ಚೀತಾ
ಸಿವಂಗಿ[೧][೨] Temporal range: Late Pliocene to Recent
| |
---|---|
Conservation status | |
Scientific classification | |
ಸಾಮ್ರಾಜ್ಯ: | animalia
|
ವಿಭಾಗ: | Chordata
|
ವರ್ಗ: | ಸಸ್ತನಿಗಳು
|
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | A. jubatus
|
Binomial name | |
Acinonyx jubatus (Schreber, 1775)
| |
Type species | |
Acinonyx venator | |
Subspecies | |
See text. | |
The range of the cheetah |
ಚೀತಾ/ಶಿವಾಂಗಿ[೪] (ಅಸಿನೋನಿಕ್ಸ್ ಜುಬೆಟಸ್ ) ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಒಂದು ವಿಶಿಷ್ಟ ಪ್ರಾಣಿ. ಇದು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಇದಕ್ಕೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ. ಈ ಪ್ರಾಣಿವರ್ಗವು ಅಸಿನೋನಿಕ್ಸ್ ಎಂಬ ವಂಶವಾಹಿನಿಯ ಬದುಕಿರುವ ಏಕೈಕ ಸದಸ್ಯ.
ಇದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ಇದರ ವೇಗವು ಕಡಿಮೆ ಸಮಯದಲ್ಲಿ 112 and 120 km/h (70 and 75 mph)[೫][೬] ರಷ್ಟಿದೆ. ಜೊತೆಗೆ ಇದು 460 m (1,510 ft)ರಷ್ಟು ಅಂತರವನ್ನು ಕ್ರಮಿಸುತ್ತದೆ. ಜೊತೆಗೆ ಮೂರು ನಿಮಿಷಗಳಲ್ಲಿ ವೇಗವನ್ನು 0 ಯಿಂದ 103 km/h (64 mph) ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್ ಕಾರ್ ಗಿಂತ ಅತ್ಯಂತ ವೇಗವಾಗಿ ಚಲಿಸುತ್ತದೆ.[೭] ಚೀತಾದ ಬಗೆಗಿನ ಇತ್ತೀಚಿನ ಸಂಶೋಧನೆಗಳು ಅದನ್ನು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬುದನ್ನು ಖಚಿತ ಪಡಿಸುತ್ತವೆ.[೮]
"ಚೀತಾ" ಎಂಬ ಪದವು ಸಂಸ್ಕೃತ ಪದದಿಂದ ವ್ಯುತ್ಪತ್ತಿ ಹೊಂದಿದೆcitrakāyaḥ . ಇದು "ವಿವಿಧವರ್ಣದ ಶರೀರ" ಎಂಬ ಅರ್ಥವನ್ನು ನೀಡುತ್ತದೆ. ಈ ಪದದ ಮೂಲಕ ಹಿಂದಿಯ चीता ಚೀತಾ ಎಂಬ ಪದವೂ ಸಹ ಹುಟ್ಟಿ ಬಂದಿದೆ.[೯]
ಸಂತತಿ ಹಾಗು ಶ್ರೇಣೀಕರಣ
[ಬದಲಾಯಿಸಿ]ಅಸಿನೋನಿಕ್ಸ್ ಎಂಬ ಅದರ ವಂಶ ದ ಹೆಸರು ಗ್ರೀಕ್ ನಲ್ಲಿ "ನೋ-ಮೂವ್-ಕ್ಲಾ" ಎಂಬುದನ್ನು ಸೂಚಿಸುತ್ತದೆ. ಆದರೆ ಅದರ ವರ್ಗದ ಹೆಸರು ಜುಬಾಟುಸ್ , ಲ್ಯಾಟಿನ್ ನಲ್ಲಿ "ಕೇಸರವುಳ್ಳ" ಎಂಬ ಅರ್ಥ ನೀಡುತ್ತದೆ. ಇದು ಚೀತಾದ ಮರಿಗಳಲ್ಲಿ ಕಂಡು ಬರುವ ಕೇಸರವನ್ನು ಸೂಚಿಸುತ್ತದೆ.
ಚೀತಾಗಳು ಕಡಿಮೆ ಸಂತತಿಯ ವರ್ಗ ವ್ಯತ್ಯಾಸ ಹೊಂದಿರುವುದು ವಿಶೇಷವಾಗಿದೆ. ಜೊತೆಗೆ ಅತ್ಯಂತ ಕಡಿಮೆ ವೀರ್ಯ ಸಂಖ್ಯೆಯನ್ನು ಹೊಂದಿದೆ. ಇದು ಅತ್ಯಂತ ಕಡಿಮೆ ಚಲನಶೀಲತೆ ಯ ಜೊತೆಗೆ ಫ್ಲಜೆಲ್ಲಾ (ಚಾಟಿಯಂತೆ ಆಡಿಸಬಹುದಾದ ಅಂಗ ವಿಶೇಷ/ಕಶಾಂಗ) ದ ವಿಕಾರತೆಯಿಂದ ನರಳುತ್ತದೆ.[೧೦] ಬೇರೆ ತಳಿಗಳಿಂದ ಚರ್ಮ ಪಡೆದು ಕಸಿ ಮಾಡಿದರೂ ಸಹ ಚೀತಾಗಳು ಅದನ್ನು ನಿರಾಕರಿಸುವುದಿಲ್ಲವೆಂಬ ಅಂಶವನ್ನು ಇದು ವಿಶದಪದಿಸುತ್ತದೆ. ಇದುಕಳೆದ ಹಿಮಯುಗದ ಸಂತತಿ ಪ್ರತಿಬಂಧಕದ ಪರಿಣಾಮವಾಗಿ ಒಂದು ಸುದೀರ್ಘಾವಧಿಯ ಅಂತಸ್ಸಂಬಂಧ(ಇನ್ ಬ್ರೀಡಿಂಗ್) ಕ್ಕೆ ಒಳಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇದು ಏಶಿಯಾಕ್ಕೆ ವಲಸೆ ಬರುವ ಮೊದಲು ಬಹುಶಃ ಆಫ್ರಿಕಾದ ಮಿಅಸಿನ್ ಯುಗ ದಲ್ಲಿ (26 ಮಿಲಿಯನ್ - 7.5 ಮಿಲ್ಯನ್ ವರ್ಷಗಳ ಹಿಂದೆ) ವಿಕಸನ ಹೊಂದಿರಬಹುದು. ಹೊಸ ಸಂಶೋಧನಾ ತಂಡವು ಲ್ಯಾಬೋರೇಟರಿ ಆಫ್ ಜೆನೋಮಿಕ್ ಡೈವರ್ಸಿಟಿಯ ವಾರ್ರೆನ್ ಜಾನ್ಸನ್ ಹಾಗು ಸ್ಟೀಫೆನ್ ಓ'ಬ್ರಿಎನ್ ನೇತೃತ್ವದಲ್ಲಿ (ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಫ್ರೆಡೆರಿಕ್, ಮೇರಿಲ್ಯಾಂಡ್, ಯುನೈಟೆಡ್ ಸ್ಟೇಟ್ಸ್) 11 ಮಿಲಿಯನ್ ವರ್ಷಗಳ ಹಿಂದೆ ಏಶಿಯಾದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ಪ್ರಾಣಿಸಂಕುಲದ ಕಡೆಯ, ಸಮಕಾಲೀನ ಪೂರ್ವಿಕರ ಬಗ್ಗೆ ಇತ್ತೀಚಿಗೆ ವರದಿ ಮಾಡಿತು. ಇದು ಚೀತಾದ ವಿಕಾಸದ ಬಗ್ಗೆ ಅಸ್ತಿತ್ವದಲ್ಲಿರುವ ಕಲ್ಪನೆಗೆ ಒಂದು ಪುನರಾವಲೋಕನ ಹಾಗು ಪರಿಷ್ಕರಣೆಗೆ ದಾರಿ ಮಾಡಿಕೊಟ್ಟಿತು. ಈಗ-ನಶಿಸಿಹೋದ ಸಂತತಿಯು: ಅಸಿನೋನಿಕ್ಸ್ ಪಾರ್ಡಿನೆನ್ಸಿಸ್ (ಪ್ಲೈಅಸೀನ್ ಯುಗ), ಇತ್ತೀಚಿಗೆ ಕಂಡು ಬರುವ ಚೀತಾಗಳಿಗಿಂತ ಹೆಚ್ಚು ದೊಡ್ಡದಾಗಿತ್ತು. ಜೊತೆಗೆ ಯುರೋಪ್, ಇಂಡಿಯಾ ಹಾಗು ಚೈನಾ ದಲ್ಲಿ ಕಂಡುಬರುತ್ತಿತ್ತು; ಅಸಿನೋನಿಕ್ಸ್ ಇಂಟರ್ಮೆಡಿಯಸ್ (ಮಧ್ಯ-ಪ್ಲೇಸ್ಟಸೀನ್ ಕಾಲ), ಹೆಚ್ಚು ಕಡಿಮೆ ಇದೇ ಭಾಗಗಳಲ್ಲಿ ಕಂಡು ಬರುತ್ತಿದ್ದವು. ನಶಿಸಿಹೋದ ಸಂತತಿ ಮಿರಸಿನೋನಿಕ್ಸ್ ಬಹಳವಾಗಿ ಚೀತಾವನ್ನು ಹೋಲುತ್ತಿತ್ತು, ಆದರೆ ಇತ್ತೀಚಿನ DNA ವಿಶ್ಲೇಷಣೆಯಲ್ಲಿ ಕಂಡು ಬರುವಂತೆ ಮಿರಸಿನೋನಿಕ್ಸ್ ಇನ್ಎಕ್ಸ್ಪೆಕ್ಟ್ಟಾಟಸ್ , ಮಿರಸಿನೋನಿಕ್ಸ್ ಸ್ಟುಡೆರಿ , ಹಾಗು ಮಿರಸಿನೋನಿಕ್ಸ್ ಟ್ರೂಮನಿ ( ಪ್ಲೇಸ್ಟಸೀನ್ ಯುಗದ ಉತ್ತರಾರ್ಧ ಭಾಗಕ್ಕೆ ಮುಂಚೆ), ಇವೆಲ್ಲವೂ ಉತ್ತರ ಅಮೇರಿಕಾದಲ್ಲಿ ಕಂಡುಬರುತ್ತಿದ್ದವು. ಜೊತೆಗೆ ಇದನ್ನು "ಉತ್ತರ ಅಮೇರಿಕನ್ ಚೀತಾ" ಗಳೆಂದು ಕರೆಯಲ್ಪಡುತ್ತಿದ್ದವು. ಇವುಗಳು ನಿಜವಾದ ಚೀತಾಗಳಲ್ಲ ಆದರೆ ಕೂಗರ್(ಬೆಕ್ಕಿನ ಜಾತಿಯ ಪ್ರಾಣಿ)ಗೆ ಹತ್ತಿರದ ಸಂಬಂಧ ಹೊಂದಿದ್ದವು.
ಉಪಜಾತಿಗಳು
[ಬದಲಾಯಿಸಿ]ಆದಾಗ್ಯೂ ಹಲವು ಮೂಲಗಳು ಚೀತಾದ ಆರಕ್ಕೂ ಹೆಚ್ಚು ಉಪಜಾತಿಗಳನ್ನು ಪಟ್ಟಿ ಮಾಡಿದೆ. ಜೀವಿವರ್ಗೀಕರಣದ ಸ್ಥಿತಿಗತಿಯಲ್ಲಿ ಈ ಉಪಜಾತಿಗಳ ಬಗ್ಗೆ ಅನಿಶ್ಚಿತತೆಯಿದೆ. ಅಸಿನೋನಿಕ್ಸ್ ರೆಕ್ಸ್ -ದೊಡ್ಡ ಚೀತಾ (ಕೆಳಗೆ ನೋಡಿ)- ಇದು ಕೇವಲ ಒಂದು ಗೌಣವಾಗಿ ಸಂತತಿಯ ವ್ಯತ್ಯಾಸ ಹೊಂದಿರುವುದು ಪತ್ತೆಯಾದ ಮೇಲೆ ಇದನ್ನು ಪಟ್ಟಿಯಿಂದ ಕೈಬಿಡಲಾಯಿತು. ಅಸಿನೋನಿಕ್ಸ್ ಜುಬಾಟುಸ್ ಗುಟ್ಟಟುಸ್ ಎಂಬ ತುಪ್ಪಳವುಳ್ಳ ಚೀತಾದ ಉಪಜಾತಿಯೂ ಸಹ ಒಂದು ಗೌಣವಾದ ಸಂತತಿಯಿಂದಾಗಿ ವ್ಯತ್ಯಾಸ ಹೊಂದಿದೆ. ಕೆಲವು ಅತಿ ಸಾಮಾನ್ಯವಾಗಿ ಗುರುತಿಸಲ್ಪಡುವ ಉಪಜಾತಿಗಳು ಕೆಳಕಂಡವುಗಳನ್ನು ಒಳಗೊಂಡಿದೆ:[೧೧]
- ಏಷಿಆಟಿಕ್ ಚೀತಾ(ಅಸಿನೋನಿಕ್ಸ್ ಜುಬಾಟುಸ್ ವೆನಟಿಕಸ್ ): ಏಶಿಯಾ(ಅಫ್ಘಾನಿಸ್ತಾನ್, ಇಂಡಿಯಾ, ಇರಾನ್, ಇರಾಕ್, ಇಸ್ರೇಲ್, ಜೋರ್ಡನ್, ಒಮಾನ್, ಪಾಕಿಸ್ತಾನ್, ಸೌದಿ ಅರೇಬಿಯಾ, ಸಿರಿಯಾ, ರಷ್ಯಾ)
- ವಾಯುವ್ಯ ಆಫ್ರಿಕನ್ ಚೀತಾ(ಅಸಿನೋನಿಕ್ಸ್ ಜುಬಾಟುಸ್ ಹೆಕ್ಕಿ ): ವಾಯುವ್ಯ ಆಫ್ರಿಕಾ (ಅಲ್ಜೀರಿಯ, ಡಿಜಿಬೌಟಿ, ಈಜಿಪ್ಟ್, ಮಾಲಿ, ಮೌರೀಟಾನಿಯಾ, ಮರಾಕೋ, ನೈಗರ್, ಟ್ಯೂನೀಶಿಯಾ ಹಾಗು ಪಶ್ಚಿಮ ಸಹಾರ) ಜೊತೆಗೆ ಪಶ್ಚಿಮ ಆಫ್ರಿಕಾ (ಬೆನಿನ್, ಬುರ್ಕಿನ ಫಾಸೋ, ಘಾನ, ಮಾಲಿ, ಮೌರೀಟಾನಿಯಾ, ನೈಗರ್, ಹಾಗು ಸೆನೆಗಲ್)
- ಅಸಿನೋನಿಕ್ಸ್ ಜುಬಾಟುಸ್ ರೈನೆಯೀ : ಪೂರ್ವ ಆಫ್ರಿಕಾ (ಕೀನ್ಯ, ಸೋಮಾಲಿಯ, ತಾನ್ಜಾನಿಯಾ, ಹಾಗು ಉಗಾಂಡ)
- ಅಸಿನೋನಿಕ್ಸ್ ಜುಬಾಟುಸ್ ಜುಬಾಟುಸ್ : ದಕ್ಷಿಣ ಆಫ್ರಿಕಾ (ಅಂಗೋಲ, ಬೋಟ್ಸ್ವಾನ, ಡೆಮೋಕ್ರ್ಯಾಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಮೊಜಾಮ್ಬಿಕ್, ಮಲಾವಿ, ದಕ್ಷಿಣ ಆಫ್ರಿಕಾ, ತಾನ್ಜಾನಿಯ, ಜಾಂಬಿಯ,ಜಿಂಬಾಬ್ವೆ ಹಾಗು ನಮಿಬಿಯ)
- ಅಸಿನೋನಿಕ್ಸ್ ಜುಬಾಟುಸ್ ಸೊಮ್ಮೆರಿಂಗೀ : ಮಧ್ಯ ಆಫ್ರಿಕಾ (ಕ್ಯಾಮೆರೂನ್, ಚಾಡ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಈಥಿಯೋಪಿಯ, ನೈಜೀರಿಯ, ನೈಗರ್, ಹಾಗು ಸುಡನ್
- ಅಸಿನೋನಿಕ್ಸ್ ಜುಬಾಟುಸ್ ವೆಲೊಕ್ಷ್
ವಿವರಣೆ
[ಬದಲಾಯಿಸಿ]ಚೀತಾದ ಎದೆಯು ವಿಶಾಲವಾಗಿದೆ ಜೊತೆಗೆ ಅದರ ನಡುವು ಸಂಕುಚಿತವಾಗಿದೆ. ಚೀತಾದ ದಪ್ಪ ಹಾಗು ಉರುಟಾದ ಆದರೆ ಚಿಕ್ಕದಾದ ತುಪ್ಪಳವು ಗುಂಡಗಿನ ಕಪ್ಪು ಮಚ್ಚೆಗಳಿಂದ ಬಿಸಿಲುಗಂದು ಬಣ್ಣ ಹೊಂದಿದೆ. ಇದು 2 to 3 cm (0.79 to 1.18 in) ರಷ್ಟು ಅಳತೆಯನ್ನು ಸುತ್ತಲೂ ಹೊಂದಿರುತ್ತದೆ. ಇದು ಮರೆಯಲ್ಲಿನಿಂತು ಬೇಟೆಯಾಡಲು ಒತ್ತು ಕೊಡುತ್ತದೆ. ಅದರ ಬಿಳಿ ಕೆಳತಲದಲ್ಲಿ ಯಾವುದೇ ಮಚ್ಚೆಗಳಿಲ್ಲ. ಆದರೆ ಅದರ ಬಾಲದಲ್ಲಿ ಮಚ್ಚೆಗಳಿವೆ. ಇವು ಬಾಲದ ಅಂತ್ಯದಲ್ಲಿ ನಾಲ್ಕರಿಂದ ಆರು ದಟ್ಟ ವರ್ತುಲಗಳಿಂದ ಒಂದಾಗಿರುತ್ತವೆ. ಬಾಲವು ಸಾಮಾನ್ಯವಾಗಿ ಒಂದು ಬಿಳಿ ಪೊದೆಯಾಕಾರದ ಗೊಂಚಲಿನಿಂದ ಕೊನೆಯಾಗುತ್ತದೆ. ಚೀತಾ ಒಂದು ಸಣ್ಣ ತಲೆ ಯ ಜೊತೆಗೆ ತೀಕ್ಷ್ಣ ಕಣ್ಣುಗಳನ್ನು ಹೊಂದಿದೆ. ಕಪ್ಪು "ಕಣ್ಣೀರಿನ ಗುರುತು" ಅದರ ಕಣ್ಣುಗಳ ಅಂಚಿನಿಂದ ಕೆಳಗೆ ಮೂಗಿನಿಂದ ಹಿಡಿದು ಅದರ ಬಾಯಿಯವರೆಗೂ ಕಂಡುಬರುತ್ತದೆ. ಇದು ಅದರ ಕಣ್ಣುಗಳನ್ನು ಸೂರ್ಯನ ಬೆಳಕನ್ನು ತಡೆ ಹಿಡಿಯಲು ಹಾಗು ಬೇಟೆಯಲ್ಲಿ ಸಹಾಯಮಾಡುವುದರ ಜೊತೆಗೆ ದೂರ ದೃಷ್ಟಿ ಬೀರಲು ಸಹಾಯಕವಾಗಿದೆ. ಅದು ಅತಿ ವೇಗವನ್ನು ತಲುಪಬಹುದಾದರೂ, ಅದರ ದೇಹವು ದೂರದ ಓಟಕ್ಕೆ ಸಹಕರಿಸುವುದಿಲ್ಲ. ಅದು ಅತಿ ವೇಗದ ಓಟಗಾರ.
