ರಕ್ಷಿತ ಶವ/ಮಮ್ಮಿ
ರಕ್ಷಿತ ಶವ/ಮಮ್ಮಿ ಎಂದರೆ ಉದ್ದೇಶಪೂರ್ವಕ ಅಥವಾ ಅನುಗತವಾದ ರಾಸಾಯನಿಕ ಚಟುವಟಿಕೆ, ವಿಪರೀತ ಶೀತ, ವಿಪರೀತ ಕಡಿಮೆ ಆರ್ದ್ರತೆ, ಅಥವಾ ಹೂಳುಭೂಮಿಗಳಲ್ಲಿ ದೇಹಗಳನ್ನು ಹೂಳಿದಾಗ ಗಾಳಿಯ ಅಲಭ್ಯತೆಗಳಿಂದಾಗಿ ಚರ್ಮ ಹಾಗೂ ಅಂಗಗಳು ಸಂರಕ್ಷಿತಗೊಂಡ ಶವ. ಪ್ರಸ್ತುತ, ಪತ್ತೆಯಾದ ಪ್ರಾಚೀನ (ನೈಸರ್ಗಿಕವಾಗಿ) ಸಂರಕ್ಷಿತ ಮಾನವ ಶವವೆಂದರೆ 6,000 ವರ್ಷಗಳಷ್ಟು ಹಳೆಯದು ಎನ್ನಲಾದ 1936ರಲ್ಲಿ ಪತ್ತೆಯಾದ ಛೇದಗೊಂಡ ತಲೆ.[೧] ಪತ್ತೆಯಾದುದರಲ್ಲಿ ಹಳೆಯ "ಸಂರಕ್ಷಿತ ಶವ"ವೆಂದರೆ ಸರಿಸುಮಾರು 3300 BCನಷ್ಟು ಹಿಂದಿನ ಈಜಿಪ್ಟ್‌ನ ವ್ಯಕ್ತಿಯದ್ದು. ತನ್ನ ಕೂದಲಿನ ಬಣ್ಣದಿಂದಾಗಿ 'ಜಿಂಜರ್' ಎಂಬ ಅಡ್ಡಹೆಸರಿನಿಂದ ಕರೆಯಲ್ಪಟ್ಟ ಈ ವ್ಯಕ್ತಿ ಇತರೆ ಪ್ರಸಿದ್ಧ ರಕ್ಷಿತ ಶವ/ಮಮ್ಮಿಗಳಾದ ರಾಮೆಸೆಸ್ II ಅಥವಾ ಸೆಟಿ Iಗಳಿಗಿಂತ ಹಳೆಯದಾದರೂ ಅವುಗಳಂತೆ ಅಂತರರಾಷ್ಟ್ರೀಯವಾಗಿ ಪ್ರಸಿದ್ಧಿ ಹೊಂದಿಲ್ಲ. ಪ್ರಸ್ತುತ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿತವಾಗುತ್ತಿರುವ, ಜಿಂಜರ್‌ಅನ್ನು ಕಾವಿನಿಂದ ಕೂಡಿದ್ದ ಮರುಭೂಮಿಯ ಮರಳಿನಲ್ಲಿ ಹೂತಿಡಲಾಗಿತ್ತು. ಮರುಭೂಮಿಯ ಪರಿಸ್ಥಿತಿಗಳು ನೈಸರ್ಗಿಕವಾಗಿಯೇ ದೇಹಗಳನ್ನು ಸಂರಕ್ಷಿತಗೊಳಿಸಬಹುದಾದ ಕಾರಣ ಇದು ಉದ್ದೇಶಪೂರ್ವಕ ಸಂರಕ್ಷಿತವಾದದ್ದೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಜಿಂಜರ್‌ನನ್ನು ಮಡಕೆಯ ಪಾತ್ರೆಗಳ ಸಮೇತ ಹೂತಿದ್ದ ಕಾರಣ ಆತನನ್ನು ಹೂತಿದ್ದವರು ಕೈಗೊಂಡ ಸಂರಕ್ಷಣಾ ಕ್ರಮಗಳಿಂದಾಗಿ ಅದು ಸಂರಕ್ಷಿತ ಶವವಾಗಿರುವ ಸಾಧ್ಯತೆ ಇದೆ. ನರಿಗಳು ಹಾಗೂ ಇನ್ನಿತರ ಕೊಳೆತ ಶವಗಳನ್ನು ತಿನ್ನುವಂತ ಪ್ರಾಣಿಗಳಿಂದ ರಕ್ಷಿಸಲು ಕಲ್ಲುಗಳನ್ನು ಪೇರಿಸಿಟ್ಟಿರಬಹುದು ಹಾಗೂ ಅವರ ನಂಬಿಕೆಯ ಪ್ರಕಾರ ಸತ್ತವರು ಬೇರೊಂದು ಲೋಕಕ್ಕೆ ಹೋಗುವವರೆಗೆ ಬೇಕಾಗಬಹುದಾದ ಆಹಾರ ಹಾಗೂ ಪೇಯಗಳನ್ನು ತುಂಬಿ ಮಡಕೆಪಾತ್ರೆಗಳನ್ನು ಇಟ್ಟಿರಬಹುದಾದ ಸಾಧ್ಯತೆ ಇದೆ.
ಅಸಾಧಾರಣ ಪರಿಸ್ಥಿತಿಗಳ ಮೂಲಕ ನೈಸರ್ಗಿಕವಾಗಿ ಹಾಗೂ ಸತ್ತವರನ್ನು ಕಾಪಿಡುವ ಸಂಸ್ಕೃತಿಗಳ ಪರಿಣಾಮವಾಗಿ ಮನುಷ್ಯರು ಹಾಗೂ ಪ್ರಾಣಿಗಳ ರಕ್ಷಿತ ಶವ/ಮಮ್ಮಿಗಳು ವಿಶ್ವದಾದ್ಯಂತ ಕಂಡುಬಂದಿವೆ. 1 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪ್ರಾಣಿಗಳ ರಕ್ಷಿತ ಶವ/ಮಮ್ಮಿಗಳು ಈಜಿಪ್ಟ್‌ನಲ್ಲಿ ಕಂಡುಬಂದಿದ್ದು ಅವುಗಳಲ್ಲಿ ಅನೇಕವು ಬೆಕ್ಕುಗಳಾಗಿವೆ. ಅವುಗಳನ್ನು ಹೂತಿಡಲು ಹಾಗೂ ಇನ್ನಿತರ ಕಾರ್ಯಗಳನ್ನು ಪೂರೈಸಲು 70 ದಿನಗಳು ಬೇಕಾಗುತ್ತವೆ.[೨]
ವ್ಯುತ್ಪತ್ತಿ ಶಾಸ್ತ್ರ
[ಬದಲಾಯಿಸಿ]
| |||
Mummy (sˁḥ) in hieroglyphs |
---|
ಮಮ್ಮಿ ಎಂಬ ಆಂಗ್ಲ ಪದವು ಮಧ್ಯಯುಗದ "ಶಿಲಾರಾಳ" ಎಂಬರ್ಥ ಬರುವ ಪರ್ಷಿಯನ್ ಪದ ಮಮ್ (موم)ನಿಂದ ಎರವಲಾದ ಲ್ಯಾಟಿನ್ ಪದ ಮಮಿಯಾ ದಿಂದ ವ್ಯುತ್ಪನ್ನವಾಗಿದೆ. ಕಪ್ಪಾದ ಚರ್ಮದಿಂದಾಗಿ ಪ್ರಾಚೀನ ಈಜಿಪ್ಟ್‌ನ ಶವಸಂರಕ್ಷಣಾ ಪ್ರಕ್ರಿಯೆಗಳಲ್ಲಿ ಶಿಲಾರಾಳದ ವ್ಯಾಪಕ ಬಳಕೆಯಿರಬಹುದೆಂದು ಒಮ್ಮೆ ಅಂದಾಜಿಸಲಾಗಿತ್ತು.
ಶವಸಂರಕ್ಷಣಾ ಪ್ರಕ್ರಿಯೆ
[ಬದಲಾಯಿಸಿ]ಮಧ್ಯಕಾಲೀನ ಸಾಮ್ರಾಜ್ಯದವರೆಗೆ ಶವಸಂರಕ್ಷಕರು ದೇಹದ ತೇವಾಂಶ ನಿವಾರಿಸಲು ಉಪ್ಪನ್ನು ಬಳಸುತ್ತಿರಲಿಲ್ಲ. ನೇಟ್ರನ್ ಎಂಬ ಉಪ್ಪಿನ ತರಹದ ವಸ್ತು ದೇಹವನ್ನು ಒಣಗಿಸಿ ಮೂಳೆಗಳಿಗಿಂತ ಮಾಂಸವನ್ನೂ ರಕ್ಷಿಸುತ್ತಿತ್ತು. ಒಮ್ಮೆ ಒಣಗಿದ ನಂತರ ರಕ್ಷಿತ ಶವ/ಮಮ್ಮಿಗಳಿಗೆ ಶಾಸ್ತ್ರೀಯವಾಗಿ ತೈಲ ಹಾಗೂ ಸುಗಂಧಗಳನ್ನು ಲೇಪಿಸಲಾಗುತ್ತಿತ್ತು. 21ನೇ ರಾಜವಂಶವು ಶವಸಂರಕ್ಷಣೆಯಲ್ಲಿ ಅತ್ಯಂತ ಮುಂದುವರಿದ ಪರಿಣತಿಯನ್ನು ಹೊಂದಿದ್ದು ಆ ಕಾಲದಲ್ಲಿ ಶವಸಂರಕ್ಷಣಾ ಪ್ರಕ್ರಿಯೆ ತನ್ನ ಉತ್ತುಂಗವನ್ನು ಮುಟ್ಟಿತ್ತು. ದೇಹದ ಹೊಟ್ಟೆಯನ್ನು ತೆರೆದು ಹೃದಯವನ್ನು ಬಿಟ್ಟು ಇನ್ನೆಲ್ಲಾ ಅಂಗಗಳನ್ನು ಹೊರತೆಗೆದು ಅಂತ್ರಪಾತ್ರೆಗಳಲ್ಲಿ ರಕ್ಷಿಸಿಡಲಾಗುತ್ತಿತ್ತು. ಪಾತ್ರೆಗಳ ಮೇಲೆ ನಾಲ್ಕು ದೇವರುಗಳ ಶಿರಗಳಿದ್ದು ಅವರು ಒಳಗಿರುವ ಅಂಗಗಳನ್ನು ನೋಡಿಕೊಳ್ಳುತ್ತಿದ್ದರು. ಅಪ್ರಯೋಜಕವೆಂದು ಭಾವಿಸಿದ್ದ ಮೆದುಳನ್ನು ಪುಡಿಪುಡಿ ಮಾಡಿ ಮೂಗಿನ ಮೂಲಕ ಕೊಕ್ಕೆಗಳ ಸಹಾಯದಿಂದ ಹೊರತೆಗೆದು ಎಸೆಯಲಾಗುತ್ತಿತ್ತು. ಅದೇ ಕೊಕ್ಕೆಗಳ ಮೂಲಕವೇ ದ್ರವೀಕೃತಗೊಳಿಸಿ ಮೂಗಿನ ಮೂಲಕ ಹರಿಯುವ ಹಾಗೆ ಮಾಡಲಾಗುತ್ತಿತ್ತು.
