ವೀರ್ಯ

ವೀರ್ಯದ್ರವ ಎಂದೂ ಕರೆಯಲ್ಪಡುವ ವೀರ್ಯವು ರೇತ್ರಗಳನ್ನು ಹೊಂದಿರುವ ಸಾವಯವ ದೈಹಿಕ ದ್ರವವಾಗಿದೆ. ಗಂಡು ಜನನ ಗ್ರಂಥಿಗಳು (ಲೈಂಗಿಕ ಗ್ರಂಥಿಗಳು) ಮತ್ತು ಗಂಡು ಅಥವಾ ಉಭಯಲಿಂಗ ಪ್ರಾಣಿಗಳ ಇತರ ಲೈಂಗಿಕ ಅಂಗಗಳು ರೇತ್ರಗಳನ್ನು ಸ್ರವಿಸುತ್ತವೆ ಮತ್ತು ಇದು ಹೆಣ್ಣು ಅಂಡಾಣುವನ್ನು ಫಲೀಕರಿಸಬಲ್ಲದು. ವೀರ್ಯವು ವಸ್ತಿಕುಹರದಲ್ಲಿ ನೆಲೆಗೊಂಡಿರುವ ರೇತಸ್ಸುಕೋಶದಿಂದ ಉತ್ಪತ್ತಿಯಾಗುತ್ತದೆ. ಮೂತ್ರವಿಸರ್ಜನ ನಾಳದ ರಂಧ್ರದಿಂದ ವೀರ್ಯದ ವಿಸರ್ಜನೆಗೆ ಕಾರಣವಾಗುವ ಪ್ರಕ್ರಿಯೆಯನ್ನು ಸ್ಖಲನ ಎಂದು ಕರೆಯಲಾಗುತ್ತದೆ. ಮಾನವರಲ್ಲಿ, ವೀರ್ಯದ್ರವವು ವೀರ್ಯದ ಹೊರತಾಗಿ ಹಲವಾರು ಘಟಕಗಳನ್ನು ಹೊಂದಿರುತ್ತದೆ: ಪ್ರೋಟೀನ್ ಲಯಕ ಮತ್ತು ಇತರ ಕಿಣ್ವಗಳು ಜೊತೆಗೆ ಫ್ರಕ್ಟೋಸ್ ವೀರ್ಯದ್ರವದ ಘಟಕಗಳಾಗಿವೆ. ಇವು ರೇತ್ರಗಳ ಉಳಿವನ್ನು ಉತ್ತೇಜಿಸುತ್ತವೆ ಮತ್ತು ರೇತ್ರಗಳಿಗೆ ಚಲಿಸುವ ಅಥವಾ "ಈಜುವ" ಮಾಧ್ಯಮವನ್ನು ಒದಗಿಸುತ್ತವೆ. ದ್ರವವನ್ನು ಯೋನಿಯೊಳಗೆ ಆಳವಾಗಿ ಹೊರಹಾಕಲು ಅಳವಡಿಸಲಾಗಿದೆ. ಇದರಿಂದ ವೀರ್ಯವು ಗರ್ಭಾಶಯದೊಳಗೆ ಸಾಗಿ ಒಂದು ಅಂಡದೊಂದಿಗೆ ಯುಗ್ಮಜವನ್ನು ರೂಪಿಸುತ್ತದೆ.
