ವಿಷಯಕ್ಕೆ ಹೋಗು

ಸಮಕಾಲೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮಕಾಲೀನ ಇತಿಹಾಸ ವು ಪ್ರಸಕ್ತಕಾಲಕ್ಕೆ ನೇರವಾಗಿ ಪ್ರಸ್ತುತವಾಗಿರುವ ಇತಿಹಾಸದ ಅವಧಿಯನ್ನು ವಿವರಿಸುವುದರ ಜೊತೆಗೆ ಇದು ಆಧುನಿಕ ಇತಿಹಾಸದ ಒಂದು ನಿರ್ದಿಷ್ಟ ದೃಷ್ಟಿಕೋನ.

ಇತ್ತೀಚಿನ ಸಮಕಾಲೀನ ಇತಿಹಾಸಗಳ ಉದ್ದೇಶಪೂರ್ವಕ ಸಡಿಲ ವ್ಯಾಖ್ಯಾನಗಳಲ್ಲಿ ವಿಶ್ವ ಯುದ್ಧ IIಮುಂತಾದ ಪ್ರಮುಖ ವಿದ್ಯಮಾನಗಳಿವೆ. ಆದರೆ ಘಟನೆಗಳ ಪರಿಣಾಮಗಳನ್ನು ಸಫಲವಾಗಿ ಎದುರಿಸಿದಂತಹ ಘಟನೆಗಳನ್ನು ಒಳಗೊಂಡಿರುವುದಿಲ್ಲ.

ಸಮಕಾಲೀನ ಶಕೆ

[ಬದಲಾಯಿಸಿ]

ಸಮಕಾಲೀನ ಐತಿಹಾಸಿಕ ಘಟನೆಗಳು ಪ್ರಸಕ್ತದಿನಕ್ಕೆ ನೇರವಾಗಿ ಪ್ರಸ್ತುತತೆಯನ್ನು ಹೊಂದಿರುತ್ತವೆ.

ಯುರೋಪ್ ನಲ್ಲಿ, "ಸಮಕಾಲೀನ" ಎಂಬ ಪದವನ್ನು 1989ರ ಕ್ರಾಂತಿಗಳ ನಂತರದ ಇತಿಹಾಸಕ್ಕೆ ಅನ್ವಯಿಸಬಹುದಾಗಿದೆ. ವಿಶ್ವ ಯುದ್ಧಗಳ ಶಕೆಯ(ವಿಶ್ವ ಯುದ್ಧ I ಹಾಗು ವಿಶ್ವ ಯುದ್ಧ II ಗಳನ್ನು ಒಳಗೊಂಡಂತೆ) ಹಾಗು ಶೀತಲ ಸಮರಗಳ ಪರಿಣಾಮಗಳು ಇಂದಿಗೂ ಸಮಕಾಲೀನ ಇತಿಹಾಸದಲ್ಲಿ ಅನುಭವಕ್ಕೆ ಬರುತ್ತಿವೆ.

ಏಷ್ಯಾದಲ್ಲಿ, "ಸಮಕಾಲೀನ" ಎಂಬ ಪದವನ್ನು ವಿಶ್ವ ಯುದ್ಧ IIರ ಅಂತ್ಯದ ನಂತರದ ಇತಿಹಾಸಕ್ಕೆ ಅನ್ವಯಿಸಬಹುದಾಗಿದೆ. ವಿಶ್ವ ಯುದ್ಧ IIರ ಅಂತ್ಯದಲ್ಲಿ, ಸ್ವಾತಂತ್ರ್ಯಕ್ಕಾಗಿ ಯುದ್ಧಗಳು ಪ್ರಾರಂಭವಾದವು, ಹಲವು ಪ್ರದೇಶಗಳು ಸಾರ್ವಬೌಮ ಸ್ಥಾನಮಾನವನ್ನು ಗಳಿಸಿದವು. ಆದರೆ, ಏಷ್ಯಾದ ಈ ರಾಜ್ಯಗಳು ಶೀತಲ ಸಮರದ ಪರಿಣಾಮಗಳ ಅಡಿಯಲ್ಲಿ ಸ್ಥಾಪಿತವಾದವು. ಈಶಾನ್ಯ ಏಷ್ಯಾ ಹಾಗು ವಿಯೆಟ್ನಾಂ ಶೀತಲ ಸಮರದಲ್ಲಿ ಭಾಗಿಯಾಗಿದ್ದವು, ಕೊರಿಯಾ ಹಾಗು ವಿಯೆಟ್ನಾಂ ನ ವಿಭಜಿತ ರಾಜ್ಯಗಳು ಕಾಣಿಸಿಕೊಂಡವು. ಆಗ್ನೇಯ ಏಷ್ಯಾವನ್ನು ASEAN ಹೆಸರಿನಲ್ಲಿ ಜತೆಗೂಡಿಸಲಾಯಿತು (ವಿಯೆಟ್ನಾಂ 1976ರಲ್ಲಿ ಪುನರೇಕೀಕೃತವಾಯಿತು), ಆದರೆ ASEAN ಈಶಾನ್ಯ ಏಷ್ಯಾವನ್ನು ಒಳಗೊಂಡಿರುವುದಿಲ್ಲ.

ಈಗ ಬದುಕುಳಿದಿರುವ ಜನರು ಅದರ ಪ್ರತಿಯೊಂದು ಅನುಕ್ರಮ ಹಂತಗಳ ವಿಕಾಸವನ್ನು ಕಂಡಿದ್ದಾರೆ. ಅದು ತನ್ನದೇ ಆದ ಒಂದು ವಿಶಿಷ್ಟ ಲಕ್ಷಣವನ್ನು ಹೊಂದಿದೆ.[] ಈ ಶಕೆಯಲ್ಲಿ ಒಂದು ಗಮನಾರ್ಹ ವೈಜ್ಞಾನಿಕ ಹಾಗು ಮಾನವೀಯ ಸಾಧನೆಗಳನ್ನು ಒಳಗೊಂಡಿದ್ದರೂ, ಸಮಕಾಲೀನ ಶಕೆಯು ಗಮನಾರ್ಹ ರಾಜಕೀಯ ಪ್ರಗತಿಯನ್ನೂ ಸಹ ಕಂಡಿದೆ. ಇದು ಬೆಳವಣಿಗೆಯಲ್ಲಿ ಕಂಡ ಪ್ರಗತಿಯಷ್ಟು ಅದರ ಉದ್ಭವದಿಂದ ಕಂಡಿಲ್ಲ.

ಟೆಂಪ್ಲೇಟು:Prettyquote

ಇದರಲ್ಲಿ ಅತ್ಯಂತ ಗಮನಾರ್ಹ ಸಾಧನೆಯೆಂದರೆ ರಾಷ್ಟ್ರೀಯತೆ ಮತ್ತು ರಾಷ್ಟ್ರಗಳ ಪುನರ್‌ವ್ಯಾಖ್ಯಾನ ಹಾಗು ಇಪ್ಪತ್ತನೆ ಶತಮಾನದ ಗುರುತಾದ ತಂತ್ರಜ್ಞಾನದ ಅಭಿವೃದ್ಧಿಯ ಪ್ರಗತಿ.

ಇಪ್ಪತ್ತನೆ ಶತಮಾನ

[ಬದಲಾಯಿಸಿ]

ಈ ಆಧುನಿಕ ಅವಧಿಯ ಎರಡು ಗಮನಾರ್ಹ ಘಟನೆಗಳೆಂದರೆ ವಿಶ್ವ ಯುದ್ಧಗಳು ಹಾಗು ಶೀತಲ ಸಮರ.

ವಿಶ್ವ ಯುದ್ಧಗಳ ಶಕೆ

[ಬದಲಾಯಿಸಿ]

ಕಳೆದ 20ನೇ ಶತಮಾನದ ತಿರುವಿನಲ್ಲಿ, ವಿಶ್ವವು ಮಹಾನ್ ದಳ್ಳುರಿಯ ಒಂದು ಸರಣಿಯನ್ನೇ ಕಂಡಿತು, ವಿಶ್ವ ಯುದ್ಧ I ಹಾಗು ವಿಶ್ವ ಯುದ್ಧ II. ಮೊದಲ ಮಹಾ ಯುದ್ಧದ ಕೊನೆಯಲ್ಲಿ, ರಷ್ಯನ್ ಕ್ರಾಂತಿಗಳ ಸರಣಿ ಹಾಗು ಒಂದು ರಷ್ಯನ್ ಅಂತರ್ಯುದ್ಧವು ನಡೆದವು. ಮಹಾ ಯುದ್ಧಗಳ ನಡುವಿನಲ್ಲಿ, "ಇಪ್ಪತ್ತನೆ" ಶತಮಾನವು ಸಮೃದ್ಧಿಯಲ್ಲಿ ಹೆಚ್ಚಳವನ್ನು ಕಾಣುವುದರ ಜೊತೆಗೆ ವಿಶ್ವದಲ್ಲಿ ಪ್ರಗತಿ ಹಾಗು ಹೊಸ ತಂತ್ರಜ್ಞಾನವು ಸ್ಥಾಪನೆಗೊಂಡಿತು. ಆದರೆ ಇದು ಮಹಾನ್ ಹಿಂಜರಿತದಿಂದ ಬೇಗನೆ ಕೊನೆಗೊಂಡಿತು. ಈ ಅವಧಿಯಲ್ಲಿ, ಜಾಗತಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಸಲುವಾಗಿ ಲೀಗ್ ಆಫ್ ನೇಶನ್ಸ್ ಅನ್ನು ರೂಪಿಸಲಾಯಿತು, ಆದರೆ ಪ್ರಬಲ ಶಕ್ತಿಗಳಿಂದ ಸಾಕಷ್ಟು ಬೆಂಬಲವನ್ನು ಒಟ್ಟುಗೂಡಿಸಿ ಕೊಳ್ಳುವಲ್ಲಿ ವಿಫಲವಾಯಿತು. ಜೊತೆಗೆ ವಿಶ್ವದಲ್ಲಿ ಮತ್ತೊಮ್ಮೆ ಉಂಟಾದ ಬಿಕ್ಕಟ್ಟಿನ ಒಂದು ಸರಣಿಯು ಮತ್ತೊಂದು ಹಿಂಸಾತ್ಮಕ ಪರ್ವಕ್ಕೆ ನಾಂದಿ ಹಾಡಿತು.

1945ರ ನಂತರದ ಜಗತ್ತು

[ಬದಲಾಯಿಸಿ]

ಶೀತಲ ಸಮರವು 1940ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಗೊಂಡು 1990ರ ದಶಕದ ಪ್ರಾರಂಭದಲ್ಲಿ ಕೊನೆಗೊಂಡಿತು. ಈ ಅವಧಿಯೊಂದಿಗೆ ಬಾಹ್ಯಾಕಾಶ ಯುಗವು ಒಟ್ಟಿಗೆ ಸಾಗಿತ್ತು. ಇದು ಬಾಹ್ಯಾಕಾಶ ಪೈಪೋಟಿ ಬಾಹ್ಯಾಕಾಶ ಪರಿಶೋಧನೆ, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಜತೆಗೆ, ಈ ಘಟನಾವಳಿಗಳಿಂದ ಪ್ರಭಾವಿತಗೊಂಡ ಸಾಂಸ್ಕೃತಿಕ ಅಭಿವೃದ್ಧಿಗಳು ಒಳಗೊಂಡಿವೆ.

ಕಳೆದ 1945ರ ನಂತರದ ಅವಧಿಯುದ್ದಕ್ಕೂ, ಶೀತಲ ಸಮರವು ಮಿಲಿಟರಿ ಮೈತ್ರಿಕೂಟಗಳು, ಬೇಹುಗಾರಿಕೆ, ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಆಕ್ರಮಣಗಳು, ಪ್ರಚಾರ, ಹಾಗು ಸ್ಪರ್ಧಾತ್ಮಕ ತಂತ್ರಜ್ಞಾನದ ಅಭಿವೃದ್ಧಿಯ ಮೂಲಕ ವ್ಯಕ್ತವಾಯಿತು. ಸೋವಿಯತ್ ಒಕ್ಕೂಟವು ಆಕ್ರಮಿಸಿಕೊಂಡ ರಾಷ್ಟ್ರಗಳ ಈಸ್ಟರ್ನ್ ಬ್ಲಾಕ್ ರಚಿಸಿತು, ಕೆಲವನ್ನು ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ಸ್ ಗೆ ಸೇರಿಸಿತು ಹಾಗು ಇತರ ಕೆಲವು ರಾಜ್ಯಗಳನ್ನು ಆಶ್ರಿತ ರಾಜ್ಯಗಳೆಂದು ಉಳಿಸಿಕೊಂಡಿತು. ಈ ರಾಜ್ಯಗಳೇ ಮುಂದಕ್ಕೆ ವಾರ್ಸ ಒಪ್ಪಂದವನ್ನು ರೂಪಿಸಿದವು. ಯುನೈಟೆಡ್ ಸ್ಟೇಟ್ಸ್ ಹಾಗು ವಿವಿಧ ಪಾಶ್ಚಿಮಾತ್ಯ ಯುರೋಪಿಯನ್ ರಾಷ್ಟ್ರಗಳು ಕಮ್ಯೂನಿಸಂಪ್ರಭಾವ ನಿರೋಧನೀತಿಯನ್ನು ಅಳವಡಿಸಿಕೊಂಡವು ಜೊತೆಗೆ ಈ ನಿಟ್ಟಿನಲ್ಲಿ ಅಸಂಖ್ಯಾತ ಮೈತ್ರಿಕೂಟಗಳನ್ನು ರೂಪಿಸಿದವು. ಇದರಲ್ಲಿ NATO ಸಹ ಸೇರಿದೆ. ದುಬಾರಿ ರಕ್ಷಣಾ ವೆಚ್ಚ, ಅತೀಹೆಚ್ಚು ಸಾಂಪ್ರದಾಯಿಕ ಹಾಗು ಪರಮಾಣುಅಸ್ತ್ರಗಳ ಪೈಪೋಟಿ, ಅಸಂಖ್ಯಾತಹುಸಿ ಯುದ್ಧ ಗಳು ಸಂಘರ್ಷದಲ್ಲಿ ಸೇರಿವೆ.; ಎರಡು ಬಲಿಷ್ಠ ಶಕ್ತಿಗಳು ಪರಸ್ಪರ ನೇರವಾಗಿ ಯುದ್ಧ ಮಾಡಲಿಲ್ಲ.

ಪ್ಯಾಕ್ಸ್ ಅಮೆರಿಕಾನ ಎಂಬ ಅಂಕಿತವು ಪಾಶ್ಚಿಮಾತ್ಯ ಜಗತ್ತಿನಲ್ಲಿ ಪರಸ್ಪರ ಉದಾರ ಶಾಂತಿಗೆ ಅನ್ವಯಿಸಬಹುದಾದ ಐತಿಹಾಸಿಕ ಕಲ್ಪನೆ. ಇದು ಸುಮಾರು 20ನೇ ಶತಮಾನದ ತಿರುವಿನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಧಿಕಾರದಲ್ಲಿ ಮೇಲುಗೈ ಪಡೆದ ಪರಿಣಾಮವಾಗಿತ್ತು. ಆದಾಗ್ಯೂ ಪದವು 20ನೇ ಶತಮಾನದ ಉತ್ತರಾರ್ಧದಲ್ಲಿ ತನ್ನ ಪ್ರಾಥಮಿಕ ಉಪಯುಕ್ತತೆಯನ್ನು ಪಡೆದಿದ್ದರೂ,ಇದನ್ನು ಹಲವಾರು ಪ್ರದೇಶಗಳಲ್ಲಿ ಹಾಗು ಶಕೆಗಳಲ್ಲಿ ಬಳಸಲಾಗಿದೆ. ಅದರ ಆಧುನಿಕ ಸೂಚಿತಾರ್ಥವು 1945ರ ವಿಶ್ವ ಯುದ್ಧ IIರ ಅಂತ್ಯದಲ್ಲಿ ಸ್ಥಾಪಿತವಾದ ಶಾಂತಿಗೆ ಸಂಬಂಧಿಸಿದೆ.

