ಶ್ರೀಕಾಂತ್ ಕಿಡಂಬಿ

ವಿಕಿಪೀಡಿಯ ಇಂದ
Jump to navigation Jump to search
ಶ್ರೀಕಾಂತ್ ಕಿಡಂಬಿ
— ಬ್ಯಾಡ್ಮಿಂಟನ್‌ ಆಟಗಾರ —
Yonex IFB 2013 - Eightfinal - Boonsak Ponsana — K. Srikanth 01.jpg
೨೦೧೩ರ ಫ್ರೆಂಚ್ ಸೂಪರ್ ಸೀರೀಸ್ ನಲ್ಲಿ ಕೆ. ಶ್ರೀಕಾಂತ್
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಶ್ರೀಕಾಂತ್ ನಮ್ಮಲ್ವರ್ ಕಿಡಂಬಿ
ಹುಟ್ಟು (1993-02-07) 7 February 1993 (age 26)
ಆಂದ್ರ ಪ್ರದೇಶದ ಗುಂಟೂರು
ದೇಶ ಭಾರತ
ಆಡುವ ಕೈಬಲ
ಪುರುಷರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ೪ (೨೫ ಡಿಸೆಂಬರ್ ೨೦೧೪)
ಸದ್ಯದ ಸ್ಥಾನ[೧] (೨೩ ಏಪ್ರೀಲ್ ೨೦೧೫ (೬೭೨೩೭)[೨])
ಆಡಿದ ಪಂದ್ಯಾವಳಿಗಳು೧೪೭ (೧೦೦ - ೪೭) (ಸಿಂಗಲ್ಸ್)
ಪ್ರಶಸ್ತಿ(ಗಳು)


ಶ್ರೀಕಾಂತ್ ಕಿಡಂಬಿ ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಹಾಗೂ ಮಾರ್ಚ್ ೧೨, ೨೦೧೫ರ ವಿಶ್ವ ರ‍್ಯಾಂಕಿಗ್ ಪ್ರಾಕರ ೪ನೇ ಸ್ಥಾನದಲ್ಲಿರುವ ಇವರು ಸದ್ಯದಲ್ಲಿ ಭಾರತದ ಅಗ್ರಮಾನ್ಯ ಆಟಗಾರರಾಗಿದ್ದಾರೆ.[೩] ಇವರು ೨೦೧೪ರ ಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾದರು.[೪] ಇವರು ಪ್ರಸ್ತುತವಾಗಿ ಹೈದರಾಬಾದಿನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ ಮತ್ತು ಬೆಂಗಳೂರಿನ ಗೊಸ್ಪೊರ್ಟ್ಸ್ ಫೌಂಢೇಶನ್ ರವರು ಇವರಿಗೆ ನೆರವಾಗಿದ್ದಾರೆ.[೫]

ವೈಯಕ್ತಿಕ ಜೀವನ[ಬದಲಾಯಿಸಿ]

ಶ್ರೀಕಾಂತ್ ನಮ್ಮಲ್ವರ್ ಕಿಡಂಬಿಯವರು ಆಂದ್ರ ಪ್ರದೇಶದ ಗುಂಟೂರಿನಲ್ಲಿ ೭ ಫೆಬ್ರವರಿ ೧೯೯೩ರಲ್ಲಿ ಜನಿಸಿದರು. ಇವರ ತಂದೆ ಕೆವಿಎಸ್ ಕೃಷ್ಣ ರವರು ರೈತರಾಗಿದ್ದು, ಮತ್ತು ತಾಯಿ ರಾಧ ಮನೆಹೆಂಡತಿಯಾಗಿದ್ದರೆ.[೬] ಶ್ರೀಕಾಂತನ ತಮ್ಮ ನಂದಗೋಪಲನು ಸಹ ಒಬ್ಬ ಬ್ಯಾಡ್ಮಿಂಟನ್ ಆಟಗಾರ.[೭]

ವೃತ್ತಿ ಜೀವನ[ಬದಲಾಯಿಸಿ]

೨೦೧೧[ಬದಲಾಯಿಸಿ]

೨೦೧೧ರ ಯುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ ಹಾಗೂ ಡಬಲ್ಸ್ ನಲ್ಲಿ ಕಂಚನ್ನು ಗೆದ್ದುಕೊಂಡರು.[೮] ಇವರು ಪೂಣೆಯಲ್ಲಿ ನೆಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ವಿಜೇತರಾದರು.[೯]

