದೆ. ಆಮದುಮಾಡಿಕೊಂಡ ಸರಕುಗಳಿಂದ 20% ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಬೇಬಿ ಪಾರ್ಮುಲ,ಪುಸ್ತಕಗಳು ಮತ್ತು ಕೆಮೆರಾ ಗಳಂತಹ ಕೆಲವು ವಸ್ತುಗಳನ್ನು ವಿನಾಯಿತಿಸಲಾಗಿದೆ. ಮೋಟಾರುಗಾಡಿಗಳ ಮೇಲಿನ ತೆರಿಗೆಯು ಅವುಗಳ ವರ್ಗ ಮತ್ತು ತಯಾರಿಕಾ ಮಾದರಿಯ ಮೇಲೆ ಆಧಾರವಾಗಿರುತ್ತದೆ; ದುಬಾರಿ ಮಾದರಿಗಳ ಮೇಲಿನ ತೆರಿಗೆಯು 40% ವರೆಗು ಇರಬಹುದು. ದ್ವೀಪಗಳಲ್ಲಿ ಕಾರ್ಯನಡೆಸುತ್ತಿರುವ ಆರ್ಥಿಕ ಸಂಸ್ಥೆಗಳಿಗೆ ಸರಕಾರದಿಂದ ಒಂದೇರೀತಿಯಾದ ಅನುಮತಿಪಡೆಯುವ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತದೆ. ಪ್ರತಿ ಪ್ರವಾಸಿ ದ್ವೀಪಗಳಿಗೆ ಬರಲು ಕೊಡುವ ಕಡಿಮೆ ಶುಲ್ಕದ ಜೊತೆಗೆ 10% ಸರಕಾರದ ತೆರಿಗೆಯನ್ನು ಎಲ್ಲಾ ಪ್ರವಾಸಿ ತಂಗುದಾಣಗಳಿಗೆ ನಿಗದಿಪಡಿಸಲಾಗಿದೆ. [ಸೂಕ್ತ ಉಲ್ಲೇಖನ ಬೇಕು]
ವಿದೇಶಾಂಗ ಸಂಬಂಧಗಳು
[ಬದಲಾಯಿಸಿ]ಕೇಮನ್ ದ್ವೀಪಗಳ ಬಹುತೇಕ ವಿದೇಶ ಸಂಬಂಧಗಳು ಸಂಯುಕ್ತರಾಷ್ಟ್ರದಿಂದ ನಿರ್ವಹಿಸಲ್ಪಡುತ್ತವೆ, ದ್ವೀಪಗಳು UKಗೆ ಸಮುದ್ರದಾಚೆಯ ಪ್ರಾಂತ್ಯಗಳಂತಿದ್ದವು. ಹೀಗಿದ್ದರೂ, ಕೇಮನ್ ದ್ವೀಪಗಳ ಸರಕಾರವು ಯಾವುದೇ ವಿದೇಶಗಳೊಂದಿಗಿನ ಪ್ರಮುಖ ಸಮಸ್ಯಗಳನ್ನು ಬ್ರಿಟನ್‌ದೇಶದ ಸಹಕಾರವಿಲ್ಲದೆ ತಾನಾಗಿಯೇ[ಸೂಕ್ತ ಉಲ್ಲೇಖನ ಬೇಕು], ಪರಿಹರಿಸಿಕೊಳ್ಳುತ್ತಿತ್ತು[ಸೂಕ್ತ ಉಲ್ಲೇಖನ ಬೇಕು]. ಕೇಮನ್ ದ್ವೀಪಗಳು, ಹಿಂದಿನಿಂದಲೂ ಬ್ರಿಟನ್ ಮತ್ತು ಜಮೈಕಜೊತೆ ಉತ್ತಮ ಸಂಬಂಧ ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಜೊತೆಗೆ ಸಂಬಂಧವನ್ನು ಬೆಳಿಸಿಕೊಂಡಿವೆ.
ಕೇಮನ್ ದ್ವೀಪಗಳು ಯಾವುದೇ ಪ್ರಮುಖ ಅಂತರರಾಷ್ಟ್ರೀಯ ಪ್ರತಿಭಟನೆಗಳಿಗೆ ಒಳಗಾಗದಿದ್ದರೂ, ತಮ್ಮ ಪ್ರದೇಶದಲ್ಲಿನ ಮಾದಕಾರಕ ಸರಕು ಸಾಗಾಣಿಕೆ ಮತ್ತು ಮನಿ ಲಾಂಡರಿಂಗ್ ಕೆಲಸಗಳಿಗಾಗಿ ಅವು ಕೆಲವು ವಿಮರ್ಶೆಗಳಿಗೆ ಒಳಗಾಗಬೇಕಾಯಿತು. ಇದನ್ನು ಪತ್ತೆಹಚ್ಚುವ ಪ್ರತ್ನದಲ್ಲಿ, ಈತರಹದ ಚಟುವಟಿಕೆಗಳಿಗೆ ತಮ್ಮ ಸೌಲಭ್ಯಗಳನ್ನು ಕಡಿಮೆ ಗೊಳಿಸುವ ಸಲುವಾಗಿ ಸರಕಾರವು ಯುನೈಟೆಡ್ ಸ್ಟೇಟ್ಸ್‌ಜೊತೆಗೆ 1984ರ ಮಾದಕದ್ರವ್ಯ ಸಂಧಾನ ಮತ್ತು 1986ರ ಅನ್ಯೋನ್ಯ ಕಾನೂನು ಸಹಕಾರ ಸಂಧಾನದಲಿ ಸೇರ್ಪಡೆಯಾಗಿದೆ. ಬಹುತೇಕ ಇತ್ತೀಚಿನ ದಿನಗಳಲ್ಲಿ, ವಹಿವಾಟಿನ ರಹಸ್ಯಗಳನ್ನು ಕಡಿಮೆಮಾಡುವುದು, ಗ್ರಾಹಕರ ಗುರುತಿಸುವಿಕೆಯ ಅವಶ್ಯಕತೆಗಳನ್ನು ಪರಿಚಯಿಸುವುದು, ಮತ್ತು ದಾಖಲೆಗಳನ್ನು ಸಂಗ್ರಹಿಸಿಡುವುದು, ಮತ್ತು ಬ್ಯಾಂಕುಗಳು ವಿದೇಶಿ ಪರಿಶೋಧಕರ ಜೊತೆಯಲ್ಲಿ ಅವಶ್ಯವಾಗಿ ಸಹಕರಿಸುವಂತೆ ಮಾಶುವುದರಗಳಿಂದ ಅವರು ಮನಿ ಲಾಂಡ್ರಿಂಗ್ ವಿರುದ್ದ ಹೋರಾಡಲು ಪ್ರಾರಂಭಿಸಿದರು.
