ವಿಷಯಕ್ಕೆ ಹೋಗು

ಯೋಗೇಶ್ವರ್ ದತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Yogeshwar Dutt
ಯೋಗೇಶ್ವರ್ ದತ್
Personal information
Native nameयोगेश्वर दत्त
Nickname(s)Yogi, Pahalwan Ji[]
NationalityIndian
Born (1982-11-02) 2 November 1982 (age 43)
Bhainswal Kalan, Sonipat district, ಹರಿಯಾಣ[]
Height5 ft 6 in (1.68 m)
Sport
Countryಭಾರತ
SportWrestling
Medal record
Representing ಭಾರತ
Olympic Games
Bronze medal – third place2012 London60 kg freestyle
Asian Games
Bronze medal – third place2006 Doha60 kg freestyle
Gold medal – first place2014 Incheon65 kg freestyle
Commonwealth Games
Gold medal – first place2010 Delhi60 kg freestyle
Gold medal – first place2014 Glasgow65 kg freestyle
Asian Wrestling Championships
Gold medal – first place2012 Gumi60kg Freestyle
Commonwealth Championship
Gold medal – first place2003 London55 kg freestyle
Gold medal – first place2005 Cape Town60 kg freestyle
Silver medal – second place2005 Cape Town60 kg Greco-Roman
Gold medal – first place2007 London60 kg freestyle
Silver medal – second place2007 London60 kg Greco-Roman
  • ಯೋಗೇಶ್ವರ್ ದತ್ (ಜನನ: 2ನವೆಂಬರ್ 1982) ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. 2012 ಬೇಸಿಗೆ ಒಲಿಂಪಿಕ್ಸ್, ಅವರು 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕೊನೆಯಲ್ಲಿ ಃesiಞ ಏuಜuಞhov Wಂಆಂ ಬೆಸಿಕ್ ಕುಡುಕೊವ್ ನಡೆಸಿದ ಪರೀಕ್ಷೆಯಲ್ಲಿ ನಿಷೇಧಿತ ವಸ್ತು ಬಳಸಿದ್ದಾರೆ ಕಂಡುಬಂದ ನಂತರ ಅವರ ಪದಕವನ್ನು ಬೆಳ್ಳಿ ಪದಕಕ್ಕೆ [3] ಮೇಲ್ದರ್ಜೆಗೇರಿಸಲಾಯಿತು. ಆಗಸ್ಟ್ 2016, 31 ರ ಅವರ ಟ್ವೀಟ್ ಮೂಲಕ ದತ್ ದೃಢಪಡಿಸಿದರು. [4] ಇವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ನೀಡಲಾಯಿತು. ನೀಡಲಾಯಿತು.. 2014 ರಲ್ಲಿ ಕಾಮನ್ವೆಲ್ತ್ ಗೇಮ್ಸ್ [5] ನಲ್ಲಿ ಅವರು ಚಿನ್ನದ ಪದಕ ಗಳಿಸಿದರು.[]

[] [] [] []

ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಬೆಳ್ಳಿ

[ಬದಲಾಯಿಸಿ]
  • ಭಾರತದ ಪೈಲ್ವಾನ್‌ ಯೋಗೇಶ್ವರ್‌ ದತ್ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.
  • ಈ ಕೂಟದ ಪುರುಷರ 60 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್‌ ದತ್‌ ಕಂಚು ಗೆದ್ದಿದ್ದರು. ಆದರೆ ಎರಡನೇ ಸ್ಥಾನಗಳಿಸಿದ್ದ ರಷ್ಯಾದ ಪೈಲ್ವಾನ್‌ ಬೆಸಿಕ್‌ ಕುದುಕೊವ್‌ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಕುಸ್ತಿಪಟುವಿಗೆ ಎರಡನೇ ಸ್ಥಾನಕ್ಕೆ ಬಡ್ತಿ ನೀಡಲು ಪರಿಗಣಿಸಲಾಗಿದೆ. ಇದರೊಂದಿಗೆ ಯೋಗೇಶ್ವರ್‌ ಅವರು ಸುಶೀಲ್‌ ಕುಮಾರ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೇ ಕೂಟದಲ್ಲಿ ಸುಶೀಲ್‌ ಕೂಡ ಬೆಳ್ಳಿ ಜಯಿಸಿದ್ದರು. ಲಂಡನ್‌ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಯೋಗೇಶ್ವರ್‌ ಅವರು ಕುದುಕೊವ್‌ ವಿರುದ್ಧ ಸೋಲು ಕಂಡಿದ್ದರು.
  • ಆದರೆ ರಷ್ಯಾದ ಪೈಲ್ವಾನ್‌ ಫೈನಲ್‌ ಪ್ರವೇಶಿಸಿದ್ದರಿಂದ ಭಾರತದ ಕುಸ್ತಿಪಟುಗೆ ‘ರೆಪೆಚೇಜ್‌’ ಸುತ್ತಿನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದನ್ನು ಸದು ಪಯೋಗಪಡಿಸಿಕೊಂಡಿದ್ದ ಯೋಗೇಶ್ವರ್ ಕಂಚಿಗೆ ಮುತ್ತಿಕ್ಕಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಕುದುಕೊವ್‌ ಅವರು 2013ರಲ್ಲಿ ನಡೆದ ಕಾರು ಅಪ ಘಾತದಲ್ಲಿ ನಿಧನ ರಾಗಿದ್ದರು. ಒಲಿಂಪಿಕ್ಸ್‌ ಬಳಿಕ ಅವರ ಮೂತ್ರದ ಮಾದರಿಯನ್ನು ಸಂಗ್ರಹಿಸಿದ್ದ ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ಅದನ್ನು ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯ ವೇಳೆ ರಷ್ಯಾದ ಕುಸ್ತಿಪಟುವಿನ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗಿತ್ತು. ಹೀಗಾಗಿ ಅವರು ಗೆದ್ದ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ.
  • ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯಿಂದ ಈ ಕುರಿತು ಅಂತಿಮ ಪ್ರಕಟಣೆ ಹೊರಬೀಳಬೇಕಿದೆ. ಈ ಸಂಬಂಧ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಲಿಖಿತ ಪತ್ರ ಬರೆದು ತಿಳಿಸಿದ ಮೇಲೆ ಯೋಗೇಶ್ವರ್‌್ ಬೆಳ್ಳಿ ಪಡೆಯುವುದು ಖಚಿತವಾಗಲಿದೆ.[]

