ವಿಷಯಕ್ಕೆ ಹೋಗು

ಅಗಸೆ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗಸೆ ಹೂವುಗಳು
ಕಾಯಿ
ಅಗಸೆ ಬೀಜ
ಅಗಸೆ ಎಣ್ಣೆ

ಅಗಸೆ ಅಥವಾ ನಾರಗಸೆ ಲಿನೇಸಿ/ಲೈನೇಸಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಗಿಡದ ಸಸ್ಯ ಶಾಸ್ತ್ರ ಹೆಸರು Linum usitatissimum. ಈ ಗಿಡವನ್ನು ಆಂಗ್ಲಭಾಷೆಯಲ್ಲಿ Linseed ಇಲ್ಲವೆ Flaxseed ಎಂದು ಕರೆಯುತ್ತಾರೆ. ಅಗಸೆ ಬೀಜದಲ್ಲಿ ಶೇಕಡ ಹೆಚ್ಚಿನ ಎಣ್ಣೆ ಇರುವುದರಿಂದ, ಇದನ್ನು ಬೀಜದ ಸಲುವಾಗಿ ಬೆಳೆಸುತ್ತಾರೆ.

ಭಾರತೀಯ ಭಾಷೆಗಳಲ್ಲಿ ಅಗಸೆ ಗಿಡದ ಹೆಸರು

[ಬದಲಾಯಿಸಿ]

ಭಾರತ ದೇಶದಲ್ಲಿ ಅಗಸೆಯನ್ನು ಹೆಚ್ಚಾಗಿ ಸಾಗುವಳಿ ಮಾಡುತ್ತಿರುವ ರಾಜ್ಯಗಳು[]

[ಬದಲಾಯಿಸಿ]

ಗಿಡ ಮತ್ತು ಬೀಜ

[ಬದಲಾಯಿಸಿ]

ಗಿಡ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ.[] ಎಲೆಗಳು೨೦-೪೦ ಮಿ.ಮೀ.ಉದ್ದ,೩-೫ ಮಿ.ಮೀ. ಅಗಲ ಇರುತ್ತವೆ. ಹೆಚ್ಚು ಕೊಂಬೆಗಳಿರುತ್ತವೆ. ಇವು ಗಿಡದ ಕಾಂಡ ಶೀರ್ಷಭಾಗದಲ್ಲಿರುತ್ತವೆ. ಎಲೆಗಳು ಶೂಲ ಆಕಾರದಲ್ಲಿರುತ್ತವೆ.[] ಬೀಜದ ಪ್ರಮಾಣದಲ್ಲಿರುವ ವ್ಯತ್ಯಾಸದಿಂದ ಎರಡು ತರಹ ವರ್ಗಿಕರಿಸಲಾಗಿದೆ. ಅವು ಸಣ್ಣ ಬೀಜದ ಗಿಡ, ಮತ್ತು ದೊಡ್ಡ ಬೀಜದ ಗಿಡ. ಸಣ್ಣ ಬೀಜಗಳು ಕಂದು ಬಣ್ಣದಲ್ಲಿ; ದೊಡ್ಡ ಬೀಜಗಳು ಮಂಜಲು/ಅರಿಶಿನ ಬಣ್ಣದಲ್ಲಿರುತ್ತವೆ. ಹೂಗಳು ನೀಲಿ ಬಣ್ಣದಲ್ಲಿರುತ್ತವೆ. ಮಳೆನೀರಿನ ಸಾಗುವಳಿಯಾದರೆ ಬೀಜದ ಇಳುವರಿ ಒಂದು ಹೆಕ್ಟೇರಿಗೆ ೨೧೦-೪೫೦ ಕಿಲೋ ಬರುತ್ತದೆ. ನೀರಾವರಿ ಸಾಗುವಳಿಯಾದರೆ ಒಂದು ಹೆಕ್ಟೇರಿಗೆ ೧೨೦೦-೧೫೦೦ ಕಿಲೋಗಳ ಬೀಜ ಇಳುವರಿ ಬರುತ್ತದೆ. ಸಣ್ಣ ಬೀಜದಲ್ಲಿ ಎಣ್ಣೆಯ ಶೇಕಡ ಪ್ರಮಾಣ ಸುಮಾರು ೩೩.೦%; ದೊಡ್ದ ಬೀಜದಲ್ಲಿ ಎಣ್ಣೆಯ ಪ್ರತಿಶತ ೩೪-೩೬% ಇರುವ ಸಂಭವ ಇದೆ.

