ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)

ವಿಕಿಪೀಡಿಯ ಇಂದ
Jump to navigation Jump to search
1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡ

ಭಾರತವು ೧೯೦೦ರಿಂದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದೆ. ೧೯೯೦ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕ್ರೀಡಾಪಟು ನಾರ್ಮನ್ ಪ್ರಿಚರ್ಡ್ ಎಂಬಾತ. ಈತ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದನು. ರಾಷ್ಟ್ರದ ತಂಡವಾಗಿ ೧೯೨೦ರಿಂದ ಬೇಸಿಗೆಯ ಕೂಟಗಳಲ್ಲಿ ಮತ್ತು ೧೯೬೪ರಿಂದ ಚಳಿಗಾಲದ ಕೂಟಗಳಲ್ಲಿ ಭಾರತವು ಪಾಲ್ಗೊಳ್ಳುತ್ತಿದೆ.

ಈವರೆಗೆ ೨೨ ಬೇಸಿಗೆಯ ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿರುವ ಭಾರತವು ಒಟ್ಟು ೨೦ ಪದಕಗಳನ್ನು ಗೆದ್ದಿದೆ. ಚಳಿಗಾಲದ ಒಲಿಂಪಿಕ್ಸ್‌ಗಳಲ್ಲಿ ಯಾವ ಪದಕವೂ ಇನ್ನೂ ಭಾರತದ ಕೈಸೇರಿಲ್ಲ. ಭಾರತದ ಪದಕಗಳಲ್ಲಿ ಹೆಚ್ಚಿನವು ಫೀಲ್ಡ್ ಹಾಕಿಯಲ್ಲಿ ಜಯಿಸಿದವಾಗಿವೆ. ೧೯೨೮ರಿಂದ ೧೯೮೦ರವರೆಗಿನ ೧೨ ಕೂಟಗಳಲ್ಲಿ ಭಾರತವು ಹಾಕಿಯಲ್ಲಿ ೯ ಸ್ವರ್ಣ ಸೇರಿದಂತೆ ೧೧ ಪದಕಗಳನ್ನು ಗಳಿಸಿತ್ತು.


ಪದಕ ವಿಜೇತರು[ಬದಲಾಯಿಸಿ]