UKನ ಸಮುದ್ರದಾಚೆಯ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಅವುಗಳ ಸ್ಥಾನದಿಂದಾಗಿ, ಕೇಮನ್ ದ್ವೀಪಗಳು ಸಂಯುಕ್ತ ರಾಷ್ಟ್ರಗಳಲ್ಲಾಗಲಿ ಅಥವಾ ಹೆಚ್ಚಿನ ಯಾವುದೆ ಅಂತರರಾಷ್ಟ್ರೀಯ ಸಂಘಟನೆಗಳಲ್ಲಾಗಲಿ ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ. ಏನೇಯಾಗಲಿ, ಕೇಮನ್ ದ್ವೀಪಗಳು ಇನ್ನೂಕೂಡಾ ಕೆಲವು ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ, ಸೆಂಟ್ರಲ್ ಡೆವೆಲಪ್‌ಮೇಂಟ್ ಬ್ಯಾಂಕ್‌ನ ತುಂಬಿದ ಸದಸ್ಯರಾಗಿ[ಸೂಕ್ತ ಉಲ್ಲೇಖನ ಬೇಕು], ಕಾರಿಕೋಮ್ ಮತ್ತು UNESCOನ ಭಾಗಿದಾರ ಸದಸ್ಯರಾಗಿ, ಮತ್ತು ಸಬ್ ಬುರೆಯೊ ಆಪ್ ಇನ್‌ಟೆರ್‌ಪೋಲ್‌ನ ಸದಸ್ಯರಾಗಿ ಭಾಗವಹಿಸುತ್ತಿದ್ದವು.
ಹೊರಗಿನ ಬೆದರಿಕೆಗಳಿಂದ ಕೇಮನ್ ದ್ವೀಪಗಳ ರಕ್ಷಣೆಯು ಸಂಯುಕ್ತ ರಾಜ್ಯದ ಜವಾಬ್ಧಾರಿಯಾಗಿದೆ.
ಮೂಲಭೂತ ಸೌಕರ್ಯ
[ಬದಲಾಯಿಸಿ]ರಸ್ತೆ ಮಾರ್ಗಗಳು
[ಬದಲಾಯಿಸಿ]ಹೆದ್ದಾರಿಗಳು: ಒಟ್ಟು: ಸುಮಾರು 500 ಮೈಲಿಗಳು; paved: ಸುಮಾರು 500 ಮೈಲಿಗಳು
ಬಂದರುಗಳು,ಹಡಗುಸಾಗಾಣಿಕೆ ಮತ್ತು ಲೈಟ್ ಹೌಸ್‌ಗಳು
[ಬದಲಾಯಿಸಿ]ಪೋರ್ಟ್ಸ್ ಮತ್ತು ಹಾರ್ಬರ್ಸ್: ಕೇಮನ್ ಬ್ರಕ್, ಜಾರ್ಜ್ ಟೌನ್ ಮರ್ಚಂಟ್ ಮರೈನ್: ಒಟ್ಟು: 123 ಹಡಗುಗಳು (1,000 GRT ಅಥವಾ ಹೆಚ್ಚು) ಒಟ್ಟು 2,402,058 GRT/3,792,094 ಮೆಟ್ರಿಕ್ ಟನ್ಸ್ ಡೆಡ್‌ವೆಯ್ಟ್ (DWT) ಶಿಪ್ಸ್ ಬೈ ಟೈಪ್: ಬಲ್ಕ್ 22, ಕಾರ್ಗೊ 5, ಕೆಮಿಕಲ್ ಟ್ಯಾಂಕರ್ 31, ಕಂಟೈನರ್ 2, ಲಿಕ್ವೆಫೈಡ್ ಗ್ಯಾಸ್ 1, ಪೆಟ್ರೋಲಿಯಂ ಟ್ಯಾಂಕರ್ 21, ರೆಫ್ರಿಜಿರೇಟೆಡ್ ಕಾರ್ಗೊ 35, ರೋಲ್ ಆನ್/ರೋಲ್ ಆಫ್ 5, ಸ್ಪೆಷಿಯಲೈಸ್ಡ್ ಟ್ಯಾಂಕರ್ 1 ನೋಟ್: ಕೆಲವು ವಿದೇಶಿ ಹಡಗುಗಳು ಕೇಮನ್ ದ್ವೀಪಗಳಲ್ಲಿ ಅನುಕೂಲತೆಯ ಸಂಕೇತಗಳಾಗಿ ದಾಖಲಾಗಿವೆ; ಇವು 11 ದೇಶಗಳ ಹಡಗುಗಳನ್ನು ಒಳಗೊಂಡಿವೆ, ಅವುಗಳೆಂದರೆ:ಗ್ರೀಸ್ 15, US 5, UK 5, ಕಿಪ್ರುಸ್ 2, ನೊರ್ವೇ 3 (2002 ಮುಂತಾವುಗಳು.)
ಈಸ್ಟ್ ಎಂಡ್ ಲೈಟ್ (ಕೆಲವು ಬಾರಿ ಗಾರ್ಲಿಂಗ್ ಬ್ಲಫ್ ಲೈಟ್ ಎಂದು ಕರೆಯಲಾಗುತ್ತದೆ) ಎಂಬುದೊಂದು ಲೈಟ್ ಹೌಸ್ ಕೇಮನ್ ದ್ವೀಪಗಳಲ್ಲಿನ ಗ್ರ್ಯಾಂಡ್ ಕೇಮನ್‌ನ ಪೂರ್ವ ದಿಕ್ಕಿನಲ್ಲಿದೆ. ಈಸ್ಟ್ ಎಂಡ್ ಲೈಟ್ ಹೌಸ್ ಪಾರ್ಕಿನ ಮಧ್ಯ ಭಾಗವೇ ಲೈಟ್ ಹೌಸ್, ಇದನ್ನು ನ್ಯಾಷನಲ್ ಟ್ರಸ್ಟ್ ಪರ್ ದಿ ಕೇಮನ್ ಐಲಾಂಡ್ಸ್ನಿಂದ ನಿರ್ವಹಿಸಲಾಗುತ್ತದೆ; ಕೇಮನ್ ದ್ವೀಪಗಳಲ್ಲಿನ ಲೈಟ್ ಹೌಸ್ ಜಾಗದಲ್ಲಿನ ಮೊದಲ ಜಲಸಂಚಾರ ಸಹಾಯ ಇದಾಗಿದೆ.
