ವಿಷಯಕ್ಕೆ ಹೋಗು

ಸಾಕ್ಷಿ ಮಲಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಾಕ್ಷಿ ಮಲಿಕ್‌ ಇಂದ ಪುನರ್ನಿರ್ದೇಶಿತ)
ಸಾಕ್ಷಿ ಮಲಿಕ್‌
ವೈಯುಕ್ತಿಕ ಮಾಹಿತಿ
ಜನನ (1992-09-03) ೩ ಸೆಪ್ಟೆಂಬರ್ ೧೯೯೨ (ವಯಸ್ಸು ೩೨)
ರೊಹ್ಟಕ್ ,[] ಹರ್ಯಾಣ, ಭಾರತ
ಎತ್ತರ162 cm (5.31 ft) (2016)[][][]
ತೂಕ೫೮ ಕೆ. ಜಿ
Sport
ದೇಶಭಾರತ
ಕ್ರೀಡೆಫ್ರೀಸ್ಟೈಲ್ ಕುಸ್ತಿ
ಸ್ಪರ್ಧೆಗಳು(ಗಳು)೫೮ ಕೆ.ಜಿ. ಫ್ರೀಸ್ಟೈಲ್
ತರಬೇತುದಾರರುಈಶ್ವರ್ ದಹಿಯಾ
Achievements and titles
ಒಲಂಪಿಕ್ ಫ಼ೈನಲ್‌ಗಳುಕಂಚಿನ ಪದಕ

ಸಾಕ್ಷಿ ಮಲಿಕ್‌ (ಜನನ: ೩ ಸೆಪ್ಟೆಂಬರ್ ೧೯೯೨) ೫೮ ಕೆ.ಜಿ ವಿಭಾಗದಲ್ಲಿ ಪೈಪೋಟಿ ಮಾಡುವ ಭಾರತೀಯ ಕುಸ್ತಿಪಟು. ರಿಯೋನಲ್ಲಿ ನಡೆದ ೨೦೧೬ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಇವರು ೫೮ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟುಯಾಗಿದ್ದಾರೆ. ಅಲ್ಲದೇ, ಗ್ಲ್ಯಾಸ್ಗೋನಲ್ಲಿ ನೆಡೆದ ೨೦೧೪ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಮತ್ತು ದೊಹಾದಲ್ಲಿ ನೆಡೆದ ೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ಕಂಚಿನ ಪದಕ ಗೆದ್ದಿದ್ದಾರೆ[]

ಬಾಲ್ಯ ಮತ್ತು ಆರಂಭಿಕ ತರಬೇತಿ

[ಬದಲಾಯಿಸಿ]

ಮಲಿಕ್ 3 ಸೆಪ್ಟೆಂಬರ್ 1992 ರಂದು ಹರ್ಯಾಣದ ರೋಹ್ಟಕ್ ಜಿಲ್ಲೆಯ ಮೋಖ್ರಾ ಗ್ರಾಮದಲ್ಲಿ,[] ದೆಹಲಿ ಸಾರಿಗೆ ನಿಗಮದ ಬಸ್ ವಾಹಕದ ಸುಖ್ಬಿರ್, ಮತ್ತು ಸ್ಥಳೀಯ ಆರೋಗ್ಯ ಚಿಕಿತ್ಸಾಲಯದ ಮೇಲ್ವಿಚಾರಕ ಸುದೇಶ್ ಮಲಿಕ್ ರವರಿಗೆ ಜನಿಸಿದರು.[][] ಅವರ ತಂದೆಯ ಪ್ರಕಾರ, ಕುಸ್ತಿಪಟುಯಾಗಿದ್ದ ಅಜ್ಜ ಬದ್ಲು ರಾಮ್ ನವರಿಂದ ಕುಸ್ತಿಗೆ ಪ್ರೇರೇಪಣೆ ದೊರೆಯಿತು.[][೧೦] ರೋಹಟಕ್ನ ಛೋಟು ರಾಮ್ ಕ್ರೀಡಾಂಗಣದ ಅಖಾಡಾದಲ್ಲಿ, ತರಬೇತುದಾರ ಈಶ್ವರ್ ದಾಹಿಯಾ ಅವರ ಕೆಳಗೆ 12 ನೇ ವಯಸ್ಸಿನಲ್ಲಿ ಅವರು ಕುಸ್ತಿಯಲ್ಲಿ ತರಬೇತಿ ಪ್ರಾರಂಭಿಸಿದರು.

