ವಿಷಯಕ್ಕೆ ಹೋಗು

ಏಕಲವ್ಯ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಕಲವ್ಯ ಪ್ರಶಸ್ತಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಅತ್ಯುತ್ತಮ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರ ರಾಷ್ಟ್ರೀಯ ಕ್ರೀಡಾ ದಿನದಂದು ನೀಡುವ ಪ್ರಶಸ್ತಿಯಾಗಿದೆ.

2011 ಹಾಗೂ 2010ನೇ ಏಕಲವ್ಯ ಪ್ರಶಸ್ತಿ

[ಬದಲಾಯಿಸಿ]
  • *2011 ಪ್ರಸಕ್ತ ಸಾಲಿನ 15 ಹಾಗೂ 2010ನೇ ಸಾಲಿನ ನಾಲ್ವರು ಸೇರಿದಂತೆ ಒಟ್ಟು 19 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕಬಡ್ಡಿ ತಂಡದ ನಾಯಕಿ, ಕಾರ್ಕಳದ ಮಮತಾ ಪೂಜಾರಿ ಹಾಗೂ ಕ್ರಿಕೆಟಿಗ ವಿನಯ್‌ ಕುಮಾರ್‌ ಏಕಲವ್ಯ ಪ್ರಶಸ್ತಿ ಪಡೆಯುವ ಪ್ರಮುಖರಾಗಿದ್ದಾರೆ.
  • ಕ್ರೀಡಾಕ್ಷೇತ್ರದ ಗಣನೀಯ ಸಾಧಕರಿಗೆ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಸಕ್ತ ಸಾಲಿನ 15 ಹಾಗೂ 2010ನೇ ಸಾಲಿನ ನಾಲ್ವರು ಸೇರಿದಂತೆ ಒಟ್ಟು 19 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕಬಡ್ಡಿ ತಂಡದ ನಾಯಕಿ, ಕಾರ್ಕಳದ ಮಮತಾ ಪೂಜಾರಿ ಹಾಗೂ ಕ್ರಿಕೆಟಿಗ ವಿನಯ್‌ ಕುಮಾರ್‌ ಏಕಲವ್ಯ ಪ್ರಶಸ್ತಿ ಪಡೆಯುವ ಪ್ರಮುಖರಾಗಿದ್ದಾರೆ.
  • ಏಕಲವ್ಯ ಪ್ರಶಸ್ತಿ ವಿಜೇತರಿಗೆ ತಲಾ 2 ಲಕ್ಷ ರೂ. ಹಾಗೂ ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 1.50 ಲಕ್ಷ ರೂ. ನಗದು ನೀಡಲಾಗುವುದು.
  • (ಕ್ರೀಡಾ ಸಚಿವರ ಹೇಳಿಕೆ:)
  • ಅಲ್ಲದೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸುವ ಪುರುಷ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಸೂಟು, ಕೋಟು, ಟೈಗಳನ್ನು ಒದಗಿಸಲಾಗುವುದು; ಮಹಿಳಾ ಕ್ರೀಡಾಪಟುಗಳಿಗೆ ಅಪ್ಪಟ ಮೈಸೂರು ರೇಷ್ಮೆ ಸೀರೆ ನೀಡಲಾಗುವುದು.
  • ಪ್ರಶಸ್ತಿಗಳಿಗೆ ನಡೆದ ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕ ನೀತಿಯನ್ನು ಅನುಸರಿಸಲಾಗಿದ್ದು, ಈ ಕ್ರೀಡಾಪಟುಗಳು 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಪದಕಗಳ ಆಧಾರದಲ್ಲಿ, ಅವರೇ ನೀಡಿರುವ ಅಂಕಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ವಿಜೇತರು

