ನಿಕ್ಕಿನ್ ತಿಮ್ಮಯ್ಯ

ವಿಕಿಪೀಡಿಯ ಇಂದ
Jump to navigation Jump to search
೨೦೦೦ರಲ್ಲಿ ಸಿಡ್ನಿಅಲ್ಲಿ ನಡೆದ ಹಾಕಿ ಒಲಿಂಪಿಕ್ಸ್
  • ನಿಕ್ಕಿನ್ ತಿಮ್ಮಯ್ಯಮೂಲ ಪುಟಕ್ಕೆ ವರ್ಗಾಯಿಸಿದೆ[‍[೧]]

ನಿಕ್ಕಿನ್ ತಿಮ್ಮಯ್ಯ

ನಿಕ್ಕಿನ್ ತಿಮ್ಮಯ್ಯ[ಬದಲಾಯಿಸಿ]

ಚಂದಂದ ನಿಕ್ಕಿನ್ ತಿಮ್ಮಯ್ಯನವರು ಭಾರತದ ಪ್ರಮುಖ ಹಾಕಿ ಆಟಗಾರರು. ಅವರು ೨೦೧೨ರಲ್ಲಿ ಭಾರತದ ಪುರುಷರ ಹಾಕಿ ತಂಡದಲ್ಲಿ ಆಡುವುದನ್ನು ಪ್ರಾರಂಭಿಸಿದರು. ಅವರು ಫಾರ್ವರ್ಡ್ ಸ್ಥಾನದಲ್ಲಿ ಆಡುತ್ತಾರೆ.

ಜನನ ಮತ್ತು ಜನ್ಮಸ್ಥಳ[ಬದಲಾಯಿಸಿ]

ಅವರು ೧೯೯೧ರಲ್ಲಿ ಜನವರಿ ೧೮ ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಹುಟ್ಟಿದರು [೧]. ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಭಾರತದ ಪುರುಷರ ಹಾಕಿ ತಂಡದಲ್ಲಿ ಆಡುತ್ತಿರುವ ವಿ. ಆರ್. ರಘುನಾಥ್ ಅವರು, ಎಸ್. ಕೆ. ಉತಪ್ಪ ಅವರು ಮತ್ತು ಎಸ್. ವಿ. ಸುನಿಲ್ ಅವರೂ ಸಹ ಕೊಡಗು ಜಿಲ್ಲೆಯಿಂದ ಬಂದವರು. ವೀರರಾಜಪೇಟೆಯನ್ನು ಕೊಡಗಿನ ದೊರೆ ವೀರರಾಜೆಂದ್ರ ಅವರು ೧೭೯೨ರಲ್ಲಿ ಕಟ್ಟಿಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿ ಇದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಕೂಡ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬ - ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಬಹಳ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.

ವಿದ್ಯಾಭ್ಯಾಸ[ಬದಲಾಯಿಸಿ]

ಅವರು ಸೈಂಟ್‍ ಜೋಸೆಫ್ ಕಾಮರ್ಸ್ ಕಾಲೇಜಿನಿಂದ ಪದವಿಯನ್ನು ಪಡೆದರು.

ಹಾಕಿ ಕ್ರೀಡೆಗೆ ಪರಿಚಯ[ಬದಲಾಯಿಸಿ]

