ಗಗನ್ ನಾರಂಗ್
ಗಗನ್ ನಾರಂಗ್ (ಜನನ ೬ ಮೇ ೧೯೮೩) ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಬೆಂಬಲಿತ ಭಾರತೀಯ ಕ್ರೀಡಾ ಶೂಟರ್. ೩೦ ಜುಲೈ ೨೦೧೨ ರಂದು ಲಂಡನ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ ನ ಪುರುಷರ ೧೦ ಮೀ ಏರ್ ರೈಫಲ್ ಈವೆಂಟ್‌ನಲ್ಲಿ ಅವರು ೭೦೧.೧ ಅಂತಿಮ ಸ್ಕೋರ್‌ನೊಂದಿಗೆ ಕಂಚಿನ ಪದಕವನ್ನು ಗೆದ್ದರು. [೨] [೩] [೪] [೫]
ಆರಂಭಿಕ ಜೀವನ ಮತ್ತು ಹಿನ್ನೆಲೆ
[ಬದಲಾಯಿಸಿ]ಗಗನ್ ಅವರು ಭೀಮಸೇನ್ ನಾರಂಗ್ ಮತ್ತು ಅವರ ಪತ್ನಿ ಅಮರ್ಜಿತ್ ದಂಪತಿಗೆ ೬ ಮೇ ೧೯೮೩ ರಂದು ಚೆನ್ನೈನಲ್ಲಿ ಪಂಜಾಬಿ ಹಿಂದೂ ಅರೋರಾ ಕುಟುಂಬದಲ್ಲಿ ಜನಿಸಿದರು.[೬] [೭] ಅವರ ತಂದೆ ಏರ್ ಇಂಡಿಯಾದ ನಿವೃತ್ತ ಮುಖ್ಯ ವ್ಯವಸ್ಥಾಪಕರು.[೮] ಗಗನ್ ಅವರ ಕುಟುಂಬವು ಹರಿಯಾಣದ ಪಾಣಿಪತ್ ಜಿಲ್ಲೆಯ ಸಿಮ್ಲಾ ಗುಜ್ರಾನ್ ಗ್ರಾಮದಿಂದ ಬಂದವರು. [೯] ಆದಾಗ್ಯೂ, ಅವರ ತಂದೆಯ ಕೆಲಸದ ನಿಯೋಜನೆಗಳು ಅವರನ್ನು ಪಾಣಿಪತ್‌ನಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವಂತೆ ಮಾಡಿತು, ಅಲ್ಲಿ ಅವರು ಬೆಳೆದರು.[೧೦] ಗೀತಾಂಜಲಿ ಹಿರಿಯ ಶಾಲೆಯಲ್ಲಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ತಮ್ಮ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯನ್ನು ಪಡೆದರು.[೧೧] [೧೨] ಅವರು ಶೂಟಿಂಗ್‌ಗೆ ಬಂದದ್ದು ೧೯೯೭ರಲ್ಲಿ ಅವರ ತಂದೆ ಅವರಿಗೆ ಏರ್ ಪಿಸ್ತೂಲ್ ಉಡುಗೊರೆಯಾಗಿ ನೀಡಿದಾಗ. ಬೇಗಂಪೇಟೆಯಲ್ಲಿರುವ ಅವರ ಮನೆಯ ಹಿತ್ತಲಿನಲ್ಲಿ ಅವರು ತಮ್ಮ ಶೂಟಿಂಗ್ ಕೌಶಲ್ಯವನ್ನು ಪರಿಪೂರ್ಣಗೊಳಿಸಿಕೊಳ್ಳಲು ಅಭ್ಯಾಸ ನಡೆಸಿದರು. [೧೨] ಅವರ ತಂದೆಯ ಪ್ರಕಾರ, ಗಗನ್ ಎರಡು ವರ್ಷದವನಿದ್ದಾಗ ಆಟಿಕೆಯ ಪಿಸ್ತೂಲ್‌ನಿಂದ ಬಲೂನನ್ನು ಹೊಡೆದು ತನ್ನ ಶೂಟಿಂಗ್ ಸಾಮರ್ಥ್ಯದ ಆರಂಭಿಕ ಕಿಡಿಗಳನ್ನು ತೋರಿಸಿದನು.[೮]
ವೃತ್ತಿ
[ಬದಲಾಯಿಸಿ]೨೬ ಅಕ್ಟೋಬರ್ ೨೦೦೩ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಆಫ್ರೋ ಏಷ್ಯನ್ ಆಟಗಳ ಪುರುಷರ ೧೦ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ನಾರಂಗ್ ಚಿನ್ನದ ಪದಕವನ್ನು ಗೆದ್ದರು. ೨೦೦೬ರ ವಿಶ್ವಕಪ್‌ನ ಏರ್ ರೈಫಲ್ ಸ್ಪರ್ಧೆಯಲ್ಲಿ ಮತ್ತು ೨೦೧೦ರ ಏಪ್ರಿಲ್‌ನಲ್ಲಿ ನಡೆದ ಏರ್ ರೈಫಲ್ ಈವೆಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು.
ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ ಒಲಿಂಪಿಕ್ ಪೂರ್ವ ಕ್ರೀಡಾಕೂಟದಲ್ಲಿ, ಗಗನ್ ೨೦೦೬ ರ ವಿಶ್ವಕಪ್‌ನಲ್ಲಿ ಆಸ್ಟ್ರಿಯಾದ ಥಾಮಸ್ ಫಾರ್ನಿಕ್ ಸ್ಥಾಪಿಸಿದ ೭೦೩.೧ ಕ್ಕೆ ವಿರುದ್ಧವಾಗಿ 704.3 ವಿಶ್ವ ದಾಖಲೆಗಿಂತ ಹೆಚ್ಚಿನ ಏರ್ ರೈಫಲ್ ಸ್ಕೋರ್ ಅನ್ನು ಹೊಡೆದರು. ಗಗನ್ ನಾರಂಗ್ 2006 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 4 ಚಿನ್ನದ ಪದಕಗಳನ್ನು ಗೆದ್ದರು.
೨೦೦೮ರಲ್ಲಿ ಚೀನಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ನಂತರ ನಾರಂಗ್ ಅದೇ ೨೦೦೮ರಲ್ಲಿ ISS ಈ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದರು. ಗಗನ್ ಅರ್ಹತಾ ಸುತ್ತಿನಲ್ಲಿ ಅದ್ಭುತ ೬೦೦ ಪಾಯಿಂಟ್ಸ್ ಗಳಿಸಿ, ಅಂತಿಮ ಸುತ್ತಿನಲ್ಲಿ ೧೦೩.೫ ಅಂಕಗಳನ್ನು ಗಳಿಸುವ ಮೂಲಕ ಒಟ್ಟು ಸ್ಕೋರ್ ೭೦೩.೫ ಪಡೆದು ವಿಶ್ವ ದಾಖಲೆಯನ್ನು ಮಾಡಿದರು.[೧೩] [೧೪] ೨೦೦೬ರಲ್ಲಿ ಸ್ಪೇನ್‌ನ ಗ್ರಾನಡಾದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರಿಯಾದ ಥಾಮಸ್ ಫಾರ್ನಿಕ್ ಗಳಿಸಿದ ದಾಖಲೆಯನ್ನು ೪ ನವೆಂಬರ್ ೨೦೦೮ ರಂದು ಮುರಿದರು. ಅವರ ಈ ವಿಶೇಷವಾದ ಗೆಲುವಿಗೆ ಸ್ಫೂರ್ತಿ ಅದೇ ದಿನ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬರಾಕ್ ಒಬಾಮಾ ಅವರು ಎಂದು ಗಗನ್ ಹೇಳಿದರು. [೧೫]
೨೦೧೦ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ನಾರಂಗ್ ಅವರು ೪ ಚಿನ್ನದ ಪದಕಗಳನ್ನು ಭಾರತಕ್ಕೆ ಸೇರಿಸಿದರು. ಪುರುಷರ ೧೦ಮೀ ಏರ್ ರೈಫಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ, ಅದ್ಭುತ ೬೦೦ ಪಾಯಿಂಟ್ಸ್ ಗಳಿಸಿ, ಹೊಸ ದಾಖಲೆಯನ್ನು ಸೃಷ್ಠಿಸಿದರು.