ಮ್ಯಾರಥಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೦೭ ಬರ್ಲಿನ್ ಮ್ಯಾರಥಾನ್ ಸಂದರ್ಭದಲ್ಲಿನ ಸ್ಪರ್ಧಾಳುಗಳು
೧೯೯೦ ಲಂಡನ್ ಮ್ಯಾರಥಾನ್ ಸಂದರ್ಭದಲ್ಲಿನ ಸ್ಪರ್ಧಾಳುಗಳು

ಮ್ಯಾರಥಾನ್ ಎನ್ನುವುದು ದೂರ ಅಂತರದ ಓಡುವಿಕೆಯ ಸ್ಪರ್ಧೆಯಾಗಿದ್ದು, ಇದು ಅಧಿಕೃತವಾಗಿ 42.195 ಕಿಲೋಮೀಟರುಗಳು (26 ಮೈಲುಗಳನ್ನು ಮತ್ತು 385 ಯಾರ್ಡ್‌ಗಳ) ದೂರವನ್ನು ಒಳಗೊಂಡಿರುತ್ತದೆ ಮತ್ತು ಅದು ಸಾಮಾನ್ಯವಾಗಿ ರಸ್ತೆ ಓಟವಾಗಿರುತ್ತದೆ. ಈ ಆಟವನ್ನು ಮ್ಯಾರಥಾನ್ ಯುದ್ಧ (ಓಟದ ಹೆಸರಿನದು) ದಿಂದ ಅಥೆನ್ಸ್ನವರೆಗೆ ಸುದ್ದಿವಾಹಕನಾದ ಗ್ರೀಕ್ ಸೈನಿಕ ಫೀಡಿಪ್ಪಿಡೆಸ್‌ನ ಪುರಾಣಕಥೆಯ ಓಟದ ನೆನಪಿಗಾಗಿ ಪ್ರಾರಂಭಿಸಲಾಯಿತು. ಈ ಪ್ರಸಿದ್ಧ ವ್ಯಕ್ತಿಯ ಐತಿಹಾಸಿಕ ನಿಖರತೆಯು ನಿರ್ದಿಷ್ಟವಾಗಿ ಹೆರೋಡೋಟಸ್ ನೀಡಿರುವ ವಿವರಗಳಿಗೆ ಹೋಲಿಸಿದರೆ ಅನುಮಾನಾಸ್ಪದ [೧] ಮತ್ತು ಪರಸ್ಪರ ವಿರುದ್ಧವಾಗಿದೆ.[೨]

1896 ರ ಆಧುನಿಕ ಒಲಿಂಪಿಕ್ನಲ್ಲಿ ಮ್ಯಾರಥಾನ್ ಒಂದು ಸ್ಪರ್ಧೆಯಾಗಿತ್ತು, ಆದರೆ 1921 ರವರೆಗೆ ಅಂತರವು ನಿಗದಿಯಾಗಿರಲಿಲ್ಲ. ಪ್ರತಿವರ್ಷ 500 ಮ್ಯಾರಥಾನ್ ಪಟುಗಳು ವಿಶ್ವದಾದ್ಯಂತ ಸ್ಪರ್ಧಿಸುತ್ತಾರೆ, ಅವರಲ್ಲಿ ಬಹುಪಾಲು ಸ್ಪರ್ಧಿಗಳು ವಿಹಾರದ ಕ್ರೀಡಾಪಟುಗಳಾಗಿರುತ್ತಾರೆ. ದೊಡ್ಡ ಮ್ಯಾರಥಾನ್‌ಗಳು ಸಾವಿರಾರು ಭಾಗವಹಿಸುವವರನ್ನು ಒಳಗೊಂಡಿರಬಹುದು.[೩]

ಹುಟ್ಟು[ಬದಲಾಯಿಸಿ]

ಬ್ಯಾಟಲ್ ಆಫ್ ಮ್ಯಾರಥಾನ್‌ನಲ್ಲಿ ಅಥೆನ್ಸ್‌ನ ಜನರಿಗೆ ಫೀಡಿಪ್ಪಿಡೆಸ್ ಅವರು ವಿಜಯದ ಸಂಕೇತವನ್ನು ತೋರಿಸುವುದನ್ನು ಪ್ರತಿಬಿಂಬಿಸುವ ಕಲಾಚಿತ್ರ

ಮ್ಯಾರಥಾನ್ ಎಂಬ ಹೆಸರು ಗ್ರೀಕ್ನ ಸಂದೇಶವಾಹಕನಾದ ಚಾರಿತ್ರಕ ವ್ಯಕ್ತಿಯಾದ ಫೀಡಿಪ್ಪಿಡೆಸ್ ಅವರಿಂದ ಬಂದಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ 490 ಬಿಸಿ ಯಲ್ಲಿ ಜರುಗಿದ ಮ್ಯಾರಥಾನ್ ಯುದ್ಧ ದಲ್ಲಿ (ಅದರಲ್ಲಿ ಅವರು ಹೋರಾಡಿದ್ದನು),[೪] ಪರ್ಷಿಯನ್ನರು ಸೋತರು ಎಂದು ಘೋಷಿಸಲು ಮ್ಯಾರಥಾನ್ ಯುದ್ಧಭೂಮಿಯಿಂದ ತನ್ನನ್ನು ಕಳುಹಿಸಲಾಗಿತ್ತು ಎಂದು ಈ ಚಾರಿತ್ರಕ ವ್ಯಕ್ತಿ ತಿಳಿಸಿದ್ದಾನೆ.[೫] ಇವನ್ನು ಸಂಪೂರ್ಣ ದೂರವನ್ನು ಎಲ್ಲಿಯೂ ನಿಲ್ಲದೆಯೇ ನಿರಂತರವಾಗಿ ಓಡಿದನೆಂದು ಹಾಗೂ ನೇರವಾಗಿ ಸೇನಾಸಭೆಯೊಳಗೆ ಪ್ರವೇಶಿಸಿ "Νενικήκαμεν" (ನೇನಿಕೆಕಾಮೆನ್, 'ನಾವು ಗೆದ್ದೆವು.') ಎಂದು ಉದ್ಗರಿಸುತ್ತಾ, ಅಲ್ಲಿಯೇ ಕುಸಿದು ಸಾವನ್ನಪ್ಪಿದನೆಂದು ಹೇಳಲಾಗಿದೆ.[೬] ಮ್ಯಾರಥಾನ್‌ನಿಂದ ಅಥನ್ಸ್‌ವರೆಗಿನ ಓಟದ ಪರಿಗಣನೆಯು ಮೊದಲ ಶತಮಾನ AD ಯಲ್ಲಿ ಫ್ಲುಟಾರ್ಚ್ ಅವರ ಆನ್ ದಿ ಗ್ಲೋರಿ ಆಫ್ ಅಥೆನ್ಸ್ ನಲ್ಲಿ ಕಂಡುಬರುತ್ತದೆ, ಅದು ಹೆರಾಕ್ಲೈಡೆಸ್ ಪಾಂಟಿಕಸ್ ಅವರ ಅಂತಿಮ ಕೃತಿಯಿಂದ ಉಲ್ಲೇಖಿಸಿ, ಓಟಗಾರನ ಹೆಸರನ್ನು ಥೆರ್ಸಿಪಸ್ ಆಫ್ ಎರ್ಕಿಯಸ್ ಅಥವಾ ಯೂಕ್ಲೆಸ್ ಎಂದು ಹೆಸರಿಸಿದೆ.[೭] ಲೂಸಿಯನ್ ಆಫ್ ಸಮೋಸಾಟಾ (2ನೇ ಶತಮಾನ ಎಡಿ) ಕಥೆಯನ್ನು ನೀಡುತ್ತದೆ ಆದರೆ ಓಟಗಾರರನ್ನು ಫಿಲಿಪ್ಪಿಡೆಸ್ ಎಂದು (ಫೀಡಿಪ್ಪಿಡಿಸ್ ಅಲ್ಲ) ಎಂದು ಹೆಸರಿಸಿದೆ.[೮]

ಈ ಚಾರಿತ್ರಿಕ ವ್ಯಕ್ತಿಯ ಐತಿಹಾಸಿಕ ನಿಖರತೆಯ ಬಗ್ಗೆ ಇನ್ನು ಚರ್ಚೆಯಿದೆ.[೧][೯] ಗ್ರೀಕೋ-ಪರ್ಷಿಯನ್ ಯುದ್ಧಗಳ ಮುಖ್ಯ ಮೂಲವಾದ ಗ್ರೀಕ್ ಇತಿಹಾಸತಜ್ಞ ಹೆರೊಡೋಟಸ್ ಅವರು ಫೀಡಿಪ್ಪಿಡೆಸ್‌ನನ್ನು ಸಹಾಯಕ್ಕಾಗಿ ಅಥೆನ್ಸ್ನಿಂದ ಸ್ಪಾರ್ಟಾಗೆ ಓಡಿ ಮರಳಿ ಓಡಿ ಬಂದು ಪ್ರತಿ ಬಾರಿ 240 kilometres (150 mi)*[೧೦] ಕ್ಕೂ ಹೆಚ್ಚು ಅಂತರವನ್ನು ಕ್ರಮಿಸಿದ ಸಂದೇಶವಾಹಕನೆಂದು ಉಲ್ಲೇಖಿಸುತ್ತದೆ.[೧೧] ಕೆಲವು ಹೆರೋಡೋಟಸ್ ಹಸ್ತಪ್ರತಿಗಳಲ್ಲಿ ಅಥೆನ್ಸ್ ಮತ್ತು ಸ್ಪಾರ್ಟಾ ನಡುವೆ ಓಡಿದ ಓಟಗಾರನ ಹೆಸರನ್ನು ಫೀಲಿಪ್ಪಿಡೆಸ್ ಎಂದು ಹೆಸರಿಸಲಾಗಿದೆ. ಮ್ಯಾರಥಾನ್‌ನಿಂದ ಅಥೆನ್ಸ್‌ಗೆ ಕಳುಹಿಸಿದ ಸಂದೇಶವಾಹಕನ ಹೆಸರನ್ನು ಹೆರೋಡೋಟಸ್ ನಮೂದಿಸುವುದಿಲ್ಲ ಮತ್ತು ಆಗಲೇ ಉಗ್ರವಾದ ಯುದ್ಧದಲ್ಲಿ ಹೋರಾಡಿ ಗೆದ್ದ ಅಥೆನಿಯನ್ ಸೈನ್ಯದ ಮುಖ್ಯ ಭಾಗವು, ಸಂರಕ್ಷಿತವಲ್ಲದ ಅಥೆನ್ಸ್ ಮೇಲೆ ಪರ್ಷಿಯನ್ ಸೈನ್ಯದ ನೌಕಾ ಆಕ್ರಮಣಕ್ಕೆ ಹೆದರಿ, ತ್ವರಿತವಾಗಿ ರಣರಂಗದಿಂದ ಅಥೆನ್ಸ್‌ಗೆ ಅದೇ ದಿನ ಮರಳಿ ಬಂದಿತು ಎಂಬುದಾಗಿ ಸಂಗತಿಯನ್ನು ನಿರೂಪಿಸುತ್ತಾನೆ.

1879 ರಲ್ಲಿ, ರೋಬರ್ಟ್ ಬ್ರೌನಿಂಗ್ ಅವರು ಫೀಡಿಪ್ಪಿಡೆಸ್ ಕವಿತೆಯನ್ನು ಬರೆಯುತ್ತಾರೆ. ಬ್ರೌನಿಂಗ್ ಅವರ ಸಂಯುಕ್ತ ಕಥೆಯು, ಹಿಂದಿನ 19 ನೇ ಶತಮಾನದ ಜನಪ್ರಿಯ ಸಂಸ್ಕೃತಿಯ ಭಾಗವಾಗುತ್ತದೆ ಮತ್ತು ಅವರನ್ನು ಐತಿಹಾಸಿಕ ವ್ಯಕ್ತಿಯಾಗಿ ಸ್ವೀಕರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮಾರ್ಗ[ಬದಲಾಯಿಸಿ]

ಮ್ಯಾರಥಾನ್ ಮತ್ತು ಅಥೆನ್ಸ್ ನಡುವೆ ಪೆಂಟೆಲಿ ಬೆಟ್ಟ ನೆಲೆಸಿದೆ, ಅದರರ್ಥ ಒಂದು ವೇಳೆ ಯುದ್ಧದ ನಂತರ ಫೀಡಿಪ್ಪಿಡೆಸ್ ತನ್ನ ಪ್ರಸಿದ್ಧ ಓಟವನ್ನು ಮಾಡಿದ್ದರೆ, ಅವನು ಬೆಟ್ಟದ ಸುತ್ತಲೂ, ಒಂದೇ ಉತ್ತರದಿಂದ ಇಲ್ಲವೇ ದಕ್ಷಿಣದಿಂದ ಓಡಬೇಕಾಗುತ್ತಿತ್ತು. ನಂತರದ ಮತ್ತು ಹೆಚ್ಚು ಸ್ಪಷ್ಟವಾದ ಮಾರ್ಗವು ಆಧುನಿಕ ಮ್ಯಾರಥಾನ್-ಅಥೆನ್ಸ್ ಹೆದ್ದಾರಿಯನ್ನು ಸರಿಸುಮಾರು ನಿಖರವಾಗಿ ಹೋಲುತ್ತದೆ, ಅದು ಮ್ಯಾರಥಾನ್ ಕೊಲ್ಲಿಯಿಂದ ಸಮುದ್ರತೀರದಾದ್ಯಂತ ಭೂಭಾಗದ ಪ್ರದೇಶವನ್ನು ತದನಂತರ ಹೈಮೆಟ್ಟಸ್ ಮತ್ತು ಪೆಂಟೆಲಿ ಬೆಟ್ಟದ ತಪ್ಪಲಿನ ನಡುವಿನ ಅಥೆನ್ಸ್‌ನತ್ತ ಪೂರ್ವದತ್ತ ಸೌಮ್ಯವಾದ ಆದರೆ ದೀರ್ಘ ಬೆಟ್ಟದ ಏರು ಮಾರ್ಗವನ್ನು, ತದನಂತರ ನಿಜವಾದ ಅಥೆನ್ಸ್‌ಗೆ ಕಠಿಣವಲ್ಲದ ಇಳಿಹಾದಿಯನ್ನು ಅನುಸರಿಸುತ್ತದೆ. ಮಾರ್ಗವು ಸರಿಸುಮಾರು 42 kilometres (26 mi)* ಅಂತರವಿದೆ ಮತ್ತು ಆಧುನಿಕ ಕಾಲದಲ್ಲಿ ಓಡುವ ಅಂತರದ ಮಾನದಂಡವನ್ನು ಹೊಂದಿಸುತ್ತದೆ. ಆದರೆ ಫೀಡಿಪ್ಪಿಡೆಸ್ ಬೇರೊಂದು ಮಾರ್ಗವನ್ನು ಅನುಸರಿಸಬಹುದು ಎಂಬ ಬಗ್ಗೆಯೂ ಸಲಹೆಗಳಿವೆ: ಪೆಂಟೆಲಿ ಬೆಟ್ಟದ ಪೂರ್ವ ಮತ್ತು ಉತ್ತರದ ಇಳಿಜಾರಿನಲ್ಲಿ ಡಿಯೋನೈಸೋಸ್ ದಾಟಲು ಪಶ್ಚಿಮದ ಆರೋಹಣ, ತದನಂತರ ಅಥೆನ್ಸ್‌ಗೆ ದಕ್ಷಿಣಾಭಿಮುಖವಾಗಿ ಇಳಿಜಾರಿನಲ್ಲಿ ನೇರ ಹಾದಿ. ಈ ಮಾರ್ಗವು ಗಮನಾರ್ಹವಾಗಿ ಹತ್ತಿರವಾಗಿದ್ದು, ಕೆಲವು 35 kilometres (22 mi)*, ಆದರೆ ಲಕ್ಷಣಗಳು 5 kilometres (3.1 mi)* ಗಿಂತ ಕಡಿದಾದ ಆರೋಹಣವಾಗಿದೆ.

694039

ಅಂತರ.[ಬದಲಾಯಿಸಿ]

align="center" colspan=3 style="border-top:1px solid blue; border-right:1px solid blue; border-bottom:1px solid blue; border-left:1px solid blue;" ಒಲಂಪಿಕ್ ಮ್ಯಾರಥಾನ್ ಅಂತರಗಳು
ವರ್ಷ ಅಂತರ
(ಕಿ.ಮೀ ಗಳಲ್ಲಿ)
ಅಂತರ
ಮೈಲಿಗಳಲ್ಲಿ
1896 40 24.85
1900 40.26 [25] ^ [24]
1904 40 24.85
1906 41.86 26.01
1908 42.195 26.22
1912 40.2 24.98
1920 42.75 26.56
1924 ನಂತರ 42.195 26.22

ಎಲ್ಲಾ ಸ್ಪರ್ಧಿಗಳು ಒಂದೇ ಮಾರ್ಗವನ್ನು ಪೂರ್ಣಗೊಳಿಸುವುದು ಪ್ರಮುಖವಾದ್ದರಿಂದ ಮೊದಲಿಗೆ ಮ್ಯಾರಥಾನ್‌ನ ದೂರವನ್ನು ನಿಗದಿಪಡಿಸಿರಲಿಲ್ಲ. ಮೊದಲಿನ ಕೆಲವು ಒಲಂಪಿಕ್ ಆಟಗಳಲ್ಲಿ ಮ್ಯಾರಥಾನ್ ಓಟದ ದೂರವನ್ನು ನಿಗದಿಪಡಿಸಿರಲಿಲ್ಲ, ಆದರೆ ಅದು ಸುಮಾರು 40 kilometres (25 mi)*,[೧೨] ಇತ್ತು, ಇದು ಬಹುಪಾಲು ದೂರದ, ಸಮಾಂತರ ಮಾರ್ಗದಲ್ಲಿ ಮ್ಯಾರಥಾನ್‌ನಿಂದ ಅಥೆನ್ಸ್‌ವರೆಗಿನ ದೂರವಾಗಿತ್ತು. ಪ್ರತಿ ಸ್ಥಳಕ್ಕೆ ರೂಪಿಸಿದ ಮಾರ್ಗವನ್ನು ಆಧರಿಸಿ ಒಲಂಪಿಕ್ ಮ್ಯಾರಥಾನ್‌ನ ನಿಖರವಾದ ದೂರವು ವಿಭಿನ್ನವಾಗಿತ್ತು.