ಕ್ರೀಡಾ ವೃತ್ತಿಜೀವನ

[ಬದಲಾಯಿಸಿ]

ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೃತ್ತಿಪರ ಕುಸ್ತಿಪಟುವಾಗಿ ಮಲಿಕ್ ಮೊದಲ ಯಶಸ್ಸು 2010 ರಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಬಂದಿದ್ದು, 58 ಕೆ.ಜಿ ಫ್ರೀಸ್ಟೈಲ್ ಸಮಾರಂಭದಲ್ಲಿ ಕಂಚಿನ ಪದಕ ಗೆದ್ದರು. ಡೇವ್ ಷುಲ್ಟ್ಜ್ ಅಂತರರಾಷ್ಟ್ರೀಯ ಪಂದ್ಯಾವಳಿ (2014) ಯಲ್ಲಿ, ಅವರು 60 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು.

೨೦೧೪ ಕಾಮನ್ವೆಲ್ತ್ ಗೇಮ್ಸ್

[ಬದಲಾಯಿಸಿ]

ಮಲಿಕ್ ಅವರು ತಮ್ಮ ಕಾಮನ್ವೆಲ್ತ್ ಗೇಮ್ಸ್ ಅಭಿಯಾನವನ್ನು ಗ್ಲ್ಯಾಸ್ಗೋ, ಸ್ಕಾಟ್ಲೆಂಡ್ ನಲ್ಲಿ ಆರಂಭಿಸಿದರು, ಕ್ವಾರ್ಟರ್ಫೈನಲ್‌ನಲ್ಲಿ ಕ್ಯಾಮರೂನ್‌ನ (ಎಡ್ವಿಗ್ ಗೊನೊಏಯಿಯ (Edwige Ngono Eyia) ವಿರುದ್ಧ ಪಂದ್ಯವನ್ನು ೪-೦ ಅಂತರದಿಂದ ಗೆದ್ದರು. ಸೆಮಿಫೈನಲ್ನಲ್ಲಿ, ಅವರು ಕೆನಡಾದ ಬ್ರಾಕ್ಸ್‍ಟೊನ್(Braxton stone)ನ್ನು ೩-೧ ಅಂತರದಿಂದ ಸೋಲಿಸಿ ಕಾಮನ್ವೆಲ್ತ್ ಪದಕ ಖಾತ್ರಿಮಾಡಿಕೊಂಡರು. ಕೊನೆಯ ಪಂದ್ಯದಲ್ಲಿ ನೈಜೀರಿಯಾದ ಅಮಿನತ್‌ ಅಡೆನೇಯಿ ಅವರನ್ನು ಎದುರಿಸಿ ೪-೦ ಯಿಂದ ಸೋತರು[೧೧]

೨೦೧೪ ವಿಶ್ವ ಕುಸ್ತಿ ಚಾಂಪಿಯನ್ಶಿಪ್

[ಬದಲಾಯಿಸಿ]

ತಾಷ್ಕೆಂಟ್ ಉಜ್ಬೇಕಿಸ್ತಾನ್‌ನಲ್ಲಿ ನೆಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ೧೦ ಸೆಪ್ಟೆಂಬರ್ ೨೦೧೪ರಂದು ಮಲಿಕ್ ಭಾಗವಹಿಸಿದರು, ೧೬ರ ಸುತ್ತಿನಲ್ಲಿ ಇವರು ಸೆನೆಗಲ್‌ನ Anta Sambou ರನ್ನು ಎದುರಿಸಿದರು ಮತ್ತು ೪-೧ ಅಂತರದಿಂದ ಪಂದ್ಯವನ್ನು ಗೆದ್ದರು. ಫಿನ್ಲ್ಯಾಂಡ್‌ನ ಪೆಟ್ರಾ Olli ಯಿಂದ ೧-೩ರ ಅಂತರದಿಂದ ಸೋತ್ತು ಪಂದ್ಯಾವಳಿಯಲ್ಲಿ ಹೊರಬಂದರು[೧೨]

೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್

[ಬದಲಾಯಿಸಿ]

೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್‌ನ್ನು ದೋಹಾ, ಕತಾರ್‌ನಲ್ಲಿ ಮೇ ತಿಂಗಳಿನಲ್ಲಿ ನಡೆಸಲಾಯಿತು.೯ ಮೇ ೨೦೧೫ ರಂದು, ೬೦ ಕೆ.ಜಿ. ವಿಭಾಗದಲ್ಲಿ, ಒಟ್ಟು ಐದು ಸುತ್ತುಗಳಲ್ಲಿ ಎರಡು ಸುತ್ತುಗಳಲ್ಲಿ ಹೋರಾಡಿ, ಮಲ್ಲಿಕ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನಲ್ಲಿ, ಅವರು ಚೀನಾದ ಲುವೊ ಕಿಯಾನ್‍ಜಾನ್)(Luo Xiaojuan) ಅವರನ್ನು ಎದುರಿಸಿದರು ಆದರೆ ತಪ್ಪು ತೀರ್ಪಿನಿಂದಾಗಿ ೪-೫ ರಿಂದ ಸೋತರು. ಅವರು‌ ಎರಡನೇ ಸುತ್ತಿನಲ್ಲಿ ಮಂಗೋಲಿಯಾದ ಮುಂಖ್ತುಯ ತುಂಗಲಾಗ್(Munkhtuya Tungalag)ರನ್ನು ತಮ್ಮ ಬಲವಾದ ಪ್ರದರ್ಶನದಿಂದ ೧೩-೦ ಯಿಂದ ಸೋಲಿಸಿದರು, ಮೂರನೇ ಸುತ್ತಿನಲ್ಲಿ ಜಪಾನ್‌ನ ಯೊಶಿಮಾ ಕಯಾಮಾ (Yoshimi Kayama) ವಿರುದ್ಧ ಸೋಲುವ ಮುನ್ನ, ನಾಲ್ಕನೇ ಸುತ್ತಿನಲ್ಲಿ ಕಝಾಕಿಸ್ತಾನ್‌ನ ಅಯಾಲಿಮ್ ಕಾಸಿಮೊವ(Ayaulym Kassymova)ರನ್ನು ಸೋಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.[೧೩]

ಇವರು ತನ್ನ ತವರು ಹರ್ಯಾಣಗೆ ಹಿಂದಿರಿಗಿದಾಗ ಇವರಿಗೆ ಮತ್ತು ಇವರ ತರಬೇತುದಾರ ಈಶ್ವರ್ ದಹಿಯಾ ಅವರಿಗೆ ಛೋಟು ರಾಮ್ ಕ್ರೀಡಾಂಗಣದಲ್ಲಿ ಹೃತ್ಪೂರ್ವಕ ಸ್ವಾಗತ ಸಿಕ್ಕಿತು.[೧೪]

೨೦೧೬ ರಿಯೋ ಒಲಿಂಪಿಕ್ಸ್

[ಬದಲಾಯಿಸಿ]

ಮಲಿಕ್‌ರವರು ೫೮ ಕೆ.ಜಿ. ವಿಭಾಗದಲ್ಲಿ ಚೀನಾದ ಜಾಂಗ್ ಲಾನ್(Lan) ಅವರನ್ನು ಮೇ ೨೦೧೬ರ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಸೋಲಿಸುವ ಮೂಲಕ ೨೦೧೬ಬೇಸಿಗೆ ಒಲಿಂಪಿಕ್ಸ್ ಅರ್ಹತೆ ಪದೆದರು.[೧೫]