[೧೬] ೨೦೧೦ರ ಏಷ್ಯನ್ ಗೇಮ್ಸ್ ನ ಈವೆಂಟ್ ನಲ್ಲಿ ಗಗನ್ ಬೆಳ್ಳಿ ಪದಕವನ್ನು ಗೆದ್ದರು. ಟೀಮ್ ಈವೆಂಟ್‌ನಲ್ಲಿ ಅಭಿನವ್ ಬಿಂದ್ರಾ ಮತ್ತು ಸಂಜೀವ್ ರಜಪೂತ್ ಅವರೊಂದಿಗೆ ನಾರಂಗ್ ಜೊತೆಯಾಗಿ, ಚಾಂಪಿಯನ್ಸ್ ಚೀನಾವನ್ನು ಹಿಂಬಾಲಿಸಿದಂತೆ ದೇಶಕ್ಕೆ ಮತ್ತೊಂದು ಬೆಳ್ಳಿಯನ್ನು ಗೆದ್ದುಕೊಟ್ಟರು. ಏಷ್ಯನ್ ಗೇಮ್ಸ್ ನ ಮೊದಲ ದಿನವೇ ಎರಡೂ ಬೆಳ್ಳಿ ಪದಕಗಳನ್ನು ಗೆದ್ದರು.[೧೭]
ನಾರಂಗ್ ಅವರು ೨೦೧೨ರ ಲಂಡನ್ ಒಲಿಂಪಿಕ್ಸ್ನ ೧೦ ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು [೧೮] ಒಟ್ಟು ೭೦೧.೧ ಸ್ಕೋರ್ ಮೂಲಕ ಗೆದ್ದು, ೨೦೧೨ರ ಗೇಮ್‌ಗಳಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಈ ಗೆಲುವಿನ ಮೂಲಕ ಭಾರತವನ್ನು ಪ್ರತಿನಿಧಿಸಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ೩ನೇ ಶೂಟರ್ ಎನಿಸಿಕೊಂಡರು. ಚಿನ್ನದ ಪದಕ ವಿಜೇತ ರೊಮೇನಿಯಾದ ಅಲಿನ್ ಜಾರ್ಜ್ ಮೊಲ್ಡೊವೆನು ೭೦೨.೧ ಪಾಯಿಂಟ್ಸ್ ಗಳಿಸಿದರೆ, ಅದೇ ೭೦೧.೫ ಅಂಕ ಗಳಿಸಿದ ಬೆಳ್ಳಿ ಪದಕ ವಿಜೇತ ಇಟಲಿಯ ನಿಕೊಲೊ ಕ್ಯಾಂಪ್ರಿಯಾನಿ ಸ್ಕೋರ್‌ಗಿಂತ ಗಗನ್ ಸ್ವಲ್ಪ ಹಿಂದಿದ್ದರು. [೧೯] ಆದರೂ ಸಹ ರಾಯಲ್ ಆರ್ಟಿಲರಿ ಬ್ಯಾರಕ್ಸ್ನಲ್ಲಿ ಪುರುಷರ ೫೦ಮೀ ರೈಫಲ್‌ನ ಮೂರು ಸ್ಥಾನಗಳ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.[೨೦]
೨೦೧೪ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾರಂಗ್ ೫೦-ಮೀಟರ್ ರೈಫಲ್ ಪ್ರೋನ್ ಮತ್ತು ೫೦-ಮೀಟರ್ ರೈಫಲ್ ೩ ಸ್ಥಾನದಲ್ಲಿ ಕ್ರಮವಾಗಿ ೧ ಬೆಳ್ಳಿ ಪದಕ ಮತ್ತು ೧ ಕಂಚಿನ ಪದಕವನ್ನು ಗೆದ್ದರು.[೨೧] [೨೨]