ವಾಯು ಸಾರಿಗೆ
[ಬದಲಾಯಿಸಿ]ಪ್ರತಿ ದ್ವೀಪಕ್ಕೆ ಒಂದರಂತೆ, ಕೇಮನ್ ದ್ವೀಪಗಳಲ್ಲಿ ಮೂರು ವಿಮಾನನಿಲ್ದಾಣಗಳಿವೆ.
ಜಾರ್ಜ್ ಪಟ್ಟಣ, ಹಾಗು ಗ್ರ್ಯಾಂಡ್ ಕೇಮನ್, ಹತ್ತಿರದ ವೊವೆನ್ ರೊಬೆರ್ಟ್ಸ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಸೇವೆಯನ್ನು ಪಡೆಯುತ್ತದೆ. ಮೇಮನ್ ಬ್ರಾಕ್ ಗೆರಾಂಡ್ ಸ್ಮಿತ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಸೇವೆಯನ್ನು ಪಡೆಯುತ್ತದೆ ಮತ್ತು ಲಿಟಿಲ್ ಕೇಮನ್ ಎಡ್ವರ್ಡ್ ಬೊಡೆನ್ ವಾಯು ಕ್ಷೇತ್ರದಿಂದ ಸೇವೆಯನ್ನು ಹೊಂದುತ್ತದೆ.
ಕೇಮನ್ ವಾಯುಮಾರ್ಗಗಳು ಕೇಮನ್ ದ್ವೀಪಗಳ ರಾಷ್ಟ್ರಿಯ ಧ್ವಜವನ್ನು ವಯ್ಯುವಂತಹ ವಿಮಾನ ಮಾರ್ಗಗಳು. ಗ್ರ್ಯಾಂಡ್ ಕೇಮನ್‌ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು, ಎಲ್ಲಾ ಮಾರ್ಗಗಳಲ್ಲಿ ಸಾಮಾನು ಸಾಗಿಸುವ ಸೇವೆಯ ಲಭ್ಯತೆಯೊಂದಿಗೆ ಮತ್ತು ಒಡ್ಡಿದ ಮಿತವಾದ ಚಾರ್ಟೆರ್ ಸೇವೆಯೊಂದಿಗೆ, ಇದು ಮುಖ್ಯವಾಗಿ ಅಂತರರಾಷ್ಟ್ರೀಯ ಮತ್ತು ಸ್ವದೇಶಿ ನಿಗದಿಪಡಿಸಿದ ಪ್ರಯಾಣಿಕರ ವಾಹನವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಕಾರ್ಯಾಚರಣೆಗಳು, ಗ್ರ್ಯಾಂಡ್ ಕೇಮನ್‌ನ ವೊವೆನ್ ರೊಬೆರ್ಟ್ಸ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಆಧಾರಿಸಿರುತ್ತವೆ.
ಐಲಾಂಡ್ ಏರ್ ಅನ್ನುವುದು ಕೇಮನ್ ದ್ವೀಪಗಳಲ್ಲಿ ಗ್ರ್ಯಾಂಡ್ ಕೇಮನ್, ಕೆಮನ್ ಬ್ರಾಕ್, ಮತ್ತು ಚಿಕ್ಕ ಕೇಮನ್‌ಗಳ ನಡುವೆ ಸೇವೆಯನ್ನು ಒದಗಿಸುವಂತ ಒಂದು ಚಿಕ್ಕ ವಾಯು ಮಾರ್ಗ.
ಸಂಪರ್ಕ-ಸಂವಹನ
[ಬದಲಾಯಿಸಿ]ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು
[ಬದಲಾಯಿಸಿ]ಕೇಮನ್ ದ್ವೀಪಗಳ ಶಿಕ್ಷಣ ಇಲಾಖೆಯು ರಾಜ್ಯ ಶಾಲೆಗಳನ್ನು ನಡೆಸುತ್ತಿದೆ. ಕೇಮಾನಿಯರ ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಉಚಿತ ಶಿಕ್ಷಣದ ಹಕ್ಕನ್ನು ಪಡೆದಿದ್ದರೆ. ವಿವಿದ ಚರ್ಚ್‌ಗಳು ಮತ್ತು ಖಾಸಗಿ ಸಂಸ್ಥೆಗಳು ಅಮೆರಿಕ ಮತ್ತು ಬ್ರಿಟಿಷ್ ಆಧಾರಿತ ವಿಧ್ಯಾಭಾಸಗಳನ್ನು ಶಿಶುವಿಹಾರದಿಂದ ಪ್ರಾರಂಭವಾಗಿ A ದರ್ಜೆಯವರೆಗು ಒದಗಿಸುವಂತಹ ಅನೇಕ ಖಾಸಗಿ ಶಾಲೆಗಳನ್ನು ನಡೆಸುತ್ತಿವೆ.[clarification needed]
ಕಾಲೇಜ್‌ಗಳು ಮತ್ತು ವಿಶ್ವವಿದ್ಯಾಲಯಗಳು
[ಬದಲಾಯಿಸಿ]ಕೇಮನ್ ದ್ವೀಪಗಳ ವಿಶ್ವವಿದ್ಯಾಲಯದ ಮಹಾವಿದ್ಯಾಲಯವು ಗ್ರ್ಯಾಂಡ್ ಕೇಮನ್ ನಲ್ಲಿದೆ ಮತ್ತು ದ್ವೀಪಗಳಲ್ಲಿ ಸರಕಾರದಿಂದ ನಡೆಸಲ್ಪಟ್ಟಿರುವ ವಿಶ್ವವಿದ್ಯಾಲಯವು ಇದು ಒಂದೇ ಆಗಿದೆ.[೩೦] ವಿಶ್ವವಿದ್ಯಾಲಯದ ಮಹಾವಿದ್ಯಾಲಯವು ಗ್ರ್ಯಾಂಡ್ ಕೇಮನ್‌ನ ಜಾರ್ಜ್ ಪಟ್ಟಣದಲ್ಲಿದೆ. ಕೇಮನ್ ದ್ವೀಪಗಳ ಅಂತರರಾಷ್ಟ್ರೀಯ ಮಹಾವಿದ್ಯಾಲಯವು, ಜಾರ್ಜ್ ಪಟ್ಟಣದ ಪೂರ್ವದಿಕ್ಕಿನ ಸರಿಸುಮಾರು ಏಳು ಮೈಲುಗಳಷ್ಟಿನ (11 km) ಗ್ರ್ಯಾಂಡ್ ಕೇಮನ್‌ನ ನ್ಯುಲಾಂಡ್‌ನಲ್ಲಿದೆ. ಮಹಾವಿದ್ಯಾಲಯವು 1970ರಲ್ಲಿ ಸ್ಥಾಪಿಸಲಾಗಿದೆ ಮತ್ತು ಇದು ಬ್ಯಾಚುಲರ್ಸ್ ಮತ್ತು ಪೋಸ್ಟ್ ಗ್ರಾಜುಯೇಟ್ ಪದವಿಗಳನ್ನು ಒದಗಿಸುತ್ತದೆ.[೩೧] ವೈದ್ಯಕೀಯ ಶಾಲೆ ಮತ್ತು ಪಶುವೈದ್ಯಕೀಯ ಶಾಲೆಗಳನ್ನು ಒಳಗೊಂಡ ಸೇಂಟ್ ಮ್ಯಾಥ್ಯೂ ವಿಶ್ವವಿದ್ಯಾಲಯದ ಉಗಮಸ್ಥಾನವು ಕೂಡಾ ಗ್ರ್ಯಾಂಡ್ ಕೇಮನ್.[೩೨] UK ದಲ್ಲಿನ ಲಿವೆರ್‌ಪೂಲ್ ವಿಶ್ವವಿದ್ಯಾಲಯದ ವಿಭಾಗವಾದ ಕೇಮನ್ ದ್ವೀಪಗಳ ಕಾನೂನು ಶಾಲೆಯು ಕೂಡಾ ಗ್ರ್ಯಾಂಡ್ ಕೇಮನ್‌ನಲ್ಲಿದೆ.[೩೩] ಜಾರ್ಜ್ ಪಟ್ಟಣದಲ್ಲಿರುವ, ಕಾನೂನು ಶಾಲೆಯು 1982 ರಿಂದ ಕಾರ್ಯ ನಿರ್ವಹಿಸುತ್ತಿದೆ.
