ನೀರಜ್ ಚೋಪ್ರಾ

ವಿಕಿಪೀಡಿಯ ಇಂದ
Jump to navigation Jump to search

ನೀರಜ್ ಚೋಪ್ರಾ
Neeraj Chopra Of India(Javelin).jpg
Personal information
ರಾಷ್ರೀಯತೆIndian
ಜನನ (1997-12-24) ೨೪ ಡಿಸೆಂಬರ್ ೧೯೯೭ (age ೨೨)[೧]
Panipat, Haryana, India
ಶಿಕ್ಷಣDAV College, Chandigarh
Sport
ದೇಶIndia
ಕ್ರೀಡೆTrack and field
ಕಾರ್ಯಕ್ರಮ(ಗಳು)Javelin throw
ತರಬೇತುದಾರರುUwe Hohn
Achievements and titles
ವೈಯಕ್ತಿಕ ಪರಮಶ್ರೇಷ್ಠ88.06 (Asian Games 2018) NR
Updated on 27 August 2018.

ನೀರಜ್ ಚೋಪ್ರಾ ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫ಼ೀಲ್ಡ್ ಕ್ರೀಡಾಪಟು. ಇವರು ಜಾವೆಲಿನ್ ಎಸೆತ ವಿಭಾಗದಲ್ಲಿ ಕ್ರೀಡಾಪಟುವಾಗಿದ್ದಾರೆ. ಇವರು ೨೦೧೮ರ ಏಷ್ಯನ್ ಗೇಮ್ಸ್ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕ ಗೆದ್ದಿದ್ದಾರೆ. ಇವರು ೮೮.೦೬ ಮೀ. ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ೨೦೧೮ರ ಕಾಮನ್ ವೆಲ್ತ್ ಗೇಮ್ಸ್ನಲ್ಲಿಯೂ ಬಂಗಾರದ ಪದಕ ಪಡೆದಿದ್ದರು. ೨೦೧೬ರ ಐಎಎಎಫ಼್ (ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ಼್ ಅತ್ಲೆಟಿಕ್ಸ್ ಫ಼ೆಡರೇಶನ್) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದರು, ಮಾತ್ರವಲ್ಲದೆ ಕಿರಿಯರ ಚಾಂಪಿಯನ್ ಶಿಪ್ ನಲ್ಲಿ ೮೬.೪೮ ಮೀ. ದೂರ ಜಾವೆಲಿನ್ ಎಸೆದು ವಿಶ್ವ ಜೂನಿಯರ್ ದಾಖಲೆ ಬರೆದರು. ೨೦೧೮ರ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬಾವುಟ ಹಿಡಿದು ಭಾರತದ ಕ್ರೀಡಾಳುಗಳನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿತ್ತು.[೨] ಇವರು ಐಎಎಎಫ಼್ ಡೈಮಂಡ್ ಲೀಗ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.


ಬಾಲ್ಯ ಮತ್ತು ಜೀವನ[ಬದಲಾಯಿಸಿ]

ನೀರಜ್ ಚೋಪ್ರಾ ಜನಿಸಿದ್ದು ಡಿಸೆಂಬರ್ ೨೪ ೧೯೯೭ ರಂದು. ಇವರು ಹುಟ್ಟಿದ್ದು ಹರ್ಯಾಣದ ಪಾಣಿಪತ್ ನಗರದ ಖಂದ್ರಾ ಎಂಬ ಹಳ್ಳಿಯಲ್ಲಿ. ಅವರ ಶಿಕ್ಷಣ ಪಡೆದಿದ್ದು ಡಿಎವಿ ಕಾಲೇಜು ಚಂಡೀಗಡದಲ್ಲಿ. ಅವರು ಭಾರತೀಯ ಸೈನ್ಯದ ಜೂನಿಯರ್ ನಿಯೋಜಿತ ಅಧಿಕಾರಿ (ಜೂನಿಯರ್ ಕಮೀಷನ್ಡ್ ಆಫ಼ೀಸರ್) ಯಾಗಿ, ನಾಯಿಬ್ ಸುಬೇದಾರ್ ಶ್ರೇಣಿಯೊಂದಿಗೆ ೨೦೧೬ರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.[೩]

ಸಾಧನೆ[ಬದಲಾಯಿಸಿ]