ISSF ವಿಶ್ವ ಪದಕ ಪಟ್ಟಿ
[ಬದಲಾಯಿಸಿ]ಸಂ. | ಈವೆಂಟ್ | ಚಾಂಪಿಯನ್ ಶಿಪ್ | ವರ್ಷ | ಸ್ಥಳ |
---|---|---|---|---|
೧ | ೧೦ ಮೀ ಏರ್ ರೈಫಲ್ | ISSF ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್ | ೨೦೧೦ | ಮ್ಯೂನಿಚ್ |
೩ | ೫೦ ಮೀ ರೈಫಲ್ 3 ಸ್ಥಾನಗಳು | ISSF ವಿಶ್ವಕಪ್ | ೨೦೦೯ | ಚಾಂಗ್ವಾನ್ |
೪ | ೧೦ ಮೀ ಏರ್ ರೈಫಲ್ | ISSF ವಿಶ್ವಕಪ್ | ೨೦೦೯ | ಚಾಂಗ್ವಾನ್ |
೫ | ೧೦ ಮೀ ಏರ್ ರೈಫಲ್ | ISSF ವಿಶ್ವಕಪ್ ಫೈನಲ್ | ೨೦೦೮ | ಬ್ಯಾಂಕಾಕ್ |
೬ | ೧೦ ಮೀ ಏರ್ ರೈಫಲ್ | ISSF ವಿಶ್ವಕಪ್ | ೨೦೦೮ | ಬೀಜಿಂಗ್ |
೭ | ೧೦ ಮೀ ಏರ್ ರೈಫಲ್ | ISSF ವಿಶ್ವಕಪ್ | ೨೦೦೬ | ಗುವಾಂಗ್ಝೌ |
ವಿಶ್ವ ದಾಖಲೆ
[ಬದಲಾಯಿಸಿ]ವಿವಾದ
[ಬದಲಾಯಿಸಿ]ನಾರಂಗ್ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಮೂರು ಬಾರಿ ನಿರ್ಲಕ್ಷಿಸಿದ ನಂತರ, ಮತ್ತು ಆಸಕ್ತಿಯ ಕೊರತೆಯಿಂದಾಗಿ ೨೦೧೦ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮನ್ನಣೆ ಸಿಗದಾಗ, ಆಗಸ್ಟ್ ೨೦೧೦ರಲ್ಲಿ, ಸಾರ್ವಜನಿಕವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.[೨೩] ಆದಾಗ್ಯೂ, ಅವರ ಕುಟುಂಬ ಮತ್ತು ಅಭಿಮಾನಿಗಳಿಂದ ತೀವ್ರ ಒತ್ತಡ ಬಂದ ನಂತರ ಭಾಗವಹಿಸಲು ನಿರ್ಧರಿಸಿದರು.[೨೪]
ಬೇಸಿಗೆ ಒಲಿಂಪಿಕ್ಸ್
[ಬದಲಾಯಿಸಿ]ವರ್ಷ | ಈವೆಂಟ್ | ಶ್ರೇಣಿ |
---|---|---|
೨೦೦೪ ಅಥೆನ್ಸ್ | ೧೦ಮೀ ಏರ್ ರೈಫಲ್ | ೧೨ |
೨೦೦೮ ಬೀಜಿಂಗ್ | ೧೦ಮೀ ಏರ್ ರೈಫಲ್ | ೯ |
೫೦ಮೀ ರೈಫಲ್ ಪ್ರೋನ್ | ೩೫ | |
೫೦ ಮೀ ರೈಫಲ್ ಮೂರು ಸ್ಥಾನಗಳು | ೧೩ | |
೨೦೧೨ ಲಂಡನ್ | ೧೦ ಮೀ ಏರ್ ರೈಫಲ್ | |