ಕೊಳೆತುಹೋಗದಂತೆ ಹಾಗೂ ನಿರ್ಜಲೀಕರಣ ಪ್ರಕ್ರಿಯೆಯನ್ನು ಚುರುಕಾಗಿಸಲು ಹೀಗೆ ಬರಿದು ಮಾಡಿದ ದೇಹವನ್ನು ನೇಟ್ರನ್‌ನಿಂದ ಆವೃತಗೊಳಿಸಲಾಗುತ್ತಿತ್ತು. ನೇಟ್ರನ್ ದೇಹವನ್ನು ಮರಳುಗಾಡಿನ ಮರಳಿಗಿಂತಲೂ ವೇಗವಾಗಿ ಒಣಗಿಸಿ ದೇಹವನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸುತ್ತದೆ. ಅನೇಕವೇಳೆ ಬೆರಳು ಹಾಗೂ ಕಾಲ್ಬೆರಳು ರಕ್ಷಕಗಳನ್ನು ರಕ್ಷಿತ ಶವ/ಮಮ್ಮಿ'ಯ ಬೆರಳುಗಳು ಹಾಗೂ ಕಾಲ್ವೆರಳುಗಳು ಮುರಿದುಹೋಗದಂತೆ ಅಳವಡಿಸಲಾಗುತ್ತಿತ್ತು. ದೇಹಕ್ಕೆ ಧಕ್ಕೆಯಾಗದಂತೆ ಕಾಪಿಡುವ ಶ್ವೇತವರ್ಣದ ನಾರುಬಟ್ಟೆಯ ಪಟ್ಟಿಗಳಲ್ಲಿ ಅವುಗಳನ್ನು ಸುತ್ತಿಡಲಾಗುತ್ತಿತ್ತು. ನಂತರ ಮತ್ತೂ ರಕ್ಷಣೆ ನೀಡುವಂತೆ ಅವುಗಳನ್ನು ಅಸ್ತರಿಬಟ್ಟೆಯ ಹಾಳೆಯಲ್ಲಿ ಸುತ್ತಿಡಲಾಗುತ್ತಿತ್ತು. ಅನೇಕ ಪವಿತ್ರ ಯಂತ್ರ ಹಾಗೂ ತಾಯತಗಳನ್ನು ರಕ್ಷಿತ ಶವ/ಮಮ್ಮಿ ಹಾಗೂ ಸುತ್ತುವರಿಕೆಗಳಲ್ಲಿ ಹಾಗೂ ಸುತ್ತಮುತ್ತಾ ಇಡಲಾಗುತ್ತಿತ್ತು. ಇವುಗಳನ್ನು ರಕ್ಷಿತ ಶವ/ಮಮ್ಮಿಗೆ ತೊಂದರೆಯಾಗದಂತಿರಲು ಹಾಗೂ ರಕ್ಷಿತ ಶವ/ಮಮ್ಮಿಯ ಕಾ/Kaರವರಿಗೆ ಅದೃಷ್ಟ ತರಲು ಮಾಡಲಾಗುತ್ತಿತ್ತು. ಸಂರಕ್ಷಿತಗೊಂಡ ನಂತರ, ರಕ್ಷಿತ ಶವ/ಮಮ್ಮಿಗಳನ್ನು ಸಮಾಧಿಯೊಳಗಿನ ರಕ್ಷಿತ ಶವ/ಮಮ್ಮಿಯು ಶಾಶ್ವತವಾಗಿ ವಿಶ್ರಾಂತಿ ಪಡೆಯುವ ಸ್ಥಳವೆಂಬ ನಂಬಿಕೆಯ ಶಿಲಾಶವಸಂಪುಟದಲ್ಲಿಡಲಾಗುತ್ತಿತ್ತು. ಪುನರುಜ್ಜೀವಿತ ರಕ್ಷಿತ ಶವ/ಮಮ್ಮಿಗಳ ದಂತಕಥೆಗಳಿಗೆ ಇಂಬು ನೀಡಿದ ಕೆಲ ಸಂದರ್ಭಗಳಲ್ಲಿ ಉಸಿರಾಟವನ್ನು ಪ್ರತಿನಿಧಿಸುವ ಶಾಸ್ತ್ರದ ಅಂಗವಾಗಿ ರಕ್ಷಿತ ಶವ/ಮಮ್ಮಿ'ಯ ಬಾಯಿಯನ್ನು ತೆರೆದಿಡಲಾಗುತ್ತಿತ್ತು.[೩]
ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಗಳ ವೈಜ್ಞಾನಿಕ ಅಧ್ಯಯನ
[ಬದಲಾಯಿಸಿ]19ನೇ ಶತಮಾನದಲ್ಲಿ ಹಾಗೂ 20ನೇ ಶತಮಾನದ ಆದಿಯಲ್ಲಿ ವಿಶ್ವದಾದ್ಯಂತದ ವಸ್ತುಸಂಗ್ರಹಾಲಯಗಳಲ್ಲಿ ರಕ್ಷಿತ ಶವ/ಮಮ್ಮಿಗಳಿಗೆ ಬಹಳಷ್ಟು ಬೇಡಿಕೆ ಇತ್ತು, ಅವುಗಳಲ್ಲಿ ಕೆಲವು ಪ್ರಸ್ತುತ ರಕ್ಷಿತ ಶವ/ಮಮ್ಮಿಗಳನ್ನು ಪ್ರದರ್ಶಿಸುತ್ತಿವೆ. ಗಮನಾರ್ಹ ಉದಾಹರಣೆಗಳನ್ನು ಕೈರೋದಲ್ಲಿನ ಈಜಿಪ್ಟ್‌ನ ವಸ್ತುಸಂಗ್ರಹಾಲಯ, ಬರ್ಲಿನ್‌ನ ಅಜಿಪ್ಟಿಷಸ್ ವಸ್ತುಸಂಗ್ರಹಾಲಯ ಹಾಗೂ ಲಂಡನ್‌ನ ಬ್ರಿಟಿಷ್ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈಜಿಪ್ಟ್‌ನ ಲಕ್ಸಾರ್ ನಗರವು ಶವಸಂರಕ್ಷಣಾ ವಿಶೇಷ ವಸ್ತುಸಂಗ್ರಹಾಲಯದ ಕೇಂದ್ರ ಕೂಡಾ ಆಗಿದೆ. ರಾಮೆಸೆಸ್ Iರದ್ದು ಎನ್ನಲಾದ ಸಂರಕ್ಷಿತ ಶವದ ಅವಶೇಷಗಳು ಯುನೈಟೆಡ್ ಸ್ಟೇಟ್ಸ್ –ಕೆನಡಾ ಗಡಿಯಲ್ಲಿನ ನಯಾಗರ ಜಲಪಾತದ ಬಳಿಯ ಡೇರ್‌ಡೆವಿಲ್ ವಸ್ತುಸಂಗ್ರಹಾಲಯದಲ್ಲಿದ್ದವು ; ದಾಖಲೆಗಳ ಪ್ರಕಾರ ಅದನ್ನು 1860ರಲ್ಲಿ ಕೆನಡಾದ ವ್ಯಕ್ತಿಗೆ ಮಾರಲಾಗಿತ್ತು ಹಾಗೂ ಇತರ ಕಲಾವಸ್ತುಗಳೊಂದಿಗೆ ರಕ್ಷಿತ ಶವ/ಮಮ್ಮಿಯನ್ನು ಸ್ವಾಧೀನಪಡಿಸಿಕೊಂಡ ಜಾರ್ಜಿಯಾದ ಅಟ್ಲಾಂಟಾದಲ್ಲಿನ ವಸ್ತುಸಂಗ್ರಹಾಲಯವು, ಇದು ರಾಜವಂಶದ್ದೆಂದು ನಿರ್ಧರಿಸಿ, ಈಜಿಪ್ಟ್'ನ ಪ್ರಾಚೀನ ವಸ್ತುಗಳ ಪ್ರಧಾನ ಸಮಿತಿಗೆ ಮರಳಿಸುವವರೆಗೆ ಬಹುಮಟ್ಟಿಗೆ 140 ವರ್ಷಗಳ ಕಾಲ ಎರಡು-ತಲೆಗಳ ಆಕಳಿನಂತಹಾ ಪ್ರದರ್ಶನಗಳ ಜೊತೆಗೆ ಪ್ರದರ್ಶಿಸಲಾಗುತ್ತಿತ್ತು ಎಂಬುದನ್ನು ಸೂಚಿಸುತ್ತವೆ. ಇದು ಪ್ರಸ್ತುತ ಲಕ್ಸಾರ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿತವಾಗುತ್ತಿದೆ.
ತೀರ ಇತ್ತೀಚೆಗೆ ವಿಜ್ಞಾನವು ಕೂಡಾ ರಕ್ಷಿತ ಶವ/ಮಮ್ಮಿಗಳಲ್ಲಿ ಆಸಕ್ತಿಯನ್ನು ತೋರಿಸಿದೆ. ಈಜಿಪ್ಟ್ ಶಾಸ್ತ್ರಜ್ಞರಾದ Dr. ಬಾಬ್ ಬ್ರೀಯರ್‌ರು, ಪ್ರಾಚೀನ ಈಜಿಪ್ಟ್ ವಿಧಾನದಲ್ಲಿ ರಕ್ಷಿತ ಶವ/ಮಮ್ಮಿಯನ್ನು ಮರುನಿರ್ಮಿಸಲು ಪ್ರಯತ್ನಿಸಿದ ಪ್ರಥಮ ಆಧುನಿಕ ವಿಜ್ಞಾನಿಯಾಗಿದ್ದಾರೆ. ವೈದ್ಯಕೀಯವಾಗಿ CAT ಶೋಧಕ ಯಂತ್ರಗಳ ಜೀವಿತ ವ್ಯಕ್ತಿಗಳಿಗೆ ವಿಪರೀತ ಅಪಾಯಕಾರಿಯಾಗಬಹುದಾದ ವಿಕಿರಣ ಮಟ್ಟದ ಮಾಪನಾಂಕ ನಿರ್ಣಯದಲ್ಲಿ ರಕ್ಷಿತ ಶವ/ಮಮ್ಮಿಗಳನ್ನು ಬಳಸಲಾಗುತ್ತಿದೆ. ವಸ್ತುತಃ ರಕ್ಷಿತ ಶವ/ಮಮ್ಮಿಗಳ ಆಚ್ಛಾದನೆಯನ್ನು ಹೊರತೆಗೆಯದೇ CAT ಶೋಧಕ ಹಾಗೂ X-ರೇ ಯಂತ್ರಗಳ ಮೂಲಕ ಅವುಗಳ ಒಳಗಿರುವುದರ ಸಾಂಖ್ಯಿಕ ಬಿಂಬವನ್ನು ಮೂಡಿಸಿ ಅವುಗಳ ಅಧ್ಯಯನವನ್ನು ಕೈಗೊಳ್ಳಬಹುದಾಗಿದೆ. ಪ್ರಾಚೀನ ಜನರ ಆರೋಗ್ಯ ಹಾಗೂ ಅವರ ಜೀವಿತ ಅವಧಿಯ ಬಗ್ಗೆ ಸಮೃದ್ಧ ಮಾಹಿತಿಯನ್ನು ನೀಡಿದ್ದರಿಂದ ಜೀವವಿಜ್ಞಾನಿಗಳು ಹಾಗೂ ಮಾನವಶಾಸ್ತ್ರಜ್ಞರಿಗೆ ಅವು ಬಹಳಷ್ಟು ಉಪಯುಕ್ತವಾಗಿವೆ. 2008ರಲ್ಲಿ, CT ಶೋಧಕಗಳ ಇತ್ತೀಚಿನ ಮಾದರಿಗಳನ್ನು ಬಳಸಿ (ಷಿಕಾಗೋ ವಿಶ್ವವಿದ್ಯಾಲಯದ 64- ಹಾಗೂ 256-ಸ್ಲೈಸ್ ಫಿಲಿಪ್ಸ್ ಶೋಧಕ) ಪ್ರಸ್ತುತ ಷಿಕಾಗೋದ ಓರಿಯೆಂಟಲ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಅಮುನ್ ದೇವಾಲಯದ ಓರ್ವ ದೇವಾಲಯ ಗಾಯಕಿ ಹಾಗೂ ಅರ್ಚಕಿ ಮೆರೆಸಾಮುನ್‌ಳ, ರಕ್ಷಿತ ಶವ/ಮಮ್ಮಿಯನ್ನು ಅಧ್ಯಯನ ಮಾಡಲು ಬಳಸಿದರು.
ರಕ್ಷಿತ ಶವ/ಮಮ್ಮಿಗಳ DNAಯ ಅಣುವಾರು ತದ್ರೂಪಿನ ಬಗ್ಗೆ ಆಸಕ್ತ ವಿಜ್ಞಾನಿಗಳು ಸುಮಾರು 400 BC ಕಾಲದ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಯಲ್ಲಿ ವಿಶ್ಲೇಷಣೆಗೊಳಿಸಬಹುದಾದ DNAಯು ಪತ್ತೆಯಾಗಿರುವುದಾಗಿ ವರದಿ ಮಾಡಿದ್ದಾರೆ.[೪] ಮಧ್ಯಯುಗೀಯ ಸಾಮ್ರಾಜ್ಯದ ಅಂತಿಮ ಅವಧಿಯ ಪ್ರಾಚೀನ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಗಳ ಕೂದಲಿನ ವಿಶ್ಲೇಷಣೆಯು ನಿಯತ ಆಹಾರಪದ್ಧತಿಯ ಸುಳಿವನ್ನು ನೀಡಿದರೂ,[೫] ಸುಮಾರು 3200 BC ಅವಧಿಯ ಪ್ರಾಚೀನ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಗಳು ತೀವ್ರ ರಕ್ತಹೀನತೆಯ ಹಾಗೂ ರಕ್ತವ್ಯಾಧಿಗಳ ಲಕ್ಷಣಗಳನ್ನು ವ್ಯಕ್ತಗೊಳಿಸಿದ್ದವು.[೬]
ನೈಸರ್ಗಿಕ ರಕ್ಷಿತ ಶವ/ಮಮ್ಮಿಗಳು
[ಬದಲಾಯಿಸಿ]ಶೀತದ ವೈಪರೀತ್ಯ (ನೀರ್ಗಲ್ಲ ಮನುಷ್ಯ ಓಟ್ಜಿ , ನೀರ್ಗಲ್ಲ ಕನ್ಯೆ), ಆಮ್ಲತೆ (ಟಾಲ್ಲಂಡ್ ಮನುಷ್ಯ), ಉಪ್ಪಿನಂಶ (ಉಪ್ಪು ಮನುಷ್ಯ), ಅಥವಾ ಇಂಗಿಸುವ ಶುಷ್ಕತೆ (ಟಾರಿಮ್ ರಕ್ಷಿತ ಶವ/ಮಮ್ಮಿಗಳು)ಯಂತಹಾ ನೈಸರ್ಗಿಕವಾಗಿ-ಸಂಭವಿಸುವ ಪರಿಸರಗಳ ಪರಿಣಾಮವಾಗಿ ನಿರ್ಮಿತವಾದ ರಕ್ಷಿತ ಶವ/ಮಮ್ಮಿಗಳನ್ನು ವಿಶ್ವದ ಎಲ್ಲೆಡೆ ಪತ್ತೆಯಾಗಿವೆ. ವೈಡೆ ಬಾಲಕಿ ಹಾಗೂ ಲಿಂಡೋ ಮನುಷ್ಯನಂತಹಾ ಹೂತ ದೇಹಗಳೆಂದು ಕರೆಯಲಾದ ಸಾವಿರಕ್ಕೂ ಹೆಚ್ಚಿನ ಕಬ್ಬಿಣ ಯುಗದ ಶವಗಳನ್ನು ಉತ್ತರ ಯೂರೋಪ್‌ನ ಹೂಳು ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ.[೭] ಇತರೆ ಪ್ರಾಣಿ ಸಂಕುಲಗಳ ನೈಸರ್ಗಿಕ ಶವಸಂರಕ್ಷಣೆಯು ಕೂಡಾ ಆಗುತ್ತದೆ; ಆಳವಿಲ್ಲದ ಉಪ್ಪುನೀರಿನ ಪರಿಸರದ ತಳಿಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಈ ರೀತಿಯ ಪ್ರಕ್ರಿಯೆಗೆ ಪೂರಕವಾಗಿರುವ ದೇಹರಚನೆಯನ್ನು ಹೊಂದಿರುವ ಸಮುದ್ರಕುದುರೆ ಹಾಗೂ ನಕ್ಷತ್ರಮೀನುಗಳಂತಹಾ ತಳಿಗಳಲ್ಲಿ ಇದು ಹೆಚ್ಚು ಸಂಭವನೀಯವಾಗಿರುತ್ತವೆ. ಅಮೇರಿಕಾದಲ್ಲಿನ ಲಿಯೊನಾರ್ಡೋ, ಡಕೋಟಾ, ಹಾಗೂ ಟ್ರಾಕೋಡಾನ್ ಡೈನೋಸಾರ್‌ಗಳ ರಕ್ಷಿತ ಶವ/ಮಮ್ಮಿಯಂತಹಾ ಹಳೆಯ ರಕ್ಷಿತ ಶವ/ಮಮ್ಮಿಗಳು ಬಹುಮೌಲ್ಯದ ಶೋಧನೆಗಳು.
