ವಿಷಯಕ್ಕೆ ಹೋಗು

ಕಾಸಾಬ್ಲಾಂಕಾ

Coordinates: 33°32′N 7°35′W / 33.533°N 7.583°W / 33.533; -7.583
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

Casablanca
الدار البيضاء   (Arabic)
Anfa, کازابلانکا
ad-Dār al-Bayḍāʼ / Casablanca
From top to bottom, left to right: Hassan II Mosque, Twin Center, Casablanca Technopark, El Hank Lighthouse, Stade Mohammed V, Cathédrale Sacré-Coeur, Place des Nations Unies, Parc de la Ligue Arabe.
From top to bottom, left to right: Hassan II Mosque, Twin Center, Casablanca Technopark, El Hank Lighthouse, Stade Mohammed V, Cathédrale Sacré-Coeur, Place des Nations Unies, Parc de la Ligue Arabe.
Nickname: 
Casa
CountryMorocco
administrative regionGrand Casablanca
First settled7th century
reconstructed1756
Government
 • MayorMohammed Sajid
Area
 • City೩೨೪ km (೧೨೫ sq mi)
 • Urban
೧,೬೧೫ km (೬೨೪ sq mi)
Population
 (2010 est.)
 • City೫೫,೫೦,೦೦೦
 • Density೯,೧೩೨/km (೨೩,೬೫೦/sq mi)
 • Urban
೭೫,೦೦,೦೦೦ (Grand Casablanca)
 • Urban density೨,೩೮೩/km (೬,೧೭೦/sq mi)
Time zoneUTC+0 (WET)
 • Summer (DST)UTC+1 (WEST)
Postal code
20000-20200
Websitehttp://www.casablanca.ma/

ಕಾಸಾಬ್ಲಾಂಕಾ (ಅರಾಬಿಕ್‌: الدار البيضاء "ಅದ್‌ ದಾರ್‌ ಅಲ್‌-ಬಾಯ್ದಾ (ad-Dār al-Bayḍā)ʼ", ಅಮಝಿಘ್‌ ಭಾಷೆಯಲ್ಲಿ ಮೂಲ ಹೆಸರು: ಅನ್ಫಾ /ಚಿತ್ರ:Anfa picture.jpg ) ಇದು ಮೊರೊಕೊ ದೇಶದ ಪಶ್ಚಿಮದಲ್ಲಿ ಅಟ್ಲಾಂಟಿಕ್‌ ಸಾಗರತೀರದಲ್ಲಿರುವ ಒಂದು ನಗರ. ಇದು ಗ್ರ್ಯಾಂಡ್‌ ಕಾಸಾಬ್ಲಾಂಕಾ ಪ್ರದೇಶದ ರಾಜಧಾನಿ.

5,500,000 [೧] ಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ಕಾಸಾಬ್ಲಾಂಕಾ ಮೊರೊಕೊ ದೇಶದ ಅತಿದೊಡ್ಡ ನಗರ ಹಾಗೂ ಪ್ರಮುಖ ಬಂದರು. ಇದು ಮಾಘ್ರೆಬ್‌ನ ಅತಿದೊಡ್ಡ ನಗರವೂ ಹೌದು. ರಬತ್‌ ಮೊರೊಕೊ ದೇಶದ ರಾಜಕೀಯ ರಾಜಧಾನಿಯಾಗಿದ್ದರೆ, ಕಾಸಾಬ್ಲಾಂಕಾ ಮೊರೊಕೊದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಮೊರೊಕೊದಲ್ಲಿ ನೆಲೆಯಾಗಿರುವ ಪ್ರಮುಖ ಮೊರೊಕನ್‌ ಮತ್ತು ಅಂತಾರಾಷ್ಟ್ರೀಯ ಉದ್ದಿಮೆಗಳಿಗೆ ಪ್ರಧಾನ ಕಾರ್ಯಾಲಯಗಳು ಮತ್ತು ಮುಖ್ಯ ಕೈಗಾರಿಕಾ ಸೌಲಭ್ಯಗಳನ್ನು ಕಾಸಾಬ್ಲಾಂಕಾ ಹೊಂದಿದೆ. ಕಾಸಾಬ್ಲಾಂಕಾ ದೇಶದ ಪ್ರಮುಖ ಕೈಗಾರಿಕಾ ವಲಯವೆಂಬ ಐತಿಹಾಸಿಕ ಸ್ಥಾನವನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಕೈಗಾರಿಕಾ ಅಂಕಿಅಂಶಗಳು ಸಾಕ್ಷ್ಯವೊದಗಿಸುತ್ತವೆ. ಕಾಸಾಬ್ಲಾಂಕಾ ಬಂದರು ವಿಶ್ವದ ಅತಿದೊಡ್ಡ ಕೃತಕ ಬಂದರುಗಳಲ್ಲೊಂದು [೨] ಹಾಗೂ ಉತ್ತರ ಆಫ್ರಿಕಾದ ಅತಿದೊಡ್ಡ ಬಂದರು.[೩] ರಾಯಲ್‌ ಮೊರೊಕನ್‌ ನೌಕಾಪಡೆಗೆ ಇದು ಪ್ರಮುಖ ನೌಕಾ ನೆಲೆಯಾಗಿದೆ.

ವ್ಯುತ್ಪತ್ತಿ[ಬದಲಾಯಿಸಿ]

ಕಾಸಾಬ್ಲಾಂಕಾ ಎಂಬುದು ನಗರದ ಲ್ಯಾಟಿನೀಕರಿಸಿದ ಹೆಸರಾಗಿದೆ. 'ವೈಟ್ ಹೌಸ್' ಎಂಬ ಅರ್ಥ ನೀಡುವ ಸ್ಪ್ಯಾನಿಷ್‌ ಪದ-ಸಂಯುಕ್ತವಾಗಿದೆ (blanca (ಬ್ಲಾಂಕಾ) , 'ಬಿಳಿ;' casa (ಕ್ಯಾಸಾ) , 'ಮನೆ') ಇದರ ಮೂಲವಾಗಿದೆ. ಸ್ಪೇನ್ ಜನರು ಈ ಹೆಸರನ್ನು ಪೊರ್ಚುಗೀಸ್‌ ಭಾಷೆಯ Casa Branca (ಕ್ಯಾಸಾ ಬ್ರಾಂಕಾ) ದಿಂದ ಅಳವಡಿಸಿಕೊಂಡರು ಎಂದು ಭಾವಿಸಲಾಗಿದೆ. ಹಲವು ಸ್ಥಳೀಯರು ಇಂದು ಈ ನಗರಕ್ಕೆಕಾಜಾ ಎಂಬ ಉಪನಾಮ ನೀಡಿದ್ದಾರೆ.

ಇಂಗ್ಲಿಷ್‌ ಭಾಷೆಯಲ್ಲಿ ‌hill ಎಂಬ ಅರ್ಥ ನೀಡುವ ಬರ್ಬರ್‌ ಮೂಲ ಹೆಸರನ್ನು ಸ್ಥಳೀಯರು ಹಾಗೂ ನಗರವಾಸಿ ಬರ್ಬರ್‌ ಭಾಷಿಕರು ಬಳಸುತ್ತಿದ್ದರು. 1907ರಲ್ಲಿ ಫ್ರೆಂಚ್‌ ಆಕ್ರಮಣ ಸೇನೆಯು ಈ ನಗರಕ್ಕೆ ಆಗಮಿಸಿ, ಸ್ಪ್ಯಾನಿಷ್‌ ಹೆಸರಾದ ಕಾಸಾಬ್ಲಾಂಕಾವನ್ನು ಅಳವಡಿಸಿದರು. ಅನ್ಫಾ ಎಂಬುದು ಕಾಸಾಬ್ಲಾಂಕಾದ ಮೂಲ ಹಳೆಯ ನಗರ ಕೇಂದ್ರವನ್ನು ಉಲ್ಲೇಖಿಸುತ್ತದೆ.

ಅಧಿಕೃತವಾಗಿ ಹೇಳಬೇಕಾದರೆ, ಮೊರೊಕನ್ನರ ಪ್ರಕಾರ ಅನ್ಫಾ ಎಂಬುದು 0.5 ದಶಲಕ್ಷ ನಿವಾಸಿಗಳುಳ್ಳ ಆಡಳಿತ ಪ್ರಾಂತ (ಜಿಲ್ಲೆ)ಯಾಗಿದ್ದು, ಗ್ರ್ಯಾಂಡ್‌ ಕಾಸಾಬ್ಲಾಂಕಾದ ಅಂಗವಾಗಿದೆ.

ಕಾಸಾಬ್ಲಾಂಕಾದ ಎರಡು ವಿಮಾನ ನಿಲ್ದಾಣಗಳಲ್ಲಿ ಒಂದು ಕಾಸಾಬ್ಲಾಂಕಾ-ಅನ್ಫಾ ವಿಮಾನ ನಿಲ್ದಾಣ ಹಾಗೂ ಇನ್ನೊಂದನ್ನು ಮೊಹಮ್ಮದ್‌ V ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನಲಾಗಿದೆ.

ಭೌಗೋಳಿಕತೆ[ಬದಲಾಯಿಸಿ]

ಐತಿಹಾಸಿಕವಾಗಿ ಮೊರೊಕೊದ ಆಹಾರಧಾನ್ಯ ಕಣಜ ಎನ್ನಲಾದ ಚಾವಿಯಾ ಬಯಲುಸೀಮೆ ಪ್ರದೇಶದಲ್ಲಿ ಕಾಸಾಬ್ಲಾಂಕಾ ನಗರ ನೆಲೆಗೊಂಡಿದೆ. ನಗರವು ನೆಲೆಗೊಂಡಿರುವ ಬಹಳಷ್ಟು ಭಾಗವಿರುವ ಭೂಮಿಯು ಮೆಡಿಯೂನಾ ಪಂಗಡದವರಿಗೆ ಸೇರಿತ್ತು.

ಅಟ್ಲಾಂಟಿಕ್‌ ಕಡಲತೀರ ಹೊರತುಪಡಿಸಿ, ಬೊಸ್ಕೊರಾ ಅರಣ್ಯವು ಈ ನಗರದ ಪ್ರಮುಖ ನೈಸರ್ಗಿಕ ಆಕರ್ಷಣೆಯಾಗಿದೆ. ಈ ಕಾಡನ್ನು 20ನೆಯ ಶತಮಾನದಲ್ಲಿ ನೆಟ್ಟು ಬೆಳೆಸಲಾಗಿತ್ತು. ಈ ಕಾಡಿನ ಬಹಳಷ್ಟು ಭಾಗದಲ್ಲಿ ನೀಲಗಿರಿ ಮತ್ತು ಪೀತದಾರು ಮರಗಳಿವೆ. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದ ಅರ್ಧದಾರಿಯಲ್ಲಿ ಈ ಅರಣ್ಯವಿದೆ.

ಔದ್‌ ಬೊಸ್ಕೊರಾ ಎಂಬುದು ಕಾಸಾಬ್ಲಾಂಕಾ ನಗರದ ಏಕೈಕ ತೊರೆಯಾಗಿದೆ. ಹಿಂದೆ ಇದು ವಾಸ್ತವ ಬಂದರಿನ ಸನಿಹ ಅಟ್ಲಾಂಟಿಕ್‌ ಸಾಗರ ಸೇರುವ ಋತುವಾರು ಝರಿಯಾಗಿತ್ತು. ನಗರೀಕರಣದಿಂದಾಗಿ, ಔದ್‌ ಬೊಸ್ಕೊರಾದ ತಳದ ಬಹಳಷ್ಟು ಭಾಗವು ಮುಚ್ಚಿಹೋಗಿದೆ. ಅಲ್‌-ಜಡಿಡಾ ರಸ್ತೆಗೆ ದಕ್ಷಿಣ ಬದಿಯಲ್ಲಿರುವ ಭಾಗ ಮಾತ್ರ ಕಾಣಸಿಗುತ್ತದೆ. ಔಮ್‌-ಅರ್‌-ಬಿಯಾ ನದಿ ಕಾಸಾಬ್ಲಾಂಕಾಗೆ ಅತಿ ಹತ್ತಿರದ ಸಕ್ರಿಯ ನದಿ. 70 km (43.50 mi) ಇದು ನಗರದ ಅಗ್ನೇಯ ದಿಕ್ಕಿನಲ್ಲಿದೆ.