ಹಾಕಿ ಆಟದಲ್ಲಿ ಹಲವಾರು ವಿಧಗಳಿವೆ, ಉದಾಹರಣೆಗೆ: ಐಸ್ ಹಾಕಿ, ರೋಲರ್ ಹಾಕಿ, ಸ್ಲೆಡ್ಜ್ ಹಾಕಿ, ಸ್ಟ್ರೀಟ್ ಹಾಕಿ ಮುಂತಾದವು. ಫೀಲ್ಡ್ ಹಾಕಿ ಅಥವಾ ಮೈದಾನದ ಹಾಕಿಯನ್ನು ಗರಸು, ನೈಸರ್ಗಿಕ ಹುಲ್ಲಿನ ಮೇಲೆ, ಮರಳು-ಆಧಾರಿತ ಅಥವಾ ನೀರಿನಾಧಾರಿತ ಕೃತಕ ಹುಲ್ಲಿನ ಮೇಲೆ, ಸಣ್ಣವಾದ, ಗಟ್ಟಿಯುಳ್ಳ ಬಾಲ್ ಬಳಸಿ ಆಟವಾಡಲಾಗುತ್ತದೆ. ನವೀನ ಮಾದರಿಯ ಫೀಲ್ಡ್ ಹಾಕಿ ಸ್ಟಿಕ್‌ಗಳು J- ಆಕಾರದಲ್ಲಿರುತ್ತವೆ ಮತ್ತು ಮರ, ಗ್ಲಾಸ್ ಫೈಬರ್ ಅಥವಾ ಕಾರ್ಬನ್ ಫೈಬರ್‌ಗಳ ಮಿಶ್ರಣದಿಂದ ತಯಾರಿಸಲಾಗಿದೆ ಮತ್ತು ಆಟವಾಡುವ ಕೊನೆಯ ಬದಿಯು ಡೊಂಕಾಗಿ ಬಾಗಿರುತ್ತದೆ, ಆಟವಾಡುವ ಬದಿಯು ಸಮಾಂತರ ಮೇಲ್ಮೈಯಿದ್ದು ಮತ್ತು ಕೊನೆಯ ಬದಿಯು ಡೊಂಕಾದ ಮೇಲ್ಮೈ ಇರುತ್ತದೆ.ಈ ಆಟವು ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ. ಭಾರತ, ಅಮೆರಿಕ, ಐರ್ಲೆಂಡ್, ನೆದರ್ಲೆಂಡ್, ರಷ್ಯಾ ಮತ್ತು ಬೆಲ್ಜಿಯಂ ಹಾಕಿ ಆಡುವ ಪ್ರಮುಖ ರಾಷ್ಟ್ರಗಳು. ಭಾರತ ಮತ್ತು ಪಾಕಿಸ್ತಾನದಲ್ಲಿ ಫೀಲ್ಡ್ ಹಾಕಿಯು ರಾಷ್ಟ್ರೀಯ ಕ್ರೀಡೆ ಆಗಿದೆ.[೨] ಹೆಚ್ಚಿನ ದೇಶಗಳಲ್ಲಿ, ಆಟವನ್ನು ಒಂದು ಜಾತಿಯ ಪುರುಷ ಅಥವಾ ಮಹಿಳೆಯರ ವಿಭಾಗಗಳಲ್ಲಿ ಆಡಲಾಗುತ್ತದೆ, ಅಲ್ಲದೇ ಇಬ್ಬರೂ ಇರುವಂತಹ ತಂಡಗಳಲ್ಲಿ ಕೂಡಾ ಆಡಬಹುದು. ಅಂತರಾಷ್ಟ್ರೀಯ ಹಾಕಿ ಫೆಡೆರೇಶನ್, ೧೧೬ ಸದಸ್ಯರುಗಳಿಂದ ಕೂಡಿದ ಆಡಳಿತ ಮಂಡಳಿಯಾಗಿದೆ. ೧೯೦೮ ರಿಂದ ಪುರುಷರ ಫೀಲ್ಡ್ ಹಾಕಿಯನ್ನು ಪ್ರತಿ ಸಮ್ಮರ್ ಒಲಂಪಿಕ್ ಗೇಮ್ಸ್ ನಲ್ಲಿ ಆಡಲಾಗುತ್ತಿದೆ. ನಿಕ್ಕಿನ್ ತಿಮ್ಮಯ್ಯನವರು ಸೈಂಟ್‍ ಜೋಸೆಫ್ ಇಂಡಿಯನ್ ಪ್ರೌಢಶಾಲೆಯಲ್ಲಿ ೬ನೇ ತರಗತಿಯನ್ನು ಓದುತ್ತಿದ್ದಾಗ ಅವರು ಹಾಕಿಯನ್ನು ಆಡಲು ಆರಾಂಭ ಮಾಡಿದರು. ಆದರೆ ೧೫ ವರ್ಷಗಳ ವಯಸ್ಸಿನಲ್ಲಿ ಹಾಕಿ ಆಡುವುದು ಬಿಟ್ಟು ಅಥ್ಲೆಟಿಕ್ಸ್ ಅಲ್ಲಿ ಸೇರಿಕೊಂಡರು. ಅವರು ಓಪನ್‍ ನ್ಯಾಷನಲ್ಸ್ ಪಂದ್ಯಾವಳಿಯ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಲಿ ಪದಕವನ್ನೂ ಪಡೆದರು. ಹಾಕಿ ಆಡುವುದು ಬಿಟ್ಟು ಒಂದು ವರ್ಷ ಕಳೆದ ನಂತರ, ಅವರ ತಂದೆಯ ಸಲಹೆಯ ಪ್ರಕಾರ ಮತ್ತೆ ಹಾಕಿ ಆಡತೊಡಗಿದರು. ಅವರು ಶ್ರದ್ಧೆಯಿಂದ ಹಾಕಿ ಆಡುವುದನ್ನು ಅಭ್ಯಾಸ ಮಾಡಿದ ನಂತರ ಅವರು ಭಾರತದ ಪುರುಷರ ಹಾಕಿ ತಂಡದಲ್ಲಿ ಆಯ್ಕೆಯಾದರು.