ಮೇ 1921[೧೩][೧೪] ರಲ್ಲಿ ಇಂಟರ್‌ನ್ಯಾಷನಲ್ ಅಮೇಚುರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ಮ್ಯಾರಥಾನ್ ಓಟದ ಪ್ರಮಾಣಕ ದೂರವಾಗಿ 42.195 ಕಿಲೋಮೀಟರುಗಳು (26 ಮೈಲುಗಳು 385 ಯಾರ್ಡ್) ಎಂದು ನಿಗದಿಪಡಿಸಲಾಯಿತು. ಈ ದೂರದ ಮೆಟ್ರಿಕ್ ಆವೃತ್ತಿಯನ್ನು ಸ್ಪರ್ಧೆಯ ನಿಯಮಗಳ ನಿಯಮ 240 ನಿರ್ದಿಷ್ಟಪಡಿಸುತ್ತದೆ.[೧೫] ಲಂಡನ್ನಲ್ಲಿನ 1908 ಬೇಸಿಗೆ ಒಲಂಪಿಕ್ಸ್ನಲ್ಲಿ ಈ ರೂಪದಲ್ಲಿ ಅನಿರ್ಬಂಧಿತವಾದ ದೂರವನ್ನು ಜಾರಿಗೆ ತರಲಾಯಿತು. ಮೇ 1907 ರಲ್ಲಿ ಹೇಗ್ನಲ್ಲಿ ಜರುಗಿದ ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯ ಸಭೆಯಲ್ಲಿ 1908 ರ ಒಲಂಪಿಕ್ ಕ್ರೀಡಾಕೂಟವು ಸುಮಾರು 25 ಮೈಲುಗಳು ಅಥವಾ 40 ಕಿಲೋಮೀಟರುಗಳ ಮ್ಯಾರಥಾನ್ ಅನ್ನು ಒಳಗೊಂಡಿರುತ್ತದೆ ಎಂದು ಬ್ರಿಟಿಷ್ ಒಲಂಪಿಕ್ ಅಸೋಸಿಯೇಶನ್ ನೊಡನೆ ಒಪ್ಪಲಾಯಿತು. ಈ ದೂರದ ಬಗ್ಗೆ ಮಾರ್ಗವಾದ ವಿಂಡ್ಸರ್ ಕ್ಯಾಸ್ಟಲ್ ನಿಂದ ಪ್ರಾರಂಭವಾಗಿ ಲಂಡನ್‌ನ ಶೆಫರ್ಡ್ ಬುಷ್ನಲ್ಲಿನ ಒಲಂಪಿಕ್ ಕ್ರೀಡಾಂಗಣವಾದ ಗ್ರೇಟ್ ವೈಟ್ ಸಿಟಿ ಸ್ಟೇಡಿಯಂನಲ್ಲಿ ಮುಗಿಯುವುದೆಂದು ನವೆಂಬರ್ 1907 ರಂದು ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು.[೧೬] ಅಂತಿಮ ಕೆಲವು ಮೈಲುಗಳು ಟ್ರಾಮ್-ಸಾಲುಗಳು ಮತ್ತು ಸಮೆಗಲ್ಲುಗಳನ್ನು ಹೊಂದಿರುವ ಕಾರಣದಿಂದಾಗಿ ಈ ಕುರಿತಂತೆ ಪ್ರತಿಭಟನೆಗಳಾದವು, ಆದ್ದರಿಂದ ಮಾರ್ಗವು ವರ್ಮ್‌ವುಡ್ ಕುರುಚಲು ಪ್ರದೇಶದ ಒರಟಾದ ಬಯಲನ್ನು ದಾಟುವಂತೆ ಮಾರ್ಪಡಿಸಲಾಯಿತು. ಪ್ರಾರಂಭವನ್ನು 700 yards (640 m) ಕ್ವೀನ್ ವಿಕ್ಟೋರಿಯಾಳ ವಿಗ್ರಹದ ವಿಂಡ್ಸರ್ ಕ್ಯಾಸ್ಟಲ್ದಿಂದು ಮಾಡಲು ಉದ್ದೇಶಿಸಿದ್ದರಿಂದ ಇದು ದೂರವನ್ನು ಹೆಚ್ಚಾಗಿಸಿತು, ಮತ್ತು ದೂರವನ್ನು ಸ್ಟೇಡಿಯಂಗೆ 26 miles (42 km) ರಲ್ಲಿ , ಜೊತೆಗೆ ಮ್ಯಾರಥಾನ್ ಸುರಂಗವಾಗಿ ರಾಯಲ್ ಎಂಟ್ರಾನ್ಸ್ ಅನ್ನು ಬಳಸುವ ಮೂಲಕ ಮಾರ್ಗದ ಸುತ್ತನ್ನು (586 ಯಾರ್ಡ್‌ಗಳು, 2 ಅಡಿ), ಮತ್ತು ರಾಯಲ್ ಬಾಕ್ಸ್ ಎದುರಿಗೆ ಅಂತಿಮಗೊಳಿಸುವಂತೆ ನಿಗದಿಪಡಿಸಲು ನಿರ್ಧರಿಸಲಾಯಿತು. 25 ನೇ ಏಪ್ರಿಲ್ 1908 ರಂದು ಪಾಲಿಟೆಕ್ನಿಕ್ ಹ್ಯಾರಿಯರ್ಸ್ ಆಯೋಜಿಸಿದ ಅಧಿಕೃತ ಟ್ರಯಲ್ ಮ್ಯಾರಥಾನ್‌ಗೆ, ಪ್ರಾರಂಭವು ವಿಂಡ್ಸರ್ ಗ್ರೇಟ್ ಪಾರ್ಕ್ನ ಪ್ರದೇಶದಲ್ಲಿರುವ ವಿಂಡ್ಸರ್ ಕ್ಯಾಸ್ಟಲ್‌ಗೆ ತೆರಳುವ ಮನಮೋಹಕ ಮಾರ್ಗವಾದ ‘ದಿ ಲಾಂಗ್ ವಾಕ್’ ನಲ್ಲಿ ಆಗಿತ್ತು. ಒಲಂಪಿಕ್ ಮ್ಯಾರಥಾನ್‌ಗೂ ಸಹ ಪ್ರಾರಂಭವು ಸಾರ್ವಜನಿಕರು ಪ್ರಾರಂಭದಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವಂತೆ ಕಿಂಗ್ ಎಡ್ವರ್ಡ್ VII ಅವರ ಅನುಮತಿಯೊಂದಿಗೆ ವಿಂಡ್ಸರ್ ಕ್ಯಾಸ್ಟಲ್ನ ಖಾಸಗಿ ಪೂರ್ವದ ಎತ್ತರಿಸಿದ ಪ್ರದೇಶದ ಮೇಲಾಗಿತ್ತು.[೧೬] ಓಟದ ಪ್ರಾರಂಭವನ್ನು ವೀಕ್ಷಿಸಲು ವೇಲ್ಸ್‌ನ ರಾಣಿಯವರು ತಮ್ಮ ಮಕ್ಕಳೊಂದಿಗೆ ಫ್ರೋಗ್ಮೋರ್ನಲ್ಲಿನ ತಮ್ಮ ಮನೆಯಿಂದ ವಿಂಡ್ಸರ್ ಗ್ರೇಟ್ ಪಾರ್ಕ್‌ಗೆ ಆಗಮಿಸಿದ್ದರು.[೧೬][೧೭] ಕ್ರೀಡಾಕೂಟವು ಪ್ರಾರಂಭವಾದ ಕೆಲವೇ ಕ್ಷಣಗಳ ಮೊದಲು ರಾಯಲ್ ಎಂಟ್ರಾನ್ಸ್ ಅನ್ನು ಮ್ಯಾರಥಾನ್ ಪ್ರವೇಶವಾಗಿ ಬಳಸಲಾಗುವುದಿಲ್ಲ ಎಂಬುದು ತಿಳಿಯಲ್ಪಟ್ಟಿತು - ಅದನ್ನು ರಾಜನ ಕುಟುಂಬದವರು ಅವರ ಕುದುರೆ ಗಾಡಿಯಿಂದ ಸುಲಭವಾಗಿ ಇಳಿಯುವದಕ್ಕಾಗಿ ನಿರ್ಮಿಸಲಾಗಿದ್ದಿತು, ಮತ್ತು ಮಾರ್ಗಕ್ಕೆ ತೆರೆಯಲ್ಪಟ್ಟಿರಲಿಲ್ಲ- ಆದ್ದರಿಂದ ರಾಯಲ್ ಬಾಕ್ಸ್‌ಗೆ ಕರ್ಣೀಯವಾಗಿ ಎದುರು ಪರ್ಯಾಯ ಪ್ರವೇಶವನ್ನು ಆಯ್ಕೆಮಾಡಲಾಯಿತು. ಕ್ರೀಡಾಂಗಣಕ್ಕೆ ದೂರವು 26 ಮೈಲುಗಳು ಇರುವ ಹಾಗೆಯೇ ಫ್ರಾಂಕೋ ಬ್ರಿಟಿಷ್ ಎಕ್ಸಿಬಿಷನ್ ಮೈದಾನದ ಎದುರು ವಿಶೇಷವಾದ ಹಾದಿಯನ್ನು ನಿರ್ಮಿಸಲಾಯಿತು. ಪೂರ್ಣಗೊಳಿಸುವ ಸಾಲನ್ನು ಬದಲಾಯಿಸದೇ ಬಿಡಲಾಯಿತು, ಆದರೆ ಅಲೆಕ್ಸಾಂಡ್ರಿಯಾ ರಾಣಿಯನ್ನು ಒಳಗೊಂಡಂತೆ ಪ್ರೇಕ್ಷಕರು ಅಂತಿಮ ಯಾರ್ಡುಗಳನ್ನು ಅತ್ಯುತ್ತಮವಾಗಿ ವೀಕ್ಷಿಸಲು ಸಹಾಯಕವಾಗುವಂತೆ, ಓಟದ ದಿಕ್ಕನ್ನು "ಬಲಭಾಗದ ಒಳಗೆ" (ಅಂದರೆ ಗಡಿಯಾರದ ದಿಕ್ಕು) ಬದಲಾಯಿಸಲಾಯಿತು. ಇದರರ್ಥ ಕ್ರೀಡಾಂಗಣದ ಒಳಗೆ ದೂರವನ್ನು 385 ಯಾರ್ಡುಗಳನ್ನು ಕಡಿಮೆಗೊಳಿಸಲಾಯಿತು, ಹಾಗೂ ಒಟ್ಟು ಅಂತರವು 26 ಮೈಲುಗಳು 385 ಯಾರ್ಡುಗಳು ( 42.195 ಕಿಮೀ) ಗಳಾಯಿತು.[೧೬]

1912 ರ ಮುಂದಿನ ಒಲಂಪಿಕ್ಸ್‌ಗೆ, ದೂರವನ್ನು 40.2 ಕಿಲೋಮೀಟರುಗಳಿಗೆ (24.98 ಮೈಲು) ಬದಲಾಯಿಸಲಾಯಿತು, ಹಾಗೆ ಮತ್ತೊಮ್ಮೆ 1920 ರ ಒಲಂಪಿಕ್ಸ್‌ಗೆ ದೂರವನ್ನು 42.75 ಕಿಲೋಮೀಟರುಗಳು (26.56 ಮೈಲು) ಗಳಿಗೆ ಬದಲಾಯಿಸಲಾಯಿತು, ಅಂತಿಮವಾಗಿ ಅದನ್ನು 1924 ರ ಒಲಂಪಿಕ್ಸ್‌ಗೆ 1908 ಆಗಿ ನಿಗದಿಪಡಿಸಲಾಯಿತು. ನಿಜವಾಗಿ, ಮೊದಲ ಏಳು ಒಲಂಪಿಕ್ ಕ್ರೀಡೆಗಳಲ್ಲಿ, 40 ಮತ್ತು 42.75 ಕಿಮೀಗಳು ಅಥವಾ 24.85 ಮತ್ತು 25.56 ಮೈಲುಗಳ (40 ಕಿಮೀಯನ್ನು ಎರಡು ಬಾರಿ ಬಳಸಲಾಗಿತ್ತು) ನಡುವಿನ ಆರು ವಿವಿಧ ಮ್ಯಾರಥಾನ್ ದೂರಗಳಿದ್ದವು.

೧೯೦೮ ರ ಒಲಂಪಿಕ್ ಮ್ಯಾರಥಾನ್‌ನಲ್ಲಿ ಡೊರಾಂಡೋ ಪೀಟ್ರೀ ಅವರು ಅಂತಿಮ ಗೆರಯನ್ನು ದಾಟುತ್ತಿರುವುದರ ಚಿತ್ರ

ಆದರೆ, 1908 ರ ಒಲಂಪಿಕ್ ಮ್ಯಾರಥಾನ್‌ನ ರೋಚಕ ಅಂತ್ಯವು ವಿಶ್ವದಾದ್ಯಂತ ಮ್ಯಾರಥಾನ್ ಜ್ವರಕ್ಕೆ ಕಾರಣವಾಯಿತು. ಆ ಸಮಯದಲ್ಲಿ ಕಳುಹಿಸಿದ ಪೋಸ್ಟ್‌ಕಾರ್ಡಿನಲ್ಲಿ ಅಮೇರಿಕದ ಪ್ರೇಕ್ಷಕನೊಬ್ಬನು "ಇದೀಗ ತಾನೇ ಶತಮಾನದ ಅತ್ಯಂತ ರೋಚಕವಾದ ಓಟವನ್ನು ನೋಡಿದೆ" ಎಂದು ಹೇಳಿದ್ದನು.[೧೮] ಅಲೆಕ್ಸಾಂಡ್ರಿಯ ರಾಣಿ ಸೇರಿದಂತೆ ಅಪಾರ ಜನಸ್ತೋಮವು ನೋಡುತ್ತಿರುವಂತೆ ಇಟಾಲಿಯನ್ ಓಟಗಾರ ಡೊರಾಂಡೋ ಪೀಟ್ರಿಯವರು ಅಂತಿಮ ಸುತ್ತನ್ನು ತೂರಾಡುತ್ತಾ385 yards (352 m), ಏಳು ಬಾರಿ ಬಿದ್ದು, ಮತ್ತು ಅಂತಿಮವಾಗಿ ಅಧಿಕಾರಿಗಳು ಅವರನ್ನು ಸಾಲಿನ ಮೇಲೆ ಮುಂದೂಡುತ್ತಿದ್ದಂತೆ ಐರಿಷ್-ಅಮೇರಿಕನ್ಜಾನಿ ಹೇಯ್ಸ್ ಅವರು ಸಮೀಪಿಸಿದರು. ಡೊರಾಂಡೋ ಅವರನ್ನು ಅನರ್ಹಗೊಳಿಸಲಾಯಿತು ಮತ್ತು ಹೇಯ್ಸ್ ಅವರಿಗೆ ಚಿನ್ನದ ಪದವನ್ನು ಘೋಷಿಸಲಾಯಿತು. ಆದರೆ, ಡೊರಾಂಡೋ ಅವರ ಶೋಚನೀಯ ಸ್ಥಿತಿಯ ಬಗ್ಗೆ ಅನುಕಂಪ ಹೊಂದಿದ ರಾಣಿ ಅಲೆಕ್ಸಾಂಡ್ರಿಯಾ ಅವರು ಮಾರನೇ ದಿನ ಅವರಿಗೆ ಬೆಳ್ಳಿಯ ಲೇಪಿತ ಕಪ್ ಅನ್ನು ನೀಡಿದರು.

ಡೊರಾಂಡೋ ಮತ್ತು ಹೇಯ್ಸ್ ಅವರು ವೃತ್ತಿಪರರಾದರು ಮತ್ತು ಹಲವಾರು ಮರು-ಪಂದ್ಯಗಳಾದವು, ಅವುಗಳು 26 ಮೈಲಿಗಳು 385 ಯಾರ್ಡುಗಳ ದೂರದ ಸ್ಪರ್ಧೆಗಳೇ ಆಗಿದ್ದವು. ಅದೇ ದೂರದಲ್ಲಿ ಪ್ರಮುಖವಾದ ಪಾಲಿಟೆಕ್ನಿಕ್ ಮ್ಯಾರಥಾನ್ ಒಳಗೊಂಡು ಹಲವು ಇತರ ಮ್ಯಾರಥಾನ್‌ಗಳು ಜರುಗಿದವು. 1921 ರಲ್ಲಿ 26 ಮೈಲುಗಳು 385 ಯಾರ್ಡುಗಳನ್ನು (42.195 ಕಿಮೀ) ಆಯ್ಕೆಮಾಡಿದ ಕಾರಣದ ಬಗ್ಗೆ ಐಎಎಫ್ ವರದಿಗಳು ಏನನ್ನೂ ಹೇಳಲಿಲ್ಲ,[೧೯] ಆದ್ದರಿಂದ ಯಾವುದೇ ನಿರ್ಧಾರವು ಊಹನಾತ್ಮಕವಾಗಿದೆ, ಆದರೆ "ಶತಮಾನದ ಓಟದ" ದೂರಕ್ಕೆ ಸಂಬಂಧಿಸಿದ ಭಾವನಾತ್ಮಕ ಬೆಸುಗೆಯು ಸ್ಪಷ್ಟವಾಗಿ ಬಲವಾಗಿತ್ತು.

42.195 ಕಿಮೀ ಮತ್ತು 26 ಮೈಲುಗಳು 385 ಯಾರ್ಡುಗಳ ಅಂತರವು ಅರ್ಧ ಇಂಚಿನೊಳಗೆ (1.2 ಸೆಂಮೀ) ಒಂದೇ ವಿಧವಾಗಿದೆ. ಪ್ರಮಾಣಿದ ಅಂತರ ಮತ್ತು ಪೂರ್ತಿ ಮಾಡಿದ ಅಂಕಿಅಂಶವನ್ನು ಆಗ್ಗಿಂದಾಗ್ಗೆ ಬಳಸಿಕೊಳ್ಳಲಾಗಿದೆ (ಕೋಷ್ಟಕವನ್ನು ನೋಡಿ), 26.22 ಮೈಲುಗಳು ಸ್ವಲ್ಪವೇ ಪ್ರಮಾಣದಲ್ಲಿ ಎರಡು ಮೀಟರುಗಳು ಅಥವಾ 6.6 ಅಡಿಗಿಂತ ಹೆಚ್ಚಾಗಿದೆ. ಐಎಎಫ್‌ನಿಂದ ಮ್ಯಾರಥಾನ್ ಕೋರ್ಸ್‌ಗೆ ದೃಢೀಕರಣವನ್ನು ಪಡೆಯಲು, ದೂರವು 42.195 ಕಿಮೀಗಿಂತ ಕಡಿಮೆಯಾಗಿರಬಾರದು ಮತ್ತು ಅಳತೆಯಲ್ಲಿ ಅನಿಶ್ಚಿತತೆಯು 42 ಮೀ (ಅಂದರೆ 0.1%) ಗಿಂತ ಹೆಚ್ಚಾಗಬಾರದು.[೨೦] ಐಎಎಫ್-ದೃಢೀಕೃತ ಕೋರ್ಸುಗಳಲ್ಲಿ ದೂರವು ಕಡಿಮೆಯಾಗದಂತೆ ಪ್ರತಿ ಕಿಮೀಗೆ ಒಂದು ಮೀಟರಿನಷ್ಟು ಉದ್ದೇಶಪೂರ್ವಕವಾಗಿ ಹೆಚ್ಚಾಗಿಸುವುದು ಸರ್ವೇಸಾಮಾನ್ಯವಾಗಿದೆ. ಮ್ಯಾರಥಾನ್‌ಗೆ ಸಂಬಂಧಿಸಿದಂತೆ, ಈ ಹೆಚ್ಚುವರಿ ಅಂತರವು ಸುಮಾರು 46 ಯಾರ್ಡುಗಳಾಗಿರುತ್ತದೆ.