ಕೇಮನ್ ದ್ವೀಪಗಳ ಸಾಮಜಿಕ ಸೇವೆಗಳ ಮಹಾವಿದ್ಯಾಲಯವು, ಸಾಮಾಜಿಕ ಸೇವೆಯಡಿಯಲ್ಲಿ ಕೇಮನ್ ದ್ವೀಪಗಳ ಸರಕಾರದಿಂದ ವ್ಯವಸ್ಥಿಸಲ್ಪಟ್ಟ ಒಂದು ಶಾಖೆಯು, ಕೂಡಾ ಗ್ರ್ಯಾಂಡ್ ಕೇಮನ್‌ನಲ್ಲಿದೆ. ಇದು ಕೇಮನ್ ದ್ವೀಪಗಳ ವಿಶ್ವವಿಧ್ಯಾಲಯದ ಕಾಲೆಜು ಜೊತೆಯಲ್ಲಿಯೇ ಕಾಲೇಜು ಆವರಣದ ದಕ್ಷಿಣ ದಿಕ್ಕಿನ ಒಂದು ಕಟ್ಟಡದಲ್ಲಿತ್ತು, CICSCನ ಮುಖ್ಯ ಉದ್ದೇಶವು ವಿಶ್ವವಿದ್ಯಾಲಯದ ಪಧವಿಗಳನ್ನು ಒದಗಿಸುವುದು ಮತ್ತು ವಿವಿದಧ ರೀತಿಯ ಶಿಕ್ಷಣ ಘಟಕಗಳನ್ನು ಮುಂದುವರೆಸುವುದು ಆಗಿತ್ತು. ಮುಂದೆ, ಕಾಲೇಜನ್ನು ಸರಕಾರದ ಸಂಶೋಧನಾ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು 2007ರ ಶರತ್ಕಾಲದಲ್ಲಿ ಆರಂಭವಾಗಿದೆ.
ಆರೋಗ್ಯ ಮತ್ತು ಸಾರ್ವಜನಿಕ ಸುರಕ್ಷತೆಗಳು
[ಬದಲಾಯಿಸಿ]ಜಾರ್ಜ್ ಟೌನ್‌ನಲ್ಲಿ ಎರಡು ಆಸ್ಪತ್ರೆಗಳಿವೆ, ಸರ್ಕಾರವು ಜಾರ್ಜ್ ಟೌನ್ ಆಸ್ಪತ್ರೆಯನ್ನು ನಡೆಸುತ್ತದೆ ಮತ್ತು ಚಿಕ್ಕ , ಖಾಸಗಿಯ ಕ್ರಿಸ್ಸೀ ಟೊಮಿಲ್ಸನ್ ಮೆಮೊರಿಯಲ್ ಮೆಮೊರಿಯಲ್. ಅದರ ಜೊತೆಯಲ್ಲಿ, ಕೇಮನ್ ಬ್ರಕ್‌ನಲ್ಲಿ ಹದಿನೆಂಟು- ಹಾಸಿಗೆ ಸೌಲಭ್ಯವಿರುವ ಫೆಯಿತ್ ಆಸ್ಪತ್ರೆ ಇದೆ. ಲಿಟಲ್ ಕೇಮನ್‌ನಲ್ಲಿ ಸರ್ಕಾರವು ಒಂದು ಸೆಟಲೈಟ್ ಕ್ಲಿನಿಕ್ ಅನ್ನು ನಡೆಸುತ್ತದೆ.