ವಯಸ್ಕ ಚೀತಾಗಳು 36 to 65 kg (79 to 143 lb)ರಷ್ಟು ತೂಗುತ್ತವೆ. ಅದರ ಇಡೀ ದೇಹದ ಉದ್ದವು 115 to 135 cm (45 to 53 in)ರಷ್ಟಿದೆ. ಈ ನಡುವೆ ಅದರ ಬಾಲವು 84 cm (33 in) ರಷ್ಟು ಉದ್ದವಿರುತ್ತದೆ. ಚೀತಾಗಳ67 to 94 cm (26 to 37 in) ಭುಜವು ಎತ್ತರವಾಗಿರುತ್ತದೆ. ಹೆಣ್ಣು ಚೀತಾಗಳಿಗಿಂತ ಗಂಡು ಚೀತಾಗಳು ಸ್ವಲ್ಪಮಟ್ಟಿಗೆ ದೊಡ್ಡ ಆಕಾರ ಹೊಂದಿರುತ್ತವೆ. ಜೊತೆಗೆ ಅವುಗಳ ತಲೆ ಸ್ವಲ್ಪಮಟ್ಟಿಗೆ ದೊಡ್ಡದಾಗಿರುತ್ತದೆ. ಆದರೆ ಚೀತಾಗಳ ಗಾತ್ರದಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇರುವುದಿಲ್ಲ. ಗಂಡು ಮತ್ತು ಹೆಣ್ಣುಗಳ ನಡುವಿನ ವ್ಯತ್ಯಾಸವನ್ನು ಅವುಗಳ ರೂಪವೊಂದರಿಂದಲೇ ಗುರುತಿಸುವುದು ಅಸಾಧ್ಯ. ಅದೇ ರೀತಿಯ ಗಾತ್ರ ಹೊಂದಿರುವ ಚಿರತೆಗೆ ಹೋಲಿಸಿದರೆ, ಚೀತಾಯ ದೇಹವು ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ. ಆದರೆ ಅದರ ಬಾಲವು ಉದ್ದವಾಗಿರುವುದರ ಜೊತೆಗೆ ಎತ್ತರವಾಗಿರುತ್ತದೆ. (ಇದು ಸರಿಸುಮಾರು 90 cm (35 in)ರಷ್ಟು ಉದ್ದವಾಗಿರುತ್ತದೆ). ಹೀಗಾಗಿ ಇದು ಹೆಚ್ಚು ಸಮರ್ಥವಾಗಿರುವಂತೆ ಕಂಡು ಬರುತ್ತದೆ.
ಕೆಲವು ಚೀತಾಗಳಲ್ಲಿ ಒಂದು ಅಪರೂಪವಾದ ತುಪ್ಪಳದ ಮಾದರಿಯ ಮಾರ್ಪಾಡು ಕಂಡು ಬರುತ್ತದೆ: ದೊಡ್ಡದಾದ ಮಚ್ಚೆಗಳನ್ನು ಹೊಂದಿರುವ ಚೀತಾಗಳನ್ನು "ದೊಡ್ಡ ಚೀತಾ" ಎಂದು ಕರೆಯಲಾಗುತ್ತದೆ. ಇವುಗಳನ್ನು ಒಂದೊಮ್ಮೆ ಪ್ರತ್ಯೇಕವಾದ ಉಪಜಾತಿಗಳೆಂದು ಹೇಳಲಾಗುತ್ತಿತ್ತು. ಆದರೆ ಇವುಗಳು ಕೇವಲ ಆಫ್ರಿಕನ್ ಚೀತಾದ ಒಂದು ಮಾರ್ಪಾಡು. "ದೊಡ್ಡ ಚೀತಾ" ಗಳು ಹಲವು ಬಾರಿ ಅರಣ್ಯದಲ್ಲಿ ಮಾತ್ರ ಕಂಡು ಬಂದಿವೆ. ಆದರೆ ಇವುಗಳನ್ನು ಸೆರೆ ಹಿಡಿದ ಬಳಿಕವಷ್ಟೇ ಪೋಷಿಸಲಾಗುತ್ತದೆ.
ಚೀತಾದ ಪಂಜಗಳು ಪಾರ್ಶ್ವವಾಗಿ-ಮುದುರಿಕೊಳ್ಳಬಲ್ಲ ಕಾಲುಗುರುಗಳನ್ನು ಹೊಂದಿವೆ (ಇವುಗಳು ಮೂರು ಇತರ ಬೆಕ್ಕಿನ ಉಪಜಾತಿಗಳಲ್ಲಿ ಮಾತ್ರ ಕಾಣಸಿಗುತ್ತವೆ: ಫಿಶಿಂಗ್ ಕ್ಯಾಟ್ (ಒಂದು ಮಧ್ಯಮ ಗಾತ್ರದ ಬೆಕ್ಕು), ಫ್ಲಾಟ್-ಹೆಡೆಡ್ ಕ್ಯಾಟ್ (ಒಂದು ಚಿಕ್ಕ ಕಾಡು ಬೆಕ್ಕು) ಹಾಗು ಇರಿಒಮೊಟೆ ಕ್ಯಾಟ್ (ಒಂದು ಸಾಮಾನ್ಯ ಗಾತ್ರದ ಕಾಡು ಬೆಕ್ಕು)). ಇವು ಚೀತಾಗಳು ಅತಿ-ವೇಗವಾಗಿ ಬೆನ್ನಟ್ಟಿ ಬೇಟೆಯಾಡಿದಾಗ ಅವುಗಳನ್ನು ಬಲವಾಗಿ ಹಿಡಿದುಕೊಳ್ಳಲು ಹೆಚ್ಚಿನ ಸಹಾಯ ಮಾಡುತ್ತದೆ. ಚೀತಾದ ಪಂಜಗಳ ಮೂಳೆಕಟ್ಟಿನ ರಚನೆಯು ಇತರ ಬೆಕ್ಕುಗಳ ಮಾದರಿಯಲ್ಲೇ ಇದೆ; ಇತರ ಜಾತಿಗಳಲ್ಲಿ ಕಂಡು ಬರುವಂತಹ ತುಪ್ಪಳ ಹಾಗು ಚರ್ಮದ ಕೋಶಗಳು ಇವುಗಳಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಡ್ಯೂಕ್ಲಾ( (ಬೆಕ್ಕು ಅಥವಾ ನಾಯಿ ಮುಂತಾದ ಪ್ರಾಣಿಗಳ ಮುಂಭಾಗದ ಕಾಲುಗಳಲ್ಲಿ ಕಂಡು ಬರುವ ಪೂರ್ತಿ ಬೆಳವಣಿಗೆಯಾಗದ ಬೆರಳು)) ದ ಹೊರತಾಗಿ ಇದರ ಪಂಜಗಳು ಯಾವಾಗಲೂ ಗೋಚರಿಸುತ್ತವೆ. ಈ ಡ್ಯೂಕ್ಲಾ(ಬೆಕ್ಕು ಅಥವಾ ನಾಯಿ ಮುಂತಾದ ಪ್ರಾಣಿಗಳ ಮುಂಭಾಗದ ಕಾಲುಗಳಲ್ಲಿ ಕಂಡು ಬರುವ ಪೂರ್ತಿ ಬೆಳವಣಿಗೆಯಾಗದ ಬೆರಳು) ಸಹ ಇತರ ಬೆಕ್ಕುಗಳಿಗಿಂತ ಚಿಕ್ಕದಾಗಿರುವುದರ ಜೊತೆಗೆ ಉದ್ದವಾಗಿರುತ್ತವೆ.
ಈ ಮಾರ್ಪಾಡುಗಳು ಚೀತಾಗೆ ವೇಗವಾಗಿ ಓಡಲು ಅನುಕೂಲ ಮಾಡಿಕೊಡುವುದರ ಜೊತೆಗೆ ಹೆಚ್ಚಿನ ಆಮ್ಲಜನಕವನ್ನು ತೆಗೆದುಕೊಳ್ಳಲು ಸಹಾಯಕವಾಗಿರುವ ದೊಡ್ಡ ಹೊಳ್ಳೆಗಳನ್ನು ಹೊಂದಿವೆ. ಒಂದು ವಿಸ್ತಾರವಾದ ಹೃದಯ ಹಾಗು ಶ್ವಾಸಕೋಶ ಎರಡೂ ಒಟ್ಟಾಗಿ ಆಮ್ಲಜನಕವನ್ನು ಯಶಸ್ವಿಯಾಗಿ ಪೂರೈಕೆ ಮಾಡುತ್ತವೆ. ವಿಶಿಷ್ಟವಾದ ಬೇಟೆಯನ್ನಾಡುವ ಸಂದರ್ಭದಲ್ಲಿ ಅವುಗಳ ಉಸಿರಾಟದ ವೇಗವು ಪ್ರತಿ ನಿಮಿಷಕ್ಕೆ 60 ರಿಂದ 150 ಬಾರಿ ಆಗಿರುತ್ತವೆ.[೧೦] ವೇಗವಾಗಿ ಓಡುವಾಗ, ಅವುಗಳ ಪಾರ್ಶ್ವವಾಗಿ-ಮುದುರಿಕೊಳ್ಳಬಲ್ಲ ಪಂಜಗಳ ಒಂದು ಒಳ್ಳೆಯ ಎಳೆತದ ಜೊತೆಗೆ, ಚೀತಾ ಅದರ ಬಾಲವನ್ನು ಒಂದು ಚುಕ್ಕಾಣಿಯ-ಮಾದರಿಯಲ್ಲಿ ಚಲನೆ ಮಾಡುತ್ತದೆ[ಸೂಕ್ತ ಉಲ್ಲೇಖನ ಬೇಕು]. ಇದು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವ ಬೇಟೆಯನ್ನು ತೀಕ್ಷ್ಣವಾಗಿ ಬಾಲದಲ್ಲಿ ಸುತ್ತಿಕೊಳ್ಳಲು ಸಹಾಯ ಮಾಡುತ್ತವೆ.
"ನಿಜವಾದ" ದೊಡ್ಡ ಬೆಕ್ಕುಗಳ ಮಾದರಿ, ಚೀತಾ ಉಸಿರೆಳೆದುಕೊಳ್ಳುವಾಗ ಪರ್ ಗುಟ್ಟುತ್ತದೆ, ಆದರೆ ಘರ್ಜನೆ ಮಾಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಬೆಕ್ಕುಗಳು ಘರ್ಜಿಸುತ್ತವೆ. ಆದರೆ ಉಸಿರನ್ನು ಹೊರಬಿಡುವಾಗ ಬಿಟ್ಟು ಬೇರೆಯಾವಾಗಲೂ ಪರ್ ಗುಟ್ಟುವುದಿಲ್ಲ. ಆದಾಗ್ಯೂ, ಚೀತಾವನ್ನು ಕೆಲವರು ದೊಡ್ಡ ಬೆಕ್ಕುಗಳಲ್ಲಿ ಅತ್ಯಂತ ಚಿಕ್ಕದೆಂದು ಪರಿಗಣಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಚಿರತೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಾದರೂ, ಚೀತಾ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಮೇಲೆ ಉಲ್ಲೇಖಿಸಿದಂತೆ ಉದ್ದವಾದ "ಕಣ್ಣೀರಿನ-ಹಾಗೆ ಕಾಣುವ" ಗೆರೆಗಳನ್ನು ಹೊಂದಿದೆ. ಇವು ಅವುಗಳ ಕಣ್ಣಂಚಿನಿಂದ ಅದರ ಬಾಯಿಯವರೆಗೂ ಹಾದು ಹೋಗುತ್ತವೆ. ಚೀತಾದ ದೇಹ ರಚನೆಯೂ ಸಹ ಲೆಪರ್ಡ್ ಗಿಂತ ಬೇರೆಯಾಗಿದೆ. ಇದರಲ್ಲಿ ಗಮನಾರ್ಹವಾದುದೆಂದರೆ ಅದರ ತೆಳುವಾದ ಉದ್ದದ ಬಾಲ. ಲೆಪರ್ಡ್ ನ ಮಾದರಿಯ ಅವುಗಳ ಮಚ್ಚೆಗಳು ವ್ಯವಸ್ಥಿತವಾಗಿ ರಚನೆಯಾಗಿರುವುದಿಲ್ಲ.
ಚೀತಾ ಒಂದು ಆಕ್ರಮಣಕಾರಿ ಪ್ರಾಣಿ. ಇತರ ಎಲ್ಲ ದೊಡ್ಡ ಬೆಕ್ಕುಗಳಿಗಿಂತ, ಇದು ಹೊಸ ಪರಿಸರಕ್ಕೆ ಹೆಚ್ಚಾಗಿಹೊಂದಿಕೊಳ್ಳುವುದಿಲ್ಲ. ಇದನ್ನು ಸೆರೆಯಲ್ಲಿ ಪಾಲನೆ ಮಾಡುವುದು ಅತ್ಯಂತ ಕಷ್ಟದ ಕೆಲಸವೆಂದು ಸಾಬೀತಾಗಿದೆ. ಹೀಗಿದ್ದಾಗ್ಯೂ ಇತ್ತೀಚಿಗೆ ಕೆಲವು ಮೃಗಾಲಯಗಳು ಇವುಗಳನ್ನು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿವೆ. ಒಂದೊಮ್ಮೆ ಅದರ ತುಪ್ಪಳಕ್ಕೋಸ್ಕರ ವ್ಯಾಪಕವಾಗಿ ಬೇಟೆಗೆ ಈಡಾಗುತ್ತಿದ್ದ ಚೀತಾಗಳು ಈಗ ಬೇಟೆಗಾರರ ಕಾಟ ಹಾಗು ಸ್ವಾಭಾವಿಕ ನೆಲೆವಾಸವಿಲ್ಲದೇ ಅದಕ್ಕಿಂತ ಹೆಚ್ಚು ಸಂಕಷ್ಟ ಸ್ಥಿತಿಯಲ್ಲಿವೆ. .
ಬೆಕ್ಕುಗಳ ಜಾತಿಯೊಳಗೆ ಚೀತಾಗಳು ವಿಶೇಷವಾಗಿ ಪ್ರಾಚೀನವಾದುದೆಂದು ಮುಂಚೆ ಪರಿಗಣಿಸಲಾಗುತ್ತಿತ್ತು. ಜೊತೆಗೆ ಇವುಗಳು ಸರಿಸುಮಾರು 18 ಮಿಲಿಯನ್ ವರ್ಷಗಳ ಹಿಂದೆ ವಿಕಸನ ಹೊಂದಿರಬಹುದು. ಆದರೆ ಹೊಸ ಸಂಶೋಧನೆಯು ಅಸ್ತಿತ್ವದಲ್ಲಿರುವ ಬೆಕ್ಕುಗಳ ಪ್ರಭೇದದ ಎಲ್ಲ 40 ಜಾತಿಗಳ ಕಡೆಯ ಪೂರ್ವಿಕರು ಇದಕ್ಕಿಂತ ಹೆಚ್ಚು ಕಾಲ ಬದುಕಿದ್ದವೆಂಬುದನ್ನು ಸೂಚಿಸುತ್ತದೆ; ಅಂದರೆ-11 ಮಿಲಿಯನ್ ವರ್ಷಗಳ ಹಿಂದೆ. ಇದೇ ಸಂಶೋಧನೆ ಸೂಚಿಸುವಂತೆ, ಜೀವವಿಜ್ಞಾನ ವಿಭಾಗಗಳಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಚೀತಾ, ಪ್ರಾಚೀನ ವಂಶಾವಳಿ ಹೊಂದಿಲ್ಲ. ಆದರೆ ತನ್ನ ಹತ್ತಿರದ ಸಂಬಂಧಿಕರಿಂದ (ಪುಮ ಕಾಂಕಾಲರ್ , ಕೂಗರ್ ಹಾಗು ಪುಮ ಯಗುಅರೊಂಡಿ , ಜಗುಅರುಂಡಿ)ಗಳಿಂದ ಸುಮಾರು ಐದು ಮಿಲಿಯನ್ ವರ್ಷಗಳ ಹಿಂದೆ ಬೇರ್ಪಟ್ಟಿದೆ.[೧೨][೧೩] ಈ ಬೆಕ್ಕಿನ ಜಾತಿಯ ಪ್ರಾಣಿಗಳು ಪಳೆಯುಳಿಕೆಯ ದಾಖಲೆ ಯಲ್ಲಿ ಮೊದಲು ಕಾಣಿಸಿಕೊಂಡಾಗಿನಿಂದ ಗಮನಾರ್ಹವಾಗಿ ಬದಲಾವಣೆಯಾಗಿಲ್ಲ.