ಮ್ಯಾರಥಾನ್ ಓಟಗಳು[ಬದಲಾಯಿಸಿ]

ಭಾರಿ ಆಘಾತವೊಂದರಲ್ಲಿ, ಲೂಯಿಸ್ ಮಾರ್ಕ್ಸ್ ಅವರು ೧೯೦೫ ಚಿಕಾಗೋ ಮ್ಯಾರಥಾನ್‌ನಲ್ಲಿ ಪರಾಭವಗೊಂಡರು

ವಾರ್ಷಿಕವಾಗಿ, 500 ಕ್ಕೂ ಹೆಚ್ಚು ಮ್ಯಾರಥಾನ್‌ಗಳನ್ನು ವಿಶ್ವದಾದ್ಯಂತ ಆಯೋಜಿಸಲಾಗುತ್ತದೆ.[೩] ಇದರಲ್ಲಿ ಕೆಲವು ಅಸೋಸಿಯೇಶನ್ ಆಫ್ ಇಂಟರ್‌ನ್ಯಾಷನಲ್ ಮ್ಯಾರಥಾನ್ಸ್ ಎಂಡ್ ಡಿಸ್ಟಂಟ್ ರೇಸಸ್ (ಎಐಎಮ್ಎಸ್) ಗೆ ಸೇರಿದ್ದು, ಇದು 1982 ರಲ್ಲಿ ಸ್ಥಾಪಿತವಾದ ನಂತರ ಅಭಿವೃದ್ಧಿಯನ್ನು ಹೊಂದಿದ್ದು, 83 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ 300 ಕ್ಕೂ ಹೆಚ್ಚು ಸದಸ್ಯ ಸ್ಪರ್ಧೆಗಳನ್ನು ಒಪ್ಪಿಕೊಂಡಿದೆ.[೨೧] ಅತ್ಯಂತ ಪ್ರಸಿದ್ಧವಾದ ಮತ್ತು ದೊಡ್ಡದಾದ ಐದು ಓಟಗಳಾದ ಬೋಸ್ಟನ್, ನ್ಯೂಯಾರ್ಕ್ ಸಿಟಿ, ಚಿಕಾಗೋ, ಲಂಡನ್, ಮತ್ತು ಬರ್ಲಿನ್ ಇವುಗಳು ದ್ವೈವಾರ್ಷಿಕ ವಿಶ್ವ ಮ್ಯಾರಥನಾ ಮೇಜರ್ಸ್ ಸರಣಿಯ ಭಾಗವಾಗುವುದರ ಮೂಲಕ ಸರಣಿಯಲ್ಲಿ ಒಟ್ಟಾರೆಯಾಗಿ ಅತ್ಯುತ್ತಮ ಪುರುಷ ಮ್ತತು ಸ್ತ್ರೀ ಸ್ಪರ್ಧಾಳುಗಳಿಗೆ ವಾರ್ಷಿಕವಾಗಿ $500,000 ಬಹುಮಾನವನ್ನು ನೀಡುತ್ತದೆ.

2006 ರಲ್ಲಿ ರನ್ನರ್ಸ್ ವರ್ಲ್ಡ್ನ ಸಂಪಾದಕರು "ವಿಶ್ವದ ಅಗ್ರಗಣ್ಯ 10 ಮ್ಯಾರಥಾನ್‌ಗಳನ್ನು ಆಯ್ಕೆ ಮಾಡಿದ್ದು,[೨೨] ಅವುಗಳಲ್ಲಿ ಮೇಲಿನ ಐದು ಸ್ಪರ್ಧೆಗಳ ಜೊತೆಗೆ ಆಮ್‌ಸ್ಟರ್‌ಡ್ಯಾಮ್, ಹೊನೊಲುಲು, ಪ್ಯಾರಿಸ್, ರೋಟೆರ್‌ಡ್ಯಾಮ್, ಮತ್ತು ಸ್ಟಾಕ್‌ಹೋಮ್ ಮ್ಯಾರಥಾನ್‌ಗಳು ಸ್ಥಾನ ಪಡೆದುಕೊಂಡಿದೆ. ಇತರ ಹೆಸರಾಂತ ಮ್ಯಾರಥಾನ್‌ಗಳಲ್ಲಿ ಅಮೇರಿಕಾದ ಮೆರೀನ್ ಕಾರ್ಪ್ಸ್ ಮ್ಯಾರಥಾನ್, ಲಾಸ್ ಏಂಜಲೀಸ್, ಮತ್ತು ರೋಮ್ ಸೇರಿದೆ. ಬೋಸ್ಟನ್ ಮ್ಯಾರಥಾನ್ ವಿಶ್ವದ ಅತ್ಯಂತ ಹಳೆಯ ವಾರ್ಷಿಕ ಮ್ಯಾರಥಾನ್ ಆಗಿದ್ದು, ಇದು 1896 ರ ಒಲಂಪಿಕ್ ಮ್ಯಾರಥಾನ್‌ನ ಯಶಸ್ಸಿನಿಂದ ಪ್ರೇರಣೆಯನ್ನು ಪಡೆದುಕೊಂಡಿದ್ದು 1897 ರಿಂದ ನಡೆಯುತ್ತಿದೆ. ಕೊಸೈಸ್ ಪೀಸ್ ಮ್ಯಾರಥಾನ್ಎನ್ನುವುದು ಯುರೋಪಿನಲ್ಲಿನ ಹಳೆಯ ವಾರ್ಷಿಕ ಮ್ಯಾರಥಾನ್ ಆಗಿದ್ದು, 1924 ರಿಂದ ಕೊಸೈಸ್, ಸ್ಲೊವೇಕಿಯಾದಲ್ಲಿ ನಡೆಯುತ್ತಿದೆ.

70 ಡಿಗ್ರಿಗಳು ಉತ್ತರ ದಲ್ಲಿ ಟ್ರೋನ್ಸೋ, ನಾರ್ವೆಯಲ್ಲಿ ನಡೆಯುವ ಮಿಡ್‌ನೈಟ್ ಸನ್ ಮ್ಯಾರಥಾನ್ ಎನ್ನುವುದು ಹೆಚ್ಚು ಅಸಾಮಾನ್ಯವಾದ ಮ್ಯಾರಥಾನ್‌ಗಳಲ್ಲಿ ಒಂದಾಗಿದೆ. ಅನಧಿಕೃತ ಮತ್ತು ತಾತ್ಕಾಲಿಕ ಕ್ರಮಗಳಲ್ಲಿ, ಜಿಪಿಎಸ್‌ನಿಂದ ಮಾಪನ ಮಾಡುವ, ಮ್ಯಾರಥಾನ್ ದೂರದ ಓಟಗಳು ಇದೀಗ ಅಂಟಾರ್ಕ್ಟಿಕಾಉತ್ತರ ಧ್ರುವದಲ್ಲಿ ಮತ್ತು ಮರುಭೂಮಿ ಪ್ರದೇಶದಲ್ಲಿ ನಡೆಯುತ್ತದೆ. ಇತರ ಅಸಾಮಾನ್ಯ ಮ್ಯಾರಥಾನ್‌ಗಳೆಂದರೆ: ಚೀನಾದ ಮಹಾಗೋಡೆಯಲ್ಲಿ ಜರುಗುವ ಗ್ರೇಟ್ ವಾಲ್ ಮ್ಯಾರಥಾನ್, ದಕ್ಷಿಣ ಆಫ್ರಿಕಾದ ಸಫಾರಿ ವನ್ಯದಲ್ಲಿ ಜರುಗುವ ಬಿಗ್ ಫೈ ಮ್ಯಾರಥಾನ್, 3,500 metres (11,500 ft) ರಷ್ಟು ಎತ್ತರದಲ್ಲಿ ಟಿಬೇಟಿನ ಬೌದ್ಧಧರ್ಮೀಯ ವಾತಾವರಣದಲ್ಲಿ ಜರುಗುವ ಗ್ರೇಟ್ ಟಿಬೆಟನ್ ಮ್ಯಾರಥಾನ್, ಮತ್ತು -15 ಡಿಗ್ರಿ ಸೆಲ್ಸಿಯಸ್/+5 ಡಿಗ್ರಿ ಫ್ಯಾರನ್‌ಹೀಟ್ ಉಷ್ಣತೆಯಲ್ಲಿ ಗ್ರೀನ್‌ಲ್ಯಾಂಡ್ನ ಖಾಯಂ ಮಂಜುಗಡ್ಡೆಯ ವಾತಾವರಣದಲ್ಲಿ ನಡೆಯುವ ಪೋಲಾರ್ ಸರ್ಕಲ್ ಮ್ಯಾರಥಾನ್.

ಹೆಚ್ಚು ರಮಣೀಯವಾದ ಕೆಲವು ಮ್ಯಾರಥಾನ್ ಮಾರ್ಗಗಳೆಂದರೆ: ಸ್ಟೀಮ್‌ಬೋಡ್ ಮ್ಯಾರಥಾನ್, ಸ್ಟೀಮ್‌ಬೋಟ್ ಸ್ಪ್ರಿಂಗ್ಸ್, ಕೊಲರಾಡೋ; ಮೇಯರ್ಸ್ ಮ್ಯಾರಥಾನ್, ಆಂಕೋರೇಜ್, ಅಲಾಸ್ಕಾ; ಕೋನಾ ಮ್ಯಾರಥಾನ್, ಕೀಹೊಯು/ಕೋನಾ, ಹವಾಯಿ; ಸ್ಯಾನ್ ಫ್ರಾನ್ಸಿಸ್ಕೋ ಮ್ಯಾರಥಾನ್, ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ.[೨೩]

ಇಂಟರ್‌ಕಾಂಟಿನೆಂಟಲ್ ಇಸ್ತಾಂಬುಲ್ ಯುರೇಸಿಯಾ ಮ್ಯಾರಥಾನ್ಎನ್ನುವುದು ಒಂದೇ ಸ್ಪರ್ಧೆಯಲ್ಲಿ ಯುರೋಪ್ ಮತ್ತು ಏಷ್ಯಾ ಭೂಖಂಡಗಳ ನಡುವೆ ಸ್ಪರ್ಧಾಳುಗಳು ಓಡುವ ಏಕೈಕ ಮ್ಯಾರಥಾನ್ ಆಗಿದೆ. ಐತಿಹಾಸಿಕ ಪಾಲಿಟೆಕ್ನಿಕ್ ಮ್ಯಾರಥಾನ್ ಅನ್ನು 1996 ರಲ್ಲಿ ನಿಲ್ಲಿಸಲಾಯಿತು.

ಡೆನ್ನಿಸ್ ಕ್ರೇಥೋರ್ನ್ ಮತ್ತು ರಿಚ್ ಹನ್ನಾ ಅವರು ಬರೆದ ದಿ ಅಲ್ಟಿಮೇಟ್ ಗೈಡ್ ಟು ಇಂಟರ್‌ನ್ಯಾಷನಲ್ ಮ್ಯಾರಥಾನ್ (1997) ಪುಸ್ತಕವು ಸ್ಟಾಕ್‌ಹೋಮ್ ಮ್ಯಾರಥಾನ್ಅನ್ನು ವಿಶ್ವದ ಅತ್ಯುತ್ತಮ ಮ್ಯಾರಥಾನ್ ಎಂದು ಶ್ರೇಣೀಕರಿಸಿದೆ.[೨೪]

ಅಂಕಿಅಂಶಗಳು[ಬದಲಾಯಿಸಿ]

ವಿಶ್ವ ದಾಖಲೆಗಳು ಮತ್ತು ವಿಶ್ವದ ಅತ್ಯುತ್ತಮ[ಬದಲಾಯಿಸಿ]

ಪುರುಷರ ವಿಶ್ವ ದಾಖಲೆಯನ್ನು ಪ್ರಸ್ತುತ ಹೊಂದಿರುವ ಹೇಲ್ ಜೆಬ್ರಸೆಲಾಸೀ (ಹಳದಿ ಬಣ್ಣದಲ್ಲಿ)

2004 ರ ಜನವರಿ 1 ರವರೆಗೆ ವಿಶ್ವ ದಾಖಲೆಗಳಿಗೆ ಅಧಿಕೃತವಾಗಿ ಐಎಎಫ್ ಮಾನ್ಯತೆ ನೀಡುತ್ತಿರಲಿಲ್ಲ; ಈ ಹಿಂದೆ, ಮ್ಯಾರಥಾನ್‌ಗಳಿಗೆ ಅತ್ಯುತ್ತಮ ಸಮಯವನ್ನು 'ವಿಶ್ವದ ಅತ್ಯುತ್ತಮ' ಎಂದು ಉಲ್ಲೇಖಿಸಲಾಗುತ್ತಿತ್ತು. ದಾಖಲೆಗೆ ಮಾನ್ಯತೆಯನ್ನು ನೀಡಲು ಓಟಗಳು ಐಎಎಎಫ್ ಮಾನದಂಡಗಳನ್ನು ಅನುಸರಿಸಬೇಕು. ಆದರೆ, ಮ್ಯಾರಥಾನ್ ಮಾರ್ಗಗಳು ಎತ್ತರ, ಓಟ ಮತ್ತು ಮೇಲ್ಮೈಯಲ್ಲಿ ಇನ್ನೂ ಸಹ ಬಹುವಾಗಿ ವಿಭಿನ್ನವಾಗಿದ್ದು, ನಿಖರವಾದ ಹೋಲಿಕೆಗಳನ್ನು ಅಸಾಧ್ಯವನ್ನಾಗಿಸುತ್ತದೆ. ಸಾಮಾನ್ಯವಾಗಿ, ಅತಿ ವೇಗದ ಸಮಯವನ್ನು ತುಲನಾತ್ಮಕವಾಗಿ ಸಮತಲವಾದ ಭೂಭಾಗದ ಮೇಲೆ ಸಮುದ್ರದ ಪ್ರದೇಶದ ಹತ್ತಿರ, ಉತ್ತಮ ಹವಾಮಾನ ಸ್ಥಿತಿಯಲ್ಲಿ ಮತ್ತು ಪೇಸ್‌ಸೆಟ್ಟರ್ಗಳ ಸಹಾಯದ ಮೂಲಕ ಸಾಧಿಸಲಾಗುತ್ತದೆ.

ದೂರದ ಓಟದಲ್ಲಿ ಪುರುಷರ ವಿಶ್ವ ದಾಖಲೆಯು 2 ಗಂಟೆಗಳು 3 ನಿಮಿಷಗಳು ಮತ್ತು 59 ಸೆಕೆಂಡುಗಳಾಗಿದ್ದು, ಅದನ್ನು ಇಥಿಯೋಪಿಯಾದ ಹೇಲ್ ಗೆಬ್ರಸೆಲಾಸ್ಸೀ ಅವರು ಬರ್ಲಿನ್ ಮ್ಯಾರಥಾನ್ ನಲ್ಲಿ 2008 ರ ಸೆಪ್ಟೆಂಬರ್ 28 ರಂದು ಸ್ಥಾಪಿಸಿದರು, ಇದು ಜಾನ್ನಿ ಹೇಯ್ಸ್ ಅವರ 1908 ಬೇಸಿಗೆ ಒಲಂಪಿಕ್ಸ್ನಲ್ಲಿನ ಚಿನ್ನದ ಪದಕದ ಸಾಧನೆಗಿಂತ 51 ನಿಮಿಷಗಳು ಮತ್ತು 19 ಸೆಕೆಂಡುಗಳಷ್ಟು ಸುಧಾರಣೆಯಾಗಿದೆ. ಗೆಬ್ರಸೆಲಾಸ್ಸೀ ಅವರ ವಿಶ್ವ ದಾಖಲೆಯು ಪ್ರತಿ ಕಿಲೋಮೀಟರಿಗೆ 2:57 (ಪ್ರತಿ ಮೈಲಿಗೆ 4:44) ಕ್ಕಿಂತ ಕಡಿಮೆಯ ಓಟದ ಸರಾಸರಿ ವೇಗವನ್ನು, 20.4 ಕಿಮೀ/ಗಂಟೆಗಿಂತ ಹೆಚ್ಚಿನ (12.6 ಮೈಪ್ರಗಂ) ಸರಾಸರಿ ವೇಗವನ್ನು ಪ್ರತಿನಿಧಿಸುತ್ತದೆ.[೨೫] ಮಹಿಳೆಯರು ವಿಶ್ವ ದಾಖಲೆಯು 2 ಗಂಟೆಗಳು 15 ನಿಮಿಷಗಳು ಮತ್ತು 25 ಸೆಕೆಂಡುಗಳಾಗಿದ್ದು, ಅದನ್ನು ಗ್ರೇಟ್ ಬ್ರಿಟನ್‌ನ ಪೌಲಾ ರಾಡ್‌ಕ್ಲಿಫ್ ಅವರು ಲಂಡನ್ ಮ್ಯಾರಥಾನ್ ನಲ್ಲಿ 2003 ರ ಏಪ್ರಿಲ್ 13ರಂದು ಸ್ಥಾಪಿಸಿದರು. ಈ ಸಮಯವನ್ನು ಪುರುಷರ ಪೇಸ್‌ಸೆಟ್ಟರ್ಗಳನ್ನು ಬಳಸಿ ಸ್ಥಾಪಿಸಲಾಗಿದ್ದಿತು; ಪುರುಷರ ಪೇಸ್‌ಸೆಟ್ಟರ್ ಅನ್ನು ಬಳಸದೆಯೇ ("ಮಹಿಳೆ-ಮಾತ್ರ") ಮಹಿಳೆಯೊಬ್ಬಳು ಸಾಧಿಸಿದ ಅತೀವೇಗದ ಸಮಯವವೂ ಕೂಡ ಪೌಲಾ ರಾಡ್‌ಕ್ಲಿಫ್ ಅವರ ಹೆಸರಿನಲ್ಲಿಯೇ ಇದ್ದು, ಇದನ್ನು ಅವರು ಲಂಡನ್ ಮ್ಯಾರಥಾನ್ ಸಮಯದಲ್ಲಿ 2005 ರ ಏಪ್ರಿಲ್ 17 ರಂದು 2 ಗಂಟೆಗಲು 17 ನಿಮಿಷಗಲು ಮತ್ತು 42 ಸೆಕೆಂಡುಗಳಲ್ಲಿ ಸಾಧಿಸಿದರು.[೨೬]

