ವಿಷಯಕ್ಕೆ ಹೋಗು

ಶಾಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಪವು ವ್ಯಕ್ತಿ(ಗಳು), ಒಂದು ಸ್ಥಳ, ಅಥವಾ ಒಂದು ವಸ್ತುವಿನಂತಹ ಯಾವುದೇ ಅಸ್ತಿತ್ವವುಳ್ಳದ್ದಕ್ಕೆ ಯಾವುದೋ ರೂಪದ ಆಪತ್ತು ಅಥವಾ ದುರದೃಷ್ಟ ಉಂಟಾಗಲಿ ಎಂದು ವ್ಯಕ್ತಪಡಿಸಲಾದ ಯಾವುದೇ ಆಸೆ. ವಿಶೇಷವಾಗಿ, ಶಾಪವು ದೇವತೆ ಅಥವಾ ದೇವತೆಗಳು, ಅಥವಾ ಆತ್ಮ, ಅಥವಾ ನೈಸರ್ಗಿಕ ಶಕ್ತಿಯಂತಹ ಅಲೌಕಿಕ ಅಥವಾ ಆಧ್ಯಾತ್ಮಿಕ ಶಕ್ತಿಯಿಂದ, ಅಥವಾ ಮಾಯೆಯಿಂದ ಮಾಡಲಾದ ಒಂದು ಬಗೆಯ ಮಾಟದಿಂದ ಕಾರ್ಯಗತವಾಗುವ ಬಯಕೆ ಅಥವಾ ಘೋಷಣೆಯನ್ನು ಸೂಚಿಸಬಹುದು; ಹಾಗಾಗಿ ಶಾಪವನ್ನು ಅಪಶಕುನವೆಂದೂ ಕರೆಯಬಹುದು. ಅನೇಕ ನಂಬಿಕೆ ವ್ಯವಸ್ಥೆಗಳಲ್ಲಿ, ಸ್ವತಃ ಶಾಪವೇ (ಅಥವಾ ಅದರ ಜೊತೆಗಿನ ಕ್ರಿಯಾವಿಧಿ) ಪರಿಣಾಮದಲ್ಲಿ ಯಾವುದೋ ಕಾರಣವಾದ ಶಕ್ತಿಯನ್ನು ಹೊಂದಿರುತ್ತದೆ ಎಂದು ಪರಿಗಣಿಸಲಾಗುತ್ತದೆ. ಒಂದು ಶಾಪವನ್ನು ವಾಪಸು ತೆಗೆದುಕೊಳ್ಳವುದು ಅಥವಾ ತೆಗೆದುಹಾಕುವುದಕ್ಕೆ ಕೆಲವೊಮ್ಮೆ "ಮುರಿಯುವುದು" ಎಂದು ಹೇಳಲಾಗುತ್ತದೆ, ಮತ್ತು ಹಲವುವೇಳೆ ಇದಕ್ಕೆ ವಿಸ್ತಾರವಾದ ಕ್ರಿಯಾವಿಧಿಗಳು ಅಥವಾ ಪ್ರಾರ್ಥನೆಗಳು ಅಗತ್ಯವಾಗಿರುತ್ತವೆ ಎಂದು ನಂಬಲಾಗಿದೆ.[]

ಜಾನಪದ ಧರ್ಮ ಮತ್ತು ಜಾನಪದ ಅಧ್ಯಯನ ಎರಡರ ಅಧ್ಯಯನವು ಗಣನೀಯ ಪ್ರಮಾಣದಲ್ಲಿ ಶಾಪಗಳ ರೂಪಗಳ ಅಧ್ಯಯನವನ್ನು ಒಳಗೊಂಡಿರುತ್ತದೆ. ಶಾಪಗಳನ್ನು ವಿಧಿಸುವ ಉದ್ದೇಶಪೂರ್ವಕ ಪ್ರಯತ್ನವು ಹಲವುವೇಳೆ ಮಾಯೆಯ ಅಭ್ಯಾಸದ ಭಾಗವಾಗಿರುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಋಷಿಯು ಆಶೀರ್ವದಿಸುವ ಮತ್ತು ಶಾಪ ಕೊಡುವ ಶಕ್ತಿಯನ್ನು ಹೊಂದಿರುತ್ತಾನೆ ಎಂದು ನಂಬಲಾಗಿದೆ. ರಾಜ ನಹುಷನಿಗೆ ಭೃಗು ಋಷಿ ಕೊಟ್ಟ ಶಾಪ ಮತ್ತು ದೇವಲ ಋಷಿಯು ಕೊಟ್ಟ ಶಾಪ ಕೆಲವು ಉದಾಹರಣೆಗಳಾಗಿವೆ.