ಭಿನ್ನರೂಪ ಹಾಗು ವ್ಯತ್ಯಾಸಗಳು
[ಬದಲಾಯಿಸಿ]ದೊಡ್ಡ ಚೀತಾ
[ಬದಲಾಯಿಸಿ]ಚೀತಾಗಳಲ್ಲಿ ದೊಡ್ಡ ಚೀತಾ ತನ್ನ ಒಂದು ಅಪರೂಪವಾದ ಮಾರ್ಪಾಡಿನಿಂದ ಹೆಸರುವಾಸಿಯಾಗಿದೆ. ಇದರ ತುಪ್ಪಳದ ಮಾದರಿ ವಿಶಿಷ್ಟವಾಗಿದೆ. ಇದನ್ನು 1926ರಲ್ಲಿ ಮೊದಲ ಬಾರಿಗೆ ಜಿಂಬಾಬ್ವೆಯಲ್ಲಿ ಗುರುತಿಸಲಾಯಿತು. ಕಳೆದ 1927ರಲ್ಲಿ, ಪರಿಸರವಾದಿ ರೆಜಿನಾಲ್ಡ್ ಇನ್ನೆಸ್ ಪೋಕಾಕ್ಕ್ ಇದು ಒಂದು ಪ್ರತ್ಯೇಕ ಪ್ರಾಣಿ ಪ್ರಬೇಧವೆಂದು ಘೋಷಿಸಿದ. ಆದರೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಈ ನಿರ್ಧಾರವನ್ನು 1939ರಲ್ಲಿ ವಾಪಸು ಪಡೆದುಕೊಂಡ. ಆದರೆ 1928 ರಲ್ಲಿ ವಾಲ್ಟರ್ ರಾತ್ಸ್ಚಿಲ್ಡ್ ಖರೀದಿಸಿದ ಚರ್ಮವು ದೊಡ್ಡ ಚೀತಾ ಹಾಗು ಮಚ್ಚೆಯುಳ್ಳ ಚೀತಾಗಳ ಚರ್ಮದ ನಡುವಿನ ಮಾದರಿಯಲ್ಲಿತ್ತು. ಅಬೆಲ್ ಚಾಪ್ಮನ್ ಇದನ್ನು ಮಚ್ಚೆಯುಳ್ಳ ಚೀತಾ ಒಂದು ಬಣ್ಣ ಎಂದು ಪರಿಗಣಿಸಿದ. ಅದೇ ಮಾದರಿಯ ಇಪ್ಪತ್ತೆರಡು ಚರ್ಮಗಳು 1926 ರಿಂದ 1974ರ ಅವಧಿಯಲ್ಲಿ ದೊರೆಯಿತು. ಕಳೆದ 1927ರಿಂದೀಚೆಗೆ, ದೊಡ್ಡ ಚೀತಾ ಐದಕ್ಕಿಂತ ಹೆಚ್ಚು ಬಾರಿ ಅರಣ್ಯದಲ್ಲಿ ಕಂಡು ಬಂದಿರುವುದು ವರದಿಯಾಗಿದೆ. ಆದಾಗ್ಯೂ ವಿಲಕ್ಷಣವಾದ ಗುರುತಿನ ಚರ್ಮವಿರುವ ಇವುಗಳು ಆಫ್ರಿಕಾದಿಂದ ಬಂದಿವೆ. ದಕ್ಷಿಣ ಆಫ್ರಿಕಾದ ಕ್ರುಗೆರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬದುಕಿರುವ ದೊಡ್ಡ ಚೀತಾದ ಒಂದು ಛಾಯಾಚಿತ್ರವನ್ನು 1974ರ ತನಕವೂ ತೆಗೆದಿರಲಿಲ್ಲ. ಗುಪ್ತಪ್ರಾಣಿವಿಜ್ಞಾನಿಗಳಾದ ಪಾಲ್ ಹಾಗು ಲಿನ ಬೋಟ್ರಿಎಲ್ 1975ರಲ್ಲಿ ತಮ್ಮ ವಿಶೇಷ ಸಾಧನಾಯಾತ್ರೆಯಲ್ಲಿ ಒಂದು ದೊಡ್ಡ ಚೀತಾದ ಛಾಯಾಚಿತ್ರ ತೆಗೆದರು. ಅವರು ಮಾದರಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಇದು ಮಚ್ಚೆಯುಳ್ಳ ಚೀತಾಗಿಂತ ದೊಡ್ಡದಾಗಿ ಕಂಡುಬರುತ್ತಿತ್ತು; ಜೊತೆಗೆ ಅದರ ತುಪ್ಪಳದ ರಚನೆಯೂ ಸಹ ವಿಶೇಷವಾಗಿತ್ತು. ಏಳು ವರ್ಷಗಳಲ್ಲ್ಲಿ ಮೊದಲ ಬಾರಿಗೆ 1986ರಲ್ಲಿ ಮತ್ತೊಂದು ಅರಣ್ಯದಲ್ಲಿ ಕಂಡು ಬಂದಿತು. ಕಳೆದ 1987ರ ಹೊತ್ತಿಗೆ, ಮೂವತ್ತೆಂಟು ಮಾದರಿಗಳು ಗುರುತಿಸಲಾಗಿದೆ. ಇವುಗಳಲ್ಲಿ ಹೆಚ್ಚಾಗಿ ಹದ ಮಾಡಿದ ಚರ್ಮದಿಂದ ಸಂಗ್ರಹಿಸಿದಂತವು.
ಅದರ ಜಾತಿಯ ಸ್ಥಿತಿಗತಿಯನ್ನು ದಕ್ಷಿಣ ಆಫ್ರಿಕಾದ ಡೆ ವೈಲ್ಡ್ಟ್ ಚೀಟಾ ಅಂಡ್ ವೈಲ್ಡ್ ಲೈಫ್ ಸೆಂಟರ್ ನಲ್ಲಿ ಒಂದು ದೊಡ್ಡ ಚೀತಾದ ಜನನದ ನಂತರ 1981ರಲ್ಲಿ ನಿರ್ಧರಿಸಲಾಯಿತು. ಮೇ 1981ರಲ್ಲಿ, ಮಚ್ಚೆಯುಳ್ಳ ಎರಡು ಸಹೋದರಿ ಚೀತಾಗಳು ಅಲ್ಲಿ ಜನ್ಮ ನೀಡಿದವು. ಜೊತೆಗೆ ಎರಡೂ ಒಂದೊಂದು ಒಂದು ದೊಡ್ಡ ಚೀತಾಗೆ ಜನ್ಮನೀಡಿದವು. ಈ ಸಹೋದರಿ ಚೀತಾಗಳು ಟ್ರಾನ್ಸ್ವಾಲ್ ಪ್ರದೇಶದಲ್ಲಿ ಸೆರೆ-ಸಿಕ್ಕ ಗಂಡು ಚೀತಾದ ಜೊತೆ ಸಂಗ ಬೆಳೆಸಿದ್ದವು. (ಅಲ್ಲಿ ದೊಡ್ಡ ಚೀತಾದ ಬಗ್ಗೆ ದಾಖಲಾತಿ ಇದೆ). ಮುಂದಿನ ದಿನಗಳಲ್ಲಿ ಕೆಲವು ದೊಡ್ಡ ಚೀತಾಗಳು ಪ್ರಾಣಿ ಕೇಂದ್ರದಲ್ಲಿ (ಸೆಂಟರ್ ) ನಲ್ಲಿ ನಂತರ ಜನಿಸಿದವು. ಇವುಗಳು ಜಿಮ್ಬಾಬ್ವೆ, ಬೋಟ್ಸ್ವಾನ ಜೊತೆಗೆ ದಕ್ಷಿಣ ಆಫ್ರಿಕಾದ ಟ್ರಾನ್ಸ್ವಾಲ್ ಪ್ರಾಂತ್ಯದ ಉತ್ತರ ಭಾಗದಲ್ಲಿ ವಾಸಿಸುತ್ತವೆ. ಈ ಮಾದರಿಯ ಕಾಣಸಿಗಬೇಕಾದರೆ ಒಂದುಗೌಣವಾದ ಅಂಶವನ್ನು ಹೆತ್ತವರಿಬ್ಬರಿಂದಲೂ ಆನುವಂಶಿಕವಾಗಿ ಪಡೆದಿರಬೇಕು- ಇದೇ ಒಂದು ಕಾರಣದಿಂದಾಗಿ ಈ ಪ್ರಭೇದ ಅಪರೂಪವಾಗಿದೆ.
ಇತರ ಬಣ್ಣ ವ್ಯತ್ಯಾಸಗಳು
[ಬದಲಾಯಿಸಿ]ಈ ಪ್ರಭೇದವು ಹೊಂದಿರುವ ಇತರ ಅಪರೂಪದ ಬಣ್ಣ ಭಿನ್ನತೆಗಳಲ್ಲಿ ಮಚ್ಚೆಗಳು, ಕಪ್ಪು ಬಣ್ಣ, ಬಿಳಿಚಿಕ್ಕೆ ಹಾಗು ಕಂದು ವರ್ಣವಿನ್ಯಾಸ ಮಾದರಿ ಸೇರಿವೆ. ಇವುಗಳಲ್ಲಿ ಹಲವು ಅಂಶಗಳು ಭಾರತೀಯ ಚೀತಾಗಳಲ್ಲಿ ಕಂಡುಬಂದಿವೆ. ಇವುಗಳಲ್ಲಿ ಬೇಟೆಯಾಡುವುದಕ್ಕೊಸ್ಕರ ಸೆರೆ ಹಿಡಿಯಲಾದ ಮಾದರಿಗಳಲ್ಲಿ ಇದು ವಿಶೇಷವಾಗಿದೆ.
ಭಾರತದ ಮೊಘಲ್ ಚಕ್ರವರ್ತಿ, ಜಹಂಗೀರ್, ಒಂದು ಬಿಳಿ ಚೀತಾವನ್ನು ಹೊಂದಿದ್ದನೆಂದು ದಾಖಲಿಸಲಾಗಿದೆ. ಇದನ್ನು ಅವನು 1608ರಲ್ಲಿ ಉಡುಗೊರೆ ಪಡೆದಿದ್ದ. ತುಜ್ಕ್-ಎ-ಜಹಂಗಿರಿ ಎಂಬ ಆತ್ಮ-ಚರಿತ್ರೆಯಲ್ಲಿ, ಚಕ್ರವರ್ತಿಯು ಹೇಳುವಂತೆ ತನ್ನ ಆಡಳಿತದ ಮೂರನೇ ವರ್ಷದಲ್ಲಿ: ರಾಜ ಬೀರ್ ಸಿಂಗ್ ದೇವ್ ಅವನಿಗೆ ತೋರಿಸುವ ಸಲುವಾಗಿ ಒಂದು ಬಿಳಿ ಚೀತಾವನ್ನು ತಂದಿದ್ದ. ಆದಾಗ್ಯೂ ಇತರ ಜೀವಿ ಪ್ರಬೇಧಗಳಲ್ಲಿ, ಪ್ರಾಣಿ ಹಾಗು ಪಕ್ಷಿ ಸಂಕುಲ ಎರಡರಲ್ಲೂ ಬಿಳಿಯ ಬಣ್ಣ ವೈವಿಧ್ಯತೆಗಳಿವೆ.... ನಾನು ಎಂದೂ ಬಿಳಿ ಚೀತಾ ನೋಡಿರಲಿಲ್ಲ. ಅದರ ಮಚ್ಚೆಗಳು, (ಸಾಮಾನ್ಯವಾಗಿ) ಕಪ್ಪಗಿರುತ್ತವೆ, ಆದರೆ ಇದರದು ನೀಲಿ ಬಣ್ಣದಿಂದ ಕೂಡಿತ್ತು, ಜೊತೆಗೆ ಅದರ ದೇಹದ ಬಿಳಿಯ ಬಣ್ಣವು ಸಹ ನೀಲಿಯ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟಂತೆ ಕಂಡುಬರುತ್ತಿತ್ತು. ಈ ಚಿಂಚಿಲ್ಲಾ ರೂಪಾಂತರವು ಕೂದಲ ಬೆಳೆಯದಿರುವ ಕಡೆ ಬಣ್ಣದ ಪ್ರಮಾಣವನ್ನು ಕಡಿಮೆ ಮಾಡುವುದನ್ನು ಸೂಚಿಸುತ್ತದೆ. ಮಚ್ಚೆಗಳು ಕಪ್ಪು ಬಣ್ಣದಿಂದ ರೂಪುಗೊಂಡಿದ್ದರೂ, ಕಡಿಮೆ ಪ್ರಮಾಣದ ಸಹಜ ವರ್ಣವು ಒಂದು ಮಸುಕಾದ, ಬೂದುಬಣ್ಣದ ಸಂಯೋಜನೆಯನ್ನು ಒದಗಿಸುತ್ತವೆ. ಜೊತೆಗೆ ಆಗ್ರಾದಲ್ಲಿದ್ದ ಜಹಂಗೀರ್ ನ ಚೀತಾ, ಗುಗ್ಗಿಸ್ಬರ್ಗ್ ನ ಪ್ರಕಾರ ಬೆಯುಫೋರ್ಟ್ ಪಶ್ಚಿಮದಿಂದ ಬಂದ "ಪ್ರಥಮ ಬಿಳಿ ಬಣ್ಣದ ಚೀತಾ" ಎಂದು ವರದಿ ಮಾಡಲಾಗಿದೆ.
"ನೇಚರ್ ಇನ್ ಈಸ್ಟ್ ಆಫ್ರಿಕಾ" ಎಂಬ ಪತ್ರದಲ್ಲಿ H. F. ಸ್ಟೋನ್ ಹಾಮ್ ಒಂದು ಕಪ್ಪು ಬಣ್ಣದ ಚೀತಾ (ಕಪ್ಪು ಬಣ್ಣದಿಂದ ಕೂಡಿದ ಮಚ್ಚೆಗಳು) ಯನ್ನು ಕೀನ್ಯದ ಟ್ರಾನ್ಸ್-Nಜೊಇಅ ಜಿಲ್ಲೆಯಲ್ಲಿ 1925ರಲ್ಲಿ ಕಂಡು ಬಂದಿದ್ದಾಗಿ ವರದಿ ಮಾಡಿದರು. ವೆಸೆಯ್ ಫಿಟ್ಜೆರಾಲ್ಡ್ ಜಾಮ್ಬಿಯಾದಲ್ಲಿ ಒಂದು ಕಪ್ಪುಬಣ್ಣದ ಚೀತಾವನ್ನು ಒಂದು ಮಚ್ಚೆಯುಳ್ಳ ಚೀತಾಗಳ ಗುಂಪಿನಲ್ಲಿ ಕಂಡರು. ಕೆಂಪು (ಏರಿತ್ರಿಸ್ಟಿಕ್) ಚೀತಾಗಳಿಗೆ ಹೊಂಬಣ್ಣದ ಹಿನ್ನಲೆಯಲ್ಲಿ ದಟ್ಟವಾದ ಕಂದು ಹಳದಿಯ ಮಚ್ಚೆಗಳಿರುತ್ತವೆ. ಕೆನೆ ಬಣ್ಣದ(ಇಸಬೇಲ್ಲಿನೆ)ಚೀತಾಗಳಿಗೆ ತೆಳುವಾದ ಮೈ ಬಣ್ಣದ ಹಿನ್ನಲೆಯಲ್ಲಿ ಕೆಂಪು ಮಚ್ಚೆಗಳಿರುತ್ತವೆ. ಕೆಲವು ಮರುಭೂಮಿಯ ಪ್ರದೇಶದ ಚೀತಾಗಳು ಅಸಾಮಾನ್ಯವಾಗಿ ಬಿಳಿಚಿಕೊಂಡಿರುತ್ತದೆ; ಬಹುಶಃ ಅವುಗಳು ಉತ್ತಮ-ವೇಷಗಾರರು ಜೊತೆಗೆ ಬಹುತೇಕವಾಗಿ ಸಂತಾನಾಭಿವೃದ್ದಿ ಮಾಡಿ ಬಿಳಿಚಿಕೊಂಡ ವರ್ಣವನ್ನು ತಮ್ಮ ಸಂತತಿಗೆ ವರ್ಗಾಯಿಸುತ್ತವೆ. ನೀಲಿ (ಮಾಲ್ಟೇಸ್ ಅಥವಾ ಬೂದು) ಚೀತಾಗಳನ್ನು, ಬೂದು-ನೀಲಿ ಮಚ್ಚೆಗಳನ್ನು ಹೊಂದಿದ ಬಿಳಿ ಚೀತಾ ಎಂದು ವಿಧವಿಧವಾಗಿ ವರ್ಣಿಸಲಾಗಿದೆ;(ಚಿಂಚಿಲ್ಲಾ) ಅಥವಾ ಕಡು ಬೂದು ಬಣ್ಣದ ಮಚ್ಚೆಗಳನ್ನು ಹೊಂದಿದ ತೆಳು ಬೂದು ಬಣ್ಣದ ಚೀತಾಗಳು (ಮಾಲ್ಟೇಸ್ ರೂಪಾಂತರ). ಯಾವುದೇ ಮಚ್ಚೆಗಳಿಲ್ಲದ ಚೀತಾದ ಛಾಯಾಚಿತ್ರವನ್ನು 1921ರಲ್ಲಿ ತಾನ್ಜಾನಿಯದಲ್ಲಿ ತೆಗೆಯಲಾಯಿತು. (ಪೋಕಾಕ್), ಅದರ ಕತ್ತಿನ ಹಾಗು ಹಿಂಭಾಗದಲ್ಲಿ ಕೆಲವೇ ಕೆಲವು ಮಚ್ಚೆಗಳಿದ್ದವು; ಜೊತೆಗೆ ಇವುಗಳು ಅಸಾಧಾರಣ ರೀತಿಯಲ್ಲಿ ಸಣ್ಣದಾಗಿದ್ದವು.