ಪದಕ ಹೆಸರು ಒಲಿಂಪಿಕ್ ಕೂಟ ಕ್ರೀಡೆ ಸ್ಪರ್ಧೆ
2Silver medal icon.svg ಬೆಳ್ಳಿ ನಾರ್ಮನ್ ಪ್ರಿಚರ್ಡ್ ೧೯೦೦ ಪ್ಯಾರಿಸ್ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್ ಓಟ
2Silver medal icon.svg ಬೆಳ್ಳಿ ನಾರ್ಮನ್ ಪ್ರಿಚರ್ಡ್ ೧೯೦೦ ಪ್ಯಾರಿಸ್ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್‍ ಹರ್ಡಲ್ಸ್
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೨೮ ಆಮ್‍ಸ್ಟರ್‍ಡ್ಯಾಮ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೩೨ ಲಾಸ್ ಏಂಜಲಿಸ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೩೬ ಬರ್ಲಿನ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೪೮ ಲಂಡನ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೫೨ ಹೆಲ್ಸಿಂಕಿ ಹಾಕಿ ಪುರುಷರ ವಿಭಾಗ
3Bronze medal icon.svg ಕಂಚು ಕೆ.ಡಿ.ಜಾಧವ್ ೧೯೫೨ ಹೆಲ್ಸಿಂಕಿ ಕುಸ್ತಿ ಪುರುಷರ ಫ್ರೀಸ್ಟೈಲ್ ಬಾಂಟಮ್‌ವೆಯ್ಟ್
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೫೬ ಮೆಲ್ಬರ್ನ್ ಹಾಕಿ ಪುರುಷರ ವಿಭಾಗ
2Silver medal icon.svg ಬೆಳ್ಳಿ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೦ ರೋಮ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೪ ಟೋಕಿಯೋ ಹಾಕಿ ಪುರುಷರ ವಿಭಾಗ
3Bronze medal icon.svg ಕಂಚು ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೮ ಮೆಕ್ಸಿಕೋ ಹಾಕಿ ಪುರುಷರ ವಿಭಾಗ
3Bronze medal icon.svg ಕಂಚು ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೭೨ ಮ್ಯೂನಿಚ್ ಹಾಕಿ ಪುರುಷರ ವಿಭಾಗ
1Gold medal icon.svg ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೮೦ ಮಾಸ್ಕೋ ಹಾಕಿ ಪುರುಷರ ವಿಭಾಗ
3Bronze medal icon.svg ಕಂಚು ಲಿಯಾಂಡರ್ ಪೇಸ್ ೧೯೯೬ ಅಟ್ಲಾಂಟಾ ಟೆನ್ನಿಸ್ ಪುರುಷರ ಸಿಂಗಲ್ಸ್
3Bronze medal icon.svg ಕಂಚು ಕರ್ಣಂ ಮಲ್ಲೇಶ್ವರಿ ೨೦೦೦ ಸಿಡ್ನಿ ಭಾರ ಎತ್ತುವಿಕೆ ಮಹಿಳೆಯರ ೬೯ ಕೆ.ಜಿ. ವಿಭಾಗ
2Silver medal icon.svg ಬೆಳ್ಳಿ ರಾಜ್ಯವರ್ಧನ್ ಸಿಂಗ್ ರಾಥೋಡ್ ೨೦೦೪ ಅಥೆನ್ಸ್ ಶೂಟಿಂಗ್ ಪುರುಷರ ಡಬಲ್ ಟ್ರ್ಯಾಪ್
1Gold medal icon.svg ಚಿನ್ನ ಅಭಿನವ್ ಬಿಂದ್ರಾ ೨೦೦೮ ಬೀಜಿಂಗ್ ಶೂಟಿಂಗ್ ಪುರುಷರ ೧೦ ಮೀ. ಏರ್ ರೈಫಲ್
3Bronze medal icon.svg ಕಂಚು ಸುಶೀಲ್ ಕುಮಾರ್ ೨೦೦೮ ಬೀಜಿಂಗ್ ಕುಸ್ತಿ ಪುರುಷರ ಫ್ರೀಸ್ಟೈಲ್ ೬೬ ಕೆ.ಜಿ. ವಿಭಾಗ
3Bronze medal icon.svg ಕಂಚು ವಿಜೇಂದರ್ ಕುಮಾರ್ ೨೦೦೮ ಬೀಜಿಂಗ್ ಬಾಕ್ಸಿಂಗ್ ಪುರುಷರ ೭೫ ಕೆ.ಜಿ. ವಿಭಾಗ
ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
2Silver medal icon.svg ಬೆಳ್ಳಿ ವಿಜಯ್ ಕುಮಾರ್ 3 ಆಗಸ್ಟ್ 2012 ಶೂಟಿಂಗ್ ಪುರುಷರ 25 ಮೀ ವೇಗ ಫೈರ್ ಪಿಸ್ತೋಲ್
2Silver medal icon.svg ಬೆಳ್ಳಿ ಸುಶೀಲ್ ಕುಮಾರ್ 12 ಆಗಸ್ಟ್ 2012 ರೆಸ್ಲಿಂಗ್ ಪುರುಷರ ಫ್ರೀಸ್ಟೈಲ್
2Silver medal icon.svg ಬೆಳ್ಳಿ ಯೋಗೇಶ್ವರ್ ದತ್ 11 ಆಗಸ್ಟ್ 2012 ರೆಸ್ಲಿಂಗ್ ಪುರುಷರ ಫ್ರೀಸ್ಟೈಲ್ 60 ಕೆಜಿ
3Bronze medal icon.svg ಕಂಚು ಗಗನ್ ನಾರಂಗ್ 30 ಜುಲೈ2012 ಶೂಟಿಂಗ್ ಪುರುಷರ 10 ಮೀ ಏರ್ ರೈಫಲ್
3Bronze medal icon.svg ಕಂಚು ಸೈನಾ ನೆಹವಾಲ್ 4 ಆಗಸ್ಟ್ 2012 ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3Bronze medal icon.svg ಕಂಚು ಮೇರಿ ಕೋಮ್ 8 ಆಗಸ್ಟ್ 2012 ಬಾಕ್ಸಿಂಗ್ ಮಹಿಳೆಯರ ಫ್ಲೈತೂಕ
೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ (9 ಚಿನ್ನ+8 ಬೆಳ್ಳಿ+11 ಕಂಚು= ಒಟ್ಟು28)
2Silver medal icon.svg ಬೆಳ್ಳಿ ಪಿ.ವಿ. ಸಿಂಧು 19 ಆಗಸ್ಟ್ 2016 ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3Bronze medal icon.svg ಕಂಚು ಸಾಕ್ಷಿ ಮಲಿಕ್ 17 ಆಗಸ್ಟ್ 2016 ಕುಸ್ತಿ ಮಹಿಳೆಯರ ಫ್ರೀಸ್ಟೈಲ್,58 ಕೆಜಿ

ಸೂಚನೆ : ಮೇಲಿನ ಪಟ್ಟಿಯನ್ನು ಯಾವುದೇ ರೀತಿಯಲ್ಲೂ ಪುನರ್ಜೋಡಿಸಬಹುದು. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತಿದಾಗ ಪಟ್ಟಿಯು ಬೇರೆ ರೀತಿಯಲ್ಲಿ ಜೋಡಣೆಗೊಳ್ಳುವುದು.


ಅತಿ ಅಗಾಧ ಪ್ರಮಾಣದ ಜನಸಂಖ್ಯೆಯ ಹೊರತಾಗಿಯೂ ಭಾರತವು ಇದುವರೆಗೆ ಒಲಿಂಪಿಕ್ಸ್‌ಗಳಲ್ಲಿ ಕೇವಲ ಕೆಲವೇ ಬಾರಿ ಯಶ ಸಾಧಿಸಿದೆ. ೨೫ ವರ್ಷಕ್ಕಿಂತ ಕಿರಿಯರಾದ ೫೦ ಕೋಟಿಗೂ ಹೆಚ್ಚು ಜನರನ್ನು ಹೊಂದಿರುವ ಭಾರತದ ಕ್ರೀಡಾರಂಗದಲ್ಲಿನ ಅಲ್ಪ ಸಾಧನೆ ಜಗತ್ತನ್ನೇ ವಿಸ್ಮಯಗೊಳಿಸಿದೆ. ಒಂದು ಮಾಹಿತಿಯ ಪ್ರಕಾರ ತಲಾವಾರು ಪದಕ ಗೆಲ್ಲುವಿಕೆಯಲ್ಲಿ ಭಾರತ ವಿಶ್ವದಲ್ಲಿಯೇ ಕೊನೆಯ ಸ್ಥಾನದಲ್ಲಿದೆ.

ಆಕರಗಳು[ಬದಲಾಯಿಸಿ]