ಎಲ್ಲಾ ಕಾಲದ ವಿಶ್ವದ ಪ್ರಮುಖ ಹತ್ತು ಪಟ್ಟಿಗಳು[ಬದಲಾಯಿಸಿ]

ಐಎಎಫ್ ಅಂಕಿಅಂಶಗಳ ಪ್ರಕಾರ, ಈ ಮುಂದಿನ ಪುರುಷರು ಮತ್ತು ಮಹಿಳೆಯರು ಮ್ಯಾರಥಾನ್ ದೂರದಲ್ಲಿ ಅಗ್ರ ಹತ್ತು ವೇಗದ ಓಟಗಾರರಲ್ಲಿ ಸೇರಿದ್ದಾರೆ.[೨೭][೨೮]

ಡಂಕನ್ ಕಿಬೆಟ್ ಅವರು ಇಲ್ಲಿಯವರೆಗಿನ ಎರಡನೆಯ ಅತೀ ವೇಗದ ಮ್ಯಾರಥಾನ್ ಓಟಗಾರರಾಗಿದ್ದಾರೆ
ಪುರುಷರು
ಸಮಯ ಕ್ರೀಡಾಪಟು ರಾಷ್ಟ್ರ ದಿನಾಂಕ ಸ್ಥಳ
2ಗಂ03:59 ಹೇಲ್ ಗೆಬ್ರಸೆಲಾಸ್ಸೀ  ಇಥಿಯೊಪಿಯ 28 ಸೆಪ್ಟೆಂಬರ್ 2008 ಬರ್ಲಿನ್
2ಗಂ04:27 ಡಂಕನ್ ಕಿಬೆಟ್  ಕೀನ್ಯಾ 5 ಏಪ್ರಿಲ್ 2009 ರಾಟ್ಟರ್‌ಡ್ಯಾಮ್‌
2ಗಂ04:27 ಜೇಮ್ಸ್ ಕ್ವಾಂಬಾಯಿ  ಕೀನ್ಯಾ 5 ಏಪ್ರಿಲ್ 2009 ರಾಟ್ಟರ್‌ಡ್ಯಾಮ್‌
2ಗಂ04:48 ಪ್ಯಾಟ್ರಿಕ್ ಮಕಾವು  ಕೀನ್ಯಾ 11 ಏಪ್ರಿಲ್ 2010 ರಾಟ್ಟರ್‌ಡ್ಯಾಮ್‌
2ಗಂ04:55 ಪಾಲ್ ಟೆರ್ಗಾಟ್  ಕೀನ್ಯಾ 28 ಸೆಪ್ಟೆಂಬರ್ 2003 ಬರ್ಲಿನ್
2ಗಂ04:55 ಜೆಫ್ರಿ ಮುಟಾಯಿ  ಕೀನ್ಯಾ 11 ಏಪ್ರಿಲ್ 2010 ರಾಟ್ಟರ್‌ಡ್ಯಾಮ್‌
2ಗಂ04:56 ಸ್ಯಾಮಿ ಕೊರಿರ್  ಕೀನ್ಯಾ 28 ಸೆಪ್ಟೆಂಬರ್ 2003 ಬರ್ಲಿನ್
2ಗಂ05:04 ಅಬೆಲ್ ಕಿರುಯಿ  ಕೀನ್ಯಾ 5 ಏಪ್ರಿಲ್ 2009 ರಾಟ್ಟರ್‌ಡ್ಯಾಮ್‌
2ಗಂ05:10 ಸ್ಯಾಮುಯೆಲ್ ವಾಂಜಿರು  ಕೀನ್ಯಾ 26 ಏಪ್ರಿಲ್ 2009 ಲಂಡನ್
2ಗಂ05:13 ವಿನ್ಸೆಂಟ್ ಕಿಪ್ರುಟೋ  ಕೀನ್ಯಾ 11 ಏಪ್ರಿಲ್ 2010 ರಾಟ್ಟರ್‌ಡ್ಯಾಮ್‌
ಮಹಿಳೆಯರ ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆಯನ್ನು ಹೊಂದಿರುವ ಪೌಲಾ ರಾಡ್‌ಕ್ಲಿಫ್
ಮಹಿಳೆಯರು
ಸಮಯ ಕ್ರೀಡಾಪಟು ರಾಷ್ಟ್ರ ದಿನಾಂಕ ಸ್ಥಳ
2ಗಂ15:25 ಪೌಲಾ ರಾಡ್‌ಕ್ಲಿಫ್  Great Britain 13 ಏಪ್ರಿಲ್ 2003 ಲಂಡನ್
2ಗಂ18:47 ಕ್ಯಾಥೆರಿನ್ ಡೆರೆಬಾ  ಕೀನ್ಯಾ 7 ಅಕ್ಟೋಬರ್ 2001 ಚಿಕಾಗೊ
2ಗಂ19:12 ಮಿಜುಕಿ ನೋಗುಚಿ  ಜಪಾನ್ 25 ಸೆಪ್ಟೆಂಬರ್ 2005 ಬರ್ಲಿನ್
2ಗಂ19:19 ಇರಿನಾ ಮಿಕಿಟೆಂಕೋ  Germany 28 ಸೆಪ್ಟೆಂಬರ್ 2008 ಬರ್ಲಿನ್
2ಗಂ19:36 ಡೀನಾ ಕ್ಯಾಸ್ಟರ್  ಅಮೇರಿಕ ಸಂಯುಕ್ತ ಸಂಸ್ಥಾನ 23 ಏಪ್ರಿಲ್ 2006 ಲಂಡನ್
2ಗಂ19:39 ಸನ್ ಯಿಂಗ್ಜೀ  ಚೀನಾ 19 ಅಕ್ಟೋಬರ್ 2003 ಬೀಜಿಂಗ್‌
2ಗಂ19:41 ಯೋಕೋ ಶಿಬುಯಿ  ಜಪಾನ್ 26 ಸೆಪ್ಟೆಂಬರ್ 2004 ಬರ್ಲಿನ್
2ಗಂ19:46 ನೌಕೋ ಟಾಕಾಹಾಶಿ  ಜಪಾನ್ 30 ಸೆಪ್ಟೆಂಬರ್ 2001 ಬರ್ಲಿನ್
2ಗಂ19:51 ಜೌ ಚುಂಕ್ಸಿಯು  ಚೀನಾ 12 ಮಾರ್ಚ್ 2006 ಸಿಯೋಲ್
2ಗಂ20:42 ಬರ್ಹಾನೆ ಅಡೀರ್  ಇಥಿಯೊಪಿಯ 22 ಅಕ್ಟೋಬರ್ 2006 ಚಿಕಾಗೊ

ಓಟ[ಬದಲಾಯಿಸಿ]

ಸಾಮಾನ್ಯ[ಬದಲಾಯಿಸಿ]

೨೦೦೯ ಸ್ಟಾಕ್‌ಹೋಮ್ ಮ್ಯಾರಥಾನ್‌ನ ಪ್ರಾರಂಭ

ಬಹುಪಾಲು ಭಾಗವಹಿಸುವವರು ಜಯಗಳಿಸಲು ಮ್ಯಾರಥಾನ್‌ನಲ್ಲಿ ಓಡುವುದಿಲ್ಲ. ಕೆಲವು ಓಟಗಾರರು ಕೇವಲ ಮುಗಿಸಲು ಬಯಸುವುದಿದ್ದರೂ, ಹೆಚ್ಚಿನ ಓಟಗಾರರಿಗೆ ಅವರ ವೈಯಕ್ತಿಕ ಮುಗಿಸುವ ಸಮಯ ಮತ್ತು ನಿರ್ದಿಷ್ಟ ಲಿಂಗ ಮತ್ತು ಸಮಯ ಗುಂಪಿನಲ್ಲಿ ಅವರ ಸ್ಥಾನ ಪಡೆಯುವಿಕೆಯು ಹೆಚ್ಚು ಪ್ರಮುಖವಾಗಿರುತ್ತದೆ. ಮ್ಯಾರಥಾನ್ ಪೂರ್ಣಗೊಳಿಸುವ ತಂತ್ರಗಳಲ್ಲಿ ಪೂರ್ಣ ದೂರವನ್ನು ಕ್ರಮಿಸುವುದು[೨೯] ಮತ್ತು ಓಡು-ನಡೆ ತಂತ್ರವು ಸೇರಿದೆ.[೪] 2005 ರಲ್ಲಿ, ಅಮೇರಿಕದಲ್ಲಿ ಸರಾಸರಿ ಮ್ಯಾರಥಾನ್ ಸಮಯವು ಪುರುಷರಿಗೆ 4 ಗಂಟೆಗಳು 32 ನಿಮಿಷಗಳು 8 ಸೆಕೆಂಡುಗಳಿದ್ದರೆ, ಮಹಿಳೆಯರಿಗೆ 5 ಗಂಟೆಗಳು 6 ನಿಮಿಷಗಳು 8 ಸೆಕೆಂಡುಗಳಷ್ಟಿತ್ತು.[೩೦]

ನಿರ್ದಿಷ್ಟ ಸಮಯ ಮಿತಿಗಳನ್ನು ಮುರಿಯುವುದು ಜನರು ಗುರಿಯಿಡುವ ಮತ್ತೊಂದು ಉದ್ದೇಶವಾಗಿರುತ್ತದೆ. ಉದಾಹರಣೆಗಾಗಿ, ಹವ್ಯಾಸಿ ಮೊದಲ-ಬಾರಿಯವರು ಆಗಾಗ್ಗೆ ಮ್ಯಾರಥಾನ್ ಅನ್ನು ನಾಲ್ಕು ಗಂಟೆಯೊಳಗೆ ಓಡಲು ಪ್ರಯತ್ನಿಸುತ್ತಾರೆ; ಹೆಚ್ಚು ಸ್ಪರ್ಧಾತ್ಮಕ ಓಟಗಾರರು ಮೂರು ಗಂಟೆಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬಹುದು.[೩೧] ಪ್ರಮುಖ ಮ್ಯಾರಥಾನ್‌ಗಳಿಗೆ ಮಾನದಂಡಗಳು ಅರ್ಹತೆಗಳಿಸುವ ಸಮಯಗಳಾಗಿರುತ್ತದೆ. ಅಮೇರಿಕದ ಹಳೆಯ ಮ್ಯಾರಥಾನ್ ಆದ ಬೋಸ್ಟನ್ ಮ್ಯಾರಥಾನ್ ನಲ್ಲಿ ಎಲ್ಲಾ ವೃತ್ತಿಪರ-ರಹಿತ ಓಟಗಾರರಿಗೆ ಅರ್ಹತಾ ಸಮಯದ ಅಗತ್ಯವಿರುತ್ತದೆ.[೩೨] ನ್ಯೂಯಾರ್ಕ್ ಸಿಟಿ ಮ್ಯಾರಥಾನ್ನಲ್ಲೂ ಸಹ ಖಚಿತ ಪ್ರವೇಶಕ್ಕೆ ಅರ್ಹತಾ ಸಮಯದ ಅಗತ್ಯವಿದ್ದು, ಇದರ ಓಟದ ವೇಗವು ಬೋಸ್ಟನ್‌ನಲ್ಲಿರುವುದಕ್ಕಿಂತ ಕೊಂಚ ಹೆಚ್ಚಾಗಿರುತ್ತದೆ.[೩೩] ವಾಷಿಂಗ್ಟನ್ ಡಿ.ಸಿ.ಯ ನ್ಯಾಷನಲ್ ಮ್ಯಾರಥಾನ್ಗೂ ಸಹ ಅರ್ಹತಾ ಸಮಯದ ಅಗತ್ಯವಿರುತ್ತದೆ.[೩೪] ಆದರೆ, ಬೋಸ್ಟನ್‌ನಲ್ಲಿ ಅರ್ಹತಾ ಸಮಯವು ಹೆಚ್ಚು ಪ್ರತಿಭಾವಂತ ಕ್ಷೇತ್ರವನ್ನು ಆಕರ್ಷಿಸುವುದು ಮತ್ತು ಭಾಗವಹಿಸುವಿಕೆಯನ್ನು ಮಿತಿಗೊಳಿಸುವುದಕ್ಕೆ ವಿಭಿನ್ನವಾಗಿ, ನ್ಯಾಷನಲ್ ಮ್ಯಾರಥಾನ್‌ನಲ್ಲಿ ನಗರದ ರಸ್ತೆಗಳನ್ನು ಸೀಮಿತ ಸಮಯ ಮಿತಿಗೆ ತೆರೆಯುವುದರ ಅಗತ್ಯತೆಯಿಂದ ಹೆಚ್ಚು ಪ್ರೇರೇಪಣೆ ಪಡೆದಿದೆ.

ತರಬೇತಿ[ಬದಲಾಯಿಸಿ]

ಮೂನ್‌ವಾಕ್ ಎನ್ನುವುದು ಸ್ಥನ ಕ್ಯಾನ್ಸರ್ ಸಂಶೋಧನೆಗಾಗಿ ಹಣವನ್ನು ಸಂಗ್ರಹಿಸಲು ನಡೆಸುವ ರಾತ್ರಿಯ ಮ್ಯಾರಥಾನ್ ಆಗಿದೆ

ಮ್ಯಾರಥಾನ್ ತರಬೇತಿಯಲ್ಲಿ ದೀರ್ಘಾವಧಿಯ ಓಟವು ಪ್ರಮುಖವಾದ ಘಟಕವಾಗಿದೆ.[೩೫] ಹವ್ಯಾಸಿ ಓಟಗಾರರು ಮ್ಯಾರಥಾನ್‌ಗಾಗಿನ ತರಬೇತಿಯಲ್ಲಿ ತಮ್ಮ ವಾರದ ದೀರ್ಘಾವಧಿಯ ಓಟದಲ್ಲಿ ಗರಿಷ್ಠ ಸುಮಾರು 20 ಮೈಲಿಗಳನ್ನು (32 ಕಿಲೋಮೀಟರುಗಳು) ತಲುಪಲು ಮತ್ತು ವಾರದಲ್ಲಿ ಒಟ್ಟಾರೆಯಾಗಿ ಸುಮಾರು 40 ಮೈಲಿಗಳನ್ನು (64 ಕಿಲೋಮೀಟರುಗಳು) ತಲುಪಲು ಸಾಮಾನ್ಯವಾಗಿ ಪ್ರಯತ್ನಿಸುತ್ತಾರೆ, ಆದರೆ ವ್ಯಾಪಕವಾದ ಪರಿವರ್ತನೆಗಳು ಅಭ್ಯಾಸದಲ್ಲಿ ಮತ್ತು ಶಿಫಾರಸುಗಳಲ್ಲಿ ಚಾಲ್ತಿಯಲ್ಲಿವೆ. ಹೆಚ್ಚು ಅನುಭವಿ ಮ್ಯಾರಥಾನ್ ಓಟಗಾರರು ವಾರದಲ್ಲಿ ಹೆಚ್ಚು ದೂರವನ್ನು ಮತ್ತು ಹೆಚ್ಚು ಮೈಲುಗಳು/ಕಿಲೋಮೀಟರುಗಳನ್ನು ಕ್ರಮಿಸಬಹುದು. ಅತ್ಯುತ್ತಮ ಸಾಪ್ತಾಹಿಕ ಮೈಲಿ ದೂರ ಮತ್ತು ಸಹನಾ ಶಕ್ತಿಗೆ ಹೋಲಿಸಿದರೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಬಹುದು, ಆದರೆ ತರಬೇತಿಯ ಹಾನಿಗೆ ಒಳಗಾಗುವ ಭಾರಿ ಅಪಾಯವನ್ನೂ ಒಳಗೊಂಡಿರುತ್ತದೆ.[೩೬] ಹೆಚ್ಚಿನ ಪುರುಷ ಗಣ್ಯ ಮ್ಯಾರಥಾನ್ ಓಟಗಾರರು 100 ಮೈಲುಗಳಿಗಿಂತ (160 ಕಿಲೋಮೀಟರುಗಳು) ಅಧಿಕ ಸಾಪ್ತಾಹಿಕ ಮೈಲಿ ದೂರಗಳನ್ನು ಹೊಂದಿರುತ್ತಾರೆ.[೩೬]

ಹಲವು ತರಬೇತಿ ಕಾರ್ಯಕ್ರಮಗಳು ಕನಿಷ್ಠ ಐದರಿಂದ ಆರು ವಾರಗಳ ಕಾಲಾವಧಿಯದ್ದಾಗಿರುತ್ತದೆ, ಇದರಲ್ಲಿ ಓಟದ ಅಂತರದಲ್ಲಿ ಹಂತಹಂತವಾಗಿ ಹೆಚ್ಚಳ (ಪ್ರತಿ ಎರಡು ವಾರಗಳಲ್ಲಿ) ಮತ್ತು ಅಂತಿಮವಾಗಿ ಚೇತರಿಸಿಕೊಳ್ಳಲು ಕೊಂಚ ಕಡಿಮೆ ಅಂತರ (1 ರಿಂದ 3 ವಾರಗಳು)ವಿರುತ್ತದೆ. ಕಡಿಮೆಗೊಳಿಸುವಿಕೆಯು, ಸಾಮಾನ್ಯವಾಗಿ ಟೇಪರ್ ಎಂದು ಕರೆಯಲಾಗುತ್ತದೆ, ಇದು ಹೆಚ್ಚಿನ ತರಬೇತುದಾರರ ಪ್ರಕಾರ ಕನಿಷ್ಠ ಎರಡು ವಾರಗಳು ಮತ್ತು ಗರಿಷ್ಠ ಮೂರು ವಾರಗಳವರೆಗೆ ಇರುತ್ತದೆ. ಕೇವಲ ಮ್ಯಾರಥಾನ್ ಅನ್ನು ಮುಗಿಸಲು ಬಯಸುವ ಪ್ರಾರಂಭಿಕರಿಗೆ, ವಾರದಲ್ಲಿ 4 ದಿನದಂತೆ ಕನಿಷ್ಠ 4 ತಿಂಗಳವರೆಗೆ ಓಡುವಿಕೆಯನ್ನು ಶಿಫಾರಸು ಮಾಡಲಾಗಿದೆ.[೩೭] ಹಲವು ತರಬೇತುದಾರರು 10% ಕ್ಕೆ ಕಡಿಮೆ ಇಲ್ಲದಂತೆ ಮೈಲಿಗಳ ದೂರದಲ್ಲಿ ವಾರದ ಹೆಚ್ಚಳವನ್ನು ಶಿಫಾರಸು ಮಾಡುತ್ತಾರೆ. ದೇಹವು ಹೊಸ ಒತ್ತಡಗಳಿಗೆ ಸರಿಹೊಂದಿಕೊಳ್ಳಲು ಅನುವು ಮಾಡಿಕೊಡುವಂತೆ ಮ್ಯಾರಥಾನ್ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಆರು ವಾರಗಳವರೆಗೆ ಸ್ಥಿರವಾದ ಓಟದ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಲು ಸಹಾ ಆಗಾಗ್ಗೆ ಸಲಹೆ ನೀಡಲಾಗಿದೆ.[೩೮] ಸಾಮಾನ್ಯ ಯೋಜನೆಯ ಅವಧೀಕರಣದೊಂದಿಗೆ ಮ್ಯಾರಥಾನ್ ತರಬೇತಿ ಕಾರ್ಯಕ್ರಮವು ತನ್ನಷ್ಟಕ್ಕೇ ಕಠಿಣ ಮತ್ತು ಸುಲಭ ತರಬೇತಿಗಳ ನಡುವೆ ಪರಿವರ್ತನೆಯದ್ದಾಗಿರುತ್ತದೆ.[೩೯]

ತರಬೇತಿ ಕಾರ್ಯಕ್ರಮವಗಳನ್ನು ರನ್ನರ್ಸ್ ವರ್ಲ್ಡ್,[೪೦] ಹಾಲ್ ಡಿಗ್ಡನ್,[೨೯] ಜೆಫ್ ಗ್ಯಾಲೋವೇ,[೪] ಬೋಸ್ಟನ್ ಅಥ್ಲೆಟಿಕ್ ಅಸೋಸಿಯೇಶನ್ [೪೧] ಮತ್ತು ಇನ್ನೂ ಹಲವಾರು ಮೂಲಗಳಿಂದ ಪಡೆದುಕೊಳ್ಳಬಹುದು.

