ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬೇಸಿಗೆ ಒಲಿಂಪಿಕ್ಸ್ 2012 ಲಂಡನ್ನಲ್ಲಿ[ಬದಲಾಯಿಸಿ]

India
ಭಾರತ
ರಿಯೊ ಒಲಿಂಪಿಕ್ಸ್ 2016
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳುಬಳೆಗಳು:೧.ಏಷ್ಯಾ, ೨.ಯೂರೋಪ್, ೩.ಆಫ್ರಕಾ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು. *ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ "ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ

೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫

ಸಂಕ್ಷಿಪ್ತ ವಿವರ
 • ಹೆಸರು = 2012 ಬೇಸಿಗೆ ಒಲಿಂಪಿಕ್ಸ್,
 • ಭಾಗವಹಿಸುವವರು=83
 • ಕ್ರೀಡೆ=13
 • ಮನುಕುಲಕ್ಕೆ ಸ್ಫೂರ್ತಿ
 • ಭಾಗವಹಿಸುವ ಕ್ರೀಡಾಪಟುಗಳು=10.768
 • (5,992 ಪುರುಷರು, 4.776 ಮಹಿಳೆಯರು)
 • 2016
 • 2012
 • ೨೦೦೮
.
 • ಭಾರತವು ಆಗಸ್ಟ್ 2012 27 ಜುಲೈ 12, ಲಂಡನ್ನಲ್ಲಿ 2012 ಬೇಸಿಗೆ ಒಲಿಂಪಿಕ್ಸ್ ಸ್ಪರ್ಧಿಸಿತು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಒಲಿಂಪಿಕ್ ಇತಿಹಾಸದಲ್ಲಿಯೇ ದೇಶದ ದೊಡ್ಡ ಕ್ರೀಡಾಪಟುಗಳ ನಿಯೋಗ ಕಳುಹಿಸಿತು. 83 ಕ್ರೀಡಾಪಟುಗಳು, 60 ಪುರುಷರು ಮತ್ತು 23 ಮಹಿಳೆಯರು ಒಟ್ಟು 13 ಕ್ರೀಡೆಗಳಲ್ಲಿ ಸ್ಪರ್ಧಿಸಿದರು. ಇದರಲ್ಲಿ ಪುರುಷರ ಹಾಕಿ ತಂಡಆಧಾರಿತ ಕ್ರೀಡೆಯಾಗಿತ್ತು. ಭಾರತ ಒಲಿಂಪಿಕ್ ಟೀಮ್ ಆಟಗಳಲ್ಲಿ ಈ ಹಾಕಿ ತಂಡ ಮಾತ್ರ ಅದರ ಪ್ರಾತಿನಿಧ್ಯವನ್ನು ಹೊಂದಿದೆ. [೧]

ಒಲಂಪಿಕ್ ಸಂಕ್ಷಿಪ್ತ ಇತಿಹಾಸ[ಬದಲಾಯಿಸಿ]

 • 3 ಸಾವಿರ ವರ್ಷಗಳ ಹಿಂದೆ ಗ್ರೀಸ್‌ ದೇಶದ ಮೂಲೆಯಲ್ಲಿ ರಸ್ತೆ ಓಟದ ಸ್ಪರ್ಧೆಯ ಮೂಲಕ ಆರಂಭವಾದ ಈ ಕ್ರೀಡಾಕೂಟ ಇಂದು ಜಗತ್ತಿನ ಹೆಮ್ಮೆ. ಇಡೀ ವಿಶ್ವವನ್ನೇ ಒಂದು ತಿಂಗಳ ಕಾಲ ತನ್ನತ್ತ ಸೆಳೆಯಲಿರುವ ಈ ಕ್ರೀಡಾಕೂಟದ ಕುರಿತು ಇಲ್ಲಿ ಸರಣಿ ರೂಪದ ಮಾಹಿತಿ ಮೂಡಿಬರಲಿದೆ. ಪ್ರಾಚೀನ ಮತ್ತು ಆಧುನಿಕ ಒಲಿಂಪಿಕ್ಸ್‌ನ ಕುರಿತ ಮಾಹಿತಿ:

ಒಲಿಂಪಿಕ್ಸ್‌ ಜನ್ಮ[ಬದಲಾಯಿಸಿ]

 • ಗ್ರೀಕರ ದೇವತೆಯಾದ ಜೀಅಸ್‌, ವಿಶ್ವದ ಮೇಲಿನ ಅಧಿಪತ್ಯದ ವಿಷಯದಲ್ಲಿ ತಂದೆಯ ಜತೆಗೇ ಕಾಳಗವಾಡಿ ಗೆಲ್ಲುತ್ತಾನೆ. ಈ ಹಿನ್ನೆಲೆಯಲ್ಲಿ ಒಲಿಂಪಿಯಾ ಎಂಬ ನಗರದಲ್ಲಿ ಜನರು ಜೀಅಸ್‌ನ ದೊಡ್ಡ ಪ್ರತಿಮೆ ಮತ್ತು ದೇಗುಲ ಸ್ಥಾಪಿಸಿ ಆತನನ್ನು ಆರಾಧಿಸುತ್ತಾರೆ. ಮುಂದೆ ಜೀಅಸ್‌ನ ಪ್ರಾರ್ಥಿಸುವ ಧಾರ್ಮಿಕ ಆಚರಣೆ, ಹಬ್ಬಗಳು ಪ್ರಾರಂಭವಾಗುತ್ತದೆ. ಹೀಗೆ ಹಬ್ಬಗಳ ವೇಳೆ ನಡೆದ ಸ್ಪರ್ಧೆಯೇ ಮುಂದೆ ಒಲಿಂಪಿಕ್ಸ್‌ ಎಂದು ಕರೆಸಿಕೊಳ್ಳುತ್ತದೆ ಎಂಬುದು ಒಂದು ಕತೆ ಆದರೆ ಒಲಿಂಪಿಕ್ಸ್‌ ಜನ್ಮತಾಳಿದ ಕುರಿತು ಇನ್ನೂ ಹಲವು ಕತೆಗಳಿವೆ.
 • ಅಡುಗೆ ಭಟ್ಟನೇ ಮೊದಲ ವಿಜೇತ!
 • ಒಲಿಂಪಿಕ್ಸ್‌ನ ತವರೂರು ಗ್ರೀಸ್‌ ದೇಶ. ಮೊದಲ ಕ್ರೀಡಾಕೂಟ ನಡೆದಿದ್ದು ಕ್ರಿಸ್ತಪೂರ್ವ 776ರಲ್ಲಿ. ಮೊದಲ ಕ್ರೀಡಾಕೂಟದಲ್ಲಿ ಇದ್ದಿದ್ದು ಒಂದೇ ಸ್ಪರ್ಧೆ. ಅದು 192 ಮೀಟರ್‌ ಓಟ. ಮೊದಲ ಒಲಿಂಪಿಕ್ಸ್‌ನ ಮೊದಲ ಸ್ಪರ್ಧೆ ಗೆದ್ದಿದ್ದು ಕೊರೊಬಸ್‌ ಎಂಬ ಅಡುಗೆ ಭಟ್ಟ. ಆಗ ಪ್ರತಿ 4 ವರ್ಷಗಳಿಗೊಮ್ಮೆ ಕ್ರೀಡಾಕೂಟ ನಡೆಯುತ್ತಿತ್ತು. ಮೊದಲ 13 ಒಲಿಂಪಿಕ್ಸ್‌ಗಳಲ್ಲೂ ಕೇವಲ ಒಂದು ಸ್ಪರ್ಧೆ ಮಾತ್ರ ಇತ್ತು. ಹಲವು ಶತಮಾನಗಳ ಕಾಲ ಗ್ರೀಸರಿಗೆ ಮಾತ್ರ ಕ್ರೀಡೆಯಲ್ಲಿ ಭಾಗಿಯಾಗುವ ಅವಕಾಶ ಇತ್ತು. ಮಹಿಳೆಯರು ಭಾಗವಹಿಸುವುದಿರಲಿ, ನೋಡಿದರೂ, ಗಲ್ಲು ಶಿಕ್ಷೆ ವಿಧಿಸಲಾಗುತ್ತಿತ್ತು.
 • ವಿಜೇತರಿಗೆ ಆಲಿವ್‌ ಎಲೆಯ ಕಿರೀಟ
 • ಒಲಿಂಪಿಕ್ಸ್‌ನಲ್ಲಿ ವಿಜೇತರಾದವರಿಗೆ ಹಲವು ಶತಮಾನಗಳ ಕಾಲ, ಜೀಅಸ್‌ ದೇಗುಲದ ಹಿಂಬದಿಯಲ್ಲೇ ಬೆಳೆದ ಆಲಿವ್‌ ಮರದ ಎಲೆಗಳಿಂದ ಮಾಡಿದ ಕಿರೀಟವನ್ನು ಬಹುಮಾನವಾಗಿ ವಿಜೇತರಿಗೆ ತೊಡಿಸಲಾಗುತ್ತಿತ್ತು. ಸ್ಪರ್ಧೆ ಗ್ರೀಕರ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಪ್ರಾಚೀನ ಒಲಿಂಪಿಕ್ಸ್‌ನ ಅವನತಿ[ಬದಲಾಯಿಸಿ]