ಆಫ಼್ರಿಕನ್ ಅಮೇರಿಕನ್ ಹೂಡೂ ನಮಗೆ ಜಿಂಕ್ಸ್ ಹಾಗೂ ಅಡ್ಡಡ್ಡವಾಗಿರುವ ಪರಿಸ್ಥಿತಿಗಳನ್ನು, ಜೊತೆಗೆ ಪಾದ ಜಾಡು ಮಾಯೆಯ ಒಂದು ರೂಪವನ್ನು ತೋರಿಸುತ್ತದೆ. ಜಾಡು ಮಾಯೆಯಲ್ಲಿ ಶಾಪಹಾಕಿದ ವಸ್ತುಗಳನ್ನು ಬಲಿಪಶುಗಳ ಹಾದಿಯಲ್ಲಿ ಇರಿಸಲಾಗುತ್ತದೆ ಮತ್ತು ಅವರು ಇವುಗಳ ಮೇಲೆ ನಡೆದು ಹೋದಾಗ ಅವು ಸಕ್ರಿಯವಾಗುತ್ತವೆ. ಮಧ್ಯಪ್ರಾಚ್ಯ ಹಾಗೂ ಮೆಡಿಟೆರೇನಿಯನ್ ಸಂಸ್ಕೃತಿಯು ಕೆಟ್ಟ ದೃಷ್ಟಿಯ ನಂಬಿಕೆಯ ಮೂಲವಾಗಿದೆ. ಇದು ಅಸೂಯೆಯ ಪರಿಣಾಮವಾಗಿರಬಹುದು, ಆದರೆ ಹೆಚ್ಚು ಅಪರೂಪವಾಗಿ, ಉದ್ದೇಶಪೂರ್ವಕ ಶಾಪದ ಪರಿಣಾಮ ಎಂದು ಹೇಳಲಾಗುತ್ತದೆ. ಕೆಟ್ಟ ದೃಷ್ಟಿಯಿಂದ ಸುರಕ್ಷಿತವಾಗಿರಲು, ಗಾಢ ನೀಲಿ ವೃತ್ತಾಕಾರ ಗಾಜಿನಿಂದ ರಕ್ಷಣಾ ವಸ್ತುವನ್ನು ತಯಾರಿಸಲಾಗುತ್ತದೆ, ಮಧ್ಯದಲ್ಲಿ ಕಪ್ಪು ಬಿಂದುವಿನ ಸುತ್ತ ಬಿಳಿಯ ವೃತ್ತವಿರುತ್ತದೆ, ಮತ್ತು ಮಾನವ ಕಣ್ಣಿನ ನೆನಪು ತರುತ್ತದೆ. ರಕ್ಷಕ ಕಣ್ಣಿನ ವಸ್ತುವಿನ ಗಾತ್ರ ಬದಲಾಗಬಹುದು.

ಶಾಪಹಾಕಿದ ವಸ್ತುಗಳನ್ನು ಸಾಮಾನ್ಯವಾಗಿ ಅವುಗಳ ನ್ಯಾಯಸಮ್ಮತ ಮಾಲೀಕರಿಂದ ಕದಿಯಲಾಗಿರುತ್ತದೆ ಅಥವಾ ಲೂಟಿಮಾಡಲಾಗಿರುತ್ತದೆ ಎಂದು ಭಾವಿಸಲಾಗಿದೆ. ಹೋಪ್ ವಜ್ರ ಅಂತಹ ಒಂದು ಶಾಪವನ್ನು ಹೊತ್ತಿದೆ ಎಂದು ಭಾವಿಸಲಾಗಿದೆ, ಮತ್ತು ಅದರ ಮಾಲೀಕನಿಗೆ ದುರದೃಷ್ಟವನ್ನು ತರುತ್ತದೆ. ಈ ವಸ್ತುಗಳಿಗೆ ಏಕೆ ಶಾಪಹಾಕಲಾಯಿತು ಎಂಬುದಕ್ಕೆ ಕತೆಗಳು ಬದಲಾಗುತ್ತವೆ, ಆದರೆ ಅವು ಸಾಮಾನ್ಯವಾಗಿ ದುರದೃಷ್ಟವನ್ನು ತರುತ್ತವೆ ಅಥವಾ ಅಸಾಮಾನ್ಯ ವಿದ್ಯಮಾನಗಳನ್ನು ವ್ಯಕ್ತಪಡಿಸುತ್ತವೆ ಎಂದು ಹೇಳಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Chauran, Alexandra (2013). Have You Been Hexed? Recognizing and Breaking Curses. Llewellyn Worldwide. ISBN 0-7387-3620-1.
"https://kn.wikipedia.org/w/index.php?title=ಶಾಪ&oldid=796599" ಇಂದ ಪಡೆಯಲ್ಪಟ್ಟಿದೆ