ಅತಿಯಾದ ತರಬೇತಿ ಎನ್ನುವುದು ಒತ್ತಡದ ತರಬೇತಿಯ ನಂತರ ದೇಹವು ಚೇತರಿಸಿಕೊಳ್ಳಲು ಅವಕಾಶ ನೀಡಲು ಸಾಕಷ್ಟು ವಿಶ್ರಾಂತಿಯನ್ನು ಪಡೆಯದ ಕಾರಣದಿಂದ ಉಂಟಾಗುವ ಸ್ಥಿತಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಇದು ತಗ್ಗಿದ ಸಹನಾ ಶಕ್ತಿ ಮತ್ತು ಹಾನಿಯ ಭಾರಿ ಅಪಾಯದೊಂದಿಗೆ ವೇಗ ಮತ್ತು ನಡಿಗೆಗೆ ಕಾರಣವಾಗಬಹುದು.[೩೬][೪೨]

ಓಟದ ಮೊದಲು[ಬದಲಾಯಿಸಿ]

೨೦೦೮ ರ ಒಲಂಪಿಕ್ ಮ್ಯಾರಥಾನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಸ್ಯಾಮುಯೆಲ್ ವಾಂಜಿರು ಅವರು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತಾ ಕೈ ಬೀಸುತ್ತಿದ್ದಾರೆ

ಮ್ಯಾರಥಾನ್‌ನ ಕಳೆದ ಎರಡು ಅಥವಾ ಮೂರು ವಾರಗಳ ಸಮಯದಲ್ಲಿ, ಸಾಮಾನ್ಯವಾಗಿ ಓಟಗಾರರು ತಮ್ಮ ಸಾಪ್ತಾಹಿಕ ತರಬೇತಿಯನ್ನು ನಿಧಾನವಾಗಿ ಹಿಂದಿನ ವಾರದ ಗರಿಷ್ಠ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು 50%-75% ರಷ್ಟು ಕಡಿಮೆಗೊಳಿಸುತ್ತಾರೆ ಮತ್ತು ದೇಹವು ಯಾವುದೇ ಬಲವಾದ ಪ್ರಯತ್ನದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು ಮೂರು ದಿನಗಳ ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ಸ್ಪರ್ಧೆಗೂ ಮೊದಲು ನಡೆಸಿದ ದೂರದ ತರಬೇತಿಯು ಎರಡು ವಾರಗಳಿಗಿಂತ ಕಡಿಮೆಯಾಗಿರುವುದಿಲ್ಲ. ತರಬೇತಿಯ ಈ ಹಂತವನ್ನು ಟೇಪರಿಂಗ್ ಎಂದು ಕರೆಯಲಾಗುತ್ತದೆ. ಅವರ ದೇಹವು ಹೆಚ್ಚು ಗ್ಲೈಕೋಜೆನ್ ಅನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ಮ್ಯಾರಥಾನ್‌ನ ಮೊದಲಿನ ವಾರದ ಸಂದರ್ಭದಲ್ಲಿ ಹಲವು ಮ್ಯಾರಥಾನ್ ಓಟಗಾರರು "ಕಾರ್ಬೋ-ಲೋಡ್" (ಒಟ್ಟಾರೆ ಕ್ಯಾಲೋರಿ ಸೇವಿಸುವ ಪ್ರಮಾಣವನ್ನು ಸ್ಥಿರವಾಗಿರಿಸಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಹೆಚ್ಚಿಸುವುದು) ಅನ್ನೂ ಸಹ ಮಾಡುತ್ತಾರೆ.

ಓಟದ ತಕ್ಷಣದ ಮೊದಲು, ಜೀರ್ಣಕ್ರಿಯೆಯ ಸಮಸ್ಯೆಯನ್ನು ತಪ್ಪಿಸಲು ಹಲವು ಓಟಗಾರರು ಘನ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೂರವುಳಿಯುತ್ತಾರೆ. ಅವರು ಸಂಪೂರ್ಣವಾಗಿ ಮೊದಲು ನೀರು ಸೇವಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಓಟದ ಮೊದಲು ಲಘು ವ್ಯಾಯಾಮವು ಸ್ನಾಯುಗಳನ್ನು ಚುರುಕಾಗಿಸುತ್ತದೆ ಎಂದು ನಂಬಲಾಗಿದೆ. ಕೆಲವು ಆಟಗಾರರು ಓಟದ ನಂತರದ ಸಂದರ್ಭದಲ್ಲಿ ಅತಿಯಾದ ಉಷ್ಣತೆಯನ್ನು ತಪ್ಪಿಸಲು ತಮ್ಮ ಅಂತರ್ಗತ ಉಷ್ಣತೆಯನ್ನು ಕಡಿಮೆಗೊಳಿಸಲು ಮಂಜುಗಡ್ಡೆಯ ನಡುಗವಚವನ್ನು ಧರಿಸುತ್ತಾರೆ.

ಓಟದ ಸಂದರ್ಭದಲ್ಲಿ[ಬದಲಾಯಿಸಿ]

೨೦೦೭ ರ ಬಾರ್ಸಿಲೋನಾ ಮ್ಯಾರಥಾನ್

ಮ್ಯಾರಥಾನ್ ಓಡುವಿಕೆಯ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಸ್ಥಿರವಾದ ಓಟದ ವೇಗವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಲು ತರಬೇತುದಾರರು ಶಿಫಾರಸು ಮಾಡುತ್ತಾರೆ. ಅನನುಭವಿ ಓಟಗಾರರು ಓಟದ ಎರಡನೆಯ ಭಾಗಕ್ಕೆ ಶಕ್ತಿಯನ್ನು ಉಳಿಸಿಕೊಳ್ಳಲು ತಮ್ಮ ಸರಾಸರಿ ಗುರಿಯ ನಡಿಗೆಗಿಂತ ನಿಧಾನವಾಗಿ ಪ್ರಾರಂಭಿಸಲು ಕೆಲವರು ಸಲಹೆ ನೀಡುತ್ತಾರೆ (ಋಣಾತ್ಮಕ ವಿಭಜನೆಗಳು).[೪೩] ಉದಾಹರಣೆಗಾಗಿ, ಮೊದಲು ಐದರಿಂದ ಎಂಟು ಮೈಲಿಗಳು (8-13 ಕಿಮೀ) ದೂರವನ್ನು ಪ್ರತಿ ಮೈಲಿಗೆ 15-20 ಸೆಕೆಂಡುಗಳ ವೇಗದಲ್ಲಿ, ನಂತರಕ್ಕಾಗಿ ಗುರಿಯ ವೇಗಕ್ಕಿಂತ ನಿಧಾನವಾಗಿ ಓಡಬಹುದು.

ಸಾಮಾನ್ಯವಾಗಿ, ಗರಿಷ್ಠ ಅನುಮತಿಸುವ ಸಮಯವು ಸುಮಾರು ಆರು ಗಂಟೆಗಳಾಗಿದ್ದು, ಅದರ ನಂತರ ಮ್ಯಾರಥಾನ್ ಮಾರ್ಗವನ್ನು ಮುಚ್ಚಲಾಗುತ್ತದೆ, ಆದರೂ ಕೆಲವು ದೊಡ್ಡ ಮ್ಯಾರಥಾನ್‌ಗಳಲ್ಲಿ (ಮಿರ್ಟಲ್ ಬೀಜ್, ಕಾರ್ಪ್ಸ್ ಮತ್ತು ಹೊನೊಲುಲು) ತುಂಬಾ ಹೆಚ್ಚಿನ ಸಮಯದವರೆಗೆ ಮಾರ್ಗವನ್ನು ತೆರೆದಿರಲಾಗುತ್ತದೆ (ಎಂಟು ಗಂಟೆಗಳು ಅಥವಾ ಹೆಚ್ಚು).

ಶಿಷ್ಟಾಚಾರ[ಬದಲಾಯಿಸಿ]

ನ್ಯೂಯಾರ್ಕ್, ಚಿಕಾಗೋ, ಲಂಡನ್ ಮತ್ತು ಬರ್ಲಿನ್‌ನಂತಹ ಆಧುನಿಕ ಮ್ಯಾರಥಾನ್‌ಗಳು ಸಾವಿರಾರು ಓಟಗಾರರು ಮತ್ತು ಲಕ್ಷಾಂತರ ಪ್ರೇಕ್ಷಕರನ್ನು ಹೊಂದಿರುತ್ತವೆ. ನಿಬಿಡವಾದ ಜನಸಂಖ್ಯೆಯಲ್ಲಿ ಓಡುವಾಗ ಇತರ ಓಟಗಾರರಿಗೆ ಸಾಮಾನ್ಯವಾದ ಸೌಜನ್ಯತೆಯು ಅಗತ್ಯವಾಗಿರುತ್ತದೆ.[೪೪] ನಡೆ/ಓಡು ತಂತ್ರವನ್ನು ಅನುಸರಿಸುವವರು ಅಥವಾ ಕೇವಲ ನಡೆದಾಡುವವರು ಒಂದೇ ಬದಿಯಲ್ಲಿ ಚಲಿಸುತ್ತಾ, ರಸ್ತೆಯ ಮಧ್ಯಭಾಗವನ್ನು ವೇಗದ ಓಟಗಾರರಿಗೆ ಬಿಟ್ಟುಕೊಡಲು ಉತ್ತೇಜಿಸಲಾಗಿದೆ.

ಸಮೂಹದಲ್ಲಿನ ಓಟಗಾರರು ಇತರ ಓಟಗಾರರು ಸಾಗಲು ತಡೆಯಾಗದಂತೆ ರಸ್ತೆಯನ್ನು ನಿರ್ಬಂಧಿಸದಿರಲು ಉತ್ತೇಜಿಸಲಾಗಿದೆ. ಎರಡು ಅಥವಾ ಮೂರು ಓಟಗಾರರು ಜೊತೆಜೊತೆಯಲ್ಲಿ ಸಾಗಲು ಶಿಫಾರಸು ಮಾಡಲಾಗಿದೆ. ದೊಡ್ಡ ಸಮೂಹದವರು ಏಕೈಕ ಅಥವಾ ಎರಡು ಪಂಕ್ತಿಗಳಲ್ಲಿ ಸಾಗಲು ಪರಿಗಣಿಸಬಹುದು.

ವಿಶ್ವದಾದ್ಯಂತ ಹಲವು ಮ್ಯಾರಥಾನ್‌ಗಳು ಸಮಯ ಮಿತಿಯನ್ನು ಹೊಂದಿದ್ದು, ಅಷ್ಟರೊಳಗೆ ಎಲ್ಲಾ ಓಟಗಾರರು ಅಂತಿಮ ಗೆರೆಯನ್ನು ದಾಟಿರಬೇಕು. ಅದಕ್ಕಿಂತ ನಿಧಾನವಾಗಿ ಬರುವವರನ್ನು ಸ್ವೀಪರ್ ಬಸ್ ಕರೆದುಕೊಂಡು ಬರುತ್ತದೆ. ಹಲವು ಸಂದರ್ಭಗಳಲ್ಲಿ, ಮ್ಯಾರಥಾನ್ ಆಯೋಜಕರು ಸಂಚಾರ ವ್ಯವಸ್ಥೆಯು ಸಾಮಾನ್ಯ ಸ್ಥಿತಿಗೆ ಮರಳುವಂತೆ ರಸ್ತೆಗಳು ಮರು-ತೆರೆಯಬೇಕಾಗಬಹುದು. ಬಸ್‌ನಲ್ಲಿ ಬರಲು ನಿರಾಕರಿಸುವುದು ಸಂಚಾರಕ್ಕೆ ಅಡಚಣೆ ಉಂಟುಮಾಡಬಹುದು ಮತ್ತು ಆಯೋಜಕರಿಗೆ ಮುಜುಗರವನ್ನುಂಟುಮಾಡಬಹುದು.

ನೀರು ಸೇವಿಸುವಿಕೆಯ ಅಪಾಯಗಳು[ಬದಲಾಯಿಸಿ]

ಮ್ಯಾರಥಾನ್ ನೀರು ನಿಲ್ಲುತ್ತಿದ್ದಂತೆ ಸ್ವಯಂಸೇವಕರೊಬ್ಬರು ನೀರಿನೊಂದಿಗೆ ಕೈ ಚಾಚಿದ್ದಾರೆ

ಎಲ್ಲಾ ಓಟಗಾರರಿಗೆ ಓಟದ ಸಂದರ್ಭದಲ್ಲಿ ದ್ರವ ಪದಾರ್ಥಗಳನ್ನು ಸೇವಿಸುವುದು ಪ್ರಮುಖವಾಗಿದೆ, ಆದರೆ ಕೆಲವು ಸಂದರ್ಭಗಳಲ್ಲಿ ಅತೀ ಹೆಚ್ಚು ದ್ರವ ಪದಾರ್ಥದ ಸೇವನೆಯು ಹಾನಿಕರವೂ ಆಗಿರುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಕುಡಿಯುವುದು ಓಟದ ಸಂದರ್ಭದಲ್ಲಿ ನಷ್ಟವಾಗುತ್ತದೆ ಮತ್ತು ರಕ್ತದಲ್ಲಿ ಸೋಡಿಯಂನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ (ಸ್ಥಿತಿಯನ್ನು ಹೈಪೋನಾಟ್ರೇಮಿಯಾ ಎಂದು ಕರೆಯಲಾಗುತ್ತದೆ), ಅದು ವಾಂತಿ ಮಾಡುವಿಕೆ, ಬಿಗಿಯಾದ ಹಿಡಿತಗಳು, ಕೋಮಾ ಮತ್ತು ಸಾವಿಗೂ ಕಾರಣವಾಗಬಹುದು.[೪೫][೪೬] ಓಟದ ಸಂದರ್ಭದಲ್ಲಿ ಉಪ್ಪಿನ ಪ್ಯಾಕೇಟುಗಳ ಸೇವನೆಯು ತೊಂದರೆಯನ್ನು ಉಪಶಮನಗೊಳಿಸುತ್ತದೆ. "ಬಾಯಾರಿಕೆಗಿಂತ ಮೊದಲು ಕುಡಿಯುವ" ಬದಲು ಓಟಗಾರರು ಬಾಯಾರಿಕೆಯಾದಾಗ ಮಾತ್ರ ಕುಡಿಯುವಂತೆ 2001 ರಲ್ಲಿ ಅಂತರಾಷ್ಟ್ರೀಯ ಮ್ಯಾರಥಾನ್ ವೈದ್ಯಕೀಯ ನಿರ್ದೇಶಕರುಗಳ ಸಂಸ್ಥೆಯು ಎಚ್ಚರಿಕೆಯೊಂದನ್ನು ನೀಡಿದೆ

ಪುರುಷರಿಗಿಂತ ಮಹಿಳೆಯರು ಹೈಪೋನೇಟ್ರೇಮಿಯಾಗೆ ಹೆಚ್ಚು ತುತ್ತಾಗುತ್ತಾರೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿನ ಅಧ್ಯಯನವು 2002 ರ ಬೋಸ್ಟನ್ ಮ್ಯಾರಥಾನ್ಅನ್ನು ಪೂರ್ಣಗೊಳಿಸಿದ 13% ಓಟಗಾರರು ಹೈಪೋನೆಟ್ರೇಮಿಯಾವನ್ನು ಹೊಂದಿದ್ದರು ಎಂಬುದನ್ನು ಕಂಡುಕೊಂಡಿದೆ.[೪೭]

4+ ಗಂಟೆಗಳ ಓಟಗಾರನು ಹೈಪೋನೇಟ್ರೇಮಿಯಾದ ಭಯವಿಲ್ಲದೇ ಪ್ರತಿ 20-30 ನಿಮಿಷಗಳಿಗೊಮ್ಮೆ 4-೬ ದ್ರಾವಣ ಔನ್ಸ್‌ಗಳಷ್ಟು (120-170 ಮಿಲೀ) ಕುಡಿಯಬಹುದು.[ಸೂಕ್ತ ಉಲ್ಲೇಖನ ಬೇಕು] ಕ್ರೀಡಾ ಪಾನೀಯಗಳು ಅಥವಾ ಉಪ್ಪುಸಹಿತ ಲಘು ಉಪಹಾರಗಳೂ ಸಹ ಅಪಾಯವನ್ನು ಕಡಿಮೆಗೊಳಿಸುತ್ತದೆ. ಹೈಪೋನೇಟ್ರೇಮಿಯಾದಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸಲು ಸ್ವಲ್ಪ ಪ್ರಮಾಣದ ಸಾರೀಕೃತ ಉಪ್ಪು ದ್ರಾವಣವನ್ನು ಅಭಿದಮನಿಯೊಳಗೆ ನೀಡಬಹುದು. ಕೆಲವು ಓಟಗಾರರು ಓಟದ ಮೊದಲು ತಮ್ಮ ತೂಕವನ್ನು ಪರಿಶೀಲಿಸಿಕೊಂಡು ಫಲಿತಾಂಶಗಳನ್ನು ಅವರ ಎದೆಯ ಮೇಲ್ಭಾಗದಲ್ಲಿ ಬರೆದುಕೊಳ್ಳುತ್ತಾರೆ. ಯಾವುದೇ ಅನಾಹುತ ಸಂಭವಿಸಿದರೆ, ರೋಗಿಯು ಅತೀ ಹೆಚ್ಚಿನ ನೀರನ್ನು ಸೇವಿಸಿದ್ದಾರೆಯೇ ಎಂಬುದನ್ನು ತಿಳಿಸಲು ಪ್ರಥಮ ಚಿಕಿತ್ಸೆಯ ಕಾರ್ಯಕರ್ತರು ತೂಕದ ಮಾಹಿತಿಯನ್ನು ಬಳಸಿಕೊಳ್ಳಬಹುದು.

