೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
India
ಭಾರತ
ರಿಯೊ ಒಲಿಂಪಿಕ್ಸ್ 2016
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳುಬಳೆಗಳು:೧.ಏಷ್ಯಾ, ೨.ಯೂರೋಪ್, ೩.ಆಫ್ರಕಾ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು.: *ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ "ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ
ಸಂಕ್ಷಿಪ್ತ ವಿವರ
 • ಹೆಸರು = 2016 ಬೇಸಿಗೆ ಒಲಿಂಪಿಕ್ಸ್,
 • ಧ್ಯೇಯ = ನಿಮ್ಮ ಉತ್ಸಾಹ ಜೀವಂತವಾಗಿರಲಿ,
 • ಭಾಗವಹಿಸುವ ರಾಷ್ಟ್ರಗಳಯ = 170 ಅರ್ಹ (206 ನಿರೀಕ್ಷಿಸಲಾಗಿದೆ)
 • ಭಾಗವಹಿಸುವ ಕ್ರೀಡಾಪಟುಗಳು= 7.926 ಕ್ರೀಡಾಪಟುಗಳು (10,500+ ನಿರೀಕ್ಷೆ)
 • ಕ್ರೀಡಾಘಟನೆಗಳು = 28 ಕ್ರೀಡೆ - 306 ಆಟೋಟ
 • ಹಿಂದಿನದು = 2012 ಬೇಸಿಗೆ ಒಲಿಂಪಿಕ್ಸ್- ಲಂಡನ್ 2012
 • ಉದ್ಘಾಟನಾ ಸಮಾರಂಭ = 5 ಆಗಸ್ಟ್
 • ಸಮಾರಂಭದ ಮುಕ್ತಾಯ = 21 ಆಗಸ್ಟ್
 • ಕ್ರೀಡಾಂಗಣ = ಮರಕಾನ (Maracanã) ಕ್ರೀಡಾಂಗಣದಲ್ಲಿ
 • ಅಧಿಕೃತವಾಗಿ = ಆರಂಭವಾಗಲಿದೆ ಮೈಕೆಲ್ ಟೆಮರ್ -ಅಧ್ಯಕ್ಷ ಫೆಡರೇಟೀವ್ ರಿಪಬ್ಲಿಕ್ ಬ್ರೆಜಿಲ್ ಆಫ್
 • ಅಧಿಕೃತವಾಗಿ = ಥಾಮಸ್ ಬ್ಯಾಚ್: ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಅಧ್ಯಕ್ಷ
 • ಮುಂದಿನ ಕೂಟ = ಜಪಾನ್-2020 ಬೇಸಿಗೆ ಒಲಿಂಪಿಕ್ಸ್.
 • 2016:2012
 • ೨೦೦೮
.

ಪೀಠಿಕೆ[ಬದಲಾಯಿಸಿ]

 • ಅಧಿಕೃತವಾಗಿ (the Games of the XXXI (Olympiad)31 ರ ಒಲಿಂಪಿಯಾಡ್ ಆಟೋಟಗಳು ಮತ್ತು ರಿಯೊ 2016 ಎಂದು ಕರೆಯುವರು. ಈ ಒಲಿಂಪಿಕ್ ಆಟೋಟ ಸ್ಪರ್ಧೆಗಳು ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ. 2016 ಆಗಸ್ಟ್ 5 ರಿಂದ 21 ಆಗಸ್ಟ್ ವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಿತು. ದಾಖಲೆ ಸಂಖ್ಯೆಯ ದೇಶಗಳ ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡರು. 206 ರಾಷ್ಟ್ರಗಳ ಒಲಿಂಪಿಕ್ ಕಮಿಟಿಗಳಿಂದ 10500 ಸ್ಪರ್ಧಿಗಳು ಭಾಗವಹಿಸಿದರು. ಕೊಸೊವೊ ಮತ್ತು ದಕ್ಷಿಣ ಸುಡಾನ್ ಮೊದಲ ಬಾರಿಗೆ ಪಾಲ್ಗೊಂಡರು. ಇದರಲ್ಲಿ 306 ಪದಕಗಳನ್ನು ಪ್ರದಾನ ಮಾಡಲಾಯಿತು. 28 ಒಲಿಂಪಿಕ್ ಆಟಗಳು; ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಸೇರಿದಂತೆ ಇವುಗಳನ್ನು ಹೊಸದಾಗಿ 2009 ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೇರಿಸಿತು. (ಇಲ್ಲಿ ಒಲಿಂಪಿಕ್ ಕ್ರೀಡಾ ಪರಿಸರೀಯ ಸವಾಲು ಹೊಂದಿರುತ್ತದೆ) ಈ ಕ್ರೀಡಾಕೂಟವು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ(ಬ್ರೆಜಿಲ್‍ನ ದೊಡ್ಡ ನಗರ) ನಗರದ ಐದು ಸ್ಥಳಗಳಲ್ಲಿ ನಡೆಯುತ್ತದೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರೆಜಿಲಾ (ಬ್ರೆಜಿಲ್ ರಾಜಧಾನಿ) ಮತ್ತು ಮನಾಸ್‍ಗಳಲ್ಲಿ ನಡೆಯಲಿದೆ.

ಉದ್ಘಾಟನೆ[ಬದಲಾಯಿಸಿ]

 • ಸುಮಾರು 78,000 ಸೀಟು ಸಾಮರ್ಥ್ಯ ಹೊಂದಿರುವ ಮರಕಾನಾ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಆಗಸ್ಟ್ 5 (ಶುಕ್ರವಾರ) ರಂದು 8 PM (ಸ್ಥಳೀಯ ಕಾಲಮಾನ), ಭಾರತೀಯ ಕಾಲಮಾನ 4.30 AM (ಆಗಸ್ಟ್ 6, ಶನಿವಾರ) ಪ್ರಸಾರವಾಯಿತು
 • ಬ್ರೆಜಿಲ್ ಕಾಲಮಾನಕ್ಕಿಂತ ಭಾರತೀಯ ಕಾಲಮಾನ(IST) 8 ಗಂಟೆ, 30 ನಿಮಿಷ ಮುಂದಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಜ್ಯೋತಿಯನ್ನು ಫುಟ್ಬಾಲ್ ದಿಗ್ಗಜ ಪೀಲೆ ಅವರು ಬೆಳಗಿಸಲಿದ್ದಾರೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಆಶಯ ಗೀತೆ ಎಸ್ಪರಾಂಕಾ ಮೊಳಗಲಿದೆ.[೧]
 • ಉದ್ಘಾಟನೆ ಚಿತ್ರ:[[೧]]
 • ವೇಳಾಪಟ್ಟಿ:[[೨]]
 • ತ್ರಿವರ್ಣ ಧ್ವಜ ಹಿಡಿದ ಅಭಿನವ ಬಿಂದ್ರಾ:[[permanent dead link]]
 • ನೇರ ವೀಕ್ಷಣೆ-ವೀಡಿಯೋ:[[permanent dead link]]

ರಿಯೊ ಒಲಿಂಪಿಕ್ಸ್ 2016 ಮತ್ತು ಭಾರತ[ಬದಲಾಯಿಸಿ]

 • 1900ರಿಂದಲೇ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇದುವರೆಗೂ 23 ಬಾರಿ ವಿಶ್ವದ ಶ್ರೇಷ್ಠ ಕೂಟದಲ್ಲಿ ಭಾಗವಹಿಸಿದೆ. ತಮ್ಮ ಚೊಚ್ಚಲ ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್‌ ಓಟ ಮತ್ತು 200 ಮೀಟರ್ಸ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಕೋಲ್ಕತ್ತದ ನಾರ್ಮನ್‌ ಗಿಲ್ಬರ್ಟ್‌ ಪ್ರಿಚರ್ಡ್‌ ಬೆಳ್ಳಿ ಪದಕಗಳನ್ನು ಜಯಿಸಿದ್ದರು. ನಾರ್ಮನ್‌ ಪದಕಗಳನ್ನು ಗೆದ್ದ ಬಳಿಕ ಭಾರತ 22 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ.
 • ಪಟಿಯಾಲ, ಬೆಂಗಳೂರು, ಕೇರಳ ಸೇರಿದಂತೆ ನಾಲ್ಕೂ ವಲಯಗಳಲ್ಲಿ ಅಭ್ಯಾಸಕ್ಕೆ ಒಟ್ಟು 12 "ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರ"[೨] ಗಳಿವೆ. ಒಲಿಂಪಿಕ್ಸ್‌ನಂಥ ಕೂಟಕ್ಕೆ ವಿದೇಶಿ ಕೋಚ್‌ ಬೇಕು ಎಂದಾಗ ಭಾರತ ಸರ್ಕಾರ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತದೆ. ಭಾರತದ ಅಥ್ಲೀಟ್‌ ಗಳು ತರಬೇತಿ ಪಡೆಯಲು ಸ್ಪೇನ್‌, ಅಮೆರಿಕ, ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ.
 • 2016ರ ಒಲಿಂಪಿಕ್ಸ್‌ಗೆ ಹೆಚ್ಚು ಕ್ರೀಡಾಪಟುಗಳು ಅರ್ಹತೆ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌) ಯೋಜನೆ ಜಾರಿಗೆ ತಂದಿದೆ. ಕೋಚ್‌, ಕ್ರೀಡಾ ಪರಿಕರ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಸರ್ಕಾರ ನೆರವಾಗುತ್ತಿದೆ. ಕ್ರೀಡಾಪಟುಗಳ ವೈಯಕ್ತಿಕ ಖರ್ಚಿಗೆ ಮಾಸಿಕ ರೂ.1 ಲಕ್ಷ ಕೊಡಲು ಸರ್ಕಾರ ಮುಂದಾಗಿದೆ. (ಮ್ಯಾಪ್+))
Brazil political map
ಬ್ರೆಜಿಲ್'ನಲ್ಲಿ ರಿಯೋ ಡಿ ಜನೈರೋ

ಪದಕ ವಿವರ[ಬದಲಾಯಿಸಿ]

ಪದಕ ಹೆಸರು ಸ್ಪೋರ್ಟ್ ಈವೆಂಟ್ ದಿನಾಂಕ ಪ್ರತಿಸ್ಪರ್ಧಿ ಸ್ಥಾನ
22 ಬೆಳ್ಳಿ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಆಗಸ್ಟ್ 19 ಕೆರೊಲಿನಾ ಮೆರಿನ್ (ಸ್ಪೈನ್) ಅಂತಿಮದಲ್ಲಿಎರಡನೇ ಸ್ಥಾನ
33 ಕಂಚು ಸಾಕ್ಷಿ ಮಲಿಕ್ ಕುಸ್ತಿ ಮಹಿಳೆಯರ ಫ್ರೀಸ್ಟೈಲ್ ,58 ಕೆಜಿ ಆಗಸ್ಟ್ 17 ಟೈನಿಬೆಕೊವಾ ಐಸುಲು(ಕಜಕ್) 8–5 ಅಂತಿಮ-ಪೂರ್ವ:ಗೆಲುವು
11 ಬಂಗಾರ 22 ಬೆಳ್ಳಿ 33 ಕಂಚು ಒಟ್ಟು ಪದಕ :
ಬ್ಯಾಡ್‍ಮಿಂಟನ್:ಸಿಂಗಲ್ಸ್ ಮಹಿಳೆ:ಕುಸ್ತಿ
1 + 1 2

ಒಲಂಪಿಕ್ ೨೦೧೬ಕ್ಕೆ ಅರ್ಹತೆ ಪಡೆದ ಪಟುಗಳ ಸಂಖ್ಯೆ[ಬದಲಾಯಿಸಿ]

ಕ್ರಮ ಸಂಖ್ಯೆ ಕ್ರೀಡೆ ಚಿನ್ಹೆ ಪುರುಷರು ವನಿತೆಯರು ಒಟ್ಟು ಕ್ರೀಡಾ ಘಟಕಗಳು(Events)
ಬಿಲ್ಲುಗಾರಿಕೆ Archery pictogram.svg 1 3 4 3
ಅಥ್ಲೇಟಿಕ್ಸ್ Athletics pictogram.svg 17 17 34 21
ಬ್ಯಾಡ್ಮಿಂಟನ್ Olympic pictogram Badminton.png 3 4 7 4
ಬಾಕ್ಸಿಂಗ್ Boxing pictogram.svg 3 0 3 3
ಹಾಕಿ-(ಮೈದಾನ) Field hockey pictogram.svg 16+2 16+2 32+4 2
ಗೋಲ್ಫ್ Golf pictogram.svg 2 1 3 2
ಜಿಮ್ನ್ಯಾಸ್ಟಿಕ್ Gymnastics (aerobic) pictogram.svg 0 1 1 1
ಜುಡೊ Judo pictogram.svg 1 0 1 1
ರೋಯಿಂಗ್ (ದೋಣಿ-Rowing) Rowing pictogram.svg 1 0 1 1
೧೦ ಶೂಟಿಂಗ್(Shooting) Shooting pictogram.svg 9 3 12 11
೧೧ ಈಜು Short course swimming pictogram.svg 1 1 2 2
೧೨ ಟೇಬಲ್‍ ಟೆನ್ನಿಸ್ Table tennis - Paralympic pictogram.svg 2 2 4 2
೧೩ ಟೆನ್ನಿಸ್ Tennis pictogram.svg 2 2 4 3
೧೪ ಭಾರ ಎತ್ತುವಿಕೆ Weightlifting pictogram.svg 1 1 2 2
೧೫ ಕುಸ್ತಿ (Wrestling) Wrestling pictogram.svg 5 3 8 8
ಒಟ್ಟು 66 56 122 66