21ನೇ ಶತಮಾನ ಹಾಗು ಇತ್ತೀಚಿನ ಆಧುನಿಕ ಜಗತ್ತು

[ಬದಲಾಯಿಸಿ]

2000ದ ದಶಕವು 2000ದಿಂದ 2009ನ್ನು ಒಳಗೊಂಡ ವರ್ಷಗಳಿಗೆ ಸೂಚಿತವಾಗಿದೆ. ಕಳೆದ 2000ದ ದಶಕವನ್ನು ಸಾಮಾನ್ಯವಾಗಿ 1990ರ ಸಾಮಾಜಿಕ ಪರಿಣಾಮಗಳ ತೀವ್ರತೆಯಿಂದ ಗುರುತಿಸಲಾಗುತ್ತದೆ. ಇದರಲ್ಲಿ [[ಭಯೋತ್ಪಾದನೆ ಹೆಚ್ಚಳ, ಒತ್ತಡ, ಆರ್ಥಿಕ ಜಾಗತೀಕರಣದ ವಿಸ್ತರಣೆ, ಸಂಪರ್ಕ-ವ್ಯವಸ್ಥೆಯ ವಿಸ್ತರಣೆ ಹಾಗು ಮೊಬೈಲ್ ಫೋನ್ ಗಳೊಂದಿಗೆ ದೂರಸಂಪರ್ಕ ವ್ಯವಸ್ಥೆಯ ವಿಸ್ತರಣೆ, ಅಂತರಜಾಲ, ಹಾಗು ಅಂತಾರಾಷ್ಟ್ರೀಯ ಪಾಪ್ ಸಂಸ್ಕೃತಿ|ಭಯೋತ್ಪಾದನೆ [[ಹೆಚ್ಚಳ, ಒತ್ತಡ, ಆರ್ಥಿಕ ಜಾಗತೀಕರಣದ ವಿಸ್ತರಣೆ, ಸಂಪರ್ಕ-ವ್ಯವಸ್ಥೆಯ ವಿಸ್ತರಣೆ ಹಾಗು ಮೊಬೈಲ್ ಫೋನ್ ಗಳೊಂದಿಗೆ ದೂರಸಂಪರ್ಕ ವ್ಯವಸ್ಥೆಯ ವಿಸ್ತರಣೆ, ಅಂತರಜಾಲ, ಹಾಗು ಅಂತಾರಾಷ್ಟ್ರೀಯ ಪಾಪ್ ಸಂಸ್ಕೃತಿ]]]]ಗಳು ಸೇರಿವೆ.

ಪ್ರಸಕ್ತ ದಶಕ, 2010ರದಶಕ ಅಥವಾ ದಿ ಟೆನ್ಸ್, ಜನವರಿ 1, 2010ರಲ್ಲಿ ಪ್ರಾರಂಭವಾಗಿ ಡಿಸೆಂಬರ್ 31, 2019ಕ್ಕೆ ಕೊನೆಗೊಳ್ಳುತ್ತದೆ.

ಮಾಹಿತಿ ಯುಗ ಹಾಗು ಕಂಪ್ಯೂಟರ್‌ಗಳು

[ಬದಲಾಯಿಸಿ]
ಅಂತರಜಾಲದ ಒಂದು ಭಾಗದ ಮೂಲಕ ವಿವಿಧ ದಾರಿಯ ಒಂದು ದೃಶ್ಯೀಕರಣ.2005ರಲ್ಲಿ ಅಂತರಜಾಲ ಆಧಾರಿತ ಆಂಶಿಕ ನಕ್ಷೆ.

ಮಾಹಿತಿ ಯುಗ ಅಥವಾ ಮಾಹಿತಿ ಶಕೆಯನ್ನು, ಸಾಮಾನ್ಯವಾಗಿ ಕಂಪ್ಯೂಟರ್ ಯುಗ ಎಂದು ಕರೆಯಲಾಗುತ್ತದೆ. ಇದು ಪ್ರಸಕ್ತ ಯುಗದಲ್ಲಿ ಜನರು ಮಾಹಿತಿಯನ್ನು ಮುಕ್ತವಾಗಿ ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದುವ ಬಗ್ಗೆ ಕಲ್ಪನೆ,ಹಿಂದೆ ತಿಳಿಯಲು ಅಸಾಧ್ಯ ಅಥವಾ ಕಷ್ಟಕರವಾಗಿದ್ದ ಜ್ಞಾನದ ದಿಢೀರ್ ಅವಕಾಶ. ಈ ಕಲ್ಪನೆಯು ಬಹಳವಾಗಿ ಡಿಜಿಟಲ್ ಯುಗಅಥವಾ ಡಿಜಿಟಲ್ ಕ್ರಾಂತಿ ಯ ಪರಿಕಲ್ಪನೆ ಜೊತೆಗೆ ಆಳವಾಗಿ ಸಂಬಂಧಿಸಿದೆ, ಜೊತೆಗೆ ಕೈಗಾರಿಕೀಕರಣದ ಮೂಲಕ ಕೈಗಾರಿಕಾ ಕ್ರಾಂತಿಗೆ ಒಳಪಟ್ಟ ಸಾಂಪ್ರದಾಯಿಕ ಕೈಗಾರಿಕೆಗಳು, ಮಾಹಿತಿ ಬಳಕೆಯ ಸುತ್ತ ಅವಲಂಬಿತವಾದ ಆರ್ಥಿಕತೆಗೆ ಬದಲಾವಣೆಯಾಗುವ ಕವಲುಗಳನ್ನು ಒಳಗೊಂಡಿದೆ. ಈ ಅವಧಿಯು ಸಾಮಾನ್ಯವಾಗಿ 20ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾಗಿರಬಹುದೆಂದು ಹೇಳಲಾಗುತ್ತದೆ, ಆದಾಗ್ಯೂ ನಿರ್ದಿಷ್ಟವಾದ ದಿನಾಂಕದಲ್ಲಿ ವ್ಯತ್ಯಾಸವಿದೆ. ಈ ಪದದ ಬಳಕೆಯು 1980ರ ಉತ್ತರಾರ್ಧದ ಸುಮಾರಿಗೆ ಹಾಗು 1990ರ ಪ್ರಾರಂಭದಲ್ಲಿ ಬಳಕೆಗೆ ಬರುವುದರ ಜೊತೆಗೆ ಅಂತರಜಾಲದ ಲಭ್ಯತೆಯೊಂದಿಗೆ ಪ್ರಸಕ್ತ ದಿನಗಳವರೆಗೆ ಬಳಸಲಾಗುತ್ತಿದೆ.

ಕಳೆದ 1990ರ ಉತ್ತರಾರ್ಧದಲ್ಲಿ, ಅಂತರಜಾಲ ನಿರ್ದೇಶಿಕೆಗಳು ಹಾಗು ಸರ್ಚ್ ಇಂಜಿನ್(ನೆಟ್ವರ್ಕ್ ಅಥವಾ ಇಂಟರ್ನೆಟ್ ನಲ್ಲಿನ ದತ್ತಾಂಶ) ಗಳು ಜನಪ್ರಿಯವಾಗಿದ್ದವು - ಯಾಹೂ! ಹಾಗು ಆಲ್ಟವಿಸ್ಟ (ಎರಡೂ 1995ರಲ್ಲಿ ಸ್ಥಾಪನೆಯಾಯಿತು) ಅನುಕ್ರಮವಾಗಿ ಈ ಉದ್ದಿಮೆಯ ಮುಂಚೂಣಿಯಲ್ಲಿದ್ದವು. ಕಳೆದ 2001ರಷ್ಟು ಇತ್ತೀಚಿಗೆ, ನಿರ್ದೇಶಿಕೆ ಮಾದರಿಯು ಸರ್ಚ್ ಎಂಜಿನ್ ಗಳಿಗೆ ದಾರಿ ಮಾಡಿಕೊಡುವುದರ ಜೊತೆಗೆ ಗೂಗಲ್ ನ ಉಗಮಕ್ಕೆ ದಾರಿಯಾಯಿತು (ಸ್ಥಾಪನೆ 1998). ಇದು ರಿಲೆವೆನ್ಸಿ ಶ್ರೇಣೀಕರಣದಲ್ಲಿ ಹೊಸ ಮಾರ್ಗಗಳನ್ನು ಅಭಿವೃದ್ಧಿ ಪಡಿಸಿತು. ಇಂದಿಗೂ ಸಾಮಾನ್ಯವಾಗಿ ಲಭ್ಯವಾಗುವ ನಿರ್ದೇಶಿಕೆ ವೈಶಿಷ್ಟ್ಯಗಳು, ಸರ್ಚ್ ಇಂಜಿನ್‌ಗಳ ಕಲ್ಪನೆಗಳಾಯಿತು. 2000ದ ಪ್ರಾರಂಭದಲ್ಲಿ ಒಂದು ಗಮನಾರ್ಹ ಮಾರುಕಟ್ಟೆಯ ಲಕ್ಷಣವಾಗಿದ್ದ ದತ್ತಾಂಶ ಸಂಗ್ರಹದ ಗಾತ್ರವು, ಅದೇ ರೀತಿಯಲ್ಲಿ ರಿಲೆವನ್ಸಿ ಶ್ರೇಣೀಕರಣಕ್ಕೆ ಮಹತ್ವ ನೀಡುವ ಮೂಲಕ ಬದಲಾಯಿತು.ಈ ವಿಧಾನಗಳಿಂದ ಸರ್ಚ್ ಎಂಜಿನ್‌ಗಳು ಮೊದಲಿಗೆ ಉತ್ತಮ ಫಲಿತಾಂಶಗಳ ಜೋಡಣೆಗೆ ಯತ್ನಿಸಿದವು.

"Web 2.0", ವರ್ಲ್ಡ್ ವೈಡ್ ವೆಬ್ ನಲ್ಲಿ ಸಂಪರ್ಕ, ಮಾಹಿತಿ ಹಂಚಿಕೆ, ಇಂಟರೋಪೆರಬಿಲಿಟಿ(ಪರಸ್ಪರ ನಿರ್ವಹಣೆ), ಬಳಕೆದಾರ-ಕೇಂದ್ರೀಕೃತ ವಿನ್ಯಾಸ[] ಹಾಗು ಸಹಯೋಗ ವನ್ನು ಸುಗಮಗೊಳಿಸುವ ವೈಶಿಷ್ಟ್ಯತೆಯನ್ನು ಹೊಂದಿದೆ. ಇದು ಜಾಲ ಆಧಾರಿತ ಸಮುದಾಯಗಳು, ಆತಿಥೇಯ ಸೇವೆಗಳು, ಹಾಗು ವೆಬ್ ಅಪ್ಲಿಕೇಶನ್ಸ್ ಗಳ ಅಭಿವೃದ್ಧಿ ಹಾಗು ಬೆಳವಣಿಗೆಗೆ ಕಾರಣವಾಗಿದೆ. ಉದಾಹರಣೆಗೆ ಸಾಮಾಜಿಕ-ನೆಟ್ ವರ್ಕಿಂಗ್ ಜಾಲತಾಣಗಳು, ವಿಡಿಯೊ-ಹಂಚಿಕೆ ಜಾಲತಾಣಗಳು, ವಿಕಿಗಳು, ಬ್ಲಾಗ್ ಗಳು, ಮಶುಪ್(ಡಿಜಿಟಲ್ ಮಾಧ್ಯಮ)ಗಳು ಹಾಗು ಫ್ಲೋಕ್ಸೊನೋಮಿಗಳು(ಟ್ಯಾಗಿಂಗ್) ಸೇರಿವೆ.

ಪೌರಸ್ತ್ಯ ರಾಷ್ಟ್ರಗಳ ಬೆಳವಣಿಗೆ

[ಬದಲಾಯಿಸಿ]
ದೇಶ %ಬೆಳವಣಿಗೆ
 ಚೀನಾ 11.90% []
 India 9.00% []

ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು GDP(ವಾಸ್ತವ) ಬೆಳವಣಿಗೆ ಪ್ರಮಾಣವನ್ನು ಆಧರಿಸಿದ ರಾಷ್ಟ್ರಗಳ ಪಟ್ಟಿಯನ್ನು ನೋಡಿ. ]] ಈ ನಡುವೆ ಏಷ್ಯಾ ಒಂದು ಗಮನಾರ್ಹವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ವಿಶೇಷವಾಗಿ ಚೀನಾ ಪ್ರಾದೇಶಿಕ ಅಧಿಕಾರ ಹಾಗು ಶತಕೋಟಿ-ಗ್ರಾಹಕ ಮಾರುಕಟ್ಟೆ ಎಂಬ ಸ್ಥಾನಮಾನದತ್ತ ಕಾಲಿಡುತ್ತಿದ್ದು, ಅಪಾರ ಬೆಳವಣಿಗೆಯನ್ನು ಕಂಡಿದೆ. ಭಾರತವು ಇತರ ಅಭಿವೃದ್ಧಿಶೀಲ ಪಾಶ್ಚಿಮಾತ್ಯವಲ್ಲದ ರಾಷ್ಟ್ರಗಳ ಜೊತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಇದಲ್ಲದೆ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಒಂದಾಗಲು ಆರಂಭಿಸಿದೆ.

ಚೀನಾ ವಿಶ್ವ ವ್ಯಾಪಾರ ಸಂಘಟನೆಗೆ ಸೇರಿದ ನಂತರ, ರಾಷ್ಟ್ರದಲ್ಲಿ ಜೀವನ ಮಟ್ಟವು ಮಹತ್ವವಾಗಿ ಸುಧಾರಿಸಿತು. ಏಕೆಂದರೆ ಚೀನಾ ಮಧ್ಯಮ ವರ್ಗದ ಪುನರ್ದರ್ಶನವಾಯಿತು. ಪೂರ್ವ ಹಾಗು ಪಶ್ಚಿಮ ಒಳನಾಡು ಪ್ರದೇಶಗಳಲ್ಲಿ ಸಂಪತ್ತಿನ ಅಸಮಾನತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ಸರಕಾರದ ಕಾರ್ಯಕ್ರಮಗಳಲ್ಲಿ ಪಶ್ಚಿಮದ ಅಭಿವೃದ್ಧಿ ಮಾಡುವ ಪ್ರೇರಣೆ ಜೊತೆಗೆ ಕಿನ್ಘೈ-ಟಿಬೆಟ್ ರೈಲ್ವೆ ಮುಂತಾದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಹಿಂದೆಂದಿಗಿಂತಲೂ ಶಿಕ್ಷಣದ ಹೊರೆಯು ದೊಡ್ಡದಾಗಿತ್ತು. ಹಲವು ಅಧಿಕಾರಿಗಳನ್ನು ಮರಣದಂಡನೆಗೆ ಗುರಿಪಡಿಸಿದ ಪ್ರಧಾನಿ ಜ್ಹೂ ರ ಭ್ರಷ್ಟಾಚಾರ ವಿರೋಧಿ ಆಭಿಯಾನದ ಹೊರತಾಗಿಯೂ ತಡೆಯಿಲ್ಲದ ಭ್ರಷ್ಟಾಚಾರವು ಮುಂದುವರೆಯಿತು.

