ವಿಷಯಕ್ಕೆ ಹೋಗು

ಕಾಜಿ ನಜ್ರುಲ್ ಇಸ್ಲಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kazi Nazrul Islam
ಜನನ(೧೮೯೯-೦೫-೨೫)೨೫ ಮೇ ೧೮೯೯
Burdwan District, Bengal
ಮರಣ27 August 1976(1976-08-27) (aged 77)
Dhaka, Bangladesh
ಕಾಲಮಾನ20th century philosophy
ಪ್ರದೇಶIslam
ಪರಂಪರೆHanafi Sunni
ಮುಖ್ಯ  ಹವ್ಯಾಸಗಳುPoetry, music, politics, society
ಪ್ರಭಾವಕ್ಕೋಳಗಾಗು
ಅವರ ತತ್ವಶಾಸ್ತ್ರೀಯ ಕೃತಿಗಳಿಗಾಗಿ, ಕೆಳಗಿನ ಮಾಹಿತಿ ಪೆಟ್ಟಿಗೆ ವೀಕ್ಷಿಸಿ.

ಕಾಜಿ ನಜ್ರುಲ್ ಇಸ್ಲಾಮ್ (ಬಂಗಾಳಿ:কাজী নজরুল ইসলাম ಕಾಜಿ ನೊಜ್ರುಲ್ ಇಸ್ಲಾಮ್ ) (25 ಮೇ 1899–27 ಆಗಸ್ಟ್ 1976) ಇವರೊಬ್ಬ ಬೆಂಗಾಳಿ ಕವಿ, ಸಂಗೀತಗಾರ ಮತ್ತು ಕ್ರಾಂತಿಕಾರೀ ವ್ಯಕ್ತಿಯಾಗಿದ್ದರು.ಅವರು ಉಗ್ರ ಬಲಪಂಥೀಯ ಫ್ಯಾಸಿಸಮ್ ವಿರುದ್ದ ಮತ್ತು ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ತೋರುವ ತತ್ವದ ಪ್ರವರ್ತಕರಾಗಿದ್ದರು.ಅವರೊಬ್ಬ ದಿಟ್ಟ ಹೋರಾಟದ ಕವಿ ಹೃದಯದವರಾಗಿದ್ದರು. ಅವರ ಕಾವ್ಯ ಮತ್ತು ರಾಷ್ಟ್ರೀಯತೆಯ ಚಟುವಟಿಕೆಗಳಿಗಾಗಿ ಅವರಿಗೆ ಜನಪ್ರಿಯ ಹೆಸರಾದ ಬಿದ್ರೊಹಿ ಕೊಬಿ (ಕ್ರಾಂತಿಕಾರಿ ಕವಿ) ಎಂಬ ಉಪನಾಮ ನೀಡಲಾಗಿತ್ತು. ಅವರ ಬೃಹತ್ ಪ್ರಮಾಣದ ಸಾಹಿತ್ಯಕ ಬರೆಹದಿಂದಾಗಿ ಅವರು ಜೀವಮಾನವಿಡೀ ಮಾಡಿದ ಸಾಧನೆಗಾಗಿ ಅವರನ್ನು ಬಾಂಗ್ಲಾದೇಶದ ರಾಷ್ಟ್ರೀಯ ಕವಿ ಎಂದು ಅಧಿಕೃತವಾಗಿ ಗುರುತಿಸಲಾಗುತ್ತಿತ್ತು.ಭಾರತದಲ್ಲಿ ಅವರ ಜ್ಞಾಪಕಾರ್ಥ ಚಟುವಟಿಕೆಗಳೂ ನಡೆಯುತ್ತವೆ.

ಬಡ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ನಜ್ರುಲ್ ಆರಂಭದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಮಸೀದೆಯಲ್ಲಿ ಮ್ಯುಸಿಯೆನ್ ಮಹಮ್ಮದೀಯ ಘೋಷಕನಾಗಿ ಸ್ಥಳೀಯ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ರಂಗ ತರಬೇತಿ ಶಿಕ್ಷಣದಲ್ಲಿ ಕಾವ್ಯ,ನಾಟಕ ಮತ್ತು ಸಾಹಿತ್ಯದ ಬಗ್ಗೆ ಕಲಿತುಕೊಂಡರು. ಬ್ರಿಟಿಶ್ ಇಂಡಿಯನ್ ಆರ್ಮಿಯಲ್ಲಿ ಕೆಲ ಕಾಲ ಸೇವೆ ಮಾಡಿದ ನಜ್ರುಲ್ ಕೊಲ್ಕತ್ತಾದಲ್ಲಿ ಪತ್ರಕರ್ತನಾಗಿ ನೆಲೆಯಾದರು.(ಆವಾಗ ಇದು ಕಲ್ಕತ್ತಾ ಆಗಿತ್ತು) ಅವರು ಭಾರತದಲ್ಲಿನ ಬ್ರಿಟಿಶ್ ರಾಜ್ ವನ್ನು ವಿರೋಧಿಸಿದರಲ್ಲದೇ ತಮ್ಮ ಕವಿ-ಕಾವ್ಯದಿಂದ ಕ್ರಾಂತಿಯನ್ನು ಭೋದಿಸಿದರು.ಉದಾಹರಣೆಗೆ "ಬಿದ್ರೊಹಿ"(ದಿ ರೆಬೆಲ್)ಮತ್ತು "ಭಂಗಾರ್ ಗಾನ್ (ದಿ ಸಾಂಗ್ ಆಫ್ ಡಿಸ್ಟ್ರಕ್ಷನ್-ವಿನಾಶದ ಹಾಡು)ಅದಲ್ಲದೇ ಅವರದೇ ಆದ ಪ್ರಕಟನೆ "ಧೂಮಕೇತು" (ದಿ ಕಾಮೆಟ್)ಅವರ ನೆರವಿಗಿದ್ದವು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿನ ಅವರ ಭಾವೋದ್ರೇಕಿತ ಕಾರ್ಯಚಟುವಟಿಕೆ ಬ್ರಿಟಿಶ್ ಸರ್ಕಾರ ಅವರನ್ನು ಸೆರೆಮನೆಗೆ ಅಟ್ಟಿತು. ಅವರು ಸೆರೆಮನೆಯಲ್ಲಿದ್ದಾಗ "ರಾಜ್ಬಂದಿರ್ ಜಬನ್ಬಂದಿ" (ಡಿಪೊಜಿಶನ್ ಆಫ್ ಪೊಲಿಟಿಕಲ್ ಪ್ರಿಜನರ್) ಎಂಬ ಕೃತಿ ರಚಿಸಿದರು. ಭಾರತ ಬಹುಜನರ ಶೋಷಣೆ-ಬವಣೆಗಳ ಬಗ್ಗೆ ಬರೆದ ನಜ್ರುಲ್ ಅವರ ಉದ್ದಾರಕ್ಕಾಗಿ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ.

ನಜ್ರುಲ್ ಅವರ ಬರೆಹಗಳು ಪ್ರೀತಿ,ಸ್ವಾತಂತ್ರ್ಯ ಮತ್ತು ಕ್ರಾಂತಿಯ ಬಗ್ಗೆ ವಿವರಿಸಿವೆ;ಅವರು ಎಲ್ಲಾ ತರಹದ ಮತಾಂಧತೆಯನ್ನು ವಿರೋಧಿಸಿದ್ದಾರೆ.ಅವಲ್ಲದೇ ಧಾರ್ಮಿಕ ಮತ್ತು ಲಿಂಗ ತಾರತಮ್ಯವನ್ನೂ ವಿರೋಧಿಸಿದ್ದಾರೆ. ಅವರ ಜೀವನದುದ್ದಕ್ಕೂ ನಜ್ರುಲ್ ಸಣ್ಣ ಕಥೆಗಳು,ಕಾದಂಬರಿಗಳು ಮತ್ತು ಪ್ರಭಂಧಗಳನ್ನು ಬರೆದಿದ್ದರೂ ತಮ್ಮ ಜನಪ್ರಿಯ ಕವಿತೆಗಳಿಗಾಗಿ ಪ್ರಸಿದ್ದರಾಗಿದ್ದಾರೆ.ಅದಲ್ಲದೇ ನೂತನವಾಗಿ ಬೆಂಗಾಳಿ ಘಜಲ್ ಗಳ ಪ್ರವರ್ತಕರೆನಿಸಿದ್ದಾರೆ. ನಜ್ರುಲ್ ತಮ್ಮದೇ ಆದ 4,000 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.(ಇದರಲ್ಲಿ ಗ್ರಾಮೊಫೊನ್ ರೆಕಾರ್ಡ್ಸ್ ಗಳೂ [೧] ಸೇರಿವೆ)ಇವುಗಳ ಸಂಗ್ರಹಕ್ಕೆ ನಜ್ರುಲ್ ಗೀತಿ (ನಜ್ರುಲ್ ಹಾಡುಗಳು)ಎನ್ನಲಾಗುತ್ತದೆ,ಅವು ಇಂದು ಎಲ್ಲೆಡೆಯೂ ಪ್ರಖ್ಯಾತವಾಗಿವೆ. ಅವರು ತಮ್ಮ 43 ನೆಯ ವಯಸ್ಸಿನಲ್ಲಿ ಅನಾಮಿಕ ಖಾಯಿಲೆಯೊಂದರಿಂದ ಬಳಲಿದಾಗ ಅದರಿಂದ ಅವರ ಧ್ವನಿ ಮತ್ತು ಜ್ಞಾಪಕ ಶಕ್ತಿ ಕುಂದಿದವು. ಅದನ್ನು ಬಹುತೇಕರು ಬ್ರಿಟಿಶ್ ಸರ್ಕಾರವು ಅವರಿಗೆ ನಿಧಾನವಾಗಿ ವಿಷ ಉಣಿಸಿದೆ ಎಂದು ಹೇಳುತ್ತಿದ್ದರು. ಈ ಕಾಯಿಲೆ ಅವರ ಆರೋಗ್ಯ ಕ್ಷೀಣಿಸಲು ಕಾರಣವಾಯಿತಲ್ಲದೇ ಅನಿವಾರ್ಯವಾಗಿ ಅವರು ಹಲವು ವರ್ಷಗಳ ಕಾಲ ಒಂಟಿ ಬದುಕು ಸಾಗಿಸಬೇಕಾಯಿತು. ಬಾಂಗ್ಲಾದೇಶ ಸರ್ಕಾರದ ಆಮಂತ್ರಣದ ಮೇರೆಗೆ ನಜ್ರುಲ್ ಮತ್ತು ಅವರ ಕುಟುಂಬವು 1972 ರಲ್ಲಿ ನಾಲ್ಕು ವರ್ಷಗಳ ಅನಂತರ ಢಾಕಾಗೆ ಸ್ಥಳಾಂತರವಾಯಿತು.

ಆರಂಭಿಕ ಜೀವನ[ಬದಲಾಯಿಸಿ]

ಚಿತ್ರ:NazrulArmy.jpg
ಸೈನ್ಯಪಡೆಯಲ್ಲಿ ನಜ್ರುಲ್

ಕಾಜಿ ನಜ್ರುಲ್ ಅವರು ಬಂಗಾಳದ ಬುರ್ದ್ವಾನ್ ಜಿಲ್ಲೆಯ ಚುರುಲಿಯಾ ಗ್ರಾಮದಲ್ಲಿ ಜನಿಸಿದರು.(ಅದೀಗ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ.)[೨] ಅವರು ಪ್ರಬಲ ತಾಲುಕುಬಾರ ಮುಸ್ಲಿಮ್ ಕುಂಟುಂಬದಲ್ಲಿ ಮೂರುಗಂಡುಮಕ್ಕಳು ಇಬ್ಬರು ಹೆಣ್ಣು ಮಕ್ಕಳಲ್ಲಿ ಎರಡನೇಯರಾಗಿ ಜನಿಸಿದರು ನಜ್ರುಲ್ ಅವರ ತಂದೆ ಕಾಜಿ ಫಕೀರ್ ಅಹ್ಮದ್ ಒಬ್ಬ ಇಮಾಮ್ ಅಲ್ಲದೆ ಸ್ಥಳೀಯ ಮಸೀದೆಯ ಅಡಳಿತ ಮತ್ತು ಸಮಾಧಿ ಸ್ಥಳಗಳ ಉಸ್ತುವಾರಿ ವಹಿಸಿದ್ದರು. ನಜ್ರುಲ್ ಅವರ ತಾಯಿ ಜಿಂದಾ ಖಾತುನ. ನಜ್ರುಲ್ ಗೆ ಇಬ್ಬರು ಸಹೋದರರು ಕಾಜಿ ಆಲಿ ಹುಸೇನ್ ಹಾಗು ಉಮ್ಮೆ ಕುಲ್ಸು ಎಂಬ ಹೆಸರಿನ ಓರ್ವ ಸೋದರಿ ಇದ್ದರು. ಅವರನ್ನು ದುಃಖು ಮಿಯಾ (ವಿಷಾದದ ಮನುಷ್ಯ) ಎಂದು ಸಂಕ್ಷಿಪ್ತ ನಾಮದಿಂದ ಕರೆಯಲಾಗುತ್ತಿತ್ತು.ನಜ್ರುಲ್, ಸ್ಥಳೀಯ ಮಸೀದೆ ನಡೆಸುತ್ತಿದ್ದ ಧಾರ್ಮಿಕ ಶಾಲೆ ಮಕ್ತಬ್ ಗೆ ಹೋಗುತ್ತಿದ್ದರು.ಅಲ್ಲಿ ಅವರು ಕುರಾನ್ ಮತ್ತು ಅದರ ಸಾಹಿತ್ಯವನ್ನು ಇಸ್ಲಾಮಿಕ್ ತತ್ವಶಾಸ್ತ್ರವನ್ನು ಅಲ್ಲದೇ ಗದ್ಯದ ಭಾಗಗಳನ್ನು ಅಧ್ಯಯನ ಮಾಡಿದರು. ಅವರ ತಂದೆಯ ಸಾವಿನ ನಂತರ 1908 ರಲ್ಲಿ ಅವರ ಕುಟುಂಬವು ಬಹಳಷ್ಟು ತೊಂದರೆಗೀಡಾಗಿತ್ತು. ತಮ್ಮ ಎಳೆ ವಯಸ್ಸಿನಲ್ಲಿ ಹತ್ತನೆಯ ವರ್ಷದಲ್ಲಿ ನಜ್ರುಲ್ ತಮ್ಮ ತಂದೆ ಸ್ಥಾನದಲ್ಲಿ ಮಸೀದೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ಅದರೊಂದಿಗೆ ತಮ್ಮ ಕುಟುಂಬದವರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭ ಮಾಡಬೇಕಾಯಿತು. ನಂತರ ಮುಜೆಯಿನ್ ಆಗಿ ಮಸೀದೆಯಲ್ಲಿ ಕೆಲಸ ಮಾಡಿ ಅಥಾನ್ ಮತ್ತು ಜನರನ್ನ ಪ್ರಾರ್ಥನೆಗೆ ಕರೆಯುವ ಕೆಲಸ ಮಾಡುತ್ತಿದ್ದರು.[೩][೪]