[೩]

ರಿಯೋಕ್ಕೆ ಆಯ್ಕೆಪಡೆದ ಅತ್ಲೆಟಿಕ್ಸ್‍ಗಳ ಹಿನ್ನೆಲೆ[ಬದಲಾಯಿಸಿ]

 • ಭಾರತದ ಅಥ್ಲೆಟಿಕ್ಸ್‌ ಪುರುಷರ 400 ಮೀಟರ್ಸ್‌ ಓಟದಲ್ಲಿ ಮಹಮ್ಮದ್‌ ಅನಾಸ್‌, ಲಾಂಗ್‌ ಜಂಪ್‌ ಸ್ಪರ್ಧಿ ಅಂಕಿತ್‌ ಶರ್ಮಾ ಮತ್ತು ಮಹಿಳೆಯರ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಶ್ರಬಾನಿ ನಂದಾ ಅವರು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.ಪೋಲೆಂಡ್‌ನಲ್ಲಿ ನಡೆಯುತ್ತಿರುವ ಪೋಲಿಶ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಅನಾಸ್‌ 45.40 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಒಲಿಂಪಿಕ್ಸ್‌ ಅರ್ಹತೆಯ ಸಾಧನೆ ಮಾಡಿದರು. 400 ಮೀಟರ್ಸ್‌ನಲ್ಲಿ ರಿಯೊಗೆ ರಹದಾರಿ ಪಡೆಯಲು 45.40 ಸೆಕೆಂಡುಗಳ ಸಮಯ ನಿಗದಿ ಮಾಡಲಾಗಿತ್ತು.
 • ಮಹಿಳೆಯರ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಶ್ರಬಾನಿ ನಂದಾ ಅವರು ರಿಯೊಗೆ ಅರ್ಹತೆ ಗಳಿಸಿದರು. 24 ವರ್ಷದ ಒಡಿಶಾದ ಅಥ್ಲೀಟ್‌ ಶ್ರಬಾನಿ ಕಜಕಸ್ತಾನದ ಅಲ್‌ಮಟಿಯಲ್ಲಿ ನಡೆಯುತ್ತಿರುವ ಜಿ. ಕೊಸಾನೊವ್‌ ಸ್ಮಾರಕ ಅಥ್ಲೆಟಿಕ್‌ ಕೂಟದಲ್ಲಿ 23.07 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು.
 • ಅಂಕಿತ್‌ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ಸ್‌ ಪ್ರವೇಶ ತಮ್ಮದಾಗಿಸಿಕೊಂಡರು. ಈ ಕೂಟದಲ್ಲಿ ಹರಿಯಾಣದ ಅಂಕಿತ್‌ ಅವರು 8.19 ಮೀಟರ್ಸ್‌ ದೂರ ಜಿಗಿದರು. ಈ ಮೂಲಕ ಕುಮಾರವೇಲು ಪ್ರೇಮಕುಮಾರ್‌ ಅವರ ಹೆಸರನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದರು.
 • ಆರ್ಚರಿ:ಟ್ರಯಲ್ಸ್‌ ವೇಳೆ 24 ವರ್ಷದ ಅತನು ಅವರು ಒಲಿಂಪಿಯನ್‌ಗಳಾದ ಜಯಂತ್‌ ತಾಲೂಕದಾರ್‌ ಮತ್ತು ಮಂಗಲ್‌ ಸಿಂಗ್‌ ಚಾಂಪಿಯ ಅವರನ್ನು ಹಿಂದಿಕ್ಕಿದರು. ವಿಶ್ವಕಪ್‌ ಸ್ಟೇಜ್‌–3ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಅತನು ಅವರು ಟ್ರಯಲ್ಸ್‌ನಲ್ಲಿ 653 ಪಾಯಿಂಟ್ಸ್‌ ಕಲೆ ಹಾಕಿದರು. ಜತೆಗೆ 1.5 ಪಾಯಿಂಟ್ಸ್‌ ಬೋನಸ್‌ ರೂಪದಲ್ಲಿ ಅವರಿಗೆ ಲಭಿಸಿತು.ಪ್ರಮುಖ ಬಿಲ್ಲುಗಾರ ಅತನು ದಾಸ್‌ ಅವರು ಮುಂಬರುವ ರಿಯೊ ಒಲಿಂಪಿಕ್ಸ್‌ನ ಪುರುಷರ ರಿಕರ್ವ್‌ ವಿಭಾಗದಲ್ಲಿ, ಭಾರತ ಆರ್ಚರಿ ಸಂಸ್ಥೆ (ಎಎಐ) ಆಯ್ಕೆ ಟ್ರಯಲ್ಸ್‌ ನಡೆಸುವ ಮೂಲಕ ಭಾನುವಾರ ಅತನು ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿದೆ.
 • 400 ಮೀಟರ್ಸ್ ಓಟ: ನಿರ್ಮಲಾ ಶೆರಾನ್‌ ಅವರು ೧-೭-೨೦೧೬ ಶುಕ್ರವಾರ 400 ಮೀಟರ್ಸ್ ಓಟದ ವಿಭಾಗಲ್ಲಿ ರಿಯೊಗೆ ರಹದಾರಿ ಪಡೆದಿದ್ದಾರೆ.ಹರಿಯಾಣದ ಅಥ್ಲೀಟ್‌ ನಿರ್ಮಲಾ ಅವರು 51.48 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಈ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ಈ ವಿಭಾಗದಲ್ಲಿ ನೂತನ ಕೂಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ನಿರ್ಮಲಾ ಅವರು ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ರಿಯೊಗೆ ರಹದಾರಿ ಪಡೆದಿರುವ ಭಾರತದ 24ನೇ ಅಥ್ಲೀಟ್‌ ಎನಿಸಿದ್ದಾರೆ.[೪]
 • ರಿಯೊ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿ ಸುವ ಅವಕಾಶ ಸಜನ್‌ ಪ್ರಕಾಶ್‌ ಮತ್ತು ಶಿವಾನಿ ಕತಾರಿಯಾ ಪಾಲಾಗಿದೆ. ಭಾರತ ಈಜು ಫೆಡರೇಷನ್‌ ಮಂಗಳವಾರ ಖಚಿತಪಡಿಸಿದೆ.[೫]
 • 12/7/2016:ಕೊನೆಯ ಅವಕಾಶದಲ್ಲಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆ ಯುವ ಆಸೆ ಹೊತ್ತು ಬಂದಿದ್ದ ಭಾರತದ ಅಥ್ಲೀಟ್‌ಗಳ ಪೈಕಿ ಮೂವರಿಗೆ ಯಶಸ್ಸು ಲಭಿಸಿದೆ. ಜೊತೆಗೆ 4X400 ಮೀಟರ್ಸ್‌ ರಿಲೆ ಸ್ಪರ್ಧೆಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳಿಗೂ ರಿಯೊ ರಹದಾರಿ ಲಭಿಸಿದೆ.
 • ಮುಂದಿನ ತಿಂಗಳು ಬ್ರೆಜಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನಾಲ್ಕನೇ ಲೆಗ್‌ ಕೊನೆಯ ಅವಕಾಶ.

ಜೂಡೊ[ಬದಲಾಯಿಸಿ]

 • ಭಾರತದ ಜೂಡೊ ಪಟು ಅವತಾರ್ ಸಿಂಗ್ ಅವರು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಭಾರತ ಜೂಡೊ ಫೆಡರೇಷನ್ ಶನಿವಾರ ತಿಳಿಸಿದೆ. ಅಂತರರಾಷ್ಟ್ರೀಯ ಜೂಡೊ ಫೆಡರೇಷನ್ ಬಿಡುಗಡೆ ಮಾಡಿರುವ ಅರ್ಹತಾ ಪಟ್ಟಿಯಲ್ಲಿ ಏಷ್ಯಾ ಖಂಡದ ಕೋಟಾದಲ್ಲಿ ಅವರು ಅರ್ಹತೆ ಗಿಟ್ಟಿಸಿದ್ದಾರೆ.
 • ಗುರುದಾಸಪುರದ ಅವತಾರ್ ಸಿಂಗ್ ಅವರು 90 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಸದ್ಯ ಅವರು ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
 • ಹೋದ 2015ಫೆಬ್ರುವರಿಯಲ್ಲಿ ಶಿಲ್ಲಾಂಗ್‌ ನಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.
 • 2011ರಲ್ಲಿ ಏಷ್ಯನ್ ಜೂನಿಯರ್ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಪಡೆದಿದ್ದರು.
 • 2013–14 ಮತ್ತು 2014–15ರಲ್ಲಿ ಅವರು ರಾಷ್ಟ್ರೀಯ ಸೀನಿಯರ್ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
 • ಉಜ್ಬೇಕಿಸ್ತಾನದಲ್ಲಿ ಹೋದ ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದಿದ್ದರು.

[೬]

 • ರಂಜಿತ್ ಮಹೇಶ್ವರಿ (ಟ್ರಿಪಲ್‌ ಜಂಪ್‌), ಧರ್ಮವೀರ್ ಸಿಂಗ್‌ (200 ಮೀಟರ್ಸ್‌ ಓಟ) ಮತ್ತು ಜಿನ್ಸನ್‌ ಜಾನ್ಸನ್‌ (800 ಮೀಟರ್ಸ್ ಓಟ) ಒಲಿಂಪಿಕ್ಸ್‌ಗೆ 17.30 ಮೀಟರ್ಸ್‌ ಜಿಗಿದು ರಾಷ್ಟ್ರೀಯ ದಾಖಲೆಯೊಂದಿಗೆ ಅರ್ಹತೆ ಸಂಪಾದಿಸಿಕೊಂಡರು.(2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 17.07 ಮೀಟರ್ಸ್‌ ಜಿಗಿದು ಕಂಚು ಜಯಿಸಿದ್ದರು. 2014 ಲಖನೌದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪಂಜಾಬ್‌ನ ಅರ್ಪಿಂದರ್ ಸಿಂಗ್ 17.17 ಮೀಟರ್ಸ್ ಜಿಗಿದಿದ್ದು ರಾಷ್ಟ್ರೀಯ ದಾಖಲೆಯಾಗಿತ್ತು.)
 • ಪುರುಷರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಹರಿಯಾಣದ ಧರ್ಮವೀರ್‌ ಸಿಂಗ್ 20.45 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ ಅರ್ಹತೆ ಪಡೆದರು. ಅರ್ಹತೆ ಗಳಿಸಲು ಅವರು 20.50 ಸೆಕೆಂಡುಗಳ ಒಳಗೆ ಗುರಿ ಮುಟ್ಟಬೇಕಿತ್ತು. ಕೇರಳದ ಜಿನ್ಸನ್‌ ಜಾನ್ಸನ್‌ 800 ಮೀಟರ್ಸ್ ಓಟದಲ್ಲಿ ಒಂದು ನಿಮಿಷ 45.98 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
 • 800 ಮೀಟರ್ಸ್‌ ಓಟ: ಜಿನ್ಸನ್‌ ಜಾನ್ಸನ್‌ (ಕೇರಳ; 1:45.98ಸೆ.)–1,
 • ರಿಯೊ ಒಲಿಂಪಿಕ್‌ನ ಹಾಕಿ ತಂಡದ ನಾಯಕ ಸ್ಥಾನಕ್ಕೆ ಹಿರಿಯ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರನ್ನು ನೇಮಕ ಮಾಡಲಾಗಿದೆ.[೭]

ರಿಯೊ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವವರ ಪಟ್ಟಿ[ಬದಲಾಯಿಸಿ]

 • ಬ್ರೆಜಿಲ್ಲಿನ ರಿಯೋ ಡಿಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ 2016 ಗಾಗಿ ನೂರಕ್ಕೂ ಅಧಿಕ ಮಂದಿ ಭಾರತದ ಕ್ರೀಡಾಪಟುಗಳು ತೆರಳುತ್ತಿರುತ್ತಿದ್ದಾರೆ. ಇದು ದಾಖಲೆಯ ಸಂಖ್ಯೆಯಾಗಿದ್ದು, ಲಂಡನ್ ಒಲಿಂಪಿಕ್ಸ್‌ 2012ರಲ್ಲಿ 81 ಸ್ಪರ್ಧಾಳುಗಳು ಅರ್ಹತೆ ಪಡೆದುಕೊಂಡಿದ್ದರು.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
 • ಜುಲೈ 21ರ ಎಣಿಕೆಯಂತೆ 120 ಸ್ಪರ್ಧಿಗಳ ಪಟ್ಟಿ ತಯಾರಿಸಿ ಒಲಿಂಪಿಕ್ಸ್ ಅಸೋಸಿಯೇಷನ್ಸ್ (IOA) ಕಳಿಸುತ್ತಿದ್ದು, ಅಧಿಕಾರಗಳು ಹಾಗೂ ಸಹಾಯಕ ಸಿಬ್ಬಂದಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದೆ. ಆಗಸ್ಟ್ 5 ರಿಂದ 21 ರ ತನಕ ಈ ಜಾಗತಿಕ ಕ್ರೀಡಾಕೂಟ ನಡೆಯಲಿದೆ.
 • ನಾಲ್ಕು ವರ್ಷಕ್ಕೊಮ್ಮೆ ಬರುವ, 2016 ರಿಯೊ ಒಲಿಂಪಿಕ್ಸ್ ಹೋಗಲಿರುವ, ಇಲ್ಲಿ ಆಟಗಳಿಗೆ ಅರ್ಹತೆ ಪಡೆದಿರುವ ಭಾರತೀಯ ಕ್ರೀಡಾಪಟುಗಳ ವಿವರ:

