ಹರಿಯಾಣಾ ಭಿವಾನಿ ಜಿಲ್ಲೆಯ ವಿಜೇಂದರ್ ಸಿಂಗ್ ಬೆನಿವಾಲ್, (29 ಅಕ್ಟೋಬರ್ 1985 ರಲ್ಲಿ ಜನನ) (ವಿಜೇಂದರ್ ಸಿಂಗ್:Vijender Singh) ಭಾರತದ ಓರ್ವ ವೃತ್ತಿಪರ ಬಾಕ್ಸರ್-ಕುಸ್ತಿಪಟು ಮತ್ತು ವಿಶ್ವ ಬಾಕ್ಷರ್ ಸಂಸ್ಥೆ s ಯಿಂದ ಪ್ರಸ್ತುತ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ಚಾಂಪಿಯನ್. [1] ಅವರು ಭಿವಾನಿ ಸ್ಥಳೀಯ ಕಾಲೇಜು ಪದವಿ ಪಡೆದ ನಂತರ ತಮ್ಮ ಗ್ರಾಮ, ಶಿಕ್ಷಣವನ್ನು ಪಡೆದರು. ಕೋಚ್ ಜಗದೀಶ್ ಸಿಂಗ್ ಇವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಬಾಕ್ಸಿಂಗ್ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಿದರು. ಭಿವಾನಿ ಬಾಕ್ಸಿಂಗ್ ಕ್ಲಬ್ ನಲ್ಲಿ ಭಾರತೀಯ ಬಾಕ್ಸಿಂಗ್ ಕೋಚ್ ಗುರುಭಕ್ಷ ಸಿಂಗ್ ಸಂಧು ಬಾಕ್ಸಿಂಗ್- ಕುಸ್ತಿಯಲ್ಲಿ ತರಬೇತಿಪಡೆದರು. [೧]
ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ವಿಜೇಂದರ್, ಹೆಚ್ಚಿನ ತರಬೇತಿ ಪಡೆದರು ಮತ್ತು 2004 ರ ಅಥೆನ್ಸ್ ಬೇಸಿಗೆ ಒಲಿಂಪಿಕ್ಸ್ ಮತ್ತು 2006 ರ ಕಾಮನ್ವೆಲ್ತ್ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಆಯ್ಕೆಯಾದರು. 2006 ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಕಝಕಿಸ್ತಾನ್ ನ ಭಕ್ತಿಯಾರ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಸೋತ ನಂತರ ಕಂಚಿನ ಪದಕ ಗೆದ್ದಿದ್ದಾರೆ. 2008 ರ ಬೀಜಿಂಗ್ ಬೇಸಿಗೆ ಒಲಿಂಪಿಕ್ಸ್, ಅವರು ಈಕ್ವೆಡಾರ್ ನ ಬಾಕ್ಸರ್ ಕಾರ್ಲೊಸ್ ಗೊಂಗೊರಾ ರನ್ನು ಕ್ವಾರ್ಟರ್ ಫೈನಲ್ಸ್ನಲ್ಲಿ 9-4 ಸೋಲಿಸಿ ಕಂಚಿನ ಪದಕ ಪಡೆದರುದರು; ಅದು ಅವರ ಮೊದಲ ಒಲಿಂಪಿಕ್ ಪದಕ.
ಈ ಗೆಲುವಿನ ನಂತರ ವಿಜೇಂದರ್‍ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ಮತ್ತು ಪದ್ಮಶ್ರೀ, ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಸೇರಿದಂತೆ ಪ್ರಶಸ್ತಿಗಳನ್ನು ನೀಡಲಾಯಿತು.[೨]
1985-2003: ಆರಂಭಿಕ ಜೀವನ ಮತ್ತು ಮುಷ್ಟಿಯುದ್ಧದಲ್ಲಿ ಪ್ರಗತಿ
ವಿಜೇಂದರ್ ಸಿಂಗ್ ಜಾಟ್ ಕುಟುಂಬ ದಲ್ಲಿ ಹರ್ಯಾಣದ ಭಿವಾನಿಯಿಂದ , 5 ಕಿಲೋಮೀಟರ್ ದೂರದ (3.1 ಮೈಲಿ) ಕಲುವಾಸ ಹಳ್ಳಿಯಲ್ಲಿ 29 ಅಕ್ಟೋಬರ್ 1985 ರಲ್ಲಿ ಜನಿಸಿದರು. . ಅವರ ತಂದೆ ಮಹಿಪಾಲ್ ಸಿಂಗ್ ಬೆನಿವಾಲ್, ತಾಯಿ ಗೃಹಿಣಿ. ತಂದೆ ಒಂದು ಹರಿಯಾಣ ರೋಡ್ವೇಸ್ ಬಸ್ ಚಾಲಕ ಅವರ ಹಿರಿಯ ಮಗ ಮನೋಜ್ . ಮತ್ತು ವಿಜೇಂದರ್ ಶಿಕ್ಷಣಕ್ಕೆ ಪಾವತಿಸಲು ಅವರ ತಂದೆ ಅಧಿಕ ವೇತನಕ್ಕೆ ಹೆಚ್ಚುವರಿ ಬಸ್ ಓಡಿಸುತ್ತಿದ್ದರು. ವಿಜೇಂದರ್ ಕಲವಾಸದಲ್ಲಿ ಪ್ರಾಥಮಿಕ ಮತ್ತು ಭಿವಾನಿಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷನ ಪಡೆದರು. ಮತ್ತು ಅಂತಿಮವಾಗಿ ವೈಶ್ಯ ಕಾಲೇಜಿನಿಂದ ಪದವಿ ಪಡೆದರು.