ನೀರಜ್ ಚೋಪ್ರಾ ೨೦೧೬ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ೮೨.೨೩ ಮೀ. ಜಾವೆಲಿನ್ ಎಸೆದು ಚಿನ್ನದ ಪದಕ ಪಡೆಯುವುದರೊಂದಿಗೆ ಭಾರತದ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ಪೋಲೆಂಡ್ ನಲ್ಲಿ ನಡೆದ ೨೦೧೬ರ ಐಎಎಎಫ಼್ ಕಿರಿಯರ ವಿಶ್ವ ಕ್ರೀಡಾಕೂಟ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ವಿಶ್ವ ಜೂನಿಯರ್ ದಾಖಲೆಯನ್ನು ಕೂಡ ಮಾಡಿದ್ದರು. ೨೦೧೭ರ ಏಷ್ಯನ್ ಅತ್ಲೆಟಿಕ್ ಚಾಂಪಿಯನ್ ಶಿಪ್ಸ್ ನಲ್ಲಿ ನೀರಜ್ ೮೫.೨೩ ಮೀ. ಜಾವೆಲಿನ್ ಎಸೆದು ಸ್ವರ್ಣ ಪದಕ ಪಡೆದರು. ೨೦೧೮ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ೮೬.೪೭ ಮೀ. ಜಾವೆಲಿನ್ ಎಸೆದು ಹೊಸ ದಾಖಲೆಯೊಂದನ್ನು ನೊಂದಾಯಿಸಿಕೊಂಡರು. ಇದರೊಂದಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಮೊದಲಿಗನಾಗಿ ಜಾವೆಲಿನ್ ಎಸೆತ ವಿಭಾಗದಲ್ಲಿ ಗುರುತಿಸಿಕೊಂಡರು. ೨೦೧೮ರ ಮೇ ತಿಂಗಳಲ್ಲಿ ನಡೆದ ದೋಹ ಡೈಮಂಡ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ ೮೭.೪೩ ಮೀ. ಜಾವೆಲಿನ್ ಎಸೆಯುವುದರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಪ್ರಸ್ತುತ ಇವರು ಉವ್ ಹೋನ್ ರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ೨೦೧೮ರ ಆಗಸ್ಟ್ ೨೭ರಂದು ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ೮೮.೦೬ ಮೀ. ಜಾವೆಲಿನ್ ಎಸೆತದೊಂದಿಗೆ ಪುರುಷರ ಜಾವೆಲಿನ್ ಎಸೆತ ವಿಭಾಗದಲ್ಲಿ ಸ್ವರ್ಣ ಪದಕ ಗೆಲ್ಲುವುದರೊಂದಿಗೆ ಅವರ ವೈಯಕ್ತಿಕ ಉತ್ತಮ ದಾಖಲೆಯನ್ನೂ ಕೂಡ ಮಾಡಿದರು.ಫಿನ್ ಲ್ಯಾಂಡಿನ ಲ್ಯಾಪಿನ್ಲಾಟಿಯಲ್ಲಿ ನಡೆದ "ಸಾವೋ ಗೇಮ್ಸ್‌'ನಲ್ಲಿ ನೀರಜ್‌ ಸ್ವರ್ಣ ಪದಕ ಪಡೆದರು.[೪]

ಸ್ವರ್ಣ ಪದಕ ಪಟ್ಟಿ[ಬದಲಾಯಿಸಿ]

 • ೨೦೧೮ರ ಏಷ್ಯನ್ ಕ್ರೀಡಾಕೂಟ ಇಂಡೋನೇಷ್ಯಾದ ಜಕಾರ್ತದಲ್ಲಿ.[೫]
 • ೨೦೧೮ರ ಕಾಮನ್ ವೆಲ್ತ್ ಕ್ರೀಡಾಕೂಟ ಗೋಲ್ಡ್ ಕೋಸ್ಟ್ ನಲ್ಲಿ
 • ೨೦೧೭ರ ಏಷ್ಯನ್ ಚಾಂಪಿಯನ್ ಶಿಪ್ಸ್ ಭುವನೇಶ್ವರದಲ್ಲಿ
 • ೨೦೧೬ರ ಸೌತ್ ಏಷ್ಯನ್ ಕ್ರೀಡಾಕೂಟ ಗುವಾಹಾಟಿ/ಶಿಲ್ಲಾಂಗ್ ನಲ್ಲಿ
 • ೨೦೧೬ರ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ಸ್ ಬೈಡ್ಗೊಸ್ಜ್ಕ್ಝ್ ದಲ್ಲಿ.[೬]

ಅಂತರಾಷ್ತ್ರೀಯ ಸ್ಪರ್ಧೆಗಳು[ಬದಲಾಯಿಸಿ]

