ವಿಷಯಕ್ಕೆ ಹೋಗು

ವಿಕಾಸ್‌ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಕಾಸ್ ಗೌಡ ಇಂದ ಪುನರ್ನಿರ್ದೇಶಿತ)
ವಿಕಾಸ್‌ ಗೌಡ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುವಿಕಾಸ್‌ ಶಿವೇಗೌಡ
ರಾಷ್ರೀಯತೆಭಾರತೀಯ
ಜನನ (1983-07-05) ೫ ಜುಲೈ ೧೯೮೩ (ವಯಸ್ಸು ೪೧)
ಮೈಸೂರು, ಕರ್ನಾಟಕ, ಭಾರತ
ಎತ್ತರ2.06 m (6 ft 9 in)
ತೂಕ140 kg (310 lb; 22 st) (೨೦೧೪)
Sport
ದೇಶ ಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)ಡಿಸ್ಕಸ್ ಎಸತ
ತಂಡಭಾರತ
Achievements and titles
ವೈಯಕ್ತಿಕ ಪರಮಶ್ರೇಷ್ಠಹೊರಾಂಗಣ: ೬೬.೨೮ m
(ಏಪ್ರೀಲ್ ೨೦೧೨ರಲ್ಲಿ ಭಾರತೀಯ ದಾಖಲೆ)
Updated on ೦೯ ಜೂನ್ ೨೦೧೫.

ವಿಕಾಸ್ ಗೌಡರವರು ಒಲಂಪಿಕ್_ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಖ್ಯಾತ ಕ್ರೀಡಾ ಪಟು.

ಜೀವನ ವಿವರ

[ಬದಲಾಯಿಸಿ]

ಕರ್ನಾಟಕದ ಅಥ್ಲೀಟ್‌ ವಿಕಾಸ್ ಗೌಡ (ಜನನ: 5 ಜುಲೈ 1993) ಇವರು ಮೈಸೂರಿನಲ್ಲಿ ಜನಿಸಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮೇರಿ ಲ್ಯಾಂಡ್ ನಲ್ಲಿ ಬೆಳೆದರು. ಅವರ ತಂದೆ ಶಿವೆ ಗೌಡರು ಚಲನ-ಪಥದ ಓಟದಲ್ಲಿ ಅಭ್ಯಾಸಿಗಳಿಗೆ ಮಾರ್ಗದರ್ಶಕ/ಶಿಕ್ಷಕರಾಗಿದ್ದರು. ಇವರು ಭಾರತದ ಷಾಟ್`ಪುಟ್` ಎಸೆತ ಮತ್ತು ಡಿಸ್ಕಸ್`ಎಸೆತದ ಕ್ರೀಡಾ ಪಟು. ಅವರು ಚಾಪಲ್ ಹಿಲ್ ನಲ್ಲಿರುವ ವಿಶ್ವವದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಮತ್ತು ಯು.ಎಸ್. ನ ಎನ್.ಸಿ.ಎಎ ನಲ್ಲಿ ,ಡಿಸ್ಕಸ್ ಎಸೆದಲ್ಲಿ ಛಾಂಪಿಯನ್ ಆಗಿದ್ದರು. ಅವರ ಅತ್ಯುತ್ತಮ ಎಸೆತ 2013 ರಲ್ಲಿ ಡಿಸ್ಕಸ್`ನಲ್ಲಿ 66.90ಮೀಟರ್`ದೂರ. 2008 ರಲ್ಲಿ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಗವಹಿಸಿದ್ದರು . ಆದರೆ 22 ನೆಯವರಾಗಿ ಹೊರಬಂದರು.. 2012 ರ ಒಲಂಪಿಕ್ಸ್`ನಲ್ಲಿ 65.20 ಮೀ. ದೂರ ಎಸೆತದಿಂದ ಐದನೆಯವರಾಗಿ ಫೈನಲ್ಸಿಗೆ ಅರ್ಹತೆ ಪಡೆದರು. ಪುಣೆಯ 2013 ರ ಏಸಿಯನ್ ಕ್ರೀಡಾಕೂಟದಲ್ಲಿ 64.92 ಮೀ. ದೂರ ಎಸೆದು ಚಿನ್ನದ ಪದಕ ಗಳಿಸಿದರು ಅವರು ಗುಂಡು ಎಸೆತದಲ್ಲಿ ಒಲಂಪಿಕ್` ಗೋಲ್ಡ್` ಕ್ವೆಸ್ಟ್`ನ ಪ್ರಾಯೋಜಕತ್ವ ಹೊಂದಿ 19.62 ಮೀಟರ್` ದಾಖಲೆ ಹೊಂದಿದ್ದಾರೆ. ಅವರ ಉತ್ತಮ ಸಾದನೆ 2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 63.64 ಮೀ. ಎಸೆದು ಬಂಗಾರದ ಪದಕ ಗಳಿಸಿದಾಗ ಸಿದ್ಧಿಸಿತು. 56 ವರ್ಷಗಳ ಹಿಂದೆ 1958 ರಲ್ಲಿ ಮಿಲ್ಕಾ ಸಿಂಗ್` 440 ಗಜ ದೂರ ಎಸೆದು ಬಂಗಾರದ ಪದಕ ಗೆದ್ದಿದ್ದರು.