ತಮ್ಮ ಕುಟುಂಬಕ್ಕೆ ಉತ್ತಮ ಜೀವನ ಖಾತ್ರಿಗೊಳಿಸಲು ವಿಜೇಂದರ್ ಮತ್ತು ಅವರ ಹಿರಿಯ ಸಹೋದರ ಮನೋಜ್ ಬಾಕ್ಸಿಂಗ್ ಕಲಿಯಲು ನಿರ್ಧರಿಸಿದರು. ವಿಜೇಂದರ್ ಬಾಕ್ಸಿಂಗ್ ಕ್ರೀಡೆಯು ಸೇರಲು ತನ್ನ ಅಣ್ಣ ಮನೋಜ್, ಮಾಜಿ ಬಾಕ್ಸರ್ ಅವರೇ ಸ್ವತಃ ಸ್ಫೂರ್ತಿ. [9] ಮನೋಜ್ ತನ್ನ ಬಾಕ್ಸಿಂಗ್ ಪರಿಣತಿಯಿಂದ 1998 ರಲ್ಲಿ ಭಾರತೀಯ ಸೇನೆಯನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು ನಂತರ, ಅವರು ಆರ್ಥಿಕವಾಗಿ ಅನುಕೂಲವಾದ್ದರಿಂದ ವಿಜೇಂದರ್ ಗೆ ಬೆಂಬಲಿಸಲು ನಿರ್ಧರಿಸಿದರು. ಹೀಗೆ ಅವರು ಬಾಕ್ಸಿಂಗ್ ತರಬೇತಿಯಲ್ಲಿ ಮುಂದುವರೆಯಲು ಸಾಧ್ಯವಾಯಿತು. [೩][೪]
ಮಾ,13,2016:ಅಮೆರಿಕಾದ ಲಿವರ್ ಪೊಲ್ ನಲ್ಲಿ ನಡೆದ ಪ್ರೊ ಬಾಕ್ಸಿಂಗ್ ಲೀಗ್ನಲ್ಲಿ ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ಸತತ ನಾಲ್ಕನೇ ಗೆಲುವು ದಾಖಲಿಸಿದ್ದಾರೆ.
ವಿಜೇಂದರ್ ವೃತ್ತಿ ಜೀವನದ ನಾಲ್ಕನೇ ಹೋರಾಟದಲ್ಲಿ ಹಂಗೇರಿಯ ಅಲೆಕ್ಸಾಂಡರ್ ಹೊವಾರ್ತ್ ಅವರನ್ನು ಸೋಲಿಸಿದ್ದಾರೆ.ಪ್ರೊ ಬಾಕ್ಸಿಂಗ್ ಲೀಗ್ ನ ಆರು ಸುತ್ತಿನ ಸ್ಪರ್ಧೆಯಲ್ಲಿ ಕೇವಲ ಮೂರು ಸುತ್ತುಗಳಲ್ಲಿ ಅಲೆಕ್ಸಾಂಡರ್ ಹೊರ್ವಾತ್ ಅವರನ್ನು ಹೊಡೆದುರುಳಿಸಿದ್ದಾರೆ.ತಮಗೆ ಸಂದ ಈ ಗೆಲುವನ್ನು ಜಮ್ಮು ಕಾಶ್ಮೀರ ಹಾಗೂ ಪಠಾಣ್‌ಕೋಟ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅರ್ಪಿಸುವೆ’ ಎಂದು ಪಂದ್ಯದ ಬಳಿಕ ವಿಜೇಂದರ್ ತಿಳಿಸಿದ್ದಾರೆ.
