೨೦೧೨ರ ಒಲಂಪಿಕ್ ಕ್ರೀಡಾಕೂಟ
ಗೋಚರ
೨೦೧೨ರ ಬೇಸಿಗೆಯ ಒಲಂಪಿಕ್ ಕ್ರೀಡಾಕೂಟ, ಅಧಿಕೃತವಾಗಿ ಗೇಮ್ಸ್ ಆಫ್ ೩೦ ಒಲಂಪಿಯಾಡ್ ಎಂದು ಕರೆಯಲ್ಪಡುವ ಕ್ರೀಡಾಕೂಟ, ಜುಲೈ ೨೭ ರಿಂದ ಆಗಸ್ಟ್ ೧೨ರವರೆಗೆ, ಲಂಡನ್ ನಗರದಲ್ಲಿ ನಡೆಯಿತು. ಒಟ್ಟು ೨೦೪ ರಾಷ್ತ್ರಿಯ ಒಲಂಪಿಕ್ ಕಮೀಟಿ ಗಳ ಪ್ರತಿನಿಧಿಗಳಾಗಿ ಒಟ್ಟು ೧೦೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ೨೦೦೫ರಲ್ಲಿ ಸಿಂಗಾಪುರ್ನಲ್ಲಿ ನಡೆದ ಅಂತರ ರಾಷ್ತ್ರೀಯ ಒಲಂಪಿಕ್ ಕಮೀಟಿ (ಐ ಒ ಸಿ) ಯ ೧೧೭ನೇ ಅಧಿವೇಶನದಲ್ಲಿ ೨೦೧೨ನೇ ಒಲಂಪಿಕ್ ಲಂಡನ್ ನಗರದಲ್ಲಿ ನಡೆಯುವುದೆಂದು ತೀರ್ಮಾನವಾಯಿತು. ಲಂಡನ್ ನಗರದ ಪರವಾಗಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಸೆಬಾಸ್ಟಿಯನ್ ಕೋ ಹಾಗು ಅಂದಿನ ಲಂಡನ್ ನ ಮಹಾಪೌರರಾದ ಕೆನ್ ಲಿವಿಂಗ್ ಸ್ಟೋನ್ ತಮ್ಮ ಬಿಡ್ ಅನ್ನು ಮಂಡಿಸಿದರು. ಇದೇ ಅಧಿವೇಶನದಲ್ಲಿ ನ್ಯೂ ಯಾರ್ಕ್, ಮಾಸ್ಕೋ, ಮಡ್ರಿಡ್ ಹಾಗು ಪ್ಯಾರಿಸ್ ನಗರಗಳು ೩೦ನೇ ಒಲಂಪಿಕ್ ನಡೆಸಲು, ತಮ್ಮ ಬಿಡ್ ಅನ್ನು ಸಲ್ಲಿಸಿದ್ದರು. ಅಂತಿಮವಾಗಿ ಲಂಡನ್ ನಗರಕ್ಕೆ ಒಲಂಪಿಕ್ ನಡೆಸುವ ಅವಕಾಶ ಸಿಕ್ಕಿತು.