ಹಾಕಿ:ಪುರುಷರ ಮತ್ತು ಮಹಿಳೆಯರ ತಂಡಗಳು[ಬದಲಾಯಿಸಿ]

ಪುರುಷರ ತಂಡ ಇಂತಿದೆ

 • ನಾಲ್ವರು ಕನ್ನಡಿಗರು:ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಆಟವಾಡಿದ್ದ ಡ್ರ್ಯಾಗ್‌ ಫ್ಲಿಕ್ ಪರಿಣತ ವಿ.ಅರ್. ರಘುನಾಥ್, ಎಸ್‌.ಕೆ. ಉತ್ತಪ್ಪ ಮತ್ತು ನಿಕ್ಕಿನ್ ತಿಮ್ಮಯ್ಯ ತಂಡದಲ್ಲಿದ್ದಾರೆ. ಹಾಫ್‌ಬ್ಯಾಕ್ ಆಟಗಾರ ಎಸ್‌.ವಿ. ಸುನಿಲ್ ತಮ್ಮ ಶರವೇಗದ ಪಾಸಿಂಗ್‌ನಿಂದ ಹಲವು ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. 27 ವರ್ಷದ ಸುನಿಲ್ ಅವರು ಕೊಡಗಿನ ಸೋಮವಾರಪೇಟೆಯವರು. ಅವರು ಸರ್ವಿಸಸ್, ಐಒಸಿಎಲ್ ಮತ್ತು ಹಾಕಿ ಲೀಗ್ ಟೂರ್ನಿಯಲ್ಲಿ ಪಂಜಾಬ್ ವಾರಿಯರ್ಸ್ ತಂಡಗಳನ್ನು ಪ್ರತಿನಿಧಿಸುತ್ತಾರೆ.
 • ಸ್ಪೇನ್‌ನಲ್ಲಿ ಐದನೇ ಶ್ರೇಯಾಂಕದ ಭಾರತ ತಂಡವು 2–1 ಗೋಲುಗಳಿಂದ ಸ್ಪೇನ್ ತಂಡವನ್ನು ಹಣಿಯಿತು. ಪಿ.ಅರ್. ಶ್ರೀಜೇಸ್ ನಾಯಕತ್ವದ ತಂಡವು ಹೋದ ವಾರ ಮ್ಯಾಡ್ರಿಡ್‌ನಲ್ಲಿ ಸ್ಪೇನ್ ವಿರುದ್ಧ ಸೋಲನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ಸಂಘಟಿತ ಹೋರಾಟ ಮಾಡಿತು. ಆಕಾಶ್‌ದೀಪ್ ಫೀಲ್ಡ್‌ ಗೋಲ್ ಹೊಡೆದರು. ರೂಪಿಂದರ್ ಪಾಲ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್‌ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. ಭಾರತ ತಂಡವು ಶನಿವಾರ ಇನ್ನೊಂದು ಅಭ್ಯಾಸ ಪಂದ್ಯ ಆಡಲಿದೆ. ಐರ್ಲೆಂಡ್ ತಂಡವನ್ನು ಎದುರಿಸಲಿದೆ.[೮]

ಪುರುಷರ ಪಂದ್ಯದ ಜೋಡಿಗಳು[ಬದಲಾಯಿಸಿ]

 • ಒಟ್ಟು 12 ಟೀಮುಗಳು.
 • ಎ ಗುಂಪು:1.ಆಸ್ಟ್ರೇಲಿಯಾ; 2.ಬೆಲ್ಜಿಯಂ; 3.ಬ್ರೆಜಿಲ್ (ಎಚ್); 4.ಗ್ರೇಟ್ ಬ್ರಿಟನ್; 5.ನ್ಯೂಜಿಲ್ಯಾಂಡ್; 6.ಸ್ಪೇನ್.
 • ಬಿ.ಗುಂಪು:
ಆಗಸ್ಟ್ ೨೦೧೬:ದಿನಾಂಕ:ಸಮಯ ಟೀಮು:ದೇಶ ->ಗೋಲು ಗೋಲು<- ಟೀಮು:ದೇಶ ಫಲಿತಾಂಶ ಶ್ರೇಣಿ
ದಿ. 6 =11:00  India 3 2 Icons-flag-ie.pngಐರ್ಲೆಂಡ್ ಗೆಲುವು ಭಾರತಕ್ಕೆ
ದಿ.8= 11:00 Germany ಜರ್ಮನಿ 2 1  India ಸೋಲು "
ದಿ.9=11:00 ಅರ್ಜೆಂಟೀನಅರ್ಜೆಂಟೀನಾ 1 2  India ಗೆಲುವು "
ದಿ.11=10:00  Netherlandsನೆದರ್ಲ್ಯಾಂಡ್ಸ್ 2 1  India ಸೋಲು "
ದಿ.12=12:30  India 2 2 ಕೆನಡಾಕೆನಡಾ ಸಮ

==

 • 1/4ಅಂತಿಮ->14 ಆಗಸ್ಟ್ 2016:12:30
 • ಬೆಲ್ಜಿಯಮ್ X ಭಾರತ
 • ೭-೮-೨೦೧೬:ಪಿ.ಆರ್‌. ಶ್ರೀಜೇಶ್ ನಾಯಕತ್ವದ ಭಾರತ ತಂಡ 3–2 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿತು.ಡ್ರ್ಯಾಗ್‌ಫ್ಲಿಕ್ಕರ್‌ ಪರಿಣಿತ ವಿ.ಆರ್. ರಘುನಾಥ್‌ (15ನೇ ನಿಮಿಷ) ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಮೊದಲು ರಘುನಾಥ್‌,ರೂಪಿಂದರ್‌ 27 ಮತ್ತು 49ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸಿದರು. ಆಟ ಮುಗಿಯಲು ಒಂದು ನಿಮಿಷವಷ್ಟೇ ಬಾಕಿಯಿದ್ದಾಗ ಐರ್ಲೆಂಡ್‌ನ ಜೆರ್ಮನ್‌ ಜಾನ್‌ (45ನೇ ನಿಮಿಷ) ಗೋಲು ಗಳಿಸಿ ಅಂತರವನ್ನು 1–2ರಲ್ಲಿ ತಗ್ಗಿಸಿದರು. ಇದೇ ತಂಡದ ಕಾನರ್‌ ಹರ್ಟೆ 56ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದರು.

ಅಂತಿಮ ಸ್ಥಿತಿ[ಬದಲಾಯಿಸಿ]

ಸ್ಥಾನ ಟೀಮು ಆಟ ಗೆಲುವು ಸಮ ಸೋಲು ಗೋಲುಗಳಿಕೆ ಗೋ. ನಷ್ಟ ಗೋ.ಲಾಭ ಅಂಕ ಚತುರ್ಥ ಅಂತಿಮ
1 ಜರ್ಮನಿ 5 4 1 0 17 10 +7 13 1/4
2 ನೆದರ್ಲ್ಯಾಂಡ್ಸ್ 5 3 1 1 18 6 +12 10 1/4
3 ಅರ್ಜೆಂಟೀನಾ 5 2 2 1 14 12 +2 8 1/4
4 ಭಾರತ 5 2 1 2 9 9 0 7 1/4
5 ಐರ್ಲೆಂಡ್ 5 1 0 4 10 16 −6 3
6 ಕೆನಡಾ 5 0 1 4 7 22 −15 1
 • ನಾಲ್ವರ ಸುತ್ತು:14 ಆಗಸ್ಟ್ 2016::12:30:ಬೆಲ್ಜಿಯಮ್ X||3–1X ಭಾರತ<>ಡೊಕಿಯರ್‍ನಿಂದ ಗೋಲು:34', 45'(ನಿ)ಬೂನ್:ಗೋಲು 50'X ಎ.ಸಿಂಘ್ ಗೋಲು 15'(ನೇ ನಿ)ಭಾರತ:ಹೊರಗೆ

ವನಿತೆಯರ ಹಾಕಿ[ಬದಲಾಯಿಸಿ]

 • ಭಾರತದ ಮಹಿಳಾ ಹಾಕಿ ತಂಡ
 • ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ.
 • ತಂಡದಲ್ಲಿ

[೯][೧೦]

ಪಂದ್ಯಗಳ ಸ್ಪರ್ಧೆಯ ಟೀಮುಗಳು[ಬದಲಾಯಿಸಿ]

 • ಒಟ್ಟು12 ಟೀಮುಗಳು:ಮಹಿಳೆಯರು.
 • ಎ.ಗುಂಪು:1.ಚೀನಾ; 2.ಜರ್ಮನಿ; 3.ನೆದರ್ಲ್ಯಾಂಡ್ಸ್; 4.ನ್ಯೂಜಿಲ್ಯಾಂಡ್; 5.ದಕ್ಷಿಣ ಕೊರಿಯಾ;6.ಸ್ಪೇನ್.
 • ಬಿ.ಗಂಪು
 • ದಿ. 7 ಆಗಸ್ಟ್ 2016:ಜಪಾನ್‌ ವಿರುದ್ಧ ಅಮೋಘ ನಿರ್ವಹಣೆ ನೀಡಿ 2-2 ಗೋಲುಗಳಿಂದ ಡ್ರಾ ಸಾಧಿಸಲು ಯಶಸ್ವಿಯಾಗಿದೆ. ವಿಶ್ವದ 10ನೇ ರ್‍ಯಾಂಕಿನ ಜಪಾನ್‌ 15ನೇ ನಿಮಿಷದಲ್ಲಿ ಎಮಿ ನಿಶಿಕೋರಿ ಮೂಲಕ ಮೊದಲ ಗೋಲು ಹೊಡೆದಿತ್ತು. ಮೀ ನಕಶಿಮಾ 28ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದರು. 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ರಾಣಿ ರಾಮ್‌ಪಾಲ್‌ ಗೋಲು ಹೊಡೆದು ತೀರುಗೇಟು ನೀಡಿದರು. 40ನೇ ನಿಮಿಷದಲ್ಲಿ ಲಿಲಿಮಾ ಮಿಂಝ್ ಇನ್ನೊಂದು ಗೋಲು ಹೊಡೆದು ಸಮಬಲ ಸಾಧಿಸಿದರು.

[೧೧]

ಆಗಸ್ಟ್ 2016:ದಿನಾಂಕ /ಸಮಯ ಟೀಮು:ದೇಶ ಗೋಲು ಗೋಲು ಟೀಮು:ದೇಶ ಫಲಿತಾಂಶ ಶ್ರೇಣಿ
ದಿ.7 =11:00 ಜಪಾನ್ ಜಪಾನ್ 2 X 2 Indiaಭಾರತ ಸಮ(ಭಾರತಕ್ಕೆ)
ರಾಣಿ ;ಮಿಂನ್ಜು‍
ದಿ.8= 18:00 Indiaಭಾರತ 0 X 3 ಯುನೈಟೆಡ್ ಕಿಂಗ್ಡಂ ಗ್ರೇಟ್ ಬ್ರಿಟನ್ ಸೋಲು
ದಿ.10=11:00 Indiaಭಾರತ 1 X 6 ಆಸ್ಟ್ರೇಲಿಯಾಆಸ್ಟ್ರೇಲಿಯಾ ಸೋಲು
(ಥೋಕಮ್= 1
ದಿ.11=19:30 United Statesಯುನೈಟೆಡ್ ಸ್ಟೇಟ್ಸ್ 3 X 0 Indiaಭಾರತ ಸೋಲು
ದಿ.13=10:00 ಅರ್ಜೆಂಟೀನ ಅರ್ಜೆಂಟೀನಾ 5–0 X 0 India ಭಾರತ ಸೋಲು

ಜಿಮ್ನಾಸ್ಟಿಕ್ಸ್[ಬದಲಾಯಿಸಿ]

ದೀಪಾ ಕರ್ಮಾಕರ್]] (ಈವೆಂಟ್: ಕಲಾತ್ಮಕ):ಭಾರತವು ಮೊದಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಒಂದು ಕಲಾತ್ಮಕ ದೈಹಿಕ ಕಸರತ್ತಿನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದೆ. 1964ರ ನಂತರ ಒಲಂಪಿಕ್ ಸ್ಪಾಟ್ ಮತ್ತು ಸರ್ವಬಗೆಯ ಘಟಕಗಳ ಪ್ರದರ್ಶನಕ್ಕೆ ಆಯ್ಕೆಯಾದ ಮೊದಲ ಭಾರತೀಯ ವನಿತೆ- ದೀಪಾ ಕರ್ಮಾರ್‍ಕರ್.