ಶ್ರೇಣಿ ಹಾಗು ಆವಾಸಸ್ಥಾನ
[ಬದಲಾಯಿಸಿ]ಚೀತಾಗಳಲ್ಲಿ ಭೌಗೋಳಿಕ ಪ್ರತ್ಯೇಕತೆಗಳನ್ನು ಹೊಂದಿರುವ ಹಲವಾರು ಸಂತತಿಗಳಿವೆ. ಇವೆಲ್ಲವೂ ಆಫ್ರಿಕಾ ಅಥವಾ ನೈಋತ್ಯ ಏಶಿಯಾದಲ್ಲಿ ಕಂಡುಬರುತ್ತದೆ. ಒಂದು ಕಡಿಮೆ ಸಂಖ್ಯೆಯ ಚೀತಾಗಳು ಇರಾನ್ ನ ಕ್ಹೊರಾಸನ್ ಪ್ರಾಂತ್ಯ ದಲ್ಲಿ ಉಳಿದಿವೆ. ಪರಿಸರ ಸಂರಕ್ಷಕರು ಇವುಗಳನ್ನು ಕಾಪಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ.[೧೪] ಸಂದೇಹಾಸ್ಪದವಾಗಿ, ಕೆಲವು ಚೀತಾಗಳು ಭಾರತ ದಲ್ಲಿ ಉಳಿದಿರುವ ಸಾಧ್ಯತೆಗಳಿವೆ. ಹಲಾವಾರು ದೃಢಪಡದ ವರದಿಗಳ ಪ್ರಕಾರ ಏಶಿಯಾಟಿಕ್ ಚೀತಾ ಗಳು ಪಾಕಿಸ್ತಾನ್ ದ ಬಲೋಚಿಸ್ತಾನ್ ಪ್ರಾಂತ್ಯದಲ್ಲಿ ಉಳಿದಿರಬಹುದೆಂಬ ಶಂಕೆಯಿದೆ. ಇದರ ಪ್ರಕಾರ ಇತ್ತೀಚಿಗೆ ಒಂದು ಸತ್ತಿರುವ ಚೀತಾವನ್ನು ಪತ್ತೆ ಮಾಡಲಾಯಿತು.[೧೫]
ಚೀತಾ ಬೇಟೆ ಹೇರಳವಾಗಿ ದೊರೆಯುವ ಭೂಮಿಯ ವಿಸ್ತಾರವಾದ ಪ್ರದೇಶಗಳಲ್ಲಿ ಹಸನಾಗಿ ಬೆಳೆಯುತ್ತದೆ. ಚೀತಾ ಒಂದು ಮುಕ್ತ ಬೈಯೋಟೊಪ್ ನಲ್ಲಿ ಬದುಕಲು ಇಚ್ಚಿಸುತ್ತವೆ, ಉದಾಹರಣೆಗೆ ಅರೆ-ಮರುಭೂಮಿ, ಹುಲ್ಲುಗಾಡು, ಹಾಗು ದಟ್ಟವಾದ ಕುರುಚಲು ಕಾಡಿನಲ್ಲಿ ಬದುಕುತ್ತವೆ. ಆದಾಗ್ಯೂ, ಇವುಗಳನ್ನು ವಿವಿಧ ಆವಾಸಸ್ಥಾನಗಳಲ್ಲಿಯೂ ಕಾಣಬಹುದು. ನಮಿಬಿಯಾದಲ್ಲಿ, ಉದಾಹರಣೆಗೆ, ಇವುಗಳು ಹುಲ್ಲುಗಾವಲು, ಉಷ್ಣಪ್ರದೇಶಗಳ ಹುಲ್ಲು ಮೈದಾನ ಗಳು, ದಟ್ಟ ಸಸ್ಯವರ್ಗ ವನ್ನು ಹೊಂದಿದ ಪ್ರದೇಶಗಳಲ್ಲಿ ಹಾಗು ಪರ್ವತ ಕ್ಷೇತ್ರಗಳಲ್ಲಿ ವಾಸಿಸುತ್ತವೆ.
ಚೀತಾವನ್ನು ಪೂರ್ವದಲ್ಲಿ ಶ್ರೀಮಂತ ವರ್ಗದವರು ಪಳಗಿಸುತ್ತಿದ್ದರು. ಜೊತೆಗೆ ಹುಲ್ಲೆಗಳನ್ನು ಬೇಟೆಯಾಡಲು ಬಳಸುತ್ತಿದ್ದರು. ಇದು ಗ್ರೇಹೌಂಡ್ (ತೀಕ್ಷ್ಣ ದೃಷ್ಟಿಯ ಬೇಟೆನಾಯಿ) ನಾಯಿಯ ಗುಂಪನ್ನು ಬಳಕೆ ಮಾಡುವ ರೀತಿಯೇ ಇತ್ತು.
ಸಂತಾನೋತ್ಪತ್ತಿ ಹಾಗು ನಡವಳಿಕೆ
[ಬದಲಾಯಿಸಿ]ಹೆಣ್ಣು ಚೀತಾಗಳು ಇಪ್ಪತ್ತರಿಂದ ಇಪ್ಪತ್ತನಾಲ್ಕು ತಿಂಗಳ ಅವಧಿಯಲ್ಲಿ ಹಾಗು ಗಂಡು ಚೀತಾಗಳು ಸುಮಾರು ಹನ್ನೆರಡು ತಿಂಗಳ ಅವಧಿಯಲ್ಲಿ ತಮ್ಮ ಪ್ರೌಢವಸ್ಥೆ ತಲುಪುತ್ತವೆ. (ಆದಾಗ್ಯೂ ಅವುಗಳು ಸಾಮಾನ್ಯವಾಗಿ ಕಡೆ ಪಕ್ಷ ಮೂರು ವರ್ಷಗಳಾಗುವವರೆಗೂ ಸಂಗ ಮಾಡುವುದಿಲ್ಲ). ನಂತರ ಗಂಡು ಹೆಣ್ಣುಗಳು ವರ್ಷ ಪೂರ್ತಿ ಕೂಡಿಕೆ ಮಾಡಿಕೊಳ್ಳುತ್ತವೆ. ಸೆರೇಂಗೆಟಿ ಯಲ್ಲಿ ನಡೆಸಿದ ಚೀತಾಗಳ ಬಗೆಗಿನ ಒಂದು ಅಧ್ಯಯನವು, ಹೆಣ್ಣು ಚೀತಾಗಳು ಲೈಂಗಿಕವಾಗಿ ಸ್ವಚ್ಚಂದವಾಗಿರುವುದರ ಜೊತೆಗೆ ಹಲವು ಗಂಡು ಚೀತಾಗಳಿಂದ ಮರಿಗಳನ್ನು ಪಡೆದಿರುತ್ತವೆ; ಎಂಬುದನ್ನು ತೋರಿಸುತ್ತದೆ.[೧೬]
ಹೆಣ್ಣು ಚೀತಾಗಳು ಗರ್ಭಾವಧಿ ಯ ತೊಂಬತ್ತರಿಂದ ತೊಂಬತ್ತೆಂಟು ದಿನಗಳ ಅವಧಿಯ ನಂತರ ಒಂಬತ್ತು ಮರಿಗಳವರೆಗೂ ಜನನನೀಡುತ್ತವೆ. ಆದಾಗ್ಯೂ ಸರಿಸುಮಾರು ಅವುಗಳ ಸೂಳಿನ ಗಾತ್ರವು ಮೂರರಿಂದ ಐದಾಗಿರಬಹುದು. ಮರಿಗಳು ಜನಿಸಿದ ನಂತರ 150 to 300 g (5.3 to 10.6 oz) ರಷ್ಟು ತೂಗುತ್ತವೆ. ಇತರ ಕೆಲವು ಬೆಕ್ಕುಗಳ ಮಾದರಿಯಲ್ಲಿ, ಚೀತಾ ವಿಶಿಷ್ಟ ಮಚ್ಚೆಗಳೊಂದಿಗೆ ಜನಿಸುತ್ತವೆ. ಮರಿಗಳು ಅವುಗಳ ಕತ್ತಿನ ಸುತ್ತಲೂ ಎಳೆಗೂದಲಿನ ತುಪ್ಪಳದೊಂದಿಗೆ ಜನಿಸುತ್ತವೆ. ಇದನ್ನು ಮ್ಯಾನ್ಟಲ್ ಎಂದು ಕರೆಯುತ್ತಾರೆ. ಇದು ದೇಹದ ಹಿಂಬದಿಯ ಮಧ್ಯ ಭಾಗದವರೆಗೂ ಹರಡಿರುತ್ತವೆ. ಇದು ಅವುಗಳಿಗೆ ಒಂದು ಕೇಸರವನ್ನು ಅಥವಾ ಮೋಹಾಕ್-ಮಾದರಿಯ ರೂಪ ನೀಡುತ್ತದೆ; ಚೀತಾಗೆ ವಯಸ್ಸಾದ ಹಾಗೆ ಈ ತುಪ್ಪಳವು ಉದುರಿಹೋಗುತ್ತದೆ. ಈ ಜೂಲು ಕೂದಲಿನ ಕೇಸರವು ಚೀತಾ ಮರಿಗೆ ಹನಿ ಬ್ಯಾಡ್ಜರ್ (ರಟೆಲ್) ರೂಪವನ್ನು ನೀಡುತ್ತದೆ. ಎಂದು ಊಹಿಸಲಾಗಿದೆ. ಇದು ಸಂಭಾವ್ಯ ಆಕ್ರಮಣಕಾರರನ್ನು ಹೆದರಿಸಿ ಓಡಿಸುವಲ್ಲಿ ಸಹಾಯಕವಾಗಿದೆ.[೧೭](ರಟೆಲ್ ಅಂದರೆ ಜೇನುತಿನ್ನುವ ಕರಡಿಯಂತಹ ಪ್ರಾಣಿ) ಮರಿಗಳು ತಮ್ಮ ತಾಯಿಯನ್ನು ಜನನದ ನಂತರ ಹದಿಮೂರರಿಂದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬಿಟ್ಟು ಬಿಡುತ್ತವೆ. ಅರಣ್ಯದಲ್ಲಿ ಅವುಗಳ ಜೀವಿತಾವಧಿಯು ಹನ್ನೆರಡು ವರ್ಷಗಳಾಗಿರುತ್ತವೆ, ಆದರೆ ಸೆರೆಯಲ್ಲಿ ಅವುಗಳು ಇಪ್ಪತ್ತು ವರ್ಷಗಳ ಕಾಲ ಜೀವಿಸುತ್ತವೆ.
ಗಂಡು ಚೀತಾಗಳಿಗೆ ವಿರುದ್ಧವಾಗಿ, ಹೆಣ್ಣು ಚೀತಾಗಳು ಒಂಟಿಯಾಗಿರುವುದರ ಜೊತೆಗೆ ಒಂದನ್ನೊಂದು ತೊರೆಯುವ ಪ್ರವೃತ್ತಿ ಹೊಂದಿರುತ್ತವೆ. ಕೆಲವು ತಾಯಿ/ಹೆಣ್ಣು ಚೀತಾ ಮರಿಯ ಜೋಡಿಗಳು ಅತ್ಯಂತ ಕಡಿಮೆ ಅವಧಿಗೆ ಮಾತ್ರ ಒಂದಾಗಿರುವುದು ಕಂಡುಬರುತ್ತದೆ. ಚೀತಾ ಒಂದು ವಿಶಿಷ್ಟವಾದ, ಸಮರ್ಪಕವಾಗಿ-ರಚನೆಯಾದ ಜೀವನ ಚಕ್ರದಲ್ಲಿನ ಸಾಮಾಜಿಕ ವ್ಯವಸ್ಥೆ ಯನ್ನು ಹೊಂದಿದೆ. ಹೆಣ್ಣು ಚೀತಾಗಳು ಮರಿಗಳನ್ನು ಪೋಷಿಸುವ ಸಂದರ್ಭದ ಹೊರತಾಗಿ ಉಳಿದ ಸಮಯ ಒಂಟಿಯಾಗಿ ಜೀವಿಸುತ್ತವೆ. ಜೊತೆಗೆ ಅವುಗಳು ತಮ್ಮ ಮರಿಗಳನ್ನು ತಾವೇ ಪೋಷಣೆ ಮಾಡುತ್ತವೆ. ಮರಿಯ ಮೊದಲ ಹದಿನೆಂಟು ತಿಂಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ; ಮರಿಗಳು ಹಲವು ಪಾಠಗಳನ್ನು ಕಲಿತುಕೊಳ್ಳುತ್ತವೆ ಏಕೆಂದರೆ ಅವುಗಳ ಉಳಿವು ಬೇಟೆಯಾಡುವುದನ್ನು ಕಲಿವುದರ ಜೊತೆಗೆ ಇತರ ಪರಭಕ್ಷಕಗಳನ್ನು ಹೇಗೆ ತಡೆಯುವುದೆಂಬುದರ ಮೇಲೆ ಅವಲಂಬಿತವಾಗಿದೆ. ಹದಿನೆಂಟು ತಿಂಗಳಿನ ಅವಧಿಯಲ್ಲಿ, ತಾಯಿ ತನ್ನ ಮರಿಗಳನ್ನು ತ್ಯಜಿಸುತ್ತದೆ. ಇವುಗಳು ನಂತರ ಒಂದು ರಕ್ತಸಂಬಂಧಿ ಗಳು, ಅಥವಾ "ಬಾಂಧವರ" ಗುಂಪನ್ನು ರೂಪಿಸಿಕೊಳ್ಳುತ್ತವೆ. ಈ ಗುಂಪು ಮತ್ತೊಂದು ಆರು ತಿಂಗಳ ಕಾಲ ಒಟ್ಟಾಗಿ ಜೀವಿಸುತ್ತವೆ. ಎರಡು ವರ್ಷಗಳ ನಂತರ, ಹೆಣ್ಣು ಚೀತಾ ತನ್ನ ಗುಂಪನ್ನು ತ್ಯಜಿಸುತ್ತದೆ. ಅಲ್ಲದೇ ಹರೆಯದ ಗಂಡು ಚೀತಾಗಳು ತಮ್ಮ ಜೀವಿತಾವಧಿಯಲ್ಲಿ ಒಟ್ಟಾಗಿ ಬದುಕುತ್ತವೆ.
ವನ್ಯಕ್ಷೇತ್ರ(ಭೂಪ್ರದೇಶದ ವ್ಯಾಪ್ತಿ)
[ಬದಲಾಯಿಸಿ]ಗಂಡು ಚೀತಾಗಳು
[ಬದಲಾಯಿಸಿ]ಗಂಡು ಚೀತಾಗಳು ಅತ್ಯಂತ ಸಂಗಪ್ರಿಯರು, ಜೊತೆಗೆ ಜೀವಿತದುದ್ದಕ್ಕೂ ಗುಂಪಿನಲ್ಲೇ ಬದುಕುತ್ತವೆ, ಸಾಮಾನ್ಯವಾಗಿ ತಮ್ಮದೇ(ಸ್ವಜಾತಿಯ) ಸೂಳಿನ ಸಹೋದರರ ಜೊತೆ ಬದುಕುತ್ತವೆ. ಆದಾಗ್ಯೂ ಸೂಳಿನಲ್ಲಿ ಜನಿಸಿದ ಒಂದೇ ಗಂಡು ಮರಿಯಾದರೆ ಇತರೆ ಎರಡು ಅಥವಾ ಮೂರು ಒಂಟಿ ಗಂಡು ಮರಿಗಳ ಜೊತೆ ಗುಂಪುಗೂಡುತ್ತವೆ, ಅಥವಾ ಒಂಟಿ ಗಂಡು ಮರಿಯು ಅಸ್ತಿತ್ವದಲ್ಲಿರುವ ಗುಂಪಿನ ಜೊತೆಗೂಡುತ್ತದೆ. ಇಂತಹ ಗುಂಪುಗಳನ್ನು ಒಕ್ಕೂಟ ಎಂದು ಕರೆಯುತ್ತಾರೆ. ಕಾರೋ ಹಾಗು ಕಾಲಿನ್ಸ್ ಸೆರೇಂಗೆಟಿಯಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ(1987), 41% ವಯಸ್ಕ ಗಂಡು ಚೀತಾಗಳು ಒಂಟಿಯಾಗಿರುತ್ತವೆ, 40% ಜೋಡಿಯಾಗಿ ಬದುಕುತ್ತವೆ. ಹಾಗು 19% ಮೂವರ ಒಂದು ಗುಂಪು ಮಾಡಿಕೊಂಡು ಬದುಕುತ್ತವೆ.[೧೮]
ಒಟ್ಟುಗೂಡಲು ಬಯಸುವ ಒಂದು ಒಂಟಿ ಗಂಡು ಚೀತಾ ಆರು ಬಾರಿ ಆಕ್ರಮಿಸಬಹುದಾದ ಪ್ರಾಣಿಕ್ಷೇತ್ರಕ್ಕೆ ಸಮನಾಗಿರುತ್ತದೆ. ಆದಾಗ್ಯೂ ಅಧ್ಯಯನ ತಿಳಿಸುವಂತೆ ಭೂ ಪ್ರದೇಶವನ್ನು ಒಂಟಿ ಗಂಡು ಚೀತಾಗಳು ತಮ್ಮ ವಾಸಪ್ರದೇಶವನ್ನು ಉಳಿಸಿಕೊಳ್ಳುವಷ್ಟೇ ದಿನ ಆ ಗುಂಪೂ ಸಹ ಉಳಿಸಿಕೊಳ್ಳುತ್ತದೆ-ಇದು ನಾಲ್ಕರಿಂದ ನಾಲ್ಕೂವರೆ ವರ್ಷಗಳ ಅವಧಿಗೆ ಸೀಮಿತವಾಗಿರುತ್ತದೆ.