೫೦ ಮೀ ರೈಫಲ್ ಪೀಡಿತ | ೧೮ | |
೫೦ ಮೀ ರೈಫಲ್ ಮೂರು ಸ್ಥಾನಗಳು | ೨೦ | |
೨೦೧೬ ರಿಯೊ | ೧೦ ಮೀ ಏರ್ ರೈಫಲ್ | ೨೩ |
೫೦ ಮೀ ರೈಫಲ್ ಪೀಡಿತ | ೧೩ | |
೫೦ ಮೀ ರೈಫಲ್ ಮೂರು ಸ್ಥಾನಗಳು | ೩೩ |
ಪ್ರಶಸ್ತಿಗಳು ಮತ್ತು ಮನ್ನಣೆಗಳು
[ಬದಲಾಯಿಸಿ]ಅವರ ಸಾಧನೆಗಳನ್ನು ಗುರುತಿಸಿ, ನಾರಂಗ್ ಅವರಿಗೆ ೨೦೧೧ ರಲ್ಲಿ [೨೫] ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಗಗನ್ ನಾರಂಗ್ ಅವರನ್ನು ೨೦೧೦ರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿದೆ. [೨೬] ಅಂದಿನ ರಾಷ್ಟçಪತಿ ಪ್ರತಿಭಾ ಪಾಟೀಲ್ ಅವರಿಂದ ೨೯ ಆಗಸ್ಟ್ ೨೦೧೧ ರಂದು ಪ್ರಶಸ್ತಿಯನ್ನು ಪಡೆದರು. [೨೭] ೨೦೧೨ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಚೆಕ್ಕರ್ ಧ್ವಜವನ್ನು ಬೀಸಲು ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ನ ಸಂಘಟಕರು ಗಗನ್ ನಾರಂಗ್ ಅವರನ್ನು ಆಹ್ವಾನಿಸಿದರು.[೨೮]
2012 ರ ಒಲಿಂಪಿಕ್ಸ್ ಕಂಚಿನ ಪದಕಕ್ಕಾಗಿ ಪ್ರಶಸ್ತಿಗಳು
- ಹರಿಯಾಣ ರಾಜ್ಯ ಸರ್ಕಾರದಿಂದ ₹೧೦ ಮಿಲಿಯನ್ (US$೧೩೦,೦೦೦) ನಗದು ಬಹುಮಾನ. ಆಂಧ್ರಪ್ರದೇಶದ ರಾಜ್ಯ ಸರ್ಕಾರದಿಂದ ₹೫ ಮಿಲಿಯನ್ (US$೬೬,೦೦೦) ನಗದು ಬಹುಮಾನ. ರಾಜಸ್ಥಾನದ ರಾಜ್ಯ ಸರ್ಕಾರದಿಂದ ₹೫ ಮಿಲಿಯನ್ (US$೬೬,೦೦೦) ನಗದು ಬಹುಮಾನ. ಭಾರತದ ಉಕ್ಕು ಸಚಿವಾಲಯದಿಂದ ₹೨ ಮಿಲಿಯನ್ (US$೨೬,೦೦೦) ನಗದು ಬಹುಮಾನ. ಸಹಾರಾ ಇಂಡಿಯಾ ಪರಿವಾರದಿಂದ ೨ ಕೆಜಿ ಚಿನ್ನ.
ಉಲ್ಲೇಖಗಳು
[ಬದಲಾಯಿಸಿ]- ↑ "Who is Gagan Narang". Hindustan Times. 5 October 2010. Archived from the original on 6 October 2010. Retrieved 8 October 2010.