ಕ್ರೀಡಾಪಟು ಕಸರತ್ತು ಅರ್ಹತೆ
@ ವಾಲ್ಟ್ ವಕ್ರ ಪಟ್ಟಿ ಬ್ಯಾಲೆನ್ಸ್ ಬೀಮು ನೆಲ ಒಟ್ಟು ಅರ್ಹತೆ ರ್ಯಾಂಕ್ ರ್ಯಾಂಕ್ ಒಟ್ಟು
ದೀಪಾ ಕರ್ಮಾರ್‍ಕರ್ ಏಕವ್ಯಕ್ತಿ/ಎಲ್ಲಾಬಗೆ 15.1 Q 11.666 12.866 12.033 51.665 51 ಮುಂದುವರೆದಿಲ್ಲ
ಕ್ರೀಡಾಪಟು ಕಸರತ್ತು ಅಂತಿಮನಿರ್ಣಯ
ಘಟಕ ದಿನ ಅರ್ಹತೆ ಅಂಕ ರ್ಯಾಂಕ್ ರ್ಯಾಂಕಿಂಗ್
ದೀಪಾ ಕರ್ಮಾಕರ್ ವಾಲ್ಟ್ 14 August 14.85 8 15066 4ನೇಸ್ಥಾನ
 • ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇಸ್ಥಾನ:

ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ ದೀಪಾ ಕರ್ಮಾಕರ್ ಅವರಿಗೆ 14-8-2016 ಭಾನುವಾರ ರಾತ್ರಿ ಸ್ವಲ್ಪದರಲ್ಲಿ ಪದಕ ತಪ್ಪಿತು.ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮೊದಲ ಅವಕಾಶದಲ್ಲಿ 14,866 ಮತ್ತು ಎರಡನೇ ಅವಕಾಶದಲ್ಲಿ ಕಠಿಣವಾದ ಪ್ರುಡೊನೊವಾ ವಾಲ್ಟ್‌ನಲ್ಲಿ 15.266 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸ್ಥಾನಕ್ಕೆ ಬಂದರು. ಒಟ್ಟು 15.066 ಅಂಕಗಳು.ದೀಪಾ ನಂತರ ಕಣಕ್ಕಿಳಿದ ಸ್ವಿಟ್ಜರ್‍ಲೆಂಡ್ ಗುಲಿಯಾ ಸ್ಟೇನ್‌ಗ್ರುಬೆರ್ 15.216 (ಕಂಚು)(ದೀಪಾಗಿಂತ 0.150ಹೆಚ್ಚು) ಅಂಕಗಳನ್ನು ಪಡೆದರು. ಕೊನೆಯ ಸ್ಪರ್ಧಿಯಾಗಿ ಕಣಕ್ಕಿಳಿದ ಅಮೆರಿಕದ ಸಿಮೊನ್ ಬೈಲ್ಸ್ 15.966 ಅಂಕ ಪಡೆದು ಚಿನ್ನ ಗೆದ್ದರು. ಮರಿಯಾಪಸೇಕಾ ರಷ್ಯಾ15253 (ಬೆಳ್ಳಿ)

[೧೨]

ಬಾಕ್ಸಿಂಗ್[ಬದಲಾಯಿಸಿ]

 • ಒಲಿಂಪಿಕ್ ಬಾಕ್ಸಿಂಗ್ ಸ್ಪರ್ಧಿಸಲು ಭಾರತದ ಮೂವರು ಕುಸ್ತಿಪಟುಗಳು ಅರ್ಹತೆ ಪಡೆದಿದ್ದಾರೆ. ಭಾರತವು 2016 ಏಷಿಯನ್ ವಿಶ್ವ ಅರ್ಹತಾ ಪಂದ್ಯಾವಳಿಯಚೀನಾದ ಕೀನನ್‍ಲ್ಲಿ(Qian'an) 1 ನೇ ಒಲಿಂಪಿಕ್‍ ಅರ್ಹತೆಯ ಸ್ಥಾನವನ್ನು ಮತ್ತು ಒಲಿಂಪಿಕ್ ಸ್ಪಾಟ್ 2016 ಏಷ್ಯಾ & ಓಷಿಯಾನಿಯಾ ಕ್ವಾಲಿಫಿಕೇಷನ್ ಪಂದ್ಯಾವಳಿ- ಬಾಕು, ಅಜರ್ಬೈಜಾನ್‍ನಲ್ಲಿ ಸ್ಪರ್ಧಿಸಿ 2 ನೇ & 3 ನೇ ಸ್ಥಾನವನ್ನು ಪಡೆದುಕೊಂಡಿದೆ.
 • ಶಿವ ಥಾಪಾ (56 ಕೆಜಿ ಬಾಂಟಮ್ವೇಟ್ ವರ್ಗದಲ್ಲಿ)(ಈವೆಂಟ್: -115-126 ಪೌಂ./119 ಬಾಂಟಮ್ವೇಟ್)X L 0–3 ರೆಮಿರೆಜ್ ಕ್ಯೂಬ/ಹೊರಗೆ
 • ಮನೋಜ್ ಕುಮಾರ್ (64 ಕೆಜಿ) ಪೆಟ್ರಾಸ್ಕಾಸ್ (LTU)X :W 2–1:Gaibnazarov (UZB)ವಾಟ್ (2) Gaib Nazarov (UZBL) 0-3-ಹೊರಗೆ
 • ವಿಕಾಸ್ ಕೃಷ್ಣನ್ (75kgs) ಕೊನ್‍ವೆಲ್ (USA)>೧/೩೨W 3–0//ಸಿಪಲ್ (TUR)೧/೧೬// W 3–0 Melikuziev (UZB)
ಕ್ರೀಡಾಪಟು ಈವೆಂಟ್ 32ನೇ ರೌಂಡ್ 16ನೇ ರೌಂಡ್ ಕ್ವಾರ್ಟರ್‍ ಫೈನಲ್ ಸೆಮಿ ಫೈನಲ್ ಫೈನಲ್ ಫೈನಲ್
ಕ್ರೀಡಾವಿಧ ವಿಪಕ್ಷ ಫಲಿತಾಂಶ ವಿಪಕ್ಷ ಫಲಿತಾಂಶ ವಿಪಕ್ಷ ಫಲಿತಾಂಶ ವಿಪಕ್ಷ ಫಲಿತಾಂಶ ವಿಪಕ್ಷ ಫಲಿತಾಂಶ ರ್ಯಾಂಕ್
ಶಿವ ಥಾಪಾ ಬಾಂಟಮ್ವೇಟ್ ವರ್ಗ 0–3, ರೆಮಿರೆಜ್ ಕ್ಯೂಬ ಹೊರಗೆ
ವಿಕಾಸ್ ಕೃಷ್ಣನ್ ಮಧ್ಯಮ ತೂಕ ಕೊನ್‍ವೆಲ್ (USA)>೧/೩೨W 3–0 ಸಿಪಲ್ (ಟರ್ಕಿ TUR)W 3–0 ಮೆಲಿಕಿಜೆವ್(UZB)L 0–3 ಹೊರಗೆ
ಮನೋಜ್ ಕುಮಾರ್ ಕಡಿಮೆ ತೂಕ ಪೆಟ್ರಾಸ್ಕಾಸ್ (LTU)W 2–1 ಉಜಬೆಕಿಸ್ಥಾನ್ ೦-3 ಹೊರಗೆ

ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್)[ಬದಲಾಯಿಸಿ]

 • ಸಂದೀಪ್ ತೋಮರ್ (ಈವೆಂಟ್: 57 ಕೆಜಿ), (X)
 • ಯೋಗೇಶ್ವರ್ ದತ್ (65 ಕೆಜಿ) (X)
 • ನರಸಿಂಗ್ ಪಂಚಮ್ ಯಾದವ್ (74 ಕೆಜಿ)(ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಇದರಿಂದಾಗಿ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.)[೧೩]

ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) ಮಹಿಳೆಯರು[ಬದಲಾಯಿಸಿ]

 • 17 ಆಗಸ್ಟ್,2016:-ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.
ಪಟು ತೂಕ ಮೊ.ಸುತ್ತು,ವಿಪಕ್ಷ ಫಲಿ- ವಿಪಕ್ಷ ಫಲಿ- ವಿಪಕ್ಷ ಫಲಿ-1/4 1/4 ವಿಪಕ್ಷ ಫಲಿ-1/4 ಪದಕ
ಸಾಕ್ಷಿ ಮಲಿಕ್ 58 kg ಜೋಹಾನಾ ಮ್ಯಾಟ್ಸನ್(ಸ್ವೀಡನ್) W 3–1ಗೆಲುವು ಚೆರ್ಡಿವೆರ-ಮಾಲ್ಡೊವ W 3–1:ಗೆ ಕೊಬ್ಲೊವ ರಷ್ಯಾ)L 1–3ಸೋ. ಬೈ1/4ಕ್ಕೆ ಪುರೆವ್ಡೊರ್(ಮಂ,ಲಿಯ)W 3–1 PP ಟೈನಿಬೆಕೊವಾ ಐಸುಲು(ಕಜಕ್)W 8–5 ಗೆಲುವು 33 ಕಂಚು
 • ವಿನೇಶ್ ಪೋಗಟ್ X Vuc (ROU)ರೊಮೇನಿಯ W 4–0 (ಗೆಲವು)ST:: Sun Yn (CHN)ಚೀನಾ L 0–5 VB (ಸೋಲು)
 • ಬಬಿತಾ ಪೋಗಟ್ X Prevolaraki (GRE)ಗ್ರೀಸ್ L 1–3 PP(ಸೋಲು)
 • ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್‌ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್‌ ಗಳಿಸಿ ಗೆಲುವುಪಡೆದರು.ಸಾಕ್ಷಿಯ ಕೋಚ್‌ ತಮ್ಮ ಶಿಷ್ಯೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಖಾಡದಲ್ಲಿ ಕುಣಿದಾಡಿದರು.
 • ಕುಸ್ತಿಯಲ್ಲಿ:ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಬಂದ ಐದನೇ ಪದಕವಿದು. ಹಿಂದೆ ಕೆ.ಡಿ. ಜಾಧವ್‌ (1952), ಸುಶೀಲ್‌ ಕುಮಾರ್‌ (2008 ಮತ್ತು 2012), ಯೋಗೇಶ್ವರ ದತ್‌ (2012) ಪದಕಗಳನ್ನು ಜಯಿಸಿದ್ದರು.
 • ಫೋಟೋ:[[https://web.archive.org/web/20160821111212/http://www.prajavani.net/news/article/2016/08/18/431776.html Archived 2016-08-21 at the Wayback Machine.]]

[೧೪]

 • ಸ್ವಾಗತ:[[೬]]

ರೆಸ್ಲಿಂಗ್ (ಗ್ರೀಕ್ ಮತ್ತು ರೋಮನ್)[ಬದಲಾಯಿಸಿ]

 • ಹರದೀಪ್ ಸಿಂಗ್ (86 ಕೆಜಿ)

ಶೂಟಿಂಗ್[ಬದಲಾಯಿಸಿ]

1.ಅಭಿನವ್ ಬಿಂದ್ರಾ (ಈವೆಂಟ್: 10 ಮಿ ಏರ್ ರೈಫಲ್); 2.ಪ್ಕಿನಾನ್ ಚೆನಾಯ್ (ಟ್ರ್ಯಾಪ್); 3.ಮಾಯಿರಾಜ್ ಅಹ್ಮದ್ ಖಾನ್ (ಬಂದೂಕಿನಿಂದ ಕೃತಕ ಹಕ್ಕಿ ಹೊಡೆತ); 4.ಪ್ರಕಾಶ್ ನಂಜಪ್ಪ (50 ಮಿ. ಪಿಸ್ತೂಲ್); 5.ಗಗನ್ ನಾರಂಗ್ (10 ಮೀ ಏರ್ ರೈಫಲ್ ಬೋರಲು 50 ಮೀಟರ್ ರೈಫಲ್, 50 ಮೀಟರ್ ರೈಫಲ್ 3 ಸ್ಥಾನಗಳು); 6.ಜಿತು ರೈ ( 10 ಮಿ ಏರ್ ಪಿಸ್ತೂಲ್, 50 ಮಿ ಪಿಸ್ತೂಲ್); 7.ಚೈನ್ ಸಿಂಗ್ (50 ಮಿ ಪೀಡಿತ ರೈಫಲ್, 50 ಮೀಟರ್ ರೈಫಲ್ 3 ಸ್ಥಾನಗಳು); 8.ಗುರುಪ್ರೀತ್ ಸಿಂಗ್ ಮತ್ತು 9.ಮಾನವ್ಜಿತ್ ಸಿಂಗ್ ಸಂಧು (10 ಮಿ ಏರ್ ಪಿಸ್ತೂಲ್, 25 ಮಿ ವೇಗ ಫೈರ್ ಪಿಸ್ತೂಲ್);