 • ಕ್ರಿಸ್ತಪೂರ್ವ 100ರಲ್ಲಿ ರೋಮನ್ನರು ಗ್ರೀಸ್‌ ಮೇಲೆ ದಾಳಿ ಮಾಡಿದ ಬಳಿಕ ಒಲಿಂಪಿಕ್ಸ್‌ ಅವನತಿ ಹಾದಿ ಹಿಡಿಯಿತು. ಕ್ರೀಡಾಕೂಟದಲ್ಲಿ ವಿಜೇತರಾಗಲು ಮೋಸ, ವಂಚನೆ ಪ್ರಾರಂಭವಾಯಿತು. ಒಲಿಂಪಿಯಾದಲ್ಲಿ ಇದ್ದ ಗ್ರೀಕರ ಆರಾಧ್ಯ ದೇವತೆ ಜೀಸ್‌ನ ಪ್ರತಿಮೆ ಬದಲಾಗಿ ಕಾನ್ಸ್‌ಟಾಂಟಿನೋಪೆಲ್‌ನ ಪ್ರತಿಮೆ ಸ್ಥಾಪನೆ ಆಯಿತು. 426ರಲ್ಲಿ ರೋಮನ್‌ ದೊರೆ ಥಿಯೋಡೋಸಿಸ್‌ ಜೀಅಸ್‌ ದೇಗುಲ ಧ್ವಂಸಗೊಳಿಸಿದ. ಅನಂತರ ಬಂದ ಭಾರೀ ಪ್ರವಾಹ ಒಲಿಂಪಿಯಾ ನಗರವನ್ನೇ ಸಮಾಧಿ ಮಾಡಿತು. ಹೀಗೆ ಸತತ 12 ಶತಮಾನಗಳ ಕಾಲ ನಡೆದ ಪ್ರಾಚೀನ ಒಲಿಂಪಿಕ್ಸ್‌ ಅವನತಿ ಕಂಡಿತು.

ಆಧುನಿಕ ಒಲಿಂಪಿಕ್ಸ್‌ ಉಗಮ[ಬದಲಾಯಿಸಿ]

