ಮೇರಿ ಕೋಮ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮ್ಯಾಗ್ಟೆಜಂಗ್ನೆಜಿಯಂಗ್ ಮೇರಿ ಕೋಮ್(ಜನನ ಮಾರ್ಚ ೧,೧೯೮೩),ಎಮ್.ಸಿ. ಕೋಮ್, ಮ್ಯಾಗ್ನಿಫಿಸಿಯಂಟ್ ಮೇರಿ ಅಥವಾ ಕೇವಲ ಮೇರಿ ಕೋಮ್ ಇವರು ಓರ್ವ ಭಾರತೀಯ ಮಹಿಳಾ ಬಾಕ್ಸಿಂಗ್ ಪಟು.ಇವರು ಈಶಾನ್ಯ ರಾಜ್ಯ ಮಣಿಪುರದ ಕೋಮ್ ಬುಡಕಟ್ಟು ಜನಾಂಗಕ್ಕೆ ಸೇರಿದವರು, ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದು ಅಲ್ಲದೇ ಪ್ರತಿ ಆರು ಚಾಂಪಿಯನ್‍‍ಷಿಪ್ ಗಳಲ್ಲೂ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸಿಂಗ್ ಪಟು ಕೂಡ ಆಗಿದ್ದಾರೆ. ಇವರು ೨೦೧೨ ಬೇಸಿಗೆ ಓಲಿಂಪಿಕ್ಸ್ ಗೆ ಆಯ್ಕೆಯಾದ ಏಕೈಕ ಭಾರತೀಯ ಮಹಿಳಾ ಬಾಕ್ಸಿಂಗ್ ಪಟು ಮತ್ತು ೫೧ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ, ಕಂಚಿನ ಪದಕ ಗೆದ್ದಿದ್ದಾರೆ. ಎಐಬಿಎ ವರ್ಲ್ಡ್ ವುಮೆನ್ಸ್ ರ್ಯಾಂಕಿಂಗ್ ಫ್ಲೈವೈಟ್ನನಲ್ಲಿ ೪ನೇ ಸ್ಥಾನವನ್ನು ಹೊಂದಿದ್ದಾರೆ.

ಮೇರಿ ಕೋಮ್
Mary Kom - British High Commission, Delhi, 27 July 2011.jpg
ಬ್ರಿಟಿಷ್ ಹೈ ಕಮಿಶನ್‌, ದೆಹಲಿಯಲ್ಲಿ ಮಾತನಾಡುತ್ತಿರುವ ಕೋಮ್(2011)

of ರಾಜ್ಯ ಸಭೆMP (ನಾಮನಿರ್ದೇಶಿತ)
(25 ಎಪ್ರಿಲ್ 2016 ರಿಂದ 24 ಎಪ್ರಿಲ್ 2022)
ಹಾಲಿ
ಅಧಿಕಾರ ಸ್ವೀಕಾರ 
25 ಎಪ್ರಿಲ್ 2016
ವೈಯಕ್ತಿಕ ಮಾಹಿತಿ
ಸಂಗಾತಿ(ಗಳು) ಕಾರೊಂಗ್ ಒಂಖೊಲರ್ ಕೋಮ್
ಮೇರಿ ಕೋಮ್
Personal information
ಪುರ್ಣ ಹೆಸರುಮ್ಯಾಗ್ಟೆ ಜಂಗ್ನೆಜಿಯಂಗ್ ಮೇರಿ ಕೋಮ್
ಅಡ್ಡ ಹೆಸರು(ಗಳು)ಮ್ಯಾಗ್ನಿಫಿಸೆಂಟ್ ಮೇರಿ(ಆಂಗ್ಲದಲ್ಲಿ: Magnificent Mary)
ರಾಷ್ರೀಯತೆಭಾರತೀಯ
ಜನನ (1983-03-01) 1 March 1983 (age 38)[೧]
ಕಂಗಥೀ, ಮಣಿಪುರ, ಭಾರತ
ಎತ್ತರ1.58 m (5 ft 2 in)
ತೂಕ48 kg (106 lb)
Sport
ಕ್ರೀಡೆBoxing
Rated atಫ್ಲೈವೈಟ್
ಪಿನ್‌ವೈಟ್
ಕ್ಲಬ್ಮೇರಿ ಕೋಮ್ ಬಾಕ್ಸಿಂಗ್ ಅಕಾಡೆಮಿ