 • ಶೂಟಿಂಗ್ ಪುರುಷರು:
ಕ್ರೀಡಾಪಟು ಈವೆಂಟ್ ದಿನಾಂಕ ಕ್ವಾಲಿಫಿಕೇಷನ್ ಕ್ವಾ- ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಪಾಯಿಂಟುಗಳು ಶ್ರೇಣಿ ಪಾಯಿಂಟುಗಳು ಶ್ರೇಣಿ ಪಾಯಿಂಟುಗಳು ಶ್ರೇಣಿ
ಅಭಿನವ್ ಬಿಂದ್ರಾ 10 ಮೀ ಏರ್ ರೈಫಲ್ 8 625.7 7 Q 163.8 4
ಪ್ರಕಾಶ್ ನಂಜಪ್ಪ 50 ಮಿ ಪಿಸ್ತೂಲ್ 10 547 25 ಹೊರಗೆ
ಗಗನ್ ನಾರಂಗ್ 10 ಮಿ ಏರ್ ರೈಫಲ್ 8 621.7 23 ಹೊರಗೆ
ಗಗನ್ ನಾರಂಗ್ 50 ಮೀಟರ್ ರೈಫಲ್ ಪೀಡಿತ 12 623.1 13 ಹೊರಗೆ
ಗಗನ್ ನಾರಂಗ್ 50 ಮೀ ರೈಫಲ್ 3 ಸ್ಥಾನಗಳು 14 1162 33 ಹೊರಗೆ
ಜಿತು ರೈ 10 ಮಿ ಏರ್ ಪಿಸ್ತೂಲ್ 6 580 6 ಹೊರಗೆ 78.7(28. 8
ಜಿತು ರೈ 50 ಮಿ ಪಿಸ್ತೂಲ್ 10 554 12 ಹೊರಗೆ
ಚೈನ್ ಸಿಂಗ್ 50 ಮೀ ರೈಫಲ್ ಪೀಡಿತ 12 619.6 36 ಹೊರಗೆ
ಚೈನ್ ಸಿಂಗ್ 50 ಮೀಟರ್ ರೈಫಲ್ 3 ಸ್ಥಾನಗಳು 14 1169 23 ಹೊರಗೆ
ಗುರುಪ್ರೀತ್ ಸಿಂಗ್ 10 ಮಿ ಏರ್ ಪಿಸ್ತೂಲ್ 6 576 20 ಹೊರಗೆ
ಗುರುಪ್ರೀತ್ ಸಿಂಗ್ 25 ಮೀ ವೇಗ ಫೈರ್ ಪಿಸ್ತೋಲ್ 12 581 7 ಹೊರಗೆ
ಮಾನವ್ಜಿತ್ ಸಿಂಗ್ ಸಂಧು ಟ್ರ್ಯಾಪ್ 7 115 16 ಹೊರಗೆ
ಕಿನನ್ ಚನಯ್ ಟ್ರ್ಯಾಪ್ 7 114 19 ಹೊರಗೆ
ಮಿರಾಜ್ ಅಹ್ಮದ್ ಖಾನ್ ಬಂದೂಕು 12 121 (+3) 9 ಹೊರಗೆ
 • 10 ಮಿ ಏರ್ ಪಿಸ್ತೂಲ್ವಿ:ಯೆಟ್ನಾಂನ ವಿನ್‌ ವುಆನ್‌ ಹಾಂಗ್‌ ಒಟ್ಟು 202.5 ಪಾಯಿಂಟ್‌ ಗಳಿಸಿ ಚಿನ್ನ;ಬ್ರೆಜಿಲ್‌ನ ಫಿಲಿಪ್‌ ಅಲ್ಮಾಡೆ ಬೆಳ್ಳಿ ಪಡೆದರೆ, ಚೀನಾದ ಪೆಂಗ್‌ ವೇಯಿ ಕಂಚು.

ಶೂಟಿಂಗ್ ವನಿತೆಯರು[ಬದಲಾಯಿಸಿ]

 • 10.ಅಪೂರ್ವಿ ಚಂದೇಲಾ &

11.ಅಯೋನಿಕಾ ಪಾಲ್ (10 ಮೀ ಏರ್ ರೈಫಲ್); 12.ಹೀನಾ ಸಿಧು (10 ಮಿ ಏರ್ ಪಿಸ್ತೂಲ್, 25 ಮಿ ಪಿಸ್ತೂಲ್)

 • ಇದ ರಲ್ಲಿ ಮೊದಲ ಏಳು ಸ್ಥಾನಗಳನ್ನು ಪಡೆದವರಿಗೆ ಫೈನಲ್‌ಗೆ ಅರ್ಹತೆ
ಕ್ರೀಡಾಪಟು ಈವೆಂಟ್ ದಿನಾಂಕ ಕ್ವಾಲಿಫಿಕೇಷನ್ ಕ್ವಾ- ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಪಾಯಿಂಟುಗಳು ಶ್ರೇಣಿ ಪಾಯಿಂಟುಗಳು ಶ್ರೇಣಿ ಪಾಯಿಂಟುಗಳು ಶ್ರೇಣಿ
ಅಪೂರ್ವಿ ಚಂಡೇಲಾ-ಜೈಪುರ 10 ಮೀ ಏರ್ ರೈಫಲ್ 411.6 34 ಹೊರಗೆ
ಅಯೋನಿಕಾ ಪಾಲ್ 10 403 43 ಹೊರಗೆ
ಹೀನಾ ಸಿಧು 10 380 14 ಹೊರಗೆ
ಹೀನಾ ಸಿಧು 25 ಮಿ ಪಿಸ್ತೂಲ್ 8 576 20 ಹೊರಗೆ
 • ಚೀನಾದ ಡು ಲೀ 420.7 ಪಾಯಿಂಟ್ಸ್ ಗಳಿಸಿ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ಇದು ಒಲಿಂಪಿಕ್ಸ್‌ನಲ್ಲಿ ದಾಖಲಾದ ಹೆಚ್ಚು ಪಾಯಿಂಟ್ಸ್‌ ಎನಿಸಿದೆ.
 • 23 ವರ್ಷದ ಆಯೋನಿಕಾ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಜಯಿಸಿ ದ್ದರು. 2014ರಲ್ಲಿ ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು.
 • ಅಪೂರ್ವಿ ಗ್ಲಾಸ್ಗೊದಲ್ಲಿ ಚಿನ್ನ ಜಯಿಸಿದ್ದರಲ್ಲದೇ, ಹೋದ ವರ್ಷ ಚೆಂಗ್ವಾನ್‌ನಲ್ಲಿ ಜರುಗಿದ ವಿಶ್ವಕಪ್‌ನಲ್ಲಿ ಕಂಚು, ಮ್ಯೂನಿಚ್‌ ಕೂಟದಲ್ಲಿ ಬೆಳ್ಳಿ ಪಡೆದಿದ್ದರು.

ಬಿಲ್ಲುವಿದ್ಯೆ-ಮಹಿಳೆಯರು & ಪುರುಷರು[ಬದಲಾಯಿಸಿ]

 • ಬಿಲ್ಲುಗಾರಕೆ ವಿವರ:[[೭]]

1. ದೀಪಿಕಾ ಕುಮಾರಿ ( ವೈಯಕ್ತಿಕ ಮತ್ತು ತಂಡ/ರಿಕರ್ವ್ ) 2. ಲಕ್ಷ್ಮಿ ರಾಣಿ ಮಾಜಿ (ವೈಯಕ್ತಿಕ ಮತ್ತು ತಂಡ/ರಿಕರ್ವ್) 3. ಬೊಂಬೆಲಾ ದೇವಿ (ವೈಯಕ್ತಿಕ ಮತ್ತು ತಂಡ/ರಿಕರ್ವ್); ೪.ಅತನು ದಾಸ್ -ಪುರುಷರ ಏಕವ್ಯಕ್ತಿ

ಕ್ರೀಡಾಪಟು ಈವೆಂಟ್ ದಿನಾಂಕ ರ್ಯಾಂಕಿಂಗ್ ರೌಂಡ್ ರ್ಯಾಂ 64 ರೌಂಡ್ ಸುತ್ತು 32ಸುತ್ತು 16ಸುತ್ತು ಕ್ವಾರ್ಟರ್ ಸೆಮಿಫೈನಲ್ ಫೈನಲ್/ ಬಿ.ಎಮ್
ಆಗಸ್ಟ್ ಅಂಕ ಸೀಡ್ ಪ್ರತಿಪಕ್ಷ ಅಂಕ ಪ್ರತಿಪಕ್ಷ ಅಂಕ ಪ್ರತಿಪಕ್ಷ ಅಂಕ ಪ್ರತಿಪಕ್ಷ ಅಂಕ ಪ್ರತಿಪಕ್ಷ ಅಂಕ ಪ್ರತಿಪಕ್ಷ ಅಂಕ ಶ್ರೇಣಿ
ಅತನು ದಾಸ್ ಪುರುಷರ ಏಕವ್ಯಕ್ತಿ 9 683 5 ಮುಕ್ತಾನ್ (ನೇಪಾಳ):W 6–0 ಕ್ಯೂಬ,ಪುಎಂಟಿಸ್:W 6–4 ಲೀ(ಕೊರಿಯ,L 4–6 ಹೊ
ಬೊಂಬೈಲಾ ದೇವಿ ವನಿತೆ-ವೈಯಕ್ತಿಕ 10 638 24 ಬಾಲ್ದಾಫ್(ಆಸ್ಟ್ರಿಯ)W 6–2 ಟೈಫೆ,W6–2 ತಾನ್ ಯಾಟೈಫೆ,L 0–6 ಹೊ
ದೀಪಿಕಾ ಕುಮಾರಿ 10 640 20 ಇಸೆಬುಅ(ಜಾರ್ಜಿಯ)W6–4 ಗುದೆಲಿನಾ(ಇಟಲಿ)W 6–2 ತಾನ್(TPE)L 0–6 ಹೊ
ಲಕ್ಷ್ಮಿರಾಣಿ ಮಾಜಿ 8 614 43 ಲೊಂಗೊವ (ಸ್ಲೊವೆಕಿಯ)
ದೀಪಿಕಾ ಕುಮಾರಿ ವನಿತೆಯರ ತಂಡ 7 1892 7 ಕೊಲಂಬಿಯ:ಜಯ5–3 ರಷ್ಯಾ ಸೋಲು 4–5 ಹೊರಗೆ
ಬೊಂಬೈಲಾ ದೇವಿ SVK)L 1–7 ಕೊಲಂಬಿಯ:ಜಯ5–3 ರಷ್ಯಾ ಸೋಲು 4–5 ಹೊರಗೆ
ಲಕ್ಷ್ಮಿ ರಾಣಿ ಮಾಜಿ ಕೊಲಂ:W 5–3 ರಷ್ಯಾL 4–5

ಅಥ್ಲೆಟಿಕ್ಸ್ (ಟ್ರ್ಯಾಕ್ ಕ್ರಿಯೆಗಳು)[ಬದಲಾಯಿಸಿ]

 • ತೋನಕಲ್ ಗೋಪಿ (ಈವೆಂಟ್: ಮ್ಯಾರಥಾನ್), ಸಂದೀಪ್ ಕುಮಾರ್ (50 ಕಿ.ಮೀ. ವಾಕ್), ಖೇತಾರಾಮ್, (ಮ್ಯಾರಥಾನ್) ಮನೀಶ್ ಸಿಂಗ್ ರಾವತ್ (50 ಕಿ.ಮೀ. ವಾಕ್), ನಿತೀಂದರ್ ಸಿಂಗ್ ರಾವತ್ (ಮ್ಯಾರಥಾನ್), À್ಬಲೀಂದರ್ ಸಿಂಗ್ ಗುರ್ಮೀತ್ ಸಿಂಗ್ ಮತ್ತು ಇರ್ಫಾನ್ ಕುಲೋತ್ತುಮ್ ತೋಡಿ (20 ಕಿಮೀ ನಡೆಯಲು), ಟಿಂಟು ಲುಕಾ (800 ಮೀ) ಲಲಿತಾ ಬಾಬರ್ (3000m ತಡೆಗಾಲೋಟ), ಕುಶ್ಬೀರ್ ಕೌರ್ (20 ಕಿಮೀ ವಾಕ್), ಸಪ್ನಾ ಪುನಿಯ, (20 ಕಿಮೀ ವಾಕ್), ಕವಿತಾ ರಾವುತ್, ಸುಧಾ ಸಿಂಗ್ ಒ.ಪಿ.ಜೈಷಾ & ಲಲಿತಾ ಬಾಬರ್ (ಮ್ಯಾರಥಾನ್)
ಕ್ರೀಡಾಪಟು ಈವೆಂಟ್ ದಿನಾಂಕ ಹೀಟ್ ಹೀಟ್ ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ
ಮೊಹಮ್ಮದ್ ಅನಾಸ್ 400 ಮೀ 12 45.95 6 ಹೊರಗೆ
ಜಿನ್ಸನ್ ಜಾನ್ಸನ್ 800 ಮೀ 19 1:47.27 5 ಹೊರಗೆ
ಮೊಹಮ್ಮದ್ ಅನಾಸ್ 4 × 400 ಮೀಟರ್ ರಿಲೇ 21 ಹೊರಗೆ
ಅಯ್ಯಸಾಮಿ ಧರುಣ್ ಹೊರಗೆ
ಮೋಹನ್ ಕುಮಾರ್ DSQ ಹೊರಗೆ
ಲಲಿತ್ ಮಾಥುರ್ ಹೊರಗೆ
ಕುನ್ಹು ಮುಹಮ್ಮದ್
ಆರೋಕ್ಯ ರಾಜೀವ್ ಹೊರಗೆ
ತೋಣಕಲ್ ಗೋಪಿ ಮ್ಯಾರಥಾನ್ 12 ಹೊರಗೆ
ಖೇತಾ ರಾಮ್ ಹೊರಗೆ
ನಿತೇಂದ್ರಸಿಂಗ್ ರಾವತ್ ಹೊರಗೆ
ಗಣಪತಿ ಕೃಷ್ಣನ್ 20 ಕಿಮೀ ವಾಕ್ 19 ಹೊರಗೆ
ಮನೀಶ್ ಸಿಂಗ್ 19 ಹೊರಗೆ
ಗುರ್ಮೀತ್ ಸಿಂಗ್ 19 ಹೊರಗೆ
ಮನೀಶ್ ಸಿಂಗ್ 20 ಕಿಮೀ ವಾಕ್ 19 1:21.21 13 ಹೊರಗೆ
ಸಂದೀಪ್ ಕುಮಾರ್ 50 ಕಿಮೀ ವಾಕ್ 19 4:07:55 35 ಹೊರಗೆ

