ಕರ್ನಾಟಕ ಮತ್ತು ಕ್ರೀಡೆ
Jump to navigation
Jump to search
ಪರಿವಿಡಿ
- ೧ ಶಾಟ್ಪುಟ್
- ೨ ಭಾರತದ ಅಥ್ಲೆಟಿಕ್ಸ್ ಸಾಧನೆಯ ಕರ್ನಾಟಕದ ಜ್ಯೋತಿ
- ೩ ಟೆನಿಸ್ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ
- ೪ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್
- ೫ ಕರ್ನಾಟಕ ಮತ್ತು ಕ್ರೀಡೆ-ಸಾಧನೆ-ಪ್ರಶಸ್ತಿ 2014
- ೬ ಏಷ್ಯನ್ ಗೇಮ್ಸ್ (2014)
- ೭ ರಾಷ್ಟ್ರೀಯ ವಿಕಲಚೇನರ ಕ್ರೀಡಾಕೂಟ 2014
- ೮ ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ
- ೯ ರಾಜ್ಯ ಕ್ರೀಡಾ ಸಾಧಕರಿಗೆ ೨೦೧೪ರ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ
- ೧೦ ೨೦೧೬ ರಿಲೇ-ಚಿನ್ನ
- ೧೧ ವಿಶ್ವ ಜಿಪಿ3 ಸೀರಿಸ್ ರೇಸ್
- ೧೨ ೨೦೧೬ ರಿಯೋ ಒಲಂಪಿಕ್ನಲ್ಲಿ ಕರ್ನಾಟಕ ಕ್ರೀಡಾ ಪಟುಗಳು
- ೧೩ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್
- ೧೪ ರಾಷ್ಟ್ರೀಯ ಚಾಂಪಿಯನ್‌ಷಿಪ್ ೨೦೧೭
- ೧೫ ಟೇಬಲ್ ಟೆನ್ನಿಸ್
- ೧೬ ಫೋಟೊ ಗ್ಯಾಲರಿ
- ೧೭ ನೋಡಿ
- ೧೮ ಆಧಾರ
ಶಾಟ್ಪುಟ್[ಬದಲಾಯಿಸಿ]
- 21 Nov, 2016
- ಕಳೆದ ವಾರವಷ್ಟೇ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಶಾಟ್‌ಪಟ್ ಸ್ಪರ್ಧೆಯಲ್ಲಿ ಮೇಘನಾ ಕೂಟ ದಾಖಲೆ ನಿರ್ಮಿಸಿದರು. 13.93 ಮೀಟರ್ಸ್ ದೂರ ಕಬ್ಬಿಣದ ಗುಂಡು ಎಸೆದ ಅವರು 9 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದರು. 2007ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್ ಸ್ಪರ್ಧಿಸಿದ್ದ ಪಂಜಾಬ್‌ನ ಮನ್‌ಪ್ರೀತ್ ಕೌರ್ ಅವರು 13.83 ಮೀಟರ್ ದೂರ ಗುಂಡು ಎಸೆದು ದಾಖಲೆ ಬರೆದಿದ್ದರು. ಮೈಸೂರಿನಲ್ಲಿ ನೆಲೆಸಿರುವ ಮುಂಬೈನ ಮೇಘನಾ ದೇವಾಂಗ ಭರವಸೆಯ ಅಥ್ಲೀಟ್.
- ರಾಷ್ಟ್ರಮಟ್ಟದಲ್ಲಿ ಐದು ದಾಖಲೆಗಳು ಮೇಘನಾ ಅವರ ಹೆಸರಿನಲ್ಲಿವೆ. ಶಾಲಾ ಕ್ರೀಡಾಕೂಟದಲ್ಲಿ ಎರಡು ದಾಖಲೆ ಹಾಗೂ ರಾಷ್ಟ್ರೀಯ ಜೂನಿಯರ್ ಮಟ್ಟದಲ್ಲಿ ಮೂರು ದಾಖಲೆ ನಿರ್ಮಿಸಿದ್ದಾರೆ. 16 ವರ್ಷದೊಳಗಿನವರ ವಿಭಾಗದಲ್ಲಿ 13.28 ಮೀಟರ್ ದೂರ ಗುಂಡು ಎಸೆದು ದಾಖಲೆ ಬರೆದಿದ್ದಾರೆ. 18 ವರ್ಷದೊಳಗಿನವರ ವಿಭಾಗದಲ್ಲಿ (3 ಕೆ.ಜಿ) 15.35 ಮೀಟರ್ ದೂರ ಎಸೆದ ದಾಖಲೆ ಹೊಂದಿದ್ದಾರೆ.ಮಹಾರಾಣಿ ಕಲಾ ಕಾಲೇಜಿನಲ್ಲಿ ಮೊದಲ ಬಿ.ಎ.ನಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಮಂಡ್ಯದಲ್ಲಿ ಈಚೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಅಲ್ಲೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 20 ವರ್ಷ ವಯಸ್ಸಿನ ಮೇಘನಾ ಮುಂದಿನ ವರ್ಷದಿಂದ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.[೧]
ಭಾರತದ ಅಥ್ಲೆಟಿಕ್ಸ್ ಸಾಧನೆಯ ಕರ್ನಾಟಕದ ಜ್ಯೋತಿ[ಬದಲಾಯಿಸಿ]
- 14 Nov, 2016
- ಭಾರತದ ಅಥ್ಲೆಟಿಕ್ಸ್ ಲೋಕದಲ್ಲಿ ರಾಜ್ಯದ ಎಚ್.ಎಂ.ಜ್ಯೋತಿ ಸಾಧನೆ ಗಮನಾರ್ಹ. ಈ ವರ್ಷ ನಡೆದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹಲವು ಪದಕಗಳಿಗೆ ಕೊರಳೊಡ್ಡಿರುವ ಅವರು ಎರಡು ತಿಂಗಳ ಹಿಂದೆ ಲಖನೌನಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ಅಥ್ಲೀಟ್ ಗೌರವಕ್ಕೂ ಭಾಜನರಾಗಿದ್ದಾರೆ. ಅವರನ್ನು ಜಿ. ಶಿವಕುಮಾರ ಸಂದರ್ಶಿಸಿದ್ದಾರೆ.
- ಮಿಂಚಿನ ವೇಗದ ಮೂಲಕ ಎದುರಾಳಿಗಳನ್ನು ಹಿಮ್ಮೆಟ್ಟಿಸಬಲ್ಲ ಸಾಮರ್ಥ್ಯ ಹೊಂದಿರುವ ಎಚ್.ಎಂ. ಜ್ಯೋತಿ ಭಾರತದ ಅಥ್ಲೆಟಿಕ್ಸ್ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
- 100, 200, 400 ಮೀಟರ್ಸ್ ಓಟ ಮತ್ತು 4X100 ಮೀಟರ್ಸ್ ರಿಲೇ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜ್ಯೋತಿ ಅವರ ಸಾಧನೆ ಅನನ್ಯ.
- ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್ ಚಾಂಪಿಯನ್‌ಷಿಪ್, ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಜ್ಯೋತಿ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಪದಕಗಳ ಬೇಟೆಯಾಡಿರುವ ಅವರು 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಕ್ರಮವಾಗಿ 11.30 ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 4X100 ಮೀಟರ್ಸ್ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿದ್ದಾರೆ.[೨]
ಟೆನಿಸ್ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ[ಬದಲಾಯಿಸಿ]
- ಬೆಳಗಾವಿ ಕೆಎಲ್‌ಇ ನಲ್ಲಿಸನ್ಮಾನ: ರಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಯಾಡಿದ್ದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿನಿ, ಟೆನಿಸ್ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ ಅವರನ್ನು ಸನ್ಮಾನಿಸಲಾಯಿತು. ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘2020ರಲ್ಲಿ ಟೊಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಪ್ರಾರ್ಥನಾ ಭಾಗಿಯಾಗಲಿದ್ದಾರೆ. [೩]
ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್[ಬದಲಾಯಿಸಿ]
- 7 Nov, 2016
- ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಗರಡಿಗಳಲ್ಲಿ ಪಳಗಿದ ಇಬ್ಬರು ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳದ ಸಂದೀಪ ಕಾಟೆ ಮತ್ತು ಧಾರವಾಡ ತಾಲ್ಲೂಕಿನ ರಫೀಕ್ ಹೊಳಿ ಉತ್ತರ ಕರ್ನಾಟಕದ ಕುಸ್ತಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ತಲಾ ಮೂರು ಬಾರಿ ಅಂತರರಾಷ್ಟ್ರೀಯ ಸ್ಪರ್ಧೆಗಳಿಗಾಗಿ ಭಾರತದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದ್ದ ಇವರಿಬ್ಬರ ಪೈಕಿ ರಫೀಕ್‌ಗೆ ಕಳೆದ ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಬಾಗಿಲು ತೆರೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸ್ಪರ್ಧೆಗೆ ಹೋಗಲಾಗಲಿಲ್ಲ. ಈ ಬಾರಿ ಫ್ರೀ ಸ್ಟೈಲ್ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಸಂದೀಪ ಕಾಟೆ ಮತ್ತು 71 ಕೆಜಿ ವಿಭಾಗದಲ್ಲಿ ರಫೀಕ್ ಪಾಲ್ಗೊಳ್ಳುತ್ತಿದ್ದಾರೆ.[೪]
ಕರ್ನಾಟಕ ಮತ್ತು ಕ್ರೀಡೆ-ಸಾಧನೆ-ಪ್ರಶಸ್ತಿ 2014[ಬದಲಾಯಿಸಿ]
- ರಾಜ್ಯ ಕ್ರೀಡಾ ಸಾಧಕರಿಗೆ ನೀಡುವ ಏಕಲವ್ಯ ಪ್ರಶಸ್ತಿ ಪಟ್ಟಿ ಬುಧವಾರ ಪ್ರಕಟವಾಗಿದೆ. ಪ್ರಮುಖ 15 ಕ್ರೀಡಾಪಟುಗಳಿಗೆ ಗುರುವಾರ:( 06 Nov 2014) ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ 2013ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಹಾಗೂ ಕ್ರೀಡಾರತ್ನ ಪ್ರಶಸ್ತಿ ನೀಡಲಾಗುವುದು. (ಯವನಿಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕ್ರೀಡಾ ಸಚಿವ ಅಭಯ್‌ಚಂದ್ರ ಜೈನ್ ತಿಳಿಸಿದರು.)2:3
- ಕಳೆದ 5 ವರ್ಷಗಳಿಂದ ಕ್ರೀಡೆಗಳಲ್ಲಿ ಮಾಡಿದ ಗಮಾನಾರ್ಹ ಸಾಧನೆಯ ಆಧಾರದ ಮೇಲೆ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯೊಂದಿಗೆ ರು. 2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
- ಜೀವಮಾನ ಸಾಧನೆ ಪ್ರಶಸ್ತಿ
- ಕ್ರೀಡಾ ಕ್ಷೇತ್ರಕ್ಕೆ ತಮ್ಮ ಸೇವೆ ಸಲ್ಲಿಸುವ ಮೂಲಕ ಯುವ ಪ್ರತಿಭೆಗಳು ಹೊರಹೊಮ್ಮಲು ನೆರವಾದ ಕರ್ನಾಟಕದ ನಾಲ್ವರು ತರಬೇತುದಾರರಿಗೆ ಜೀಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ಇವರು ಪ್ರಶಸ್ತಿಯೊಂದಿಗೆ ತಲಾ ರು. 1.5 ಲಕ್ಷ ನಗದು ಬಹುಮಾನ ಸ್ವೀಕರಿಸಲಿದ್ದಾರೆ.
- ಹೆಸರು - ಕ್ರೀಡೆ
- ಗಣಪತಿ ಮನೋಹರನ್-ಬಾಕ್ಸಿಂಗ್
- ಸುಮಿತ್ರ ಕುಮಾರ್ ಎಂ- ಬಾಡಿ ಬಿಲ್ಡಿಂಗ್
- ಮಣಿ- ಕಬಡ್ಡಿ
- ಮೊಹ್ಮದ್ ದಾದಾ ಪೀರ್- ಫುಟ್ಬಾಲ್
- ಏಕಲವ್ಯ ಪ್ರಶಸ್ತಿ ವಿಜೇತರು
- ಅರ್ಶದ್ ಎಂ- ಅಥ್ಲೆಟಿಕ್ಸ್
- ಡಿ. ಗುರುಪ್ರಸಾದ್- ಬ್ಯಾಡ್ಮಿಂಟನ್
- ನವನೀತ ಪಿ.ಯು- ಬಾಸ್ಕೆಟ್‌ಬಾಲ್
- ಶೋಧನ್ ಕುಮಾರ್ ರೈ- ಬಾಡಿ ಬಿಲ್ಡಿಂಗ್
- ಯಶಸ್ ಡಿ.-ಚೆಸ್
- ಲೋಕೇಶ್ ಎನ್.- ಸೈಕ್ಲಿಂಗ್
- ವಿಶಾಲ್ ಕುಮಾರ್ ಆರ್. ಫುಟ್ಬಾಲ್
- ಸೋಮಣ್ಣ ಕೆ.ಎಂ- ಹಾಕಿ
- ನಿಕ್ಷೇಪ ಬಿ.ಆರ್ - ಹಾಕಿ
- ಆನಂದ್‌ಕುಮಾರ್ ಬಿ. - ಬ್ಯಾಡ್ಮಿಂಟನ್
- ಅಕ್ಷತಾ ಪೂಜಾರ್ತಿ- ಪವರ್‌ಲಿಫ್ಟಿಂಗ್
- ಪ್ರಕಾಶ ಪಿ.ಎನ್- ರೈಫಲ್ ಶೂಟಿಂಗ್
- ಅಶ್ವಿನಿ ಮೆನೆನ್-ಈಜು
- ಸನೋಜ್ ವಿ.ಆರ್-ವಾಲಿಬಾಲ್
- ಪ್ರೇಮ ಹುಚ್ಚಣ್ಣನವರ್ - ಕುಸ್ತಿ
- 10 ಕ್ರೀಡಾಪಟುಗಳಿಗೆ ಕ್ರೀಡಾ ರತ್ನ
- ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಗ್ರಾಮೀಣ ಕ್ರೀಡೆ ಮತ್ತು ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 10 ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗಿದೆ. ಇವರಿಗೆ ಪ್ರಶಸ್ತಿಯೊಂದಿಗೆ ರು. 1 ಲಕ್ಷ ಬಹುಮಾನ ನೀಡಿ ಗೌರವಿಸಲಾಗುತ್ತದೆ.