ಖಾಸಗಿ ಇನ್ಷೂರೆನ್ಸ್ ಸಂಸ್ಥೆಗಳು ಹಾಗೂ ಸರ್ಕಾರ ನಡೆಸುವ (CINICO)ನಿಂದ ಆರೋಗ್ಯ ವಿಮೆ ಮಾಡಿಸಲಾಗುತ್ತದೆ. ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಾನೂನು ಪ್ರಕಾರವಾಗಿ ಆರೋಗ್ಯ ವಿಮೆಯನ್ನು ಒದಗಿಸಬೇಕಾಗುತ್ತದೆ (ಉದ್ಯೋಗದಲ್ಲಿರುವವರು 50% ಪ್ರೀಮಿಯಮ್ ಕಟ್ಟಿದರೂ ಕಟ್ಟಬಹುದು). ಪೂರ್ಣ-ಸಮಯದ ನೌಕರರು US$10ರಷ್ಟು ಪ್ರತಿ ತಿಂಗಳು "ಇಂಡಿಜೆಂಟ್ ಫಂಡ್" ಎಂದು ಸಲ್ಲಿಸುತ್ತಾರೆ, ಇದು ನಿರುದ್ಯೋಗಿಗಳಿಗೆ, ಹಿರಿಯರಿಗೆ ಮತ್ತು ಹಣದ ಅವಶ್ಯಕತೆ ಹೊಂದಿರುವ ಇತರೆ ವರ್ಗಗಳ ಚಿಕಿತ್ಸೆ ವೆಚ್ಚವಾಗಿ ಬಳಕೆಯಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಜನವರಿ 2010ರಂತೆ, ದ್ವೀಪಗಳಲ್ಲಿ ಕಾರ್ಡಿಯಕ್ ಕ್ಯಾಥೆಟೆರೈಸೇಷನ್ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಬಹಳಷ್ಟು[who?] ಜನರು ಯೋಚಿಸುವಂತೆ ಜನಸಂಖ್ಯೆಯ ಹೆಚ್ಚಳವು ಈ ವಿಧಾನಗಳನ್ನು ಆಧಾರಿಸಲು ಕಾರಣವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಜಾರ್ಜ್ ಟೌನ್ ಆಸ್ಪತ್ರೆಯಲ್ಲಿ ಕ್ಯಾತರೈಸೇಶನ್ ಲ್ಯಾಬ್ ಅನ್ನು ಸ್ಥಾಪಿಸಲು ಹಲವಾರು ಪ್ರಯತ್ನಗಳು ನಡೆದಿವೆ.[ಸೂಕ್ತ ಉಲ್ಲೇಖನ ಬೇಕು] ದ್ವೀಪಗಳಲ್ಲಿ ರೆಟಿನಲ್ ಸರ್ಜರಿ ವ್ಯವಸ್ಥೆಯ ತುರ್ತು ಅವಶ್ಯಕತೆ ಇದೆ.[ಸೂಕ್ತ ಉಲ್ಲೇಖನ ಬೇಕು] ಇತ್ತೀಚೆಗೆ[when?], ಹಣಕಾಸಿನ ತೊಂದರೆಯಿದ್ದು ಮುಖ್ಯ ಪ್ರದೇಶಕ್ಕೆ ಹೋಗಿ ಸರಿಯಾದ ಚಿಕಿತ್ಸೆ ಪಡೆಯದೆ ಇರುವ ನಿವಾಸಿಗಳ ಕಣ್ಣುಗಳು ಅತಿಯಾದ ಡಯಾಬಿಟಿಕ್ ಕಣ್ಣಿನ ದೃಷ್ಟಿ ದೋಷಗಳಿಂದ ಅಥವಾ ರೆಟಿನಲ್ ಡಿಟ್ಯಾಚ್ಮೆಂಟ್‌ಗಳಿಂದ ಕುರುಡಾಗಿವೆ.[ಸೂಕ್ತ ಉಲ್ಲೇಖನ ಬೇಕು] ಜುಲೈ 2007ರಲ್ಲಿ ಕ್ರಿಸ್ಸೀ ಟೊಮಿಲಿನ್ಸನ್ ಮೆಮೊರಿಯಲ್ ಹಾಸ್ಪಿಟಲ್‌ನಲ್ಲಿ, ಹುರ್ರಿಕೇನ್ ಇವಾನನಿಂದ ಹಾಳಾದ ಒಂದು ಘಟಕದ ಬದಲಿಯಾಗಿ ಒಂದು MRI ಘಟಕವನ್ನು ಸ್ಥಾಪಿಸಲಾಯಿತು. ಆಗಸ್ಟ್ 2009ರಲ್ಲಿ, ಒಂದು ಹೊಸ ಸ್ಟ್ಯಾಂಡ್ ಅಲೋನ್ ಓಪನ್ MRI ಸೌಲಭ್ಯವನ್ನು ತೆರೆಯಲಾಯಿತು. ಈ ಕೇಂದ್ರವು MRI, CT, X-Ray ಮತ್ತು DEXA (ಮೂಳೆ ಸಾಂಧ್ರತೆ) ಸ್ಕ್ಯಾನಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ ಕಟ್ಟಡದಲ್ಲಿರುವ ಇನ್ನೊಂದು ವ್ಯವಸ್ಥೆಯೆಂದರೆ ಹಾರ್ಟ್ ಹೆಲ್ತ್ ಸೆಂಟರ್, ಇದು ಅಲ್ಟ್ರಾ ಸೌಂಡ್, ನ್ಯೂಕ್ಲಿಯರ್ ಮೆಡಿಸಿನ್, ಎಕೊಕಾರ್ಡಿಯಾಲಜಿ ಮತ್ತು ಕಾರ್ಡಿಯಕ್ ಸ್ಟ್ರೆಸ್ ಟೆಸ್ಟಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ.[೩೪]
ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಅವಶ್ಯಕತೆಯಿರುವ ಡೈವರ್‌ಗಳಿಗೆ ಮತ್ತು ಇತರರಿಗಾಗಿ, ಗ್ಯಾಂಡ್ ಕೇಮನ್‌ನ ಜಾರ್ಜ್ ಟೌನ್ ಹಾಸ್ಪಿಟಲ್‌ನಲ್ಲಿ ಕೇಮನ್ ಹೈಪರ್‌ವೇರಿಕ್ ಸರ್ವಿಸಸ್ ನಡೆಸುವ ಇಬ್ಬರು ವ್ಯಕ್ತಿಗಳ ರಿಕಂಪ್ರೆಶನ್ ಚೇಂಬರ್ ಸೌಲಭ್ಯ ಇದೆ. ಇದೇ ಸಂಸ್ಥೆಯು ಕೇಮನ್ ಬ್ರಕ್‌ನ ಫೆಯ್ತ್ ಹಾಸ್ಪಿಟಲ್‌ನಲ್ಲಿ ಒಂದು ಹೈಪರ್‌ಬೇರಿಕ್ ಘಟಕವನ್ನು ನಿರ್ಮಿಸಿದೆ.
ದ್ವೀಪಗಳು ತಮ್ಮದೇ ಆದ ಪೋಲೀಸ್ ಪಡೆ, ರಾಯಲ್ ಕೇಮನ್ ಐಲ್ಯಾಂಡ್ಸ್ ಪೋಲೀಸ್ ಸರ್ವಿಸ್ (RCIP)ಯನ್ನು ಹೊಂದಿದೆ. RCIPಯು ನಿಯಮಿತ ಆಫ್-ಶೋರ್ ಮೆರೈನ್ ಗಸ್ತುದಳವನ್ನು ನಿರ್ವಹಿಸುತ್ತದೆ ಮತ್ತು ಗ್ರ್ಯಾಂಡ್ ಕೇಮನ್ ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ನ ಪೋರ್ಟ್ ಆಫ್ ಕಾಲ್ ಆಗಿದೆ.