ಅತ್ಲೆಟಿಕ್ಸ್ ಮಹಿಳೆಯರು (ಟ್ರ್ಯಾಕ್[ಬದಲಾಯಿಸಿ]

ಕ್ರೀಡಾಪಟು ಈವೆಂಟ್ ದಿನಾಂಕ ಹೀಟ್ ಹೀಟ್ ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ
ದುತಿ ಚಂದ್ 100 ಮೀ 12 11.69 7ನೇ ಸ್ಥಾನ
ಶ್ರಬಣಿ ನಂದಾ 200 ಮೀ 15 23.58 6
ನಿರ್ಮಲಾ ಶರಾನ್ 400ಮೀ 13 53.03 6ನೇ ಸ್ಥಾನ
ಟಿಂಕು ಲುಕ್ಕಾ 800 ಮೀ 17 2:00.58 6
ಲಲಿತಾ ಬಾಬರ್ 3000 m steeplechase 15 9:19.76 4 Q 9:22.74 10
ಸುಧಾ ಸಿಂಗ್ 3000 m steeplechase 15 9:43. 29 30ರ್ಯಾಂಕ್

ಅತ್ಲೆಟಿಕ್ಸ್ ಮಹಿಳೆಯರು (ಟ್ರ್ಯಾಕ್ 4 × 400ಮೀ.ರಿಲೇ[ಬದಲಾಯಿಸಿ]

ಕ್ರೀಡಾಪಟು ಈವೆಂಟ್ ದಿನಾಂಕ ಹೀಟ್ ಹೀಟ್ ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ
ಅಶ್ವಿ ಅಕ್ಕುಂಜಿ 19
ಜಿಸ್ನಾ ಮ್ಯಾಥ್ಯೂ 19
ಟಿಂತು ಲುಕ್ಕಾ 4 × 400ಮೀ.ರಿಲೇ 19
ಎಂ.ಆರ್.ಪೂವಮ್ಮ 4 × 400ಮೀ.ರಿಲೇ 19 3:29.53 7 ಹೊರಕ್ಕೆ
ನಿರ್ಮಲಾ ಶರೊನ್ 4 × 400ಮೀ.ರಿಲೇ 19
ಅನಿಲ್ಡಾ ಥಾಮಸ್ 4 × 400ಮೀ.ರಿಲೇ 19

ಟ್ರ್ಯಾಕ್ -ದೀರ್ಘ[ಬದಲಾಯಿಸಿ]

ಕ್ರೀಡಾಪಟು ಈವೆಂಟ್ ದಿನಾಂಕ ಹೀಟ್ ಹೀಟ್ ಸೆಮಿಫೈನಲ್ ಸೆಮಿ ಫೈನಲ್ ಫೈನಲ್
ಆಗಸ್ಟ್ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ ಫಲಿತಾಂಶ ಶ್ರೇಣಿ
ಒ.ಪಿ.ಜೈಶಾ ಮೆರಾತನ್ 14 2:47:19 89
ಕವಿತಾ ರಾವುತ್ ಮೆರಾತನ್ 14 2:59:29 120
ಕುಶ್ಬೀರ್ ಕೌರ್ 20 ಕಿ.ಮೀ.ನಡಿಗೆ 19 1:40:33 54
ಸಪ್ನಾ ಪುನಿಯಾ 20 ಕಿ.ಮೀ.ನಡಿಗೆ 19 ಮುಗಿಸಿಲ್ಲ

ಅಥ್ಲೆಟಿಕ್ಸ್ (ಫೀಲ್ಡ್ ಘಟನೆಗಳು)[ಬದಲಾಯಿಸಿ]

 • ವಿಕಾಸ್ ಗೌಡ (ಈವೆಂಟ್: ಡಿಸ್ಕಸ್ ಥ್ರೋ), ಇಂದರ್ ಜಿತ್ ಸಿಂಗ್ ಮತ್ತು ಮನ್ಪ್ರೀತ್ ಕೌರ್ (ಶಾಟ್ ಪುಟ್)
ಕ್ರೀಡಾಪಟು ಈವೆಂಟ್ ದಿನಾಂಕ ಕ್ವಾಲಿಫಿಕೇಶನ್ ಕ್ವಾ ಫೈನಲ್ ಫೈನಲ್
ಪುರುಷ ಮತ್ತು ಮಹಿಳೆ ಆಗಸ್ಟ್ ದೂರ ಸ್ಥಾನ ದೂರ ಸ್ಥಾನ
ಇಂದರ್ ಜಿತ್ ಸಿಂಗ್ ಶಾಟ್ ಪುಟ್ 12
ಮನ್ಪ್ರೀತ್ ಕೌರ್ (ಮಹಿಳೆ) ಶಾಟ್ ಪುಟ್ 12 17.06 23 ನೇ ಸ್ಥಾನ
ವಿಕಾಸ್ ಗೌಡ ಡಿಸ್ಕಸ್ ಥ್ರೋ 12/15 58.99 28ನೇ ಸ್ಥಾನ
ಸೀಮಾ ಅಂತಿಲ್ ಪುನಿಯಾ (ಮಹಿಳೆ) ಡಿಸ್ಕಸ್ ಥ್ರೋ 15
ಅಂಕಿತ್ ಶರ್ಮಾ ದೂರ ಜಿಗಿತ 7.67 24 ನೇ ಸ್ಥಾನ
ರಿನಿಇತಿ ಮಹೇಶ್ವರಿ ತ್ರಿವಳಿಜಿಗಿತ 58.99 28 ಮುಂದುವರೆದಿಲ್ಲ

ರೋಯಿಂಗ್[ಬದಲಾಯಿಸಿ]

 • ದತ್ತು ಬಬನ್‍ ಭೋಕನಾಲ್ (ಈವೆಂಟ್:ಒಂಟಿ ದೋಣಿಹುಟ್ಟು- Single Sculls)
ದಿನ ಸಮಯ-ದೋಣಿ ಓಟ ಸಮಯ-ದೋಣಿ ಓಟ ಸಮಯ 1/4 ಸಮಯ ರ್ಯಾಂಕ್ ಸಮಯ ರ್ಯಾಂಕ್ ಸಮಯ ರ್ಯಾಂಕ್
ಆಗಸ್ಟ್ 13 7:21.67 3QF 6:59.89 4SC/D ರ್ಯಾಂಕ್ 7:19.02 2 FC 6:54:96 1

ಬ್ಯಾಡ್‍ಮಿಂಟನ್[ಬದಲಾಯಿಸಿ]

 • ಪುರುಷರು:
ಸಿಂಗಲ್ಸ್
 • ಶ್ರೀಕಾಂತ್ ಕಿಡಂಬಿ:
 • ೧):ಮುನೊಜ್ (ಮೆಕ್ಸಿಕೊ)/(21-11, 21-17)ಗೆಲುವು
 • ೨)ಹರ್ಷ್‍ಕೈನೆನ್ (ಸ್ವೀಡೆನ್)/(21-6, 21-18)ಗೆಲುವು
 • ೩)ಜಾರ್ಗೆನ್ಸನ್ (CCJ)/(21-19, 21-19) ಗೆಲುವು
 • ೪)ಲಿನ್ ಡಿ (CHN)(6-21, 21-11, 18-21)ನಾಲ್ಕರ ಹಂತ :ಸೋಲು
ಡಬಲ್ಸ್
 • ಮನು ಅತ್ರಿ+ಬಿ ಸುಮೀತ್ ರೆಡ್ಡಿ
 • ೧)ಅಹ್ಸನ್ +ಸತಿಯ ವಾನ್ (ಐಎನ್ಎ)(CHN):(18-21, 13-21)ಸೋಲು
 • ೨)ಚಾಯ್ ಬಿ ++ಹಾಂಗ್ ವಾ 13-21, 15-21)
 • ೩)ಎಂಡೊ+ಹಯಕಾವ (JPN)ವ (23-21, 21-11)
 • ರ್ಯಾಂಕ:4

ಬ್ಯಾಡ್‍ಮಿಂಟನ್[ಬದಲಾಯಿಸಿ]

 • ಮಹಿಳೆಯರು:
ಕ್ರೀಡಾಪಟು ಕ್ರೀಡೆ ಪ್ರತಿಸ್ಪರ್ಧಿ ಮತ್ತು ಅಂಕ ಪ್ರತಿಸ್ಪರ್ಧಿ ಮತ್ತು ಅಂಕ ಪ್ರತಿಸ್ಪರ್ಧಿ ರ್ಯಾಂಕ್
ಸೈನಾ ನೆಹ್ವಾಲ್ ಸಿಂಗಲ್ಸ್(ಏಕವ್ಯಕ್ತಿ) ವಿಸೆಂಟೆ (ಬ್ರಜಿಲ್)(21-17, 21-17)ಗೆಲುವು ಉಲಿಟಿನಾ(ಯುಕ್ರೇನ್)ಲ್(18-21, 19-21) ಸೋಲು (ಮುಂದುವರೆದಿಲ್ಲ) 2ನೇ ರ್ಯಾಂಕ್
ಜ್ವಾಲಾ ಗುಟ್ಟಾ+ಅಶ್ವಿನಿ ಪೊನ್ನಪ್ಪ ಡಬಲ್ಸ್ ಮತ್ಸುತೊಮೊ /ಟಕಹಶಿ (JPN)(15-21, 10-21:ಸೋಲು ಮುಕ್ಸೆನ್ಸ್+ಪಿಇಕ್(16-21, 21-16,

17-21) (ನೆದರ್ಲೆಂಡ್)

ಸುಪಜರಿಕುಲ್ /ತಯಿರತ್ತನಚಯಿ(ಥಾಯಿಲೆಂಡ್) (17-21, 15-21ಸೋಲು ಮುಂದುವರೆದಿಲ್ಲ

ಬ್ಯಾಡ್ಮಿಂಟನ್[ಬದಲಾಯಿಸಿ]

 • ಮಹಿಳೆ: ಸಿಂಗಲ್ಸ್:
 • ಪಿ.ವಿ.ಸಿಂಧು:
ಕ್ರೀಡಾಪಟು ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಪದಕ
ಪಿ.ವಿ. ಸಿಂಧು ಸರೊಸಿ(ಹಂಗೆರಿ) ಲೀ (ಕೆನಡ) ತಾಯಿ ತಾ ಚೀನಾ ಟೈಫೆ ವಾಂಗ್ (ಚೀನಾ) ನಜೊಮಮಿ ಓಕೊಹರಾ(ಜಪಾನ್ ಕೆರೊಲಿನಾ ಮೆರಿನ್ (ಸ್ಪೈನ್) ರ್ಯಾಂಕ್
1ನೇ,2ನೇ, 3ನೇ ಆಟ ಅಂಕಗಳು 21-8,21–9 19-21, 21-15, 21-17. 21-13, 21-15 22–20, 21–19 21–19, 21–10 21–19, 12–21, 15–21)
ಫಲಿತಾಂಶ ಗೆಲವು ಗೆಲವು ಗೆಲವು ಗೆಲವು ಗೆಲವು ಸೋಲು 22 ಬೆಳ್ಳಿ

ಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಗೆದ್ದ ಭಾರತದ ಪಿ.ವಿ. ಸಿಂಧು ಬೆಳ್ಳಿ ಪದಕ; ಗಳಿಸಿದ ಸ್ಪೇನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‍ ಚಿನ್ನದ ಪದಕ, ಮತ್ತು ಜಪಾನಿನ ನೊಜೊಮಿ ಒಕುಹರಾ ಕಂಚಿನ ಪದಕ ಪಡೆದರು.

ಮುಖ್ಯಾಂಶಗಳು
 • ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ
 • ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ
 • ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು
 • ಪಿ.ವಿ. ಸಿಂಧು ಅವರಿಗೆ ₹ 50 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರು ಒಂದು ಕೋಟಿ ನೀಡುವುದಾಗಿದೆ ಘೋಷಿಸಿದ್ದಾರೆ. [೧೫]
 • ಫೋಟೊ:[[https://web.archive.org/web/20160820194804/http://www.prajavani.net/news/article/2016/08/20/432323.html Archived 2016-08-20 at the Wayback Machine.]]