ಜನಪದ ನಾಟಕ ರಂಗದೆಡೆಗಿನ ಆಕರ್ಷಣೆಯಿಂದಾಗಿ ನಜ್ರುಲ ಲೆಟೊ ಅಂದರೆ ಪೌರಾಣಿಕ ನಾಟಕಗಳ (ಸಂಚಾರಿ ತಂಡದೊಂದಿಗೆ ಸೇರಿದರು).ಇದನ್ನು ಅವರ ಸಂಭಂಧಿ ಬಜ್ಲೆ ಕರೀಮ್ ನಡೆಸುತ್ತಿದ್ದರು. ಅವರೊಂದಿಗೆ ಕೆಲಸ ಮಾಡುತ್ತಾ ಅಭಿನಯದಲ್ಲಿ ತೊಡಗಿ ಅದರೊಂದಿಗೇ ಹಾಡು-ಕವಿತೆಗಳನ್ನು ನಾಟಕ ಮತ್ತು ಸಂಗೀತ ಗೋಷ್ಟಿಗಳನ್ನು ನಡೆಸಲಾರಂಭಿಸಿದ್ದರು.[೨] ನಜ್ರುಲ್ ಅವರು ಈ ಕೆಲಸದ ಅನುಭವದ ಮೂಲಕ ಬಂಗಾಳಿ ಮತ್ತು ಸಂಸ್ಕೃತ ಸಾಹಿತ್ಯ ಮತ್ತು ಹಿಂದೂ ಧರ್ಮ ಗ್ರಂಥಗಳಾದ ಪುರಾಣಗಳ ಬಗ್ಗೆಯೂ ಕಲಿಯಲಾರಂಭಿಸಿದರು. ಆಗ ಈ ಕಿರಿಯ ಕವಿ ತನ್ನ ನಾಟಕ ಗುಂಪಿಗಾಗಿ ಹಲವು ಕವಿತೆಗಳನ್ನು ರಚಿಸಿದ.ಅದರಲ್ಲಿ "ಚಾಸರ್ ಸಾನ್("ರೈತನ ಕತೆ"), "ಶಕುನಿಬಾಧ್" ("ರಣಹದ್ದುಗಳ ಹತ್ಯೆ"),"ರಾಜಾ ಯುಧಿಷ್ಟರ್ ಸಾನ್("ಆಗ ರಾಜನಾಗಿದ್ದ ಯುಧಿಷ್ಟರ್ "),ನ ಕತೆ "ದಾತಾ ಕರ್ಣ" ("ದಾನಶೂರ ಕರ್ಣ "),"ಅಕ್ಬರ್ ಬಾದಶಾಹ್" ("ಚಕ್ರವರ್ತಿ ಅಕ್ಬರ್ "),"ಕವಿ ಕಾಳಿದಾಸ್" ("ಕವಿ ಕಾಳಿದಾಸ "), "ವಿದ್ಯಾಭುತುಮ್" ("ಜಾಣ ಗೂಬೆ"), ಮತ್ತು "ರಜಪುತ್ರರ್ ಸಾನ್" ("ಮಹಾರಾಜನೊಬ್ಬನ ಕಥೆ"),[೩]

1910 ರಲ್ಲಿ ಈ ತಂಡ ತೊರೆದು ರಾಣಿಗಂಜ್ ಸಿಯರ್ಸೊಲೆ ರಾಜ್ ಸ್ಕೂಲ್ ಗೆ ಪ್ರವೇಶ ಪಡೆದುಕೊಂಡರು.ನಂತರ ಮಾತ್ರುನ್ ಹೈಸ್ಕೂಲ್ ಇಂಗ್ಲೀಷ್ ಸ್ಕೂಲ್ ಗೆ ಬಂದು ಅಲ್ಲಿನ ಮುಖ್ಯಾಧ್ಯಾಪಕ ಕುಮುದ್ರಂಜನ್ ಮಲ್ಲಿಕ್ ಅವರ ಮಾರ್ಗದರ್ಶನದಲ್ಲಿ ಕಲಿಯಲಾರಂಭಿಸಿದರು. ಶಾಲಾ ಶುಲ್ಕ ಭರಿಸಲಾಗದೇ ನಜ್ರುಲ್ ಶಾಲೆ ಬಿಟ್ಟು ಕವಿಯಾಲ್ಸ್ ಎಂಬ ಮತ್ತೊಂದು ಗುಂಪನ್ನು ಸೇರಿಕೊಂಡರು. ನಂತರ ಅಸೊನ್ಸಲ್ ನಗರದಲ್ಲಿನ ಕ್ರಿಶ್ಚಿಯನ್ ರೈಲ್ವೆ ಗಾರ್ಡ್ ಒಬ್ಬರ ಮನೆಯಲ್ಲಿ ಅಡಿಗೆಯವನಾಗಿ ಸೇರಿ ಅಲ್ಲಿನ ಬೇಕರಿ ಮತ್ತು ಚಹಾ ಅಂಗಡಿಯಲ್ಲಿ ಕೆಲಸ ಮಾಡಲಾರಂಭಿಸಿದರು. ಆಗ 1914 ರಲ್ಲಿ ನಜ್ರುಲ್ ದರಿರಾಮ್ ಪುರ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದರು.(ಸದ್ಯ ಅದು ಮಿಮೆನ್ಸಿಂಗ್ ಜಿಲ್ಲೆಯ ತ್ರಿಶಾಲ್ ನಲ್ಲಿ ಜತಿಯಾ ಕಾಬಿ ಕಾಜಿ ನಜ್ರುಲ್ ಇಸ್ಲಾಮ್ ಯುನ್ವರ್ಸಿಟಿ ಎನಿಸಿದೆ.) ನಜ್ರುಲ್ ಅಧ್ಯಯನ ಮಾಡಿದ ಇನ್ನಿತರ ವಿಷಯಗಳೆಂದರೆ ಬೆಂಗಾಲಿ, ಸಂಸ್ಕೃತ, ಅರಬಿಕ್, ಪರ್ಸಿಯನ್ ಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತ ಇತ್ಯಾದಿಗಳನ್ನು ಕಲಿಸುವ ಗುರುವರ್ಗ ಅವರ ಪ್ರತಿಭೆಯನ್ನು ಮೆಚ್ಚಿ ಕೊಂಡಾಡುವಂತಹ ಅಧ್ಯಯನ ಅವರದಾಗಿತ್ತು.[೩]

ನಜ್ರುಲ್ X ವರ್ಗದ ವರೆಗೂ ಕಲಿತರೂ ಮೆಟ್ರಿಕ್ಯುಲೇಶನ್ ನ ಪ್ರಾಥಮಿಕ ಪರೀಕ್ಷೆಗೆ ಹಾಜರಾಗುವುದಾಗಲಿಲ್ಲ.ಅದರ ಬದಲಿಗೆ ಭಾರತ ಸೈನ್ಯ ಇಲಾಖೆಯಲ್ಲಿ 1917 ರ ಸುಮಾರಿಗೆ ತಮ್ಮ ಹದಿನೆಂಟನೆಯ ವಯಸ್ಸಿನಲ್ಲೇ ದಾಖಲಾದರು. ಅವರು ಬ್ರಿಟಿಶ್ ಸೈನ್ಯ ಸೇರಲು ಎರಡು ಕಾರಣಗಳಿದ್ದವು:ಒಂದು ತಮ್ಮ ಯೌವನದ ಹುಮ್ಮಸಿನಲ್ಲಿ ಹೊಸದನ್ನು ಕಲಿಯಬೇಕೆಂಬ ಉತ್ಕಟ ಇಚ್ಛೆ, ಎರಡನೆಯದು ರಾಜಕೀಯ ವಲಯದಲ್ಲಿನ ಅಗತ್ಯವನ್ನು ಅವರು ಕಂಡಿದ್ದರು.[೫] ಆಗಿನ 49 ನೆಯ ಬೆಂಗಾಲ್ ರೆಜಿಮೆಂಟ್ ಗೆ ಸೇರಿದ್ದ ಅವರನ್ನು ಕರಾಚಿಯಲ್ಲಿನ ಕಂಟೋನ್ ಮೆಂಟ್ ಗೆ ನೇಮಕ ಮಾಡಲಾಯಿತು.ಅವರು ಅಲ್ಲಿ ತಮ್ಮ ಮೊದಲ ಗದ್ಯ ಮತ್ತು ಪದ್ಯಗಳನ್ನು ಬರೆದರು. ಆಗಾಗ ಅಂತಹ ಯುದ್ದ ಸಂದರ್ಭದ ಕ್ರಿಯಾ ಚಟುವಟಿಕೆಗಳನ್ನು ಅನುಭವಿಸದಿದ್ದರೂ ಅವರು ಹವಿಲ್ದಾರ್ , ಹುದ್ದೆಗೆ ಬಡ್ತಿ ಪಡೆದರು.ತಮ್ಮ ಬಟಾಲಿಯನ್ ಗೆ ಕ್ವಾರ್ಟರ್ ಮಾಸ್ಟರ್.ಆಗಿ ಸೇವೆ ಸಲ್ಲಿಸಿದರು.[೩] ಈ ಸಂದರ್ಭದಲ್ಲಿ ನಜ್ರುಲ್ ವ್ಯಾಪಕವಾಗಿ ಓದುವ ಹವ್ಯಾಸ ಬೆಳೆಸಿಕೊಂಡರು, ರಬೀಂದ್ರ ನಾಥ ಟ್ಯಾಗೊರ್ ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯ, ಅಲ್ಲದೇ ಪರ್ಸಿಯನ್ ಕವಿಗಳಾದ ಹ್ಜಫೆಜ್,ರುಮಿ ಮತ್ತು ಒಮರ್ ಖಯ್ಯಾಮ್ ಅವರುಗಳ ಬರಹದಿಂದ ಗಾಢವಾಗಿ ಪ್ರಭಾವಿತರಾದರು. ಅವರು ರೆಜಿಮೆಂಟನಲ್ಲಿದ್ದ ಪಂಜಾಬಿ ಮೌಲ್ವಿ ಅವರ ಸಂಗೀತ ಮತ್ತು ಸಾಹಿತ್ಯದ ಅಭಿರುಚಿಯಿಂದ ಆಕರ್ಷಿತರಾದರು. ಅವರ ಮೊದಲ ಗದ್ಯ "ಬೌಂದುಲರ್ ಆತ್ಮಕಹಿನಿ"(ಅಲೆಮಾರಿಯ ಬದುಕು)ಇದು ಮೇ 1919 ರಲ್ಲಿ ಪ್ರಕಟವಾಯಿತು. ಅವರ ಕವಿತೆ "ಮುಕ್ತಿ" (ಫ್ರೀಡಮ್)ನ್ನು "ಬಾಂಗ್ಲಾ ಮುಸಲ್ಮಾನ್ ಸಾಹಿತ್ಯ ಪತ್ರಿಕಾ"ಪ್ರಕಟಿಸಿತು.(ಬೆಂಗಾಲಿ ಮುಸ್ಲಿಮ್ ಮಿಲಿಟರರಿ ಜರ್ನಲ್)[೩]

ಕ್ರಾಂತಿಕಾರಿ ಕವಿ[ಬದಲಾಯಿಸಿ]

ಚಿತ್ರ:Nazrul1.gif
ಯುವ ನಜ್ರುಲ್

ನಜ್ರುಲ್ 1920 ರಲ್ಲಿ ಸೈನ್ಯ ತೊರೆದು ಕಲ್ಕತ್ತಾದಲ್ಲಿ ನೆಲೆಯಾದರು.ಆಗ ಅದು ಭಾರತದ ಸಾಂಸ್ಕೃತಿಕ ರಾಜಧಾನಿ ಎನಿಸಿತ್ತು.(ಅದನ್ನು 1911 ರಲ್ಲಿ ರಾಜಕೀಯವಾಗಿ ರಾಜ್ಯ ರಾಜಧಾನಿಯನ್ನಾಗಿಸಲಾಯಿತು)[೬] ಅವರು "ಬಾಂಗಿಯಾ ಮುಸಲ್ಮಾನ್ ಸಾಹಿತ್ಯ ಸಮಿತಿ"ಗೆ ಸಿಬ್ಬಂದಿಯಾದರು.(ಬೆಂಗಾಲಿ ಮುಸ್ಲಿಮ್ ಲಿಟರರಿ ಸೊಸೈಟಿ")ಅಲ್ಲದೇ ಅಲ್ಲಿನ 32 ಕಾಲೇಜ್ ಸ್ಟ್ರೀಟ್ ನಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ವಾಸವಾದರು. ಅವರು ತಮ್ಮ ಮೊದಲ ಕಾದಂಬರಿ "ಬಂಧನ್-ಹರಾ"(ಸಂಕೋಲೆಯಿಂದ ಮುಕ್ತಿ)ಯನ್ನು 1920 ರಲ್ಲಿ ಅದರ ನಂತರ ಸತತ ಏಳು ವರ್ಷಗಳ ಕಾಲ ಸಾಹಿತ್ಯದ ಮೇಲೆ ಕೆಲಸ ಮಾಡಿಸಿದರು.[೩] ಅವರ ಮೊದಲ ಕವನ ಸಂಕಲನಗಳೆಂದರೆ "ಬೊಧಾನ್","ಶತ್-ಇಲ್-ಅರಬ್","ಖೆಯಾ-ಪರೆರ್ ತರನಿ" ಮತ್ತು "ಬಾದಲ್ ಪ್ರತೆರ್ ಶರಾಬ್" ಮತ್ತು ಇವುಗಳಿಗಾಗಿ ಹಲವು ಮೆಚ್ಚುಗೆಗಳನ್ನು ಅವರು ಪಡೆದಿದ್ದರು.[೩]

ಈ ಸಾಹಿತ್ಯದ ಸೊಸೈಟಿಯೊಂದಿಗೆ ಕೆಲಸ ಮಾಡುವಾಗ ಅನೇಕ ಯುವ ಮುಸ್ಲಿಮ್ ಬರೆಹಗಾರರೊಂದಿಗೆ ನಜ್ರುಲ್ ಅವರ ನಿಕಟ ಸಂಪರ್ಕ ಬೆಳೆಯಿತು.ಅದರಲ್ಲಿ ಮೊಹಮ್ಮದ್ ಮೊಜಾಮ್ಮೆಲ್ ಹಕ್, ಅಫ್ಜುಲುಲ್ ಹಕ್, ಕಾಜಿ ಅಬ್ದುಲ್ ವಾದುಬ್ ಮತ್ತು ಮುಹಮ್ಮದ್ ಶಾಹಿಸುಲ್ಲಾ ಇತ್ಯಾದಿ ಅವರು ಕಲ್ಕತ್ತಾದ ಬರೆಹಗಾರರ ಕ್ಲಬ್ ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು.ಅದರಲ್ಲಿ ಪ್ರತಿಭಾವಂತ ಕವಿಗಳು ಮತ್ತು ವಿದ್ವಾಂಸರ ಸಾಂಗತ್ಯ ದೊರಕಿತು.ಅದರಲ್ಲೂ ಗಜೇಂದ್ರ ಅಡಾ ಮತ್ತು ಭಾರತೀಯ ಅಡಾ ಪ್ರಮುಖರಾಗಿದ್ದರು. ನಜ್ರುಲ್ 1921 ರ ಅಕ್ಟೋಬರಲ್ಲಿ ಶಾಂತಿನಿಕೇತನಕ್ಕೆ ಮುಹಮ್ಮದ್ ಶಾಹಿದುಲ್ಲಾರೊಂದಿಗೆ ತೆರಳಿ ರಬೀಂದ್ರನಾಥ್ ಟ್ಯಾಗೊರ್ ರನ್ನು ಭೇಟಿ ಮಾಡಿದರು. ಹಲವು ಭಿನಾಭಿಪ್ರಾಯಗಳಿದ್ದರೂ ನಜ್ರುಲ್ ಟ್ಯಾಗೊರ್ ರನ್ನು ತಮ್ಮ ಸಾಹಿತ್ಯದ ಗುರು ಎಂದು ಹೇಳುತ್ತಿದ್ದರಲ್ಲದೇ ಬಹುದಿನಗಳ ಕಾಲ ಅವರೊಂದಿಗೆ ನಿಕಟವಾಗಿದ್ದರು.[೩] ನಜ್ರುಲ್ 1921 ರಲ್ಲಿ ನರ್ಗಿಸ್ ರೊಂದಿಗೆ ವಿವಾಹವಾದರು.ನರ್ಗಿಸ್ ದೌಲತ್ ಪುರದ ಕೊಮಿಲ್ಲಾದಲ್ಲಿನ ಪ್ರಸಿದ್ದ ಮುಸ್ಲಿಮ್ ಪ್ರಕಾಶ ಅಲಿ ಅಕ್ಬರ್ ಖಾನ್ ಅವರ ಸಂಭಂಧಿಯಾಗಿದ್ದರು. ಆದರೆ ಜೂನ್ 18,1921-ರ ದಿನ ಅಲಿ ಅಕ್ಬರ್ ಖಾನ್ ಅವರು ಬಹಿರಂಗವಾಗಿಯೇ ಮದುವೆ ಅನಂತರ ನಜ್ರುಲ್ ದೌಲತ್ ಪುರದಲ್ಲಿಯೇ ಇರಬೇಕೆಂದು ಕಡ್ಡಾಯ ವಿಧಿಸಿದಾಗ ಅವರು ಅದೇ ಕ್ಷಣ ಅಲ್ಲಿಂದ ಹೊರಟರು.