೨೦೧೨[ಬದಲಾಯಿಸಿ]

೨೦೧೨ರಲ್ಲಿ ಶ್ರೀಕಾಂತ್ ರವರು ವಿಶ್ವ ಜೂನಿಯರ್ ಚಾಂಪಿಯನ್ ರಾದ ಮಲೇಷ್ಯಾದ ಜುಲ್ಫಾದಿ ಜುಲ್ಕಿಫ್ಲಿಯವರನ್ನು ಮಣಿಸಿ ಮಾಲ್ಡೀವೇಸ್ ಅಂತರಾಷ್ಟ್ರೀಯ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು.[೧೦]

೨೦೧೩[ಬದಲಾಯಿಸಿ]

ಥೈಲ್ಯಾಂಡ್ ಒಪನ್ ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿಯಲ್ಲಿ, ಶ್ರಿಕಾಂತ್ ರವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಆಗಿನ ವಿಶ್ವದ ೮ನೇ ಶ್ರೆಯಾಂಕದ ಬೂನ್ಸಕ್ ಪೊನ್ಸಾನರವರನ್ನು ನೇರ ಸೆಟ್ ಗಳಿಂದ ಸೋಲಿಸುವ ಮೂಲಕ ಗೆದ್ದುಕೊಂಡರು.

೨೦೧೪[ಬದಲಾಯಿಸಿ]

ಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾಗಿ ಇತಿಹಾಸವನ್ನು ಸೃಷ್ಟಿಸಿದರು.[೧೧]

೨೬-ಆಗಸ್ಟ್-೨೦೧೬[ಬದಲಾಯಿಸಿ]

ಕಿದಂಬಿ ಶ್ರೀಕಾಂತ್ ಅವರು 11 ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.[೧೨]

ಸಾಧನೆಗಳು[ಬದಲಾಯಿಸಿ]

ಸಿಂಗಲ್ಸ್ ಪ್ರಶಸ್ತಿಗಳು (೪)[ಬದಲಾಯಿಸಿ]

ಕ್ರ.ಸಂ. ವರ್ಷ ಪಂದ್ಯಾವಳಿ ಅಂತಿಮ ಪಂದ್ಯದ ಎದುರಾಳಿ ಅಂಕಗಳು
೨೦೧೩ ಥೈಲ್ಯಾಂಡ್ ಒಪನ್ Thailand ಬೂನ್ಸಕ್ ಪೊನ್ಸಾನ ೨೧-೧೬, ೨೧-೧೨
೨೦೧೪ ಚೀನಾ ಒಪನ್ ಚೀನಾ ಲಿನ್ ಡ್ಯಾನ್ ೨೧-೧೯, ೨೧-೧೭
೨೦೧೫ ಸ್ವಿಸ್ ಒಪನ್ Denmark ವಿಕ್ಟರ್ ಅಕ್ಸಲ್ಸನ್ ೨೧-೧೫, ೧೨-೨೧, ೨೧-೧೪
೨೦೧೫ ಇಂಡಿಯನ್ ಒಪನ್ Denmark ವಿಕ್ಟರ್ ಅಕ್ಸಲ್ಸನ್ ೧೮-೨೧, ೨೧-೧೩, ೨೧-೧೨
     ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ
     ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ
     ಸೂಪರ್ ಸೀರಿಸ್ ಪಂದ್ಯಾವಳಿ
     ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ
     ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ

ಉಪಾಂತ ವಿಜಯಿ (೨)[ಬದಲಾಯಿಸಿ]

ಕ್ರ.ಸಂ. ವರ್ಷ ಪಂದ್ಯಾವಳಿ ಅಂತಿಮ ಪಂದ್ಯದ ಎದುರಾಳಿ ಅಂಕಗಳು
೨೦೧೪ ಇಂಡಿಯನ್ ಒಪನ್ ಚೀನಾ ಕ್ಸುಯೆ ಸೊಂಗ್ ೨೧-೧೬, ೧೯-೨೧, ೧೩-೨೧
೨೦೧೫ ಇಂಡಿಯನ್ ಒಪನ್ ಭಾರತ ಕಶ್ಯಪ್ ಪಾರುಪಲ್ಲಿ ೨೧-೨೩, ೨೧-೨೩
     ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ
     ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ
     ಸೂಪರ್ ಸೀರಿಸ್ ಪಂದ್ಯಾವಳಿ
     ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ
     ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ


References[ಬದಲಾಯಿಸಿ]