ಟೇಬಲ್ ಟೆನ್ನಿಸ್[ಬದಲಾಯಿಸಿ]

 • ಶರತ್ ಕಮಲ್ ಅಚಂತ -> (ಈವೆಂಟ್: ಪುರುಷರ ಸಿಂಗಲ್ಸ್),X ಕ್ರಿಸನ್Crişan (ROU)L 1–4(ಸೋಲು)
 • ಸೌಮ್ಯಜಿತ್ ಘೋಷ್ ->X ತನ್ವಿರಿಯವೆಚಕುಲ್ (Tanviriyavechakul) (THA)L 1–4(ಸೋಲು)
 • ಮಹಿಳೆಯರ ಸಿಂಗಲ್ಸ್:
 • ಮಾನಿಕಾ ಬಾತ್ರಾ -?X ಗ್ರೈಬವೆಸ್ಕ (Grzybowska) (POL)L 2–4 (ಸೋಲು)
 • ಮೌಮಾ ದಾಸ್ -> X ದೊಡೀನ್ (Dodean) (ROU)ರೊಮೇನಿಯ:L 0–4(ಸೋಲು)

[೧೬] [೧೭]

ಟೆನ್ನಿಸ್ ಪುರುಷರು-ವನಿತೆಯರು[ಬದಲಾಯಿಸಿ]

 • 06/08/2016ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ (ಅನಿರೀಕ್ಷಿತ) 4–6, 6–7 ರಲ್ಲಿ ಪೋಲೆಂಡ್‌ನ ಮಾರ್ಸಿನ್‌ ಮಟೋವ್‌ಸ್ಕಿ ಮತ್ತು ಲುಕಾಸ್‌ ಕುಬೊಟ್‌ ಕೈಯಲ್ಲಿ ಪರಾಭವಗೊಂಡರು. ಪುರುಷರ ಡಬಲ್ಸ್‌ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.[೧೮]
 • ಮಹಿಳೆಯರು :ಜೋಡಿ:
 • ಮಿಶ್ರ ಡಬಲ್ಸ್:
 • ಸಾನಿಯಾ ಮಿರ್ಜಾ+ಪ್ರಾರ್ಥನಾ ತೊಂಬ್ರೆ ದಿ6 ಆಗಸ್ಟ್->X ಪೆಂಗ್ (Peng S)+ಜಾಂಗ್ S (ಚೈನಾ)L 6–7(6–8), 7–5, 5–7 (ಸೋಲು)
 • 13 August; ಮಿಶ್ರ ಡಬಲ್ಸ್:ಸಾನಿಯಾ ಮಿರ್ಜಾ+ಬೊಪಣ್ಣ Xಸ್ಟೊಸುರ್‍ ಪೀಅರ್ಸ್ (AUS)+ಮುರ್ರೇ (GBR)W 7–5, 6–4(೧/೧೬) :->
 • 13 August; ಮಿಶ್ರ ಡಬಲ್ಸ್:ಸಾನಿಯಾ ಮಿರ್ಜಾ+ಬೊಪಣ್ಣ Xಸ್ಟೊಸುರ್‍ ವಾಟ್ಸನ್ USA /W 6–4, 6–4 {ನಂತರ->X ವಿ ವಿಲಿಯಮ್ಸ್ ೧/೮ -> ೧/೪->ರಾಮ್ಸ್(USA)}
 • 1/16 ->Xಸ್ಟೊಟರ್ +ಪೀರ್ಸ್ ಆಸ್ಟ್ರೇಲಿಯ W: 7–5,6–4(ಗೆಲುವು);
 • 1/8->Xವ್ಯಾಟ್ಸನ್ +ಮರ್ರೇ ಗ್ರೇ.ಬ್ರಿ.W: 6–4, 6–4(ಗೆಲುವು);
 • 1/4->Xವೀನಸ್ ವಿಲಿಯಮ್ಸ್ +ರಾಜೀವ್ ರಾಮ್(USA) L 6–2, 2–6, [3–10] (ಸೋಲು)
 • ೩ನೇ ಸ್ಥಾನಕ್ಕೆ-> X ಹೃದೇಕ್+ ಸ್ಟೆಪನಾಕ್ (ಜೆಕ್)?

[೧೯]

ಮಹಿಳೆಯರ ಗಾಲ್ಫ್‌: ಅದಿತಿ ಅಶೋಕ್‌[ಬದಲಾಯಿಸಿ]

 • ಗಾಲ್ಫ್‌ ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನ ಮೂರನೇ ಸುತ್ತಿನಲ್ಲಿ ಭಾರತದ ಗಾಲ್ಫ್ ಆಟಗಾರ್ತಿ, ಬೆಂಗಳೂರು ಮೂಲದ ಅದಿತಿ ಅಶೋಕ್‌ ಟಿ 56 ಸ್ಥಾನಕ್ಕೆ ಕುಸಿದಿದ್ದಾರೆ. ಎರಡು ಸುತ್ತುಗಳಲ್ಲಿ ಉತ್ತಮ ಆಟವಾಡಿದ ಅದಿತಿ ಮೂರನೇ ಸುತ್ತಿನಲ್ಲಿ ಗೆಲುವು ಸಮೀಪಿಸಲು ವಿಫಲರಾಗಿದ್ದಾರೆ. 18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ.

ರಿಯೊ ಒಲಿಂಪಿಕ್ಸ್‌-ಪದಕ ನಿರೀಕ್ಷೆ[ಬದಲಾಯಿಸಿ]

 • ಲಂಡನ್‌ ಒಲಿಂ ಪಿಕ್ಸ್‌ನಲ್ಲಿ ಭಾರತ ತಂಡವು ಆರು ಪದಕ ಗಳನ್ನು ಗೆದ್ದಿತ್ತು. ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 12 ಪದಕ ನಿರೀಕ್ಷಯಿದೆ, ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 • ಭಾರತದ ಏಳು ಬ್ಯಾಡ್ಮಿಂಟನ್ ಆಟಗಾರರು ರಿಯೊ ಒಲಿಂಪಿಕ್ಸ್‌ ಅರ್ಹೆ ಪಡೆದಿದ್ದಾರೆ:
ಬ್ಯಾಡ್ಮಿಂಟನ್
 • ೧.ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದಿರುವ ಸೈನಾ ನೆಹ್ವಾಲ್;
 • ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ. ವಿ. ಸಿಂಧು;
 • ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾಗುಟ್ಟಾ–ಅಶ್ವಿನಿ ಪೊನ್ನಪ್ಪ;
 • ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್;
ಚಾಂಪಿಯನ್ಸ್ ಟ್ರೋಫಿ ಹಾಕಿ ೨೦೧೬
 • ಲಂಡನ್ ನೆಡೆಯುತ್ತಿರವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ ತಂಡದ ವಿರುದ್ಧ 2- 4 ಅಂತರದಲ್ಲಿ ಸೋಲು ಅನುಭವಿಸಿದ್ದರೂ, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ 36 ವರ್ಷಗಳ ಬಳಿಕ ಫೈನಲ್‍ಗೇರುವ ಅವಕಾಶ ಗಿಟ್ಟಿಸಿಕೊಂಡಿದೆ. 5 ಅಂಕಗಳನ್ನು ಗಳಿಸಿದ್ದ ಬ್ರಿಟನ್ಗ್ರೇಟ್ ಬ್ರಿಟನ್, ಬೆಲ್ಜಿಯಂ ವಿರುದ್ಧ 3 -3 ಡ್ರಾ ಸಾಧಿಸಿದ್ದರಿಂದ ಭಾರತಕ್ಕೆ ಫೈನಲ್ ಪ್ರವೇಶಿಸುವ ಅರ್ಹತೆ ಒಲಿದುಬಂತು. 7 ಅಂಕಗಳನ್ನು ಗಳಿಸಿರುವ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
 • ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ:
 • ರಿಯೊ ಒಲಿಂಪಿಕ್ಸ್‌ನ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಮಾಡಲಿದೆ. ಪ್ರತಿಯೊಂದು ಕ್ರೀಡೆಯ ವೀಕ್ಷಕ ವಿವರಣೆಗೆ ಆಯಾ ವಿಭಾಗದ ಪರಿಣಿತರನ್ನು ನೇಮಕ ಮಾಡಿದೆ. ಮಾಜಿ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಒಲಿಂಪಿಯನ್ ಶೂಟರ್ ಅಂಜಲಿ ಭಾಗ್ವತ್, ಮಾಜಿ ಹಾಕಿ ಪಟು ವಿರೇನ್ ರಸ್ಕೀನಾ, ಈಜುಪಟು ಇಯಾನ್ ಥೋರ್ಪ್ ಅವರು ವೀಕ್ಷಕ ವಿವರಣೆ ನೀಡಲಿದ್ದಾರೆ.

[೨೦]

ಹತ್ತು ಲಕ್ಷ ರೂಪಾಯಿ ಬಹುಮಾನ[ಬದಲಾಯಿಸಿ]

 • ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ವನಿತೆಯರ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ರೇಣುಕಾ ಯಾದವ್ ಅವರಿಗೆ ಛತ್ತೀಸಗಡ ರಾಜ್ಯ ಸರ್ಕಾರವು ಹತ್ತು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ರಾಜನಂದಗಾಂವ್‌ನ ರೇಣುಕಾ ಅವರು ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾದ ಛತ್ತೀಸಗಢದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಿಯೊ ಪ್ರಾಯೋಜಕತ್ವ: ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ರಿಲಯನ್ಸ್ ಜಿಯೊ ಡಿಜಿಟಲ್ ಸರ್ವಿಸಸ್ ಸಂಸ್ಥೆಯು ಪ್ರಾಯೋಜಕತ್ವ ನೀಡುತ್ತಿದೆ.

ಕರ್ನಾಟಕದ ಕ್ರೀಡಾಪಟುಗಳಿಗೆ ಕೊಡಿಗೆ[ಬದಲಾಯಿಸಿ]

 • ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ ಸೇರಿದಂತೆ ಮೊದಲಾದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವ 41 ಕ್ರೀಡಾಪಟುಗಳಿಗೆ ಒಟ್ಟು ರೂ.1.48 ಕೋಟಿ ಬಹುಮಾನ. ಹೆಚ್ಚು ಮೊತ್ತ ಪಡೆದಿದ್ದು ಟೆನಿಸ್‌ ಆಟ ಗಾರ ಬಿ.ಆರ್‌. ನಿಕ್ಷೇಪ್‌ (ರೂ.8 ಲಕ್ಷ)[೨೧]
 • ಕರ್ನಾಟಕದ ಕ್ರೀಡಾ ಪಟುಗಳು:
ಕ್ರ.ಸ. ಕ್ರೀಡಾ ಪಟುಗಳು ವಿವರ
1 ಎಂ.ಆರ್‌.ಪೂವಮ್ಮ (4x400ರಿಲೇ) ಮಂಗಳೂರು ನಗರದಲ್ಲಿ ತಮ್ಮ ಅಥ್ಲೆಟಿಕ್ಸ್‌ ಬದುಕು ಆರಂಭಿಸಿದ ಎಂ.ಆರ್.ಪೂವಮ್ಮ ಅವರಿಗೆ ಇದು ಎರಡನೇ ಒಲಿಂಪಿಕ್ಸ್‌. ಬೀಜಿಂಗ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅವರು ಗಾಯದ ಕಾರಣ ಲಂಡನ್‌ ಒಲಿಂಪಿಕ್ಸ್‌ ಗೆ ಹೋಗಿರಲಿಲ್ಲ. ಇಂಚೆನ್ ಏಷ್ಯನ್‌ ಕ್ರೀಡಾಕೂಟದ ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರನ್ನೊಳಗೊಂಡ ರಿಲೇ ತಂಡ ಕೊನೆಯ ಕ್ಷಣದಲ್ಲಿ ರಿಯೊ ಒಲಿಂಪಿಕ್ಸ್‌ಗೆ ಅವಕಾಶ ಪಡೆದುಕೊಂಡಿದೆ.
2 ರೋಹನ್ ಬೋಪಣ್ಣ (ಟೆನಿಸ್‌) ಕೊಡಗು ಜಿಲ್ಲೆಯ ರೋಹನ್‌ ಬೋಪಣ್ಣ ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಆಡಲಿದ್ದಾರೆ. ಈ ಜೋಡಿಗಳು ಪದಕದ ಭರವಸೆ ಮೂಡಿಸಿವೆ. ಗ್ರ್ಯಾಂಡ್‌ಸ್ಲಾಮ್‌ ಹಾಗೂ ಇತರ ಟೂರ್ನಿಗಳಲ್ಲಿ ಗಮನ ಸೆಳೆದಿರುವ ಇವರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ.
3 ವಿಕಾಸ್‌ ಗೌಡ (ಡಿಸ್ಕಸ್‌ ಥ್ರೋ) ವಿಕಾಸ್‌ ಗೌಡ ಅವರಿಗಿದು ನಾಲ್ಕನೇ ಒಲಿಂಪಿಕ್ಸ್‌. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಹೋದ ವರ್ಷ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ಅಥ್ಲೆಟಿಕ್‌ ಕೂಟದಲ್ಲಿ 65.14 ಮೀಟರ್ಸ್‌ ದೂರ ಡಿಸ್ಕ್‌ ಎಸೆದು ರಿಯೊಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಬೆಳೆದು ಅಲ್ಲಿಯೇ ತರಬೇತಿ ಪಡೆಯುತ್ತಿರುವ ವಿಕಾಸ್‌ ಮೈಸೂರು ಮೂಲದವರು.
4 ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂಟನ್‌) ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಕೊಡಗಿನ ಅಶ್ವಿನಿ ಪೊನ್ನಪ್ಪ ಅವರಿಗಿದು ಎರಡನೇ ಒಲಿಂಪಿಕ್ಸ್‌. ಹೈದರಾಬಾದ್‌ನ ಜ್ವಾಲಾ ಗುಟ್ಟಾ ಜೊತೆಗೂಡಿ ಏಳೆಂಟು ವರ್ಷಗಳಿಂದ ಮಹಿಳೆಯರ ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ. ಪ್ರಸಕ್ತ ಹೈದರಾಬಾದ್‌ನಲ್ಲಿ ನೆಲೆಸಿ ತರಬೇತಿ ಪಡೆಯುತ್ತಿದ್ದಾರೆ.
5 ಪ್ರಕಾಶ್ ನಂಜಪ್ಪ(ಶೂಟಿಂಗ್‌) ಬೆಂಗಳೂರಿನ ಪ್ರಕಾಶ್ ನಂಜಪ್ಪ ಅವರು 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರು 2015ರ ಆಗಸ್ಟ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಈ ಅವಕಾಶ ಪಡೆದುಕೊಂಡಿದ್ದಾರೆ. ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ರಜತ ಪದಕ ಜಯಿಸಿದ್ದರು. ದಕ್ಷಿಣ ಕೊರಿಯದ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಂಚೆನ್‌ ಏಷ್ಯನ್‌ ಕೂಟದ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
6 ಅದಿತಿ ಅಶೋಕ್‌ (ಗಾಲ್ಫ್) 18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ. ಶ್ರೇಯಾಂಕದ ಆಧಾರದ ಮೇಲೆ ಬೆಂಗಳೂರು ಮೂಲದ ಇವರಿಗೆ ರಿಯೊಗೆ ತೆರಳಲು ಅವಕಾಶ ಲಭಿಸಿದೆ. ಏಷ್ಯನ್‌ ಕ್ರೀಡಾಕೂಟ ಹಾಗೂ ಯೂತ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಇವರು ಬ್ರಿಟಿಷ್‌ ಹವ್ಯಾಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.
7 ಅನಿರ್ಬನ್‌ ಲಾಹಿರಿ (ಗಾಲ್ಫ್‌) ಪಶ್ಚಿಮ ಬಂಗಾಳದ ಮೂಲದ ಲಾಹಿರಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಏಷ್ಯನ್ ಟೂರ್ ಜಯಿಸಿರುವ ಅವರು ಪ್ರಸಕ್ತ ಸಾಲಿನ ‘ಏಷ್ಯನ್ ಟೂರ್ ಆರ್ಡರ್ ಆಫ್ ಮೆರಿಟ್ ಕಿರೀಟ’ ಗೆದ್ದುಕೊಂಡಿದ್ದಾರೆ. ಪ್ರೆಸಿಡೆಂಟ್‌ ಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತ ಪ್ರಥಮ ಗಾಲ್ಫರ್‌ ಎಂಬ ಹಿರಿಮೆಯೂ ಲಾಹಿರಿ ಅವರದ್ದಾಗಿದೆ.