 • 1896ರಲ್ಲಿ ಗ್ರೀಕ್‌ನ ಅಥೆನ್ಸ್‌ನಲ್ಲಿ ಆಧುನಿಕ ಒಲಿಂಪಿಕ್ಸ್‌ ಜನ್ಮತಾಳಿತು. ಇದರಲ್ಲಿ 14 ರಾಷ್ಟ್ರಗಳ 241 ಕ್ರೀಡಾಪಟುಗಳು 43 ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. 1994ರ ಬಳಿಕ ಬೇಸಗೆ ಮತ್ತು ಚಳಿಗಾಲದ ಒಲಿಂಪಿಕ್ಸ್‌ ಪ್ರತ್ಯೇಕವಾಗಿ ನಡೆಯಲು ಆರಂಭವಾಯಿತು. ಇದಲ್ಲದೆ ಇತ್ತೀಚಿನ ದಶಕಗಳಲ್ಲಿ ಪ್ಯಾರಾ ಒಲಿಂಪಿಕ್ಸ್‌ ಮತ್ತು ಯುವ ಒಲಿಂಪಿಕ್ಸ್‌ ಕೂಡ ನಡೆಯುತ್ತಿದೆ. ಆಧುನಿಕ ಒಲಿಂಪಿಕ್ಸ್‌ ಇದುವರೆಗೆ 23 ದೇಶಗಳ 44 ನಗರಗಳಲ್ಲಿ ನಡೆದಿದೆ. ಅಮೆರಿಕ ಅತಿ ಹೆಚ್ಚು 8 ಬಾರಿ ಆತಿಥ್ಯ ವಹಿಸಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 207 ದೇಶಗಳ 10,200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕೊಸವೋ ಮತ್ತು ದಕ್ಷಿಣ ಸೂಡಾನ್‌ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿವೆ.

ಪ್ರತಿಜ್ಞಾ ವಿಧಿ ಆರಂಭ[ಬದಲಾಯಿಸಿ]

 • 7ನೇ ಒಲಿಂಪಿಕ್ಸ್‌.......1920
 • ಆತಿಥೇಯ ರಾಷ್ಟ್ರ......ಆಂಟ್‌ವರ್ಪ್‌, ಬೆಲ್ಜಿಯಂ
 • ಗರಿಷ್ಠ ಪದಕ ಪಡೆದ ದೇಶ.......ಅಮೆರಿಕ
 • 1ನೇ ವಿಶ್ವ ಮಹಾಯುದ್ಧದ ನಂತರ ನಡೆದ ಒಲಿಂಪಿಕ್ಸ್‌ ಇದಾಗಿರುವುದರಿಂದ ಯುದ್ಧದ ಕರಿ ನೆರಳು ಒಲಿಂಪಿಕ್ಸ್‌ ಕೂಟದ ಮೇಲೆ ಬಿದ್ದಿತ್ತು. ಜರ್ಮನಿ, ಆಸ್ಟ್ರೇಲಿಯಾ, ಹಂಗೇರಿ, ಬೆಲ್ಜಿಯಂ, ಟರ್ಕಿ ಸೇರಿ ಹಲವು ರಾಷ್ಟ್ರಗಳ ಮೇಲೆ ನಿಷೇಧ ಹೇರಲಾಗಿತ್ತು. ಹೀಗಾಗಿ ಕೂಟದಲ್ಲಿ ಕೇವಲ 29 ರಾಷ್ಟ್ರಗಳು ಮಾತ್ರ ಪಾಲ್ಗೊಂಡಿದ್ದವು. ಆ.14ರಿಂದ ಸೆ.12ರವರೆಗೆ ವಿವಿಧ ಕ್ರೀಡೆಗಳು ನಡೆದವು. 2026 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಮೆರಿಕಾ, ಸ್ವೀಡನ್‌, ಇಂಗ್ಲೆಂಡ್‌ ರಾಷ್ಟ್ರಗಳು ಹೆಚ್ಚಿನ ಪದಕ ಪಡೆದವು.
 • ಇದರಲ್ಲಿ ಮೊದಲನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಇಲ್ಲಿಂದ ನಂತರ ಎಲ್ಲಾ ಒಲಿಂಪಿಕ್ಸ್‌ನಲ್ಲೂ ಪ್ರತಿಜ್ಞಾನಿಧಿಯನ್ನು ಬೋಧಿಸಲಾಗುತ್ತಿದೆ.
 • ಭಾರತದ ಮೂರು ಅಥ್ಲೀಟ್‌ಗಳು ಮತ್ತು ಇಬ್ಬರು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಪದಕ ಪಡೆಯುವಲ್ಲಿ ಭಾರತ ವಿಫ‌ಲವಾಯಿತು.

