ವಿಷಯಕ್ಕೆ ಹೋಗು

ಜಿತು ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿತು ರಾಯ್‌:
thumb

right, ಇಂಗ್ಲಿಷ್ ತಾಣ-


ಆರಂಭಿಕ ಜೀವನ

[ಬದಲಾಯಿಸಿ]
  • ಜಿತು ರಾಯ್ ಅವರ ಆರಂಭಿಕ ಜೀವನವು ನೇಪಾಳದ ಸಂಖುವಾ ಸಭಾ ಜಿಲ್ಲೆಯ ಸಿತ್ತಲ್ಪತಿ-೮ ರಲ್ಲಿ ಕಳೆಯಿತು. ಭಾರತದ ಸೈನ್ಯದಲ್ಲಿ ೧೧ನೇ ಗೂರ್ಖಾ ರೆಜಿಮೆಂಟ್ ನಲ್ಲಿ ಸೈನಿಕ / ಕೆಲಸ ಮಾಡುತ್ತಿದ್ದ ನಾಯಿಬ್ ಸುಬೇದಾರ ಅವರ ನಾಲ್ಕನೆಯ ಮಗ ಜಿತು. ನೇಪಾಳದ ಸಂಖುವಾ ಸಭಾ ಜಿಲ್ಲೆಯಲ್ಲಿ ಜನಿಸಿದ ಜಿತು ರಾಯ್ ೨೦೦೬ ರಲ್ಲಿ ಭಾರತಕ್ಕೆ ಬಂದಿದ್ದು ತನ್ನ ತಾಯಿನಾಡು ನೇಪಾಳವೆಂದು ಹೇಳಿಕೊಳ್ಲುತ್ತಾನೆ. ಅವನ ಮೂರು ಸಹೋದರರು ಬೇರೆ ಬೇರೆ ಕೆಲಸ ಮಾಡುತ್ತಾ ವಿದೇಶದಲ್ಲಿದ್ದಾರೆ. ಅವನ ತಾಯಿ ಜಿತುವಿನ ತಾಯಿನಾಡಿನ ಹಳ್ಳಿಯಲ್ಲಿರುವ ಬೆಟ್ಟದ ಇಳಿಜಾರು ಸ್ವಂತ ಗದ್ದೆಯಲ್ಲಿ ಭತ್ತ ಬೆಳೆಯುತ್ತಾರೆ.

ಭಾರತೀಯ ಸೇನೆಗೆ

[ಬದಲಾಯಿಸಿ]
  • 2006ರಲ್ಲಿ ತಂದೆ ನಿಧನರಾದಾಗ, ರಾಯ್ ಎದುರಲ್ಲಿ ಇದ್ದುದು ಎರಡೇ ಆಯ್ಕೆ. ಬ್ರಿಟಿಷ್ ಸೇನೆ ಅಥವಾ ಭಾರತೀಯ ಸೇನೆಯನ್ನು ಸೇರುವುದು. ಗೂರ್ಖಾ ರೆಜಿಮೆಂಟ್‌ಗೆ ಆಗ ನೇಮಕಾತಿ ಪ್ರಕ್ರಿಯೆ ಶುರುವಾಗಿತ್ತು. ಇಂಗ್ಲೆಂಡ್‌ಗೆ ಹೋಗುವ ಮನಸ್ಸು ರಾಯ್ ಅವರಿಗೆ ಇತ್ತಾದರೂ ಬ್ರಿಟಿಷ್ ಸೇನಾ ಶಿಬಿರಕ್ಕೆ ನಿಗದಿತ ದಿನದಂದು ತಲುಪಲು ಅವರಿಗೆ ಸಾಧ್ಯವಾಗಿರಲಿಲ್ಲ. ಮರುದಿನ ಭಾರತ ಸೇನೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ಅವರ ಹೆಸರಿತ್ತು. ಲಖನೌದಲ್ಲಿನ 11ನೇ ಗೂರ್ಖಾ ರೆಜಿಮೆಂಟ್‌ಗೆ ಅವರು ಆಯ್ಕೆಯಾಗಿದ್ದರು.
  • ಒಂದೇ ವಿಶ್ವಕಪ್ ಸ್ಪರ್ಧೆಗಳಲ್ಲಿ ಎರಡು ಪದಕಗಳನ್ನು ಗೆದ್ದ ಅಗ್ಗಳಿಕೆ ಅವರದ್ದು. ಆ ವರ್ಷ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಶ್ವದ ಮೊದಲ ರ್‍್ಯಾಂಕ್ ಹಾಗೂ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾಲ್ಕನೇ ರ್‍್ಯಾಂಕ್ ಪಡೆದರು.

