ದಿ ಪೆಂಟಗನ್

Coordinates: 38°52′15.56″N 77°3′21.46″W / 38.8709889°N 77.0559611°W / 38.8709889; -77.0559611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Pentagon
Arlington County, Virginia

Southwest view of the Pentagon with the Potomac River and Washington Monument in background (1998).
ಪ್ರಕಾರ Headquarters
ಕಕ್ಷೆಗಳು 38°52′15.56″N 77°3′21.46″W / 38.8709889°N 77.0559611°W / 38.8709889; -77.0559611
ನಿರ್ಮಾಣ Ground broken September 11, 1941, dedicated January 15, 1943
Height Five floors above ground and two floors below ground
In use 1943–present
ಪ್ರಸ್ತುತ ಸ್ಥಿತಿ In Service
Current
owner
United States Department of Defense
ಅಧೀನ U.S. Secretary of Defense

ಪೆಂಟಗನ್ ಅನ್ನುವುದು ವರ್ಜಿನಿಯಅರ್ಲಿಂಗ್‌ಟನ್ ಪ್ರದೇಶದಲ್ಲಿದ್ದ, ಯುನೈಡೆಡ್ ಸ್ಟೇಟ್ಸ್‌ನ ರಕ್ಷಣೆ ವಿಭಾಗದ ಕೇಂದ್ರ ಕಾರ್ಯಸ್ಥಾನವಾಗಿದೆ. U.S. ಮಿಲಿಟರಿನ ಸಾಂಕೇತಿಕವಾಗಿದ್ದ, "ಪೆಂಟಗನ್‌ನ್ನು" ಬಹುತೇಕವಾಗಿ ಅದು ಒಂದು ಕಟ್ಟಡ ಅನ್ನುವುದಕ್ಕಿಂತಲು, ಅಸಹಜ ಲಕ್ಷಣವಾಗಿ ರಕ್ಷಣೆಯ ವಿಭಾಗವನ್ನು ಪ್ರಸ್ತಾಪಿಸಲು ಉಪಯೋಗಿಸಲಾಗುತ್ತದೆ.

ಇದನ್ನು ಅಮೆರಿಕಾದ ವಾಸ್ತುಶಿಲ್ಪಿ ಜಾರ್ಜ್ ಬೆರ್ಗ್‌ಸ್ಟ್ರೋಮ್‌ (1876–1955) ವಿನ್ಯಾಸಿಸಿದರು, ಮತ್ತು ಫಿಲಡೆಲ್ಫಿಯ, ಪೆನ್ಸಿಲ್‌ವಾನಿಯ, ಸಾರ್ವತ್ರಿಕ ಗುತ್ತಿಗೆದಾರ ಜಾನ್ ಮೆಕ್‌ಶೈನ್‌ ಇವರಿಂದ ನಿರ್ಮಿಸಲಾಯಿತು, ಸೆಪ್ಟೆಂಬರ್ 11, 1941ರಂದು ನೆಲವನ್ನು ನಿರ್ಮಾಣಕ್ಕಾಗಿ ವಿಚ್ಛಿನ್ನ ಗೊಳಿಸಿದ ನಂತರ, ಜನವರಿ 15, 1943ರಂದು ಕಟ್ಟಡವನ್ನು ಲೋಕಹಿತಕ್ಕಾಗಿ ಸಮರ್ಪಿಸಲಾಯಿತು. ಮುಖ್ಯ ನಾಯಕ ಬ್ರೆಹನ್ ಸಮೆರ್ವೆಲ್ ಯೋಜನೆಯ ಹಿಂದೆ ನಿಂತು ಮಹತ್ತರವಾದ ಪ್ರಚೋದನೆಯನ್ನು ನೀಡಿದರು;[೧] ಸೇನೆಗೆ ತಕ್ಕಂತೆ ಯೋಜನೆಯ ಮೇಲ್ವಿಚಾರಣೆಯ ಜವಾಬ್ದಾರಿಯು ಕರ್ನಲ್ ಲೆಸ್ಲಿ ಗ್ರೊವ್ಸ್‌ರವರದ್ದಾಗಿತ್ತು.

ಪೆಂಟಗನ್ ವಿಸ್ತೀರ್ಣದಲ್ಲಿ ಪ್ರಪಂಚದ ಅತೀ ದೊಡ್ಡ ಕಚೇರಿ ಕಟ್ಟಡವಾಗಿದ್ದು, ಇದರ ಪೂರ್ಣ ಭಾಗವನ್ನು ಕಚೇರಿಗಳಿಗೆ ಉಪಯೋಗಿಸಲಾಗಿದೆ.[೨][೩] ಸರಿಸುಮಾರು 23,000 ಮಿಲಿಟರಿ ಮತ್ತು ನಾಗರಿಕ ನೌಕರರು[೩] ಮತ್ತು ಸುಮಾರು 3,000 ರಕ್ಷಣೆಯ ವಿಭಾಗದವರಲ್ಲದ ಸಹಾಯಕ ಸಿಬ್ಬಂದಿ ಪೆಂಟಗನ್‌ನಲ್ಲಿ ಕಾರ್ಯ ನಿರ್ವಹಣೆಯಲ್ಲಿ ತೊಡಗಿರುತ್ತಾರೆ. ಇದು ಐದು ದಿಕ್ಕುಗಳನ್ನು ಹೊದಿದ್ದು, ನೆಲಮಹಡಿಯ ಮೇಲೆ ಐದು ಮಹಡಿಗಳನ್ನು (ಹಾಗು ಎರಡು ಬೇಸ್‌ಮೆಂಟ್ (ತಳಮನೆಯ) ಹಂತಗಳನ್ನು) ಹೊಂದಿದೆ, ಮತ್ತು ಪ್ರತಿಯೊಂದು ಮಹಡಿಗೆ ಐದು ಸುರುಳಿ ಮೊಗಸಾಲೆಗಳಂತೆ ಒಟ್ಟು 17.5 mi (28.2 km)[೩] ಸುರುಳಿ ಮೊಗಸಾಲೆಗಳನ್ನು ಹೊಂದಿದೆ. ಪೆಂಟಗನ್ ಐದು-ಎಕರೆ (20,000 m²) ಪ್ರಮುಖ ಪ್ಲಾಜವನ್ನು ಒಳಗೊಂಡಿದ್ದು, ಪೆಂಟಗನ್ ಆಕಾರದಲ್ಲಿದೆ ಮತ್ತು ಇದನ್ನು ಅನಧಿಕೃತವಾಗಿ "ಗ್ರೌಂಡ್ ಜೀರೊ" ಎಂದು ಸೂಚಿಸಲಾಗುತ್ತದೆ, ಈ ಅಡ್ಡಹೆಸರು ಶೀತಲ ಯುದ್ಧದ ಸಮಯದಲ್ಲಿ, ನ್ಯೂಕ್ಲಿಯರ್ ಯುದ್ಧದ ಪ್ರಕೋಪದಲ್ಲಿ ಸೊವಿಯತ್ ಒಕ್ಕೂಟವು ಒಂದು ಅಥವಾ ಹೆಚ್ಚಿನ ನ್ಯೂಕ್ಲಿಯರ್ ಕ್ಷಿಪಣಿಗಳನ್ನು ಈ ಪ್ರಮುಖ ಪ್ರದೇಶಕ್ಕೆ ಎಸೆಯುವ ಗುರಿಯನ್ನು ಹೊಂದಿರಬಹುದೆಂಬ ಊಹನೆಗಳ ಆಧಾರದ ಮೇಲೆ ಹುಟ್ಟುಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

ಸೆಪ್ಟೆಂಬರ್ 11, 2001ರಂದು, ಕಟ್ಟಡದ ನೆಲ ವಿಚ್ಛಿನ್ನಗೊಂಡಾಗಿನಿಂದ ನಿಖರವಾಗಿ 60 ವರ್ಷಗಳಲ್ಲಿ, ಅಪಹರಣಕ್ಕೆ ಒಳಗಾದ ಅಮೆರಿಕಾದ ಏರ್‌ಲೈನ್ ವಿಮಾನ 77 ಪೆಂಟಗನ್ ಪಶ್ಚಿಮದಿಕ್ಕಿನ ಒಳಗೆ ಪತನಗೊಂಡು ಬಿದ್ದಿತು, ಇದು ಐದು ಅಪಹರಣಕಾರರನ್ನು, ವಿಮಾನದಲ್ಲಿದ್ದ 59 ಜನರನ್ನು, ಮತ್ತು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ 125 ಜನರನ್ನು ಒಳಗೊಂಡು, 189 ಜನರ ಸಾವಿಗೆ ಕಾರಣವಾಗಿತ್ತು.[೪]

ಈಗಿನ ರಾಜ್ಯ ಮಾರ್ಗ 27 ಮತ್ತು ಭಾಗತಃ ಶಿರ್ಲೆಯ್ ಹೆದ್ದಾರಿಯನ್ನು ಪ್ಳಗೊಂಡ, ಪೆಂಟಗನ್ ಸಂಪರ್ಕ ರಸ್ತೆಯ 1945 ನಕ್ಷೆ.

ನಿರ್ಮಾಣ ಮತ್ತು ಇತಿಹಾಸ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್‌ನ ಯುದ್ಧದ ವಿಭಾಗವು ಮನಿಷನ್ಸ್ ಕಟ್ಟಡದಲ್ಲಿ ಕೇಂದ್ರ ಕಾರ್ಯಸ್ಥಾನವನ್ನು ಹೊಂದಿತ್ತು, I ನೆಯ ಪ್ರಪಂಚದ ಯುದ್ಧದ ಸಮಯದಲ್ಲಿ ನ್ಯಾಷನಲ್ ‍ಮಾಲ್‌ನಲ್ಲಿನ ಸಂವಿಧಾನದ ಅವೆನ್ಯೂದೊಂದಿಗೆ ಈ ತಾತ್ಕಾಲಿಕ ಕಟ್ಟಡವನ್ನು ಸ್ಥಾಪಿಸಲಾಯಿತು. U.S. ಆರ್ಮಿ (ಸೇನೆ)ಯ ಆಡಳಿತ ನಡೆಸಲು ರಚಿಸಿದ ನಾಗರಿಕ ಸಂಸ್ಥೆಯಾಗಿದ್ದ, ಯುದ್ಧದ ವಿಭಾಗವು, ನ್ಯಾಷನಲ್ ಮಾಲ್‌ನಲ್ಲಿ ಹೆಚ್ಚಿನ ತಾತ್ಕಾಲಿಕ ಕಟ್ಟಡಗಳನ್ನು ವಿಸ್ತರಿಸಿತು, ಹಾಗು ಡಜನುಗಟ್ಟಲೆ ಇತರ ಕಟ್ಟಡಗಳನ್ನು ವಾಷಿಂಗ್ಟನ್, D.C.ನಲ್ಲಿ, ಹಾಗು ಮೇರಿಲ್ಯಾಂಡ್ ಮತ್ತು ವರ್ಜಿನಿಯದಲ್ಲೂ ಹರಡಿತ್ತು. 1930ರ ಕೊನೆಯಲ್ಲಿ, ಯುದ್ಧ ವಿಭಾಗದ ಹೊಸಾ ಕಟ್ಟಡವನ್ನು ಪೊಗ್ಗಿ ಬೊಟ್ಟೊಮ್‌ನಲ್ಲಿನ 21ನೆಯ ಮತ್ತು C ಬೀದಿಗಳಲ್ಲಿ ನಿರ್ಮಿಸಲಾಯಿತು, ಆದರೆ ನಿರ್ಮಾಣ ಪೂರ್ಣಗೊಂಡ ನಂತರ, ಹೊಸಾ ಕಟ್ಟಡವು ವಿಭಾಗದಲ್ಲಿದ್ದ ಸ್ಥಳ ಸಾಕಾಗದೇ ಇರುವ ತೊಂದರೆಯನ್ನು ಬಹೆಹರಿಸಲಿಲ್ಲ, ಮತ್ತು ಕೊನೆಗೆ ಇದನ್ನು ರಾಜ್ಯದ ವಿಭಾಗಕ್ಕೆ ಉಪಯೋಗಿಸಲಾಯಿತು.[೫] IIನೆಯ ಪ್ರಪಂಚದ ಯುದ್ಧ ಯುರೋಪ್‌ನಲ್ಲಿ ಪ್ರಾರಂಭವಾದಾಗ, ಯುದ್ಧದ ವಿಭಾಗವು ಘರ್ಷಣೆಗೆ ಒಳಗಾಗಬಹುದೆಂಬ ಪೂರ್ವನಿರೀಕ್ಷೆಯೊಂದಿಗೆ ವೇಗವಾಗಿ ವ್ಯಾಪಿಸಿತು. ಯುದ್ಧದ ಕಾರ್ಯದರ್ಶಿ ಹೆನ್ರಿ L. ಸ್ಟಿಮ್ಸೊನ್ ಮುನಿಷನ್ ಕಟ್ಟಡ ಮಿತಿಮೀರಿದ ಜನಸಮೂಹ ಮತ್ತು ವ್ಯಾಪಿಸಿದ ವಿಭಾಗಗಳೊಂದಿಗೆ ಕಿಕ್ಕಿರಿದು ಅಸಮ್ಮತ ಪರಿಸ್ಥಿತಿಯಲ್ಲಿದ್ದುದನ್ನು ಕಂಡುಹಿಡಿದರು.[೬][೭]