ಯುರೋಪ್
[ಬದಲಾಯಿಸಿ]ಇಟಲಿ
[ಬದಲಾಯಿಸಿ]ನೈಸರ್ಗಿಕ ಶವಸಂರಕ್ಷಣೆಯು ನಿರ್ದಿಷ್ಟ ಪರಿಸರದ ಬೇಡಿಕೆ ಹೊಂದಿದ್ದು ಅಪರೂಪವಾದರೂ, ಈ ಪ್ರಕ್ರಿಯೆ ತಿಳಿದುಬಂದಿರುವ ರಕ್ಷಿತ ಶವ/ಮಮ್ಮಿಗಳಲ್ಲೇ ಪುರಾತನವಾದ ಕೆಲವನ್ನು ನಿರ್ಮಿಸಿದೆ. ಇವುಗಳಲ್ಲಿ ವಿಖ್ಯಾತವಾದ ಪ್ರಾಚೀನ ರಕ್ಷಿತ ಶವ/ಮಮ್ಮಿ ಎಂದರೆ ಸುಮಾರು 3300 BCಯ ಅವಧಿಯಲ್ಲಿ ಓಟ್ಜ್‌ಟಲ್ ಆಲ್ಪ್ಸ್ಪ್ರದೇಶದ ಹಿಮನದಿಯಲ್ಲಿ ಘನೀಭವಿಸಿದ ಹಾಗೂ 1991ರಲ್ಲಿ ಪತ್ತೆಯಾದ ನೀರ್ಗಲ್ಲ ಮನುಷ್ಯ ಓಟ್ಜಿ. 1805ರಲ್ಲಿ [೧] ಉಂಬ್ರಿಯಾ ಪ್ರದೇಶದ ಫೆರೆಂಟಿಲ್ಲೋನಲ್ಲಿ ಕೂಡಾ ರಕ್ಷಿತ ಶವ/ಮಮ್ಮಿಗಳು ಪತ್ತೆಯಾದವು. ಅತಿ ಹೆಚ್ಚು ಪ್ರಾಚೀನವೆಂದರೆ ನಾಲ್ಕು ಶತಮಾನಗಳಷ್ಟು ಹಿಂದಿನದ್ದು ಹಾಗೂ ಇತ್ತೀಚಿನದ್ದು 19ನೇ ಶತಮಾನದವೂ ಸೇರಿದಂತೆ ಇಪ್ಪತ್ತು ನೈಸರ್ಗಿಕ ರಕ್ಷಿತ ಶವ/ಮಮ್ಮಿಗಳಿವೆ.
ಹೂಳುಪ್ರದೇಶದ ದೇಹಗಳು
[ಬದಲಾಯಿಸಿ]ಯುನೈಟೆಡ್ ಕಿಂಗ್‌ಡಂ, ಐರ್‌ಲೆಂಡ್ ಗಣರಾಜ್ಯ, ಜರ್ಮನಿ, ನೆದರ್‌ಲೆಂಡ್ಸ್, ಸ್ವೀಡನ್, ಹಾಗೂ ಡೆನ್‌ಮಾರ್ಕ್‌ಗಳು ಸ್ಫಾಗ್ನಂ ಹೂಳು ಪ್ರದೇಶಗಳಲ್ಲಿ ಸಂಚಯಿಸಿದ್ದ ಸ್ಪಷ್ಟವಾಗಿ ಕೊಲೆಗಳ ಅಥವಾ ಧಾರ್ಮಿಕ ಆಚರಣೆಯ ಪರಿಣಾಮವಾಗಿ ಮರಣಿಸಿದ ಜನರ ರಕ್ಷಿತ ಶವ/ಮಮ್ಮಿಗಳ ಅನೇಕ ಹೂಳುಪ್ರದೇಶದ ದೇಹಗಳನ್ನು ಹೊಂದಿದ್ದವು. ಅಂತಹಾ ಸಂದರ್ಭಗಳಲ್ಲಿ, ನೀರಿನ ಆಮ್ಲತೆ, ಶೈತ್ಯ ಹಾಗೂ ಆಮ್ಲಜನಕದ ಕೊರತೆಗಳು ಸೇರಿ ದೇಹದ ಚರ್ಮ ಹಾಗೂ ಸೂಕ್ಷ್ಮ ಜೀವಕೋಶಗಳನ್ನು ಹದಗೊಳಿಸಿವೆ. ಅಸ್ಥಿಪಂಜರವು ಸಾಧಾರಣವಾಗಿ ಕಾಲಾನುಕ್ರಮದಲ್ಲಿ ವಿಭಜಿತವಾಗುತ್ತದೆ. ಅಂತಹಾ ರಕ್ಷಿತ ಶವ/ಮಮ್ಮಿಗಳು ಚರ್ಮ ಹಾಗೂ ಇತರ ಅಂಗಗಳು ಯಥಾಸ್ಥಿತಿಯಲ್ಲಿದ್ದು ಹೂತೆಡೆಯಿಂದ ಹೊರತೆಗೆದಾಗ ಅಪೂರ್ವವಾಗಿ ಸಂರಕ್ಷಿತವಾಗಿದ್ದವು; ಮರಣಿಸಿದವರ ಕೊನೆಯ ಆಹಾರವನ್ನೂ ಸಹಾ ಜಠರ/ಹೊಟ್ಟೆಯನ್ನು ಪರೀಕ್ಷಿಸಿ ಪತ್ತೆಹಚ್ಚಬಹುದಾಗಿತ್ತು. ಈ ರೀತಿಯ ಪ್ರಸಿದ್ಧ ಸಂಗತಿಯೆಂದರೆ ಹರಾಲ್ಡ್‌ಸ್ಕೆರ್ ಮಹಿಳೆಯದು, ಆಕೆಯ ದೇಹವನ್ನು ಜಟ್‌ಲೆಂಡ್‌ನ ಹೂಳುಪ್ರದೇಶವೊಂದರಲ್ಲಿ ಕೆಲಸಗಾರರು 1835ರಲ್ಲಿ ಪತ್ತೆಹಚ್ಚಿದ್ದರು. ಆಕೆಯನ್ನು ಆದಿ ಮಧ್ಯಯುಗದ ಡ್ಯಾನಿಷ್ ರಾಣಿಯೆಂದು ತಪ್ಪಾಗಿ ಗುರುತಿಸಲಾಗಿತ್ತು, ಅದೇ ಕಾರಣಕ್ಕಾಗಿ ಆಕೆ ಪ್ರಸಕ್ತ ಇಡಲ್ಪಟ್ಟಿರುವ ವೆಜ್ಲೆಯ ಸಂತ ನಿಕೋಲಾಯ್ ಚರ್ಚ್‌ನ, ರಾಜವಂಶೀಯ ಶಿಲಾಶವಸಂಪುಟದಲ್ಲಿ ಇಡಲಾಗಿತ್ತು.
ಗುವಾಂಚಸ್ ರಕ್ಷಿತ ಶವ/ಮಮ್ಮಿಗಳು
[ಬದಲಾಯಿಸಿ]ಕ್ಯಾನರಿ ದ್ವೀಪಗಳ ಆದಿವಾಸಿ ಗುವಾಂಚಸ್‌ಗಳು ಸತ್ತ ತಮ್ಮವರನ್ನು ಸಂರಕ್ಷಿಸಿಡುತ್ತಿದ್ದರು; 6 ಅಥವಾ 7 ಪೌಂಡ್‌ಗಳಿಗಿಂತ ಹೆಚ್ಚು ತೂಕವಿರದ ಅನೇಕ ರಕ್ಷಿತ ಶವ/ಮಮ್ಮಿಗಳನ್ನು ವಿಪರೀತ ಶುಷ್ಕಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು. ಅವರ ಪದ್ಧತಿಯು ಪ್ರಾಚೀನ ಈಜಿಪ್ಟ್ ಜನರ ವಿಧಾನದ ರೀತಿಯೇ ಇತ್ತು. ಸಂರಕ್ಷಣೆಯ ಪ್ರಕ್ರಿಯೆ ವ್ಯತ್ಯಾಸ ಹೊಂದಿರಬಹುದಾಗಿತ್ತು. ಟೆನೆರೈಫ್‌ನಲ್ಲಿ , ಶವವನ್ನು ಮೇಕೆ ಹಾಗೂ ಕುರಿಗಳ ಚರ್ಮದಲ್ಲಿ ಸುತ್ತಿಡಲಾಗುತ್ತಿದ್ದರೆ , ಇತರೆ ದ್ವೀಪಗಳಲ್ಲಿ ಅಂಟಿನಂತಹಾ ವಸ್ತುವನ್ನು ದೇಹವನ್ನು ರಕ್ಷಿಸಲು ಬಳಸುತ್ತಿದ್ದರಲ್ಲದೇ ನಂತರ ಪ್ರವೇಶಿಸಲು ಕಷ್ಟಸಾಧ್ಯವಾದ ಗುಹೆಗಳಲ್ಲಿ ಅಥವಾ ಸಮಾಧಿದಿಣ್ಣೆಗಳಡಿ ಇಡುತ್ತಿದ್ದರು. ಟೆನೆರೈಫ್‌ನ ಅನೇಕ ಪ್ರದೇಶಗಳಲ್ಲಿ ಸಸ್ಯಾಂಶಗಳಿಂದ ಕೂಡ ದೇಹಕ್ಕೆ ಉಪಚಾರ ಮಾಡುತ್ತಿದ್ದರು. ಸಂರಕ್ಷಿಸುವ ಕೆಲಸಗಳನ್ನು ಕೂಡ ವಿಶೇಷ ವರ್ಗಕ್ಕೆ ಮೀಸಲಿಡಲಾಗುತ್ತಿತ್ತು, ಸ್ತ್ರೀ ಶವಗಳಿಗೆ ಮಹಿಳೆಯರನ್ನು, ಪುರುಷಶವಗಳಿಗೆ ಪುರುಷರನ್ನು ನೇಮಿಸಲಾಗುತ್ತಿತ್ತು. ಸಂರಕ್ಷಣೆಯು ಸಾರ್ವತ್ರಿಕವಾದಂತೆ ಇರಲಿಲ್ಲ, ಅನೇಕವೇಳೆ ದೇಹಗಳನ್ನು ಗುಹೆಗಳಲ್ಲಿ ಮುಚ್ಚಿಡುವಿಕೆ ಅಥವಾ ಹೂಳುವಿಕೆಯು ನಡೆಯುತ್ತಿತ್ತು. ಟೆನೆರೈಫ್ ದ್ವೀಪದ ಆದಿವಾಸಿಗಳ ವಿಧಾನವು ಪರಿಪೂರ್ಣವಾಗಿತ್ತು ಏಕೆಂದರೆ ಅವರ ರಕ್ಷಿತ ಶವ/ಮಮ್ಮಿಗಳು ಸ್ಪೇನ್ ಹಾಗೂ ದ್ವೀಪಗಳಲ್ಲಿ ಉತ್ತಮ ರೀತಿಯಲ್ಲಿ ಸಂರಕ್ಷಿತಗೊಂಡಿದ್ದವಲ್ಲದೇ ಜನಪ್ರಿಯವೂ ಆಗಿದ್ದವು. ಮುಸೆಯೋ ಡೆ ಲಾ ನೇಚರಾಲೆಜಾ ವೈ ಎಲ್ ಹೊಂಬ್ರೆ (ಟೆನೆರೈಫ್ )ನಲ್ಲಿ ಸ್ಯಾನ್ ಆಂಡ್ರೆಸ್ ರಕ್ಷಿತ ಶವ/ಮಮ್ಮಿ ಇದ್ದಂತೆ ರಕ್ಷಿತ ಶವ/ಮಮ್ಮಿಗಳಲ್ಲಿಯೇ ಗುವಾಂಚಸ್ ಪ್ರಮುಖವಾಗಿವೆ.