ಗಂಡು ಚೀತಾಗಳು ಬಹುಮಟ್ಟಿಗೆ ತಮ್ಮ ವ್ಯಾಪ್ತಿ ಪ್ರದೇಶಕ್ಕೆ ಹೆಚ್ಚು ಆಕರ್ಷಿತವಾಗಿರುತ್ತವೆ. ಹೆಣ್ಣು ಚೀತಾಗಳ ವಾಸಸ್ಥಾನ ವ್ಯಾಪ್ತಿಯೂ ತುಂಬಾ ದೊಡ್ಡದಾಗಿರುತ್ತದೆ. ಅಲ್ಲದೇ ಹಲವು ಹೆಣ್ಣುಗಳ ವಾಸಸ್ಥಾನದ ವ್ಯಾಪ್ತಿಯ ಸುತ್ತಲೂ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ ಇದನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ. ಇದಕ್ಕೆ ಬದಲಾಗಿ, ಗಂಡು ಚೀತಾಗಳು ಹೆಣ್ಣು ಚೀತಾಗಳು ಅತಿಕ್ರಮಣ ಮಾಡಿದ ವಾಸಸ್ಥಾನ ವ್ಯಾಪ್ತಿಯನ್ನು ಗುರುತಿಸಿಕೊಳ್ಳುತ್ತವೆ. ಇದರಿಂದ ಅತ್ಯಂತ ಕಡಿಮೆ ಪ್ರದೇಶ ಸೃಷ್ಟಿಯಾಗುತ್ತದೆ. ಜೊತೆಗೆ ಬೇಟೆಗಾರರು ಮತ್ತು ಇತರರ ಪ್ರವೇಶಕರಿಂದ ಸೂಕ್ತ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಾಗುವುದರ ಜೊತೆಗೆ ಸಂತಾನೋತ್ಪತ್ತಿಯ ಅವಕಾಶಗಳು ಅಧಿಕವಾಗುತ್ತದೆ. ಮೇಳನಗಳಿಂದ ಭೂಪ್ರದೇಶ ವ್ಯಾಪ್ತಿಯು ಉತ್ತಮವಾಗಿ ನಿರ್ವಹಣೆಯಾಗುವುದರ ಜೊತೆಗೆ ತಾವು ಸಂಗ ಬಯಸುವ ಹೆಣ್ಣು ಚೀತಾಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕವಾಗಿದೆ. ಭೂಪ್ರದೇಶದ ಗಾತ್ರವೂ ಸಹ ಲಭ್ಯವಾಗುವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ; ಆಫ್ರಿಕಾದ ಭೂಭಾಗವನ್ನು ಆಧರಿಸಿ, ಗಂಡು ಚೀತಾಗಳ ಭೂಪ್ರದೇಶದ ವ್ಯಾಪ್ತಿಯ ಗಾತ್ರಗಳಲ್ಲಿ ಹೆಚ್ಚು ವ್ಯತ್ಯಾಸ 37 to 160 km2 (14 to 62 sq mi)ಹೊಂದಿರಬಹುದು.
ಗಂಡು ಚೀತಾಗಳು ತಮ್ಮ ಪ್ರದೇಶವನ್ನು ಗುರುತುಮಾಡಿಕೊಳ್ಳುತ್ತವೆ. ಇವುಗಳು ನಿಂತಿರುವ ಯಾವುದೇ ವಸ್ತುವಿನ ಮೇಲೆ ಉದಾಹರಣೆಗೆ ಮರಗಳು, ದಿಮ್ಮಿಗಳು ಅಥವಾ ಗೆದ್ದಲು ರಾಶಿಯ ಮೇಲೆ ಮೂತ್ರವಿಸರ್ಜಿಸಿ ಪ್ರದೇಶವನ್ನು ಗುರುತಿಸುತ್ತವೆ. ಸಂಪೂರ್ಣವಾಗಿ ತಮ್ಮ ಗುಂಪು ಎಲ್ಲಿದೆ ಎಂಬ ಸಂಕೇತವನ್ನು ವಾಸನೆ ಮೂಲಕ ತಿಳಿಸಿ ಸಹಾಯ ಮಾಡುತ್ತವೆ. ಗಂಡು ಚೀತಾಗಳು ಯಾವುದೇ ಮಧ್ಯಪ್ರವೇಶಿಕರನ್ನು ಕೊಲ್ಲಲು ಪ್ರಯತ್ನಿಸುತ್ತವೆ. ಜೊತೆಗೆ ಇಂತಹ ಕಾಳಗ ಗಂಭೀರ ಗಾಯ ಅಥವಾ ಸಾವಿನಿಂದ ಕೊನೆಗೊಳ್ಳಬಹುದು.
ಹೆಣ್ಣು ಚೀತಾಗಳು
[ಬದಲಾಯಿಸಿ]ಗಂಡು ಚೀತಾಗಳು ಹಾಗು ಇತರ ದೊಡ್ಡ ಬೆಕ್ಕುಗಳ ರೀತಿ, ಹೆಣ್ಣು ಚೀತಾಗಳು ತಮ್ಮದೇ ಆದ ನಿರ್ದಿಷ್ಟ ಭೂಪ್ರದೇಶ ಹೊಂದಿರುವುದಿಲ್ಲ. ಬದಲಾಗಿ, ಅವು ವಾಸಿಸುವ ಪ್ರದೇಶವನ್ನು ವಾಸಸ್ಥಾನ ವ್ಯಾಪ್ತಿ ಎಂದು ಕರೆಯಲಾಗುತ್ತದೆ. ಇವುಗಳು ಇತರ ಹೆಣ್ಣು ಪ್ರಾಣಿಗಳ ವಾಸಸ್ಥಾನದ ವ್ಯಾಪ್ತಿಯ ಮೇಲೆ ಅತಿಕ್ರಮಣ ಮಾಡುತ್ತವೆ. ತಮ್ಮ ಹೆಣ್ಣು ಮರಿಗಳು, ತಾಯಂದಿರ, ಅಥವಾ ಸಹೋದರಿಯರ ವಾಸ ಸ್ಥಾನವನ್ನು ಅತಿಕ್ರಮಿಸುತ್ತವೆ. ಹೆಣ್ಣು ಚೀತಾಗಳು ಯಾವಾಗಲೂ ಒಂಟಿಯಾಗಿ ಬೇಟೆಯಾಡುತ್ತವೆ, ಆದಾಗ್ಯೂ ಮರಿಗಳಿಗೆ ಐದರಿಂದ ಆರು ವಾರಗಳಾದಾಗ ಬೇಟೆಯಾಡುವುದನ್ನು ಕಲಿಯಲು ತಮ್ಮ ತಾಯಿಯ ಜೊತೆಯಲ್ಲಿ ಬೇಟೆಗೆ ಹೊರಡುತ್ತದೆ.
ವಾಸಸ್ಥಾನದ ವ್ಯಾಪ್ತಿಯು ಸಂಪೂರ್ಣವಾಗಿ ಬೇಟೆಯ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷಿಣ ಆಫ್ರಿಕಾದ ಅರಣ್ಯದ ಚೀತಾಗಳು ಚಿಕ್ಕದಾದ ವ್ಯಾಪ್ತಿ ಪ್ರದೇಶ34 km2 (13 sq mi) ಹೊಂದಿದೆ, ಆದರೆ ನಮಿಬಿಯಾ ದಲ್ಲಿ ಚೀತಾಗಳು 1,500 km2 (580 sq mi)ವರೆಗೂ ವ್ಯಾಪಿಸಿರಬಹುದು.
ಧ್ವನಿ ಉಚ್ಚಾರಣೆ
[ಬದಲಾಯಿಸಿ]ಚೀತಾ ಘರ್ಜನೆ ಮಾಡುವುದಿಲ್ಲ, ಆದರೆ ಕೆಳಕಂಡ ಧ್ವನಿಯನ್ನು ಹೊರಡಿಸುತ್ತದೆ:
- ಚಿಲಿಪಿಲಿದನಿ - ಚೀತಾ ಒಂದನ್ನೊಂದನ್ನು ಹುಡುಕುವ ಪ್ರಯತ್ನದಲ್ಲಿ ಅಥವಾ ತಾಯಿಯು ತನ್ನ ಮರಿಗಳನ್ನು ಗುರುತಿಸುವಾಗ, ಅದು ಜೋರಾದ-ಸ್ವರದಲ್ಲಿ ಅರಚುತ್ತದೆ. ಇದನ್ನು ಚಿಲಿಪಿಲಿದನಿ ಎಂದು ಕರೆಯುತ್ತಾರೆ. ಚೀತಾ ಮರಿಯು ಚಿಲಿಪಿಲಿದನಿಯಲ್ಲಿ ಕೂಗುವ ಶಬ್ದವು ಒಂದು ಹಕ್ಕಿಯ ಕೂಗಿನಂತೆ ಕೇಳಿಬರುತ್ತದೆ, ಹೀಗಾಗಿ ಇದಕ್ಕೆ ಚಿಲಿಪಿಲಿದನಿ ಎಂದು ಹೆಸರಿಸಲಾಗಿದೆ.
- ಚಿರುಗುಟ್ಟುವಿಕೆ ಅಥವಾ ತೊದಲುದನಿ - ಈ ರೀತಿಯಾದ ದನಿಯನ್ನು ಚೀತಾಗಳು ಗುಂಪು ಸೇರಿದಾಗ ಹೊರಡಿಸುತ್ತದೆ. ಚಿರುಗುಟ್ಟುವಿಕೆಯು ಇತರ ಚೀತಾಗಳಿಗೆ ಆಹ್ವಾನವೆಂದು ಅರ್ಥೈಸಿಕೊಳ್ಳಬಹುದು. ಇದು ಗುಂಪು ಸೇರಿದ ಸಂದರ್ಭದಲ್ಲಿ ವಿರುದ್ಧ ಲಿಂಗಕ್ಕೆ ತಮ್ಮ ಆಸಕ್ತಿ, ತಮ್ಮ ಅನಿಶ್ಚಿತತೆ ಅಥವಾ ತಮ್ಮ ತೃಪ್ತಿಯನ್ನು ವ್ಯಕ್ತ ಪಡಿಸಲು ಬಳಸಿಕೊಳ್ಳುತ್ತವೆ. (ಆದಾಗ್ಯೂ ಪ್ರತಿ ಪ್ರಾಣಿಯು ಬೇರೆ ಬೇರೆ ಕಾರಣಗಳಿಗೆ ಚಿರುಗುಟ್ಟುತ್ತವೆ).
- ಗುರುಗುಟ್ಟುವಿಕೆ - ಈ ರೀತಿಯಾದ ದನಿಯು ಸಾಮಾನ್ಯವಾಗಿ ಬುಸುಗುಟ್ಟುವಿಕೆ ಹಾಗು ಥೂಕರಿಸುವ ಶಬ್ದದೊಂದಿಗೆ ಒಂದುಗೂಡುತ್ತದೆ. ಇವುಗಳನ್ನು ಚೀತಾಗಳು ತಮಗೆ ಸಿಟ್ಟು ಬಂದಾಗ ಅಥವಾ ತಮಗೆ ಅಪಾಯ ಎದುರಾದಾಗ ಪ್ರದರ್ಶಿಸುತ್ತವೆ.
- ರೋಧನ - ಇದು ಗುರುಗುಟ್ಟುವಿಕೆಯ ಹೆಚ್ಚಿನ ರೂಪಾಂತರ. ಇದನ್ನು ಸಾಮಾನ್ಯವಾಗಿ ಅಪಾಯದ ಮಟ್ಟ ತೀವ್ರವಾದಾಗ ಬಳಸುತ್ತವೆ.
- ಪರ್ ಗುಟ್ಟುವಿಕೆ - ಈ ರೀತಿಯಾದ ದನಿಯನ್ನು ಚೀತಾ ಸಮಾಧಾನದಿಂದಿದ್ದಾಗ, ಸಾಮಾನ್ಯವಾಗಿ ಸಂತೋಷಕರವಾಗಿ ಗುಂಪು ಸೇರಿದಾಗ ಹೊರಡಿಸುತ್ತದೆ. (ವಿಶೇಷವಾಗಿ ಮರಿಗಳು ಹಾಗು ಅದರ ತಾಯಂದಿರ ನಡುವೆ ಈ ರೀತಿಯಾದ ದನಿಸಂವಾದ ಕೇಳಿಬರುತ್ತದೆ). ಇದರ ಒಂದು ವಿಶೇಷತೆಯೆಂದರೆ, ಇದು ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಸೂಸಿ ಶಬ್ದವನ್ನು ಹೊರಡಿಸುವ ಹಾಗು ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಒಳಕ್ಕೆಳೆದುಕೊಂಡಾಗ ಕೇಳಿಬರುವ ಶಬ್ದ. ಎರಡರಿಂದಲೂ ಈ ಪರ ಗುಟ್ಟುವಿಕೆಯು ಕೇಳಿ ಬರುತ್ತದೆ. ಚೀತಾದ ಪರ ಗುಟ್ಟುವಿಕೆಯ ಶಬ್ದವನ್ನು ರಾಬರ್ಟ್ ಏಕ್ಲುಂಡ್'ಸ್ ಇಂಗ್ರೆಸ್ಸಿವ್ ಸ್ಪೀಚ್ ಅಂತರ್ಜಾಲದಲ್ಲಿ [೧] ಅಥವಾ ರಾಬರ್ಟ್ ಏಕ್ಲುಂಡ್'ಸ್ ವೈಲ್ಡ್ ಲೈಫ್ ಪುಟದಲ್ಲಿ ಕಾಣಬಹುದು[೨] Archived 2017-07-05 ವೇಬ್ಯಾಕ್ ಮೆಷಿನ್ ನಲ್ಲಿ..
ಆಹಾರ ಕ್ರಮ ಹಾಗು ಬೇಟೆಯಾಡುವುದು
[ಬದಲಾಯಿಸಿ]ಚೀತಾಗಳು ಮಾಂಸಾಹಾರಿಪ್ರಾಣಿಗಳು. ಇವುಗಳು ಹೆಚ್ಚಾಗಿ ಸಸ್ತನಿಗಳನ್ನು ತಿನ್ನುತ್ತವೆ40 kg (88 lb), ಇವುಗಳಲ್ಲಿ ಥಾಮ್ಸನ್' ಸ್ ಗಸೆಲ್ (ಒಂದು ಜಾತಿಯ ಜಿಂಕೆ), ಗ್ರಾಂಟ್'ಸ್ ಗಸೆಲ್ (ಜಿಂಕೆಯ ವರ್ಗಕ್ಕೆ ಸೇರಿದ ಪ್ರಾಣಿ), ಸ್ಪ್ರಿಂಗ್ ಬಾಕ್(ಹಾರು ಜಿಂಕೆ) ಹಾಗು ಇಂಪಾಲ (ದಕ್ಷಿಣ ಆಫ್ರಿಕಾದ ಸಣ್ಣ ಹುಲ್ಲೆ) ಮುಂತಾದವುಗಳು ಇವುಗಳ ಆಹಾರದಲ್ಲಿ ಸೇರಿವೆ. ದೊಡ್ಡ ಸಸ್ತನಿಗಳಾದ ವಿಲ್ಡಿ ಬೀಸ್ಟ್(ಎತ್ತನ್ನು ಹೋಲುವ ಜಿಂಕೆ) ಹಾಗು ಜಿಬ್ರಾ ದ ಮರಿಗಳನ್ನು ಇವುಗಳು ಕೆಲವೊಂದು ಬಾರಿ ಆಹಾರಕ್ಕಾಗಿ ಬೇಟೆಯಾಡುತ್ತವೆ. ಜೊತೆಗೆ ದೊಡ್ಡ ಬೆಕ್ಕುಗಳು ಗುಂಪಾಗಿ ಬೇಟೆಯಾಡುವಾಗ ದೊಡ್ಡ ವಿಲ್ಡಿ ಬೀಸ್ಟ್ ಹಾಗು ಜಿಬ್ರಾಗಳನ್ನೂ ಸಹ ತಿನ್ನುತ್ತವೆ. ಗಿನಿಫೌಲ್ ಹಾಗು ಮೊಲ ಗಳು ಸಹ ಇವುಗಳಿಗೆ ಆಹಾರವಾಗುತ್ತವೆ. ಇತರ ದೊಡ್ಡ ಬೆಕ್ಕುಗಳು ಮುಖ್ಯವಾಗಿ ರಾತ್ರಿ ವೇಳೆ ಬೇಟೆಯಾಡಿದರೆ, ಚೀತಾಗಳು ಮಾತ್ರ ಹಗಲು ಹೊತ್ತಿನ ಬೇಟೆಗಾರ. ಇವುಗಳು ಸಾಮಾನ್ಯವಾಗಿ ಹೆಚ್ಚು ಬಿಸಿಲಿಲ್ಲದಿರುವಾಗ ಮುಂಜಾನೆಯ ಅಥವಾ ಸಾಯಂಕಾಲದಲ್ಲಿ ಬೇಟೆಯಾಡುತ್ತವೆ. ಆದರೆ, ಸಾಕಷ್ಟು ಬೆಳಕಿರುವಾಗಲೇ ಬೇಟೆಯಾಡುತ್ತವೆ.