ನಿಕ್ಕಿನ್ ತಿಮ್ಮಯ್ಯನವರ ಸಾಧನೆಗಳು[ಬದಲಾಯಿಸಿ]

೨೦೧೨ರಲ್ಲಿ ಅವರು ಎರಡೇ ನಿಮಿಷಗಳಲ್ಲಿ ೨ ಗೋಲ್ಸ್ ಗಳಿಸಿ ಮುಂಬಯಿ ಮೆರೈನ್ಸ್ ತಂಡವನ್ನು ಸೋಲಿಸಿದರು. ಅವರು ೨೦೧೪ರಲ್ಲಿ ಅಪಘಾತಕ್ಕೆ ಈಡಾದರು. ವೈದ್ಯರು ಒಂದು ತಿಂಗಳಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು. ಆದ್ದರಿಂದ ಅವರು ಹಾಕಿ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ. ನಂತರ ಕೊರಿಯನಲ್ಲಿ ನಡೆದ ಏಷಿಯಾ ಗೇಮ್ಸ್ ಮತ್ತು ಕಾಮನ್‍ವೆಲ್ಥ್ ಗೇಮ್ಸ್ ಪಂದ್ಯಾವಳಿಯಲ್ಲಿ ಹಾಕಿ ಆಡಿದರು. ಭಾರತ ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ವಿ.ಆರ್. ರಘುನಾಥ್ ಅವರು, ಎಸ್.ವಿ. ಸುನಿಲ್ ಅವರು ಮತ್ತು ನಿಕಿನ್‌ ತಿಮ್ಮಯ್ಯನವರು ಇದ್ದರು. ಈ ತಂಡ ೨೦೧೪ರಲ್ಲಿ ನಡೆದ ೧೭ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿತು. ೨೦೧೫ರಲ್ಲಿ ಸುಲ್ತಾನ್ ಅಜ಼್ಲಾನ್ ಷಾಹ್ ಕಪ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರು. ಆದರೆ ಅನಿರೀಕ್ಷಿತವಾಗಿ ಅವರ ಬಲಗಡೆಯ ಭುಜ ತೀವ್ರವಾಗಿ ಗಾಯಗೊಂಡಿತು. ಆದ್ದರಿಂದ ಹಾಕಿ ವಿಷ್ವ ಲೀಗ್ ಫೈನಲ್ಸ್ ಅಲ್ಲಿ ಅವರು ಆಡುವುದು ಸಾಧ್ಯವಾಗಲಿಲ್ಲ. ಆದರೂ ಅವರು ಭರವಸೆಯನ್ನು ಬಿಡದೆ ಪಟ್ಟುಹಿಡಿದು ಅಭ್ಯಾಸಯನ್ನು ಮುಂದುವರೆಸಿದರು. ೨೦೧೬ರಲ್ಲಿ ಅವರು ಹೀರೋ ಹಾಕಿ ಲೀಗ್ ಅಲ್ಲಿ ಪಾಲ್ಗೊಂಡು, ಮತ್ತೆ ಹಾಕಿ ಆಡುವುದನ್ನು ಪುನರಾಗಮನ ಮಾಡಿದರು. ಏಷಿಯನ್ ಗೇಮ್ಸ್ ಚಾಂಪಿಯನ್ಸ್ ೨೦೧೫ರ ಮೊದಲ ಪಂದ್ಯದಲ್ಲಿ ಕರ್ನಾಟಕದ ಮತ್ತೊಬ್ಬ ಆಟಗಾರ ರಘುನಾಥ್‍ರವರೊಂದಿಗೆ ಸೇರಿ ಗೋಲ್‍‍ಗಳಿಸುವುದರ ಮೂಲಕ ಕೊರಿಯ ಎದುರು ೨-೨ ಗೋಲುಗಳಿಂದ ಡ್ರಾ ಫಲಿತಾಂಶ ಸಿಗುವಂತೆ ಮಾಡಿದರು. ೨೦೧೬ರಲ್ಲಿ ಅವರು ಲಂಡನ್ ಅಲ್ಲಿ ನಡೆದ ಹಾಕಿ ಚಾಂಪಿಯನ್ಸ್ ಟ್ರೋಫಿ ಕ್ರೀಡಾಯುದ್ಧದಲ್ಲಿ ಭಾಗಿಯಾಗಿ ಆ ಸ್ಪರ್ಧೆಯಲ್ಲಿ ವಿಜಯವನ್ನು ಸಾಧಿಸಿದರು.

  1. http://hockeyindia.org/team/nikin-thimmaiah.html
  2. https://en.wikipedia.org/wiki/National_Games_of_India