ಶೂಟಿಂಗ್ ಸ್ಪರ್ಧೆ

[ಬದಲಾಯಿಸಿ]
  • ಸೇನೆಯಲ್ಲಿ ಶೂಟಿಂಗ್ ಸ್ಪರ್ಧೆಯನ್ನು ಅವರು ಆರಿಸಿಕೊಂಡಿದ್ದು ಇತರ ಕ್ರೀಡೆಗಳನ್ನು ಆಡುವಷ್ಟು ದೈಹಿಕ ಸಾಮರ್ಥ್ಯ ತಮಗಿಲ್ಲ ಎಂಬ ಕಾರಣಕ್ಕೆ. ಸೇನಾ ತರಬೇತುದಾರ ಗರ್ವರಾಜ್ ರಾಯ್ ಜೀತು ಪ್ರತಿಭೆಯನ್ನು ಗುರುತಿಸಿದರು. ಈಗ ಭಾರತದ ಪಿಸ್ತೂಲ್ ಕೋಚ್ ಪಾವೆಲ್ ಸ್ಮಿರ್ನೊವ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
  • 2014 ಜೀತು ರಾಯ್ ಪಾಲಿಗೆ ವಿಶೇಷ ವರ್ಷ. ವಿಶ್ವ ಚಾಂಪಿಯನ್‌ಷಿಪ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಮೂರೇ ತಿಂಗಳ ಅವಧಿಯಲ್ಲಿ ಪದಕಗಳನ್ನು ಅವರು ಗಳಿಸಿದರು.[]

ಜಿತು ರಾಯ್‌

[ಬದಲಾಯಿಸಿ]

೧೭ ನೇ ಏಷ್ಯಾಡ್ ೨೦೧೪ ಕ್ರೀಡಾಕೂಟದಲ್ಲಿ

[ಬದಲಾಯಿಸಿ]
ದಕ್ಷಿಣ ಕೊರಿಯಾದ ಇಂಚಿಯಾನ್ ನಗರದ ಆತಿಥ್ಯದಲ್ಲಿ ೧೯-೯-೨೦೧೪ ರ ಶುಕ್ರವಾರದಿಂದ ಅ.೪ ರವರೆಗೆ ನಡೆದ ೧೭ನೇ ಏಷ್ಯಾಡ್ ೨೦೧೪ರ ಕ್ರೀಡಾಕೂಟದಲ್ಲಿ, ೨೭ ವರ್ಷ ವಯಸ್ಸಿನ ಜಿತು ಈಗ ಭಾರತದ ಅಗ್ರಮಾನ್ಯ ಶೂಟರ್‌. ಈ ವರ್ಷವೊಂದರಲ್ಲೇ ಅವರು ಏಳು ಪದಕ ಜಯಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದು ಅದರಲ್ಲಿ ಪ್ರಮುಖವಾದುದು. ಒಂದೇ ವಿಶ್ವಕಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್‌ ಕೂಡ.
೧೦ ಮೀಟರ್‌ ಏರ್‌ ಪಿಸ್ತೂಲ್‌ ಹಾಗೂ ೫೦ ಮೀಟರ್‌ ಪಿಸ್ತೂಲ್‌ ಅವರ ನೆಚ್ಚಿನ ಸ್ಪರ್ಧೆಗಳು. ಏರ್‌ ಪಿಸ್ತೂಲ್‌ನಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಇಂಚೆನ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟವರು ಜಿತು. ೫೦ ಮೀ. ಪಿಸ್ತೂಲ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ತಂಡ ವಿಭಾಗದ ೧೦ ಮೀ. ಏರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಜಯಿಸಿದರು. ೫೦ ಮೀ. ಪಿಸ್ತೂಲ್‌ ವಿಭಾಗದಲ್ಲಿ ೧೯೯೪ ರ ಬಳಿಕ ಈ ಸಾಧನೆ ಮೂಡಿ ಬಂದಿದೆ. ಹಿರೋಷಿಮಾ ಏಷ್ಯನ್‌ ಕೂಟದಲ್ಲಿ ಜಸ್ಪಾಲ್‌ ರಾಣಾ ೨೫ ಮೀ. ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ ಯಾರೂ ಈ ಸಾಧನೆ ಮಾಡಿರಲಿಲ್ಲ.
ಜಿತು ಸದ್ಯ ಲಖನೌದಲ್ಲಿ ನೆಲೆಸಿದ್ದಾರೆ. ಆದರೆ ಅವರ ತಾಯ್ನಾಡು ನೇಪಾಳ. ಈಗಲೂ ಅವರ ತಾಯಿ ನೇಪಾಳದ ಇಟರಿಯಲ್ಲಿ ನೆಲೆಸಿದ್ದಾರೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದ ಜಿತು, ತಮ್ಮ ತಂದೆಯ ನಿಧನದ ಬಳಿಕ ಭಾರತಕ್ಕೆ ವಲಸೆ ಬಂದರು. ಅವರೀಗ ಲಖನೌದಲ್ಲಿ ಗೂರ್ಖಾ ರೆಜಿಮೆಂಟ್‌ನಲ್ಲಿ ಸುಬೇದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾನು ನೇಪಾಳದಲ್ಲಿ ಜನಿಸಿರಬಹುದು. ಆದರೆ ನಾನು ಇವತ್ತು ಈ ಹಂತಕ್ಕೇರಲು ಕಾರಣವಾಗಿರುವುದು ಭಾರತ. ನನ್ನ ಸಾಧನೆ ಭಾರತಕ್ಕೆ ಅರ್ಪಣೆ’ ಎಂದಿದ್ದಾರೆ ಜಿತುರಾಯ್‌.