ಇತಿಹಾಸ[ಬದಲಾಯಿಸಿ]

ಫ್ರೆಂಚ್‌ ಪಾಲಕತ್ವಕ್ಕೆ ಮುಂಚೆ[ಬದಲಾಯಿಸಿ]

ಕ್ರಿಸ್ತ ಪೂರ್ವ ಸುಮಾರು ಏಳನೆಯ ಶತಮಾನದಲ್ಲಿ ಬರ್ಬರ್‌ ಜನರು ಇಂದಿನ ಕಾಸಾಬ್ಲಾಂಕಾ ಎನ್ನಲಾದ ಪ್ರದೇಶದಲ್ಲಿ ಬಂದು ನೆಲೆಸಿದರು.[೪]

ಫಿನಿಷಿಯನ್ನರು ಹಾಗೂ ಆನಂತರ ರೊಮನ್ನರು ಈ ಪ್ರದೇಶವನ್ನು ಬಂದರಾಗಿ ಬಳಸಿದರು.[೫]

In his book “Wasf Afriquia” Hassan Al Wazan refers to "Anfa" (ancient Casablanca) as a great city which was founded by the Romans. He also believed that Anfa was the most prosperous city on the Atlantic coast because of its fertile land.[೬]

ರೊಮನ್‌ ಯುಗದ ಅಪರಾರ್ಧದಲ್ಲಿ, ಅರಬ್‌ ಮುಸ್ಲಿಮ್‌ ಆಡಳಿತಕ್ಕೆ ಉತ್ತರವಾಗಿ, ಆ ಪ್ರದೇಶದಲ್ಲಿ ಅನ್ಫಾ ಎಂಬ ಸಣ್ಣ, ಸ್ವತಂತ್ರವಾದ ಸಾಮ್ರಾಜ್ಯವು ಬೆಳೆಯಿತು. 1068ರಲ್ಲಿ ಅಲ್ಮೊರವಿಡ್‌ ಗಳು ಇದನ್ನು ಜಯಿಸುವ ತನಕ ಸಾಮ್ರಾಜ್ಯವು ಮುಂದುವರೆದಿತ್ತು.

ಸ್ಪಾಟ್‌ ಉಪಗ್ರಹದಿಂದ ಕಂಡುಂಬಂದ ಕಾಸಾಬ್ಲಾಂಕಾ ನಗರ.

14ನೆಯ ಶತಮಾನದಲ್ಲಿ, ಮೆರಿನಿಡ್‌‌ ವಂಶದವರ ಆಳ್ವಿಕೆಯಲ್ಲಿ ಅನ್ಫಾ ಬೆಳೆದು ಬಂದರಾಗಿ ಪ್ರಾಮುಖ್ಯತೆ ಗಳಿಸಿತು. 15ನೆಯ ಶತಮಾನದ ಆರಂಭದಲ್ಲಿ, ಈ ಪಟ್ಟಣವು ಪುನಃ ಸ್ವತಂತ್ರ ರಾಜ್ಯವಾಗಿ, ಕಡಲುಗಳ್ಳರು, ಖಾಸಗಿ ಶಸ್ತ್ರಸಜ್ಜಿತ ನೌಕೆಗಳಿಗೆ ಸುರಕ್ಷಿತ ತಾಣವಾಯಿತು. ಇದರಿಂದ 1468ರಲ್ಲಿ ಪೋರ್ಚುಗೀಸರ ದಾಳಿಗೆ ಗುರಿಯಾಗಿ ಪಟ್ಟಣವನ್ನು ನಾಶಪಡಿಸಿದರು.

ಪೋರ್ಚುಗೀಸರು ಅನ್ಫಾದ ಭಗ್ನಾವಶೇಷಗಳನ್ನು ಬಳಸಿ 1515ರಲ್ಲಿ ಸೈನಿಕ ರಕ್ಷಾವರಣವನ್ನು ನಿರ್ಮಿಸಿದರು. ಇದರ ಸುತ್ತಲೂ ಬೆಳೆದ ಪಟ್ಟಣಕ್ಕೆ 'ಕ್ಯಾಸಾ ಬ್ರಾಂಕಾ' ಎನ್ನಲಾಯಿತು. ಪೊರ್ಚುಗೀಸ್‌ ಭಾಷೆಯಲ್ಲಿ 'ಬಿಳಿ ಮನೆ' ಎಂಬುದು ಇದರ ಅರ್ಥ.

1580ರಿಂದ 1640ರ ತನಕ, ಕ್ಯಾಸಾ ಬ್ಲಾಂಕಾ ಸ್ಪೇನ್‌ನ ಅಂಗವಾಗಿತ್ತು. ಆನಂತರ ಇದು ಪುನಃ ಮೊರೊಕ್ಕೊ ದೇಶದ ಭಾಗವಾಯಿತು. ಭೂಕಂಪ ಸಂಭವಿಸಿ ಈ ಪಟ್ಟಣದ ಬಹಳಷ್ಟು ಭಾಗವು ಹಾಳಾದ ಕಾರಣ 1755ರಲ್ಲಿ ಯುರೋಪಿಯನ್ನರು ಈ ಪ್ರದೇಶವನ್ನು ಸಂಪೂರ್ಣವಾಗಿ ತೊರೆದರು.

ಅಂತಿಮವಾಗಿ, ಸಮೀಪದ ವಾಣಿಜ್ಯ ಕೇಂದ್ರದಲ್ಲಿದ್ದ ಸ್ಪೇನ್ ಜನರ ನೆರವಿನೊಂದಿಗೆ, ಮೌಲೇ ಇಸ್ಮೇಲ್‌ ಮೊಮ್ಮಗ ಹಾಗೂ ಜಾರ್ಜ್‌ ವಾಷಿಂಗ್ಟನ್‌ರ ಮಿತ್ರ ಸುಲ್ತಾನ್‌ ಮೊಹಮ್ಮದ್‌ ಬಿನ್‌ ಅಬ್ದಲ್ಲಾ (1756-1790) ಈ ಪಟ್ಟಣವನ್ನು ಪುನಃ ನಿರ್ಮಿಸಿದ. ಈ ಪಟ್ಟಣವನ್ನು الدار البيضاء ad-Dār al-Bayḍāʼ ಎನ್ನಲಾಯಿತು (ಮೂಲ ಸ್ಪ್ಯಾನಿಷ್‌ ಕ್ಯಾಸಾ ಬ್ಲಾಂಕಾದ ಅರೇಬಿಕ್ ಅನುವಾದವಾಗಿದ್ದು, ಅದರ ಅರ್ಥ ಬಿಳಿ ಮನೆ).

19ನೆಯ ಶತಮಾನದಲ್ಲಿ, ಬ್ರಿಟನ್ನಿನಲ್ಲಿ ಉತ್ಕರ್ಷಸ್ಥಿತಿಯಲ್ಲಿದ್ದ ಜವಳಿ ಉದ್ಯಮಕ್ಕೆ ಉಣ್ಣೆಯ ಪ್ರಮುಖ ಪೂರೈಕೆ ಮಾಡುತ್ತಿದ್ದ ಈ ಪ್ರದೇಶದ ಜನಸಂಖ್ಯೆಯು ಬೆಳೆಯತೊಡಗಿತು. ಹಡಗಿನ ಸಂಚಾರವೂ ಸಹ ಹೆಚ್ಚಾಗತೊಡಗಿತು.( ಬ್ರಿಟಿಷರು ಇದಕ್ಕೆ ಪ್ರತಿಯಾಗಿ ಮೊರೊಕ್ಕೊದ ರಾಷ್ಟ್ರೀಯ ಪಾನೀಯವಾದ ಪ್ರಖ್ಯಾತ ಕೋವಿಮದ್ದಿನ ತರಹದ ಚಹಾವನ್ನು ಆಮದು ಮಾಡಲಾರಂಭಿಸಿದರು. 1860ರ ದಶಕದಲ್ಲಿ, ಈ ಪ್ರದೇಶದಲ್ಲಿ 5,000 ನಿವಾಸಿಗಳಿದ್ದರು. 1880ರ ದಶಕದ ಅಪರಾರ್ಧದಲ್ಲಿ ಜನಸಂಖ್ಯೆಯು 10,000ದ ಆಸುಪಾಸಿನಲ್ಲಿ ಬೆಳೆಯಿತು.[೭] ಫ್ರೆಂಚ್‌ ಈ ಪ್ರದೇಶವನ್ನು ಗೆದ್ದು ಫ್ರೆಂಚ್‌ ವಸಾಹತುದಾರರ ಆಗಮನದ ಕೆಲವು ವರ್ಷಗಳಲ್ಲಿ ಜನಸಂಖ್ಯೆ 12,000ದ ಸುಮಾರಿನಷ್ಟಿದ್ದು, ಕಾಸಾಬ್ಲಾಂಕಾ ಸಣ್ಣಗಾತ್ರದ ಬಂದರಾಗಿಯೇ ಉಳಿದುಕೊಂಡಿತ್ತು. 1906ರಲ್ಲಿ ಸ್ವತಂತ್ರ ಸುಲ್ತಾನ ಸಾಮ್ರಾಜ್ಯದ ಮೊದಲ ಆಡಳಿತ ವರ್ಗವು ಇಲ್ಲಿ ಅಧಿಕಾರ ವಹಿಸಿಕೊಂಡಿತು. 1921ರಷ್ಟರಲ್ಲಿ, ಬಿಡೊನ್ವಿಲ್‌‌ (ಜೋಪಡಿ ಪಟ್ಟಣ)ಗಳ ಬೆಳವಣಿಗೆಯೊಂದಿಗೆ ಜನಸಂಖ್ಯೆಯು 110,000ಕ್ಕೆ ಏರಿತು.[೮]

ಫ್ರೆಂಚ್‌ ಆಳ್ವಿಕೆ[ಬದಲಾಯಿಸಿ]

ಕಾಸಾಬ್ಲಾಂಕಾ ಮಧ್ಯಭಾಗದಲ್ಲಿರುವ ಬೋಲ್ವಾರ್ಡ್‌ ಡಿ ಪ್ಯಾರಿಸ್‌ನ ಒಂದು ನೋಟ.
ಚಿತ್ರ:Casablanca1950s.jpg
1950ರ ದಶಕದಲ್ಲಿ ಮೊಹಮ್ಮದ್ ಅಲ್‌ ಹನ್ಸಲಿ ಬೋಲ್ವಾರ್ಡ್‌

1907ರ ಜೂನ್‌ ತಿಂಗಳಲ್ಲಿ, ಫ್ರೆಂಚರು ಬಂದರಿನ ಬಳಿ, ಸ್ಮಶಾನದ ಮೂಲಕ ಹಾದುಹೋಗುವ ಹಗುರ ಪ್ರಮಾಣದ ರೈಲು ವ್ಯವಸ್ಥೆ ನಿರ್ಮಿಸಲು ಯತ್ನಿಸಿದರು. ಸ್ಥಳೀಯರು ಫ್ರೆಂಚರ ಮೇಲೆ ಹಲ್ಲೆ ನಡೆಸಿ, ಗಲಭೆಗಳು ಸಂಭವಿಸಿತು. ಇಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಫ್ರೆಂಚ್‌ ಸೇನಾಪಡೆಯನ್ನು ನಿಯೋಜಿಸಲಾಯಿತು. ಪರಿಸ್ಥಿತಿ ಹತೋಟಿಗೆ ಬರುವಷ್ಟರಲ್ಲಿ ಪಟ್ಟಣಕ್ಕೆ ಬಹಳಷ್ಟು ಹಾನಿಯಾಗಿತ್ತು. ಫ್ರೆಂಚರು ಕಾಸಾಬ್ಲಾಂಕಾವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇದರಿಂದ ಪರಿಣಾಮಕಾರಿಯಾಗಿ ವಸಾಹತಿನ ಪ್ರಕ್ರಿಯೆ ಅರಂಭವಾಯಿತು. ಆದರೂ ಕಾಸಾಬ್ಲಾಂಕಾ ಮೇಲಿನ ಫ್ರೆಂಚರ ನಿಯಂತ್ರಣ 1910ರವರೆಗೆ ಕಾನೂನುಬದ್ಧವಾಗಿರಲಿಲ್ಲ.