ನಜ್ರುಲ್ ಅವರು 1922 ರಲ್ಲಿ ಪ್ರಕಟಿಸಿದ "ಬಿದ್ರೊಹಿ" ಅತ್ಯಂತ ಜನಪ್ರಿಯ ಕೃತಿಯಾಯಿತು.ಭಾರತದ ಸಾಹಿತ್ಯ ಕ್ಷೇತ್ರದಲ್ಲಿಯೂ ಇದರ ಮೆಚ್ಚುಗೆ ವ್ಯಕ್ತವಾಯಿತು.ಅವರ ಕಥಾಹಂದರವು ಚಳವಳಿಯ ಉತ್ತೇಜನಕ್ಕೆ ಕಾರಣವಾಯಿತು:.[೭]

ನಾನು ಉಸಿರು ಬಿಡಲಾಗದ ದುಃಖವೆನಿಸಿದ್ದೇನೆ,

ಮೊದಲ ಹಸ್ತ ಸ್ಪರ್ಶದಿಂದಲೇ ನಡುಕ ಉಂಟು ಮಾಡುವಂತಹ ಸ್ಥಿತಿಗೆ ತಲುಪಿದ್ದೇನೆ,
ನಾನು ಅವಳ ಮೊದಲ ಮುತ್ತಿನ ಮೆದು ಸ್ಪರ್ಷವನ್ನು ಕದ್ದಿದ್ದೇನೆ.
ನಾನು ಅವಳ ನೋಟದಲ್ಲಿನ ಅಲ್ಪಕಾಲೀನ ಮುಸುಕಿನಲ್ಲಿನ ಗೋಚರತೆ ನನಗಾಗಿದೆ.
ನಾನು ಅವಳ ನಿರಂತರ ರಹಸ್ಯವಾದ ನೋಟವ ಅಪೇಕ್ಷಿಸುತ್ತೇನೆ...

...

ನಾನು ಭೂಮಿಯ ಎದೆಯಿಂದ ಹೊತ್ತಿ ಉರಿಯುತ್ತಿರುವ ಜ್ವಾಲಾಮುಖಿಯಂತಿದ್ದೇನೆ,
ನಾನು ಅರಣ್ಯದೊಳಗಿನ ಕಾಡ್ಗಿಚ್ಚಾಗಿದ್ದೇನೆ,
ನಾನು ನರಕದ ಹುಚ್ಚು ಹೊಳೆಯಂತೆ ಕೋಪಾವಿಷ್ಟನಾಗಿದ್ದೇನೆ!
ನಾನು ಈ ಗುಡುಗು-ಮಿಂಚಿನ ರೆಕ್ಕೆಗಳ ಮೇಲೆ ಸಂತೋಷದಿಂದ ಹಾರುತ್ತಿದ್ದೇನೆ ಮತ್ತು ಅದನ್ನು ಅನುಭವಿಸುತ್ತಿದ್ದೇನೆ,
ನಾನು ಈ ಜಿಪುಣತನ ಮತ್ತು ಭಯವನ್ನು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿಸುವೆನು,

ನಾನು ಈ ಭೂಮಿಯ ಮೇಲಿನ ಅಸ್ತಿತ್ವದಲ್ಲಿರುವ ವಿಶ್ವಕ್ಕೇ ಭೂಕಂಪವನ್ನುಂಟು ಮಾಡಬಲ್ಲೆನು! “(8 ನೆಯ ಪದ್ಯದ ನುಡಿ)”

ನಾನು ಸಾವಿರದ ನಿರಂತರ,ಚಿರನೂತನ ಕ್ರಾಂತಿಕಾರಿ,
ನಾನು ವಿಶ್ವಗಿಂತಲೂ ಮೇಲ್ಮಟ್ಟದಲ್ಲಿ ನನ್ನ ತಲೆ ಎತ್ತಬಲ್ಲೆನು,
ಎತ್ತರ,ಇನ್ನಷ್ಟು ಎತ್ತರಕ್ಕೇರಿ ಮತ್ತು ಏಕಾಂಗಿಯಾಗಿ ಮೇಲೇರುತ್ತೇನೆ! “(ಕೊನೆಯ ನುಡಿ)”[೮](ಕಬೀರ್ ಚೌಧರಿಯವರಿಂದ ಇಂಗ್ಲಿಷ್ ಅನುವಾದ )

"ಬಿಜ್ಲಿ" (ಸಿಡಿಲು )ಎಂಬ ಹೆಸರಿನ ಪತ್ರಿಕೆಯನ್ನು ಕ್ರಾಂತಿಕಾರಿ ಭಾಷೆ ಬಳಸಿ ಅದನ್ನು ಅಸಹಕಾರ ಚಳವಳಿಗೆ ಪೂರಕವಾಗುವಂತೆ ಪ್ರಕಟಿಸಲಾಗುತ್ತಿತ್ತು.-ಮೊದಲ ಬಾರಿಗೆ ರಾಷ್ಟ್ರೀಯ ಆಂದೋಲ ನಾಗರಿಕ ಅಸಹಕಾರವನ್ನು ಬ್ರಿಟಿಶ್ ಕಾನೂನನ್ನು ವಿರೋಧಿಸಲು ಮಾಡಲಾಯಿತು.[೩]

ನಜ್ರುಲ್ ವಿವಿಧ ಶಕ್ತಿಗಳ ಬಲವನ್ನು ಎಳೆ-ಎಳೆಯಾಗಿ ಬಿಡಿಸಿದ್ದಾರೆ.ಈ ಕ್ರಾಂತಿಯೊಂದಿಗೆ ಅಲ್ಲೆಲ್ಲ ಉತ್ತಮ ಕಾಯ್ದಿಟ್ಟ ಅಭಿವೃದ್ಧಿಪರತೆ ಅಲ್ಲದೇ ಭಾವನಾತ್ಮಕ ಅಭಿಪ್ರಾಯಗಳಿಗೆ ಅವರು ಮುಂದಾದರು. ನಜ್ರುಲ್ "ಪ್ರಲಯೋಲ್ಲಾಸ ("ಸುಖಭ್ರಾಂತಿಯ ನಾಶ")ಮತ್ತು ಅವರ ಮೊದಲ ಕವಿತೆಗಳ ಸಂಗ್ರಹ "ಅಗ್ನಿವೀಣಾ"(ಲಿರೆ ಆಫ್ ಫೈಯರ್)ವನ್ನು 1922 ರಲ್ಲಿ ಹೊರತಂದಾಗ ಅದೆಲ್ಲೆಡೆಯೂ ಅಚ್ಚರಿ ಮೂಡಿಸುವಂತೆ ಜನಪ್ರಿಯವಾದವು. ಅವರು ತಮ್ಮ ಮೊದಲ ಸಣ್ಣ ಕಥೆಗಳ ಸಂಗ್ರಹ "ಬ್ಯಾಥರ್ ದಾನ್"(ದುಃಖದ ದೇಣಿಗೆ")ಮತ್ತು "ಯುಗ್ಬಾನಿ"ಇದು ಪ್ರಭಂಧಗಳ ಸಂಗ್ರಹವಾಗಿದೆ.

| ಕ್ರಾಂತಿಕಾರಿ[ಬದಲಾಯಿಸಿ]

ಚಿತ್ರ:Nazrul10.jpg
ನಜ್ರುಲ್ ತನ್ನ ಮೊದಲ ಪುತ್ರ ಬುಲ್ ಬುಲ್ ನೊಂದಿಗೆ.ಪತ್ನಿ ಪ್ರಮಿಳಾ ಅವರ ಬಲಬದಿ ಮತ್ತು ಅವರ ಅತ್ತೆ ಗಿರಿಬಾಲಾ ದೇವಿ ಎಡಬದಿ ಇವರ ಹಿಂದೆ ಬುಲ್ ಬುಲ್ ನ ಅಜ್ಜಿ ಇದ್ದಾರೆ.

ನಜ್ರುಲ್ ತಮ್ಮ ಮೊದಲ ದ್ವೈಸಾಪ್ತಾಹಿಕ "ದೂಮ್ ಕೇತು" (ಕಾಮೆಟ್ )ವನ್ನು ಆಗಷ್ಟ್ 12.1922 ರಲ್ಲಿ ಆರಂಭಿಸಿದರು. ಅವರು "ಕ್ರಾಂತಿಕಾರಿ ಕವಿ" ನಜ್ರುಲ್ ಎಂದು ಹೆಸರಾದರು.ಅದಲ್ಲದೇ ಬ್ರಿಟಿಶ್ ಅಧಿಕಾರಿಶಾಹಿಯ ಸಂಶಯಾತ್ಮಕ ಕಣ್ಣಿಗೂ ಗುರಿಯಾದರು.[೨] "ಧೂಮಕೇತು"ವಿನಲ್ಲಿ ಸೆಪ್ಟೆಂಬರ್ 1922 ರಲ್ಲಿ ಪ್ರಕಟವಾದ ರಾಜಕೀಯ ಕವಿತೆಯೊಂದರಿಂದ ಅವರ ಪತ್ರಿಕಾ ಕಚೇರಿ ಮೇಲೆ ಪೊಲೀಸ್ ದಾಳಿ ನಡೆಯಿತು. ಆಗ ಬಂಧನಕ್ಕೊಳಗಾದ ನಜ್ರುಲ್ ನ್ಯಾಯಾಲಯದಲ್ಲಿ ಅತ್ಯಂತ ದೀರ್ಘವಾದ ಮನವಿಯನ್ನು ಮಾಡಿದರು.

ನಾನು ರಾಷ್ಟ್ರದ್ರೋಹಿ ಎಂಬ ಆಪಾದನೆಗೊಳಗಾಗಿದ್ದೇನೆ. ಅದಕ್ಕಾಗಿ ನನ್ನನ್ನು ಸೆರೆಮನೆ ವಾಸಕ್ಕೆ ತಳ್ಳಲಾಗಿದೆ. ಒಂದೆಡೆ ಈ ಬ್ರಿಟಿಶ್ ಆಡಳಿತ ಇನ್ನೊಂದೆಡೆ ಈ ಧೂಮಕೇತುವಿನ ಜ್ವಾಲೆಗಳು. ಒಂದೆಡೆ ರಾಜನಾದರೆ ಇನ್ನೊಂದೆಡೆ ಸತ್ಯದ ಅನ್ವೇಷಣೆಯಲ್ಲಿರುವ ನ್ಯಾಯದ ಮೌಲ್ಯ. ನನಗಾಗಿ ಮನವಿ ಮಾಡುವವರೆಂದರೆ ರಾಜರ ರಾಜ,ಎಲ್ಲಾ ನ್ಯಾಯಮೂರ್ತಿಗಳ ನ್ಯಾಯಮೂರ್ತಿ,ಅದೇ ಸತ್ಯದ ದೇವತೆ,ಜೀವಂತ ದೇವರು ಮಾತ್ರ... ಆತನ ಕಾನೂನುಗಳು ಮಾನವ ಕುಲದ ಸಾರ್ವತ್ರಿಕವಾದ ಸತ್ಯವನ್ನು ಕಾಣುತ್ತವೆ. ಅವೆಲ್ಲರಿಗೂ ಮತ್ತು ಸಾರ್ವಕಾಲಿಕ ಸರ್ವತ್ರ ದೇವರಿಂದ ಮಾತ್ರ ಇವೆ. ರಾಜನು ವಿನಾಶಗೊಳ್ಳುವ ಜೀವಿಗಳಿಂದ ಬೆಂಬಲ ಪಡೆದಿದ್ದಾನೆ;ಆದರೆ ನಾನು ಸನಾತನ ಮತ್ತು ಸ್ವತಂತ್ರ ಜೀವಿಗಳನ್ನು ಆಶ್ರಯಿಸುತ್ತೇನೆ. ನಾನೊಬ್ಬ ಕವಿ, ದೇವರಿಂದ ಕಳಿಸಲ್ಪಟ್ಟಿದ್ದೇನೆ;ಅಭಿವ್ಯಕ್ತಿಸಲಾಗದವರ,ಯಾವ ಕಾಲದಲ್ಲೂ ಅಗೋಚರವಾದರ ಗೋಚರತೆಯನ್ನು ಚಿತ್ರಿಸುತ್ತೇನೆ. ದೇವರು ಒಬ್ಬನೇ ಕವಿಯ ಧ್ವನಿ ಮೂಲಕ ಮಾತ್ರ ಆಲಿಸುತ್ತಾನೆ... ನನ್ನ ಧ್ವನಿಯು ಸತ್ಯದ ಮಾಧ್ಯಮ,ದೇವರ ಸಂದೇಶ... ನಾನು ಆ ಸನಾತನ ಸ್ವಯಂ-ಸಾಕ್ಷಿಭೂತ ಸತ್ಯವಾಗಿದ್ದೇನೆ,ಎಂದಿಗೂ ಸತ್ಯದ ಪೂರಕ ಸಲಕರಣೆಯಾಗಿ ನಾನು ಆ ಸಂದೇಶವನ್ನು ರವಾನಿಸುತ್ತೇನೆ. ನಾನು ದೇವರ ಕೈಯಲ್ಲಿರುವ ಸಲಕರಣೆ. ಈ ಸಲಕರಣೆ ಮುರಿದುಹೋಗದು,ಆದರೆ ಈ ದೇವರ ಕೈಯಲ್ಲಿನ ಸಲಕರಣೆ ಮುಟ್ಟುವವರು?[೯]

ಅವರನ್ನು 1923 ರ ಏಪ್ರಿಲ್ 14 ರಂದು ಅಲಿಪೂರ್ ಜೈಲಿನಿಂದ ಕೊಲ್ಕತ್ತಾದ ಹೂಗ್ಲಿ ಜೈಲಿಗೆ ಸ್ಥಳಾಂತರಿಸಲಾಯಿತು.ಬ್ರಿಟಿಶ್ ಜೈಲು ಮುಖ್ಯಾಧಿಕಾರಿಯ ದುರ್ವರ್ತನೆಯ ನಿರ್ಲಕ್ಷ ಧೋರಣೆ ಖಂಡಿಸಿ 40-ದಿನಗಳ ಕಾಲ ಅವರು ಉಪವಾಸ ಮಾಡಿದರು. ನಜ್ರುಲ್ ಸುಮಾರು ಒಂದು ತಿಂಗಳ ನಂತರ ಉಪವಾಸ ಬಿಟ್ಟರು,ನಂತರ ಡಿಸೆಂಬರ್ 1923ರಲ್ಲಿ ಜೈಲಿನಿಂದ ಬಿಡುಗಡೆಯಾಯಿತು. ತಮ್ಮ ಸುದೀರ್ಘ ಬಂಧನದ ಅವಧಿಯಲ್ಲಿ ಅಸಂಖ್ಯಾತ ಕವಿತೆಗಳು ಮತ್ತು ಹಾಡುಗಳನ್ನು ಬರೆದರು.ಅದರಲ್ಲಿ ಕೆಲವನ್ನು 1920 ರಲ್ಲಿ ಬ್ರಿಟಿಶ್ ಅಧಿಕಾರಿಗಳು ನಿಷೇಧಿಸಿದರು.[೩]