ಎಣ್ಣೆಯನ್ನು ಉತ್ಪನ್ನ ಮಾಡುವ ವಿಧಾನಗಳು

[ಬದಲಾಯಿಸಿ]

ಪುರಾತನ ಕಾಲದಲ್ಲಿ ಬೀಜದಿಂದ ಎಣ್ಣೆಯನ್ನು ಗಾಣದಲ್ಲಿ ಆಡಿಸಿ ತೆಗೆಯುವ ಕ್ರಮವಿತ್ತು. ಗಾಣವನ್ನು ಎತ್ತುಗಳ ಸಹಾಯದಿಂದ ತಿರುಗಿಸುತ್ತಿದ್ದರು. ಆಮೇಲೆ ರೋಟರಿ (Rotary) ಎನ್ನುವ ವಿದ್ಯುತ್ತು ಮೋಟಾರು ಚಾಲಿತ ತಿರುಗುವ ಗಾಣ ಉಪಯೋಗಕ್ಕೆ ಬಂತು. ಪ್ರಸ್ತುತ ರೋಟರಿಗಿಂತ ಉತ್ತಮವಾದ ಎಕ್ಸ್'ಪೆಲ್ಲರ್ (Expeller) ಎನ್ನುವ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ.[] ಎಕ್ಸ್'ಪೆಲ್ಲರ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಅರೆಯಲು ಸಾಧ್ಯವಾಗುತ್ತಿದೆ. ಗಾಣದಿಂದ ಒಂದು ದಿನಕ್ಕೆ ೫೦ ಕಿಲೋಗಿಂತ ಹೆಚ್ಚು ಬೀಜವನ್ನು ಆಡಿಸುವುದಕ್ಕೆ ಆಗುವುದಿಲ್ಲ. ಆದರೆ ಎಕ್ಸುಪೆಲ್ಲರ್ ಯಂತ್ರದಿಂದ ೧-೨೦ ಟನ್ನುಗಳಷ್ಟು ಬೀಜವನ್ನು ಆಡಿಸಬಹುದು. ಎಣ್ಣೆ ತೆಗೆದ ಬೀಜವನ್ನು 'ಹಿಂಡಿ (cake)' ಎನ್ನುತಾರೆ. ಹಿಂಡಿಯಲ್ಲಿ ಇನ್ನೂ ೮-೧೦% ಎಣ್ಣೆ ಉಳಿದಿರುತ್ತದೆ. ಹಿಂಡಿಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನ್ ಪ್ಲಾಂಟ್ [] ಎನ್ನುವ ಕಾರ್ಖಾನೆಯಲ್ಲಿ ಆಡಿಸಿ, ಹಿಂಡಿಯಲ್ಲಿರುವ ಒಟ್ಟು ಎಣ್ಣೆಯನ್ನು ತೆಗೆಯಲಾಗುತ್ತದೆ. ಎರಡು ರೀತಿಯಾಗಿ ಎಣ್ಣೆಯನ್ನು ಎಕ್ಸುಪೆಲ್ಲರಿನಲ್ಲಿ ತೆಗೆಯಲಾಗುತ್ತದೆ. ಒಂದು ತಂಪು ಪ್ರಕ್ರಿಯೆ(cold process), ಎರಡನೆಯದು ಬಿಸಿ(hot) ಅಥವಾ ಸ್ಟೀಮ್(steam) ರೀತಿ. ತಂಪು ಪದ್ಧತಿಯಲ್ಲಿ ಬೀಜವನ್ನು ಬಿಸಿ ಮಾಡದೆ ಎಕ್ಸುಪೆಲ್ಲರಿನಲ್ಲಿ ನೇರವಾಗಿ ಹಾಕಿ ನಡೆಸಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ರೀತಿ ತೆಗೆದ ಎಣ್ಣೆ ಹಸಿ ಮಂಜಲು/ಹಳದಿ ವರ್ಣದಲ್ಲಿರುತ್ತದೆ. ಬೀಜಕ್ಕೆ ಸ್ಟೀಮನ್ನು ಕೊಟ್ಟು, ಬಿಸಿ ಮಾಡಿ ಎಣ್ಣೆ ತೆಗೆಯುವ ರೀತಿಯನ್ನು "ಹಾಟ್ ಪ್ರಾಸೆಸ್" ಅನ್ನುತಾರೆ. ಈ ಹಾಟ್ ಪ್ರಾಸೆಸ್ ಎಣ್ಣೆ ಮೊದಲು ಹಳದಿ ವರ್ಣವಾಗಿ ಕಾಣಿಸುತ್ತದೆ.