ಗ್ಲೈಕೋಜೆನ್ ಮತ್ತು "ಗೋಡೆ"[ಬದಲಾಯಿಸಿ]

ಚಿತ್ರ:GeorgeMalekakis2006.jpg
2006ರ ಮೆಲ್ಬೋರ್ನ್ ಮ್ಯಾರಥಾನ್‌ನ ಅಂತಿಮ ಗೆರೆಯ ಸ್ವಲ್ಪವೇ ಮೊದಲಿಗೆ ಸ್ಪರ್ಧಾಳುವೊಬ್ಬರು ಕುಸಿದು ಬಿದ್ದಿದ್ದಾರೆ

ವ್ಯಕ್ತಿಯು ಸೇವಿಸುವ ಕಾರ್ಬೇಹೈಡ್ರೇಟುಗಳನ್ನು ಕರುಳು ಮತ್ತು ಸ್ನಾಯುಗಳು ಸಂಗ್ರಹಕ್ಕಾಗಿ ಗ್ಲೈಕೋಜೆನ್ ಆಗಿ ಮಾರ್ಪಡಿಸುತ್ತವೆ. ತ್ವರಿತ ಶಕ್ತಿಯನ್ನು ನೀಡಲು ವೇಗವಾಗಿ ಗ್ಲೈಕೋಜೆನ್ ದಹಿಸುತ್ತದೆ. ಓಟಗಾರರು ತಮ್ಮ ದೇಹದಲ್ಲಿ ಸುಮಾರು 8 ಎಂಜೆ ಅಥವಾ 2,000 ಕಿಕ್ಯಾಲೋರಿ ಗಳಷ್ಟು ಪ್ರಮಾಣದ ಗ್ಲೈಕೋಜೆನ್ ಅನ್ನು ಸಂಗ್ರಹಿಸಬಹುದು, ಇದು ಸುಮಾರು 30 ಕಿಮೀ/18-20 ಮೈಲುಗಳ ಓಟಕ್ಕೆ ಸಾಕಾಗುತ್ತದೆ. ಆ ಸಮಯದಲ್ಲಿ ಓಡುವುದು ವಿಪರೀತವಾಗಿ ಕಠಿಣವಾಗುತ್ತದೆ ಎಂದು ಹಲವು ಓಟಗಾರರು ಹೇಳುತ್ತಾರೆ.[೪೮] ಗ್ಲೈಕೋಜೆನ್ ಪ್ರಮಾಣ ಕಡಿಮೆಯಾದಾಗ, ಸಂಗ್ರಹಿತವಾದ ಕೊಬ್ಬನ್ನು ದೇಹವು ದಹಿಸಬೇಕಾಗುತ್ತದೆ, ಆದರೆ ಇದು ತಕ್ಷಣ ದಹಿಸುವುದಿಲ್ಲ. ಇದು ಸಂಭವಿಸಿದಾಗ, ಓಟಗಾರನು ಹಠಾತ್ ಆಗಿ ಆಯಾಸವನ್ನು ಅನುಭವಿಸುತ್ತಾನೆ ಮತ್ತು "ಗೋಡೆಗೆ ಅಪ್ಪಳಿಸುತ್ತಾನೆ" ಎಂದು ಹೇಳಲಾಗುತ್ತದೆ. ಹಲವು ತರಬೇತುದಾರರ ಅನುಸಾರ [೪೯], ಮ್ಯಾರಥಾನ್‌ಗೆ ತರಬೇತಿಯನ್ನು ನೀಡುವ ಉದ್ದೇಶವು "ಗೋಡೆಯ" ಆಯಾಸವು ಹೆಚ್ಚು ಹಠಾತ್ ಆಗದಂತೆ ಲಭ್ಯವಿರುವ ಸೀಮಿತ ಗ್ಲೈಕೋಜೆನ್ ಅನ್ನು ಹೆಚ್ಚಿಸುವುದಾಗಿದೆ. ಈ ಭಾಗವನ್ನು ಓಟದ ಮೊದಲಿನ ಭಾಗದಲ್ಲಿಯೂ ಸಹ ದಹಿಸಿದ ಕೊಬ್ಬಿನಿಂದ ಹೆಚ್ಚು ಪ್ರಮಾಣದ ಶಕ್ತಿಯನ್ನು ಬಳಸುವ ಮೂಲಕ ಹಾಗೂ ಈ ಮೂಲಕ ಗ್ಲೈಕೋಜೆನ್ ಅನ್ನು ಸಂರಕ್ಷಿಸುವ ಮೂಲಕ ಸಾಧಿಸಲಾಗುತ್ತದೆ.

ಕಾರ್ಬೋಹೈಡ್ರೇಟ್ ಆಧಾರಿತ "ಶಕ್ತಿಯ" ಜೆಲ್‌ಗಳು ಓಟದ ಸಮಯದಲ್ಲಿ ಶಕ್ತಿಯನ್ನು ಅರಗಿಸಿಕೊಳ್ಳಲು ಸುಲಭಗೊಳಿಸುವುದರಿಂದ ಓಟಗಾರರು ಇದನ್ನು "ಗೋಡೆಯ ಬಡಿತ" ದ ಪರಿಣಾಮವನ್ನು ತಪ್ಪಿಸಲು ಅಥವಾ ಕಡಿಮೆಗೊಳಿಸಲು ಬಳಸುತ್ತಾರೆ. ಶಕ್ತಿಯ ಜೆಲ್‌ಗಳು ಸಾಮಾನ್ಯವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಂನ ಭಿನ್ನ ಪ್ರಮಾಣಗಳನ್ನು ಮತ್ತು ಕೆಲವೊಂದು ಕೆಫೀನ್ ಅನ್ನೂ ಸಹ ಒಳಗೊಂಡಿರುತ್ತದೆ. ಅವುಗಳನ್ನು ನಿರ್ದಿಷ್ಟ ಪ್ರಮಾಣದ ನೀರಿನೊಂದಿಗೆ ಸೇವಿಸಬೇಕಾಗುತ್ತದೆ. ಶಕ್ತಿಯ ಜೆಲ್‌ಗಳನ್ನು ಓಟದ ಸಮಯದಲ್ಲಿ ಎಷ್ಟು ಆಗಾಗ್ಗೆ ಸೇವಿಸಬೇಕು ಎಂಬ ಬಗೆಗಿನ ಶಿಫಾರಸುಗಳು ವ್ಯಾಪಕವಾಗಿ ವ್ಯತ್ಯಾಸವಾಗಿದೆ.[೪೯]

ಬೋಸ್ಟನ್ ಮ್ಯಾರಥಾನ್‌ನ ೨೫ ನೇ ಮೈಲಿಯಲ್ಲಿ ಓಟಗಾರರೊಬ್ಬರು ಪ್ರೋತ್ಸಾಹ ಪಡೆಯುತ್ತಿದ್ದಾರೆ

ಜೆಲ್‌ಗಳಿಗೆ ಪರ್ಯಾಯಗಳೆಂದರೆ ಘನ ಕ್ಯಾಂಡಿ, ಕುಕೀಗಳು, ಸಾರೀಕರಿಸಿದ ಸಕ್ಕರೆ ಅಥವಾ ವೈಯಕ್ತಿಕ ಓಟಗಾರನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಸರಳ ಕಾರ್ಬೋಹೈಡ್ರೇಟುಗಳು ಹೆಚ್ಚಿಗೆ ಪ್ರಮಾಣದಲ್ಲಿರುವ ಯಾವುದೇ ಆಹಾರವಾಗಿದೆ. ತರಬೇತಿಯ ಸಮಯದಲ್ಲಿ ಶಕ್ತಿಯ ಪೂರಕಗಳನ್ನು ಸೇವಿಸುವುದನ್ನು ಪ್ರಯತ್ನಿಸುವ ಹಲವು ಓಟಗಾರರು ಯಾವುದು ಹೆಚ್ಚು ಅತ್ಯುತ್ತಮವಾಗಿ ಅವರಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಿರ್ಧರಿಸಲು ಓಡುತ್ತಾರೆ. ಓಡುವಾಗ ಆಹಾರವನ್ನು ಸೇವಿಸುವುದು ಓಟಗಾರನಿಗೆ ಕೆಲವೊಮ್ಮೆ ಅನಾರೋಗ್ಯವನ್ನು ಉಂಟುಮಾಡುತ್ತದೆ. ಓಟದ ಸಮಯದಲ್ಲಿ ಅಥವಾ ಓಟದ ಮೊದಲು ಯಾವುದೇ ಹೊಸ ಆಹಾರ ಅಥವಾ ಔಷಧಿಯನ್ನು ಸೇವಿಸದಂತೆ ಓಟಗಾರರಿಗೆ ಸಲಹೆ ನೀಡಲಾಗಿದೆ. ಯಾವುದೇ ಪ್ರಕಾರದ ಉದ್ದೀಪನವಲ್ಲದ, ಪ್ರಚೋದಕ-ರಹಿತ ಪ್ರಕಾರದ ನೋವು ಪರಿಹಾರಕಗಳನ್ನು ತೆಗೆದುಕೊಳ್ಳದಂತೆ ದೂರವುಳಿಯುವುದು ಕೂಡ ಪ್ರಮುಖವಾಗಿದೆ NSAIDS, ಉದಾ., ಆಸ್ಪಿರಿನ್, ಇಬುಪ್ರೋಫಿನ್, ನಾಪ್ರೋಕ್ಸೆನ್), ಏಕೆಂದರೆ ಈ ಔಷಧಗಳು ಮೂತ್ರಪಿಂಡಗಳು ರಕ್ತದ ಚಲನೆಯನ್ನು ನಿಯಂತ್ರಿಸುವ ವಿಧಾನವನ್ನು ಬದಲಾಯಿಸುತ್ತದೆ ಮತ್ತು ಪ್ರಮುಖವಾಗಿ ಮಧ್ಯಮ ಮತ್ತು ಗಂಭೀರ ನಿರ್ಜಲೀಕರಣದ ಸಂದರ್ಭಗಳಲ್ಲಿ ಗಂಭೀರ ಮೂತ್ರಪಿಂಡದ ತೊಂದರೆಗಳಿಗೆ ಕಾರಣವಾಗಬಹುದು.[೪೯]

ಮ್ಯಾರಥಾನ್ ನಂತರ[ಬದಲಾಯಿಸಿ]

ಮ್ಯಾರಥಾನ್‌ ಭಾಗವಹಿಸುವಿಕೆಯು ವಿವಿಧ ವೈದ್ಯಕೀಯ, ಸ್ನಾಯುಎಲುಬುಗೂಡಿನ, ಮತ್ತು ಚರ್ಮರೋಗದ ದೂರುಗಳಿಗೆ ಕಾರಣವಾಗಬಹುದು.[೫೦] ಮ್ಯಾರಥಾನ್ ಮುಗಿದ ನಂತರದ ಮೊದಲ ವಾರದ ಸಮಯದಲ್ಲಿ ಸ್ನಾಯುವಿನ ವಿಳಂಬಿತ ಬಿರುಸಾದ ನೋವು ಓಟಗಾರರನ್ನು ಬಾಧಿಸುವ ಸಾಮಾನ್ಯವಾದ ಸ್ಥಿತಿಯಾಗಿದೆ.[೫೧] ಡಿಓಎಮ್ಎಸ್ ಗೆ ಪೂರಕವಾಗಿ ನೋವನ್ನು ಉಪಶಮನಗೊಳಿಸಲು ವಿವಿಧ ಪ್ರಕಾರದ ಕಠಿಣವಲ್ಲದ ವ್ಯಾಯಾಮ ಅಥವಾ ಮಸಾಜ್ ಅನ್ನು ಶಿಫಾರಸು ಮಾಡಲಾಗಿದೆ.[೫೧] ಆಗಾಗ್ಗೆ ಬಾಧಿಸುವ ಚರ್ಮ ಸಂಬಂಧಿತ ಸಮಸ್ಯೆಗಳಲ್ಲಿ "ಜಾಗರ್ಸ್ ನಿಪ್ಪಲ್","ಜಾಗರ್ಸ್ ಟೋಯ್", ಮತ್ತು ಬೊಕ್ಕೆಗಳು ಒಳಗೊಂಡಿದೆ.[೫೨]

ಅಲ್ಪಾವಧಿಗೆ ರೋಗನಿರೋಧಕ ವ್ಯವಸ್ಥೆಯು ನಿಗ್ರಹವಾಗುತ್ತದೆ ಎಂದು ಕಂಡುಬಂದಿದೆ. ರಕ್ತದ ರಾಸಾಯನಿಕ ಬದಲಾವಣೆಗಳನ್ನು ವೈದ್ಯರು ಹೃದಯದ ಅಸಮರ್ಪಕತೆ ಎಂದು ತಪ್ಪಾಗಿ ಪತ್ತೆಹಚ್ಚುವುದಕ್ಕೆ ಕಾರಣವಾಗಬಹುದು.

ದೀರ್ಘಾವಧಿಯ ತರಬೇತು ಓಟ ಮತ್ತು ಮ್ಯಾರಥಾನ್ ನಂತರ, ಗ್ಲೈಕೋಜನ್ ಸಂಗ್ರಹವನ್ನು ಬದಲಾಯಿಸಲು ಮತ್ತು ಸ್ನಾಯುಗಳ ಚೇತರಿಕೆಗೆ ಸಹಕರಿಸಲು ಪ್ರೋಟೀನ್ ಗಾಗಿ ಕಾರ್ಬೋಹೈಡ್ರೇಟುಗಳನ್ನು ಸೇವಿಸುವುದನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಹೆಚ್ಚಿನದಾಗಿ, ದೇಹದ ಕೆಳಭಾಗವನ್ನು 20 ನಿಮಿಷದವರೆಗೆ ತಣ್ಣನೆಯ ಅಥವಾ ಮಂಜುಗಡ್ಡೆಯ ನೀರಿನಲ್ಲಿ ಮುಳುಗಿಸಿಡುವುದರಿಂದ ರಕ್ತವು ಕಾಲಿನ ಸ್ನಾಯುಗಳತ್ತ ಚಲಿಸಿ ಅದು ಬೇಗನೆ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ.[೫೩]

ಹೃದಯದ ಅಪಾಯಗಳು[ಬದಲಾಯಿಸಿ]

೨೦೦೯ ಬೋಸ್ಟನ್ ಮ್ಯಾರಥಾನ್‌ನಲ್ಲಿ ಗಾಲಿಕುರ್ಚಿ ವಿಭಾಗದ ಸ್ಪರ್ಧಾಳುಗಳು

1996 ರಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ [೫೪], ಮ್ಯಾರಥಾನ್ ಸಂದರ್ಭದಲ್ಲಿ ಅಥವಾ ನಂತರದ 24 ಗಂಟೆಗಳ ಅವಧಿಯಲ್ಲಿ ಮಾರಣಾಂತಿಕ ಹೃದಯಾಘಾತವನ್ನು ಹೊಂದುವ ಅಪಾಯದ ಸಾಧ್ಯತೆಯು ಕ್ರೀಡಾಪಟುವಿನ ಓಟದ ಜೀವನದಲ್ಲಿ ಸುಮಾರು 50,000 ದಲ್ಲಿ 1 ಪ್ರಮಾಣದಷ್ಟು[೫೫]- ಇದನ್ನು ಲೇಖಕರು "ಅತ್ಯಂತ ಸ್ವಲ್ಪ" ಅಪಾಯವೆಂದು ಚಿತ್ರಿಸಿದ್ದಾರೆ. ಲೇಖನದಲ್ಲಿ ಮುಂದುವರಿದು, ಅಪಾಯವು ತೀರಾ ಚಿಕ್ಕದಾಗಿರುವುದರಿಂದ, ಮ್ಯಾರಥಾನ್ ಪಟುಗಳಿಗೆ ಹೃದಯದ ಪರಿಶೀಲನೆಯ ಯೋಜನೆಯು ಸಮರ್ಥನೀಯವಾದುದಲ್ಲ ಎಂಬುದಾಗಿ ಹೇಳಲಾಗಿದೆ. ಆದರೆ, ಈ ಅಧ್ಯಯನವು ಮ್ಯಾರಥಾನ್ ಓಟದ ಒಟ್ಟಾರೆ ಲಾಭ ಅಥವಾ ಓಟದ ಹೃದಯದ ಆರೋಗ್ಯದ ಅಪಾಯವನ್ನು ನಿರ್ಣಯಿಸುವ ಪ್ರಯತ್ನವಲ್ಲ.