ಕಾಜಿ ನಜ್ರುಲ್ ಖಿಲಾಫತ್ ಹೋರಾಟವನ್ನು ಅದೊಂದು ಟೊಳ್ಳಾದ,ಧಾರ್ಮಿಕ ಮೂಲಭೂತವಾದಿತ್ವ ಎಂದು ಟೀಕಿಸಿದರು.[೩] ನಜ್ರುಲ್ ಅವರ ಅಭಿವ್ಯಕ್ತಿಯ ಮಟ್ಟ ಕಠಿಣ ಸಾಂಪ್ರದಾಯಿಕಯಾಗಿ ರಾಜಕೀಯ ಮತ್ತು ಧಾರ್ಮಿಕತೆಯ ಹೆಸರು ಪಡೆಯಿತು.[೧೦] ನಜ್ರುಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನೂ ಟೀಕಿಸಿ ಬ್ರಿಟಿಶ್ ಸಾಮ್ರಾಜ್ಯದಿಂದ ಸಂಪೂರ್ಣ ಸ್ವರಾಜ್ಯ ಪಡೆಯಲು ಯತ್ನಿಸುತ್ತಿಲ್ಲ ಎಂದು ಖಂಡಿಸಿದರು. ಬ್ರಿಟಿಶ್ ಆಡಳಿತದ ವಿರುದ್ದ ಜನರನ್ನು ಅವರು ಪ್ರಚೋದಿಸಿದರು.ಅಲ್ಲದೇ ಬೆಂಗಾಲ್ ರಾಜ್ಯ ಘಟಕದ ಕಾಂಗ್ರೆಸ್ ಗೆ ಸೇರ್ಪಡೆಯಾದರು.[೩] ಅದಲ್ಲದೇ ಶ್ರಮಿಲ್ ಪ್ರಜಾ ಸ್ವರಾಜ್ ದಳದ ಸಂಘಟನೆಗೆ ನಜ್ರುಲ್ ನೆರವಾದರು.ಇದು ರಾಷ್ಟ್ರೀಯ ಸ್ವಾತಂತ್ರ್ಯಕ್ಕೆ ಬದ್ದವಾಗಿತ್ತಲ್ಲದೇ ಬಹುಸಂಖ್ಯಾತ ರೈತರ ಸೇವೆಗಾಗಿ ಅದು ಮುಡುಪಾಯಿತು. ನಜ್ರುಲ್ ಅವರು ಡಿಸೆಂಬರ್ 16,1925 ರಲ್ಲಿ "ಲಾಂಗಲ್"ಎಂಬ ಸಾಪ್ತಾಹಿಕವನ್ನು ತಾವೇ ಆರಂಭಿಸಿ ಅದಕ್ಕೆ ಮುಖ್ಯ ಸಂಪಾದಕರಾದರು.[೩] ಈ "ಲಾಂಗಲ್"ಶ್ರಮಿಕ ಪ್ರಜಾ ಸ್ವರಾಜ್ ದಳದ ಮುಖವಾಣಿಯಾಗಿತ್ತು.

ನಜ್ರುಲ್ 1921 ರಲ್ಲಿ ಕೊಮಿಲ್ಲಾಗೆ ಭೇಟಿ ನೀಡಿದಾಗ ಓರ್ವ ಹಿಂದು ಮಹಿಳೆ ಪ್ರಮೀಳಾ ದೇವಿ ಎಂಬುವವರನ್ನು ಭೇಟಿಯಾಗಿ ಅವರ ಪ್ರೇಮಪಾಶಕ್ಕೆ ಸಿಲುಕಿ ಏಪ್ರಿಲ್ 25,1924 ರಲ್ಲಿ ವಿವಾಹವಾದರು. ಪ್ರಮಿಳಾ ಬ್ರಹ್ಮೊ ಸಮಾಜಕ್ಕೆ ಸೇರಿದವರಾಗಿದ್ದರು,ಈ ಸಮಾಜವು ಆಕೆ ಮುಸ್ಲಿಮ್ ನೊಂದಿಗೆ ವಿವಾಹವಾದದನ್ನು ಖಂಡಿಸಿತು. ಅದೇ ರೀತಿ ನಜ್ರುಲ್ ಕೂಡಾ ತಮ್ಮ ಮುಸ್ಲಿಮ್ ಸಮಾಜದಿಂದ ಖಂಡನೆಗೊಳಗಾದರು.ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಎರಡೂ ಕಡೆಗಳಿಂದಲೂ ಟೀಕಾ ಪ್ರಹಾರ ನಡೆಯಿತು.ಇದು ಸಾಮಾಜಿಕ ಮತ್ತು ಧಾರ್ಮಿಕ ಗೊಂದಲಕ್ಕೆ ಕಾರಣವಾಗಿ ಅಸಹನೆಗೆ ಕಾರಣವಾಯಿತು. ಇಂತಹ ವಿವಾದಗಳಿದ್ದರೂ ನಜ್ರುಲ್ ಅವರ "ಕ್ರಾಂತಿಕಾರಿ ಕವಿ" ಯ ಕಾರ್ಯಗಳ ಹೆಚ್ಚಳ ಹಾಗು ಜನಪ್ರಿಯತೆ ಹೆಚ್ಚಾಗುತ್ತಾ ನಡೆಯಿತು.[೩][೧೧]

ಅಸಹನೀಯ ಹೋರಾಟಗಳು,ಆದರೂ ನಾನೊಬ್ಬ ದೊಡ್ಡ ಬಂಡಾಯಗಾರ,

ನಾನು ನನಗೆ ಬಿಡುವು ದೊರೆತಾಗ ಶಾಂತವಾಗಿ ವಿಶ್ರಮಿಸುತ್ತೇನೆ.
ಈ ಮುಕ್ತ ಆಕಾಶ ಮತ್ತು ಗಾಳಿಮುಕ್ತ ಪರಿಸರದಲ್ಲಿ ಶೋಷಿತರ ನರಳುವ ಧ್ವನಿ ಕೇಳುತ್ತದೆ.
ಯಾವಾಗ ಯುದ್ದ ಭೂಮಿಗಳು ಈ ರಕ್ತಸಿಕ್ತ ಕಲೆ ಭಾಗಗಳನ್ನು ಹೋಗಲಾಡಿಸುತ್ತವೆಯೋ
ಈ ಹೋರಾಟಗಳಲ್ಲಿ ಬಳಲಿದ್ದೇನೆ ನಾನು ಶಾಂತವಾಗಿ ವಿಶ್ರಮಿಸಲೇ

ಈ ಬೃಹತ್ ಬಂಡಾಯಗಾರ.[೮]

ದೊಡ್ಡ ಪ್ರಮಾಣದ ಸಂಗೀತ[ಬದಲಾಯಿಸಿ]

ಚಿತ್ರ:KNIHunting.jpg
ನಜ್ರುಲ್ ತನ್ನ ಸ್ನೇಹಿತರೊ67ದಿಗೆ ಸುಂದರ್ ಪುರದಲ್ಲಿ ಬೇಟೆಗಾಗಿ ಪ್ರವಾಸ ಹೊರಟಿದ್ದು,ಇಂಡಿಯಾ

ತಮ್ಮ ಪತ್ನಿ ಹಾಗು ಕಿರಿಯ ಪುತ್ರ ಬುಲ್ ಬುಲ್ ಜೊತೆ 1926 ರಲ್ಲಿ ಕೃಷ್ಣಾನಗರದಲ್ಲಿ ನೆಲೆಯಾದರು. ಅವರ ಬರೆದ ಹಾಡು ಮತ್ತು ಕವಿತೆಗಳು ಕೆಳವರ್ಗದ ತುಳಿತಕ್ಕೊಳಗಾದ ಜನರ ಸ್ಪೂರ್ತಿಯ ಸಂಗೀತಗಳಾಗಿ ನಿನಾದ ಹೊಮ್ಮಿಸಿದ್ದೇ "ದೊಡ್ಡ ಸಂಗೀತ"ವಾಯಿತು.[೧೨] ನಜ್ರುಲ್ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ವಿಧಾನಗಳನ್ನು ಸಾಮಾಜಿಕ ಸಂಕಷ್ಟಗಳ ಪರಿಹಾರಕ್ಕಾಗಿ ಬಳಸಬೇಕಾಗುತ್ತದೆ ಎಂದು ಪ್ರತಿಪಾದಿಸಿದರು. ಅವರ ದರಿದ್ರೊ (ನೋವು ಅಥವಾ ಬಡತನ)ಕವನ ದಿಂದ:

ಓ ಬಡತನವೇ, ದೇವರು ಅವಸರದಲ್ಲಿ ನನ್ನನ್ನು ದೊಡ್ಡವನನ್ನಾಗಿಸಿದ್ದಾನೆ.

ದೇವರು ನನ್ನನ್ನು ಕ್ರಿಸ್ತ್ ನಂತೆಯೇ ಗೌರವಿಸಿದ್ದಾನೆ.
ಆತನ ಸಿಂಹಾಸನ ಪೀಠದ ಮೂಲಕ. ದೇವರು ನನಗೆ ನೀಡಿದ್ದಾನೆ
ಎಲ್ಲವನ್ನೂ ಬಿಚ್ಚಿಡುವ ಧೈರ್ಯ ನೀಡಿದ್ದಾನೆ. ನಾನು ದೇವರಿಗೆ ಋಣಿಯಾಗಿದ್ದೇನೆ
ನನ್ನ ದಿವಾಳಿಯಾದ,ಬರಿಗಣ್ಣುಗಳು ಹರಿತ ನಾಲಿಗೆ.
ನಿನ್ನ ಶಾಪವು ನನ್ನ ವಯೊಲಿನ್ ನನ್ನು ಕತ್ತಿಯಾಗಿ ಮಾರ್ಪಟ್ಟಿದೆ...
ನಾನು ನಿನಗೆ ಓ ಸಂತನೇ ಭಯಾನಕ ಜ್ವಾಲೆಯೇ
ನನ್ನ ಸ್ವರ್ಗದ ನಿಷೇಧವನ್ನು ನಿವಾರಿಸಿದ್ದಾನೆ.
ಓ ನನ್ನ ಮಗುವೇ ನನ್ನ ಮುದ್ದೇ
ನಾನು ಪರಮಾತ್ಮನಿಗೆ ಒಂದು ಹನಿ ಹಾಲನ್ನೂ ನೀಡಲಾರೆ
ನನಗೇ ನನ್ನ ನಾನೇ ಸಂಭ್ರಮಿಸುವ ಹಕ್ಕಿಲ್ಲ.
ಬಡತನವು ನನ್ನ ಮನೆ ಬಾಗಿಲಲ್ಲಿ ಅಳುತ್ತದೆ.
ನಾನು,ನನ್ನ ಹೆಂಡತಿ ಮತ್ತು ನನ್ನ ಮಗು ಕೂಡಾ.

ಯಾರು ಕೊಳಲೂದುತ್ತಾರೆ?[೧೩]

ಚಿತ್ರ:Nazrul2.jpg
ಕಾಜಿ ನಜ್ರುಲ್ ಇಸ್ಲಾಮ್

ಅವರ ಸಮಕಾಲೀನರ ಪ್ರಕಾರ ಅವರೊಬ್ಬ ದೊಡ್ಡ ಸೃಜನಶೀಲತೆಯ ನಾಜೂಕಿನ ಕವಿಯಾಗಿದ್ದಾರೆ.ಮೊದಲ ಬಾರಿಗೆ ನಜ್ರುಲ್ ಬೆಂಗಾಳಿಯಲ್ಲಿ ಘಜಲ್ ಗಳನ್ನು ಬರೆಯಲು ಆರಂಭಿಸಿದರು. ಆ ಮೂಲಕ ಪರ್ಷಿಯನ್‌ ಹಾಗೂ ಉರ್ದೂ ಸಾಹಿತ್ಯದ ಸಾರವನ್ನು ಬಂಗಾಳಿ ಭಾಷೆಗೆ ಎರಕ ಹೊಯ್ದರು.[೪] ನಜ್ರುಲ್ ಮೊದಲ ಬಾರಿಗೆ ಇಸ್ಲಾಮ್ ವನ್ನು ಬೆಂಗಾಳಿಯ ಸಾಂಪ್ರದಾಯಿಕ ಸಂಗೀತದೊಂದಿಗೆ ಮುಖ್ಯವಾಹಿನಿಗೆ ತಂದ ವ್ಯಕ್ತಿ ಎನಿಸಿದ್ದಾರೆ. ಮೊದಲ ಬಾರಿಗೆ ಇಸ್ಲಾಮಿಕ್ ಹಾಡುಗಳನ್ನು ಧ್ವನಿಮುದ್ರಿಸಿ ವಾಣಿಜ್ಯದ ಸ್ಪರ್ಷ ನೀಡಿದ್ದಾರೆ.ಅವರ ಯಶಸ್ವಿ ಸಾಹಸಕ್ಕೆ ಹಲವು ಗ್ರಾಮೊಫೋನ್ ಕಂಪನಿಗಳು ಅದರ ಮಾರಾಟಕ್ಕೆ ಮುಂದೆ ಬಂದಿದ್ದವು. ಹಿಂದುಗಳಿಂದ ಪ್ರಮುಖವಾಗಿದ್ದ ಬೆಂಗಾಳಿ ಕಲಾ ಪ್ರಕಾರಗಳು ಮುಸ್ಲಿಮರ ಪ್ರವೇಶಕ್ಕೂ ಅವಕಾಶ ನೀಡಿದ ವ್ಯಕ್ತಿ ನಜ್ರುಲ್,ಅದು ಅವರ ಪ್ರಭಾವವೆಂದೇ ಹೇಳಬೇಕಾಗಿತ್ತು. ನಜ್ರುಲ್ ಹಲವು ಭಕ್ತಿಪರ ಸಂಗೀತ ರಚನೆಗಳನ್ನು ಮಾಡಿದ್ದಾರೆ, ಶ್ಯಾಮ್ ಸಂಗೀತ್ ,ಭಜನ್ ಮತ್ತು ಕೀರ್ತನ್ ,ಇತ್ಯಾದಿಗಳನ್ನು ಹಿಂದು ಭಕ್ತಿ ಸಂಗೀತಕ್ಕೂ ಕಾಣಿಕೆ ಸಲ್ಲಿಸಿದ್ದಾರೆ.[೧೪] ನಜ್ರುಲ್ ರ ವಿಚಾರಧಾರೆಗಳು ಅವರ ವಿವಾದ ಮತ್ತು ಇನ್ನಿತರ ವಿಷಯಗಳನ್ನೂ ಮೀರಿಯೂ ಭಾರತದಾದ್ಯಂತ ಜನಪ್ರಿಯವಾಗಿವೆ. ನಜ್ರುಲ್ 1928 ರಲ್ಲಿ ಗೀತ ರಚನೆಗಾರ,ಸಂಯೋಜಕ ಮತ್ತು ಸಂಗೀತಗಾರನಾಗಿ ಹೀಸ್ ಮಾಸ್ಟರ್ಸ್ ವೈಯ್ಸ್ ನ ಗ್ರಾಮ್ ಫೋನ್ ಕಂಪನಿಯಲ್ಲಿ ಕೆಲಸ ಆರಂಭಿಸಿದರು. ಅವರು ಬರೆದ ಮತ್ತು ಸಂಗೀತ ಸಂಯೋಜಿಸಿದ ಹಾಡುಗಳನ್ನು ದೇಶಾದ್ಯಂತದ ರೇಡಿಯೊ ಕೇಂದ್ರಗಳಲ್ಲಿ ಪ್ರಸಾರ ಮಾಡಲಾಯಿತು. ಅವರು ಭಾರತೀಯ ಬ್ರಾಡ್ ಕಾಸ್ಟಿಂಗ್ ಕಂಪನಿಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದರು.[೧೫]

ನಜ್ರುಲ್ ತಮ್ಮ ಸಿದ್ದಾಂತದೊಂದಿಗೆ ಮಹಿಳೆಯವರಿಗೆ ಸಮಾನವಕಾಶ ನೀಡುತ್ತಿದ್ದರು,ಇನ್ನುಳಿದವರಂತೆ ಕೇವಲ ಬಂಡಾಯಗಾರರಾಗಿರಲಿಲ್ಲ.[೭] ಆತನ ಕವಿತೆ ನಾರಿ ಯಿಂದ(ಮಹಿಳೆ):

ನಾನು ಭೇದವನ್ನು ಕಾಣುವುದಿಲ್ಲ
ಪುರುಷ ಮತ್ತು ಮಹಿಳೆ
ಯಾವುದೇ ದೊಡ್ಡ ಅಥವಾ ಉಪಕಾರ ಸ್ಮರಣೆಯ ಸಾಧನೆಯ ಲಕ್ಷಣಗಳು
ಅವು ಈ ಜಗದಲ್ಲಿವೆ
ಅದರಲ್ಲಿ ಅರ್ಧದಷ್ಟು ಮಹಿಳೆಯರದ್ದಾಗಿದೆ.