[ಬದಲಾಯಿಸಿ]
  • August 28, 2012
  • ಏಕಲವ್ಯ ಪ್ರಶಸ್ತಿ ವಿಜೇತರು ಕಾಶೀನಾಥ್‌ ನಾಯಕ್‌ ಓಣಿಕೇರಿ, ಕಾರವಾರ (ಆತ್ಲೆಟಿಕ್ಸ್‌), ಕೃತಿಕಾ ಲಕ್ಷ್ಮಣ್‌, ಮೈಸೂರು (ಬಾಸ್ಕೆಟ್‌ಬಾಲ್‌), ಸ್ಟಾನಿ ಜಿ.ಎ., ಶಿವಮೊಗ್ಗ (ಚೆಸ್‌), ವಿನಯ್‌ ಕುಮಾರ್‌, ಬೆಂಗಳೂರು (ಕ್ರಿಕೆಟ್‌) ಆಲೆಮಾಡ ಬಿ.ಚೀಯಣ್ಣ, ಕೊಡಗು (ಹಾಕಿ), ಮಮತಾ ಪೂಜಾರಿ, ಕಾರ್ಕಳ-ಉಡುಪಿ (ಕಬಡ್ಡಿ), ನೇಹಾ ಎಚ್‌. ಕುಂಬ್ರ, ದಕ್ಷಿಣ ಕನ್ನಡ (ಪವರ್‌ಲಿಫ್ಟಿಂಗ್‌), ರಾಕೇಶ್‌ ಮನ್‌ಪಟ್‌, ಬೆಂಗಳೂರು (ಶೂಟಿಂಗ್‌), ಪ್ರತೀಕ್‌ ರಾಜ್‌, ಮೈಸೂರು (ರೋಲರ್‌ ಸ್ಕೇಟಿಂಗ್‌), ಎ.ಪಿ. ಗಗನ್‌ ಉಲ್ಲಾಳ್‌ಮs…, ಬೆಂಗಳೂರು (ಈಜು), ಎಚ್‌.ಎಸ್‌. ಚಂದ್ರಶೌರಿದೇವಿ, ಭದ್ರಾವತಿ (ವೇಟ್‌ ಲಿಫ್ಟಿಂಗ್‌), ನಾಡಿಯಾ ಹರಿದಾಸ್‌, ಬೆಂಗಳೂರು (ಈಕ್ವೇಸ್ಟ್ರಿಯನ್‌), ಸಾಬು ಈಶ್ವರ್‌ ಗಾಣಿಗೇರ್‌, ಬಿಜಾಪುರ (ಸೈಕ್ಲಿಂಗ್‌), ಶ್ವೇತಾ ಎನ್‌. ಬೆಂಗಳೂರು (ವಾಲಿಬಾಲ್‌), ಸಿ.ವಿ. ರಾಜಣ್ಣ ಕೋಲಾರ (ವಿಕಲಚೇತನ ಕ್ರೀಡಾಪಟು, ಆತ್ಲೆಟಿಕ್ಸ್‌, ಬ್ಯಾಡ್ಮಿಂಟನ್‌).
  • ಜೀವಮಾನ ಸಾಧನೆ ಪ್ರಶಸ್ತಿ: ಶ್ಯಾಮಲಾ ಶೆಟ್ಟಿ, ಬೆಂಗಳೂರು (ವೇಟ್‌ಲಿಫ್ಟಿಂಗ್‌ ಕೋಚ್‌), ಚೇಂದಂಡ ಯು.ಅಶ್ವಥ್‌, ಕೊಡಗು (ಹಾಕಿ ಕೋಚ್‌), ಪ್ರದೀಪ್‌ ಕುಮಾರ್‌, ಬೆಂಗಳೂರು (ಈಜು ಕೋಚ್‌), ಚಂದ್ರಪ್ಪ ಮಲ್ಲಪ್ಪ ಕುರಣಿ ಬಾಗಲಕೋಟೆ (ಸೈಕ್ಲಿಂಗ್‌ ಕೋಚ್‌).
  • ಇದರೊಂದಿಗೆ 2010ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಗೊಂಡು ಕಾರಣಾಂತರಗಳಿಂದ ತಡೆ ಹಿಡಿಯಲ್ಪಟ್ಟಿದ್ದ ಮೂರು ಮಂದಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಅವರಲ್ಲಿ ರೋಷನ್‌ ಫೆರಾವೋ, ಮಂಗಳೂರು (ಬಾಡಿಬಿಲ್ಡಿಂಗ್‌), ಎಸ್‌. ನವೀನ್‌, ಮಂಡ್ಯ (ಕರಾಟೆ) ಪ್ರಜ್ಞಾ ಎಚ್‌.ಎ., ಮೈಸೂರು (ರೋಲರ್‌ ಸ್ಕೇಟಿಂಗ್‌) ಮತ್ತು ರಾಜೇಶ್‌ ಶಿಂಧೆ, ಬೆಳಗಾವಿ (ವಿಕಲಚೇತನ ಕ್ರೀಡಾಪಟು-ಈಜು) ಸೇರಿದ್ದಾರೆ.
  • ಇವರಲ್ಲಿ ಈ ಹಿಂದೆ ಶರಣ್ಯ ಮಹೇಶ್‌ ಅವರಿಗೆ ನೀಡಲಾಗಿದ್ದ ಏಕಲವ್ಯ ಪ್ರಶಸ್ತಿಯನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಲಾಗಿದ್ದ ರಿಟ್‌ ಅರ್ಜಿಯ ಹಿನ್ನೆಲೆಯಲ್ಲಿ, ನ್ಯಾಯಾಲಯ ನೀಡಿದ ತೀರ್ಪಿನ ಅನ್ವಯ ಆ ಪ್ರಶಸ್ತಿಯನ್ನು ಇದೀಗ ಪ್ರಜ್ಞಾ ಅವರಿಗೆ ನೀಡಲಾಗುವುದು. ಹಾಗೆಯೇ ವಿಕಲಚೇತನ ಕ್ರೀಡಾಪಟುವಿಗೆ ಸೋಮಶೇಖರ್‌ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ರದ್ದುಪಡಿಸಿ ರಾಜೇಶ್‌ ಶಿಂಧೆಗೆ ನೀಡಲಾಗುತ್ತಿದೆ.