ಕ್ರೀಡೆ
[ಬದಲಾಯಿಸಿ]ಫುಟ್‌ಬಾಲ್ ಇಲ್ಲಿನ ಹೆಚ್ಚು ಜನಪ್ರಿಯ ಮತ್ತು ರಾಷ್ಟ್ರೀಯ ಕ್ರೀಡೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ರಗ್ಬಿ ಒಂದು ಅಭಿವೃದ್ಧಿ ಹೊಂದುತ್ತಿರುವ ಕ್ರೀಡೆ, ಮತ್ತು ತನ್ನದೇ ಆದ ರಾಷ್ಟ್ರೀಯ ಪುರುಷರ ತಂಡ, ಮಹಿಳೆಯರ ತಂಡ, ಮತ್ತು ಸೆವೆನ್ಸ್ ತಂಡಗಳನ್ನು ಹೊಂದಿದೆ. ಕೇಮನ್ ದ್ವೀಪಗಳ 20ಕ್ಕಿಂತ ಕಡಿಮೆ ರಗ್ಬಿ ತಂಡವು 2009ರ ಕೀನ್ಯಾದಲ್ಲಿ JWRT ಗುಣಮಟ್ಟದ ಅರ್ಹತೆ ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು]
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, FIFA, ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಮತ್ತು ಪ್ಯಾನ್ ಅಮೇರಿಕನ್ ಸ್ಪೋರ್ಟ್ಸ್ ಆರ್ಗನೈಜೇಷನ್‌ಗಳಲ್ಲಿ ಕೇಮನ್ ದ್ವೀಪ ಸದಸ್ಯತ್ವ ಪಡೆದಿದೆ ಮತ್ತು ಎರಡು ವರ್ಷಕ್ಕೊಮ್ಮೆ ನಡೆಯುವ ಐಲ್ಯಾಂಡ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಫ್ಲ್ಯಾಗ್ ಫುಟ್‌ಬಾಲ್ (CIFFA) ಪುರುಷರ, ಮಹಿಳೆಯರ ಮತ್ತು ಇಬ್ಬರ ಲೀಗ್‌ಗಳಿವೆ.
ಇತರೆ ಸಂಘಟಿತ ಕ್ರೀಡಾ ಲೀಗ್‌ನಲ್ಲಿ ಸಾಫ್ಟ್‌ಬಾಲ್, ಬೀಚ್ ವಾಲಿಬಾಲ್, ಗೇಲಿಕ್ ಫುಟ್‌ಬಾಲ್ ಮತ್ತು ಅಲ್ಟಿಮೇಟ್ ಫ್ರಿಸ್ಬೀ ಕೂಡ ಸೇರಿವೆ.
21ನೆಯ ಶತಮಾನದಲ್ಲಿ, ಯುವಕರಲ್ಲಿ ಸ್ಕೇಟ್‌ಬೋರ್ಡಿಂಗ್ ಬಹಳಷ್ಟು ಜನಪ್ರಿಯವಾದ ಆಟವಾಗಿತ್ತು.
2010 ವಿಂಟರ್ ಒಲಿಂಪಿಕ್ ಗೇಮ್ಸ್ ಸಮಯದಲ್ಲಿ, ಡವ್ ಟ್ರಾವರ್ಸ್ ತಂಡವು ವಿಂಟರ್ ಒಲಿಂಪಿಕ್ ಗೇಮ್ಸ್‌ನಲ್ಲಿ ಕೇಮನ್ ದ್ವೀಪದಿಂದ ಪ್ರತಿನಿಧಿಸಿತ್ತು, ಆಲ್ಪೈನ್ ಸ್ಕೀಯಿಂಗ್ ಇವೆಂಟ್‌ಗಳಲ್ಲಿ ಭಾಗವಹಿಸಿತ್ತು.
ಸಂಗೀತ
[ಬದಲಾಯಿಸಿ]ಕಾನ್ಸರ್ಟ್ ಬ್ಯಾಂಡ್‌ಗಳಿಂದ ಸ್ಟೀಲ್ ಪ್ಯಾನ್ ಬ್ಯಾಂಡ್‌ಗಳವರೆಗೆ ಹಲವಾರು ಬ್ಯಾಂಡ್‌ಗಳಿಗೆ ಕೇಮನ್ ದ್ವೀಪಗಳು ತವರಾಗಿವೆ. ಕೇಮನ್‌ನಲ್ಲಿ ನಿರ್ಮಿಸಿರುವಂತಹ ಸಂಗೀತದ ಆಧುನಿಕ ಶೈಲಿಗಳೆಂದರೆ soca, rap ಮತ್ತು R&B.
’ಕಿಚನ್ ಬ್ಯಾಂಡ್’ ಸಾಂಪ್ರದಾಯಿಕ ಕೇಮಾನಿಯನ್ ಸಂಗೀತವಾಗಿದೆ, ಇದನ್ನು ಪಿಟೀಲು, ಡ್ರಮ್, ಚಮಚೆ ಮತ್ತು ಬಾಟಲ್, ವಾಶ್‌ಬೋರ್ಡ್ ಮತ್ತು ಹಾರ್ಮೋನಿಯಮ್ ಅಥವಾ ಗಿಟಾರ್ ಬಳಸಿ ರಚಿಸಲಾಗಿದೆ. ಪ್ರಸ್ತುತ ಒಂದು ಕೆಮಾನಿಯನ್ ಬ್ಯಾಂಡ್ ಕಿಚನ್ ಬ್ಯಾಂಡ್ ಹೆಸರಲ್ಲಿ ಸಾಂಸ್ಕೃತಿಕ ಆಚರಣೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ, ಅವೆಂದರೆ ಕೇಫೆಸ್ಟ್ ಅಥವಾ ಪೈರೇಟ್ ವಾರದಲ್ಲಿ ಹೆರಿಟೇಜ್ ದಿನಗಳು. ಈ ತರಹದ ಸಂಗೀತವು ಯಾವಾಗಲೂ ಮುಂಚೂಣಿಯಲ್ಲಿರುತ್ತವೆ, ಮತ್ತು ದೇಶದ ಮತ್ತು ಕ್ಯಾಲಿಪ್ಸೊ ಸಂಗೀತಗಳ ಜೊತೆ ಹೋಲಿಕೆಯನ್ನು ಹೊಂದಿವೆ.