- ಹೆಸರು - ಕ್ರೀಡೆ
- ಸಂತೋಷ್ ನಾಯಕ್- ಅಟ್ಯಾಪಾಟ್ಯಾ
- ಶೃತಿ ಎ.ಆರ್ - ಬಾಲ್ ಬ್ಯಾಡ್ಮಿಂಟನ್
- ಕುಮಾರ್ ಎಸ್. ಜಗದೇವ್- ಗುಂಡು ಎತ್ತುವುದು
- ವಿನಯ್ ಕುಮಾರ್ ಕೆ. ಎಚ್- ಖೋಖೋ
- ಮಾರುತಿ ವೈ. ಬಾರಕೇರ್- ಮಲ್ಲಕಂಬ
- ಐಶ್ವರ್ಯ ಎಂ. ದಳವಿ- ಜಂಗಿ ಕುಸ್ತಿ
- ಮೊಹ್ಮದ್ ಅಬಿಬ್- ಥ್ರೋಬಾಲ್
- ಪಲಿಮಾರ್ ದೇವೇಂದ್ರ ಕೋಟ್ಯಾನ್ ವಿಶಿಷ್ಠ ಕ್ರೀಡೆಗಳು(ಕಂಬಳ)
- ಗೋಪಾಲ ಕಾರ್ವಿ- ವಿಶಿಷ್ಠ ಕ್ರೀಡೆಗಳು(ವಿಶಿಷ್ಟ ಈಜು)
- ನಾಗಾನಂದ ಸ್ವಾಮಿ ಎಸ್.ಸಿ- ವಿಶಿಷ್ಟ ಕ್ರೀಡೆಗಳು(ಜಲಸ್ಥಂಭನ)
ಏಷ್ಯನ್ ಗೇಮ್ಸ್ (2014)[ಬದಲಾಯಿಸಿ]
- ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಇಂದೇ ಸನ್ಮಾನ
- ಏಷ್ಯನ್ ಗೇಮ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ ಗುರುವಾರವೇ ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಕ್ರೀಡಾ ಸಚಿವರು ತಿಳಿಸಿದರು. ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಮಮತಾ ಪೂಜಾರಿ ಮತ್ತು ತೇಜಸ್ವಿನಿ ಬಾಯಿ ಹಾಗೂ ಜೋತ್ಸ್ನಾ ಚಿನ್ನಪ್ಪ ಅವರು ಕ್ರಮವಾಗಿ ಹೈದರಾಬಾದ್ ಮತ್ತು ಚೆನ್ನೈ ಪ್ರತಿನಿಧಿಸಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಗುತ್ತಿಲ್ಲ. (ಅವರಿಗೆ ಬಹುಮಾನ ನೀಡುವ ಕುರಿತು ಮುಖ್ಯಮಂತ್ರಿಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸಲಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.)
- ಶರಶ್‌ಗೆ 55 ಲಕ್ಷ ರೂ. ಬಹುಮಾನ
- ಇಂಚಿಯಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದು ಪಿ.ಟಿ. ಉಷಾ ದಾಖಲೆ ಮುರಿದ ಐತಿಹಾಸಿಕ ದಾಖಲೆ ನಿರ್ಮಿಸಿದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು ಶರತ್ ಗಾಯಕ್ವಾಡ್ (ಒಟ್ಟು 55 ಲಕ್ಷ ರೂ.)ಅತಿ ಹೆಚ್ಚು ಬಹುಮಾನಗಳಿಸಿದರೆ, ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ಮತ್ತು ಕಂಚಿನ ಪದಕ ಗೆದ್ದ ಎ.ಆರ್.ಪೂವಮ್ಮ (33ಲಕ್ಷ ರೂ. ) ಎರಡನೇ ಅತಿ ಹೆಚ್ಚು ಬಹುಮಾನ ಪಡೆಯಲಿದ್ದಾರೆ. ರಾಜ್ಯ ಸರ್ಕಾರ ಈ ಬಾರಿ ಒಟ್ಟು 2 ಕೋಟಿ 93 ಲಕ್ಷ ರೂ. ನಗದು ನೀಡುತ್ತಿದೆ.
- ಏಷ್ಯನ್ ಗೇಮ್ಸ್ ಪದಕ ವಿಜೇತರು
- ವಿ.ಆರ್.ರಘುನಾಥ್,
- ನಿಕಿನ್ ತಿಮ್ಮಯ್ಯ,
- ಎಸ್.ವಿ.ಸುನಿಲ್(ಹಾಕಿ-25 ಲಕ್ಷ ರೂ.),
- ಎ.ಆರ್.ಪೂವಮ್ಮ (ಅಥ್ಲೆಟಿಕ್ಸ್-33 ಲಕ್ಷ ರೂ.),
- ವಿಕಾಸ್ ಗೌಡ (ಅಥ್ಲೆಟಿಕ್ಸ್-25 ಲಕ್ಷ ರೂ.)ರಾಜ್‌ಗುರ್,
- ಸುಷ್ಮಿತಾ ಪವಾರ್, ಜಯಂತಿ (ಕಬಡ್ಡಿ-25ಲಕ್ಷ ರೂ.),
- ಪ್ರಕಾಶ್ ನಂಜಪ್ಪ (ಶೂಟಿಂಗ್-8 ಲಕ್ಷ ರೂ.),
- ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂಟನ್-8ಲಕ್ಷ ರೂ.)
- ಪ್ಯಾರಾ ಏಷ್ಯನ್ ಗೇಮ್ಸ್
- ಫರ್ಮನ್ ಬಾಷಾ (ಪವರ್ ಲಿಫ್ಟಿಂಗ್-8ಲಕ್ಷ ರೂ.),
- ಶರತ್ ಗಾಯಕ್ವಾಡ್ (ಈಜು-55 ಲಕ್ಷ ರೂ.),
- ಎಚ್.ಎನ್ ಗಿರೀಶ್(ಹೈಜಂಪ್-8 ಲಕ್ಷ ರೂ.),
- ಎಂ.ನಿರಂಜನ್ (ಈಜು-8ಲಕ್ಷ ರೂ.) ಮತ್ತು
- ಮೊಹಮ್ಮದಾಲಿ ಶವಾದ್ (ಅಥ್ಲೆಟಿಕ್ಸ್-8ಲಕ್ಷ ರೂ.)
:2014-ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದಲ್ಲಿದ್ದ ಕರ್ನಾಟಕದ ತೇಜಸ್ವಿನಿಬಾಯಿ ಮತ್ತು ಮಮತಾ ಪೂಜಾರಿ ಅವರಿಗೆ ಸರ್ಕಾರ ಬಹು ಮಾನದ ಮೊತ್ತ ನೀಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.