1942ರಲ್ಲಿ ತೆರೆಕಂಡು ಬಹಳಷ್ಟು ಖ್ಯಾತಿ ಗಳಿಸಿದ ಚಲನಚಿತ್ರ ಕಾಸಾಬ್ಲಾಂಕಾ ಆ ಸಮಯದಲ್ಲಿ ನಗರದ ವಸಾಹತಿನ ಸ್ಥಿತಿಗತಿ ಬಗ್ಗೆ ಗಮನಸೆಳೆಯಿತು. ಸ್ಥಳೀಯ ಜನಸಂಖ್ಯೆಯ ಕಡಿಮೆ ಉಲ್ಲೇಖದೊಂದಿಗೆ, ಪೈಪೋಟಿಯಲ್ಲಿದ್ದ ಐರೋಪ್ಯ ಶಕ್ತಿಗಳ ನಡುವೆ ಅಧಿಕಾರಕ್ಕಾಗಿ ಹೋರಾಟದ ಕಾರ್ಯಕ್ಷೇತ್ರ ಎಂದು ಅದನ್ನು ಬಿಂಬಿಸಿತು. ಈ ಚಲನಚಿತ್ರದಲ್ಲಿ ವಿಶ್ವದ ಬಹುಭಾಗಗಳಿಗೆ ಸೇರಿದ ಅಪಾರ ಪಾತ್ರದಾರಿಗಳ( ಅಮೆರಿಕನ್‌, ಫ್ರೆಂಚ್‌, ಜರ್ಮನ್‌, ಚೆಕ್‌, ನಾರ್ವೆಜಿಯನ್‌, ಬಲ್ಗಾರಿಯನ್‌, ರಷ್ಯನ್‌ ಮತ್ತು ಇತರೆ ದೇಶದವರು) ಪೈಕಿ ಕೇವಲ ಒಬ್ಬನೇ ಒಬ್ಬ ಸ್ಥಳೀಯ ಪಾತ್ರಧಾರಿ (ಮನ್ನಣೆಯಿಲ್ಲದ) 'ಅಬ್ದುಲ್‌' ಎಂಬ ದ್ವಾರಪಾಲಕನ ಪಾತ್ರ ಸಣ್ಣದಾಗಿತ್ತು.

ಇಲ್ಲಿಯ ಜನಸಂಖ್ಯೆಯಲ್ಲಿ ಬಹುಶಃ ಅರ್ಧದಷ್ಟು ಯುರೋಪಿಯನ್ನರೇ ಇದ್ದರು.[೯] 1940 ಹಾಗೂ 1950ರ ದಶಕಗಳಲ್ಲಿ, ಕಾಸಾಬ್ಲಾಂಕಾ ವ್ಯಾಪಕ ಫ್ರೆಂಚ್‌-ವಿರೋಧಿ ಗಲಭೆಗಳ ಕೇಂದ್ರವಾಗಿತ್ತು. 1953ರ ಕ್ರಿಸ್ಮಸ್‌ ದಿನದಂದು ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಹಲವು ಸಾವುನೋವುಗಳು ಸಂಭವಿಸಿದವು.[೧೦]

ಕಾಸಾಬ್ಲಾಂಕಾ ಸಮ್ಮೇಳನ[ಬದಲಾಯಿಸಿ]

ಎರಡನೆಯ ಮಹಾಯುದ್ಧದಲ್ಲಿ ಕಾಸಾಬ್ಲಾಂಕಾ ಪ್ರಮುಖ, ಆಯಕಟ್ಟಿನ ಬಂದರಾಗಿತ್ತು. 1943ರಲ್ಲಿ ಈ ನಗರವು ಕಾಸಾಬ್ಲಾಂಕಾ ಸಮ್ಮೇಳನದ ಅತಿಥ್ಯ ವಹಿಸಿತ್ತು. ಇದರಲ್ಲಿ ಬ್ರಿಟಿಷ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷ ರೂಸ್ವೆಲ್ಟ್‌ ಯುದ್ಧದ ಪ್ರಗತಿ ಕುರಿತು ಚರ್ಚಿಸಿದರು. ದೊಡ್ಡ ಅಮೆರಿಕನ್‌ ವೈಮಾನಿಕ ನೆಲೆಗೆ ಕಾಸಾಬ್ಲಾಂಕಾ ಸ್ಥಳವಾಗಿತ್ತು.ಇದರಿಂದಾಗಿ, ಎರಡನೆಯ ವಿಶ್ವಮಹಾಯುದ್ಧದಲ್ಲಿ ಅಮೆರಿಕಾದ ಎಲ್ಲ ವಿಮಾನಗಳಿಗೆ ಅಮೆರಿಕ ಸೈನ್ಯದ ಐರೋಪ್ಯ ಕಾರ್ಯಾಚರಣೆ ನಡೆಸುವ ಸ್ಥಳವಾಗಿತ್ತು.

ಸ್ವಾತಂತ್ರ್ಯದ ನಂತರ[ಬದಲಾಯಿಸಿ]

1956ರ ಮಾರ್ಚ್‌ 2ರಂದು ಮೊರೊಕ್ಕೊ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಗಳಿಸಿತು.

1930ರಲ್ಲಿ ಕಾಸಾಬ್ಲಾಂಕಾ ಒಂದು ಗ್ರ್ಯಾನ್‌ ಪ್ರಿ ಆತಿಥ್ಯ ವಹಿಸಿತು. ಈ ಮೋಟರ್ ರೇಸನ್ನು ಹೊಸ ಅನ್ಫಾ ರೇಸ್‌ಕೋರ್ಸ್‌ನಲ್ಲಿ ನಡೆಸಲಾಯಿತು. 1958ರಲ್ಲಿ ಈ ರೇಸು ಅಯಿನ್‌-ದಿಯಬ್‌ ಸರ್ಕ್ಯೂಟ್‌ನಲ್ಲಿ ನಡೆಯಿತು - ಮೊರೊಕನ್‌ ಗ್ರ್ಯಾನ್‌ ಪ್ರಿ ನೋಡಿ 1983ರ ಮೆಡಿಟರೇನಿಯನ್‌ ಕ್ರೀಡಾಕೂಟವು ಕಾಸಾಬ್ಲಾಂಕಾದಲ್ಲಿ ನಡೆಯಿತು.

ನಗರವು ಇಂದು ಪ್ರವಾಸೋದ್ಯಮ ಉದ್ದಿಮೆಯನ್ನು ಅಭಿವೃದ್ಧಿಗೊಳಿಸುತ್ತಿದೆ. ಕಾಸಾಬ್ಲಾಂಕಾ ಮೊರೊಕೊ ದೇಶದ ಆರ್ಥಿಕ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ರಬತ್‌ ಮೊರೊಕೊದ ರಾಜಕೀಯ ರಾಜಧಾನಿ.

2000ರ ಮಾರ್ಚ್‌ ತಿಂಗಳಲ್ಲಿ, ದೇಶದಲ್ಲಿ ಮಹಿಳೆಯರ ಕಾನೂನು ಸ್ಥಿತಿಗತಿಯಲ್ಲಿ ಸುಧಾರಣೆ ತರುವಂತೆ ಸರ್ಕಾರವನ್ನು ಆಗ್ರಹಪಡಿಸಲು ಮಹಿಳಾ ಗುಂಪುಗಳು ಕಾಸಾಬ್ಲಾಂಕಾದಲ್ಲಿ ಪ್ರದರ್ಶನಗಳನ್ನು ಆಯೋಜಿಸಿದವು. ಬಹುವಿವಾಹದ ನಿಷೇಧ ಹಾಗೂ ವಿಚ್ಛೇದನಾ ಕಾನೂನು ಮಂಡಿಸಬೇಕೆಂದು ಈ ಗುಂಪುಗಳು ಆಗ್ರಹಪಡಿಸಿದವು. (ಆ ಕಾಲದಲ್ಲಿ ವಿಚ್ಛೇದನವು ಕೇವಲ ಧಾರ್ಮಿಕ ವಿಧಿವಿಧಾನವಾಗಿತ್ತು) ಪ್ರತಿ-ಪ್ರದರ್ಶನಕ್ಕೆ ಅರ್ಧ ದಶಲಕ್ಷದಷ್ಟು ಜನರು ಆಕರ್ಷಿತರಾದರೂ, 2000ದಲ್ಲಿ ಆರಂಭವಾದ ಬದಲಾವಣೆ ಕುರಿತ ಚಳವಳಿಯಿಂದ ದೊರೆ ಆರನೆಯ ಮೊಹಮ್ಮದ್‌ ಪ್ರಭಾವಿತರಾಗಿ, 2004ರ ಆರಂಭದಲ್ಲಿ ಹೊಸ ಮುದವಾನಾ (ಕುಟುಂಬ ಕಾನೂನು) ಜಾರಿಗೊಳಿಸಿದರು. ಇದರಿಂದಾಗಿ ಮಹಿಳಾ ಹಕ್ಕು ಕಾರ್ಯಕರ್ತೆಯರ ಕೆಲವು ಬೇಡಿಕೆಗಳನ್ನು ಈಡೇರಿಸಲಾಯಿತು.

2003ರ ಮೇ 16ರಂದು ಕೆಲ ಮೊರೊಕನ್ನರು ನಡೆಸಿದ ಸರಣಿ ಆತ್ಮಾಹುತಿ ಬಾಂಬ್‌ ಸ್ಫೋಟಗಳಿಗೆ ಕಾಸಾಬ್ಲಾಂಕಾ ಗುರಿಯಾಗಿದ್ದರಿಂದ, 33 ನಾಗರಿಕರು ಹತರಾದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಬಾಂಬ್ ಸ್ಫೋಟಗಳಲ್ಲಿ ಅಲ್-ಕೈದಾ ನಂಟಿತ್ತೆಂದು ಕೆಲವರು ಹೇಳಿದ್ದಾರೆ.

2007ರ ಆರಂಭದಲ್ಲಿ ನಗರದಲ್ಲಿ ಪುನಃ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟಗಳು ಸಂಭವಿಸಿದವು. 2007ರ ಮಾರ್ಚ್‌ 11ರಂದು ಕಾಸಾಬ್ಲಾಂಕಾದ ಅಂತರಜಾಲ ವೀಕ್ಷಣಾ ಕೆಫೆಯಲ್ಲಿ ಶಂಕಿತ ಉಗ್ರಗಾಮಿಯು ಸ್ವಯಂ ಸ್ಪೋಟಿಸಿಕೊಂಡ. 2007ರ ಏಪ್ರಿಲ್‌ 10ರಂದು, ಪೊಲೀಸರು ಉಗ್ರಗಾಮಿಗಳ ಸುರಕ್ಷಿತ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮೂವರು ಆತ್ಮಾಹುತಿ ಬಾಂಬರ್‌ಗಳು ತಾವು ಧರಿಸಿದ್ದ ಬಾಂಬ್‌ ಸ್ಫೋಟಿಸಿಕೊಂಡರು.[೧೧] ಇದಾದ ಎರಡು ದಿನಗಳ ನಂತರ, ಪೊಲೀಸರು ನಗರದ ಸುತ್ತಲೂ ಅಡ್ಡಗಟ್ಟುಗಳನ್ನು ನಿರ್ಮಿಸಿ, ತಾವು ನಡೆಸಿದ ದಾಳಿಯಿಂದ ಪರಾರಿಯಾಗಿದ್ದ ಇನ್ನೂ ಇಬ್ಬರನ್ನು ಸೆರೆಹಿಡಿದರು.[೧೨] ಎಪ್ರಿಲ್‌ 14ರಂದು, ಕಾಸಾಬ್ಲಾಂಕಾದ ವಾಣಿಜ್ಯ ಪ್ರದೇಶದಲ್ಲಿ ಇಬ್ಬರು ಸಹೋದರರು ಸ್ವತಃ ಸ್ಫೋಟಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದರು. ಒಂದು ಸ್ಫೋಟವು ಅಮೆರಿಕನ್‌ ದೂತಾವಾಸದ ಸಮೀಪ ಹಾಗೂ ಇನ್ನೊಂದು ಅಮೆರಿಕನ್‌ ಭಾಷಾ ಕೇಂದ್ರದ ಬಳಿ ಸಂಭವಿಸಿತು. ದಾಳಿಕೋರರ ಹೊರತು ಕೇವಲ ಒಬ್ಬರಿಗೆ ಮಾತ್ರ ಗಾಯಗಳಾದವು. ಆದರೆ ಅಮೆರಿಕದ ದೂತಾವಾಸವನ್ನು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಮುಚ್ಚಲಾಯಿತು.[೧೩]

ಹವಾಮಾನ[ಬದಲಾಯಿಸಿ]

ಕಾಸಾಬ್ಲಾಂಕಾದಲ್ಲಿ ಬಹಳ ಸೌಮ್ಯವಾದ, ಅರೆ-ಶುಷ್ಕಮೆಡಿಟರೇನಿಯನ್‌ ಹವಾಗುಣವಿದೆ (ಶುಷ್ಕ-ಬೇಸಿಗೆ ಉಪ-ಉಷ್ಣವಲಯದ, ಕೊಪ್ಪೆನ್‌ ಹವಾಗುಣ ವಿಂಗಡಣೆ Csb . ಆದರೂ, ಇದು ಅರೆ-ಶುಷ್ಕ ಹವಾಗುಣದ ವಿಂಗಡಣೆಯ ವ್ಯಾಪ್ತಿಗೆ ಒಳಪಡುತ್ತದೆ (ಕೊಪ್ಪೆನ್‌ BSh ). ಚಳಿಗಾಲದ ತಿಂಗಳಲ್ಲೇ ಬಹಳಷ್ಟು ಮಳೆಯಾಗುತ್ತದೆ. ಅಟ್ಲಾಂಟಿಕ್‌ ಸಾಗರದಿಂದ ಬೀಸುವ ತಂಪು ಗಾಳಿಯು ಕಾಸಾಬ್ಲಾಂಕಾದ ಹವಾಗುಣದ ಮೇಲೆ ಪ್ರಭಾವ ಬೀರಿ, ಸಾಧಾರಣ ಉಷ್ಣಾಂಶ ಬದಲಾವಣೆಗಳು ಹಾಗೂ ಸೌಮ್ಯ ಹವಾಗುಣಕ್ಕೆ ಕಾರಣವಾಗುತ್ತದೆ. ಋತುವಾರು ಉಷ್ಣಾಂಶ ಬದಲಾವಣೆ ತೀರಾ ಕಡಿಮೆಯಿದ್ದು, ವಿಪರೀತ ತಾಪ ಅಥವಾ ವಿಪರೀತ ಚಳಿಯ ಕೊರತೆಯಿರುತ್ತದೆ.

Casablancaದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 17.1
(62.8)
18.8
(65.8)
19.7
(67.5)
21.3
(70.3)
22.2
(72)
24.4
(75.9)
26.2
(79.2)
26.7
(80.1)
25.5
(77.9)
22.1
(71.8)
19.8
(67.6)
19.7
(67.5)
22.0
(71.6)
Daily mean °C (°F) 12.2
(54)
14.7
(58.5)
15.9
(60.6)
17.0
(62.6)
19.1
(66.4)
21.5
(70.7)
23.2
(73.8)
24.0
(75.2)
22.4
(72.3)
18.6
(65.5)
15.7
(60.3)
15.3
(59.5)
18.3
(64.9)
ಕಡಮೆ ಸರಾಸರಿ °C (°F) 7.2
(45)
10.5
(50.9)
12.0
(53.6)
12.6
(54.7)
16.0
(60.8)
18.6
(65.5)
20.1
(68.2)
21.2
(70.2)
19.3
(66.7)
15.1
(59.2)
11.5
(52.7)
10.9
(51.6)
14.6
(58.3)
Average precipitation cm (inches) 4.01
(1.579)
0.0
(0)
0.0
(0)
4.37
(1.72)
1.44
(0.567)
0.0
(0)
0.0
(0)
0.07
(0.028)
0.97
(0.382)
6.74
(2.654)
1.82
(0.717)
1.057
(0.4161)
29.99
(11.807)
Average precipitation days 6 0 0 12 5 0 0 2 4 5 8 12 54
Source: World Meteorological Organization (UN)[೧೪]

ಆರ್ಥಿಕತೆ[ಬದಲಾಯಿಸಿ]

ಗ್ರ್ಯಾಂಡ್ ಕಾಸಾಬ್ಲಾಂಕಾ ಪ್ರದೇಶವು ಮೊರೊಕನ್‌ ಆರ್ಥಿಕತೆಯ ಅಭಿವೃದ್ಧಿಗೆ ಚಾಲಕಶಕ್ತಿ ಎಂದು ಪರಿಗಣಿಸಲಾಗಿದೆ. ದೇಶದ 32%ರಷ್ಟು ಉತ್ಪಾದನಾ ಘಟಕಗಳನ್ನು ಹಾಗೂ 56%ರಷ್ಟು ಕೈಗಾರಿಕಾ ದುಡಿಮೆಯನ್ನು ಇದು ಆಕರ್ಷಿಸುತ್ತದೆ. ಈ ಕ್ಷೇತ್ರವು ರಾಷ್ಟ್ರೀಯ ವಿದ್ಯುತ್‌ ಉತ್ಪಾದನೆಯ 30%ರಷ್ಟನ್ನು ಬಳಸಿಕೊಳ್ಳುತ್ತದೆ. 93 ಶತಕೋಟಿ ಮೊರೊಕನ್‌ ದಿರ್ಹಮ್‌ಗಳ(MAD )ಗಳ ವಹಿವಾಟಿನೊಂದಿಗೆ, ಪ್ರದೇಶವು ಸಾಮ್ರಾಜ್ಯದ ಕೈಗಾರಿಕಾ ಉತ್ಪಾದನೆಯಲ್ಲಿ 44%ರಷ್ಟು ಕೊಡುಗೆ ನೀಡುತ್ತದೆ. ರಾಷ್ಟ್ರೀಯ ಕೈಗಾರಿಕೆ ರಫ್ತುಗಳ ಪೈಕಿ 33%ರಷ್ಟು ಪಾಲು, ಅಂದರೆ 27 ಶತಕೋಟಿ ಮೊರೊಕನ್‌ ದಿರ್ಹಮ್(‌MAD) ರಫ್ತುಗಳು (3.6 ಶತಕೋಟಿ US $ ಗೆ ಸಮಾನ) ಗ್ರ್ಯಾಂಡ್‌ ಕಾಸಾಬ್ಲಾಂಕಾದಿಂದ ಬರುತ್ತವೆ. ಮೊರೊಕನ್‌ ಬ್ಯಾಂಕಿಂಗ್‌ ಜಾಲದ 30%ರಷ್ಟು ಪಾಲು ಕಾಸಾಬ್ಲಾಂಕಾದಲ್ಲಿ ಕೇಂದ್ರೀಕೃತವಾಗಿದೆ.[೧೫][೧೬]

ಫಾಸ್ಫೊರೇಟ್‌ (ರಂಜಕ ರಾಸಾಯನಿಕ ಧಾತುವಿನ ಒಂದು ಸಂಯುಕ್ತ) ಕಾಸಾಬ್ಲಾಂಕಾದ ಮುಖ್ಯ ರಫ್ತುಗಳಲ್ಲೊಂದು. ಇತರೆ ಕೈಗಾರಿಕೆಗಳಲ್ಲಿ ಮೀನುಗಾರಿಕೆ, ಮೀನು ಸಿದ್ಧಗೊಳ್ಳಿಸುವಿಕೆ, ಮರದ ಹಲಗೆ ಕಾರ್ಖಾನೆಗಳು, ಪೀಠೋಪಕರಣ ತಯಾರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಗಾಜು, ಜವಳಿ, ವಿದ್ಯುನ್ಮಾನ, ತೊಗಲು ಕಸುಬುಗಳು, ಸಂಸ್ಕರಿಸಿದ ಆಹಾರ, ಮದ್ಯಸಾರ, ಮೃದು ಪಾನೀಯಗಳು ಹಾಗೂ ಸಿಗರೇಟ್‌ ತಯಾರಿಕಾ ಉದ್ದಿಮೆಗಳು ಸೇರಿವೆ.[೧೭]

ಮೊರೊಕೊದ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಲ್ಲಿ 50%ರಷ್ಟು ಪಾಲು ಕಾಸಾಬ್ಲಾಂಕಾ ಮತ್ತು ಮಹಮ್ಮದೀಯ ಬಂದರುಗಳ ಮೂಲಕ ಸಾಗುತ್ತವೆ.[೧೮]

ಕಾಸಾಬ್ಲಾಂಕಾದ ಬಹುಶಃ ಇಡೀ ಭಾಗದಲ್ಲಿ ನಿರ್ಮಾಣ ಯೋಜನೆ ನಡೆಯುತ್ತಿದೆ. ಇದರಲ್ಲಿ ಮುಖ್ಯವಾಗಿ, ಬಂದರು ಮತ್ತು ಹಸನ್‌ ಎರಡನೆಯ ಮಸೀದಿಗಳ ನಡುವೆ ಎರಡು ಭಾರಿ ಮನರಂಜನಾ ಕೇಂದ್ರಗಳ ನಿರ್ಮಾಣ, ಮೆಗಾರಾಮಾ ಚಿತ್ರಮಂದಿರದ ಬಳಿ ಅನ್ಫಾ ರಿಸಾರ್ಟ್‌ ಯೋಜನೆ ನಿರ್ಮಾಣವಾಗಲಿದೆ. ಇದು ವಾಣಿಜ್ಯ, ವಿಹಾರ ಮತ್ತು ತಂಗುದಾಣವಾಗಲಿದೆ. ಇದಲ್ಲದೆ ಮೊರೊಕೊ ಮಾಲ್‌ ಎಂಬ ಬೃಹತ್‌ ವಿಹಾರ ಮಳಿಗೆ, ಹಾಗೂ ಅಂತಿಮವಾಗಿ ಕಡಲತೀರದ ಕಾಲ್ನಡಿಗೆ ದಾರಿಯ ಪರಿಪೂರ್ಣ ನವೀಕರಣವನ್ನು 2009ರ ಜೂನ್‌ ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಇನ್ನಷ್ಟು ಸವಾರಿಗಳು, ಆಟಗಳು ಮತ್ತು ವಿಹಾರ ಸೇವೆಗಳನ್ನು ಸೇರಿಸುವುದರೊಂದಿಗೆ, ಸಿಂದ್ಬಾದ್‌ ಉದ್ಯಾನವನ್ನು ಸಂಪೂರ್ಣ ನವೀಕರಿಸುವ ಯೋಜನೆಯಿದೆ.[೧೯]

ರಾಯಲ್‌ ಏರ್ ಮರೊಕ್‌ ವಿಮಾನಯಾನ ಸಂಸ್ಥೆಯ ಪ್ರಧಾನ ಕಾರ್ಯಾಲಯವು, ಕಾಸಾಬ್ಲಾಂಕಾ ನಗರದ ಕಾಸಾಬ್ಲಾಂಕಾ-ಅನ್ಫಾ ವಿಮಾನ ನಿಲ್ದಾಣದಲ್ಲಿದೆ.[೨೦] ತನ್ನ ಪ್ರಧಾನ ಕಾರ್ಯಾಲಯವನ್ನು ಕಾಸಾಬ್ಲಾಂಕಾದಿಂದ ಮೊಹಮ್ಮದ್‌ V ಅಂತರರಾಷ್ಟ್ರೀಯ ವಿಮಾನ ನಿಲ್ದಾಣಸಮೀಪವಿರುವನೊವಾಕೊರ್‌ ಪ್ರಾಂತ್ಯದ ನೆಲೆಗೆ ಸ್ಥಳಾಂತರಿಸಲಾಗುವುದು ಎಂದು 2004ರಲ್ಲಿ ಅದು ಘೋಷಿಸಿತು.[೨೧] 2009ರಲ್ಲಿ ಹೊಸ ಪ್ರಧಾನ ಕಾರ್ಯಾಲಯವನ್ನು ನೊವಾಕೊರ್‌ನಲ್ಲಿ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.[೨೨]

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

2005ರಲ್ಲಿ ಗ್ರ್ಯಾಂಡ್‌ ಕಾಸಾಬ್ಲಾಂಕಾದ ಜನಸಂಖ್ಯೆಯನ್ನು 3.85 ದಶಲಕ್ಷ ಎಂದು ಅಂದಾಜಿಸಲಾಗಿದೆ. ಇದರಲ್ಲಿ 98%ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇವರಲ್ಲಿ 25%ರಷ್ಟು ಜನರು 15ಕ್ಕಿಂತ ಕಡಿಮೆ ವಯಸ್ಕರು ಹಾಗೂ 9%ರಷ್ಟು ಜನರು 60ಕ್ಕಿಂತಲೂ ಹೆಚ್ಚು ವಯಸ್ಸಿನವರು. ನಗರದ ಜನಸಂಖ್ಯೆಯು ಮೊರೊಕ್ಕೊದ ಒಟ್ಟು ಜನಸಂಖ್ಯೆಯ 11%ರಷ್ಟಿದೆ. ಮಗ್ರೆಬ್‌ನಲ್ಲಿ ಗ್ರ್ಯಾಂಡ್‌ ಕಾಸಾಬ್ಲಾಂಕಾ ಅತಿದೊಡ್ಡ ನಗರ ಪ್ರದೇಶವಾಗಿದೆ.[೨೩] ಆದರೂ, ನಗರವಾಸಿಗಳ ಸಂಖ್ಯೆಯ ಬಗ್ಗೆ ಸ್ಥಳೀಯರ ಭಿನ್ನಾಭಿಪ್ರಾಯವಿದೆ. ವಾಸಿಗಳ ಸಂಖ್ಯೆಯನ್ನು ಐದರಿಂದ ಆರು ದಶಲಕ್ಷಗಳು ಎಂದು ಹೇಳುತ್ತಾರೆ. [ಸೂಕ್ತ ಉಲ್ಲೇಖನ ಬೇಕು] ಇತ್ತೀಚೆಗೆ ಬರಗಾಲದ ವರ್ಷಗಳಿಂದ ಅನೇಕ ಜನರು ನೌಕರಿ ಅರಸಿಕೊಂಡು ನಗರಕ್ಕೆ ವಲಸೆ ಬರುತ್ತಿರುವುದನ್ನು ಅವರು ಉದಾಹರಿಸುತ್ತಾರೆ.

