ವಿಷಯಕ್ಕೆ ಹೋಗು

ದೀಪಿಕಾ ಕುಮಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Deepika Kumari
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ13-06-1994(ಜೂನ್13,1994),
ರಾಂಚಿ, ಬಿಹಾರ, ಭಾರತ
ನಿವಾಸರಾಂಚಿ, ಜಾರ್ಕಂಡ್, ಭಾರತ
ಎತ್ತರ1.61 m (5 ft 3 in) (2010)
ತೂಕ56 kg (123 lb) (2010)
Sport
ದೇಶಭಾರತ
ಕ್ರೀಡೆArchery/ಬಿಲ್ಲುಗಾರಿಕೆ
ಕ್ಲಬ್ತಾತಾ ಆರ್ಚರಿ ಅಕಾಡಮಿ
ತಂಡಭಾರತ ಮಹಿಳಾ ಆರ್ಚರಿ ತಂಡ
ಉದ್ಯೊಗಕೀಯವಾದದ್ದು2006
Achievements and titles
ಅತ್ಯುನ್ನತ ವಿಶ್ವ ಶ್ರೆಯಾಂಕ1, World record women recurve archery[೧]

ದೀಪಿಕಾ ಕುಮಾರಿ (ಜೂನ್ 1994,13 ಜನನ) ಪ್ರಸ್ತುತ ಬಿಲ್ಲುಗಾರಿಕೆಯಲ್ಲಿ ವಿಶ್ವದ 7 ನೇ ಕ್ರಮಾಂಕದ ಭಾರತೀಯ ಕ್ರೀಡಾಪಟು, ಮತ್ತು ವಿಶ್ವದ ಮಾಜಿ ನಂಬರ್ ಒಂದನೇ ಸ್ಥಾನದವಳು. 2010 ರ ಕಾಮನ್ವೆಲ್ತ್ ಆಟಗಳಲ್ಲಿ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಅವರು ಚಿನ್ನದ ಪದಕ ವಿಜೇತೆ. ಅವರು ಡೋಲಾ ಬ್ಯಾನರ್ಜಿ ಮತ್ತು ಬೊಂಬಾಯಾಲಾ ದೇವಿ ಜೊತೆಗೆ ಮಹಿಳಾ ತಂಡದ ರಿಕರ್ವ್ ವಿಭಾಗದಲ್ಲಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

 • ಕುಮಾರಿ ಅವರು ಲಂಡನ್ 2012 ಬೇಸಿಗೆ ಒಲಿಂಪಿಕ್ಸ್‍ನಲ್ಲಿ ಮಹಿಳೆಯರ ತಂಡದ ಪಂದ್ಯಗಳಿಂದ ಸ್ಪರ್ಧಿಸಿ ಮತ್ತು ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಗಳಿಸಿ ಒಲಿಂಪಿಕ್ಸ್‍ನಲ್ಲಿ ಪ್ರವೇಶಿಸಿದರು.
 • ಭಾರತದ ಅಧ್ಯಕ್ಷ ಪ್ರಣವ್ ಮುಖರ್ಜಿಯವರು ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿ ಯನ್ನು 2012 ರಲ್ಲಿ ಪ್ರದಾನ ಮಾಡಿದರು. ಫೆಬ್ರವರಿ 2014 ರಲ್ಲಿ ಅವರನ್ನು, ವರ್ಷದ ಪ್ರಶಸ್ತಿ ಎಫ್ಐಸಿಸಿಐ ಕ್ರೀಡಾಪಟು ನೀಡಿ ಗೌರವಿಸಲಾಯಿತು. ಭಾರತ ಸರ್ಕಾರ 2016 ರಲ್ಲಿ ತನ್ನ ನಾಗರಿಕ ಗೌರವ ಪ್ರಶಸ್ತಿ “ಪದ್ಮ ಶ್ರೀ” ಪ್ರದಾನ ಮಾಡಿತು.