ರಿಯೊ ಒಲಿಂಪಿಕ್ಸ್‌ಗೆ

[ಬದಲಾಯಿಸಿ]

ಅರ್ಜುನ ಪ್ರಶಸ್ತಿ ಪುರಸ್ಕೃತ ಜೀತು ರಾಯ್ ಈ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ ಮೊದಲ ಅಥ್ಲೀಟ್ ಎನಿಸಿದ್ದಾರೆ. 50 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಶ್ವದ ನಂಬರ್ ಒನ್ ರ್‍್ಯಾಂಕಿಂಗ್ ಆಟಗಾರ ಎನ್ನುವುದು ಅವರ ಅಗ್ಗಳಿಕೆ.

ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ

[ಬದಲಾಯಿಸಿ]
  • ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಶೂಟರ್ ಜಿತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 Aug, 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು.[]

ಐಎಸ್‌ಎಸ್ಎಫ್‌ ವಿಶ್ವಕಪ್‌ನ 10 ಮೀಟರ್ ಏರ್ ಪಿಸ್ತೂಲ್ ೨೦೧೭

[ಬದಲಾಯಿಸಿ]
  • 28 Feb, 2017;
  • ನವದೆಹಲಿಯಲ್ಲಿ ನಡೆದ ಐಎಸ್‌ಎಸ್ಎಫ್‌ ವಿಶ್ವಕಪ್‌ನ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಭಾರತೀಯ ಶೂಟರ್‌ ಜೀತು ರಾಯ್‌ ಕಂಚಿನ ಪದಕ ಗೆದ್ದರು. ಒಟ್ಟು 216.7 ಅಂಕಗಳನ್ನು ಪಡೆದ 29 ವರ್ಷ ವಯಸ್ಸಿನ ಶೂಟರ್‌ ಜೀತು ರಾಯ್ ಮೂರನೇ ಸ್ಥಾನ ಪಡೆದರು.[]

ಐಎಸ್ ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್ ಚಾಂಪಿ ಯನ್‌ಷಿಪ್‌ನಲ್ಲಿ ಚಿನ್ನ