[[೧]] |
ರಾಷ್ಟ್ರೀಯ ವಿಕಲಚೇನರ ಕ್ರೀಡಾಕೂಟ 2014[ಬದಲಾಯಿಸಿ]
- ಕರ್ನಾಟಕದ ವಿಕಲಚೇತನ ಕ್ರೀಡಾಪಟುಗಳು ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಕಲಚೇನರ ಕ್ರೀಡಾಕೂಟದಲ್ಲಿ 9 ಚಿನ್ನ, 10 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ ಒಟ್ಟು 21 ಪದಕ ಗೆದ್ದ ಸಾಧನೆ ಮಾಡಿದ್ದಾರೆ.
- ಒರಿಶಾ ರಾಜಧಾನಿ ಭುವನೇಶ್ವರದ ಕಾಳಿಂಗ ಮೈದಾನದಲ್ಲಿ ಕಳೆದ ನ.1ರಿಂದ 5ರವಗೆ ನಡೆದ ಕೂಟದ ವಿವಿಧ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶೇಷ ಒಲಿಂಪಿಕ್ ಭಾರತ್ ಸಂಸ್ಥೆ ಅಡಿಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 26 ಕ್ರೀಡಾಪಟುಗಳು ಈ ಸಾಧನೆ ತೋರಿದ್ದಾರೆ. ಬಂಗಾರ ಗೆದ್ದ ಕ್ರೀಡಾಪಟುಗಳು ಮುಂಬರುವ ವಿಕಲಚೇತನರ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆಗಳಿಸಿದ್ದಾರೆ.4
- ಚಿನ್ನ ಗೆದ್ದವರು
- ತೇಜಸ್ವಿ-ಬ್ಯಾಡ್ಮಿಂಟನ್ ಸಿಂಗಲ್ಸ್,
- ಬಿ.ಶ್ರೀಧರ್-ಟೇಬಲ್ ಟೆನಿಸ್ ಸಿಂಗಲ್ಸ್,
- ನಾಗೇಶ್-ಶಾಟ್‌ಪುಟ್,ಸಿದ್ದಗಂಗಮ್ಮ-ಶಾಟ್‌ಪುಟ್,
- ಜೆ.ಆರ್.ಸುಪ್ರಿತಾ-ಡೆಫೊ,
- ಪ್ರೇಮ್‌ಸಾಗರ್-ಡೆಫೊ,
- ತಬಣ್ಣ-50ಮೀ. ಬ್ಯಾಕ್‌ಸ್ಟ್ರೋಕ್,
- ವಿಜಯ್ 50ಮೀ. ಫ್ರೀಸ್ಟೈಲ್.
ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ[ಬದಲಾಯಿಸಿ]
- ಅಂಗವೈಕಲ್ಯವಿದ್ದರೂ ಅಸಾಧಾರಣ ಸಾಧನೆ ತೋರಿದ ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ 2014ನೇ ಸಾಲಿನ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪಡೆದಿದ್ದಾರೆ.
- ಮಕ್ಕಳ ದಿನಾಚರಣೆ ಅಂಗವಾಗಿ ನವದೆಹಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಾ.ಆಂಜಿನಯ್ಯ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಯು 10,000 ನಗದು ಹಾಗೂ ಬೆಳ್ಳಿ ಪದಕವನ್ನೊಳಗೊಂಡಿದೆ.
- ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್‌ಗೆ ಸೇರಿದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮಾ.ಆಂಜಿನಯ್ಯ (12) ಅವರು ಕೈ, ಕಾಲು ಸಹಜವಾಗಿ ಬೆಳೆದಿಲ್ಲ, ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರ ಮೂಲದವರಾದ ಇವರು ಬಡವ ಕುಟುಂಬಕ್ಕೆ ಸೇರಿದ್ದಾರೆ.
- ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ತಾಯಿ, ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೈ ಇಲ್ಲದ ಆಂಜಿನಯ್ಯ ಕಾಲಿನಿಂದಲೇ ಬರೆಯುತ್ತಾರೆ. ಚಿತ್ರವನ್ನು ಬಿಡುತ್ತಾರೆ.
- ಈತನ ಚಿತ್ರಗಳು ವೃತ್ತಿಪರ ಕಲಾವಿದರಷ್ಟೇ ಉತ್ತಮವಾಗಿದೆ ಎಂಬ ಖ್ಯಾತಿಗೆ ಒಳಗಾಗಿದ್ದು, ರಾಜ್ಯಮಟ್ಟದ ಹಲವು ಸ್ಪರ್ಧೆಗಳಲ್ಲಿಯೂ ಬಹುಮಾನಗಳು ಬಂದಿವೆ.
- ಸಮರ್ಥನಂ ಸಂಸ್ಥೆ:
ಇದೇ ವೇಳೆ ಸಮರ್ಥನಂ ಸಂಸ್ಥೆ ಎರಡನೇ ಬಾರಿಗೆ 'ಇನ್ಸ್‌ಟಿಟ್ಯೂಷನ್ಸ್' ವಿಭಾಗದಲ್ಲಿ 'ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ' ಪಡೆದಿದೆ. ಸಂಸ್ಥೆಯ ಸಂಸ್ಥಾಪಕ ಜಿ.ಕೆ.ಮಹಾಂತೇಶ್ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. 3 ಲಕ್ಷ ನಗದು ಹಾಗೂ ಪದಕವನ್ನು ಈ ಪ್ರಶಸ್ತಿ ಒಳಗೊಂಡಿದೆ.
ರಾಜ್ಯ ಕ್ರೀಡಾ ಸಾಧಕರಿಗೆ ೨೦೧೪ರ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ[ಬದಲಾಯಿಸಿ]
- ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುವ 2014ನೇ ಸಾಲಿನ ಪ್ರತಿಷ್ಠಿತ ಏಕಲವ್ಯ, ; ಕರ್ನಾಟಕ ಕ್ರೀಡಾ ರತ್ನ ಮತ್ತು ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದಿಂದ ನೀಡುತ್ತಿರುವ ಸಹಾಯಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದರು.ಮೈಸೂರಿನಲ್ಲಿ ಮೇ 11, 2016ರಂದು,ನಡೆದ ಸಮಾರಂಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 15 ಮಂದಿಗೆ ಏಕಲವ್ಯ ಪ್ರಶಸ್ತಿ, 10 ಮಂದಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ನಾಲ್ವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಯಿತು. ಇದಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾ ಕೂಟಗಳಲ್ಲಿ ಭಾಗವಹಿಸುತ್ತಿರುವ 41 ಕ್ರೀಡಾಪಟುಗಳಿಗೆ ಸರಕಾರದಿಂದ ಆರ್ಥಿಕ ಸಹಾಯಧನ ವಿತರಿಸಲಾಯಿತು.