ಆರಂಭಿಕ ಜೀವನ[ಬದಲಾಯಿಸಿ]

 • ದೀಪಿಕಾ ಕುಮಾರಿ, ಶಿವನಾರಯಣನ್ ಮಹಾತೊ, ಆಟೋ ರಿಕ್ಷಾ ಚಾಲಕ ಮತ್ತು ಗೀತಾ ಮಹಾತೊ, ರಾಂಚಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಇವರಿಗೆ ಜನಿಸಿದರು. ಆಕೆಯ ಪೋಷಕರು ರತುಚತಿ ಗ್ರಾಮದಲ್ಲಿ, ರಾಂಚಿಯಿಂದ 15 ಕಿ.ಮೀ ದೂರದಲ್ಲಿ ವಾಸಿಸುತ್ತಾರೆ. ಮಗುವಾಗಿದ್ದಾಗ, ಮಾವಿನಹಣ್ಣು ಕೆಡವಲು ಕಲ್ಲುಗಳನ್ನು ಉಪಯೋಗಿಸಿ ಗುರಿಇಟ್ಟು ಹೊಡೆಯಲು ಅವರು ಬಿಲ್ಲುಗಾರಿಕೆ ಅಭ್ಯಾಸ ಮಾಡಿದರು. ದೀಪಿಕಾ ಬಿಲ್ಲುಗಾರಿಕೆ ಪರಿಣತಿ ಕನಸು ಬೆಂಬಲಿಸಲು ಅವಳ ತರಬೇತಿಗಾಗಿ ಆರ್ಥಿಕವಾಗಿ ಅನುಕೂಲದಲ್ಲಿರದ ಪೋಷಕರು ಬಿಲ್ಲು ಮೊದಲಾದ ಹೊಸ ಸಾಮಗ್ರಿಗಳ ಖರೀದಿಮಾಡಲು ಕುಟುಂಬದ ಬಜೆಟ್‘ನಲ್ಲಿ ರಾಜಿ ಮಾಡಿಕೊಂದು ಆರಂಭಿಕ ದಿನಗಳಲ್ಲಿ ಕಷ್ಟ ಪಡಬೇಕಾಯಿತು. ಪರಿಣಾಮವಾಗಿ, ಚಿಕ್ಕ ಹುಡುಗಿ ದೀಪಿಕಾ ಮನೆಯಲ್ಲಿ ಬಿದಿರು ಬಿಲ್ಲು ಮತ್ತು ಬಾಣಗಳನ್ನು ಬಳಸಿ ಬಿಲ್ಲುಗಾರಿಕೆ ಅಭ್ಯಾಸ ಮಾಡಿದಳು. ನಂತರ ಟಾಟಾ ಆರ್ಚರಿ ಅಕಾಡೆಮಿಯಲ್ಲಿ ವಾಸಿಸುವ ದೀಪಿಕಾ ಸೋದರಸಂಬಂಧಿ ವಿದ್ಯಾ ಕುಮಾರಿ, ಬಿಲ್ಲುಗಾರಕೆಯಲ್ಲಿ,ಅವಳ ಪ್ರತಿಭೆ ಬೆಳೆಯಲು ಸಹಾಯ ಮಾಡಿದರು.

ವೃತ್ತಿಜೀವನ[ಬದಲಾಯಿಸಿ]