(ಎಂದು ಸಚಿವ ಅಪ್ಪಚ್ಚು ರಂಜನ್‌ ವಿವರಣೆಯಿತ್ತರು). [] [] [] []

೨೦೧೪ ರ ಪ್ರಶಸ್ತಿಗಳು

[ಬದಲಾಯಿಸಿ]
  • ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದಲ್ಲಿ ಕ್ರೀಡಾ ಇಲಾಖೆಯು ಮಂಗಳವಾರ (10 MAY, 2016) ಆಯೋಜಿಸಿದ್ದ 2014ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ನಡೆಯಿತು.
  • 15 ಸಾಧಕರಿಗೆ ‘ಏಕಲವ್ಯ’ ಪ್ರಶಸ್ತಿ, ನಾಲ್ವರು ತರಬೇತುದಾರರಿಗೆ ‘ಜೀವಮಾನ ಶ್ರೇಷ್ಠ ಸಾಧನೆ’ ಹಾಗೂ 10 ಮಂದಿ ಗ್ರಾಮೀಣ ಕ್ರೀಡಾಪಟುಗಳಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಲಭಿಸಿದೆ.
  • ಏಕಲವ್ಯ’ ಪ್ರಶಸ್ತಿಯು ರೂ.2 ಲಕ್ಷ ನಗದು ಹಾಗೂ ಫಲಕ, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಮೊತ್ತವು ರೂ.1 ಲಕ್ಷ ನಗದು ಹಾಗೂ ಫಲಕ, ‘ಜೀವಮಾನ ಶ್ರೇಷ್ಠ ಸಾಧನೆ’ ಪ್ರಶಸ್ತಿ ರೂ.1.5 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ.
  • ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ ಸೇರಿದಂತೆ ಮೊದಲಾದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವ 41 ಕ್ರೀಡಾಪಟುಗಳಿಗೆ ಒಟ್ಟು ರೂ.1.48 ಕೋಟಿ ಬಹುಮಾನ. ಹೆಚ್ಚು ಮೊತ್ತ ಪಡೆದಿದ್ದು ಟೆನಿಸ್‌ ಆಟ ಗಾರ ಬಿ.ಆರ್‌. ನಿಕ್ಷೇಪ್‌ (ರೂ.8 ಲಕ್ಷ). []

ಫೋಟೋ:ರ್ನಾಟಕ ಕ್ರೀಡಾ ರತ್ನ-ಪ್ರಶಸ್ತಿ &ಏಕಲವ್ಯ ಪ್ರಶಸ್ತಿ}[[https://web.archive.org/web/20160518065442/http://www.prajavani.net/sites/default/files/article_images/2016/05/10/pvec11xkreedaratna.jpg Archived 2016-05-18 ವೇಬ್ಯಾಕ್ ಮೆಷಿನ್ ನಲ್ಲಿ.]][[https://web.archive.org/web/20160518063705/http://www.prajavani.net/sites/default/files/article_images/2016/05/10/pvec11xekalavya.jpg Archived 2016-05-18 ವೇಬ್ಯಾಕ್ ಮೆಷಿನ್ ನಲ್ಲಿ.]]