ವರ್ಷ ಸ್ಪರ್ಧೆ ಸ್ಥಳ ಸ್ಥಾನ ವಿಭಾಗ ಟಿಪ್ಪಣಿ
೨೦೧೩ ವಿಶ್ವ ಯುವ ಚಾಂಪಿಯನ್ ಶಿಪ್ಸ್ ಡೊನೆಸ್ಕ್ ಉಕ್ರೈನ್ ೧೯ ನೇ (ಅ) ಜಾವೆಲಿನ್ ಎಸೆತ(೭೦೦ ಗ್ರಾಂ.) ೬೬.೭೫ ಮೀ.
೨೦೧೫ ಏಷ್ಯನ್ ಚಾಂಪಿಯನ್ ಶಿಪ್ಸ್ ವುಹಾನ್, ಚೀನಾ ೯ ನೇ ಜಾವೆಲಿನ್ ಎಸೆತ ೭೦.೫೦ ಮೀ.
೨೦೧೬ ೨೦೧೬ ದಕ್ಷಿಣ ಏಷ್ಯನ್ ಕ್ರೀಡಾಕೂಟ ಗುವಾಹಾಟಿ, ಭಾರತ ೧ ನೇ ಜಾವೆಲಿನ್ ಎಸೆತ ೮೨.೨೩ ಮೀ.
೨೦೧೬ ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ಸ್ ಹೊ ಚಿ ಮಿನ್ಹ್ ಸಿಟಿ, ವಿಯೆಟ್ನಾಂ ೨ ನೇ ಜಾವೆಲಿನ್ ಎಸೆತ ೭೭.೬೦ ಮೀ.
೨೦೧೬ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ಸ್ ಬೈಡ್ಗೊಸ್ಜ್ಕ್ಝ್, ಪೋಲೇಂಡ್ ೧ ನೇ (ವಿಜೂದಾ) ಜಾವೆಲಿನ್ ಎಸೆತ ೮೬.೪೮ ಮೀ.
೨೦೧೭ ಏಷ್ಯನ್ ಗ್ರಾಂಡ್ ಪಿಕ್ಸ್ ಸರಣಿ ಜಿನ್ಹುವಾ, ಚೀನಾ ೨ ನೇ ಜಾವೆಲಿನ್ ಎಸೆತ ೮೨.೧೧ ಮೀ.
೨೦೧೭ ಏಷ್ಯನ್ ಗ್ರಾಂಡ್ ಪಿಕ್ಸ್ ಸರಣಿ ಜಿಯಾಕ್ಸಿಂಗ್, ಚೀನಾ ೨ ನೇ ಜಾವೆಲಿನ್ ಎಸೆತ ೮೩.೩೨ ಮೀ.
೨೦೧೭ ಏಷ್ಯನ್ ಗ್ರಾಂಡ್ ಪಿಕ್ಸ್ ಸರಣಿ ತೈಪೈ, ತೈವಾನ್ ೩ ನೇ ಜಾವೆಲಿನ್ ಎಸೆತ ೭೯.೯೦ ಮೀ.
೨೦೧೭ ಏಷ್ಯನ್ ಚಾಂಪಿಯನ್ ಶಿಪ್ಸ್ ಭುವನೇಶ್ವರ, ಭಾರತ ೧ ನೇ ಜಾವೆಲಿನ್ ಎಸೆತ ೮೫.೨೩ ಮೀ.
೨೦೧೭ ಐಎಎಎಫ಼್ ಡೈಮಂಡ್ ಲೀಗ್ ಪ್ಯಾರೀಸ್, ಫ಼್ರಾನ್ಸ್ ೭ ನೇ (೧೦ಅಂಕಗಳು) ಜಾವೆಲಿನ್ ಎಸೆತ ೮೪.೬೭ ಮೀ.
೨೦೧೭ ಐಎಎಎಫ಼್ ಡೈಮಂಡ್ ಲೀಗ್ ಫ಼ೊಂಟ್ ವೈಲ್ಲೆ, ಮೊನಾಕೋ " " ಜಾವೆಲಿನ್ ಎಸೆತ ೭೮.೯೨ ಮೀ.
೨೦೧೭ ಐಎಎಎಫ಼್ ಡೈಮಂಡ್ ಲೀಗ್ ಜೂರಿಕ್, ಸ್ವಿಟ್ಜರ್ ಲ್ಯಾಂಡ್ " " ಜಾವೆಲಿನ್ ಎಸೆತ ೮೩.೮೦ ಮೀ.
೨೦೧೭ ವಿಶ್ವ ಚಾಂಪಿಯನ್ ಶಿಪ್ಸ್ ಲಂಡನ್, ಯು. ಕೆ. ೧೫ ನೇ (ಅ.) ಜಾವೆಲಿನ್ ಎಸೆತ ೮೨.೨೬ ಮೀ.
೨೦೧೮ ಒಫ಼ೆನ್ ಬರ್ಗ್ ಸ್ಪೀರ್ ವರ್ಫ಼್ ಮೀಟಿಂಗ್ ಒಫ಼ೆನ್ ಬರ್ಗ್, ಜರ್ಮನಿ ೨ ನೇ ಜಾವೆಲಿನ್ ಎಸೆತ ೮೨.೮೦ ಮೀ.
೨೦೧೮ ಕಾಮನ್ ವೆಲ್ತ್ ಕ್ರೀಡಾಕೂಟ ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾ ೧ ನೇ ಜಾವೆಲಿನ್ ಎಸೆತ ೮೬.೪೭ ಮೀ.