ಚೀತಾ ವಾಸನೆ ಯನ್ನು ಗ್ರಹಿಸುವುದಕ್ಕಿಂತ ಹೆಚ್ಚಾಗಿ ದೃಷ್ಟಿಯಿಂದ ಬೇಟೆಯಾಡುತ್ತವೆ. ಬೇಟೆಯನ್ನು ಹಿಂದಿನಿಂದ ಸುಳಿವಿಲ್ಲದೇ ಗುರುತಿಸಿ 10–30 m (33–98 ft), ನಂತರ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. ಇದು ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮುಗಿದುಹೋಗುತ್ತದೆ. ಜೊತೆಗೆ ಚೀತಾ ಬೇಟೆಯನ್ನು ಬೇಗನೆ ಹಿಡಿಯಲು ವಿಫಲವಾದಲ್ಲಿ, ಅದು ಬೇಟೆಯನ್ನು ಬಿಟ್ಟು ಬಿಡುತ್ತದೆ. ಚೀತಾದ ಬೇಟೆಯ ಸರಾಸರಿ ಯಶಸ್ಸಿನ ಪ್ರಮಾಣ 50% ರಷ್ಟಿರುತ್ತದೆ - ಹೀಗಾಗಿ ಅದರ ಪ್ರಯತ್ನವು ಅರ್ಧಕರ್ಧಷ್ಟು ವಿಫಲವಾಗುತ್ತದೆ.[೧೦]
ಓಟದ ವೇಗವು112 and 120 km/h (70 and 75 mph)ರ ಮಧ್ಯದಲ್ಲಿರುತ್ತದೆ. ಇದು ಚೀತಾದ ದೇಹಕ್ಕೆ ಮಿತಿಮೀರಿದ ಆಯಾಸವನ್ನುಂಟುಮಾಡುತ್ತದೆ. ವೇಗವಾಗಿ ಓಡುವಾಗ, ಚೀತಾದ ದೇಹದ ತಾಪಮಾನವು ತುಂಬಾ ಅಧಿಕವಾಗಿರುತ್ತದೆ. ಇದು ಮುಂದುವರಿದರೆ ಅದರ ಪ್ರಾಣಕ್ಕೆ ಮಾರಕವಾಗುತ್ತದೆ; ಇದರಿಂದಾಗಿ ಚೀತಾ ಅದರ ಬೇಟೆಯನ್ನು ಹಿಡಿದ ನಂತರ ಸಾಮಾನ್ಯವಾಗಿ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು. ಅಟ್ಟಿಸಿಕೊಂಡು ಹೋದ ಬೇಟೆಯನ್ನು ಹಿಡಿಯಲು ಕಷ್ಟಕರವಾಗಿದ್ದರೆ, ಅದು ಒಂದು ಗಂಟೆಗೂ ಹೆಚ್ಚಿನ ಸಮಯ ವಿಶ್ರಾಂತಿ ಪಡೆಯುತ್ತದೆ. ಚೀತಾ ಅಟ್ಟಿಸಿಕೊಂಡು ಹೋಗುವ ಸಂದರ್ಭದಲ್ಲಿ ತನ್ನ ಬೇಟೆಯನ್ನು ಕಾಲು ಕೊಟ್ಟು ಎಡವಿ ಬೀಳುವಂತೆ ಮಾಡುತ್ತದೆ. ನಂತರ ಅದನ್ನು ಉಸಿರುಗಟ್ಟಿಸುವ ಸಲುವಾಗಿ ಅದರ ಕುತ್ತಿಗೆಯ ಕೆಳತಲವನ್ನು ಕಚ್ಚುತ್ತದೆ. ಚೀತಾ ಮುಖ್ಯವಾಗಿ ಬೇಟೆಯಾಡುವ ನಾಲ್ಕು ಕಾಲಿನ ಪ್ರಾಣಿಗಳ ಕತ್ತನ್ನು ಸೀಳುವಷ್ಟು ಬಲಶಾಲಿಯಾಗಿಲ್ಲ. ಈ ಕಚ್ಚುವಿಕೆಯು ಕುತ್ತಿಗೆಯಲ್ಲಿ ಒಂದು ಅತಿ ಮುಖ್ಯವಾದ ಅಪಧಮನಿ ಯನ್ನು ರಂಧ್ರ ಮಾಡುವ ಮೂಲಕ ನಿಷ್ಕ್ರಿಯಗೊಳಿಸುತ್ತದೆ. ಚೀತಾ ಇತರ ಶಕ್ತಿಶಾಲಿ ಪ್ರಾಣಿಗಳು ತನ್ನ ಬೇಟೆಯನ್ನು ಹೊತ್ತೊಯ್ಯುವ ಮುಂಚೆ ಅದರ ಭಕ್ಷಣೆಗೆ ಮುಂದಾಗುತ್ತದೆ.
ಚೀತಾದ ಆಹಾರಕ್ರಮ ಅದು ವಾಸಿಸುವ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, ಪೂರ್ವ ಆಫ್ರಿಕಾದ ಪ್ರಸ್ಥಭೂಮಿ, ಥಾಮ್ಸನ್'ಸ್ ಗಸೆಲ್(ಒಂದು ಜಾತಿಯ ಜಿಂಕೆ) ಅದರ ಆಯ್ಕೆ. ಈ ಸಣ್ಣ ಹುಲ್ಲೆಯು ಚೀತಾಗಿಂತ ಚಿಕ್ಕದಾಗಿದೆ. ( 53–67 cm (21–26 in)ರಷ್ಟು ಎತ್ತರ ಹಾಗು 70–107 cm (28–42 in)ರಷ್ಟು ಉದ್ದವಾಗಿದೆ), ಜೊತೆಗೆ ಚೀತಾದಷ್ಟು ವೇಗವಾಗಿ ಇದಕ್ಕೆ ಓಡಲು ಸಾಧ್ಯವಿಲ್ಲ; (80 km/h (50 mph)ರಷ್ಟು ತನಕ ಮಾತ್ರ). ಇದರ ಎಲ್ಲ ಸಂಯೋಜನೆಗಳು ಚೀತಾಗೆ ಒಂದು ಸೂಕ್ತ ಬೇಟೆಯಾಗಿ ಒದಗಿ ಬರುತ್ತದೆ. ಚೀತಾಗಳು ತಮ್ಮ ಗುಂಪಿನಿಂದ ಸ್ವಲ್ಪ ದೂರದಲ್ಲಿ ಒಂಟಿಯಾಗಿರುವ ಪ್ರಾಣಿಗಳಿಗಾಗಿ ಹುಡುಕಾಡುತ್ತವೆ, ಜೊತೆಗೆ ವಯಸ್ಸಾದ ಅಥವಾ ದುರ್ಬಲವಾದ ಪ್ರಾಣಿಗಳಿಗಾಗಿ ಅನಿವಾರ್ಯವಾಗಿ ಅರಸುವುದಿಲ್ಲ.
ಪರಸ್ಪರವರ್ಗದ ಪರಭಕ್ಷಕಗಳೊಂದಿಗಿನ ಸಂಬಂಧ
[ಬದಲಾಯಿಸಿ]ತಮ್ಮ ವೇಗ ಹಾಗು ಬೇಟೆಯಾಡುವ ಕೌಶಲ್ಯದ ಹೊರತಾಗಿಯೂ, ಚೀತಾಗಳನ್ನು ಅದರ ವ್ಯಾಪ್ತಿಯ ಇತರ ದೊಡ್ಡ ಪರಭಕ್ಷಕಗಳು ಬಹುಮಟ್ಟಿಗೆ ಮೀರಿಸುತ್ತವೆ. ಏಕೆಂದರೆ ತಮ್ಮ ಶಕ್ತಿ ಹಾಗು ಮರ ಏರುವ ಅಸಮರ್ಥತೆಯಿಂದಾಗಿ ಅವುಗಳ ಅತೀ ವೇಗವೂ ಸಹ ನಿಷ್ಫಲ ಆಗುವ ಸಂಭವವಿದೆ. ಇದರಿಂದಾಗಿ ಅವುಗಳು ಆಫ್ರಿಕಾದ ಇತರ ಪರಭಕ್ಷಕಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥವಾಗಿವೆ. ಅವುಗಳು ಸಾಮಾನ್ಯವಾಗಿ ಇತರ ಪ್ರಾಣಿಗಳ ಜೊತೆ ಕಾದಾಡುವುದನ್ನು ಆದಷ್ಟು ತಪ್ಪಿಸುತ್ತವೆ. ಜೊತೆಗೆ ಗಾಯಗೊಳ್ಳುವ ಬದಲಾಗಿ ತಮ್ಮ ಬೇಟೆಯನ್ನು ಕೇವಲ ಒಂದು ಹೈನಾಕ್ಕಾದರೂ ಸರಿ ಬಿಟ್ಟು ಕೊಡುತ್ತದೆ. ಏಕೆಂದರೆ ಚೀತಾಗಳು ತಮ್ಮ ಆಹಾರ ಗಳಿಸುವ ಸಲುವಾಗಿ ತಮ್ಮ ವೇಗದ ಮೇಲೆ ನಂಬಿಕೆಯಿಡುತ್ತವೆ. ಯಾವುದೇ ಗಾಯದಿಂದ ಅವುಗಳ ವೇಗಕ್ಕೆ ಹಾನಿಯುಂಟಾದರೆ ಅದು ಮುಖ್ಯವಾಗಿ ಅವುಗಳ ಪ್ರಾಣಕ್ಕೆ ಎರವಾಗಬಹುದು.
ಚೀತಾ ತನ್ನ ಬೇಟೆಯನ್ನು ಇತರ ಪರಭಕ್ಷಕಗಳಿಗೆ ಕಳೆದುಕೊಳ್ಳುವ 50%ರಷ್ಟು ಅವಕಾಶಗಳಿವೆ.[೧೦] ಚೀತಾಗಳು ದಿನದ ಬೇರೆ ಬೇರೆ ಸಮಯಗಳಲ್ಲಿ ಬೇಟೆಯಾಡಿ ಸ್ಪರ್ಧಿಸುವುದನ್ನು ತಡೆಯುವುದರ ಜೊತೆಗೆ ಬೇಟೆಯಾಡಿದ ತಕ್ಷಣ ಆ ಪ್ರಾಣಿಯನ್ನು ತಿಂದು ಮುಗಿಸುವುದಿಲ್ಲ. ಆಫ್ರಿಕಾದಲ್ಲಿ ಪ್ರಾಣಿಗಳ ಸ್ವಾಭಾವಿಕ ನೆಲೆಯು ಕಡಿಮೆಯಾಗಿರುವುದರಿಂದ, ಚೀತಾಗಳು ಇತ್ತೀಚಿನ ವರ್ಷಗಳಲ್ಲಿ ಆಫ್ರಿಕಾದ ಇತರ ಮೂಲ ಪರಭಕ್ಷಕಗಳಿಂದ ಹೆಚ್ಚಿನ ಆತಂಕ ಎದುರಿಸುತ್ತಿವೆ. ಏಕೆಂದರೆ ಲಭ್ಯವಿರುವ ಅವುಗಳ ವ್ಯಾಪ್ತಿ ಕ್ಷೀಣಿಸುತ್ತಿದೆ.[ಸೂಕ್ತ ಉಲ್ಲೇಖನ ಬೇಕು]
ಚೀತಾಗಳ ಜನನದ ನಂತರದ ಮೊದಲ ವಾರಗಳಲ್ಲಿ ಅವುಗಳ ಮರಣ ಪ್ರಮಾಣ ಹೆಚ್ಚಾಗಿರುತ್ತದೆ; ಈ ಅವಧಿಯಲ್ಲಿ 90%ರಷ್ಟು ಚೀತಾ ಮರಿಗಳನ್ನು ಸಿಂಹ ಗಳು, ಚಿರತೆಗಳು, ಕತ್ತೆ ಕಿರುಬ ಗಳು, ಕಾಡು ನಾಯಿಗಳು, ಅಥವಾ ಹದ್ದು ಗಳು ದಾಳಿ ಮಾಡಿ ಕೊಂದುಬಿಡುತ್ತವೆ. ಚೀತಾ ಮರಿಗಳು ಸಾಮಾನ್ಯವಾಗಿ ತಮ್ಮ ರಕ್ಷಣೆಗೋಸ್ಕರ ದಟ್ಟ ಪೊದೆಗಳಲ್ಲಿ ಅಡಗಿಕೊಳ್ಳುತ್ತವೆ. ತಾಯಿ ಚೀತಾಗಳು ತಮ್ಮ ಮರಿಗಳ ರಕ್ಷಣೆ ಮಾಡುತ್ತವೆ. ಜೊತೆಗೆ ತಮ್ಮ ಮರಿಗಳಿಗೆ ತೊಂದರೆ ಕೊಡುವ ಪರಭಕ್ಷಕಗಳನ್ನು ಹೆದರಿಸಿ ಓಡಿಸುವಲ್ಲಿ ಕೆಲವೊಂದು ಬಾರಿ ಯಶಸ್ವಿಯಾಗುತ್ತವೆ. ಇವುಗಳ ಜೊತೆ ಗಂಡು ಚೀತಾಗಳು ಸಹ ಸೇರಿಕೊಂಡು ಇತರ ಪರಭಕ್ಷಕಗಳನ್ನು ಓಡಿಸುತ್ತದೆ. ಇದು ಮೇಳನದ ಗಾತ್ರ ಹಾಗು ಪರಭಕ್ಷಕಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿದೆ. ಇದರ ವೇಗದಿಂದಾಗಿ, ಒಂದು ಆರೋಗ್ಯವಂತ ದೊಡ್ಡ ಚೀತಾ ಕೆಲವೇ ಕೆಲವು ಪರಭಕ್ಷಕ ಎದುರಾಳಿಗಳನ್ನು ಹೊಂದಿದೆ.[೧೯]
ಮಾನವರ ಜೊತೆಗಿನ ಸಂಬಂಧ
[ಬದಲಾಯಿಸಿ]ಆರ್ಥಿಕ ಪ್ರಾಮುಖ್ಯತೆ
[ಬದಲಾಯಿಸಿ]ಚೀತಾದ ತುಪ್ಪಳ ಹೊಂದುವುದು ಮೊದಲು ಒಂದು ಸಾಮಾಜಿಕ ಸ್ಥಾನ ಮಾನದಸಂಕೇತ ವೆಂದು ಪರಿಗಣಿಸಲಾಗುತ್ತಿತ್ತು. ಇಂದು, ಚೀತಾಗಳಿಗೆ ಪರಿಸರ ಪ್ರವಾಸೋದ್ಯಮ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಆರ್ಥಿಕ ಪ್ರಾಮುಖ್ಯತೆ ದೊರೆತಿದೆ. ಜೊತೆಗೆ ಇವುಗಳು ಮೃಗಾಲಯ ಗಳಲ್ಲೂ ಕಂಡುಬರುತ್ತಿವೆ. ಚೀತಾಗಳು ಇತರ ದೊಡ್ಡ ಬೆಕ್ಕುಗಳಿಗಿಂತ ಕಡಿಮೆ ಆಕ್ರಮಣಕಾರಿ ಪ್ರಾಣಿ. ಜೊತೆಗೆ ಇವುಗಳನ್ನು ಪಳಗಿಸಲೂ ಬಹುದು. ಹೀಗಾಗಿ ಮರಿಗಳನ್ನು ಕೆಲವೊಮ್ಮೆ ಅನಧಿಕೃತವಾಗಿ ಸಾಕುಪ್ರಾಣಿ ಎಂದು ಮಾರಾಟ ಮಾಡಲಾಗುತ್ತದೆ.
ಚೀತಾಗಳನ್ನು ಮುಂಚೆ, ಹಾಗು ಕೆಲವೊಂದು ಬಾರಿ ಈಗಲೂ, ಬೇಟೆಯಾಡಲಾಗುತ್ತದೆ. ಏಕೆಂದರೆ ಹಲವು ರೈತರು ಅವುಗಳು ಜಾನುವಾರು ಗಳನ್ನು ತಿನ್ನುತ್ತದೆಂದು ನಂಬುತ್ತಾರೆ. ಪ್ರಾಣಿಸಂಕುಲ ಅಳಿವಿನ ಅಂಚಿಗೆ ಬಂದಾಗ, ರೈತರಿಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಜೊತೆಗೆ ಚೀತಾಗಳ ಸಂರಕ್ಷಣೆಗೆ ಪ್ರೋತ್ಸಾಹಿಸಲಾಯಿತು. ಇತ್ತೀಚಿನ ಪುರಾವೆಗಳು ತೋರುವಂತೆ ಚೀತಾಗಳು ಆಕ್ರಮಣ ಮಾಡಿ ಜಾನುವಾರುಗಳನ್ನು ತಿನ್ನುವುದಿಲ್ಲ. ಬದಲಾಗಿ ಕಾಡು ಪ್ರಾಣಿಗಳಿಗೆ ಪ್ರಾಮುಖ್ಯತೆ ನೀಡುತ್ತವೆ. ಆದಾಗ್ಯೂ, ಅವುಗಳಿಗಾಗಿ ಬೇಸಾಯ ಭೂಮಿಯನ್ನು ತಮ್ಮ ವ್ಯಾಪ್ತಿಗೆ ಸೇರಿಸಿಕೊಳ್ಳಲು ತೊಂದರೆಯಿಲ್ಲ, ಇದು ವ್ಯಾಜ್ಯಗಳಿಗೆ ಎಡೆ ಮಾಡಿಕೊಡುತ್ತದೆ.