ವಿಜೆಂದರ್ ಸಿಂಗ್ ಸೋಲಿಸಲು ಹಾವಿನ ರಕ್ತ ಕುಡಿದಿದ್ದ ಹೊರ್ವಾತ್
ವಿಜೇಂದರ್ ಸೀಂಗ್ ಅವರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟು ಹಾವಿನ ರಕ್ತ ಕುಡಿದು ಬಾಕ್ಸಿಂಗ್ ಲೀಗ್ ಆಡಲು ಬಂದಿದ್ದ ಬಾಕ್ಸರ್ ಅಲೆಕ್ಸಾಂಡರ್ ಹೊರ್ವಾತ್ ಅವರನ್ನು ಕೊನೆಗೂ ವಿಜೆಂದರ್ ಸಿಂಗ್ ವಿರುದ್ದ ಸೋತಿದ್ದಾರೆ.
ವಿಶ್ವವನ್ನೇ ಸೆಳೆದಿದ್ದ ಹೈವೋಲ್ಟೇಜ್ ನ ಈ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಅಲೆಕ್ಸಾಂಡರ್ ಮೇಲೆ ಪಂಚ್ ಮೇಲೆ ಪಂಚ್ ನೀಡಿ ಬೀಳಿಸಿದ್ದಾರೆ. ಈ ನಡುವೆ ಹಾವಿನ ರಕ್ತ ಶಕ್ತಿ ನೀಡುತ್ತದೆ.ಹೀಗಾಗಿ ಹಾವಿನ ರಕ್ತ ಕುಡಿದು ವಿಜೇಂದರ್ ಸಿಂಗ್ ಅವರನ್ನು ಸೋಲಿಸುತ್ತೇನೆ . ಭಾರತೀಯ ಬಾಕ್ಸರ್ ಸೋಲಿಸದಿದ್ದರೆ ಇನ್ಮುಂದೆ ಹಾವಿನ ರಕ್ತ ಕುಡಿಯಲ್ಲ ಎಂದು ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವಾರ್ತ್ ಶಪಥ ಮಾಡಿದ್ದರು.[೫]
ಲಂಡನ್‍ನಲ್ಲಿ ಸೂಪರ್ ಮಿಡ್ಲ್ವೇಟ್ ವಿಭಾಗದ ಪ್ರೋ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸತತ ಐದನೇ ಬಾರಿಎಗ್ ನಾಕೌಟ್ ಗೆಲುವು ಸಾಧಿಸಿದರು. ಫ್ರಾನ್ಸಿನ ಬಾಕ್ಸರ್ ಮಾಟಿಯಾಜ್ ರಾಯರ್ ವಿರುದ್ಧ ಶನಿವಾರ ನದೆದ ಪಂದ್ಯದಲ್ಲಿ ವಿಜೇಂದರ್ ನಿರೀಕ್ಷಿತವಾಗಿ ಸುಲಭ ಜಯ ದಾಖಲಿಸಿದರು,[೬]
ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್ವೇಟ್ ಪ್ರಶಸ್ತಿ (ಡಬ್ಲ್ಯುಬಿಒ)
ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್ನ (ಡಬ್ಲ್ಯುಬಿಒ) ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್ವೇಟ್ ಪ್ರಶಸ್ತಿ ಗೆದ್ದಿದ್ದಾರೆ. ಮಾಜಿ ಡಬ್ಲ್ಯುಬಿಸಿ ಯುರೋಪಿಯನ್ ಚಾಂಪಿಯನ್ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಶನಿವಾರ ನಡೆದ ಪಂದ್ಯದಲ್ಲಿ ಸೋಲಿಸಿ ವೃತ್ತಿ ಪರ ಬಾಕ್ಸಿಂಗ್ ನಲ್ಲಿ ವಿಜೇಂದರ್ ಅವರು ತಮ್ಮ ಮೊದಲ ಪ್ರಶಸ್ತಿಪಡೆದರು.. ಸತತ ಏಳನೇ ಗೆಲುವು ಅದರಲ್ಲೂ ನಾಲ್ಕು ನಾಕೌಟ್ ಗೆಲುವಿನ ಸರದಾರ ಎನಿಸಿದ್ದಾರೆ. 'ಇದು ನನ್ನ ಗೆಲವಲ್ಲ, ದೇಶದ ಗೆಲುವು, ಅಭಿಮಾನಿಗಳು, ಪ್ರೇಕ್ಷಕರು, ಇತರೆ ಕ್ರೀಡಾಪಟುಗಳು ನನಗೆ ನೀಡಿದ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು 30 ವರ್ಷ ವಯಸ್ಸಿನ ವಿಜೇಂದರ್ ಸಿಂಗ್ ಅವರು ಪಂದ್ಯ ನಂತರ ಹೇಳಿದರು.[೭]