ಏಕಲವ್ಯ ಪ್ರಶಸ್ತಿ 2016

[ಬದಲಾಯಿಸಿ]
  • Tuesday, May 10, 2016
  • ಕ್ರೀಡಾಪಟು ಅರವಿಂದ್ ಎಂ.,ಆಕಾಶ್ ಆರಾದ್ಯ, ಡಾ. ಖ್ಯಾತಿ ಎಸ್. ವಖಾರಿಯಾ , ಮಲಪ್ರಭಾ ವೈ. ಜಾದವ್, ಸುನ್ನುವಂಡ ಕುಶಾಲಪ್ಪ ಉತ್ತಪ್ಪ, ಟ್ವಿಶಾ ಕೆ., ಪುರುಷೋತ್ತಮ ಕೆ, ವಿನೀತ್ ಮ್ಯಾನ್ಯುಯಲ್, ಸುಷ್ಮಿತಾ ಪವಾರ್ ಓ, ಶರ್ಮದಾ ಬಾಲು, ಅರ್ಚನಾ ಗಿರೀಶ್ ಕಾಮತ್, ನಿಶಾ ಜೋಸೆಫ್, ಲೋಕೇಶ್ ಎನ್.,ಲಕ್ಷ್ಮಣ ಸಿ. ಕುರಣಿ,ನಿರಂಜನ್ ಎಂ. ಅವರುಗಳಿಗೆ ಏಕಲವ್ಯ ಪ್ರಶಸ್ತಿ ಪುರರಸ್ಕಾರ ಮಾಡಲಾಯಿತು.[]

ಕರ್ನಾಟಕ ಕ್ರೀಡಾ ರತ್ನ-ಪ್ರಶಸ್ತಿ

[ಬದಲಾಯಿಸಿ]
  • ಕರ್ನಾಟಕ ರಾಜ್ಯದ ದೇಸೀ ಮತ್ತು ಸ್ಥಳೀಯ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2014 ನೇ ಸಾಲಿನ ‘ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿಯನ್ನು ಕಾವ್ಯ ಎಂ.ಆರ್.,ವಿನೋದ್ ರಾಠೋಡ, ದುಂಡಪ್ಪ ದಾಸನ್ನವರ, ರೂಪಶ್ರೀ ಬಿ.ಕೆ., ಕಾರ್ತಿಕ್ ಜಿ ಕಾಟಿ, ಯೋಗೇಶ್, ಅನಿಲ್ ಕುಮಾರ್ ಹೆಚ್. ಶೆಟ್ಟರ್, ಜಯಕರ ಯಾನೆ ನಕ್ರೆ ಜಯಕರ ಮಡಿವಾಳ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಇಬ್ರಾಹಿಂ ಸಾಬ್ ಮ. ಅರಬ್ ಅವರಿಗೆ ನೀಡಲಾಯಿತು. []

ಉಲ್ಲೇಖಗಳು

[ಬದಲಾಯಿಸಿ]
  1. http://kannada.webdunia.com/sports/othersports/sportsnews/1208/28/1120828034_1.htm
  2. "ಆರ್ಕೈವ್ ನಕಲು". Archived from the original on 2013-09-01. Retrieved 2013-08-29.
  3. http://www.deccanherald.com/content/92444/F
  4. 19 sportspersons to get Ekalavya Award] The hindu, MYSORE, August 28, 2012
  5. ಪ್ರಜಾವಾಣಿ ವಾರ್ತೆ:Wed,11/05/2016: [[೧]]
  6. ಕ್ರೀಡಾಪಟುಗಳಿಗೆ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ
  7. May 10, 2016,ಒನ್ ಇಂಡಿಯಾhtml[[೨]]