ಕಾಸಾಬ್ಲಾಂಕಾದಲ್ಲಿ ಯೆಹೂದ್ಯಧರ್ಮ[ಬದಲಾಯಿಸಿ]

ಅನ್ಫಾದಲ್ಲಿ ಸಿಫಾರ್ಡಿ ಯಹೂದ್ಯ ಸಮುದಾಯವಿತ್ತು. 1468ರಲ್ಲಿ ಪೋರ್ಚುಗೀಸರು ಇದನ್ನು ಹಾಳುಗೆಡಹಿದರು. ಯೆಹೂದ್ಯರು ಈ ಪಟ್ಟಣಕ್ಕೆ ಮರಳುವುದು ನಿಧಾನವಾಯಿತು. ಆದರೂ, 1750ರೊಳಗೆ ನಿರ್ಮಿಸಲಾದ ರಬೈ ಎಲಿಜಾ ಯೆಹೂದ್ಯರ ಆರಾಧನಾ ಮಂದಿರವು ಕಾಸಾಬ್ಲಾಂಕಾದ ಮೊಟ್ಟಮೊದಲ ಯೆಹೂದ್ಯರ ಆರಾಧನಾ ಮಂದಿರವಾಗಿತ್ತು. 1755ರಲ್ಲಿ ಪೊರ್ಚುಗಲ್‌ ರಾಜಧಾನಿ ಲಿಸ್ಬನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ, ಪಟ್ಟಣದ ಬಹಳಷ್ಟು ಭಾಗದೊಂದಿಗೆ ಈ ಆರಾಧನಾ ಮಂದಿರವೂ ಸಹ ನಾಶವಾಯಿತು.[೪]

ಪ್ರಮುಖ ಸ್ಥಳಗಳು[ಬದಲಾಯಿಸಿ]

upright|thumb| ಹಸನ್‌ II ಮಸೀದಿ.

ಹಳೆಯ ಮದೀನಾದ ಗೋಡೆಗಳು
ಚಿತ್ರ:Twincenter.jpg
ಕಾಸಾಬ್ಲಾಂಕಾ ಟ್ವಿನ್‌ ಸೆಂಟರ್‌.
1905ರಲ್ಲಿ ನಿರ್ಮಿತ ಹಾಗೂ 1914 ಮತ್ತು 1917 ನಡುವೆ ನವೀಕೃತವಾದ 45-ಮೀಟರ್‌ ಎತ್ತರದ ಎಲ್‌ ಹಂಕ್‌ ದೀಪಗೋಪುರ.

ಕಾಸಾಬ್ಲಾಂಕಾದ ಫ್ರೆಂಚ್‌ ಕಾಲದ ಹೊಸ ಪಟ್ಟಣದ ವಿನ್ಯಾಸ ಮತ್ತು ನಿರ್ಮಾಣ ಮಾಡಿದ್ದು ಫ್ರೆಂಚ್‌ ಶಿಲ್ಪಿ ಹೆನ್ರಿ ಪ್ರೊಸ್ಟ್‌. ಇದು ಆ ಕಾಲದ ಹೊಸ ಪಟ್ಟಣದ ಮಾದರಿಯಾಗಿತ್ತು. ಹೊಸ ಪಟ್ಟಣದ (ಫ್ರೆಂಚ್‌: ವಿಲ್‌ ನೊವಿಲ್‌ (Ville Nouvelle) ) ಮುಖ್ಯ ಬೀದಿಗಳು, ಅನ್ಫಾದ ಮುಖ್ಯ ಮಾರುಕಟ್ಟೆಯಿದ್ದ ಪ್ಲೇಸ್‌ ಡೆ ನೇಷನ್ಸ್‌ ಯುನೀಸ್‌ನಿಂದ ಆರಂಭವಾಗಿ ದಕ್ಷಿಣ ಮತ್ತು ಪೂರ್ವ ದಿಕ್ಕಿನತ್ತ ಸಾಗುತ್ತವೆ. ಹೊಸ ಪಟ್ಟಣ (New Town) ಬಹುಶಃ ಇಡೀ ಮೊರೊಕೊದ ಪರಿಣಾಮಕಾರಿ ಸ್ಥಳವಾಗಿದೆ. ಮುಂಚಿನ ಆಡಳಿತ ಕಾರ್ಯಾಲಯಗಳಾಗಿದ್ದ ಕಟ್ಟಡಗಳು ಮತ್ತು ಆಧುನಿಕ ಹೋಟೆಲ್‌ಗಳು ಈ ಪ್ರದೇಶವನ್ನು ಜನಭರಿತಗೊಳಿಸಿದೆ. ಅವುಗಳ ಶೈಲಿಯು ಹಿಸ್ಪಾನೊ-ಮೌರೆಸ್ಕ್‌ ಮತ್ತು ಆರ್ಟ್‌-ಡೆಕೊ ಶೈಲಿಯ ಮಿಶ್ರಣವಾಗಿದೆ.

ಕಾಸಾಬ್ಲಾಂಕಾ ಫ್ರೆಂಚ್‌ ವಿನ್ಯಾಸಕಾರ ಮೈಕಲ್‌ ಪಿನ್ಸೂ ವಿನ್ಯಾಸ ಮಾಡಿದ ಹಸನ್‌ II ಮಸೀದಿಗೆ ನೆಲೆಯಾಗಿದೆ. ಇದು ಭೂಶಿರದಲ್ಲಿದ್ದು, ಅಟ್ಲಾಂಟಿಕ್‌ ಸಾಗರಕ್ಕೆ ಅಭಿಮುಖವಾಗಿದೆ. 25,000 ಆರಾಧಕರಿಗೆ ಸ್ಥಳಾವಕಾಶದೊಂದಿಗೆ ಬೃಹತ್ ಗಾಜಿನ ನೆಲದ ಮೂಲಕ ಸಾಗರವನ್ನು ವೀಕ್ಷಿಸಬಹುದು. ಮಸೀದಿಯ ಅಂಗಳದಲ್ಲಿ ಇನ್ನು 80,000 ಜನರು ಸೇರಲು ಸ್ಥಳಾವಕಾಶವಿದೆ. 210 ಮೀಟರ್‌ ಎತ್ತರವಿರುವ ಮಿನಾರತ್‌(ಸ್ತಂಭಗೋಪುರ) ವಿಶ್ವದಲ್ಲೇ ಅತ್ಯಂತ ಎತ್ತರದ ಸ್ತಂಭಗೋಪುರವಾಗಿದೆ.

ಮಸೀದಿಯ ನಿರ್ಮಾಣವು 1980ರಲ್ಲಿ ಆರಂಭಗೊಂಡಿತ್ತು. ಮೊರೊಕೊದ ಮಾಜಿ ರಾಜ ಹಸನ್‌ IIರ 60ನೆಯ ಹುಟ್ಟುಹಬ್ಬಕ್ಕೆ, ಅಂದರೆ 1989ರೊಳಗೆ ನಿರ್ಮಾಣಕಾರ್ಯವನ್ನು ಸಂಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದಾಗ್ಯೂ 1993ರ ವರೆಗೂ ಈ ಕಟ್ಟಡವು ಉದ್ಘಾಟನೆಯಾಗಿರಲಿಲ್ಲ. ಈ ಕಟ್ಟಡದ ನಿರ್ಮಾಣಕ್ಕೆ ಅಂದಾಜು 800 ದಶಲಕ್ಷ ಡಾಲರ್‌ಗಳಷ್ಟು ಹಣವನ್ನು ಆಡಳಿತಾಧಿಕಾರಿಗಳು ವೆಚ್ಚ ಮಾಡಿದರು.

ವಿಧ್ಯುಕ್ತವಾಗಿ ಲ್ಯಾಟೇ ಎನ್ನಲಾದ ಪಾರ್ಕ್‌ ಡಿ ಲಾ ಲಿಗ್‌ ಅರಬ್ ‌ ನಗರದ ಅತಿದೊಡ್ಡ ಸಾರ್ವಜನಿಕ ಉದ್ಯಾನ. ಇದರ ಅಂಚಿನಲ್ಲಿ, ಬಳಕೆ ತಪ್ಪಿದ ಸ್ಥಿತಿಯಲ್ಲಿರುವ ಕತಿಡ್ರಲ್‌ ಸ್ಯಾಕರ್-ಕೂರ್‌ ಇದೆ. ಆದರೆ ಇದು ಮೌರೆಸ್ಕ್ ವಾಸ್ತುಶೈಲಿಯ ಅತ್ಯುತ್ತಮ ಉದಾಹರಣೆಯಾಗಿದೆ.

ಫೆಸ್‌ ಮತ್ತು ಮಾರಾಕೇಚ್‌ನಂತಹ ಇತರೆ ಮೊರೊಕನ್‌ ಪಟ್ಟಣಗಳ ಮದೀನಾಗಳಿಗಿಂತ ಫ್ರೆಂಚ್‌ ಪಾಲನಾ ಅಧಿಕಾರಕ್ಕೂ ಮುಂಚಿನ ಕಾಲದ ಪಟ್ಟಣದ ಭಾಗವಾದ ಹಳೆಯ ಮದೀನಾ ಕಡಿಮೆ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ನವೀಕರಣ ಕಾರ್ಯಕ್ಕೆ ಒಳಗಾಗಿದೆ. ಮದೀನಾದ ಪಶ್ಚಿಮ ಗೋಡೆಗಳು, ಅದರ ಸ್ಕಾಲಾ ಅಥವಾ ಕೊತ್ತಲ ಹಾಗೂ ವಸಾಹತು ಕಾಲಕ್ಕೆ ಸೇರಿದ ಗಡಿಯಾರ ಗೋಪುರದ ನಿರ್ಮಾಣವು ಈ ಯೋಜನೆಯಲ್ಲಿ ಒಳಗೊಂಡಿತ್ತು.