ದಕ್ಷಿಣ ಅಮೇರಿಕಾದಲ್ಲಿ
[ಬದಲಾಯಿಸಿ]ಮಕ್ಕಳನ್ನು ಧಾರ್ಮಿಕ ಆಚರಣೆಯ ಅಂಗವಾಗಿ ಬಲಿಕೊಟ್ಟು ಆಂಡಿಸ್ ಪರ್ವತದ ಶಿಖರಗಳಲ್ಲಿ ಇಡುತ್ತಿದ್ದ ಪೆರು ಹಾಗೂ ಚಿಲಿಗಳಲ್ಲಿನ ಉತ್ತಮವಾದ ರಕ್ಷಿತ ಶವ/ಮಮ್ಮಿಗಳು ಸುಮಾರು 500 ವರ್ಷಗಳ ಹಿಂದಿನ ಇಂಕಾ ಅವಧಿಯವಾಗಿವೆ. ಇದೇ ಪ್ರದೇಶದಲ್ಲಿ ಇದುವರೆಗೆ ಪತ್ತೆ ಹಚ್ಚಲಾದವುಗಳಲ್ಲೇ ಹಳೆಯ ಸಂರಕ್ಷಿತ ದೇಹಗಳನ್ನು ಹೊಂದಿರುವ ಚಿಂಚೊರ್ರೋ ರಕ್ಷಿತ ಶವ/ಮಮ್ಮಿಗಳು ಇವೆ. ಇಲ್ಲಿನ ಶೀತ, ಹಾಗೂ ಒಣ ಹವಾಗುಣವು ಶವಗಳನ್ನು ಒಣಗಿಸುವ ಹಾಗೂ ಯಥಾಸ್ಥಿತಿಯಲ್ಲಿ ಸಂರಕ್ಷಿಸುವ ಸಾಮರ್ಥ್ಯ ಹೊಂದಿದೆ. 1995ರಲ್ಲಿ 1440ರಿಂದ 1450ರ ಅವಧಿಯಲ್ಲಿ ಮರಣಿಸಿದ 11-ರಿಂದ 14-ವರ್ಷ-ವಯಸ್ಸಿನ ಇಂಕಾ ಬಾಲಕಿಯ ಘನೀಭವಿಸಿದ ದೇಹವು ದಕ್ಷಿಣ ಪೆರುವಿನ ಅಂಪಾಟೊ ಪರ್ವತದಲ್ಲಿ ಪತ್ತೆಯಾಯಿತು. "ಜುವಾನಿಟಾ ರಕ್ಷಿತ ಶವ/ಮಮ್ಮಿ " (ಸ್ಪ್ಯಾನಿಷ್ ಭಾಷೆಯಲ್ಲಿ "ಮಾಮಿಯಾ ಜುವಾನಿಟಾ ") ಅಥವಾ "ನೀರ್ಗಲ್ಲ ಕನ್ಯೆ" ಎಂದು ಹೆಸರಾಗಿರುವ ಆಕೆ ಕೆಲ ಪುರಾತತ್ವಶಾಸ್ತ್ರಜ್ಞರ ಪ್ರಕಾರ ಇಂಕಾಗಳ ಪರ್ವತ ದೈವ ಆಪಸ್‌ಗೆ ನೀಡಿದ ಮಾನವ ಬಲಿಯಾಗಿದ್ದಳು. ಚಿಲಿಯಲ್ಲಿ, ಟಿವಾನಕು ಯುಗದ ಉತ್ತಮ ಸ್ಥಿತಿಯಲ್ಲಿರುವ ರಕ್ಷಿತ ಶವ/ಮಮ್ಮಿಯಾದ 'ಮಿಸ್ ಚಿಲಿ' ಇದೆ.[೮] ಆಕೆಯನ್ನು ಪ್ರಸ್ತುತ ಸ್ಯಾನ್ ಪೆಡ್ರೋ ಡೆ ಅಟಕಾಮಾದಲ್ಲಿನ ಗುಸ್ಟಾವೋ ಪೇಜ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ.[೯]
ರಷ್ಯಾದಲ್ಲಿ
[ಬದಲಾಯಿಸಿ]1989ರ ಬೇಸಿಗೆಯಲ್ಲಿ, Dr. ನಟಾಲಿಯಾ ಪೊಲೊಸ್ಮಕ್ ನೇತೃತ್ವದ ರಷ್ಯಾದ ಪುರಾತತ್ವಶಾಸ್ತ್ರಜ್ಞರ ತಂಡ ಮಂಗೋಲಿಯಾದ ಗಡಿಪ್ರದೇಶದ ಸನಿಹವಿರುವ ಆಲ್ಟೆ ಪರ್ವತಗಳಲ್ಲಿನ ಪಾಂಟಿಕ್-ಕ್ಯಾಸ್ಪಿಯನ್ ಹುಲ್ಲುಗಾವಲು ಪ್ರದೇಶದ ಸ್ವರ್ಗದ ಹುಲ್ಲುಗಾವಲು/ಪೇಸ್ಚರ್ಸ್ ಆಫ್ ಹೆವನ್ ಎಂದು ಹೆಸರಾದ ಪವಿತ್ರ ಪ್ರದೇಶದಲ್ಲಿ ಸೈಬೀರಿಯಾದ ನೀರ್ಗಲ್ಲ ಕನ್ಯೆಯನ್ನು ಪತ್ತೆಹಚ್ಚಿದರು. ಆಕೆಯ ಕೊನೆಯ ಪ್ರಯಾಣಕ್ಕೆ ಸಾಂಕೇತಿಕ ಆಹಾರ ಹಾಗೂ ಆರು ಅಲಂಕೃತ ಕುದುರೆಗಳೊಂದಿಗೆ ಸಂರಕ್ಷಿತಗೊಂಡು ನಂತರ ಅಸಾಧಾರಣ ವಾತಾವರಣದ ಕಾರಣ ಐದನೇ ಶತಮಾನ B.C.ಯಲ್ಲಿ ಘನೀಭವಿಸಿದ ಆಕೆಯು, ನಾಶಗೊಂಡ ಪೇಜಿರಿಕ್ ಸಂಸ್ಕೃತಿಯ ಷಮನ್ ಆಗಿದ್ದಿರಬಹುದೆಂದು ನಂಬಲಾಗಿದೆ. ಆಕೆಯ ದೇಹವನ್ನು ಕಾಲ್ಪನಿಕ ಪ್ರಾಣಿಗಳ ಚಿತ್ರದ ಎದ್ದುಕಾಣುವ ನೀಲಿ ಹಚ್ಚೆಗಳಿಂದ ಆವರಿಸಲಾಗಿತ್ತು. ಉತ್ತಮ ಸಂರಕ್ಷಿತ ಹಚ್ಚೆಗಳೆಂದರೆ ಕತ್ತೆ, ಪರ್ವತದ ಟಗರು, ವಿಪರೀತ ಶೈಲೀಕೃತಗೊಂಡ ಉದ್ದನೆಯ ಕವಲ್ಗೊಂಬುಗಳ ಎರಡು ಜಿಂಕೆಗಳು ಹಾಗೂ ಬಲ ತೋಳಿನ ಮೇಲಿದ್ದ ಕಾಲ್ಪನಿಕ ಮಾಂಸಾಹಾರಿ ಸಸ್ತನಿಗಳವು. ಎದೆಯ ಮೇಲಿನ ಗೃಧ್ರಸಿಂಹವನ್ನು ಹೋಲುವ ಇಬ್ಬರು ರಾಕ್ಷಸರ ಹಚ್ಚೆಗಳು ಹಾಗೂ ಎಡತೋಳಿನ ಮೇಲೆ ಎರಡು ಜಿಂಕೆ ಹಾಗೂ ಪರ್ವತಮೇಕೆಗಳನ್ನು ಸೂಚಿಸುವಂತಿರುವ ಭಾಗಶಃ ಅಳಿಸಿಹೋದ ಮೂರು ಚಿತ್ರಗಳನ್ನು ಹೊಂದಿದ್ದ ("ಕೊನನ್" ಎಂಬ ಅಡ್ಡಹೆಸರಿಡಲಾದ) ಓರ್ವ ಪುರುಷನನ್ನೂ ಆಕೆಯೊಂದಿಗೆ ಪತ್ತೆಹಚ್ಚಿದ್ದರು. ನೀರ್ಗಲ್ಲಿನಿಂದ ಹೊರತೆಗೆದ ನಂತರ ಸರಿಯಾದ ಉಪಚಾರ ಮಾಡದ ಕಾರಣ ಆದ ದೇಹದ ತ್ವರಿತ ಕೊಳೆತ ಹಾಗೂ ಸೋವಿಯತ್ ಒಕ್ಕೂಟದ ಒಡೆಯುವಿಕೆಯ ನಂತರ ಅಲ್ಟಾಯ್ ಗಣರಾಜ್ಯವು ನೀರ್ಗಲ್ಲ ಕನ್ಯೆಯೂ ಸೇರಿದಂತೆ ಅನೇಕ "ಕಳುವಾದ" ಪ್ರಾಕ್ತನ ಕೃತಿಗಳ ಮರಳಿಕೆಗೆ ಆಗ್ರಹಿಸಿದ ಕಾರಣ ಪ್ರಸ್ತುತ ಸೈಬೀರಿಯಾದ ನೋವೋಸಿಬಿರ್ಸ್ಕ್ನಲ್ಲಿ ಕಾಪಿಡಲಾಗಿರುವ ನೀರ್ಗಲ್ಲ ಕನ್ಯೆಯು ವಿವಾದಗಳ ಮೂಲವಾಗಿದ್ದಳು.[೧೦][೧೧]
ಉತ್ತರ ಅಮೇರಿಕಾದಲ್ಲಿ
[ಬದಲಾಯಿಸಿ]1972ರಲ್ಲಿ, ಗ್ರೀನ್‌ಲೆಂಡ್‌ನ ಕ್ವಿಲಾಕಿಟ್ಸೊಕ್ ಎಂಬಲ್ಲಿನ ಎಸ್ಕಿಮೋಗಳ ತ್ಯಜಿಸಿದ ವಸತಿಪ್ರದೇಶದಲ್ಲಿ ಉತ್ತಮ ಸ್ಥಿತಿಯಲ್ಲಿ ಎಂಟು ಸಂರಕ್ಷಿತ ಶವ/ಮಮ್ಮಿಗಳು ಪತ್ತೆಯಾದವು. "ಗ್ರೀನ್‌ಲೆಂಡ್‌ನ ರಕ್ಷಿತ ಶವ/ಮಮ್ಮಿಗಳು" ಸುಮಾರು 500 ವರ್ಷಗಳ ಹಿಂದೆ ಮರಣಿಸಿದ ಆರು ತಿಂಗಳ ಶಿಶು, ನಾಲ್ಕು ವರ್ಷದ ಹುಡುಗ, ಹಾಗೂ ವಿವಿಧ ವಯೋಮಾನದ ಆರು ಮಹಿಳೆಯರದಾಗಿದ್ದವು. ಅವುಗಳು ಪತ್ತೆಯಾದ ಗುಹೆಯಲ್ಲಿನ ಸೊನ್ನೆಗಿಂತ ಕೆಳಗಿನ ತಾಪಮಾನ ಹಾಗೂ ಒಣ ಗಾಳಿಯ ಕಾರಣ ಅವರ ದೇಹಗಳು ನೈಸರ್ಗಿಕವಾಗಿಯೇ ಸಂರಕ್ಷಿತವಾಗಿದ್ದವು.[೧೨][೧೩] ಉತ್ತರ ಅಮೇರಿಕಾದ ಪ್ರಾಚೀನ ರಕ್ಷಿತ ಶವ/ಮಮ್ಮಿ ಎಂದರೆ ಕ್ವಾಡೆ ಡನ್ ಟ್ಸಿಂಚಿ (ಷಾಂಪೇನ್ ಹಾಗೂ ಐಷಿಹಿಕ್ ಫಸ್ಟ್ ನೇಷನ್ಸ್ ಜನರ ದಕ್ಷಿಣದ ಟಟ್ಚೋನ್ ಭಾಷೆಯಲ್ಲಿ "ಪ್ರಾಚೀನ ಕಾಲದ ವ್ಯಕ್ತಿ ಪತ್ತೆಯಾದ"), ಎಂಬ ಆಗಸ್ಟ್ 1999ರಲ್ಲಿ ಮೂವರು ಫಸ್ಟ್ ನೇಷನ್ಸ್ ಬೇಟೆಗಾರರು ಟಾಟ್ಷೆನ್‌ಷಿನಿ-ಅಲ್‌ಸೆಕ್ ಉದ್ಯಾನವಲಯದ ಹಿಮನದಿಯ ತುದಿಯಲ್ಲಿ ಪತ್ತೆ ಮಾಡಿದ್ದು. ನಂತರ ಸುಮಾರು 550 ವರ್ಷಗಳ ಹಿಂದೆ ಆತ ಮರಣಿಸಿದ್ದು ಹಾಗೂ ಆತನ ಸಂರಕ್ಷಿತ ಉಳಿಕೆಗಳು ಉತ್ತರ ಅಮೇರಿಕಾದಲ್ಲಿ ಪತ್ತೆಯಾದವುಗಳಲ್ಲೇ ಪ್ರಾಚೀನವಾದುದು ಎಂಬುದನ್ನು ನಿರ್ಣಯಿಸಲಾಯಿತು.[೧೪]
ಸ್ವಯಂ-ಶವಸಂರಕ್ಷಣೆ
[ಬದಲಾಯಿಸಿ]ಯಾವುದೇ ರೀತಿಯ ಉದ್ದೇಶಪೂರ್ವಕ ಶವಸಂರಕ್ಷಣೆಯ ಯಾವ ಕುರುಹು ಇಲ್ಲದಿದ್ದರೂ ದೇಹವನ್ನು ಕೊಳೆಯದಂತೆ ಕಾಪಿಟ್ಟುಕೊಳ್ಳಲು ಸಾಧ್ಯವಾದ ಸನ್ಯಾಸಿಗಳನ್ನು ಕೆಲ ಬೌದ್ಧರು ಪೂಜಿಸುತ್ತಾರೆ, ಅವರ ಪ್ರಕಾರ ಆ ಸನ್ಯಾಸಿಗಳು ತಮ್ಮ ಶರೀರವನ್ನು ಚೈತನ್ಯರಹಿತವಾಗಿ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. "ಕೇವಲ ಅತ್ಯಂತ ಮುಂದುವರಿದ ಸಾಧಕರು ಮಾತ್ರವೇ ಸಾವಿನ ಮುಂಚೆಯೇ ನಿರ್ದಿಷ್ಟ ಹಂತಕ್ಕೆ ತಲುಪಿ, ತಮ್ಮ ಶವವು ಕೆಡದಂತೆ ಶುದ್ಧೀಕರಿಸಿಕೊಳ್ಳುತ್ತಿದ್ದರು ಎಂದು ಬೌದ್ಧರು ಹೇಳುತ್ತಾರೆ."[೧೫]
ಅನೇಕ ಮಹಾಯಾನ ಬೌದ್ಧ ಸನ್ಯಾಸಿಗಳು ತಮ್ಮ ಸಾವಿನ ಕಾಲವನ್ನು ತಿಳಿದಿದ್ದುದರಿಂದ ತಮ್ಮ ಮರಣಶಾಸನವನ್ನು ಬರೆದ ಹಾಗೆಯೇ ಅವರ ವಿದ್ಯಾರ್ಥಿಗಳು ಅವರನ್ನು ಕಮಲದ ಭಂಗಿಯಲ್ಲಿ ಕುಳಿತ ಹಾಗೆಯೇ (ಮರ, ಕಾಗದ, ಅಥವಾ ಸುಣ್ಣದಂತಹಾ) ನಿರ್ಜಲಕಾರಕಗಳ ಜೊತೆಗೆ ಧಾರಕದಲ್ಲಿಟ್ಟು ಇಟ್ಟಿಗೆಗಳಿಂದ ಮುಚ್ಚುತ್ತಿದ್ದರು, ನಂತರ ಸಾಧಾರಣವಾಗಿ ಮೂರು ವರ್ಷಗಳ ನಂತರ ಹೊರತೆಗೆಯಲಾಗುತ್ತಿತ್ತು. ಹಾಗೆ ರಕ್ಷಿತಗೊಂಡ ದೇಹಗಳಿಗೆ ನಂತರ ವರ್ಣಲೇಪನ ಮಾಡಿ ಚಿನ್ನದಿಂದ ಅಲಂಕೃತಗೊಳಿಸುತ್ತಿದ್ದರು.