ಇನ್ನುಳಿದದ್ದು ಅರ್ಧ ಪುರುಷರದ್ದು (ಸಜೆದ್ ಕಮಾಲ್ ರಿಂದ ಅನುವಾದ[೧೬])

ಅವರ ಕಾವ್ಯವು ಸುದೀರ್ಘ ಕಾಲದ ಅನುಭವವು ಪುರುಷ ಮತ್ತು ಮಹಿಳೆಯರ ನಡುವಿನ ಸಂಭಂಧವು ಒಂದು ಲಿಂಗಭೇದವಿಲ್ಲದೇ ಅದರ ಸ್ಥಿತಿಸ್ಥಾಪಕತ್ವಕ್ಕೆ ಸಾಮಾಜಿಕ ರಚನಾ ವ್ಯೂಹಕ್ಕೆ ಸಿದ್ದವಾಗಬೇಕಾಗಿದೆ:

ಮನುಷ್ಯ ಉರಿಯನ್ನು ತಂದಿದ್ದಾನೆ,ಸೂರ್ಯನ ಶಾಖವನ್ನು ಆ ದಿನವನ್ನು ಆತ ರೂಪಿಸಿದ್ದಾನೆ;

ಸ್ತ್ರೀ ಎಂದರೆ ಶಾಂತ ರಾತ್ರಿ,ಸಂತೈಸುವ ತಂಗಾಳಿ ಮತ್ತು ಸುಂದರ ಮೋಡ.
ಮನುಷ್ಯ ಮರಭೂಮಿಯಂತಹ-ಬಾಯಾರಿಕೆ ತಂದರೆ;ಸ್ತ್ರೀ ಜೇನಿನ ಸಿಹಿ ಕುಡಿಸುತ್ತಾಳೆ.
ಮನುಷ್ಯ ಫಲವತ್ತಾದ ಭೂಮಿಯನ್ನು ಉಳುತ್ತಾನೆ,ಸ್ತ್ರೀ ಅದರಲ್ಲಿ ಹಚ್ಚ ಹಸಿರಿನ ಬೆಳೆ ತೆಗೆಯುತ್ತಾಳೆ.

ಮನುಷ್ಯ ಉಳುತ್ತಾನೆ,ಸ್ತ್ರೀ ನೀರುಣಿಸುತ್ತಾನೆ;ಭೂಮಿ ಮತ್ತು ನೀರು ಒಂದಕ್ಕೊಂದು ಮಿಶ್ರಣವನ್ನು ಮಾಡಿದಾಗ ಅದು ಚಿನ್ನದ ಭತ್ತವನ್ನು ನೀಡುತ್ತದೆ.[೧೬]

ಹೀಗೆ ನಜ್ರುಲ್ ಅವರ ಕವಿತೆಗಳು ಎರಡೂ ಲಿಂಗಗಳ ಪ್ರಬಲ ಸಮಭಾಗಿತ್ವವನ್ನು ಪ್ರತಿಪಾದಿಸುತ್ತವೆ. ಅವರು ಇಡೀ ಸಮಾಜವನ್ನು 'ಬರಂಗಾಣಾ ("ವೇಶ್ಯೆ") ಎಂಬ ಪದ್ಯದಲ್ಲಿ ಆಕೆಯನ್ನು "ತಾಯಿ"ಎಂದು ಕರೆದು ಬೆಚ್ಚಿ ಬೀಳಿಸಿದ್ದಾರೆ.[೧೭]

ನಜ್ರುಲ್ ಪ್ರಕಾರ ವೇಶ್ಯೆ ಕೂಡಾ ಓರ್ವ ಮನುಷ್ಯ ಪ್ರಾಣಿಯೇ ಇವಳೇ ಎಂತಹದೇ ಉದಾತ್ತ ಮನುಷ್ಯನಿಗೆ ಮೊಲೆಯೂಡಿಸಿದವಳಾಗಿದ್ದಾಳೆ.ಅವಳೂ ಕೂಡಾ "ತಾಯಿಗಳು ಮತ್ತು ಸಹೋದರಿಯರು"ಎಂಬಲ್ಲಿದ್ದಾಳೆ.ಇಂತವರು ಒಂದೇ ಸಮಾಜದಿಂದ ಭೇದಭಾವವನ್ನು ಅನುಭವಿಸುತ್ತಾರೆ ಎಂಬ ಕಳಕಳಿಯು ನಜ್ರುಲ್ ರಲ್ಲಿತ್ತು.[೧೮]

ಯಾರು ನಿನ್ನನ್ನು, ವೇಶ್ಯೆ ಎನ್ನುತ್ತಾರೆ ತಾಯಿ?
ನಿನ್ನೆಡೆಗೆ ಯಾರು ಉಗಿಯುತ್ತಾರೆ?
ನೀನು ಯಾರೋ ಕೆಲವರಿಂದ ರಕ್ತ ಹೀರಿಕೊಳ್ಳಲ್ಪಟ್ಟಿದ್ದಿ
ಸೀತೆ ಯಂತೆ ಪವಿತ್ರ.
....
ಅಪವಿತ್ರ ತಾಯಿಯ ಪುತ್ರ 'ಅಕ್ರಮ ಸಂತಾನ'
ಹಾಗೆಯೇ ಆ ಮಗನೂ ಅಪವಿತ್ರ ತಂದೆಯ ಮಗನೇ
("ಬರಾಂಗಾನಾ" ("ವೇಶ್ಯೆ") ಸಜೆದ್ ಕಮಾಲ್ ರಿಂದ ಅನುವಾದ[೧೯])

ನಜ್ರುಲ್ ಮಹಿಳೆಯರ ಉತ್ಥಾನಕ್ಕೆ ಸಮರ್ಥಕರಾದವರು.ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮಹಿಳೆಯರನ್ನು ತಮ್ಮ ಕವಿತೆಗಳಲ್ಲಿ ವರ್ಣಿಸಿದ್ದಾರೆ.[೧೭] ನಜ್ರುಲ್ ಹಾಡುಗಳ ಸಂಗ್ರಹವನ್ನು ನಜ್ರುಲ್ ಗೀತಿ ಎನ್ನಲಾಗುತ್ತದೆ.

ಧರ್ಮದ ಪರಿಶೋಧನೆ[ಬದಲಾಯಿಸಿ]

ಚಿತ್ರ:Kazi nazrul islam.jpg
ಕಾಜಿ ನಜ್ರುಲ್ ಇಸ್ಲಾಮ್

ನಜ್ರುಲ್ ಅವರ ತಾಯಿ 1928 ರಲ್ಲಿ ನಿಧನರಾದರು.ಅದರ ಬೆನ್ನಲ್ಲೇ ಅವರ ಎರಡನೆಯ ಪುತ್ರ ಸಿಡುಬುರೋಗಕ್ಕೆ ತುತ್ತಾಗಿ ಮರುವರ್ಷ ಮೃತಪಟ್ಟ. ಅವರ ಮೊದಲ ಪುತ್ರ ಕೃಷ್ಣಾ ಮೊಹಮ್ಮದ ಅಕಾಲಿಕ ಮರಣವನ್ನಪ್ಪಿದ. ಅವರ ಪತ್ನಿ ಮತ್ತೆರಡು ಮಕ್ಕಳಿಗೆ ಜನ್ಮ ನೀಡಿದರು.ಸವ್ಯಸಾಚಿ 1928 ರಲ್ಲಿ ಜನಿಸಿದರೆ ಅನಿರುದ್ದ 1931 ರಲ್ಲಿ ಜನಿಸಿದ.ಆದರೆ ನಜ್ರುಲ್ ಬಹಳ ದಿನಗಳ ಕಾಲ ಪುತ್ರ ಶೋಕದಲ್ಲಿ ನಲುಗಿದರು. ನಂತರ ಅವರ ಬಂಡಾಯವು ಸಾಮಾಜಿಕ-ಧಾರ್ಮಿಕ ಗಹನ ವಿಚಾರಗಳ ಪರೀಕ್ಷೆಗೆ ಪ್ರಾರಂಭಿಸಿದರು. ಅವರ ಈ ಕೃತಿಗಳ ಇಸ್ಲಾಮಿಕ್ ಭಕ್ತಿ ಪರಂಪರೆಯು ಇನ್ನಿತರ ಮುಖ್ಯವಾಹಿನಿಗಳಾದ ಬೆಂಗಾಳಿ ಜನಪದ ಸಂಗೀತ,ದಲ್ಲಿ ಅಲ್ಲದೇ ಇಸ್ಲಾಮಿಕ್ ಆಚರಣೆಗಳಾದ ನಮಾಜ್ (ಪ್ರಾರ್ಥನೆ), ರೋಜಾ (ಉಪವಾಸ), ಹಜ್ಜ್ (ಯಾತ್ರೆ) ಮತ್ತು ಝಕಾತ್ (ದಾನ) ಇತ್ಯಾದಿಗಳನ್ನು ಪರಿಚಯಿಸಿದರು. ಅವರ ಸಮಕಾಲೀನರು ಹೇಳುವಂತೆ ಇದು ಮಹತ್ವದ ಸಾಧನೆಯಾಗಿದ್ದು ಯಾಕೆಂದರೆ ಬೆಂಗಾಲಿ ಮುಸ್ಲಿಮ್ ರು ಭಕ್ತಿ ಸಂಗೀತದ ಬಗ್ಗೆ ಅಷ್ಟಾಗಿ ಆಕರ್ಷಿತರಾದವರಲ್ಲ.[೨೦] ನಜ್ರುಲ್ ಅವರ ಭಕ್ತಿ ಸಂಗೀತದ ಸೃಜನಶೀಲತೆಯು ಹಿಂದು ಭಕ್ತಿ ಗೀತೆಗಳಿಗೂ ವಿಸ್ತರಿಸಿತು.ಶಾಮ ಸಂಗೀತ್ ,ಭಜನ್ ಗಳು ಮತ್ತು ಕೀರ್ತನ್ ಗಳು ,ಇವುಗಳಲ್ಲಿ ಹಿಂದು ಮತ್ತು ಇಸ್ಲಾಮಿಕ್ ಧಾರ್ಮಿಕ ಮೌಲ್ಯಗಳೂ ಸೇರಿರುತ್ತಿದ್ದವು. ನಜ್ರುಲ್ ಅವರ ಕಾವ್ಯ ಮತ್ತು ಹಾಡುಗಳು ಇಸ್ಲಾಮ್ ಮತ್ತು ಹಿಂದು ಸಿದ್ದಾಂತ-ತತ್ವಗಳನ್ನು ಪ್ರಚುರಪಡಿಸಿದವು.[೨೧]

ಎಲ್ಲಾ ದೇಶದ ಮತ್ತು ಎಲ್ಲಾ ಕಾಲದ ಜನರು ಒಟ್ಟಾಗಿ ಬರಲಿ. ಇದೊಂದು ದೊಡ್ಡ ಮಾನವೀಯತೆಯ ಸಂಗಮವಾಗಲಿ. ಅವರನ್ನು ಒಗ್ಗಟ್ಟಿನ ಕೊಳಲಿನ ನಾದ ಆಲಿಸಲು ಬಿಡಿ. ಒಬ್ಬನೇ ಒಬ್ಬ ನೊಂದರೂ ಎಲ್ಲಾ ಹೃದಯಗಳು ಸಮನಾಗಿ ಒಟ್ಟಾಗಿ ಸ್ಪಂದಿಸಲಿ. ಒಬ್ಬ ವ್ಯಕ್ತಿ ಅಪಮಾನಕ್ಕೀಡಾದರೆ ಅದು ಇಡೀ ಮನುಕುಲಕ್ಕೇ ನಾಚಿಕೆಗೇಡು,ಅದು ಎಲ್ಲರಿಗೂ ಅವಮಾನ! ಇಂದು ಸಾರ್ವತ್ರಿಕವಾದ ಮನುಷ್ಯನ ಸಂಕಟ ಸ್ಥಿತಿ ಏರುತ್ತಾ ನಡೆದಿದೆ.[೨೨]

ನಜ್ರುಲ್ ಕಾವ್ಯವು ಶಕ್ತಿಯ ಭಾವಾವೇಶ ಮತ್ತು ಸೃಜನಾತ್ಮಕತೆಯಾಗಿದೆ.ಇದನ್ನು ಆದಿ ರೂಪ ಶಕ್ತಿಯ ಬ್ರಾಹ್ಮಣ್ ಎಂದು ಗುರುತಿಸಲಾಗುತ್ತದೆ. ಅವರು ಹಲವು ಭಜನ್ ಗಳು , ಶ್ಯಾಮ್ ಸಂಗೀತ್ ,ಅಗಮಾನಿಸ್ ಮತ್ತು ಕೀರ್ತನೆಗಳ ನ್ನು ಬರೆದು ಅದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅವರು ಹಲವಾರು ಭಕ್ತಿ ಗೀತೆಗಳನ್ನು ಶಿವ, ದೇವಿ ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳ ಬರೆದಿದ್ದಾರೆ.ಅಲ್ಲದೇ ರಾಧಾ ಮತ್ತು ಕೃಷ್ಣ ರ ಅನುರಾಗದ ಕುರಿತು ಕವಿತೆಗಳನ್ನು ರಚಿಸಿದ್ದಾರೆ.[೪]

ಧರ್ಮದಲ್ಲಿ ನಜ್ರುಲ್ ಮತಾಂಧತೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ,ಅದು ಒಂದು ರಾಕ್ಷಸ ಪ್ರವೃತ್ತಿ ಮತ್ತು ಧರ್ಮರಹಿತವಾದುದೆಂದು ಪ್ರತಿಪಾದಿಸುತ್ತಾರೆ. ಅವರು ತಮ್ಮ ಹಲವು ಕೃತಿಗಳಲ್ಲಿ ಮಾನವ ಸಮಾನತೆಯ ಕುರಿತು ಪ್ರಸ್ತಾಪಿಸಿದ್ದಾರೆ,ಕುರಾನ್ ಮತ್ತು ಪ್ರವಾದಿ ಮುಹಮ್ಮದ್ ಅವರ ಜೀವನವನ್ನು ಸೈದ್ದಾಂತಿಕ ತತ್ವಗಳ ಮೇಲೆ ಪ್ರಸ್ತುತವಾಗಿಸಿದ್ದಾರೆ. ನಜ್ರುಲ್ ರನ್ನು ವಿಲಿಯಮ್ ಬಟ್ಲರ್ ಈಟ್ಸ್ ಗೆ ಹೋಲಿಸಲಾಗುತ್ತೆ.ಯಾಕೆಂದರೆ ಮುಸ್ಲಿಮ್ ಐತಿಹಾಸಿಕ ಸಂಕೇತಗಳ ಬಳಕೆಗೆ ವಿಧಾನಗಳ ಜಾರಿಗೆ ತಂದ ಮೊದಲ ಮುಸ್ಲಿಮ್ ಕವಿಯಾಗಿದ್ದಾರೆ.ಉದಾಹರಣೆಗೆ ಕಾಸಿಮ್,ಅಲಿ, ಉಮರ್, ಕಮಲ್ ಪಾಶಾ, ಅನ್ವರ್ ಪಾಶಾ ಮತ್ತು ಪ್ರವಾದಿ ಮುಹಮ್ಮದ್.ಇತ್ಯಾದಿ[೯] ಧಾರ್ಮಿಕ ಅತಿರೇಕತೆ ಮತ್ತು ಮಹಿಳೆಯರನ್ನು ಅನಾಗರಿಕ ರೀತಿಯಿಂದ ನಡೆಸಿಕೊಳ್ಳುವವರನ್ನು ಅವರು ಸಹಿಸಲಾರರು.ಇದು ಮುಸ್ಲಿಮ ಮತ್ತು ಹಿಂದು ಮೂಲಭೂತವಾದಿಗಳಲ್ಲಿ ಕೋಪ-ಖಂಡನೆ ತರಿಸಿತ್ತು.