೨೦೧೮ ಐಎಎಎಫ಼್ ಡೈಮಂಡ್ ಲೀಗ್ ದೋಹಾ, ಕತಾರ್ ೪ ನೇ (೧೭ ಅಂಕಗಳು) ಜಾವೆಲಿನ್ ಎಸೆತ ೮೭.೪೩ ಮೀ.
೨೦೧೮ ಐಎಎಎಫ಼್ ಡೈಮಂಡ್ ಲೀಗ್ ಉಗೇನ್, ಒರೆಗಾನ್ ಯು.ಎಸ್.ಎ. " " ಜಾವೆಲಿನ್ ಎಸೆತ ೮೦.೮೧ ಮೀ.
೨೦೧೮ ಐಎಎಎಫ಼್ ಡೈಮಂಡ್ ಲೀಗ್ ರಾಬಟ್, ಮೊರೊಕ್ಕೋ " " ಜಾವೆಲಿನ್ ಎಸೆತ ೮೩.೩೨ ಮೀ.
೨೦೧೮ ಐಎಎಎಫ಼್ ಡೈಮಂಡ್ ಲೀಗ್ ಜೂರಿಕ್ ಸ್ವಿಟ್ಜರ್ ಲ್ಯಾಂಡ್ " " ಜಾವೆಲಿನ್ ಎಸೆತ ೮೫.೭೩ ಮೀ.
೨೦೧೮ ಸೊಟ್ಟೆವಿಲ್ಲೆ ಅತ್ಲೆಟಿಕ್ಸ್ ಮೀಟ್ ಸೊಟ್ಟೆವಿಲ್ಲೆ-ಜೆಸ್-ರೊಯೆನ್, ಫ಼್ರಾನ್ಸ್ ೧ ನೇ ಜಾವೆಲಿನ್ ಎಸೆತ ೮೫.೧೭ ಮೀ.
೨೦೧೮ ಸಾವೋ ಕ್ರೀಡಾಕೂಟ ಲಪಿನ್ಲಾ ಡೆಲ್ಲಾ, ಫ಼ಿನ್ ಲ್ಯಾಂಡ್ ೧ ನೇ ಜಾವೆಲಿನ್ ಎಸೆತ ೮೫.೬೯ ಮೀ.
೨೦೧೮ ಏಷ್ಯನ್ ಕ್ರೀಡಾಕೂಟ ಜಕಾರ್ತ ಮತ್ತು ಪಾಲೆಂಬಾಂಗ್, ಇಂಡೋನೇಷ್ಯಾ ೧ ನೇ (ರಾದಾ) ಜಾವೆಲಿನ್ ಎಸೆತ ೮೮.೦೬ ಮೀ.

ಅ - ಅರ್ಹತಾ ಸುತ್ತು, ವಿಜೂದಾ - ವಿಶ್ವ ಜೂನಿಯರ್ ದಾಖಲೆ, ರಾದಾ - ರಾಷ್ಟ್ರೀಯ ದಾಖಲೆ.

ಉಲ್ಲೇಖಗಳು[ಬದಲಾಯಿಸಿ]

 1. "NEERAJ CHOPRA: Athlete profile". IAAF.
 2. https://vijaykarnataka.indiatimes.com/sportshome/sports/asian-games-2018-opening-ceremony/articleshow/65454126.cms
 3. https://vijaykarnataka.indiatimes.com/sportshome/sports/javelin-thrower-neeraj-chopra-got-job-in-indian-military/articleshow/57607811.cms
 4. https://www.udayavani.com/kannada/news/sports-news/313286/neeraj-chopra-is-back-in-gold
 5. https://vijaykarnataka.indiatimes.com/vk-gallery/sports/neeraj-chopra-emulates-legendary-milkha-singh/neeraj-chopra-historical-gold-medal/photoshow/65577276.cms
 6. https://vijaykarnataka.indiatimes.com/sportshome/cricket/guinness-world-records-neeraj-chopra/articleshow/53366530.cms