ಎಣ್ಣೆಯ ವಿಶೇಷ ಲಕ್ಷಣಗಳು

[ಬದಲಾಯಿಸಿ]

ಅಗಸೆ ಎಣ್ಣೆಯಲ್ಲಿ ಲಿನೊಲೆನಿಕ್ ಕೊಬ್ಬಿನ ಆಮ್ಲ ಹೆಚ್ಚಿನ ಪ್ರತಿಶತ ದಲ್ಲಿರುತ್ತದೆ. ಅದಕ್ಕೆ ಅಗಸೆ ಎಣ್ಣೆಯನ್ನು ಡ್ರೈಯಿಂಗ್ ಆಯಿಲ್(drying oil)ಎನ್ನುತ್ತಾರೆ. ಅಗಸೆ ಎಣ್ಣೆಯ ಭೌತಿಕ ಧರ್ಮಗಳು[]

ಲಕ್ಷಣ ಮಿತಿ
ತೇವ 0.25
ವಕ್ರೀಭವನ ಸೂಚಕೆ 400C 1.4720-1.4750
ಸಾಂದ್ರತೆ 300C/300C 0.923-0.928
ಸಪೋನಿಫಿಕೇಸನ್ ಮೌಲ್ಯ 188-195
ಅಯೋಡಿನ್ ಮೌಲ್ಯ 170 కనిష్టం.
ಅನ್ ಸಪೋನಿಫಿಯಬುಲ್ ಪದಾರ್ಥ 1.5-2.0%
Foots 1.0 గరిష్టం

ಎಣ್ಣೆ ಯಲ್ಲಿರುವ ಕೊಬ್ಬಿನ ಆಮ್ಲಗಳು(ಭಾರತದಲ್ಲಿ ಸಿಗುವ ಎಣ್ಣೆ)[]

ಕೊಬ್ಬಿನ ಆಮ್ಲ ಶೇಕಡಾ
ಪಾಮಿಟಿಕ್ ಆಮ್ಲ(C16:0) 4-16
ಸ್ಟಿಯರಿಕ್ ಆಮ್ಲ(C18:0) 0.-10.0
ಒಲಿಕ್ ಆಮ್ಲ (C18:1) 13-38
ಲಿನೊಲಿಕ್ ಆಮ್ಲ(C18:2) 7-18
ಲಿನೊಲೆನಿಕ್ ಆಮ್ಲ(C18:3) 35-67

ವಿದೇಶಗಳಲ್ಲಿ ಉತ್ಪನ್ನವಾಗುವ ಅಗಸೆ ಎಣ್ಣೆಯಲ್ಲಿನ ಕೊಬ್ಬಿನ ಆಮ್ಲಗಳ ಪಟ್ಟಿ

ಕೊಬ್ಬಿನ ಆಮ್ಲ ಪ್ರತಿಶತ
ಪಾಮಿಟಿಕ್ ಆಮ್ಲ(C16:0) 6.0
ಪಾಮಿಟೊಲಿಕ್ ಆಮ್ಲ(C16:1) 0.0-0.5
ಸ್ಟಿಯರಿಕ್ ಆಮ್ಲ(C18:0) 2.0-3.0
ಅರಚಿಡಿಕ್ ಆಮ್ಲ(C20:0) 0-0.5
ಒಲಿಕ್ ಆಮ್ಲ(C18:1) 10.0-22.0
ಲಿನೋಲಿಕ್ ಆಮ್ಲ(C18:2) 12.0-18.0
ಲಿನೊಲಿಕ್ ಆಮ್ಲ(C18:3) 56.0-71.0