ಮೇ 1941ರಲ್ಲಿ ಅಧ್ಯಕ್ಷರಾದ ಪ್ರಾಂಕ್ಲಿನ್ D. ರೂಸೆವೆಲ್ಟ್‌ಗೆ ಸ್ಟಿಮೋನ್ಸ್ ಯುದ್ಧ ವಿಭಾಗಕ್ಕೆ ಇನ್ನೂ ಹೆಚ್ಚಿನ ಸ್ಥಳದ ಅವಶ್ಯಕತೆಯಿದೆ ಎಂದು ಹೇಳಿದರು. ಜುಲೈ 17, 1941ರಂದು, ಯುದ್ಧ ವಿಭಾಗದ ಹೊಸಾ ಕಟ್ಟಡದ ಪ್ರಸ್ತಾಪನೆಯನ್ನು ಕುರಿತು ಚರ್ಚಿಸಲು, ವರ್ಜಿನಿಯಾದ ಕಾಂಗ್ರೆಸ್ಸ್‌ವ್ಯಕ್ತಿಯಾದ ಕ್ಲಿಪ್ಟಾನ್ ವೂಡ್ರುಮ್‌ರಿಂದ ಸುಸಂಘಟಿಸಿದ ಕಾಂಗ್ರೆಸ್ಸಿನಲ್ ಹಿಯರಿಂಗ್ (ಕಾಂಗ್ರೆಸ್ಸಿಗೆ ಸಂಬಂದಿಸಿದ ಸಮಾವೇಶ) ನಡೆಯಿತು. ಸಮಾವೇಶದಲ್ಲ್ಲಿ ಯುದ್ಧ ವಿಭಾಗದ ಪ್ರತಿನಿಧಿಯಾಗಿದ್ದ ಬ್ರಿಗಡಿಯರ್ ಮುಖಂಡ ಯುಜೆನ್ ರೆಯ್‌ಬೊಲ್ಡ್‌ರನ್ನು, ವೂಡ್ರುಮ್ ಇನ್ನೂ ಹೆಚ್ಚಿನ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತಲು, ಯುದ್ಧ ವಿಭಾಗದ "ಸ್ಥಳದ ತೊಂದರೆಗೆ" ಒಂದು "ಸಮಗ್ರ ಪರಿಹಾರಕ್ಕಾಗಿ" ಒತ್ತಾಯಿಸಿದರು. ರೆಯ್‌ಬೋಲ್ಡ್ ಐದು ದಿನಗಳೊಳಗೆ ಕಾಂಗ್ರೆಸ್ಸ್ ವ್ಯಕ್ತಿಗೆ ವಾಪಾಸು ವರದಿ ಸಲ್ಲಿಸುವುದಾಗಿ ಒಪ್ಪಿಗೆ ನೀಡಿದರು. ಯುದ್ಧ ವಿಭಾಗವು ಅದರ ನಿರ್ಮಾಣದ ಮುಖ್ಯ ಅಧಿಕಾರಿ, ಜೆನೆರಲ್ ಬ್ರೆಹೊನ್ ಸೊಮೆರ್ವೆಲ್ಲ್‌ರಿಗೆ ನಕಾಶೆ ರೂಪಿಸುವಂತೆ ಕರೆನೀಡಿತು.[೮]

ಮುಖ್ಯ ನಾವಿ ಕಟ್ಟಡ (ಮುಂಭಾಗ) ಮತ್ತು ಮುನಿಷನ್ಸ್ ಕಟ್ಟಡಗಳು ತಾತ್ಕಾಲಿಕ ವಿನ್ಯಾಸಗಳಾಗಿದ್ದು, ಅವನ್ನು Iನೆಯ ಪ್ರಪಂಚದ ಯುದ್ಧದ ಸಮಯದಲ್ಲಿ ನ್ಯಾಷನಲ್ ಮಾಲ್‌ನಲ್ಲಿ ನಿರ್ಮಿಸಲಾಗಿತ್ತು. ಪೆಂಟಗನ್‌ಗೆ ಸ್ಥಳಾಂತರಗೊಳ್ಳೂವ ಮೊದಲು ಅನೇಕ ವರ್ಷಗಳ ವರೆಗು ಮುನಿಷನ್ಸ್ ಕಟ್ಟಡವನ್ನು ಯುದ್ಧ ವಿಭಾಗದ ಕೇಂದ್ರ ಕಾರ್ಯಸ್ಥಾನವನ್ನಾಗಿ ಉಪಯೋಗಿಸಲಾಗಿತ್ತು.

ಸರಕಾರದ ಅಧಿಕಾರಿಗಳು ಯುದ್ಧ ವಿಭಾಗದ ಕಟ್ಟಡವನ್ನು ಪೊಟೊಮಕ್ ನದಿಗೆ ಅಡ್ಡಲಾಗಿ, ವರ್ಜಿನಿಯದ ಆರ್ಲಿಂಗ್‌ಟನ್‌ನಲ್ಲಿ ನಿರ್ಮಿಸಲು ಒಪ್ಪಿಗೆ ನೀಡಿದರು. ಇದು ನಾಲ್ಕು ಮಳಿಗೆಗಿಂತಲು ಹೆಚ್ಚಿನ ಎತ್ತರವಾಗಿರ ಬಾರದು, ಮತ್ತು ಇದು ಕನಿಷ್ಟ ಪ್ರಮಾಣದ ಉಕ್ಕನ್ನು ಉಪಯೊಗಿಸಬೇಕು, ಇವು ಹೊಸಾ ಕಟ್ಟಡದ ಅವಶ್ಯಕತೆಗಳಾಗಿದ್ದವು. ಇದರ ಅರ್ಥ ಕಟ್ಟಡವನ್ನು ಲಂಬವಾಗಿ ಕಟ್ಟುವುದಕ್ಕಿಂತ, ಹೆಚ್ಚಿನ ಪ್ರದೇಶದಲ್ಲಿ ಕಟ್ಟಡವನ್ನು ವಿವಿಧ ದಿಕ್ಕಿಗೆ ಹರಡಿದ ಆಕಾರದಲ್ಲಿ ನಿರ್ಮಿಸುವುದು. ಕಟ್ಟಡವನ್ನು ನಿರ್ಮಿಸಲು ಒಳಗೊಂಡ ಶಕ್ಯ ಸ್ಥಳಗಳು, ಆರ್ಲಿಂಗ್‌ಟನ್ ನ್ಯಾಷನಲ್ ಸಮಾಧಿಯ ಪಕ್ಕದಲ್ಲಿದ್ದ ಆರ್ಲಿಂಗ್‌ಟನ್ ಫಾರ್ಮ್ (ಹೊಲ), ಮತ್ತು ಹಳೆಯ ವಾಷಿಂಗ್‌ಟನ್ ಹೂವೆರ್ ವಿಮಾನನಿಲ್ದಾಣದ ಸ್ಥಳ.[೯] ಕಟ್ಟಡದ ಪೆಂಟಗನ್ ಆಕಾರವು, ಮೂಲತಃ ಆಯ್ಕೆ ಮಾಡಿಕೊಂಡ ಸ್ಥಳವಾದ ಆರ್ಲಿಂಗ್‌ಟನ್ ಪಾರ್ಮ್ಸ್‌ನ ಆಕಾರದ ಪರಿಣಾಮ,[೧೦] ಏನೇ ಆದರು ಆಲಿಂಗ್‌ಟನ್ ಶ್ಮಶಾನದಿಂದ ವಾಷಿಂಗ್‌ಟನ್, ಡಿ.ಸಿ.ಯ ನೋಟಕ್ಕೆ ಹೊಸಾ ಕಟ್ಟಡವು ತಡೆಯಾಗುವುದನ್ನು ಇಚ್ಚಿಸದ, ಅಧ್ಯಕ್ಷ ರೂಸೆವೆಲ್ಟ್ ಹೂವೆರ್ ವಿಮಾನನಿಲ್ದಾಣದ ಸ್ಥಳವನ್ನು ಆಯ್ಕೆ ಮಾಡಿದರು.[೧೧] ಆದರೆ ಕಟ್ಟ್ಡವು ಅದರ ಪೆಂಟಗನಲ್ ಆಕಾರವನ್ನು ಉಳಿಸಿಕೊಂಡಿದೆ, ಇದಕ್ಕೆ ಕಾರಣ ಇತರ ಪ್ರಮುಖ ವಿನ್ಯಾಸಗಳು ಆ ಹಂತದಲ್ಲಿ ಬಹಳ ದುಬಾರಿಯಾಗುವಂತಿದ್ದವು ಮತ್ತು ರೂಸೆವೆಲ್ಟ್‌ ಸಹ ಈ ವಿನ್ಯಾಸವನ್ನು ಇಷ್ಟಪಟ್ಟಿದ್ದರು. ಸಮರೂಪತೆಯ ಆರ್ಲಿಂಗ್‌ಟನ್ ಪಾರ್ಮ್ಸ್ ಸ್ಥಳದಿಂದ ಸ್ವತಂತ್ರವಾಗಿ, ಹೇಗಾದರು, ಇದನ್ನು ವ್ಯವಸ್ಥಿತ ಪೆಂಟಗನ್‌ಗೆ ಬದಲಿಸಲಾಗಿತ್ತು.[೧೨][೧೩]

ಜುಲೈ 28ರಂದು, ಯುದ್ಧ ವಿಭಾಗದ ಹೊಸಾ ಕಟ್ಟಡಕ್ಕೆ ಬಂಡವಾಳ ಹೂಡುವ ಅಧಿಕಾರವನ್ನು ಕಾಂಗ್ರೆಸ್ಸ್ ಪಡೆಯಿತು, ಈ ಕಟ್ಟಡವು ಸಮಸ್ತ ವಿಭಾಗವನ್ನು ಒಂದೇ ಮೇಲು ಛಾವಣಿ ಅಡಿಯಲ್ಲಿ ಇರಿಸುವಂತಹದ್ದಾಗಿತ್ತು,[೧೪] ಮತ್ತು ಅಧ್ಯಕ್ಷರು ರೂಸೆವೆಲ್ಟ್ ಸೆಪ್ಟೆಂಬರ್ 2ರಂದು ಹೂವೆರ್ ವಿಮಾನ ನಿಲ್ದಾಣದ ಸ್ಥಳವನ್ನು ಅಧಿಕೃತವಾಗಿ ಮಂಜೂರು ಮಾಡಿದರು.[೧೫] ಜುಲೈ 1941ರ ಕೊನೆಯಲ್ಲಿ, ಯೋಜನೆಯು ಪರವಾನಗಿಯನ್ನು ಪಡೆದಾಗ, ಜಾಹ್ನ್ ಮೆಕ್‌ಶೈನ್‌ರನ್ನು ಒಳಗೊಂಡು, ಆರ್ಲಿಂಗ್‌ಟನ್‌ನಲ್ಲಿ ವಾಷಿಂಗ್‌ಟನ್ ರಾಷ್ಟ್ರೀಯ ವಿಮಾನನಿಲ್ದಾಣ, ವಾಷಿಂಗ್‌ಟನ್‌ನಲ್ಲಿ ಜಪೆರ್ಸನ್ ಸ್ಮಾರಕವನ್ನು, ಮತ್ತು ವೈಸ್ ಗುತ್ತಿಗೆದಾರ ಸಂಸ್ಥೆಯೊಂದಿಗೆ, ಬೆತೆಸ್ಡ, ಮೇರಿಲ್ಯಾಂಡ್‌ನಲ್ಲಿ, ನ್ಯಾಷನಲ್ ನವಲ್ ಮೆಡಿಕಲ್ ಸೆಂಟರನ್ನು ನಿರ್ಮಿಸಿದ ಫಿಲಾಡೇಲ್ಫಿಯವನ್ನು ಒಳಗೊಂಡು, ಮತ್ತು ಡೊಯ್ಲೆ ಮತ್ತು ರುಸ್ಸೆಲ್- ವರ್ಜೀನಿಯಾದವರೇ ಆದ ಇಬ್ಬರನ್ನು ಒಳಗೊಂಡು, ಸಮರ್‌ವೆಲ್ ಅನೇಕ ಗುತ್ತಿಗೆದಾರರ ಆಯ್ಕೆಯನ್ನುಮಾಡಿದರು.[೧೬] ಹೂವೆರ್ ವಿಮಾನ ನಿಲ್ದಾಣದ ಸ್ಥಳ ಮತ್ತು ಇತರ ಸರಕಾರದ ಸ್ವಂತ ಸ್ಥಳದ ಜೊತೆಗೆ, ಪೆಂಟಗನ್ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಸ್ಥಳದ ಅವಶ್ಯಕತೆಯಿತ್ತು,287 acres (1.16 km2) ಇದು $2.2 ಮಿಲಿಯನ್ ಬೆಲೆಗೆ ಬೇಕಾಗಿತ್ತು.[೧೭] ಹೆಲ್ಸ್ ತಳ ಹತ್ತಿರದ ಪ್ರದೇಶವಾದ, ಅನೇಕ ಒತ್ತೆಅಂಗಡಿಗಳನ್ನು, ಕಾರ್ಖಾನೆಗಳನ್ನು, ಸರಿಸುಮಾರು 150 ಮನೆಗಳನ್ನು ಹೊಂದಿದ್ದ, ಹೊಲಸು ಕೇರಿಯನ್ನು ಮತ್ತು ಕೊಲಂಬಿಯ ಪೈಕ್‌ ಸುತ್ತಮುತ್ತಲಿನ ಇತರ ಕಟ್ಟಡಗಳನ್ನು ಸಹ ಮುಕ್ತಗೊಳಿಸಿ ಪೆಂಟಗನ್‌ಗೆ ದಾರಿ ಮಾಡಿಕೊಡಲಾಯಿತು.[೧೮] ನಂತರ, 300 acres (1.2 km2) ಪೆಂಟಗನ್ ನಿರ್ಮಿಸಿ ಉಳಿದ 280 acres (1.1 km2) ಸ್ಥಳವನ್ನು ಆಲಿಂಗ್‌ಟನ್ ನ್ಯಾಷನಲ್ ಸ್ಮಶಾನಕ್ಕೆ ಮತ್ತು ಪೊರ್ಟ್ ಮೈಯರ್‌ಗೆ ವರ್ಗಾಯಿಸಲಾಯಿತು.[೧೭]

ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದ ಪೆಂಟಗನ್‌ನ ಅನಾಚ್ಛದಿತ ವಾಯುವ್ಯದಿಕ್ಕು, ಜುಲೈ 1, 1942

ಸೆಪ್ಟೆಂಬರ್ 11ರಂದು ಮೆಕ್‌ಶೈನ್ ಮತ್ತು ಇತರ ಗುತ್ತಿಗೆದಾರರೊಂದಿಗೆ ಕರಾರುಗಳ ಮೊತ್ತ $31,100,000ಗೆ ಕೊನೆಗೊಳಿಸಲಾಯಿತು, ಮತ್ತು ಅದೇ ದಿನ ಪೆಂಟಗನ್ ನಿರ್ಮಾಣಕ್ಕೆ ನೆಲವನ್ನು ಛೇದಿಸಲಾಯಿತು.[೧೯] ನಕ್ಷೆಯ ಅವಶ್ಯಕತೆಗಳ ನಡುವೆ, ಸೊಮೆರ್‌ವೆಲ್ ವಿನ್ಯಾಸದ ನಕ್ಷೆಯಲ್ಲಿ ಒಂದೊಂದು ಚದುರ ಅಡಿಗೆ 150 ಪೌಂಡ್ಸ್‌ನಂತೆ ಅಂತಸ್ತಿನ ಭಾರಗಳನ್ನು ಹೊಂದಿಕೆ ಮಾಡುವ ಬೇಡಿಕೆಯನ್ನು ಹೊಂದಿದ್ದರು, IIನೆಯ ಪ್ರಪಂಚದ ಯುದ್ಧದ ನಂತರ, ಭವಿಷ್ಯದಲ್ಲಿ ಒಂದು ವೇಳೆ ಕಟ್ಟಡವು ದಾಖಲೆಗಳನ್ನು ಸಂಗ್ರಹಿಸಿ ಇಡುವ ಅನುಕೂಲಕರ ಸ್ಥಳವಾದ ಪ್ರಸಂಗದಲ್ಲಿ ಇದನ್ನು ಉಪಯೋಗಿಸಲಾಗುವುದು.[೧೫] IIನೆಯ ಪ್ರಪಂಚ ಯುದ್ಧದ ಸಮಯದಲ್ಲಿ ಕಶಿಮೆ ಸರಬರಾಜಾಗುತ್ತಿದ್ದ, ಉಕ್ಕನ್ನು ನಿರ್ಮಾಣ ಕಾರ್ಯದಲ್ಲಿ ಕನಿಷ್ಟ ಪ್ರಮಾಣದಲ್ಲಿ ಉಪಯೋಗಿಸಲಾಯಿತು. ಇದರ ಬದಲಾಗಿ, ಪೆಂಟಗನ್‌ನ್ನು ಪೊಟೊಮಕ್ ನದಿಯಿಂದ ತೋಡಿ ತಂದ 680,000 ಟನ್ ಮರಳನ್ನು ಉಪಯೊಗಿಸಿ, ಕಾಂಕ್ರಿಟ್‌ನಿಂದ ಭದ್ರಪಡಿಸಿದ ವಿನ್ಯಾಸವಾಗಿ ನಿರ್ಮಿಸಲಾಯಿತು, ಮತ್ತು ಪೆಂಟಗನ್‌ನ ನದಿಯ ಪ್ರವೇಶದ ಕೆಳಗಡೆಯಲ್ಲಿ ಖಾರಿಯ ರಚನೆ ಆಯಿತು. ಉಕ್ಕಿನ ಉಪಯೋಗವನ್ನು ಕಡಿಮೆ ಮಾಡಲು, ಲಿಪ್ಟ್‌ಗಳನ್ನು ಸ್ಥಾಪಿಸುವ ಬದಲಿಗೆ ಕಾಂಕ್ರೀಟ್ ರಾಂಪುಗಳನ್ನು ನಿರ್ಮಿಸಲಾಯಿತು.[೨೦][೨೧] ಕಟ್ಟಡದ ಮುಂಭಾಗಕ್ಕೆ ಇಂಡಿಯಾನ ಸುಣ್ಣದಕಲ್ಲನ್ನು ಉಪಯೋಗಿಸಲಾಯಿತು.[೨೨]

ಮೊದಲಿನ ರೇಖಾಕೃತಿಗಳನ್ನು ಅಕ್ಟೊಬರ್ 1941ರ ಆರಂಭದಲ್ಲಿ ಒದಗಿಸುವುದರೊಂದಿಗೆ, ಪೆಂಟಗನ್‌ನ ವಾಸ್ತುಕಲೆಯ ಮತ್ತು ವಿನ್ಯಾಸದ ನಕ್ಷೆಯ ಕೆಲಸವು ನಿರ್ಮಾಣದೊಂದಿಗೆ ಏಕಕಾಲದಲ್ಲಿ ಮುಂದುವರೆಯಿತು, ಮತ್ತು ಬಹುತೇಕ ನಕ್ಷೆಯ ಕೆಲಸವು ಜೂನ್ 1, 1942ಕ್ಕೆ ಪೂರ್ಣಗೊಂಡಿದೆ. ಆ ಸಮಯದಲ್ಲಿ, ಕಟ್ಟಡದ ನಿರ್ಮಾಣವು ವಿನ್ಯಾಸದಲ್ಲಿ ಸೂಚಿಸಿದ್ದಕ್ಕಿಂತಲೂ ಬೇರೆ ಸರಂಜಾಮುಗಳನ್ನು ಉಪಯೋಗಿಸಿ, ನಕ್ಷೆಯ ರಚನೆಗಿಂತ ಮುಂದೆ ಸಾಗಿತ್ತು. ಪೆಂಟಗನ್‌ನಲ್ಲಿನ ಜಾಗವು ಏಪ್ರಿಲ್ 1, 1942ಕ್ಕೆ ಕೆಲಸಕ್ಕೆ ಲಭ್ಯವಾಗುವಂತಿರಬೇಕೆಂಬ ಸಮರ್‌ವೆಲ್ ಬೇಡಿಕೆಯೊಂದಿಗೆ, ಡಿಸೆಂಬರ್ 7, 1941ರಂದು, ಪರ್ಲ್ ಹರ್ಬರ್‌ ಮೇಲೆ ನಡೆದ ದಾಳಿಯ ನಂತರ ವಿನ್ಯಾಸ ಮತ್ತು ನಿರ್ಮಾಣದ ಕೆಲಸವನ್ನು ಶೀಘ್ರಗೊಳಿಸುವ ಒತ್ತಡವು ಹೆಚ್ಚಾಯಿತು. [೨೩] ಬೆರ್ಗ್‌ಸ್ಟೊರ್ಮ್, ಪೆಂಟಗನ್ ಯೋಜನೆಗೆ ಸಂಬಂಧವಿಲ್ಲದ, ಅವರು ಅಮೆರಿಕನ್ ಇಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್‌ನ ಅಧ್ಯಕ್ಷರಾಗಿದ್ದಾಗಿನ ಅವರ ಅನುಚಿತ ವರ್ತನೆಯ ಆಪಾದನೆಗಳಿಂದ ರಾಜೀನಾಮೆ ಮಾಡಿದ ನಂತರ, ಏಪ್ರಿಲ್ 11ರಂದು ಡೇವಿಡ್ ಜೆ. ವಿಟ್‌ಮೆರ್ ಪ್ರಧಾನ ವಾಸ್ತುಶಿಲ್ಪಿಯಾಗಿ, ಬೆರ್ಗ್‌ಸ್ಟೊರ್ಮ್‌ರ ಸ್ಥಾನಕ್ಕೆ ಬಂದರು.[೨೪]

ಪೊಟೊಮಕ್ ನದಿಯ ಪ್ರವಾಹ ಬಯಲಿನಲ್ಲಿನ, ಪೆಂಟಗನ್ ಸ್ಥಳದ ಮರಳಿನ ಅವಸ್ಥೆಯು, ಇಂಜಿನಿಯರುಗಳಿಗೆ ಸವಾಲಾಗಿತ್ತು, ಇದಕ್ಕಾಗಿ ಸ್ಥಳವನ್ನು ಸಮುದ್ರ ಮಟ್ಟಕ್ಕಿಂತ 10–40 ft (3.0–12.2 m) ಮೇಲಕ್ಕೆತ್ತುವ ಮಾರ್ಪಾಡುಗಳನ್ನು ಮಾಡಿದರು. ಮೇಲಕ್ಕೆತ್ತುವ ಮಾರ್ಪಾಡುಗಳನ್ನು ಸರಿದೂಗಿಸಲು ಎರಡು ಹಿಡಿದಿಟ್ಟುಕೊಳ್ಳುವ ಗೋಡೆಗಳನ್ನು ನಿರ್ಮಿಸಲಾಯಿತು, ಮತ್ತು ಮಣ್ಣಿನ ಗುಣವನ್ನು ಹೊಂದಿಸಲು, ಮಣ್ಣಿನ ರಾಶಿಗಳನ್ನು ಉಪಯೋಗಿಸಿದರು.[೨೫] ಒಟ್ಟು $83 ಮಿಲಿಯನ್ ವೆಚ್ಚದೊಂದಿಗೆ ಪೆಂಟಗನ್‌ನ ನಿರ್ಮಾಣ ಕಾರ್ಯವು ಸರಿಸುಮಾರು 16 ತಿಂಗಳುಗಳಲ್ಲಿ ಮುಗಿಯಿತು. ಪೂರ್ಣಗೊಂಡ ಕಟ್ಟಡವು 780 ft (240 m) ಪರಿಧಿಯಲ್ಲಿ ಉದ್ದವಾಗಿದ್ದು, 325 ft (99 m) ಎತ್ತರ ಮತ್ತು ಉದ್ದನೆಯ 360 ft (110 m) ಅಂಗಣದ ಪರಿಧಿಯನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]

ಪ್ರತಿಭಟನೆಗಳು[ಬದಲಾಯಿಸಿ]

ಅಕ್ಟೋಬರ್ 21, 1967ರಂದು, ಮಾಲ್ ಪ್ರವೇಶ ದ್ವಾರದಿಂದ ಪೆಂಟಗನ್‌ ವರೆಗೆ ಪ್ರತಿಭಟನಾಕಾರರು ಜಮಸೇರಿ ಕುಳಿತು ಪ್ರತಿಭಟಿಸುತ್ತಿರುವ ಸಮಯದಲ್ಲಿ ಮಿಲಿಟರಿ ಪೊಲಿಸರು ವಿಯಟ್ನಮ್ ಯುದ್ಧದ ಪ್ರತಿಭಟನಾಕಾರರನ್ನು ಹಿಡಿದಿಡುತ್ತಿರುವುದು.