- ↑ https://indianexpress.com/article/news-archive/print/olympics-2012-gagan-narang-shoots-bronze-indias-1st-medal/
- ↑ https://olympics.com/fr/olympic-games/olympic-results
- ↑ https://web.archive.org/web/20120801211333/http://sports.in.msn.com/gallery/photoviewer.aspx?cp-documentid=4462593
- ↑ https://www.rediff.com/sports/interview/gagan-narang-how-i-slayed-my-demons-and-won-an-olympic-medal/20200526.htm
- ↑ https://web.archive.org/web/20160329131930/http://www.newindianexpress.com/cities/hyderabad/article579776.ece
- ↑ https://web.archive.org/web/20160329122001/http://www.sports-reference.com/olympics/athletes/na/gagan-narang-1.html
- ↑ ೮.೦ ೮.೧ Subrahmanyam, V. V. (31 July 2012). "Nerve-wracking moments... and joy!". The Hindu. Archived from the original on 29 March 2016. Retrieved 29 March 2016.
- ↑ Lohumi, Bhanu P (31 July 2012). "Narang's village bursts into celebrations". The Tribune (Chandigarh). Archived from the original on 29 March 2016. Retrieved 29 March 2016.
- ↑ Deswal, Deepender (31 July 2012). "We want to honour Gagan". The Times of India. Archived from the original on 29 March 2016. Retrieved 29 March 2016.
- ↑ "Royal reception for Gagan". The Hindu. 14 August 2012. Archived from the original on 29 March 2016. Retrieved 29 March 2016.
- ↑ ೧೨.೦ ೧೨.೧ Unnikrishnan, M.S. (1 April 2006). "UNCOMMON WEALTH". The Tribune (Chandigarh). Archived from the original on 29 March 2016. Retrieved 29 March 2016.
- ↑ "Narang wins World Cup, sets world record". The Times of India. 5 November 2008. Retrieved 5 November 2008.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Gagan Narang shoots to world record, wins world cup". IBN Live. 5 November 2008. Archived from the original on 8 November 2008. Retrieved 5 November 2008.
- ↑ "Narang wins World Cup gold with new record". Rediff. 5 November 2008. Retrieved 5 November 2008.
- ↑ "Gagan Narang grabs gold in 10m air rifle". 5 October 2010. an article on Commonwealth Games 2010
- ↑ "Asian Games: Gagan Narang provides India with silver lining on opening day". 13 November 2010.
- ↑ "Gagan Narang wins India's first medal at London 2012 Olympics". Retrieved 30 July 2012."Gagan Narang wins India's first medal at London 2012 Olympics".
- ↑ "Olympics 2012: Gagan Narang shoots a bronze, India wins first medal". Retrieved 30 July 2012."Olympics 2012: Gagan Narang shoots a bronze, India wins first medal".
- ↑ "Olympics: Shooters Narang, Rajput fail to qualify". The Times of India. Retrieved 6 August 2012.
- ↑ "I'm happy to win a CWG medal in new event: Narang". 28 July 2014. an article on Commonwealth Games 2014
- ↑ "Sanjeev Rajput wins silver, Gagan Narang takes bronze". 29 July 2014. an article on Commonwealth Games 2014
- ↑ "Gagan Narang threatens to skip Commonwealth Games". The Times of India. 8 August 2010. Retrieved 30 July 2012.
- ↑ "Gagan Narang to participate at Commonwealth Games". Hindustan Times. New Delhi, India. Press Trust of India. 17 August 2010. Archived from the original on 16 February 2013. Retrieved 30 July 2012.
- ↑ "Padma Shree for Gagan Narang". 25 January 2011. Archived from the original on 1 August 2012. Retrieved 30 July 2012.
- ↑ "Gagan Narang gets Khel Ratna award, Zaheer gets Arjuna". The Times of India. 22 July 2011. Retrieved 30 July 2012.
- ↑ "Gagan Narang to be conferred Khel Ratna on Aug 29". Rediff.com. 18 August 2011. Retrieved 18 August 2011.
- ↑ "A tribute to a champion". The Hindu. Chennai, India. 29 October 2012. Retrieved 2 November 2012.