ಒಲಿಂಪಿಕ್ಸ್‌ನಲ್ಲಿ, ೩೨ರ ಸುತ್ತಿನಲ್ಲಿ ಸ್ವೀಡನ್‌ನ ಜೋಹಾನಾ ಮ್ಯಾಟ್ಸನ್ (Mattsson) ವಿರುದ್ಧ ಮತ್ತು ೧೬ರ ಸುತ್ತಿನಲ್ಲಿ ಮರಿಯಾನ ಚರ್ದಿವೇರ (Mariana Cherdivara) ವಿರುದ್ಧ ಗೆದ್ದರು. ಕ್ವಾರ್ಟರ್ಫೈನಲ್‌ನಲ್ಲಿ, ಅಂತಿಮ ಘಟ್ಟ ತಲುಪಿವ ಸ್ಪರ್ಧಿಯಾದ, ರಶಿಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋತು ರೆಫೆಶಾಝ್ ಸುತ್ತಿಗೆ ಅರ್ಹರಾದರು, ಅವರ ಮೊದಲ ರೆಫೆಶಾಝ್ ಸುತ್ತಿನಲ್ಲಿ ಮಂಗೋಲಿಯಾದ ಓರ್ಕಾನ್​ ಪುರ್ವೆಡೊರ್ಜ್‌ರವರನ್ನು ಸೋಲಿಸಿದರು ಮತ್ತು ಪದಕದ ಪಂದ್ಯದಲ್ಲಿ ಹಾಲಿ ಏಷ್ಯನ್ ಚಾಂಪಿಯನ್, ಕಿರ್ಗಿಸ್ತಾನ್‌ದ ಐಸಿಲೊ ಟೈನಿಬೆಕೊವಾರನ್ನು ೮-೫ ರಿಂದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು ಮತ್ತು ಒಲಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಮತ್ತು ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೂ ಪಾತ್ರರಾದರು. ಪಂದ್ಯದ ಆರಂಭದಲ್ಲಿ ಸಾಕ್ಷಿ ೦-೫ರಿಂದ ಹಿನ್ನಡೆ ಅನುಭವಿಸಿದ್ದರು ಆದರೆ ನಂತರದ ಬೌಟ್ಸ್‌ನಲ್ಲಿ ಸತತ ೫ ಅಂಕ ಕಲೆಹಾಕಿದ ಸಾಕ್ಷಿ, ಎದುರಾಳಿ ಜೋಹನ್ನಾ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು ಹಾಗೂ ೨೦೧೬ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.[೧೬][೧೭]

ದಾಂಪತ್ಯ ಜೀವನ

[ಬದಲಾಯಿಸಿ]
  • ಹರಿಯಾಣದ ರೋಹ್ಟಕ್-ನಲ್ಲಿ ಸಾಕ್ಷಿ ಮಲಿಕ್ ಅವರು ತಮ್ಮ ಬಾಲ್ಯದ ಸ್ನೇಹಿತ, ಅಂತರರಾಷ್ಟ್ರೀಯ ಕುಸ್ತಿಪಟು ಸತ್ಯವ್ರತ್ ಕಡಿಯಾನ್ ಅವರೊಂದಿಗೆ ಭಾನುವಾರ ವಿವಾಹವಾದರು. 2016 ಅಕ್ಟೋಬರ್‌ನಲ್ಲಿ ಅವರ ಮದುವೆ ನಿಶ್ಚಯವಾಗಿತ್ತು.[೧೮]

ಪ್ರಶಸ್ತಿಗಳು ಮತ್ತು ಮಾನ್ಯತೆಗಳು

[ಬದಲಾಯಿಸಿ]
  • ೨ ಕೋಟಿ (ಯು. ಎಸ್. ಡಿ ೩೦೦,೦೦೦) ಹರ್ಯಾಣ ಸರ್ಕಾರ, ರಾಜ್ಯದಲ್ಲಿ ಭೂಮಿ ಅನುದಾನದ ಜೊತೆಗೆ.
  • ೫೦ ಲಕ್ಷ (ಯು. ಎಸ್. ಡಿ ೭೪೦೦೦) ಭಾರತೀಯ ರೈಲ್ವೆಯಿಂದ, ತನ್ನ ಉದ್ಯೋಗಿಗೆ.
  • ೨೦ ಲಕ್ಷ (ಯು. ಎಸ್. ಡಿ ೩೦೦೦೦) ಭಾರತೀಯ ಒಲಿಂಪಿಕ್ ಅಸೋಸಿಯೇಷನ್.
  • ೧೫ ಲಕ್ಷ (ಯು. ಎಸ್. ಡಿ ೨೨೦೦೦) ಜೆ. ಎಸ್. ಡಬ್ಲ್ಯೂ ಗುಂಪುನಿಂದ.
  • ೧.೦೧ ಲಕ್ಷ (ಯು. ಎಸ್. ಡಿ ೧೫೦೦) ಸಲ್ಮಾನ್ ಖಾನ್‌ನಿಂದ[೧೯]
  • ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ:ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 Aug, 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು.[೨೦]
  • ಭಾರತ ಸರ್ಕಾರದಿಂದ ೨೦೧೭ರ ಸಾಲಿನ ಪದ್ಮಶ್ರೀ ಪ್ರಶಸ್ತಿ.[೨೧]