ಪೆಂಟಗನ್ 1960ರ ಕೊನೆಯ ಸಮಯದಲ್ಲಿನ ವಿಯಟ್‌ನಮ್ ಯುದ್ಧದ ವಿರುದ್ಧದ ಪ್ರತಿಭಟನೆಗಳ ಸ್ಥಾನವಾಗಿ ಮಾರ್ಪಟ್ಟಿತ್ತು. ವುಮೆನ್ ಸ್ಟ್ರೈಕ್ ಪರ್ ಪೀಸ್‌ನಿಂದ ಸುಸಂಘಟಿಸಿದ, 2,500 ಮಹಿಳೆಯರ ಗುಂಪು, ಪೆಬ್ರವರಿ 15, 1967ರಂದು ಪೆಂಟಗನ್‌ನಲ್ಲಿನ ರಕ್ಷಣಾ ಕಾರ್ಯದರ್ಶಿ ರೊಬೆರ್ಟ್ S. Mcನಮರ'ರ ಕಛೇರಿಯ ಹೊರಗೆ ಪ್ರದರ್ಶನವನ್ನು ನಡೆಸಿತು.[೨೬] ಮೇ 1967ರಲ್ಲಿ, 20 ಪ್ರದರ್ಶನಕಾರರು ಜಂಟಿ ಮುಖ್ಯಾಧಿಕಾರಿ ಸಿಬ್ಬಂದಿ ಕಛೇರಿ ಎದುರು ಕುಳಿತು ಪ್ರತಿಭಟನಾ ಪ್ರದರ್ಶನವನ್ನು ಮಾಡಿದರು, ಇದು ಅವರು ಬಂದನಕ್ಕೊಳಗಾಗುವ ನಾಲ್ಕು ದಿನಗಳು ಮುಂಚಿತವಾಗಸ್ಟೆ ಅಂತಿಮ ಗೊಂಡಿತು.[೨೭] ಪ್ರಸಿದ್ಧಿಯಾದ ಪ್ರಸಂಗಗಳಲ್ಲಿ ಒಂದಾದ, ಅಕ್ಟೋಬರ್ 21, 1967ರಂದು, ವಿಯಟ್ನಮ್‌ನಲ್ಲಿ ಯುದ್ಧವನ್ನು ಕೊನೆಗಾಣಿಸಲು ನ್ಯಾಷನಲ್ ಮೊಬಿಲೈಜೇಷನ್ ಕಮಿಟಿ ಸುಸಂಘಟಿಸಿದ ಕೆಲವು 35,000 ಯುದ್ಧ-ವಿರೋದಿ ಪ್ರತಿಭಟನೆಕಾರರು, ರಕ್ಷಣಾ ವಿಭಾಗದ ಹತ್ತಿರ ("ಪೆಂಟಗನ್‌ಮೇಲಿನ ದಂಡುಗಳ ಪ್ರಯಾಣ") ಪ್ರದರ್ಶನೆಯಲ್ಲಿ ತೊಡಗಲು ಒಟ್ಟುಗೂಡಿದರು, ಅಲ್ಲಿ ಅವರು ಕೆಲವು 2,500 ಆಯುಧಗಳನ್ನು ಹೊಂದಿದ ಸೈನಿಕರನ್ನು ಎದುರಿಸಬೇಕಾಯಿತು. ಪ್ರತಿಭಟನೆಯ ಸಮಯದಲ್ಲಿ, ಜಾರ್ಜ್ ಹರ್ರಿಸ್ ಗುಲಾಬಿ ಬಣ್ಣವನ್ನು ಸೈನಿಕರ ತುಪಾಕಿ ಪಿಪಾಯಿಯಲ್ಲಿ ಇಟ್ಟಿದ್ದ, ಪ್ರಸಿದ್ಧ ಚಿತ್ರವನ್ನು ತೆಗೆಯಲಾಯಿತು.[೨೮] ಮೇ 19, 1972ರಂದು, ಅಮೆರಿಕಾದ ಉಗ್ರಗಾಮಿಗಳೆಂದು ಗುರುತಿಸಲ್ಪಡುವ ವೆದೆರ್ ಅಂಡರ್ ಗ್ರೌಂಡ್ ಆರ್ಗನೈಜೇಷನ್ ಪೆಂಟಗನ್‌ನ ನಾಲ್ಕನೆಯ ಮಹಡಿಯಲ್ಲಿನ ಮಹಿಳೆಯರ ವಿಶ್ರಾಂತಿ ಕೋಣೆಯಲ್ಲಿ ಬಾಂಬು (ಸಿಡಿಮದ್ದು) ಇಟ್ಟು ಅದನ್ನು ಸ್ಫೋಟಿಸುವಲ್ಲಿ ಸಫಲವಾಯಿತು. ಇದು ವಿಯಟ್ನಮ್ ಯುದ್ಧದ ಅಂತಿಮ ಹಂತದ ಸಮಯದಲ್ಲಿನ ಹನೊಯ್‌ಮೇಲಿನ ನಿಕ್ಸೋನ್ ಪ್ರಭುತ್ವದ ಸಿಡಿಮದ್ದು ದಾಳಿಯ ಪ್ರತೀಕಾರ ಎಂದು ಅವರು ಪ್ರಕಟಿಸಿದರು.[೨೯]

ಮಾರ್ಚ್17, 2007ರಂದು, ಅಂದಾಜು 4,000 ರಿಂದ 15,000 ಜನ ಇರಾಕ್ ಯುದ್ಧದ ವಿರುದ್ಧ ಪ್ರತಿಭಟಿಸಿದರು.[೩೦] ಪ್ರತಿಭಟನಾಕಾರರು ಲಿನ್‌ಕೊಲ್ನ್ ಸ್ಮಾರಕದಿಂದ, ಕೆಳಗೆ ವಾಷಿಂಗ್‌ಟನ್ ಬೊವ್ಲೆವಾರ್ಡ್‌ನಿಂದ ಪೆಂಟಗನ್‌ನ ಉತ್ತರ ದಿಕ್ಕಿನ ನಿಲ್ದಾಣದ ಪ್ರದೇಶದ ವರೆಗು ಸೈನಿಕರಂತೆ ನಡೆದರು. ನಿಜವಾದ ಪ್ರತಿಭಟನಾಕಾರರ ಸಂಖ್ಯೆಯ ಅಂದಾಜು ಮಹತ್ತರವಾಗಿ ಭಿನ್ನವಾಗಿರುತ್ತದೆ ಕಾರಣ ದಂಡುಗಳ ಪ್ರಯಾಣದ ಪ್ರದೇಶವು ನ್ಯಾಷನಲ್ ಮಾಲ್, ಲಿನ್‌ಕೋಲ್ನ್ ಸ್ಮಾರಕ, ಮತ್ತು ಆರ್ಲಿಂಗ್‌ಟನ್ ಪ್ರದೇಶದಲ್ಲಿದೆ; ಮತ್ತು ದಂಡುಗಳ ಪ್ರಯಾಣಕ್ಕೆ ಕುತೂಹಲಕರವಾಗಿ ಆಕರ್ಷಿತರಾದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಪರಿಗಣನೆಯಲ್ಲಿ ಸೇರಿಸಿರಬಹುದಾಗಿದೆ.[ಸೂಕ್ತ ಉಲ್ಲೇಖನ ಬೇಕು]

ನವೀಕರಣ[ಬದಲಾಯಿಸಿ]

1998ರಿಂದ, ಪೆಂಟಗನ್ ನವೀಕರಣದ ಕಾರ್ಯಕ್ರಮ ಎಂದು ಗುರುತಿಸಲ್ಪಡುವ, ದೊಡ್ಡ ಪ್ರಮಾಣದ ನವೀಕರಣದಲ್ಲಿ ಪೆಂಟಗನ್ ತೊಡಗಿದೆ. ಈ ಕಾರ್ಯಕ್ರಮವನ್ನು, 2010ರಲ್ಲಿ ಪೂರ್ಣಗೊಳ್ಳುವಂತೆ ಯೋಜಿಸಲಾಗಿದೆ, ಇದು ಕಟ್ಟಡವನ್ನು ಆಧುನಿಕ ಪ್ರಮಾಣಕ್ಕೆ ತರಲು, ಸಿಮೆಂಟ್ ಹೊದಿಕೆಯನ್ನು ತೆಗೆದು ಹಾಕಲು, ಭದ್ರತೆಯನ್ನು ಹೆಚ್ಚಿಸಲು ಮತ್ತು ಪೆಂಟಗಮ್ ಬಾಡಿಗೆದಾರರಿಗೆ ಹೆಚ್ಚಿನ ದಕ್ಷತೆಯನ್ನು ಒದಗಿಸಲು, ಸಂಪೂರ್ಣ ಮಾರ್ಪಡಿಸುವಿಕೆಯನ್ನು ಮತ್ತು ಪೂರ್ತಿ ಕಡ್ಡಡದ ಮರು ನಿರ್ಮಾಣವನ್ನು ಹಂತ ಹಂತವಾಗಿ ಒಳಗೊಂಡಿದೆ. ಈಚೆಗೆ, ಕಟ್ಟಡದ ಎಲ್ಲಾ ಕಿಡಕಿಗಳನ್ನು ದೃಢಪಡಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಮೂಲತಃ ನಿರ್ಮಿಸಿದ ರೀತಿಯಲ್ಲಿ, ಬಹುತೇಕ ಪೆಂಟಗನ್ ಕಛೇರಿಯ ಸ್ಥಳವು ಸಂಪೂರ್ಣ ವಲಯದಲ್ಲಿ ವಿಸ್ತಾರವಾಗಿ ಹರಡಿದ ತೆರೆದ ಕೊಲ್ಲಿಗಳಿಂದ ಕೂಡಿದೆ. ಈ ಕಚೇರಿಗಳಿಗೆ ತಂಪಾಗಿಡಲು ಏರ್ ಕಂಡೀಷನಿಂಗ್‌ಗೆ ಬದಲಾಲಿ ಕಾರ್ಯನಿರ್ವಹಣೆಗೆ ಒಳಪಡಿಸಬಹುದಾದ ಕಿಡಕಿಗಳಿಂದ ಕ್ರಾಸ್ಸ್-ವೆಂಟಿಲೇಷನ್‌ನ್ನು ಉಪಯೋಗಿಸಲಾಯಿತು. ನಿದಾನವಾಗಿ, ಕೊಲ್ಲಿಗಳನ್ನು ಕಾಸಗಿ ಕಚೇರಿಗಳನ್ನಾಗಿ ಉಪವಿಂಗಡಿಸಲಾಯಿತು, ಇವುಗಳಲ್ಲಿ ಬಹುತೇಕವು ಕಿಡಕಿಯ ಏರ್ ಕಂಡೀಷನಿಂಗ್ ಯುನಿಟ್‌ಗಳನ್ನು ಉಪಯೋಗಿಸುತ್ತಿದ್ದವು. ನವೀಕರಣವು ಪೂರ್ಣಗೊಂಡಾಗ, ಹೊಸಾ ಸ್ಥಳವು ಪ್ರಮಾಣಬದ್ಧ ಮಾಡಿದ ಕಚೇರಿ ಪೀಠೋಪಕರಣಗಳು ಮತ್ತು ಅಭ್ಯಾಸಶೀಲ ವಾಸ್ತುಕಲೆಯಿಂದ ವರ್ಧಿಸಿದ ವಿಭಜನೆಗಳೊಂದಿಗೆ, ತೆರೆದ ಕಚೇರಿ ಕೊಲ್ಲಿಗೆ ಮರಳುವಿಕೆಯನ್ನು ಒಳಗೊಳ್ಳುತ್ತದೆ. [೩೧]

ಸೆಪ್ಟೆಂಬರ್ 11ರ ದಾಳಿ[ಬದಲಾಯಿಸಿ]