)

8 ಅಶ್ವಿನಿ ಅಕ್ಕುಂಜಿ (4x400 ರಿಲೇ) ಹಲವು ವಿವಾದಗಳನ್ನು ದಾಟಿ ಬಂದಿರುವ ಉಡುಪಿ ಜಿಲ್ಲೆಯ ಅಶ್ವಿನಿ ಅಕ್ಕುಂಜಿ ಅವರಿಗಿದು ಚೊಚ್ಚಲ ಒಲಿಂಪಿಕ್ಸ್‌. ದೆಹಲಿ ಕಾಮನ್‌ವೆಲ್ತ್‌ ಹಾಗೂ ಗುವಾಂಗ್‌ಜೌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ತಮ್ಮ ಪ್ರತಿಭೆ ಮೆರೆದಿರುವ ಅವರು ಒಲಿಂಪಿಕ್ಸ್‌ನಲ್ಲಿ ಅದೃಷ್ಟ ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. ಗುವಾಂಗ್‌ಜೌನಲ್ಲಿ ರಿಲೇ ಹಾಗೂ 400 ಮೀಟರ್ಸ್‌ ಓಟದಲ್ಲಿ ಚಿನ್ನ ಜಯಿಸಿದ್ದರು.
9 ಎಸ್‌.ಕೆ.ಉತ್ತಪ್ಪ(ಹಾಕಿ) ನಾಲ್ಕು ವರ್ಷಗಳ ಹಿಂದೆಯಷ್ಟೇ ಪದಾರ್ಪಣೆ ಮಾಡಿದ ಕೊಡಗಿನ ಮೂಲದ ಉತ್ತಪ್ಪ ಅವರ ಒಲಿಂಪಿಕ್ಸ್‌ ಕನಸು ಬಹುಬೇಗನೇ ಸಾಕಾರಗೊಂಡಿತು. ಅದೇ ವರ್ಷ ಲಂಡನ್‌ ಒಲಿಂಪಿಕ್ಸ್‌ಗೆ ತಂಡದಲ್ಲಿ ಸ್ಥಾನ ಪಡೆದರು.
10 ಎಸ್‌.ವಿ.ಸುನಿಲ್‌(ಹಾಕಿ) 2007ರಿಂದ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿರುವ ಕೊಡಗಿನ ಮೂಲದ ಸುನಿಲ್‌ ಅವರಿಗಿದು ಎರಡನೇ ಒಲಿಂಪಿಕ್ಸ್‌. 2012ರಲ್ಲಿ ಕೊನೆಯ ಸ್ಥಾನ ಪಡೆದಿದ್ದು ಅವರನ್ನು ಇನ್ನೂ ಕಾಡುತ್ತಿದೆ. ಆದರೆ, ಈಚೆಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಳ್ಳಿ ಜಯಿಸಿರುವುದು ವಿಶ್ವಾಸ ತುಂಬಿದೆ.
11 ನಿಕ್ಕಿನ್ ತಿಮ್ಮಯ್ಯ(ಹಾಕಿ) ಹಾಕಿ ಇಂಡಿಯ ಲೀಗ್‌ನಲ್ಲಿ ಉದಯಿಸಿದ ಕೊಡಗಿನ ಈ ಪ್ರತಿಭೆಗೆ ಇದು ಚೊಚ್ಚಲ ಒಲಿಂಪಿಕ್ಸ್‌. ಮುಂಚೂಣಿ ಆಟಗಾರ ನಿಕಿನ್‌, 73 ಅಂತರ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 15 ಗೋಲುಗಳನ್ನು ಗಳಿಸಿದ್ದಾರೆ.ಎಸ್‌.ವಿ.ಸುನಿಲ್‌, ವಿ.ಆರ್‌.ರಘುನಾಥ್, ಎಸ್‌.ಕೆ.ಉತ್ತಪ್ಪ ಹಾಗೂ ನಿಕಿನ್ ತಿಮ್ಮಯ್ಯ
12 ವಿ.ಆರ್‌.ರಘುನಾಥ್‌ (ಹಾಕಿ) ಡ್ರ್ಯಾಗ್‌ ಫ್ಲಿಕರ್‌ ಪರಿಣತ ರಘುನಾಥ್‌ ತಂಡದ ನಂಬಿಕಸ್ತ ಆಟಗಾರ. ಕೊಡಗಿನ ಮೂಲದ ಈ ಆಟಗಾರ 2005ರಿಂದ ಸೀನಿಯರ್ ತಂಡದಲ್ಲಿ ಆಡುತ್ತಿದ್ದು, ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ, ಇಂಚೆನ್‌ ಏಷ್ಯನ್‌ ಕೂಟದಲ್ಲಿ ಚಿನ್ನ ಗೆದ್ದ ತಂಡದ ಸದಸ್ಯ.
[೨೨]

ಹರಿಯಾನ ಸಾಕ್ಷಿ ಮಲ್ಲಿಕ್[ಬದಲಾಯಿಸಿ]

ಸಾಕ್ಷಿ ಮಲಿಕ್‌ ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಕುಸ್ತಿ ಕ್ರೀಡೆಯಲ್ಲಿ (17 ಆಗಸ್ಟ್,2016) ಸಾಕ್ಷಿ ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್‌ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್‌ ಗಳಿಸಿ ಗೆಲುವು ಪಡೆದರು.<>ಸಾಕ್ಷಿ ಮಲಿಕ್‌ ಅವರು ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ 58 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.<>2014ರಲ್ಲಿ ತಾಷ್ಕೆಂಟ್‌ ನಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿ ಯನ್‌ಷಿಪ್‌ನ 60 ಕೆ.ಜಿ. ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ 1–3ರಲ್ಲಿ ಪೆಟ್ರಾ ಮಾರಿಟ್‌ ಒಲ್ಲಿ ವಿರುದ್ಧ ಸೋತಿದ್ದರು<>2015ರ ದೋಹಾ ಏಷ್ಯನ್‌ ಚಾಂಪಿ ಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು.(ಅಂತಃಸತ್ವದ ಶಕ್ತಿಗೆ ’ಸಾಕ್ಷಿ’)

ಕ್ರೀಡಾಪಟುಗಳು[ಬದಲಾಯಿಸಿ]

ನೋಡಿ:ರಿಯೊ ಒಲಿಂಪಿಕ್ಸ್‌ ಮತ್ತು ಮಾದರಿ ಕಥನ::26 Aug, 2016::ಪೃಥ್ವಿ ದತ್ತ ಚಂದ್ರ ಶೋಭಿ Archived 2016-08-26 at the Wayback Machine.

೨೦೧೬ ಖೇಲ್‌ ರತ್ನ ಪ್ರಶಸ್ತಿ ಪ್ರದಾನ[ಬದಲಾಯಿಸಿ]

 • ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 Aug, 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು.[೨೩]

ನೋಡಿ[ಬದಲಾಯಿಸಿ]

 1. ೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ
 2. ೨೦೦೮ ಒಲಂಪಿಕ್ ಕ್ರೀಡಾಕೂಟ
 3. ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
 4. ರಿಯೊ ಒಲಿಂಪಿಕ್ಸ್ 2016
 5. ಲಂಡನ್ ಬೇಸಿಗೆ ಒಲಂಪಿಕ್ಸ್ 2012
 6. ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
 7. 2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ
 8. ಫೀಫಾ
 9. 17ನೇ ಏಷ್ಯನ್‌ ಕ್ರೀಡಾಕೂಟ 2014
 10. ಭಾರತದ ಮಹಿಳಾ ಹಾಕಿ ತಂಡ
 11. ಭಾರತದ ಪುರುಷರ ಹಾಕಿ ತಂಡ
 12. ಒಲಂಪಿಕ್ ಕ್ರೀಡಾಕೂಟ
 13. ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ
 14. ಅಥ್ಲೆಟಿಕ್ಸ್ ವಿಶ್ವದಾಖಲೆಗಳು

ವಿಶೇಷ ಓದಿಗೆ[ಬದಲಾಯಿಸಿ]

ಸಂಪರ್ಕ ಕೊಂಡಿಗಳು[ಬದಲಾಯಿಸಿ]

 1. *List of 2012 Summer Olympics medal winners
 2. *events/sports/೨೦೧೬:[[೯]]
 3. *events[[೧೦]]
 4. *ಒಲಂಪಿಕ್ ಇತಿಹಾಸ:[[permanent dead link]] [[permanent dead link]]
 5. List of Athelets:[[೧೧]]
 6. List of Athelets:[[೧೨]]

ಉಲ್ಲೇಖ[ಬದಲಾಯಿಸಿ]

 1. [೧೩][permanent dead link]
 2. "ಆರ್ಕೈವ್ ನಕಲು". Archived from the original on 2016-10-12. Retrieved 2016-07-24.
 3. indian-athletes-qualified-brazil[[೧೪]]
 4. ಪ್ರಜಾವಾಣಿ:೨-೭-೨೦೧೬[[೧೫]]
 5. (೩-೭-೨೦೧೬ ಪ್ಜಾವಾಣಿ)
 6. 05/6/2016 www.prajavani.net/article/ಒಲಿಂಪಿಕ್ಸ್‌ಗೆ-ಅವತಾರ್‌
 7. ರಿಯೊ-ಒಲಿಂಪಿಕ್‌-ಹಾಕಿ-ಶ್ರೀಜೇಶ್‌ಗೆ-ತಂಡದ-ನಾಯಕತ್ವ:12/ 07/2016prajavani.
 8. 03/08/2016;ಪ್ರಜಾವಾಣಿ:
 9. captaincy-Sreejesh[[೧೬]]
 10. ಕ್ರೀಡೆ-0[[https://web.archive.org/web/20160705003324/http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0 Archived 2016-07-05 at the Wayback Machine.]]
 11. ವನಿತಾ ಹಾಕಿ: ಭಾರತ-ಜಪಾನ್‌ 2-2 ಡ್ರಾ[permanent dead link]
 12. ಪದಕ ತಪ್ಪಿದರೂ ಮನಗೆದ್ದ ದೀಪಾ[permanent dead link]
 13. [[https://web.archive.org/web/20160821210415/http://www.prajavani.net/news/article/2016/08/20/432349.html Archived 2016-08-21 at the Wayback Machine.]]
 14. "ಕುಸ್ತಿ: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಸಾಕ್ಷಿ". Archived from the original on 2016-08-21. Retrieved 2016-08-18.
 15. "ಸಿಂಧು ಹೋರಾಟಕ್ಕೆ ಬೆಳ್ಳಿಯ ಬೆಡಗು". Archived from the original on 2016-08-20. Retrieved 2016-08-20.
 16. 2016-Rio-Olympics-Which-Indian-athletes-have-qualified[[೧೭]]
 17. indian-athletes[[೧೮]]
 18. tennis ace Leander Paes-Rohan Bopanna made an early exit
 19. [೧೯][permanent dead link]
 20. ಚಾಂಪಿಯನ್ಸ್-ಲೀಗ್-ಹಾಕಿ-ಫೈನಲ್‍ಗೆ-ಭಾರತ
 21. [೨೦]
 22. ಗೆದ್ದು ಬನ್ನಿ... ಖುಷಿ ತನ್ನಿ...01/08/2016
 23. ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