ಎಣ್ಣೆಯ ಬಳಕೆ

[ಬದಲಾಯಿಸಿ]
  • ಅಗಸೆ ಎಣ್ಣೆಯಲ್ಲಿ ೫೫% ಕ್ಕಿಂತ ಹೆಚ್ಚಾಗಿ ಮೂರು(3)ದ್ವಿಬಂಧಗಳಿದ್ದ ಲಿನೊಲೆನಿಕ್(Linolenic) ಕೊಬ್ಬಿನ ಆಮ್ಲ ಇರುವ ಕಾರಣ, ಇದು ಒಳ್ಳೆ ಡ್ರೈಯಿಂಗ್(drying)ಎಣ್ಣೆ. ೩ ಕ್ಕಿಂತ ಹೆಚ್ಚಿನ ದ್ವಿ ಬಂಧಗಳಿದ್ದ ಕೊಬ್ಬಿನ ಆಮ್ಲಗಳನು ಹೊಂದಿದ್ದರೆ, ಅವು ತ್ವರಿತವಾಗಿ ಪಾಲಿಮರ್(polymer)ಆಗಿ ಬದಲಾವಣೆಯಾಗಿ ಬಿಡುತ್ತವೆ. ಈ ತರಹ ಎಣ್ಣೆಗಳನ್ನು ಡ್ರೈಯಿಂಗ್ ಎಣ್ಣೆ ಎನ್ನುತ್ತಾರೆ. ಅದಕ್ಕೆ ಹೆಚ್ಚು ದ್ವಿ ಬಂಧಗಳಿದ್ದ ಕೊಬ್ಬಿನ ಆಮ್ಲಗಳಿದ್ದ ಎಣ್ಣೆಗಳನ್ನು ಡ್ರೈಯಿಂಗ್ ಎಣ್ಣೆಗಳಾಗಿ ಉಪಯೋಗಿಸುತ್ತಾರೆ. ಡ್ರೈಯಿಂಗ್ ಎಣ್ಣೆಗಳನ್ನು ವಾರ್ನಿಷ್ (varnish), ಬಣ್ಣಗಳು(paints)ತಯಾರಿಕೆಯಲ್ಲಿ ಬಳಸುತ್ತಾರೆ.
  • ಅಗಸೆ ಎಣ್ಣೆಯನ್ನು ಚಿತ್ರಕಲೆಯಲ್ಲಿ ಬಳಸುವ ಆಯಿಲ್ ಪೇಯಿಂಟ್ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.[]
  • ಎಣ್ಣೆಯನ್ನು ಬಣ್ಣಗಳ ತಿನ್ನರ್(thinner)ಆಗಿ ವಿನಿಯೋಗಿಸುತ್ತಾರೆ.[]
  • ಅಗಸೆ ಎಣ್ಣೆಯನ್ನು ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.[]

ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿನ ಮಾಹಿತಿ

[ಬದಲಾಯಿಸಿ]