ಕೂಟ ಯಶಸ್ವಿಯಾದರೂ ಫ್ರಾನ್ಸ್‌ಗೆ ಆರ್ಥಿಕ ನಷ್ಟ[ಬದಲಾಯಿಸಿ]

 • 8ನೇ ಒಲಿಂಪಿಕ್ಸ್‌.......1924 : ಆತಿಥೇಯ ರಾಷ್ಟ್ರ.......ಪ್ಯಾರಿಸ್‌, ಫ್ರಾನ್ಸ್‌
 • ಗರಿಷ್ಠ ಪದಕ ಪಡೆದ ರಾಷ್ಟ್ರ.....ಅಮೆರಿಕ
 • ಮೇ 4ರಿಂದ ಜುಲೈ 27ರವರೆಗೆ ನಡೆದ ಒಲಿಂಪಿಕ್ಸ್‌ಗೆ ಫ್ರಾನ್ಸ್‌ ಆತಿಥ್ಯ ವಹಿಸಿತ್ತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದರು. 17 ಕ್ರೀಡೆಗಳು ನಡೆದವು. ಅಮೆರಿಕ 45 ಚಿನ್ನ, 27 ಬೆಳ್ಳಿ, 27 ಕಂಚಿನ ಪದಕ ಪಡೆದು ಪದಕಗಳಿಕೆಯಲ್ಲಿ ಮೊದಲನೇ ಸ್ಥಾನ ಪಡೆಯಿತು. ಫಿನ್ಲಂಡ್‌, ಫ್ರಾನ್ಸ್‌ ರಾಷ್ಟ್ರಗಳು ಪದಕಗಳಿಕೆಯಲ್ಲಿ ನಂತರದ ಸ್ಥಾನ ಪಡೆದವು. ಒಟ್ಟು 44 ರಾಷ್ಟ್ರಗಳಿಂದ 135 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 3089 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
 • ಭಾರತದ ಭಾರತದಿಂದ 7 ಅಥ್ಲೀಟ್‌ಗಳು, ಎರಡು ಮಹಿಳಾ ಆಟಗಾರರು ಸೇರಿದಂತೆ 8 ಟೆನಿಸ್‌ ಆಟಗಾರರು ಪಾಲ್ಗೊಂಡಿದ್ದರು. ಪದಕ ಪಡೆಯುವಲ್ಲಿ ವಿಫ‌ಲವಾಗಿದೆ.
 • ಇದು ಪ್ಯಾರಿಸ್‌ಗೆ ಎರಡನೇ ಒಲಿಂಪಿಕ್ಸ್‌ ಆತಿಥ್ಯವಾಗಿತ್ತು. 60 ಸಾವಿರಕ್ಕೂ ಅಧಿಕಮಂದಿ ಬಂದು ವೀಕ್ಷಿಸಿದ್ದು ದಾಖಲೆಯಾಗಿತ್ತು. ಆದರೂ ಶೇ.50ಕ್ಕೂ ಅಧಿಕ ಆರ್ಥಿಕ ನಷ್ಟ ಅನುಭವಿಸಿತ್ತು.

ಭಾರತಕ್ಕೆ ಹಾಕಿ ಮೂಲಕ ಮೊದಲ ಚಿನ್ನ[ಬದಲಾಯಿಸಿ]