- ಏಕಲವ್ಯ ಪ್ರಶಸ್ತಿ ಪುರಸ್ಕೃತರು
- ಎಂ. ಅರವಿಂದ್ (ಈಜು), ಆಕಾಶ್ ಆರಾಧ್ಯ (ರೋಲರ್ ಸ್ಕೇಟಿಂಗ್), ಡಾ| ಖ್ಯಾತಿ ವಖಾರಿಯಾ (ಆ್ಯತ್ಲೆಟಿಕ್ಸ್), ವಿನೀತ್ ಮ್ಯಾನ್ಯುಯೆಲ್ (ಬ್ಯಾಡ್ಮಿಂಟನ್), ಕೆ. ಟ್ವಿಶಾ (ವಾಟರ್ ನ್ಪೋರ್ಟ್ಸ್), ಉತ್ತಪ್ಪ ಸುನ್ನುಮಂಡ ಕುಶಾಲಪ್ಪ (ಹಾಕಿ), ಲಕ್ಷ್ಮಣ್ ಸಿ. ಕುರಣಿ (ಸೈಕ್ಲಿಂಗ್), ಸುಷ್ಮಿತಾ ಪವಾರ್ (ಕಬಡ್ಡಿ), ಮಲಪ್ರಭ ವೈ. ಜಾದವ್ (ಜೂಡೋ), ಕೆ. ಪುರುಷೋತ್ತಮ್ (ಶೂಟಿಂಗ್), ಎನ್. ಲೋಕೇಶ್ (ಜಿಮ್ನಾಸ್ಟಿಕ್ಸ್), ಅರ್ಚನಾ ಗಿರೀಶ್ ಕಾಮತ್ (ಟೇಬಲ್ ಟೆನಿಸ್), ನಿತ್ಯಾ ಜೋಸೆಫ್ (ವಾಲಿಬಾಲ್), ಶರ್ಮದಾ ಬಾಲು (ಲಾನ್ ಟೆನಿಸ್) ಹಾಗೂ ಎಂ. ನಿರಂಜನ್ (ಸ್ವಿಮ್ಮಿಂಗ್) ಅವರಿಗೆ 2 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು.
- ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ
- ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಇನ್ನಿತರ ದೇಸಿ ಕ್ರೀಡೆಗಳಲ್ಲಿ ತೋರ್ಪಡಿಸಿದ ಉತ್ತಮ ಸಾಧನೆಗಾಗಿ 10 ಮಂದಿಗೆ 2014ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿತರಿಸಲಾಯಿತು. ವಿನೋದ್ ರಾಥೋಡ್ (ಆಟ್ಯ-ಪಾಟ್ಯ), ಕಾರ್ತಿಕ್ ಜಿ. ಕಾಟಿ (ಕುಸ್ತಿ), ಯೋಗೇಶ್ (ಖೋ-ಖೋ), ಇಬ್ರಾಹಿಂ ಸಾಬ್ ಮುಕುºಲ್‌ಸಾಬ್ ಅರಬ್ (ಗುಂಡು ಎತ್ತುವುದು), ಎಂ.ಆರ್. ಕಾವ್ಯಾ (ಬಾಲ್ ಬ್ಯಾಡ್ಮಿಂಟನ್), ದುಂಡಪ್ಪ ದಾಸನ್ನನವರ (ಮಲ್ಲಕಂಬ), ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ (ಕಂಬಳ), ಎಚ್.ಎಸ್. ಅನಿಲ್ ಕುಮಾರ್ (ಯೋಗ), ಬಿ.ಕೆ. ರೂಪಶ್ರೀ (ಕಬಡ್ಡಿ), ನಕ್ರೆ ಜಯಕರ ಮಡಿವಾಳ (ಕಂಬಳ) ಅವರಿಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಕರ್ನಾಟಕ ಕ್ರೀಡಾರತ್ನ ಪಶಸ್ತಿ ನೀಡಿ ಗೌರವಿಸಲಾಯಿತು.
- ಜೀವಮಾನ ಶ್ರೇಷ್ಠ ಪ್ರಶಸ್ತಿ
- ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಎಚ್. ಚಂದ್ರಶೇಖರ್ (ಫುಟ್ಬಾಲ್), ಜಿ.ಆರ್. ಶ್ರೀಧರ್ ಕುಮಾರ್ (ಕಬಡ್ಡಿ), ಐ. ಅಮಲದಾಸ್ (ಬಾಕ್ಸಿಂಗ್) ಹಾಗೂ ಡಾ| ಪ್ರಭಾಕರ್ ದೇವನಗಾವಿ (ಹಾಕಿ) ಅವರಿಗೆ 1.5 ಲಕ್ಷ ರೂ. ನಗದು ಒಳಗೊಂಡ 2014ನೇ ಸಾಲಿನ ಜೀವಮಾನ ಶ್ರೇಷ್ಠ ಪ್ರಶಸ್ತಿನೀಡಲಾಯಿತು.
- ಸಹಾಯಧನ ವಿತರಣೆ
- ಮುಂದಿನ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ರೋಹನ್ ಬೋಪಣ್ಣ (ಟೆನಿಸ್), ಎಂ.ಆರ್. ಪೂವಮ್ಮ (ಆ್ಯತ್ಲೆಟಿಕ್ಸ್) ಹಾಗೂ ಹಾಕಿ ಆಟಗಾರರಾದ ನಿಕ್ಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ವಿ.ಆರ್. ತಿಮ್ಮಯ್ಯ, ವಿ.ಆರ್. ರಘುನಂದನ್ ಸೇರಿದಂತೆ ಒಟ್ಟು 41 ಮಂದಿಗೆ 2015-16ನೇ ಸಾಲಿನ ಕ್ರೀಡಾ ಶ್ರೇಷ್ಠತಾ ಯೋಜನೆಯಡಿ ಸಹಾಯಧನ ನೀಡಲಾಯಿತು.
೨೦೧೬ ರಿಲೇ-ಚಿನ್ನ[ಬದಲಾಯಿಸಿ]
- ಸ್ಲೋವಾಕಿಯಾದ ಸಮೊರಿನ್‌ನಲ್ಲಿ ನಡೆದ ಪಿಟಿಎಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದು, ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಹತ್ತಿರ ಇದ್ದಾರೆ.
- 06/06/2016:ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಜಾವ್ನಾ ಮುರುಮ್, ಅನಿಲ್ದಾ ಥಾಮಸ್, ಕರ್ನಾಟಕದ ಎಂ.ಆರ್. ಪೂವಮ್ಮ ಮತ್ತು ಅಶ್ವಿನಿ ಅಕ್ಕುಂಜಿ ಅವರನ್ನು ಒಳಗೊಂಡ 4X400 ರಿಲೇ ತಂಡ ಮೂರು ನಿಮಿಷ 31.39 ಸೆಕೆಂಡುಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿತು. ಒಲಿಂಪಿಕ್ಸ್‌ನ ರಿಲೇ ಸ್ಪರ್ಧೆಯಲ್ಲಿ 16 ದೇಶಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಭಾರತ ರಿಲೇ ತಂಡ ಈ ಟೂರ್ನಿಯಲ್ಲಿ ಚಿನ್ನ ಜಯಿಸಿರುವ ಕಾರಣ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದ ಲ್ಲಿದೆ. ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ನಿಯಮಾವಳಿ ಪ್ರಕಾರ ಜುಲೈ 11ರ ವರೆಗೆ ರ‍್ಯಾಂಕಿಂಗ್‌ನಲ್ಲಿ 16ರ ಒಳಗೆ ಸ್ಥಾನವನ್ನು ಉಳಿಸಿ ಕೊಂಡರೆ ರಿಲೇ ತಂಡಕ್ಕೆ ಒಲಿಂಪಿಕ್ಸ್ ಅರ್ಹತೆ ಖಚಿತವಾಗುತ್ತದೆ.ಭಾರತ ತಂಡದ ಮೂರನೇ ವೇಗದ ಉತ್ತಮ ಸಮಯ ಇದಾಗಿದೆ. 2015ರ ಆಗಸ್ಟ್‌ನಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಐಎಎಎಫ್ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ನಿಮಿಷ 29.08 ಸೆಕೆಂಡುಗಳಲ್ಲಿ ತಂಡ ಗುರಿ ಮುಟ್ಟಿತ್ತು.