ಅವಳು ರಾಜ್ಯದ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಮುಂಡ ಸ್ಥಾಪಿಸಲ್ಪಟ್ಟ ಅರ್ಜುನ್ ಬಿಲ್ಲುವಿದ್ಯೆ ಅಕಾಡೆಮಿ ಸಂಸ್ಥೆ ಖಾರ್ಸಾವನ್ ನಲ್ಲಿ 2005ರಲ್ಲಿ ಪ್ರವೇಶಿಸಿದಾಗ, ದೀಪಿಕಾ ತನ್ನ ಮೊದಲ ಅನಿರೀಕ್ಷಿತ ತಿರುವು ಪಡೆದರು. ಆದರೆ ಅವರ ವೃತ್ತಿಪರ ಬಿಲ್ಲುಗಾರಿಕೆಯ ಮುಂದಿನ ಪ್ರಯಾಣ,2006 ರಲ್ಲಿ ಅವರು ಜಮ್ಶೆಡ್ಪುರದಲ್ಲಿ ಟಾಟಾ ಆರ್ಚರಿ ಅಕಾಡೆಮಿಯನ್ನು ಸೇರಿದಾಗ ಆರಂಭವಾಯಿತು. ಅಲ್ಲಿ ಅವರಿಗೆ ಸರಿಯಾದ ಸಾಧನ (ಬಿಲ್ಲು) ಹಾಗೂ ಏಕರೂಪದ ಅವರ ತರಬೇತಿ ಎರಡೂ ಪ್ರಾರಂಭವಾಯಿತು. ಇಲ್ಲಿ ಅವರು ಸ್ಟೆಪೆಂಡ್’ ರೂ 500ಅನ್ನೂ ಪಡೆದರು. ದೀಪಿಕಾ ನವೆಂಬರ್ 2009 ರಲ್ಲಿ, ತನ್ನ ಮೊದಲ ಕ್ಯಾಡೆಟ್ ವಿಶ್ವ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಗೆದ್ದ ನಂತರವೇ ಮೂರು ವರ್ಷಗಳಲ್ಲಿ ಒಮ್ಮೆ ಮನೆಗೆ ಹಿಂತಿರುಗಿದರು.[೨][೩]

ಸಾಧನೆಗಳು[ಬದಲಾಯಿಸಿ]