ಇತರೆ ಸ್ಥಳಗಳು[ಬದಲಾಯಿಸಿ]

 • ಕಾಸಾಬ್ಲಾಂಕಾ ಬಂದರು
 • Cathédrale Sacré-Coeur (ಕ್ಯಾತೊಲಿಕ್‌ ಪ್ರಧಾನ ಇಗರ್ಜಿ)
 • ನಗರ ಸಭಾಂಗಣ
 • ಕಾಸಾಬ್ಲಾಂಕಾ ಟೆಕ್ನೊಪಾರ್ಕ್‌
 • ಕಾಸಾಬ್ಲಾಂಕಾ ಟ್ವಿನ್ ಸೆಂಟರ್(ಅವಳಿ ಕೇಂದ್ರ)

ಸಾರಿಗೆ[ಬದಲಾಯಿಸಿ]

ರೈಲುಗಳು[ಬದಲಾಯಿಸಿ]

ಒಎನ್‌ಸಿಎಫ್‌ ಎಂಬ ರಾಷ್ಟ್ರೀಯ ರೈಲು ಸೇವಾ ಸಂಸ್ಥೆಯು ನಿರ್ವಹಿಸುವ ಎರಡು ರೈಲು ನಿಲ್ದಾಣಗಳು ಕಾಸಾಬ್ಲಾಂಕಾದಲ್ಲಿವೆ. ಕ್ಯಾಸಾ ವೊಯೆಜುರ್ಸ್‌ ಬಹುದೂರದ ಪ್ರಮುಖ ರೈಲು ನಿಲ್ದಾಣವಾಗಿದೆ. ಇಲ್ಲಿಂದ ರೈಲುಗಳು ದಕ್ಷಿಣ ದಿಕ್ಕಿನಲ್ಲಿರುವ ಮಾರಾಕೇಷ್‌ ಅಥವಾ ಅಲ್‌ ಜದೀದಾ ಕಡೆಗೆ, ಉತ್ತರಕ್ಕೆ ಮೊಹಮ್ಮದಿಯಾ ಮತ್ತು ರಬತ್‌ ಹಾಗೂ ಅಲ್ಲಿಂದ ಟ್ಯಾಂಗಿಯರ್‌ ಅಥವಾ ಮಕ್ನೆಸ್‌, ಫೆಸ್‌, ತಝಾ ಮತ್ತು ಔಜದಾ ನಗರಗಳತ್ತ ಸಾಗುತ್ತವೆ. ಇಲ್ಲಿನ 5ನೇ ಮೊಹಮದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ವಿಮಾನನಿಲ್ದಾಣ ಶಟಲ್ ಸೇವೆಯು ಈ ನಿಲ್ದಾಣದಲ್ಲಿ ಮುಖ್ಯ ಇನ್-ಸಿಟಿ(ನಗರದೊಳಗಿನ) ನಿಲುಗಡೆಯನ್ನು ಹೊಂದಿದ್ದು, ಇದು ಇನ್ನಷ್ಟು ಸ್ಥಳಗಳಿಗೆ ಸಂಪರ್ಕಗಳನ್ನು ಕಲ್ಪಿಸಿದೆ.

ಕ್ಯಾಸಾ-ಪೋರ್ಟ್‌ ಎಂಬ ಎರಡನೆಯ ರೈಲುನಿಲ್ದಾಣ ಕಾಸಾಬ್ಲಾಂಕಾ ಮತ್ತು ಕೆನಿತ್ರಾಕಾರಿಡರ್‌ನಲ್ಲಿ ಸಂಚರಿಸುವ ರೈಲುಗಳಿಗೆ ಸೇವೆ ಸಲ್ಲಿಸುತ್ತದೆ. ಕೆಲವು ಸಂಪರ್ಕ ರೈಲುಗಳು ಇನ್ನೂ ಮುಂದೆ ಸಾಗಿ ಗ್ಯಾರ್‌ ಡಿ ಕ್ಯಾಸಾ-ವೊಯೆಜೂರ್ಸ್‌ ತಲುಪುತ್ತವೆ. www.oncf.ma

ಬಸ್ಸುಗಳು[ಬದಲಾಯಿಸಿ]

ಸಿಟಿಎಂ ಕೋಚ್‌ಗಳು (ಅಂತರ-ನಗರ ಬಸ್ಸುಗಳು) ಹಾಗೂ ವಿವಿಧ ಖಾಸಗಿ ಬಸ್ಸುಗಳು ಪ್ರಮುಖ ಮೊರೊಕನ್‌ ಪಟ್ಟಣಗಳು ಹಾಗೂ ಹಲವು ಯುರೋಪಿಯನ್‌ ನಗರಗಳಿಗೆ ಬಸ್‌ ಸೇವೆ ಒದಗಿಸುತ್ತವೆ. ಇವು ಕಾಸಾಬ್ಲಾಂಕಾದ ವಾಣಿಜ್ಯ ಪ್ರದೇಶದ ರೂ ಲೆಯಾನ್‌ ಲ್‌'ಆಫ್ರಿಕನ್‌ನಲ್ಲಿರುವ ಗ್ಯಾರ್ ರೂಟಿರ್‌ನಿಂದ ಈ ವಾಹನಗಳು ಪ್ರಯಾಣಿಸುತ್ತವೆ.

ವಿಮಾನಯಾನ[ಬದಲಾಯಿಸಿ]

ಐದನೇ ಮೊಹಮ್ಮದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾಸಾಬ್ಲಾಂಕಾದ ಪ್ರಮುಖ ವಿಮಾನ ನಿಲ್ದಾಣ ಹಾಗೂ ಮೊರೊಕೊದ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಮಾರಾಕೇಷ್‌, ರಬತ್‌, ಅಗಾದೀರ್‌, ಔಜದ ಟ್ಯಾಂಗಿಯರ್‌, ಲಾಯೂನ್‌ ಹಾಗೂ ಇತರೆ ನಗರಗಳತ್ತ ನಿಯಮಿತ ಸ್ಥಳೀಯ ವಿಮಾನಯಾನ ಸೇವೆ ಸಲ್ಲಿಸುತ್ತವೆ.

ಕಾಸಾಬ್ಲಾಂಕಾದಿಂದ ಯುರೋಪ್‌, ಅದರಲ್ಲೂ ವಿಶೇಷವಾಗಿ ಫ್ರೆಂಚ್‌ ಮತ್ತು ಸ್ಪೇನ್ ವಿಮಾನ ನಿಲ್ದಾಣಗಳತ್ತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳಿವೆ. ಜೊತೆಗೆ, ಇಲ್ಲಿಂದ ಉತ್ತರ ಅಮೆರಿಕಾ, ಮಧ್ಯಪ್ರಾಚ್ಯ ಹಾಗೂ ಉಪಸಹರಾ ಆಫ್ರಿಕಾ ಸ್ಥಳಗಳಿಗೆ ಕಾಯಂ ಸಂಪರ್ಕಗಳಿವೆ. ನ್ಯೂಯಾರ್ಕ್‌, ಸೆನೆಗಲ್ ರಾಜಧಾನಿ ಡಾಕಾರ್‌ ಮತ್ತು ಯುಎಇ ದೇಶದ ದುಬೈ ಪ್ರಮುಖ ಗಮ್ಯಸ್ಥಳಗಳಾಗಿವೆ.

ನಗರದ ಪಶ್ಚಿಮ ಭಾಗದಲ್ಲಿರುವ ಹಳೆಯ, ಸಣ್ಣ ಗಾತ್ರದ ಕಾಸಾಬ್ಲಾಂಕಾ-ಅನ್ಫಾ ವಿಮಾನ ನಿಲ್ದಾಣವು ಡಮಾಸ್ಕಸ್, ಟುನಿಸ್‌ ಸೇರಿದಂತೆ ಕೆಲವು ನಿರ್ದಿಷ್ಟ ಗಮ್ಯಸ್ಥಳಗಳತ್ತ ವಿಮಾನ ಸೇವೆಗಳಿದ್ದವು. 2006ರಲ್ಲಿ ಈ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ನಾಗರಿಕ ಸಂಚಾರವನ್ನು ಬಹುಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಇಂದು ಇಲ್ಲಿಂದ ಕೇವಲ ಸ್ಥಳೀಯ ವಿಮಾನಯಾನಗಳು ಮತ್ತು ಸರಕು ಸಾಗಣೆ ಸೇವೆ ಸಲ್ಲಿಸುತ್ತದೆ.

ಟ್ಯಾಕ್ಸಿ ಸೇವೆ[ಬದಲಾಯಿಸಿ]

ಕಾಸಾಬ್ಲಾಂಕಾದಲ್ಲಿ ನೋಂದಾಯಿತ ಟ್ಯಾಕ್ಸಿಗಳು ಕೆಂಪು ಬಣ್ಣದಿಂದ ಕೂಡಿದ್ದು, ಪೆಟಿಟ್ಸ್‌ ಟ್ಯಾಕ್ಸಿ ಗಳು(ಪುಟ್ಟ ಟ್ಯಾಕ್ಸಿ )ಗಳು ಎಂದು ಪರಿಚಿತವಾಗಿದೆ. ಹಾಗೂ ಬಿಳಿ ಬಣ್ಣದ ದೊಡ್ಡ ಟ್ಯಾಕ್ಸಿ ಗಳನ್ನು ಗ್ರ್ಯಾಂಡ್ಸ್‌ ಟ್ಯಾಕ್ಸಿ ಗಳು ಎನ್ನಲಾಗುತ್ತವೆ. ಮೊರೊಕೊದಲ್ಲಿ ಸಾಮಾನ್ಯ ಅಭ್ಯಾಸದಂತೆ, ಪೆಟಿಟ್ಸ್‌‌ ಟ್ಯಾಕ್ಸಿ ಗಳೆಲ್ಲವೂ ಒಂದು ಮಾದರಿಯ ಸಣ್ಣ ಗಾತ್ರದ, ನಾಲ್ಕು ಬಾಗಿಲುಗಳುಳ್ಳ ಫಿಯೆಟ್‌ ಯುನೋ ಅಥವಾ ಸದೃಶ ಕಾರುಗಳಾಗಿರುತ್ತವೆ. ಇವು ನಗರದ ಮದ್ಯಭಾಗದ ಮಹಾನಗರ ಪ್ರದೇಶಗಳಲ್ಲಿ ಮೀಟರ್‌-ಚಾಲಿತ ಕ್ಯಾಬ್‌ ಸೇವೆ ಒದಗಿಸುತ್ತವೆ. ಸಾಮಾನ್ಯವಾಗಿ ಹಳೆಯ ಮರ್ಸಿಡಿಸ್‌ ಬೆನ್ಜ್‌ ಸೆಡಾನ್ ಕಾರುಗಳಾದ ಗ್ರ್ಯಾಂಡ್ಸ್‌ ಟ್ಯಾಕ್ಸಿ ಗಳು ಹಂಚಿಕೊಂಡು ಪ್ರಯಾಣಿಸುವಮಿನಿಬಸ್ಸುಗಳ ರೀತಿಯ ಸೇವೆಯನ್ನು ನಗರದೊಳಗೆ ಪೂರ್ವನಿರ್ಧರಿತ ಮಾರ್ಗಗಳಲ್ಲಿ ಅಥವಾ ಹಂಚಿಕೆಯ ಮೇರೆಗೆ ಅಂತರ-ನಗರ ಸೇವೆ ಒದಗಿಸುತ್ತವೆ. ಗ್ರ್ಯಾಂಡ್ಸ್‌ ಟ್ಯಾಕ್ಸಿಗಳನ್ನು ತಾಸು ಅಥವಾ ದಿನದ ಮೇರೆಗೆ ಬಾಡಿಗೆಗೆ ತೆಗೆದುಕೊಳ್ಳಬಹುದು. ಆದರೆ ಕೇವಲ ವಿದೇಶೀಯರು ಮಾತ್ರ ಈ ಸೇವೆಯನ್ನು ಬಳಸುವರು.

ಮೆಟ್ರೊ[ಬದಲಾಯಿಸಿ]

ಭೂಗರ್ಭ ರೈಲ್ವೆ ವ್ಯವಸ್ಥೆಯು ಸಧ್ಯದಲ್ಲಿ ಯೋಜನೆಯಲ್ಲಿದೆ. ಇದು ನಿರ್ಮಾಣವಾದ ನಂತರ ಸಂಚಾರ ದಟ್ಟಣೆ ಹಾಗೂ ಕಳಪೆ ಗುಣಮಟ್ಟದ ಹವೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮೆಟ್ರೊ 2017ರ ಮುಂಚೆ ಸಿದ್ಧವಾಗಿರುವುದಿಲ್ಲ. ಇದು 10 ಕಿಲೋಮೀಟರ್‌ (6 ಮೈಲುಗಳು) ಉದ್ದವಿರುತ್ತದೆ. ಇದರ ವೆಚ್ಚ 46.7 ಶತಕೋಟಿ ದಿರ್ಹಮ್‌ಗಳು (ಸರಿಸುಮಾರು 5.8 ಶತಕೋಟಿ USD).[೨೪] ಆದರೂ, ಯಾವುದೇ ಪೂರ್ವಸಿದ್ಧತಾ ಕಾರ್ಯಗಳು ಇನ್ನೂ ಆರಂಭವಾಗಿಲ್ಲ ಎಂಬುದನ್ನು ಗಮನಿಸಬೇಕಿದೆ. ಮಾಧ್ಯಮಗಳಲ್ಲೂ ಯಾವುದೇ ಚರ್ಚೆ ನಡೆದಂತೆ ಕಂಡುಬಂದಿಲ್ಲ. ಕಾಸಾಬ್ಲಾಂಕಾ ಜನತೆಯಲ್ಲಿ ಕೇಳಿಬರುವ ಮಾತು, 'ನೀರು ಜಲಗರ್ಭದಲ್ಲಿ ಅತೀ ಕೆಳಗಿದೆ, ಅವರು ಸುರಂಗಗಳನ್ನು ತೋಡಲು ಸಾಧ್ಯವಾಗುವುದಿಲ್ಲ' [ಸೂಕ್ತ ಉಲ್ಲೇಖನ ಬೇಕು]