ಪುರಾತನ ಈಜಿಪ್ಟ್ ಜನರು ಸಾಮಾನ್ಯವಾಗಿ ಚೀತಾಗಳನ್ನು ಸಾಕುಪ್ರಾಣಿಗಳಾಗಿ ಇರಿಸಿಕೊಳ್ಳುತ್ತಿದ್ದರು, ಜೊತೆಗೆ ಅವುಗಳನ್ನು ಪಳಗಿಸಿ ಬೇಟೆಗಾಗಿ ತರಬೇತಿ ನೀಡುತ್ತಿದ್ದರು. ಚೀತಾಗಳನ್ನು ಬೇಟೆಗಾಗಿ ಹುಲ್ಲುಗಾವಲಿನ ಪ್ರದೇಶಗಳಿಗೆ ತಗ್ಗಾದ ಬಂಡಿಗಳಲ್ಲಿ ಅಥವಾ ಕುದುರೆ ಮೇಲೆ ಮುಸುಕು ಹಾಕಿ ಹಾಗು ಕಣ್ಕಟ್ಟಿ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ನಾಯಿಗಳು ತಮ್ಮ ಬೇಟೆಯನ್ನು ಹುಡುಕಿಕೊಂಡು ಹೊರಟಾಗ ಅವುಗಳನ್ನು ತೊಗಲ-ಪಟ್ಟಿಯಲ್ಲಿ ಬಂಧಿಸಲಾಗುತ್ತಿತ್ತು. ಬೇಟೆಯು ಸಾಕಷ್ಟು ಹತ್ತಿರವಿದೆ ಎನ್ನುವಾಗ, ಚೀತಾಗಳ ಬಂಧನ ಸಡಿಲಿಸುವುದರ ಜೊತೆಗೆ ಅವುಗಳ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಲಾಗುತ್ತಿತ್ತು. ಈ ಸಂಪ್ರದಾಯವನ್ನು ಪುರಾತನ ಪರ್ಷಿಯನ್ ಜನರು ಅಳವಡಿಸಿಕೊಂಡ ನಂತರ ಭಾರತಕ್ಕೆ ತರಲಾಯಿತು. ಇಲ್ಲಿ ಈ ಪದ್ದತಿಯು ಇಪ್ಪತ್ತನೇ ಶತಮಾನದ ತನಕವೂ ಭಾರತದ ರಾಜ ಮನೆತನಗಳಲ್ಲಿ ಚಾಲ್ತಿಯಲ್ಲಿತ್ತು. ಚೀತಾಗಳು ರಾಜಮನೆತನ ಹಾಗು ಉತ್ಕೃಷ್ಟತೆಯ ಪ್ರತೀಕವಾಗಿ ಬಳಕೆಯಾಗುತ್ತಿದ್ದವು. ಅವುಗಳನ್ನು ಬೇಟೆಗಾಗಿ ಬಳಸುವಂತೆ ಸಾಕುಪ್ರಾಣಿಯಾಗಿಸುವುದೂ ಸಹ ಜನಪ್ರಿಯತೆ ಪಡೆಯಿತು. ಇದನ್ನು ಸಾಕುಪ್ರಾಣಿಯಾಗಿ ಬಳಕೆ ಮಾಡುತ್ತಿದ್ದ ಇತರ ರಾಜಕುಮಾರ ಹಾಗು ರಾಜರುಗಳೆಂದರೆ ಚೆಂಗಿಸ್ ಖಾನ್ ಹಾಗು ಚಾರ್ಲೆಮಗ್ನೆ. ಇವರು ತಮ್ಮ ಅರಮನೆಯ ಆವರಣದಲ್ಲಿದ್ದ ಚೀತಾಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಅಕ್ಬರ್ ದಿ ಗ್ರೇಟ್, 1556 ರಿಂದ 1605ರವರೆಗೂ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದ. ಈತ ತನ್ನ ಬಳಿ ಸರಿಸುಮಾರು 1000 ಚೀತಾಗಳನ್ನು ಸಾಕಿದ್ದನೆಂದು ಅಂದಾಜಿಸಲಾಗಿದೆ.[೧೦] ಕಳೆದ 1930ರಷ್ಟು ಇತ್ತೀಚಿಗೆ ಇಥಿಯೋಪಿಯಾದ ಚಕ್ರವರ್ತಿ, ಹೈಲೆ ಸೇಲಸ್ಸಿ ತೊಗಲ-ಪಟ್ಟಿ ಕಟ್ಟಿದ ಚೀತಾವನ್ನು ಹಿಡಿದ ಛಾಯಾಚಿತ್ರ ತೆಗೆಯಲಾಗಿತ್ತು.
ಸಂರಕ್ಷಣಾ ಸ್ಥಿತಿಗತಿ
[ಬದಲಾಯಿಸಿ]ಚೀತಾದ ಮರಿಗಳು ಅತ್ಯಂತ ಹೆಚ್ಚಿನ ಮರಣ ಪ್ರಮಾಣ ವನ್ನು ಹೊಂದಿವೆ. ಇದು ವಂಶವಾಹಿನಿಯ ಅಂಶ ಹಾಗು ಚೀತಾದೊಂದಿಗಿನ ಪೈಪೋಟಿಯಲ್ಲಿ ಪರಭಕ್ಷಣೆ ಕಾರಣವಾಗಿದೆ. ಉದಾಹರಣೆಗೆ ಸಿಂಹ ಹಾಗು ಕತ್ತೆಕಿರುಬು ಅಥವಾ ಹೈನಾ. ಇತ್ತೀಚಿನ ಅಂತಸ್ಸಂಬಂಧ ಬೆಳವಣಿಗೆಯ ಕಾರಣದಿಂದಾಗಿ ಚೀತಾಗಳು ಒಂದು ಸದೃಶವಾದ ವಂಶವಾಹಿ ಚಿತ್ರಣವನ್ನು ಹಂಚಿಕೊಳ್ಳುತ್ತವೆ. ಇದು ಫಲವತ್ತಲ್ಲದ ವೀರ್ಯ, ಹುಟ್ಟಿನ ವೈಕಲ್ಯ, ನಿರ್ಬಂಧಿತ ಹಲ್ಲುಗಳು, ಸುರುಳಿಯಾದ ಬಾಲ ಹಾಗು ಬಾಗಿದ ಅಂಗಾಂಗಳಿಗೆ ಎಡೆ ಮಾಡಿಕೊಡುತ್ತದೆ. ಕೆಲವು ಜೀವವಿಜ್ಞಾನಿಗಳ ಪ್ರಕಾರ ಇವುಗಳನ್ನು ಒಂದು ಪ್ರಬೇಧವಾಗಿ ಅಭಿವೃದ್ದಿ ಪಡಿಸಲು ವಿಪರೀತವಾದ ಅಂತಸ್ಸಂಬಂಧ ಹೊಂದಿರುವುದು ಕಾರಣವಾಗಿದೆ ಎಂಬುದನ್ನು ನಂಬುತ್ತಾರೆ.[೨೦]
ಚೀತಾಗಳನ್ನು ಆಕ್ರಮಣಕಾರಿ ಪ್ರಾಣಿ ಗಳೆಂದು ಇಂಟರ್ನ್ಯಾಷನಲ್ ಯುನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್(IUCN) ಪಟ್ಟಿ ಮಾಡಿದೆ. (ಆಫ್ರಿಕನ್ ಉಪಜಾತಿಗಳು ಅಪಾಯ ಎದುರಿಸುತ್ತಿವೆ, ಏಶಿಯಾಟಿಕ್ ಉಪಜಾತಿಗಳು ವಿಷಮಾವಸ್ಥೆ ತಲುಪಿವೆ) ಜೊತೆಗೆ US ನ ಎನ್ಡೇಂಜರ್ಡ್ ಸ್ಪೀಷೀಸ್ ಆಕ್ಟ್: ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು- CITES(ಕನ್ಸರ್ವೇಶನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಇನ್ ಎನ್ಡೇಂಜರ್ಡ್ ಸ್ಪೀಷೀಸ್) ನ ಅನುಬಂಧ I. ಇಪ್ಪತ್ತೈದು ಆಫ್ರಿಕನ್ ದೇಶಗಳ ಅರಣ್ಯಗಳಲ್ಲಿ ಸರಿ ಸುಮಾರು 12,400 ಚೀತಾಗಳು ಉಳಿದಿವೆ; ಇದರಲ್ಲಿ ಹೆಚ್ಚು ನಮಿಬಿಯಾದಲ್ಲಿ ಅಂದರೆ 2,500ರಷ್ಟು ಚೀತಾಗಳಿವೆ. ಮತ್ತೊಂದು ಐವತ್ತರಿಂದ ಅರವತ್ತು ಅಪಾಯದ ಅಂಚಿನಲ್ಲಿರುವ ಏಶಿಯಾಟಿಕ್ ಚೀತಾಗಳು ಇರಾನ್ ನಲ್ಲಿ ಉಳಿದುಕೊಂಡಿರಬಹುದೆಂದು ಭಾವಿಸಲಾಗಿದೆ. ಕೆಲವೊಂದು ಯಶಸ್ವೀ ತಳಿ ಅಭಿವೃದ್ಧಿ ಯೋಜನೆಗಳು ನಡೆದಿವೆ. ವಿಶ್ವದಾದ್ಯಂತ ಇರುವ ಮೃಗಾಲಯಗಳಲ್ಲಿ ಪ್ರನಾಳ ಸಂಕರದ ಮಾದರಿಯೂ ಒಂದು.
ಕಳೆದ 1990ರಲ್ಲಿ ನಮಿಬಿಯಾದಲ್ಲಿ ಸ್ಥಾಪಿತವಾದ ಚೀಟಾ ಕನ್ಸರ್ವೇಶನ್ ಫಂಡ್ , ಚೀತಾಗಳು ಹಾಗು ಅವುಗಳ ಪರಿಸರ ವ್ಯವಸ್ಥೆಯ ಬಗ್ಗೆ ಸಂಶೋಧನೆ ಹಾಗು ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಧ್ಯೇಯೋದ್ದೇಶ ಹೊಂದಿದೆ. ಇದು ಚೀತಾಗಳ ಸಂರಕ್ಷಣೆ ಹಾಗು ಅವುಗಳ ನಿರ್ವಹಣೆಯ ಬಗ್ಗೆ ಎಲ್ಲ ಜವಾಬ್ದಾರರ ಜೊತೆ ಕೆಲಸಮಾಡಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶ ಹೊಂದಿದೆ. CCF ಸಂರಕ್ಷಣಾ ಕಾರ್ಯವು ಜಾರಿಯಲ್ಲಿಡುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದುದ್ದಕ್ಕೂ ಕೇಂದ್ರಗಳನ್ನು ಸ್ಥಾಪಿಸಿದೆ.
ಚೀಟಾ ಕನ್ಸರ್ವೇಶನ್ ಫೌಂಡೆಶನ್, ದಕ್ಷಿಣ ಆಫ್ರಿಕಾ ಮೂಲದ ಸಂಸ್ಥೆಯು 1993ರಲ್ಲಿ ಚೀತಾಗಳ ರಕ್ಷಣೆಗಾಗಿ ಸ್ಥಾಪಿತವಾಯಿತು.
ಭಾರತದಲ್ಲಿ ಸಂರಕ್ಷಣಾ ಯೋಜನೆ
[ಬದಲಾಯಿಸಿ]ಚೀತಾಗಳು ಭಾರತದಲ್ಲಿ ಬಹು ಕಾಲದಿಂದ ಅಸ್ತಿತ್ವದಲ್ಲಿವೆ. ಆದರೆ ಬೇಟೆ ಹಾಗು ಇತರ ಉದ್ದೇಶಗಳಿಂದಾಗಿ, ಭಾರತದಲ್ಲಿ ಚೀತಾಗಳು ಇಪ್ಪತ್ತನೇ ಶತಮಾನದ ಪೂರ್ವದಲ್ಲಿ ಅಳಿದು ಹೋದವು. ಇದರ ಪರಿಣಾಮವಾಗಿ, ಭಾರತ ಸರ್ಕಾರ ವು ಚೀತಾಗಳಿಗಾಗಿ ಸಂರಕ್ಷಣಾ ಯೋಜನೆ ರೂಪಿಸಿದೆ. ಜುಲೈ 9, 2009ರ ಗುರುವಾರದ TOIದ 11ನೇ ಪುಟದಲ್ಲಿ ಪ್ರಕಟವಾದ ಲೇಖನದಲ್ಲಿ, ಚೀತಾಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ಸೆರೆಯಲ್ಲಿ ಪೋಷಣೆ ಮಾಡುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಕಳೆದ 1940ರಿಂದ ಇತ್ತೀಚಿಗೆ ಭಾರತದಲ್ಲಿ ಚೀತಾಗಳು ಅಳಿವಿನ ಅಂಚಿನಲ್ಲಿವೆ. ಇದರಿಂದಾಗಿ ಸರ್ಕಾರವು ಈ ಯೋಜನೆಯ ಬಗ್ಗೆ ಚಿಂತನೆ ನಡೆಸಿದೆ. ಪರಿಸರ ಹಾಗು ಅರಣ್ಯ ಖಾತೆ ಮಂತ್ರಿ ಜೈರಾಮ್ ರಮೇಶ್,ಅವರು ಜುಲೈ 7, 2009ರಲ್ಲಿ ರಾಜ್ಯ ಸಭೆಗೆ ,ಹೇಳಿದಂತೆ "ಭಾರತ ಕಳೆದ 100 ವರ್ಷಗಳಲ್ಲಿ ಕೇವಲ ಚೀತಾವನ್ನು ಮಾತ್ರ ಅಳಿದು ಹೋದ ಪ್ರಾಣಿ ವರ್ಗ ಎಂದು ವಿವರಿಸಿದೆ, ಎಂದು ಹೇಳುತ್ತಾರೆ. ನಾವು ಅದನ್ನು ವಿದೇಶದಿಂದ ತಂದು ಪ್ರಾಣಿಯ ಸಂಖ್ಯೆಯನ್ನು ಹೆಚ್ಚಿಸಬೇಕು." ಅವರು ಭಾರತೀಯ ಜನತಾ ಪಾರ್ಟಿ(BJP)ಯ ರಾಜೀವ್ ಪ್ರತಾಪ್ ರೂಡಿ ಯ ಗಮನ ಸೆಳೆವ ಸೂಚನೆಗೆ ಪ್ರತಿಕ್ರಿಯಿಸಿದರು. 'ಚೀತಾಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯು ಅವಿರತವಾಗಿ ನಡೆಯುತ್ತಿದೆ. ನಿಲ್ಲದ ಬೇಟೆಯಾಡುವಿಕೆ ಹಾಗು ಸಂತಾನಾಭಿವೃದ್ಧಿ ಮಾಡಲು ಎದುರಾಗುವ ಸಮಸ್ಯೆಗಳು ಸಂಕೀರ್ಣತೆ ಎಡೆಮಾಡಿಕೊಟ್ಟಿದೆ. ಅತಿ ಸಾಹಸದ ಕೆಲಸವಾದ ಇದು; ಹುಲಿ ಸಂರಕ್ಷಣೆಗೆ ಎದುರಾಗುವ ಸಮಸ್ಯೆಗಳನ್ನೇ ಹೋಲುತ್ತದೆ. ಇಬ್ಬರು ಪರಿಸರವಾದಿಗಳಾದ ದಿವ್ಯಾ ಭಾನುಸಿನ್ಹಾ ಹಾಗು MK ರಂಜಿತ್ ಸಿಂಗ್ ಆಫ್ರಿಕಾ ದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಮದು ಮಾಡಿಕೊಂಡ ನಂತರ ಅವುಗಳನ್ನು ಸೆರೆಯಲ್ಲಿ ಪೋಷಿಸಲಾಗುವುದು. ಜೊತೆಗೆ ಒಂದು ನಿರ್ದಿಷ್ಟ ಸಮಯದ ನಂತರ, ಅವುಗಳನ್ನು ಕಾಡಿಗೆ ಬಿಡಲಾಗುವುದು.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ಟಿಟಿಯನ್ನ(ಅಂದರೆ ಎಣ್ಣೆಗೆಂಪಿನ ಬಣ್ಣದ) ಬಚ್ಚುಸ್ ಅಂಡ್ ಅರಿಅಡ್ನೆ (1523)ಯಲ್ಲಿ, ದೇವರ ರಥವನ್ನು ಚೀತಾಗಳು ಹೊರು(ಎಳೆಯು)ತ್ತವೆ. (ಇವುಗಳನ್ನು ಪುನರುಜ್ಜೀವನಗೊಂಡ ಇಟಲಿ ಯಲ್ಲಿ ಇವುಗಳನ್ನು ಬೇಟೆಯ ಪ್ರಾಣಿಗಳೆಂದು ಬಳಸಲಾಗುತ್ತಿತ್ತು). ಚೀತಾಗಳನ್ನು ಸಾಮಾನ್ಯವಾಗಿ ಡಿಯೋನೈಸಸ್ ದೇವತೆಯ ಸಹಚರ ಎಂದು ಭಾವಿಸಲಾಗಿದೆ. ಈ ದೇವತೆಯನ್ನು ರೋಮನ್ನರು ಬಚ್ಚುಸ್ ಎಂದು ಕರೆಯುತ್ತಾರೆ.
- ಜಾರ್ಜ್ ಸ್ಟಬ್ಬ್ನ ಚೀತಾದೊಂದಿಗೆ ಇಬ್ಬರು ಭಾರತೀಯ ಸೇವಕರು ಹಾಗು ಒಂದು ಸಾರಂಗ ದ ವರ್ಣಚಿತ್ರ (1764-1765) ಸಹ ಚೀತಾವೂ ಒಂದು ಬೇಟೆಯ ಪ್ರಾಣಿಯೆಂದು ತೋರಿಸುತ್ತದೆ. ಜೊತೆಗೆ ಜಾರ್ಜ್ IIIಗೆ ಮದ್ರಾಸ್ ನ ಇಂಗ್ಲಿಷ್ ಗವರ್ನರ್, ಸರ್ ಜಾರ್ಜ್ ಪಿಗೊಟ್ ಜ್ಞಾಪಕಾರ್ಥ ಒಂದು ಚೀತಾವನ್ನು ಕಾಣಿಕೆ ನೀಡುತ್ತಾನೆ.
- ಬೆಲ್ಜಿಯಂ ನ ಸಾಂಕೇತಿಕ ವರ್ಣಚಿತ್ರಕಾರಫರ್ನಂಡ್ ಖ್ನೋಪ್ಫ್ಫ್ (1858-1921) ದಿ ಕರೆಸ್ ವರ್ಣಚಿತ್ರವು, ಈಡಿಪಸ್ ಹಾಗು ಸ್ಫಿಂಕ್ಸ್ ಪುರಾಣ ಕಥೆಯ ಒಂದು ಸಂಕೇತ. ಜೊತೆಗೆ ಹೆಂಗಸಿನ ತಲೆ ಹಾಗು ಚೀತಾದ ದೇಹ ಹೋಲುವ ಆಕೃತಿ ಚಿತ್ರಿಸಿದ್ದಾನೆ.( ಇದನ್ನು ಸಾಮಾನ್ಯವಾಗಿ ಲೆಪರ್ಡ್ ಎಂದು ತಪ್ಪಾಗಿ ಗುರುತಿಸಲಾಗಿದೆ).