 • ವಿಶ್ವದಾಖಲೆ ಸಮಗಟ್ಟಿದ ಬಳಿಕ ದೀಪಿಕಾ ಹೇಳಿದ ಮಾತು,‘ದಾಖಲೆ ನಿರ್ಮಾಣದ ಉದ್ದೇಶವೇ ಮನದಲ್ಲಿ ಇರಲಿಲ್ಲ. ನಾನು ಬರೀ ಗುರಿಯತ್ತ ಗಮನ ಕೇಂದ್ರೀಕರಿಸಿದ್ದೆ. ಉತ್ತಮ ಪ್ರದರ್ಶನ ನೀಡುವ ಉದ್ದೇಶವಷ್ಟೇ ನನ್ನದಾಗಿತ್ತು’.
 • ಏಪ್ರಿಲ್ ೨೦೧೬ ಕಳೆದ ವಾರ ಚೀನಾದ ಶಾಂಘೈನಲ್ಲಿ ನಡೆದ ವಿಶ್ವಕಪ್‌ ನಲ್ಲಿ ವಿಶ್ವದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.
 • ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದ 72 ಆಯರೊ ರ್ಯಾಂಕಿಂಗ್ ರೌಂಡ್‌ನಲ್ಲಿ ದೀಪಿಕಾ 720ರ ಪೈಕಿ 686 ಪಾಯಿಂಟ್ಸ್‌ ಗಳಿಸುವ ಮೂಲಕ ಕೊರಿಯಾದ ಕೀ ಬೊ ಬೇ ದಾಖಲೆಯನ್ನು ಸರಿಗಟ್ಟಿದರು.
 • 2015ರಲ್ಲಿ ಬೇ ಅವರು 70 ಮೀಟರ್‌ ಅಂತರ ದಿಂದ 72 ಬಾಣಗಳಲ್ಲಿ 686 ಸ್ಕೋರ್‌ ಮಾಡಿದ್ದರು. ಅದು ವಿಶ್ವದಾಖಲೆ ಆಗಿತ್ತು. ಅದಕ್ಕೂ ಮೊದಲು ದಕ್ಷಿಣ ಕೊರಿಯಾದವರೇ ಆದ ಪಾರ್ಕ್‌ ಸಂಗ್‌ಹ್ಯುನ್‌ 682 ಸ್ಕೋರ್‌ ಮಾಡಿದ್ದು ದಾಖಲೆ ಎನಿಸಿತ್ತು. ಕೊರಿಯಾದ ಇಮ್ ಡಾಂಗ್ ಹ್ಯುನ್ 72 ಆ್ಯೊರೊ ರೌಂಡ್‌ನಲ್ಲಿ 699 ಪಾಯಿಂಟ್‌ಗಳನ್ನು ಗಳಿಸಿದ್ದು ಸದ್ಯ ರಿಕರ್ವ್ ಪುರುಷರ ವೈಯಕ್ತಿಕ ವಿಭಾಗದಲ್ಲಿರುವ ವಿಶ್ವದಾಖಲೆ.
 • ದೀಪಿಕಾ ಮೊದಲ ಬಾರಿಗೆ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆಗ ವಿಶ್ವದ ಅಗ್ರ ಕ್ರಮಾಂಕದಲ್ಲಿದ್ದರು. ಅಂದು ಆ ಆತ್ಮವಿಶ್ವಾಸ ಅವರ ಬೆನ್ನಿಗಿತ್ತು. ಆದರೆ ಮೊದಲ ಸುತ್ತಿನಲ್ಲೇ ವೈಫಲ್ಯ ಕಂಡಿದ್ದರು. ಅದಾಗಿ ನಾಲ್ಕು ವರ್ಷ ಕಳೆದಿವೆ. 2012ರ ಲಂಡನ್‌ ಒಲಿಂಪಿಕ್ಸ್ ಬಳಿಕ ದೀಪಿಕಾ, ವೈಯಕ್ತಿಕ ಹಾಗೂ ತಂಡ ವಿಭಾಗ ಸೇರಿದಂತೆ ಹಲವು ಪದಕ ಗೆದ್ದಿದ್ದಾರೆ. ಇದೀಗ ವಿಶ್ವದಾಖಲೆ ಸರಿಗಟ್ಟಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
 • 42 ಪೌಂಡ್‌ಗಳ ಬಿಲ್ಲು: ವಿಶ್ವ ಏಳನೇ ಕ್ರಮಾಂಕದಲ್ಲಿರುವ ದೀಪಿಕಾ, ಫಿಟ್‌ನೆಸ್‌ ಹಾಗೂ ಸಾಮರ್ಥ್ಯ ಗಮನಾರ್ಹವಾಗಿ ವೃದ್ಧಿಸಿಕೊಂಡಿದ್ದಾರೆ. ಅವರ ಬಿಲ್ಲಿನ ತೂಕ ಕಳೆದ ನಾಲ್ಕು ವರ್ಷದಲ್ಲಿ 38 ರಿಂದ 42 ಪೌಂಡ್‌ಗೆ ಏರಿದೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಟ್ಟದ ಬಹುತೇಕ ಬಿಲ್ಲುಗಾರ್ತಿಯರು ಬಳಸುವುದು 40 ಪೌಂಡ್‌ಗಳ ಬಿಲ್ಲು. ಅಮೋಘ ನಿಯಂತ್ರಣ ಸಾಧಿಸಿದ ಕೆಲವೇ ಕೆಲವು ನಿಪುಣ ಅಥ್ಲಿಟ್‌ಗಳು ಮಾತ್ರವೇ 42 ಪೌಂಡ್‌ಗಳ ಬಿಲ್ಲು ಬಳಸುತ್ತಾರೆ. ಬಾಣದ ವೇಗ ಹೆಚ್ಚಿಸಲು, ಗಾಳಿಯನ್ನು ಸೀಳುತ್ತಾ ನಿಖರವಾಗಿ ಗುರಿ ಸೇರಲು ಇದು ಸಹಕಾರಿ.