17ನೇ ಏಷ್ಯನ್‌ ಕ್ರೀಡಾಕೂಟ 2014ದಲ್ಲಿ

[ಬದಲಾಯಿಸಿ]

ಕರ್ನಾಟಕದ ವಿಕಾಸ್‌ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟ 2014 ರ ಪುರುಷರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಡಿಸ್ಕ್‌ ಅನ್ನು ವಿಕಾಸ್‌ ೬೨.೫೮/62.58 ಮೀಟರ್‌ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ೬೫.೧೧/65.11 ಮೀಟರ್‌ ದೂರ ಎಸೆದ ಇರಾನಿನ್ ಎಹ್ಸಾನ್‌ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ ಮೊಹಮ್ಮದರ್‌ ಅಹ್ಮದ್‌ ದಹೀಬ್‌ ಅವರು ೬೧.೨೫/61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು.


ಅವರ ವಿಶೇಷ ಕ್ರೀಡಾ ಸಾಧನೆ

[ಬದಲಾಯಿಸಿ]
ವರ್ಷ ಪಂದ್ಯ ಸ್ಥಳ ಸ್ಥಾನ ಫಲಿತಾಂಶ ಶರಾ
೨೦೦೨ ಜಾಗತಿಕ ಜೂನಿಯರ್ ಕಿಂಗ್`ಸ್ಟನ್` ಜಮೈಕ ೧೨ನೇ ಡಿಸ್ಕಸ್ ಎಸತ
೮ನೇ ಶಾಟ್ ಪುಟ್
೨೦೦೫ ಏಷಿಯನ್ ಛಾಂಪಿಯನ್ ಷಿಪ್ ಇಂಚಿಯಾನ್ ೨ನೇ ಡಿಸ್ಕಸ್ ಎಸತ
೨೦೦೬ ಕಾಮನ್ ವೆಲ್ತ ಗೇಮ್ಸ್ ಮೆಲ್`ಬೋರ್ನ್` ಆಸ್ಟ್ರೇಲಿಯಾ ೬ನೇ ಡಿಸ್ಕಸ್ ಎಸತ
೫ನೇ ಶಾಟ್ ಪುಟ್
ಏಷಿಯನ್` ಗೇಮ್ಸ್ ದೋಹಾ ೬ನೇ ೫೮.೨೮ಮೀ
೨೦೦೮ ಒಲಂಪಿಕ್` ಗೇಮ್ಸ್ ಬೀಜಿಂಗ್` ಚೈನಾ ೨೨ನೇ ೬೦.೬೯ಮೀ
೨೦೧೦ ಏಷಿಯನ್` ಗೇಮ್ಸ್ ಗ್ವಾಂಗ್ವೋವ್, ಚೀನಾ ೩ನೇ ೬೩.೧೩ಮೀ
ಕಾಮನ್ ವೆಲ್ತ್ ಗೇಮ್ಸ್ ಹೊಸ ದೆಹಲಿ, ಭಾರತ ೨ನೇ ೬೩.೬೯ ಮೀ
೨೦೧೧ ಏಷಿಯನ್ ಚಾಂಪಿಯನ್ ಶಿಪ್ ಜಪಾನ್ ೨ನೇ ೬೧.೫೮ ಮೀ
ವಿಶ್ವ ಚಾಂಪಿಯನ್ ಶಿಪ್ ದಕ್ಷಿಣ ಕೊರಿಯ ೭ನೇ ೬೪.೦೫ಮೀ
೨೦೧೨ ಒಲಂಪಿಕ್` ಗೇಮ್ಸ್ ಲಂಡನ್ ೮ನೇ ೬೪.೭೯ಮೀ
೨೦೧೩ ಏಷಿಯನ್ ಚಾಂಪಿಯನ್ ಶಿಪ್ ಪುಣೆ ೧ನೇ ೬೪.೯೦ ಮೀ
೨೦೧೪ ಕಾಮನ್ ವೆಲ್ತ್ ಕ್ರೀಡಾಕೂಟ ಸ್ಕಾಟ್ ಲೆಂಡ್ ೧ನೇ ೬೩.೬೪ ಮೀ
ಏಷಿಯನ್ ಕ್ರೀಡಾಕೂಟ ದಕ್ಷಿಣ ಕೊರಿಯ ೨ನೇ ೬೨.೫೮ ಮೀ
೨೦೧೫ ಏಷಿಯನ್ ಚಾಂಪಿಯನ್ ಶಿಪ್ ಚೀನಾ ೧ನೇ ೬೨.೦೩ಮೀ