ಒಂದು ರಾಷ್ಟ್ರೀಯ ಬ್ಯಾಂಡ್ ಕೂಡಾ ಇದೆ, ಇದು ಕಾನ್ಸರ್ಟ್ ಬ್ಯಾಂಡ್ ಸಂಗೀತಗಾರರನ್ನು ಒದಗಿಸುತ್ತದೆ. ವಿಶೇಷ ಕಾರ್ಯಕ್ರಮಗಳಲ್ಲಿ ಈ ಬ್ಯಾಂಡ್ ಕಾರ್ಯ ನಿರ್ವಹಿಸುತ್ತದೆ, ಮತ್ತು ಯಾವ ರೀತಿಯ ಸಂಗೀತವನ್ನಾದರೂ ಇದು ನಡೆಸಿಕೊಡುತ್ತದೆ.
ಇತರೆ ಹಲವಾರು ಹಾಡುವ ಬ್ಯಾಂಡ್‌ಗಳು ನಿಯಮಿತವಾಗಿ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತವೆ, ಮತ್ತು ಸಾಮಾನ್ಯವಾಗಿ ಹಲವಾರು ಸಂಗೀತ ವಿಧಗಳನ್ನು ನುಡಿಸುತ್ತವೆ.
ಕೇಮನ್ ದ್ವೀಪಗಳಲ್ಲಿ ಮೂರು ಸ್ಟೀಲ್ ಪ್ಯಾನ್ ಬ್ಯಾಂಡ್‌ಗಳೂ ಇವೆ – ಪನೋರಾಮರ್ಸ್, ಪ್ಯಾಂಡೆಮಿಕ್ಸ್ ಮತ್ತು ಪ್ಯಾಂಡೆಮೋನಿಯಮ್. ಪನೋರಾಮರ್ಸ್ ತುಂಬಾ ಹಳೆಯದು, ಎರ್ಲ್ ಲಾಪಿಯೆರ್ರೆಯಿಂದ ರಚಿಸಲ್ಪಟ್ಟಿದೆ, ಇವರು ಕೆನಡಾದ ಟೊರೊಂಟೊನಲ್ಲಿರುವ ಆಫ್ರೋಪ್ಯಾನ್ ಕೂಡಾ ಸಂಘಟಿಸಿದ್ದಾರೆ. ಎಲ್ಲಾ ಬ್ಯಾಂಡ್‌ಗಳು ಸಾಮಾನ್ಯವಾಗಿ ಕೆರೆಬಿಯನ್ ಮೂಲದ, ಆದರೆ ಎಲ್ಲಾ ಪ್ರೇಕ್ಷಕ ಸದಸ್ಯರಿಗೆ ವೈವಿದ್ಯಮಯ ಸಂಗೀತವನ್ನು ಪ್ರದರ್ಶಿಸುತ್ತವೆ.
ಸಮೂಹ ಮಾಧ್ಯಮ
[ಬದಲಾಯಿಸಿ]ಕೇಮನ್ ದ್ವೀಪಗಳಲ್ಲಿ ಚಿತ್ರೀಕರಣಗೊಂಡ ಪ್ರಮುಖ ಚಲನಚಿತ್ರಗಳಲ್ಲಿ: ದಿ ಫರ್ಮ್ , ಹ್ಯಾವೆನ್ ಮತ್ತು ಕೇಮನ್ ವೆಂಟ್ . ಕೇಮನ್ ದ್ವೀಪಗಳ ಚಲನಚಿತ್ರ ಆಯೋಗವು ಕಾನೂನಿನ ಅಧಿಕಾರದೊಂದಿಗೆ ಚಲನಚಿತ್ರ ನಿರ್ಮಾಣದಲ್ಲಿ ಸಹಕಾರ ನೀಡುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ Background Note: Cayman Islands
- ↑ "About Cayman". Archived from the original on 2020-08-07. Retrieved 2010-05-28.
- ↑ "Tax me if you can. Haven or Havoc?".
{{cite web}}
: Cite has empty unknown parameters:|month=
and|coauthors=
(help) - ↑ Zayas 1914
- ↑ Grand Cayman's history with tropical systems
- ↑ Regions and territories: Cayman Islands. BBC ವಾರ್ತೆಗಳು.
- ↑ "CIA - The World Factbook - Cayman Islands". Archived from the original on 2016-02-13. Retrieved 2008-06-23.
- ↑ "CIA - The World Factbook - Rank Order - GDP - per capita (PPP)". Archived from the original on 2013-04-24. Retrieved 2008-06-23.
- ↑ "The History of Cayman Islands Currency". Archived from the original on 2007-08-22. Retrieved 2010-05-28.
- ↑ "This week's dream: diving and lazing on Little Cayman", (29 ನವೆಂಬರ್ 2008) ದಿ ವೀಕ್ ಪು. 39, ಡೆನ್ನಿಸ್ ಪಬ್ಲಿಷರ್ಸ್, UK
- ↑ ಸ್ಕಿಪ್ ಹಾರ್ಪರ್, "Adventuring in Cayman Brac", ಹೆಡ್ ಅಂಡ್ ಟೋ ಪಬ್ಲಿಷರ್ಸ್, ಫೋರ್ಟ್ ಕಾಲಿನ್ಸ್, ಕೊಲೊರಾಡೊ, USA, 2001, ISBN 0-9640645-2-0
- ↑ National Trust For the Cayman islands
- ↑ ೧೩.೦ ೧೩.೧ United States Government Accountability Office (2008). GAO Report to the Chairman and Ranking Member, Committee on Finance, U.S. ಸೆನೇಟ್, ಪು. 7.
- ↑ Places in the sun. (2007, 24 ಫೆಬ್ರವರಿ). ದಿ ಎಕನಾಮಿಸ್ಟ್, ಸಂ. 382 (8517 suppl.), 3-5.
- ↑ Cayman Islands Monetary Authority (11 ಜುಲೈ 2008), Regulatory Framework: Statistics Archived 2009-07-18 ವೇಬ್ಯಾಕ್ ಮೆಷಿನ್ ನಲ್ಲಿ.. 25 ಜುಲೈ 2008 ರಿಂದ ಮರುಸಂಪಾದಿಸಲಾಗಿದೆ.
- ↑ ೧೬.೦ ೧೬.೧ ೧೬.೨ Bringing Cayman's Mutual Funds Law up to speed Archived 2009-02-15 ವೇಬ್ಯಾಕ್ ಮೆಷಿನ್ ನಲ್ಲಿ. (1 ಅಕ್ಟೋಬರ್ 2005). ಹೆಡ್ಗೆ ವೀಕ್.