ಭದ್ರತಾ ಕೆಮೆರದಲ್ಲಿ ಸೆರೆಹಿಡಿದ ವಿಮಾನ 77 ಪೆಂಟಗನ್‌ನ್ನು ಅಪ್ಪಳಿಸುತ್ತಿರುವ ಪ್ರತಿಬಿಂಬ.[೩೨]
9/11 ವಾರ್ಷಿಕೋತ್ಸವದ ಪ್ರಕಾಶ

ಸೆಪ್ಟೆಂಬರ್ 11, 2001ರಂದು, ಅಪಹರಣ ಕಾರರನ್ನು ಸೇರಿಸಿಕೊಂಡ ಐದು ಜನರನ್ನು ಒಳಗೊಂಡ ಆಲ್-ಕೈದಾ ತಂಡವು, ವಾಷಿಂಗ್‌ಟನ್ ಡುಲ್ಲೆಸ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಿಂದ ಲೊಸ್ ಏಂಜೆಲ್ಸ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ , ಅಮೆರಿಕನ್ ಏರ್‌ಲೈನ್ಸ್ ವಿಮಾನ 77ನ್ನು ಹತೋಟಿಗೆ ತೆಗೆದುಕೊಂಡಿತು, ಮತ್ತು ಸೆಪ್ಟೆಂಬರ್ 11ರ ದಾಳಿಯ ಅಂಗವಾಗಿ ಬೆಳಿಗ್ಗೆ 9:37 EDT ಗೆ ಸರಿಯಾಗಿ ಅದನ್ನು ಉದ್ದೇಶಪೂರ್ವಕವಾಗಿ ಪೆಂಟಗನ್‌ನ ನೈರುತ್ಯ ದಿಕ್ಕಿನೊಳಗೆ ಅಪ್ಪಳಿಸಿ ನಾಶವಾಗುವಂತೆ ಮಾಡಿತು. ಕಟ್ಟಡದಲ್ಲಿದ್ದ 125 ಜನರನ್ನು ಸೇರಿ ವಿಮಾನದಲ್ಲಿದ್ದ ಎಲ್ಲಾ 64 ಜನರನ್ನು ಸಾಯಿಸಲಾಯಿತು. ವಿಮಾನದ ಡಿಕ್ಕಿಯ ಪರಿಣಾಮವು ಕಟ್ಟಡದ ವಿನ್ಯಾಸವನ್ನು ವಿವಿಧ ರೀತಿಯಲ್ಲಿ ನಾಶಮಾಡಿದೆ ಮತ್ತು ಇದನ್ನು ಭಾಗತಃ ಕುಸಿದು ಬೀಳುವಂತೆ ಮಾಡಿದೆ.[೩೩] ದಾಳಿಯ ಸಮಯದಲ್ಲಿ, ಪೆಂಟಗನ್ ನವೀಕರಣದಲ್ಲಿ ತೊಡಗಿತ್ತು ಮತ್ತು ಅನೇಕ ಕಚೆರಿಗಳು ಉಪಯೋಗಿಸದೇ ಉಳಿದಿದ್ದವು, ಇದು ಕಡಿಮೆ ಪ್ರಮಾಣದ ಅನಾಹುತಕ್ಕೆ ಕಾರಣವಾಯಿತು. 4500 ಜನರಲ್ಲಿ ಕೇವಲ 800 ಜನರು ಮಾತ್ರ ನವೀಕರಣದ ಕೆಲಸದ ಕಾರಣದಿಂದ ಸ್ಠಳದಲ್ಲಿದ್ದರು. ಡಿಕ್ಕಿ ಹೊಡೆದ ಸ್ಥಳವಾದ, ಹೆಲಿಕ್ಯಾಪ್ಟರ್‌ನ ಇಳಿದಾಣದ ದ್ವಾರದ ಮುಂಭಾಗವು, ಆ ತರಹದ ದಾಳಿಗಳಿಗೆ ಅತ್ಯುತ್ತಮ ರೀತಿಯಲ್ಲಿ ಸಿದ್ಧಪಡಿಸಿದ ವಿಭಾಗವಾಗಿತ್ತು. ಒಕ್ಲಹೊಮ ನಗರದ ಬಾಂಬ್‌ ದಾಳಿಯ ಪರಿಣಾಮದಿಂದ ಪಡೆದ ಸುಧಾರಣೆಗಳೊಂದಿಗೆ, ಆ ಭಾಗದಲ್ಲಿನ ನವೀಕರಣವು ಸುಮಾರು ಪೂರ್ಣಗೊಂಡ ಸ್ಥಿತಿಯಲ್ಲಿತ್ತು.[೩೪][೩೫][೩೬]

ಪೆಂಟಗನ್‌ನಲ್ಲಿ ಸಿಂಪಡಿಸುವ ಪದ್ಧತಿಯನ್ನು ಹೊಂದಿದ ಏಕೈಕ ಭಾಗ ಇದಾಗಿದೆ, ಮತ್ತು ಇದನ್ನು ಬಾಂಬು ಸ್ಫೋಟಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ಉದ್ದನೆಯ ಮತ್ತು ಆಡ್ಡ ಉಕ್ಕಿನ ಕಂಬಗಳ ನೇಯಿಗೆಯಿಂದ ಮರುನಿರ್ಮಾಣ ಮಾಡಲಾಯಿತು. ಪೆಂಟಗನ್‌ನ ಎಲ್ಲಾ ಐದು ಮಹಡಿಗಳಿಗೆ ನಿರಂತರ ವಿನ್ಯಸವನ್ನು ರಚಿಸಲು ಉಕ್ಕಿನ ಹೆಚ್ಚಿನಬಲವನ್ನು, ಒಟ್ಟಾಗಿ ಸೇರಿಸಿ ಬೋಲ್ಟಿನಿಂದ ಭದ್ರಪಡಿಸಲಾಯಿತು, ಇದು ನೂರಾರು ಜನರು ಸುರಕ್ಷಿತ ಸ್ಥಳಕ್ಕೆ ಚಲಿಸಲು ಸಾಕಾಗುವ 30 ನಿಮಿಷಗಳ ಸಮಯ, ಕಟ್ಟಡದ ವಿಭಾಗವನ್ನು ಕುಸಿದುಬೀಳುವಿಕೆಯಿಂದ ತಡೆಯುತ್ತದೆ.

ವಿಮಾನದ ಡಿಕ್ಕಿಗೆ ಒಳಗಾದ ಪ್ರದೇಶವು 2 ಇಂಚಿನ ದಪ್ಪದ ಮತ್ತು ಪ್ರತಿಯೊಂದು 2,500 ಪೌಂಡ್‌ನ ಸ್ಫೋಟವನ್ನು-ತಡೆದುಕೊಳ್ಳುವ ಕಿಡಕಿಗಳನ್ನು ಹೊಂದಿತ್ತು-ಅಪ್ಪಳಿಸಿದ ಮತ್ತು ಬೆಂಕಿಹೊತ್ತಿಕೊಂಡ ಸಮಯದಲ್ಲಿ ಇವಕ್ಕೆ ಯಾವುದೇ ಧಕ್ಕೆಯಾಗಿರಲಿಲ್ಲ. ಇದು ಅಗ್ನಿ ಬಗಿಲುಗಳನ್ನು ಹೊಂದಿದ್ದು, ಅವು ಸ್ವಯಂಚಾಲಿತವಾಗಿ ತೆರೆದುಕೊಂಡವು ಮತ್ತು ಹೊಸದಾಗಿ ನಿರ್ಮಿಸಿದ ದಾರಿಗಳು ಜನರು ಹೊರಗೆ ಬರಲು ಅನುವುಮಾಡಿಕೊಟ್ಟಿದವು.[೩೪] ಈಗಾಗಲೇ ನವೀಕರಣದ ಕೆಲಸದಲ್ಲಿ ನಿರತರಾಗಿರುವ ಗುತ್ತಿಗೆದಾರರಿಗೆ ದಾಳಿಯಲ್ಲಿ ನಾಶಗೊಂಡ ಭಾಗಗಳನ್ನು ಮರುನಿರ್ಮಿಸುವ ಅಧಿಕ ಕೆಲಸವನ್ನು ವಹಿಸಲಾಯಿತು. ಈ ಹೆಚ್ಚಿನ ಯೋಜನೆಗೆ "ಪೀನಿಕ್ಸ್ ಪ್ರೊಜೆಕ್ಟ್" ಎಂದು ಹೆಸರಿಸಲಾಯಿತು, ಮತ್ತು ನಾಶಗೊಂಡ ಭಾಗದ ಅತ್ಯಂತ ಹೊರಗಿನ ಕಚೇರಿಗಳನ್ನು ಸೆಪ್ಟೆಂಬರ್ 11, 2002ಕ್ಕೆ ಉಪಯೋಗಿಸಲು ಪ್ರಾರಂಭಿಸುವಂತೆ ನಿಯೋಜಿಸಲಾಯಿತು. [೩೭][೩೮][೩೯]

ಪೆಂಟಗನ್‌ನ ನಾಶಗೊಂಡ ಭಾಗವನ್ನು ಮರುನಿರ್ಮಿಸಿದಾಗ, ಒಂದು ಚಿಕ್ಕದಾದ ಒಳಗೆ ಇರುವ ಸ್ಮಾರಕ ಮತ್ತು ಮಂದಿರವನ್ನು ಸೇರಿಸಲಾಗಿದೆ, ಇದನ್ನು ಡಿಕ್ಕಿಗೊಳಗಾದ ಪ್ರದೇಶದಲ್ಲೇ ನಿರ್ಮಿಸಲಾಯಿತು. ಸೆಪ್ಟೆಂಬರ್ 11, 2001ರ ದಾಳಿಯ ಐದನೇ ಜಯಂತಿಗೆ, ದಾಳಿಯಲ್ಲಿ ಬಲಿಯಾದ ಪ್ರತಿಯೊಬ್ಬರಿಗು ಒಂದೊಂದು ಲೈಟ್‌ನಂತೆ, 184 ಬೀಮ್‌ಗಳನ್ನು ಹೊಂದಿದ ಲೈಟ್‌ನ ಸ್ಮರಣೆಯನ್ನು ಪೆಂಟಗನ್ ಆವರಣದ ಮಧ್ಯಭಾಗದಿಂದ ಪ್ರಕಾಶಿಸುವಂತೆ ಮಾಡಲಾಯಿತು. ಇದರ ಜೊತೆಗೆ, ಪ್ರತೀ ವರ್ಷ ಅಮೆರಿಕಾದ ಬಾವುಟವನ್ನು ದಾಳಿಯಲ್ಲಿ ನಾಶಕ್ಕೊಳಗಾದ ಪೆಂಟಗನ್‌ನ ಭಾಗದಲ್ಲಿ ಹಾರಿಸಲಾಗುವುದು, ಮತ್ತು ಕಟ್ಟಡದ ಆ ಭಾಗವನ್ನು ರಾತ್ರಿವೇಳೆಯಲ್ಲಿ ನೀಲಿ ದೀಪಗಳಿಂದ ಪ್ರಕಾಶಿಸುವಂತೆ ಮಾಡಲಾಗುತ್ತದೆ. ದಾಳಿಯ ನಂತರ, 2006ರಲ್ಲಿ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವಂತೆ, ಹೊರಾಂಗಣದ ಸ್ಮಾರಕಗಳ ಯೋಜನೆಗಳನ್ನು ರೂಪಿಸಲಾಯಿತು. 3 ರಿಂದ 71 ವಯಸ್ಸಿನವರಿಗೆ ಅನುರೂಪವಾಗಿ, 184 ಬೆಂಚುಗಳನ್ನು ಹೊಂದಿದ್ದ ಉದ್ಯಾನವನವನ್ನು ಒಳಗೊಂಡ ಪೆಂಟಗನ್ ಸ್ಮಾರಕವನ್ನು, ಸೆಪ್ಟೆಂಬರ್ 11, 2008ರಂದು ಸಾರ್ವಜನಿಕರಿಗಾಗಿ ತೆರೆದಿರಿಸಲಾಯಿತು.[೪೦][೪೧][೪೨]

ಶೂಟಿಂಗ್[ಬದಲಾಯಿಸಿ]

ಮಾರ್ಚ್ 4, 2010ರಂದು ಸಾಯಂಕಾಲ 6:40ಕ್ಕೆ ಸರಿಯಾಗಿ, ಪೆಂಟಗನ್ ರಕ್ಷಣಾ ಏಜೆನ್ಸಿ ಸೇನೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಮೇಲೆ ಪೆಂಟಗನ್‌ನ ದ್ವಾರದ ಬಳಿ ಗುಂಡು ಹಾರಿಸಲಾಯಿತು ಮತ್ತು ಅವರು ಸಹ ಸಂಶಯಸ್ಪದ ವ್ಯಕ್ತಿಯಮೇಲೆ ತಮ್ಮ ಪಿಸ್ತೂಲುಗಳಿಂದ ವಾಪಸು ಗುಂಡಿನ ದಾಳಿ ನಡೆಸಿದ್ದರು. ಅಧಿಕಾರಿಗಳು ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದರು ಆದರೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿತ್ತು. ಸಂಶಯಸ್ಪದ ವ್ಯಕ್ತಿಯನ್ನು, ಜಾಹ್ನ್ ಪಾಟ್ರಿಕ್ ಬೆಡೆಲ್ (36 ವಯಸ್ಸಿನ) ಎಂದು ಗುರುತಿಸಲಾಯಿತು, ಅವನು ಆಸ್ಪತ್ರೆಯಲ್ಲೇ ಮರಣಹೊಂದಿದನು. ಇದರ ಹಿಂದಿನ ಸ್ಪಸ್ಟ ಉದ್ದೇಶ ಮಾತ್ರ ತಿಳಿಯಲಿಲ್ಲ.[೪೩]

ಪ್ರದರ್ಶನ ವಿನ್ಯಾಸ[ಬದಲಾಯಿಸಿ]

ಪೆಂಟಗನ್ ಕಟ್ಟಡವು ವಿಸ್ತಾರವಾಗಿದೆ 28.7 acres (116,000 m2), ಮತ್ತು ಹೆಚ್ಚುವರಿ 5.1 acres (21,000 m2) ಪ್ರಮುಖ ಅಂಗಣವನ್ನು ಒಳಗೊಂಡಿದೆ.[೪೪] ಇದು ಐದು ಮುಂಭಾಗಗಳನ್ನು ಹೊಂದಿದೆ, ಇವನ್ನು ಉತ್ತರ ಭಾಗದಿಂದ ಪ್ರಾರಂಭಿಸಿ ಪ್ರದಿಕ್ಷೆಯಾಗಿ ಚಲಿಸುವಹಾಗೆ ಹೆಸರಿಸಲಾಗಿದೆ:ಮಾಲ್ ಕಟ್ಟೆಯ ಪ್ರವೇಶದ್ವಾರದ ಮುಂಭಾಗ, ನದಿಯ ಕಟ್ಟೆಯ ಪ್ರವೇಶದ್ವಾರದ ಮುಂಭಾಗ, ಸಮೂಹ ಪ್ರವೇಶದ್ವಾರದ (ಅಥವಾ ಭೂಗತ ರೇಲ್ವೆ ನಿಲ್ದಾಣ) ಮುಂಭಾಗ, ದಕ್ಷಿಣ ದಿಕ್ಕಿನ ನಿಲ್ದಾಣ ಪ್ರವೇಶದ್ವಾರದ ಮುಂಭಾಗ, ಮತ್ತು ಹೆಲಿಕ್ಯಾಪ್ಟರ್‌ನ ಇಳಿದಾಣದ ಮುಂಭಾಗ.[೩೬] ಕಟ್ಟಡದ ಉತ್ತರ ದಿಕ್ಕಿನಲ್ಲಿನ, ಮಾಲ್‌ನ ಪ್ರವೇಶದ್ವಾರ ಮೊಗಶಾಲೆಯ ವೈಶಿಷ್ಟ್ಯತೆಯನ್ನು ಸಹ ಹೊಂದಿದ್ದು, ಇದು ಉದ್ದನೆಯ ಕಟ್ಟೆಯನ್ನು ಪಡೆಯಲು ಅನುಕೂಲವಾಗಿದ್ದು, 600 ft (180 m) ಇದನ್ನು ಸಮಾರಂಭಗಳಿಗೆ ಉಪಯೊಗಿಸಲಾಗುತ್ತಿದೆ. ನದಿಯ ಪ್ರವೇಶದ್ವಾರವು, ಹೊರಗೆ ಚಾಚಿಕೊಂಡಿದ್ದ 20 ft (6.1 m) ಮುಖಮಂಟಪದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಈಶಾನ್ಯ ದಿಕ್ಕಿನಲ್ಲಿದ್ದು, ಖಾರಿಯಿಂದ ಎತ್ತರದಲ್ಲಿದೆ ಮತ್ತು ವಾಷಿಂಗ್‌ಟನ್ ಕಡೆಗೆ ಮುಖಮಾಡಿದೆ. ನದಿಯ ಪ್ರವೇಶದ್ವಾರದಲ್ಲಿ ಮೆಟ್ಟಿಲುಗಳ ಕಟ್ಟೆಯಿದ್ದು ಅದು ಖಾರಿಯನ್ನು, ಮತ್ತು ಬೊಲಿಂಗ್ ಏರ್ ಪೋರ್ಸ್ ಬೇಸ್ ಮತ್ತು ಪೆಂಟಗನ್ ನಡುವೆ ಜನರನ್ನು ನಾವೆಯಲ್ಲಿ ಸಾಗಿಸಲು 1960ರ ಕೊನೆಯವರೆಗು ಉಪಯೋಗಿಸಿದ ಹಡಗಿನಿಂದ ಇಳಿಯುವಸ್ಥಳವನ್ನು ತಗ್ಗಿನಲ್ಲಿರುವಂತೆ ಮಾಡಿದೆ.[೪೪] ಸಂದರ್ಶಕರಿಗಾಗಿ ಮುಖ್ಯ ಪ್ರವೇಶದ್ವಾರವನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಲಾಗಿದೆ, ಅಲ್ಲೇ ಪೆಂಟಗನ್ ಭೂಗತ ರೇಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿವೆ. ಕಟ್ಟಡದ ಎರಡನೇ ಮಹಡಿಯ ಆಗ್ನೇಯ ದಿಕ್ಕಿನಲ್ಲಿ ವ್ಯಾಪಾರದ ಮಳಿಗೆಗಳನ್ನು ಹೊಂದಿದ್ದ, ಮೇಳ ಸಹ ಇದೆ. ಪೆಂಟಗನ್‌ನ ನೈರುತ್ಯ ದಿಕ್ಕಿನಲ್ಲಿ ಪೆಂಟಗನ್‌ನ ದಕ್ಷಿಣ ನಿಲ್ದಾಣವಿದೆ, ಮತ್ತು ಪಶ್ಚಿಮ ದಿಕ್ಕಿನ ಪೆಂಟಗನ್ ವಾಷಿಂಗ್‌ಟನ್ ಬೊವ್ಲೆವಾರ್ಡ್ (ನಗರದ ವಿಶಾಲವಾದ ಬೀದಿ) ಕಡೆಗೆ ಮುಖ ಮಾಡಿರುತ್ತದೆ. ಕಟ್ಟಾಡವು ಮಾಲ್ಬಲ್‌ಗಳನ್ನು ಹೊಂದಿಲ್ಲ, ಇದಕ್ಕೆ ಕಾರಣ ಮಾರ್ಲ್ಬಲ್‌ಗಳಿಗೆ ಮುಖ್ಯ ಮೂಲಸ್ಥಾನವಾದ ಇಟಲಿಯು IIನೆಯ ಪ್ರಪಂಚದ ಯುದ್ಧದ ಸಮಯದಲ್ಲಿ, USನ ವಿರೋಧಿ ದೇಶವಾಗಿತ್ತು.[೪೫]

ಪೆಂಟಗನ್‌ನ್ನು ಅನೇಕ ದೊಡ್ಡ ವಿನ್ಯಾಸಗಳಿಗೆ ಹೋಲಿಸಿರುವುದು.[97][98][99][100][101][102][103]

ಕೇಂದ್ರೀಕೃತ ವಲಯಗಳನ್ನು ಕೇಂದ್ರಬಿಂದುವಿನಿಂದ ಹೊರಭಾಗದ ಕಡೆಗೆ "A" ಯಿಂದ "E" ವರೆಗು ಹೆಸರಿಸಲಾಗಿದೆ (ತಳಮನೆಯಲ್ಲಿ ಹೆಚ್ಚಿನ "F" ಮತ್ತು "G" ದೊಂದಿಗೆ). "E" ವಲಯದ ಕಚೇರಿಗಳು, ಹೊರನೋಟವನ್ನು ಹೊಂದಿದ ಏಕೈಕ ಕಛೇರಿಗಳಾಗಿದ್ದು, ಇವನ್ನು ಸಮಾನ್ಯವಾಗಿ ಹಿರಿಯ ಅಧಿಕಾರಿಗಳು ಉಪಯೋಗಿಸುತ್ತಾರೆ. ಪ್ರತಿಯೊಂದು ವಲಯದಲ್ಲೂ ಕಛೇರಿ ಸಂಖ್ಯೆಗಳನ್ನು ಪ್ರದಕ್ಷಿಣಾಕಾರವಾಗಿ ಗುರುತಿಸಲಾಗಿದೆ, ಮತ್ತು ಎರಡು ವಿಭಾಗಗಳನ್ನು ಹೊಂದಿವೆ: ಹತ್ತಿರದ- ಮೊಗಸಾಲೆ ಸಂಖ್ಯೆಗಳು (1 ರಿಂದ 10) ಮುಂದೆ ಕೆಳ ಅಂತಸ್ಥಿನ ಸಂಖ್ಯೆಗಳು(00 to 99), ಆದುದರಿಂದ ಕಛೇರಿ ಸಂಖ್ಯೆಗಳ ಶ್ರೇಣಿಯು 100 ರಿಂದ 1099ರ ವರೆಗಿದೆ. ಮೊಗಸಾಲೆ 1ರಿಂದ ಆರಂಬಿಸಿ ದಕ್ಷಿಣ ತುದಿಯಲ್ಲಿ ಸಮೂಹವನ್ನು ಹೊಂದಿವದರೊಂದಿಗೆ, ಈ ಮೊಗಸಾಲೆಗಳು ಮಧ್ಯ ಅಂಗಣದಿಂದ ಹೊರಗಡೆಗೆ ಹರಡಿವೆ. ಸಂಖ್ಯೆಯಿಂದ ಸೂಚಿಸಿದ ಪ್ರತಿಯೊಂದು ತ್ರಿಜ್ಯಾಕೃತಿಯ ಮೊಗಸಾಲೆಯು ಅನುಗುಣವಾಗಿ ಸಂಖ್ಯೆಯನ್ನು ಸೂಚಿಸಿದ ಕಛೇರಿ ಗುಂಪನ್ನು ವಿಭಾಗಿಸುತ್ತದೆ (ಉದಾಹರಣೆಗೆ, ಮೊಗಸಾಲೆ 5, 500 ಸರಣಿಯ ಕಛೇರಿ ಬ್ಲಾಕ್‌ನ್ನು ವಿಭಾಗಿಸುತ್ತದೆ). ಕಟ್ಟಡದಲ್ಲಿ ಅನೇಕ ಸಂಖ್ಯೆಯ ಐತಿಹಾಸಿಕ ಪ್ರದರ್ಶನಾ ಫಲಕಗಳಿವೆ, ಮುಖ್ಯವಾಗಿ "A" ಮತ್ತು "E" ವಲಯಗಳಲ್ಲಿ.

