ವಿಷಯಕ್ಕೆ ಹೋಗು

ಆಗಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಗಮಗಳು ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಆಗಮ ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು. ವೇದ, ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ ದೇವಾಲಯಗಳ ನಿರ್ಮಾಣ, ಅವುಗಳ ಸ್ವರೂಪ, ದೇವತಾವಿಗ್ರಹಗಳ ಪ್ರತಿಷ್ಠಾಪನೆ,ಅರ್ಚನೆ, ಉತ್ಸವ, ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು, ಆಚಾರ ವಿಚಾರಗಳು ಇವೇ ಮೊದಲಾದ ವಿಷಯಗಳನ್ನು ತಿಳಿಸುತ್ತವೆ.

ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ. ಶಾಕ್ತ ಆಗಮಗಳು= ೬೭ (ಅಂದಾಜು)
ಶೈವಾಗಮ =೨೮
ವೈಷ್ಣವ ಆಗಮಗಳು = ೭೮
ಪಂಚಾರಾತ್ರ ಆಗಮಗಳು= ೧೦೮
ಅಲ್ಲದೆ ಸೌರ ಆಗಮ ಮತ್ತು ಗಾಣಪತ್ಯ ಆಗಮಗಳೂ ಇವೆ.

ಶೈವಾಗಮಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಎಂಬ ನಂಬಿಕೆ ಇದೆ. (ಉಳಿದ ೪ ಮುಖಗಳಿಂದ ನಾಲ್ಕು ವೇದಗಳು).

"https://kn.wikipedia.org/w/index.php?title=ಆಗಮ&oldid=1081685" ಇಂದ ಪಡೆಯಲ್ಪಟ್ಟಿದೆ