ನಜ್ರುಲ್ ತಮ್ಮ ಧಾರ್ಮಿಕ ಸೌಹಾರ್ದತೆಯನ್ನು ಯುಗ ಬಾನಿ ಯ ಸಂಪಾದಕೀಯದಲ್ಲಿ 1920 ರ ಸುಮಾರಿಗೆ ಸ್ಪಷ್ಟಪಡಿಸಿದ್ದಾರೆ.

“ಬಾ ಸಹೋದರ ಹಿಂದು! ಬಾ ಮುಸಲ್ಮಾನ್! ಬಾ ಬೌದ್ದ ಧರ್ಮದವನೆ! ಬಾ ಕ್ರಿಶ್ಚಿಯನ್! ನಾವೆಲ್ಲಾ ಕಟ್ಟಳೆಗಳನ್ನು ಮೀರಿ ನಡೆಯೋಣ,ಸಣ್ಣತನ,ಸ್ವಾರ್ಥ,ಸುಳ್ಳುಗಳು ಇತ್ಯಾದಿಗಳ ತ್ಯಜಿಸಿ ಎಲ್ಲರನ್ನು ಸಹೋದರ ಎಂದು ಸಂಭೋದಿಸೋಣ. ನಾವಿನ್ನು ಜಗಳಾಡುವುದು ಬೇಡ”.[೨೩]

ಇನ್ನೊಂದು ಲೇಖನ ಹಿಂದು ಮುಸ್ಸಲ್ಮಾನ್ ಇದು ಗನಬಾನಿ ಯಲ್ಲಿ ಸೆಪ್ಟೆಂಬರ್ 2, 192 ರಲ್ಲಿ ಪ್ರಕಟವಾಗಿತ್ತು ಅದರಲ್ಲಿ ಅವರು-

"ನಾನು ಹಿಂದು ಧರ್ಮ ಮತ್ತು ಮುಸ್ಲಿಮ್ ರನ್ನು ಸಹಿಸುತ್ತೇನೆ ಆದರೆ (ಈ ಕೂದಲು,ತಲೆ ಮೇಲೆ ಮತ್ತು ಗಡ್ಡ ಅಂದರೆ ಗದ್ದದ ಕೆಳಗೆ ಬಿಡುವುದು ನನಗೆ ಇಷ್ಟವಾಗುವುದಿಲ್ಲ.)ಇದು ವ್ಜೈಯಕ್ತಿಕ ಪಾವಿತ್ರ್ಯಕ್ಕೆ ಸಂಭಂಧಿಸಿದ್ದಾಗಿದೆ." ಕೂದಲು ಬಿಡುವುದಷ್ಟೇ ಹಿಂದು ಧರ್ಮವಾಗಲಾರದು. ಇದು ಪಂಡಿತರ ಸಂಕೇತವಾಗಿರಬಹುದು. ಅದೇ ರೀತಿ ದಾಡಿ ಬಿಡುವುದೇ ಇಸ್ಲಾಮ್ ಅಲ್ಲ,ಇದು ಮೊಲ್ಲಾಗಳ ಸಂಕೇತವಾಗಿರಬಹುದು. ಈ ಎಲ್ಲಾ ಕೂದಲೆಳೆಯುವ ಕೆಲಸ ಈ ಎರಡೂ ಕೂದಲಿನವರ ಕೆಲಸವಾಗಿದೆ. ಇಂದಿನ ಕದನವು ಕೂಡಾ ಪಂಡಿತ್ ಮತ್ತು ಮೊಲ್ಲಾಗಳ ನಡುವೆ ಇದೆಯೇ ಹೊರತು ಹಿಂದು ಮುಸ್ಲಿಮ್ ರ ನಡುವೆ ಅಲ್ಲ. ಯಾವುದೇ ಪ್ರವಾದಿಯು ಹೀಗೆ ಹೇಳಿಲ್ಲ."ನಾನು ಹಿಂದುಗಳಿಗಾಗಿ ಬಂದಿದ್ದೇನೆ,ನಾನು ಮುಸ್ಲಿಮ್ ರಾಗಿ ಬಂದಿದ್ದೇನೆ,ನಾನು ಕ್ರಿಶ್ಚನರಿಗಾಗಿ ಬಂದಿದ್ದೇನೆ." "ನಾನು ಇಡೀ ಮಾನವ ಕುಲಕ್ಕಾಗಿ ಬಂದಿದ್ದೇನೆ ,ಬೆಳಕಿನಂತೆ" ಆದರೆ "ಕೃಷ್ಣನ ಭಕ್ತರು "ಕೃಷ್ಣ ಹಿಂದುಗಳಿಗೆ ಮಾತ್ರ"ಎನ್ನುತ್ತಾರೆ. ಮುಹಮ್ಮದ್ (Sm)ಅನುಯಾಯಿಗಳು "ಮುಹಮ್ಮದ್ (Sm)ಕೇವಲ ಮುಸ್ಲಿಮ್ ರಿಗಾಗಿ". ಕ್ರಿಶ್ಚಿಯನ್ ಅನುಯಾಯಿ ಕ್ರಿಸ್ತ್ ನಮಗಾಗಿ ಎನ್ನುತ್ತಾನೆ" ಕೃಷ್ಣಾ-ಮುಹಮ್ಮದ್-ಕ್ರಿಸ್ತ ಇವರು ರಾಷ್ಟ್ರೀಯ ಆಸ್ತಿಯಾಗಿದ್ದಾರೆ. ಈ ಆಸ್ತಿಯೇ ಎಲ್ಲ ತೊಂದರೆಗಳ ಮೂಲ ಬೇರಾಗಿದೆ. ಜನರು ಬೆಳಕಿಗಾಗಿ ಜಗಳಾಡುವುದಿಲ್ಲ ಅವರು ದನಕರುಗಳಿಗಾಗಿ ಜಗಳಾಡುತ್ತಾರೆ.[೨೪]

ನಜ್ರುಲ್ ಮಾನವೀಯತೆಯ.ಕಟ್ಟಾ ಪ್ರತಿಪಾದಕರಾಗಿದ್ದರು.[೨೪] ಅವರು ಮುಸ್ಲಿಮ್ ಆದರೂ ತಮ್ಮ ಮಕ್ಕಳಿಗೆ ಹಿಂದು-ಮುಸ್ಲಿಮ್ ಹೆಸರುಗಳನ್ನು ಇಟ್ಟಿದ್ದರು:ಕೃಷ್ಣಾ ಮೊಹಮ್ಮದ್,ಅರಿಂದಮ್ ಖಲೆದ್ (ಬುಲ್ ಬುಲ್)ಕಾಜಿ ಸವ್ಯಸಾಚಿ ಮತ್ತು ಕಾಜಿ ಅನಿರುದ್ದ.[೨೫]

ನಂತರದ ಬದುಕು ಮತ್ತು ಅನಾರೋಗ್ಯ[ಬದಲಾಯಿಸಿ]

ಚಿತ್ರ:Kazi Nazrul 1930s.png
1930 ರಲ್ಲಿ ನಜ್ರುಲ್ಲಾ

ನಜ್ರುಲ್ 1933 ರಲ್ಲಿ "ಮಾಡೆರ್ನ್ ವರ್ಲ್ಡ್ ಲಿಟರೇಚರ್"ಎಂಬ ಪ್ರಭಂದಗಳ ಸಂಗ್ರಹವನ್ನು ಬಿಡುಗಡೆ ಮಾಡಿದರು.ಅದರಲ್ಲಿ ವಿವಿಧ ಸಾಹಿತ್ಯಗಳ ಶೈಲಿಗಳು ಮತ್ತು ಸಿದ್ದಾಂತಗಳನ್ನು ವಿಶ್ಲೇಷಿಸಿದರು. ಅವರು 1928 ಮತ್ತು 1935 ರ ನಡುವೆ 800 ಹಾಡುಗಳುಳ್ಳ 10 ಸಂಪುಟಗಳಲ್ಲಿ ಹಾಡುಗಳನ್ನು ಪ್ರಕಟಿಸಿದರು,ಅದರಲ್ಲಿ 600 ಹಾಡುಗಳು ಶಾಸ್ತ್ರೀಯ ಸಂಗೀತದ ರಾಗಗಳ ಆಧಾರದಲ್ಲಿವೆ. ಬಹುತೇಕ 100 ಜನಪದ ಆಧಾರಿತ,ಇವು ಕೀರ್ತನೆಗಳ ನಂತರ ಹೆಚ್ಚಿನವಾಗಿವೆ.ಕೆಲವು ಅಂದರೆ 30 ರಷ್ಟು ದೇಶಭಕ್ತಿ ಗೀತೆಗಳಿವೆ. ಅವರು ಕೊಲ್ಕತ್ತಾಗೆ ವಾಪಸ್ಸಾದ ನಂತರ 1941 ರ ವರೆಗೆ ಅನಾರೋಗ್ಯ ಪೀಡಿತರಾಗುವ ವರೆಗೂ ಸುಮಾರು.2,600 ಕ್ಕಿಂತಲೂ ಹೆಚ್ಚಿನ ಹಾಡುಗಳನ್ನು ಬರೆದಿದ್ದಾರೆ,ಅದರಲ್ಲಿ ಕೆಲವು ಕಳೆದು ಹೋಗಿವೆ.[೪] ಅವರು ಹಾಡುಗಳು ಬೌಲ್ ,ಝುಮುರ್ , ಸಂಥಾಲಿ ಜನಪದ ಗೀತೆಗಳು, ಜನಪದ ಅಥವಾ ಜನಪದೀಯ ಹಾಡುಗಳಾಗಿವೆ.ಅದರಲ್ಲಿ ಹಾವಾಡಿಗರು , ಭೈತಲಿ ಮತ್ತು ಭಾಯೊವಿಯಾ ಇವೆಲ್ಲಾ ಹಾಡುಗಳು ಶುದ್ದ ಜನಪದೀಯ ಸಂಯೋಜನೆಗಳಾಗಿವೆ.ಇವುಗಳಲ್ಲಿ ಕವಿ ಒಂದರ ಸೌಂದರ್ಯವನ್ನು ಇನ್ನೊಂದಕ್ಕೆ ವರ್ಗಾಯಿಸಿದ್ದಾನೆ. ನಜ್ರುಲ್ ಮಕ್ಕಳಿಗಾಗಿಯೂ ಹಾಡುಗಳನ್ನು ಬರೆದು ಪ್ರಕಟಿಸಿದ್ದಾರೆ.[೪]

ನಜ್ರುಲ್ ರ ಈ ಯಶಸ್ಸು ಭಾರತೀಯ ನಾಟಕರಂಗಕ್ಕೆ ಮತ್ತು ಆಗ ಉದಯವಾಗುತ್ತಿದ್ದ ಸಿನೆಮಾ ಉದ್ಯಮಕ್ಕೂ ಕರೆತಂದಿತು. ಅವರು ಮೊದಲ ಬಾರಿಗೆ ಚಲನಚಿತ್ರಕ್ಕಾಗಿ ಕೆಲಸ ಮಾಡಿದ್ದೆಂದರೆ ಗಿರೀಶ್ ಚಂದ್ರ ಘೋಷ್ ಅವರ "ಭಕ್ತ ಧ್ರುವ"ಚಿತ್ರಕ್ಕಾಗಿ 1934 ರ ಸುಮಾರಿಗೆ ಎನ್ನಲಾಗುತ್ತದೆ. ನಜ್ರುಲ್ ಇದರಲ್ಲಿ ನಾರದನ ಪಾತ್ರ ಮಾಡಿದ್ದಾರಲ್ಲದೇ ಚಿತ್ರ ನಿರ್ದೇಶನ ಮಾಡಿದ್ದಾರೆ. ಅದಕ್ಕಾಗಿ ಹಾಡು ರಚಿಸಿ ಅದಕ್ಕಾಗಿ ಸಂಗೀತ ಸಂಯೋಜಿಸಿದ್ದಲ್ಲದೇ ಹಿನ್ನಲೆ ಗಾಯಕರಾಗಿಯೂ ಕೆಲಸ ಮಾಡಿದ್ದಾರೆ.[೩] ಆಗ "ವಿದ್ಯಾಪತಿ"(ಜ್ಞಾನದ ಅಧಿಪತಿ) ಎಂಬ ಚಿತ್ರ ಅವರ ಮುದ್ರಣ ಸಾಹಿತ್ಯ ಕುರಿತಾಗಿದ್ದು 1936 ರಲ್ಲಿ ಮುದ್ರಣ ಕಂಡಿತು.ಅಷ್ಟೇ ಅಲ್ಲದೇ ಟ್ಯಾಗೋರ್ ಅವರ ಕಾದಂಬರಿ ಗೊರಾ ಆಧಾರಿತ ಚಿತ್ರಕ್ಕೆ ಅವರು ಸಂಗೀತ ನಿರ್ದೇಶಕರಾಗಿದ್ದರು. ನಜ್ರುಲ್ ಸಚಿನ್ ಸೆನ್ ಗುಪ್ತಾರ ಕಥಾಧಾರಿತ ನಾಟಕ "ಸಿರಾಜ್-ಉದ್-ದೌಲಾ"ಕ್ಕಾಗಿ ಹಾಡು ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ನಜ್ರುಲ್ 1939 ರಲ್ಲಿ ಕೊಲ್ಕತ್ತಾ ರೇಡಿಯೊಗಾಗಿ ಕೆಲಸ ಮಾಡಲಾರಂಭಿಸಿದರು.ನಿರ್ಮಾಣದ ಹೊಣೆ ಮತ್ತು ಕೇಂದ್ರದ ಸಂಗೀತ ಕಾರ್ಯಕ್ರಮ ಪ್ರಸಾರ ಕಾರ್ಯದಲ್ಲಿ ತೊಡಗಿದರು. ಅವರು ಸಂಗೀತದ ಮೇಲಿನ ವಿಮರ್ಶೆ ಮತ್ತು ವಿಶ್ಲೇಷಣೆಗಳ ಆರಂಭಿಸಿದರು.ಉದಾಹರಣೆಗೆ "ಹಾರ್ಮೊನಿ" ಮತ್ತು "ನವರಾಗ ಮಾಲಿಕಾ" ಇತ್ಯಾದಿಗಳ ನಿರ್ಮಾಣ ಕೈಗೆತ್ತಿಕೊಂಡರು. ನಜ್ರುಲ್ ಭೈರವಿ ರಾಗದಿಂದ ಸ್ಪೂರ್ತಿ ಪಡೆದು ಅದಕ್ಕಾಗಿ ಅಸಂಖ್ಯಾತ ಹಾಡುಗಳನ್ನು ಬರೆದರು.[೨೬] ನಜ್ರುಲ್ ತಮ್ಮ ಕಲಾವಿದತನದ ಸಮಗ್ರತೆ ಕಾಯ್ದುಕೊಂಡರು.ತಮ್ಮ ಹಾಡುಗಳ ಸಂಗ್ರಹ ಉಳಿದ ಎಲ್ಲಾ ಹಾಡುಗಳ ಸಂಗ್ರಹ ಹಾಗು ಅವುಗಳ ಉಳಿವಿಗೆ ಕಾರಣರಾದರು.ಕೇವಲ ತಮ್ಮದವುಗಳನ್ನೇ ಅಳವಡಿಸದೇ ಇನ್ನಿತರ ಸಾಹಿತ್ಯಕ್ಕೂ ಹೆಚ್ಚು ಮಹತ್ವ ನೀಡಿದ್ದರು.