ಅಗಸೆಎಣ್ಣೆ ಅಗಸೆಯ (ನಾರಗಸೆಯ) ಬೀಜದಿಂದ ಪಡೆಯಲಾಗುವ ಉಪಯುಕ್ತವಾದ ಎಣ್ಣೆ (ಲಿನ್ಸೀಡ್ ಆಯಿಲ್). ಇದು ಒಂದು ಬಗೆಯ ಎಣ್ಣೆ, ಮೆರುಗು ಎಣ್ಣೆ. ನಾರಗಸೆಯ ಉತ್ಪನ್ನಗಳಲ್ಲಿ ಇದೇ ಅತ್ಯಂತ ಮುಖ್ಯವಾದುದು. ಈ ಗಿಡವನ್ನು ಸಮಶೀತೋಷ್ಣ ಪ್ರದೇಶಗಳಲ್ಲಿ ನಾರು, ಎಣ್ಣೆಗಳೆರಡರ ಸಲುವಾಗಿಯೂ ಟರ್ಕಿ, ಆಫ್ಘಾನಿಸ್ತಾನ ಮತ್ತು ಭಾರತಗಳಲ್ಲಿ ಬರಿ ಎಣ್ಣೆಗಾಗಿಯೂ ಬೆಳೆಯುತ್ತಾರೆ. ಭಾರತದಲ್ಲಿ ಮೂರು ನಾಲ್ಕು ಜಾತಿಯ ನಾರಗಸೆ ಗಿಡಗಳು ಬೆಳೆಯುತ್ತವೆ. ಇವುಗಳಲ್ಲಿ ಲಿನಮ್ ಯುಸಿಟಾಟಿಸಿಮಮ್ ಎಂಬ ಬಗೆಯನ್ನು ಬಹುವಾಗಿ ಬೆಳೆಯುತ್ತಾರೆ. ಇದರಲ್ಲಿ ಶೇ88. ಭಾಗ ಎಣ್ಣೆ ತೆಗೆಯಲು ಉಪಯೋಗವಾಗುತ್ತದೆ. ಬೀಜಗಳನ್ನು ಮುಂಚೆ ನಯವಾಗಿ ಅರೆದು, ಎತ್ತಿನ ಗಾಣಗಳಿಂದ ಅಥವಾ ಯಂತ್ರಶಕ್ತಿಯಿಂದ ನಡೆಯುವ ಉರುಳೆಯಂತ್ರಗಳಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದಿಂದಾಗಲೀ ಬೀಜವನ್ನು ಬಿಸಿಮಾಡಿಯಾಗಲಿ ಎಣ್ಣೆ ತೆಗೆಯಬಹುದು. ಬೀಜದ ಪುಡಿಯನ್ನು 16೦೦ ಉಷ್ಣತೆಯಲ್ಲಿ ಕಾಯಿಸಿದರೆ ಹೆಚ್ಚು ಎಣ್ಣೆ (ಬೀಜದ ತೂಕದ ಶೇ.33 ಭಾಗ) ಸಿಗುತ್ತದೆ. ಬೀಜದ ತೂಕದ ಶೇ.23 - ಶೇ.36ವರೆಗೆ ಎಣ್ಣೆ ಸಿಗಬಹುದು. ಭಾರತದಲ್ಲಿ ಸರಾಸರಿ ಉತ್ಪತ್ತಿ ಶೇ.33. ಹೀಗೆ ತೆಗೆದ ಎಣ್ಣೆಯನ್ನು ಶೇಖರಿಸಿಟ್ಟಿದ್ದರೆ ಅದರಲ್ಲಿರುವ ತೇವ ಮತ್ತು ಅಂಟು ಪದಾರ್ಥಗಳು ತಳದಲ್ಲಿ ನಿಲ್ಲುತ್ತವೆ. ಹಲವು ವರ್ಷಗಳು ಹೀಗೆ ಇಟ್ಟ ಎಣ್ಣೆಗೆ ಟ್ಯಾಂಕ್್ಡಆಯಿಲ್ ಎನ್ನುತ್ತಾರೆ. ವಾರ್ನಿಷ್ ತಯಾರಿಕೆಯಲ್ಲಿ ಇದಕ್ಕೆ ಬಹು ಬೆಲೆಯಿದೆ, ಆದರೆ ಈ ರೀತಿಯ ಶುದ್ಧೀಕರಣ ಬಹು ನಿಧಾನ. ಆದ್ದರಿಂದ ಸಾಮಾನ್ಯವಾಗಿ ಕಚ್ಚಾ ಎಣ್ಣೆಗೆ ಶೇ.1 ಅಥವಾ ಶೇ.2 ಭಾಗದಷ್ಟು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸುತ್ತಾರೆ. ಕಶ್ಮಲಗಳ ಬಹುಭಾಗ ಇದರಿಂದ ಕರಿಕಾಗಿ ಕೆಳಗೆ ನಿಲ್ಲುತ್ತದೆ. ಚಿತ್ರಕಾರರ ಎಣ್ಣೆಯನ್ನು ತಯಾರಿಸಲು ಈ ರೀತಿ ಶುದ್ಧಿಮಾಡಿದ ಎಣ್ಣೆಯನ್ನು ಆಳವಿಲ್ಲದ ಅಗಲವಾದ ತಟ್ಟೆಗಳಲ್ಲಿ ಹಾಕಿ ಗಾಜಿನ ಮುಚ್ಚಳಗಳಿಂದ ಮುಚ್ಚಿ ಬಿಸಿಲಿಗೆ ಇಡುತ್ತಾರೆ. ಇದರಿಂದ ಬಂದ ಎಣ್ಣೆ ಅತ್ಯಂತ ಪರಿಶುದ್ಧವಾಗಿರುತ್ತದೆ. ಇನ್ನೂ ಅನೇಕ ಶುದ್ಧೀಕರಣ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಳೆಯ ವಿಧಾನಗಳೇ ಹೆಚ್ಚಾಗಿ ಬಳಕೆಯಲ್ಲಿವೆ. ಎಣ್ಣೆಗೆ ಫುಲ್ಲರ್್ಸ ಆರ್ತ್ ಅಥವಾ ಚುರುಕುಗೊಳಿಸಿದ ಇಂಗಾಲವನ್ನು ಹಾಕಿ ಶೋಧಿಸಿದರೆ ಬಣ್ಣ ಉತ್ತಮಗೊಳ್ಳುತ್ತದೆ. ಅಲೋಹ ಪಾತ್ರೆಗಳಲ್ಲಿ ಹಾಕಿ ಗಾಳಿ ಬೆಳಕುಗಳ ಸಂಪರ್ಕವಿಲ್ಲದಂತೆ ಇಟ್ಟರೆ ಎಣ್ಣೆ ಬಹುಕಾಲ ಕೆಡದೆ ನಿಲ್ಲುತ್ತದೆ. ಈ ಎಣ್ಣೆಯ ಮುಖ್ಯ ಉಪಯೋಗ ವಾರ್ನಿಷ್ ಮತ್ತು ಬಣ್ಣಗಳ ತಯಾರಿಕೆಯಲ್ಲಿ. ಮೆರುಗು ಎಣ್ಣೆ ಅಥವಾ ಆರುವ ಎಣ್ಣೆಗಳಲ್ಲೆಲ್ಲಾ ಇದೇ ಅತಿ ಮುಖ್ಯವಾದುದು. ಲಿನೋಲಿಯಂ ಮತ್ತು ಮೇಣಗಪಟದ ಬಟ್ಟೆ, ಮುದ್ರಣ ಮತ್ತು ಲಿಥೋಗ್ರಫಿಂ ಮಸಿಗಳು, ಮೆತುಸಾಬೂನು, ಪಾಲಿಷ್ಗಳು, ಬಾಣಬಿರುಸುಗಳು-ಇವುಗಳ ತಯಾರಿಕೆಯಲ್ಲಿಯೂ ಚರ್ಮ ನಯ ಮಾಡುವಾಗಲೂ ಸೆಣಬಿನ ನೇಯ್ಗೆಯ ಬಾಬಿನ್ಗಳನ್ನೂ ಕ್ರಿಕೆಟ್ ಬ್ಯಾಟುಗಳನ್ನು ಹದ ಮಾಡುವುದಕ್ಕೂ ಸ್ವಚ್ಛ ಎಣ್ಣೆ ಉಪಯೋಗವಾಗುತ್ತದೆ. ಹಸಿಬೀಜದಿಂದ ತೆಗೆದ ಎಣ್ಣೆಯನ್ನು ಪೂರ್ವ ಯುರೋಪಿನಲ್ಲಿಯೂ ಕಾಶ್ಮೀರ, ಬಿಹಾರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿಯೂ ಆಹಾರದಲ್ಲಿ ಬಳಸುತ್ತಾರೆ. ಚರ್ಮದ ಮೇಲೆ ಔಷಧವಾಗಿ ಹಚ್ಚುವುದಕ್ಕೂ ಕುದುರೆಗಳಿಗೆ ಭೇದಿಔಷಧವಾಗಿಯೂ ಇದನ್ನು ಉಪಯೋಗಿಸುವುದುಂಟು. ಎಣ್ಣೆ ತೆಗೆದ ಅನಂತರ ಉಳಿವ ಹಿಂಡಿ ದನಗಳಿಗೆ ಒಳ್ಳೆಯ ಮೇವು.

ಉಲ್ಲೇಖಗಳು

[ಬದಲಾಯಿಸಿ]
  1. SEA Hand Book,2009
  2. http://www.satvikshop.com/blog/herbs-knowledge-base/linseed
  3. http: //www. britannica. com/EBchecked/topic/209841/flax
  4. "ಆರ್ಕೈವ್ ನಕಲು". Archived from the original on 2013-08-10. Retrieved 2013-09-28.
  5. "ಆರ್ಕೈವ್ ನಕಲು". Archived from the original on 2013-10-12. Retrieved 2013-09-28.
  6. ೬.೦ ೬.೧ http://journal-of-agroalimentary.ro/admin/articole/61602L07_Popa_Vol.18(2)_2012.pdf
  7. http://www.solventfreepaint.com/info/history_linseed_paint.htm
  8. http://www.thewoodwhisperer.com/articles/make-your-own-oil-varnish-blend/
  9. http://www.webmd.com/vitamins-supplements/ingredientmono-990-FLAXSEED%20OIL.aspx?activeIngredientId=990&activeIngredientName=FLAXSEED%20OIL