ಮಾನವ ವೀರ್ಯ
[ಬದಲಾಯಿಸಿ]ವೀರ್ಯ ಹಲವು ಸ್ರಾವಗಳ ಮೊತ್ತ. ವೀರ್ಯಾಣುಗಳು ವೃಷಣದಲ್ಲಿ ಉತ್ಪತ್ತಿಗೊಳ್ಳುತ್ತವೆ. ವೃಷಣ, ವೀರ್ಯಕೋಶ, ಪ್ರಾಸ್ಟೇಟ್ ಹಾಗೂ ಮೂತ್ರನಾಳಗಳ ಗ್ರಂಥಿಗಳು ಸ್ರವಿಸುವ ದ್ರವಗಳು ಸೇರಿ ವೀರ್ಯವೆನಿಸಿಕೊಳ್ಳುತ್ತದೆ. ವೀರ್ಯ ಲೋಳೆಯಾಗಿ ಬೆಳ್ಳಗಿರುತ್ತದೆ ಮತ್ತು ಇದು ಪ್ರತ್ಯಾಮ್ಲಾಯ ಗುಣವುಳ್ಳದ್ದು. ವೀರ್ಯಾಣುಗಳು ಈ ದ್ರವದಲ್ಲಿ ಸೇರಿಕೊಂಡಿರುತ್ತವೆ. ವೀರ್ಯಾಣುವಿನ ಪೋಷಣೆಗೆ ಅಗತ್ಯವಾದ ಅಲ್‌ಬ್ಯುಮಿನ್, ಪ್ರೋಟೀನುಗಳು, ಕ್ಯಾಲ್ಸಿಯಂ ಹಾಗೂ ರಂಜಕಾಮ್ಲ ವೀರ್ಯದಲ್ಲಿ ಅಡಕವಾಗಿರುತ್ತವೆ. [೧] ಸ್ಖಲನ ಪ್ರಕ್ರಿಯೆಯಲ್ಲಿ, ವೀರ್ಯಾಣುವು ಸ್ಖಲನ ನಾಳಗಳ ಮೂಲಕ ಸಾಗಿ, ವೀರ್ಯ ಕೋಶಕಗಳು, ಪ್ರಾಸ್ಟೇಟ್ ಮತ್ತು ಬಲ್ಬೊಯುರೆಥ್ರಲ್ ಗ್ರಂಥಿಗಳ ದ್ರವಗಳೊಂದಿಗೆ ಮಿಶ್ರಣವಾಗಿ ವೀರ್ಯವನ್ನು ರೂಪಿಸುತ್ತದೆ. ವೀರ್ಯ ಕೋಶಕಗಳು ಫ್ರಕ್ಟೋಸ್ ಮತ್ತು ಇತರ ಪದಾರ್ಥಗಳಲ್ಲಿ ಸಮೃದ್ಧವಾಗಿರುವ ಹಳದಿ ಮಿಶ್ರಿತ ಸ್ನಿಗ್ಧ ತರಲವನ್ನು ಉತ್ಪಾದಿಸುತ್ತವೆ. ಇದು ಮಾನವನ ವೀರ್ಯದ ಸುಮಾರು 70% ರಷ್ಟಿರುತ್ತದೆ.[೨] ಡೈಹೈಡ್ರೊಟೆಸ್ಟೋಸ್ಟೆರಾನ್‌ನಿಂದ ಪ್ರಭಾವಿತವಾಗಿರುವ ಪ್ರಾಸ್ಟೇಟ್‍ನ ಸ್ರಾವವು ಪ್ರೋಟಿನ್ ಲಯಕ ಕಿಣ್ವಗಳು, ಸಿಟ್ರಿಕ್ ಆಮ್ಲ, ಆಮ್ಲ ಫಾಸ್ಫಟೇಸ್ ಮತ್ತು ಲಿಪಿಡ್‌ಗಳನ್ನು ಒಳಗೊಂಡಿರುವ ಬಿಳಿಯ (ಕೆಲವೊಮ್ಮೆ ನಿರಭ್ರ), ತೆಳುವಾದ ದ್ರವವಾಗಿದೆ.[೨] ಬಲ್ಬೊಯುರೆಥ್ರಲ್ ಗ್ರಂಥಿಗಳು ಮೂತ್ರವಿಸರ್ಜನ ನಾಳವನ್ನು ಜಾರುವಂತಾಗಿಸಲು ಅದರ ಕುಹರದೊಳಗೆ ನಿರಭ್ರವಾದ ಸ್ರಾವವನ್ನು ಸ್ರವಿಸುತ್ತದೆ.[೩]

ಕ್ರೈಸ್ತ ಸಾಹಿತ್ಯದಲ್ಲಿ
[ಬದಲಾಯಿಸಿ]ಫಿಬಿಯೋನೈಟ್ಸ್ ಅಥವಾ ಬೋರ್ಬೊರೈಟ್‌ಗಳು ನಾಲ್ಕನೇ ಶತಮಾನದ ಅಂತ್ಯ ಕಾಲದ ಆರಂಭಿಕ ಕ್ರಿಶ್ಚಿಯನ್ ಗ್ನೋಸ್ಟಿಕ್ ಪಂಥದವರಾಗಿದ್ದರು. ಅವರ ಪವಿತ್ರ ವೀರ್ಯವನ್ನು ಒಳಗೊಂಡ ಪದ್ಧತಿಗಳೆಂದು ತಿಳಿಯಲ್ಪಟ್ಟ ಪದ್ದತಿಗಳನ್ನು ಆರಂಭಿಕ ಕ್ರಿಶ್ಚಿಯನ್ ಮತದ್ರೋಹಿಗಳನ್ನು ಗುರುತಿಸುವ ಲೇಖಕನೆಂಬಂತೆ ಖ್ಯಾತಿವೆತ್ತ ಸಲಾಮಿಸ್‌ನ ಎಪಿಫಾನಿಯಸ್ ತನ್ನ ಪನಾರಿಯನ್‌ನಲ್ಲಿ ವಿವರಿಸಿದ್ದಾನೆ.[೪][೫][೬][೭]