ನಜ್ರುಲ್ ಅವರ ಪತ್ನಿ 1939 ರಲ್ಲಿ ತೀವ್ರ ಪಾರ್ಶ್ವವಾಯುವಿಗೆ ತುತ್ತಾಗಿ ಅವರ ಸೊಂಟದ ಭಾಗ ನಿಶಕ್ತಿಯಾಗಿ ತೀವ್ರ ತೊಂದರೆಗೆ ಸಿಲುಕಿದರು, ತಮ್ಮ ಪತ್ನಿಯ ಶುಶ್ರೂಷೆಗಾಗಿ ಅವರು ತಮ್ಮ ಬರೆಹ-ಹಾಡುಗಳನ್ನು 400 ರೂಪಾಯಿಗಳಿಗೆ, ಗ್ರಾಮ್ ಫೊನ್ ಮುದ್ರಣಗಳನ್ನು ಒತ್ತೆ ಇಡಬೇಕಾಯಿತು.[೨೭] ಅವರು 1940 ರಲ್ಲಿ ಪತ್ರಿಕೋದ್ಯಮಕ್ಕೆ ಮರಳಿದರು.ದಿನಪತ್ರಿಕೆ "ನಬ್ ಯುಗ್"ಕ್ಕಾಗಿ (ನವಯುಗ)ಅವರು ಪ್ರಧಾನ ಸಂಪಾದಕರಾದರು.ಇದನ್ನು ಪ್ರಖ್ಯಾತ ಬೆಂಗಾಲಿ ರಾಜಕಾರಣಿ ಎ.ಕೆ ಫಜ್ಲುಲ್ ಹಕ್ ಸಂಸ್ಥಾಪಿಸಿದ್ದರು.[೨೭]

.ರಬೀಂದ್ರನಾಥ ಟ್ಯಾಗೋರ್ಅವರ ಮರಣ ಆಗಷ್ಟ್ 8,1941 ರಲ್ಲಾದಾಗ ನಜ್ರುಲ್ ತೀವ್ರ ನೊಂದಿದ್ದರು. ಅವರು ಸ್ವಯಂ ಸ್ಪೂರ್ತಿಯಿಂದ ರವೀಂದ್ರನಾಥ್ ಟ್ಯಾಗೋರ್ ಅವರ ನೆನಪಿಗಾಗಿ ಎರಡು ಕವಿತೆಗಳನ್ನು ಬರೆದರು."ರಬಿಹರಾ"(ರಬೀಂದ್ರ ರಹಿತ ಅಥವಾ ರಬಿ ಇರದ ಶೂನ್ಯ)ಇವು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರ ಕಂಡವು. ಕೆಲವೇ ತಿಂಗಳಲ್ಲಿ ನಜ್ರುಲ್ ನಿಧಾನವಾಗಿ ಅನಾರೋಗ್ಯ ಪೀಡಿತರಾಗಿ ತಮ್ಮ ಮಾತಿನ ಶಕ್ತಿಯನ್ನೇ ಕಳೆದುಕೊಂಡರು. ಅವರ ವರ್ತನೆಗಳು ಎರ್ರಾಬಿರ್ರಿಯಾದವು.ದುಂದುವೆಚ್ಚ ಮಾಡಲು ಆರಂಭಿಸಿದರು.ಹೀಗೆ ಅವರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದರು. ಅವರ ಪತ್ನಿ ತಾವೇ ಅನಾರೋಗ್ಯ ಪೀಡಿತರಾಗಿದ್ದರೂ ಪತಿಯ ಆರೈಕೆಯಲ್ಲಿ ನಿರಂತರವಾಗಿ ತೊಡಗಿದರು. ಹೇಗೆಯಾದರೂ ನಜ್ರುಲ್ ಅವರ ಅರೋಗ್ಯ ದಿನೇ ದಿನೇ ಕೆಡಲಾರಂಭಿಸಿತು.ಅವರು ತುಂಬಾ ಬಳಲಿದರು. ಅವರು ಹೋಮಿಯೊಪತಿ ಮತ್ತು ಆಯುರ್ವೇದ್ ಔಷಧಿಗಳ ಚಿಕಿತ್ಸೆ ಪಡೆದರೂ ಅದರಿಂದ ಯಾವುದೇ ಉಪಶಮನ ದೊರೆಯಲಿಲ್ಲ.ಆದರೆ ಅವರ ಮಾನಸಿಕ ಆರೋಗ್ಯದ ಕ್ಷೀಣತೆ ಹೆಚ್ಚಾಗಿ ಅವರು 1942 ರಲ್ಲಿ ಮಾನಸಿಕ ಆರೋಗ್ಯ ಆಶ್ರಮಧಾಮಕ್ಕೆ ಸೇರುವಂತಾಯಿತು. ಅಲ್ಲಿ ನಾಲ್ಕು ತಿಂಗಳ ಚಿಕಿತ್ಸೆ ಅನಂತರ ಭಾರತದಲ್ಲಿ ಶಾಂತ ಜೀವನಕ್ಕೆ ಮೊರೆಹೋದರು. ತರುವಾಯ 1952 ರಲ್ಲಿ ರಾಂಚಿಯಲ್ಲಿರುವ ಮಾನಸಿಕ ಆಸ್ಪತ್ರೆಗೆ ಅವರನ್ನು ಸ್ಥಳಾಂತರ ಮಾಡಲಾಯಿತು.. ಅವರ ಹಲವು ಅಭಿಮಾನಿಗಳ ಗುಂಪು ತಮ್ಮೊಳಗೇ "ನಜ್ರುಲ್ ಟ್ರೀಟ್ ಮೆಂಟ್ ಸೊಸೈಟಿ" ಎಂದು ಕಟ್ಟಿಕೊಂಡು ಅವರ ನೆರವಿಗೆ ನಿಂತಿರು.ಭಾರತದ ರಾಜಕಾರಣಿ ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಆ ಟ್ರೀಟ್ ಮೆಂಟ್ ಸೊಸೈಟಿ ನಜ್ರುಲ್ ಮತ್ತು ಪ್ರಮಿಳಾರನ್ನು ಚಿಕಿತ್ಸೆಗಾಗಿ ಮೊದಲು ಲಂಡನ್ ಗೆ ಹಾಗು ವಿಯೆನ್ನಾಗೆ ಕಳಿಸಿತು.[೨೮] ಪರೀಕ್ಷೆ ನಂತರ ವೈದ್ಯರು ಇವರಿಗೆ ಪೂರ್ಣ ಆರೈಕೆ ದೊರಕಿಲ್ಲ ಎಂದರು.ವಿಯೆನ್ನಾದಲ್ಲಿನ ಡಾ.ಹಾನ್ಸ್ ಹಾಫ್ ಓರ್ವ ನರರೋಗ ತಜ್ಞರು ತಪಾಸಣೆ ನಡೆಸಿ ನಜ್ರುಲ್ ಪಿಕ್ಸ್ ರೋಗಕ್ಕೆ (ತೀವ್ರತರ ಜ್ಞಾಪಕ ಶಕ್ತಿ ಕಳೆದ ಸ್ಥಿತಿ)ತುತ್ತಾಗಿದ್ದಾರೆಂದು ಹೇಳಿದರು. ಅವರ ಈ ಸ್ಥಿತಿಯನ್ನು ಗುಣಪಡಿಸಲಾಗದೆಂದಾಗ ಅವರು 1953 ರ ಡಿಸೆಂಬರ್ 15 ರಂದು ಕೊಲ್ಕತ್ತಾಗೆ ವಾಪಸ್ಸಾದರು.[೨೮] ನಂತರ 1962 ಜೂನ್ 30 ರಂದು ಪತ್ನಿ ಪ್ರಮಿಲಾ ನಿಧನರಾದರು.ನಜ್ರುಲ್ ತೀವ್ರ ನಿಗಾ ಘಟಕದಲ್ಲಿ ಉಳಿಯಬೇಕಾಯಿತು. ಮುಂದೆ ಹೊಸ ಬಾಂಗ್ಲಾ ದೇಶ 1972 ರಲ್ಲಿ ಸ್ವಾತಂತ್ರ್ಯ ಪಡೆದಾಗ ಅವರನ್ನು ಢಾಕಾಗೆ ಕಳಿಸಿ ನಾವು ಅವರಿಗೆ ನಾಗರಿಕತ್ವ ನೀಡಿ ಗೌರವಿಸುತ್ತೇವೆ ಎಂದುಭಾರತ ಸರಕಾರಕ್ಕೆ ಮನವಿ ಮಾಡಲಾಯಿತು.[೩] ಎಷ್ಟೇ ಚಿಕಿತ್ಸೆ ಮತ್ತು ಕಾಳಜಿ ತೋರಿದರೂ ನಜ್ರುಲ್ ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಕಾಣಲಿಲ್ಲ. ಅವರ ಕಿರಿಯ ಪುತ್ರ ಪ್ರಖ್ಯಾತ ಗಿಟಾರು ವಾದಕ ಕಾಜಿ ಅನಿರುದ್ದ 1974 ರಲ್ಲಿ ಮರಣವನ್ನಪ್ಪಿದ.ನಂತರ ತಮ್ಮ ಸುದೀರ್ಘಾವಧಿಯ ಅನಾರೋಗ್ಯದ ನಂತರ 1976 ಆಗಷ್ಟ್ 29 ರಂದು ನಿಧನರಾದರು. ಅವರ ಇಚ್ಚೆ ಪ್ರಕಾರ ಅವರನ್ನು ಯುನ್ವರ್ಸಿಟಿ ಆಫ್ ಢಾಕಾದ ಕ್ಯಾಂಪಸ್ ನಲ್ಲಿನ ಮಸೀದೆಯಲ್ಲಿ ಸಮಾಧಿ ಮಾಡಲು ತೀರ್ಮಾನಿಸಲಾಯಿತು. ಸಾವಿರಾರು ಜನರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.ಬಾಂಗ್ಲಾದೇಶದಲ್ಲಿ ಎರಡು ದಿನಗಳ ಶೋಕಾಚರಣೆ ಮಾಡಲಾಯಿತುಭಾರತದ ಸಂಸತ್ತಿನಲ್ಲಿ ಕೂಡಾ ಅವರ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು.[೨೯]

ವಿಮರ್ಶೆ ಮತ್ತು ಪರಂಪರೆ[ಬದಲಾಯಿಸಿ]

ಢಾಕಾ ಯುನ್ವರ್ಸಿಟಿ ಕ್ಯಾಂಪಸ್ ನ ಮಸೀದೆ ಹತ್ತಿರವಿರುವ ನಜ್ರುಲ್ಲಾರ ಸಮಾಧಿ

ನಜ್ರುಲ್ ಅವರ ಕಾವ್ಯವು ಮನಕ್ಕೊಪ್ಪುವ ಶೈಲಿಯನ್ನೊಳಗೊಂಡಿದೆಯಲ್ಲದೇ ತಮ್ಮ ಭಾವನೆಗಳನ್ನು ಜನರಿಗೆ ತಲುಪಿಸಲು ಅವರು ಹಲವು ಭಾವಾನಾತ್ಮಕ ಗುಣಲಕ್ಷಣಗಳನ್ನು ಅದರಲ್ಲಿ ತುಂಬಿದ್ದಾರೆ. ಅವರು ಯಾವುದೇ ಸಂಘಟನೆ ಅಥವಾ ಯಾರ ಮುಲಾಜಿಗೋ ಬಲಿಯಾಗಿ ಬರೆದವರಲ್ಲ.ಅದನ್ನು ಯಾವತ್ತೂ ಅವರು ಮನಸ್ಸಿಗೆ ತಂದುಕೊಂಡ ಉದಾಹರಣೆಗಳಿಲ್ಲ. ಅವರ ಕೃತಿಗಳನ್ನು ಸಾಮಾನ್ಯವಾಗಿ ಅಹಂಕಾರದಿಂದ ಕೂಡಿವೆ ಎಂದು ಟೀಕಿಸಿದರೂ ಅದರಲ್ಲಿನ ಭಾವನೆಗಳು ಎಲ್ಲರನ್ನೂ ಸೂಕ್ತವಾಗಿ ತಲುಪುತ್ತವೆ ಮತ್ತು ಆತ್ಮ ವಿಶ್ವಾಸವನ್ನು ತುಂಬುತ್ತವೆ ಎಂಬುದನ್ನು ಮಾತ್ರ ಎಲ್ಲರೂ ಒಪ್ಪುತ್ತಾರೆ. ಅವರ ಕಾವ್ಯಗಳಲ್ಲಿ ದೇವರಿಗೇ ಸವಾಲು ಹಾಕುವ ಅಂಶಗಳಿದ್ದರೂ ಅವರೊಳಗೊಬ್ಬ ವಿನಯವಂತ ಭಕ್ತ ಆ ದೇವರನ್ನು ನೆನೆಯುತ್ತಿದ್ದ.[೯] ನಜ್ರುಲ್ ಅವರ ಕವನಗಳಲ್ಲಿ ಒರಟುತನ ಕಂಡರೂ ಅವರನ್ನು ಟ್ಯಾಗೋರ್ ರ ನಯನಾಜೂಕಿನ ಕಾವ್ಯದ ಶೈಲಿಯ ಪ್ರತಿದ್ವಂದ್ವವಾದವುಗಳೆಂದು ಕೆಲವರು ಹೇಳುತ್ತಾರೆ. ನಜ್ರುಲ್ ತಮ್ಮ ಕವಿತೆಗಳಲ್ಲಿ ವ್ಯಾಪಕವಾಗಿ ಪರ್ಸಿಯನ್ ಬಳಸಿದ್ದರ ಬಗ್ಗೆ ಹಲವು ವಿವಾದಗಳಿವೆ,ಆದರೆ ಇದು ಆತನ ಕೃತಿಗಳ ವ್ಯಾಪ್ತಿ ಹೆಚ್ಚಿಸಿದೆ.[೯] ನಜ್ರುಲ್ ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತ ಭಾಷೆ ಬಳಸಿದ್ದಾರೆ.ಅದರಲ್ಲಿ ಕಲ್ಪನೆ,ಉತ್ಸಾಹ ಮತ್ತು ಯುವ ಓದುಗರಿಗೆ ಉಲ್ಲಾಸ ನೀಡುವ ಅವರ ಸರಳತೆ ಅಲ್ಲಿದೆ.[೯]