- ಹೋದ ವರ್ಷ ಐಎಎಎಫ್ ವಿಶ್ವ ರಿಲೇ ಚಾಂಪಿಯನ್‌ಷಿಪ್ ನಡೆದಿತ್ತು. ಆಗ ಮೊದಲ ಎಂಟು ಸ್ಥಾನ ಪಡೆದ ರಾಷ್ಟ್ರಗಳು ನೇರವಾಗಿ ಒಲಿಂಪಿ ಕ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. ಮುಂದಿನ ಟೂರ್ನಿ ಜೂನ್ 11ರಿಂದ ಎರಡು ದಿನ ಟರ್ಕಿಯಲ್ಲಿ ಜರುಗಲಿದೆ. [೬]
- ಎಂ.ಆರ್.ಪೂವಮ್ಮ:ಫೋಟೊ:[[೨]]
- ಅಶ್ವಿನಿ ಅಕ್ಕುಂಜಿ :ಫೋಟೊ:[[೩]]
ವಿಶ್ವ ಜಿಪಿ3 ಸೀರಿಸ್ ರೇಸ್[ಬದಲಾಯಿಸಿ]
- 26/ 07/2016 :Arjun Maini
- ಕರ್ನಾಟಕದ ಭರವಸೆಯ ಮೋಟಾರು ಸಾಹಸಿ ಅರ್ಜುನ್ ಮೈನಿ ಅವರು ಇಲ್ಲಿ ನಡೆದ ಜಿಪಿ3 ಸೀರಿಸ್ ರೇಸ್‌ನಲ್ಲಿ ಒಟ್ಟಾರೆ ಎರಡನೇ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಅರ್ಜುನ್ ಈ ಸಾಧನೆ ಮಾಡಿದ ಭಾರತದ ಮೊದಲ ಚಾಲಕ ಎಂಬ ಗೌರವ ಪಡೆದಿದ್ದಾರೆ. ಎರಡನೇ ಲ್ಯಾಪ್‌ನಲ್ಲಿ ಅರ್ಜುನ್ ಮತ್ತು ಅಲೆಕ್ಸಾಂಡರ್ ಅಲ್ಬನ್ ಅವರ ನಡುವೆ ತುರುಸಿನ ಪೈಪೋಟಿ ಏರ್ಪ ಟ್ಟಿತ್ತು. ಇದರ ನಡುವೆಯೂ ಮಿಂಚಿನ ಸಾಮರ್ಥ್ಯ ತೋರಿದ ಅರ್ಜುನ್ ‘ಪೋಲ್ ಪೊಷಿಸನ್’ ನೊಂದಿಗೆ ಸ್ಪರ್ಧೆ ಕೊನೆಗೊಳಿಸಿ ಸಂಭ್ರಮಿಸಿದರು.[೭]
೨೦೧೬ ರಿಯೋ ಒಲಂಪಿಕ್ನಲ್ಲಿ ಕರ್ನಾಟಕ ಕ್ರೀಡಾ ಪಟುಗಳು[ಬದಲಾಯಿಸಿ]
- 1 ಎಂ.ಆರ್.ಪೂವಮ್ಮ(4x400ರಿಲೇ)
- 2 ರೋಹನ್ ಬೋಪಣ್ಣ(ಟೆನಿಸ್)
- 3 ವಿಕಾಸ್ ಗೌಡ (ಡಿಸ್ಕಸ್ ಥ್ರೋ)
- 4 ಅಶ್ವಿನಿ ಪೊನ್ನಪ್ಪ(ಬ್ಯಾಡ್ಮಿಂಟನ್)
- 5 ಪಿ.ಎನ್.ಪ್ರಕಾಶ್ (ಶೂಟಿಂಗ್)
- 6 ಅದಿತಿ ಅಶೋಕ್ (ಗಾಲ್ಫ್)
- 7 ಅನಿರ್ಬನ್ ಲಾಹಿರಿ (ಗಾಲ್ಫ್)
- 8 ಅಶ್ವಿನಿ ಅಕ್ಕುಂಜಿ (4x400 ರಿಲೇ)
- 9 ಎಸ್.ಕೆ.ಉತ್ತಪ್ಪ(ಹಾಕಿ)
- 10 ಎಸ್.ವಿ.ಸುನಿಲ್(ಹಾಕಿ)
- 11 ನಿಕಿನ್ ತಿಮ್ಮಯ್ಯ(ಹಾಕಿ)
- 12 ವಿ.ಆರ್.ರಘುನಾಥ್ (ಹಾಕಿ)
- ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ[೮]
ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್[ಬದಲಾಯಿಸಿ]
- 7 Nov, 2016
- ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಬಾಗಲಕೋಟೆ ಜಿಲ್ಲೆ ಮುಧೋಳದ ಸಂದೀಪ ಕಾಟೆ ಮತ್ತು ಧಾರವಾಡ ತಾಲ್ಲೂಕು ಶಿಂಗನಹಳ್ಳಿಯ ರಫೀಕ್ ಹೊಳಿ ಉತ್ತರ ಕರ್ನಾಟಕದ ಗರಡಿಗಳಲ್ಲೇ ಪಟ್ಟುಗಳನ್ನು ಹಾಕಿ ಬೆಳೆದವರು.ಇವರಿಬ್ಬರ ಪೈಕಿ ರಫೀಕ್‌ಗೆ ಕಳೆದ ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಬಾಗಿಲು ತೆರೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸ್ಪರ್ಧೆಗೆ ಹೋಗಲಾಗಲಿಲ್ಲ. ಈ ಬಾರಿ ಫ್ರೀ ಸ್ಟೈಲ್ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಸಂದೀಪ ಕಾಟೆ ಮತ್ತು 71 ಕೆಜಿ ವಿಭಾಗದಲ್ಲಿ ರಫೀಕ್ ಪಾಲ್ಗೊಳ್ಳುತ್ತಿದ್ದಾರೆ.