ಪೆಂಟಗನ್‌ನಲ್ಲಿನ ಅಂತಸ್ತಿಗಳಲ್ಲಿನ ಬೇಸ್‌ಮೆಂಟ್ (ತಳ ಅಂತಸ್ತಿಗೆ) "B" ಎಂದು ಮತ್ತು ಮೆಜಾನೈನ್ (ಮಧ್ಯದ) ಅಂತಸ್ತಿಗೆ "M" ಎಂದು ಸೂಚಿಸಲಾಗಿದೆ, ಇವೆರಡು ನೆಲ ಮಹಡಿಯಿಂದ ಕೆಳಗಿವೆ. ಮೇಳವು ಎರಡನೇ ಮಹಡಿಯಲ್ಲಿನ ಮೆಟ್ರೊ ಪ್ರವೇಶದ್ವಾರದಲ್ಲಿದೆ. ನೆಲಮಹಡಿಯಿಂದ್ ಮೇಲಿನವನ್ನು 1 ರಿಂದ 5 ವರೆಗಿನ ಸಂಖ್ಯೆಗಳಿಂದ ಗುರುತಿಸಲಾಗಿದೆ. ಕೊಠಡಿಗಳ ಸಂಖ್ಯೆಗಳು ಮಹಡಿಯ ಸಂಖ್ಯೆ, ಏಕ ಕೇಂದ್ರೀಯ ವಲಯ, ಮತ್ತು ಕಛೇರಿ ಸಂಖ್ಯೆಗಳನ್ನು ಒಳಗೊಂಡಿರುತ್ತವೆ (ಇದು ಹತ್ತಿರದ ಮೊಗಸಾಲೆಯ ಸಂಖ್ಯೆ ಮತ್ತು ಕಾರಿಯ ಸಂಖ್ಯೆಯು ಆಗಿರುತ್ತದೆ). ಆದರಿಂದ, ಕಛೇರಿ 2B315 ಎರಡನೇ ಮಹಡಿಯಲ್ಲಿ, B ವಲಯದಲ್ಲಿ, ಮತ್ತು ಮೊಗಸಾಲೆ 3ರ ಹತ್ತಿರದಲ್ಲಿದೆ (ಮೊಗಸಾಲೆ 2 ಮತ್ತು 3ರ ಮಧ್ಯದಲ್ಲಿದೆ). ಈ ಕಛೇರಿಗೆ ಹೋಗುವ ಒಂದು ಮಾರ್ಗವೆಂದರೆ, ಮೊದಲು ಎರಡನೆಯ ಮಹಡಿಗೆ ಹೋಗಿ, A (ಅತ್ಯಂತ ಒಳಗಿನ) ವಲಯಕ್ಕೆ ತಲುಪುವುದು, ನಂತರ ಮೊಗಸಾಲೆ 3ಕ್ಕೆ ಹೋಗುವುದು, ಮತ್ತು ನಂತರ 15 ಬೇ (ಕಾರಿ)ಯನ್ನು ಪಡೆಯಲು B ವಲಯದಲ್ಲಿ ಎಡಕ್ಕೆ ತಿರುಗುವುದು.[೪೬]

ಒಬ್ಬ ಮನುಷ್ಯ ಯಾವುದೆ ಎರಡು ದಿಕ್ಕುಗಳ ನಡುವಿನ ಅಂತರವನ್ನು ಏಳು ನಿಮಿಷಗಳಿಗಿಂತಲು ಕಡಿಮೆ ಸಮಯದಲ್ಲಿ ನಡೆದು ಹೋಗಬಹುದಾಗಿದೆ.[೪೭]

ಪೆಂಟಗನ್‌ನ ದಕ್ಷಿಣ ದಿಕ್ಕಿನಲ್ಲಿ ಪೆಂಟಗನ್ ನಗರ ಮತ್ತು ಕ್ರಿಸ್ಟಲ್ ನಗರಗಳಿವೆ, ಇವು ಆಲಿಂಗ್‌ಟನ್‌ನಲ್ಲಿನ ವಿಸ್ತಾರವಾದ ವ್ಯಾಪಾರಕಟ್ಟೆ ಮತ್ತು ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳಾಗಿವೆ. ಆಲಿಂಗ್‌ಟನ್ ರಾಷ್ಟ್ರೀಯ ಶ್ಮಶಾನ ಸ್ಥಳವು ಉತ್ತರದಿಕ್ಕಿನಲ್ಲಿದೆ. ವಾಷಿಂಗ್‌ಟನ್ ಮೆಟ್ರೊ ಪೆಂಟಗನ್ ನಿಲ್ದಾಣವು ಸಹ ಪೆಂಟಗನ್ ಹತ್ತಿರದಲ್ಲಿ, ನೀಲಿ ಮತ್ತು ಹಳದಿ ಲೈನುಗಳಲ್ಲಿ ಇದೆ. ಪೆಂಟಗನ್ ಸಂಕೀರ್ಣ ಪೆಂಟಗನ್ ರಸ್ತೆ ಜಾಲದಿಂದ ಸುತ್ತುವರೆದಿದೆ.[೪೮]

ಯುನೈಟೆಡ್ ಸ್ಟೇಟ್ಸ್‌ನ ಅಂಚೆ ಸೇವೆಯು ಪೆಂಟಗನ್‌ಗೆ ಆರು ZIP ಕೋಡ್‌‍ಗಳನ್ನು ನೇಮಿಸಿದೆ, ಮತ್ತು ವಾಸ್ಥವವಾಗಿ ಪೆಂಟಗನ್ ವರ್ಜಿನಿಯದಲ್ಲಿದ್ದರೂ, ಅವನ್ನು ವಾಷಿಂಗ್‌ಟನ್, D.C.ಯಲ್ಲಿರುವಂತೆ ನೇಮಿಸಲಾಯಿತು.[೪೯]

The Pentagon, south parking lot side

ಭದ್ರತೆ[ಬದಲಾಯಿಸಿ]

ಪೆಂಟಗನ್ ಪೋರ್ಸ್ ಪ್ರೊಟೆಕ್ಷನ್ ಏಜೆನ್ಸಿ (PFPA) ಯುನೈಟೆಡ್ ಸ್ಟೇಟ್ಸ್‌ನ ಸರಕಾರಿ ಏಜೆನ್ಸಿ ಆಗಿದ್ದು, ಇದು ಪ್ರಮಾಣಮಾಡಿದ ಪೆಡೆರಲ್ ಪೋಲಿಸ್ ಅಧಿಕಾರಿಗಳಾದ, ಯುನೈಟೆಡ್ ಸ್ಟೇಟ್ಸ್‌ನ ಪೆಂಟಗನ್ ಪೋಲಿಸ್ ಮತ್ತು ನಾಗರಿಕ CBRN ತಾಂತ್ರಿಕ ನಿಪುಣರನ್ನು, ಮತ್ತು ಪ್ರಮಾಣಮಾಡದ ನಾಗರಿಕ ಬಯೋತ್ಪಾದನೆಯ ವಿರೋದಿ ಪರಿಶೀಲನೆ ಮತ್ತು ಭೌತಿಕ ರಕ್ಷಣಾ ಪಡೆ ಎರಡನ್ನೂ ಒಳಗೊಂಡಿರುತ್ತದೆ, ಹಾಗು ಪೆಂಟಗನ್‌ನ ರಕ್ಷಣೆಯ ಜವಾಬ್ದಾರಿ ಇದರದ್ದಾಗಿರುತ್ತದೆ. ಸೆಪ್ಟೆಂಬರ್ 11, 2001ರ ದಾಳಿಯ ನಂತರ ರಕ್ಷಣಾ ವಿಭಾಗವು PFPAಯ ರಚನೆಯನ್ನು ಮಾಡಿತು. ಹೊಸಾ ಏಜೆನ್ಸಿಯು ಡಿಪೆನ್ಸ್ ಪ್ರೊಟಕ್ಟಿವ್ ಸರ್ವೀಸ್‌ (DPS)ನಲ್ಲಿ ವಿಲೀನ ವಾಯಿತು, ಮತ್ತು ಪ್ರಾಥಮಿಕ ಕಾನೂನು ವಿದೇಯತೆಯನ್ನು ಒದಗಿಸುವ ಮತ್ತು ಪೆಂಟಗನ್‌ ಮತ್ತು 280 ಎಕರೆ (1.1 km²) ದಲ್ಲಿನ ರಕ್ಷಣಾ ವಿಭಾಗದ ಸ್ಥಳಗಳು "ಪೆಂಟಗನ್ ಮೀಸಲಾತಿ" ಮತ್ತು ಬೃಹತ್ ನ್ಯಾಷನಲ್ ಕೇಪಿಟಲ್ ರೀಜನ್ (NCR)ನ ಭದ್ರತೆಯ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತ್ತು. PFPAಯನ್ನು ಸಂಭವನೀಯ ಬೆದರಿಕೆಗಳ ವಿರುದ್ಧ, ದೃಢವಾದ ನಿವಾರಣೆ, ಸಜ್ಜಾಗಿರುವಿಕೆ, ಕಂಡುಹಿಡಿಯುವಿಕೆ, ಮತ್ತು ಪ್ರತಿಕ್ರಿಯೆಗಳ ಮೂಲಕ ರಕ್ಷಣೆಯನ್ನು ಒದಗಿಸಲು ಸಹ ನಿಯೋಜಿಸಲಾಗಿತ್ತು. ಯುನೈಟೆಡ್ ಸ್ಟೇಟ್ಸ್ ಪೆಂಟಗನ್ ಪೋಲಿಸ್ ಪಡೆಯು ಪೆಂಟಗನ್ ಪೋರ್ಸ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಾಥಮಿಕ ಪೆಡೆರಲ್ ಕಾನೂನು ವಿದೇಯತೆಯ ಬಾಹುವಾಗಿದೆ.

ಸೇವೆಗಳು[ಬದಲಾಯಿಸಿ]

ಪೆಂಟಗನ್ 20ಕ್ಕೂ ಮೀರಿದ ಸ್ವಂತ ಪಾಸ್ಟ್‌ಪುಡ್ ಕಾರ್ಯಕಾರಿಗಳನ್ನು ಹೊಂದಿದೆ, ಇವುಗಳಲ್ಲಿ ಸಬ್‌ವೇ, Mcಡೊನಾಲ್ಡ್‌’ಸ್, ಡಕಿನ್' ಡೊನುಟ್ಸ್, ಪಾಂಡ ಎಕ್ಸ್‌ಪ್ರೆಸ್ಸ್, ಸ್ಟಾರ್‌ಬಗ್ಸ್, ಸ್ಬಾರೊ, ಸೇರಿ ಇನ್ನೂ ಅನೇಕವು ಒಳಗೊಂಡಿವೆ.[೫೦] ಆಹಾರದ ಅಂಗಣದ ನವೀಕರಣದ ಕಾರ್ಯವು ಪುರ್ಣಗೊಂಡಾಗ, 2003ರಲ್ಲಿ ಬಹುವ್ಯಾಪಾರದ ಗುರುತುಗಳನ್ನು ಹೊಂದಿದ್ದ KFC, ಪಿಜ್ಜಾ ಹಟ್, ಮತ್ತು ಟಕೊ ಬೆಲ್ ಉಪಹಾರಗೃಹವನ್ನು ಪ್ರಾಂಭಿಸಲಾಯಿತು.[೫೧] ಆಹಾರದ ಸೇವೆಯ ಜವಾಬ್ದಾರಿಯನ್ನು ನಾವಿ ಎಕ್ಸೇಂಜ್ ನಿರ್ವಹಿಸುತ್ತಿತ್ತು. ಅಂಗಣ ಮಧ್ಯದ ಉಪಾಹಾರದ ಅಂಗಡಿಯನ್ನು 2008ರ ವಸಂತಕಾಲದಲ್ಲಿ ಪುನಃಪ್ರಾರಂಭಿಸಲಾಯಿತು,[೫೨] ಮೊದಲೇ ಅಲ್ಲಿದ್ದ ತಿಂಡಿಗಳ ಅಂಡಿಯಾದ "ಗ್ರಂಡ್ ಜೀರೊ ಕೆಪೆಯ" ಬದಲಾಗಿ ಇದನ್ನು ಪ್ರಾರಂಭಿಸಲಾಯಿತು. ನವೀಕರಣದ ಮೊದಲು, ವಿಭಜನೆಯ ಸಮಯದಲ್ಲಿ ನಿರ್ಮಿಸಿದ್ದರಿಂದ, ಪೆಂಟಗನ್‌ನ್ನು ಅವಶ್ಯಕತೆಯ ಎರಡರಷ್ಟು ಹೆಚ್ಚಿನ ಬಾತ್‌ರೂಮ್‌ಗಳಿಂದ ನಿರ್ಮಿಸಲಾಗಿತ್ತು. ಇವುಗಳಲ್ಲಿ ಅರ್ಧ ಬಾತ್‌ರೂಮ್‌ಗಳು ಕಪ್ಪುಜನರಿಗೆ ಮತ್ತು ಇನ್ನು ಉಳಿದ ಅರ್ಧ ಬಿಳಿಯವರಿಗಾಗಿದ್ದವು.[೫೩]

ಪೆಂಟಗನ್ ಅತ್ಲೆಟಿಕ್ ಸೆಂಟರ್ (PAC), ಮತ್ತು ಪಿಟ್‌ನೆಸ್ಸ್ (ಸಾಮರ್ಥ್ಯದ) ಕೇಂದ್ರವನ್ನು ಮಿಲಿಟರಿ ಮತ್ತು ನಾಗರಿಕ ಸಿಬ್ಬಂದಿಗಾಗಿ, 2004ರಲ್ಲಿ[೫೪] ಪೆಂಟಗನ್‌ನ ಉತ್ತರ ದಿಕ್ಕಿನ ಪಕ್ಕದಲ್ಲಿ ತೆರೆಯಲಾಯಿತು, ಇದನ್ನು ಕಟ್ಟಡದ 110 ಮಾರ್ಗ ಮತ್ತು ಕವಾಯಿತು ಮೈದಾನದ ಮಧ್ಯದಲ್ಲಿ ಸುಮಾರು 55 ವರ್ಷಗಳಿಂದ ಕಾರ್ಯನಡೆಸಿದ ಪೆಂಟಗನ್ ಆಪೀಸರ್ಸ್ ಅಥ್ಲೆಟಿಕ್ ಕ್ಲಬ್‌ನ (POAC) ಬದಲಾಗಿ ನಿರ್ಮಿಸಲಾಯಿತು. ಪ್ರತೀ ವರ್ಷ, ಕಡಲಿನ ಕೊರ್ಪ್ಸ್ ರಸ್ತೆ ಓಟದ ಸ್ಪರ್ಧೆ ಮತ್ತು ಸೇನೆಯ ಹತ್ತು-ಮೈಲುಗಳ ಓಟದ ಸ್ಪರ್ಧೆಗಳನ್ನು ನಡೆಸಲು ಪೆಂಟಗನ್ ಮೈದಾನವು ಪ್ರಮುಖ ಕೇಂದ್ರಸ್ಥಾನವಾಗುತ್ತದೆ.