 • 9ನೇ ಒಲಿಂಪಿಕ್ಸ್‌......1928: ಆತಿಥೇಯ ರಾಷ್ಟ್ರ......ಆಮ್‌ಸ್ಟರ್‌ಡಾಂ, ಹಾಲೆಂಡ್‌
 • ಗರಿಷ್ಠ ಪದಕ ಪಡೆದ ರಾಷ್ಟ್ರ......ಅಮೆರಿಕ
 • ಜುಲೈ 8ರಿಂದ ಆಗಸ್ಟ್‌ 12ರವರೆಗೆ ವಿವಿಧ ಕ್ರೀಡೆಗಳು ನಡೆದವು. ಮಾಲ್ಟಾ, ಮನಾಮಾ ಮತ್ತು ಜಿಂಬಾಬ್ವೆ ರಾಷ್ಟ್ರಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವು. ಜರ್ಮನಿ, ಆಸ್ಟ್ರೇಲಿಯಾ, ಹಂಗೇರಿ, ಬೆಲ್ಜಿಯಂ, ಟರ್ಕಿ ರಾಷ್ಟ್ರಗಳ ಮೇಲೆ ಹಾಕಿರುವ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿತ್ತು. ಹೀಗಾಗಿ ಈ ರಾಷ್ಟ್ರಗಳು ಪಾಲ್ಗೊಂಡಿದ್ದವು. ಒಟ್ಟು 46 ರಾಷ್ಟ್ರಗಳಿಂದ 2883 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಮೆರಿಕಾ, ಜರ್ಮನಿ, ಫಿನ್ಲಂಡ್‌ ಹೆಚ್ಚಿನ ಪದಕ ಪಡೆದವು
 • ಭಾರತದ ಸಾಧನೆ: ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಮೊದಲ ಬಾರಿ ಭಾರತ ಹಾಕಿ ತಂಡ ಚಿನ್ನದ ಪದಕ ಪಡೆಯಿತು. ಇದು ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ.
 • ವೈಶಿಷ್ಟ್ಯ: ಮಹಿಳೆಯರ ಅಥ್ಲೆಟಿಕ್ಸ್‌ ಮತ್ತು ಮಹಿಳೆಯರ ಜಿಮ್ನಾಸ್ಟಿಕ್‌ಗೆ ಮೊದಲ ಬಾರಿಗೆ ಅವಕಾಶ ನೀಡಲಾಯಿತು.

ಭಾರತದ ಸಾಧನೆ[ಬದಲಾಯಿಸಿ]

 • ರಿಯೋ ಕ್ರೀಡಾ ಪರಿಚಯ
 • ಕೆನೋಯ್‌ ಸ್ಪ್ರಿಂಟ್‌ (ದೋಣಿ ಸ್ಪರ್ಧೆ)
 • 1936ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೋಣಿ ಸ್ಪರ್ಧೆಯನ್ನು ಸೇರ್ಪಡೆ ಮಾಡಲಾಯಿತು. ಶಾಂತವಾಗಿರುವ ನೀರಿನಲ್ಲಿ ನಡೆಯುವ ದೋಣಿ ಸ್ಪರ್ಧೆಯಿದು. ಒಬ್ಬರು, ಇಬ್ಬರು, ನಾಲ್ವರ ಪ್ರತ್ಯೇಕ ದೋಣಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಒಟ್ಟು ಈ ಕ್ರೀಡೆಯಲ್ಲಿ 12 ಚಿನ್ನದ ಪದಕಗಳಿದ್ದು, ಪುರುಷರಿಗೆ 8 ಮತ್ತು ಮಹಿಳೆಯರಿಗೆ 4 ಚಿನ್ನದ ಪದಕಗಳಿರುತ್ತವೆ. 200 ಮೀ., 500 ಮೀ. ಮತ್ತು 1ಕಿ.ಮೀ. ದೂರಕ್ಕೆ ಸ್ಪರ್ಧೆಗಳಿರುತ್ತವೆ. ಸ್ಪರ್ಧಾಳುಗಳು ತಮಗೆ ನಿಗದಿ ಪಡಿಸಿದ ಟ್ರ್ಯಾಕ್‌ನಲ್ಲಿಯೇ ಸಾಗಬೇಕು. ಅತಿ ಕಡಿಮೆ ಸಮಯದಲ್ಲಿ ಗುರಿಮುಟ್ಟಿದವರು ವಿಜೇತರಾಗುತ್ತಾರೆ.
 • ಭಾರತದ ಸ್ಪರ್ಧೆ: ಈ ಕ್ರೀಡೆಯಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ.