ಡಿಸ್ಕಸ್ ಎಸೆತದಲ್ಲಿ ಸಾಧನೆ

[ಬದಲಾಯಿಸಿ]
ವರ್ಷ ಕೂಟ ಸ್ಥಳ ಸ್ಥಾನ ಮೀಟರ್ ಗಳಲ್ಲಿ
2002 ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ಕಿಂಗ್ ಸ್ಟನ್ 12 54.56
2004 ಒಲಂಪಿಕ್ಸ್ ಅಥೆನ್ಸ್ 15 61.39
2005 ಏಷ್ಯನ್ ಚಾಂಪಿಯನ್ ಷಿಪ್ ಇಂಚವೇನ್ 2 62.84
2006 ಕಾಮನ್ ವೆಲ್ತ ಕ್ರೀಡಾಕೂಟ ಮೆಲ್ಬರ್ನ್ 6 60.8
2006 ಏಷ್ಯನ್ ಗೇಮ್ಸ್ ದೋಹಾ 6 58.28
2008 ಒಲಂಪಿಕ್ಸ್ ಬೀಜಿಂಗ್ 22 60.69
2010 ಏಷ್ಯನ್ ಗೇಮ್ಸ್ ಗುವಾಮಗ್ಜು 3 63.13
2010 ಕಾಮನ್ ವೆಲ್ತ ಕ್ರೀಡಾಕೂಟ ನವದೆಹಲಿ 2 63.69
2011 ಏಷ್ಯನ್ ಚಾಂಪಿಯನ್ ಷಿಪ್ ಜಪಾನ್ 2 61.58
2011 ವಿಶ್ವ ಚಾಂಪಿಯನ್ ಷಿಪ್ ದ.ಕೊರಿಯಾ 7 64.05
2012 ಒಲಂಪಿಕ್ಸ್ ಲಂಡನ್ 8 64.79
2013 ಏಷ್ಯನ್ ಚಾಂಪಿಯನ್ ಷಿಪ್ ಪುಣೆ 1 64.9
2014 ಕಾಮನ್ ವೆಲ್ತ್ ಕೂಟ ಗ್ಲಾಸ್ಗೊ 1 63.64
2014 ಏಷ್ಯನ್ ಗೇಮ್ಸ್ ಇಂಚೆನ್ 2 62.58
2015 ಏಷ್ಯನ್ ಚಾಂಪಿಯನ್ ಷಿಪ್ ವುಹಾನ್ 1 62.03
2015 ವಿಶ್ವ ಚಾಂಪಿಯನ್ ಷಿಪ್ ಬೀಜಿಂಗ್ 9 62.24
2016 ಒಲಂಪಿಕ್ಸ್ ರಿಯೊ 28 58.99

[][]

ಪ್ರಶಸ್ತಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. VIKAS GOWDA;ATHLETE PROFILE
  2. ವಿಕಾಸಗೌಡ, ಶೇಖರ್‌ಗೆ ಪದ್ಮಶ್ರೀ ಪುರಸ್ಕಾರ;ಪಿಟಿಐ;25 Jan, 2017
  3. "Padma Awards 2017 announced".


ವಿಕಾಸ್ ಗೌಡ : ಇಂಗ್ಲಿಷ್ ತಾಣ[[೩]]