ಬೋರ್ಬೊರೈಟ್‌ಗಳು "ಗ್ರೇಟರ್ ಕ್ವೆಶ್ಚನ್ಸ್ ಆಫ್ ಮೇರಿ" ಎಂಬ ಪವಿತ್ರ ಪಠ್ಯವನ್ನು ಹೊಂದಿದ್ದರು ಎಂದು ಎಪಿಫಾನಿಯಸ್ ಹೇಳಿಕೊಳ್ಳುತ್ತಾರೆ. ಪುನರುತ್ಥಾನದ ನಂತರ ಕ್ರಿಸ್ತನು ಕಾಣಿಸಿಕೊಳ್ಳುವ ಸಮಯದಲ್ಲಿ, ಅವನು ಮಗ್ದಲನ ಮೇರಿಯನ್ನು ಪರ್ವತದ ತುದಿಗೆ ಕರೆದೊಯ್ದು ಅಲ್ಲಿ ಒಬ್ಬ ಮಹಿಳೆಯನ್ನು ತನ್ನ ಪಕ್ಕದಿಂದ ಹೊರಗೆಳೆದು ಅವಳೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿದ ಒಂದು ಪ್ರಸಂಗವನ್ನು ಒಳಗೊಂಡಿದೆ.[೫][೪][೭] ವೀರ್ಯ ಸ್ಖಲನಗೊಂಡ ನಂತರ, ಯೇಸು ತನ್ನ ವೀರ್ಯವನ್ನು ಕುಡಿದು ಮೇರಿಗೆ, "ನಾವು ಬದುಕಲು ಹೀಗೆ ಮಾಡಬೇಕು" ಎಂದು ಹೇಳಿದನು.[೫][೪][೭] ಇದನ್ನು ಕೇಳಿದ ಮೇರಿ ತಕ್ಷಣವೇ ಮೂರ್ಛೆ ಹೋದಳು. ಆಗ ಯೇಸು ಅವಳಿಗೆ ಸಹಾಯ ಮಾಡುವ ಮೂಲಕ ಹೀಗೆ ಪ್ರತಿಕ್ರಿಯೆ ತೋರಿದನು: "ಓ ಅಲ್ಪ ನಂಬಿಕೆಯವಳೇ, ನೀನು ಏಕೆ ಅನುಮಾನಿಸಿದೆ?" ಎಂದು ಹೇಳಿದನು. [೫][೭] ಈ ಕಥೆಯು ಬೋರ್ಬೊರೈಟ್ ಯೂಕರಿಸ್ಟ್ ಆಚರಣೆಗೆ ಆಧಾರವಾಗಿದೆ ಎಂದು ಭಾವಿಸಲಾಗಿದೆ. ಇದರಲ್ಲಿ ಅವರು ಸಮೂಹ ಸಂಭೋಗ ಪ್ರಕ್ರಿಯೆಗಳಲ್ಲಿ ತೊಡಗಿದ್ದರು ಮತ್ತು ವೀರ್ಯ ಮತ್ತು ಮುಟ್ಟಿನ ರಕ್ತವನ್ನು ಕ್ರಮವಾಗಿ "ಕ್ರಿಸ್ತನ ದೇಹ ಮತ್ತು ರಕ್ತ" ಎಂದು ಸೇವಿಸುತ್ತಿದ್ದರು.[೪][೭][೫] ಆರಂಭಿಕ ಕ್ರಿಶ್ಚಿಯನ್ ಧರ್ಮದ ವಿದ್ವಾಂಸ ಬಾರ್ಟ್ ಡಿ. ಎಹ್ರ್ಮನ್, ಎಪಿಫೇನಿಯಸ್‌ನ ಸಾರಾಂಶದ ನಿಖರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾನೆ ಮತ್ತು "ಎಪಿಫೇನಿಯಸ್‌ನ ವಿವರಣೆಯ ವಿವರಗಳು ಪ್ರಾಚೀನ ಜಗತ್ತಿನಲ್ಲಿ ರಹಸ್ಯ ಸಮಾಜಗಳ ಬಗೆಗಿನ ಕಿಂವದಂತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳು" ಎಂದು ಟೀಕಿಸುತ್ತಾನೆ. [೪]