ಕಳೆದ 2009ರ ಪ್ರಾರಂಭದ ಹೊತ್ತಿಗೆ, ಸಂಪೂರ್ಣ ಯುನೈಟೆಡ್ ಸ್ಟೇಟ್ಸ್ ನ ಸಮಗ್ರ ಜನಸಂಖ್ಯೆಗೆ ಸಮಾನವಾದ ಭಾರತದ ಸುಮಾರು 300 ದಶಲಕ್ಷ ಜನರು ಕಡುಬಡತನದಿಂದ ದೂರವಾಗಿದ್ದಾರೆ.[] ಭಾರತದ ಆರ್ಥಿಕ ಉದಾರೀಕರಣ ನೀತಿಯ ಫಲವು 2007ರಲ್ಲಿ ಉತ್ತುಂಗಕ್ಕೇರಿತು. ಭಾರತವು ಅತ್ಯಂತ ಹೆಚ್ಚಿನ GDP ಬೆಳವಣಿಗೆ ದರವಾದ 9%ನಷ್ಟು ದಾಖಲು ಮಾಡಿತು.[] ಇದರೊಂದಿಗೆ, ಭಾರತವು ಚೀನಾದ ನಂತರ ಜಗತ್ತಿನ ಎರಡನೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಯಿತು.[] ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋ-ಆಪರೇಶನ್ ಅಂಡ್ ಡೆವಲಪ್ಮೆಂಟ್(OECD) ವರದಿಯ ಪ್ರಕಾರ ಸರಾಸರಿ 7.5%ರಷ್ಟಿರುವ ಬೆಳವಣಿಗೆಯ ಪ್ರಮಾಣವು ಇನ್ನೊಂದು ದಶಕದಲ್ಲಿ ಸರಾಸರಿ ಆದಾಯವನ್ನು ದುಪ್ಪಟ್ಟು ಮಾಡುತ್ತದೆ, ಜೊತೆಗೆ ಹೆಚ್ಚಿನ ಸುಧಾರಣೆಗಳು ಕ್ಷಿಪ್ರವಾಗಿ ಆಗುತ್ತದೆ.[]

ನೆಕ್ಸ್ಟ್ ಇಲೆವೆನ್ ಆರ್ಥಿಕತೆಗಳಲ್ಲಿ ಬಹುಪಾಲು ಏಷ್ಯಾದ ರಾಷ್ಟ್ರಗಳಾಗಿವೆ. ಏಷ್ಯಾದಲ್ಲಿ ಹಲವು ಹೊಸ ಕೈಗಾರೀಕೃತ ರಾಷ್ಟ್ರಗಳು ಹೊರಹೊಮ್ಮಿವೆ. ಇದರಲ್ಲಿ ಚೀನಾ, ಭಾರತ, ಮಲೇಷಿಯಾ,ಫಿಲಿಫೈನ್ಸ್ ಹಾಗು ಥೈಲ್ಯಾಂಡ್ ದೇಶಗಳು ಸೇರಿವೆ.

ಯುರೇಷಿಯನ್ ಯೂನಿಯನ್ ಹಾಗು ಫೆಡರೇಶನ್

[ಬದಲಾಯಿಸಿ]

ಯುರೋಪ್ ನಲ್ಲಿ, ಯುರೋಪಿಯನ್ ಒಕ್ಕೂಟವು ಒಂದು ಬೌಗೋಳಿಕ-ರಾಜಕೀಯ ಒಕ್ಕೂಟವಾಗಿದೆ. ಇದು ಅಸಂಖ್ಯಾತ ಒಪ್ಪಂದಗಳನ್ನು ಆಧರಿಸಿದೆ ಹಾಗು ಯುರೋಪ್‌ನ ಬಹುಪಾಲು ರಾಜ್ಯಗಳನ್ನು ಒಳಗೊಂಡು ವಿಸ್ತರಣೆಗಳಿಗೆ ಒಳಪಟ್ಟಿದೆ. ಇದರ ಮೂಲಗಳನ್ನು ವಿಶ್ವ ಯುದ್ಧ IIರ ನಂತರದ ಶಕೆಯಷ್ಟು ಹಿಂದಿನದೆಂದು ಗುರುತಿಸಬಹುದು, ವಿಶೇಷವಾಗಿ 1951ರಲ್ಲಿ "ಸ್ಕುಮನ್ ಘೋಷಣೆ"ನಂತರ ಪ್ಯಾರಿಸ್ ನಲ್ಲಿ ಯುರೋಪಿಯನ್ ಕೋಲ್ ಅಂಡ್ ಸ್ಟೀಲ್ ಕಮ್ಯೂನಿಟಿ ಯ ಸ್ಥಾಪನೆ, ಅಥವಾ ಯುರೋಪಿಯನ್ ಎಕನಾಮಿಕ್ ಕಮ್ಯೂನಿಟಿ ಹಾಗು ಯುರೋಪಿಯನ್ ಆಟೋಮಿಕ್ ಎನರ್ಜಿ ಕಮ್ಯೂನಿಟಿಗೆ ದಾರಿಮಾಡಿಕೊಟ್ಟ ಟ್ರೀಟೀಸ್ ಆಫ್ ರೋಮ್. ಇವೆರಡೂ ಅಂಗಗಳು,ಕಳೆದ 1993ರಲ್ಲಿ ಅದೇ ಹೆಸರಿನಲ್ಲಿ ರೂಪುಗೊಂಡ ಯುರೋಪಿಯನ್ ಒಕ್ಕೂಟದ ಭಾಗವಾಗಿವೆ.

ಕಮ್ಯೂನಿಸ್ಟ್ ನಂತರದ ಅವಧಿ ಯಲ್ಲಿ, ರಷ್ಯನ್ ಒಕ್ಕೂಟವು ಒಂದು ಸ್ವತಂತ್ರ ರಾಷ್ಟ್ರವಾಯಿತು. ಸೋವಿಯತ್ ಒಕ್ಕೂಟವಾಗಿ ರೂಪುಗೊಂಡ ಹದಿನೈದು ಗಣರಾಜ್ಯಗಳಲ್ಲಿ ರಷ್ಯಾ ಅತ್ಯಂತ ದೊಡ್ಡದೆನಿಸಿಕೊಂಡಿತು.ಜೊತೆಗೆ 60%ಕ್ಕೂ ಮೇಲ್ಪಟ್ಟ GDP ಯನ್ನು ಹೊಂದಿತ್ತು ಹಾಗು ಸೋವಿಯತ್ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿತ್ತು. ರಷ್ಯನ್ನರು ಸೋವಿಯತ್ ಮಿಲಿಟರಿಹಾಗೂ ಕಮ್ಯೂನಿಸ್ಟ್ ಪಕ್ಷದ ಮೇಲೆ ಪ್ರಾಬಲ್ಯ ಸಾಧಿಸಿದರು. ಹೀಗೆ, ರಷ್ಯಾ ರಾಜತಾಂತ್ರಿಕ ವಿಚಾರಗಳಲ್ಲಿ ಸೋವಿಯತ್ ಒಕ್ಕೂಟದ ಉತ್ತರಾಧಿಕಾರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು ಹಾಗು ಇದು USSRನ ಕಾಯಂ ಸದಸ್ಯತ್ವವನ್ನು ಪಡೆಯಿತು. ಇದಲ್ಲದೆ UN ಭದ್ರತಾ ಮಂಡಳಿಯಲ್ಲಿ ವೀಟೊ ಹಕ್ಕನ್ನು ಪಡೆಯಿತು; ನೋಡಿ ರಷ್ಯಾ ಅಂಡ್ ದಿ ಯುನೈಟೆಡ್ ನೇಶನ್ಸ್ . ಇಂದಿಗೂ ರಷ್ಯಾ ತನ್ನ ಚಕ್ರವರ್ತಿಗಳ ಹಾಗು ಸೋವಿಯತ್ ಪೂರ್ವದ ರಾಜಕೀಯ ಸಂಸ್ಕೃತಿ ಹಾಗು ಸಾಮಾಜಿಕ ವ್ಯವಸ್ಥೆಯ ಹಲವು ನಿರಂತರತೆಗಳನ್ನು ಹಂಚಿಕೊಂಡಿದೆ.

ಇತ್ತೀಚಿನ ಆಧುನಿಕ ಭಯೋತ್ಪಾದನೆ ಹಾಗು ಕದನ

[ಬದಲಾಯಿಸಿ]

ಕಳೆದ 2000ದಶಕದ ಪಾಶ್ಚಿಮಾತ್ಯ ಜಗತ್ತು ಹಾಗು ಮಧ್ಯಪ್ರಾಚ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳು ಇತ್ತೀಚಿನ ಆಧುನಿಕ ಭಯೋತ್ಪಾದನೆ, ಭಯೋತ್ಪಾದನೆ ವಿರುದ್ಧ ಯುದ್ಧ, ಅಫ್ಘಾನಿಸ್ತಾನ್ ಯುದ್ಧ, ಹಾಗು ಇರಾಕ್ ಯುದ್ಧದ ಸುತ್ತ ಪರಿಭ್ರಮಿಸುತ್ತದೆ.

ದಿ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಹಾಗು ವರ್ಲ್ಡ್ ಟ್ರೇಡ್ ಸೆಂಟರ್ ಬೆಂಕಿ.

ಸೆಪ್ಟೆಂಬರ್ 11ರ ದಾಳಿಯು ಯುನೈಟೆಡ್ ಸ್ಟೇಟ್ಸ್ ಮೇಲೆ ಸೆಪ್ಟೆಂಬರ್ 11, 2001ರಲ್ಲಿ ಅಲ್-ಖೈದಾ ನಡೆಸಿದ ಆತ್ಮಾಹುತಿ ದಾಳಿಗಳನ್ನು ಒಳಗೊಂಡ ಒಂದು ಸಂಘಟಿತ ಸರಣಿ ದಾಳಿಯಾಗಿತ್ತು. ಆ ದಿನ ಬೆಳಿಗ್ಗೆ, 19 ಅಲ್-ಖೈದಾ ಭಯೋತ್ಪಾದಕರು ನಾಲ್ಕು ವಾಣಿಜ್ಯೋಪಯೋಗಿ ಪ್ಯಾಸೆಂಜರ್ ಜೆಟ್ ವಿಮಾನ ಗಳನ್ನು ಅಪಹರಿಸಿದರು.[][] ಅಪಹರಣಕಾರರು ಉದ್ದೇಶಪೂರ್ವಕವಾಗಿ ಎರಡು ವಿಮಾನಗಳನ್ನು ನ್ಯೂಯಾರ್ಕ್ ನಗರವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಕಟ್ಟಡಗಳಿಗೆ ಢಿಕ್ಕಿಹೊಡೆಸಿದರು, ಜೊತೆಗೆ ವಿಮಾನದಲ್ಲಿದ್ದ ಎಲ್ಲರನ್ನೂ ಹಾಗು ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ಇನ್ನಿತರರನ್ನು ಬಲಿತೆಗೆದುಕೊಂಡರು.

ಎರಡು ಗಂಟೆಯ ಅವಧಿಯೊಳಗೆ ಎರಡೂ ಕಟ್ಟಡಗಳು ಕುಸಿಯುವುದರೊಂದಿಗೆ ಹತ್ತಿರವಿದ್ದ ಕಟ್ಟಡಗಳು ನಾಶವಾದವು ಹಾಗೂ ಇನ್ನಿತರ ಕಟ್ಟಡಗಳಿಗೆ ಹಾನಿಯಾಯಿತು. ಅಪಹರಣಕಾರರುವಾಷಿಂಗ್ಟನ್, D.C.ಯ ಸ್ವಲ್ಪ ಹೊರಭಾಗದಲ್ಲಿದ್ದ ಆರ್ಲಿಂಗ್ಟನ್, ವರ್ಜೀನಿಯದಿ ಪೆಂಟಗನ್ ಕಟ್ಟಡಕ್ಕೆ ಮೂರನೇ ವಿಮಾನವನ್ನು ಅಪ್ಪಳಿಸಿದರು.ಕೆಲವು ಪ್ರಯಾಣಿಕರು ಹಾಗು ವಿಮಾನದ ಸಿಬ್ಬಂದಿ ವಿಮಾನವನ್ನು ಪುನಃ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ ನಂತರ  ನಾಲ್ಕನೇ ವಿಮಾನವು ಸೊಮರ್ಸೆಟ್ ಕೌಂಟಿ, ಪೆನ್ಸಿಲ್ವೇನಿಯ ದ ಹಳ್ಳಿಗಾಡಿನ ಪ್ರದೇಶ ಶಾಂಕ್ಸ್ವಿಲ್ಲೆಯ ಸಮೀಪದ ಜಮೀನಿನಲ್ಲಿ ಅಪ್ಪಳಿಸಿತು. ವಿಮಾನವನ್ನು ಅಪಹರಣಕಾರರು ವಾಷಿಂಗ್ಟನ್ D.C.ಗೆ ಪುನಃತಿರುಗಿಸಿದ್ದರು. ಸೆಪ್ಟೆಂಬರ್ 11, 2001ರ ದಾಳಿಯ ನಂತರ ಪ್ರಮುಖ ಭಯೋತ್ಪಾದಕ ಕೃತ್ಯಗಳಲ್ಲಿ ಮಾಸ್ಕೋದ ಥಿಯೇಟರ್ ಮುತ್ತಿಗೆ, 2003ರ ಇಸ್ತಾನ್‌ಬುಲ್ ಬಾಂಬ್ ಸ್ಫೋಟಗಳು, ಮ್ಯಾಡ್ರಿಡ್ ರೈಲ್ವೆ ಬಾಂಬ್ ಸ್ಫೋಟಗಳು,ಬೆಸ್ಲಾನ್ ಶಾಲೆಯ ಒತ್ತೆಯಾಳು ಬಿಕ್ಕಟ್ಟು, 2005ರ ಲಂಡನ್ ಸ್ಫೋಟಗಳು, 2005ರ ಅಕ್ಟೋಬರ್ ನವದೆಹಲಿ ಬಾಂಬ್ ಸ್ಫೋಟಗಳು ಹಾಗು 2008ರ ಮುಂಬಯಿ ಹೋಟೆಲ್‌ನ ಮುತ್ತಿಗೆ ಸೇರಿವೆ.

ಯುನೈಟೆಡ್ ಸ್ಟೇಟ್ಸ್ ಸೆಪ್ಟೆಂಬರ್ 11, 2001ರ ದಾಳಿಗೆ ಪ್ರತಿಕ್ರಿಯೆಯಾಗಿ "ಭಯೋತ್ಪಾದನೆಯ ವಿರುದ್ಧ ಜಾಗತಿಕ ಯುದ್ಧ" ವನ್ನು ಸಾರಿತು. ಜೊತೆಗೆ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿ ಅಲ್-ಖೈದಾ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ತಾಲಿಬಾನ್ ನ್ನು ಪದಚ್ಯುತಗೊಳಿಸಿತು ಹಾಗು ಪೇಟ್ರಿಯಾಟ್ ಆಕ್ಟ್ ನ್ನು ಕಾನೂನಾಗಿಸಿತು. ಇತರ ಹಲವು ರಾಷ್ಟ್ರಗಳು ಸಹ ಭಯೋತ್ಪಾದನಾ-ವಿರೋಧಿ ಕಾನೂನನ್ನು ಬಲಪಡಿಸಿದವು ಹಾಗು ಕಾನೂನು ಜಾರಿ ಅಧಿಕಾರಗಳನ್ನು ವಿಸ್ತರಿಸಿದವು. ಕಳೆದ 2001ರ ದಾಳಿಯ ನಂತರ 'ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ'ವು ಇಸ್ಲಾಂ ಭಯೋತ್ಪಾದನೆ ಹಾಗು ಇಸ್ಲಾಂ ಉಗ್ರಗಾಮಿಗಳ ವಿರುದ್ಧ ಮಿಲಿಟರಿ, ರಾಜಕೀಯ, ಕಾನೂನಾತ್ಮಕ ಹಾಗು ಸೈದ್ಧಾಂತಿಕ ಸಮರವಾಗಿದೆ.