- ಕರ್ನಾಠಕದಿಂದ 1974ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ಬೆಳಗಾವಿ ಜಿಲ್ಲೆ ಮೋದಗಿಯ ಶಿವಾಜಿ ಶಿಂಗಳೆ, 1973ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವ ಸೈನಿಕರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಜಿಲ್ಲೆ ಯಳ್ಳೂರಿನ ಯಲ್ಲಪ್ಪ ಪೋಟೆ, ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಹೆಸರು ಮಾಡಿದ್ದ ಜಮಖಂಡಿಯ ರತನ್ ಕುಮಾರ್ ಮಠಪತಿ, ಬೆಳಗಾವಿಯ ವಿನಾಯಕ ದಳವಿ, ಅಂತರರಾಷ್ಟ್ರೀಯ ಮುಕ್ತ ಕುಸ್ತಿಯಲ್ಲಿ ಪಾಲ್ಗೊಂಡ ಮಹೇಶ ದುಕ್ರೆ ಮುಂತಾದವರ ಸಾಲಿಗೆ ಈಗ ಈ ಇಬ್ಬರು ಗಮನ ಸೆಳೆದಿದ್ದಾರೆ.
- ಜೆ.ಎಸ್.ಎಸ್ ಕಾಲೇಜಿನಲ್ಲಿ ಜಿನ್ನಪ್ಪ ಅವರ ಜೊತೆಗೂಡಿದರು; ಕುಸ್ತಿ ಸಂಸ್ಕಾರ ಹೆಚ್ಚಿತು. ನಂತರ ಮುಂಬೈನ ಸಾಯ್ ಕೇಂದ್ರಕ್ಕೆ ತೆರಳಿದರು. ಕಳೆದ ಬಾರಿ ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗ ಗಳಿಸಿದ ನಂತರವೂ ಕುಸ್ತಿಯ ಕಠಿಣ ಅಭ್ಯಾಸ ಮುಂದುವರಿಯಿತು. ಇದರ ಪರಿಣಾಮ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಾಗಿ ದೊರಕಿದೆ. ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಕಾಟೆ ಒಟ್ಟು ಐದು ರಾಷ್ಟ್ರೀಯ ಪದಕಗಳನ್ನು ಹೊಂದಿದ್ದಾರೆ. ಜಮಖಂಡಿಯಲ್ಲಿ ‘ಹಿಂದ್ ಕೇಸರಿ’ಯಾಗಿಯೂ ಹೆಸರು ಮಾಡಿದ್ದಾರೆ. ಮೈಸೂರು ದಸರಾ ಸೇರಿದಂತೆ ವಿವಿಧ ಚಾಂಪಿಯನ್‌ಷಿಪ್‌ನಲ್ಲಿ ‘ಕೇಸರಿ’ಯಾಗಿ ಕಾದಾಡಿದ್ದಾರೆ.ಕಾಮನ್‌ವೆಲ್ತ್‌ನಲ್ಲಿ ಕನ್ನಡಿಗರ ಸವಾಲು;ವಿಕ್ರಂ ಕಾಂತಿಕೆರೆ;7 Nov, 2016
ರಾಷ್ಟ್ರೀಯ ಚಾಂಪಿಯನ್‌ಷಿಪ್ ೨೦೧೭[ಬದಲಾಯಿಸಿ]
- ರಾಜ್ಯ ಅಥ್ಲೆಟಿಕ್ಸ್ ತಂಡ:2017 ಜುಲೈ 15ರಿಂದ 18 ರವರೆಗೆ ಆಂಧ್ರ ಪ್ರದೇಶದ ಗುಂಟೂರಿ ನಲ್ಲಿ ನಡೆಯುವ 57ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಆಯ್ಕೆ ಮಾಡಿದೆ,
- ತಂಡಗಳು:
- ಪುರುಷರು: ಎಂ.ಜಿ. ರಾಧೇಶ್, ಜಿ.ಎನ್. ಬೋಪಣ್ಣ, ಕೆ.ಎಂ. ಅಯ್ಯಪ್ಪ, ಮನೀಷ್, ಎಂ.ಜೆ. ಅಶ್ವಿನ್, ಎಸ್. ಗಣೇಶ್, ಅಲೆಕ್ಸ್ ಅಂಥೋಣಿ, ಕೆ.ಜೀವನ್, ವಿಶ್ವಾಂಬರ, ನಿತಿನ್ ಚಂದ್ರ, ಮಿಜೊಚಾಕೊ ಕುರಿಯನ್, ಎಂ. ಪರಸಪ್ಪ, ಎಂ.ಡಿ. ಅಮರನಾಥ್, ಪಾಲ್ ಜೋಸೆಫ್, ಜಗದೀಶ್ ಚಂದ್ರ, ಸಿ.ಪಿ. ನಾಗಭೂಷಣ್, ಎಸ್.ಇ. ಸಂಷೀರ್, ಸಿದ್ದಾಂತ್ ನಾಯಕ್, ಎಸ್. ಲೋಕೇಶ್, ಯು. ಕಾರ್ತಿಕ್, ಬಿ. ಚೇತನ್, ಮಂಜು, ಮಂಜಿತ್, ಅಮಿತ್ ಗಿಲ್ ಮತ್ತು ಬಾಲಕೃಷ್ಣ.
- ಮಹಿಳೆಯರು: ಎಚ್.ಎಂ. ಜ್ಯೋತಿ, ರೀನಾ ಜಾರ್ಜ್, ಪ್ರಜ್ಞಾ ಎಸ್. ಪ್ರಕಾಶ್, ಪಿ.ಜೆ. ಸ್ನೇಹಾ, ಎಸ್.ಎಸ್. ಸ್ನೇಹಾ, ಅಪ್ಸಾನ ಬೇಗಂ, ಎಂ.ಆರ್. ಪೂವಮ್ಮ, ವಿಜಯ ಕುಮಾರಿ, ಎ. ನಿತ್ಯಶ್ರೀ, ಸಕ್ಕು ಬಾಯಿ, ಕೆ.ಸಿ. ಶ್ರುತಿ, ಎಂ. ಅರ್ಪಿತಾ, ಬಿ. ಐಶ್ವರ್ಯ, ಜಾಯ್ಲಿನ್ ಎಂ. ಲೋಬೊ, ಸಹನಾ ಕುಮಾರಿ, ಕೆ.ಸಿ. ಚಂದನಾ, ಖ್ಯಾತಿ ವಕಾರಿಯಾ, ಟಿ. ನಿವೇತಾ, ರಶ್ಮಿ ಶೆಟ್ಟಿ, ಸಹೆಜಹಾನಿ, ಮಂಜುಶ್ರೀ ಮತ್ತು ಅಕ್ಷತಾ[೯]
ಅತ್ಲೆಟಿಕ್ಸ್ ೨೦೧೭[ಬದಲಾಯಿಸಿ]
ಗುಂಟೂರು:17 Jul, 2017:ಭಾನುವಾರ
ಕ್ರೀಡೆ | ಕ್ರೀಡಾಪಟು | ರಾಜ್ಯ | ಸಾಧನೆ | ಪದಕ | ಇತರೆ | ಇತರೆ |