ಪ್ರಶಸ್ತಿ ಮತ್ತು ಕೊಡಿಗೆ

[ಬದಲಾಯಿಸಿ]
  • 2012 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ;
  • ಹರಿಯಾನಾ ಸರ್ಕಾರದಿಂದ 1 ಕೋಟಿ ರೂ ಕೊಡಿಗೆ;
  • ರಾಜಸ್ಥಾನ ಸರ್ಕಾರದಿಂದ 50 ಲಕ್ಷ ರೂ.ಬಹುಮಾನ.

ಪದಕ ಸಾಧನೆ

[ಬದಲಾಯಿಸಿ]
ಕೂಟವರ್ಷಸ್ಥಳವಿಭಾಗಪದಕ
ಒಲಂಪಿಕ್ಸ್2012ಲಂಡನ್60ಕಜಿ ಫ್ರೀ ಸ್ಟೈಲ್ಬೆಳ್ಳಿ
ಏಷಿಯನ್ ಗೇಮ್ಸ್2014ಇಂಚೆನ್65 ಕಜಿ ಫ್ರೀ ಸ್ಟೈಲ್ಚಿನ್ನ
2006ದೋಹಾ60ಕಜಿ ಫ್ರೀ ಸ್ಟೈಲ್ಕಂಚು
ಏಷಿಯನ್ ಛಾಂ.ಷಿಪ್2012ಗುಮಿ60ಕಜಿ ಫ್ರೀ ಸ್ಟೈಲ್ಚಿನ್ನ
ಕಾಮನ್ ವೆಲ್ತ್2010ದೆಹಲಿ60ಕಜಿ ಫ್ರೀ ಸ್ಟೈಲ್ಚಿನ್ನ
2014ಗ್ಲಾಸ್ಕೊ65ಕಜಿ ಫ್ರೀ ಸ್ಟೈಲ್ಚಿನ್ನ
ಕಾಮನ್ ವೆಲ್ತ್ ಕುಸ್ತಿ2007ಲಂಡನ್60ಕಜಿ ಫ್ರೀ ಸ್ಟೈಲ್ಚಿನ್ನ
2005ಕೇಪ್ ಟೌನ್60ಕಜಿ ಫ್ರೀ ಸ್ಟೈಲ್ಚಿನ್ನ
2003ಲಂಡನ್60ಕಜಿ ಫ್ರೀ ಸ್ಟೈಲ್ಚಿನ್ನ
2007ಲಂಡನ್60ಕೆಜಿಗ್ರೀಕ್ ರೋಮನ್ಬೆಳ್ಳಿ
2005ಕೇಪ್ ಟೌನ್60ಕೆಜಿಗ್ರೀಕ್ ರೋಮನ್ಬೆಳ್ಳಿ

[]

ಯೋಗೇಶ್ವರ್ ದತ್‍ಗೆ ಮದುವೆ

[ಬದಲಾಯಿಸಿ]
  • ಜನವರಿ 15, 2017
  • ಕುಸ್ತಿಪಟು ಯೋಗೇಶ್ವರ್ ದತ್ ಕುಸ್ತಿವಿಜೇತ, ವರದಕ್ಷಿಣೆ ವಿರೋಧಿ ಅಭಿಯಾನದಲ್ಲಿ, ಕೇವಲ 1 ರುಪಾಯಿ ವರದಕ್ಷಿಣೆ ತೆಗೆದುಕೊಂಡಿದ್ದಾರೆ.
  • ದತ್, ಎರಡು ಬಾರಿ ಏಷ್ಯನ್ ಗೇಮ್ಸ್ ಪದಕ ಪಡೆದವರು; ತನ್ನ ಮದುವೆಯ ವಧುವಿನ ಕುಟುಂಬದಿಂದ ರೂ.1 ಮಾತ್ರ 'ಒಂದು ಟೋಕನ್' ಆಗಿ ವರದಕ್ಷಿಣೆ ಪಡೆಯಲು ಇಷ್ಟಪಟ್ಟರು. ಅವರು- ಹರಿಯಾಣ ಕಾಂಗ್ರೆಸ್ ನಾಯಕ ಜಯಭಗವಾನ್ /Jaibhagwan ಶರ್ಮಾ ಅವರ ಮಗಳು ಶೀತಲ್ ಶರ್ಮಾರನ್ನು ವಿವಾಹವಾಗಿದ್ದಾರೆ.[]

ಪದಕ ಸಾಧನೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]