- ↑ CayCompass.com (29 ಜುಲೈ 2008), 10,000–plus funds registered in CI Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ೧೮.೦ ೧೮.೧ ನತಾಶಾ ಎಲ್. ರೊಗೊಫ್ (n.d.), Haven or havoc?.
- ↑ ಆಪಲ್‌ಬೈ, Guide to the EU Savings Directive: Its relevance for Cayman Islands Investment Funds Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಕೇಮನ್ ದ್ವೀಪಗಳ ಹಣಕಾಸು ಸೇವೆಗಳು (n.d.). International Cooperation Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ..
- ↑ 2009ರ ಮೇ 5ರಂದು ಟ್ಯಾಕ್ಸ್ ಹ್ಯಾವನ್ಸ್ ಮೇಲೆ ಒಬಾಮಾರ ಭಾಷಣ [೧] Archived 2011-07-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ CIFSA ಅಧ್ಯಕ್ಷ ಒಬಾಮಾಗೆ ಬರೆದ ತೆರೆದ ಪತ್ರ, [೨] Archived 2013-06-26 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "Work Permit Stats". Archived from the original on 2009-09-17. Retrieved 2010-05-28.
- ↑ "C.I. Government Website - Entry Requirements for Work Permits". Archived from the original on 2022-08-11. Retrieved 2022-11-23.
- ↑ "Online Employment Resources". Archived from the original on 2011-08-10. Retrieved 2010-05-28.
- ↑ Row brews over rollover Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ., 22 ಜನವರಿ 2007 , ಕೇಮನ್ ನೆಟ್ ವಾರ್ತೆಗಳು.
- ↑ Government takes up permit issue Archived 2007-09-14 ವೇಬ್ಯಾಕ್ ಮೆಷಿನ್ ನಲ್ಲಿ., ಸಂಪಾದಕೀಯ, 5 ಮಾರ್ಚ್ 2006, ಕೆಮೇನಿಯನ್ ಕಾಂಪಾಸ್.
- ↑ "Cayman Islands - Cay Compass News Online - Rollover for civil servants". Archived from the original on 2008-03-06. Retrieved 2008-06-23.
- ↑ "Cayman Observer". Archived from the original on 2017-01-31. Retrieved 2008-06-23.
- ↑ University College Cayman Islands: About us Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ..
- ↑ International College of the Cayman islands: Programs of Study Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ..
- ↑ St. Matthew's University.
- ↑ Cayman Islands law School Archived 2012-01-14 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "ಆರ್ಕೈವ್ ನಕಲು". Archived from the original on 2016-05-17. Retrieved 2010-05-28.
- "Cayman Islands". 2005 CIA World Factbook. Archived from the original on 13 ಫೆಬ್ರವರಿ 2016. Retrieved 4 July 2005.
{{cite web}}
: Unknown parameter|dateformat=
ignored (help) Originally from the CIA World Factbook 2000. - "Non-Self-Governing Territories listed by General Assembly in 2002". United Nations Special Committee of 24 on Decolonization. Archived from the original on 3 ಡಿಸೆಂಬರ್ 2008. Retrieved 4 July 2005.
{{cite web}}
: Unknown parameter|dateformat=
ignored (help) - Michael Craton and the New History Committee (2003). Founded upon the Seas: A History of the Cayman Islands and Their People. Ian Randle Publishers, Kingston, Jamaica. ISBN 0-9729358-3-5.
- Roberts, H. H. (1994). Reefs and lagoons of Grand Cayman (in "Monographiae biologicae", ed. Brunt, MA and Davies, JE). Kluwer Academic Publishers, Boston, MA. ISBN 0-7923-2462-5.
- Alfredo Zayas y Alfonso, (1914). Lexografía Antillana. El Siglo XX Press, Havana.
{{cite book}}
: CS1 maint: extra punctuation (link)
ಹೊರಗಿನ ಕೊಂಡಿಗಳು
[ಬದಲಾಯಿಸಿ]Find more about Cayman Islands at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- Cayman Islands Government
- Wikimedia Atlas of Cayman Islands
- ವಿಕಿಟ್ರಾವೆಲ್ ನಲ್ಲಿ ಕೇಮನ್ ದ್ವೀಪಗಳು ಪ್ರವಾಸ ಕೈಪಿಡಿ (ಆಂಗ್ಲ)
- Cayman Islands Film Commission Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.
- Cayman Islands entry at The World Factbook
- Cayman Islands UCB Libraries GovPubs ಯಿಂದ
- ಕೇಮನ್ ದ್ವೀಪಗಳು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- CS1 errors: empty unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Pages with unresolved properties
- Country articles requiring maintenance
- Pages using infobox country with unknown parameters
- Articles with hatnote templates targeting a nonexistent page
- Vague or ambiguous time from April 2010
- Articles with invalid date parameter in template
- Articles with unsourced statements from April 2010
- Articles with unsourced statements from September 2009
- Articles with unsourced statements from December 2008
- CS1 errors: empty citation
- Articles with unsourced statements from June 2009
- Articles with unsourced statements from July 2009
- Articles with unsourced statements from January 2009
- Wikipedia articles needing clarification from January 2010
- Articles with unsourced statements from December 2009
- All articles with specifically marked weasel-worded phrases
- Articles with specifically marked weasel-worded phrases from December 2009
- Pages containing citation needed template with deprecated parameters
- Vague or ambiguous time from December 2009
- Articles with unsourced statements from May 2009
- Articles with unsourced statements from October 2009
- CS1 errors: unsupported parameter
- CS1 maint: extra punctuation
- Articles with Open Directory Project links
- ಕೇಮನ್ ದ್ವೀಪಗಳು
- ಸಾಗರೋತ್ತರ ಬ್ರಿಟಿಷ್ ಪ್ರದೇಶಗಳು
- ಕೆರೆಬಿಯನ್ ದೇಶಗಳು
- ಉತ್ತರ ಅಮೇರಿಕಾದ ಡಿಪೆಂಡೆಂಟ್ ಟೆರಿಟರೀಸ್
- ಗ್ರೇಟರ್ ಆಂಟಿಲ್ಲೆಸ್
- ಯೂರೋಪಿಯನ್ ಯೂನಿಯನ್ನ ವಿಶೇಷ ಟೆರಿಟರೀಸ್
- ಇಂಗ್ಲೀಷ್-ಮಾತನಾಡುವ ರಾಷ್ಟ್ರಗಳು ಮತ್ತು ಪ್ರಾಂತಗಳು
- 1821ರಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರಾಂತ್ಯಗಳು
- ದ್ವೀಪಗಳ ದೇಶಗಳು
- ಭೂಗೋಳ