ಕುನಾರ್ ಪ್ರಾಂತ್ಯದಲ್ಲಿ U.S. ಸೇನಾ ತುಕಡಿಗಳು

ಕಳೆದ 2001ರ ಉತ್ತರಾರ್ಧದಲ್ಲಿ ಆಫ್ಘಾನಿಸ್ಥಾನದ ಯುದ್ಧ ವು ಪ್ರಾರಂಭವಾಯಿತು, ಯುದ್ಧವನ್ನು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಹಾಗು NATO-ಮುಂದಾಳತ್ವದಲ್ಲಿ, UN ಪ್ರಮಾಣಿಕೃತ ISAFಗಳು ಸೆಪ್ಟೆಂಬರ್ 11ರ ದಾಳಿಗೆ ಪ್ರತಿಕ್ರಿಯೆಯಾಗಿ ಆರಂಭಿಸಿದವು. ದಾಳಿಯ ಮೂಲ ಉದ್ದೇಶವೆಂದರೆ ಒಸಾಮ ಬಿನ್ ಲಾಡೆನ್ ಹಾಗು ಇತರ ಪ್ರಮುಖ ಅಲ್-ಖೈದಾಸದಸ್ಯರನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸುವುದಾಗಿತ್ತು, ಇದಲ್ಲದೆ ಅಲ್-ಖೈದಾದ ಇಡೀ ಸಂಘಟನೆಯನ್ನು ನಾಶ ಮಾಡಿ ಅಲ್-ಖೈದಾಗೆ ಸುರಕ್ಷಿತ ಆಶ್ರಯ ನೀಡಿದ್ದ ತಾಲಿಬಾನ್ ಆಳ್ವಿಕೆಯನ್ನು ಪದಚ್ಯುತಗೊಳಿಸುವುದು ಗುರಿಯಾಗಿತ್ತು. ಬುಶ್ ಆಡಳಿತ ನೀತಿ ಹಾಗು ಬುಶ್ ಸಿದ್ಧಾಂತವು ಭಯೋತ್ಪಾದನಾಸಂಘಟನೆಗಳು ಹಾಗು ಅವುಗಳಿಗೆ ಆಶ್ರಯ ನೀಡಿರುವ ಯಾವುದೇ ರಾಷ್ಟ್ರ ಅಥವಾ ಸರಕಾರಗಳ ನಡುವೆ ಸೇನೆಯು ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲವೆಂದು ತಿಳಿಸಿತು. ಆಫ್ಘಾನಿಸ್ತಾನದಲ್ಲಿ ಎರಡು ಮಿಲಿಟರಿ ಕಾರ್ಯಾಚರಣೆಗಳು ರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋರಾಡುತ್ತಿವೆ. ಆಪರೇಶನ್ ಎಂಡ್ಯೂರಿಂಗ್ ಫ್ರೀಡಂ(OEF) ಎಂಬುದು ಯುನೈಟೆಡ್ ಸ್ಟೇಟ್ಸ್ ನ ಒಂದು ಯುದ್ಧ ಕಾರ್ಯಾಚರಣೆ, ಇದು ಕೆಲವು ಮೈತ್ರಿಕೂಟದ ಭಾಗಿದಾರರನ್ನು ಒಳಗೊಂಡಿದ್ದು, ಪ್ರಸಕ್ತ ಪಾಕಿಸ್ತಾನದ ಗಡಿಯಲ್ಲಿ ರಾಷ್ಟ್ರದ ಪೂರ್ವ ಹಾಗು ದಕ್ಷಿಣ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. UN ಭದ್ರತಾ ಮಂಡಳಿ 2001ರ ಕೊನೆಯಲ್ಲಿ ಕಾಬುಲ್ ಹಾಗು ಅದರ ಸುತ್ತಮುತ್ತಲ ಪ್ರದೇಶಗಳನ್ನು ಸಂರಕ್ಷಿಸುವ ಸಲುವಾಗಿ ರೂಪಿಸಿರುವ ಇಂಟರ್ನ್ಯಾಷನಲ್ ಸೆಕ್ಯೂರಿಟಿ ಅಸಿಸ್ಟೆನ್ಸ್ ಫೋರ್ಸ್(ISAF) ಎರಡನೇ ಕಾರ್ಯಾಚರಣೆಯಾಗಿದೆ. ಕಳೆದ 2003ರಲ್ಲಿ NATO, ISAF ನ ಅಧಿಕಾರವನ್ನು ವಹಿಸಿಕೊಂಡಿತು.

ಅಫ್ಘಾನ್ ನಾರ್ದನ್ ಅಲಯನ್ಸ್ ಪೂರೈಕೆ ಮಾಡಿದ ಹೆಚ್ಚುವರಿ ಕಾಲ್ದಳದ ಪಡೆಗಳೊಂದಿಗೆ ಬಹುರಾಷ್ಟ್ರೀಯ ಇನ್‌ಫ್ಯಾಂಟ್ರಿ ಆಕ್ಷನ್ಸ್ ಹಾಗೂ ವೈಮಾನಿಕ ಬಾಂಬಿಂಗ್ ಕಾರ್ಯಾಚರಣೆಗಳು ತಾಲಿಬಾನ್ ನನ್ನು ಅಧಿಕಾರದಿಂದ ಕಿತ್ತೊಗೆಯಿತು. ಆದರೂ ಅಲ್ಲಿಂದೀಚೆಗೆ ತಾಲಿಬಾನ್ ಸೈನ್ಯವು ಸ್ವಲ್ಪ ಬಲವನ್ನು ಮತ್ತೆ ಗಳಿಸಿಕೊಂಡಿದೆ.[೧೦] ಈ ಯುದ್ಧವು ಕಡಿಮೆ ಯಶಸ್ಸನ್ನು ಗಳಿಸುವುದರ ಜೊತೆಗೆ ಅಲ್-ಖೈದಾದ ಚಟುವಟಿಕೆಯನ್ನು ತಡೆಹಿಡಿಯುವ ಗುರಿಯನ್ನು ನಿರೀಕ್ಷಿಸಿದಂತೆ ಸಾಧಿಸಲಾಗಲಿಲ್ಲ.[೧೧] ಕಳೆದ 2006ರಿಂದೀಚೆಗೆ, ಆಫ್ಘಾನಿಸ್ತಾನವು, ತಾಲಿಬಾನ್-ನೇತೃತ್ವದ ಬಂಡುಕೋರ ಚಟುವಟಿಕೆಗಳ ಹೆಚ್ಚಳ, ದಾಖಲೆಯ ಅಧಿಕ ಮಟ್ಟದ ಅಕ್ರಮ ಮಾದಕವಸ್ತು ಉತ್ಪಾದನೆ,[೧೨][೧೩] ಕಾಬುಲ್ ನ ಹೊರಗೆ ಸೀಮಿತ ನಿಯಂತ್ರಣ ಹೊಂದಿದ ದುರ್ಬಲ ಸರ್ಕಾರದಿಂದ ಸ್ಥಿರತೆಗೆ ಬೆದರಿಕೆಗಳನ್ನು ಕಂಡಿದೆ.[೧೪] ಕಳೆದ 2008ರ ಅಂತ್ಯದಲ್ಲಿಒಸಾಮಾ ಬಿನ್ ಲಾಡೆನ್ ನನ್ನು ಸೆರೆಹಿಡಿಯಲು ಸಾಧ್ಯವಾಗದೇ ಯುದ್ಧವು ವಿಫಲಗೊಂಡಿತು. ಸಮ್ಮಿಶ್ರ ಕೂಟಗಳು ಬೆಂಬತ್ತಿದ ತಾಲಿಬಾನ್ ಉಗ್ರರು ಪಾಕಿಸ್ತಾನ ಗಡಿ ದಾಟಿದ ಘಟನೆಗಳಿಂದಾಗಿ ಯುನೈಟೆಡ್ ಸ್ಟೇಟ್ಸ್ ಹಾಗು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಮೂಡಿತು.

ಮಾರ್ಚ್ 7, 2007ರಲ್ಲಿ ಬಾಗ್ದಾದ್‌ನ ಅಲ್ ದೌರ ಪ್ರಾಂತ್ಯದಲ್ಲಿ ಬಂಡುಕೋರರ ವಿರುದ್ಧ U.S. ಸೈನಿಕರು ಗುಂಡಿನ ಕಾಳಗದ ಸಂದರ್ಭದಲ್ಲಿ ಅಡಗಿಕೊಳ್ಳುತ್ತಿರುವುದು.

ಬಹುರಾಷ್ಟ್ರೀಯ ಸೈನ್ಯವು ಇರಾಕ್ ಮೇಲೆ ಆಕ್ರಮಣ ನಡೆಸುವುದರೊಂದಿಗೆಎರಡನೇ ಗಲ್ಫ್ ಯುದ್ಧವು 2003ರಲ್ಲಿ ಪ್ರಾರಂಭವಾಯಿತು.[೧೫] ಇರಾಕ್‌ನ ಮೇಲಿನ ದಾಳಿಯು ಸ್ವಾಧೀನಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ಅಂತಿಮವಾಗಿ ಸದ್ದಾಮ್ ಹುಸೇನ್ ರ ಬಂಧನಕ್ಕೆ ಕಾರಣವಾಯಿತು. ಈತನನ್ನು ನಂತರ ಇರಾಕಿ ಸರ್ಕಾರವು ಗಲ್ಲಿಗೇರಿಸಿತು. ಸಮ್ಮಿಶ್ರ ಪಡೆಗಳ ವಿರುದ್ಧ ಹಾಗು ವಿವಿಧ ಜನಾಂಗೀಯ ಗುಂಪುಗಳ ನಡುವೆ ಹಿಂಸಾಚಾರದಿಂದ ಇರಾಕಿ ಬಂಡುಕೋರರ ಜೊತೆಗೆ ಅಸಮತೆಯ ಯುದ್ಧ ಕ್ಕೆ, ಸುನ್ನಿ ಹಾಗು ಶಿಯಾ ಇರಾಕಿ ಗುಂಪುಗಳ ನಡುವೆ ಸಂಘರ್ಷ ಹಾಗು ಇರಾಕ್‌ನಲ್ಲಿ ಅಲ್-ಖೈದಾ ಚಟುವಟಿಕೆಗಳಿಗೆ ದಾರಿಕಲ್ಪಿಸಿತು.[೧೬][೧೭] ಸೈನ್ಯ ವಾಪಸಾತಿಗಳಿಗೆ ಸಾರ್ವಜನಿಕ ಒಲವು ಹೆಚ್ಚಿದ್ದರಿಂದ ಸಮ್ಮಿಶ್ರಕೂಟದ ಸದಸ್ಯ ರಾಷ್ಟ್ರಗಳು ತಮ್ಮ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡವು. ಜತೆಗೆ ಇರಾಕಿ ಸೈನ್ಯವು ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿತು.[೧೮][೧೯] ಕಳೆದ 2008ರ ಉತ್ತರಾರ್ಧದಲ್ಲಿ, U.S. ಹಾಗು ಇರಾಕಿ ಸರ್ಕಾರವು 2011ರ ಕೊನೆವರೆಗೆ ಜಾರಿಗೆ ಬರುವಂತೆ ಸ್ಟೇಟಸ್ ಆಫ್ ಫೋರ್ಸಸ್ ಅಗ್ರಿಮೆಂಟ್ ಗೆ ಅನುಮೋದನೆ ನೀಡಿದವು.[೨೦] ಇರಾಕಿ ಸಂಸತ್ತು U.S.[೨೧][೨೨] ಜೊತೆ ಒಂದು ಸ್ಟ್ರ್ಯಾಟೆಜಿಕ್ ಫ್ರೇಮ್ ವರ್ಕ್ ಅಗ್ರಿಮೆಂಟ್‌ಗೆ ಸಹ ಅನುಮೋದನೆ ನೀಡಿತು. ಇದು ಸಂವಿಧಾನ ಹಕ್ಕುಗಳು, ಬೆದರಿಕೆ ತಡೆ, ಶಿಕ್ಷಣ,[೨೩] ಇಂಧನ ಅಭಿವೃದ್ಧಿ, ಹಾಗು ಇತರ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರದ ಗುರಿಯನ್ನು ಹೊಂದಿತ್ತು.[೨೪] ಕಳೆದ 2009ರಲ್ಲಿ, U.S. ಅಧ್ಯಕ್ಷ ಬರಾಕ್ ಒಬಾಮ "ಯುದ್ಧ ನಿರತ ಪಡೆಗಳಿಗೆ" 18-ತಿಂಗಳಲ್ಲಿ ವಾಪಸಾತಿಯ ಕಾಲಾವಕಾಶವನ್ನು ನೀಡಿದರು.

ಒಬಾಮ ಆಡಳಿತವು ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು "ಓವರ್ ಸೀಸ್ ಕಂಟಿನ್ಜೆನ್ಸಿ ಆಪರೇಶನ್" ಎಂದು ಮರು ನಾಮಕರಣ ಮಾಡಿತು.[೨೫] ಇದರ ಉದ್ದೇಶಗಳೇನೆಂದರೆ US ನಾಗರೀಕರ ಹಾಗು ವಿಶ್ವವ್ಯಾಪಿ ವ್ಯಾಪಾರಿ ಹಿತಾಸಕ್ತಿಗಳ ರಕ್ಷಣೆ, USನಲ್ಲಿರುವ ಭಯೋತ್ಪಾದನಾ ಜಾಲಗಳನ್ನು ಮುರಿಯುವುದು, ಹಾಗು ಅಲ್-ಖೈದಾ ಹಾಗು ಅದಕ್ಕೆ ಸಂಬಂಧಿಸಿದ ಸಂಘಟನೆಗಳನ್ನು ಛಿದ್ರಗೊಳಿಸುವುದಾಗಿದೆ.[೨೬][೨೭] ಇರಾಕ್‌ನಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ, ಗುಂಟನಾಮೋ ಬೇ ಬಂಧನ ಶಿಬಿರ ಮುಚ್ಚುವುದು, ಹಾಗೂ ಆಫ್ಘಾನಿಸ್ತಾನದಲ್ಲಿ ಪಡೆಗಳ ಹೆಚ್ಚಳಕುರಿತು ಆಡಳಿತವು ತನ್ನ ಗಮನ ಮತ್ತೆ ಕೇಂದ್ರೀಕರಿಸಿದೆ.

ಇಸ್ರೇಲಿ-ಪ್ಯಾಲೆಸ್ಟೀನಿಯನ್ ಸಂಘರ್ಷ

[ಬದಲಾಯಿಸಿ]
ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಜ ಪಟ್ಟಿ,ಹಾಗು ಗೋಲನ್ ಹೈಟ್ಸ್

ಇಸ್ರೇಲಿ-ಪ್ಲ್ಯಾಲೆಸ್ಟೇನಿಯನ್ ಸಂಘರ್ಷ ಎಂದರೆ ಇಸ್ರೇಲಿಗಳು ಹಾಗು ಪ್ಯಾಲೆಸ್ಟೇನಿಯನ್ನರ ನಡುವೆ ಪ್ರಸಕ್ತ ನಡೆಯುತ್ತಿರುವ ವಿವಾದ.[೨೮] ಇದು ವ್ಯಾಪಕವಾದ ಅರಬ್-ಇಸ್ರೇಲಿ ಸಂಘರ್ಷದ ಒಂದು ಭಾಗದಿಂದ ರೂಪುಗೊಂಡಿದೆ. ಇಸ್ರೇಲಿ-ಪ್ಯಾಲೆಸ್ಟೀನಿಯನ್ ಘರ್ಷಣೆಗೆ ಎರಡು-ರಾಜ್ಯ ಪರಿಹಾರವು ಒಮ್ಮತದ ಪರಿಹಾರವಾಗಿದ್ದು, ಸಂಘರ್ಷಕ್ಕೆ ಒಳಪಟ್ಟ ಎರಡು ಪ್ರಮುಖ ರಾಷ್ಟ್ರಗಳ ನಡುವೆ ಪ್ರಸಕ್ತ ಚರ್ಚೆಯಲ್ಲಿದೆ.

ಐತಿಹಾಸಿಕ ಪ್ರದೇಶ ಪ್ಯಾಲೆಸ್ಟೀನ್ ನ ಪಶ್ಚಿಮ ಭಾಗದಲ್ಲಿ ಎರಡು ಪ್ರತ್ಯೇಕ ರಾಜ್ಯಗಳನ್ನು ರಚಿಸುವ ಬಗ್ಗೆ ಎರಡು-ರಾಜ್ಯ ಪರಿಹಾರ ಮಾರ್ಗವು ಚಿಂತನೆ ನಡೆಸಿದೆ, ಸಂಘರ್ಷದ ಇತ್ಯರ್ಥಕ್ಕೆ ಒಂದು ಯಹೂದಿ ಹಾಗು ಮತ್ತೊಂದು ಅರಬ್ ರಾಜ್ಯಗಳನ್ನು ರೂಪಿಸುವುದು. ಈ ಯೋಜನೆಯ ಪ್ರಕಾರ, ಅರಬ್ ನಿವಾಸಿಗಳಿಗೆ ಹೊಸ ಪ್ಯಾಲೆಸ್ಟೀನಿಯನ್ ರಾಜ್ಯದ ಪೌರತ್ವ ನೀಡಲಾಗುತ್ತದೆ; ಇದೆ ರೀತಿಯಾಗಿ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗೆ ಇದೇ ರೀತಿಯ ಪೌರತ್ವವನ್ನು ನೀಡಬಹುದು. ಪ್ರಸಕ್ತ ದಿನದ ಇಸ್ರೇಲ್‌ನ ಅರಬ್ ನಾಗರೀಕರು ಇಸ್ರೇಲ್‌ನಲ್ಲೇ ಉಳಿಯುವ, ಅಥವಾ ಹೊಸ ಪ್ಯಾಲೆಸ್ಟೀನ್‌ನ ಪ್ರಜೆಗಳಾಗುವ ಆಯ್ಕೆಯನ್ನು ಪಡೆದಿದ್ದಾರೆ.