ನಜ್ರುಲ್ ರನ್ನು ಅವರ ಜಾತ್ಯತೀತ ನಡೆಗಾಗಿ ಸ್ಮರಿಸಲಾಗುತ್ತದೆ. ತಮ್ಮ ಕಾದಂಬರಿ ಮೃತ್ಯುಕುಂಡ್ ದಲ್ಲಿ ಅವರು ಬೆಂಗಾಲಿ ಕ್ರಿಶ್ಚಿಯನ್ ರನ್ನು ಉಲ್ಲೇಖಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಬೆಂಗಾಲಿ ಸಾಹಿತ್ಯದಲ್ಲಿ ಮೊದಲ ಬಾರಿಗೆ ಅವರು ಜನಪದೀಯ ಶಬ್ದಭಂಡಾರವನ್ನು ಬಳಸಿದ್ದಾರೆ. ಅವರು ಮೊದಲ ಬಾರಿಗೆ ಸಿಕಲ್ ಅಂಡ್ ಹ್ಯಾಮರ್ ನ್ನು ತಮ್ಮ ಪತ್ರಿಕೆಯಲ್ಲಿ ಬಳಸಿದ್ದಾರೆ.ಭಾರತದ ಯಾವುದೇ ಪತ್ರಿಕೆ ಈ ಸಂಕೇತವನ್ನು ಮುದ್ರಿಸುವ ಮುಂಚೆ ಇದನ್ನು ಮಾಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ನಜ್ರುಲ್ ಹೊಸ ಶೈಲಿಗಳನ್ನು ಮತ್ತು ನವೀನ ವಿಚಾರಗಳನ್ನು ಆಲೋಚನೆಗಳ ಸರಣಿಯನ್ನು ತಮ್ಮ ಕೃತಿಯಲ್ಲಿ ವ್ಯಾಪಕವಾಗಿ ಬಳಸಿದ್ದಾರೆ. ವಿದ್ವಾಂಸರ ಪ್ರಕಾರ ಬೆಂಗಾಲಿ ಮುಸ್ಲಿಮ್ ರಲ್ಲಿ ಅವರು ಸಾಂಸ್ಕೃತಿಕ ಮತ್ತು ಸಂಗೀತ ಕಲೆಗಳಂತಹವುಗಳನ್ನು ಉತ್ತೇಜಿಸಲು "ಮುಕ್ತಗೊಳಿಸುವ"ಕಾವ್ಯ ಮತ್ತು ಸಾಹಿತ್ಯವನ್ನು ನೀಡಿದ್ದಾರೆ.ಅದರ ಹಳೆಯ ಕಾಲದ ಕೂಪದಿಂದ ಜನರು ಹೊರಬರುವಂತೆ ಅವರು ಪ್ರಯತ್ನಿಸಿದ್ದಾರೆ. ನಜ್ರುಲ್ ಅವರಿಗೆ ಬೆಂಗಾಲಿ ಸಾಹಿತ್ಯಕ್ಕಾಗಿ ನೀಡುವ ಅತ್ಯುನ್ನತ ಗೌರವ ಜಗತ್ತರಿನಿ ಸುವರ್ಣ ಪದಕವನ್ನು 1945 ರಲ್ಲಿ ಯುನ್ವರ್ಸಿಟಿ ಆಫ್ ಕೊಲ್ಕತ್ತಾ ನೀಡಿದೆ.ಅದೇ ರೀತಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಭೂಷಣವನ್ನು 1960 ರಲ್ಲಿ ನೀಡಲಾಗಿದೆ.[೩೦] ಬಾಂಗ್ಲಾದೇಶ ಕೂಡ ಅವರಿಗೆ "ರಾಷ್ಟ್ರ ಕವಿ"ಎಂಬ ಸಮ್ಮಾನ ನೀಡಿದೆ. ಅದೇ ರೀತಿ ಬಾಂಗ್ಲಾದೇಶದ ಸರ್ಕಾರವು ಎಕುಶೆಯ್ ಪದಕವನ್ನು ನೀಡಿ ಪುರಸ್ಕರಿಸಿದೆ. ಅದೇ ರೀತಿ ಯುನ್ವರ್ಸಿಟಿ ಆಫ್ ಢಾಕಾವು ಅವರಿಗೆ ಡಿ.ಲಿಟ್ಟ್ ನೀಡಿದೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿನ ಕಲಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳು ಅವರ ಸ್ಮರಣಾರಾರ್ಥ ಆರಂಭಗೊಂಡು ಅವರ ಕಾರ್ಯಗಳಿಗೆ ಸಮರ್ಪಿತವಾಗಿವೆ. ಅವರ ಹೆಸರಿನ ನಜ್ರುಲ್ ಎಂಡೊಮೆಂಟ್ ಎಂಬ ದತ್ತಿ ನಿಧಿಯು ಹಲವು ಶಾಲಾ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಅವರ ವಿಚಾರಧಾರೆ ಮತ್ತು ವಿಕಾಸದ ತತ್ವಗಳ ನೆನಪಿಗೆ ಅವುಗಳ ವಿಶ್ಲೇಷಣಾ ಕ್ರಮಗಳಿಗೂ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶ್ ನಜ್ರುಲ್ ಸೇನಾ ಬೃಹತ್ ಪ್ರಮಾಣದ ಸಾರ್ವಜನಿಕ ಸಂಘಟನೆಯಾಗಿದೆ.ಇದು ದೇಶಾದ್ಯಂತದ ಮಕ್ಕಳ ಶಿಕ್ಷಣಕ್ಕಾಗಿ ಕಾರ್ಯನಿರತವಾಗಿದೆ.[೩೧]

ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

 • ಕಾಜಿ ನಜ್ರುಲ್ ಇಸ್ಲಾಮ್ ಅವರ ಕೃತಿಗಳ ಪಟ್ಟಿ:-

ಹೆಸರಾಂತ ನಜ್ರುಲ್ ಸಂಗೀತ ಹಾಡುಗಾರರು[ಬದಲಾಯಿಸಿ]

ಜಗತ್ತಿನಲ್ಲಿ ನಜ್ರುಲ್ ಅವರ ಕವಿತೆಗಳನ್ನು ಹಾಡುವ ಗಾಯಕ ಕಲಾವಿದರ ಪಟ್ಟಿ:- 1) ನಿಲುಫರ್ ಯಾಸ್ಮಿನ್ (ದಿವಂಗತ) 2) ಖೈರುಲ್ ಅನಮ್ ಶಕಿಲ್ 3) ಅಂಜಲಿ ಮುಖರ್ಜೀ 4) Mh ರಫಿ 5) ಫಿರೊಜಾ ಬೇಗಮ್ 6) ಸಬಿಹಾ ಮಹಮುದ್ 7) ಸುಜನಾ ಅನ್ಸಾರ್ 8) ಫತೆಮಾ ತುಜ್ ಜೊಹ್ರಾ 9) ಕನಕ ಚಾಪಾ 10) ಅನುಪ್ ಘೋಷಾಲ್ 11) ಫೆರೊದಸ್ ಆರಾ 12) ಶಾಹಿನ್ ಸಮದ್ 13) ಮನೊಬೆಂದ್ರ ಮುಖರ್ಜೀ

ಟಿಪ್ಪಣಿಗಳು[ಬದಲಾಯಿಸಿ]

 1. Hossain, Quazi Motahar (2000). "Nazrul Islam, the Singer and Writer of Songs". In Mohammad Nurul Huda (ed.). Nazrul: An Evaluation. Dhaka: Nazrul Institute. p. 55. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 2. ೨.೦ ೨.೧ ೨.೨ "Kazi Nazrul Islam: A Chronology of life". Biography/Bibliography. Nazrul Institute, Ministry of Cultural Affairs, Government of Bangladesh. Archived from the original on 2008-04-24. Retrieved 2008-04-28.
 3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ೩.೧೪ ೩.೧೫ "Kazi Nazrul Islam". Banglapedia. Archived from the original on 2004-07-01. Retrieved 2006-07-08.
 4. ೪.೦ ೪.೧ ೪.೨ ೪.೩ ೪.೪ Chaudhuri, Dilip. "Nazrul Islam: The unparalleled lyricist and composer of Bengal". Press Information Bureau, ಭಾರತ ಸರ್ಕಾರ. Retrieved 2006-09-22.
 5. Bose, Buddhadeva (2000). "Modern Bengali Poetry and Nazrul Islam". In Mohammad Nurul Huda (ed.). Nazrul: An Evaluation. Dhaka: Nazrul Institute. p. 80. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 6. Hall, P (2002). Cities of Tomorrow. Blackwell Publishing. pp. 198–206. ISBN 0631232524.
 7. ೭.೦ ೭.೧ Amin, Sonia (1996). The World of Muslim Women in Colonial Bengal, 1876-1939. p. 106. ISBN 9004106421.
 8. ೮.೦ ೮.೧ Kabir, Choudhary. "Rebel". Retrieved 2006-07-08.
 9. ೯.೦ ೯.೧ ೯.೨ ೯.೩ ೯.೪ Choudhury, Serajul Islam (2006-06-01). "The Blazing Comet". New Age. Archived from the original on 2010-07-19. Retrieved 2006-09-22.
 10. Rushd, Abu (2000). "Nazrul Islam's 'The Rebel'". In Mohammad Nurul Huda (ed.). Nazrul: An Evaluation. Dhaka: Nazrul Institute. p. 100. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 11. Chowdhury, Serajul Islam (2000). "The Blazing Comet". In Mohammad Nurul Huda (ed.). Nazrul: An Evaluation. Dhaka: Nazrul Institute. p. 141. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 12. Islam, Rafiqul (2000). "Nazrul". In Mohammad Nurul Huda (ed.). Nazrul: An Evaluation. Dhaka: Nazrul Institute. p. 113. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 13. "Poverty". 2006-07-08. Archived from the original on 2007-06-10. Retrieved 2006-07-08. {{cite web}}: |first= missing |last= (help)
 14. Islam, Rafiqul (2000). "Nazrul". In Mohammad Nurul Huda (ed.). Nazrul: An Evaluation. Dhaka: Nazrul Institute. p. 115. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 15. ಹಕ್, ಅಸಾದುಲ್. 1999. ನಜ್ರುಲ್ ಜಖಾನ್ ಬೆತಾರೆ(ಕವಿ ನಜ್ರುಲಾರ ವಿವಿಧ ಪ್ರದರ್ಶನಗಳ ಅಧ್ಯಯನ ಕಾಜಿ ನಜ್ರುಲ್ ಇಸ್ಲಾಮ್ ಇನ್ ರೇಡಿಯೊ ಉಯಿತ್ ಡಾಕುಮೆಂಟ್ಸ್. ಬಾಂಗ್ಲಾ ದೇಶ ಶಿಲ್ಪಕಲಾ ಅಕಾಡೆಮಿ, ಢಾಕಾ. 1999. pp. 28-30
 16. ೧೬.೦ ೧೬.೧ ದಿ ಡೇಲ್ ಸ್ಟಾರ್. ಮೇ 23, 2006
 17. ೧೭.೦ ೧೭.೧ Huda, Mohammad Nurul (2000). "Nazrul's Personlore". In Mohammad Nurul Huda (ed.). Nazrul: An Evaluation. Dhaka: Nazrul Institute. p. 314. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 18. "ದಿ ಕರ್ಟಿಸನ್", "ಬರಂಗಾನಾ",ಅನುವಾದ ಪುಟ52-54, ಗೂಗಲ್ ಬುಕ್ ಪ್ರಿವಿವ್ ಫ್ರಾಮ್'ರೆಬೆಲ್ ಅಂಡ್ ಅದರ್ ಪೊಯೆಮ್ಸ್' ಬೈ ಬಸುಧಾ ಚಕ್ರವರ್ಥಿ, ISBN 8126006072
 19. Huda, Mohammad Nurul (2000). "Nazrul's Personlore". In Mohammad Nurul Huda (ed.). Nazrul: An Evaluation. Dhaka: Nazrul Institute. pp. 314–315. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 20. ಕನರುನೀಸ್ ಅಜಾದ್. 2001. ಧರನಿಯಾ ಚೆತೊನಯ್ ನಜ್ರುಲ್. ನಜ್ರುಲ್ ಇನ್ ಸ್ಟಿಟ್ಯುಟ್, ಢಾಕಾ. 1999. pp. 173-174
 21. ಕಮರುನ್ನೀಸಾ ಅಜಾದ್. 2001. ಧರ್ಮೀಯ ಚೆಟೊನಯ್ ನಹ್ರುಲ್ . ನಜ್ರುಲ್ ಇನ್ಸಟ್ಯುಟ್, ಢಾಕಾ. 1999. pp. 19-20
 22. ಚಕ್ರವರ್ತಿ, ಪಿ. 72.
 23. Moniruzzaman, Mohammad (2000). "Interaction of Cultures and Kazi Nazrul Islam". In Mohammad Nurul Huda (ed.). Nazrul: An Evaluation. Dhaka: Nazrul Institute. p. 149. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 24. ೨೪.೦ ೨೪.೧ Moniruzzaman, Mohammad (2000). "Interaction of Cultures and Kazi Nazrul Islam". In Mohammad Nurul Huda (ed.). Nazrul: An Evaluation. Dhaka: Nazrul Institute. pp. 153–54. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 25. Huda, Mohammad Nurul (2000). "Nazrul's Personlore". In Mohammad Nurul Huda (ed.). Nazrul: An Evaluation. Dhaka: Nazrul Institute. pp. 306–307. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 26. Islam, Rafiqul (2000). "Nazrul Islam". In Mohammad Nurul Huda (ed.). Nazrul: An Evaluation. Dhaka: Nazrul Institute. p. 117. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 27. ೨೭.೦ ೨೭.೧ Kamal, Sajed (2000). "Kazi Nazrul Islam: A Chronology of Life". In Mohammad Nurul Huda (ed.). Nazrul: An Evaluation. Dhaka: Nazrul Institute. p. 325. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 28. ೨೮.೦ ೨೮.೧ Kamal, Sajed (2000). "Kazi Nazrul Islam: A Chronology of Life". In Mohammad Nurul Huda (ed.). Nazrul: An Evaluation. Dhaka: Nazrul Institute. p. 326. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 29. "References to demise of Heads of foreign States or eminent international personalities". 2007-10-16. Archived from the original on 2012-03-25. Retrieved 2008-05-13.
 30. Kamal, Sajed (2000). "Kazi Nazrul Islam: A Chronology of Life". In Mohammad Nurul Huda (ed.). Nazrul: An Evaluation. Dhaka: Nazrul Institute. p. 326. ISBN 984555167X. {{cite book}}: Cite has empty unknown parameters: |origmonth=, |month=, and |coauthors= (help)
 31. "Bangladesh Nazrul Sena". Archived from the original on 2010-01-11. Retrieved 2008-05-13.

ಉಲ್ಲೇಖಗಳು[ಬದಲಾಯಿಸಿ]

 • ಕರುಣಾಮಯ ಗೋಸ್ವಾಮಿi,ಕಾಜಿ ನಜ್ರುಲ್ ಇಸ್ಲಾಮ್: ಎ ಬಯಾಗ್ರಫಿ ,(ನಜ್ರುಲ್ ಇನ್ ಸ್ಟಿಟ್ಯುಟ್; ಢಾಕಾ, 1996)
 • ರಫಿಕುಲ್ ಇಸ್ಲಾಮ್,ಕಾಜಿ ನಜ್ರುಲ್ ಇಸ್ಲಾಮ್: ಎ ನಿವ್ ಆಂಥೊಲಾಜಿ ,(ಬಾಂಗ್ಲಾ ಅಕಾಡಮಿ ;ಢಾಕಾ,1990)
 • ಬಸುಧಾ ಚಕ್ರವರ್ತಿ, ಕಾಜಿ ನಜ್ರುಲ್ ಇಸ್ಲಾಮ್ , (ನ್ಯಾಶನಲ್ ಬುಕ್ ಟ್ರಸ್ಟ್; ನಿವ್ ದೆಹಲಿ, 1968)
 • ಅಬ್ದುಲ್ ಹಕೀಮ್,ದಿ ಫಿಯರಿ ಲೈಯರೆ ಆಫ್ ನಜ್ರುಲ್ ಇಸ್ಲಾಮ್ ,(ಬಾಂಗ್ಲಾ ಅಕಾಡಮಿ, ಢಾಕಾ,1974)

ಬಾಹ್ಯ ಕೊಂಡಿಗಳು[ಬದಲಾಯಿಸಿ]