1976ರ ಅಮೆರಿಕಾದ ಬಿಸೆಂಟೆನಿಯಲ್‌lದೊಂದಿಗಿನ ಸಂಯೋಗದಲ್ಲಿ,[೫೫] ಪೆಂಟಗನ್ ಮಾರ್ಗದರ್ಶಿ ಪ್ರವಾಸಗಳನ್ನು ಸಾರ್ವಜನಿಕರಿಗೆ ಒದಗಿಸಲು ಪ್ರಾರಂಭಿಸಿತು. ಸೆಪ್ಟೆಂಬರ್ 11, 2001ರ ದಾಳಿಯ ನಂತರ ಪ್ರವಾಸಗಳನ್ನು ಕೆಲವು ಸಮಯ ತಡೆಹಿಡಿಯಲಾಯಿತು, ಆದರೆ ಈಗ ಇವು ಮೊದಲೇ ಸಿದ್ದಪಡಿಸುವ ಆಧಾರದಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ.[೫೬]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

ಟಿಪ್ಪಣಿಗಳು[ಬದಲಾಯಿಸಿ]

  1. ಸ್ಟೆವ್ ವೊಗೆಲ್, ದಿ ಪೆಂಟಗನ್: ಇತಿಹಾಸ(2003).
  2. "The Pentagon – George Bergstrom – Great Buildings Online". Greatbuildings.com. Retrieved 2008-10-26.
  3. ೩.೦ ೩.೧ ೩.೨ ದಿ ಪೆಂಟಗನ್, ಪ್ಯಾಕ್ಟ್ಸ್ & ಪಿಗರ್ಸ್ Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ. (ಸಂಪಾದಿಸಿದ್ದು ಜನವರಿ 19, 2008)
  4. DefenseLink.mil – ಪೆಂಟಗನ್ ಸ್ಮಾರಕದ ಸಮರ್ಪಣೆ (ಸಂಪಾದಿಸಿದ್ದು ಮೇ 27, 2009)
  5. ಗೋಲ್ಡ್‌ಬರ್ಗ್ (1992), ಪು. 6–9
  6. "Intro – Secretaries of War and Secretaries of the Army". United States Army Center of Military History. 1992. Archived from the original on 2007-12-28. Retrieved 2010-08-09. {{cite web}}: Unknown parameter |= ignored (help)
  7. "Main Navy & Munitions Buildings". Naval History & Heritage Command. Archived from the original on 2008-09-15. Retrieved 2008-10-17.
  8. ವೊಗೆಲ್ (2007), ಪು. 29–33
  9. ವೊಗೆಲ್ (2007), ಪು. 35–37
  10. ಬ್ಯೂರೊ ಆಫ್ ಪಬ್ಲಿಕ್ ರೋಡ್ಸ್ ಮೆಮೊರಾಂಡಮ್, ಅಕ್ಟೊಬೆರ್ 25, 1960.
  11. "General Information". Archived from the original on ನವೆಂಬರ್ 29, 2005. Retrieved December 4, 2005.
  12. Vogel, Steve (May 27, 2007). "How the Pentagon Got Its Shape". Washington Post. pp. W16. Retrieved 2007-05-26.
  13. Roig-Franzia, Manuel (May 13, 2010). "Hemp fans look toward Lyster Dewey's past, and the Pentagon, for higher ground". The Washington Post. Retrieved May 25, 2010.
  14. ಗೋಲ್ಡ್‌ಬರ್ಗ್ (1992), ಪು. 22
  15. ೧೫.೦ ೧೫.೧ ಗೋಲ್ಡ್‌ಬರ್ಗ್ (1992), ಪು. 33
  16. ಗೋಲ್ಡ್‌ಬರ್ಗ್ (1992), ಪು. 29
  17. ೧೭.೦ ೧೭.೧ ಗೋಲ್ಡ್‌ಬರ್ಗ್ (1992), ಪು. 34
  18. ವೊಗೆಲ್ (2007), ಪು. 131
  19. ಗೋಲ್ಡ್‌ಬರ್ಗ್ (1992), ಪು. 35; ಪು. 44
  20. McGrath, Amanda (May 26, 2007). "How The Pentagon Got Its Shape (Gallery)". The Washington Post.
  21. ಗೋಲ್ಡ್‌ಬರ್ಗ್ (1992), ಪು. 52–53
  22. Owens, Jim (2005). "Replacing the stone and rebuilding the Pentagon". Mining Engineering. 57(2): 21–26. {{cite journal}}: Unknown parameter |month= ignored (help)
  23. ಗೋಲ್ಡ್‌ಬರ್ಗ್ (1992), ಪು. 39–42
  24. ಗೋಲ್ಡ್‌ಬರ್ಗ್, ಪು. 36
  25. ಗೋಲ್ಡ್‌ಬರ್ಗ್ (1992), ಪು. 47; ಪು. 52
  26. White, Jean M. (1967-02-16). "2500 Women Storm Pentagon Over War". Washington Post.
  27. Auerbach, Stuart (1967-05-13). "Pentagon Protesters Jailed". Washington Post.
  28. "Flowers, Guns and an Iconic Snapshot". The Washington Post. March 18, 2007. Retrieved May 25, 2010.
  29. Jacobs, Ron (1997). The Way the Wind Blew. Verso. p. 142.
  30. "ಯುದ್ಧ ಪ್ರಾಂರಂಭವಾದ 4 ವರ್ಷಗಳ ನಂತರದ, ಆಂಗರ್ ಆಧಿಪತ್ಯ", ವಾಷಿಂಗ್‌ಟನ್ ಪೊಸ್ಟ್, 2007-03-17 ಪುಟ A1
  31. ಪೆಂಟಗನ್‌ನ ನವೀಕರಣ Archived 2006-10-04 ವೇಬ್ಯಾಕ್ ಮೆಷಿನ್ ನಲ್ಲಿ.. 2006ರ ಅಕ್ಟೋಬರ‍್ 8ರಂದು ಪುನಸಂಪಾದಿಸಲಾಗಿದೆ.
  32. [65]
  33. Isikoff, Michael; Daniel Klaidman (June 10, 2002). "The Hijackers We Let Escape". Newsweek. Retrieved Oct. 22, 2009. {{cite news}}: Check date values in: |accessdate= (help)
  34. ೩೪.೦ ೩೪.೧ Schrader, Esther (September 16, 2001). "Pentagon, a Vulnerable Building, Was Hit in Least Vulnerable Spot". Los Angeles Times. Retrieved Feb. 25, 2010. {{cite news}}: Check date values in: |accessdate= (help)
  35. "Pentagon Renovation: Renovation Program Had Hardened the Facade Attacked on 9/11/01". 9-11 Research. Retrieved 2010-02-25.
  36. ೩೬.೦ ೩೬.೧ "The Pentagon". globalsecurity.org. Retrieved 2010-02-25.
  37. "Pentagon Renovation Program". Archived from the original on ಮೇ 8, 2006. Retrieved December 4, 2005.
  38. "Americas: Pentagon staff reclaim destroyed offices". BBC News. August 15, 2002. Retrieved December 4, 2005.
  39. "Pentagon History – September 11, 2001". Pentagon.afis.osd.mil. Archived from the original on 2008-12-11. Retrieved 2008-10-26.
  40. ಪೆಂಟಗನ್ ಸ್ಮಾರಕದ Archived 2009-01-09 ವೇಬ್ಯಾಕ್ ಮೆಷಿನ್ ನಲ್ಲಿ. ವೆಬ್‌ಸೈಟ್
  41. ಯುನೈಟೆಡ್ ಸ್ಟೇಟ್ಸ್‌ನ ರಕ್ಷಣಾ ವಿಭಾಗದಲ್ಲಿನ ಅಧಿಕೃತ ಪತ್ರಿಕಾ ಪ್ರಕಟನೆ
  42. Wilgoren, Debbie (2008-09-11). ""Pentagon Memorial Dedicated on 7th Anniversary of Attacks"". The Washington Post. The Washington Post Company. Retrieved 2008-09-11. {{cite news}}: Unknown parameter |coauthors= ignored (|author= suggested) (help)
  43. Klein, Allison (March 5, 2010). "Shooting at Pentagon entrance leaves 2 police officers hurt, lone gunman dead". The Washington Post. p. A1. {{cite news}}: Unknown parameter |coauthors= ignored (|author= suggested) (help)
  44. ೪೪.೦ ೪೪.೧ ಗೋಲ್ಡ್‌ಬರ್ಗ್ (1992), ಪು. 57
  45. ವೊಗೆಲ್, ಸ್ಟೆವ್, ದಿ ಬಿಲ್ಡಿಂಗ್ ದಟ್ ರನ್ಸ್ ರಿಂಗ್ಸ್ ಅರೌಂಡ್ ದಿ ವಿಲಿಯೆಸ್ಟ್ ಜನರಲ್ಸ್", ವಾಷಿಂಗ್‌ಟನ್ ಪೊಸ್ಟ್ , ಪೆಬ್ರವರಿ 18, 2009, ಪು. 11.
  46. "How to Find a Room in the Pentagon". Headquarters, Dept. of the Army. Archived from the original on ಸೆಪ್ಟೆಂಬರ್ 21, 2007. Retrieved September 13, 2007.
  47. "Man shoots 2 officers outside Pentagon - CNN.com". CNN. Retrieved May 25, 2010.
  48. "Mixing Bowl Interchange Complex". roadstothefuture.com. Retrieved 2006-11-22.
  49. "ಸತ್ಯಾಂಶಗಳು & ಆಕೃತಿಗಳು: ಜಿಪ್ ಕೋಡ್ಸ್". Archived from the original on 2011-10-13. Retrieved 2010-08-09.
  50. "Concessions – The Pentagon". Office of the Assistant Secretary of Defense for Public Affairs. Archived from the original on 2008-03-13. Retrieved 2008-03-30.
  51. "Pentagon Gets New KFC/Pizza Hut/Taco Bell Multibranded Restaurant". AllBusiness. August 13, 2003. Archived from the original on ಫೆಬ್ರವರಿ 6, 2008. Retrieved ಆಗಸ್ಟ್ 9, 2010.
  52. "Center Courtyard Cafe" (PDF). Pentagon Renovator Newsletter. February 2008. Archived from the original (PDF) on 2008-04-09. Retrieved 2010-08-09.
  53. "A House Divided". Snopes.com. Retrieved 2009-11-22.
  54. "ಪೆಂಟಗನ್ ನವೀಕರಣ ಕಾರ್ಯಕ್ರಮ". Archived from the original on 2008-06-17. Retrieved 2010-08-09.
  55. Stewart, Stephen (1982-04-18). "Penetrating the Pentagon". The New York Times. pp. Section 10, page 39. {{cite news}}: More than one of |author= and |last= specified (help)
  56. "The Pentagon Tour Request". 2008-08-08. Archived from the original on 2010-08-28. Retrieved 2010-08-09.

ಪರಾಮರ್ಶನಗಳು[ಬದಲಾಯಿಸಿ]

  • Goldberg, Alfred (1992). The Pentagon: The First Fifty Years. Office of the Secretary of Defense / Government Printing Office.
  • Vogel, Steve (2007). The Pentagon – A History: The Untold Story of the Wartime Race to Build the Pentagon and to Restore it Sixty Years Later. Random House.
  • Carroll, James (2007). House of War: The Pentagon and the Disastrous Rise of American Power. Mariner Books.

ಬಾಹ್ಯ ಕೊಂಡಿಗಳು[ಬದಲಾಯಿಸಿ]