ಪ್ರಸಕ್ತ, ಒಂದು ಗಮನಾರ್ಹ ಬಹುಸಂಖ್ಯಾತ ಇಸ್ರೇಲಿಗಳು ಹಾಗು ಪ್ಯಾಲೆಸ್ಟೀನಿಯನ್ ಜನರು, ಅನೇಕ ಸಮೀಕ್ಷೆಗಳ ಪ್ರಕಾರ,ಸಂಘರ್ಷದ ಪರಿಹಾರಕ್ಕೆ ಯಾವುದೇ ಪರಿಹಾರಕ್ಕಿಂತ ಎರಡು-ರಾಜ್ಯ ಪರಿಹಾರಕ್ಕೆ ಒಲವು ತೋರಿದ್ದಾರೆ.[೨೯][೩೦][೩೧] ಹಲವು ಪ್ಯಾಲೆಸ್ಟೀನಿಯನ್ನರು, ವೆಸ್ಟ್ ಬ್ಯಾಂಕ್ ಹಾಗು ಗಾಜ ಪಟ್ಟಿ ಒಳಗೊಂಡ ಪ್ರದೇಶವನ್ನು ತಮ್ಮ ಭವಿಷ್ಯದ ರಾಜ್ಯವನ್ನಾಗಿ ಪರಿಗಣಿಸುತ್ತಾರೆ, ಈ ದೃಷ್ಟಿಕೋನವನ್ನು ಹಲವು ಇಸ್ರೇಲಿಗಳು ಸಹ ಅನುಮೋದಿಸುತ್ತಾರೆ.[೩೨] ಕೆಲವು ಬೆರಳೆಣಿಕೆಯ ಶಿಕ್ಷಣತಜ್ಞರು ಏಕ-ರಾಜ್ಯ ಪರಿಹಾರಕ್ಕೆ ವಾದಿಸುತ್ತಾರೆ. ಇದರಂತೆ ಇಸ್ರೇಲ್, ಗಾಜ ಪಟ್ಟಿ, ಹಾಗು ವೆಸ್ಟ್ ಬ್ಯಾಂಕ್ ಎಲ್ಲವೂ ಒಂದೇ ಬೈ-ನ್ಯಾಷನಲ್(ದ್ವಿರಾಷ್ಟ್ರ) ರಾಜ್ಯವಾಗಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಬೇಕೆಂದು ವಾದಿಸುತ್ತಾರೆ.[೩೩][೩೪]

ಯಾವುದೇ ಅಂತಿಮ ಒಪ್ಪಂದದ ರೂಪ ತಳೆಯುವುದರಲ್ಲಿ ಹಾಗೂ ಮೂಲ ಬದ್ಧತೆಗಳನ್ನು ಎತ್ತಿಹಿಡಿಯುವಲ್ಲಿ ಒಬ್ಬರು ಇನ್ನೊಬ್ಬರಲ್ಲಿ ಕಾಣುವ ವಿಶ್ವಾಸಾರ್ಹತೆಯ ಮಟ್ಟಕ್ಕೆ ಸಂಬಂಧಿಸಿದಂತೆ ಸಹ ಗಮನಾರ್ಹ ಭಿನ್ನಾಭಿಪ್ರಾಯಗಳಿವೆ. ಇಸ್ರೇಲಿ ಹಾಗು ಪ್ಯಾಲೆಸ್ಟೀನಿಯನ್ ಸಮಾಜದ ಒಳಗೆ, ಸಂಘರ್ಷವು ಒಂದು ವ್ಯಾಪಕ ವೈವಿಧ್ಯದ ದೃಷ್ಟಿಕೋನಗಳು ಹಾಗು ಅಭಿಪ್ರಾಯಗಳನ್ನು ಉಂಟುಮಾಡಿತು. ಇದು ಇಸ್ರೇಲಿಗಳು ಹಾಗು ಪ್ಯಾಲೆಸ್ಟೀನಿಯನ್ನರ ನಡುವೆ ಮಾತ್ರವಲ್ಲದೆ, ತಮ್ಮೊಳಗೆ ಇರುವಂತಹ ಆಳವಾದ ಭೇದಗಳ ಬಗ್ಗೆ ಬೆಳಕುಚೆಲ್ಲುತ್ತವೆ. ಕಳೆದ 2003ರಿಂದೀಚೆಗೆ, ಪ್ಯಾಲೆಸ್ಟೀನಿಯನ್ ಕಡೆ ಎರಡು ಪ್ರಮುಖ ಬಣಗಳ ನಡುವಿನ ಸಂಘರ್ಷದಿಂದ ಒಡೆದಿದೆ: ಫತಾಹ್, ಸಾಂಪ್ರದಾಯಿಕವಾದ ಪ್ರಬಲ ಪಕ್ಷ, ಹಾಗು ಅದರ ಇತ್ತೀಚಿನ ಚುನಾವಣಾ ಪ್ರತಿಸ್ಪರ್ಧಿ, ಹಮಾಸ್.

ಸಮಕಾಲೀನ ಜಗತ್ತು

[ಬದಲಾಯಿಸಿ]

ವರ್ತಮಾನ ಹಾಗು ಭವಿಷ್ಯ

[ಬದಲಾಯಿಸಿ]
Millennium: 3rd millennium
Centuries: 20th century21st century22nd century
Decades: 1970s 1980s 1990s2000s2010s 2020s 2030s
Years: 2000 2001 2002 2003 2004 2005 2006 2007 2008 2009
Categories: BirthsDeathsArchitecture
EstablishmentsDisestablishments

ಪ್ರಸಕ್ತ ಜಗತ್ತು ಮೂರನೇ ಸಹಸ್ರಮಾನದಲ್ಲಿದೆ.

ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಅನುಗುಣವಾಗಿ 21ನೇ ಶತಮಾನವು ಕ್ರಿಶ್ಚಿಯನ್ ಶಕೆ ಅಥವಾ ಕಾಮನ್ ಶಕೆಯ ಪ್ರಸಕ್ತ ಶತಮಾನ. ಇದು ಜನವರಿ 1, 2001ರಲ್ಲಿ ಪ್ರಾರಂಭವಾಗಿ ಡಿಸೆಂಬರ್ 31, 2100ರಲ್ಲಿ ಕೊನೆಗೊಳ್ಳುತ್ತದೆ. 2010ರ ದಶಕವು ಜನವರಿ 1, 2010ರಂದು ಪ್ರಾರಂಭವಾಗಿ ಡಿಸೆಂಬರ್ 31, 2019ಕ್ಕೆ ಕೊನೆಗೊಳ್ಳುತ್ತದೆ.

ಪ್ರಸಕ್ತ ಅವಧಿಯು ನೇರವಾಗಿ ಗ್ರಹಿಸಲಾದ ಘಟನೆಗಳಿಗೆ ಸಂಬಂಧಿಸಿದೆ,[೩೫] ಮರುಸ್ಮರಣೆ ಅಥವಾ ಒಂದು ಊಹಾಪೋಹವನ್ನು ಆಧರಿಸಿಲ್ಲ. ಬಾಹ್ಯಾಕಾಶ ಯುಗದಲ್ಲಿ ಇದನ್ನು ಸಾಮಾನ್ಯವಾಗಿ ಒಂದು ಹೈಪರ್ ಪ್ಲೇನ್ ಎಂದು ಪ್ರತಿನಿಧಿಸಲಾಗುತ್ತದೆ. ಸಾಮಾನ್ಯವಾಗಿ ನೌ ಎಂದು ಕರೆಯಲಾಗುತ್ತದೆ, ಆದಾಗ್ಯೂ ಆಧುನಿಕ ಗಣಿತ ಭೌತ ಶಾಸ್ತ್ರವು ಈ ರೀತಿಯ ಹೈಪರ್ ಪ್ಲೇನ್ ನನ್ನು ಚಲನಶಾಸ್ತ್ರ ವೀಕ್ಷಕರಿಗೆ ವಿಶಿಷ್ಟವಾಗಿ ವ್ಯಾಖ್ಯಾನಿಸಲು ಸಾಧ್ಯವಾಗುವುದಿಲ್ಲ (ಇದು ವಾಸ್ತವ ಅವಧಿ ಹಾಗು ಕಾಲಾವಕಾಶದ ಕಲ್ಪನೆಯನ್ನು ನಿರಾಕರಿಸುತ್ತದೆ)ಎಂದು ಹೇಳುತ್ತದೆ. ಪ್ರಸಕ್ತ ಕಾಲವನ್ನು ಒಂದು ಕಾಲಾವಧಿಯಾಗಿ ಪರಿಗಣಿಸಬಹುದು (ನೋಡಿ ಸ್ಪೆಷಿಯಸ್ ಪ್ರೆಸೆಂಟ್ [೩೬][೩೭]).

ಮೂರನೇ ಸಹಸ್ರಮಾನವೆಂದರೆ ಒಂದು ಸಹಸ್ರ ವರ್ಷಗಳ ಮೂರನೇ ಅವಧಿ. ಪ್ರಸಕ್ತ ಈ ಸಹಸ್ರವರ್ಷವು ಪ್ರಗತಿಯಲ್ಲಿರುವುದರಿಂದ, ಕೇವಲ ಅದರ ಮೊದಲ ದಶಕ, 2000 ಸಾಂಪ್ರದಾಯಿಕ ಇತಿಹಾಸಜ್ಞರ ಗಮನವನ್ನು ಸೆಳೆಯುತ್ತದೆ. 21ನೇ ಶತಮಾನದ ಉಳಿದ ಭಾಗ ಹಾಗು ದೀರ್ಘಾವಧಿಯ ಪ್ರವೃತ್ತಿಗಳನ್ನು ಪ್ರಸಕ್ತ ಭವಿಷ್ಯದ ಅಧ್ಯಯನಗಳು ಸಂಶೋಧಿಸುತ್ತಿವೆ, ಈ ಮಾರ್ಗವು ಹಲವಾರು ಮಾದರಿಗಳು ಹಾಗು ವಿಧಾನಗಳನ್ನು ಬಳಸಿಕೊಳ್ಳುತ್ತದೆ(ಉದಾಹರಣೆಗೆ "ಫೋರ್‌ಕಾಸ್ಟಿಂಗ್"(ಮುನ್ಸೂಚನೆ) ಹಾಗೂ "ಪರ್ಯಾಯ ಭವಿಷ್ಯದ ವಿಶ್ಲೇಷಣೆ" (ಬ್ಯಾಕ್‌ಕ್ಯಾಸ್ಟಿಂಗ್) ಒಳಗೊಂಡಿದೆ.

ಇತಿಹಾಸದ ಆವಿಷ್ಕಾರವಾದಾಗಿನಿಂದ ಜನರು ಅದರ ಅಧ್ಯಯನದಿಂದ ತೆಗೆದುಕೊಂಡಂತಹ "ಪಾಠಗಳನ್ನು" ಶೋಧಿಸಿದ್ದಾರೆ. ಹಿಂದಿನದ್ದನ್ನು ಅರ್ಥಮಾಡಿಕೊಳ್ಳುವುರಿಂದ ಭವಿಷ್ಯದ ನಿಯಂತ್ರಣ ಸಾಧ್ಯವೆಂಬ ತತ್ವದ ಮೇಲೆ ಈ ಶೋಧ ಮಾಡಿದ್ದಾರೆ.[೩೮]  ಜಾರ್ಜ್ ಸಂತಾಯನರ ಒಂದು ಪ್ರಸಿದ್ಧ ಉಲ್ಲೇಖದಂತೆ "ಭೂತಕಾಲವನ್ನು ಯಾರಿಂದ ಸ್ಮರಿಸಿಕೊಳ್ಳಲು ಸಾಧ್ಯವಿಲ್ಲವೋ ಅವರು ಅದರ ಪುನರಾವರ್ತನೆಗೆ ಗುರಿಯಾಗುತ್ತಾರೆ."[೩೯] ಅರ್ನೊಲ್ಡ್ J. ಟೋಯನ್ಬೀ, ತಮ್ಮ ಚಿರಸ್ಥಾಯಿಯಾದ ಸ್ಟಡಿ ಆಫ್ ಹಿಸ್ಟರಿ ಯಲ್ಲಿ, ನಾಗರೀಕತೆಗಳ ಉಗಮ ಹಾಗು ಪತನದಲ್ಲಿನ ಕ್ರಮಬದ್ಧತೆಗಳನ್ನು ಅನ್ವೇಷಿಸಿದರು.[೪೦]  ಒಂದು ಅತ್ಯಂತ ಜನಪ್ರಿಯ ಶೈಲಿಯಲ್ಲಿ, ವಿಲ್ ಹಾಗು ಏರಿಯಲ್ ಡ್ಯೂರಂಟ್, 1968ರಲ್ಲಿ ಬಿಡುಗಡೆ ಮಾಡಿದ ಒಂದು ಪುಸ್ತಕ ದಿ ಲೆಸನ್ಸ್ ಆಫ್ ಹಿಸ್ಟರಿ ಯನ್ನು  "ಪ್ರಚಲಿತ ವಿಷಯಗಳ ಬಗ್ಗೆ ಬೆಳಕು ಚೆಲ್ಲಬಹುದಾದ ಘಟನೆಗಳು ಹಾಗು ವಿಮರ್ಶೆಗಳು, ಭವಿಷ್ಯದ ಸಂಭವನೀಯತೆಗಳು...ಹಾಗು ರಾಷ್ಟ್ರಗಳ ನಿರ್ವಹಣೆಯ" ಬಗ್ಗೆ ಚರ್ಚೆಗೆ ಮುಡಿಪಾಗಿಟ್ಟರು.[೪೧] ಇತಿಹಾಸದ ಅಧ್ಯಯನಗಳ ಬಗೆಗಿನ ಚರ್ಚೆಯು ಸಾಮಾನ್ಯವಾಗಿ ಇತಿಹಾಸ ವಿವರದ ಬಗ್ಗೆ ಮಿತಿಮೀರಿದ ಗಮನಕ್ಕೆ ಅಥವಾ ಅದಕ್ಕೆ ವಿರುದ್ಧವಾಗಿ ಇತಿಹಾಸ ಲೇಖನದ ಸಾಮಾನ್ಯ ನಿರೂಪಣೆಗೆ ಗಮನಹರಿಸುತ್ತದೆ.[೪೨]

ಫ್ಯೂಚರ್ ಸ್ಟಡೀಸ್ ಅದರ ಒಂದು ಪ್ರಮುಖ ವೈಶಿಷ್ಟ್ಯವಾಗಿ (ಜ್ಞಾನಮೀಮಾಂಸೆಗೆ ಸಂಬಂಧಿಸಿದ ಮೊದಲ ಹಂತ) , ಪರ್ಯಾಯ ಭವಿಷ್ಯಗಳ ಬಗ್ಗೆ ವಿಶ್ಲೇಷಿಸುವ ಒಂದು ಪ್ರಯತ್ನವಾಗಿದೆ. ಈ ಪ್ರಯತ್ನವು ಬದಲಾವಣೆಯ ಸಾಧ್ಯತೆ,ಸಂಭಾವ್ಯತೆ ಮತ್ತು ಅಪೇಕ್ಷೆ ಬಗ್ಗೆ ಪರಿಮಾಣಾತ್ಮಕ ಹಾಗು ಗುಣಾತ್ಮಕ ಡಾಟಾಗಳ ಸಂಗ್ರಹ ಒಳಗೊಂಡಿರುತ್ತದೆ. ಭವಿಷ್ಯಾನುಮಾನದಲ್ಲಿ(ಫ್ಯೂಚರಾಲಜಿ)"ಭವಿಷ್ಯಗಳು" ಎಂಬ ಬಹುವಚನವು ಪರ್ಯಾಯ ಭವಿಷ್ಯಗಳ ಸಮೃದ್ಧ ವೈವಿಧ್ಯವನ್ನು ಸಂಕೇತಿಸುತ್ತದೆ.ಇದರ ಜತೆ ಆದ್ಯತಾ ಭವಿಷ್ಯಗಳ (ಪ್ರಮಾಣಕ ಭವಿಷ್ಯ) ಉಪ-ವರ್ಗವನ್ನು ಅಧ್ಯಯನ ಮಾಡಬಹುದಾಗಿದೆ.