[ಬದಲಾಯಿಸಿ]
  • 2 Mar, 2017;
  • 50 ಮೀಟರ್ಸ್‌ ಪಿಸ್ತೂಲ್‌ ಸ್ಪರ್ಧೆ ಯಲ್ಲಿ ಬುಧವಾರ ಅವರು ಚಿನ್ನದ ಪದಕ ಗೆದ್ದರು. ಇದೇ ವಿಭಾಗದ ಬೆಳ್ಳಿ ಅಮನಪ್ರೀತ್ ಸಿಂಗ್ ಪಾಲಾಯಿತು.ವಿಶ್ವ ದಾಖಲೆಯ ಸಾಧನೆ ಮಾಡಿದ ಜಿತು 230.1 ಪಾಯಿಂಟ್ಸ್ ಕಲೆ ಹಾಕಿ ಚಿನ್ನಗೆದ್ದರು. ಅಮನ ಪ್ರೀತ್‌ ನಂತರ ಎರಡನೇ ಸ್ಥಾನಕ್ಕೆ ಇಳಿ ದರು. ಅವರು ಅಂತಿಮವಾಗಿ 226.9 ಪಾಯಿಂಟ್ಸ್‌ ಗಳಿಸಿದರು. ಇರಾನ್‌ನ ಜಿ. ವಾಹಿದ್‌ 208 ಪಾಯಿಂಟ್ಸ್‌ ಪಡೆದು ಕಂಚು ಗೆದ್ದರು.
  • ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯತ್ತಿರುವ ಟೂರ್ನಿಯಲ್ಲಿ ನೇಪಾಳ ಮೂಲದ ಜಿತು ಮಂಗಳವಾರ 10 ಮೀಟರ್ಸ್‌ ಏರ್ ಪಿಸ್ತೂಲ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ಮಿಶ್ರ ತಂಡ ವಿಭಾಗದಲ್ಲಿ ಹೀನಾ ಸಿಧು ಜೊತೆ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗವನ್ನು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನಡೆಸುತ್ತಿರುವ ಕಾರಣ ಆ ವಿಭಾಗದಲ್ಲಿ ಗೆದ್ದ ಪದಕ ಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ.[]

ಜಿತು ಪಡೆದ ಪದಕಗಳ ವಿವರ

[ಬದಲಾಯಿಸಿ]

ಪುರುಷರ ಶೂಟಿಂಗ್- ಭಾರತದ ಸ್ಪರ್ಧೆ- 2014 : ಒಂದೇ ವರ್ಷದಲ್ಲಿ ಏಳು ಪದಕಗಳ ಗಳಿಕೆ

ಸ್ಪರ್ಧೆ ನಡೆದ ಸ್ಥಳ ಇಸವಿ - ಊರು ಭಾರತದ ಸ್ಪರ್ಧೆ/ವಿಧ. ಪದಕ
೫೧ ನೇ ಐ.ಎಸ್.ಎಸ್.ಎಫ್.

(ISSF)ಜಾಗತಿಕ ಛಾಂಪಿಯನ್ ಪಟ್ಟ

೨೦೧೪ ಗ್ರನಡ ೫೦ ಮೀ ಪಿಸ್ತೂಲು ಬೆಳ್ಳಿ
ಐ.ಎಸ್.ಎಸ್.ಎಫ್ ವಿಶ್ವ ಕಪ್ -ಪದಕ .. .. ..
.". ೨೦೧೪ ಮರಿಬೋರ್ ೧೦ ಮೀ. ಏರ್ ಪಿಸ್ತೂಲು ಚಿನ್ನ
.". ಮ್ಯೂನಿಚ್ ೧೦ ಮೀ.ಏರ್ ಪಿಸ್ತೂಲು ಬೆಳ್ಳಿ
ಕಾಮನ್ ವೆಲ್ತ್ ಕ್ರೀಡಾಕೂಟ. ೨೦೧೪ ಮರಿಬೋರ್ ೫೦ ಮೀ. ಪಿಸ್ತೂಲು ಬೆಳ್ಳಿ
.". ೨೦೧೪ ಗ್ಲ್ಯಾಸ್ಗೋ ೫೦ ಮೀ. ಪಿಸ್ತೂಲು ಚಿನ್ನ
ಏಷಿಯಾ ಕ್ರೀಡಾಕೂಟ. ೨೦೧೪ ಇಂಚಿಯಾನ್ ೫೦ ಮೀ. ಪಿಸ್ತೂಲು ಚಿನ್ನ
.". ೨೦೧೪ ಇಂಚಿಯಾನ್ ೧೦ ಮೀ. ಏರ್.ಪಿಸ್ತೂಲು ಕಂಚು


ಉಲ್ಲೇಖಗಳು

[ಬದಲಾಯಿಸಿ]


  • ಸಾಪ್ತಾಹಿಕ ಪುರವಣಿ-ಕ್ರೀಡೆ/ಕೆ. ಓಂಕಾರ ಮೂರ್ತಿ 29/09/2014/ಪ್ರಜಾವಾಣಿ)
  • ಇಂಗ್ಲಿಷ್ ತಾಣ:[[೧]]