2006 ರಲ್ಲಿ, ಕೆಲವು ಪ್ರೋಟೀನ್‌ಗಳಿಗೆ (ನೋಡಿ ಟ್ರೋಪೋನಿನ್) ಗಣ್ಯರಲ್ಲದ 60 ಮ್ಯಾರಥಾನ್ ಪಟುಗಳ ಓಟವನ್ನು ಪರೀಕ್ಷಿಸಲಾಯಿತು, ಮತ್ತು ಅವರು ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ನಂತರ ಹೃದಯದ ಹಾನಿ ಅಥವಾ ಅಪಸಾಮಾನ್ಯತೆಯನ್ನು ಸೂಚಿಸಿತು ಮತ್ತು ಅವರಿಗೆ ಓಟದ ನಂತರ ಮತ್ತು ಮೊದಲು ಅಲ್ಟ್ರಾ‌ಸೌಂಡ್ ಸ್ಕ್ಯಾನ್ ಅನ್ನು ಮಾಡಲಾಯಿತು. ಅಧ್ಯಯನದ ಪ್ರಕಾರ, ಆ 60 ನಮೂನೆಗಳಲ್ಲಿ, ಓಟದ ಮೊದಲು ವಾರಕ್ಕೆ 35 ಮೈಲುಗಳಿಗಿಂತ ಕಡಿಮೆ ಓಡಿದ ಓಟಗಾರರು ಹೆಚ್ಚು ಸಂಭಾವ್ಯವಾಗಿ ಸ್ವಲ್ಪ ಪ್ರಮಾಣದ ಹೃದಯದ ಹಾನಿ ಅಥವಾ ಅಪಸಾಮಾನ್ಯತೆಯನ್ನು ತೋರಿಸುವ ಸಾಧ್ಯತೆ ಇತ್ತು, ಆದರೆ ವಾರದಲ್ಲಿ 45 ಮೈಲುಗಳಿಗಿಂತ ಹೆಚ್ಚು ಓಡಿದ್ದ ಓಟಗಾರರು ಕೆಲವೇ ಅಥವಾ ಯಾವುದೇ ಹೃದಯದ ತೊಂದರೆಗಳನ್ನು ತೋರಿಸಲಿಲ್ಲ.[೫೬]

2007 ರಲ್ಲಿ, 28 ವರ್ಷದ ಪ್ರಮುಖ ದೂರದ ಓಟಗಾರನಾದ ರಯಾನ್ ಶೇ ಅವರು ಯುಎಸ್ ಒಲಂಪಿಕ್ ಮ್ಯಾರಥಾನ್ ಪರೀಕ್ಷಾ ಪ್ರದರ್ಶನಗಳಲ್ಲಿ ಕುಸಿದು ಮೃತಪಟ್ಟರು. ಅವರ ಸಾವನ್ನು ಪೂರ್ವ ಅಸ್ತಿತ್ವದಲ್ಲಿದ್ದ ಹೃದಯದ ವೈಪರೀತ್ಯದ ಕಾರಣದಿಂದ ಎಂದು ವರದಿ ಮಾಡಲಾಯಿತು.

ಬಹು ಮ್ಯಾರಥಾನ್‌ಗಳು[ಬದಲಾಯಿಸಿ]

ಮಹಿಳೆಯರ ಮ್ಯಾರಥಾನ್‌ನಲ್ಲಿ ಕ್ಯಾಥೆರಿನ್ ಡೆರೆಬಾ ಅವರು ಎರಡನೆಯ ಅತೀ ವೇಗದ ಸಮಯದ ದಾಖಲೆಯನ್ನು ಹೊಂದಿದ್ದಾರೆ

ಮ್ಯಾರಥಾನ್ ಓಟಗಳು ಹೆಚ್ಚು ಜನಪ್ರಿಯವಾದಂತೆ, ಕೆಲವು ಮ್ಯಾರಥಾನ್‌ಗಳ ಸರಣಿಗಳಲ್ಲಿ ಭಾಗವಹಿಸುವುದನ್ನು ಒಳಗೊಂಡು ಗುರಿಗಳನ್ನು ಕೆಲವು ಕ್ರೀಡಾಪಟುಗಳು ಕೈಗೊಂಡರು.

ಅಮೇರಿಕದಲ್ಲಿ, ಪ್ರತಿಯೊಂದು ರಾಜ್ಯದಲ್ಲಿ (ಒಟ್ಟಾರೆ 50) ಜೊತೆಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ಮ್ಯಾರಥಾನ್‌ನಲ್ಲಿ ಓಡುವುದು ಜನಪ್ರಿಯ ಗುರಿಯಾಗಿದೆ.. ಸುಮಾರು 350 ಕ್ಕೂ ಹೆಚ್ಚು ಜನರು ಈ ಮಾರ್ಗವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಕೆಲವರು ಇದನ್ನು ಎಂಟು ಬಾರಿ ಪೂರ್ಣಗೊಳಿಸಿದ್ದಾರೆ.[೫೭] 2004 ರಲ್ಲಿ, ಮಂಡಿಯ ಕೆಳಗಿನ ಬಲಗಾಲನ್ನು ಕಳೆದುಕೊಂಡ ಮಿಯಾಮಿಯ ಚಕ್ ಬ್ರಯಾಂಟ್ ಅವರು ಈ ಮಾರ್ಗವನ್ನು ಪೂರ್ಣಗೊಳಿಸಿದ ಮೊದಲ ಅಂಗವಿಚ್ಛೇದಿತರಾಗಿದ್ದಾರೆ.[೫೮] ಬ್ರಯಾಂಟ್ ಅವರು ತಮ್ಮ ಕೃತಕ ಅಂಗದಲ್ಲಿ ಒಟ್ಟು 59 ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರತಿ ಏಳು ಖಂಡಗಳಲ್ಲಿ ಇಪ್ಪತ್ತೇಳು ಜನರು ಮ್ಯಾರಥಾನ್ ಓಡಿದ್ದಾರೆ, ಮತ್ತು 31 ಜನರು ಪ್ರತಿ ಕೆನಡಿಯನ್ ಪ್ರಾಂತ್ಯದಲ್ಲಿ ಮ್ಯಾರಥಾನ್ ಕ್ರಮಿಸಿದ್ದಾರೆ. 1980 ರಲ್ಲಿ, ಆತ್ಮವಿಶ್ವಾಸದ ಮ್ಯಾರಥಾನ್ ಎಂದೇ ಕರೆಯಲಾಗುವಲ್ಲಿ, ಕ್ಯಾನ್ಸರ್‌ನಲ್ಲಿ ತಮ್ಮ ಕಾಲನ್ನು ಕಳೆದುಕೊಂಡ ಟೆರ್ರಿ ಫಾಕ್ಸ್ ಅವರು ಒಂದು ಕೃತಕ ಕಾಲಿನಲ್ಲಿ ಓಡಿ, ತಮ್ಮ ಉದ್ದೇಶಿತ ಕ್ರಾಸ್-ಕೆನಡಾ ಕ್ಯಾನ್ಸರ್ ಧನ ಸಂಗ್ರಹಣೆ ಓಟದಲ್ಲಿ 5,373 kilometres (3,339 mi)* ಅನ್ನು ಗಳಿಸಿದರು, ಈ ಮೂಲಕ ಪ್ರತಿ 143 ಕ್ರಮಾನುಸರಾ ದಿನಗಳಿಗೆ ಯೋಜಿತ ಮ್ಯಾರಥಾನ್ ದೂರಕ್ಕೆ ನಿಕಟವಾದ ಸರಾಸರಿ 37 kilometres (23 mi)* ಕ್ಕೂ ಹೆಚ್ಚನ್ನು ಉಳಿಸಿಕೊಂಡರು.[೫೯] 2009 ರ ಫೆಬ್ರವರಿ 8 ರಂದು, ಜಾನ್ ವಾಲ್ಲೇಸ್ ಅವರು 100 ವಿವಿಧ ದೇಶಗಳಲ್ಲಿ ಮ್ಯಾರಥಾನ್‌ಗಳನ್ನು ಓಡಿದ ಮೊದಲ ವ್ಯಕ್ತಿಯಾದರು. ಆದರೆ, ಅವರ ಕೆಲವು ಓಟಗಳು ಅಧಿಕೃತ ಓಟಗಳಾಗಿರದೇ ಮ್ಯಾರಥಾನ್ ದೂರದಲ್ಲಿ ವೈಯಕ್ತಿಕ ಓಟಗಳಾಗಿದ್ದವು (ಉದಾ. ಕಾಂಬೋಡಿಯಾ); ಹೆಚ್ಚಿನದಾಗಿ ಅವರ ಕೆಲವು 'ರಾಷ್ಟ್ರಗಳು' ಸ್ವತಂತ್ರ್ಯವಾಗಿರಲಿಲ್ಲ (ಉದಾ ಫ್ರೆಂಚ್ ಪೋಲಿನೇಶಿಯಾ).[೬೦] ಈ ಹಿಂದೆ, ವ್ಯಾಲಿ ಹರ್ಮ್ಯಾನ್ ಅವರು 99 ವಿವಿಧ ರಾಷ್ಟ್ರಗಳಲ್ಲಿ ಮ್ಯಾರಥಾನ್ ಓಟವನ್ನು ಕೈಗೊಂಡಿದ್ದರು.

2003 ರಲ್ಲಿ ಬ್ರಿಟಿಷ್ ಸಾಹಸಿಗರಾದ ಸರ್ ರಾನುಲ್ಫ್ ಫೀನ್ನೆಸ್ ಅವರು ಏಳು ದಿನಗಳಲ್ಲಿ ಏಳು ಖಂಡಗಳಲ್ಲಿ ಏರು ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದರು.[೬೧] ಅವರು ಈ ಸಾಧನೆಯನ್ನು ಹೃದಯಾಘಾತದಿಂದ ಬಳಲುತ್ತಿದ್ದರೂ ಮತ್ತು ನಾಲ್ಕು ತಿಂಗಳ ಹಿಂದೆ ಅವಳಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡ ಬಳಿಕವೂ ಪೂರೈಸಿದ್ದರು.[೬೨]

2008 ರ ಡಿಸೆಂಬರ್ 14 ರಂದು, 64 ವರ್ಷದ ಲಾರಿ ಮ್ಯಾಕೋನ್ ಅವರು ಒಂದು ಕ್ಯಾಲೆಂಡರ್ ವರ್ಷದಲ್ಲಿ 105 ಮ್ಯಾರಥಾನ್‌ಗಳನ್ನು ಓಡುವ ಮೂಲಕ ದಾಖಲೆಯನ್ನು ಸ್ಥಾಪಿಸಿದರು.[೬೩]

2009 ರ ಸೆಪ್ಟೆಂಬರ್ 15 ರಂದು, ಹಾಸ್ಯನಟನಾದ 47 ವರ್ಷದ ಎಡ್ಡೀ ಇಜಾರ್ಡ್ ಅವರು ಅವರ 43ನೇ ಮ್ಯಾರಥಾನ್ ಅನ್ನು 51 ದಿನಗಳಲ್ಲಿ ಪೂರ್ಣಗೊಳಿಸಿದರು ಮತ್ತು ಮ್ಯಾರಥಾನ್‌ನಲ್ಲಿ ಅವರು ಯುನೈಟೆಡ್ ಕಿಂಗ್‌ಡಮ್‌ನ ಸುತ್ತಲೂ ಕ್ರಮಿಸಿದ್ದರು.[೬೪] ಈ ಸಾಧನೆಯನ್ನು ಇಂಗ್ಲೆಂಡಿನ ಪೋಷಕ ಸಂಸ್ಥೆ ಸ್ಪೋರ್ಟ್ಸ್ ರಿಲೀಫ್ ಗಾಗಿ ದಾನವನ್ನು ಹೆಚ್ಚಿಸಲು ಪೂರ್ಣಗೊಳಿಸಲಾಗಿತ್ತು. ತಮ್ಮ ಓಟವನ್ನು ಪ್ರಾರಂಭಿಸುವ ಮುನ್ನ, ಎಡ್ಡೀ ಅವರು ಕೇವಲ ಏಳು ವಾರಗಳ ತರಬೇತಿಯನ್ನು ಪಡೆದಿದ್ದರು (ಐದನ್ನು ಒಲಂಪಿಕ್ ತಂತ್ರಜ್ಞರೊಡನೆ).[೬೫]

ಯುರೋಪಿನಲ್ಲಿ ಓರ್ವನ ಜೀವಿತಾವಧಿಯಲ್ಲಿ ಒಟ್ಟಾರೆಯಾಗಿ ಅತ್ಯುತ್ತಮ ಸಂಖ್ಯೆಯ ಮ್ಯಾರಥಾನ್‌ಗಳನ್ನು ಓಡುವುದು ಕೆಲವರ ಗುರಿಯಾಗಿರುತ್ತದೆ. ಉದಾಹರಣೆಗಾಗಿ, ಅಲ್ಲಿ 100-ಕ್ಲಬ್ ಎಂದು ಕರೆಯಲಾಗುವುದಿರುತ್ತದೆ.[೬೬] ಅರ್ಹತೆಗಳಿಸಲು, ಓರ್ವನು 100 ಓಟಗಳನ್ನು ಓಡಿರಬೇಕಾಗುತ್ತದೆ.

ಕ್ರಮಾನುಸಾರ ವಾರಾಂತ್ಯಗಳ ಸರಣಿಗಳಲ್ಲಿ ಮ್ಯಾರಥಾನ್‌ಗಳನ್ನು ಓಡಲು ಪ್ರಯತ್ನಿಸುವುದು (ರಿಚರ್ಡ್ ವರ್ಲಿ, 159 ವಾರಾಂತ್ಯಗಳಲ್ಲಿ),[೬೭] ಅಥವಾ ನಿರ್ದಿಷ್ಟ ವರ್ಷದಲ್ಲಿ ಅಥವಾ ಜೀವಿತಾವಧಿಯಲ್ಲಿ ಹೆಚ್ಚು ಮ್ಯಾರಥಾನ್‌ಗಳನ್ನು ಓಡುವುದು ಇತರ ಗುರಿಗಳಾಗಿದೆ. ಬಹು ಮ್ಯಾರಥಾನ್ ಓಡುವುದರಲ್ಲಿ ಅಗ್ರಗಣ್ಯರಾಗಿದ್ದವರೆಂದರೆ ಓಹಿಯೋ, ಟೊಲೆಡೋನ ಸೈ ಮಾಹ್, ಅವರು 1988 ರಲ್ಲಿ ನಿಧನರಾಗುವ ಮುನ್ನ 524 ಮ್ಯಾರಥಾನ್‌ಗಳನ್ನು ಓಡಿದ್ದರು.[೬೮] ಉಟಾಹ್ ಪ್ರದೇಶದಲ್ಲಿ ನೆಲಸಿರುವ ಜಾನ್ ಬೋಜುಂಗ್ ಎಂಬ ಓಟಗಾರನು ನವೆಂಬರ್ 2007 ರವರೆಗೆ 170 ಅನುಕ್ರಮ ವಾರಗಳಲ್ಲಿ 258 ಮ್ಯಾರಥಾನ್‌ಗಳನ್ನು ಓಡಿರುವ ಪ್ರಸ್ತುತ "ಅನಧಿಕೃತ" ದಾಖಲೆಯನ್ನು ಹೊಂದಿದ್ದಾರೆ.[೬೯][೭೦] 2007 ರ ಜೂನ್ 30 ರ ವರೆಗೆ, ಜರ್ಮನಿಯ ಹೋರ್ಸ್ಟ್ ಪ್ರೈಸ್ಲರ್ ಅವರು ಮ್ಯಾರಥಾನ್ ಅಂತರ ಅಥವಾ ದೂರದಲ್ಲಿ 1214 ಮ್ಯಾರಥಾನ್‌ಗಳು ಜೊತೆಗೆ 347 ಅಲ್ಟ್ರಾ ಮ್ಯಾರಥಾನ್‌ಗಳನ್ನು ಒಳಗೊಂಡು ಒಟ್ಟಾರೆ 1561 ಸ್ಪರ್ಧೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.[೭೧] ಸಿಗ್ರಿಡ್ ಐಚ್ನರ್, ಕ್ರಿಸ್ಟಿಯನ್ ಹೊಟ್ಟಾಸ್ ಮತ್ತು ಹ್ಯಾನ್ಸ್-ಜೊವಾಚಿಮ್ ಮೆಯರ್ ಇವರು ಪ್ರತಿಯೊಬ್ಬರೂ ಸಹ 1000 ಕ್ಕೂ ಹೆಚ್ಚು ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದಾರೆ.[೭೨] ಅಮೇರಿಕದ ನಾರ್ಮ್ ಫ್ರಾಂಕ್ ಅವರು 945 ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ ಖ್ಯಾತಿ ಪಡೆದಿದ್ದಾರೆ.[೭೩]

2010 ರಲ್ಲಿ ಬೆಲ್ಜಿಯಂನ ಸ್ಟೆಫಾನ್ ಎಂಗೆಲ್ಸ್ ಅವರು ವರ್ಷದ ಪ್ರತಿ ದಿನದಂದು ಮ್ಯಾರಥಾನ್ ಓಡುವ ಸಾಹಸಕ್ಕೆ ಕೈ ಹಾಕಿದ್ದರು. ಹ್ಯಾಂಡ್‌ಬೈಕ್ ಸಹಾಯದಿಂದ ಅವರು ಕೆಲವೊಂದನ್ನು ಪೂರ್ಣಗೊಳಿಸದರೂ, ಗಾಯದ ಕಾರಣದಿಂದ, ಜಪಾನಿನ ಅಕಿನೋರಿ ಕುಸುಡಾ ಅವರು [೭೪] 52 ದಿನದಲ್ಲಿ ಓಡಿದ 52 ಮ್ಯಾರಥಾನ್‌ನ ಪ್ರಸ್ತುತ ದಾಖಲೆಯನ್ನು ಮುರಿದರು. ಎಂಗ್ಲೆಸ್ ಅವರು ಮೊದಲ 233 ದಿನಗಳಳ್ಲಿ 233 ಮ್ಯಾರಥಾನ್‌ಗಳನ್ನು ಓಡಿದರು ಮತ್ತು ಸೈಕಲ್ ಮಾಡಿದರು.[೭೫]

ಕೆಲವು ಓಟಗಾರರು ಹೆಚ್ಚಿನ ಅನುಕ್ರಮ ವರ್ಷಗಳಲ್ಲಿ ಅದೇ ಮ್ಯಾರಥಾನ್‌ಗಳನ್ನು ಓಡಲು ಸ್ಪರ್ಧಿಸುತ್ತಾರೆ. ಉದಾಹರಣೆಗಾಗಿ, ಜಾನಿ ಕೆಲ್ಲೀ ಅವರು 61 ಬೋಸ್ಟನ್ ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದಾರೆ.[೭೬] "ಗ್ರೌಂಡ್ ಪೌಂಡರ್ಸ್" ಎಂಬ ಅಡ್ಡಹೆಸರಿನ ನಾಲ್ಕು ಓಟಗಾರರಾದ ( ವಿಲ್ ಬ್ರೌನ್, ಮ್ಯಾಥ್ಯೂ ಜೇಫ್, ಆಲ್ಫ್ರೆಡ್ ರಿಚ್ಮಂಡ್ ಮತ್ತು ಮೆಲ್ ವಿಲಿಯಮ್ಸ್) ಅವರುಗಳು, ಎಲ್ಲಾ 32 ಅಮೇರಿಕ ಮರೀನ್ ಕಾರ್ಪ್ಸ್ ಮ್ಯಾರಥಾನ್ಗಳನ್ನು ಪೂರ್ಣಗೊಳಿಸಿದ್ದಾರೆ.[೭೭] ಅತ್ಯಂತ ಹೆಚ್ಚಿನ ಅನುಕ್ರಮ ಮ್ಯಾರಥಾನ್‌ಗಳನ್ನು ಓಡಿದವರಲ್ಲಿ ಜೆರಾಲ್ಡ್ ಫೆನ್ಸಕೆ ಸೇರಿದ್ದು, ಅವರು 1978 ರಲ್ಲಿ 17 ವರ್ಷದವರಿದ್ದಾಗ ಪ್ರವೇಶಿಸಿದಾಗಿನಿಂದ ಪ್ರತಿ ಪಾವೋ ನುರ್ಮಿ ಮ್ಯಾರಥಾನ್ ಅನ್ನು, ಒಟ್ಟಾರೆಯಾಗಿ 2010 ರವರೆಗೆ 33 ಅನುಕ್ರಮ ಮ್ಯಾರಥಾನ್‌ಗಳನ್ನು ಓಡಿದ್ದಾರೆ.