---|---|---|---|---|---|---|
೧೬-ಜುಲೈ; ಪುರುಷರ 800 ಮೀಟರ್ಸ್ ಓಟ | ವಿಶ್ವಂಬರ | ಕರ್ನಾಟಕ | ಕಾಲ: 1ನಿ, 48.64ಸ | ಕಂಚು | ಹರಿಯಾಣದ ಮಂಜೀತ್ ಸಿಂಗ್ ಅವರು ಬೆಳ್ಳಿ | ಕೇರಳದ ಜಿನ್ಸನ್ ಜಾನ್ಸನ್ (1ನಿ, 47.48ಸೆ) ಅವರು ಚಿನ್ನದ |
ಲಾಂಗ್‌ಜಂಪ್ | ಸಿದ್ಧಾಂತ್ ನಾಯಕ | ಕರ್ನಾಟಕ | ದೂರ: 7.41ಮೀಟರ್ಸ್ | ಕಂಚು | ಪಿ.ವಿ. ಸುಹೈಲ್ (7.55ಮೀ)ಬೆಳ್ಳಿ | ಕೇರಳದ ಮೊಹಮ್ಮದ್ ಅನೀಸ್ (7.60ಮೀ) ಚಿನ್ನ |
17 Jul, ಮಹಿಳೆಯರ ಪೋಲ್‌ವಾಲ್ಟ್ ಸ್ಪರ್ಧೆ | ಖ್ಯಾತಿ ವಖಾರಿಯಾ (27ವರ್ಷ) | ಕರ್ನಾಟಕ | 3.70 ಮೀಟರ್ಸ್ | ಚಿನ್ನ | ಕಿರಣ್‌ಬೀರ್ ಕೌರ್ (3.40 ಮೀ.)ಬೆಳ್ಳಿ | ತಮಿಳುನಾಡಿನ ಮಂಜುಕಾ (3.30 ಮೀ.)ಕಂಚು |
17 Jul, ಟ್ರಿಪಲ್ ಜಂಪ್ | ಜಾಯ್ಲಿನ್ ಎಂ. ಲೋಬೊ | ಕರ್ನಾಟಕ | 12.52 ಮೀಟರ್ಸ್ | ಬೆಳ್ಳಿ | ಕೇರಳದ ಎನ್.ವಿ. ಶೀನಾ(12.78 ಮೀಟರ್ಸ್) ಚಿನ್ನ | ಜಿ. ಕಾರ್ತಿಕಾ; ಅಂಧ್ರಾ ಪ್ರದೇಶ್ ;12.51 ಮೀ; ಕಂಚು |
17 Jul,ಮಹಿಳೆಯರ ಜಾವೆಲಿನ್ ಥ್ರೋ | ರಶ್ಮಿ ಶೆಟ್ಟಿ | ಕರ್ನಾಟಕ | 47.76 ಮೀಟರ್ಸ್ | ಕಂಚು | ಅನು ರಾಣಿ (54.29 ಮೀಟರ್ಸ್)ಚಿನ್ನ | ಪೂನಂ ರಾಣಿ; ಹರಿಯಾನಾ 51.14 ಮೀ ಬೆಳ್ಳಿ |
ಟೇಬಲ್ ಟೆನ್ನಿಸ್[ಬದಲಾಯಿಸಿ]
- 5 Aug, 2017;
- ನವದೆಹಲಿಯಲ್ಲಿ ನಡೆದ 47ನೇ ಅಖಿಲ ಭಾರತ ಅಂತರ ಸಂಸ್ಥೆಗಳ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ೨೦೧೭
- ಕರ್ನಾಟಕದ ಅರ್ಚನಾ ಕಾಮತ್ ತಂಡ ವಿಭಾಗ X ಮಧುರಿಕ ಪಾಟ್ಕರ್, ಪೂಜಾ ಸಹಸ್ರಬುದ್ದೆ, ಮಣಿಕಾ ಬಾತ್ರಾ ಮತ್ತು ಪೌಲೊಮಿ ಘಾಟಕ್ ಅವರಿದ್ದ ಪಿಎಸ್‌ಪಿಬಿ ತಂಡ ::ಚಿನ್ನ ::3–1
- ಯೂತ್ ವಿಭಾಗ ಬೆಳ್ಳಿ:
- ಯೂತ್ ಬಾಲಕಿಯರ ವಿಭಾಗದಲ್ಲಿ ಅರ್ಚನಾ, ಯಾಶಿನಿ ಶಿವಶಂಕರ್, ವರುಣಿ ಜೈಸ್ವಾಲ್ ಮತ್ತು ರಿತಿ ಶಂಕರ್ (ಪಿಎಸ್‌ಪಿಬಿ) ತಂಡ ::ಬೆಳ್ಳಿ[೧೧]
ಫೋಟೊ ಗ್ಯಾಲರಿ[ಬದಲಾಯಿಸಿ]
ನೋಡಿ[ಬದಲಾಯಿಸಿ]
- ಕಬಡ್ಡಿ
- 17ನೇ ಏಷ್ಯನ್ ಕ್ರೀಡಾಕೂಟ 2014
- ಕ್ರೀಡೆ
- ಭಾರತದ ಅತ್ಲೆಟಿಕ್ಸ್ ೨೦೧೬
- ಭಾರತದ ಕ್ರೀಡಾಪಟುಗಳ ದಾಖಲೆ
- ವನಿತೆ ಕ್ರೀಡಾಪಟುಗಳು
ಆಧಾರ[ಬದಲಾಯಿಸಿ]
- *ಕನ್ನಡ ಪ್ರಭ ೭-೧೧-೨೦೧೪ -[[೪]]
- *ವಿಜಯ ಕರ್ನಾಟಕ » ಕ್ರೀಡೆ-([[೫]]
- *ವಿಜಯ ಕರ್ನಾಟಕ (Nov 8, 2014),»ಕ್ರೀಡೆ- [[೬]]
- ↑ ಭರವಸೆಯ ಅಥ್ಲೀಟ್ ಮೇಘನಾ;ಕೆ.ಓಂಕಾರ ಮೂರ್ತಿ;21 Nov, 2016
- ↑ ಒಲಿಂಪಿಕ್ಸ್‌ನಲ್ಲಿ ಓಡುವ ಹೆಬ್ಬಯಕೆ; ಜಿ. ಶಿವಕುಮಾರ
- ↑ ಕೆಎಲ್‌ಇ ದೇಶವೇ ಹೆಮ್ಮೆ ಪಡುವ ಸಂಸ್ಥೆ’;ಪ್ರಜಾವಾಣಿ ವಾರ್ತೆ;18 Nov, 2016
- ↑ ಕಾಮನ್‌ವೆಲ್ತ್‌ನಲ್ಲಿ ಕನ್ನಡಿಗ;ವಿಕ್ರಂ ಕಾಂತಿಕೆರೆ
- ↑ ಉದಯವಾಣಿ,[[೭]]
- ↑ ದಿ.06/06/2016 : ಪ್ರಜಾವಾಣಿ
- ↑ ಅರ್ಜುನ್ ಮೈನಿ ಐತಿಹಾಸಿಕ ಸಾಧನೆ[[೮]]
- ↑ ಗೆದ್ದು ಬನ್ನಿ... ಖುಷಿ ತನ್ನಿ...01/08/2016:ಪ್ರಜಾವಾಣಿ
- ↑ .http://www.prajavani.net/news/article/2017/07/13/505671.html
- ↑ http://www.prajavani.net/news/article/2017/07/18/506989.html
- ↑ http://www.prajavani.net/news/article/2017/08/05/511250.html