2008ರ ಬೀಜಿಂಗ್‌ ಒಲಿಂಪಿಕ್ಸ್‌[ಬದಲಾಯಿಸಿ]

 • ಸೈಕ್ಲಿಂಗ್‌ ಬಿಎಂಎಕ್ಸ್‌
 • ಸೈಕ್ಲಿಂಗ್‌ ಬಿಎಂಎಕ್ಸ್‌ ಸಾಮಾನ್ಯ ಸೈಕ್ಲಿಂಗ್‌ನಂತೆ ಅಲ್ಲ. ಹಲವಾರು ಅಡೆತಡೆಗಳು, ಏರುತಗ್ಗುಗಳನ್ನು ದಾಟಿ ಮುಂದೆ ಸಾಗಬೇಕು. ಈ ಕ್ರೀಡೆಗೆ ಬಿಎಂಎಕ್ಸ್‌ ಬೈಕ್‌ಗಳನ್ನು ಬಳಸಲಾಗುತ್ತದೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಿಂದ ಈ ಕ್ರೀಡೆ ಸೇರ್ಪಡೆಗೊಂಡಿದೆ. ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. 300ರಿಂದ 400 ಮೀಟರ್‌ನ ಟ್ರ್ಯಾಕ್‌ ಇದ್ದು, ಉಬ್ಬು ದಿಣ್ಣೆಗಳು ಮತ್ತು ತಿರುವುಗಳನ್ನು ಮಾಡಲಾಗಿರುತ್ತದೆ. ಜಿಗಿಯುತ್ತಾ, ಇಳಿಯುತ್ತಾ ಗುರಿಯನ್ನು ಮಟ್ಟಬೇಕು.
 • ಭಾರತದ ಸ್ಪರ್ಧೆ: ಈ ಕ್ರೀಡೆಯಲ್ಲಿ ಭಾರತ ಭಾಗವಹಿಸುತ್ತಿಲ್ಲ.
 • ಸೈಕ್ಲಿಂಗ್‌ ಮೌಂಟೇನ್‌ ಬೈಕ್‌
 • ಸೈಕಲ್‌ ಸವಾರರು ಕಡಿದಾದ ಬೆಟ್ಟಗುಡ್ಡಗಳನ್ನು ಹತ್ತಿ, ನೈಸರ್ಗಿಕ ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗುವ ಸಾಹಸಮಯ ಕ್ರೀಡೆಯೇ ಸೈಕ್ಲಿಂಗ್‌ ಮೌಂಟೇನ್‌ ಬೈಕ್‌. 1996ರಲ್ಲಿ ಒಲಿಂಪಿಕ್ಸ್‌ ಕ್ರೀಡೆಗೆ ಸೇರ್ಪಡೆ ಮಾಡಲಾಯಿತು. ಪುರುಷರ ಮತ್ತು ಮಹಿಳೆಯರ ವಯಕ್ತಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ವಿವಿಧ ಹಂತದಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅಂತಿಮ ಗೆರೆಯನ್ನು ಮುಟ್ಟುವ ಮೊದಲ ಸ್ಪರ್ಧಿ ವಿಜೇತರಾಗುತ್ತಾರೆ. ಈ ಕ್ರೀಡೆಗೆ ವಿಶೇಷಗಾಗಿ ವಿನ್ಯಾಸಗೊಳಿಸಿದ ಮೌಂಟೇನ್‌ ಬೈಕ್‌ ಅನ್ನು ಬಳಸಲಾಗುತ್ತದೆ. ಆಟಗಾರರು ಗುರಿ ತಲುಪಲು 80ರಿಂದ 100 ಕಿ.ಮೀ. ವರೆಗೆ ಕ್ರಮಿಸಬೇಕು.
 • ಭಾರತದ ಸ್ಪರ್ಧೆ: ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ನಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ.

[೨]

೨೦೧೨ರಲ್ಲಿ ಭಾರತದ ಸ್ಪರ್ಧೆಯ ಕ್ರೀಡಾಪಟುಗಳ ವಿವರ[ಬದಲಾಯಿಸಿ]

ಕ್ರೀಡೆ ಪುರುಷರ ಮಹಿಳೆಯರ ಒಟ್ಟು ಈವೆಂಟ್
ಬಿಲ್ಲುವಿದ್ಯೆ 3 3 6 4
ಅಥ್ಲೆಟಿಕ್ಸ್ 8 6 14 11
ಬ್ಯಾಡ್ಮಿಂಟನ್ 2 3 5 4
ಬಾಕ್ಸಿಂಗ್ 7 1 8 8
ಫೀಲ್ಡ್ ಹಾಕಿ 18 0 18 1
ಜೂಡೋ 0 1 1 1
ರೋಯಿಂಗ್ 3 0 3 2
ಶೂಟಿಂಗ್ 7 4 11 10
ಈಜು 1 0 1 1
ಟೇಬಲ್ ಟೆನ್ನಿಸ್ 1 1 2 2
ಟೆನಿಸ್ 5 2 7 4
ಭಾರ ಎತ್ತುವಿಕೆ 1 1 2 2
ಕುಸ್ತಿ 4 1 5 5
ಒಟ್ಟು 60 23 83 55