ಟ್ರ್ಯಾಮ್[ಬದಲಾಯಿಸಿ]

ಟ್ರ್ಯಾಮ್‌ ವ್ಯವಸ್ಥೆಯು ಸದ್ಯಕ್ಕೆ ನಿರ್ಮಾಣ ಹಂತದಲ್ಲಿದ್ದು, 2012ರಲ್ಲಿ ಆರಂಭಗೊಳ್ಳಬೇಕಿದೆ. [ಸೂಕ್ತ ಉಲ್ಲೇಖನ ಬೇಕು]

ಆಡಳಿತಾತ್ಮಕ ವಿಭಾಗಗಳು[ಬದಲಾಯಿಸಿ]

ಕಾಸಾಬ್ಲಾಂಕಾದ ಉಪಗ್ರಹ ಚಿತ್ರಣ
ಕಾಸಾಬ್ಲಾಂಕಾದ ವೈಮಾನಿಕ ನೋಟ

ಕ್ಯಾಸಬ್ಲಾಂಕಾ ಎಂಬುದು ಪ್ರಾಂತೀಯ ಭಾಗವಾಗಿದೆ. ಇದು ಗ್ರ್ಯಾಂಡ್ ಕಾಸಾಬ್ಲಾಂಕಾ ಪ್ರದೇಶದ ಅಂಗವಾಗಿದೆ. ಈ ಪ್ರಾಂತೀಯ ವಿಭಾಗವನ್ನು ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ (ಆಡಳಿತ ಪ್ರಾಂತಗಳು عمالات), ಇವುಗಳು ಇನ್ನೂ 16 ಉಪವಿಭಾಗಗಳು (ಆಡಳಿತ ವಿಭಾಗಗಳು(ಆರೋನ್‌ಡಿಸ್‌ಮೆಂಟ್ಸ್) دوائر) ಹಾಗೂ ಒಂದು ಸ್ಥಳೀಯ ಆಡಳಿತ ವಿಭಾಗ (بلدية)ವಾಗಿ ವಿಂಗಡ ಣೆಯಾಗಿದೆ.

ಜಿಲ್ಲೆಗಳು[ಬದಲಾಯಿಸಿ]

ಕಾಸಾಬ್ಲಾಂಕಾ ನಗರದ ಅಡಳಿತಾತ್ಮಕ ವಿಭಾಗಗಳು [೨೫]
ಜಿಲ್ಲೆಗಳು (ಫ್ರೆಂಚ್‌: Préfectures d'arrondissement, ಅರಾಬಿಕ್‌: عمالة دوائر) ಉಪವಿಭಾಗಗಳು (ಫ್ರೆಂಚ್‌: Arrondissements, ಅರಾಬಿಕ್‌: دوائر) ಪುರಸಭೆಗಳು (ಫ್ರೆಂಚ್‌: Municipalités, ಅರಾಬಿಕ್‌: بلديات ) ಕ್ಷೇತ್ರ ಜನಸಂಖ್ಯೆ(2004)
عين الشقಅಯಿನ್‌ ಚೊಕ್‌ عين الشقಅಯಿನ್‌ ಚೊಕ್‌   28.89 ಕಿ.ಮೀ.² ೨,೫೩,೪೯೬ ನಿವಾಸಿಗಳು
عين السبع الحي المحمديಅಯಿನ್‌ ಸೆಬಾ ಹಯ್‌ ಮೊಹಮ್ಮದಿ عين السبعಅಯಿನ್‌ ಸೆಬಾ   26.7 ಕಿ.ಮೀ.² ೪,೦೭,೮೯೨ ನಿವಾಸಿಗಳು
الحي المحمديಹಯ್‌ ಮೊಹಮ್ಮದಿ  
الصخور السوداء / روش نوارRoches Noires (ಅಸುಖುರ್‌ ಅಸಾವದಾ)  
أنفاಅನ್ಫಾ أنفاಅನ್ಫಾ   37.5 ಕಿ.ಮೀ.² ೪,೯೨,೭೮೭ ನಿವಾಸಿಗಳು
المعاريفಮಾರೀಫ್‌  
سيدي بليوطಸಿದಿ ಬೆಲ್ಯೂತ್‌  
بن مسيكಬೆನ್‌ ಮಸಿಕ್‌ بن مسيكಬೆನ್‌ ಮಸಿಕ್‌   10.27 ಕಿ.ಮೀ.². ೨,೮೫,೮೭೯ ನಿವಾಸಿಗಳು
سباتهಎಸ್‌‌ಬಾತಾ  
سيدي) برنوصي)(ಸಿದಿ) ಬರ್ನೂಸಿ سيدي) برنوصي)(ಸಿದಿ) ಬರ್ನೂಸಿ   38.59 ಕಿ.ಮೀ.² ೪,೫೩,೫೫೨ ನಿವಾಸಿಗಳು
سيدي مومنಸಿದಿ ಮೌಮಿನ್‌  
الفداء - مرس السلطانಅಲ್‌ ಫಿದಾ-ಮರ್ಸ್‌ ಸುಲ್ತಾನ್‌ الفداءಅಲ್‌ ಫಿದಾ المشورಮಚುವರ್‌ 17.9 ಕಿ.ಮೀ.² ೩,೩೨,೬೮೨ ನಿವಾಸಿಗಳು
مرس السلطانಮರ್ಸ್‌ ಸುಲ್ತಾನ್‌  
الحي الحسنيಹಯ್‌ ಹಸನಿ الحي الحسنيಹಯ್‌ ಹಸನಿ   25.91 ಕಿ.ಮೀ.² ೩,೨೩,೨೭೭ ನಿವಾಸಿಗಳು
مولاي رشيدಮೌಲಯ್‌ ರಚಿದ್‌ مولاي رشيدಮೌಲಯ್‌ ರಚಿದ್‌   13.38 ಕಿ.ಮೀ.² ೩,೮೪,೦೪೪ ನಿವಾಸಿಗಳು
سيدي عثمانಸಿದಿ ಒತ್ಮೇನ್  

ಅವಳಿ ಪಟ್ಟಣಗಳು[ಬದಲಾಯಿಸಿ]

ಶಿಕ್ಷಣ[ಬದಲಾಯಿಸಿ]

ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು

 • 2ನೇ ಹಸನ್‌ ವಿಶ್ವವಿದ್ಯಾನಿಲಯ (University of Hassan II) (ಅಯಿನ್‌ ಚೊಕ್‌)
 • École Hassania des Travaux Publics
 • ಐಎಸ್‌ಸಿಎಇ
 • École supérieure de technologie de Casablanca

K ಇಂದ 12ರ ತನಕ

ಕ್ರೀಡೆಗಳು[ಬದಲಾಯಿಸಿ]

 • ರಾಜಾ ಕಾಸಾಬ್ಲಾಂಕಾ
 • ವಯ್ದಾದ್‌ ಕಾಸಾಬ್ಲಾಂಕಾ

ಕಾಸಾಬ್ಲಾಂಕಾದಲ್ಲಿ ಜನಿಸಿದವರು[ಬದಲಾಯಿಸಿ]

 • ಸಲಾಹದ್ದೀನ್‌ ಬಷೀರ್‌ - ಮೊರೊಕನ್‌ ಫುಟ್ಬಾಲ್‌ ಆಟಗಾರ.
 • ಲರ್ಬಿ ಬಿನ್ಬಾರಕ್‌ - ಮೊರೊಕನ್‌ ಫುಟ್ಬಾಲ್‌ ಆಟಗಾರ.
 • ಜೀನ್‌-ಪಾಲ್‌ ಬರ್ಟ್ರಾಂಡ್‌-ಡೆಮೆನ್ಸ್‌ - ಫ್ರೆಂಚ್‌ ಫುಟ್ಬಾಲ್‌ ಆಟಗಾರ.
 • ಮೆರಿಯೆಮ್‌ ಚದಿದ್‌ - ಮೊರೊಕನ್‌ ಖಗೋಳವಿಜ್ಞಾನಿ
 • ಜೀನ್‌-ಚಾರ್ಲ್ಸ್‌ ಡಿ ಕ್ಯಾಸ್ಟೆಲ್ಬಜಾಕ್‌ - ಫ್ರೆಂಚ್‌ ಉಡುಪು ಶೈಲಿ ವಿನ್ಯಾಸಗಾರ.
 • ನಾವಲ್‌ ಅಲ್‌ ಮುತವಕಿಲ್‌ - ಒಲಿಂಪಿಕ್‌ ಚಾಂಪಿಯನ್‌.
 • ಷಾತಾ ಹಸನ್‌ - ಮೊರೊಕ್ಕನ್‌/ಇರಾಕಿ ಗಾಯಕ.
 • ಹಿಚಾಮ್‌ ಮಿಸ್ಬಾಹಿ - ಮೊರೊಕನ್‌ ಬಾಕ್ಸಿಂಗ್‌ ಆಟಗಾರ.
 • ಮುಸ್ತಫಾ ನಿಸಾಬುರಿ - ಮೊರೊಕನ್‌ ಕವಿ.
 • ಹಕಿಮ್‌ ನೂರಿ - ಮೊರೊಕನ್‌ ಚಲನಚಿತ್ರ ನಿರ್ದೇಶಕ.
 • ಮೌರಿಸ್‌ ಒಹಾನಾ - ಫ್ರೆಂಚ್‌ ಸಂಗೀತ ಸಂಯೋಜಕ.
 • ಜೀನ್‌ ರೆನೊ - ಫ್ರೆಂಚ್‌ ಮೂಲದ ಹಾಲಿವುಡ್‌ ನಟ.
 • ಅಲೇನ್‌ ಸುಚನ್‌ - ಫ್ರೆಂಚ್ ಗೀತೆರಚನೆಕಾರ.
 • ಸಿಡ್ನಿ ಟಾರೆಲ್‌ - 1998ರಿಂದ 2008ರ ತನಕ, ಎಲಿ ಲಿಲ್ಲಿ ಅಂಡ್‌ ಕಂಪೆನಿಯ ಅಮೆರಿಕ ಪೌರತ್ವ ಪಡೆದ CEO
 • ರಿಚರ್ಡ್‌ ವಿರೆಂಕ್ - ಫ್ರೆಂಚ್‌ ಸೈಕಲ್‌ ಪಟು.
 • ಅಬ್ದಲ್ಲಾ ಜ್ರಿಕಾ - ಮೊರೊಕನ್‌ ಕವಿ.
 • ಗಾಡ್ ಅಲ್ಮಲಹ್‌ - ಮೊರೊಕನ್‌-ಫ್ರೆಂಚ್‌ ಏಕಪಾತ್ರಾಭಿನಯ ನಟ ಮತ್ತು ಹಾಸ್ಯಕಲಾವಿದ.