ವಿಜೇಂದರ್ ಕಣ್ಣಿನಲ್ಲಿ ನಾನು ಭಯವನ್ನು ನೋಡಿದ್ದೇನೆ, ಬಾಕ್ಸರ್ ಕೆರ್ರಿ, ಪ್ರೋಫೆಷನಲ್ ಬಾಕ್ಸರ್ಸ್ ಹೇಗಿರುತ್ತಾರೆ ಅನ್ನೋದನ್ನ ನಾನು ಅವರಿಗೆ ತೋರಿಸುತ್ತೇನೆ, ರಿಂಗ್ ನಲ್ಲಿ ಹೆಚ್ಚು ಸಮಯ ಅವರನ್ನು ಉಳಿಯೋದಕ್ಕೆ ಬಿಡೋದಿಲ್ಲ, ವಿಜೇಂದರ್ ಅಭಿಮಾನಿಗಳಿಗೆ ಜುಲೈ 16 ರಂದು ನಿರಾಸೆ ಕಾದಿದೆ ಅಂತ ಹೇಳಿಕೊಂಡಿದ್ದರು.[೮]
ಡಬ್ಲ್ಯುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿ ಬಾಕ್ಸಿಂಗ್ ೨೦೧೬
ನವದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಅವರು 39–37, 37–38, 39–37ರಿಂದ ಫ್ರಾನ್ಸಿಸ್ ಅವರನ್ನು ಮಣ್ಣುಮುಕ್ಕಿಸ, ಡಬ್ಲ್ಯುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿಯನ್ನು ಉಳಿಸಿಕೊಂಡರು.ಹೋದ ಜುಲೈನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ಅವರನ್ನು ಮಣಿಸಿದ್ದ ವಿಜೇಂದರ್ ಪ್ರಶಸ್ತಿ ಗೆದ್ದಿದ್ದರು. ಈ ವಿಭಾಗದಲ್ಲಿ ಇದುವರೆಗೆ ಅಜೇಯರಾಗುಳಿದಿರುವ ವಿಜೇಂದರ್ ಅವರಿಗೆ ಇದು ಎಂಟನೆ ಜಯ. ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿಯೇ ಅವರು 34 ವರ್ಷದ ಫ್ರಾನ್ಸಿಸ್ ಅವರನ್ನು ಸೋಲಿಸಿದರು.ಹತ್ತು ಸುತ್ತುಗಳಲ್ಲಿ ನಡೆಯಬೇಕಿದ್ದ ಪಂದ್ಯದ ಫಲಿತಾಂಶವು ಮೂರೇ ಸುತ್ತುಗಳಲ್ಲಿ ನಿರ್ಣಯವಾಯಿತು. ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಸೋತು ತಲೆತಗ್ಗಿಸಿದರು. ಫ್ರಾನ್ಸಿಸ್, 'ಶನಿವಾರ ರಾತ್ರಿ ಅವರನ್ನು ಎದುರಿಸಿದಾಗ ನಿಜವಾದ ಬಾಕ್ಸಿಂಗ್ ಅಂದರೆ ಏನು ಎಂದು ತೋರಿಸುತ್ತೇನೆ. ಭಾರತಕ್ಕೆ ಮುಖಭಂಗ ಮಾಡುತ್ತೇನೆ’ ಎಂದು ಈಚೆಗೆ ಸವಾಲು ಹಾಕಿದ್ದರು.ಆದರೆ, ವಿಜೇಂದರ್ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಅನುಭವಿ ಬಾಕ್ಸರ್ ಸ್ಫ್ರಾನ್ಸಿಸ್ ಸೋಲಿಲ್ಲದ ಏಳು ವಿಜಯ ಸಾಧಿಸಿದ್ದರು; ಹಾಗೆಯೇ ವಿಜೇಂದರ್ ತಮ್ಮ ಎಂಟನೇ ವಿಯಕ್ಕಾಗಿ ಕಾದಿದ್ದರು.[೯]
Vijender Singh has a lot at stake at the Thyagaraj Stadium ring in New Delhi when he takes on veteran Tanzanian boxer Francis Cheka tonight. Undefeated in seven professional bouts so far, the Indian will look for his eighth victory and second at home. (HT Photo) [[೧]]