ಪದಕ ಗಳಿಕೆ ವಿವರ[ಬದಲಾಯಿಸಿ]

ಪದಕ ಹೆಸರು ಕ್ರೀಡೆ ಈವೆಂಟ್ ದಿನಾಂಕ
ಬೆಳ್ಳಿ ವಿಜಯ್ ಕುಮಾರ್ ಶೂಟಿಂಗ್ ಪುರುಷರ 25 ಮೀ ವೇಗ ಫೈರ್ ಪಿಸ್ತೋಲ್ 3 ಆಗಸ್ಟ್
ಬೆಳ್ಳಿ ಸುಶೀಲ್ ಕುಮಾರ್ ಕುಸ್ತಿ ಪುರುಷರ ಫ್ರೀಸ್ಟೈಲ್ 66kg 12 ಆಗಸ್ಟ್
ಬೆಳ್ಳಿ ಯೋಗೇಶ್ವರ್ ದತ್ ಕುಸ್ತಿ ಪುರುಷರ ಫ್ರೀಸ್ಟೈಲ್ 60 ಕೆಜಿ 11 ಆಗಸ್ಟ್
ಕಂಚು ಗಗನ್ ನಾರಂಗ್ ಶೂಟಿಂಗ್ ಪುರುಷರ 10 ಮೀ ಏರ್ ರೈಫಲ್ 30 ಜುಲೈ
ಕಂಚು ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ 4 ಆಗಸ್ಟ್
ಕಂಚು ಮೇರಿ ಕೋಮ್ ಬಾಕ್ಸಿಂಗ್ ಮಹಿಳೆಯರ ಫ್ಲೈತೂಕ 8 ಆಗಸ್ಟ್

ಪದಕ ಪಟ್ಟಿ ಸಾರಾಂಶ[ಬದಲಾಯಿಸಿ]

ಕ್ರೀಡಾ ಘಟಕ 11 ಬಂಗಾರ 22 ಬೆಳ್ಳಿ 33 ಕಂಚು ಒಟ್ಟು
ಶೂಟಿಂಗ್ 1 1 2
ಕುಸ್ತಿ 2 2
ಬಾಕ್ಸಿಂಗ್ 1 1
ಬ್ಯಾಡ್ಮಿಂಟನ್ 1 1
3 3 6

ನೋಡಿ[ಬದಲಾಯಿಸಿ]

 1. ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ
 2. *೨೦೦೮ ಒಲಂಪಿಕ್ ಕ್ರೀಡಾಕೂಟ
 3. *ರಿಯೊ ಒಲಿಂಪಿಕ್ಸ್ 2016
 4. *ಒಲಿಂಪಿಕ್ಸ್‌ನಲ್ಲಿ ಭಾರತ
 5. *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ
 6. *ಫೀಫಾ
 7. *17ನೇ ಏಷ್ಯನ್‌ ಕ್ರೀಡಾಕೂಟ 2014
 8. *ಭಾರತದ ಮಹಿಳಾ ಹಾಕಿ ತಂಡ
 9. *ಭಾರತದ ಪುರುಷರ ಹಾಕಿ ತಂಡ
 10. *ಒಲಂಪಿಕ್ ಕ್ರೀಡಾಕೂಟ
 11. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ

ಉಲ್ಲೇಖ[ಬದಲಾಯಿಸಿ]

 1. "Olympics 2012: India to send biggest ever contingent".2012-08-05.
 2. http://www.udayavani.com/kannada/news/sports-news/160133/rewind-olympics#PVmsP0JaD7tewiwZ.99[permanent dead link]