- ಆಂಡ್ರೆ ಮರ್ಸಿಯರ್ರ ಅವರ್ ಫ್ರೆಂಡ್ ಯಾಂಬೋ (1961) ಫ್ರೆಂಚ್ ದಂಪತಿ ದತ್ತಕಕ್ಕೆ ತೆಗೆದುಕೊಂಡ ಒಂದು ಚೀತಾದ ಕುತೂಹಲಕಾರಿ ಆತ್ಮಚರಿತ್ರೆ. ಇದನ್ನು ನಂತರ ಪ್ಯಾರಿಸ್ ಗೆ ತರಲಾಯಿತು. ಇದು ಬಾರ್ನ್ ಫ್ರೀ (1960) ಗೆ ಫ್ರೆಂಚ್ ಉತ್ತರವಾಗಿದೆ. ಇದರ ಲೇಖಕಿ ಜಾಯ್ ಆಡಂಸನ್,ದಿ ಸ್ಪಾಟೆಡ್ ಸ್ಫಿಂಕ್ಸ್ ಎಂಬ ತನ್ನದೇ ಆದ ಚೀತಾದ ಆತ್ಮಚರಿತ್ರೆ ಬರೆಯುತ್ತಾಳೆ.
- ಅನಿಮೇಟೆಡ್ ಸರಣಿ ThunderCats ನಲ್ಲಿ ಚೀತಾರ ಎಂಬ ಹೆಸರಿನ ಮಾನವರೂಪಿ ಚೀತಾದ ಪ್ರಮುಖ ಪಾತ್ರವಿದೆ.
- ಕಳೆದ 1986ರಲ್ಲಿ ಫ್ರಿಟೋ-ಲೆಯ್ ಒಂದು ಮಾನವರೂಪಿ ಚೀತಾ,ಚೆಸ್ಟರ್ ಚೀತಾಯನ್ನು ತಮ್ಮ ಚೀಟೋಸ್ ಗೆ ಅದೃಷ್ಟ ತರುತ್ತದೆಂದು ಪರಿಚಯಿಸುತ್ತಾರೆ.
- ಹರೋಲ್ಡ್ ಅಂಡ್ ಕುಮಾರ್ ಗೋ ಟು ವೈಟ್ ಕ್ಯಾಸಲ್ ನ ಉಪಕಥೆಯಲ್ಲಿ ತಪ್ಪಿಸಿಕೊಂಡ ಚೀತಾದ ಬಗ್ಗೆ ಉಲ್ಲೇಖವಿದೆ. ಇದು ನಂತರ ಅವರಿಬ್ಬರ ಜೊತೆ ಸೇರಿಮಾದಕ ಭಂಗಿ ಯನ್ನು ಸೇದುತ್ತದೆ. ಅಲ್ಲದೇ ತನ್ನ ಮೇಲೆ ಕೂರಿಸಿಕೊಂಡು ವಾಹನದಂತೆ ಸಾಗುತ್ತದೆ.
- ಕಳೆದ 2005ರಲ್ಲಿ ತೆರೆಕಂಡ ಚಿತ್ರ ಡುಮಾ ದಲ್ಲಿ ಒಬ್ಬ ದಕ್ಷಿಣ ಆಫ್ರಿಕಾದ ಚಿಕ್ಕ ಹುಡುಗ ತನ್ನ ಸಾಕುಪ್ರಾಣಿ ಡುಮಾ ಎಂಬ ಹೆಸರಿನ ಚೀತಾವನ್ನು ಕಾಡಿಗೆ ಕಳುಹಿಸುವ ಪ್ರಯತ್ನದಲ್ಲಿ ಹಲವು ಸಾಹಸಕಾರ್ಯಗಳನ್ನು ಮಾಡುತ್ತಾನೆ. ಇದು ಕ್ಯಾರೊಲ್ ಕ್ರಾಥ್ರಾ ಹಾಪ್ ಕ್ರಾಫ್ಟ್ ಹಾಗು ಕ್ಷನ್ ಹಾಪ್ ಕ್ರಾಫ್ಟ್ ರ "ಹೌ ಇಟ್ ವಾಸ್ ವಿಥ್ ಡೂಮ್ಸ್: ಏ ಟ್ರೂ ಸ್ಟೋರಿ ಫ್ರಂ ಆಫ್ರಿಕಾ" ಪುಸ್ತಕ ಆಧರಿಸಿದೆ.
- ಹುಸ್ಸೇನ್, ಆನ್ ಎಂಟರ್ಟೈನ್ಮೆಂಟ್, ಎಂಬ ಪ್ಯಾಟ್ರಿಕ್ ಓ'ಬ್ರಯಾನ್ ನ ಕಾದಂಬರಿಯ ಕಥಾವಸ್ತುವಿನ ಸನ್ನಿವೇಶವು ಬ್ರಿಟಿಶ್ ರಾಜ್ ಕಾಲದ ಭಾರತದಲ್ಲಿ ನಡೆಯುತ್ತದೆ. ಇದು ರಾಜವಂಶಸ್ಥರು ಚೀತಾಗಳನ್ನು ಸಾಕುವ ಹಾಗು ಅವುಗಳಿಗೆ ಹುಲ್ಲೆಗಳನ್ನು ಹಿಡಿಯಲು ತರಬೇತಿ ನೀಡುವ ಪದ್ದತಿಯನ್ನು ವಿವರಿಸುತ್ತದೆ.
ಆಕರಗಳು
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ Wozencraft, W. C. (2005). "Order Carnivora". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 532–533. ISBN 978-0-8018-8221-0. OCLC 62265494.
{{cite book}}
: Invalid|ref=harv
(help); no-break space character in|first=
at position 3 (help) - ↑ https://www.deccanherald.com/content/645859/fastest-feline-first.html
- ↑ Bauer, H., Belbachir, F., Durant, S., Hunter, L., Marker, L., Packer, K. & Purchase, N. (2008). Acinonyx jubatus. In: IUCN 2008. IUCN Red List of Threatened Species. Retrieved 9 October 2008.
- ↑ https://www.deccanherald.com/content/645859/fastest-feline-first.html
- ↑ Sharp, N. C. (1994). "Timed running speed of a cheetah (Acinonyx jubatus)". Journal of Zoology, London. 241: 493–494.
{{cite journal}}
: Cite has empty unknown parameter:|coauthors=
(help) - ↑ Milton Hildebrand (1959). "Motions of Cheetah and Horse". Journal of Mammalogy. Retrieved 2007-10-30.ಆದಾಗ್ಯೂ ಚೀತಾದ ಪ್ರಕಾರ, ಲ್ಯೂಕ್ ಹಂಟರ್ ಹಾಗು ಡೇವ್ ಹಮ್ಮನ್, (ಸ್ಟ್ರುಇಕ್ ಪ್ರಕಾಶಕರು, 2003), pp. 37–38, ಚೀತಾದ ಓಟದ ವೇಗವು ಇಷ್ಟು ದಾಖಲಾಗಿತ್ತು 110 km/h (68 mph).
- ↑ Kruszelnicki, Karl S. (1999). "Fake Flies and Cheating Cheetahs". Australian Broadcasting Corporation. Retrieved 2007-12-07.
- ↑ Garland, T., Jr. (1983). "The relation between maximal running speed and body mass in terrestrial mammals" (PDF). Journal of Zoology, London. 199: 155–170. Archived from the original (PDF) on 2018-08-31. Retrieved 2013-10-11.
{{cite journal}}
: Cite has empty unknown parameter:|coauthors=
(help)CS1 maint: multiple names: authors list (link) - ↑ cheetah (n.d.). The American Heritage Dictionary of the English Language, Fourth Edition. Retrieved 2007-04-16.
{{cite book}}
: CS1 maint: year (link) - ↑ ೧೦.೦ ೧೦.೧ ೧೦.೨ ೧೦.೩ ೧೦.೪ ಉಲ್ಲೇಖ ದೋಷ: Invalid
<ref>
tag; no text was provided for refs namedO'Brien
- ↑ Wilson, D. E.; Reeder, D. M., eds. (2005). Mammal Species of the World (3rd ed.). Johns Hopkins University Press. ISBN 978-0-8018-8221-0. OCLC 62265494.
{{cite book}}
: Invalid|ref=harv
(help); no-break space character in|editor-first=
at position 3 (help); no-break space character in|editor2-first=
at position 3 (help) - ↑ Mattern, M. Y., D. A. McLennan (2000). "Phylogeny and Speciation of Felids". Cladistics. 16: 232–253. doi:10.1111/j.1096-0031.2000.tb00354.x.
{{cite journal}}
: CS1 maint: multiple names: authors list (link) - ↑ Johnson, W. E., E. Eizirik, J. Pecon-Slattery, W. J. Murphy, A. Antunes, E. Teeling, S. J. O'Brien (2006). "The Late Miocene Radiation of Modern Felidae: A Genetic Assessment". Science. 311: 73–77. doi:10.1126/science.1122277. PMID 16400146.
{{cite journal}}
: CS1 maint: multiple names: authors list (link) - ↑ "Asiatic Cheetah". Wild About Cats. Retrieved 2007-12-07.
- ↑ "Asiatic Cheetah". WWF-Pakistan. Retrieved 2007-12-07.
- ↑ "Scandal on the Serengeti: New light has been shed on the extent of female cheetahs' unfaithfulness to their male partners". inthenews.co.uk. May 30, 2007. Archived from the original on 2007-09-27. Retrieved 2007-12-07.
- ↑ ಎಟನ್, ರಾನ್ಡಲ್ L. (1976) ಏ ಪಾಸ್ಸಿಬಲ್ ಕೇಸ್ ಆಫ್ ಮಿಮಿಕ್ರಿ ಇನ್ ಲಾರ್ಜರ್ ಮ್ಯಾಮಲ್ಸ್. Evolution 30(4):853-856 doi 10.2307/2407827
- ↑ ರಿಚರ್ಡ್ ಎಸ್ಟೆಸ್, ಎಡ್ವರ್ಡ್ ಓಸ್ಬೋರ್ನೆ ವಿಲ್ಸೋನ್ ರಿಂದ ಮುನ್ನುಡಿ (1991) ದಿ ಬಿಹೇವಿಯರ್ ಗೈಡ್ ಟು ಆಫ್ರಿಕನ್ ಮ್ಯಾಮಲ್ಸ್. ಯುನಿವೆರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್ ಪುಟ 371.
- ↑ M. W. Hayward, M. Hofmeyr, J. O'Brien & G. I. H. Kerley (2006). "Prey preferences of the cheetah (Acinonyx jubatus) (Felidae: Carnivora): morphological limitations or the need to capture rapidly consumable prey before kleptoparasites arrive?". Journal of Zoology. Archived from the original on 2020-04-09. Retrieved 2008-10-05.
{{cite web}}
: CS1 maint: multiple names: authors list (link) - ↑ Gugliotta, Guy (2008-02). "Rare Breed". Smithsonian Magazine. Archived from the original on 2008-03-03. Retrieved 2008-03-07.
{{cite web}}
: Check date values in:|date=
(help); Italic or bold markup not allowed in:|publisher=
(help)
ಗ್ರಂಥಸೂಚಿ
[ಬದಲಾಯಿಸಿ]- ಗ್ರೇಟ್ ಕ್ಯಾಟ್ಸ್, ಮೆಜೆಸ್ಟಿಕ್ ಕ್ರೀಚರ್ಸ್ ಆಫ್ ದಿ ವೈಲ್ಡ್ , ed. ಜಾನ್ ಸಇಡೆನ್ಸ್ಟಿಕರ್, ಇಲ್ಲಸ್. ಫ್ರಾಂಕ್ ನೈಟ್, (ರೋಡೇಲ್ ಪ್ರೆಸ್, 1991), ISBN 0-87857-965-6
- ಚೀಟಾ , ಕ್ಯಾಥೆರಿನ್ (ಅಥವಾ ಕ್ಯಾತ್ರಿನ್) & ಕಾರ್ಲ್ ಅಮ್ಮನ್ನ್, ಅರ್ಕೋ ಪಬ್, (1985), ISBN 0-668-06259-2.
- ಚೀಟಾ(ಬಿಗ್ ಕ್ಯಾಟ್ ಡೈರಿ) , ಜೊನಾಥನ್ ಸ್ಕಾಟ್, ಅಂಜೆಲಾ ಸ್ಕಾಟ್, (ಹಾರ್ಪರ್ ಕಾಲಿನ್ಸ್, 2005), ISBN 0-00-714920-4
- ಸೈನ್ಸ್ (ಸಂಪುಟ 311, ಪುಟ 73)
- ಚೀಟಾ , ಲ್ಯೂಕ್ ಹಂಟರ್ ಹಾಗು ಡೇವ್ ಹಮ್ಮನ್, (ಸ್ಟ್ರುಇಕ್ ಪಬ್ಲಿಷರ್ಸ್, 2003), ISBN 1-86872-719-X
- ಆಲ್ಸೇನ್, ಥಾಮಸ್ T. (| 2006- ನ್ಯಾಚುರಲ್ ಹಿಸ್ಟರಿ ಅಂಡ್ ಕಲ್ಚರಲ್ ಹಿಸ್ಟರಿ: ದಿ ಸರ್ಕ್ಯುಲೇಶನ್ ಆಫ್ ಹಂಟಿಂಗ್ ಲೆಪರ್ಡ್ಸ್ ಇನ್ ಯುರೇಶಿಯಾ, ಸೆವೆಂತ್-ಸೆವೆನ್ಟೀಂತ್ ಸೆಂಚುರೀಸ್." ಇನ್: ಕಾಂಟಾಕ್ಟ್ ಅಂಡ್ ಎಕ್ಸ್ಚೆಂಜ್ ಇನ್ ದಿ ಏನ್ಶಂಟ್ ವರ್ಲ್ಡ್ . Ed. ವಿಕ್ಟರ್ H. ಮೇರ್. ಯುನಿವರ್ಸಿಟಿ ಆಫ್ ಹವಾಯಿ'ಇ ಪ್ರೆಸ್. Pp. 116–135. ISBN ISBN 978-0-8248-2884-4; ISBN ISBN 0-8248-2884-4
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Caro, T. M. (1994). Cheetahs of the Serengeti Plains : group living in an asocial species. Chicago: University of Chicago Press. ISBN 0226094332 (cloth, alk. paper), 478 pp..
{{cite book}}
: Check|isbn=
value: invalid character (help)
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಚೀತಾ at the Encyclopedia of Life
- ಬೈಯೋಡೈವರ್ಸಿಟಿ ಹೆರಿಟೇಜ್ ಲೈಬ್ರರಿ ಬಿಬ್ಲಿಯೋಗ್ರಫಿ ಅಸಿನೋನಿಕ್ಸ್ ಜುಬಾಟುಸ್
- ಚೀತಾ ಸಂರಕ್ಷಣಾ ನಿಧಿ
- ಸೇವ್ ಚೈನಾ'ಸ್ ಟೈಗರ್ಸ್ ಟು ಫಂಡ್ ವೈಲ್ಡ್ ಕ್ಯಾಟ್ ಕನ್ಸೆರ್ವೆಶನ್ ವರ್ಲ್ಡ್ ವೈಡ್
- ಡೆ ವಿಲ್ಡ್ತ್ ಚೀಟಾ ಅಂಡ್ ವೈಲ್ಡ್ ಲೈಫ್ ಟ್ರಸ್ಟ್
- ಆನ್ ದಿ ಚೇಸ್ ವಿಥ್ ಚೀಟಾಸ್ Archived 2010-03-28 ವೇಬ್ಯಾಕ್ ಮೆಷಿನ್ ನಲ್ಲಿ. - ಸ್ಲೈಡ್ ಶೋ ಬೈ ಲೈಫ್ ಮ್ಯಾಗಜಿನ್
- ಫೇಕ್ ಫ್ಲೈಸ್ ಅಂಡ್ ಚೀಟಿಂಗ್ ಚೀಟಾಸ್: ಚೀತಾದ ವೇಗವನ್ನು ಅಳೆಯುವುದು
- ಮ್ಯೂಟನ್ಟ್ ಚೀಟಾಸ್: ಚೀತಾಗಳ ಬಣ್ಣದ ವ್ಯತ್ಯಾಸದ ಬಗ್ಗೆ ಮಾಹಿತಿ
- 110 km/h ಚೀಟಾ ಅಟ್ಯಾಕ್ ಗಸೆಲ್ ಚೀತಾದ ವೇಗ, ಓಟದ ತಂತ್ರಗಾರಿಕೆ ಹಾಗು ಚೀತಾದ ಬೇಟೆಯನ್ನು ಹೈಈನ,ಕತ್ತೆ ಕಿರುಬವೊಂದು ಕಸಿದುಕೊಳ್ಳುತ್ತಿರುವ ದೃಶ್ಯಗಳು.]
- ಭಾರತದಲ್ಲಿ ಚೀತಾ ಕಾಣಿಸುವುದೇ?
- Pages with reference errors
- Pages using the JsonConfig extension
- Pages using duplicate arguments in template calls
- CS1 errors: invisible characters
- CS1 errors: invalid parameter value
- CS1 errors: empty unknown parameters
- CS1 maint: multiple names: authors list
- CS1 maint: year
- CS1 errors: markup
- CS1 errors: dates
- IUCN Red List vulnerable species
- Articles with 'species' microformats
- Taxobox articles missing a taxonbar
- Articles with unsourced statements from September 2009
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with unsourced statements from November 2008
- CS1 errors: ISBN
- Commons category link is on Wikidata
- ಸಹಾರಾದ ಪ್ರಾಣಿಸಂಕುಲ
- ಬೆಕ್ಕಿನ ಜಾತಿಯ ಪ್ರಾಣಿಗಳು
- ಆಫ್ರಿಕಾದ ಸಸ್ತನಿಗಳು
- ಏಶಿಯಾದ ಸಸ್ತನಿಗಳು
- ಆಫ್ರಿಕಾದ ಬೃಹತ್ ಪ್ರಾಣಿಸಂಕುಲ
- ಪ್ರಾಣಿಗಳು
- Pages using ISBN magic links