ಕಾಲ್ಪನಿಕ ಕಥೆಗಳಲ್ಲಿ[ಬದಲಾಯಿಸಿ]

 • 1942ರಲ್ಲಿ ತೆರೆಕಂಡ, ಹಂಫ್ರೆ ಬೊಗಾರ್ಟ್‌ ಮತ್ತು ಇಂಗ್ರಿಡ್‌ ಬರ್ಗ್ಮನ್‌ ಅಭಿನಯದ ಇದೇ ಹೆಸರಿನ ಚಲನಚಿತ್ರದ ಚಿತ್ರೀಕರಣ ಕಾಸಾಬ್ಲಾಂಕಾದಲ್ಲಿ ನಡೆದಿತ್ತು. ಅಗಿನಿಂದಲೂ ಚಲನಚಿತ್ರವು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ಮೂರು ಆಸ್ಕರ್‌ ಪ್ರಶಸ್ತಿ ಗಳಿಸಿದೆ ಹಾಗೂ ಐದು ಹೆಚ್ಚುವರಿ ವಿಭಾಗಗಳಲ್ಲಿ ನಾಮನಿರ್ದೇಶನ ಗಳಿಸಿದೆ.
 • ಮೂಲತಃ ಹಾರ್ಡಿ ಬಾಯ್ಸ್‌ ಸರಣಿಯ 54ನೆಯ ಸಂಪುಟ ದಿ ಮಿಸ್ಟಿರಿಯಸ್‌ ಕ್ಯಾರವಾನ್‌ ನಲ್ಲಿ ಈ ನಗರವನ್ನು ಉಲ್ಲೇಖಿಸಲಾಗಿದೆ.
 • 2006ರಲ್ಲಿ ಬಿಡುಗಡೆಯಾದ ಡ್ರೀಮ್‌ಫಾಲ್ ‌ ವೀಡಿಯೊ ಆಟದಲ್ಲಿ ಪ್ರಮುಖ ಸ್ಥಳಗಳ ಪೈಕಿ ಕಾಸಾಬ್ಲಾಂಕಾ ಸಹ ಸೇರಿದೆ. ಆಟದ ಪ್ರಮುಖ ಪಾತ್ರಧಾರಿ ಝೋ ಕ್ಯಾಸ್ಟಿಲೊ ಅಲ್ಲಿ ವಾಸಿಸುತ್ತಾನೆ.
 • 1946ರಲ್ಲಿ ಬಿಡುಗಡೆಯಾದ ಎ ನೈಟ್‌ ಇನ್‌ ಕಾಸಾಬ್ಲಾಂಕಾ ಮಾರ್ಕ್ಸ್‌ ಬ್ರದರ್ಸ್‌ ನಿರ್ಮಾಣದ ಹನ್ನೆರಡನೆಯ ಚಲನಚಿತ್ರವಾಗಿತ್ತು. ಗ್ರೌಚೊ ಮಾರ್ಕ್ಸ್‌, ಚಿಕೊ ಮಾರ್ಕ್ಸ್‌ ಮತ್ತು ಹಾರ್ಪೊ ಮಾರ್ಕ್ಸ್‌ ಈ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಲನಚಿತ್ರವನ್ನು ಆರ್ಚಿ ಮೆಯೊ ನಿರ್ದೇಶಿಸಿದ್ದರು, ಹಾಗೂ ಕಥೆ ಬರೆದವರು ಜೋಸೆಫ್‌ ಫೀಲ್ಡ್ಸ್‌ ಮತ್ತು ರೊಲೆಂಡ್‌ ಕಿಬ್ಬೀ. ಈ ಚಲನಚಿತ್ರದಲ್ಲಿ 'ಹೂ ಇಸ್‌ ಸಾರಿ ನೌ?' ಎಂಬ ಹಾಡಿದೆ. ಈ ಹಾಡಿಗೆ ಟೆಡ್‌ ಸ್ನಿಡರ್‌ ಸಂಗೀತ ಸಂಯೋಜಿಸಿದರು. ಗೀತೆ ರಚಿಸಿದವರು ಬರ್ಟ್‌ ಕಲ್ಮರ್ ಮತ್ತು ಹ್ಯಾರಿ ರೂಬಿ.
ಬೀಟ್ರಿಸ್‌ ರೇಯ್ನರ್‌ ಪಾತ್ರ ನಿರ್ವಹಿಸುತ್ತಿದ್ದ ಲಿಸೆಟ್‌ ವರೆಯಾ ಈ ಹಾಡನ್ನು ಫ್ರೆಂಚ್ ಭಾಷೆಯಲ್ಲಿ ಹಾಡಿದರು. ನಂತರ ಈ ಹಾಡನ್ನು ಇಂಗ್ಲಿಷ್‌ನಲ್ಲಿ ಹಾಡಲಾಯಿತು. ಲಿಜ್ಟ್‌ರ ಹಂಗೆರಿಯನ್ ರಾಪ್ಸೋಡಿ(ಮಹಾಕಾವ್ಯ) ನಂ. 2ನ್ನು ಎರಡು ಬಾರಿ ನುಡಿಸಲಾಗಿದೆ. ಮೊದಲ ಬಾರಿ, ಬೀರ್‌ ಬ್ಯಾರೆಲ್ ಪೊಲ್ಕಾ ಹಾಡಿಗೆ ಪರಿಚಯಾತ್ಮಕವಾಗಿ, ಚಿಕೊ ಪಿಯಾನೊ ಮೂಲಕ ನುಡಿಸುತ್ತಾರೆ ಹಾಗೂ ಹಾರ್ಪೊ ಈ ಹಾಡನ್ನು ಹಾರ್ಪ್‌ ವಾದ್ಯದ ಮೂಲಕ ಪುನಃ ನುಡಿಸಿದರು.
 • ರೇಮಂಡ್ ಬೆನ್ಸನ್‌ 2000ರಲ್ಲಿ ರಚಿಸಿದ ಜೇಮ್ಸ್‌ ಬಾಂಡ್‌ ಕಾದಂಬರಿ ಡಬಲ್‌ಶಾಟ್‌‌ನ ಹಲವು ಅಧ್ಯಾಯಗಳು ಕಾಸಾಬ್ಲಾಂಕಾದಲ್ಲಿ ಹೆಣೆಯಲಾದವು. ಈ ಕೃತಿಯಲ್ಲಿ, 1942ರ ಚಲನಚಿತ್ರವು ಹಾಲಿವುಡ್‌ನಲ್ಲಿ ಚಿತ್ರೀಕರಣವಾಯಿತು, ಸ್ಥಳದಲ್ಲಲ್ಲ ಎಂದು ಪಾತ್ರಗಳಲ್ಲೊಂದು ತಿಳಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

 1. "World Gazetteer - Casablanca". World Gazetteer. Retrieved 2010-08-30.
 2. "''Casablanca'' - ''Encyclopedia of the Orient''". Lexicorient.com. Archived from the original on 2016-01-22. Retrieved 2010-08-28.
 3. ಡಿಸ್ಕವರಿಂಗ್‌ ಕಾಸಾಬ್ಲಾಂಕಾ - ದಿ ಆಫ್ರಿಕಾ ಟ್ರಾವೆಲ್ ಅಸೊಷಿಯೇಷನ್‌
 4. ೪.೦ ೪.೧ ಜ್ಯೂಯಿಷ್‌ ವರ್ಚುಯಲ್‌ ಲೈಬ್ರೆರಿ: ಕಾಸಾಬ್ಲಾಂಕಾ
 5. "ಲೆಕ್ಸಿಕ್‌ಓರಿಯಂಟ್‌". Archived from the original on 2016-03-03. Retrieved 2010-11-12.
 6. "Roman Casablanca". Archived from the original on 2011-07-19. Retrieved 2010-11-12.
 7. ಪೆನೆಲ್‌, ಸಿಆರ್‌: ಮೊರೊಕೊ ಫ್ರಮ್‌ ಎಂಪೈರ್‌ ಟು ಇಂಡಿಪೆಂಡೆನ್ಸ್‌ , ಒನ್‌ವರ್ಲ್ಡ್‌, ಆಕ್ಸ್‌ಫರ್ಡ್‌, 2003, ಪು 121
 8. ಪೆನೆಲ್‌, ಸಿಆರ್‌: ಮೊರೊಕೊ ಪ್ರಮ್‌ ಎಂಪೈರ್‌ ಟು ಇಂಡಿಪೆಂಡೆನ್ಸ್‌ , ಒನ್‌ವರ್ಲ್ಡ್, ಆಕ್ಸ್‌ಫರ್ಡ್‌, 2003, ಪು 149
 9. ಆಲ್ಬರ್ಟ್‌ ಹಬಿಬ್‌ ಹುರಾನಿ, ಮಲಿಸ್‌ ರುಥ್ವೆನ್‌ (2002). "ಎ ಹಿಸ್ಟರಿ ಆಫ್‌ ದಿ ಆರಬ್‌ ಪೀಪಲ್ಸ್‌ ". ಹಾರ್ವರ್ಡ್‌ ಯುನಿವರ್ಸಿಟಿ ಪ್ರೆಸ್‌, ಪು. 323. ISBN 0-674-01017-5
 10. "16 Dead in Casablanca Blast". New York Times. 25 December 1953. Retrieved 4 October 2010.
 11. ಟೆರರ್‌ ಸೆಲ್‌: 'ಪೊಲೀಸ್‌ ಹೋಲ್ಡ್ ಫಿಫ್ತ್‌ ಮ್ಯಾನ್‌' 12 ಏಪ್ರಿಲ್‌ 2007
 12. ಕಾಸಾಬ್ಲಾಂಕಾ ಆನ್‌ ಅಲರ್ಟ್‌ ಆಫ್ಟರ್‌ ಸುಯಿಸೈಡ್‌ ಬಾಂಬಿಂಗ್ಸ್‌ 12 ಏಪ್ರಿಲ್‌ 2007
 13. ಯು.ಎಸ್‌. ಷಟ್ಸ್‌ ಮೊರೊಕೊ ಕಾನ್ಸಲೇಟ್‌‌ ಆಫ್ಟರ್‌ ಬಾಂಬ್‌ Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ. 15 ಏಪ್ರಿಲ್‌ 2007
 14. "Weather Information for Casablanca".
 15. Script error: No such module "Description". Casablanca, poumon économique du Maroc Archived 2004-11-02 ವೇಬ್ಯಾಕ್ ಮೆಷಿನ್ ನಲ್ಲಿ.
 16. (French) http://www.casainvest.ma/casainvest/tabid/55/Default.aspx Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.
 17. (French)http://www.topbladi.com/villes/casablanca.htm
 18. Script error: No such module "Description". [೧] Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.
 19. "votre partenaire pour investir à Casablanca au Maroc". CasaInvest.ma. Retrieved 2010-08-28.
 20. "ನಾನ್‌-ಏರ್ಲೈನ್‌ ಪಾರ್ಟ್ನರ್ಸ್‌ Archived 2011-07-15 ವೇಬ್ಯಾಕ್ ಮೆಷಿನ್ ನಲ್ಲಿ.." ರಾಯಲ್‌ ಏರ್‌ ಮಾರೊಕ್‌. 2009ರ ಅಕ್ಟೋಬರ್ 19ರಂದು ಮರುಸಂಪಾದಿಸಲಾಯಿತು.
 21. "ರಾಯಲ್ ಏರ್‌ ಮರೊಕ್‌.( ಆಫ್ರಿಕಾ/ಮಿಡ್ಲ್‌ ಈಸ್ಟ್‌)(ಬ್ರೀಫ್‌ ಆರ್ಟಿಕಲ್‌) Archived 2014-05-29 ವೇಬ್ಯಾಕ್ ಮೆಷಿನ್ ನಲ್ಲಿ.." ಏರ್‌ ಟ್ರಾಂಸ್ಪೋರ್ಟ್‌ ವರ್ಲ್ಡ್‌ . 1 ಜುಲೈ 2004. 2009ರ ಅಕ್ಟೋಬರ್ 19ರಂದು ಮರುಸಂಪಾದಿಸಲಾಯಿತು.
 22. "Casablanca: Nouaceur abritera le futur siège de la RAM[ಶಾಶ್ವತವಾಗಿ ಮಡಿದ ಕೊಂಡಿ]." L'Économiste . 18 ಆಗಸ್ಟ್‌ 2009. 2009ರ ಅಕ್ಟೋಬರ್ 19ರಂದು ಮರುಸಂಪಾದಿಸಲಾಯಿತು.
 23. "Casablanca.ma". Archived from the original on 2007-10-17. Retrieved 2021-08-09.
 24. "ಆರ್ಕೈವ್ ನಕಲು" (PDF). Archived from the original (PDF) on 2013-09-01. Retrieved 2010-11-12.
 25. "La Préfecture de Casablanca (in French)". Casablanca.ma. Archived from the original on 2014-02-05. Retrieved 2010-08-28.
 26. (French) ಜುಮೆಲಜ್‌ ಕಾಸಾಬ್ಲಾಂಕಾ-ಶಿಕಾಗೊ
 27. (French) Liste des protocoles et ententes internationales impliquant la ville de Montréal
 28. (French) Vers la concrétisation de l'accord de jumelage entre Shanghai et Casablanca
 29. ಕ್ವಾಲಾ ಲಂಪರ್‌ ಫ್ಯಾಕ್ಟ್‌ ಫೈಲ್‌ Archived 2011-04-25 ವೇಬ್ಯಾಕ್ ಮೆಷಿನ್ ನಲ್ಲಿ., ಏಷ್ಯನ್‌-ಪೆಸಿಫಿಕ್‌ ಸಿಟಿ ಸಮ್ಮಿಟ್‌. . 2007ರ ಡಿಸೆಂಬರ್ 31ರಂದು ಮರುಸಂಪಾದಿಸಲಾಯಿತು.
 30. (French) Russie - Maroc : les relations bilatérales ont fait leurs preuves

ಬಾಹ್ಯ ಕೊಂಡಿಗಳು[ಬದಲಾಯಿಸಿ]

33°32′N 7°35′W / 33.533°N 7.583°W / 33.533; -7.583