2016 ರ ರಿಯೊ ಒಲಿಂಪಿಕ್ಸ್‍ನಲ್ಲಿ ದೀಪಿಕಾ[ಬದಲಾಯಿಸಿ]

 • ಒಲಿಂಪಿಕ್ಸ್‌ ಆರ್ಚರಿಯಲ್ಲಿ ಭಾರತ ಮೊದಲ ಬಾರಿಗೆ ಸ್ಪರ್ಧಿಸಿದ್ದು 1988ರ ಟೂರ್ನಿಯಲ್ಲಿ. ಅಂದಿನಿಂದ ಈತನಕ ಬಿಲ್ಲುಗಾರಿಕೆಯಲ್ಲಿ ಮಹಿಳಾ ತಂಡವು ಎರಡು ಸಾರಿ ಕ್ವಾರ್ಟರ್‌ ಫೈನಲ್ ತಲುಪಿದ್ದೇ ಭಾರತದ ಸಾಧನೆ. 2004ರ ಅಥೆನ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮೂಡಿ ಬಂದಿತ್ತು. ಶೂಟಿಂಗ್‌ಗಿಂತಲೂ ತುಸು ಹೆಚ್ಚು ಏಕಾಗ್ರತೆ ಬೇಡುವ ಬಿಲ್ಲುಗಾರಿಕೆಯಲ್ಲಿ ಸಾಧನೆ ಸುಲಭವಲ್ಲ. ದಕ್ಷಿಣ ಕೊರಿಯಾ ಸ್ಪರ್ಧಿಗಳ ಸವಾಲೂ ದೊಡ್ಡದಿದೆ. ಯಾವುದೇ ಟೂರ್ನಿಯಲ್ಲೂ ಲೀಲಾಜಾಲವಾಗಿ ಪದಕ ಬಾಚುವ ಕಲೆ ಅವರಿಗೆ ಕರಗತವಾಗಿದೆ. ಅವರ ಏಕಸ್ವಾಮ್ಯ ಮುರಿಯುವ ಸವಾಲು ಈಗ ದೀಪಿಕಾ ಅವರ ಎದುರಿದೆ.
 • ಕೆಂಗೇರಿಯ ಬಳಿ ಇರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ, ಬೊಂಬ್ಯಾಲ ದೇವಿ ಮತ್ತು ಲಕ್ಷ್ಮಿರಾಣಿ ಮಾಜ್ಹಿ (ತಂಡ)ರಿಯೋ ಒಲಂಪಿಕ್ಸ್‍ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. (ಚಿತ್ರ:[[೧]]

[೪]

ನೋಡಿ[ಬದಲಾಯಿಸಿ]

 1. *ದೀಪಾ ಕರ್ಮಾಕರ್
 2. *ಕರ್ನಾಟಕ ಮತ್ತು ಕ್ರೀಡೆ
 3. *17ನೇ ಏಷ್ಯನ್‌ ಕ್ರೀಡಾಕೂಟ 2014
 4. *ಮೇರಿ ಕೋಮ್
 5. *ಎಂ.ಆರ್. ಪೂವಮ್ಮ
 6. *ಜಿತು ರಾಯ್
 7. *ಭಾರತದ ಮಹಿಳಾ ಹಾಕಿ ತಂಡ
 8. *ಭಕ್ತಿ ಶರ್ಮಾ -ಈಜುಪಟು

ಆಧಾರ[ಬದಲಾಯಿಸಿ]

publisher= NDTV |date= 21 June 2012 |accessdate= 20 July 2013 Archived 20 July 2013[Date mismatch] at Archive.is

ಉಲ್ಲೇಖ[ಬದಲಾಯಿಸಿ]

 1. [೨]
 2. http://timesofindia.indiatimes.com/sports/more-sports/others/Deepika-Kumari-equals-world-record-at-Archery-World-Cup/articleshow/52011040.cms
 3. "ಆರ್ಕೈವ್ ನಕಲು". Archived from the original on 2016-04-17. Retrieved 2016-05-03.
 4. ದಿನಾಂಕ: 02/05/2016 ಪ್ರಜಾವಾಣಿ:[[೩]]