ಉಲ್ಲೇಖಗಳು
[ಬದಲಾಯಿಸಿ]- ↑ ದಾಂಪತ್ಯ ದೀಪಿಕೆ - ಡಾ. ಅನುಪಮಾ ನಿರಂಜನ 1993, p. 34-36.
- ↑ ೨.೦ ೨.೧ Mann, T (1954). The Biochemistry of Semen. London: Methuen & Co; New York: John Wiley & Sons. Retrieved November 9, 2013.
- ↑ Guyton, Arthur C. (1991). Textbook of Medical Physiology (8th ed.). Philadelphia: W.B. Saunders. pp. 890–891. ISBN 0-7216-3994-1.
- ↑ ೪.೦ ೪.೧ ೪.೨ ೪.೩ ೪.೪ Ehrman, Bart D. (2006). Peter, Paul, and Mary Magdalene: The Followers of Jesus in History and Legend. Oxford, England: Oxford University Press. pp. 234–235. ISBN 978-0-19-530013-0.
Ehrman to you as apostles.
- ↑ ೫.೦ ೫.೧ ೫.೨ ೫.೩ ೫.೪ Epiphanius of Salamis 26.8.1-3[Usurped!]
- ↑ Kim, Young Richard (2015). Epiphanius of Cyprus: Imagining an Orthodox World. Ann Arbor, Michigan: University of Michigan Press. pp. 37–39. ISBN 978-0-472-11954-7. Archived from the original on 2022-01-25. Retrieved 2020-10-28.
- ↑ ೭.೦ ೭.೧ ೭.೨ ೭.೩ ೭.೪ DeConick, April D. (2011), Holy Misogyny: Why the Sex and Gender Conflicts in the Early Church Still Matter, New York City, New York and London, England: Continuum International Publishing Group, p. 139, ISBN 978-1-4411-9602-6, archived from the original on 2022-01-25, retrieved 2020-10-28