ಇವನ್ನೂ ನೋಡಿ[ಬದಲಾಯಿಸಿ]

ಮ್ಯಾರಥಾನ್ ಲೇಖನಗಳು
  • ಮ್ಯಾರಥಾನ್‌ಗಳ ಪಟ್ಟಿ
  • ಮ್ಯಾರಥಾನ್ ಓಟಗಾರರ ಪಟ್ಟಿ
  • ಓಡದ ತಜ್ಞ ಮ್ಯಾರಥಾನ್ ಓಟಗಾರರ ಪಟ್ಟಿ
  • ಮ್ಯಾರಥಾನ್‌ನಲ್ಲಿ ರಾಷ್ಟ್ರೀಯ ದಾಖಲೆಗಳು
  • ಮ್ಯಾರಥಾನ್ ರಾಷ್ಟ್ರೀಯ ಚಾಂಪಿಯನ್‌ಗಳು (ಪುರುಷ)
  • ಪ್ಯಾರಾಒಲಂಪಿಕ್ಸ್‌ನಲ್ಲಿ ಮ್ಯಾರಥಾನ್
  • ಅರ್ಧ ಮ್ಯಾರಥಾನ್
  • ಐರೋನ್ಮನ್ ಟ್ರಯಥ್ಲಾನ್
  • ಮನುಷ್ಯನಿಗೆ ಪ್ರತಿಯಾಗಿ ಕುದುರೆಯ ಮ್ಯಾರಥಾನ್
  • ಮೌಂಟೇನ್ ಮ್ಯಾರಥಾನ್
  • ಮಲ್ಟಿಡೇ ರೇಸ್
  • ಸ್ಕೀ ಮ್ಯಾರಥಾನ್
  • ಅಲ್ಟ್ರಾ ಮ್ಯಾರಥಾನ್
  • 100 ಮ್ಯಾರಥಾನ್ ಕ್ಲಬ್

ಟಿಪ್ಪಣಿಗಳು[ಬದಲಾಯಿಸಿ]

  1. ೧.೦ ೧.೧ "Prologue: The Legend". Marathonguide.com. Retrieved 2009-08-22.
  2. "ಆಂಡಿ ಮಿಲರಾಯ್, ಡಿಡ್ ಫೆಡಿಪ್ಪಿಡೆಸ್ ರನ್ ಎ ಮ್ಯಾರಥಾನ್?". Archived from the original on 2011-04-25. Retrieved 2010-10-21.
  3. ೩.೦ ೩.೧ "ಆರ್ಕೈವ್ ನಕಲು". Archived from the original on 2010-03-24. Retrieved 2010-10-21.
  4. ೪.೦ ೪.೧ ೪.೨ "Retreats — Athens". Jeffgalloway.com. Archived from the original on 2009-06-01. Retrieved 2009-08-22.
  5. ""ದಿ ಮೂನ್ ಎಂಡ್ ದಿ ಮ್ಯಾರಥಾನ್", ಸ್ಕೈ & ಟೆಲೆಸ್ಕೋಪ್ ಸೆಪ್ಟೆಂ. 2004". Archived from the original on 2012-06-04. Retrieved 2010-10-21.
  6. "Ancient Olympics FAQ 10". Perseus.tufts.edu. Retrieved 2009-08-22.
  7. ಮೊರಾಲಿಯಾ 347C
  8. ಎ ಸ್ಲಿಪ್ ಆಫ್ ದಿ ಟಂಗ್ ಇನ್ ಸಾಲ್ಯುಟೇಶನ್, ಅಧ್ಯಾಯ 3
  9. ಪರ್ಷಿಯನ್ ಫೈರ್ ಟಾಮ್ ಹಾಲಂಡ್ ಅವರಿಂದ
  10. ಸ್ಪಾರ್ಥ್ಲಾನ್ ::: ಇಂಟರ್‌ನ್ಯಾಷನಲ್ ಸ್ಪಾರ್ಥ್ಲಾನ್ ಅಸೋಸಿಯೇಶನ್ Archived 2008-06-29 ವೇಬ್ಯಾಕ್ ಮೆಷಿನ್ ನಲ್ಲಿ.Technology Blog[ಶಾಶ್ವತವಾಗಿ ಮಡಿದ ಕೊಂಡಿ]
  11. "The Great Marathon Myth". Coolrunning.co.nz. Archived from the original on 2016-12-04. Retrieved 2009-08-22.
  12. ಜೆ.ಬ್ರಯಂಟ್, 100 ಇಯರ್ಸ್ ಎಂಡ್ ಸ್ಟಿಲ್ ರನ್ನಿಂಗ್, ಮ್ಯಾರಥಾನ್ ನ್ಯೂಸ್ (2007)
  13. "The Marathon journey to reach 42.195km". european-athletics.org. 25 April 2008. Archived from the original on 2012-07-29. Retrieved 2009-07-23.
  14. Martin, David E. (May 2000). The Olympic Marathon. Human Kinetics Publishers. p. 113. ISBN 978-0880119696. {{cite book}}: Unknown parameter |coauthors= ignored (|author= suggested) (help)
  15. "IAAF Competition Rules 2008" (pdf). IAAF. p. 195. Retrieved 2009-04-20.
  16. ೧೬.೦ ೧೬.೧ ೧೬.೨ ೧೬.೩ . ಬಾಬ್ ವಿಲ್‌ಕೋಕ್, ದಿ 1908 ಒಲಂಪಿಕ್ ಮ್ಯಾರಥಾನ್, ಜರ್ನಲ್ ಆಫ್ ಒಲಂಪಿಕ್ ಹಿಸ್ಟರಿ, ಸಂಪುಟ 16 ಸಂಚಿಕೆ 1, ಮಾರ್ಚ್ 2008
  17. ದಿ ಪ್ರಿನ್ಸೆಸ್ ಆಫ್ ವೇಲ್ಸ್' ಪ್ರೈವೇಟ್ ಡೈರಿ ಎಂಡ್ ಪ್ರೆಸ್ ರಿಪೋರ್ಟ್ಸ್
  18. ಬಾಬ್ ವಿಲ್‌ಕೋಕ್, "ದಿ 1908 ಒಲಂಪಿಕ್ ಗೇಮ್ಸ್, ದಿ ಗ್ರೇಟ್ ಸ್ಟೇಡಿಯಂ ಎಂಡ್ ದಿ ಮ್ಯಾರಥಾನ್, ಎ ಪಿಕ್ಟೋರಿಯಲ್ ರೆಕಾರ್ಡ್" (2008 ISBN 978-0-9558236-0-2)[page needed]
  19. ಮಾರ್ಟಿನ್ & ಗಿನ್, "ದಿ ಒಲಂಪಿಕ್ ಮ್ಯಾರಥಾನ್" (2000 ISBN 0-88011-969-1)[page needed]
  20. http://www.iaaf.org/mm/Document/Competitions/TechnicalArea/04/95/59/20090303014358_httppostedfile_CompetitionRules2009_printed_8986.pdf IAAF Competition Rules 2009 - Rule 240
  21. "ಆರ್ಕೈವ್ ನಕಲು". Archived from the original on 2016-06-16. Retrieved 2010-10-21.
  22. "ರನ್ನರ್ಸ್ ವರ್ಲ್ಡ್ ಟಾಪ್ 10 ಮ್ಯಾರಥಾನ್ಸ್". Archived from the original on 2006-03-14. Retrieved 2006-03-14.
  23. "ಆರ್ಕೈವ್ ನಕಲು". Archived from the original on 2010-01-02. Retrieved 2010-10-21.
  24. Craythorn, Dennis (1997). The Ultimate Guide to International Marathons. United States: Capital Road Race Publications. ISBN 978-0-9655187-0-3. {{cite book}}: Unknown parameter |coauthors= ignored (|author= suggested) (help)[page needed]
  25. "All-time men's best marathon times under 2h 10'30". Alltime-athletics.com. Retrieved 2009-08-22.
  26. "All-time women's best marathon times under 2h 30'00". Alltime-athletics.com. Retrieved 2009-08-22.
  27. http://www.iaaf.org/statistics/toplists/inout=o/age=n/season=0/sex=M/all=y/legal=A/disc=MAR/detail.html
  28. http://www.iaaf.org/statistics/toplists/inout=o/age=n/season=0/sex=W/all=y/legal=A/disc=MAR/detail.html
  29. ೨೯.೦ ೨೯.೧ "Training programs". Hal Higdon. Retrieved 2009-08-22.
  30. "2005 Total USA Marathon Finishers". Marathonguide.com. Retrieved 2008-04-24.
  31. "Running a sub 3 hour marathon | allaboutrunning.net". allaboutrunning.net<!. Archived from the original on 2009-02-15. Retrieved 2009-08-22.
  32. "Boston Athletic Association". Bostonmarathon.org. Retrieved 2009-08-22.
  33. ದಿ ಐಎನ್‌ಜಿ ನ್ಯೂಯಾರ್ಕ್ ಸಿಟಿ ಮ್ಯಾರಥಾನ್[ಮಡಿದ ಕೊಂಡಿ]
  34. "ನ್ಯಾಷನಲ್ ಮ್ಯಾರಥಾನ್ - ಕ್ವಾಲಿಫೈಯಿಂಗ್ ಸ್ಟಾಂಡಂರ್ಡ್ಸ್". Archived from the original on 2009-06-01. Retrieved 2010-10-21.
  35. "ಆರ್ಕೈವ್ ನಕಲು". Archived from the original on 2007-02-19. Retrieved 2010-10-21.
  36. ೩೬.೦ ೩೬.೧ ೩೬.೨ Daniels, J. PhD (2005). Daniels' Running Formula, 2nd Ed. Human Kinetics Publishing. ISBN 0-7360-5492-8.[page needed]
  37. ವಿಸೆಟ್ et al. (1998) ದಿ ನಾನ್-ರನ್ನರ್ಸ್ ಮ್ಯಾರಥಾನ್ ಟ್ರೈನರ್. ಮಾಸ್ಟರ್ಸ್ ಪ್ರೆಸ್.
  38. Burfoot, A. Ed (1999). Runner's World Complete Book of Running : Everything You Need to Know to Run for Fun, Fitness and Competition. Rodale Books. ISBN 1-57954-186-0.[page needed]
  39. Marius Bakken. "Training For A Marathon". Marius Bakken's Marathon Training Schedule. Retrieved 2009-04-17. {{cite web}}: Italic or bold markup not allowed in: |publisher= (help)
  40. "Marathon Training at Runner's World". Runnersworld.com. 2008-02-15. Archived from the original on 2009-08-13. Retrieved 2009-08-22.
  41. "Boston Athletic Association". Bostonmarathon.org. Archived from the original on 2009-06-21. Retrieved 2009-08-22.
  42. "1998 Mark Jenkins, MD Rice University". Rice.edu. Archived from the original on 2009-08-21. Retrieved 2009-08-22.
  43. "Negative Splits: Use Them to Perform Better in Your Next Marathon". The Final Sprint. September 25, 2006. Retrieved 2009-03-07.
  44. "ಆರ್ಕೈವ್ ನಕಲು". Archived from the original on 2012-01-18. Retrieved 2010-10-21.
  45. ವಾಟರ್ ಡೇಂಜರ್ ಫಾರ್ ಮ್ಯಾರಥಾನ್ ರನ್ನರ್ಸ್. ಬಿಬಿಸಿ ನ್ಯೂಸ್, ಏಪ್ರಿಲ್ 21, 2006
  46. "Hyponatremia among runners in the Boston Marathon". Content.nejm.org. 2005-07-28. doi:10.1056/NEJMoa043901. Retrieved 2009-08-22.
  47. Almond CS, Shin AY, Fortescue EB; et al. (2005). "Hyponatremia among runners in the Boston Marathon". The New England Journal of Medicine. 352 (15): 1550–6. doi:10.1056/NEJMoa043901. PMID 15829535. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  48. "Hitting the wall for marathon runners". Half-marathon-running.com. Archived from the original on 2017-03-22. Retrieved 2009-08-22.
  49. ೪೯.೦ ೪೯.೧ ೪೯.೨ ಲೆಸ್ಸರ್-ನೋನ್ ಡೇಂಜರ್ಸ್ ಅಸೋಸಿಯೇಟೆಡ್ ವಿತ್ ರನ್ನಿಂಹ್ ಎ ಮ್ಯಾರಥಾನ್ Archived 2013-01-17 ವೇಬ್ಯಾಕ್ ಮೆಷಿನ್ ನಲ್ಲಿ. ಮರು ಸಂಪಾದನೆ 9/7/2009
  50. Jaworski CA (2005). "Medical concerns of marathons". Current Sports Medicine Reports. 4 (3): 137–43. PMID 15907265. {{cite journal}}: Unknown parameter |month= ignored (help)
  51. ೫೧.೦ ೫೧.೧ "ಆರ್ಕೈವ್ ನಕಲು". Archived from the original on 2013-05-10. Retrieved 2010-10-21.
  52. Mailler EA, Adams BB (2004). "The wear and tear of 26.2: dermatological injuries reported on marathon day". British Journal of Sports Medicine. 38 (4): 498–501. doi:10.1136/bjsm.2004.011874. PMC 1724877. PMID 15273194. {{cite journal}}: Unknown parameter |month= ignored (help)
  53. Stouffer Drenth, Tere (2003). Marathon Training for Dummies. United States: Wiley Publishing Inc. ISBN 0-76452-510-7.[page needed]
  54. ರಿಸ್ಕ್ ಫಾರ್ ಸಡನ್ ಕಾರ್ಡಿಯಾಕ್ ಡೆತ್ ಅಸೋಸಿಯೇಟೆಡ್ ವಿತ್ ಮ್ಯಾರಥಾನ್ ರನ್ನಿಂಗ್. 2008-12-13ರಂದು ಮರು ಸಂಪಾದಿಸಲಾಗಿದೆ.
  55. "American Family Physician: Sudden death in young athletes: screening for the needle in a haystack". Aafp.org. Archived from the original on 2008-07-05. Retrieved 2009-08-22.
  56. "Banking Miles: marathons dangerous for your heart?". Bankingmiles.blogspot.com. Retrieved 2009-08-22.
  57. 50&ಡಿಸಿ ಮ್ಯಾರಥಾನ್ ಗ್ರೂಪ್ ಯು.ಎಸ್.ಎ. Archived 2007-12-27 ವೇಬ್ಯಾಕ್ ಮೆಷಿನ್ ನಲ್ಲಿ.. ಮರು ಸಂಪಾದಿಸಿದ್ದು 2010-04-11.
  58. "Accolades". 50anddcmarathongroupusa.com. Archived from the original on 2009-06-01. Retrieved 2009-08-22.
  59. "CBC Archives: television and radio spots on Terry Fox". Archives.cbc.ca. Retrieved 2009-08-22.
  60. Hartill, Robin (February 19, 2009). "Marathon Maverikc". Longboat Observer. {{cite news}}: |access-date= requires |url= (help); Check date values in: |accessdate= (help)
  61. "Fiennes relishes marathon feat". BBC News. 2003-11-03.
  62. ಇಂಟರ್‌ವ್ಯೂ ವಿತ್ ಗಾರ್ಡಿಯನ್ 5 ಅಕ್ಟೋಬರ್ 2007
  63. Neil, Martha (December 17, 2008). "BigLaw Partner Sets World Record By Running 105th Marathon in a Year". ABA Journal. Archived from the original on 2009-02-04. Retrieved 2008-12-21.
  64. http://www.sportrelief.com/whats-on/challenges/eddie
  65. http://www.eddieizzard.com/blog/view.php?Id=4&BlogId=1
  66. "100 Marathon Club". 100 Marathon Club. Retrieved 2009-08-22.
  67. Orton, Kathy (2004-10-27). "Texan's Weekend Job Provides Great Benefits". The Washington Post. pp. D4. Retrieved 2007-11-28. {{cite news}}: Cite has empty unknown parameter: |coauthors= (help)
  68. "Retrieved 2008-11-12". Edm.ouser.org. Archived from the original on 2009-02-18. Retrieved 2009-08-22.
  69. "John Bozung's World Tour and Personal Home Page". Squawpeak50.com. Archived from the original on 2009-02-18. Retrieved 2009-08-22.
  70. "Goal: 52 races in 52 weeks". Deseret News. 2005-08-17. Archived from the original on 2009-02-20. Retrieved 2009-08-22.
  71. 100 Marathon Club site (in German)
  72. 100 Marathon Club site (in German)
  73. 50 ಸ್ಟೇಟ್ಸ್ & ಡಿ.ಸಿ. ಮ್ಯಾರಥಾನ್ ಗ್ರೂಪ್ ಸೈಟ್ Archived 2007-12-27 ವೇಬ್ಯಾಕ್ ಮೆಷಿನ್ ನಲ್ಲಿ.. ಮರುಸಂಪಾದನೆ 2007-11-16.
  74. "Man runs 52 marathons in 52 days". The Japan Times. Archived from the original on 2012-07-14. Retrieved 2010-09-27.
  75. "Why 365 marathons?". Stefaan Engels. Archived from the original on 2011-02-10. Retrieved 2010-09-27.
  76. ಲಿಟ್‌ಸ್ಕೀ, ಫ್ರಾಂಕ್ (2004-10-08)ಜಾನ್ ಎ. ಕೆಲ್ಲಿ, ಮ್ಯಾರಥಾನರ್, ಡೈಸ್ ಆಟ್ 97. ದಿ ನ್ಯೂಯಾರ್ಕ್‌ ಟೈಮ್ಸ್‌. 2009 -12 -06 ಮರು ಸಂಪಾದಿಸಲಾಯಿತು.
  77. "ಮರುಸಂಪಾದಿಸಿದ್ದು 2007-12-14". Archived from the original on 2008-06-03. Retrieved 2010-10-21.

ಬಾಹ್ಯ ಕೊಂಡಿಗಳು[ಬದಲಾಯಿಸಿ]