ನಿತೇಂದ್ರ ಸಿಂಗ್ ರಾವತ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ನಿತೇಂದ್ರ ಸಿಂಗ್ ರಾವತ್

ನಿತೇಂದ್ರ ಸಿಂಗ್ ರಾವತ್ (ಜನನ: ೨೯ ಸೆಪ್ಟೆಂಬರ್ ೧೯೮೬) ಒಬ್ಬ ಭಾರತೀಯ ಮ್ಯಾರಥಾನ್ ಓಟಗಾರ. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಾರೆ[೧]. ರಿಯೊ ಡಿ ಜನೈರೊನಲ್ಲಿ ನೆಡೆಯುತ್ತಿರುವ  ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪುರುಷರ ಮ್ಯಾರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ [೨].

ವೃತ್ತಿ[ಬದಲಾಯಿಸಿ]

೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ  ಭಾರತದ ಪುರಷರ ವಿಭಾಗದಲ್ಲಿ ೦೨:೧೫:೪೮ ಸೆಕೆಂಡು ಗಳಲ್ಲಿ ಮುಗಿಸಿ ನಿತೇಂದ್ರ ಸಿಂಗ್ ರಾವತ್( ಒಟ್ಟಾರೆ ೧೦) ಮೊದಲನೇ ಸ್ಥಾನ ಪಡೆದರು ಹಾಗೂ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು, ತೊನ್ನಕ್ಕಲ್ ಗೋಪಿ ಮತ್ತು ಕೇತಾರಾಮ್ ೦೨:೧೬:೫೯ ಸೆಕೆಂಡುಗಳಲ್ಲಿ ಮುಗಿಸಿ, ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು[೩]. ೨೦೧೬ರಲ್ಲಿ ನೆಡೆದ ಪ್ರತಿಷ್ಠಿತ ವಿಶ್ವ ೧೦ಕೆ ಬೆಂಗಳೂರು ಓಟದ ಒಂಬತ್ತನೆ ಆವೃತ್ತಿಯಲ್ಲಿ, ಭಾರತೀಯ ಪುರಷರ ನಿತೇಂದ್ರ ಸಿಂಗ್ ರಾವತ್ ತೃತೀಯ ಸ್ಥಾನ ಪಡೆದಿದ್ದರು[೪].

ಉಲ್ಲೇಖಗಳು[ಬದಲಾಯಿಸಿ]

  1. ನಿತೇಂದ್ರ ಸಿಂಗ್‌ ರಾವತ್‌‌‌ ಭಾರತೀಯ ಸೇನೆಯ ಉದ್ಯೋಗದಲ್ಲಿದ್ದಾರೆ ಎಂದು ಒನ್ ಇಂಡಿಯಾ ದಲ್ಲಿ[permanent dead link] ೧೮ ಮೇ ೨೦೧೪ ರಲ್ಲಿ ಬಂದ ವರದಿ.
  2. "Nitendra Singh". rio2016.com. Retrieved 11 August 2016.
  3. ೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ ಮೊದಲನೇ ಸ್ಥಾನ ಪಡೆದು ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಬಗ್ಗೆ ಜನವರಿ ೧೭ ೨೦೧೬ ರಂದು ವಾರ್ತಾ ಭಾರತಿಯಲ್ಲಿ ಬಂದ ವರದಿ.
  4. ೨೦೧೬ ರ ೧೦ಕೆ ಬೆಂಗಳೂರು ಓಟದ ಬಗ್ಗೆ ಸಂಜೆ ವಾಣಿ Archived 2016-07-11 at the Wayback Machine. ಬಗ್ಗೆ ಮೇ ೧೫ ೨೦೧೬ರಂದು ಬಂದ ವರದಿ.