ವಿಕ್ಟರ್ H. ಮೇಯರ್‌ರ ವಾದದ ಪ್ರಕಾರ 1990ರ ದಶಕದಲ್ಲಿ ಸಾಪೇಕ್ಷವಾಗಿ ಕೊಳೆಯದ ಸ್ಥಿತಿಯಲ್ಲಿ ಮರುಪಡೆದ, ca. 1475ರಲ್ಲಿ ಮರಣಿಸಿದ ಟಿಬೆಟಿಯನ್ ಸನ್ಯಾಸಿಯ ಸ್ವಯಂ-ಶವಸಂರಕ್ಷಣೆಯು ದೀರ್ಘಕಾಲೀನ ಉಪವಾಸ ಹಾಗೂ ಕಮಲದ ಭಂಗಿಯಲ್ಲಿ ಕುತ್ತಿಗೆಯನ್ನು ಮೊಣಕಾಲಿನೊಂದಿಗೆ ಸಂಪರ್ಕಿಸುವ ವಿಶೇಷ ಪಟ್ಟಿಯಿಂದ ಸಾವಕಾಶ ಶ್ವಾಸಬಂಧನಗಳೊಂದಿಗೆ ಧ್ಯಾನದ ಸಂಕೀರ್ಣ ಅನುಷ್ಠಾನದ ಮೂಲಕ ಸಾಧಿಸಲಾಯಿತು.
ಸ್ವಯಂ-ಶವಸಂರಕ್ಷಿತ ಸನ್ಯಾಸಿಗಳದ್ದೆಂದು ಹೇಳಲಾದ ದೇಹಗಳನ್ನು ಅನೇಕ ಜಪಾನೀ ದೇವಾಲಯಗಳಲ್ಲಿ ಪ್ರದರ್ಶಿಸಲಾಗಿದೆಯಲ್ಲದೇ, ಸನ್ಯಾಸಿಗಳು ತಮ್ಮ ಸಾವಿಗೆ ಮುನ್ನ, ಉಪ್ಪು, ಕಾಯಿ, ಬೀಜಗಳು, ಬೇರುಗಳು, ಪೀತದಾರುವಿನ ತೊಗಟೆ ಹಾಗೂ ಉರುಷಿ ಟೀ/ಕಷಾಯಗಳಿಂದ ಕೂಡಿದ ವಿರಳ ಆಹಾರ ಪದ್ಧತಿಯನ್ನೇ ಅಂಟಿಕೊಂಡಿದ್ದರು/ಕಟುವಾಗಿ ಪಾಲಿಸುತ್ತಿದ್ದರು ಎನ್ನಲಾಗಿದೆ.[೧೬] ಅವರಲ್ಲಿ ಕೆಲವರನ್ನು ಉಪ್ಪಿನಿಂದ ತುಂಬಿದ ಪೀತದಾರು ಮರದ ಪೆಟ್ಟಿಗೆಯಲ್ಲಿ ಜೀವಂತ ಸಮಾಧಿ ಮಾಡಲಾಗಿತ್ತು.
ಆಧುನಿಕ ರಕ್ಷಿತ ಶವ/ಮಮ್ಮಿಗಳು
[ಬದಲಾಯಿಸಿ]1830ರ ದಶಕದಲ್ಲಿ, ಪ್ರಯೋಜಕತಾವಾದದ ಸ್ಥಾಪಕ ಜೆರೆಮಿ ಬೆಂಥಮ್, ತನ್ನ ಸಾವಿನ ನಂತರ ಕೈಗೊಳ್ಳಬೇಕಾದ ಕ್ರಮಗಳನ್ನು ನೀಡಿದ್ದು ಆಧುನಿಕ ಕಾಲದ ರಕ್ಷಿತ ಶವ/ಮಮ್ಮಿಯ ಮಾದರಿ ರಚನೆಗೆ ಕಾರಣವಾಯಿತು. ಹೇಗೆ "ಅಜ್ಞಾನದಿಂದಾಗಿ ಅಂಗಚ್ಛೇದನವು ಭಯಹುಟ್ಟಿಸಬಹುದು" ಎಂಬುದನ್ನು ತೋರಿಸುವಂತೆ ತನ್ನ ದೇಹವನ್ನು ತೋರಿಸಬೇಕೆಂದು; ಹಾಗೆ ತೋರಿಸಿ ಉಪನ್ಯಾಸ ಕೊಟ್ಟ ನಂತರ ತನ್ನ ದೇಹದ ಅಂಗಗಳನ್ನು ಅಸ್ಥಿಪಂಜರದೊಂದಿಗೆ (ತಲೆಬುರುಡೆಯ ಹೊರತು, ಕಳವಿನ ಪ್ರಯತ್ನದ ಕಾರಣವಾಗಿ ಬೇರೆಡೆ ಇಡಬೇಕಾಗಿಬರುವವರೆಗೆ ಸಂರಕ್ಷಿಸಿರದ ಹೊರತಾಗಿಯೂ ಆತನ ಕಾಲ ಕೆಳಗೆ ಪ್ರದರ್ಶಿಸಲಾಗಿದ್ದ)[೧೭] ಸಂರಕ್ಷಿಸಿ, ತಾನು ಸಾಧಾರಣವಾಗಿ ಧರಿಸುತ್ತಿದ್ದ ವಸ್ತ್ರಗಳನ್ನು ಉಡಿಸಿ ತಾನು ಆಲೋಚನಾಮಗ್ನನಾಗಿ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಅದೇ ನಿಲುವಿನಲ್ಲಿರುವಂತೆ ಪ್ರದರ್ಶಿಸಬೇಕೆಂದು ಕೋರಿದ್ದರು." ಆತನ ದೇಹವನ್ನು, ಬೆಂಥಮ್ ಕೋರಿಕೊಂಡಂತೆ ತಯಾರಿಸಲು ತೊಂದರೆಯಾದ ಕಾರಣ ಮೇಣದಿಂದ ಮಾಡಿದ ತಲೆಯೊಂದಿಗೆ, ಲಂಡನ್‌ನ ಯೂನಿವರ್ಸಿಟಿ ಮಹಾವಿದ್ಯಾಲಯದಲ್ಲಿ ಮುಕ್ತ ಪ್ರದರ್ಶನಕ್ಕೆ ಇಡಲಾಗಿದೆ.
20ನೇ ಶತಮಾನದ ಆದಿಭಾಗದ ವಿಶ್ವಸ್ವತಂತ್ರತಾವಾದದ ರಷ್ಯಾದ ಚಳುವಳಿಯು, ನಿಕೋಲಾಜ್ ಫೆಡೊರೊವ್ ಪ್ರತಿನಿಧಿಸಿದ ಪ್ರಕಾರ, ಮರಣಿಸಿದ ವ್ಯಕ್ತಿಗಳ ವೈಜ್ಞಾನಿಕ ಪುನರುಜ್ಜೀವನ ಕಲ್ಪನೆಯನ್ನು ಹೊಂದಿತ್ತು. ಈ ಕಲ್ಪನೆಯು ಎಷ್ಟು ಜನಪ್ರಿಯವಾಯಿತೆಂದರೆ , ಲೆನಿನ್'ರ ಮರಣದ ನಂತರ, ಲಿಯೊನಿಡ್ ಕ್ರಾಸಿನ್ ಹಾಗೂ ಅಲೆಕ್ಸಾಂಡರ್ ಬೊಗ್ಡಾನೊವ್ ಭವಿಷ್ಯದಲ್ಲಿ ಆತನನ್ನು ಪುನರುಜ್ಜೀವಿತಗೊಳಿಸಲು ಆತನ ದೇಹ ಹಾಗೂ ಮಿದುಳನ್ನು ಕ್ರಯೋನಿಕ್ಸ್ ತಂತ್ರಜ್ಞಾನದ ಮೂಲಕ ಸಂರಕ್ಷಿಸಿಡಬೇಕೆಂದು ಸಲಹೆ ನೀಡಿದರು.[೧೮] ಅಗತ್ಯ ಉಪಕರಣಗಳನ್ನು ವಿದೇಶದಿಂದ ಖರೀದಿಸಲಾಯಿತು, ಆದರೆ ಅನೇಕ ಕಾರಣಗಳಿಂದಾಗಿ ಯೋಜನೆಯು ಕೈಗೂಡಲಿಲ್ಲ.[೧೯] ಬದಲಿಗೆ ಆತನ ದೇಹವನ್ನು ಶವಸಂರಕ್ಷಿಸಿ ಮಾಸ್ಕೋದಲ್ಲಿನ ಲೆನಿನ್ ಸಮಾಧಿಯಲ್ಲಿ ಶಾಶ್ವತ ಪ್ರದರ್ಶನದಲ್ಲಿಡಲಾಗಿದ್ದು, ಈಗಲೂ ಪ್ರದರ್ಶಿತವಾಗುತ್ತಿದೆ. ಡ್ಜೋಸರ್ ಪಿರಮಿಡ್ ಹಾಗೂ ಸೈರಸ್‌ನ ಸಮಾಧಿಗಳನ್ನು ಆಧರಿಸಿ ಅವರ ಸಮಾಧಿಯ ಮಾದರಿಯನ್ನು ಅಲೆಕ್ಸೆ ಷ್ಚುಸೆವ್ ತಯಾರಿಸಿದ್ದರು.