ಈ ಬೋಧನಾಶಾಖೆಯ ವೃತ್ತಿಪರರು ಮುಂಚಿತವಾಗಿ ತಾಂತ್ರಿಕ, ಆರ್ಥಿಕ ಅಥವಾ ಸಾಮಾಜಿಕ ಪ್ರವೃತ್ತಿಗಳನ್ನು ಬಹಿರ್ಗಣಿಸುವ ಬಗ್ಗೆ, ಅಥವಾ ಭವಿಷ್ಯದ ಪ್ರವೃತ್ತಿಗಳನ್ನು ಮುಂಗಾಣುವ ಪ್ರಯತ್ನಕ್ಕೆ ಗಮನ ಹರಿಸಿದರು, ಆದರೆ ಇತ್ತೀಚಿಗೆ ಇವರು ಸಾಮಾಜಿಕ ವ್ಯವಸ್ಥೆಗಳು ಹಾಗು ಅನಿಶ್ಚಿತತೆಗಳ ಪರೀಕ್ಷೆ ಹಾಗೂ ಭವಿಷ್ಯದ ಸನ್ನಿವೇಶದ ಯೋಜನೆಗಳ ನಿರ್ಮಾಣ ಆರಂಭಿಸಿದ್ದಾರೆ. ಇಂತಹ ಯೋಜನೆಗಳಿಗೆ ಇರುವ ಜಗತ್ತಿನ ದೃಷ್ಟಿಕೋನಗಳನ್ನು ಕ್ಯಾಷ್ಯೂಅಲ್ ಲೇಯರ್ಡ್ ಅನಾಲಿಸಿಸ್ ವಿಧಾನದ ಮೂಲಕ ಪ್ರಶ್ನಿಸುವುದು, ಭವಿಷ್ಯದ ಬಗ್ಗೆ ಯೋಗ್ಯವಾದ ಮುನ್ನೋಟಗಳನ್ನು ಸೃಷ್ಟಿಸುವುದು ಜತೆಗೆ ಪರ್ಯಾಯ ಅನುಷ್ಠಾನ ಕಾರ್ಯತಂತ್ರಗಳನ್ನು ಹೊಂದಲು ಬ್ಯಾಕ್‌ಕ್ಯಾಸ್ಟಿಂಗ್ ಬಳಸುವುದು. ಬಹಿರ್ಗಣನೆ ಹಾಗು ಭವಿಷ್ಯದ ಬಗ್ಗೆ ಯೋಜನೆಗಳ ಹೊರತಾಗಿ, ಭವಿಷ್ಯಗಳ ಸಂಶೋಧನೆಗೆ ಸಾಕಷ್ಟು ಹೆಚ್ಚಿನ ಹಲವು ವಿಧಾನಗಳು ಹಾಗು ಮಾರ್ಗಗಳನ್ನು ಬಳಸಲಾಗಿದೆ.

ಸಾಮಾಜಿಕ-ತಂತ್ರಜ್ಞಾನದ ಪ್ರವೃತ್ತಿ

[ಬದಲಾಯಿಸಿ]

ಇಪ್ಪತ್ತನೆ ಶತಮಾನದ ಕೊನೆಯಲ್ಲಿ ಜಗತ್ತು ಒಂದು ಪ್ರಮುಖ ಕವಲುದಾರಿಯಲ್ಲಿತ್ತು. ಹಿಂದಿನ ಎಲ್ಲ ಶತಮಾನದ ಇತಿಹಾಸಕ್ಕಿಂತ ಈ ಶತಮಾನವು ಹೆಚ್ಚಿನ ತಾಂತ್ರಿಕ ಬೆಳವಣಿಗೆಯನ್ನು ಕಂಡಿದೆ. ಕಂಪ್ಯೂಟರ್ ಗಳು, ಅಂತರಜಾಲಗಳು, ಹಾಗು ಇತರ ಆಧುನಿಕ ತಂತ್ರಜ್ಞಾನವು ಜನರ ಜೀವನವನ್ನು ಸಂಪೂರ್ಣವಾಗಿ ಮಾರ್ಪಡಿಸಿತು.

ಹೆಚ್ಚಿದ ಜಾಗತೀಕರಣ, ವಿಶೇಷವಾಗಿ ಅಮೆರಿಕೀಕರಣ ಸಂಭವಿಸಿತು. ಒಂದು ಬೆದರಿಕೆಯಲ್ಲದಿದ್ದರೂ, ಇದು ಪಾಶ್ಚಿಮಾತ್ಯ ವಿರೋಧಿ ಹಾಗು ಅಮೆರಿಕನ್ ವಿರೋಧಿ ಭಾವನೆಗಳನ್ನು ವಿಶ್ವದ ಕೆಲವು ಭಾಗಗಳಲ್ಲಿ ಹುಟ್ಟು ಹಾಕಿತು, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ. ಇಂಗ್ಲಿಷ್ ಭಾಷೆಯು ಒಂದು ಪ್ರಮುಖ ಜಾಗತಿಕ ಭಾಷೆಯಾಯಿತು, ಈ ಭಾಷೆಯನ್ನು ಮಾತನಾಡದ ಜನರಿಗೆ  ಹೆಚ್ಚಿನ ಅನನುಕೂಲತೆಯನ್ನು ಉಂಟುಮಾಡಿತು.

ಉತ್ತರ ಅಮೆರಿಕ, ಏಷ್ಯಾ, ಹಾಗು ಮಧ್ಯಪ್ರಾಚ್ಯದಲ್ಲಿ ಆರ್ಥಿಕ ಹಾಗು ರಾಜಕೀಯ ವಿದ್ಯಮಾನಗಳನ್ನು ಸಂಪರ್ಕಿಸಿದ ಒಂದು ಪ್ರವೃತ್ತಿಯಲ್ಲಿ, ಪಳೆಯುಳಿಕೆ ಇಂಧನಗಳಿಗೆ ಶೀಘ್ರಗತಿಯ ಬೇಡಿಕೆ ಹೆಚ್ಚಳ, ಕೆಲವು ವಿರಳ ಹೊಸ ಪೆಟ್ರೋಲಿಯಂ ನಿಕ್ಷೇಪ ಪತ್ತೆಯೊಂದಿಗೆ ಸಂಸ್ಕರಣ ವೆಚ್ಚಗಳ ಹೆಚ್ಚಳ (ನೋಡಿ ಪೀಕ್ ಆಯಿಲ್), ಹಾಗು ರಾಜಕೀಯ ಕ್ಷೋಬೆಯಿಂದ ಅನಿಲ ಹಾಗು ತೈಲದ ಬೆಲೆ ಮೇಲೇರಿಕೆ ಕಂಡಿತು. 2000 ಹಾಗು 2005ರ ನಡುವೆ ~500%ರಷ್ಟು ಏರಿಕೆಯಾಯಿತು. ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಯುರೋಪ್‌ನಲ್ಲಿ, ಕರೆನ್ಸಿಯನ್ನು ಅವಲಂಬಿಸಿ ಅನಿಲವು ಒಂದು ಗ್ಯಾಲನ್ನಿಗೆ $5ರಷ್ಟಿತ್ತು. ಕಡಿಮೆ ಪ್ರಭಾವವನ್ನು ಹೊಂದಿದ್ದರೂ, ಸರ್ವವ್ಯಾಪಿಯಾಗಿದ್ದ ಒಂದು ಚರ್ಚೆಯೆಂದರೆ ಯುರೋಪಿಯನ್ ಒಕ್ಕೂಟದಲ್ಲಿ ಟರ್ಕಿಯ ಭಾಗವಹಿಸುವಿಕೆ.

Bharatada ಸವಾಲುಗಳು ಹಾಗು ಸಮಸ್ಯೆಗಳು

[ಬದಲಾಯಿಸಿ]

ಚಿತ್ರ:ಕಳೆದ 2000ದಲ್ಲಿ ವಿಶ್ವದ ಸಂಪತ್ತು ವಿತರಣೆ ಹಾಗು ಜನಸಂಖ್ಯೆ ಸಮಕಾಲೀನ ಶಕೆಯಲ್ಲಿ, ಜಗತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲಿಗೆ, ಸಂಪತ್ತು ಹಾಗು ಪಾಶ್ಚಿಮಾತ್ಯ [[ಕೈಗಾರಿಕೀಕೃತ ರಾಷ್ಟ್ರಗಳ ಜೊತೆಗೆ ಹಲವಾರು ಏಷ್ಯಾದ ರಾಷ್ಟ್ರಗಳು ಹಾಗು ರಾಷ್ಟ್ರಗಳಲ್ಲಿ ಕೇಂದ್ರೀಕೃತಗೊಂಡಿದೆ. ಕಳೆದ 2000ದಲ್ಲಿ ಕೇವಲ 1%ನಷ್ಟು ಶ್ರೀಮಂತರು 40%ನಷ್ಟು ಜಾಗತಿಕ ಆಸ್ತಿಪಾಸ್ತಿಗಳನ್ನು ಹೊಂದಿದ್ದರು ಹಾಗು ವಿಶ್ವದ ಅತ್ಯಂತ ಶ್ರೀಮಂತ 10%ನಷ್ಟು ಜನರು 85%ನಷ್ಟು ಒಟ್ಟಾರೆ ಆಸ್ತಿಪಾಸ್ತಿಯ ಒಡೆತನ ಹೊಂದಿದ್ದರು. ಜಗತ್ತಿನ ಕೆಳಾರ್ಧದ ಜನಸಂಖ್ಯೆಯು ಜಾಗತಿಕ ಸಂಪತ್ತಿನಲ್ಲಿ ಕೇವಲ 1%ನಷ್ಟು ಹೊಂದಿದ್ದರು. ಇದರಲ್ಲಿ ಹಲವು ವಿಶ್ವದಲ್ಲಿ ಬೆಳೆಯುತ್ತಿರುವ ಅಸಮಾನತೆಯನ್ನು ಸೂಚಿಸುತ್ತದೆ, ಇದು ಲಭ್ಯ ಮಾಹಿತಿಯಲ್ಲಿ ಮಾಧ್ಯಮ ಪ್ರಕಟಣೆಗಳಲ್ಲಿ, ಎಕ್ಸೆಲ್ ಟೇಬಲ್ಸ್ ಹಾಗು ಪವರ್ ಪಾಯಿಂಟ್ ಸ್ಲೈಡ್‌ಗಳಲ್ಲಿ ಸೇರಿವೆ. ನೋಡಿ ದಿ ವರ್ಲ್ಡ್ ಡಿಸ್ಟ್ರಿಬ್ಯೂಶನ್ ಆಫ್ ಹೌಸ್ ಹೋಲ್ಡ್ ವೆಲ್ತ್ . ಜೇಮ್ಸ್ B. ಡೇವಿಸ್, ಸುಸನ್ನ ಸ್ಯಾಂಡ್ ಸ್ಟ್ರೋಮ್, ಆಂಟ್ಹನಿ ಶೋರ್ರೋಕ್ಸ್, ಹಾಗು ಎಡ್ವರ್ಡ್ N. ವೊಲ್ಫ್ಫ್. 5 ಡಿಸೆಂಬರ್ 2006. ಲಾಂಚ್ ಆಫ್ ದಿ WIDER ಸ್ಟಡಿ ಆನ್ ದಿ ವರ್ಲ್ಡ್ ಡಿಸ್ಟ್ರಿಬ್ಯೂಶನ್ ಆಫ್ ಹೌಸ್ ಹೋಲ್ಡ್ ವೆಲ್ತ್] (ಇದರಲ್ಲಿ ಪತ್ರಿಕಾ ಪ್ರಕಟಣೆ, ಸಾರಾಂಶ, ಹಾಗು ದತ್ತಾಂಶ ಸೇರಿದೆ)

ಎಸ್ಟಿಮೆಟಿಂಗ್ ದಿ ಲೆವೆಲ್ ಅಂಡ್ ಡಿಸ್ಟ್ರಿಬ್ಯೂಶನ್ ಆಫ್ ಗ್ಲೋಬಲ್ ಹೌಸ್ ಹೋಲ್ಡ್ ವೆಲ್ತ್] (ಮುಖಪುಟವನ್ನು ಒಳಗೊಂಡ ಒಂದು ಸಂಪೂರ್ಣ ವರದಿಯ ಪ್ರತಿ ಸೇರಿದೆ) 

ದಿ ವರ್ಲ್ಡ್ ಡಿಸ್ಟ್ರಿಬ್ಯೂಶನ್ ಆಫ್ ಹೌಸ್ ಹೋಲ್ಡ್ ವೆಲ್ತ್](ಯುನೈಟೆಡ್ ನೇಶನ್ಸ್ ಅಂತರಜಾಲದಲ್ಲಿ ಪ್ರಕಟವಾದ ವರದಿಯ ಖಚಿತ ಪ್ರತಿ)ಹೆಚ್ಚಿನ ಮಾಹಿತಿಗಾಗಿ.</ಉಲ್ಲೇಖ> ಮತ್ತೊಂದು ಅಧ್ಯಯನವು 2%ನಷ್ಟು ಶ್ರೀಮಂತ ಜನರು ವಿಶ್ವವ್ಯಾಪಿಯ ಅರ್ಧಕ್ಕಿಂತ ಹೆಚ್ಚು ಮನೆಆಸ್ತಿಪಾಸ್ತಿಗಳ ಒಡೆತನ ಹೊಂದಿದ್ದಾರೆ.ದಿ ರಿಚ್ ರಿಯಲಿ ಡು ಓನ್ ದಿ ವರ್ಲ್ಡ್] 5 ಡಿಸೆಂಬರ್ 2006</ref> ಆದಾಗ್ಯೂ, ಸಂಪತ್ತು ಹೆಚ್ಚಿಗೆ ಕೇಂದ್ರೀಕೃತವಾಗಿರುವ ದಿಕ್ಕಿನಲ್ಲಿ ಸಂಪತ್ತುವಿತರಣೆ ವೇಗವಾಗಿ ಬದಲಾಗುತ್ತಿದೆ. "ವೆಲ್ತ್ ಇನ್ ಈಕ್ವಾಲಿಟಿ ಚಾರ್ಟ್ಸ್"]</ref> ಆದಾಗ್ಯೂ, ದೊಡ್ಡ ಆರ್ಥಿಕ ವ್ಯವಸ್ಥೆಗಳನ್ನು ಹಾಗು ಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ಬಲಿಷ್ಠ ರಾಷ್ಟ್ರಗಳು, ವೇಗವಾಗಿ ಬೆಳೆಯುತ್ತಿರುವ ತೃತೀಯ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬಹುದು. ಆದಾಗ್ಯೂ, ಅಭಿವೃದ್ಧಿಶೀಲ ರಾಷ್ಟ್ರಗಳು ಹಲವು ಸವಾಲುಗಳನ್ನು ಎದುರಿಸುತ್ತದೆ, ದಾಟಬೇಕಾದ ಕೆಲಸದ ಪ್ರಮಾಣಗಳು, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗಳು, ಹಾಗು ಪರಿಸರದ ರಕ್ಷಣೆಯ ಅಗತ್ಯ, ಹಾಗು ಈ ಎಲ್ಲ ಸವಾಲುಗಳನ್ನು ಎದುರಿಸಲು ಬೇಕಾಗಿರುವ ವೆಚ್ಚ ಒಳಗೊಂಡಿದೆ.