ಸಾಧನೆಗಳು[ಬದಲಾಯಿಸಿ]

17ನೇ ಏಷ್ಯನ್‌ ಕ್ರೀಡಾಕೂಟ 2014[ಬದಲಾಯಿಸಿ]

  • ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ 17 ಏಷ್ಯನ್ ಗೇಮ್ಸ್ 2014, ಕ್ರೀಡಾಕೂಟದಲ್ಲಿ, ಮೂರು ಮಕ್ಕಳ ತಾಯಿಯಾದ 31-ವರ್ಷದ(1-10-2014ಕ್ಕೆ)-(1983)ಮೇರಿ ಕೋಮ್,51 ಕೆ.ಜಿ.ವಿಭಾಗದಲ್ಲಿ, ಕಜಕಿಸ್ತಾನದ ಜೈನಾ ಶೆಕರ್‌ಬೆಕೋವಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಇತಿಹಾಸ ಬರೆದರು. ಐದು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಇಬ್ಬರು ಎರಡಗೈ ಬಾಕ್ಸರ್‌ಗಳ ಹೋರಾಟದಲ್ಲಿ ಮೊದಲೆರಡು ಸುತ್ತು ಹಿನ್ನಡೆ ಕಂಡಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಪ್ರಭುತ್ವ ಸಾಧಿಸಿದ ಭಾರತದ ಬಾಕ್ಸರ್ ಐತಿಹಾಸಿಕ ಸ್ವರ್ಣ ಪದಕ ಗೆದ್ದರು. ಮೇರಿಯ ಸಾಧನೆಯಿಂದಾಗಿ ಭಾರತ 12ನೇ ದಿನದಂತ್ಯಕ್ಕೆ 7 ಚಿನ್ನ, 9 ಬೆಳ್ಳಿ, 34 ಕಂಚಿನೊಂದಿಗೆ ಒಟ್ಟು 50 ಪದಕ ಗೆದ್ದು ಪಟ್ಟಿಯಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ.
  • ಮೇರಿ ಕೋಮ್ ಭಾರತದ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಮತ್ತು ಗೌರವ ಪಡೆದ ಕ್ರೀಡಾ ತಾರೆ.( [೨])
  • ಮೇರಿ ಕೋಮ್ 2009 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಗೆದ್ದ ಅತ್ಯಂತ ಹಚ್ಚಿನ ಪದವಿ ಪಡದ ಮಹಿಳೆಯರಲ್ಲಿ ಒಬ್ಬರು, ನಂತರ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, "ಪದ್ಮಭೂಷಣ್" ', 2013 ರಲ್ಲಿ ಪಡೆದರು.[೩]),

ಲೆಜೆಂಡ್ಸ್ ಪ್ರಶಸ್ತಿ[ಬದಲಾಯಿಸಿ]

  • 26 Nov, 2016

ಭಾರತದ ಎಮ್‌.ಸಿ ಮೇರಿ ಕೋಮ್‌ ಅವರಿಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಡಿಸೆಂಬರ್‌ 20ರಂದು ‘ಲೆಜೆಂಡ್ಸ್ ಪ್ರಶಸ್ತಿ’ ನೀಡಿದೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಬಾಕ್ಸರ್‌ ಮೇರಿ ಕೋಮ್‌ ಅವರಿಗೆ ಎಐಬಿಎ ತನ್ನ 70ನೇ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಪ್ರಶಸ್ತಿ ನೀಡಿ ಗೌರವಿಸು ವುದಾಗಿ ಹೇಳಿದೆ.[೪]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Kom, Mary (2013). Unbreakable.
  2. TOI ಸುದ್ದಿ ದಿ.1-10-2014
  3. TOI Sep 12, 2014
  4. ಬಾಕ್ಸರ್‌ ಮೇರಿ ಕೋಮ್‌ಗೆ ಲೆಜೆಂಡ್ಸ್ ಗೌರವ