ಮೆಕ್ಸಿಕೋದ ಗುವಾನಾಜುವಾಟೊ ರಾಜ್ಯದಲ್ಲಿ, ಮೆಕ್ಸಿಕೋ ನಗರದ ವಾಯುವ್ಯ ದಿಕ್ಕಿನಲ್ಲಿರುವ (ಲಿಯಾನ್ ಸಮೀಪದ) ಗುವಾನಾಜುವಾಟೊ ನಗರದ ರುದ್ರಭೂಮಿಯಲ್ಲಿ ರಕ್ಷಿತ ಶವ/ಮಮ್ಮಿಗಳು ಪತ್ತೆಯಾದವು. ಅವು ಆನುಷಂಗಿಕ ಆಧುನಿಕ ರಕ್ಷಿತ ಶವ/ಮಮ್ಮಿಗಳಾಗಿದ್ದು ಸತ್ತವರ ಸಂಬಂಧಿಕರು ಒಂದು ವಿಧದ ಸಮಾಧಿ ತೆರಿಗೆಯನ್ನು ಕಟ್ಟಬೇಕೆಂದು ಸ್ಥಳೀಯ ಕಾನೂನು ನಿರ್ದೇಶಿಸಿದುದರಿಂದ ಅವುಗಳನ್ನು 1896ರಿಂದ 1958ರ ನಡುವಿನ ಅವಧಿಯಲ್ಲಿ ಅಕ್ಷರಶಃ "ಅಗೆದು ಹೊರತೆಗೆಯಲಾಯಿತು". ನಗರವನ್ನು ಎತ್ತರದಿಂದ ನೋಡಲಾಗುವಂತಿರುವ ಬೆಟ್ಟದ ಮೇಲೆ ಮ್ಯುಸಿಯೋ ಡೆ ಲಾಸ್ ಮೊಮಿಯಾಸ್‌ನಲ್ಲಿ, ಗುವಾನಾಜುವಾಟೊ ರಕ್ಷಿತ ಶವ/ಮಮ್ಮಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮತ್ತೊಂದು ಗಮನಾರ್ಹ ಆಧುನಿಕ ಕಾಲದ ನೈಸರ್ಗಿಕ ಶವಸಂರಕ್ಷಣೆಯ ಉದಾಹರಣೆಯೆಂದರೆ ಕ್ರಿಶ್ಚಿಯನ್ ಫ್ರೆಡ್‌ರಿಕ್/ಚ್ ವಾನ್ ಕಹ್ಲ್‌ಬುಟ್ಜ್‌ನದು (1651-1702), ಆತನ ದೇಹವನ್ನು ಆತನ ತವರಾದ ಕ್ಯಾಂಪೆಹ್ಲ್‌ನಲ್ಲಿ ಪ್ರದರ್ಶಿಸಲಾಗಿದೆ.
1994ರಲ್ಲಿ, 1729-1838ರ ಅವಧಿಯ 265 ಸಂರಕ್ಷಿತ ದೇಹಗಳು ಹಂಗೆರಿಯ ವಾಕ್ನಲ್ಲಿನ ಡೊಮಿನಿಕನ್ ಚರ್ಚ್‌ನಲ್ಲಿ ಪತ್ತೆಯಾದವು. ಈ ಶೋಧನೆಯು ವೈಜ್ಞಾನಿಕವಾಗಿ ಪ್ರಾಮುಖ್ಯತೆಯನ್ನು ಗಳಿಸಿತಲ್ಲದೇ, 2006ರ ವೇಳೆಗೆ ಬುಡಾಪೆಸ್ಟ್‌ನ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.[೨೦] 2006ರ ಮಾರ್ಚ್‌ನಲ್ಲಿ, ಗ್ರೀಕ್ ಸಾಂಪ್ರದಾಯಿಕ ಸನ್ಯಾಸಿ ವಿಸ್ಸಾರಿಯನ್ ಕೊರ್ಕೊಲಿಯಾಕೊಸ್‌ರ ದೇಹವು ಹದಿನೈದು ವರ್ಷಗಳ ನಂತರವೂ ಆತನ ಸಮಾಧಿಯಲ್ಲಿ ಯಥಾಸ್ಥಿತಿಯಲ್ಲಿ ಪತ್ತೆಯಾಯಿತು. ಈ ಘಟನೆಯಿಂದಾಗಿ ಶವಸಂರಕ್ಷಣೆಯು ಪವಾಡ ಎನ್ನುವವರ ಹಾಗೂ ನೈಸರ್ಗಿಕ ಶವಸಂರಕ್ಷಣೆಯ ಸಾಧ್ಯತೆ ಇದೆ ಎನ್ನುವವರ ನಡುವೆ ವಿವಾದವನ್ನು ತಂದೊಡ್ಡಿತು.
ಸಮ್ಮಮ್
[ಬದಲಾಯಿಸಿ]1975ರಲ್ಲಿ, ಸಮ್ಮಮ್ ಎಂಬ ಹೆಸರಿನ ಗೋಪ್ಯ ಸಂಸ್ಥೆಯು "ಆಧುನಿಕ ಶವಸಂರಕ್ಷಣೆ"ಯನ್ನು ಪರಿಚಯಿಸಿತು, ಇದು ಪ್ರಾಚೀನ ವಿಧಾನಗಳೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುವ ಶವಸಂರಕ್ಷಣೆಯ ಒಂದು ರೂಪ ಎನ್ನುವುದು ಸಮ್ಮಮ್‌ನ ಸಮರ್ಥನೆ. ಈ ಸೇವೆಯು ಧಾರ್ಮಿಕ/ಪಾರಮಾರ್ಥಿಕ ಕಾರಣಗಳಿಗಾಗಿ ಲಭ್ಯವಿದೆ. ಸಮ್ಮಮ್ ಪ್ರಾಣಿಗಳು ಹಾಗೂ ಮಾನವರು ದೇಹದ ಸಾವಿನ ನಂತರವೂ ಇರುವ ಮೂಲತತ್ವವನ್ನು ಹೊಂದಿರುತ್ತಾರೆ, ಅವರ ಶವಸಂರಕ್ಷಣೆ ಪ್ರಕ್ರಿಯೆಯು ಆ ಮೂಲತತ್ವವು ಮತ್ತೊಂದು ಗಮ್ಯದೆಡೆಗೆ ಸ್ಥಿತ್ಯಂತರಗೊಳ್ಳುವಾಗ ಸಹಾಯಕವಾಗಿರುವುದು ಎಂದು ಭಾವಿಸಿದೆ. ಸಮ್ಮಮ್ ಇದನ್ನು "ಸ್ಥಾನಾಂತರ," ಎಂದು ಕರೆಯುತ್ತದೆ ಹಾಗೂ ಈ ಕಲ್ಪನೆಯು ಶವಸಂರಕ್ಷಣೆಯಲ್ಲಿ ಪ್ರಾಚೀನ ಈಜಿಪ್ಟ್‌ನ ಉದ್ದೇಶಗಳನ್ನು ಹೋಲುತ್ತದೆ.
ಪ್ರಾಚೀನ ರಕ್ಷಿತ ಶವ/ಮಮ್ಮಿಗಳಲ್ಲಿ ಸಾಧಾರಣವಾದ ನಿರ್ಜಲೀಕರಣದ ಬದಲಿಗೆ, ಸಮ್ಮಮ್ ದೇಹದ ನೈಸರ್ಗಿಕ ನೋಟವನ್ನು ಉಳಿಸಿಕೊಳ್ಳುವ ರಾಸಾಯನಿಕ ಪ್ರಕ್ರಿಯೆಯನ್ನು ಬಳಸುತ್ತದೆ. ಅನೇಕ ತಿಂಗಳುಗಳ ಕಾಲ ದೇಹವನ್ನು ಸಂರಕ್ಷಣಾ ದ್ರವವಿರುವ ತೊಟ್ಟಿಯಲ್ಲಿ ಮುಳುಗಿಸಿಟ್ಟಿರುವುದೂ ಪ್ರಕ್ರಿಯೆಯಲ್ಲಿ ಸೇರಿದೆ. ಸಮ್ಮಮ್ ತನ್ನ ಪ್ರಕ್ರಿಯೆಯು ಎಷ್ಟರಮಟ್ಟಿಗೆ ಸಂರಕ್ಷಿಸಿಡುವುದೆಂದರೆ ಮಾನವರ ತದ್ರೂಪಿ ತಂತ್ರಜ್ಞಾನವು ವೈಜ್ಞಾನಿಕವಾಗಿ ಪರಿಪೂರ್ಣಗೊಂಡರೆ ಭವಿಷ್ಯತ್ತಿನಲ್ಲಿಯೂ DNA ತನ್ನ ಮೂಲರೂಪದಲ್ಲಿಯೇ ಉಳಿದುಕೊಂಡಿದ್ದು, ಪ್ರಯೋಜನಕ್ಕೆ ಬರುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದೆ.
ಸುದ್ದಿಸಾರಗಳ ಪ್ರಕಾರ,[೨೧] ಸಮ್ಮಮ್ ಪಕ್ಷಿ, ಬೆಕ್ಕು, ಹಾಗೂ ನಾಯಿಗಳು ಸೇರಿದಂತೆ ಅನೇಕ ಮುದ್ದಿನ ಪ್ರಾಣಿಗಳನ್ನು ಶವಸಂರಕ್ಷಿತಗೊಳಿಸಿದೆ. ಸಮ್ಮಮ್ ತನ್ನ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ ಸಮಯದಷ್ಟು ಹಿಂದೆಯೇ ಜನರು ಶವಸಂರಕ್ಷಿತಗೊಂಡಿದ್ದಾರಲ್ಲದೇ ಅನೇಕರು ತಮ್ಮ ಖಾಸಗಿ, "ಪೂರ್ವಭಾವಿ" ವ್ಯವಸ್ಥೆಗಳನ್ನು ಕೂಡಾ ಮಾಡಿಕೊಂಡಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಹಾಗೂ ಬ್ರಿಟಿಷ್ ಬ್ರಾಡ್‌ಕ್ಯಾಸ್ಟಿಂಗ್ ಕಾರ್ಪೊರೇಷನ್‌ನಂತಹಾ ಕಿರುತೆರೆ ವಾಹಿನಿಗಳೂ ಸಮ್ಮಮ್‌ಅನ್ನು ತಮ್ಮ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡಿದ್ದವಲ್ಲದೇ, ಆರ್ಥರ್ C. ಆಫ್ಡರ್‌ಹೇಡ್‌ರ ದ ಸೈಂಟಿಫಿಕ್ ಸ್ಟಡಿ ಆಫ್ ಮಮ್ಮೀಸ್ ಎಂಬ ಪುಸ್ತಕದಲ್ಲಿಯೂ ಇದರ ಬಗ್ಗೆ ಚರ್ಚಿಸಲಾಗಿದೆ.[೨೨][೨೩][೨೪]
ಪ್ಲಾಸ್ಟಿನೇಷನ್
[ಬದಲಾಯಿಸಿ]ಪ್ಲಾಸ್ಟಿನೇಷನ್ ಎಂಬುದು ಅಂಗರಚನಾ ಶಾಸ್ತ್ರದಲ್ಲಿ ದೇಹಗಳನ್ನು ಅಥವಾ ದೇಹಭಾಗಗಳನ್ನು ಸಂರಕ್ಷಿಸಲು ಬಳಸುವ ಪ್ರಕ್ರಿಯೆ. ನೀರು ಹಾಗೂ ಕೊಬ್ಬಿನಂಶಗಳ ಬದಲಿಗೆ ನಿರ್ದಿಷ್ಟ ಪ್ಲಾಸ್ಟಿಕ್‌ಗಳನ್ನು ಅಳವಡಿಸಿ ಮುಟ್ಟಬಹುದಾದ, ದುರ್ವಾಸನೆ ಬೀರದ ಅಥವಾ ಕೊಳೆಯದ ಹಾಗೂ ಮೂಲ ಮಾದರಿಯ ಅನೇಕ ಸೂಕ್ಷ್ಮ ಲಕ್ಷಣಗಳನ್ನು ಹೊಂದಿರುವ ಮಾದರಿಗಳನ್ನು ಈ ಮೂಲಕ ತಯಾರಿಸಲಾಗುತ್ತದೆ.