ಎರಡನೆಯದಾಗಿ, ಜಗತ್ತಿನ ಹಲವು ಪ್ರದೇಶಗಳುರೋಗದಿಂದ ಅಸ್ಥಿರಗೊಳ್ಳುವ ಬೆದರಿಕೆಯೊಡ್ಡಿತು. ಹೊಸ ವೈರಸ್ ಗಳಾದ , ವೆಸ್ಟ್ ನೈಲ್, ಹಾಗು ಬರ್ಡ್ ಫ್ಲೂ ವೇಗವಾಗಿ ಹಾಗೂ ಸುಲಭವಾಗಿ ಹರಡಲು ಪ್ರಾರಂಭಿಸಿತು. ಬಡ ರಾಷ್ಟ್ರಗಳಲ್ಲಿ, ಮಲೇರಿಯ ಹಾಗು ಇತರ ಕಾಯಿಲೆಗಳು ಜನಸಂಖ್ಯೆಯ ಬಹುಭಾಗದ ಮೇಲೆ ಪರಿಣಾಮ ಬೀರಿದವು. ಲಕ್ಷಗಟ್ಟಲೆ ಜನರುಗೆ ಕಾರಣವಾದ ವೈರಸ್ ಸೋಂಕಿಗೆ ಒಳಪಟ್ಟರು. ಈ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ಒಂದು ಸಾಂಕ್ರಾಮಿಕ ರೋಗವಾಗಿ ಹರಡಿತು.

ಭಯೋತ್ಪಾದನೆ, ಸರ್ವಾಧಿಕಾರ, ಹಾಗು ಅಣ್ವಸ್ತ್ರಗಳ ವಿಸ್ತರಣೆ ಗಳಂತಹ ವಿಷಯಗಳು ತಕ್ಷಣ ಗಮನ ಹರಿಸಬೇಕಾದ ವಿಷಯಗಳು. ಉತ್ತರ ಕೊರಿಯಾ ದ ಸರ್ವಾಧಿಕಾರಿ ಕಿಮ್ ಜೊಂಗ್-ಇಲ್ ಮುಂತಾದವರು ತಮ್ಮ ರಾಷ್ಟ್ರಗಳನ್ನು ಅಣ್ವಸ್ತ್ರಗಳ ಅಭಿವೃದ್ಧಿಯತ್ತ ಮುನ್ನಡೆಸಿದರು. ಭಯೋತ್ಪಾದಕರು ಅಣ್ವಸ್ತ್ರಗಳನ್ನು ಹೊಂದಲು ಯತ್ನಿಸುತ್ತಿದ್ದಾರೆಂಬ ಭಯ ಆವರಿಸಿರುವ ನಡುವೆ, ಈಗಾಗಲೇ ಅದನ್ನು ಹೊಂದಿದ್ದಾರೆಂಬ ಭಯವೂ ಸಹ ಕಾಡುತ್ತಿದೆ.

ಹವಾಮಾನ ಬದಲಾವಣೆ

[ಬದಲಾಯಿಸಿ]
ಚಿತ್ರ:Risks and Impacts of Global Warming.png
ವಾತಾವರಣದ ಬದಲಾವಣೆಯ ಬಗ್ಗೆ ಅಂತರಸರ್ಕಾರಿ ಸಮಿತಿಯ ಮೂರನೇ ಅಂದಾಜು ವರದಿಯಿಂದ ಜಾಗತಿಕ ತಾಪಮಾನದ ಅಪಾಯಗಳು ಹಾಗು ಪರಿಣಾಮಗಳು. ಈ ಕೆಲಸದ ಬಗೆಗಿನ ನಂತರದ ಪರಿಷ್ಕರಣೆಗಳು ಗಮನಾರ್ಹವಾಗಿ ಹೆಚ್ಚಿದ ಅಪಾಯದ ಬಗ್ಗೆ ಸೂಚಿಸುತ್ತವೆ.[೪೩]

ಹವಾಮಾನ ಬದಲಾವಣೆಯು ಆಧುನಿಕ ಪರಿಸರದ ಹವಾಮಾನವನ್ನು ಪ್ರತಿಬಿಂಬಿಸುತ್ತದೆ. ಹಿಂದಿನ ಶತಮಾನದಿಂದೀಚೆಗೆ ಬದಲಾಗುತ್ತಿರುವ ಹವಾಮಾನಕ್ಕೆ ಹಲವಾರು ಅಂಶಗಳು ಕಾರಣವೆನ್ನಲಾಗಿದೆ, ಇದು ಜಾಗತಿಕ ತಾಪಮಾನದ ಪರಿಣಾಮವಾಗಿದೆ. ಭೂಮಿಯ ಕೆಳಭಾಗದ ಗಾಳಿ ಹಾಗು ಸಾಗರಗಳಸರಾಸರಿ ಉಷ್ಣಾಂಶದ ಹೆಚ್ಚಳದ ಪರಿಣಾಮವೇ ತಾಪಮಾನ. ಇದು 20ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭಗೊಂಡು,ಮುಂದುವರೆಯುವ ಸೂಚನೆಗಳಿವೆ. ನೈಸರ್ಗಿಕ ಪರಿಸರ ಹಾಗು ಮಾನವ ಜೀವನ ಎರಡರ ಮೇಲೂ ಕೆಲವು ಪರಿಣಾಮಗಳನ್ನು ಕನಿಷ್ಠ ಆಂಶಿಕ ಪರಿಣಾಮಗಳು ಈಗಾಗಲೇ ಜಾಗತಿಕ ತಾಪಮಾನಕ್ಕೆ ಕಾರಣವೆನ್ನಲಾಗಿದೆ. IPCCಯ 2001ರ ವರದಿಯ ಪ್ರಕಾರ ಹಿಮನದಿಗಳ ಹಿಮ್ಮೆಟ್ಟುವಿಕೆ, ಲಾರ್ಸನ್‌ ಐಸ್ ಶೆಲ್ಫ್ಹಿಮ ಹಲಗೆಗಳ ಸಿಡಿತ, ಸಮುದ್ರಮಟ್ಟ ಏರಿಕೆ, ಮಳೆ ಮಾದರಿಗಳಲ್ಲಿ ಬದಲಾವಣೆಗಳು, ಮತ್ತು ವಿಪರೀತ ಹವಾಮಾನ ಸಂಗತಿಗಳಲ್ಲಿ ಹೆಚ್ಚಿದ ತೀಕ್ಷ್ಣತೆ ಮತ್ತು ಆವರ್ತನಗಳಿಗೆ ಆಂಶಿಕವಾಗಿ ಜಾಗತಿಕ ತಾಪಮಾನ ಹೆಚ್ಚಳವೇ ಕಾರಣವೆನ್ನಲಾಗಿದೆ.[೪೪] ಇತರ ನಿರೀಕ್ಷಿತ ಪರಿಣಾಮಗಳಲ್ಲಿ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವ ಹಾಗೂ ಮತ್ತೆ ಕೆಲವು ಕಡೆಗಳಲ್ಲಿ ಹೆಚ್ಚಿದ ಮಳೆಯ ಪ್ರಮಾಣ, ಪರ್ವತಗಳ ಹಿಮದಲ್ಲಿ ಬದಲಾವಣೆ, ಹಾಗು ಹೆಚ್ಚಿದ ತಾಪಮಾನಗಳಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಸೇರಿವೆ.[೪೫] ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಜಾಗತಿಕ ತಾಪಮಾನವಿದ್ದರೂ,ಅದರ ಸ್ವಭಾವ, ಕಾರಣಗಳು ಮತ್ತು ಪರಿಣಾಮಗಳಿಗೆ ಸಂಬಂಧಿಸಿದ ಚರ್ಚೆ ಕುರಿತು ವಿವಾದ ಆವರಿಸಿದೆ.

ನಿರ್ದಿಷ್ಟ ಹವಾಮಾನದ ಘಟನೆಗಳನ್ನು ವಿಶ್ವದ ಮೇಲೆ ಮಾನವನ ಪರಿಣಾಮಕ್ಕೆ ಸಂಬಂಧ ಕಲ್ಪಿಸುವುದು ಸಾಮಾನ್ಯವಾಗಿ ಅಸಾಧ್ಯ. ಪರ್ಯಾಯವಾಗಿ, ಈ ರೀತಿಯಾದ ಪರಿಣಾಮವು ಹವಾಮಾನ ವಿದ್ಯಮಾನಗಳ ಒಟ್ಟಾರೆ ವಿತರಣೆ ಮತ್ತು ತೀವ್ರತೆಯಲ್ಲಿ ಬದಲಾವಣೆ ತರುತ್ತದೆಂದು ನಿರೀಕ್ಷಿಸಲಾಗಿದೆ. ಉದಾಹರಣೆಗೆ ಭಾರೀ ಮಳೆಯ ಆವರ್ತನ ಮತ್ತು ತೀವ್ರತೆಯಲ್ಲಿ ಬದಲಾವಣೆ ಉಂಟುಮಾಡಬಹುದು. ವ್ಯಾಪಕವಾದ ಪರಿಣಾಮಗಳಲ್ಲಿ ಹಿಮನದಿಗಳ ಹಿಮ್ಮೆಟ್ಟುವಿಕೆ, ಉತ್ತರ ಧ್ರುವ ವಲಯದ ಸಂಕೋಚನ, ಹಾಗೂ ವಿಶ್ವವ್ಯಾಪಿಯಾಗಿ ಸಮುದ್ರ ಮಟ್ಟದಲ್ಲಿ ಏರಿಕೆ ಒಳಗೊಂಡಿದೆ. ಇತರ ಪರಿಣಾಮಗಳಲ್ಲಿ ಬೆಳೆ ಇಳುವರಿಗಳಲ್ಲಿ ಬದಲಾವಣೆ, ಹೊಸ ವ್ಯಾಪಾರಿ ಮಾರ್ಗಗಳ ಸೇರ್ಪಡೆ,[೪೬] ಪ್ರಬೇಧಗಳ ಸಂತತಿ ಅಳಿವು,[೪೭] ಹಾಗು ರೋಗವಾಹಕಗಳ ಪ್ರಮಾಣದಲ್ಲಿ ಬದಲಾವಣೆಗಳು ಸೇರಿವೆ.

ಹೊರಹೊಮ್ಮುವ ತಂತ್ರಜ್ಞಾನಗಳು

[ಬದಲಾಯಿಸಿ]

ಹಲವಾರು ಹೊರಹೊಮ್ಮುವ ತಂತ್ರಜ್ಞಾನಗಳು, ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಇತ್ತೀಚಿನ ಅಭಿವೃದ್ಧಿಗಳು ಹಾಗು ಒಮ್ಮುಖವಾಗುವಿಕೆ ಭವಿಷ್ಯದ ಸಂಭವನೀಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಹೊರಹೊಮ್ಮುವ ತಂತ್ರಜ್ಞಾನಗಳು, ಹಲವಾರು ಪರಿಣಾಮಕಾರಿ ತಂತ್ರಜ್ಞಾನದ ಹುಟ್ಟು ಹಾಗು ಒಮ್ಮುಖದ ಬೆಳವಣಿಗೆಯನ್ನು ಒಳಗೊಂಡಿದೆ, ಇದರಲ್ಲಿ ಸಾರಿಗೆ, ಮಾಹಿತಿ ತಂತ್ರಜ್ಞಾನ, ಜೈವಿಕತಂತ್ರಜ್ಞಾನ, ರೋಬೊಟಿಕ್ಸ್ ಹಾಗು ಅಪ್ಲೈಡ್ ಮೆಕ್ಯಾನಿಕ್ಸ್, ಹಾಗು ಮೆಟಿರಿಯಲ್ ಸೈನ್ಸ್ ಒಳಗೊಂಡಿದೆ. ಅವುಗಳ ಸ್ಥಾನಮಾನ ಹಾಗು ಸಂಭವನೀಯ ಪರಿಣಾಮಗಳು ವಿವಾದದಿಂದ ಕೂಡಿದೆ. ಸಾಮಾಜಿಕ ಪರಿಣಾಮದ ಪ್ರಮಾಣ ಅಥವಾ ತಂತ್ರಜ್ಞಾನಗಳ ಕಾರ್ಯಸಾಧ್ಯತೆಯ ಕುರಿತು ಈ ವಿವಾದ ಒಳಗೊಂಡಿದೆ. ಆದಾಗ್ಯೂ, ಇವುಗಳು ಕ್ಷೇತ್ರದ ಒಳಗೆ ಹೊಸ ಹಾಗು ಗಮನಾರ್ಹ ಬೆಳವಣಿಗೆಗಳನ್ನು ಪ್ರತಿನಿಧಿಸುತ್ತವೆ; ಒಮ್ಮುಖದ ತಂತ್ರಜ್ಞಾನಗಳು ಮುಂಚೆ ಭಿನ್ನ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಒಂದು ರೀತಿಯಲ್ಲಿ ಬಲವಾದ ಅಂತರ-ಸಂಪರ್ಕ ಮತ್ತು ಸಮಾನ ಗುರಿಗಳಿಗೆ ಅಭಿಮುಖವಾಗಿ ಅವು ಚಲಿಸುತ್ತವೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

ಸಾಮಾನ್ಯ
ಪ್ರಸಕ್ತ ದಿನ, ಪ್ರಚಲಿತ ಸಂಗತಿಗಳ ಸುದ್ದಿಗಳು , ಸಮಕಾಲೀನ ತತ್ತ್ವಶಾಸ್ತ್ರ
ಅಂತಾರಾಷ್ಟ್ರೀಯ ಹಾಗು ಜಾಗತಿಕ
ಅಂತಾರಾಷ್ಟ್ರೀಯ ಸಂಸ್ಥೆ, ಅಂತಾರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ವ್ಯಾಪಾರ, ಜಾಗತಿಕ ಪರಿಸರ ಸೌಲಭ್ಯ, ಅಂತಾರಾಷ್ಟ್ರೀಯ ಇಂಧನ ಸಂಸ್ಥೆ
ನೀತಿ ಮತ್ತು ಆಡಳಿತಶಾಹಿ
ಸಾರ್ವಜನಿಕ ನೀತಿ, ಇಂಧನ ಕಾರ್ಯಪಡೆ, ಪರಿಸರ ನೀತಿ
ಜನರ ಪೀಳಿಗೆ
ಪೀಳಿಗೆ, ಪೀಳಿಗೆಗಳ ಪಟ್ಟಿ, ಬೇಬಿ ಬೂಮ್ ಪೀಳಿಗೆ, ಪೀಳಿಗೆ X, MTV ಪೀಳಿಗೆ, ಪೀಳಿಗೆ Y, ಪೀಳಿಗೆ Z
ಸಂಗೀತ ಹಾಗು ಕಲೆ
ಜನಪ್ರಿಯ ಸಂಸ್ಕೃತಿ, ಸಮಕಾಲೀನ ಕಲೆ, ಸಮಕಾಲೀನ ನೃತ್ಯ, ಸಮಕಾಲೀನ ಸಾಹಿತ್ಯ, ಸಮಕಾಲೀನ ಸಂಗೀತ, ಸಮಕಾಲೀನ ಹಿಟ್ ರೇಡಿಯೋ, ವಯಸ್ಕ ಸಮಕಾಲೀನ ಸಂಗೀತ, ಸಮಕಾಲೀನ ಕ್ರಿಶ್ಚಿಯನ್ ಮ್ಯೂಸಿಕ್ , ಸಮಕಾಲೀನ R&B, ನಗರ ಸಮಕಾಲೀನ
ಕೃಷಿ ಹಾಗು ಆಹಾರ
ಹಸಿರು ಕ್ರಾಂತಿ, ಆಹಾರ ಭದ್ರತೆ, ಕನ್ಸಲ್ಟೇಟಿವ್ ಗ್ರೂಪ್ ಆನ್ ಅಗ್ರಿಕಲ್ಚರಲ್ ರಿಸರ್ಚ್, ಸುಸ್ಥಿರ ಕೃಷಿ, ಜೈವಿಕ ಕೃಷಿ
ಶಕ್ತಿ ಹಾಗು ಬಲ
ಪವನ ಶಕ್ತಿ, ದ್ಯುತಿವಿದ್ಯುಜ್ಜನಕ ಹಾಗು ಸೌರ ಶಕ್ತಿ, ಗಾಳಿ ಆವಿಚಕ್ರಗಳು, ಪಳೆಯುಳಿಕೆ ಇಂಧನಗಳು, ಜಲ ಶಕ್ತಿ, ಜೀವರಾಶಿ
ಯುದ್ಧ ಹಾಗು ಕದನ
ಯುದ್ಧ ನೀತಿಗಳು, ಯುದ್ಧದ ಸೂತ್ರಗಳು, ಆದೇಶ ಪತ್ರ ಗಳು, ಸ್ಟ್ರ್ಯಾಟೆಜಿಕ್ ಸ್ಟಡೀಸ್ ಇನ್ಸ್ಟಿಟ್ಯೂಟ್, U.S. ಮಿಲಿಟರಿ ಅಕ್ಯಾಡೆಮಿ, ಆರ್ಮಿ ವಾರ್ ಕಾಲೇಜ್, ಮಾಹಿತಿ ಯುದ್ಧ, ಆದೇಶದ ಏಕತೆ, ನ್ಯಾಷನಲ್ ಮಿಲಿಟರಿ ಸ್ಟ್ರ್ಯಾಟೆಜಿ, ಗೆರಿಲ್ಲಾ ವಾರ್ ಫೇರ್, ಅಸಮತೆಯ ಯುದ್ಧ
ಇತರೆ
ಸಿಂಕ್ರೋನಿಸಿಟಿ, ಹೈಪರ್ ಟೆಕ್ಸ್ಟ್, CD-ROM,, ಇಂಧನ ಜಗತ್ತು, ಜೈವಿಕತಂತ್ರಜ್ಞಾನ, ಜೈವಿಕವೈವಿಧ್ಯತೆ, ಪರ್ಯಾಯ ಇತಿಹಾಸ, ಭವಿಷ್ಯದ ಇತಿಹಾಸ

ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
21ನೇ ಶತಮಾನದ ಮೂಲಗಳು

ಆಕರಗಳು

[ಬದಲಾಯಿಸಿ]
ಸಾಮಾನ್ಯ ಮಾಹಿತಿ
ಅಡಿಟಿಪ್ಪಣಿಗಳು
  1. ಗ್ರೋಸ್ವೆನೋರ್, ಎಡ್ವಿನ್ A. ಕಂಟೆಂಪರರಿ ಹಿಸ್ಟರಿ ಆಫ್ ದಿ ವರ್ಲ್ಡ್. ನ್ಯೂಯಾರ್ಕ್ ಹಾಗು ಬಾಸ್ಟನ್: T.Y. ಕ್ರೊವೆಲ್ & ಕೋ, 1899.
  2. "Core Characteristics of Web 2.0 Services".
  3. ೩.೦ ೩.೧ 2007 est.
  4. Nick Gillespie (2008). "What Slumdog Millionaire can teach Americans about economic stimulus". Reason. Archived from the original on 2009-06-13. Retrieved 2010-06-02.
  5. CIA Factbook: Economy Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ.. cia.gov.
  6. "The India Report" (PDF). Astaire Research. Archived from the original (PDF) on 2009-01-14. Retrieved 2010-06-02.
  7. "Economic survey of India 2007: Policy Brief" (PDF). OECD. Archived from the original (PDF) on 2018-12-25. Retrieved 2010-06-02.
  8. "Security Council Condemns, 'In Strongest Terms', Terrorist Attacks on the United States". United Nations. September 12, 2001. Archived from the original on 2006-09-09. Retrieved 2006-09-11. The Security Council today, following what it called yesterday's "horrifying terrorist attacks" in New York, Washington, D.C., and Pennsylvania, unequivocally condemned those acts, and expressed its deepest sympathy and condolences to the victims and their families and to the people and Government of the United States.
  9. "Bin Laden claims responsibility for 9/11". CBC News. 2004-10-29. Retrieved 2009-01-11. Al-Qaeda leader Osama bin Laden appeared in a new message aired on an Arabic TV station Friday night, for the first time claiming direct responsibility for the 2001 attacks against the United States.
  10. "The Taliban Resurgence in Afghanistan". Archived from the original on 2006-09-27. Retrieved 2010-06-02.
  11. Afghanistan: and the troubled future of unconventional warfare By Hy S. Rothstein.
  12. Gall, Carlotta (September 3, 2006). "Opium Harvest at Record Level in Afghanistan". The New York Times. Retrieved April 30, 2010.
  13. "Afghanistan opium at record high". BBC News. August 27, 2007. Retrieved January 2, 2010.
  14. "Afghanistan could return to being a 'failed State,' warns Security Council mission chief".
  15. "US Names Coalition of the Willing". BBC News. March 18, 2003. Retrieved 2007-11-03.
  16. U.S. ಡಿಫೆನ್ಸ್ ಸೆಕ್ರೆಟರಿ ರಾಬರ್ಟ್ ಗೇಟ್ಸ್, 2 ಫೆಬ್ 2007, ನೋಡಿ "ಫೋರ್ ವಾರ್ಸ್" ಪ್ರತಿಕ್ರಿಯೆ
  17. "CBS on civil war". CBS News. September 26, 2006. Archived from the original on ಫೆಬ್ರವರಿ 5, 2012. Retrieved ಜೂನ್ 2, 2010.
  18. ಬ್ರಿಟನ್'ಸ್ ಬ್ರೌನ್ ವಿಸಿಟ್ಸ್ ಅಫಿಷಿಯಲ್ಸ್, ಟ್ರೂಪ್ಸ್ ಇನ್ ಇರಾಕ್. ಇಂಟರ್ನ್ಯಾಷನಲ್ ಟ್ರಿಬ್ಯೂನ್ , ಅಕ್ಟೋಬರ್ 2, 2007.
  19. ಇಟಲಿ ಪ್ಲಾನ್ಸ್ ಇರಾಕ್ ಟ್ರೂಪ್ ಪುಲ್-ಔಟ್ BBC ಮಾರ್ಚ್ 15, 2005
  20. "ಅಗ್ರಿಮೆಂಟ್ ಬಿಟ್ವೀನ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಂಡ್ ದಿ ರಿಪಬ್ಲಿಕ್ ಆಫ್ ಇರಾಕ್ ಆನ್ ದಿ ವಿಥ್ಡ್ರಾಯಲ್ ಆಫ್ ಯುನೈಟೆಡ್ ಸ್ಟೇಟ್ಸ್ ಫೋರ್ಸಸ್ ಫ್ರಮ್ ಇರಾಕ್ ಅಂಡ್ ದಿ ಆರ್ಗನೈಸೇಶನ್ ಆಫ್ ದೆಯರ್ ಆಕ್ಟಿವಿಟೀಸ್ ಡ್ಯೂರಿಂಗ್ ದೇರ್ ಟೆಂಪರರಿ ಪ್ರೆಸೆನ್ಸ್ ಇನ್ ಇರಾಕ್" (PDF). Archived from the original (PDF) on 2009-03-25. Retrieved 2010-06-02.
  21. whitehouse.archives.gov. news releases 2008-11
  22. ಸ್ಟ್ರ್ಯಾಟೆಜಿಕ್ ಫ್ರೇಮ್ ವರ್ಕ್ ಅಗ್ರಿಮೆಂಟ್ Archived 2009-01-18 ವೇಬ್ಯಾಕ್ ಮೆಷಿನ್ ನಲ್ಲಿ. (pdf bitmap)
  23. ಇಂಗ್ಲಿಷ್ ಲಾಂಗ್ವೇಜ್ ಟೀಚಿಂಗ್ ಅಂಡ್ ಲರ್ನಿಂಗ್ ಪ್ರೊಗ್ರಾಮ್ (US ಸ್ಟೇಟ್ dept.)
  24. ಕರಡ್ಸ್ಹೆಹ್, J. (ನವೆಂಬರ್ 27, 2008) "ಇರಾಕ್ ಪಾರ್ಲಿಮೆಂಟ್ ಓಕೆಸ್ ಪ್ಯಾಕ್ಟ್ ಆನ್ U.S. ಟ್ರೂಪ್ಸ್ ಫ್ಯೂಚರ್" CNN
  25. 'ಗ್ಲೋಬಲ್ ವಾರ್ ಆನ್ ಟೆರರ್' ಇಸ್ ಗಿವನ್ ನ್ಯೂ ನೇಮ್, ಸ್ಕಾಟ್ ವಿಲ್ಸನ್ ಅಂಡ್ ಅಲ್ ಕಾಮೆನ್, ದಿ ವಾಶಿಂಗ್ಟನ್ ಪೋಸ್ಟ್, ಮಾರ್ಚ್ 25, 2009; ಪುಟ A04
  26. "Presidential Address to the Nation" (Press release). The White House. October 7, 2001.
  27. "Counterterrorism and Terrorism". Federal Bureau of Investigation. Archived from the original on 2010-06-09. Retrieved 2008-04-14.
  28. ಏ ಹಿಸ್ಟರಿ ಆಫ್ ಕಾನ್ಫ್ಲಿಕ್ಟ್: ಇಂಟ್ರೋಡಕ್ಷನ್, BBC
  29. "ಜಸ್ಟ್ ಅನದರ್ ಫರ್ಗಾಟನ್ ಪೀಸ್ ಸಮಿಟ್ Archived 2010-04-13 ವೇಬ್ಯಾಕ್ ಮೆಷಿನ್ ನಲ್ಲಿ.." Haaretz.com . ಪ್ರೊ. ಎಫ್ರಿಂ ಯಾರ್ ಹಾಗು ಪ್ರೊ. ತಮಾರ್ ಹರ್ಮನ್ನ್. ಪ್ರಕಟಣೆ 11/12/2007.
  30. ಪೋಲ್ ಆನ್ ಪ್ಯಾಲೇಸ್ಟೆನಿಯನ್ ಆಟಿಟ್ಯೂಡ್ಸ್ Archived 2007-12-01 ವೇಬ್ಯಾಕ್ ಮೆಷಿನ್ ನಲ್ಲಿ. - ಜೆರುಸಲೆಮ್ ಕಮ್ಯೂನಿಕೇಷನ್ಸ್ ಸೆಂಟರ್.
  31. ಕರ್ಟ್ಜರ್, ಡೆನಿಯಲ್ ಹಾಗು ಸ್ಕಾಟ್ ಲಸೆನ್ಸ್ಕಿ. "ನೆಗೊಶಿಯೇಟಿಂಗ್ ಅರಬ್ -ಇಸ್ರೇಲಿ ಪೀಸ್ ..." ಗೂಗಲ್ ಬುಕ್ ಸರ್ಚ್ 30 ಜನವರಿ 2009.
  32. ಡೆರ್ಷೋವಿಟ್ಜ್, ಅಲನ್. ದಿ ಕೇಸ್ ಫಾರ್ ಪೀಸ್: ಹೌ ದಿ ಅರಬ್-ಇಸ್ರೇಲಿ ಕಾನ್ಫ್ಲಿಕ್ಟ್ ಕ್ಯಾನ್ ಬಿ ರಿಸಾಲ್ವ್ಡ್ . ಹೊಬೋಕೆನ್: ಜಾನ್ ವಿಲೆಯ್ & ಸನ್ಸ್, Inc., 2005
  33. ಇಸ್ರೇಲ್: ದಿ ಆಲ್ಟರ್ನೇಟಿವ್, ದಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್ , ಸಂಪುಟ 50, ಸಂಖ್ಯೆ 16, ಅಕ್ಟೋಬರ್ 23, 2003
  34. ವರ್ಜೀನಿಯ ಟಿಲ್ಲೆಯ್, ದಿ ಒನ್-ಸ್ಟೇಟ್ ಸಲ್ಯೂಶನ್ , ಯುನಿವೆರ್ಸಿಟಿ ಆಫ್ ಮಿಚಿಗನ್ ಪ್ರೆಸ್ (ಮೇ 24, 2005), ISBN 0-472-11513-8
  35. ಹೆಗೆಲರ್, E. C., & ಕಾರುಸ್, P. (1890). ದಿ ಮೊನಿಸ್ಟ್. ಲಾ ಸಲ್ಲೇ, ಇಲ್. [etc.]: ಪಬ್ಲಿಶ್ಡ್ ಬೈ ಓಪನ್ ಕೋರ್ಟ್ ಫಾರ್ ದಿ ಹೆಗೆಲರ್ ಇನ್ಸ್ಟಿಟ್ಯೂಟ್. ಪುಟ 443.
  36. ಜೇಮ್ಸ್, W. (1893). ದಿ ಪ್ರಿನ್ಸಿಪಲ್ಸ್ ಆಫ್ ಸೈಕಾಲಜಿ. ನ್ಯೂಯಾರ್ಕ್: H. ಹೊಲ್ಟ್ ಅಂಡ್ ಕಂಪನಿ. ಪುಟ ೬೦೯.
  37. ಹೊದ್ದೆರ್, A. (1901). ದಿ ಅಡ್ವರ್ಸರೀಸ್ ಆಫ್ ದಿ ಸ್ಕೆಪ್ಟಿಕ್; ಆರ್, ದಿ ಸ್ಪೆಷಿಯಸ್ ಪ್ರೆಸೆಂಟ್, ಏ ನ್ಯೂ ಇನ್ಕ್ವೈರಿ ಇನ್ಟು ಹ್ಯೂಮನ್ ನಾಲೆಡ್ಜ್. ಚಾಪ್ಟರ್ II, ದಿ ಸ್ಪೆಷಿಯಸ್ ಪ್ರೆಸೆಂಟ್. ಲಂಡನ್: S. ಸೋನ್ನೆನ್ಸ್ಚೆಯಿನ್ &. ಪುಟಗಳು 36–56.
  38. ರಾಬರ್ಟ್ V. ಡೇನಿಯಲ್ಸ್, "ಹಿಸ್ಟರಿ", ಎನ್ಸೈಕ್ಲೋಪೆಡಿಯ ಅಮೆರಿಕಾನ , 1986 ed., ಸಂ. 14, ಪು. 227.
  39. ಜಾರ್ಜ್ ಸಂತಾಯನ, "ದಿ ಲೈಫ್ ಆಫ್ ರೀಸನ್", ಸಂಪುಟ ಒಂದು, ಪು. 82, ಬಿಬ್ಲಿಯೋಲೈಫ್, ISBN 978-0-559-47806-2
  40. ಅರ್ನೊಲ್ಡ್ J. ತೊಯ್ನ್ಬೀ, ಏ ಸ್ಟಡಿ ಆಫ್ ಹಿಸ್ಟರಿ , ಸಂಪುಟಗಳು. I–XII, ಆಕ್ಸ್ಫಾರ್ಡ್ ಯುನಿವರ್ಸಿಟಿ ಪ್ರೆಸ್,1934–61.
  41. ವಿಲ್ ಅಂಡ್ ಏರಿಯಲ್ ದುರಂಟ್, ದಿ ಲೆಸನ್ಸ್ ಆಫ್ ಹಿಸ್ಟರಿ , ನ್ಯೂಯಾರ್ಕ್, ಸಿಮೊನ್ ಅಂಡ್ ಸ್ಚುಸ್ಟೆರ್, 1968, ಪ್ರಸ್ತಾಪನೆ.
  42. ಬೇರ್ಕೆಲೆಯ್ ಎಡಿನ್ಸ್ ಹಾಗು ಜಾರ್ಜ್ G. ಇಗ್ಗೆರ್ಸ್, "ಹಿಸ್ಟರಿ", ಎನ್ಸೈಕ್ಲೋಪೆಡಿಯ ಅಮೆರಿಕಾನ , 1986 ed., ಸಂ. 14, pp. 243–44.
  43. [76]
  44. "Climate Change 2001: Impacts, Adaptation and Vulnerability. Contribution of Working Group II to the Third Assessment Report of the Intergovernmental Panel on Climate Change". IPCC. 2001-02-16. Archived from the original on 2007-03-03. Retrieved 2007-03-14.
  45. McMichael AJ, Woodruff RE, Hales S (2006). "Climate change and human health: present and future risks". Lancet. 367 (9513): 859–69. doi:10.1016/S0140-6736(06)68079-3. PMID 16530580.{{cite journal}}: CS1 maint: multiple names: authors list (link)
  46. Macey, Jennifer (September 19, 2007). "Global warming opens up Northwest Passage". ABC News. Retrieved 2007-12-11.
  47. "Climate Change 2007: Synthesis report" (PDF). Climate Change 2007: Synthesis Report. IPCC. 2007-02-05. Retrieved 2009-02-03.
"https://kn.wikipedia.org/w/index.php?title=ಸಮಕಾಲೀನ&oldid=1233940" ಇಂದ ಪಡೆಯಲ್ಪಟ್ಟಿದೆ