ಉಲ್ಲೇಖಗಳು

[ಬದಲಾಯಿಸಿ]
  1. http://g2014results.thecgf.com/athlete/wrestling/1022441/s_malik.html%7Cpublisher=Commonwealth Games Federation|accessdate=7 March 2016}}
  2. "ಆರ್ಕೈವ್ ನಕಲು". Archived from the original on 2016-08-17. Retrieved 2016-08-19.
  3. https://web.archive.org/web/20160817094118/
  4. https://www.rio2016.com/en/athlete/sakshi-malik%7Carchivedate=17 August 2016}}
  5. https://www.iat.uni-leipzig.de/datenbanken/dbfoeldeak/daten.php?wkid=02496A00E99C49BA9851C7C5378648F1&gkl=5%7C
  6. "Sakshi Malik Gets Silver in Women's 58kg Freestyle Wrestling". Archived from the original on 2016-01-05. Retrieved 2016-08-20.
  7. Sharma, Nitin (18 August 2016). "Sakshi Malik has done her village Mokhra and whole India proud: coach Ishwar Singh Dahiya". The Indian Express. Retrieved 21 August 2016.
  8. ೮.೦ ೮.೧ ""Beti Khilao" will become a reality : Sakshi's mom". Times of India. 19 August 2016. Retrieved 18 August 2016.
  9. "Sakshi Malik: All you need to know about winner of India's first medal at Rio". Business Standard. 18 August 2016. Retrieved 18 August 2016.
  10. "I would like others to take inspiration from her, says Sakshi's father". The Hindu. 18 August 2016. Retrieved 18 August 2016.
  11. http://g2014results.thecgf.com/athlete/wrestling/1022441/s_malik.html Archived 2016-08-01 at archive.ph Error: unknown archive URL title=Glasgow 2014 - Sakshi Malik Profile|date=2015-07-30|accessdate=2015-10-27|
  12. http://indiaatsports.in/news/2014/09/10/sakshi-malik-exits-in-quarterfinal-of-freestyle-womens-60kg-on-day-3-of-wrestling-world-championships-at-tashkent/1003974 Archived 2018-12-25 ವೇಬ್ಯಾಕ್ ಮೆಷಿನ್ ನಲ್ಲಿ. title=Sakshi Malik exits in quarterfinal of Freestyle women's 60kg on Day 3 of Wrestling World Championships at Tashkent
  13. Lalita win bronze in Asian Wrestling Championship - Times of India|date=2015-05-09
  14. title=Haryana wrestler Sakshi Malik bags bronze in Doha, gets grand welcome
  15. Wrestlers Vinesh Phogat, Sakshi Malik grab Rio 2016 berths
  16. title=Sakshi Malik wins bronze medal in women’s wrestling 58kg category, opens India’s account at Rio 2016 Olympics
  17. sakshi-wins-bronze-stunning-comeback|title=Sakshi wins bronze in stunning comeback;17 August 2016
  18. "ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾಕ್ಷಿ;ಪಿಟಿಐ;4 Apr, 2017". Archived from the original on 2017-04-04. Retrieved 2017-04-04.
  19. title=Sakshi Malik set to get richer by at least Rs 2.5 crore after bronze medal at Rio 2016 Olympics;date=17 August 2016
  20. ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ
  21. title=Padma Awards 2017 announced