ಈ ತಂತ್ರಜ್ಞಾನವನ್ನು ಗುಂಥರ್ ವಾನ್ ಹೇಗೆನ್ಸ್ ಹೇಡೆಲ್‌ಬರ್ಗ್ ವಿಶ್ವವಿದ್ಯಾಲಯದ ಅಂಗರಚನಾಶಾಸ್ತ್ರ ಸಂಸ್ಥೆಯಲ್ಲಿದ್ದಾಗ 1978ರಲ್ಲಿ ಆವಿಷ್ಕರಿಸಿದರು. ವಾನ್ ಹೇಗೆನ್ಸ್ ತನ್ನ ತಂತ್ರಜ್ಞಾನವನ್ನು ಅನೇಕ ರಾಷ್ಟ್ರಗಳಲ್ಲಿ ಸನ್ನದು/ಪೇಟೆಂಡ್ ಮಾಡಿಸಿದ್ದು ವಿಶೇಷತಃ ಬಾಡಿ ವರ್ಲ್ಡ್ಸ್ ಸಂಚಾರಿ ಪ್ರದರ್ಶನದ,[೨೫] ರಚನಾಕಾರ ಹಾಗೂ ನಿರ್ದೇಶಕರಾಗಿ ಅಂತರರಾಷ್ಟ್ರೀಯವಾಗಿ ಪ್ಲಾಸ್ಟಿನೇಷನ್ ಮಾಡಿದ ದೇಹಗಳ ಪ್ರದರ್ಶನ ನಡೆಸುತ್ತಾ ಅದರ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅವರು ಹೇಡೆಲ್‌ಬರ್ಗ್‌ನಲ್ಲಿನ ಪ್ಲಾಸ್ಟಿನೇಷನ್ ಸಂಸ್ಥೆಯನ್ನು ಅವರೇ ಸ್ಥಾಪಿಸಿದ್ದಲ್ಲದೇ ಅದರ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ವಿಶ್ವದಾದ್ಯಂತ 40ಕ್ಕೂ ಹೆಚ್ಚಿನ ಸಂಸ್ಥೆಗಳು ಪ್ಲಾಸ್ಟಿನೇಷನ್‌ನ ಸೌಲಭ್ಯಗಳನ್ನು ಪ್ರಮುಖವಾಗಿ ವೈದ್ಯಕೀಯ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಹೊಂದಿವೆಯಲ್ಲದೇ, ಅವುಗಳಲ್ಲಿ ಬಹಳಷ್ಟು ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪ್ಲಾಸ್ಟಿನೇಷನ್ ಸಂಸ್ಥೆಯ ಅಂಗೀಕಾರ ಪಡೆದಿವೆ.[೨೬]
ಕಥೆ/ಕಾದಂಬರಿಗಳಲ್ಲಿ ರಕ್ಷಿತ ಶವ/ಮಮ್ಮಿಗಳು
[ಬದಲಾಯಿಸಿ]ರಕ್ಷಿತ ಶವ/ಮಮ್ಮಿಗಳನ್ನು ಭಯಾನಕ ಪ್ರಭೇದಗಳಲ್ಲಿ ಸಾಧಾರಣವಾಗಿ ಪ್ರೇತಾತ್ಮಗಳಾಗಿ ಪ್ರಸ್ತಾಪಿಸಲಾಗಿರುತ್ತದೆ. 20ನೇ ಶತಮಾನದಲ್ಲಿ ಭಯಾನಕ ಚಿತ್ರಗಳು ಹಾಗೂ ಇನ್ನಿತರ ಸಮೂಹ ಮಾಧ್ಯಮಗಳು ರಕ್ಷಿತ ಶವ/ಮಮ್ಮಿಗಳಿಗೆ ಸಂಬಂಧಿಸಿದ ಶಾಪವೆಂಬ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದವು. ಬ್ರಾಮ್ ಸ್ಟೋಕರ್‌ರ 1903ರಲ್ಲಿ ಮೊದಲು ಪ್ರಕಟವಾದ ಪ್ರಾಚೀನ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಯನ್ನು ಪುನರುಜ್ಜೀವಿತಗೊಳಿಸುವ ಓರ್ವ ಪುರಾತತ್ವಶಾಸ್ತ್ರಜ್ಞ'ರ ಯೋಜನೆಯನ್ನು ಕುರಿತ ಭಯಾನಕ ಕಾದಂಬರಿ ದ ಜ್ಯೂಯೆಲ್ ಆಫ್ ಸೆವೆನ್ ಸ್ಟಾರ್ಸ್ ಇವುಗಳಲ್ಲಿ ಮೊದಲನೆಯದು. ಈ ಪುಸ್ತಕವನ್ನು ಆಧರಿಸಿ ನಂತರ 1971ರ ಚಿತ್ರ ದ ಬ್ಲಡ್ ಫ್ರಂ ದ ಮಮ್ಮೀಸ್ ಟೂಂಬ್ ಅನ್ನು ಚಿತ್ರಿಸಲಾಯಿತು.
ಅಂತಹಾ ನಂಬಿಕೆಯನ್ನು ಪ್ರತಿನಿಧಿಸುವ ಚಿತ್ರಗಳೆಂದರೆ ಬಾರಿಸ್ ಕಾರ್ಲಾಫ್‌ರು ಇಂಹೋಟೆಪ್‌ನ ಪಾತ್ರದಲ್ಲಿರುವ 1932ರ ಚಿತ್ರ ದ ಮಮ್ಮಿ ; ನಂತರದ ನಾಲ್ಕು 1940ರ ದಶಕದ' ಯೂನಿವರ್ಸಲ್ ಸ್ಟುಡಿಯೋಸ್‌ನ ದ ಮಮ್ಮಿ ಚಿತ್ರದ ಪ್ರಮುಖ ರಕ್ಷಿತ ಶವ/ಮಮ್ಮಿ ಪಾತ್ರವಾಗಿದ್ದ ಖಾರಿಸ್ ಎಂಬ ಹೆಸರಿನ ರಕ್ಷಿತ ಶವ/ಮಮ್ಮಿಯ ಕುರಿತಾದ ರಕ್ಷಿತ ಶವ/ಮಮ್ಮಿ ಚಿತ್ರಗಳು, 1959ರ ಹ್ಯಾಮರ್ ರೀಮೇಕ್‌ಗಳಾದ ದ ಮಮ್ಮಿ'ಸ್ ಹ್ಯಾಂಡ್ ಹಾಗೂ ದ ಮಮ್ಮಿ'ಸ್ ಟೂಂಬ್ ; ಹಾಗೂ 1999ರಲ್ಲಿ ಬಿಡುಗಡೆಯಾದ (ಹಾಗೂ ನಂತರ ಎರಡು ನೇರ ಉತ್ತರಭಾಗಗಳಾಗಿ ಹಾಗೂ ಒಂದು ಉಪಚಿತ್ರವಾಗಿ ವಿಸ್ತರಿತವಾದ) ಮೂಲಚಿತ್ರದ ರೀಮೇಕ್ ಚಿತ್ರ. ಶಾಪಗ್ರಸ್ತ ರಕ್ಷಿತ ಶವ/ಮಮ್ಮಿಗಳ ಮೇಲಿನ ನಂಬಿಕೆಗೆ ಟುಟಾಖಾಮುನ್ ಸಮಾಧಿಯ ಮೇಲಿನ ಕಲ್ಪಿತ ಶಾಪವೂ ಭಾಗಶಃ ಕಾರಣವಿರಬಹುದು. 1979ರಲ್ಲಿ, ಅಮೇರಿಕನ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಯು ದ ಹಾಲೊವಿನ್ ದಟ್ ಆಲ್ಮೋಸ್ಟ್ ವಾಸ್‌ನ್ಟ್ ಎಂಬ, (ರಾಬರ್ಟ್ ಫಿಚ್) ಕೌಂಟ್ ಡ್ರಾಕುಲಾನ ಕೋಟೆಗೆ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿ ಮಾತಾಡದೇ ಬಂದಿಳಿಯುವ ಕಥೆ ಹೊಂದಿದ್ದ TV ರಜಾಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.
ಟುಟಾನ್‌ಖಾಮುನ್'ನ ಸಮಾಧಿಯನ್ನು ಪುರಾತತ್ವಶಾಸ್ತ್ರಜ್ಞ ಹೋವರ್ಡ್ ಕಾರ್ಟರ್‌ರು 1922ರಲ್ಲಿ ಶೋಧಿಸಿದ್ದು ರಕ್ಷಿತ ಶವ/ಮಮ್ಮಿಗಳನ್ನು ಮುಖ್ಯವಾಹಿನಿಗೆ ಕರೆತಂದಿತು. ಹಿಂಸಾತಮಾಷೆಯ ನಾಟಕ ಥ್ರೀ ಸ್ಟೂಗಸ್ ಹಾಸ್ಯಮಯವಾಗಿ ವೀ ವಾಂಟ್ ಅವರ್ ಮಮ್ಮಿ ಎಂಬ ಕಿರುಚಿತ್ರದಲ್ಲಿನ ಶೋಧನೆಯನ್ನು ಬಳಸಿಕೊಳ್ಳುವ ಮೂವರು, ಕುಬ್ಜ ಮಹಾರಾಜ ರುಟೆನ್‌ಟುಟೆನ್ (ಹಾಗೂ ಆತನ ರಾಣಿ, ಹಾಟ್ಸಿ ಟಾಟ್ಸಿ)ರ ಸಮಾಧಿಯನ್ನು ಶೋಧಿಸುತ್ತಾರೆ. ಒಂದು ದಶಕದ ನಂತರ, ಮಮ್ಮಿ'ಸ್ ಡಮ್ಮೀಸ್ , ಚಿತ್ರದಲ್ಲಿನ ಕುಟಿಲ ಬುದ್ಧಿಯ ಬಳಸಿದ ರಥಗಳ ಮಾರಾಟಗಾರನ ಪಾತ್ರವನ್ನು ಮಾಡಿದ ಅವರು ಅದರಲ್ಲಿ ಅಂತಿಮವಾಗಿ ಹಲ್ಲುನೋವಿರುವ ಪ್ರತ್ಯೇಕ/ಬೇರೆ ಮಹಾರಾಜ ರೂಟೆನ್‌ಟೂಟಿನ್ (ವರ್ನಾನ್ ಡೆಂಟ್)ಗೆ ಸಹಾಯಕರಾಗಿರುತ್ತಾರೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑
"Andean Head Dat ed potato ed 6'000 Years Old". archaeometry.org. Retrieved 2009-02-20.
{{cite web}}
: line feed character in|title=
at position 27 (help) - ↑ "Egyptian Animals Were Mummified Same Way as Humans". news.nationalgeographic.com. Retrieved 2008-11-02.
- ↑ Aufderheide, Arthur C. (2003). The scientific study of mummies. Cambridge, UK: Cambridge University Press. ISBN 0-521-81826-5.
{{cite book}}
: Unknown parameter|ISBN status=
ignored (help); p. 525. - ↑ Pääbo S (1985). "Molecular cloning of Ancient Egyptian mummy DNA". Nature. 314 (6012): 644–5. doi:10.1038/314644a0+. PMID 3990798.
- ↑ Macko SA, Engel MH, Andrusevich V, Lubec G, O'Connell TC, Hedges RE (1999). "Documenting the diet in ancient human populations through stable isotope analysis of hair". Philos. Trans. R. Soc. Lond., B, Biol. Sci. 354 (1379): 65–75, discussion 75–6. doi:10.1098/rstb.1999.0360. PMID 10091248.
{{cite journal}}
: CS1 maint: multiple names: authors list (link) - ↑ Marin A, Cerutti N, Massa ER (1999). "Use of the amplification refractory mutation system (ARMS) in the study of HbS in predynastic Egyptian remains". Boll. Soc. Ital. Biol. Sper. 75 (5–6): 27–30. PMID 11148985.
{{cite journal}}
: CS1 maint: multiple names: authors list (link) - ↑ "Bog bodies of the Iron Age". NOVA. 2006-01-01. Retrieved 2007-10-25.
- ↑ https://books.google.com/books?id=P_xj3QTHHvoC&pg=PA156&lpg=PA156&dq=Miss+Chile+Mummy&source=bl&ots=BpEJtyAjAs&sig=d0ANonPb7ZjJH5u-X-hXMdC9IiE&hl=en&ei=H7DsScT5NoGeM_SD5ekF&sa=X&oi=book_result&ct=result&resnum=5
- ↑ "ಆರ್ಕೈವ್ ನಕಲು". Archived from the original on 2009-09-08. Retrieved 2010-04-07.
- ↑ "The Siberian Ice Maiden". ExploreNorth. Retrieved 2007-03-17.
- ↑ Polosmak, Natalya (1994). "A Mummy Unearthed from the Pastures of Heaven". National Geographic Magazine: 80–103.
- ↑ Deem, James M. (last updated 2007-03-15). "World Mummies: Greenland Mummies". Mummy Tombs. Archived from the original on 2007-02-08. Retrieved 2007-03-16.
{{cite web}}
: Check date values in:|date=
(help) - ↑ Hart Hansen, Jens Peder (1991). The Greenland Mummies. London: British Museum Publications. ISBN 0714125008.
{{cite book}}
: Unknown parameter|coauthors=
ignored (|author=
suggested) (help) - ↑ Ministry of Tourism, Sport and the Arts, British Columbia. "Kwaday Dan Ts'inchi". Archived from the original on 2007-01-25. Retrieved 2007-03-08.
{{cite web}}
: CS1 maint: multiple names: authors list (link); Lundberg, Murray (2001-07-24). "Kwaday Dän Sinchi, The Yukon Iceman". ExploreNorth. Retrieved 2007-10-25. - ↑ ಮರ್ತ್ಯರು ಹಾಗೂ ಸಂತರು ಸಾವಿನ ನಂತರವೂ ದೈಹಿಕವಾಗಿ ಅಮರರಾಗಿರಬಹುದು - Pravda.Ru
- ↑ ಜಪಾನ್‌ನ ಬೌದ್ಧ ರಕ್ಷಿತ ಶವ/ಮಮ್ಮಿಗಳು
- ↑ http://www.mentalfloss.com/blogs/archives/12653
- ↑ ಲೇಖನ ನೋಡಿ: А.М. и А.А. Панченко «Осьмое чудо света», ಎಂಬ ಪುಸ್ತಕದಲ್ಲಿ Панченко А.М. О русской истории и культуре. St. ಪೀಟರ್ಸ್‌ಬರ್ಗ್: ಅಜ್ಬುಕಾ, 2003. ಪುಟ 433.
- ↑ ಇಬಿಡೆಂ.
- ↑ "Újkori múmiák gyűjteménye". Archived from the original on 2007-09-30. Retrieved 2010-04-07.
- ↑
Laytner, Ron (2007). "The Mummy Makers". Edit International. Retrieved 2007-09-16.
{{cite web}}
: Cite has empty unknown parameter:|month=
(help) - ↑ Chan, Wah Ho (Cinematographer) (1996). Pet Wraps (TV). USA: National Geographic Television.
- ↑ Frayling, Christopher (Writer/Narrator/Presenter) (1992). The Face of Tutankhamun (TV-Series). England/USA: British Broadcasting Corporation (BBC).
{{cite AV media}}
: External link in
(help)|title=
- ↑ Aufderheide, Arthur C. (2003). The Scientific Study of Mummies. Cambridge: Cambridge University Press. pp. 60, p. 411. ISBN 0-521-81826-5.
- ↑ ಬಾಡಿ ವರ್ಲ್ಡ್‌ಸ್ ಅಧಿಕೃತ ಜಾಲತಾಣ
- ↑ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪ್ಲಾಸ್ಟಿನೇಷನ್
ಮೂಲಗಳು
[ಬದಲಾಯಿಸಿ]ಪುಸ್ತಕಗಳು
[ಬದಲಾಯಿಸಿ]- Aufderheide, Arthur C. (2003). The Scientific Study of Mummies. Cambridge: Cambridge University Press. ISBN 0-521-81826-5.
{{cite book}}
: Cite has empty unknown parameter:|unused_data=
(help); Unknown parameter|ISBN status=
ignored (help) - ಬಾರ್ಬರ್, ಎಲಿಜಬೆತ್ ವೇಲ್ಯಾಂಡ್. 1999. ದ ಮಮ್ಮಿಸ್ ಆಫ್ ಉರುಂಚಿ . 1999. ಲಂಡನ್ ಪಾನ್ ಬುಕ್ಸ್. ಇದೂ ಕೂಡ: W. W. ನಾರ್ಟನ್ & ಕಂಪೆನಿ. ISBN 0-03-063748-1
- ಬಡ್ಜ್, E.A.ವಾಲ್ಲಿಸ್. 1925. ದ ಮಮ್ಮಿ , ಎ ಹ್ಯಾಂಡ್‌ಬುಕ್ ಆಫ್ ಈಜಿಪ್ಟ್‌ಸ್ ಫ್ಯುನೆರರಿ ಆರ್ಕೆಯಾಲಜಿ. ಡೋವರ್ Publ. Inc., ನ್ಯೂಯಾರ್ಕ್, ಡೋವರ್ Ed. 1989, (512 pgs.) ISBN 0-03-063748-1
- ಡೇವಿಸ್-ಕಿಂಬಲ್, ಜೀನ್ನೈನ್, ಬೆಹನ್, ಮೋನಾರೊಂದಿಗೆ. (2002) ವಾರಿಯರ್ ವಿಮೆನ್: ಆನ್ ಆರ್ಕೆಯಾಲಜಿಸ್ಟ್'ಸ್ ಸರ್ಚ್ ಫಾರ್ ಹಿಸ್ಟರೀಸ್ ಹಿಡನ್ ಹೀರೋಯಿನ್ಸ್. ವಾರ್ನರ್ ಬುಕ್ಸ್, ನ್ಯೂಯಾರ್ಕ್. ಫಸ್ಟ್ ಟ್ರೇಡ್ ಪ್ರಿಂಟಿಂಗ್, 2003. ISBN 0-762-42739-6
- ಇಲ್ಕರ್‌ಸನ್, ಬಿಲ್. (2006) ರ್ರ್ಯಾಪ್-ಇಟ್-ಅಪ್: ಹೌ ಮೈ ಲಾಸ್ಟ್ ಚೈಲ್ಡ್ ವಿಲ್ ಸರ್ವೈವ್ ಅಸ್ ಆಲ್ . ಪೋರ್ಟ್‌ಲ್ಯಾಂಡ್. ಐ ಆಫ್ ರಾ ಟೆಕ್ಸ್ಟ್ಸ್. ISBN 0-471-69059-7.
- ಮಲ್ಲೊರಿ, J. P. ಹಾಗೂ ಮೇಯರ್, ವಿಕ್ಟರ್ H. 2000. ದ ಟಾರಿಮ್ ಮಮ್ಮಿಸ್ : ಆನ್‌ಷಿಯೆಂಟ್ ಚೀನಾ ಅಂಡ್ ದ ಮಿಸ್ಟರಿ ಆಫ್ ದ ಅರ್ಲಿಯೆಸ್ಟ್ ಪೀಪಲ್ಸ್ ಫ್ರಂ ದ ವೆಸ್ಟ್ . ಥೇಮ್ಸ್ & ಹಡ್ಸನ್. ಲಂಡನ್ | 2000 ISBN 0-03-063748-1
- ಪ್ರಿಂಗಲ್, ಹೀಥರ್. 2001. ಮಮ್ಮಿ ಕಾಂಗ್ರೆಸ್: ಸೈನ್ಸ್, ಆಬ್ಸೆಷನ್, ಅಂಡ್ ದ ಎವರ್‌ಲಾಸ್ಟಿಂಗ್ ಡೆಡ್ . ಪೆಂಗ್ವಿನ್ ಪುಸ್ತಕಗಳು ISBN 0-03-063748-1
- ಟೇಲರ್, ಜಾನ್ H. 2004. ಮಮ್ಮಿ : ದ ಇನ್‌ಸೈಡ್ ಸ್ಟೋರಿ . ದ ಬ್ರಿಟಿಷ್ ಮ್ಯೂಸಿಯಂ ಪ್ರೆಸ್. ISBN 0-03-063748-1
ಆನ್‌ಲೈನ್
[ಬದಲಾಯಿಸಿ]- "The Mummy Makers". Edit International. 2003–2004. Retrieved 2006-05-29.
{{cite news}}
: CS1 maint: date format (link) - Howstuffworks.comನಲ್ಲಿ ಮಮ್ಮಿಗಳು.
- ದ ಸ್ಟ್ರೈಟ್ ಡೋಪ್ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಗಳು ಕೊನೈನ್ ಬಳಕೆಯ ಪುರಾವೆಯನ್ನು ಒದಗಿಸುತ್ತಿವೆ ಎಂದು ಪ್ರತಿಪಾದಿಸಿದೆ Archived 2008-07-20 ವೇಬ್ಯಾಕ್ ಮೆಷಿನ್ ನಲ್ಲಿ.
- ಕೊಲೊರಾಡೋ ವಿಶ್ವವಿದ್ಯಾಲಯದ ಈಜಿಪ್ಟ್‌ನ ರಕ್ಷಿತ ಶವ/ಮಮ್ಮಿಗಳಲ್ಲಿ ಕೊಕೈನ್ ಹಾಗೂ ಇತರ ನವ-ಜಗತ್ತಿನ ಮಾದಕವಸ್ತುಗಳ ಪತ್ತೆಯ ಬಗ್ಗೆ ಚರ್ಚಿಸಿರುವ ಪ್ರಕಟಣೆ Archived 2006-05-05 ವೇಬ್ಯಾಕ್ ಮೆಷಿನ್ ನಲ್ಲಿ.
- ಅಪರಿಚಿತ ರಕ್ಷಿತ ಶವ/ಮಮ್ಮಿ Eಯ ಬಗ್ಗೆ
- "Summum - Modern Mummification". Summum. Retrieved 2006-05-29.
{{cite web}}
: Cite has empty unknown parameters:|curly=
and|month=
(help) - ಅವಾಸ್ತವ ರಕ್ಷಿತ ಶವ/ಮಮ್ಮಿ : ಮೌಸ್ ಕ್ಲಿಕ್ನಿಂದ ರಕ್ಷಿತ ಶವ/ಮಮ್ಮಿಯನ್ನು ಅನಾವರಣಗೊಳಿಸಿ
ವಿಡಿಯೊ
[ಬದಲಾಯಿಸಿ]- Chan, Wah Ho (Cinematographer) (1996). Pet Wraps (TV). USA: National Geographic Television.
- Frayling, Christopher (Writer/Narrator/Presenter) (1992). The Face of Tutankhamun (TV-Series). England/USA: British Broadcasting Corporation (BBC).
{{cite AV media}}
: External link in
(help)|title=
ಹೊರಗಿನ ಕೊಂಡಿಗಳು
[ಬದಲಾಯಿಸಿ]- J. ಪಾಲ್ ಗೆಟ್ಟಿ ವಸ್ತುಸಂಗ್ರಹಾಲಯದ ಶವಸಂರಕ್ಷಣೆಯ ಬಗೆಗಿನ ಕಿರುಚಿತ್ರಪಟ್ಟಿಕೆ/ಅನಿಮೇಷನ್ ಚಿತ್ರ
- http://www.mummytombs.com Archived 2019-07-06 ವೇಬ್ಯಾಕ್ ಮೆಷಿನ್ ನಲ್ಲಿ.
- ಪೆರುವಿನ ನೈಸರ್ಗಿಕ ಶವಸಂರಕ್ಷಿತ ರಕ್ಷಿತ ಶವ/ಮಮ್ಮಿಗಳು Archived 2009-04-26 ವೇಬ್ಯಾಕ್ ಮೆಷಿನ್ ನಲ್ಲಿ.
- ಚೀನಾದಲ್ಲಿನ ವಿಶ್ವದಲ್ಲೇ ಅತ್ಯುತ್ತಮ ಸಂರಕ್ಷಿತ ರಕ್ಷಿತ ಶವ/ಮಮ್ಮಿಗಳು Archived 2008-04-22 ವೇಬ್ಯಾಕ್ ಮೆಷಿನ್ ನಲ್ಲಿ.
- ದ "ಆಟೊ-ಐಕನ್ ಆಫ್ ಜೆರೆಮಿ ಬೆಂಥಮ್ Archived 2007-02-10 ವೇಬ್ಯಾಕ್ ಮೆಷಿನ್ ನಲ್ಲಿ., ಲಂಡನ್‌ನ ಯೂನಿವರ್ಸಿಟಿ ಮಹಾವಿದ್ಯಾಲಯದ ಜಾಲತಾಣದಿಂದ
- ಬೆಕ್ಕಿನ ರಕ್ಷಿತ ಶವ/ಮಮ್ಮಿಗಳು
- ಈಜಿಪ್ಟ್ ಹಾಗೂ ಇಂಕಾಗಳ ಶವಸಂರಕ್ಷಣೆ
- ಕ್ಲಿಕ್ ಮಾಡಬಹುದಾದ ರಕ್ಷಿತ ಶವ/ಮಮ್ಮಿ
- ಸ್ಮಿತ್ಸೋನಿಯನ್ ಸಂಸ್ಥೆಯ ರಕ್ಷಿತ ಶವ/ಮಮ್ಮಿಗಳು Archived 2007-03-01 ವೇಬ್ಯಾಕ್ ಮೆಷಿನ್ ನಲ್ಲಿ..
- ರಾಮೆಸೆಸ್ : ರಾತ್ ಆಫ್ ಗಾಡ್ ಆರ್ ಮ್ಯಾನ್? ಡಿಸ್ಕವರಿ ಚಾನೆಲ್ ವಾಹಿನಿಯಲ್ಲಿ
- ಸಮ್ಮಮ್ - ಪ್ರಾಣಿಗಳ ರಕ್ಷಿತ ಶವ/ಮಮ್ಮಿ ಚಿತ್ರಶಾಲೆ
- U.S. ವಸ್ತುಸಂಗ್ರಹಾಲಯವು ರಾಮ್ಸೆಸ್ I ರಕ್ಷಿತ ಶವ/ಮಮ್ಮಿಯನ್ನು ಈಜಿಪ್ಟ್ಗೆ ಮರಳಿಸುತ್ತಿದೆ Archived 2018-07-28 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯಾಷನಲ್ ಜಿಯೋಗ್ರಾಫಿಕ್ ಜಾಲತಾಣದಿಂದ ಒಂದು ಲೇಖನ
- "ಕಿಂಗ್ ಮಟ್'ಸ್ ಟೂಂಬ್" Archived 2008-05-11 ವೇಬ್ಯಾಕ್ ಮೆಷಿನ್ ನಲ್ಲಿ., 2006-09-13ರ ಪೆರುವಿನಲ್ಲಿ ಪತ್ತೆಯಾದ ನಾಯಿಯ ರಕ್ಷಿತ ಶವ/ಮಮ್ಮಿಯ ಬಗೆಗಿನ ಲೇಖನ
- ಕಾಗ್ನಿಟಿವ್ ಲ್ಯಾಬ್ಸ್ ನಿಂದ ರೋಮನ್ ಅವಧಿಯ ಫಯ್ಯುಮ್ ರಕ್ಷಿತ ಶವ/ಮಮ್ಮಿಗಳು : ಚಿತ್ರಪರೀಕ್ಷೆ Archived 2009-08-04 ವೇಬ್ಯಾಕ್ ಮೆಷಿನ್ ನಲ್ಲಿ.
- ಕುಕಿಂಗ್ ವಿತ್ ಮಮ್ಮಿ Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. , ಸಾರಾ ಬೇಕ್ವೆಲ್ರಿಂದ, ಫೋರ್ಟಿಯನ್ ಟೈಮ್ಸ್ 124, ಜುಲೈ 1999. ರಕ್ಷಿತ ಶವ/ಮಮ್ಮಿಗಳ ವೈದ್ಯಕೀಯ ಬಳಕೆಯ ಬಗ್ಗೆ ಲೇಖನ.
[www.mummies.net]
- Pages using the WikiHiero extension
- CS1 errors: invisible characters
- CS1 errors: unsupported parameter
- CS1 maint: multiple names: authors list
- CS1 errors: dates
- CS1 errors: empty unknown parameters
- CS1 errors: external links
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles lacking reliable references from December 2007
- Articles with invalid date parameter in template
- All articles lacking reliable references
- CS1 maint: date format
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons link is on Wikidata
- ಪ್ರಾಚೀನ ಈಜಿಪ್ಟ್‌ನ ಶವಸಂಸ್ಕಾರ ಪದ್ಧತಿಗಳು
- ಅರೇಬಿಕ್ ಪದಗಳು ಹಾಗೂ ಪದಸಮುಚ್ಚಯಗಳು
- ಸಾವಿನ ಪುರಾತತ್ವಶಾಸ್ತ್ರ
- ಭೌತಿಕ ಪ್ರೇತ
- ಈಜಿಪ್ಟ್‌ನ ಪ್ರಾಚೀನಕೃತಿಗಳ ವಿಧಗಳು
- ರಕ್ಷಿತ ಶವ/ಮಮ್ಮಿಗಳು
- Pages using ISBN magic links